Categories
Uncategorized ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಸಂಜೆ 6ಕ್ಕೆ ಪುನೀತ್ ನಮನ ಕಾರ್ಯಕ್ರಮ

ತೀರ್ಥಹಳ್ಳಿಯಲ್ಲಿ ಸಂಜೆ 6ಕ್ಕೆ ಪುನೀತ್ ನಮನ ಕಾರ್ಯಕ್ರಮ
– ತೀರ್ಥಹಳ್ಳಿ ಟಿ. ಎಸ್. ಟಿ ಕನ್ವೆನ್ಷನ್ ಹಾಲ್ ಅಲ್ಲಿ ಕಾರ್ಯಕ್ರಮ
– ಸಮಸ್ತ ಜನತೆ, ಪುನೀತ್ ಅಭಿಮಾನಿ ಗಳಿಗೆ ಸುಸ್ವಾಗತ

NAMMUR EXPRESS NEWS
ತೀರ್ಥಹಳ್ಳಿ: ಪುನೀತ್ ಬ್ರಿಗೇಡ್, ಕರ್ನಾಟಕ, ವಿಶ್ವಮಾನವ ಕನ್ನಡ ವೇದಿಕೆ, ತೀರ್ಥಹಳ್ಳಿ, ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಸಂಸ್ಥೆಗಳ ವತಿಯಿಂದ ದಿ.ಪುನೀತ್ ರಾಜಕುಮಾರ್ ಅವರ ಜನ್ಮ ದಿನದ ಪ್ರಯುಕ್ತ ಮಾ. 17ರಂದು ತೀರ್ಥಹಳ್ಳಿಯ ಕುವೆಂಪು ಬಡಾವಣೆ ಟಿ. ಎಸ್. ಟಿ ಕನ್ವೆನ್ಷನ್ ಅಲ್ಲಿ ಸಂಜೆ 6ಕ್ಕೆ ಪುನೀತ್ ನಮನ -2025 ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ. ಈಗಾಗಲೇ ಎಲ್ಲಾ ಸಿದ್ಧತೆ ನಡೆದಿದ್ದು ಸರ್ವರಿಗೂ ಸ್ವಾಗತಿಸಲಾಗಿದೆ.
ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಸಂಗೀತ ಸಂಜೆ ಇರಲಿದೆ. ಈ ಮೂಲಕ ಪುನೀತ್ ಅವರ ಸೇವೆ ಯನ್ನು ಸ್ಮರಣೆ ಮಾಡಲಾಗುತ್ತದೆ. ದಿನಾಂಕ: ಮಾ. 17, ಸೋಮವಾರ
ಸಮಯ: 5:30 ಗಂಟೆಯಿಂದ, ಸ್ಥಳ: ಟಿ. ಎಸ್. ಟಿ ಕನ್ವೆನ್ಷನ್ ಹಾಲ್
ಕುವೆಂಪು ಬಡಾವಣೆ, ತೀರ್ಥಹಳ್ಳಿ ಇಲ್ಲಿ ಕಾರ್ಯಕ್ರಮ ನಡೆಯಲಿದೆ.
ನಮ್ಮೂರ್ ಎಕ್ಸ್ ಪ್ರೆಸ್ ಮೀಡಿಯಾ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಲಿದೆ. ಪುನೀತ್ ಅಭಿಮಾನಿಗಳು, ಸಾರ್ವಜನಿಕರು, ಸಂಘ ಸಂಸ್ಥೆ ಗಳ ಪ್ರಮುಖರು ಆಗಮಿಸಲು ಕೋರಲಾಗಿದೆ.

ಸರ್ವರಿಗೂ ಸುಸ್ವಾಗತ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.