ಅ.31ಕ್ಕೆ ಅಮೆಜಾನ್ ಪ್ರೈಮ್ ಗೆ ಬರಲಿದೆ ಕಾಂತಾರ-1 ಸಿನಿಮಾ
– ಬಿಡುಗಡೆಯಾದ ಒಂದು ತಿಂಗಳೊಳಗೆ ಓಟಿಟಿಗೆ
– ಕನ್ನಡದ ಎಲ್ಲಾ ಸಿನಿಮಾಗಳ ರೆಕಾರ್ಡ್ ಬ್ರೇಕ್ ಮಾಡಿದ ರಿಷಬ್ ಶೆಟ್ಟಿ!
NAMMUR EXPRESS NEWS
ಬೆಂಗಳೂರು : ಕನ್ನಡದ ಅತಿ ಹೆಚ್ಚು ಗಳಿಕೆಯ ಸಿನಿಮಾಗಳಲ್ಲಿ ಒಂದಾಗಿರುವ ‘ಕಾಂತಾರ 1’ ಸಿನಿಮಾ ಅ.31 ರಂದು ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗುತ್ತಿದೆ. ಸಿನಿಮಾ ಬಿಡುಗಡೆಯಾದ 1 ತಿಂಗಳ ಒಳಗೆ ಈ ಸಿನಿಮಾ ಓಟಿಟಿಗೆ ಬರುತ್ತಿರುವುದು ಅಚ್ಚರಿ ಹುಟ್ಟಿಸಿದೆ. ಪ್ರೈಮ್ ವೀಡಿಯೋ ‘ಕಾಂತಾರ 1’ ಬಿಡುಗಡೆ ವಿಚಾರವನ್ನು ಅಧಿಕೃತವಾಗಿ ಘೋಷಿಸಿದ್ದು, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ರಸಾರ ಮಾಡುವುದಾಗಿ ಘೋಷಿಸಿದೆ. ಹಿಂದಿ ಆವೃತ್ತಿ ಕುರಿತು ಯಾವುದೇ ಮಾಹಿತಿ ನೀಡಿಲ್ಲ. 125 ಕೋಟಿ ರು.ಗೆ ಮಾರಾಟ ಆಗಿರುವುದರಿಂದ ‘ಕಾಂತಾರ 1’ ಚಿತ್ರವನ್ನು ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿರುವಾಗಲೇ ಓಟಿಟಿಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಸಿನಿಮಾ 813 ಕೋಟಿ ರು. ಸಂಗ್ರಹ ಮಾಡಿ, ಈ ವರ್ಷದ ಅತಿ ಹೆಚ್ಚು ಗಳಿಕೆಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಜೊತೆಗೆ ಚಿತ್ರಮಂದಿರಗಳಲ್ಲಿ ಈಗಲೂ ಜನಭರಿತ ಪ್ರದರ್ಶನ ಕಾಣುತ್ತಿದ್ದು, 1000 ಕೋಟಿ ರು. ಸಂಗ್ರಹಿಸುವ ನಿರೀಕ್ಷೆ ಇದೆ. ಈ ಮಧ್ಯೆ ಸಿನಿಮಾ ಓಟಿಟಿಗೆ ಬರುತ್ತಿರುವುದು ಬಹುತೇಕರ ಹರ್ಷಕ್ಕೆ ಮತ್ತು ಅಚ್ಚರಿಗೆ ಕಾರಣವಾಗಿದೆ. ರಿಷಬ್ ನಟನೆ, ನಿರ್ದೇ ಶನದ ಚಿತ್ರದ ಪ್ರಮುಖ ಪಾತ್ರದಲ್ಲಿ ರುಕ್ಕಿಣಿ ವಸಂತ್, ಗುಲ್ಬನ್ ದೇವಯ್ಯ ನಟಿಸಿದ್ದಾರೆ.