Categories
ಉಡುಪಿ

ಬಾವಿಗೆ ಬಿದ್ದ ಕರಿ ಚಿರತೆ.. ಓಡಿ ಹೋಯ್ತು!

ಬಾವಿಗೆ ಬಿದ್ದ ಕರಿ ಚಿರತೆ.. ಓಡಿ ಹೋಯ್ತು!

– ಬ್ರಹ್ಮಾವರ ತಾಲೂಕು ಶಿರೂರಿನಲ್ಲಿ ಅಪರೂಪದ ಚಿರತೆ ಪತ್ತೆ
– ಬಾವಿಯಿಂದ ಮೇಲೆ ಬರುತ್ತಿದ್ದಂತೆ ಕಾಡಿಗೆ ಓಟ

NAMMUR EXPRESS NEWS
ಬ್ರಹ್ಮಾವರ: ಅಪರೂಪವಾಗಿ ಕಾಣಿಸಿಕೊಳ್ಳುವ ಕಪ್ಪು ಬಣ್ಣದ ಚಿರತೆ ಬ್ರಹ್ಮಾವರ ತಾಲೂಕು ಶಿರೂರಿನಲ್ಲಿ ಪತ್ತೆಯಾಗಿದೆ.
ಬಾವಿಗೆ ಬಿದ್ದ ಅಪರೂಪದ ಕರಿ ಚಿರತೆ ರಕ್ಷಣೆ ಮಾಡಿದ್ದು ಚಿರತೆ ನೋಡಲು ಜನರ ದಂಡೇ ಸೇರಿತ್ತು.

ಶಿರೂರು ಹೆಮ್ಮಣಿಕೆ ಕೃಷ್ಣ ನಾಯ್ಕ ಅವರ ತೆರೆದ ಬಾವಿಗೆ ಅಪರೂಪದ ಕಪ್ಪು ಚಿರತೆ ಬಿದ್ದಿದ್ದು, ಶನಿವಾರ ಬಾವಿಯಲ್ಲಿ ಚಿರತೆ ಇರುವುದು ಬೆಳಕಿಗೆ ಬಂದಿದೆ. ಬಳಿಕ ಸ್ಥಳೀಯರಾದ ಕೃಷ್ಣ ನಾಯ್ಕ ಅವರು ಶೇಖರ ಶೆಟ್ಟಿಯವರ ಗಮನ ತಂದಾಗ ಅವರು ತಕ್ಷಣ ವಂಡಾರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು, ಸ್ಥಳೀಯರು ಕಾರ್ಯಾಚರಣೆ ನಡೆಸಿ ಕಪ್ಪು ಚಿರತೆಯನ್ನು ಸುರಕ್ಷಿತವಾಗಿ ಮೇಲೆ ತರಲಾಯಿತು. ಬಾವಿಯಿಂದ ಮೇಲೆ ಬಂದ ಕಪ್ಪು ಚಿರತೆ ರಬ್ಬರ್ ತೋಟದೊಳಗೆ ಓಡಿ ಮರೆಯಾಯಿತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.