Categories
ಕರಾವಳಿ

ಶಿಕ್ಷಣ ಕ್ಷೇತ್ರಕ್ಕೆ “ಆವಿಷ್ಕಾರ್ ಆಪ್”!

  • ಸುರತ್ಕಲ್ ಎನ್‍ಐಟಿಕೆ ಸ್ಟೆಪ್ ಕ್ಯಾಂಪಸ್ಸಲ್ಲಿ ಬಿಡುಗಡೆ
  • ಶಿಕ್ಷಣ, ತರಬೇತಿ, ಕೌಶಲ್ಯಕ್ಕೆ ಹೊಸ ಸಾಧನ

ಮಂಗಳೂರು: ರಾಜ್ಯ ಶಿಕ್ಷಣ ಕ್ಷೇತ್ರಕ್ಕೆ ಮತ್ತೊಂದು ಆಪ್ ಸೇರ್ಪಡೆಯಾಗಿದೆ. ಆಕೃತಿ 3ಡಿ Pvt. Ltd ಕಂಪನಿಯ “ಆವಿಷ್ಕಾರ್ ಆಪ್” ಇತ್ತೀಚೆಗೆ ಮಂಗಳೂರು ಸಮೀಪದ ಸುರತ್ಕಲ್ ಎನ್‍ಐಟಿಕೆ ಸ್ಟೆಪ್ ಕ್ಯಾಂಪಸ್ಸಲ್ಲಿ ಬಿಡುಗಡೆಗೊಂಡಿದೆ.


ಎಲ್ಲಾ ಹಂತದ ಶಿಕ್ಷಣ, ತರಬೇತಿ, ಕೌಶಲ್ಯಕ್ಕೆ ಹೊಸ ರೀತಿಯ ಬೋಧನಾ ಕ್ರಮದೊಂದಿಗೆ ಈ ಆಪ್ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಿದೆ. ಲಾಕ್ಡೌನ್ ಬಳಿಕ ದೇಶದ ಶಿಕ್ಷಣ ಕ್ರಮದಲ್ಲಿ ಬದಲಾವಣೆಯಾಗಿದ್ದು ಡಿಜಿಟಲ್ ಆಧಾರಿತ ಶಿಕ್ಷಣ ಜಾರಿಗೆ ಬಂದಿದೆ. ಡಿಜಿಟಲ್ ಎಜುಕೇಶನ್ ಕ್ಷೇತ್ರದಲ್ಲಿ ಆವಿಷ್ಕಾರ್ ಆಪ್ ಹೊಸ ಮೈಲುಗಲ್ಲಾಗಿದೆ. ಏಕೆಂದರೆ ಇಲ್ಲಿ ಶಿಕ್ಷಣದ ಜತೆ ಜತೆಗೆ ಪ್ರಾಯೋಗಿಕ ಕೋರ್ಸ್‍ಗಳಿಗೂ ಒತ್ತು ನೀಡಲಾಗಿದೆ.


ರಾಜ್ಯದ ನವೋದ್ಯಮ ಕ್ಷೇತ್ರದಲ್ಲಿ ಹೆಸರು ಮಾಡಿರುವ ಸಂಶೋಧಕ ರಾಘವೇಂದ್ರ ಎಸ್ ಅವರು ಹುಟ್ಟು ಹಾಕಿರುವ ಈ ಆಪ್‍ನಲ್ಲಿ ಪ್ರೌಢ ಶಿಕ್ಷಣದಿಂದ ಇಂಜಿನಿಯರಿಂಗ್ ಶಿಕ್ಷಣದವರೆಗೆ ತರಬೇತಿ ಪಡೆಯಬಹುದು.


ಎನ್‍ಐಟಿಕೆ ನಿರ್ದೇಶಕರಾದ ಉಮಾಮಹೇಶ್ವರ್ ರಾವ್ ಆನ್‍ಲೈನ್ ಮೂಲಕ ಆಪ್ ಬಿಡುಗಡೆಗೊಳಿಸಿದ್ದು, ಮಂಗಳೂರು ಎಸ್‍ಎಮ್‍ಇಸಿಸಿ ಎಸ್‍ಬಿಐ ಎಜಿಎಂ ನಾಯಕ್
ಅವರು ಹಾಜರಿದ್ದು ಲೋಕಾರ್ಪಣೆಗೊಳಿಸಿದರು. ಈ ವೇಳೆ ಆಕೃತಿ 3 ಡಿ ಅಕ್ಯಾಡೆಮಿಕ್ ಡೈರೆಕ್ಟರ್ ರೇವಣಸಿದ್ಧಪ್ಪ, ಸಿ.ಎಫ್.ಒ ಸುರೇಂದ್ರ, ಎನ್.ಟಿ ಸಿಸ್ಟಮ್ಸ್ ಸಂಸ್ಥಾಪಕ ನವೀನ್ ಎನ್.ಟಿ, ಬೇಸ್ ಮುಖ್ಯಸ್ಥ ನವೀನ್ ಗುರುರಾಜ್, ರಾಮನ್ ಪಬ್ಲಿಕೇಷ್‍ನ ನ ಪ್ರಸನ್ನ, ಇನ್ಫೋಫೈನೆಟ್ ಸಂಸ್ಥಾಪಕ ಸುಹಾಸ್ ವೈ.ಎನ್. ಇತರರು ಇದ್ದರು. ಹೆಚ್ಚಿನ ಮಾಹಿತಿಗೆ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

