Categories
Uncategorized ಉಡುಪಿ ಕರಾವಳಿ ತೀರ್ಥಹಳ್ಳಿ ಮಂಗಳೂರು ಮಲ್ನಾಡ್ ಶಿವಮೊಗ್ಗ

ಆಗುಂಬೆ ಘಾಟಿ ಸಂಚಾರಕ್ಕೆ ಮುಕ್ತ!

ಆಗುಂಬೆ ಘಾಟಿ ಸಂಚಾರಕ್ಕೆ ಮುಕ್ತ!
– ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳ ಬಿರುಸಿನ ಕಾರ್ಯಾಚರಣೆ
– ಆಗುಂಬೆ ಘಾಟಿಯಲ್ಲಿ ಇನ್ನು ವಾಹನ ಓಡಾಡಬಹುದು

NAMMUR EXPRESS NEWS
ತೀರ್ಥಹಳ್ಳಿ/ಉಡುಪಿ: ಆಗುಂಬೆ ಘಾಟಿಯ 5ನೇ ತಿರುವಿನಲ್ಲಿ ಶುಕ್ರವಾರ ಸಂಜೆ ಭಾರೀ ಪ್ರಮಾಣದಲ್ಲಿ ಧರೆ ಕುಸಿದಿದ್ದು, ವಾಹನದ ಮೇಲೆ ಮರ ಬಿದ್ದ ಪರಿಣಾಮ ವಾಹನ ಸಂಚಾರ ಸ್ಥಗಿತವಾಗಿತ್ತು. ಇದೀಗ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಬಿರುಸಿನ ಕಾರ್ಯಾಚರಣೆ ನಡೆಸಿ ಸಂಚಾರ ಮುಕ್ತ ಮಾಡಿದ್ದಾರೆ.

ಆಗುಂಬೆ ಘಾಟಿಯ 5ನೇ ತಿರುವಿನಲ್ಲಿ ಭೂ ಕುಸಿತ ಕಂಡಿದ್ದು ರಸ್ತೆ ಮೇಲೆ ಧರೆಯ ಮಣ್ಣು ಕುಸಿದು ಬಿದ್ದಿದೆ. ಈ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಗೂಡ್ಸ್ ವಾಹನ ಮೇಲೆ ಮರ ಬಿದ್ದಿದೆ. ಅದೃಷ್ಟವಶಾತ್ ಚಾಲಕ ಪಾರಾಗಿದ್ದಾರೆ.

ಮಣ್ಣು ತೆರವು ಕಾರ್ಯಾಚರಣೆ ತಡವಾಗುವ ಕಾರಣದಿಂದ ಶನಿವಾರ ಬೆಳಗ್ಗೆವರೆಗೂ ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರ ಬಂದ್ ಆಗಿತ್ತು.
ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಬಿರುಸಿನ ಕಾರ್ಯಾಚರಣೆ ನಡೆಸಿ ಮಣ್ಣು ತೆರವುಗೊಳಿಸಿದ್ದಾರೆ. ಈಗ ಘಾಟಿ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.