Categories
Uncategorized ಚಿಕ್ಕಮಗಳೂರು

ಕಾಫಿನಾಡಿನಲ್ಲಿ ಮತ್ತೆ ಶುರುವಾಯ್ತು ಕಾಡಾನೆಗಳ ಹಾವಳಿ

ಕಾಫಿನಾಡಿನಲ್ಲಿ ಮತ್ತೆ ಶುರುವಾಯ್ತು ಕಾಡಾನೆಗಳ ಹಾವಳಿ

* ಹಾಸನ – ಚಿಕ್ಕಮಗಳೂರು ಗಡಿ ಗ್ರಾಮ ಗೋಣಿಬೀಡಿನಲ್ಲಿ ಬೀಡು ಬಿಟ್ಟ ಕಾಡಾನೆ ಹಿಂಡು
* ಕೊಪ್ಪ ಪಟ್ಟಣದಿಂದ ಕೆಲವೇ ಮೀಟರ್ ದೂರದಲ್ಲಿರುವ ಶಾಲೆಯ ಪಕ್ಕದಲ್ಲಿ ಪ್ರತ್ಯಕ್ಷಗೊಂಡ ಒಂಟಿಸಲಗ

NAMMMUR EXPRESS NEWS
ಮೂಡಿಗೆರೆ: ಕಾಫಿನಾಡಿನಲ್ಲಿ ಕಾಡಾನೆಗಳ ಉಪಟಳ ಮುಂದುವರಿದಿದ್ದು, ಮತ್ತೆ ಕಾಡಾನೆ ಹಾವಳಿ ಶುರುವಾಗಿದೆ. ಹಾಸನ-ಚಿಕ್ಕಮಗಳೂರು ಗಡಿ ಗ್ರಾಮದಲ್ಲಿ ಕಾಡಾನೆಗಳ ಸಂಚಾರ ಹೆಚ್ಚಾಗಿದೆ, ಹಾಸನದ ಚೀಕನಹಳ್ಳಿ ಮೂಲಕ ಮೂಡಿಗೆರೆ ತಾಲೂಕಿನ ಗೋಣಿಬೀಡು ಭಾಗಕ್ಕೆ ಕಾಡಾನೆಗಳು ಸಂಚಾರ ಮಾಡುತ್ತಿದ್ದು, ಮನೆಯ ಮುಂಭಾಗದಲ್ಲೇ ಕಾಡಾನೆಗಳ ಹಿಂಡು ಬೀಡುಬಿಟ್ಟಿದೆ. ಅಲ್ಲದೆ, ಕಾಫಿತೋಟದಲ್ಲಿಯೂ ಸಂಚರಿಸುತ್ತಿವೆ. ಗೋಣಿಬೀಡು ಹೋಬಳಿಯ ಹತ್ತಾರು ಗ್ರಾಮದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಕಾರ್ ಬೈಲು, ಬಾರದಹಳ್ಳಿ, ಮಾಕೋನಹಳ್ಳಿ, ಹಳಸೆ, ಕಲ್ಲುಗುಡ್ಡ, ಚಟ್ಟನಹಳ್ಳಿ ಭಾಗದಲ್ಲಿ ಸಂಚಾರ ಮಾಡುತ್ತಿದ್ದು, ಜನರು ಆತಂಕದಲ್ಲಿದ್ದಾರೆ.

* ಕೊಪ್ಪ ಪಟ್ಟಣದಿಂದ ಕೆಲವೇ ಮೀಟರ್ ದೂರದಲ್ಲಿರುವ ಶಾಲೆಯ ಪಕ್ಕದಲ್ಲಿ ಪ್ರತ್ಯಕ್ಷಗೊಂಡ ಒಂಟಿಸಲಗ
ಕೊಪ್ಪ: ಪಟ್ಟಣದಿಂದ ಕೆಲವೇ ಮೀಟರ್ ದೂರದಲ್ಲಿರುವ ಸರ್ಕಾರಿ ಶಾಲೆಯ ಪಕ್ಕದಲ್ಲಿ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿ ಸ್ಥಳೀಯರಲ್ಲಿ ಹಾಗೂ ಶಾಲಾ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಠಿಸಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು ಒಂಟಿಸಲಗವನ್ನು ಓಡಿಸುವ ಪ್ರಯತ್ನದಲ್ಲಿದ್ದಾರೆ. ಈ ಘಟನೆಯಿಂದ ಕೊಪ್ಪ ಹಾಗೂ ಸುತ್ತಮುತ್ತಲಿನ ಜನರಲ್ಲಿ ಭಾರೀ ಆತಂಕ ಸೃಷ್ಠಿಯಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.