ನವ ದೆಹಲಿ: ರಾಜ್ಯ ಸಭಾ ಸದಸ್ಯ, ಕರ್ನಾಟಕ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ನಾಯಕ, ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್(71) ಬುಧವಾರ ವಿಧಿವಶರಾಗಿದ್ದಾರೆ. ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಹ್ಮದ್ ಪಟೇಲ್ ಅವರು ಬುಧವಾರ ಬೆಳಗಿನ ಜಾವ 3.30ರ ಸುಮಾರಿಗೆ ನಿಧನ ಹೊಂದಿದ್ದಾರೆ. ಸೋನಿಯಾ ಗಾಂಧಿ ಆಪ್ತರಲ್ಲಿ ಅಹ್ಮದ್ ಪಟೇಲ್ ಅವರೂ ಕೂಡ ಒಬ್ಬರಾಗಿದ್ದರು.
ಕರೋನಾ ಸೋಂಕು ಕಾರಣ ಗುರುಗ್ರಾಮದ ಮೆಡಂತಾ ಆಸ್ಪತ್ರೆಗೆ ದಾಖಲಾಗಿ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಂಕು ತಗುಲಿದ ಕುರಿತು ಅಕ್ಟೋಬರ್ 1ರಂದು ಸ್ವತಃ ಅಹ್ಮದ್ ಪಟೇಲ್ ಅವರೇ ಖಚಿತಪಡಿಸಿದ್ದರು. ಅಲ್ಲದೆ ಹೋಮ್ ಐಸೋಲೇಟ್ ಆಗುತ್ತಿರುವುದಾಗಿ ಮಾಹಿತಿ ನೀಡಿದ್ದರು. ಪಟೇಲ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕಾಂಗ್ರೆಸ್ ಖಜಾಂಚಿಯಾಗಿದ್ದ ಪಟೇಲ್ ಹಿರಿಯ ನಾಯಕರು ಮತ್ತು ಸೋನಿಯಾ ಗಾಂಧಿ ಕುಟುಂಬದ ಆಪ್ತರಾಗಿದ್ದರು. ಕಾಂಗ್ರೆಸ್ ಹೈಕಮಾಂಡ್ ಸಂತಾಪ ಸೂಚಿಸಿದೆ.
ಮೋದಿ ಸಂತಾಪ: ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗಣ್ಯರು ಸಂತಾಪ ಸೂಚಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಕೂಡ ಅಹ್ಮದ್ ಪಟೇಲ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ತೀರ್ಥಹಳ್ಳಿ: ಆರೋಗ್ಯ ಮತ್ತು ಚಿಕಿತ್ಸೆ ಸೇವೆಗಳಲ್ಲಿ ಕರಾವಳಿ ಮತ್ತು ಮಲೆನಾಡು ಮುಂಚೂಣಿಯಲ್ಲಿದೆ. ಈ ನಡುವೆ ಕರಾವಳಿ ಮ್ತು ಮಲೆನಾಡಿನ ಸಂಪರ್ಕ ಕೊಂಡಿಯಾಗಿರುವ ತೀರ್ಥಹಳ್ಳಿಯಲ್ಲಿ ಇದೀಗ ಕಿರಣ್ ಹೆಲ್ತ್ ಕೇರ್ ಎಂಬ ಹೈಟೆಕ್ ಆಸ್ಪತ್ರೆ ಶುಭಾರಂಭ ಮಾಡಿದೆ.
ದಶಕಗಳ ಕಾಲ ಆರೋಗ್ಯ ಸೇವೆಯನ್ನು ಮಲೆನಾಡಿನ ಜನತೆಗೆ ನೀಡಿರುವ ಕಿರಣ್ ಕ್ಲಿನಿಕ್ನ ಡಾ.ಗಣೇಶ್ ನಾಯಕ್ ಮಾಲಿಕತ್ವದ ಈ ಆಸ್ಪತ್ರೆ ಅತ್ಯಾಧುನಿಕ ಹಾಗೂ ಹೈಟೆಕ್ ಸೌಲಭ್ಯ ಹೊಂದಿದೆ. ಜೊತೆಗೆ ಶಾಂತ ಪ್ರದೇಶದಲ್ಲಿದ್ದು, ನ.20ರಂದು ಉದ್ಘಾಟನೆಗೊಂಡಿದೆ. ಆಸ್ಪತ್ರೆಯ ಉದ್ಘಾಟಕರಾಗಿ ಡಾ.ವೆಂಕಟೇಶ್ (FMMC,Manipal) ಹಾಗೂ ಮುಖ್ಯ ಅತಿಥಿಗಳಾಗಿ ಟಿ.ವಿ.ಗಜೇಂದ್ರನಾಥ್ ಮತ್ತು ಹೇಮಲತಾ ಕೊರಣ್ಣನವರ್ ಆಗಮಿಸಿದ್ದರು. ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸಹಕಾರಿ ನಾಯಕ ಡಾ.ಆರ್.ಎಂ.ಮಂಜುನಾಥ ಗೌಡ ಸೇರಿದಂತೆ ಗಣ್ಯಾತಿಗಣ್ಯರು ಹೊಸ ಆಸ್ಪತ್ರೆ ಯಶಸ್ಸಿಗೆ ಶುಭ ಕೋರಿದ್ದಾರೆ.
ತೀರ್ಥಹಳ್ಳಿಯ ಕೊಪ್ಪ ಸರ್ಕಲ್ನಿಂದ ಹಳೇ ಕೋರ್ಟ್ ಮಾರ್ಗದಲ್ಲಿ ಆರಂಭವಾಗಿರುವ ಕಿರಣ್ ಹೆಲ್ತ್ಕೇರ್ ಆರೋಗ್ಯ ಸೇವೆಗಳನ್ನು ಜನತೆಗೆ ನೀಡಲು ಸಿದ್ಧವಾಗಿದೆ. ಕರಾವಳಿ, ಶಿವಮೊಗ್ಗದ ಆಸ್ಪತ್ರೆಗಳಂತೆ ಎಲ್ಲಾ ವಿಭಾಗದ ಸೇವೆ ನೀಡಲು ಸಿದ್ಧವಾಗುತ್ತಿದೆ. ಡಾ.ಗಣೇಶ್ ನಾಯಕ್ ನೇತೃತ್ವದ ವೈದ್ಯರು ಮತ್ತು ಸಿಬ್ಬಂದಿಯ ತಂಡ, ಮೆಡಿಕಲ್, ಲ್ಯಾಬೋರೋಟರಿ, ತುರ್ತು ಘಟಕ, ಆಪ್ತ ಸಮಾಲೋಚನೆ, ವಿಶೇಷ ಬೆಡ್ ವ್ಯವಸ್ಥೆ ಸೇರಿ ಎಲ್ಲಾ ವ್ಯವಸ್ಥೆಗಳನ್ನು ಆಸ್ಪತ್ರೆ ಹೊಂದಿದೆ.
