ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ‘ಸುಕೃತಿ 2025’ ಸಂಪನ್ನ!
– ವಿದ್ಯಾರ್ಥಿಗಳ ಸಾಂಸ್ಕೃತಿಕ ವೈಭವದೊಂದಿಗೆ ವಿವಿಧ ಕಾರ್ಯಕ್ರಮ
– ವಿವಿಧ ಸಾಧಕರೊಂದಿಗೆ ಸಂಘ ಸಂಸ್ಥೆಗಳ ವಿಭಾಗದಲ್ಲಿ ಕ್ರಿಯೇಟಿವ್ ಪುಸ್ತಕ ಮನೆಗೆ ಸನ್ಮಾನ
NAMMUR EXPRESS NEWS
ಉಡುಪಿ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ
ಆಶ್ರಯದಲ್ಲಿ ಉಡುಪಿ ಜಿಲ್ಲಾ ಹದಿನೇಳನೆಯ ಕನ್ನಡ ಸಾಹಿತ್ಯ ಸಮ್ಮೇಳನ ‘ಸುಕೃತಿ 2025’ ಉಡುಪಿ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಎ.30 ಮತ್ತು ಮೇ 1ರಂದು ಅದ್ದೂರಿಯಾಗಿ ಜರುಗಿತು.
ಭಾಷಾ ಸೌಹಾರ್ದ ವಿಷಯವಾಗಿ ಮೊದಲ ವಿಚಾರಗೋಷ್ಠಿ, ಮಧ್ಯಾಹ್ನ 1.30 ರಿಂದ ತಾಳಮದ್ದಳೆ ನಡೆಯಿತು, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ಜನರ ಕಣ್ಮನ ಸೆಳೆಯಿತು.
ಬಳಿಕ ಉಡುಪಿ ಪೂರ್ಣಪ್ರಜ್ಞ ಕಾಲೇಜು ಹಾಗೂ ಎಂಜಿಎಂ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನಡೆಯಿತು. ಬಳಿಕ ನೃತ್ಯವಸಂತ ನಾಟ್ಯಾಲಯ ಕುಂದಾಪುರ ತಂಡದಿಂದ ನೃತ್ಯ ಸಿಂಚನದ ರಂಗೇರಿದೆ.
ಮೇ ರ ಗುರುವಾರ ಬೆಳಿಗ್ಗೆ ಪರ್ಕಳ ಸರಿಗಮ ಭಾರತಿ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ “ಅರುಣರಾಗ”, ಕವಿಗೋಷ್ಠಿ, ಬಳಿಕ ನಮ್ಮ ಉಡುಪಿ ವಿಷಯದಲ್ಲಿ ವಿಚಾರಗೋಷ್ಠಿ ನಡೆದಿದೆ.
ಪ್ರವಾಸೋದ್ಯಮ ವಿಷಯದಲ್ಲಿ ಮಾತನಾಡಿದ್ದು, ಮಧ್ಯಾಹ್ನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವದೊಂದಿಗೆ ವಿವಿಧ ಕಾರ್ಯಕ್ರಮಗಳು ನಡೆಯಿತು.
– ಕ್ರಿಯೇಟಿವ್ ಪುಸ್ತಕ ಮನೆಗೆ ಸನ್ಮಾನ
ಡಾ.ಗಜೇಂದ್ರ ಗುಂಡ್ಮಿ (ಶಿಕ್ಷಣ), ಡಾ. ರವೀಂದ್ರ ಶೆಟ್ಟಿ ಬಜಗೋಳಿ (ಶಿಕ್ಷಣ ಮತ್ತು ಸಂಘಟನೆ), ಪ್ರತಾಪ್ ಕುಮಾರ್ ಉದ್ಯಾವರ (ಶಿಕ್ಷಣ ಮತ್ತು ಸಮಾಜ ಸೇವೆ), ರಂಗಪ್ಪಯ್ಯ ಹೊಳ್ಳ (ಸಂಕೀರ್ಣ), ಸುಗುಣ ಮೂಲ್ಯ ಪಡುಬಿದ್ರಿ ಕಂಚಿನಡ್ಕ (ಸಮಾಜ ಸೇವೆ), ಉದಯ ಕುಮಾರ್ ಶೆಟ್ಟಿ (ಸಂಕೀರ್ಣ), ಕೊಕೂಉ ಸೀತಾರಾಮ ಶೆಟ್ಟಿ (ಯಕ್ಷಗಾನ), ಸೂರಿ ಶೆಟ್ಟಿ ಕಾಪು (ಸಮಾಜಸೇವೆ), ಅಪ್ಪು ಪಾಣಾರ ಶಿರ್ವ ( ಪಾಡ್ದನ), ರಾಮಚಂದ್ರ ಆಚಾರ್ಯ ಪಡುಬಿದ್ರಿ (ಪತ್ರಕರ್ತರು), ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ (ಯಕ್ಷಗಾನ), ಸೀತಾ ಶ್ರೀನಿವಾಸ ಪಡುವರಿ (ಸಾಹಿತ್ಯ), ಈಶ್ವರ ಮಲ್ಪೆ (ಸಮಾಜ ಸೇವೆ), ರವಿ ಕಟಪಾಡಿ (ಸಮಾಜಸೇವೆ) ಯೋಗೀಶ್ ಭಟ್ ಹಳ್ಳಿ (ಸಂಕೀರ್ಣ), ವಿದುಷಿ ಸಂಸ್ಕೃತಿ ಪ್ರಭಾಕರ (ಯುವ ಪ್ರತಿಭೆ), ಯಡ್ತಾಡಿ ಸತೀಶ್ ಕುಮಾರ್ ಶೆಟ್ಟಿ (ಪ್ರಗತಿಪರ ಕೃಷಿಕ), ಸಂಘಸಂಸ್ಥೆಗಳ ವಿಭಾಗದಲ್ಲಿ ಕ್ರಿಯೇಟಿವ್ ಪುಸ್ತಕ ಮನೆ, ಭೂಮಿಕಾ ಹಾರಾಡಿ ರಿ. ಪಂಚಮಿ ಟ್ರಸ್ಟ್ ರಿ. ಉಡುಪಿ, ಭಾರತೀಯ ರೆಡ್ ಕ್ರಾಸ್ ಕುಂದಾಪುರ ಶಾಖೆ, ಶ್ರೀ ಜಟ್ಟಿಗೇಶ್ವರ ಯೂತ್ ಕ್ಲಬ್ ರಿ, ಲೈಟ್ ಹೌಸ್ ಗಂಗೊಳ್ಳಿ, ಸುನಿಲ್ ಬೈಂದೂರು ( ಕುಂದಾಪ್ರ ಡಾಟ್.ಕಾಂ) ಇವರುಗಳಿಗೆ ಅದ್ದೂರಿ ಸನ್ಮಾನ ಕಾರ್ಯಕ್ರಮ ನಡೆಯಿತು.