https://play.google.com/store/apps/details?id=com.edmingle.aakruthi3d

For more information Please visit our website: http://www.aakruthi3d.com

Categories
ಅಂತಾರಾಷ್ಟ್ರೀಯ ಸುದ್ದಿ

ಅಮೆರಿಕಾದಲ್ಲಿ ಭಾರತೀಯ ವೈದ್ಯೆಗೆ ಹುದ್ದೆ

  • ಕೋವಿಡ್-19 ಸಲಹಾ ಸಮಿತಿಗೆ ನೇಮಕ
  • ಮಂಡ್ಯ ಮೂಲದ ಡಾ.ವಿವೇಕ್ ಎಚ್.ಮೂರ್ತಿಗೆ ಹುದ್ದೆ

ವಾಷಿಂಗ್ಟನ್: ಇತ್ತೀಚೆಗಷ್ಟೆ ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡೆನ್ ಅವರು ರಚಿಸಿರುವ ಅಮೆರಿಕಾ ಕೋವಿಡ್-19 ಸಲಹಾ ಸಮಿತಿಗೆ ತಮಿಳುನಾಡು ಮೂಲದ ಡಾ.ಸಲೈನ್ ಗೌಂಡರ್ ಅವರನ್ನು ಸದಸ್ಯರಾಗಿ ನೇಮಕ ಮಾಡಲಾಗಿದೆ. ಇದೇ ಸಮಿತಿಗೆ ಮಂಡ್ಯ ಮೂಲದ ಡಾ.ವಿವೇಕ್ ಎಚ್.ಮೂರ್ತಿ ಅವರು ಸಹ ಅಧ್ಯಕ್ಷರಾಗಿದ್ದಾರೆ. ಈ ಮೂಲಕ ಅಮೆರಿಕಾದಲ್ಲಿ ಭಾರತದ ಪತಾಕೆ ಹಾರುತ್ತಿದೆ.


ಡಾ.ಸಲೈನ್ ಅವರು ನ್ಯೂಯಾರ್ಕ್‍ನ ಗ್ರಾಸ್‍ಮನ್ ಸ್ಕೂಲ್ ಆಫ್ ಮೆಡಿಸಿನ್‍ನಲ್ಲಿ ವೈದ್ಯಕೀಯ ಮತ್ತು ಸಾಂಕ್ರಾಮಿಕ ರೋಗಗಳ ಕ್ಲಿನಿಕಲ್ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ತಮಿಳುನಾಡು ಮೂಲದ ಕಮಲಾ ಹ್ಯಾರಿಸ್ ಅವರು ಅಮೆರಿಕ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ನಡುವೆ ಈ ಹುದ್ದೆ ಭಾರತೀಯರಿಗೆ ಹೆಮ್ಮೆ ತರಿಸಿದೆ.

Categories
ಬೆಂಗಳೂರು

ನಟಿ ಖುಷ್ಬೂ ಕಾರು ಅಪಘಾತ

  • ಘಟನೆ ಹಿಂದೆ ಕಾಣದ ಕೈ..?

ಚೆನ್ನೈ: ನಟಿ, ರಾಜಕಾರಣಿ ಖುಷ್ಬು ಪ್ರಯಾಣಿಸುತ್ತಿದ್ದ ಕಾರು ನ.18ರಂದು ಅಪಘಾತಕ್ಕೆ ಈಡಾಗಿದ್ದು, ಯಾವುದೇ ಅಪಾಯ ಆಗಿಲ್ಲ, ಆದರೆ ಇದೀಗ ನಟಿ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.


ಖುಷ್ಬು ಅವರು ತಮಿಳುನಾಡಿನ ಕೂಡಲ್ಲೋರುಗೆ ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಟ್ಯಾಂಕರ್ ಒಂದು ಕಾರಿಗೆ ಡಿಕ್ಕಿ ಹೊಡೆದು ಕಾರು ಜಖಂ ಆಗಿದೆ. ಕಾರಿನ ಚಿತ್ರಗಳನ್ನು ಖುಷ್ಬು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ದೇವರು ಹಾಗೂ ನಿಮ್ಮಗಳ ಕೃಪೆಯಿಂದ ನಾನು ಪಾರಾಗಿದ್ದೇನೆ ಎಂದಿದ್ದಾರೆ.


