Categories
ಉಡುಪಿ

ಉಡುಪಿ: ಶಾಲೆಗಳಲ್ಲಿ ಲಕ್ಷಾಂತರ ಕಳ್ಳತನ ಮಾಡಿದ್ದ ಅಂತರ್ ಜಿಲ್ಲಾ ಕಳ್ಳ ಅರೆಸ್ಟ್!

ಕರಾವಳಿ ಟಾಪ್ ನ್ಯೂಸ್

ಉಡುಪಿ: ಶಾಲೆಗಳಲ್ಲಿ ಲಕ್ಷಾಂತರ ಕಳ್ಳತನ ಮಾಡಿದ್ದ ಅಂತರ್ ಜಿಲ್ಲಾ ಕಳ್ಳ ಅರೆಸ್ಟ್!

– ಪುತ್ತೂರು: ಊಟ ಮಾಡಿ ಮಲಗಿದ್ದಲ್ಲಿಗೆ, ಮಗು ಸಾವು!
– ಉಡುಪಿ: ಪಾಸ್ ಮಾಡಿ ಸಾಕು!, ಚೀಟಿ ಹುಂಡಿಗೆ ಹಾಕಿ ದೈವಕ್ಕೆ ಮನವಿ ಮಾಡಿದ ವಿದ್ಯಾರ್ಥಿ

NAMMUR EXPRESS NEWS
ಉಡುಪಿ: ಕಾರ್ಕಳ ತಾಲೂಕಿನ ಬೆಳ್ಮಣ್‌, ನಂದಳಿಕೆ ಮತ್ತು ಹಿರ್ಗಾನದ ಗೊರಟ್ಟಿ ಶಾಲೆಗಳಲ್ಲಿ ಕಳ್ಳತನ ಮಾಡಿದ್ದ ಆರೋಪಿಯೊಬ್ಬನನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೈಂದೂರು ನಿವಾಸಿ ಅರ್ಷಿತ್ ಅವಿನಾಶ್ ದೋಡ್ರೆ (24) ಎಂದು ಗುರುತಿಸಲಾಗಿದೆ.
ಫೆ.21ರ ರಾತ್ರಿ ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ಕಛೇರಿಯ ಬೀಗವನ್ನು ಒಡೆದು ಕಪಾಟು ಮತ್ತು ಮೇಜಿನ ಡ್ರಾವರನ್ನು ಒಡೆದು 1,50,000 ರೂ ಹಣ ಮತ್ತು 3 ಡಿವಿಆರ್‌ಗಳನ್ನು ಕಳವು ಮಾಡಲಾಗಿತ್ತು. ಅಲ್ಲದೆ ಶಾಲೆಯ ಸಿಸಿಟಿವಿಯನ್ನು ಹಾಳು ಮಾಡಲಾಗಿತ್ತು.
ಮಾರ್ಚ್‌ 6ರ ಮಧ್ಯರಾತ್ರಿ ನಂದಳಿಕೆ ಗ್ರಾಮದ ಸ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕರ ಕೊಠಡಿಗೆ ಹಾಕಿದ್ದ ಬೀಗವನ್ನು ಮುರಿದು ಕಪಾಟಿನ ಬಾಗಿಲು ತೆಗೆದು, ರಿಜಿಸ್ಟರ್ ಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿತ್ತು. ಈ ಬಗ್ಗೆಯೂ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಾರ್ಚ್‌ 4ರ ಮಧ್ಯರಾತ್ರಿ ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ಸಂತ ಮರಿಯಾ ಗೊರಟ್ಟಿ ಆಂಗ್ಲ ಮಾದ್ಯಮ ಶಾಲೆಯ ಕಛೇರಿಯ ಬೀಗ ಒಡೆದು ಒಳಪ್ರವೇಶಿಸಿ, ಕಪಾಟಿನನಲ್ಲಿದ್ದ 60 ಸಾವಿರ ರೂ ಹಣ, ಮತ್ತು ಐದು ಸಾವಿರ ರೂ ಮೌಲ್ಯದ ಸಿಸಿ ಕ್ಯಾಮರಾ ಡಿವಿಆರ್ ಕಳವು ಮಾಡಲಾಗಿತ್ತು.
ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದ ಪೊಲೀಸರು ಮಾರ್ಚ್‌ 20ರಂದು ನಿಟ್ಟೆ ಗ್ರಾಮದ ಸಂತ ಲಾರೆನ್ಸ್ ಫ್ರೌಡ ಶಾಲೆಯ ಸಮೀಪ ಅನುಮಾನಾಸ್ಪದವಾಗಿ ಬಿಳಿ ಬಣ್ಣದ ಕಾರಿನಲ್ಲಿ ಕಂಡು ಬಂದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಳ್ಳತನ ವಿಚಾರ ಬಾಯ್ಬಿಟ್ಟಿದ್ದ. ಆರೋಪಿ ಅರ್ಷಿತ್ ಅವಿನಾಶ್ ದೋಡ್ರೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ಕೃತ್ಯಕ್ಕೆ ಬಳಸಿದ್ದ ಕಾರು, ಮೊಬೈಲ್ ಫೋನ್, ಮತ್ತು 84,500 ರೂ ನಗದನ್ನು ವಶಕ್ಕೆ ಪಡೆಯಲಾಗಿದೆ. ನ್ಯಾಯಾಲಯವು ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

