Categories
Uncategorized ಕೊಪ್ಪ ಚಿಕ್ಕಮಗಳೂರು ಮಲ್ನಾಡ್ ಶೃಂಗೇರಿ

ಶ್ರೀಕುಮಾರ ಶಿವಯೋಗಿಗಳ ಜಯಂತ್ಯೋತ್ಸವ ಕಾರ್ಯಕ್ರಮ

ಶ್ರೀಕುಮಾರ ಶಿವಯೋಗಿಗಳ ಜಯಂತ್ಯೋತ್ಸವ ಕಾರ್ಯಕ್ರಮ

* ಕಾರ್ಯಕ್ರಮದ ಪ್ರಯುಕ್ತ ಜ್ಞಾನ ಪುಷ್ಪ”ಮಾಲಿಕೆ -4
* ಎಲ್ಲರೂ ಸಂಘಟಿತರಾಗಿ ವೀರಶೈವ ಲಿಂಗಾಯತ ಮಹಾಸಭೆಯನ್ನು ಬೆಳಸೋಣ. ಚಿದಾನಂದ್ ಎಸ್ ಮಠದ್

NAMMMUR EXPRESS NEWS
ಮೂಡಿಗೆರೆ: ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮತ್ತು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ಗೋಣಿಬೀಡು ಇವರ ಸಂಯುಕ್ತಾಶ್ರಯದಲ್ಲಿ ಶ್ರೀಕುಮಾರ ಶಿವಯೋಗಿಗಳ ಜಯಂತ್ಯೋತ್ಸವ ಹಾಗೂ ಉಪನ್ಯಾಸ ಕಾರ್ಯಕ್ರಮ ಅಂಗವಾಗಿ ಜ್ಞಾನ ಪುಷ್ಪ ಮಾಲಿಕೆ – 4 ನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆ ಮಾಡಿದ ಚಿದಾನಂದ್ ಎಸ್ ಮಠದ್, ವಕೀಲರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರು, ಕೇಂದ್ರ ಸಮಿತಿ, ಅ.ಭಾ.ವೀ.ಲಿಂ.ಮಹಾಸಭಾ (ರಿ.) ಬೆಂಗಳೂರು ಇವರು ಕುಮಾರ ಶಿವಯೋಗಿ ಸ್ವಾಮಿಗಳು ಸ್ಥಾಪಿಸಿದ ಮಹಾಸಭೆ ಮತ್ತು ಶಿವಯೋಗ ಮಂದಿರದಲ್ಲಿ ನೂರಾರು ಸ್ವಾಮೀಜಿಗಳಿಗೆ ವಿದ್ಯಾಭ್ಯಾಸ ನೀಡಲಾಗುತ್ತಿತ್ತು. ವಿದ್ಯೆ ಜೊತೆಗೆ ಸಂಗೀತ,ಸಾಹಿತ್ಯ,ಭಕ್ತಿ,ಧ್ಯಾನ, ಸಂಸ್ಕಾರಗಳನ್ನು ನೀಡುತ್ತಿದ್ದರು. ಎಲ್ಲರೂ ಸಂಘಟಿತರಾಗಿ ವೀರಶೈವ ಲಿಂಗಾಯತ ಸಮಾಜವನ್ನು ಇನ್ನೂ ಎತ್ತರಕ್ಕೆ ಬೆಳೆಸೋಣ ಎಂದು ಕರೆ ನೀಡಿದರು.

ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ಸಂಸ್ಥಾಪಕ ಹಾಗೂ ಜಿಲ್ಲಾ ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭೆಯಕಾರ್ಯನಿರ್ವಾಹಕ ನಿರ್ದೇಶಕ ಡಾ.ಮೋಹನ್ ರಾಜಣ್ಣ
ಪ್ರಸ್ತಾವಿಕವಾಗಿ ಮಾತನಾಡುತ್ತಾ ಕುಮಾರೇಶ್ವರರು ತಮಗಾಗಿ ಏನೂ ಮಾಡಿಕೊಳ್ಳದೇ ಎಲ್ಲವನ್ನು ಸಮಾಜಕ್ಕಾಗಿ ಮಾಡಿದ್ದಾರೆ, ಹಳ್ಳಿ ಹಳ್ಳಿಗೆ ಓಡಾಡಿ ಜನರಿಗೆ ಶಿಕ್ಷಣ ನೀಡಿದರು, ಸರ್ವ ಜನಾಂಗದ ಸರ್ವತೋಮುಖ ಸುಧಾರಣೆಗೆ ಶ್ರಮಿಸಿದ ಮಹಾಪುರುಷ ಹಾನಗಲ್ ಕುಮಾರ ಸ್ವಾಮಿಗಳು ಎಂದು ಶ್ರೀಗಳನ್ನು ಸ್ಮರಿಸಿದರು.
ದೆಹಲಿ ರಾಜ್ಯ ಘಟಕದ ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷ
ಶ್ರೀಕಂಠ ಚೌಕೀಮಠರವರು ಯುಗಪುರುಷ ಪರಮಪೂಜ್ಯ ಹಾನಗಲ್ ಶ್ರೀ ಕುಮಾರ ಶಿವಯೋಗಿಗಳ ಬಗ್ಗೆ ಉಪನ್ಯಾಸ ನೀಡಿ ಕುಮಾರಸ್ವಾಮಿಗಳು ಬಡತನದ ಬೇಗೆಯಲ್ಲಿ ಬೆಂದು ಮಠವನ್ನು ತೊರೆದು ಸಮಾಜದ ಸರ್ವರ ಉದ್ದಾರಕ್ಕಾಗಿ ಶ್ರಮಿಸಿದರು, ಶರಣರ ವಚನಗಳು,ಸಂಗೀತ ಕ್ಷೇತ್ರ ಉಜ್ವಲವಾಗಿ ಬೆಳೆಯಲು ಹಾನಗಲ್ ಕುಮಾರ ಸ್ವಾಮಿಗಳ ಕೊಡುಗೆ ಅಪಾರ ಎಂದು ಬಣ್ಣಿಸಿದರು ಮತ್ತು ವಿವಿಧ ಪಂಗಡಗಳಲ್ಲಿ ಹರಿದು ಹಂಚಿ ಹೋಗಿದ್ದ ಜನರನ್ನೆಲ್ಲ ಮಹಾಸಭಾದ ಮೂಲಕ ಒಂದುಗೂಡಿಸಿ ಒಂದೇ ವೇದಿಕೆಗೆ ತಂದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ ಎಂದರು.

ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ರಾಜಲಕ್ಷ್ಮಿ ಕಾಂತರಾಜ್ ಎಲ್ಲರೂ ಒಂದುಗೂಡಿ ತಾಲೂಕಿನಲ್ಲಿ ಯಾವುದೇ ಕಾರ್ಯಕ್ರಮ ಮಾಡಿದರು ಪ್ರತಿಯೊಬ್ಬರು ಕೈ ಜೋಡಿಸಿ ಯಶಸ್ವಿಗೆ ಸಹಕರಿಸಿ ಎಂದು ನೆರೆದಿದ್ದವರಲ್ಲಿ ಮನವಿ ಮಾಡಿದರು.
ರಾಜ್ಯಸಮಿತಿ ನಿರ್ದೇಶಕ ಎಂ ಆರ್ ಪೂರ್ಣೇಶ್ ಮೂರ್ತಿ ಹಾನಗಲ್ ಕುಮಾರಸ್ವಾಮಿಗಳ ಭಾವಚಿತ್ರ ಕ್ಕೆ ಪುಷ್ಪರ್ಚನೆ ನೆರವೇರಿಸಿದರು.
ಇದೇ ಕಾರ್ಯಕ್ರಮದಲ್ಲಿ ಶ್ರೀಕಂಠ ಚೌಕೀ ಮಠ ರವರಿಗೆ “ಪುಷ್ಪಗಿರಿ ಕೌಶಲ್ಯ ರತ್ನ” ಹಾಗೂ ಚಿದಾನಂದ್ ಎಸ್ ಮಠದ್‌ರವರಿಗೆ “ಪುಷ್ಪಗಿರಿ ಜ್ಞಾನ ರತ್ನ”
ಶ್ರೀಮತಿ ತನುಜಾ ರಾಜೇಶ್ ರವರಿಗೆ “ಪುಷ್ಪಗಿರಿ ಪತ್ರಿಕೋದ್ಯಮ ರತ್ನ” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ತಾಲ್ಲೂಕು ಅಧ್ಯಕ್ಷ ಬಿ.ಎಸ್ ಓಂಕಾರ್ ವಹಿಸಿದ್ದರು.
ಜಿಲ್ಲಾ ಉಪಾಧ್ಯಕ್ಷೆ ಶಾಲಿನಿ ಅನಿಲ್, ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಉಮಾ ಮೋಹನ್,ಜಿಲ್ಲಾ ನಿರ್ದೇಶಕ ಎಂ ಡಿ ಇಂದ್ರೇಶ್,ಯುವ ಘಟಕದ ಅಧ್ಯಕ್ಷ ಎ ಏನ್ ಪ್ರತಾಪ್,ಅಲ್ದೂರ್ ರಾಜೇಶ್,ಅವಿನ್ ಟಿ ವಿ ಯ ಮಗ್ಗಲಮಕ್ಕಿ ಗಣೇಶ್ ಗೌಡ,ವಸಂತ್ ಹಾರ್ಗೋಡ್,ಹೆಚ್ ಆರ್ ಕಾಂತರಾಜ್ ದಂಪತಿಗಳು ಭೋಜನ ಪ್ರಸಾದ ವ್ಯವಸ್ಥೆ ಮಾಡಿದ್ದರು.
ವೇ. ಮಹೇಶ್ವರಯ್ಯ,ವೇ.ಮೃತ್ಯುಂಜಯ,ವೇ. ಸಂಗಮೇಶ ಶಾಸ್ತ್ರೀ ಜಿಲ್ಲಾ ತಾಲ್ಲೂಕು,ರಾಜ್ಯ ನಿರ್ದೇಶಕರುಗಳು ಹಾಗೂ ತಾಲ್ಲೂಕಿನ ವೀರಶೈವ ಲಿಂಗಾಯತ ಬಂಧುಗಳು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.