ಘಟನೆ ಬಗ್ಗೆ ಅನುಮಾನವನ್ನೂ ವ್ಯಕ್ತಪಡಿಸಿರುವ ಖುಷ್ಬು, ನಾನು ರಸ್ತೆ ನಿಯಮದ ಪ್ರಕಾರ ಸರಿಯಾಗಿಯೇ ಹೋಗುತ್ತಿದ್ದೆ, ಆದರೆ ಅದೆಲ್ಲಿಂದಲೋ ಹಠಾತ್ತನೆ ಬಂದ ಟ್ಯಾಂಕರ್ ನನ್ನ ಕಾರಿಗೆ ಗುದ್ದಿತು, ಇದನ್ನು ಮಾಧ್ಯಮಗಳ ಗಮನಕ್ಕೆ ತರಲು ಇಚ್ಛೆಪಡುತ್ತಿದ್ದೇನೆ ಎಂದಿದ್ದಾರೆ ಟ್ಯಾಂಕರ್‍ನ ಚಾಲಕನನ್ನು ಪೆÇಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಖುಷ್ಬು ಕಾಂಗ್ರೆಸ್ ತೊರೆದು ಇತ್ತೀಚೆಗಷ್ಟೆ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ತಮಿಳುನಾಡಿನಲ್ಲಿ ಖುಷ್ಬೂಪ್ರಮುಖ ಬಿಜೆಪಿ ಮಹಿಳಾ ನಾಯಕಿ. ಹೀಗಾಗಿ ಹಲವು ಅನುಮಾನಗಳು ವ್ಯಕ್ತವಾಗಿವೆ.

Categories
ಅಂತಾರಾಷ್ಟ್ರೀಯ ಸುದ್ದಿ

ಚೀನಾ ವಸ್ತು ಬಹಿಷ್ಕಾರಕ್ಕೆ ಜೈ

  • ದೀಪಾವಳಿಯಲ್ಲಿ ಅತೀ ಹೆಚ್ಚು ಬಹಿಷ್ಕಾರ

ನವದೆಹಲಿ: ದೀಪಾವಳಿ ವ್ಯಾಪಾರ-ವಹಿವಾಟಿನಲ್ಲಿ ಚೀನಾಗೆ ಈ ವರ್ಷ ಭಾರೀ ನಷ್ಟ ಉಂಟಾಗಿದೆ. ಜೊತೆಗೆ ಇದೇ ಮೊದಲ ಬಾರಿಗೆ ಭಾರತದಲ್ಲಿ ಚೀನಾ ವಸ್ತು ಬಹಿಷ್ಕಾರ ಅತೀ ಹೆಚ್ಚು ಪ್ರಮಾಣದಲ್ಲಾಗಿದೆ.


ಚೀನಾಕ್ಕೆ ಈಗಾಗಲೇ 40,000 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಈಗಾಗಲೇ ಸಿಎಐಟಿ ಮೂಲಕ ತಿಳಿದುಬಂದಿದೆ. ಶೇ.71ರಷ್ಟು ಭಾರತೀಯರು ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಿದ್ದಾರೆ.


ಲೋಕಲ್ ಸರ್ಕಲ್ಸ್ ನಡೆಸಿರುವ ಸಮೀಕ್ಷೆಯ ಪ್ರಕಾರ ಶೇ.71ರಷ್ಟು ಜನರು ಮೇಡ್ ಇನ್ ಚೀನಾ ಗುರುತನ್ನು ಹೊಂದಿರುವ ಸರಕುಗಳನ್ನು ಖರೀದಿಸಿಲ್ಲ. ಸಮೀಕ್ಷೆಯಲ್ಲಿ ಕಮ್ಯುನಿಟಿ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ 204 ಜಿಲ್ಲೆಗಳಲ್ಲಿ 14,000 ಭಾರತೀಯ ಗ್ರಾಹಕರನ್ನು ಸಮೀಕ್ಷೆಗೊಳಪಡಿಸಿದ್ದು, ಶೇ.29 ಗ್ರಾಹಕರು ಒಂದು ಅಥವಾ ಒಂದಕ್ಕಿಂತ ಹೆಚ್ಚು ಚೀನಾ ಉತ್ಪಾದಿತ ಉತ್ಪನ್ನಗಳನ್ನು ಖರೀದಿಸಿದ್ದಾರೆ. ಈ ಪೈಕಿ ಶೇ.11ರಷ್ಟು ಅದರ ಬಗ್ಗೆ ಮಾಹಿತಿ ಇಲ್ಲದೇ ಖರೀದಿಸಿದ್ದರೆ ಶೇ.16 ತಿಳಿದೂ ಸಹ ಚೀನಾ ಉತ್ಪನ್ನಗಳನ್ನು ಖರೀದಿಸಿದ್ದಾರೆ. ಚೀನಾ ಪಟಾಕಿ, ಅಲಂಕಾರಿಕ ವಸ್ತುಗಳು ಈಗಾಗಲೇ ಮಾರುಕಟ್ಟೆಯಿಂದ ಸರಿಯುತ್ತಿವೆ.

Categories
ಬೆಂಗಳೂರು

2 ಹಂತದಲ್ಲಿ ಗ್ರಾಪಂ ಎಲೆಕ್ಷನ್!

