Categories
Uncategorized

ಬೆಳ್ತಂಗಡಿ: ಧರ್ಮಸ್ಥಳದ ಯುವತಿ ಪಂಜಾಬ್‌ನಲ್ಲಿ ಸಾವು ಪ್ರಕರಣ!

ಕರಾವಳಿ ಟಾಪ್ ನ್ಯೂಸ್

ಬೆಳ್ತಂಗಡಿ: ಧರ್ಮಸ್ಥಳದ ಯುವತಿ ಪಂಜಾಬ್‌ನಲ್ಲಿ ಸಾವು ಪ್ರಕರಣ!

– ಪುತ್ತೂರು: ಶಾಮಿಯಾನ ಲಾರಿಗೆ ಬೈಕ್‌ ಡಿಕ್ಕಿ, ಸವಾರ ಮೃತ್ಯು!
– ಕಾರ್ಕಳ: ಹೊಳೆಯಿಂದ ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶ

NAMMUR EXPRESS NEWS
ಬೆಳ್ತಂಗಡಿ: ಪಂಜಾಬ್‌ನಲ್ಲಿ ಧರ್ಮಸ್ಥಳದ ಯುವತಿ ಏರೋಸ್ಪೇಸ್‌ ಇಂಜಿನಿಯರ್‌ ಆಕಾಂಕ್ಷ ಎಸ್‌ ನಾಯರ್‌ (22) ನಿಗೂಢ ಸಾವನ್ನಪ್ಪಿದ್ದು ಪ್ರಕರಣಕ್ಕೆ ಪ್ರೇಮ ವೈಫಲ್ಯ ಕಾರಣ ಎಂದು ತಿಳಿದು ಬಂದಿದೆ.
ಪಂಜಾಬ್‌ ಜಿಲ್ಲೆಯ ಪಗ್ವಾಡದಲ್ಲಿರುವ ಎಲ್‌ಪಿಯು ಮೆಂಟರ್‌ ಪ್ರೊಫೆಸರ್‌ ಎರಡು ಮಕ್ಕಳ ತಂದೆ ಕೇರಳದ ಕೊಟ್ಟಾಯಂ ನಿವಾಸಿ ಬಿಜಿಲ್‌ ಮ್ಯಾಥ್ಯೂ (45) ಮತ್ತು ಆಕಾಂಕ್ಷ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಆದರೆ ಆಕಾಂಕ್ಷಗಳಿಂದ ಬಿಜಿಲ್‌ ಮ್ಯಾಥ್ಯೂ ಕೆಲವೊಂದು ಕಾರಣದಿಂದ ದೂರಸರಿದಿದ್ದು, ಬ್ರೇಕಪ್‌ ಮಾಡಿಕೊಂಡಿದ್ದ. ಮೇ 16 ರಂದು ಡೆಲ್ಲಿಯಿಂದ ಪಂಜಾಬ್‌ನ ಪಾಗ್ವಡಕ್ಕೆ ಬಂದ ಆಕಾಂಕ್ಷ, ಆತನ ಮನೆಗೆ ಹೋಗಿ ನಿನ್ನ ಹೆಂಡತಿ ಮಕ್ಕಳಿಬ್ಬರನ್ನು ಬಿಟ್ಟು ನನ್ನ ಜೊತೆ ಬಂದು ಮದುವೆಯಾಗಬೇಕೆಂದು ಹೇಳಿದ್ದಳು.
ಆದರೆ ಇದಕ್ಕೆ ಮ್ಯಾಥ್ಯೂ ಒಪ್ಪಲಿಲ್ಲ. ನೊಂದ ಆಕಾಂಕ್ಷ ಮೇ 17 ರಂದು ಬೆಳಗ್ಗೆ 11 ಗಂಟೆಗೆ ಕೇರಳ ಮೂಲದ ಸ್ನೇಹಿತರ ಜೊತೆ ಬೈಕ್‌ ಮೂಲಕ ಆಕಾಂಕ್ಷ ಕಾಲೇಜಿಗೆ ಹೋಗಿದ್ದು ಅಲ್ಲಿ ಮ್ಯಾಥ್ಯೂಗೆ ನಾನು ಸಾಯುತ್ತೇನೆ ಎಂದು ಮೆಸೇಜ್‌ ಮಾಡಿ ಕಾಲೇಜು ಕಟ್ಟಡದ ನಾಲ್ಕನೇ ಮಹಡಿಗೆ ಹೋಗಿ ಜಿಗಿದು ಆತ್ಮಹತ್ಯೆ ಮಾಡಿದ್ದಾಳೆ. ನಂತರ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ಪಂಜಾಬ್‌ ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.

