Categories
Uncategorized ಬೆಂಗಳೂರು

ಗೀಸರ್ ಸೋರಿಕೆ: ಯುವಕ, ಯುವತಿ ಬಾತ್ ರೂಂನಲ್ಲೇ ಉಸಿರುಗಟ್ಟಿ ಮೃತ್ಯು!

ಗೀಸರ್ ಸೋರಿಕೆ: ಯುವಕ, ಯುವತಿ ಬಾತ್ ರೂಂನಲ್ಲೇ ಉಸಿರುಗಟ್ಟಿ ಮೃತ್ಯು!

  • ಬೀದಿ ನಾಯಿಗಳ ದಾಳಿಗೆ 11 ವರ್ಷದ ಬಾಲಕ ಬಲಿ
  • ಯುವಕನ ಸಾವು, ಕೊಲೆ ಶಂಕೆ; ಮೂವರು ಅರೆಸ್ಟ್

ಬೆಂಗಳೂರು: ಬಾತ್ ರೂಂನಲ್ಲಿ ಗ್ಯಾಸ್ ಗೀಸರ್ ಸೋರಿಕೆಯಾಗಿ ಯುವಕ & ಯುವತಿ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಚಿಕ್ಕಜಾಲ ವ್ಯಾಪ್ತಿಯ ತರಬನಹಳ್ಳಿಯಲ್ಲಿ ನಡೆದಿದೆ.
ಗುಂಡ್ಲುಪೇಟೆ ಮೂಲದ ಚಂದ್ರಶೇಖರ್ ಹಾಗೂ ಗೋಕಾಕ್ಷ ಸುಧಾರಾಣಿ ಮೃತ ದುರ್ದೈವಿಗಳು.
ತರಬನಹಳ್ಳಿಯಲ್ಲಿ ವಾಸವಿದ್ದ ಚಂದ್ರಶೇಖರ್ ಬಾಡಿಗೆ ಮನೆಗೆ ಸುಧಾರಾಣಿ ತೆರಳಿದ್ದಳು. ಇಬ್ಬರಿಗೆ ವಿವಾಹ ನಿಶ್ಚಯವಾಗಿತ್ತು ಎನ್ನಲಾಗಿದೆ. ಇಬ್ಬರು ಕೂಡ ರಾತ್ರಿ ಸ್ನಾನಕ್ಕೆಂದು ಗ್ಯಾಸ್ ಗೀಸರ್ ಆನ್ ಮಾಡಿ ಬಾತ್ ರೂಂ ಗೆ ಹೋಗಿದ್ದಾರೆ. ಆ ವೇಳೆ ಗ್ಯಾಸ್ ಗೀಸರ್ನಿಂದ ವಿಷಾನಿಲ ಸೋರಿಕೆಯಾಗಿದೆ.
ಇದರಿಂದ ಸ್ನಾನ ಮಾಡುತ್ತಿರುವಾಗಲೇ ಉಸಿರುಗಟ್ಟಿ ಇಬ್ಬರು ಕೂಡ ಬಾತೂಮ್ನಲ್ಲೆ ಪ್ರಜ್ಞೆ ತಪ್ಪಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಬೀದಿ ನಾಯಿಗಳ ದಾಳಿಗೆ 11 ವರ್ಷದ ಬಾಲಕ ಬಲಿ

