Categories
ಉಡುಪಿ

ಉಡುಪಿ: ಏ.10ಕ್ಕೆ ಬಿಜೆಪಿಯಿಂದ ‘ಜನಾಕ್ರೋಶ ಯಾತ್ರೆ’!

ಉಡುಪಿ: ಏ.10ಕ್ಕೆ ಬಿಜೆಪಿಯಿಂದ ‘ಜನಾಕ್ರೋಶ ಯಾತ್ರೆ’!

– ಬೆಲೆ ಏರಿಕೆ, ಮುಸ್ಲಿಂ ಓಲೈಕೆ, ದಲಿತರ ಹಣ ಲೂಟಿ ಖಂಡಿಸಿ ಪ್ರತಿಭಟನೆ
– ಕಲ್ಸಂಕ ಪಾರ್ಕಿಂಗ್ ಏರಿಯಾದಿಂದ ಬಿಜೆಪಿ ಜಿಲ್ಲಾ ಕಛೇರಿ ಕಡಿಯಾಳಿಯವರೆಗೆ ಯಾತ್ರೆ

NAMMUR EXPRESS NEWS
ಉಡುಪಿ: ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲೆಯಲ್ಲಿ ರಾಜ್ಯಾಧ್ಯಕ್ಷರಾದ ಬಿ. ವೈ ವಿಜಯೇಂದ್ರ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ‘ಜನಾಕ್ರೋಶ ಯಾತ್ರೆ’ ನಡೆಸಲು ಸಿದ್ಧರಾಗಿದ್ದಾರೆ.
ಬೆಲೆ ಏರಿಕೆ, ಮುಸ್ಲಿಂ ಓಲೈಕೆ, ದಲಿತರ ಹಣ ಲೂಟಿಯನ್ನು ಖಂಡಿಸಿ ಜನಾಕ್ರೋಶ ಯಾತ್ರೆ ಹಮ್ಮಿಕೊಳ್ಳಲಾಗಿದೆ.
ಏ.10, 2025ರಂದು 9.30ಕ್ಕೆ ಕಲ್ಸಂಕ ಪಾರ್ಕಿಂಗ್ ಏರಿಯಾದಿಂದ ಬಿಜೆಪಿ ಜಿಲ್ಲಾ ಕಛೇರಿ ಕಡಿಯಾಳಿಯವರೆಗೆ ಯಾತ್ರೆಯನ್ನು ಆಯೋಜಿಸಲಾಗಿದೆ.
ಪ್ರತಿಭಟನಾ ಸಭೆಯನ್ನು 10.30ಕ್ಕೆ ಕಡಿಯಾಳಿ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ನಡೆಸಲಿದ್ದು, ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಿ ಎಂದು
ಶಾಸಕರು ಉಡುಪಿ ವಿಧಾನಸಭಾ ಕ್ಷೇತ್ರ ಯಶಪಾಲ್ ಸುವರ್ಣ ಈ ಮೂಲಕ ಕೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.