  • 3 ವಾರದೊಳಗೆ ದಿನಾಂಕ ಪ್ರಕಟ
  • ಗ್ರಾಮಗಳಲ್ಲಿ ರಾಜಕೀಯ ಶುರು

ಬೆಂಗಳೂರು: ಮುಂದಿನ 3 ವಾರಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣಾ ವೇಳಾಪಟ್ಟಿ ಪ್ರಕಟಿಸುವಂತೆ ಹೈಕೋರ್ಟ್ ಚುನಾವಣಾ ಆಯೋಗಕ್ಕೆ ಆದೇಶಿಸಿದೆ. ಈ ನಡುವೆ ಕೋವಿಡ್ ಪರಿಸ್ಥಿತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಜಿಲ್ಲೆಗಳಲ್ಲಿ 2 ಹಂತಗಳಲ್ಲಿ ಚುನಾವಣೆ ನಡೆಸಲು ಆಯೋಗ ಸಿದ್ಧತೆ ಮಾಡಿಕೊಂಡಿದೆ. ರಾಜ್ಯ ಚುನಾವಣಾ ಆಯೋಗದ ಆಯುಕ್ತರಾದ ಡಾ.ಬಿ.ಬಸವರಾಜು ರಾಜ್ಯದ ಎಲ್ಲಾ ಡೀಸಿ, ಎಸ್ಪಿ ಹಾಗೂ ಜಿಪಂ ಸಿಇಒಗಳ ಜತೆ ವೀಡಿಯೋ ಸಂವಾದ ನಡೆಸಿ ಮಾಹಿತಿ ನೀಡಿದ್ದಾರೆ. ಈಗಾಗಲೇ ಜಿಲ್ಲಾಡಳಿತಗಳು ಸಜ್ಜುಗೊಂಡಿದ್ದು, ತಾಲೂಕು ಆಡಳಿತಗಳಿಗೆ ಸಿದ್ಧತೆಗೆ ಸೂಚನೆ ನೀಡಲಾಗಿದೆ.


ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚು ಜನಸಂದಣಿಯಾಗದಂತೆ ಹಾಗೂ ಸಿಬ್ಬಂದಿಗಳ ಕೊರತೆಯಾಗದಂತೆ ಯೋಜಿಸಿ ಎರಡು ಹಂತಗಳಲ್ಲಿ ಚುನಾವಣೆ ನಡೆಸಲು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು. ಗ್ರಾಮ ಪಂಚಾಯ್ತಿಯು ಪ್ರಜಾ ಪ್ರಭುತ್ವದ ಮೂಲ ಅಡಿಪಾಯವಾಗಿದೆ. ಹಾಗಾಗಿ ಎಲ್ಲಾ ಸೂಕ್ಷ್ಮ ವಿಷಯಗಳ ಮೇಲೂ ಹೆಚ್ಚಿನ ಗಮನಹರಿಸಿ, ಯಾವುದೇ ಲೋಪಗಳಿಲ್ಲದಂತೆ ನ್ಯಾಯಯುತವಾಗಿ ಚುನಾವಣೆ ನಡೆಸಲು ಪ್ರತಿಯೊಬ್ಬರೂ ಜವಾಬ್ದಾರಿ ವಹಿಸಬೇಕು ಎಂದು ಸೂಚಿಸಿದ್ದಾರೆ. ಇದರಿಂದಾಗಿ ಗ್ರಾಮ ಪಂಚಾಯತ್ ಅಖಾಡ ಸಿದ್ಧಗೊಂಡಂತಾಗಿದೆ. ಹಳ್ಳಿ ರಾಜಕೀಯ ಗರಿಗೆದರಲಿದೆ.


ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯಿತಿಗಳಿಗೆ 3 ವಾರದಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಕಳೆದ ಶುಕ್ರವಾರ ಹೈಕೋರ್ಟ್ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಆಯೋಗ ಚುನಾವಣೆಗೆ ಸಿದ್ಧತೆ ನಡೆಸಿದೆ.

