Categories
ಆರೋಗ್ಯ

ಕ್ಯಾನ್ಸರ್ ಪೀಡಿತರಿಗೆ ಸ್ತ್ರೀಯರ ಕೂದಲು ಕೊಡುಗೆ!

  • ಮಂಗಳೂರಲ್ಲೊಂದು ವಿಭಿನ್ನ ಮಾನವೀಯ ಸೇವೆ

ಮಂಗಳೂರು: ಕ್ಯಾನ್ಸರ್‍ನಿಂದ ಬಳಲುತ್ತಿರುವವರಿಗೆ ಸಹಾಯ ನೀಡುವ ಸಲುವಾಗಿ ಇಬ್ಬರು ಮಕ್ಕಳು ಸೇರಿದಂತೆ 27 ಮಂದಿ ಕೂದಲು ದಾನ ಮಾಡುವ ಮೂಲಕ ಸೇವೆಯ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.


ಮಂಗಳೂರಿನ ಲೇಡಿಸ್ ಸರ್ಕಲ್ 82, ಮೇರಿ ಬ್ಯೂಟಿ ಅಕಾಡೆಮಿ ಮತ್ತು ಲೇಡಿಸ್ ಸೆಲೂನ್ ಬಂಟ್ಸ್ ಹಾಸ್ಟೆಲ್ ಆಯೋಜಿಸಿದ “ಹೇರ್ ಫಾರ್ ಹೋಪ್” ಕೇಶ ದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹಿಳೆಯರು, ಮಕ್ಕಳು, ಯುವತಿಯರು ತಮ್ಮ ಅಂದದ ಕೂದಲನ್ನು ಕ್ಯಾನ್ಸರ್ ಪೀಡಿತರ ನಿಧಿಗಾಗಿ ದಾನ ಮಾಡಿದರು. ಒಂದು ವಾರದಿಂದ ಕೇಶ ದಾನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮಾನವೀಯ ನೆಲೆಯಲ್ಲಿ 27 ಮಂದಿ ಮಹಿಳೆಯರು ಕೇಶ ನೀಡಿದರು. ಈ ಪೈಕಿ ಎಂಟು ವರ್ಷದ ಮಗು ಹಾಗೂ ಒಂಬತ್ತು ವರ್ಷದ ಮತ್ತೊಬ್ಬ ಮಗು ಕೂದಲನ್ನು ನೀಡಿ ಸೈ ಎನಿಸಿಕೊಂಡರು.

Categories
ಹುಬ್ಬಳ್ಳಿ

ಹುಬ್ಬಳ್ಳಿಯಿಂದ ತಿರುಪತಿಗೆ ವಿಮಾನ ಸೇವೆ!

  • ಸ್ಟಾರ್ ಏರ್ ಕಂಪನಿಯಿಂದ ಜ.1ಕ್ಕೆ ಆರಂಭ
  • ಮುಂಗಡ ಟಿಕೆಟ್ ಬುಕ್ಕಿಂಗ್ ಅವಕಾಶ

ಹುಬ್ಬಳ್ಳಿ: ತಿರುಪತಿ ದೇವರ ದರ್ಶನ ಪಡೆಯಲು ವಿಮಾನದಲ್ಲಿ ಹೋಗುವ ಉತ್ತರ ಕರ್ನಾಟಕ ಭಾಗದ ಜನರ ಕನಸು ನನಸಾಗಲಿದ್ದು, ಜನವರಿ 1ರಿಂದ ಹುಬ್ಬಳ್ಳಿ-ತಿರುಪತಿ ವಿಮಾನ ಸೇವೆ ಆರಂಭವಾಗಲಿದೆ.