ತೀರ್ಥಹಳ್ಳಿಯಲ್ಲಿ ಈಗಾಗಲೇ ಮೇಳಿಗೆ, ಅನುರಾಧ, ಮಾನಸ, ಪ್ರಶಾಂತಿ ಚಿಕಿತ್ಸಾಲಯ, ಆಶ್ವಿನಿ ಕ್ಲಿನಿಕ್, ಪೂಜ್ಯಪಾದ ಸೇರಿದಂತೆ ಅನೇಕ ಆಸ್ಪತ್ರೆಗಳಿವೆ. ಮಲ್ನಾಡ್ ಡಯಾಗ್ನಿಸಿಸ್ ಸೆಂಟರ್, ನ್ಯಾಷಿನಲ್ನಂತಹ ಲ್ಯಾಬೋರೋಟರಿ ಆರೋಗ್ಯ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿವೆ. ಬಡ, ಮಧ್ಯಮ ವರ್ಗದವರಿಗೆ ಉತ್ತಮ ಸೇವೆ ನೀಡುವ ಸರ್ಕಾರಿ ಆಸ್ಪತ್ರೆಯೂ ಇದೆ. ಈ ನಡುವೆ ಕಿರಣ್ ಹೆಲ್ತ್ ಕೇರ್ ಆರೋಗ್ಯ ಸೇವೆ ನೀಡಲು ಸಜ್ಜಾಗಿದೆ.
ನವ ದೆಹಲಿ: ಯುವ ಜನತೆ ಮತ್ತು ಮಕ್ಕಳನ್ನು ಚಟಕ್ಕೆ ಬೀಳಿಸಿದ್ದ ಪಬ್ ಜಿ ಗೇಮಿಂಗ್ ಆಟ ಮತ್ತೆ ಶುರುವಾಗಲಿದೆ. ಆದರೆ ಚೀನಾ ಮೂಲದ ಸರ್ವರ್ ನಿರ್ವಹಣೆ ಹೊಂದಿದ್ದ ಕಾರಣಕ್ಕೆ ಬ್ಯಾನ್ ಆಗಿದ್ದ ಆಟ ಮತ್ತೆ ಭಾರತಕ್ಕೆ ಎಂಟ್ರಿಯಾಗಿದ್ದು ಬೆಂಗಳೂರಿಂದ ನಿರ್ವಹಣೆಯಾಗಲಿದೆ ಎಂಬ ಮಾಹಿತಿ ಹೊರ ಬಿದ್ದಿದೆ.
ಮೊದಲೇ ಉದ್ಯೋಗ, ಕೆಲಸ ಇಲ್ಲದ ಯುವ ಜನತೆ, ಶಿಕ್ಷಣ ಇಲ್ಲದ ಮಕ್ಕಳ ಮೊಬೈಲ್ ವ್ಯಾಮೋಹಕ್ಕೆ ಈ ಆನ್ಲೈನ್ ಆಟ ಮ್ತಷ್ಟು ಹುಚ್ಚು ಹಿಡಿಸಲಿದೆ. ಜೊತೆಗೆ ದೇಶದದ ಯುವ ಜನತೆಯ ಕ್ರಿಯಾಶೀಲತೆ, ಹವ್ಯಾಸ, ದುಡಿಯುವ ಆಸಕ್ತಿಗೆ ಎಳ್ಳುನೀರು ಬಿಡಲಿದೆ. ಇನ್ನು ಈ ಆಟದ ಹುಚ್ಚಲ್ಲಿ ನೂರಾರು ಆತ್ಮಹತ್ಯೆಗಳು, ಸಾವಿರಾರು ಮಾನಸಿಕ ರೋಗಿಗಳು, ಡೈವೋರ್ಸ್ಗಳು ನಡೆದಿದ್ದವು. ಈ ಆಟದ ಬ್ಯಾನ್ಗಾಗಿ ಸಾಮಾಜಿಕ ತಾಣದಲ್ಲಿ ಭಾರೀ ಹೋರಾಟ ನಡೆದಿತು. ಇದೀಗ ಪಬ್ಜಿ ಗೇಮ್ ಮತ್ತೆ ದೇಶದಲ್ಲಿ ಹೊಸರೂಪದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ.
ಪಬ್ಜಿ ಇಂಡಿಯಾ ಪ್ರೈ. ಲಿಮಿಟೆಡ್ ಹೆಸರಿನಲ್ಲಿ ಹೊಸ ಸಂಸ್ಥೆ ದೇಶದಲ್ಲಿ ನೋಂದಣಿಯಾಗಿದ್ದು, ಪೂರ್ತಿ ಗೇಮಿಂಗ್ ಸರ್ವರ್ ನಿರ್ವಹಣೆ ಮತ್ತು ಬಳಕೆದಾರರ ಮಾಹಿತಿಯನ್ನು ದೇಶದಲ್ಲೇ ನಿರ್ವಹಿಸುವ ಭರವಸೆಯನ್ನು ಪಬ್ಜಿ ನೀಡಿದೆ. ಸರಕಾರದ ನಿಯಮಾವಳಿಗೆ ಅನುಗುಣವಾಗಿ, ಗೇಮಿಂಗ್ ಡಾಟಾ ನಿರ್ವಹಣೆಯನ್ನು ದೇಶದಲ್ಲೇ ನಡೆಸುವ ಯೋಜನೆಯನ್ನು ಪಬ್ಜಿ ಹೊಂದಿದೆ. ಇಲ್ಲಿ ಕಂಪನಿ ವಯುಕ್ತಿಕ ಮಾಹಿತಿ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ ಎಂದಿದೆ. ಆದರೆ ಇಲ್ಲಿ ಹಂಚಿಕೊಳ್ಳುವುದು ಮುಖ್ಯ ಅಲ್ಲ ಸಾಂಆಜಿಕ ಸ್ವಾಸ್ಥ್ಯ ಮುಖ್ಯ. 6 ಕೋಟಿ ರೂ. ವರೆಗಿನ ಬಹುಮಾನದ ಮೊತ್ತವನ್ನು ಪಬ್ಜಿ ಪ್ಲೇಯರ್ಸ್ಗೆ ನೀಡುವ ಸಾಧ್ಯತೆಯಿದೆ. ಆಯ್ದ ಆಂಡ್ರಾಯ್ಡ್ ಮತ್ತು ಒಎಸ್ ಬಳಕೆದಾರರಿಗೆ ಈಗಾಗಲೇ ಪಬ್ಜಿ ಹೊಸ ಪ್ರಿ ರಿಜಿಸ್ಟ್ರೇಶನ್ ಆರಂಭಿಸಿದೆ. ಹೊಸ ಗೇಮ್ ಬಿಡುಗಡೆ ಕುರಿತು ಪಬ್ಜಿ ಇನ್ನಷ್ಟೇ ಅಧಿಕೃತವಾಗಿ ಹೇಳಿಕೆ ನೀಡಲಿದೆ. ಆದರೆ ಮೋದಿ ಸರ್ಕಾರ ಈ ಆಟವನ್ನು ಚೀನಾದಿಂದ ಕಸಿದು ಭಾರತಕ್ಕೆ ಬಿಟ್ಟರೆ ಭಾರತದ ಯುವ ಸಮುದಾಯ ಹಾಲಾಗುವುದರಲ್ಲಿ ಸಂಶಯವೇ ಇಲ್ಲ. ಮೂರು ಹೊತ್ತು ಜೂಜು, ಆಟ ಆಡುತ್ತಾ ಕುಳಿತರೇ ದೇಶ ಉದ್ಧಾರ ಯಾವಾಗ..? ಈ ಬಗ್ಗೆ ದೊಡ್ಡ ಹೋರಾಟ ನಡೆಯಬೇಕಿದೆ.
ನವ ದೆಹಲಿ: ಯುವ ಜನತೆ ಮತ್ತು ಮಕ್ಕಳನ್ನು ಚಟಕ್ಕೆ ಬೀಳಿಸಿದ್ದ ಪಬ್ ಜಿ ಗೇಮಿಂಗ್ ಆಟ ಮತ್ತೆ ಶುರುವಾಗಲಿದೆ. ಆದರೆ ಚೀನಾ ಮೂಲದ ಸರ್ವರ್ ನಿರ್ವಹಣೆ ಹೊಂದಿದ್ದ ಕಾರಣಕ್ಕೆ ಬ್ಯಾನ್ ಆಗಿದ್ದ ಆಟ ಮತ್ತೆ ಭಾರತಕ್ಕೆ ಎಂಟ್ರಿಯಾಗಿದ್ದು ಬೆಂಗಳೂರಿಂದ ನಿರ್ವಹಣೆಯಾಗಲಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಮೊದಲೇ ಉದ್ಯೋಗ, ಕೆಲಸ ಇಲ್ಲದ ಯುವ ಜನತೆ, ಶಿಕ್ಷಣ ಇಲ್ಲದ ಮಕ್ಕಳ ಮೊಬೈಲ್ ವ್ಯಾಮೋಹಕ್ಕೆ ಈ ಆನ್ಲೈನ್ ಆಟ ಮ್ತಷ್ಟು ಹುಚ್ಚು ಹಿಡಿಸಲಿದೆ. ಜೊತೆಗೆ ದೇಶದದ ಯುವ ಜನತೆಯ ಕ್ರಿಯಾಶೀಲತೆ, ಹವ್ಯಾಸ, ದುಡಿಯುವ ಆಸಕ್ತಿಗೆ ಎಳ್ಳುನೀರು ಬಿಡಲಿದೆ. ಇನ್ನು ಈ ಆಟದ ಹುಚ್ಚಲ್ಲಿ ನೂರಾರು ಆತ್ಮಹತ್ಯೆಗಳು, ಸಾವಿರಾರು ಮಾನಸಿಕ ರೋಗಿಗಳು, ಡೈವೋರ್ಸ್ಗಳು ನಡೆದಿದ್ದವು. ಈ ಆಟದ ಬ್ಯಾನ್ಗಾಗಿ ಸಾಮಾಜಿಕ ತಾಣದಲ್ಲಿ ಭಾರೀ ಹೋರಾಟ ನಡೆದಿತು. ಇದೀಗ ಪಬ್ಜಿ ಗೇಮ್ ಮತ್ತೆ ದೇಶದಲ್ಲಿ ಹೊಸರೂಪದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ. ಪಬ್ಜಿ ಇಂಡಿಯಾ ಪ್ರೈ. ಲಿಮಿಟೆಡ್ ಹೆಸರಿನಲ್ಲಿ ಹೊಸ ಸಂಸ್ಥೆ ದೇಶದಲ್ಲಿ ನೋಂದಣಿಯಾಗಿದ್ದು, ಪೂರ್ತಿ ಗೇಮಿಂಗ್ ಸರ್ವರ್ ನಿರ್ವಹಣೆ ಮತ್ತು ಬಳಕೆದಾರರ ಮಾಹಿತಿಯನ್ನು ದೇಶದಲ್ಲೇ ನಿರ್ವಹಿಸುವ ಭರವಸೆಯನ್ನು ಪಬ್ಜಿ ನೀಡಿದೆ. ಸರಕಾರದ ನಿಯಮಾವಳಿಗೆ ಅನುಗುಣವಾಗಿ, ಗೇಮಿಂಗ್ ಡಾಟಾ ನಿರ್ವಹಣೆಯನ್ನು ದೇಶದಲ್ಲೇ ನಡೆಸುವ ಯೋಜನೆಯನ್ನು ಪಬ್ಜಿ ಹೊಂದಿದೆ. ಇಲ್ಲಿ ಕಂಪನಿ ವಯುಕ್ತಿಕ ಮಾಹಿತಿ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ ಎಂದಿದೆ. ಆದರೆ ಇಲ್ಲಿ ಹಂಚಿಕೊಳ್ಳುವುದು ಮುಖ್ಯ ಅಲ್ಲ ಸಾಂಆಜಿಕ ಸ್ವಾಸ್ಥ್ಯ ಮುಖ್ಯ. 6 ಕೋಟಿ ರೂ. ವರೆಗಿನ ಬಹುಮಾನದ ಮೊತ್ತವನ್ನು ಪಬ್ಜಿ ಪ್ಲೇಯರ್ಸ್ಗೆ ನೀಡುವ ಸಾಧ್ಯತೆಯಿದೆ. ಆಯ್ದ ಆಂಡ್ರಾಯ್ಡ್ ಮತ್ತು ಒಎಸ್ ಬಳಕೆದಾರರಿಗೆ ಈಗಾಗಲೇ ಪಬ್ಜಿ ಹೊಸ ಪ್ರಿ ರಿಜಿಸ್ಟ್ರೇಶನ್ ಆರಂಭಿಸಿದೆ. ಹೊಸ ಗೇಮ್ ಬಿಡುಗಡೆ ಕುರಿತು ಪಬ್ಜಿ ಇನ್ನಷ್ಟೇ ಅಧಿಕೃತವಾಗಿ ಹೇಳಿಕೆ ನೀಡಲಿದೆ. ಆದರೆ ಮೋದಿ ಸರ್ಕಾರ ಈ ಆಟವನ್ನು ಚೀನಾದಿಂದ ಕಸಿದು ಭಾರತಕ್ಕೆ ಬಿಟ್ಟರೆ ಭಾರತದ ಯುವ ಸಮುದಾಯ ಹಾಲಾಗುವುದರಲ್ಲಿ ಸಂಶಯವೇ ಇಲ್ಲ. ಮೂರು ಹೊತ್ತು ಜೂಜು, ಆಟ ಆಡುತ್ತಾ ಕುಳಿತರೇ ದೇಶ ಉದ್ಧಾರ ಯಾವಾಗ..? ಈ ಬಗ್ಗೆ ದೊಡ್ಡ ಹೋರಾಟ ನಡೆಯಬೇಕಿದೆ.
