Categories
Uncategorized

ಚಂದ್ರಗುತ್ತಿ ರೇಣುಕಾಂಬೆ ದರ್ಶನಕ್ಕೆ ಜನ ಸಾಗರ!

ಚಂದ್ರಗುತ್ತಿ ರೇಣುಕಾಂಬೆ ದರ್ಶನಕ್ಕೆ ಜನ ಸಾಗರ!
– ಸೊರಬ ತಾಲೂಕಿನ ಐತಿಹಾಸಿಕ ದೇಗುಲ
– ಪೂಜೆ ಬಳಿಕ ಬಯಲಲ್ಲಿ ಭೋಜನ ಸವಿದ ಭಕ್ತರು!

NAMMUR EXPRESS NEWS
ಸೊರಬ: ಸೊರಬ ತಾಲೂಕಿನ ಚಂದ್ರಗುತ್ತಿಯ ಪುರಾಣ ಹಾಗೂ ಐತಿಹಾಸಿಕ ಪ್ರಸಿದ್ದ ಇಲ್ಲಿನ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ಬನದ ಹುಣ್ಣಿಮೆ ಪ್ರಯುಕ್ತ ಲಕ್ಷಾಂತರ ಭಕ್ತರು ಗುರುವಾರ ಶ್ರೀರೇಣುಕಾ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಬನದ ಹುಣ್ಣಿಮೆ ಪೂರ್ಣ ಬರುವ ಹೊಸ್ತಿಲು ಹುಣ್ಣಿಮೆಯಲ್ಲಿ ಶ್ರೀ ದೇವಿಯ ವೈವಿಧ್ಯದಲ್ಲಿ ಇರುವುದರಿಂದ ಹಸಿರು ಬಳೆ, ಕುಪ್ಪಸ ಸೇರಿದಂತೆ ಮುತ್ತೆದೆ ಸಾಮಗ್ರಿಗಳನ್ನು ಪೂಜೆಗೆ ಸಲ್ಲಿಸುವಂತಿರಲಿಲ್ಲ ಭಕ್ತರು ಒಂದು ತಿಂಗಳ ಕಾಲ ದೇವಿಗೆ ಯಾವುದೇ ಪಡ್ಲಿಗೆ ತುಂಬಿಸಿರಲಿಲ್ಲ.

ಆದರೆ ಬನದ ಹುಣ್ಣಿಮೆಯು ಮುತ್ತೈದೆಯರ ಹುಣ್ಣಿಮೆ ಎಂದು ಪ್ರಸಿದ್ದಿ ಪಡೆದುಕೊಂಡ ಹಿನ್ನೆಲೆ ಹೆಣ್ಣು ಮಕ್ಕಳು ಬಳೆ ಅಂಗಡಿಗಳಲ್ಲಿ ಹೊಸ ಬಳೆ, ಹಸಿರು ಕುಪ್ಪಸ ತೊಟ್ಟುಕೊಂಡು ತೊಟ್ಟಲು ಬಾವಿ ಪೂಜೆ, ಮೆಟ್ಟಿಲು ಪೂಜೆ, ದಿಂಡು ಕಟ್ಟುವುದು, ಬೇವು ಉಡುವುದು, ಚೌಲ, ಕಿವಿ ಚುಚ್ಚುವುದು, ತುಲಾಭಾರ ಸೇವೆ ಸೇರಿದಂತೆ ವಿವಿಧ ವಿಧ ಧಾರ್ಮಿಕ ಸೇವೆಗಳು ನಡೆದವು, ದೇವಿಯ ಸನ್ನಿಧಿಯಲ್ಲಿ ಹಣ್ಣು-ಕಾಯಿ ಪೂಜೆ ಸಲ್ಲಿಸಿದ ನಂತರ ಮನೆಗಳಲ್ಲಿ ತಯಾರಿಸಿದ ವಿವಿಧ ಖಾದ್ಯ ಭಕ್ಷ್ಯಗಳನ್ನು ಪಡ್ಲಿಗೆಯಲ್ಲಿ ತುಂಬಿಟ್ಟು ದೇವಸ್ಥಾನದ ಮುಂಭಾಗದಲ್ಲಿನ ತೊಟ್ಟಿಲು ಬಾವಿಯ ಬಳಿ ವಿಶೇಷ ನೈವೇದ್ಯ ಮಾಡಿದರು. ಕುಟುಂಬಸ್ಥರು ದೇವಸ್ಥಾನ ಸಮೀಪದ ಬಯಲುಗಳಲ್ಲಿ ಸಹ ಭೋಜನ ಮಾಡುವ ದೃಶ್ಯ ಕಂಡುಬಂದಿತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.