Categories
Uncategorized ಕೊಪ್ಪ ಚಿಕ್ಕಮಗಳೂರು ಮಲ್ನಾಡ್ ಶೃಂಗೇರಿ

ಎನ್ ಆರ್ ಪುರ ಕಾಡಾನೆ ಸೆರೆ ಕಾರ್ಯಾಚರಣೆ ಆರಂಭ

ಎನ್ ಆರ್ ಪುರ ಕಾಡಾನೆ ಸೆರೆ ಕಾರ್ಯಾಚರಣೆ ಆರಂಭ

* ಎನ್ ಆರ್ ಪುರಕ್ಕೆ ಬಂದ 6 ಕುಮ್ಕಿ ಆನೆಗಳು
* ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಶಾಸಕ

NAMMMUR EXPRESS NEWS
ಎನ್ ಆರ್ ಪುರ: ತಾಲೂಕಿನ ಗುಡ್ಡೇಹಳ್ಳದ ಬಳಿ ಸುಮಾರು ಒಂದೂವರೆ ವರ್ಷಗಳಿಂದ ಬೀಡು ಬಿಟ್ಟು ರೈತರ ಜಮೀನಿಗೆ ನುಗ್ಗಿ ತೊಂದರೆ ಕೊಡುತ್ತಿದ್ದ ಒಂಟಿ ಸಲಗದ ಸೆರೆ ಕಾರ್ಯಾಚರಣೆ ಆರಂಭವಾಗಿದೆ.ಕಾರ್ಯಾಚರಣೆ ನಡೆಸುತ್ತಿರುವ ಸ್ಥಳಕ್ಕೆ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ ಭೇಟಿ ನೀಡಿ ಅರಣ್ಯ ಇಲಾಖೆಯವರೊಂದಿಗೆ ಚರ್ಚಿಸಿದರು.

ಈಗಾಗಲೇ ಕಾಡಾನೆ ಸೆರೆ ಕಾರ್ಯಾಚರಣೆ ಆರಂಭವಾಗಿದ್ದು, ಒಂಟಿ ಸಲಗದ ಕಾರ್ಯಾಚರಣೆಗೆ ದುಬಾರೆಯ ಮತ್ತು ಸಕ್ರೆಬೈಲಿನಿಂದ ಆನೆಗಳೊಂದಿಗೆ ಮಾವುತರು ಹಾಗೂ ಕಾವಾಡಿಗರು ಆಗಮಿಸಿದ್ದಾರೆ.
ಒಂಟಿ ಸಲಗವು ತಾಲೂಕಿನ ವಗಡೆ, ಕಾನೂರು, ಬಾಳೆಹಿತ್ತಲು, ಸಾತ್ವಾನಿ, ಗುಂಡ್ವಾನಿ, ಗುಬ್ಬಿಗಾ,ಹೊರಬೈಲು, ನೇರ್ಲೆ, ಗೋಣಿಕೊಪ್ಪ, ಚಿಟ್ಟಿಕೊಡಿಗೆ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಭತ್ತ, ಅಡಕೆ ಮತ್ತು ಬಾಳೆ ತೋಟಗಳಿಗೆ ನಿರಂತರವಾಗಿ ಹಾನಿ ಉಂಟುಮಾಡುತ್ತಿತ್ತು.ರೈತರು ಹಲವು ಬಾರಿ ಅರಣ್ಯ ಇಲಾಖೆ ಹಾಗೂ ಜನಪ್ರತಿನಿಧಿಗಳಿಗೆ ದೂರು ನೀಡಿದ್ದರು.ಟಿ ಡಿ ರಾಜೇಗೌಡ ನೇತೃತ್ವದಲ್ಲಿ ಸ್ಥಳೀಯರ ನಿಯೋಗ ಅರಣ್ಯ ಸಚಿವ ಈಶ್ವರ್ ಖಂಡ್ರೆಯವರನ್ನು ಭೇಟಿ ಮಾಡಿ ಕಾಡಾನೆ ಸೆರೆಗೆ ಮನವಿ ಸಲ್ಲಿಸಿತ್ತು. ಮನವಿಗೆ ಸ್ಪಂದಿಸಿದ ಸಚಿವರು ಕಾಡಾನೆ ಸೆರೆಗೆ ಆದೇಶಿಸಿದ್ದರು.

ಅರಣ್ಯ ಸಚಿವರ ಆದೇಶದಂತೆ ಒಂಟಿ ಸಲಗವನ್ನು ಸೆರೆ ಹಿಡಿಯಲು ಸಕ್ರೆಬೈಲಿನಿಂದ ಮೂರು ಕುಮ್ಮಿ ಆನೆಗಳು ಮತ್ತು ಕುಶಾಲನಗರದ ದುಬಾರೆಯಿಂದ ಮೂರು ಆನೆಗಳು ಸೇರಿ ಒಟ್ಟು ಆರು ಕುಮ್ಮಿ ಆನೆಗಳು ಕಾರ್ಯಾಚರಣೆ ನಡೆಸುತ್ತಿವೆ. ದುಬಾರೆ ಮತ್ತು ಸಕ್ರೆಬೈಲಿನಿಂದ ಬಂದಿರುವ ಮಾವುತರು, ಕಾವಾಡಿಗರಿಗೆ ಸ್ಥಳೀಯರು ಸಹಕಾರ ನೀಡುವಂತೆ ಸ್ಥಳೀಯರಿಗೆ ಶಾಸಕ ಟಿ.ಡಿ. ರಾಜೇಗೌಡ ಮನವಿ ಮಾಡಿದ್ದಾರೆ.

 

 

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.