– ಪುತ್ತೂರು: ಶಾಮಿಯಾನ ಲಾರಿಗೆ ಬೈಕ್‌ ಡಿಕ್ಕಿ, ಸವಾರ ಮೃತ್ಯು!

ಪುತ್ತೂರು: ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಶಾಮಿಯಾನ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಕುಂಜುರುಪಂಜ ಸಮೀಪದ ನಿವಾಸಿ ಸುದೀಪ್ ಚೊಕ್ಕಾಡಿ ಎಂಬವರು ಮೃತಪಟ್ಟ ಘಟನೆ ಮೇ.18 ರಂದು ರಾತ್ರಿ ನಡೆದಿದೆ.
ಸುದೀಪ್ ಅವರು ರಾತ್ರಿ ತಮ್ಮ ಬೈಕ್‌ನಲ್ಲಿ ನೇರಳಕಟ್ಟೆಯಲ್ಲಿರುವ ಸಹೋದರಿಯ ಮನೆಗೆ ಹೋಗುವ ಸಂದರ್ಭದಲ್ಲಿ, ಉರ್ಲಾಂಡಿ ಬಳಿ, ಶಾಮಿಯಾನ ಸಲಕರಣೆ ತುಂಬಿದ್ದ ಲಾರಿಯೊಂದು ರಸ್ತೆಯಲ್ಲಿ ನಿಲ್ಲಿಸಿತ್ತು. ತುಂತುರು ಮಳೆ ಸುರಿಯುತ್ತಿದ್ದ ಕಾರಣ, ಕತ್ತಲೆಯಲ್ಲಿ ರಸ್ತೆಯಲ್ಲಿದ್ದ ಲಾರಿ ಏಕಾಏಕಿ ಗೋಚರಿಸದೆ, ಸುದೀಪ್ ಅವರ ಬೈಕ್ ಲಾರಿಯ ಹಿಂಬದಿಗೆ ರಭಸವಾಗಿ ಅಪ್ಪಳಿಸಿದೆ. ಅಪಘಾತದ ತೀವ್ರತೆಗೆ ಸುದೀಪ್ ಅವರ ತಲೆಗೆ ಗಂಭೀರ ಗಾಯಗಳಾಗಿದ್ದವು. ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಕೈಗೊಂಡಿದ್ದಾರೆ.

– ಕಾರ್ಕಳ: ಹೊಳೆಯಿಂದ ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶ

ಕಾರ್ಕಳ: ಯಾವುದೇ ಪರವಾನಿಗೆ ಇಲ್ಲದೇ ಹೊಳೆಯಿಂದ ಅಕ್ರಮವಾಗಿ ಮರಳು ತೆಗೆದು ಸಾಗಾಟ ಮಾಡುತ್ತಿದ್ದ ಎರಡು ವಾಹನಗಳು ಹಾಗೂ 3 ಯೂನಿಟ್ ಕಾರ್ಕಳ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕಾರ್ಕಳ ತಾಲೂಕಿನ ದುರ್ಗ ಗ್ರಾಮದ ಮಾಂಜ ಎಂಬಲ್ಲಿ ಹೊಳೆಯಲ್ಲಿ ಟಾಟಾ 407 ವಾಹನ ಚಾಲಕ ಸಯ್ಯದ್ ಜಲೀಲ್ ಎಂಬಾತ ಮರಳು ತೆಗೆದು ಸಾಗಾಟ ಮಾಡುತ್ತಿದ್ದಾಗ ಪೊಲೀಸರು ವಾಹನ ಸಹಿತ ಮರಳು ವಶಕ್ಕೆ ಪಡೆದರೆ, ಕಾಂತಾವರ ಗ್ರಾಮದ ಪರಪ್ಪಾಡಿ ಎಂಬಲ್ಲಿ ಟಿಪ್ಪರ್ ಚಾಲಕ ಶೇಖ್ ಶಾಹಿದ್ ಎಂಬಾತ ಮಂಗಳೂರಿನಿಂದ ಯಾವುದೇ ಪರವಾನಗಿ ಇಲ್ಲದೇ ಮರಳು ತುಂಬಿಸಿ ಸಾಗಾಟ ಮಾಡುತ್ತಿದ್ದಾಗ ಟಿಪ್ಪರ್ ಸಹಿತ ಮರಳನ್ನು ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.