Categories
ಆರೋಗ್ಯ

ಹುಷಾರ್..ಮತ್ತೆ ಕರೋನಾ ಹೆಚ್ಚಳ..!

  • ಇಳಿಕೆ ಕಂಡಿದ್ದ ಕೇಸ್ ಒಂದೇ ದಿನದಲ್ಲಿ ಏರಿಕೆ
  • ಒಂದೇ ದಿನ 20 ಮಂದಿ ಸಾವು

ಬೆಂಗಳೂರು: ಕೆಲವು ದಿನಗಳಿಂದ ತಣ್ಣಗಾಗಿದ್ದ ಕರೋನಾ ರಾಜ್ಯದಲ್ಲಿ ಮತ್ತೆ ತನ್ನ ಎರಡನೇ ಅವತಾರ ತೋರಿಸಲು ಶುರು ಮಾಡಿದ್ದಾನೆ. ಶನಿವಾರ ಒಂದೇ ದಿನ 1,781 ಸೋಂಕು ದೃಢಪಟ್ಟಿದ್ದು, ಒಟ್ಟು 871342 ಪ್ರಕರಣಗಳು ವರದಿಯಾಗಿವೆ.
20 ಜನರು ಬಲಿಯಾಗಿದ್ದು, ಒಟ್ಟು ಬಲಿಯಾದವರ ಸಂಖ್ಯೆ 11,641ಕ್ಕೆ ಏರಿಕೆಯಾಗಿದೆ. ಈ ಮೂಲಕ ರಾಜ್ಯದಲ್ಲಿ 24,714 ಸಕ್ರಿಯ ಪ್ರಕರಣಗಳು ಇವೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಚಳಿ ಹೆಚ್ಚಾದಂತೆ ಕರೋನಾ ಕೂಡ ಹೆಚ್ಚಾಗುತ್ತಿದೆ. ಡಿಸೆಂಬರ್ ವೇಳೆಗೆ ಮತ್ತಷ್ಟು ಪ್ರಕರಣಗಳು ಹೆಚ್ಚಾಗಲಿದೆ ಎಂದು ಹೇಳಲಾಗಿದೆ.

Categories
ಬೆಂಗಳೂರು

ಮಲೆನಾಡಿನ “ಅರಣ್ಯ ಖಾಸಗಿ ಕೈಗೆ”!

  • ಸರ್ಕಾರದ ನಿರ್ಧಾರಕ್ಕೆ ಸಿದ್ದರಾಮಯ್ಯ ಸಿಟ್ಟು
  • ತಕ್ಷಣ ಹಿಂಪಡೆಯುವಂತೆ ಸಿಎಂಗೆ ಪತ್ರ

ಬೆಂಗಳೂರು: ಮಲೆನಾಡಿನ ಅರಣ್ಯ ಪ್ರದೇಶವನ್ನು ಖಾಸಗಿ ಸಂಸ್ಥೆಗಳಿಗೆ ನೀಡುವ ನಿರ್ಧಾರ ಇದೀಗ ಮಲೆನಾಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಲ್ಲದೆ ರಾಜ್ಯ ರಾಜಕೀಯದ ಹೊಸ ವಸ್ತುವಾಗಿದೆ. ಬಿಜೆಪಿ ಸರ್ಕಾರದಲ್ಲಿ ಹಿಡಿತ ಇರುವ ಮುಖ್ಯಮಂತ್ರಿ ಆಪ್ತರು ಈ ಡೀಲ್ ಹಿಂದೆ ಇದ್ದಾರೆ ಎಂಬ ಊಹಾಪೋಹದ ನಡುವೆ ನಿರ್ಧಾರ ಹಿಂತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.


