Categories
Uncategorized

4 ಕರುಗಳಿಗೆ ಜನ್ಮ ನೀಡಿದ ಹಸು – ತುಮಕೂರಿನ ಚೇಳೂರಿನಲ್ಲಿ ಕೌತುಕ

4 ಕರುಗಳಿಗೆ ಜನ್ಮ ನೀಡಿದ ಹಸು!
– ತುಮಕೂರಿನ ಚೇಳೂರಿನಲ್ಲಿ ಕೌತುಕ
– ಹಸು, ಕರು ನೋಡಲು ಜನವೋ ಜನ!

NAMMUR EXPRESS NEWS
ತುಮಕೂರು: ಇದೊಂದು ವಿಚಿತ್ರ ಘಟನೆ ತುಮಕೂರಲ್ಲಿ ನಡೆದಿದೆ. ಹಸುವೊಂದು ನಾಲ್ಕು ಕರುಗಳಿಗೆ ಜನ್ಮ ನೀಡಿರುವಂತಹ ಅಚ್ಚರಿಯ ಘಟನೆಯೊಂದು ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಚೇಳೂರು ಗ್ರಾಮದಲ್ಲಿ ನಡೆದಿದೆ.
ಚೇಳೂರು ಗ್ರಾಮದ ಮುನಿಯಪ್ಪ ಎಂಬುವವರಿಗೆ ಸೇರಿದ ಆಕಳು ಏಕಕಾಲದಲ್ಲಿ ನಾಲ್ಕು ಕರುಗಳಿಗೆ ಜನ್ಮ ನೀಡಿದ ವಿಶೇಷ ಹಸು. ನಾಲ್ಕರ ಪೈಕಿ ಮೂರು ಗಂಡು ಹಾಗೂ ಒಂದು ಹೆಣ್ಣು ಕರುವಿಗೆ ಹಸು ಜನ್ಮ ನೀಡಿದೆ. ತಾಯಿ ಹಾಗೂ ನಾಲ್ಕು ಕರುಗಳ ಆರೋಗ್ಯದಿಂದಿವೆ. ಏಕಕಾಲದಲ್ಲಿ ನಾಲ್ಕು ಕರುಗಳಿಗೆ ಜನ್ಮ ನೀಡಿದ ಹಸುವನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳಿಂದ ಜನರು ಆಗಮಿಸುತ್ತಿರುವುದು ವಿಶೇಷವಾಗಿದೆ.

 

ಇದನ್ನೂ ಓದಿ : ಲಕ್ಷಕ್ಕೆ ಬರುತ್ತಾ ಅಡಿಕೆ ದರ?

HOW TO APPLY : NEET-UG COUNSELLING 2023

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.