Categories
Uncategorized ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ಬಸ್ ಚತುರ ಪ್ರಕಾಶ್ ಇನ್ನಿಲ್ಲ: ಶ್ರದ್ಧಾಂಜಲಿ

ಬಸ್ ಚತುರ ಪ್ರಕಾಶ್ ಇನ್ನಿಲ್ಲ: ಶ್ರದ್ಧಾಂಜಲಿ
– ಬಸ್ ಬುಕ್ಕಿಂಗ್‌ನಲ್ಲಿ ಚಿರಪರಿಚಿತ ವ್ಯಕ್ತಿತ್ವ
– ಬಸ್ ಸೇವೆ ಮೂಲಕ ಅಪಾರ ಜನಪ್ರಿಯತೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದಲ್ಲಿ ಬಸ್ ಬುಕ್ಕಿಂಗ್ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ತೀರ್ಥಹಳ್ಳಿ ಪಟ್ಟಣದ ಕೆ.ಸಿ ರಸ್ತೆ ನಿವಾಸಿ ಚತುರ ಪ್ರಕಾಶ್ (61 ವರ್ಷ) ಇಹಲೋಕ ತ್ಯಜಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ ಅನಾರೋಗ್ಯದಿಂದ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಇವರು ತಾಲೂಕು ಕಚೇರಿಯ ಮುಂಭಾಗ ಎಸ್.ಬಿ.ಐ ಬ್ಯಾಂಕಿನ ಕೆಳಗಿನ ಅಂತಸ್ತಿನ ಕೊಠಡಿಯೊಂದರಲ್ಲಿ ಜೆರಾಕ್ಸ್ ಅಂಗಡಿ ಹಾಗೂ ಬಸ್ ಬುಕ್ಕಿಂಗ್‌ ಕೆಲಸ ನಿರ್ವಹಿಸುತ್ತಿದ್ದರು. ಅನೇಕ ದಶಕಗಳಿಂದ ಬಸ್ ಬುಕ್ಕಿಂಗ್ ಸೇವೆ ನೀಡಿದ್ದರು.

ತೀರ್ಥಹಳ್ಳಿ ತಾಲೂಕಿನ ಜನರು ಬೆಂಗಳೂರು ಸೇರಿ ಅನೇಕ ಕಡೆ ಪಯಣಕ್ಕೆ ಟಿಕೆಟ್ ವ್ಯವಸ್ಥೆ ಮಾಡುತ್ತಿದ್ದರು. ಎರಡು ಮೂರು ದಿನಗಳ ಹಿಂದೆ ಆರೋಗ್ಯದಲ್ಲಿ ಏರುಪೇರಾಗಿ ಮನೆಯಲ್ಲಿಯೇ ದಿಢೀರ್ ಕುಸಿದು ಬಿದ್ದು ಕೂಡಲೇ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ಪತ್ನಿ, ಪುತ್ರ ಸಹೋದರರನ್ನು ಸೇರದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಭಾವ ಪೂರ್ಣ ಶ್ರದ್ಧಾಂಜಲಿ

 

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.