ವಿಶ್ವದ ಪಾರಂಪರಿಕ ಕಾಡು ಹೊಂದಿರುವ ಮಲೆನಾಡು ಪ್ರದೇಶದ ಅರಣ್ಯ ಭೂಮಿಯನ್ನು ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸಲು ಸರ್ಕಾರ ಚಿಂತನೆ ನಡೆಸುತ್ತಿರುವುದು ದುರದೃಷ್ಟಕರ. 1980ರಲ್ಲಿ ಭದ್ರಾವತಿ ಎಂಪಿಎಂ ಕಾರ್ಖಾನೆಗೆ 40 ವರ್ಷಗಳ ಸೀಮಿತ ಅವಧಿಗೆ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸೇರಿದ ಅರಣ್ಯ ಪ್ರದೇಶ ಲೀಸ್‍ಗೆ ನೀಡಲಾಗಿತ್ತು. ಲೀಸ್ ಅವಧಿ ಮುಗಿದ ಕೂಡಲೇ ಈ ಪ್ರದೇಶ ಅರಣ್ಯ ಇಲಾಖೆಗೆ ಹಿಂತಿರುಗಿಸಬೇಕು ಎನ್ನುವ ಷರತ್ತು ವಿಧಿಸಲಾಗಿತ್ತು. ಪ್ರಸಕ್ತ ವರ್ಷ ಆಗಸ್ಟ್ ತಿಂಗಳಿನಲ್ಲಿ ಲೀಸ್ ಅವಧಿ ಮುಗಿದಿದೆ. ಎಂಪಿಎಂ ಕಾರ್ಖಾನೆ ಸ್ಥಗಿತವಾಗಿ ವರ್ಷಗಳೇ ಕಳೆದಿವೆ. ಹಾಗಾಗಿ ನಿಯಮಾನುಸಾರ ನೆಡುತೋಪುಗಳನ್ನು ಅರಣ್ಯ ಇಲಾಖೆಗೆ ಹಿಂತಿರುಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಮೂಲಕ ಸರ್ಕಾರದ ನಿರ್ಧಾರಕ್ಕೆ ದೊಡ್ಡ ಸವಾಲು ಎದುರಾಗಿದೆ. ಮತ್ತೆ ಮಲೆನಾಡಿನಲ್ಲಿ ಜನರಿಗೆ ಕಿರಿಕಿರಿ ಆಗಿದ್ದ ಅಕೇಶಿಯಾ ಹಟಾವೋ ಹೋರಾಟಕ್ಕೂ ಬಲ ಬಂದಂತಾಗಿದೆ.
ಅರಣ್ಯ ಪ್ರದೇಶವನ್ನು ಖಾಸಗಿಯವರಿಗೆ ನೀಡುವುದರ ವಿರುದ್ಧ ಮಲೆನಾಡಿನ ಜಿಲ್ಲೆಗಳಲ್ಲಿ ಪ್ರತಿಭಟನೆಗಳೂ ಆರಂಭವಾಗಿದೆ. ಪ್ರಗತಿಪರರು, ಪರಿಸರ ಹೋರಾಟಗಾರರು, ಜನಸಾಮಾನ್ಯರೂ ಆತಂಕ ವ್ಯಕ್ತಪಡಿಸಿ, ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದರೂ ಸರ್ಕಾರ ಮಲೆನಾಡಿನ ಜನಜೀವನ, ಭವಿಷ್ಯದ ಜೊತೆಗೆ ಆಡವಾಡುತ್ತಿದೆ ಎಂದು ದೂರಿದ್ದಾರೆ. ಇದು ಈಗ ದೊಡ್ಡ ಸುದ್ದಿಯಾಗುತ್ತಿದೆ.

Categories
ಬೆಂಗಳೂರು

ಭೋಜಪುರಿ ಚಿತ್ರರಂಗಕ್ಕೆ ಕಾಲಿಟ್ಟ ಹರ್ಷಿಕಾ!

  • ಕನ್ನಡದ ಫೇಮಸ್ ನಟಿ ಈಗ ಉತ್ತರ ಭಾರತಕ್ಕೆ…

ಬೆಂಗಳೂರು: ಕನ್ನಡ, ತಮಿಳು, ತೆಲುಗು, ಕೊಡವ, ಮಲಯಾಳಂ ಸೇರಿದಂತೆ ಈಗಾಗಲೇ ಹಲವು ಭಾಷೆಗಳಲ್ಲಿ ನಟಿಸಿರುವ ಕನ್ನಡದ ಹುಡುಗಿ ನಟಿ ಹರ್ಷಿಕಾ ಪೂಣಚ್ಚ ಭೋಜಪುರಿ ಭಾಷೆಯ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.
ಭೋಜ್‍ಪುರಿ ಚಿತ್ರರಂಗದ ಸೂಪರ್ ಸ್ಟಾರ್ ನಟ ಪವನ್ ಸಿಂಗ್ ಸಿನಿಮಾದ ನಾಯಕರಾಗಿದ್ದು, ಈ ಸಿನಿಮಾ ಭೋಜ್‍ಪುರಿ ಜೊತೆಗೆ ಹಿಂದಿ ಭಾಷೆಯಲ್ಲಿ ಸಹ ಬಿಡುಗಡೆ ಆಗಲಿದೆ. ಸಿನಿಮಾದ ಚಿತ್ರೀಕರಣ ಶೇ.50ರಷ್ಟು ಪೂರ್ಣವಾಗಿದೆ. ಸಂಪೂರ್ಣ ಚಿತ್ರೀಕರಣ ಲಂಡನ್‍ನಲ್ಲಿಯೇ ನಡೆಯಲಿದೆ.
ಹರ್ಷಿಕಾ ಈಗ ಸಿನಿಮಾ ಅರ್ಧ ಭಾಗದ ಚಿತ್ರೀಕರಣವನ್ನೂ ಮುಗಿಸಿದ್ದಾರೆ. ಭೋಜಪುರಿಯಲ್ಲಿ ಸಾಕಷ್ಟು ಸಿನಿಮಾ ಮಾಡಿರುವ ಪವನ್ ಸಿಂಗ್ ಈ ಚಿತ್ರದ ನಾಯಕ. ಯಾಶಿ ಪೆÇ್ರಡಕ್ಷನ್ಸ್‍ನಲ್ಲಿ ಅಭಯ್ ಸಿನ್ಹಾ ಎಂಬುವವರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

Categories
ರಾಜಕೀಯ

ಸಚಿವ ಸಂಪುಟ 2 ದಿನದಲ್ಲಿ ಕ್ಲೈಮಾಕ್ಸ್?