– ಪುತ್ತೂರು: ಊಟ ಮಾಡಿ ಮಲಗಿದ ಮಗು ಸಾವು!

ಉಪ್ಪಿನಂಗಡಿ: ಊಟ ಮಾಡಿ ಮಲಗಿದ ಎರಡೂವರೆ ವರ್ಷದ ಮಗು ಇದ್ದಕ್ಕಿದ್ದಂತೆ ಸಾವಿಗೀಡಾದ ಘಟನೆ ಉಪ್ಪಿನಂಗಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆಹಾರ ಸಿಕ್ಕಿಕೊಂಡು ಅಥವಾ ಬೇರೆ ಯಾವುದೋ ಕಾಯಿಲೆ ಉಲ್ಭಣಗೊಂಡು ಸಾವಿಗೀಡಾಗಿರುವುದಾಗಿ ತಾಯಿ ನೀಡಿದ ದೂರಿನ ಪ್ರಕಾರ ಉಪ್ಪಿನಂಗಡಿ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಾಗಿದೆ.
ಮಾ.25 ರ ಬೆಳಿಗ್ಗೆ 11 ಗಂಟೆಗೆ ದಿವ್ಯಾಂಶಿ ಸಿಂಗ್‌ ಮಗುವಿಗೆ ಊಟ ಕೊಟ್ಟು ನಂತರ ಮಗುವಿನ ನಿದ್ದೆ ಬಂದ ಕಾರಣ ಮಲಗಿಸಿದ್ದಾರೆ. ಮಧ್ಯಾಹ್ನ 1 ಗಂಟೆ ಹೋಗಿ ಮಗುವನ್ನು ಎಬ್ಬಿಸಿದಾಗ ಮಗು ಎದ್ದಿಲ್ಲ. ಕೂಡಲೇ ತಾಯಿ ತೋಟದ ಮಾಲಕ ಲಿಂಡೋರಾಜ್‌ ಗಮನಕ್ಕೆ ಬಂದಿದ್ದಾರೆ. ಕೂಡಲೇ ಅವರು ಕಾರಿನಲ್ಲಿ ಮಗುವನ್ನು ಕಡಬದ ಖಾಸಗಿ ಆಸ್ಪತ್ರೆಗೆ ತಂದಿದ್ದು, ಪರಿಶೀಲನೆ ಮಾಡಿದಾಗ ಮಗುವ ಮೃತ ಹೊಂದಿರುವುದಾಗಿ ತಿಳಿಸಿದ್ದಾರೆ.
ಮಗು ರುದ್ರಪ್ರತಾಪ್‌ ಆಹಾರ ಸಿಕ್ಕಿಕೊಂಡು ಅಥವಾ ಇನ್ಯಾವುದೋ ಕಾರಣಕ್ಕೆ ಮೃತ ಪಟ್ಟಿರುವುದಾಗಿದೆ. ಮರಣದಲ್ಲಿ ಬೇರೆ ಯಾವುದೇ ಸಂಶಯವಿಲ್ಲ. ಮೃತದೇಹದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಂಡು ಮೃತದೇಹವನ್ನು ಮುಂದಿನ ಅಂತ್ಯ ಕ್ರಿಯೆಯ ಬಗ್ಗೆ ಬಿಟ್ಟುಕೊಡಬೇಕಾಗಿ ಎಂದು ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

