ಅರ್ಚಕರ ಸಮಸ್ಯೆ ವಿಚಾರ: ಶಾಸಕರ ನೇತೃತ್ವದಲ್ಲಿ ಸಭೆ
– ತೀರ್ಥಹಳ್ಳಿ ತಾಲೂಕು ಮುಜರಾಯಿ ದೇವಾಲಯಗಳ ಅರ್ಚಕ – ಆಗಮಿಕ ಉಪಾದಿವಂತರ ಒಕ್ಕೂಟದ ಸಭೆ
– ಅರ್ಚಕರ 20ಕ್ಕೂ ಹೆಚ್ಚು ಸಮಸ್ಯೆಗಳ ಪಟ್ಟಿ ಇಲಾಖೆ ಅಧಿಕಾರಿಗೆ ಹಸ್ತಾಂತರ
NAMMUR EXPRESS NEWS
ತೀರ್ಥಹಳ್ಳಿ ತಾಲೂಕು ಮುಜರಾಯಿ ದೇವಸ್ಥಾನದ ಅರ್ಚಕರ ಸಮಸ್ಯೆ ವಿಚಾರವಾಗಿ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಅರ್ಚಕರ 20ಕ್ಕೂ ಹೆಚ್ಚು ಸಮಸ್ಯೆಗಳ ಪಟ್ಟಿ ಇಲಾಖೆ ಅಧಿಕಾರಿಗೆ ಹಸ್ತಾಂತರ ಮಾಡಲಾಗಿದೆ.
ತೀರ್ಥಹಳ್ಳಿ ತಾಲೂಕು ಮುಜರಾಯಿ ದೇವಾಲಯಗಳ ಅರ್ಚಕ – ಆಗಮಿಕ ಉಪಾದಿವಂತರ ಒಕ್ಕೂಟದಲ್ಲಿ ಶಾಸಕ ಆರಗ ಜ್ಞಾನೇಂದ್ರ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಜರಾಯಿ ಇಲಾಖೆಯ ಜಿಲ್ಲಾ ತಹಶೀಲ್ದಾರ್ ಈ ಸಭೆಯಲ್ಲಿ ಉಪಸ್ಥಿತರಿದ್ದು ಮುಜರಾಯಿ ದೇವಸ್ಥಾನದ ಅರ್ಚಕರ ಸಮಸ್ಯೆ ವಿಚಾರವಾಗಿ ಚರ್ಚೆ ನಡೆಸಲಾಯಿತು. ಆ ಸಮಸ್ಯೆ ವಿಚಾರವನ್ನು ಮುಜರಾಯಿ ಇಲಾಖೆಯ ತಹಸೀಲ್ದಾರ್ ಮೂಲಕ ಬಗೆಹರಿಸುವ ಸಲುವಾಗಿ ಸಭೆಯನ್ನು ಕರೆದಿದ್ದು ತಸ್ತಿಕ್ ಹಣ ಬಿಡುಗಡೆ ಆಗಿಲ್ಲ ಎಂಬ ಕಾರಣ ಅರ್ಚಕರ ಕೆಲವೊಂದು ಬೇಡಿಕೆಗಳನ್ನು ಇಟ್ಟರು.