  • ಸಂತೋಷ್ ಜೀ ಭೇಟಿ ಮಾಡಿದ ಜಾರಕಿಹೊಳಿ
  • ಕರಾವಳಿ ನಾಯಕನಿಗೆ ಸಿಎಂ ಹುದ್ದೆ: ವದಂತಿ

ಬೆಂಗಳೂರು: ರಾಜ್ಯ ಸಚಿವ ಸಂಪುಟ ಸರ್ಕಸ್ ಇನ್ನೂ ಮುಗಿಯುವ ಹಾಗೆ ಕಾಣುತ್ತಿಲ್ಲ. ಇಲ್ಲಿ ಜನ ಕರೋನದ ಎಫೆಕ್ಟ್‍ನಿಂದ ಸಾಯುತ್ತಿದ್ದಾರೆ. ತುತ್ತು ಅನ್ನಕ್ಕೂ ಪರದಾಟ ನಡೆಸುತ್ತಿದ್ದಾರೆ. ಆದರೆ ಜನಪ್ರತಿನಿಧಿಗಳು ಮಾತ್ರ ಕುರ್ಚಿಗಾಗಿ ಕಾದಾಟ ನಡೆಸುತ್ತಿದ್ದಾರೆ. ಈ ನಡುವೆ ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಿ ಬಂದಿದ್ದು, ಇನ್ನೆರಡು ಮೂರು ದಿನಗಳಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಈ ಮೂಲಕ ಕ್ಲೈಮಾಕ್ಸ್ ಸುಳಿವು ನೀಡಿದ್ದಾರೆ. ಆದರೆ ಯಾರಿಗೆ ಸ್ಥಾನ ಸಿಗುತ್ತೆ ಎಂಬ ಕುತೂಹಲ ಬಿಟ್ಟು ಕೊಟ್ಟಿಲ್ಲ.


ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಸದ್ಯದಲ್ಲಿಯೇ ಹೊಸ ಸಚಿವರು ಯಾರು? ಯಾರಿಗೆ ಯಾವ ಖಾತೆ ಎನ್ನುವುದು ಗೊತ್ತಾಗಲಿದೆ.
ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ರೇಣುಕಾಚಾರ್ಯ ಸಭೆ ನಡೆಸಿದರ ಬಗ್ಗೆ ಕೇಳಿದ ಪ್ರಶ್ನೆಗೆ, ಎಲ್ಲಾ ಶಾಸಕರು ಸೇರಿ ಸಭೆ ನಡೆಸುವುದು ಸಾಮಾನ್ಯ ಎಂದು ಪ್ರತಿಕ್ರಿಯಿಸಿದರು.
ಸಚಿವ ಸಂಪುಟ ವಿಸ್ತರಣೆ ಸಂಬಂಧ ಬುಧವಾರ ದೆಹಲಿಗೆ ತೆರಳಿದ್ದ ಸಿಎಂ ಯಡಿಯೂರಪ್ಪ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ 20 ನಿಮಿಷಗಳ ಕಾಲ ಚರ್ಚೆ ನಡೆಸಿ ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ.


ಯಡಿಯೂರಪ್ಪ ಅವರು ನಡ್ಡಾ ಅವರಿಗೆ ಸಂಪುಟ ವಿಸ್ತರಣೆಗೆ ಅನುಮತಿ ಕೋರಿದ್ದಾರೆ. ಜೊತೆಗೆ ಸಚಿವಾಕಾಂಕ್ಷಿಗಳ ಪಟ್ಟಿಯನ್ನು ಅಧ್ಯಕ್ಷರಿಗೆ ಸಲ್ಲಿಸಿದ್ದಾರೆ. ಆದರೆ ಹೈಕಮಾಂಡ್ ವರಿಷ್ಠರು ಇನ್ನು ಯಾವುದೇ ಅಂತಿಮ ತೀರ್ಮಾನವನ್ನು ತಿಳಿಸಿಲ್ಲ
ಜಾರಕಿಹೊಳಿ ಭೇಟಿ: ಹಿರಿಯ ನಾಯಕ ಸಂತೋಷ್ ಜೊತೆಗೆ ರಮೇಶ್ ಜಾರಕಿಹೊಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಭೇಟಿ ಮಾಡಿ ಯೋಗೀಶ್ವರ್ ಹಾಗೂ ಇತರರಿಗೆ ಸಚಿವ ಸ್ಥಾನವನ್ನು ಕೊಡಿಸುವ ಪ್ರಯತ್ನ ಮುಂದುವರೆಸಿದ್ದಾರೆ ಎನ್ನಲಾಗಿದೆ.
ವದಂತಿ: ಕರಾವಳಿಯ ನಾಯಕರೊಬ್ಬರು ಸಿಎಂ ಆಗ್ತಾರೆ ಎಂಬ ವದಂತಿ ಕರಾವಳಿ ಭಾಗದಲ್ಲಿ ಹಬ್ಬಿದೆ. ಕೇಂದ್ರ ಸಚಿವ ಸದಾನಂದ ಗೌಡರೋ…ಪಕ್ಷದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರೋ ಎಂಬ ಬಗ್ಗೆ ಚರ್ಚೆ ಎದ್ದಿದೆ. ಆದರೆ ಇದು ವದಂತಿ ಎಂಬ ಮಾತು ಕೇಳಿ ಬಂದಿದೆ.