Categories
ಅಂತಾರಾಷ್ಟ್ರೀಯ ಸುದ್ದಿ

ಹೆಲ್ಮೆಟ್ ಹಾಕದ ತಾಪ್ಸಿಗೆ ದಂಡ

  • ಚಿತ್ರದ ಶೂಟಿಂಗ್ ವೇಳೆ ಘಟನೆ

ಮುಂಬೈ: ಬಾಲಿವುಡ್ ನಟಿ ತಾಪ್ಸಿ ತಮ್ಮ ಅಭಿನಯದ “ರಶ್ಮಿ ರಾಕೆಟ್”ಗಾಗಿ ಚಿತ್ರೀಕರಣ ನಡೆಸುತ್ತಿದ್ದು, ಬೈಕ್ ರೈಡಿಂಗ್‍ನಲ್ಲಿರುವ ಚಿತ್ರವನ್ನು ಇನ್ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು. ಇದೀಗ ಆ ಚಿತ್ರ ಆಧರಿಸಿ ತಾಪ್ಸಿಗೆ ದಂಡ ವಿಧಿಸಲಾಗಿದೆ. ರಶ್ಮಿ ರಾಕೆಟ್ ಎಂಬುದು ರಶ್ಮಿ ಎಂಬ ಹೆಸರಿನ ಹುಡುಗಿ ಸಣ್ಣ ಗ್ರಾಮದಿಂದ ಅಥ್ಲೆಟಿಕ್ ಸ್ಪರ್ಧೆಗಳಿಗೆ ತೆರಳುವ ಕಥೆ. ಆಕರ್ಶ್ ಖುರಾನ ನಿರ್ದೇಶನ ಹಾಗೂ ರೋನಿ ಸ್ಕ್ರೂವಾಲಾ ಸಹ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಿತ್ರ 2021ರಲ್ಲಿ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆ ಇದೆ. ವಿವಾದಿತ ಫೋಟೋ ಈಗ ವೈರಲ್ ಆಗಿದೆ.

Categories
ಬೆಂಗಳೂರು

ಗಣಿ ಜಿಲ್ಲೆ ಎರಡು ಹೋಳು!?

  • ಬಳ್ಳಾರಿಯಿಂದ ವಿಜಯ ನಗರ ಉದಯ

ಬೆಂಗಳೂರು: ರಾಜ್ಯ ಸರ್ಕಾರ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊಸ ಹೊಸ ಮಾರ್ಗ ಅನುಸರಿಸುತ್ತಿದೆ. ಜಾತಿಗೊಂದು ನಿಗಮ ಮಂಡಳಿ ರಚನೆ ಬಳಿಕ ಈಗ ಹೊಸ ಜಿಲ್ಲೆ ಸ್ಥಾಪನೆಗೆ ಕೈ ಹಾಕಿದೆ.
ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಗಣಿ ಜಿಲ್ಲೆ ಬಳ್ಳಾರಿಯನ್ನು ವಿಭಜಿಸಿ ಹೊಸದಾಗಿ ವಿಜಯನಗರ ಜಿಲ್ಲೆ ಅಧಿಕೃತವಾಗಿ ಘೋಷಣೆ ಮಾಡಲಾಗುವುದು ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.
ವಿಜಯನಗರ ಜಿಲ್ಲೆ ಸ್ಥಾಪನೆಗೆ ಸಂಪುಟ ಸಭೆಯಲ್ಲಿ ಅನೌಪಚಾರಿಕ ಒಪ್ಪಿಗೆ ನೀಡಲಾಗಿದೆ. ಮುಂದಿನ ಸಂಪುಟ ಸಭೆಯಲ್ಲಿ ಅಧಿಕೃತ ಅನುಮೋದನೆ ನೀಡಲಾಗುವುದು. ವಿಜಯ ನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕೆಂಬ ಈ ಭಾಗದ ಬಹುದಿನಗಳ ಬೇಡಿಕೆಗೆ ಸರ್ಕಾರ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿದ್ಯುಕ್ತವಾಗಿ ಘೋಷಣೆ ಮಾಡಲಿದೆ ಎನ್ನಲಾಗಿದೆ. ಇತ್ತ ಸಚಿವ ವಿಜಯ ನಗರ ಜಿಲ್ಲಾ ವ್ಯಾಪ್ತಿಯ ಶಾಸಕರು ಸರ್ಕಾರದ ನಡೆಯನ್ನು ಸ್ವಾಗತಿಸಿದ್ದಾರೆ.

Categories
ಮಲ್ನಾಡ್

ಮಲೆನಾಡಲ್ಲಿ ಅಂಟಿಗೆ ಪಿಂಟಿಗೆ ವೈಭವ!