ದೇಶದಲ್ಲಿ ಬೀದಿ ನಾಯಿಗಳಿಂದ ಹಾವಳಿಯಿಂದಾಗಿ ಹೆಚ್ಚಾಗಿ ಚಿಕ್ಕ ಮಕ್ಕಳು ಮರಣ ಹೊಂದಿದ್ದಾರೆ. ಇದೀಗ ಬೀದಿ ನಾಯಿಗಳಿಂದಾಗಿ ದಾಳಿಗೊಳಗಾದ 11 ವರ್ಷದ ಬಾಲಕ ಕೇರಳದ ಕಣ್ಣೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಬೀದಿನಾಯಿಗಳಿಂದ ನಿಹಾಲ್ ಎಂಬ ವಿಕಲಚೇತನ ಅಪ್ರಾಪ್ತ ಬಾಲಕ ಮುಜಪ್ಪಿಲಂಗಾಡ್ ನಿವಾಸಿ ಎಂದು ಗುರುತಿಸಲಾಗಿದೆ. ಆತನ ಮನೆಯಿಂದ ಸುಮಾರು 300 ಮೀಟರ್ ದೂರದಲ್ಲಿ ಬೀದಿ ನಾಯಿಗಳ ಗುಂಪು ದಾಳಿ ಮಾಡಿದ ನಂತರ ಬಾಲಕ ತೀವ್ರವಾಗಿ ಗಾಯಗೊಂಡಿರುತ್ತಾನೆ. ಬಾಲಕನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಬೀದಿ ನಾಯಿಗಳಿಂದ ಆಗಿರುವ ಗಾಯಗಳ ತೀವ್ರತೆ ಹೆಚ್ಚಿರುವುದರಿಂದ ಬಾಲಕ ನಿಹಾಲ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವಕನ ಸಾವು, ಕೊಲೆ ಶಂಕೆ; ಮೂವರು ಅರೆಸ್ಟ್

ತರೀಕೆರೆ ತಾಲೂಕಿನ ಅಮೃತಾಪುರ ಗ್ರಾಮದಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದ ಹಿನ್ನಲೆಯಲ್ಲಿ ಪೊಲೀಸರು ಮೂವರನ್ನು ವಶಕ್ಕೆ ಪಡೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಅಮೃತಾಪುರ ಗ್ರಾಮದಲ್ಲಿ ನಡೆದಿದೆ.
ಶಿವಕುಮಾರ (40) ಮೃತ ದುರ್ದೈವಿ, ಶನಿವಾರ ಮಧ್ಯಾಹ್ನ ಅಮೃತಾಪುರದ ಆಚಾರರ ಬೀದಿಯಲ್ಲಿ ಜಾಗದ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಜಗಳ ನಡೆದಿದೆ. ಗಲಾಟೆಯಾದ ಬಳಿಕವೂ ಗ್ರಾಮದಲ್ಲಿ ಓಡಾಡಿಕೊಂಡಿದ್ದ ಶಿವಕುಮಾರ ಸಂಜೆ 7 ಗಂಟೆ ಹೊತ್ತಿಗೆ ಶಾಲಾ ಆವರಣದಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.ಪೊಲೀಸರು ಸ್ಥಳ ಪರಿಶೀಲಿಸಿ ಕೊಲೆ ಶಂಕೆ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಜಗಳದಲ್ಲಿ ಭಾಗಿಯಾಗಿದ್ದ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

ಭೀಕರ ಅಪಘಾತ: 3 ತಿಂಗಳ ಮಗು ಸೇರಿ 3 ಸಾವು

ವಿಜಯಪುರ ಗೊಲ್ಲರಹಟ್ಟಿ ಗ್ರಾಮದ ಬಳಿ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂರು ತಿಂಗಳ ಮಗು ಸೇರಿ ಬೆಂಗಳೂರಿನ ಮೂವರು ದಾರುಣ ಸಾವಿಗೀಡಾಗಿರುವ ಘಟನೆ ನಡೆದಿದೆ. ಮೂರು ತಿಂಗಳ ಮಗು ಫಾತಿಮಾ, ತಾಯಿ ತಬೂಮ್ ಹಾಗೂ ಸಂಬಂಧಿ ಜಾಕೀರ್ ಅಹ್ಮದ್ ಮೃತ ದುರ್ದೈವಿಗಳು. ಇವರು ಬೆಂಗಳೂರಿನ ಹೆಚ್‌ಎಸ್‌ಆರ್ ಬಡಾವಣೆ ನಿವಾಸಿಗಳು ಎಂದು ತಿಳಿದು ಬಂದಿದೆ. ನಯಾಜ್, ಇಮ್ರಾನ್ ಖಾನ್, ತಬೀಜ್ ಅಹಮ್ಮದ್, ಸಬಾ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲ ಗೋವಾದಿಂದ ಬೆಂಗಳೂರಿಗೆ ಹಿಂದಿರುಗುವಾಗ ಭೀಕರ ಅಪಘಾತ ಸಂಭವಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.