Categories
ಮಲ್ನಾಡ್

ನಿಧಿಗಾಗಿ ದೇವಿಯನ್ನೇ ದ್ವಂಸ ಮಾಡಿದರು!

  • ಐತಿಹಾಸಿಕ ಬೇಲೂರು ದೇಗುಲದಲ್ಲಿ ಘಟನೆ

ಹಾಸನ: ಮನುಷ್ಯ ತನ್ನ ಆಸೆಗೆ ದೇವರನ್ನು ಬಿಡುತ್ತಿಲ್ಲ. ಹೌದು. ಐತಿಹಾಸಿಕ ಬೇಲೂರು ದೇಗುಲದಲ್ಲಿ ದುಷ್ಕರ್ಮಿಗಳು ನಿಧಿಗಾಗಿ ಮಹಾಕಾಳಿ ವಿಗ್ರವನ್ನು ಧ್ವಂಸ ಮಾಡಿದ್ದಾರೆ.
ಬೇಲೂರು ತಾಲ್ಲೂಕಿನ ದೊಡ್ಡಗದ್ದವಳ್ಳಿಯಲ್ಲಿರುವ ಐತಿಹಾಸಿಕ ಲಕ್ಷ್ಮಿ ದೇವಸ್ಥಾನ್ಕೆ ಮಂಗಳವಾರ ತಡರಾತ್ರಿ ನುಗ್ಗಿ ಈ ಕೃತ್ಯ ಎಸಗಿದ್ದಾರೆ. ದೇಗುಲ ಗ್ರಾಮದ ಹೊರಗೆ ಇರುವುದರಿಂದ ರಾತ್ರಿ ಯಾರೂ ಇಲ್ಲದ ವೇಳೆ ದುಷ್ಕರ್ಮಿಗಳು ದೇಗುಲದ ಬಾಗಿಲನ್ನು ಮುರಿದು ಒಳಗೆ ನುಗ್ಗಿದ್ದಾರೆ.


ಸುಮಾರು 800 ವರ್ಷಗಳಷ್ಟು ಹಳೆಯದಾದ ಲಕ್ಷ್ಮೀ ದೇಗುಲವನ್ನು ಹೊಯ್ಸಳ ವಂಶಸ್ಥರು ನಿರ್ಮಿಸಿದ್ದರು. ದೇಗುಲವನ್ನು ರಾಷ್ಟ್ರೀಯ ಸ್ಮಾರಕವಾಗಿ ಗುರುತಿಸಲಾಗಿದ್ದು, ಕೇಂದ್ರ ಪುರಾತತ್ವ ಇಲಾಖೆ ಅಧೀನದಲ್ಲಿ ಈ ದೇಗುಲವಿದೆ. ದೇಗುಲದಲ್ಲಿನ ವಿಶೇಷ ವಿಗ್ರಹಗಳು ಮತ್ತು ಕಲ್ಲಿನ ಕೆತ್ತನೆಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Categories
ಬೆಂಗಳೂರು

ಭಾರತಕ್ಕೆ ಲಸಿಕೆ ಸುಸೂತ್ರ..!