  • ಶಿರುಪತಿಯಲ್ಲಿ ಮೊಳಗಿದ ಜನಪದ ಕಲರವ
  • ತೀರ್ಥಹಳ್ಳಿ ಜಾನಪದ ಪರಿಷತ್ ಕಾರ್ಯಕ್ರಮ

ತೀರ್ಥಹಳ್ಳಿ: ಸೂವಿರೋ…ಸಂಗಯ್ಯ..ಸೂವಿರೋ ಲಿಂಗಯ್ಯ….ದೀಪಗಳ ಹಬ್ಬ ದೀಪಾವಳಿಯಂದು ಮಲೆನಾಡಿನ ಅನಾದಿ ಕಾಲದ ಕಲೆ ಅಂಟಿಗೆ ಪಿಂಟಿಗೆ ಎಲ್ಲೆಡೆ ಕಂಡು ಬರುತ್ತದೆ. ಆದರೆ ಆಧುನೀಕತೆಯ ನಾಗಾಲೋಟಕ್ಕೆ ಈ ಕಲೆ ಗತಿಸುವ ಅಪಾಯದಲ್ಲಿದೆ.
ದೀಪಾವಳಿಯ ರಾತ್ರಿಗಳಲ್ಲಿ ಜ್ಯೋತಿ ಹಿಡಿದು ಮನೆ ಮನೆಯಲ್ಲಿ ಹಾಡು ಹೇಳಿ ರಾತ್ರಿ ಕಳೆಯುವ ಅಪರೂಪದ ಕಲೆ ಅಂಟಿಗೆ ಪಿಂಟಿಗೆ. ಅಂಟಿಗೆ ಪಿಂಟಿಗೆ ಜಾನಪದ ಕಲೆಯು ಮಲೆನಾಡಿನ ತೀರ್ಥಹಳ್ಳಿ ಭಾಗದಲ್ಲಿಯೇ ಆರಂಭಗೊಂಡಿತು ಎನ್ನಲಾಗುತ್ತದೆ. ಅಂಟಿಗೆ ಅಂದರೆ ದೀಪವನ್ನು ಅಂಟಿಸುವುದು. ದೀಪದಿಂದ ದೀಪ ಹಚ್ಚುತ್ತಾ ತಂಡದಲ್ಲಿ ಮನೆ ಮನೆಗೆ ತೆರಳಿ ಮಲೆನಾಡಿನ ಬದುಕು, ಪರಿಸರಕ್ಕೆ ಸಂಬಂಧಿಸಿದ ಹಾಡುಗಳನ್ನು ಹೇಳುತ್ತಾ ಸಾಗುವ ಈ ಜಾನಪದ ಕಲೆಗೆ ತನ್ನದೆ ಆದ ವೈಶಿಷ್ಟ್ಯವಿದೆ. ಈ ಬಗ್ಗೆ ಶಿವಮೊಗ್ಗ ಜಿಲ್ಲಾ ಜಾನಪದ ಪರಿಷತ್ತಿನ ಉಪಾಧ್ಯಕ್ಷ ಡಿ.ಸಿ.ದೇವರಾಜ್ ಮಾಹಿತಿ ನೀಡಿದರು.


ತೀರ್ಥಹಳ್ಳಿಗೆ ಸಮೀಪದ ಶಿರುಪತಿಯ ಶ್ರೀ ವ್ಯಾಘ್ರ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ನ.16 ರಂದು ಸಂಜೆ ತೀರ್ಥಹಳ್ಳಿ ತಾಲೂಕು ಜಾನಪದ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕøತಿಕ ವೇದಿಕೆ ಮತ್ತು ದೇವಸ್ಥಾನ ಸಮಿತಿಯ ಸಹಯೋಗದಲ್ಲಿ ದೇವಸ್ಥಾನದ ಮುಂಭಾಗ ಅಂಟಿಗೆ ಪಿಂಟಿಗೆ ಕಲಾ ಪ್ರದರ್ಶನ ಹಾಗೂ ದೀಪೆÇೀತ್ಸವ ನಡೆಯಿತು.


ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ಮಹತ್ಕಾರ್ಯಕ್ಕೆ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್ ಹೆಗಲುಕೊಟ್ಟಿದ್ದಾರೆ. ತೀರ್ಥಹಳ್ಳಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ, ತಾಲೂಕಿನ ಕ್ರಿಯಾಶೀಲ ಯುವ ನಾಯಕ ಟಿ.ಎನ್. ಮಂಜುನಾಥ್ ಇಡೀ ಕಾರ್ಯಕ್ರಮದ ಉಸ್ತುವಾರಿ ಹೊತ್ತಿದ್ದರು. ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ, ಕಾರ್ಯದರ್ಶಿ ಗಾಯತ್ರಿ ಶೇಷಗಿರಿ, ಲಯನ್ ಪಾಂಡುರಂಗಪ್ಪ, ದೇವಸ್ಥಾನ ಸಮಿತಿ ಅಧ್ಯಕ್ಷ ಪುರುಷೋತ್ತಮ, ಸಾಮಾಜಿಕ ಕಾರ್ಯಕರ್ತೆ ಸುಲೋಚನಾ, ಕಲಾವಿದ ನಿಶ್ಚಲ್ ಜಾದೂಗಾರ್, ಶಿವಮೊಗ್ಗದ ಹಿರಿಯ ಪತ್ರಕರ್ತ ಜೇಸುದಾಸ್, ನಮ್ಮೂರ್ ಎಕ್ಸ್‍ಪ್ರೆಸ್ ಸಂಸ್ಥಾಪಕ ರಾಘವೇಂದ್ರ ತೀರ್ಥಹಳ್ಳಿ, ಸಮಾಜ ಸೇವಕ ವಿಶಾಲ್ ಕುಮಾರ್ ಸೇರಿದಂತೆ ಊರಿನ ಹಿರಿಯರು, ದೇವಸ್ಥಾನದ ಭಕ್ತರು ಹಾಜರಿದ್ದರು.

Categories
ಮಲ್ನಾಡ್

ತೀರ್ಥಹಳ್ಳಿಗೆ ಹೊಸ ಹೈಟೆಕ್ ಆಸ್ಪತ್ರೆ!