ಸ್ಟಾರ್ ಏರ್ ಕಂಪನಿ ಹುಬ್ಬಳ್ಳಿ-ತಿರುಪತಿ ವಿಮಾನ ಸೇವೆಯನ್ನು ಆರಂಭಿಸುವುದಾಗಿ ಘೋಷಣೆ ಮಾಡಿದೆ. ಗುರುವಾರ ಹೊರತುಪಡಿಸಿ ವಾರದ ಉಳಿದ ದಿನ ಹುಬ್ಬಳ್ಳಿಯಿಂದ ತಿರುಪತಿಗೆ ವಿಮಾನ ಹಾರಾಟ ನಡೆಸಲಿದೆ. ಬೆಳಗ್ಗೆ 11.55ಕ್ಕೆ ತಿರುಪತಿಯಿಂದ ಹೊರಡುವ ವಿಮಾನ 1 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿಯಿಂದ 1.25ಕ್ಕೆ ಹೊರಡುವ ವಿಮಾನ 2.30ಕ್ಕೆ ತಿರುಪತಿಗೆ ತಲುಪಲಿದೆ. ಸ್ಟಾರ್ ಏರ್ ಹುಬ್ಬಳ್ಳಿ-ತಿರುಪತಿ ವಿಮಾನ ಸಂಚಾರ ಆರಂಭಿಸುವುದಾಗಿ ಹಿಂದೆಯೇ ಘೋಷಣೆ ಮಾಡಿತ್ತು. ಆದರೆ, ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ವಿಳಂಬವಾಗಿ ಸೇವೆ ಆರಂಭವಾಗಲಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಲು ಅವಕಾಶ ನೀಡಲಾಗಿದೆ.


ಕರ್ನಾಟಕದಲ್ಲಿನ ದೊಡ್ಡ ವಿಮಾನ ನಿಲ್ದಾಣಗಳ ಪೈಕಿ ಹುಬ್ಬಳ್ಳಿಗೆ ಮೂರನೇ ಸ್ಥಾನವಿದೆ. 2020ರ ಏಪ್ರಿಲ್‍ನಿಂದ ಅಕ್ಟೋಬರ್ ತನಕ ವಿಮಾನ ನಿಲ್ದಾಣದ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿದೆ. ಬೆಳಗಾವಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.ವಿಮಾನ ನಿಲ್ದಾಣ ಪ್ರಾಧಿಕಾರದ ಮಾಹಿತಿಯಂತೆ ಏಪ್ರಿಲ್‍ನಿಂದ ಅಕ್ಟೋಬರ್ ತನಕ 17,689 ಪ್ರಯಾಣಿಕರು ಆಗಮಿಸಿದ್ದಾರೆ. 484 ವಿಮಾನಗಳು ಹಾರಾಟ ನಡೆಸಿವೆ. ಅಕ್ಟೋಬರ್ ತಿಂಗಳಿನಲ್ಲಿ 8,615 ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. ಅಕ್ಟೋಬರ್‍ನಲ್ಲಿ 207 ವಿಮಾನ ಹಾರಾಟ ನಡೆಸಿದೆ.

Categories
ಮೈಸೂರು

ಮಲೈಮಹದೇಶ್ವರ ಪ್ರಸಾದ ತಿನ್ನದ ಸಿಎಂ!

  • ಪಂಚಲಿಂಗ ದರ್ಶನ 1000 ಜನರಿಗೆ ಮಾತ್ರ!

ಚಾಮರಾಜನಗರ/ಮೈಸೂರು: ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನಲ್ಲಿರುವ ಮಲೈಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ ಯಡಿಯೂರಪ್ಪ ಅವರು ಮಾದಪ್ಪನ ದರ್ಶನ ಪಡೆದಿದ್ದಾರೆ. ಚಾ.ನಗರಕ್ಕೆ ಭೇಟಿ ನೀಡಿದರೆ ಖುರ್ಚಿ ಹೋಗುತ್ತೆ ಎಂಬ ಅಪಶಕುನದ ವಿರುದ್ಧ ಈ ಭೇಟಿ ಮಹತ್ವ ಪಡೆದಿದೆ. ಆದರೇ ದೇವಸ್ಥಾನದ ಪ್ರಸಾದ ಸ್ವೀಕರಿಸಲಿಲ್ಲ ಎನ್ನಲಾಗಿದೆ.


ಮಾದಪ್ಪನ ದರ್ಶನ ಪಡೆದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು,ಪಕ್ಷದ ಹೈಕಮಾಂಡ್ ಆದೇಶ ಬಂದ ಬಳಿಕವಷ್ಟೇ ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತದೆ. ಸಂಸದ ಶ್ರೀನಿವಾಸ್ ಪ್ರಸಾದ್ ಬೇಸರದ ಬಗ್ಗೆ ಅವರನ್ನ ಕರೆದು ಮಾತನಾಡಿದ್ದೇನೆ. ಯಾವುದೇ ಸಮಸ್ಯೆ ಇಲ್ಲ ಎಂದರು.


