Categories
ರಾಷ್ಟ್ರೀಯ ವಾರ್ತೆ ವೈರಲ್ ವೀಡಿಯೊಗಳು

ಅಯ್ಯೋ ಬಂತು ಮೀನಿನ ಮಳೆ…!

ಅಯ್ಯೋ ಬಂತು ಮೀನಿನ ಮಳೆ…!
– ಆಗಸದಿಂದ ಬೀಳುತ್ತಿದ್ದ ಮೀನು ಕಂಡು ಎಲ್ಲರಿಗೂ ಅಚ್ಚರಿ!
– ಯಾಕೆ ಆಕಾಶದಿಂದ ಬಿದ್ದಿದ್ದು ಮೀನು? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ!

NAMMUR EXPRESS NEWS
ಜೋರು ಮಳೆ ಸುರಿಯುತ್ತಿರುವಾಗ ನೀರಿನ ಹನಿಯೊಂದಿಗೆ ಮೀನುಗಳೂ ಬಿದ್ದರೆ ಹೇಗಿರುತ್ತದೆ…? ಹೌದು. ಇಂತಹ ಘಟನೆ ಇರಾನಿನಲ್ಲಿ ನಡೆದಿದ್ದು ಜನರಿಗೆ ಕುತೂಹಲ ಮೂಡಿಸಿದೆ. ಇರಾನ್‌ನ ‘ಯಸುಜ್’ ನಗರದಲ್ಲಿ ನಡೆದ ಘಟನೆ ಈಗ ವೈರಲ್ ಆಗುತ್ತಿದೆ. ‘ಯಸುಜ್’ ಇರಾನ್‌ನ ಸಣ್ಣ ಹಾಗೂ ಕೈಗಾರಿಕಾ ನಗರ. ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಳೆಯೊಂದಿಗೆ ಮೀನುಗಳು ಬೀಳುತ್ತಿರುವುದನ್ನು ಕಾಣಬಹುದು. ಹೀಗೆ ಮೇಲಿಂದ ಬಿದ್ದ ಮೀನುಗಳು ರಸ್ತೆಯ ತುಂಬಾ ಬಿದ್ದಿರುವುದು ಕೂಡಾ ಕಾಣಿಸುತ್ತದೆ. ಹೀಗೆ ಕಣ್ಣೆದುರು ಮೀನು ಬಿದ್ದಾಗ ಕುತೂಹಲದಿಂದ ಎತ್ತಿಕೊಂಡ ಜನರು ಅದರ ದೃಶ್ಯವನ್ನೂ ಸೆರೆ ಹಿಡಿದಿದ್ದಾರೆ. ಸಹಜವಾಗಿಯೇ ಈ ದೃಶ್ಯ ಅಚ್ಚರಿ ಮೂಡಿಸುವಂತಿದೆ.

ಇನ್ನು ಈ ಬಗ್ಗೆ ನೆಟ್ಟಿಗರ ಬಗೆಬಗೆಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಹಲವರು ಇದು ಪ್ರಕೃತಿಯ ಪವಾಡ ಎಂದು ಕರೆದರೆ, ಇನ್ನೊಂದಷ್ಟು ಮಂದಿ ಇದು ಹವಾಮಾನ ಬದಲಾವಣೆಯ ಪರಿಣಾಮ ಎಂದು ಹೇಳುತ್ತಾರೆ. ಕೆಲವರು ಇದು ನಕಲಿ ವಿಡಿಯೋ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಈ ವಿಡಿಯೋ ಬೇರೆ ಬೇರೆ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹರಿದಾಡುತ್ತಿದೆ.

ಹಿಂದೆಯೂ ಮೀನಿನ ಮಳೆ ಆಗಿತ್ತು!

ಇಂತಹ ವಿದ್ಯಮಾನ ನಡೆಯುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ. ಸಾಮಾನ್ಯವಾಗಿ ಇದನ್ನು ಆನಿಮಲ್ ರೈನ್ ಅರ್ಥಾತ್ ಪ್ರಾಣಿ ಮಳೆ ಎಂದು ಕರೆಯಲಾಗುತ್ತದೆ. ಇದರ ಹಿಂದಿನ ಕಾರಣಗಳ ಸುಂಟರಗಾಳಿ. ಪ್ರಬಲವಾಗಿ ಬೀಸುವ ಸುಂಟರಗಾಳಿ ನದಿ, ಕೊಳ ಅಥವಾ ಸಮುದ್ರದ ನೀರಿನ ಮೇಲ್ಮೈಯಲ್ಲಿ ತಿರುಗಿದಾಗ ಅದು ಅಲ್ಲಿನ ಜಲಚರ ಪ್ರಾಣಿಗಳನ್ನೂ ಎಳೆದುಕೊಳ್ಳುತ್ತದೆ. ಈ ಶಕ್ತಿಶಾಲಿ ಸುಂಟರಗಾಳಿಯ ಸುಳಿಯಲ್ಲಿ ಮೀನು, ಕಪ್ಪೆಗಳು, ಆಮೆಗಳು ಮತ್ತು ಏಡಿಗಳಂತಹ ಜೀವಿಗಳು ಸಿಲುಕಿಕೊಳ್ಳುತ್ತವೆ. ಹೀಗೆ ಪ್ರಬಲವಾಗಿ ಬೀಸುವ ಈ ಮಾರುತದೊಂದಿಗೆ ಹಾರುವ ಬರುವ ಈ ಮೀನುಗಳು ಗಾಳಿಯ ತೀವ್ರತೆ ಕಡಿಮೆಯಾದಾಗ ಕೆಳಗೆ ಬೀಳಲು ಪ್ರಾರಂಭಿಸುತ್ತವೆ ಎಂದು ಹೇಳಲಾಗುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.