Categories
ಉಡುಪಿ

ಉಡುಪಿಯಲ್ಲಿ ಯಾರೂ ಪಾಕಿಸ್ತಾನಿ ಪ್ರಜೆಗಳಿಲ್ಲ: ಎಸ್ಪಿ ಡಾ. ಕೆ ಅರುಣ್!

ಉಡುಪಿಯಲ್ಲಿ ಯಾರೂ ಪಾಕಿಸ್ತಾನಿ ಪ್ರಜೆಗಳಿಲ್ಲ: ಎಸ್ಪಿ ಡಾ. ಕೆ ಅರುಣ್!

– ಮೂರು ಮಂದಿ ಪಾಕಿಸ್ಥಾನಿ ಮಹಿಳೆಯರು ಮಂಗಳೂರಲ್ಲಿ ವಾಸ್ತವ್ಯ- ಎಸ್ಪಿ ಮಾಹಿತಿ!
– ಕೇಂದ್ರ ಸರ್ಕಾರ ಮಹತ್ವದ ಆದೇಶ ಮೇರೆಗೆ, ದೇಶದ ಜಿಲ್ಲೆ ಜಿಲ್ಲೆಯೂ ಜಾಗೃತ!

NAMMUR EXPRESS NEWS
ಉಡುಪಿ : ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿ ಸಂಬಂಧಿಸಿ ಕೇಂದ್ರ ಸರ್ಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.
ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದೇಶದಲ್ಲಿರುವ ಪಾಕಿಸ್ತಾನಿ ಪ್ರಜೆಗಳಿಗೆ ಇಲ್ಲಿ ಜಾಗವಿಲ್ಲ, ವಾಪಾಸ್ ಕಳಿಸಿ ಎಂಬ ಆದೇಶ ಹೊರಡಿಸಿದ್ದು ಈ ನಿಟ್ಟಿನಲ್ಲಿ ದೇಶದ ಜಿಲ್ಲೆ ಜಿಲ್ಲೆಯೂ ಜಾಗೃತವಾಗುತ್ತಿದೆ.
ಇದಕ್ಕೆ ಸಂಬಂಧಿಸಿ ಮಾಹಿತಿ ಕಲೆ ಹಾಕಿರುವ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಕೆ ಅರುಣ್ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಯಾವುದೇ ನೋಂದಾಯಿತ ಪಾಕಿಸ್ತಾನಿ ಪ್ರಜೆಗಳಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

– ಮೂರು ಮಂದಿ ಪಾಕಿಸ್ಥಾನಿ ಮಹಿಳೆಯರು ಮಂಗಳೂರಲ್ಲಿ ವಾಸ್ತವ್ಯ- ಎಸ್ಪಿ ಮಾಹಿತಿ!

ಮಂಗಳೂರು: ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಮೂರು ಮಂದಿ ಪಾಕಿಸ್ಥಾನಿ ಮಹಿಳೆಯರು ವಾಸ್ತವ್ಯವಿರುವುದು ಪೊಲೀಸ್ ಪರಿಶೀಲನೆ ವೇಳೆ ಪತ್ತೆಯಾಗಿದೆ.
ಇವರು 12-13 ವರ್ಷಗಳ ಹಿಂದೆಯೇ ಮಂಗಳೂರಿಗೆ ಬಂದು ವಾಸ್ತವ್ಯ ಹೂಡಿ ಭಾರತೀಯ ಪ್ರಜೆಗಳನ್ನು ಮದುವೆಯಾಗಿದ್ದಾರೆ.
ಈ ಪೈಕಿ ಒಬ್ಬರು ನಗರದ ಫಳ್ನೀರ್, ಇನ್ನೊಬ್ಬರು ವಾಮಂಜೂರಿನಲ್ಲಿ ನೆಲೆಸಿದ್ದಾರೆ. ಇನ್ನೊಬ್ಬ ಮಹಿಳೆಯ ವಾಸಸ್ಥಳದ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಈಗಾಗಲೇ ರಾಜ್ಯ ಸರಕಾರಕ್ಕೆ ಮಾಹಿತಿ ರವಾನೆ ಮಾಡಲಾಗಿದೆ. ಸರಕಾರದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಸದ್ಯ ಯಾವುದೇ ಪಾಕಿಸ್ಥಾನಿ ನಾಗರಿಕರು ಪತ್ತೆಯಾಗಿಲ್ಲ ಎಂದು ಎಸ್ಪಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.