ತೀರ್ಥಹಳ್ಳಿ ತಾಲೂಕು ಪಂಚಾಯಿತಿಯ ಸಭಾಂಗಣದಲ್ಲಿ ಮುಜರಾಯಿ ಇಲಾಖೆಯ ಈ ಸಭೆಯನ್ನು ಶಾಸಕ ಜ್ಯೋತಿ ಬೆಳಗಿಸುವ ಮೂಲಕ ಇಲಾಖೆಯ ಅಧಿಕಾರಿಗಳೊಂದಿಗೆ ಅರ್ಚಕರ ಸಮ್ಮುಖದಲ್ಲಿ ಉದ್ಘಾಟನೆ ಮಾಡಿ ಪ್ರಾಸ್ತವಿಕ ಮಾತನಾಡಿ ನಮ್ಮ ತಾಲೂಕಿನಲ್ಲಿ ಒಟ್ಟು 168 ದೇವಾಲಯಗಳು ಮುಜರಾಯಿ ಇಲಾಖೆಗೆ ಒಳಪಟ್ಟಿವೆ. ಈ ದೇವಾಲಯದ ಅರ್ಚಕರಿಗೆ ಸಮಸ್ಯೆಗಳು ಇದ್ದು. ಸುಮಾರು 82 ದೇವಾಲಯದ ಅರ್ಚಕರಿಗೆ ತಸ್ತಿಕ್,ರೂಪದಲ್ಲಿ ದೇವಸ್ಥಾನದ ಪೂಜಾ ಖರ್ಚಿಗೆ 6,000 ರೂ. ಕೊಡುತ್ತಿದ್ದು ಉಳಿದ ಅರ್ಚಕರಿಗೆ ಯಾವುದೇ ರೀತಿಯ ಹಣವನ್ನು ನೀಡುತ್ತಿಲ್ಲ. ಅವರ ಜೀವನ ತುಂಬಾ ಕಷ್ಟದಲ್ಲಿದ್ದು ಅವರು ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಅವರ ಪೂರ್ವಿಕರು ದೇವಸ್ಥಾನವನ್ನು ಪೂಜಿಸಿಕೊಂಡು ಬಂದಿದ್ದು, ಅರ್ಚಕ ವೃತ್ತಿಯನ್ನು ಕೈ ಬಿಡಬಾರದೆಂದು ಹಲವು ತೊಂದರೆಗಳಿದ್ದರೂ ಸಹ ದೇವಾಲಯದಲ್ಲಿ ಪೂಜೆಯ ಕಾರ್ಯಕ್ರಮವನ್ನು ಎಲ್ಲಿಯೂ ನಿಲ್ಲಿಸಿಲ್ಲ. ಈ ಅರ್ಚಕರ ಸಮಸ್ಯೆಗಳನ್ನು ಸಂಬಂಧಪಟ್ಟ ಮುಜರಾಯಿ ಅಧಿಕಾರಿಗಳು, ಅರ್ಚಕರ ಸಮಸ್ಯೆಯನ್ನು ಬಗೆಹರಿಸಿ ಕೊಡಬೇಕೆಂದು ಇಲಾಖೆಯ ಅಧಿಕಾರಿಗೆ ಸೂಚಿಸಿದರು.
ತೀರ್ಥಹಳ್ಳಿ ತಾಲೂಕು ಮುಜರಾಯಿ ಅರ್ಚಕರ ಸಂಘದ ಅಧ್ಯಕ್ಷ ರಾಘವೇಂದ್ರ ಭಟ್ ಕೋಣಂದೂರು, ಮುಜರಾಯಿ ದೇವಸ್ಥಾನದ ಅರ್ಚಕರ ಸಮಸ್ಯೆ, ಹಾಗೂ ದೇವಸ್ಥಾನಗಳ ಸಮಸ್ಯೆ ಬಗ್ಗೆ ಮುಜರಾಯಿ ಇಲಾಖೆಯ ಅಧಿಕಾರಿಗೆ ಸವಿಸ್ತಾರವಾಗಿ ಮನದಟ್ಟು ಮಾಡಿದರು.
ಸಮಸ್ಯೆ ಪಟ್ಟಿಯಲ್ಲಿ ಸುಮಾರು 20ಕ್ಕೂ ಹೆಚ್ಚಿದ್ದು ಅದನ್ನು ಇಲಾಖೆಯ ಅಧಿಕಾರಿಗೆ ಹಸ್ತಾಂತರ ಮಾಡಿದರು.
ಜಿಲ್ಲಾ ಮುಜರಾಯಿ ಇಲಾಖೆಯ ತಹಶೀಲ್ದಾರ್ ಪ್ರದೀಪ್, ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಕೊಡುವುದಾಗಿ
ಭರವಸೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಕಾರ್ಯನಿರ್ವಹಣಾಧಿಕಾರಿ ಶೈಲಾ, ಮಧು, ಅರ್ಚಕರ ಸಂಘದ ಖಜಾಂಚಿ ಮುರಳಿಧರ್ ಭಟ್, ಹಾಗೂ ಮುಜರಾಯಿ ಇಲಾಖೆಯ ಅಧಿಕಾರಿಗಳು ಅರ್ಚಕ ಸಂಘದ ಸದಸ್ಯರು ಹಾಗೂ ಅರ್ಚಕರು ಉಪಸ್ಥಿತರಿದ್ದರು.