  • ಕರೋನಾ ಲಸಿಕೆ ತಯಾರಿಕೆಗೆ ಒಪ್ಪಂದ

ನವದೆಹಲಿ: ಭಾರತದಲ್ಲಿ ಕರೋನಾ ವೈರಸ್ ಕಡಿವಾಣ ಮತ್ತು ಲಸಿಕೆ ಉತ್ಪಾದನೆ ಬಗ್ಗೆ ಮಹತ್ವದ ಸಭೆ ಸರ್ಕಾರ ನಡೆಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಸಭೆಯಲ್ಲಿ ಕರೋನಾ ಲಸಿಕೆ ಅಭಿವೃದ್ಧಿ, ಲಸಿಕೆ ಪ್ರಗತಿ, ನಿಯಂತ್ರಕ ಅನುಮೋದನೆ ಮತ್ತು ಸಂಗ್ರಹಣೆಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ವಿದೇಶದಲ್ಲಿ ಹಲವು ಕಂಪನಿಗಳು ಲಸಿಕೆ ಸಂಶೋಧಿಸುವಲ್ಲಿ ತೊಡಗಿವೆ. ಕೆಲವು ಭಾರತೀಯ ಕಂಪನಿಗಳು ಕೂಡಾ ಅಂಥ ವಿದೇಶಿ ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಂಡಿವೆ. ಪುಣೆ ಮೂಲದ ಸೆರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ ವೈದ್ಯಕೀಯ ಪ್ರಯೋಗಗಳನ್ನು ನಡೆಸುತ್ತಿದ್ದು, ಇದರ ಜೊತೆಗೆ ಲಸಿಕೆ ತಯಾರಿಕೆ ಮಾಡುತ್ತಿದೆ. ಹೀಗಿದ್ದರೂ ಕೂಡಾ ಡಾ. ರೆಡ್ಡೀಸ್ ಅವರ ಪ್ರಯೋಗಾಲಯಗಳಲ್ಲಿ ವೈದ್ಯಕೀಯ ಪ್ರಯೋಗಗಳನ್ನು ನಡೆಸಲು ಮತ್ತು ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ ವಿತರಣೆಗೆ ಒಪ್ಪಂದ ಮಾಡಿಕೊಂಡಿದೆ. ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ತಮ್ಮ ಲಸಿಕೆಗಳನ್ನು ತಯಾರಿಸಲು ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದ ಅಸ್ಟ್ರಾಜೆನಿಕಾ, ಕೊಡಾಜೆನಿಕ್ಸ್ ಮತ್ತು ನೊವಾವಾಕ್ಸ್‍ನೊಂದಿಗೆ ಮಾದರಿಯ ಲಸಿಕೆ ಸಂಶೋಧನೆಯಲ್ಲಿ ಸಹಭಾಗಿತ್ವವನ್ನು ಹೊಂದಿದೆ. ಹೈದ್ರಾಬಾದ್ ಮೂಲದ ಬಯೋಲಾಜಿಕಲ್-ಇ ಲಿಮಿಟೆಡ್ ಕಂಪನಿಯು ಯುಎಇ ಮೂಲದ ಡೈನಾವ್ಯಾಕ್ಸ್ ಟೆಕ್ನಾಲಜೀಸ್ ಕಾಪೆರ್Çೀರೇಷನ್ ಮತ್ತು ಬೈಯ್ಲರ್ ಕಾಲೇಜು ಆಫ್ ಮೆಡಿಸನ್ ಜೊತೆಗೆ ಕರೋನಾ ಲಸಿಕೆ ಸಂಶೋಧನಾ ಕಾರ್ಯದಲ್ಲಿ ಕೈಜೋಡಿಸಿದೆ. ಹೀಗಾಗಿ ಭಾರತದಲ್ಲಿ ಲಸಿಕೆ ಸಿಗಲಿದೆ ಎಂಬ ಆಶಾಭಾವನೆಯನ್ನು ಸರ್ಕಾರ ವ್ಯಕ್ತಪಡಿಸಿದೆ.

Categories
ಅಂತಾರಾಷ್ಟ್ರೀಯ ಸುದ್ದಿ

ಕರೋನಾ ಲಸಿಕೆ ಬೇಗ ಸಿಗೋದು ಡೌಟು?

  • ಲಸಿಕೆ ಪ್ರಯೋಗ, ತಯಾರಿಕೆ ಹಂತದಲ್ಲಿ ಹಲವು ಅಡತಡೆ

ನ್ಯೂಯಾರ್ಕ್: ವಿಶ್ವವನ್ನೇ ಜೀವ ಭಯಕ್ಕೆ ತಳ್ಳಿರುವ ಕರೋನಾ ಮಹಾಮಾರಿಗೆ ಇನ್ನೂ ಲಸಿಕೆ ಸಿದ್ಧಗೊಂಡಿಲ್ಲ. ಯಾವ ದೇಶ ಯಶಸ್ವಿ ಲಸಿಕೆ ಕಂಡು ಹಿಡಿಯುತ್ತೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಹಲವು ದೇಶಗಳು ಲಸಿಕೆ ಉತ್ಪಾದನೆಯಲ್ಲಿ ತೊಡಗಿವೆ. ಡಿಸೆಂಬರ್ ಅಥವಾ 2021ರ ಮಧ್ಯದೊಳಗೆ ಲಸಿಕೆ ಸಿಗುವುದು ಅನುಮಾನ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ಮೂಲಕ ಮತ್ತಷ್ಟು ಜಾಗೃತರಾಗಿರಲು ಸೂಚನೆ ನೀಡಿದೆ.
ಜನರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತದೆ. ಲಸಿಕೆ ಕಂಪನಿಯಲ್ಲಿ ಮುಂಚೂಣಿಯಲ್ಲಿರುವ ಮೂರನೇ ಹಂತದ ಪ್ರಯೋಗ ನಡೆಸುತ್ತಿರುವವರು ವೈಯಕ್ತಿಕ ಲಸಿಕೆಗಳ ಪರಿಣಾಮಕಾರಿತ್ವ ಮತ್ತು ಸುರಕ್ಷತೆಯನ್ನು ಮೌಲ್ಯಮಾಪನ ಮಾಡಲು ಹಲವು ತಿಂಗಳು ಬೇಕಾಗಲಿವೆ. ಪ್ರಯೋಗ ಪೂರ್ಣಗೊಂಡ ಬಳಿಕ ಪರವಾನಗಿ, ಬಳಕೆಗೆ ಅಧಿಕಾರ ಮತ್ತು ಸಾಮೂಹಿಕ ಉತ್ಪಾದನೆಗೆ ತೆಗೆದುಕೊಂಡ ಸಮಯದ ಬಗ್ಗೆ ಮಾಹಿತಿ ಲಭ್ಯವಾಗಲಿದೆ. ಕೆಲವೊಂದು ಲಸಿಕೆಗಳಿಗೆ ಅನುದಾನದ ಕೊರತೆ ಇದೆ ಎಂದು ಹೇಳಲಾಗಿದೆ.


