ಡಿಗ್ರಿ ಪ್ರಥಮ ವರ್ಷ ಓದುವ ವಿದ್ಯಾರ್ಥಿನಿಯರಿಗೆ 30 ಸಾವಿರ ವಿದ್ಯಾರ್ಥಿ ವೇತನ
– 10, 12ನೇ ತರಗತಿ ಸರ್ಕಾರಿ ಶಾಲೆ, ಕಾಲೇಜಲ್ಲಿ ಓದಿರೋದುಕಡ್ಡಾಯ
– ಸೆ. 30 ಕೊನೆ ದಿನ: ಅಜೀಂ ಪ್ರೇಮ್ಜಿ ಸ್ಥಾಲರ್ಶಿಪ್
NAMMUR EXPRESS NEWS
ತೀರ್ಥಹಳ್ಳಿ : ಸರ್ಕಾರಿ ಶಾಲೆ ಹಾಗೂ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಇದೀಗ ಮೊದಲ ವರ್ಷದ ಸರ್ಕಾರಿ ಅಥವ ಖಾಸಗಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಗಳಿಗೆ ಸುವರ್ಣ ಅವಕಾಶ. ಅಜೀಂ ಪ್ರೇಮ್ಜಿ ಸ್ಕಾಲರ್ಶಿಪ್ (ದೀಪಿಕಾ ವಿದ್ಯಾರ್ಥಿವೇತನ). ಕೊನೆಯ ದಿನಾಂಕ ಸೆಪ್ಟೆಂಬರ್ 30
ಅಜೀಂ ಪ್ರೇಮ್ಜಿ ಸ್ಥಾಲರ್ಶಿಪ್ (ದೀಪಿಕಾ ವಿದ್ಯಾರ್ಥಿವೇತನ) ಎಂದರೆ ಅಜೀಂ ಪ್ರೇಮ್ಜಿ ಫೌಂಡೇಶನ್ನಿಂದ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿನಿಯರಿಗೆ ನೀಡಲಾಗುವ ಆರ್ಥಿಕ ಸಹಾಯ ಯೋಜನೆಯಾಗಿದೆ. ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ಓದಿರುವ ಹಿಂದುಳಿದ ವಿದ್ಯಾರ್ಥಿನಿಯರಿಗೆ ಪದವಿ ಕೋರ್ಸ್ ಪೂರ್ಣಗೊಳಿಸಲು ಅನುವು ಮಾಡಿಕೊಡುವುದು ಇದರ ಮುಖ್ಯ ಉದ್ದೇಶವಾಗಿದೆ. ಇದಕ್ಕೆ ಅರ್ಹರಾದ ವಿದ್ಯಾರ್ಥಿನಿಯರಿಗೆ ಪ್ರತಿ ವರ್ಷ ₹30,000 ಸಹಾಯಧನ ಸಿಗುತ್ತದೆ.
ಯೋಜನೆಯ ಉದ್ದೇಶ: ವಿದ್ಯಾರ್ಥಿನಿಯರು ಪದವಿ ಕೋರ್ಸ್ ಪೂರ್ಣಗೊಳಿಸಲು ಪ್ರೋತ್ಸಾಹ ಮತ್ತು ನೆರವು ನೀಡುವುದು.
ಆರ್ಥಿಕ ನೆರವು: ಪ್ರತಿ ವರ್ಷ 30,000 ರೂಗಳನ್ನು ವಿದ್ಯಾರ್ಥಿ ವೇತನ
ಪದವಿ ಅವಧಿ (3 ವರ್ಷ)ದಲ್ಲಿ ಒಟ್ಟು 90,000 ಹಣವನ್ನು ಪ್ರತಿ ವರ್ಷ 2 ಕಂತುಗಳಲ್ಲಿ (₹15,000+ ₹15,000) ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಅರ್ಹತೆ: 10ನೇ ಮತ್ತು 12ನೇ ತರಗತಿಯನ್ನು ಸರ್ಕಾರಿ ಶಾಲೆಯಿಂದ ಪೂರ್ಣಗೊಳಿಸಿರಬೇಕು.
ಮಾನ್ಯತೆ ಪಡೆದ ಸರ್ಕಾರಿ ಅಥವಾ ಖಾಸಗಿ ಕಾಲೇಜಿನಲ್ಲಿ ಪದವಿ ಕೋರ್ಸ್ನ ಮೊದಲ ವರ್ಷಕ್ಕೆ ಪ್ರವೇಶ ಪಡೆದಿರಬೇಕು.
ಬೇಕಾಗುವ ದಾಖಲಾತಿಗಳು: ಪೋಟೊ & ಸಹಿ, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, 10ನೇ ತರಗತಿ ಮಾರ್ಕ್ಸ್ ಕಾರ್ಡ್. 12 ನೇ ತರಗತಿ ಮಾರ್ಕ್ಸ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಕಾಲೇಜು ಶುಲ್ಕ ಪಾವತಿಸಿದ ರಶೀದಿ
ಗಮನಿಸಿ: ಇದು ಇದೀಗ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿನಿಯರಿಗೆ ಮಾತ್ರ ಕಡ್ಡಾಯವಾಗಿ ಸರ್ಕಾರಿ ಶಾಲೆ ಹಾಗೂ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿರಲೇಬೇಕು.
ಪ್ರತಿ ವಿದ್ಯಾರ್ಥಿನಿಗೂ ಶೇರ್ ಮಾಡಿರಿ..