ಮೈಸೂರು: ಪೌಷ್ಟಿಕಾಂಶವುಳ್ಳ ವಿಶೇಷ ತಳಿ ಕೋಳಿ ಕೊಡುವುದಾಗಿ ನಂಬಿಸಿ ರೈತರಿಗೆ ಸುಮಾರು 4 ಕೋಟಿ ವಂಚಿಸಿದ್ದ ಆಸಾಮಿಯೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಕೋಳಿ ಸಾಕಣೆ ಮೂಲಕ ಹೆಚ್ಚು ಲಾಭ ಗಳಿಸಬಹುದು ಎಂದು ಆಮಿಷವೊಡ್ಡಿ ರೈತರಿಗೆ ಕೋಟ್ಯಂತರ ರೂ. ಹಣ ವಂಚಿಸಿ ಪರಾರಿಯಾಗಿದ್ದ ಕೇರಳ ಮೂಲದ ಪ್ರಮೋದ್(60) ಎಂಬಾತನನ್ನು ನಂಜನಗೂಡು ಪೆÇಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಓಮೇಗಾ ಬಿವಿ 380 ಕೋಳಿ ಪೂರೈಕೆ ಹೆಸರಿನಲ್ಲಿ 4 ಕೋಟಿ ರೂ. ಗೂ ಹೆಚ್ಚು ಹಣವನ್ನು ರೈತರಿಂದ ಪಡೆದು ವಂಚಿಸಿದ್ದ ಪ್ರಮೋದ್, ಕೇರಳದ ತಿರುವನಂತಪುರಂ ಸಮೀಪದ ಹಳ್ಳಿಯೊಂದರಲ್ಲಿ ವಾಸವಾಗಿದ್ದ. ನಂಜನಗೂಡು ತಾಲೂಕಿನ ದೇವಿರಮ್ಮನ ಹಳ್ಳಿಯಲ್ಲಿ’ಓಮೇಗಾ ಬಿವಿ 380′ ಪೌಷ್ಟಿಕಾಂಶವುಳ್ಳ ಕೋಳಿ ತಳಿ ಪೂರೈಕೆ ಕೇಂದ್ರವನ್ನು ಆರಂಭಿಸಿದ್ದ ಆರೋಪಿ, ಕಳೆದ ಜನವರಿಯಲ್ಲಿ ಮೈಸೂರು ತಾಲೂಕಿನ ಕಡಕೊಳ ಗ್ರಾಮದ ಕಾಳಯ್ಯ ಹಾಗೂ ನಂಜನಗೂಡಿನ ಸಂಪತ್ ಎಂಬುವವರಿಗೆ ಕೋಳಿ ಫಾರಂ ನಡೆಸುವಂತೆ ಪುಸಲಾಯಿಸಿ 1.25 ಲಕ್ಷ ರೂ. ಪಡೆದುಕೊಂಡು ಕೋಳಿಗಳನ್ನು ಸರಬರಾಜು ಮಾಡಿದ್ದ.ಈ ವೇಳೆ ಇವುಗಳ ಮೊಟ್ಟೆಗಳಿಗೆ ಉತ್ತಮ ಬೇಡಿಕೆಯಿದ್ದು, 1 ಮೊಟ್ಟೆಗೆ 5 ರೂ.ನಂತೆ ತಾನೇ ಖರೀದಿಸುವುದಾಗಿ ನಂಬಿಸಿದ್ದ. ಈತ ಆರಂಭದಲ್ಲಿ 3 ತಿಂಗಳ ಕಾಲ ಮೊಟ್ಟೆಯನ್ನು ಖರೀದಿಸಿದ್ದನಾದರೂ ಬಳಿಕ ಕೋಳಿ ಸರಬರಾಜು ಕೇಂದ್ರವನ್ನು ಮುಚ್ಚಿ ತಲೆಮರೆಸಿಕೊಂಡಿದ್ದ. ನಂತರ ಈತ ಉಡುಪಿ, ಮಡಿಕೇರಿ ಸೇರಿದಂತೆ ನಾನಾ ಜಿಲ್ಲೆಗಳಲ್ಲಿ ಕೋಳಿ ಮಾರಾಟದ ಹೆಸರಿನಲ್ಲಿ ರೈತರಿಗೆ ವಂಚಿಸಿರುವುದು ಬೆಳಕಿಗೆ ಬಂದಿದ್ದು, ಈತನ ಮೇಲೆ 25ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅಂದಾಜು 4 ಕೋಟಿ ರೂ. ವಂಚಿಸಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ತೀರ್ಥಹಳ್ಳಿ: ತೀರ್ಥಹಳ್ಳಿಯ ರಂಜದಕಟ್ಟೆ ಬಳಿ ಮಂಗಳವಾರ ಸಂಜೆ ಹಿಟ್ ಅಂಡ್ ರನ್ ಘಟನೆ ನಡೆದಿದ್ದು, ಓರ್ವ ಮಹಿಳೆ ಬಲಿಯಾಗಿದ್ದಾಳೆ. ತೀರ್ಥಹಳ್ಳಿ ತಾಲೂಕು ಗಂಟೆಹಕ್ಕಲು ನಿವಾಸಿ ರಮೇಶ್ ಎಂಬುವರ ಪತ್ನಿ ಶಾರದಾ(45) ಹಾಲು ಕೊಡಲು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅತೀ ವೇಗದಿಂದ ತೀರ್ಥಹಳ್ಳಿ ಕಡೆಯಿಂದ ಬಂದ ಮಾರುತಿ ಓಮಿನಿ ಕಾರೊಂದು ಬಂದು ಡಿಕ್ಕಿ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಶರೀರವನ್ನು ತೀರ್ಥಹಳ್ಳಿ ಜೆಸಿ ಆಸ್ಪತ್ರೆ ಇಡಲಾಗಿದ್ದು ತೀರ್ಥಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಓಮ್ನಿ ಕಾರು ಪರಾರಿಯಾಗಿದ್ದು, ಶೋಧ ನಡೆಯುತ್ತಿದೆ.