ಕೋವ್ಯಾಕ್ಸ್ ಪಡೆಯಲು 184 ದೇಶಗಳು ಸಹಿ ಹಾಕಿವೆ. 92 ಕಡಿಮೆ ಆದಾಯ ಇರುವ ದೇಶಗಳು ಕೂಡ ಸೇರಿವೆ. ಆಕ್ಸ್‍ಫರ್ಡ್ ಯೂನಿವರ್ಸಿಟಿಯ ಆಸ್ಟ್ರಾಜೆನೆಕಾ, ಸಿನೋವಾಕ್, ಸಿನೋಫಾರ್ಮ್, ಕ್ಯಾನ್ಸಿನೋ, ಸ್ಪುಟ್ನಿಕ್ ಗಿ, ಮಾಡೆರ್ನಾ ಲಸಿಕೆಗಳು ಪ್ರಯೋಗವನ್ನು ನಡೆಸುತ್ತಿವೆ. ಹೀಗಾಗಿ ಯಾವ ಲಸಿಕೆ ಪರಿಣಾಮಕಾರಿ ಎಂಬುದು ಇನ್ನೂ ಗೊಂದಲ ಇದೆ. ಹೀಗಾಗಿ 2021ರ ಮಧ್ಯ ಭಾಗದಲ್ಲಿ ಲಸಿಕೆ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ ಎಂದು ವಿಶ್ವ ಸಂಸ್ಥೆ ಹೇಳಿದೆ.

Categories
ಬೆಂಗಳೂರು

ಮದುವೆಗೆ 200 ಜನ ಮಾತ್ರ!

  • ಹೆಚ್ಚುಜನ ಸೇರಿದರೆ ಆಯೋಜಕರ ಮೇಲೆ ಕೇಸ್

ಬೆಂಗಳೂರು: ಚಳಿ ಹೆಚ್ಚಾದಂತೆ ಮತ್ತೆ ಕರೋನಾ ಹಾವಳಿ ಹೆಚ್ಚಾಗುತ್ತಿದೆ. ಈ ನಡುವೆ ವಿಶ್ವದ ಹಲವು ದೇಶಗಳಲ್ಲಿ ಮತ್ತೆ ಲಾಕ್ ಡೌನ್ ಶುರುವಾಗಿದೆ. ಇನ್ನು ಗುಜರಾತ್ ರಾಜಧಾನಿ ಅಹಮದಾಬಾದ್‍ನಲ್ಲಿ ರಾತ್ರಿ ಕಪ್ರ್ಯೂ ಜಾರಿಗೊಳಿಸಲಾಗಿದೆ. ಈ ಮುಳಕ ಕರೋನಾ ಮತ್ತೊಂದು ಮುಖ ಅನಾವರಣಗೊಳ್ಳುತ್ತಿದೆ.


ಮತ್ತೆ ನಿಯಮ ಜಾರಿ?: ಜನ ಕರೋನಾ ಭಯ ಬಿಟ್ಟು ಸಹಜ ಬದುಕಿಗೆ ಮರಳುತ್ತಿದ್ದಾರೆ. ಬದುಕಿನ ಬಂಡಿ ಎಳೆಯಲು ಸಿದ್ಧರಾಗಿದ್ದಾರೆ. ಈ ನಡುವೆ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರಿಂಗ್ ಮರೆತಿದ್ದಾರೆ. ಇದೇ ಕರೋನಾ ಹೆಚ್ಚಳಕ್ಕೂ ಕಾರಣವಾಗಿದೆ. ಇತ್ತ ಹಾಸನ ಜಿಲ್ಲೆಯಲ್ಲಿ ಮದುವೆ ಸಮಾರಂಭಗಳಲ್ಲಿ 200ಕ್ಕೂ ಹೆಚ್ಚು ಮಂದಿ ಸೇರುವಂತಿಲ್ಲ” ಎಂದು ಶುಕ್ರವಾರ ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದ್ದಾರೆ.