ಪಂಚಲಿಂಗ ದರ್ಶನ 1000 ಜನರಿಗೆ ಮಾತ್ರ!: ಒಂದು ಸಾವಿರ ಜನಕ್ಕೆ ಸೀಮಿತಗೊಳಿಸಿ, ಸರಳವಾಗಿ ಪಂಚಲಿಂಗ ದರ್ಶನ ಮಹೋತ್ಸವ ನಡೆಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ತಿ.ನರಸೀಪುರ ತಾಲ್ಲೂಕಿನ ತಲಕಾಡಿನಲ್ಲಿ ನಡೆದ ಪಂಚಲಿಂಗ ದರ್ಶನ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಪಂಚಲಿಂಗ ದರ್ಶನದ ಹಿನ್ನೆಲೆ ಅಗತ್ಯವಿರುವ ಕೆಲಸಗಳನ್ನು ಈಗ ತುರ್ತಾಗಿ ಕೈಗೊಳ್ಳಬೇಕು. ಪಂಚಲಿಂಗ ದರ್ಶನ ಮಹೋತ್ಸವಕ್ಕೆ 2.2 ಕೋಟಿ ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ಜಿಲ್ಲಾಡಳಿತ ಸರ್ಕಾರಕ್ಕೆ ಸಲ್ಲಿಸಿದೆ ಎಂಬ ಮಾತು ಸಭೆಯಲ್ಲಿ ಕೇಳಿ ಬಂತು.

Categories
ಬೆಂಗಳೂರು

ಇಂದು ಖಾಸಗಿ ಬ್ಯಾಂಕ್ ವ್ಯವಹಾರ ಡೌಟು?

  • ನ.26ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ

ಬೆಂಗಳೂರು: ಕೇಂದ್ರ ಕಾರ್ಮಿಕ ಸಂಘ ಗುರುವಾರ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಇದರಿಂದಾಗಿ ನ.26ರಂದು ಹಲವು ಖಾಸಗಿ ಬ್ಯಾಂಕ್‍ಗಳ ವ್ಯವಹಾರ ಸ್ಥಗಿತಗೊಳ್ಳಲಿದೆ.
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ರಾಷ್ಟ್ರವ್ಯಾಪ್ತಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಬ್ಯಾಂಕ್ ನೌಕರರು ಸಹ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದು, ಗುರುವಾರ ಬ್ಯಾಂಕ್‍ಗಳು ಬಂದ್ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಭಾರತೀಯ ಮಜ್ದೂರ್ ಸಂಘ ಹೊರತುಪಡಿಸಿ 10 ಕೇಂದ್ರ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ನೀಡಿದ್ದು, ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್ ಸಿಸ್ ಬ್ಯಾಂಕ್ ಬಂದ್ ಬೆಂಬಲಿಸಿಲ್ಲ.ಖಾಸಗಿ ವಲಯದ ಹಲವು ಬ್ಯಾಂಕ್, ವಿದೇಶಿ ಬ್ಯಾಂಕ್‍ಗಳ ಉದ್ಯೋಗಿಗಳು ಮುಷ್ಕರಕ್ಕೆ ಬೆಂಬಲ ನೀಡುವ ಸಾಧ್ಯತೆ ಇದೆ. ಸಾಮಾಜಿಕ ಜಾಲತಾಣದ ಮೂಲಕ ಹಲವಾರು ಬ್ಯಾಂಕ್ ಗುರುವಾರ ವ್ಯವಹಾರ ಇರುವುದಿಲ್ಲ ಎಂದು ಈಗಾಗಲೇ ಗ್ರಾಹಕರಿಗೆ ಮಾಹಿತಿ ನೀಡಿವೆ.
ಕಾರಣ ಏನು?: ಬ್ಯಾಂಕ್‍ಗಳ ಖಾಸಗೀಕರಣಕ್ಕೆ ವಿರೋಧ, ಹೊರಗುತ್ತಿಗೆ ವ್ಯವಸ್ಥೆಗೆ ವಿರೋಧ, ಬ್ಯಾಂಕ್ ಸಿಬ್ಬಂದಿ ಪರವಾಗಿ ಸೇವಾಶುಲ್ಕ ಕಡಿತ ಸೇರಿದಂತೆ ಬ್ಯಾಂಕಿಂಗ್‍ಗೆ ಸಂಬಂಧಪಟ್ಟ ಬೇಡಿಕೆಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ.
ನೆಟ್ ಮತ್ತು ಮೊಬೈಲ್ ಬ್ಯಾಂಕಿಂಗ್ ಕಾರ್ಯ ನಿರತರವಾಗಿರಲಿದೆ. ಎಟಿಎಂನಿಂದ ಹಣವನ್ನು ಸಹ ವಿತ್ ಡ್ರಾ ಮಾಡಬಹುದಾಗಿದೆ. ಶುಕ್ರವಾರ ಬ್ಯಾಂಕ್‍ಗಳು ಎಂದಿನಂತೆ ಕಾರ್ಯ ನಿರ್ವಹಣೆ ಮಾಡಲಿವೆ. ಶನಿವಾರ ಮತ್ತು ಭಾನವಾರ ಪುನಃ ಬ್ಯಾಂಕ್ ರಜೆ ಇರಲಿದ್ದು, ಸೋಮವಾರದಿಂದ ವ್ಯವಹಾರಗಳು ಸಹಜ ಸ್ಥಿತಿಗೆ ಬರಲಿವೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