– ಉಡುಪಿ: ಪಾಸ್ ಮಾಡಿ ಸಾಕು!, ಚೀಟಿ ಹುಂಡಿಗೆ ಹಾಕಿ ದೈವಕ್ಕೆ ಮನವಿ ಮಾಡಿದ ವಿದ್ಯಾರ್ಥಿ

ಉಡುಪಿ: ವಿದ್ಯಾರ್ಥಿಯೊಬ್ಬ ದೈವಕ್ಕೆ ಪತ್ರ ಬರೆದು ನನ್ನನ್ನು ಜಸ್ಟ್ ಪಾಸ್ ಮಾಡು ಸಾಕು ಎಂದು ಮನವಿ ಮಾಡಿದ ಅಪರೂಪದ ಘಟನೆ ಕುಂದಾಪುರದಲ್ಲಿ ನಡೆದಿದೆ.
ಕುಂದಾಪುರದ ಹೊಳ ಮಗ್ಗಿ ಹೊರ ಬೊಬ್ಬರ್ಯ ದೇಗುಲದ ಕಾಣಿಕೆ ಹುಂಡಿಯ ಹಣ ಲೆಕ್ಕಾಚಾರ ಮಾಡುವ ಸಂದರ್ಭ ಈ ಪತ್ರ ಸಿಕ್ಕಿದೆ.
ಪರೀಕ್ಷೆ ಅಂದ್ರೆ ಭಯ ಯಾರಿಗಿಲ್ಲ ಹೇಳಿ, ಕಲಿಕೆಯಲ್ಲಿ ಮುಂದಿರುವ ಉತ್ತಮ ಅಂಕ ಬರಬೇಕು ಎಂಬ ಆಸೆ ಇದ್ದರೆ ಸೋಂಬೇರಿ ಜೊತೆಗೆ ಜಸ್ಟ್ ಪಾಸ್ ಆದರೆ ಸಾಕು ಎಂಬ ಯೋಚನೆ ಇರುತ್ತದೆ. ಆ ರೀತಿ ಯೋಚಿಸಿದ ವಿದ್ಯಾರ್ಥಿಯೋರ್ವ ದೈವದ ಹುಂಡಿಯಲ್ಲಿ ಚೀಟಿ ಬರೆದು ಅಂಕಗಳನ್ನು ಆಯ್ಕೆ ಕೊಟ್ಟು ಇಷ್ಟು ಕೊಡಿಸು ಸಾಕು ಅಂತ ಬೇಡಿಕೊಂಡಿದ್ದಾನೆ.
ಪತ್ರದಲ್ಲಿ ಪ್ರತಿಯೊಂದು ಪಠ್ಯ ವಿಷಯಕ್ಕೆ ಸಂಬಂಧಿಸಿ ಇಷ್ಟು ಅಂಕ ಬೇಕು ಎಂದು ಬರೆದಿದ್ದಾನೆ. ಇದಕ್ಕಿಂತ ಕಡಿಮೆ ಬೇಡವೇ ಬೇಡ ಎಂದು ಪ್ರಾರ್ಥಿಸಿದ್ದು ಇದೀಗ ಈ ಪತ್ರ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಾ ಇದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.