ಹಾಸನ ಜಿಲ್ಲೆಯ ಕಲ್ಯಾಣ ಮಂಟಪ ಹಾಗೂ ಹೋಟೆಲ್‍ಗಳಲ್ಲಿ ವಿವಾಹ ಹಾಗೂ ಇತರೆ ಕಾರ್ಯಕ್ರಮಗಳಲ್ಲಿ 200ಕ್ಕೂ ಹೆಚ್ಚು ಮಂದಿ ಸೇರುತ್ತಿರುವುದು ಗಮನಕ್ಕೆ ಬಂದಿದೆ. ಹೆಚ್ಚು ಜನರು ಸೇರುವ ಯಾವುದೇ ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನಿಂಗ್ ಮತ್ತು ಕೈ ತೊಳೆಯುವುದು ಕಡ್ಡಾಯವಾಗಿದೆ. ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡದಿರುವುದು ಕಂಡುಬಂದಲ್ಲಿ ಅಂತಹ ಹೋಟೆಲ್ ಅಥವಾ ಕಲ್ಯಾಣ ಮಂಟಪದ ಮಾಲೀಕರ ಮೇಲೆ ಹಾಗೂ ಕಾರ್ಯಕ್ರಮದ ಆಯೋಜಕರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡೀಸಿ ಹೇಳಿದ್ದಾರೆ. ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದರೆ ವಿಪತ್ತು ನಿರ್ವಹಣಾ ಕಾಯ್ದೆ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದೂ ತಿಳಿಸಿದ್ದಾರೆ. ಈ ಮೂಲಕ ಎಲ್ಲಾ ಜಿಲ್ಲೆಗಳಲ್ಲಿ ಕಾನೂನು ಜಾರಿಯಾಗುವ ಸಾಧ್ಯತೆಗಳಿವೆ.

Categories
ದಾವಣಗೆರೆ

ಅಜ್ಜಂಪುರದಲ್ಲಿ ಗುಂಪು ಘರ್ಷಣೆ

  • ಓಮ್ನಿ ವಾಹನ ಬೆಂಕಿಗಾಹುತಿ

ಚಿಕ್ಕಮಗಳೂರು: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದು, ಪಿಡಿಒ ಒಬ್ಬರ ಓಮ್ನಿ ವಾಹನಕ್ಕೆ ಬೆಂಕಿ ಹಚ್ಚಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲ್ಲೂಕಿನ ಶಂಭೈನೂರು ಗ್ರಾಮದಲ್ಲಿ ನಡೆದಿದೆ.


ಬಸಾಪುರ ಗ್ರಾಮದದಲ್ಲಿ ಕಲ್ಲೇಶಪ್ಪ ಎಂಬುವವರು ರಾಗಿ ಬೆಳೆದಿದ್ದು, ಅದೇ ಬಗರ್ ಹುಕುಂ ಜಮೀನಿನಲ್ಲಿ ಪಿಡಿಒ ಹನುಮಂತಪ್ಪ ಎಂಬುವವರು ರಾಗಿ ಕಟಾವು ಮಾಡಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಬುಧವಾರ ಸಂಜೆ 2 ಕುಟುಂಬಗಳ ನಡುವೆ ಮಾರಾಮಾರಿ ನಡೆದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಪಿಡಿಒ ಹನುಮಂತಪ್ಪನವರ ಓಮ್ನಿ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. ಇನ್ನೂ ಬೆಂಕಿ ಹಚ್ಚಿದ ಹಿನ್ನೆಲೆ ಗಂಟೆಗೂ ಹೆಚ್ಚು ಕಾಲ ಓಮ್ನಿ ವಾಹನ ಹೊತ್ತಿ ಉರಿದಿದ್ದು, ಗ್ರಾಮಸ್ಥರಲ್ಲಿ ಕೆಲ ಕಾಲ ಭಯದ ವಾತಾವರಣ ನಿರ್ಮಾಣವಾಯಿತು. ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ದೂರು ಹಾಗೂ ಕೊಲೆಗೆ ಯತ್ನದ ಪ್ರತಿದೂರು ದಾಖಲಾಗಿದೆ. ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ. ಪಿಡಿಒ ಹನುಮಂತಪ್ಪ ಅವರ ಮೇಲೆ ಶಾಂತಿ ಕದಡಿದ ಆರೋಪದಡಿ ದೂರು ದಾಖಲಾಗಿದೆ. ಹಿಂದೆ ದಾಖಲಾಗಿರುವ ಮೂರು ಪ್ರಕರಣ ಬಾಕಿ ಇವೆ. ಇವರ ವಿರುದ್ಧ ಶಿಸ್ತು ಕ್ರಮಕ್ಕೆ ಪಂಚಾಯತ್ ರಾಜ್ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಪೆÇಲೀಸ್ ವರಿಷ್ಟಾಧಿಕಾರಿ ತಿಳಿಸಿದ್ದಾರೆ.

Categories
ಅಂತಾರಾಷ್ಟ್ರೀಯ ಸುದ್ದಿ

ಹೆಸರಿಗೆ ಅವಮಾನ ಮಾಡಿದ್ರೆ ಶಿಕ್ಷೆ!