Categories
Uncategorized

ಶಬರಿಮಲೆ ಯಾತ್ರೆ: ಹೊಸ ನಿಯಮ ಏನೇನು?

  • ಟೋಲ್ ಫ್ರೀ ಸಂಖ್ಯೆ 080-26409689ಕ್ಕೆ ಕರೆ ಮಾಡಿ ಮಾಹಿತಿ ಪಡೆಯಿರಿ

ಬೆಂಗಳೂರು: ಕೇರಳದ ಶಬರಿಮಲೈನಲ್ಲಿ ಜರುಗುವ 2020-21ನೇ ಸಾಲಿನ ಮಂಡಲ-ಮಕರವಿಳಕ್ಕು( ಮಕರ ಸಂಕ್ರಾಂತಿ) ವರ್ಷದ ಕಾರ್ಯಕ್ರಮಕ್ಕೆ ತೆರಳುವ ಕರ್ನಾಟಕ ರಾಜ್ಯದ ಭಕ್ತಾದಿಗಳು, ಯಾತ್ರಾರ್ಥಿಗಳಿಗೆ ಸಂಬಂಧಿಸಿದಂತೆ ಕೇರಳ ಸರ್ಕಾರ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ಕರೋನಾ ಹಿನ್ನೆಲೆ ಈ ನಿಯಮ ಜಾರಿ ಮಾಡಲಾಗಿದೆ.
ಕರ್ನಾಟಕದಿಂದ ತೆರಳುವ ಭಕ್ತಾದಿಗಳಿಗೆ ರಾಜ್ಯ ಧಾರ್ಮಿಕ ದತ್ತಿ ಆಯುಕ್ತ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗಿದೆ. ಯಾತ್ರಾರ್ಥಿಗಳು ಅಗತ್ಯ ಮಾಹಿತಿಗೆ ಹಾಗೂ ತುರ್ತು ಸಂದರ್ಭಗಳಲ್ಲಿ ಸಹಾಯವಾಣಿ ಟೋಲ್ ಫ್ರೀ ಸಂಖ್ಯೆ 080-26409689 ನ್ನು ಸಂಪರ್ಕಿಸಲು ಅಧಿಕೃತ ಪ್ರಕಟಣೆ ತಿಳಿಸಿದೆ.
ಕೇರಳದ ಗಡಿ ಹಾಗೂ ಶಬರಿಮಲೆಯಲ್ಲಿ ಯಾವುದೇ ರೀತಿಯ ಸಮಸ್ಯೆಯಾದರೆ ಸಹಾಯವಾಣಿಗೆ ಕರೆ ಮಾಡಿದರೆ ಸರ್ಕಾರ ಸಮಸ್ಯೆಗೆ ಸೂಕ್ತ ಪರಿಹಾರ ನೀಡಲಿದೆ.

Categories
ಮಲ್ನಾಡ್

ಒಂದೇ ಕುಟುಂಬದ ಮೂವರು ನೀರುಪಾಲು!

  • ಚಿಕ್ಕಮಗಳೂರಲ್ಲಿ ನಡೆದ ದುರ್ಘಟನೆ
  • ಅಣ್ಣ, ತಮ್ಮ ಸೇರಿ ಐವರ ದುರಂತ ಅಂತ್ಯ

ಚಿಕ್ಕಮಗಳೂರು: ಮೂಡಬಿದರೆಯಲ್ಲಿ ನಾಲ್ವರು ನೀರುಪಾಲಾಗಿರುವ ಘಟನೆ ಮಾಸುವ ಮುನ್ನ ಚಿಕ್ಕಮಗಳೂರಿನಲ್ಲಿ ಒಂದೇ ಕುಟುಂಬದ ಮೂವರು ಸೇರಿ ಐವರು ನೀರುಪಾಲಾಗಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ವಸ್ತಾರೆಯ ಹರಕೆರೆ ಎಂಬಲ್ಲಿ ಈ ಘಟನೆ ನಡೆದಿದ್ದು, ಅಣ್ಣನನ್ನು ಕಾಪಾಡಲು ತಮ್ಮ, ತಮ್ಮನನ್ನು ಕಾಪಾಡಲು ಅಣ್ಣ ಸೇರಿದಂತೆ ಐವರು ಸಾವನ್ನಪ್ಪಿದ್ದು, ಇಡೀ ಊರು ಶೋಕದಲ್ಲಿ ಮುಳುಗಿದೆ.
ಮೃತರನ್ನು ಸುದೀಪ್(22), ಸಂದೀಪ್(23), ರಘು(22), ದಿಲೀಪ್(24)ದೀಪಕ್(24) ಎಂದು ಗುರುತಿಸಲಾಗಿದೆ.
ನ.20ರಂದು ಸಂದೀಪ್ ಎಂಬುವರ ಸಹೋದರಿ ಮದುವೆ ನಡೆದಿದ್ದು, ಬೀಗರ ಊಟವೂ ಆಗಿತ್ತು. ಬಳಿಕ ಕೆರೆಯಲ್ಲಿ ಮೀನು ಹಿಡಿದು ಊಟ ಮಾಡಲು ಹೋದವರು ವಾಪಾಸ್ ಬರಲಿಲ್ಲ. ಐವರು ಅಣ್ಣ ತಮ್ಮಂದಿರು ಮೀನಿಗೆ ಗಾಳ ಹಾಕುವ ಮುನ್ನ ನೀರಿಗೆ ಇಳಿದಿದ್ದಾರೆ. ಓರ್ವ ನೀರಲ್ಲಿ ಮುಳುಗಿದ್ದು, ಒಬ್ಬರ ನಂತರ ಒಬ್ಬರು ಆತನನ್ನು ರಕ್ಷಿಸಲು 6 ಮಂದಿ ಇಳಿದಿದ್ದಾರೆ. ಬಾನು ಎಂಬಾತ ಈಜಿ ದಡ ಸೇರಿದ್ದಾನೆ.
ಚಿಕ್ಕಮಗಳೂರು ತಾಲೂಕಿನ ಹಂಚರವಳ್ಳಿ ಕೃಷ್ಣಮೂರ್ತಿ ಕುಸುಮ ದಂಪತಿಯ ಮಕ್ಕಳು ಸಾವಿನ ಕದ ತಟ್ಟಿದ್ದಾರೆ. ಪೊಲೀಸರು ಬೋಟ್ ಬಳಸಿ ಶವ ಹೊರ ತೆಗೆದಿದ್ದಾರೆ. ಇಡೀ ಊರಿಗೆ ಊರೇ ಮೌನವಾಗಿದೆ.
ಸಂದೀಪ್ ಸಾಕಿದ್ದ ನಾಯಿ ಸಂದೀಪ್ ಸಾವಿಗೆ ಕಣ್ಣೀರು ಹಾಕಿದ್ದು, ಆತನ ಮರಣೋತ್ತರ ಪರೀಕ್ಷೆ ತೆಗೆದುಕೊಂಡು ಹೋಗುವಾಗ ಕಾರಿನ ಜತೆಯೇ ಓಡಿ ಬಂದ ದೃಶ್ಯ ಎಲ್ಲರ ಮನ ಕಲಕುವಂತೆ ಮಾಡಿತು.

Categories
Uncategorized

ಬಾರದ ಲೋಕಕ್ಕೆ ಪುಟ್ಬಾಲ್ ತಾರೆ ಮರಾಡೋನ

  • ಹೃದಯಾಘಾತದಿಂದ ವಿಧಿವಶ: ಕೋಟ್ಯಂತರ ಅಭಿಮಾನಿಗಳ ಕಣ್ಣೀರು

ಬ್ಯೂನಸ್ ಐರಿಸ್: ಅಜೆರ್ಂಟೀನಾದ ಖ್ಯಾತ ಫುಟ್ಬಾಲ್ ಆಟಗಾರ, ಪುಟ್ಬಾಲ್ ದಂತಕಥೆ ಎಂದೇ ಕರೆಯಲಾಗುತ್ತಿದ್ದ ಡಿಗೊ ಮರಾಡೋನ ಅವರು ಹೃದಯಾಘಾತದಿಂದ ಬುಧವಾರ ಸಂಜೆ ನಿಧನರಾಗಿದ್ದಾರೆ. ಈ ಮೂಲಕ ಪುಟ್ಬಾಲ್ ಆಟದ ಒಂದು ಅಧ್ಯಾಯ ಮುಗಿದಂತಾಗಿದೆ.


ಕೆಲವೇ ವಾರಗಳ ಹಿಂದಷ್ಟೇ ಮರಡೋನ (60) ಅವರು, ರಕ್ತ ಹೆಪ್ಪುಗಟ್ಟಿದ್ದ ಹಿನ್ನೆಲೆಯಲ್ಲಿ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ ಎರಡು ವಾರಗಳ ಹಿಂದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ನ.25ರಂದು ಸಂಜೆ ಬ್ಯೂನಸ್ ಐರಿಸ್ ನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅಜೆರ್ಂಟೀನಾದ ಅಧ್ಯಕ್ಷರು ಫುಟ್ಬಾಲ್ ದಂತಕಥೆ ನಿಧನಕ್ಕೆ ಸಂತಾಪ ಸೂಚಿಸಿದ್ದು ರಾಷ್ಟ್ರೀಯ ಶೋಕ ಘೋಷಿಸಿದ್ದಾರೆ. 1986ರಲ್ಲಿ ಮರಡೋನಾ ನೇತೃತ್ವದ ತಂಡ ಪಶ್ಚಿಮ ಜರ್ಮನಿಯನ್ನು ಮಣಿಸಿ ವಿಶ್ವಕಪ್ ಗೆದ್ದಿತ್ತು. ಮರಡೋನ ಅವರ ದಿ ಹ್ಯಾಂಡ್ ಆಫ್ ಗಾಡ್ ಎಂದೇ ಕರೆಯಲ್ಪಡುವ ಗೋಲು ಪ್ರಸಿದ್ಧವಾಗಿದೆ. ಕೋಟ್ಯಂತರ ಪುಟ್ಬಾಲ್ ಅಭಿಮಾನಿಗಳ ಆರಾಧ್ಯ ದೈವರಾಗಿದ್ದ ಮರಡೋನ ಇದೀಗ ಬಾರದ ಲೋಕಕ್ಕೆ ಜಾರಿದ್ದಾರೆ.

Categories
ಅಂತಾರಾಷ್ಟ್ರೀಯ ಸುದ್ದಿ

ಚಳಿ ನಡುವೆ ನಿವಾರ್ ಚಂಡಮಾರುತ

  • 2 ದಿನ ಮಳೆ ಆಟ: ಜನತೆಗೆ ಪ್ರಾಣ ಸಂಕಟ
  • ತಮಿಳುನಾಡಲ್ಲಿ ಸರ್ಕಾರಿ ರಜೆ ಘೋಷಣೆ

ಬೆಂಗಳೂರು: ತಮಿಳುನಾಡು ಮೂಲಕ ನಿವಾರ್ ಚಂಡಮಾರುತ ಆರ್ಭಟಿಸುತ್ತಿದೆ. ಈಗಾಗಲೇ ತಮಿಳುನಾಡಿನಲ್ಲಿ ಆಪಾಯದ ಸೂಚನೆ ನೀಡುರುವ ಜಂಡಮಾರುತ ರಾಜ್ಯಕ್ಕೂ ಅಬ್ಬರಿಸಲಿದೆ.


ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬುಧವಾರ ಮತ್ತು ಗುರುವಾರ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ದಕ್ಷಿಣ ಕರ್ನಾಟಕಕ್ಕೆ ಚಂಡಮಾರುತ ಅಪ್ಪಳಿಸುತ್ತಿದ್ದು, ಇದರ ಪರಿಣಾಮ ಬೆಂಗಳೂರು ಸೇರಿದಂತೆ ಹಲವೆಗೆ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ನಿವಾರ್ ಚಂಡಮಾರುತ ಈಗಾಗಲೇ ತಮಿಳುನಾಡು-ಪುದುಚೇರಿ ಕಡಲ ತೀರಕ್ಕೆ ಬಂದಪ್ಪಳಿಸಿದೆ. ಇಂದು ಸಂಜೆ ವೇಳೆಗೆ ನಿವಾರ್ ತನ್ನ ತೀವ್ರತೆಯನ್ನು ಹೆಚ್ಚಿಸಿಕೊಳ್ಳುವ ನಿರೀಕ್ಷೆ ಇದೆ.


ಸಂಜೆ ವೇಳೆಗೆ 120 ಕಿಲೋಮೀಟರ್ ವೇಗದಲ್ಲಿ ನಿವಾರ್ ಅಪ್ಪಳಿಸುವ ಮುನ್ಸೂಚನೆ ಇದೆ. ಮುಂದಿನ 6 ಗಂಟೆಗಳಲ್ಲಿ ನಿವಾರ್ ಅಬ್ಬರ ಗೊತ್ತಾಗಲಿದೆ. ಮುಂಜಾಗ್ರತಾ ಕ್ರಮವಾಗಿ 1,200 ಮಂದಿಯ ವಿಶೇಷ ತಂಡವನ್ನು ನಿಯೋಜಿಸಲಾಗಿದೆ. ಜೊತೆಗೆ ಪ್ರಧಾನಿ ಮೋದಿ ಕೂಡ ನೆರವಿನ ಭರವಸೆ ನೀಡಿದ್ದಾರೆ. ಅಲ್ಲದೇ ನಿವಾರ್ ಹಾವಳಿಯಿಂದಾಗುವ ಅನಾಹುತ ತಪ್ಪಿಸಲು ತಮಿಳುನಾಡಿನಲ್ಲಿ ಸರ್ಕಾರಿ ರಜೆ ಘೋಷಿಸಲಾಗಿದೆ. ಪ್ರಮುಖ ಬಂದರುಗಳನ್ನು ಬಂದ್ ಮಾಡಲಾಗಿದೆ.


ಕರ್ನಾಟಕ, ಆಂಧ್ರ, ತೆಲಂಗಾಣದ ಮೇಲೆಯೂ ನಿವಾರ್ ಪರಿಣಾಮ ಬೀರಲಿದೆ. ಇಂದಿನಿಂದ ನವೆಂಬರ್ 27ರವರೆಗೆ ರಾಜ್ಯದ ಹಲವೆಡೆ ಮಳೆ ಆಗಲಿದೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಮಂಡ್ಯ, ಚಾಮರಾಜನಗರದಲ್ಲಿ ನಾಳೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Categories
ಕರಾವಳಿ

ಮದುವೆಗೆ ಬಂದು ಹೆಣವಾದರು..

  • ಈಜಲು ಹೋದ ನಾಲ್ವರು ನೀರುಪಾಲು

ಮೂಡುಬಿದಿರೆ: ಮದುವೆಗೆ ಬಂದು ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದರೆ ಶಾಂಭವಿ ನದಿಯಲ್ಲಿ ಈಜಲು ಹೋಗಿ ನಾಲ್ವರು ನೀರು ಪಾಲಾದ ದಾರುಣ ಘಟನೆ ಮೂಡುಬಿದಿರೆ ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂದಲೆ ಬಳಿ ಮಂಗಳವಾರ ಸಂಭವಿಸಿದೆ.
ಮೃತರನ್ನು ಮಾಮಂಜೂರಿನ ಮೂಡುಶೆಡ್ಡೆ ನಿಖಿಲ್(18), ಅರ್ಶಿತಾ(20), ವೇಣೂರಿನ ಸುಬಾಸ್(19) ಹಾಗೂ ಬಜ್ಪೆ ಪೆರಾರದ ರವಿ(30) ಎಂದು ಗುರುತಿಸಲಾಗಿದೆ. ಸ್ಥಾಲದಲ್ಲಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.
ಮೂಡುಬಿದಿರೆಯ ಕಡಂದಲೆ ಶ್ರೀಧರ ಆಚಾರ್ಯ ಅವರ ಮನೆಗೆ ವಿವಾಹ ಸಮಾರಂಭಕ್ಕೆ ಬಂದಿದ್ದರು. ಮದುವೆಗೆ ಬಂದಿದ್ದ ಇವರು ಶಾಂಭವಿ ನದಿಯಲ್ಲಿ ಈಜಲು ಹೋದಾಗ ಈ ದುರ್ಘಟನೆ ಸಂಭವಿಸಿದೆ. ಘಟನೆಗೆ ಸಂಬಂಧಿಸಿದಂತೆ ಮೂಡಬಿದಿರೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನಾದರೂ ಎಚ್ಚರ. ನದಿ, ಕೆರೆ ನೀರಲ್ಲಿ ಈಜಲು ಹೋಗಿ ಜೀವ ಕಳೆದುಕೊಳ್ಳಬೇಡಿ.