  • ನ.20ಕ್ಕೆ “ಕಿರಣ್ ಹೆಲ್ತ್ ಕೇರ್” ಶುಭಾರಂಭ
  • ಪ್ರಸಿದ್ಧ ವೈದ್ಯ ಡಾ.ಗಣೇಶ ನಾಯಕ್ ಮಾಲಿಕತ್ವದ ಆಸ್ಪತ್ರೆ

ತೀರ್ಥಹಳ್ಳಿ: ಆರೋಗ್ಯ ಮತ್ತು ಚಿಕಿತ್ಸೆ ಸೇವೆಗಳಲ್ಲಿ ಕರಾವಳಿ ಮತ್ತು ಮಲೆನಾಡು ಮುಂಚೂಣಿಯಲ್ಲಿದೆ. ಈ ನಡುವೆ ಕರಾವಳಿ ಮ್ತು ಮಲೆನಾಡಿನ ಸಂಪರ್ಕ ಕೊಂಡಿಯಾಗಿರುವ ತೀರ್ಥಹಳ್ಳಿಯಲ್ಲಿ ಇದೀಗ ಕಿರಣ್ ಹೆಲ್ತ್ ಕೇರ್ ಎಂಬ ಹೈಟೆಕ್ ಆಸ್ಪತ್ರೆ ಶುಭಾರಂಭ ಮಾಡಲಿದೆ.


ದಶಕಗಳ ಕಾಲ ಆರೋಗ್ಯ ಸೇವೆಯನ್ನು ಮಲೆನಾಡಿನ ಜನತೆಗೆ ನೀಡಿರುವ ಡಾ.ಗಣೇಶ್ ನಾಯಕ್ ಮಾಲಿಕತ್ವದ ಈ ಆಸ್ಪತ್ರೆ ಅತ್ಯಾಧುನಿಕ ಹಾಗೂ ಹೈಟೆಕ್ ಸೌಲಭ್ಯ ಹೊಂದಿದೆ. ಜೊತೆಗೆ ಶಾಂತ ಪ್ರದೇಶದಲ್ಲಿದ್ದು, ನ.20ಕ್ಕೆ ಉದ್ಘಾಟನೆಗೊಳ್ಳಲಿದೆ.
ನೂತನ ಆಸ್ಪತ್ರೆಯ ಉದ್ಘಾಟಕರಾಗಿ ಡಾ.ವೆಂಕಟೇಶ್ (FMMC,Manipal) ಹಾಗೂ ಮುಖ್ಯ ಅತಿಥಿಗಳಾಗಿ ಟಿ.ವಿ.ಗಜೇಂದ್ರನಾಥ್ ಮತ್ತು ಹೇಮಲತಾ ಕೊರಣ್ಣನವರ್ ಆಗಮಿಸಲಿದ್ದಾರೆ. ತೀರ್ಥಹಳ್ಳಿಯ ಕೊಪ್ಪ ಸರ್ಕಲ್‍ನಿಂದ ಸರ್ಕಾರಿ ಪಿಯು ಕಾಲೇಜಿಗೆ ಹೋಗುವ ಮಾರ್ಗದಲ್ಲಿ ಆರಂಭವಾಗಿರುವ ಕಿರಣ್ ಹೆಲ್ತ್‍ಕೇರ್‍ನ ಶುಭಾರಂಭಕ್ಕೆ ಸರ್ವರನ್ನೂ ಡಾ.ಗಣೇಶ್ ನಾಯಕ್ ಹಾಗೂ ಕುಟುಂಬ ವರ್ಗ ಸ್ವಾಗತಿಸಿದೆ.


ತೀರ್ಥಹಳ್ಳಿಯಲ್ಲಿ ಈಗಾಗಲೇ ಮೇಳಿಗೆ, ಅನುರಾಧಾ, ಮಾನಸ, ಪ್ರಶಾಂತಿ ಚಿಕಿತ್ಸಾಲಯ, ಪೂಜ್ಯಪಾದ ಸೇರಿದಂತೆ ಅನೇಕ ಆಸ್ಪತ್ರೆಗಳಿವೆ. ಮಲ್ನಾಡ್ ಡಯಾಗ್ನಿಸಿಸ್ ಸೆಂಟರ್ ಕೂಡ ಇದೆ. ಉತ್ತಮ ಸೇವೆ ನೀಡುವ ಸರ್ಕಾರಿ ಆಸ್ಪತ್ರೆಯೂ ಇದೆ. ಈ ನಡುವೆ ಕಿರಣ್ ಹೆಲ್ತ್ ಕೇರ್ ಆರೋಗ್ಯ ಸೇವೆ ನೀಡಲು ಸಜ್ಜಾಗಿದೆ.

Categories
ಬೆಂಗಳೂರು

ಬೆಂಕಿ ಹೊತ್ತಿಸಿದ ಸರ್ಕಾರದ “ಮರಾಠ ಪ್ರೇಮ”!

  • ಕನ್ನಡಪರ ಸಂಘಟನೆಗಳ ಆಕ್ರೋಶದ ಕಿಡಿ
  • ಡಿ.5ಕ್ಕೆ ಕರ್ನಾಟಕ ಬಂದ್..?

