Categories
ವೈರಲ್ ವೀಡಿಯೊಗಳು

ಸೂಪರ್ ಸುದ್ದಿ

ವೃದ್ಧೆ ಕಿವಿ ಹರಿದು ಓಲೆ ದೋಚಿದ ಕಳ್ಳರು!
– ರಾಯಚೂರಿನ ಲಿಂಗಸಗೂರಿನಲ್ಲಿ ನಡೆದ ಘಟನೆ
– ಏಕಕಾಲಕ್ಕೆ 7 ಯುವತಿಯರನ್ನು ಮದುವೆಯಾದ ವ್ಯಕ್ತಿ!

NAMMUR EXPRESS NEWS
ರಾಯಚೂರು: ವೃದ್ಧೆಯೊಬ್ಬರ ಮನೆಗೆ ಅರ್ಧರಾತ್ರಿಯಲ್ಲಿ ನುಗ್ಗಿದ ಕಳ್ಳರು ಆಕೆಯ ಬಾಯಿಗೆ ಬಟ್ಟೆ ತುರುಕಿ, ಚಾಕುವಿನಿಂದ ಬೆದರಿಸಿ ಕಿವಿ ಹರಿದು ಕಿವಿಯೋಲೆ ದೋಚಿರುವ ಘಟನೆ ಗುರುವಾರ ರಾತ್ರಿ ರಾಯಚೂರು ಜಿಲ್ಲೆ ಲಿಂಗಸುಗೂರಿನಲ್ಲಿ ನಡೆದಿದೆ.
ವೃದ್ಧೆ ಪಾರ್ವತಮ್ಮ ಲಿಂಗಯ್ಯ ಗುಂತಗೋಳ ಅವರನ್ನು ನೆರೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಲಿಂಗಸುಗೂರಿನ ಸಂಗಮ ಬಾರ್ ಹಿಂದಿನ ಬಡಾವಣೆಯಲ್ಲಿನ ನಿವಾಸದಲ್ಲಿ ರಾತ್ರಿ ಪಾರ್ವತಮ್ಮ ಮಲಗಿದ್ದಾಗ ಇಬ್ಬರು ಆಗಂತುಕ ಯುವಕರು ನುಗ್ಗಿದ್ದರು.

ಅಪರಿಚಿತರನ್ನು ಕಂಡು ಭೀತರಾದ ಪಾರ್ವತಮ್ಮ ಕಿರುಚುತ್ತಿದ್ದಂತೆಯೇ ಆಕೆಯ ಬಾಯಿಗೆ ಬಟ್ಟೆ ತುರುಕಿ, ಚಾಕುವಿನಿಂದ ಬೆದರಿಸಿದ್ದರು. ಕೊರಳಲ್ಲಿದ್ದ ಸರವನ್ನು ಕಸಿದುಕೊಂಡ ಕಳ್ಳರು, ಓಲೆ ಕಸಿಯುವ ಭರದಲ್ಲಿ ಆಕೆಯ ಕಿವಿಯನ್ನೇ ಹರಿದು ಹಾಕಿದ್ದರು. ಯುವಕರು ಅಲ್ಲಿಂದ ಕಾಲ್ಮೀಳುತ್ತಿದ್ದಂತೆಯೇ ಪಾರ್ವತಮ್ಮ ಅವರ ಕೂಗು ಕೇಳಿ ಅಕ್ಕಪಕ್ಕದ ಮನೆಯವರು ಧಾವಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪಾರ್ವತಮ್ಮ ಅವರ ಕಿವಿಗೆ ವೈದ್ಯರು ಹೊಲಿಗೆ ಹಾಕಿದ್ದು, ಪೊಲೀಸರು ಪಾರ್ವತಮ್ಮ ಅವರನ್ನು ಭೇಟಿಯಾಗಿ ಪ್ರಕರಣದ ವಿವರ ಪಡೆದಿದ್ದಾರೆ.

ಏಕಕಾಲಕ್ಕೆ 7 ಯುವತಿಯರನ್ನು ಮದುವೆಯಾದ ವ್ಯಕ್ತಿ!

ಉಗಾಂಡಾದ ಮುಕೊನೊ ಜಿಲ್ಲೆಯ ಬುಗೆರೆಕಾ ಗ್ರಾಮದಲ್ಲಿ ಸೆಪ್ಟೆಂಬರ್ 10 ರಂದು ಈ ವಿಚಿತ್ರ ಮದುವೆ ನಡೆದಿದೆ. ವ್ಯಕ್ತಿಯೊಬ್ಬ ಏಕಕಾಲಕ್ಕೆ ಏಳು ಯುವತಿಯರನ್ನು ಮದುವೆಯಾಗಿದ್ದು, ಮತ್ತೆ ಇನ್ನಷ್ಟು ಯುವತಿಯರನ್ನು ಮದುವೆ ಆಗುವ ಯೋಚನೆ ಇದೆ ಎಂದು ಘೋಷಣೆ ಮಾಡಿದ್ದಾನೆ. ಒಬ್ಬ ವ್ಯಕ್ತಿ ಒಬ್ಬರಲ್ಲ ಇಬ್ಬರಲ್ಲ ಏಳು ಯುವತಿಯರನ್ನು ಏಕಕಾಲಕ್ಕೆ ಮದುವೆಯಾದ. ಈ ಅಭೂತಪೂರ್ವ ಮದುವೆ ಉಗಾಂಡಾದಲ್ಲಿ ನಡೆದಿದೆ. ಹಜ್ ಹಬೀಬ್ ಎನ್ಸಿಕೊನೈನ್ ಒಂದೇ ದಿನದಲ್ಲಿ ಏಳು ಮಹಿಳೆಯರನ್ನು ಮದುವೆಯಾದ ಇಬ್ಬರು ಹೆಂಡತಿಯರು ತನ್ನ ಸಹೋದರಿಯರೆಂದು ತಿಳಿದು ಅವನು ಆಘಾತಕ್ಕೊಳಗಾದನು.

ಸದ್ಯ ಈ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ವರದಿಯೊಂದರ ಪ್ರಕಾರ, ಸೆಪ್ಟೆಂಬರ್ 10 ರಂದು ಉಗಾಂಡಾದ ಮುಕೊನೊ ಜಿಲ್ಲೆಯ ಬುಗೆರೆಕಾ ಗ್ರಾಮದಲ್ಲಿ ವಿಚಿತ್ರ ಮದುವೆ ನಡೆದಿದೆ. ಈ ಹಜ್ ಹಬೀಬ್ ಏಳು ಮಹಿಳೆಯರನ್ನು ವಿವಾಹವಾದರು. ಸಾಯುವವರೆಗೂ ಪತ್ನಿಯರ ಜೊತೆ ಬಾಳುತ್ತೇನೆ ಎಂದು ಪ್ರಮಾಣ ಮಾಡಿದರು. ಈತನ ಅಜ್ಜನಿಗೆ ಒಂದೇ ಮನೆಯಲ್ಲಿ ಆರು ಹೆಂಡತಿಯರಿದ್ದರು. ತಂದೆಗೆ ಐವರು ಹೆಂಡತಿರು. ಅವರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದ್ದಾನೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.