Categories
ರಾಜಕೀಯ

ನಿಗಮ ಮಂಡಳಿ ಅಸ್ತು: ಸಚಿವ ಸಂಪುಟ ಸುಸ್ತು!

  • 33 ನಿಗಮ ಮಂಡಳಿಗಳಿಗೆ ನೇಮಕ ಮಾಡಿ ಆದೇಶ

ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ಭಾರೀ ಪೈಪೋಟಿ ಏರ್ಪಟ್ಟಿದೆ. ಈ ನಡುವೆ ಸಚಿವ ಸಂಪುಟ ಪುನಾರಚನೆ ಅಥವಾ ವಿಸ್ತರಣೆಗೂ ಮುನ್ನವೆ ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರು, ನಿರ್ದೇಶಕರು ಹಾಗೂ ಸದಸ್ಯರನ್ನು ನೇಮಕಗೊಳಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಮೊದಲ ಹಂತದ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ.


ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹಾಗೂ ರಾಜ್ಯಾಧ್ಯಕ್ಷ ನಳಿಕ್ ಕುಮಾರ್ ಕಟೀಲ್ ಭೇಟಿಯಾಗಿ ಚರ್ಚೆ ನಡೆಸಿದ ಬೆನ್ನಲ್ಲೆ ಮುಖ್ಯಮಂತ್ರಿ ಯಡಿಯೂರಪ್ಪ 33 ನಿಗಮ ಮಂಡಳಿಗಳಿಗೆ ಅಧ್ಯಕ್ಷರು, 2 ಆಯೋಗಕ್ಕೆ ಹಾಗೂ 2 ಪ್ರಾಧಿಕಾರಗಳಿಗೆ ನೇಮಕ ಅಧ್ಯಕ್ಷರನ್ನು ನೇಮಕ ಗೊಳಿಸಿದ್ದಾರೆ.


ಇಬ್ಬರು ಹಾಲಿ ಶಾಸಕರಿಗೆ ಅಧ್ಯಕ್ಷಗಿರಿ ನೀಡಲಾಗಿದ್ದು, ಇನ್ನುಳಿದಂತೆ ಮಾಜಿ ಶಾಸಕರು, ಪಕ್ಷದ ಮುಖಂಡರು ಸೇರಿದ್ದಾರೆ. ಕೆಲ ತಿಂಗಳುಗಳ ಹಿಂದೆ ಕೇವಲ ಶಾಸಕರಿಗೆ ಮಾತ್ರ ನಿಗಮ ಮಂಡಳಿಗಳ ಅಧ್ಯಕ್ಷಗಿರಿ ನೀಡಲಾಗಿತ್ತು. ಮುಂದಿನ ಹಂತದಲ್ಲಿ ಪಕ್ಷದ ಕಾರ್ಯಕರ್ತರಿಗೂ ಅವಕಾಶ ಕಲ್ಪಿಸಿಕೊಡಲಾಗುತ್ತದೆ ಎಂದು ಯಡಿಯೂರಪ್ಪ ಹಾಗೂ ನಳಿನ್ ಕುಮಾರ್ ಕಟೀಲ್ ಅವರು ಭರವಸೆ ನೀಡಿದ್ದಾರೆ. ಈ ಮೂಲಕ ಸಂಪುಟ ಸುಸ್ತು ಕೊಂಚ ಕಡಿಮೆಯಾದಂತಾಗಿದೆ. ಆದರೂ ಸಚಿವಗಿರಿ ರೇಸ್ ಹೆಚ್ಚಾಗಿದ್ದು, ಅಸಮಾಧಾನ ಸ್ಫೋಟಿಸುವ ಸಾಧ್ಯತೆಗಳಿವೆ.