ಬೆಂಗಳೂರು: ಮಸ್ಕಿ ಮತ್ತು ಬಸವ ಕಲ್ಯಾಣ ಉಪ ಚುನಾವಣೆ ಮುಂದಿಟ್ಟುಕೊಂಡು ಅಲ್ಲಿ ಮ್ಯಾಜಿಕ್ ಮಾಡಿ ಮರಾಠರನ್ನು ಒಲಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ಆದರೆ ಈ ನಡೆ ಇದೀಗ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಜೊತೆಗೆ ಕನ್ನಡಪರ ಸಂಘಟನೆಗಳು ಡಿ.5ಕ್ಕೆ ರಾಜ್ಯ ಬಂದ್‍ಗೆ ಕರೆ ನೀಡಿವೆ. ಎಲ್ಲಾ ಜಿಲ್ಲೆಗಳಲ್ಲೂ ಈಗ ಹೋರಾಟ ಶುರು ಆಗಿದೆ.


ಮರಾಠಾ ಪ್ರಾಧಿಕಾರ ಸ್ಥಾಪನೆ ನಿರ್ಧಾರ ಮುಂಬರುವ ದಿನಗಳಲ್ಲಿ ತೆಲುಗು, ತಮಿಳು ಮತ್ತು ಮಲಯಾಳಂ ಅಭಿವೃದ್ಧಿ ಅಧಿಕಾರಿಗಳನ್ನು ಸ್ಥಾಪಿಸಲು ಕಾರಣವಾಗುತ್ತದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ ಮುಖ್ಯಮಂತ್ರಿಗಳು ತಕ್ಷಣ ಈ ನಿರ್ಧಾರವನ್ನು ಕೈಬಿಡಬೇಕು ಎಂದು ಕನ್ನಡಪರ ಸಂಘಟನೆಗಳ ನಾಯಕರು ಆಗ್ರಹಿಸಿದ್ದಾರೆ.


ರಾಯಚೂರು ಜಿಲ್ಲೆಯ ಮಸ್ಕಿ ನಾಲಾ ನೀರಾವರಿ ಯೋಜನೆಗೆ ಮತ್ತು ಮರಾಠಾ ಅಭಿವೃದ್ಧಿ ಪ್ರಾಧಿಕಾರ(ಎಂಡಿಎ) ಸ್ಥಾಪನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಈ ಮೂಲಕ ಮರಾಠ ಪ್ರೇಮ ಮೆರೆದಿದೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.
50 ಕೋಟಿ ರೂ.ಗಳ ಅನುದಾನದೊಂದಿಗೆ ಮರಾಠಾ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೂ ಸಹ ಸರ್ಕಾರ ನಿರ್ಧರಿಸಿದೆ. ಇದು ಈಗ ಕಿಚ್ಚು ಹಚ್ಚಿದೆ.


ರಾಜಕೀಯ ಕಾರಣ ಏನು?: ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಶೀಘ್ರವೇ ಉಪ ಚುನಾವಣೆಗಳು ನಡೆಯುವ ದೃಷ್ಟಿಯಿಂದ ಈ ಎರಡೂ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗುತ್ತಿದೆ.


ಶಾಸಕರ ನಿಧನ: ಹಾಲಿ ಕಾಂಗ್ರೆಸ್ ಶಾಸಕ ಪ್ರತಾಪ್ ಗೌಡ ಪಾಟೀಲ್ 2019ರಲ್ಲಿ ವಿಧಾನಸಭೆಗೆ ರಾಜೀನಾಮೆ ನೀಡಿದ ನಂತರ ಮಸ್ಕಿ ವಿಧಾನಸಭಾ ಕ್ಷೇತ್ರ ಖಾಲಿ ಬಿದ್ದಿತು ಮತ್ತು ಇತರ 15 ಶಾಸಕರು ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟನ್ನು ಹುಟ್ಟುಹಾಕಿದ್ದರು.
ಸೆಪ್ಟೆಂಬರ್ 24ರಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊರೋನಾ ಪರೀಕ್ಷೆಗೊಳಪಟ್ಟ ಹಾಲಿ ಕಾಂಗ್ರೆಸ್ ಶಾಸಕ ಬಿ ನಾರಾಯಣ್ ರಾವ್ ಅವರ ನಿಧನದ ತರುವಾಯ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಅಗತ್ಯವಾಗಿತ್ತು. ಉತ್ತರ ಕರ್ನಾಟಕದ ಬೀದರ್ ಜಿಲ್ಲೆಯ ಬಸವಕಲ್ಯಾಣ ಮಹಾರಾಷ್ಟ್ರದ ಗಡಿಯಲ್ಲಿದೆ. ಇದು ಗಣನೀಯಸಂಖ್ಯೆಯಲ್ಲಿ ಮರಾಠಾ ಭಾಷಿಗರನ್ನು ಹೊಂದಿದೆ.