ಬೆಳಗಾವಿ: ಲಿಂಗಾಯತ ನಿಗಮದ ಬಳಿಕ ಸರ್ಕಾರಕ್ಕೆ ಅನೇಕ ಜಾತಿಗಳು ತಮ್ಮ ಜನಾಂಗದ ನಿಗಮ ರಚಿಸ ಅಭಿವೃದ್ಧಿಪಡಿಸಬೇಕೆಂಬ ಬೇಡಿಕೆ ಇಡುತ್ತಿವೆ. ಈ ನಡುವೆ ಸರ್ಕಾರ ಒಕ್ಕಲಿಗರ ಅಭಿವೃದ್ಧಿ ನಿಗಮವನ್ನು ರಚಿಸಬೇಕು. ತಕ್ಷಣವೇ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ ಮಾಡಲು ನಾನು ಒತ್ತಾಯಿಸುತ್ತೇನೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ್ ಹೇಳಿದ್ದಾರೆ. ಇತ್ತ ಕೆಲವು ದಿನಗಳ ಹಿಂದೆ ರಾಜ್ಯದಲ್ಲಿ ಪ್ರಭಾವಿ ಸಮುದಾಯವಾಗಿರುವ ಈಡಿಗ ಸಮುದಾಯ ಕೂಡ ಹಾಲಪ್ಪ ನೇತೃತ್ವದಲ್ಲಿ ಈಡಿಗ ಅಭಿವೃದ್ಧಿ ನಿಗಮ ರಚಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿತ್ತು. ಬೆಳಗಾವಿಯಲ್ಲಿ ಮಾತನಾಡಿದ ಅಶ್ವತ್ಥನಾರಾಯಣ, ಮರಾಠರು ಕೂಡ ಕನ್ನಡಿಗರು, ಕನ್ನಡ ನಾಡಿನಲ್ಲಿರುವಂಥವರು. ಅವರಿಗೆ ಹಕ್ಕಿದೆ. ಹಾಗಾಗಿ ಅವರಿಗೆ ನಿಗಮ ರಚನೆ ಮಾಡಿದ್ದೇವೆ. ಈ ನಾಡು ಎಲ್ಲರಿಗೆ ಸೇರಿದ್ದು. ಎಲ್ಲಾ ಸಮುದಾಯಕ್ಕೆ ನಿಗಮ ಕೊಡಬೇಕು ಎಂದಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ 2 ಹಂತಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಯಲಿದೆ. ಈ ನಡುವೆ ಗ್ರಾಮ ಪಂಚಾಯತ್ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗ ಶಾಕ್ ನೀಡಿದೆ.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಆಯೋಗ ಸ್ಪಷ್ಟವಾಗಿ ಹೇಳಿದೆ. ಗುತ್ತಿಗೆದಾರರು ಪ್ರಸ್ತುತ ಗ್ರಾಮ ಪಂಚಾಯತ್ ಕಾಮಗಾರಿ ನಿರ್ವಹಿಸುತ್ತಿದ್ದಲ್ಲಿ ಅವರು ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಅನರ್ಹರಾಗುತ್ತಾರೆ. ಈ ವಿಷಯದಲ್ಲಿ ಚುನಾವಣಾಧಿಕಾರಿಗಳಿಗೆ ಮಾಹಿತಿ ಇಲ್ಲವಾದಲ್ಲಿ ಅವರು ಯಾವುದೇ ಕ್ರಮ ತೆಗೆದುಕೊಳ್ಳುವ ಅಗತ್ಯವಿಲ್ಲ. ಒಂದು ವೇಳೆ ಅಭ್ಯರ್ಥಿಯೊಬ್ಬರು ಈ ಬಗ್ಗೆ ಮಾಹಿತಿಯನ್ನು ಸೂಕ್ತ ದೃಢೀಕರಣದೊಂದಿಗೆ ನೀಡಿದಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.
ನಿಯಮಗಳೇನು?: ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಗಂಡ ಸರ್ಕಾರಿ ನೌಕರನಾಗಿದ್ದರೆ ಹೆಂಡತಿ ಚುನಾವಣೆಗೆ ಸ್ಪರ್ಧಿಸಬಹುದು. ಅದೇ ರೀತಿ ಹೆಂಡತಿ ಸರ್ಕಾರಿ ನೌಕರಳಾಗಿದ್ದಲ್ಲಿ ಗಂಡ ಕೂಡ ಸ್ಪರ್ಧೆ ಮಾಡಬಹುದಾಗಿದೆ. ನಾಮಪತ್ರ ವಾಪಸ್ಸು ಪಡೆಯಲು ಸೂಚಕರ ಬದಲಾಗಿ ಬೇರೊಬ್ಬರನ್ನು ಮತದಾರನ ಮುಖಾಂತರ ಕಳುಹಿಸಿದರೆ ಅದನ್ನು ಪರಿಗಣಿಸಬೇಕಿಲ್ಲ. ಅಭ್ಯರ್ಥಿ, ಸೂಚಕ ಅಥವಾ ಅವನ ಏಜೆಂಟನ ಮುಖಾಂತರ ಮಾತ್ರ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಬಹುದು ಎಂದು ಹೇಳಿದೆ.
ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ ಹಾಗೂ ಸೂಚಕ ಗ್ರಾಮ ಪಂಚಾಯತ್ ಮತದಾರನಾಗಿರಬೇಕು. ಮೀಸಲು ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳಿಂದ ಅಧಿಕೃತ ಮೂಲ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬೇಕು. ಚುನಾವಣೆಗೆ ಸಾಮಾನ್ಯ ವರ್ಗಕ್ಕೆ 200 ರೂ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಹಾಗೂ ಮಹಿಳಾ ಮೀಸಲಾತಿಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ 100 ರೂ ಠೇವಣಿ ನಿಗದಿಡಿಸಲಾಗಿದೆ. ಒಬ್ಬ ಅಭ್ಯರ್ಥಿಗೆ ಸೂಚಕರಾಗಿರುವವರು ಸಹ ಅಭ್ಯರ್ಥಿಯಾಗಲು ಅವಕಾಶವಿದೆ. ಸೂಚಕನು ಇಷ್ಟೇ ಅಭ್ಯರ್ಥಿಗಳಿಗೆ ಸೂಚಕರಾಗಿರಬೇಕೆಂಬ ನಿಯಮವಿಲ್ಲ. ಪರಿಶಿಷ್ಟ ಜಾತಿ ಪ್ರವರ್ಗಕ್ಕೆ ಮೀಸಲಾಗಿರುವ ಸ್ಥಾನಕ್ಕೆ ಯಾವುದೇ ನಾಮಪತ್ರ ಬಾರದೇ ಇದ್ದ ಪಕ್ಷದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯಿಂದ ನಾಮಪತ್ರ ಸ್ವೀಕರಿಸಬಹುದು. ಇದು ಹಿಂದುಳಿದ ವರ್ಗ ಎ ಮತ್ತು ಹಿಂದುಳಿದ ವರ್ಗ ಬಿ ಪ್ರವರ್ಗಕ್ಕೂ ಸಹ ಅನ್ವಯವಾಗುತ್ತದೆ. ಆದರೆ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕದೊಳಗೆ ಮೀಸಲಿಟ್ಟಿರುವ. ಪ್ರವರ್ಗದ ವ್ಯಕ್ತಿಯಿಂದ ನಾಮಪತ್ರ ಸ್ವೀಕೃತವಾದರೆ, ಬೇರೆ ಪ್ರವರ್ಗದ ವ್ಯಕಿ ಸಲ್ಲಿಸಿರುವ ನಾಮಪತ್ರವನ್ನು ಠೇವಣಿ ಹಣದೊಂದಿಗೆ ಹಿಂತಿರುಗಿಸಬೇಕಾಗುತ್ತದೆ ಎಂದು ಸ್ಪಷ್ಟನೆ ನೀಡಿದೆ.
ಒಬ್ಬ ಅಭ್ಯರ್ಥಿ ಒಂದು ಕ್ಷೇತ್ರಕ್ಕೆ ಗರಿಷ್ಟ 4 ನಾಮಪತ್ರಗಳನ್ನು ಸಲ್ಲಿಸಬಹುದು. ಗ್ರಾಮ ಪಂಚಾಯತ್ ಸದಸ್ಯನಾಗಲು ಕನಿಷ್ಠ 21 ವರ್ಷ ವಯಸ್ಸಾಗಿರಬೇಕು ಎಂದು ಆಯೋಗ ಸ್ಪಷ್ಟನೆ ಕೊಟ್ಟಿದೆ. ಈ ಮೂಲಕ ಚುನಾವಣೆಗೆ ನಿಲ್ಲುವ ಅರ್ಹತೆ, ನಿಯಮಗಳನ್ನು ಚುನಾವಣಾ ಆಯೋಗ ಸ್ಪಷ್ಟವಾಗಿ ಹೇಳಿದೆ.
ತೀರ್ಥಹಳ್ಳಿ: ಬಹು ನಿರೀಕ್ಷಿತ ಸೈನಿಕ್ ಶಾಲೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಪ್ರವಾಸಿ ತಾಣ ಆಗುಂಬೆ ಬಳಿ ಶುರುವಾಗಲಿದೆ. ಈಗಾಗಲೇ ಸುಮಾರು 100 ಎಕರೆ ಪ್ರದೇಶ ಗುರುತಿಸುವ ಕಾರ್ಯ ಆರಂಭವಾಗಿದೆ. 300 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಶಾಲೆ ನಿರ್ಮಾಣ ಮಾಡಲಾಗುತ್ತದೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ತೀರ್ಥಹಳ್ಳಿ ಕ್ಷೇತ್ರದ ಹಲವೆಡೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಮಾಡಿ ಮಾತನಾಡಿದ ರಾಘವೇಂದ್ರ, ಸೈನಿಕ ಶಾಲೆ ಸ್ಥಾಪನೆ ಸಂಬಂಧ ಕೇಂದ್ರ ರಕ್ಷಣಾ ಸಚಿವ ರಾಜನಾಥ್ಸಿಂಗ್ ಅವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಮಾಡಲಾಗಿದೆ. ಎಲ್ಲ ಸೌಕರ್ಯಗಳೊಂದಿಗೆ ಸೈನಿಕ ಶಾಲೆ ಆರಂಭವಾಗಲಿದ್ದು ತೀರ್ಥಹಳ್ಳಿ ಭಾಗಕ್ಕೆ ವಿಶೇಷ ಆದ್ಯತೆ ಸಿಗಲಿದೆ. ಜೊತೆಗೆ ಶಿವಮೊಗ್ಗದಲ್ಲಿ 350 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ ಶುರುವಾಗಿದೆ. 5000 ಕೋಟಿ ವೆಚ್ಚದಲ್ಲಿ ಶಿವಮೊಗ್ಗ-ತುಮಕೂರು ಜೋಡಿ ರಸ್ತೆ ಈಗಾಗಲೇ ನಡೆಯುತ್ತಿದೆ. ಶಿವಮೊಗ್ಗಕ್ಕೆ ಕೈಗಾರಿಕಾ ಕಾರಿಡಾರ್ ತರುವ ಪ್ರಯತ್ನ ಮಾಡುತ್ತಿದ್ದೇನೆ. ಈ ಮೂಲಕ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳು ಜನರ ಸೇವೆಗೆ ಮುಂದಾಗಿವೆ ಎಂದರು. ತೀರ್ಥಹಳ್ಳಿ ತಾಲೂಕಿನ ವಿವಿಧ ಕಡೆಗಳಲ್ಲಿ ರಸ್ತೆ, ಸೇತುವೆ, ಸಮುದಾಯ ಭವನ ಸೇರಿದಂತೆ ಸುಮಾರು 125 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಚಾಲನೆ ನೀಡಿದರು.