  • ಯೂಟ್ಯೂಬರ್ ವಿರುದ್ಧ 500 ಕೋಟಿ ಮಾನನಷ್ಟ ಕೇಸ್
  • ನಟ ಅಕ್ಷಯ್ ಕುಮಾರ್ ಹೆಸರಿಗೆ ಅವಮಾನ ಆರೋಪ

ಮುಂಬೈ: ಯಾರದೋ ಹೆಸರನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಬಳಸುವ ಮುನ್ನ ಹುಷಾರ್..!. ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ತಮ್ಮ ಹೆಸರನ್ನು ಬೆಳೆಸಿದ ರಶೀದ್ ಸಿದ್ದಿಕಿ ಎಂಬ ಯೂಟ್ಯೂಬರ್ ವಿರುದ್ಧ 500 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಸಿದ್ಧಕಿ ನಾಲ್ಕು ತಿಂಗಳ ಅವಧಿಯಲ್ಲಿ ಸುಮಾರು 15 ಲಕ್ಷ ರೂ.ಗಳಿಸಿದ್ದಾರೆ. ಅವರ ಫಾಲೋವರ್ಸ್‍ಗಳು 2 ಲಕ್ಷದಿಂದ 3 ಲಕ್ಷಕ್ಕೆ ಹೆಚ್ಚಾಗಿದ್ದರು.


ಈ ಪ್ರಕರಣದಲ್ಲಿ ನಕಲಿ ಸುದ್ದಿ ಹರಡಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ ಸಚಿವ ಆದಿತ್ಯ ಠಾಕ್ರೆ ಅವರ ಹೆಸರನ್ನು ಎಳೆದಿದ್ದಕ್ಕಾಗಿ ರಶೀದ್ ಸಿದ್ದಿಕಿ ಎಂಬಾತನ್ನು ಈ ಹಿಂದೆ ಬಂಧಿಸಲಾಗಿತ್ತು. ಜನರನ್ನು ದಾರಿ ತಪ್ಪಿಸಲು ಮತ್ತು ಹಲವಾರು ಪ್ರಸಿದ್ಧ ವ್ಯಕ್ತಿಗಳ ಬಗ್ಗೆ ನಕಲಿ ಸುದ್ದಿಗಳನ್ನು ಹರಡಲು ಯೂಟ್ಯೂಬರ್ ಡಿಜಿಟಲ್ ಮಾಧ್ಯಮವನ್ನು ಬಳಸಲಾಗಿದೆ. ತಮ್ಮ ವೀಡಿಯೊಗಳಲ್ಲಿ ಹಲವಾರು ಸಂದರ್ಭಗಳಲ್ಲಿ ಅಕ್ಷಯ್ ಎಂದು ಹೆಸರಿಸಿದ್ದಾರೆ ಮತ್ತು ವಿವಿಧ ಆರೋಪಗಳನ್ನು ಮಾಡಿದ್ದಾರೆ.
ಸುಶಾಂತ್ ಅವರು “ಎಂಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿ” ನಂತಹ ದೊಡ್ಡ ಚಿತ್ರದಲ್ಲಿ ನಟಿಸಿದ್ದು ಅಕ್ಷಯ್ ಅಸಮಾಧಾನ ಹೊಂದಿದ್ದರು. ಅಕ್ಷಯ್ ಕುಮಾರ್ ಅವರು ಆದಿತ್ಯ ಠಾಕ್ರೆ ಮತ್ತು ಮುಂಬೈ ಪೆÇಲೀಸರೊಂದಿಗೆ “ರಹಸ್ಯ ಸಭೆ” ನಡೆಸಿದ್ದಾರೆ ಎಂದು ವೀಡಿಯೋವೊಂದರಲ್ಲಿ ಆರೋಪಿಸಿದ್ದರು.


ಬಿಹಾರ ಮೂಲದ ಸಿವಿಲ್ ಎಂಜಿನಿಯರ್ ರಶೀದ್ ಸಿದ್ದಿಕಿ ಅವರ ಮೇಲೆ ಮಾನಹಾನಿ, ಸಾರ್ವಜನಿಕ ಕಿಡಿಗೇಡಿತನ ಮತ್ತು ಉದ್ದೇಶಪೂರ್ವಕ ಅವಮಾನ ಆರೋಪವಿದೆ. ಸಿದ್ದಿಕಿ ಅವರು ಅಕ್ಷಯ್ ಅವರನ್ನು ದಿವಂಗತ ನಟ ಸುಶಾಂತ್ ಅವರ ಗೆಳತಿ, ನಟಿ ರಿಯಾ ಚಕ್ರವರ್ತಿಯೊಂದಿಗೆ ಸಂಪರ್ಕ ಹೊಂದಿದ್ದರು, ರಿಯಾ ಕೆನಡಾಕ್ಕೆ ತಪ್ಪಿಸಿಕೊಳ್ಳಲು ನಟ ಸಹಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ.