ಸೈಕಲಲ್ಲೇ ದೇಶ ಸುತ್ತುತ್ತಿದ್ದಾರೆ ಸಂತೋಷ್ ಚಿತ್ರದುರ್ಗ!
– ಪರಿಸರ ಜಾಗೃತಿಗಾಗಿ 29 ರಾಜ್ಯಗಳನ್ನು ಸೈಕಲ್ ಪ್ರವಾಸ
– ಸರ್ಕಾರಿ ಶಾಲೆ, ಸರ್ಕಾರಿ ಕಟ್ಟಡ, ಸರ್ಕಾರಿ ಸಂಸ್ಥೆಗಳಲ್ಲಿ ಗಿಡ ನೆಡುವ ಅಭಿಯಾನ
ಪ್ರವಾಸ ವಿಶೇಷ
NAMMUR EXPRESS NEWS
ಪರಿಸರ ಜಾಗೃತಿಗಾಗಿ ಇಲ್ಲೊಬ್ಬ ಯುವಕ ಸೈಕಲಲ್ಲೇ ದೇಶ ಸುತ್ತುತ್ತಿದ್ದಾರೆ. ಪರಿಸರ ಜಾಗೃತಿಗಾಗಿ 29 ರಾಜ್ಯಗಳನ್ನು ಸೈಕಲ್ ಪ್ರವಾಸ ಮಾಡಿದ್ದು ಸರ್ಕಾರಿ ಶಾಲೆ, ಸರ್ಕಾರಿ ಕಟ್ಟಡ, ಸರ್ಕಾರಿ ಸಂಸ್ಥೆಗಳಲ್ಲಿ ಗಿಡ ನೆಡುವ ಅಭಿಯಾನ ಮೂಲಕ ಗಮನ ಸೆಳೆದಿದ್ದಾರೆ.
ಸಂತೋಷ್ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕಸವನಹಳ್ಳಿಯವರು. ಇವರು ಸೈಕ್ಲಿಂಗ್ ನಲ್ಲಿ ದೇಶ ವಿದೇಶಗಳನ್ನ ಸುತ್ತಿದ್ದಾರೆ. ಹಾಗೆಯೇ ರಾಜ್ಯದಲ್ಲಿಯೂ ಕೂಡ ಇವರು ಹೆಸರು ಮಾಡಿದ್ದಾರೆ. ಜನವರಿ- 12- 2024 ರಿಂದ ಸೈಕಲ್ ಪ್ರವಾಸವನ್ನು ಪ್ರಾರಂಭ ಮಾಡಿದರು. ಕಳೆದ ಒಂದು ವರ್ಷ ನಾಲ್ಕು ತಿಂಗಳಿಂದ ಸೈಕಲ್ನಲ್ಲಿ ಅಖಿಲ ಭಾರತ ಪ್ರವಾಸ ಮಾಡುತ್ತಿದ್ದಾರೆ ಈಗಾಗಲೇ 28 ರಾಜ್ಯಗಳಲ್ಲಿ 40,000 ಕಿಲೋಮೀಟರ್ ಪ್ರವಾಸಗಳಿದಿರುವುದಾಗಿ ಯುವಕ ಸಂತೋಷ್ ಹೆಮ್ಮೆಯಿಂದ ನಮ್ಮೂರ್ ಎಕ್ಸ್ ಪ್ರೆಸ್ ಜತೆ ಸಂತಸ ಹಂಚಿಕೊಂಡಿದ್ದಾರೆ.
ಕುಪ್ಪಳಿಗೆ ಭೇಟಿ ನೀಡಿ ಕುವೆಂಪು, ತೇಜಸ್ವಿಗೆ ನಮನ
ಭಾರತ, ನೇಪಾಳ, ಭೂತಾನ್ ಈ ಮೂರು ದೇಶಗಳಿಗೆ ಇವರು ಸೈಕಲ್ ಪ್ರವಾಸವನ್ನು ಮಾಡಿದರು. ಈಗಾಗಲೇ 28 ರಾಜ್ಯಗಳನ್ನು ಸೈಕಲ್ ಪ್ರವಾಸ ಮಾಡಿ ಈಗ 29ನೇ ರಾಜ್ಯ ಕರ್ನಾಟಕಕ್ಕೆ ಪ್ರವಾಸ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ನಾಲ್ಕರಿಂದ ಐದು ತಿಂಗಳ ಕಾಲ ಪ್ರವಾಸವನ್ನು ಮಾಡುತ್ತಿದ್ದಾರೆ.
ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಗುರಿ..!
ಕರ್ನಾಟಕದಲ್ಲಿ ಪ್ರವಾಸ ಮಾಡುವುದಕ್ಕೆ ಒಂದು ಉದ್ದೇಶವನ್ನು ಹೊಂದಿದ್ದಾರೆ. ಭಾರತವನ್ನು ಇವರು ಸೈಕಲ್ ಪ್ರವಾಸ ಮಾಡಬೇಕಾದರೆ ಮೊದಲು ಇವರು ಪ್ಲಾಸ್ಟಿಕ್ ಮುಕ್ತ ಹಾಗೂ ಮಾಲಿನ್ಯ ಮುಕ್ತ ಭಾರತ ಮಾಡುವ ಈ ಎರಡು ಉದ್ದೇಶಗಳನ್ನು ಇಟ್ಟುಕೊಂಡು ಭಾರತದ ಕೆಲವು ಕಡೆ ಇವರು ಪ್ರವಾಸವನ್ನ ಕೈಗೊಂಡರು. ಕರ್ನಾಟಕಕ್ಕೆ ಪ್ರವಾಸ ಬಂದಾಗ ಒಂದು ಹೊಸ ಉದ್ದೇಶವನ್ನ ಇಟ್ಟುಕೊಂಡಿದ್ದಾರೆ. ಪ್ರತಿದಿನವೂ ಕೂಡ ಪರಿಸರ ದಿನವಾಗಿರಲಿ ಎಂಬ ಉದ್ದೇಶ ಇಟ್ಟುಕೊಂಡು ಸರ್ಕಾರಿ ಶಾಲೆ, ಸರ್ಕಾರಿ ಕಟ್ಟಡ, ಸರ್ಕಾರಿ ಸಂಸ್ಥೆಗಳಲ್ಲಿ ಒಂದೊಂದು ಗಿಡ ನೆಟ್ಟು, ಅಲ್ಲಿರುವ ಜನರಿಗೆ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಉದ್ದೇಶವನ್ನು ಹೊಂದಿದ್ದಾರೆ. ಕರ್ನಾಟಕದಲ್ಲಿ ಅವರು ಮೊದಲು ಸೈಕಲಿಂಗ್ ಆರಂಭ ಮಾಡಿರುವುದೇ ಅವರ ಹುಟ್ಟೂರಿನಲ್ಲಿ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕಸವನಹಳ್ಳಿಯವರು ಆರಂಭ ಮಾಡಿ ನಂತರ ಮಂಗಳೂರು, ಉಡುಪಿ, ಉತ್ತರಕನ್ನಡ ಶಿವಮೊಗ್ಗ ಜಿಲ್ಲೆಯಲ್ಲಿ, ಸೊರಬ, ಸಾಗರ ಹೊಸನಗರ, ತೀರ್ಥಹಳ್ಳಿ, ಶಿಕಾರಿಪುರ, ಹಾವೇರಿ ಈ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಾರೆ. ಕರ್ನಾಟಕದ ಪ್ರತಿಯೊಂದು ಕಡೆ ಇವರು ಪ್ರವಾಸ ಮಾಡುತ್ತಾರೆ.
ಇತ್ತೀಚಿಗೆ ಕುಪ್ಪಳಿ ಆಗಮಿಸಿ ಕುವೆಂಪು, ತೇಜಸ್ವಿ ಸಮಾಧಿಗೆ ನಮನ ಸಲ್ಲಿಸಿ ನಮ್ಮೂರ್ ಎಕ್ಸ್ ಪ್ರೆಸ್ ಜತೆ ಮಾತನಾಡಿ ತಮ್ಮ ಉದ್ದೇಶ ಹಂಚಿಕೊಂಡರು.
ಸೈಕಲ್ ಅಲ್ಲೇ ಸುತ್ತುವ ಸಂತೋಷ್ ಅವರಿಗೆ ಹಣಕಾಸಿನ ನೆರವು ಅಗತ್ಯ ಇದೆ.
ಸಹಾಯ ಮಾಡುವವರು ಸಂಪರ್ಕಿಸಿ: 9353421245