ಬೆಂಗಳೂರು- ಮುಂಬಯಿ ಕೈಗಾರಿಕಾ ಕಾರಿಡಾರ್ ವ್ಯಾಪ್ತಿಗೆ ಶಿವಮೊಗ್ಗ ಜಿಲ್ಲೆ ಸೇರ್ಪಡೆ ಮಾಡಲಾಗಿದ್ದು ವಿಮಾನ, ರೈಲುಯಾನ ಅಭಿವೃದ್ಧಿಪಡಿಸಿ ಉದ್ಯೋಗಾವಕಾಶ ಹೆಚ್ಚಿಸಲಾಗುತ್ತದೆ, ಮಾಚೇನಹಳ್ಳಿಯಲ್ಲಿ ಸ್ಪೈಸ್ಫುಡ್ ಪಾರ್ಕ್ ನಿರ್ಮಾಣಕ್ಕೆ ಸುಮಾರು 200 ಎಕರೆ ಪ್ರದೇಶ ಬೇಕಿದ್ದು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಷ್ಟ್ರದಲ್ಲಿ ಶಿವಮೊಗ್ಗವನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುತ್ತೇನೆ ಎಂದು ಜನತೆಗೆ ಸಭೆಯುದ್ದಕ್ಕೂ ಅಭಯ ನೀಡಿದರು.
ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ತೀರ್ಥಹಳ್ಳಿ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಸುಮಾರು 500 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿಸಲಾಗಿದೆ. ದೇಶದಲ್ಲಿ ಶಿವಮೊಗ್ಗ ಕ್ಷೇತ್ರ ಮಾದರಿಯಾಗಬೇಕು. ಪ್ರತಿ ಹಳ್ಳಿಗೂ ಅನುದಾನ ತಂದಿದ್ದೇವೆ. ಇನ್ನೂ ತರುತ್ತೇವೆ. ಗ್ರಾಮ ಪಂಚಾಯತಿಯಲ್ಲಿ ಈ ಕೆಲಸ ಮುಂದಿಟ್ಟುಕೊಂಡು ಮತ ಕೇಳುತ್ತೇವೆ ಎಂದರು. ಸಭೆಗಳಲ್ಲಿ ಕಾಂಪೋಸ್ಟ್ ಮಂಡಳಿಯ ಉಪಾಧ್ಯಕ್ಷ ಬೇಗುವಳ್ಳಿ ಸತೀಶ್, ಬಿಜೆಪಿ ಅಧ್ಯಕ್ಷ ರಾಘವೇಂದ್ರ ಬಾಳೆಬೈಲು, ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ನಿರ್ದೇಶಕ, ಬಿಜೆಪಿ ನಾಯಕ ಮದನ್, ತಹಶೀಲ್ದಾರ್ ಡಾ.ಶ್ರೀಪಾದ್, ಇಒ ಆಶಾಲತಾ, ಜಿಪಂ ಸದಸ್ಯರಾದ ಶ್ರೀನಿವಾಸ್, ಶರದಿ ಪೂರ್ಣೇಶ, ತಾಲೂಕು ಪಂಚಾಯತ್ ಸದಸ್ಯರಾದ ಚಂದವಳ್ಳಿ ಸೋಮಶೇಖರ್, ಮಂಜುನಾಥ್, ಕುಕ್ಕೆ ಪ್ರಶಾಂತ್ ಸೇರಿದಂತೆ ಬಹುತೇಕ ನಾಯಕರು, ಗ್ರಾಮಸ್ಥರು ಇದ್ದರು. ಮಧ್ಯಾಹ್ನ ಶುರುವಾದ ಕಾಮಗಾರಿ ಗುದ್ದಲಿಪೂಜೆ ತಡರಾತ್ರಿವರೆಗೆ ಮೇಗರವಳ್ಳಿಯಲ್ಲಿ ರಸ್ತೆ ಉದ್ಘಾಟನೆ ಮೂಲಕ ಕೊನೆಗೊಂಡಿತು. ಅಲ್ಲಿಂದ ರಾಘವೇಂದ್ರ ಬೈಂದೂರು ಪ್ರವಾಸ ಬೆಳೆಸಿದರು.
ತೀರ್ಥಹಳ್ಳಿ: ಕಾಂಗ್ರೆಸ್ ಸಂಘಟನೆ ಕೊರತೆಯಿಂದ ದಿನೇ ದಿನೇ ತಣ್ಣಗಾಗುತ್ತಿರುವ ನಡುವೆ ತೀರ್ಥಹಳ್ಳಿಯಲ್ಲಿ ಯುವ ಕಾಂಗ್ರೆಸ್ ಅನಾಥವಾಗಿದೆ. ಕಳೆದ ಕೆಲವು ತಿಂಗಳು ಹಿಂದೆಯೇ ಯುವ ಘಟಕದ ಅಧ್ಯಕ್ಷ ಪ್ರದೀಪ್ ಕೆಳಕೆರೆ ಅವಧಿ ಮುಗಿದು, ಅವರು ಸಂಘಟನೆಯಿಂದ ಜಾರಿಕೊಂಡಿದ್ದಾರೆ. ಇತ್ತ ಬಿಜೆಪಿ, ಮಂಜುನಾಥ ಗೌಡರ ಫಾಸ್ಟ್ ಎಂಟ್ರಿ ನಡುವೆ ಕಾಂಗ್ರೆಸ್ ಸಂಘಟನೆ ಕೊಂಚ ಮಂಕಾದಂತೆ ಕಾಣುತ್ತಿದೆ. ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯಿತಿ ಬಳಿಕ ತಾಲೂಕು, ಜಿಲ್ಲಾ ಪಂಚಾಯತಿ ಚುನಾವಣೆ ಮುಂದಿರುವ ಈ ಹೊತ್ತಲ್ಲಿ ಕಾಂಗ್ರೆಸ್ ನಿದ್ರೆ ಕಾರ್ಯಕರ್ತರ ಬೇಸರಕ್ಕೆ ಕಾರಣವಾಗಿದೆ.
3 ವರ್ಷ ಪೂರೈಸಿದ ಪ್ರದೀಪ್: ಹಿರಿಯ ಕಾಂಗ್ರೆಸ್ ನಾಯಕ ಕೆಳಕೆರೆ ದಿವಾಕರ ಪುತ್ರ ಪ್ರದೀಪ್ 3 ವರ್ಷ ಅವಧಿ ಪೂರೈಸಿ ಹಲವು ತಿಂಗಳುಗಳೇ ಕಳೆದಿದೆ. ಆದರೆ ಯುವ ಘಟಕದ ಪದಾಧಿಕಾರಿಗಳ ನೇಮಕ ನಡೆದಿಲ್ಲ. ಇಬ್ಬರ ನೇಮಕ: ಕಾಂಗ್ರೆಸ್ ಈಗಾಗಲೇ 2 ಬ್ಲಾಕ್ ಮಾಡಿಕೊಂಡು ಪಕ್ಷ ಬಲವರ್ಧನೆಗೆ ಮುಂದಾಗಿದೆ. ಒಂದು ಕಡೆ ಕೆಸ್ತೂರು ಮಂಜುನಾಥ್, ಮತ್ತೊಂದೆಡೆ ಯುವ ನಾಯಕ ಮುಡುಬ ರಾಘವೇಂದ್ರ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಹಾಗೆಯೇ ಯುವ ಘಟಕವನ್ನೂ ಗ್ರಾಮಾಂತರ, ಪಟ್ಟಣ ಎಂದು ಎರಡು ಭಾಗ ಮಾಡಲು ತಯಾರಿ ನಡೆದಿದೆ ಎನ್ನಲಾಗಿದೆ.
ಯಾರಿಗೆ ಹೊಣೆ?: ಗ್ರಾಮ ಪಂಚಾಯತ್ ಮತ್ತು ತಣ್ಣಗಾಗಿರುವ ಪಕ್ಷ ಸಂಘಟನೆ ದೃಷ್ಟಿಯಿಂದ ಈ ನೇಮಕ ಮಹತ್ವ ಪಡೆದಿದೆ. ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಕೆಲವು ಹೆಸರುಗಳು ಚರ್ಚೆಯಲ್ಲಿವೆ. ಪಕ್ಷದಲ್ಲಿ ಕೊಂಚ ಓದಿಕೊಂಡು ಜಾಣ ನಡೆ ಇಡುವ ಆದರ್ಶ ಹುಂಚದಕಟ್ಟೆ ಹೆಸರು ಮುಂಚೂಣಿಯಲ್ಲಿದೆ. ಇನ್ನೊಂದೆಡೆ ಪುಟ್ಟೊಡ್ಲು ರಾಘವೇಂದ್ರ(ತೀಲಿ) ಅವರ ಹೆಸರೂ ಇದೆ. ಇದಲ್ಲದೆ ಪಣಿರಾಜ್ ಕಟ್ಟೆಹಕ್ಕಲು, ಅಮರನಾಥ ಶೆಟ್ಟಿ, ಜಯಕರ ಶೆಟ್ಟಿ, ಪೂರ್ಣೇಶ ಕೆಳಕೆರೆ ಹೆಸರೂ ಕೇಳಿ ಬಂದಿದೆ. ಆದರೆ ಆದಷ್ಟು ಬೇಗ ಕಾಂಗ್ರೆಸ್ ತೀರ್ಥಹಳ್ಳಿ ಹೈಕಮಾಂಡ್ ನೇಮಕ ಮಾಡಬೇಕು, ಗ್ರಾಮ ಮಟ್ಟದಲ್ಲಿ ಸಂಘಟನೆಗೆ ಮುಂದಾಗಬೇಕು ಎಂಬ ಒತ್ತಾಯ ಕಾಂಗ್ರೆಸ್ ಯುವ ನಾಯಕರಿಂದ ಕೇಳಿ ಬಂದಿದೆ. ವಿಶೇಷ ಸುದ್ದಿಗಳನ್ನು ನಮ್ಮೂರ್ಎಕ್ಸ್ಪ್ರೆಸ್.ಇನ್ನಲ್ಲಿ ವೀಕ್ಷಿಸಿ
ಮುಂಬೈ: ಬಾಲಿವುಡ್ ನಟಿ ಮತ್ತು ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಶೀಘ್ರದಲ್ಲಿ ತಾಯಿ ಆಗಲಿದ್ದಾರೆ. 2021ರ ಜನವರಿಯೊಳಗೆ ತಮ್ಮೆಲ್ಲಾ ಶೂಟಿಂಗ್ ಕೆಲಸಗಳನ್ನು ಪೂರ್ಣಗೊಳಿಸಲು ನಿರ್ಧರಿಸಿದ್ದಾರೆ. ಅನುಷ್ಕಾ ಶರ್ಮಾ ಈಗ ತುಂಬು ಗರ್ಭಿಣಿ. ಹಾಗಾಗಿ ಕಳೆದ ಕೆಲವು ತಿಂಗಳುಗಳಿಂದ ಅವರು ಬ್ರೇಕ್ ಪಡೆದುಕೊಂಡಿದ್ದರು. ಜೊತೆಗೆ ಸಿನಿಮಾ ಸಂಬಂಧಿ ಯಾವುದೇ ಕಾರ್ಯಗಳಲ್ಲೂ ಅವರು ತೊಡಗಿಕೊಳ್ಳುತ್ತಿರಲಿಲ್ಲ. ಹಲವು ಸಿನಿಮಾ ಆಫರ್ಗಳು ಇದ್ದರೂ ಕೂಡ ಶೂಟಿಂಗ್ನಿಂದ ದೂರ ಉಳಿದಿದ್ದರು. ಇದೀಗ ಮತ್ತೆ ಶೂಟಿಂಗ್ಗೆ ಅವರು ಮರಳಿದ್ದು ಪ್ರತಿಷ್ಠಿತ ಬ್ರ್ಯಾಂಡ್ಗಳಿಗೆ ರೂಪದರ್ಶಿ ಆಗಿರುವ ಅನುಷ್ಕಾ, ಮುಂಬೈನಲ್ಲಿ ಜಾಹೀರಾತು ಶೂಟಿಂಗ್ವೊಂದರಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ನಿಗದಿಯಾಗಿರುವ ಈ ಏಳು ದಿನಗಳ ಶೂಟಿಂಗ್ ಮುಗಿಸಲಿದ್ದಾರೆ.