Categories
ಬೆಂಗಳೂರು

ಹೆಂಗೆಂಗೋ ಹೆಲ್ಮೆಟ್ ಧರಿಸಿದರೆ 2 ಸಾವಿರ ದಂಡ!

  • ಬಕಲ್ ಹಾಕದೇ ISI ಮಾರ್ಕ್ ಇಲ್ಲದಿದ್ದರೆ ಫೈನ್
  • ಹೊಸ ಟ್ರಾಫಿಕ್ ನಿಯಮ ಏನು.. ಎತ್ತ…?
  • ರೆಡ್ ಸಿಗ್ನಲ್ ಜಂಪ್ ಮಾಡಿದರೆ 2000 ರೂ ದಂಡ

NAMMUR EXPRESS NEWS
ನವದೆಹಲಿ: ಬಕಲ್ ಹಾಕದೇ ಇಂಡಿಯನ್ ಸ್ಟ್ಯಾಂಡರ್ಡ್
ಇನ್‌ಸ್ಟಿಟ್ಯೂಟ್(ಐಎಸ್‌ಐ) ಮಾರ್ಕ್ ಇಲ್ಲದ ಹೆಲ್ಮಟ್ ಧರಿಸಿ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸಿದರೆ ಇನ್ನು ಮುಂದೆ 2 ಸಾವಿರ ರೂ. ದಂಡವನ್ನು ಪಾವತಿಸಬೇಕಾಗುತ್ತದೆ. ಇದು ಹೊಸ ನಿಯಮ.
ಮೋಟಾರು ವಾಹನ ಕಾಯ್ದೆಯಲ್ಲಿ ದಂಡದ ಮೊತ್ತವನ್ನು ಏರಿಕೆ ಮಾಡಲಾಗಿದೆ. ಸಂಚಾರಿ ನಿಯಮ ಉಲ್ಲಂಘನೆ ಮತ್ತು ಸರಿಯಾದ ಹೆಮ್ಮೆಟ್ ಧರಿಸದೇ ಇದ್ದಲ್ಲಿ 2 ಸಾವಿರ ರೂ. ದಂಡವನ್ನು ವಿಧಿಸಲಾಗುತ್ತದೆ ಎಂದು ಹೇಳಲಾಗಿದೆ.

ಯಾವುದಕ್ಕೆ ಎಷ್ಟು ದಂಡ?
ನೀವು ಹೆಮ್ಮೆಟ್ ಧರಿಸಿದ್ದರೂ ಮೋಟಾರ್ ಸೈಕಲ್ ಅಥವಾ ಸ್ಕೂಟರ್ ಓಡಿಸುವಾಗ ಬ್ಯಾಂಡ್/ಬಕಲ್ ಬಿಚ್ಚಿದ್ದರೆ 1,000 ರೂ. ದಂಡ ತೆರಬೇಕಾಗುತ್ತದೆ.
ನಿಮ್ಮ ಹೆಮ್ಮೆಟ್ BSI (ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ಪ್ರಮಾಣೀಕರಣವನ್ನು ಹೊಂದಿಲ್ಲದಿದ್ದರೆ ನಿಮಗೆ 1,000 ರೂ. ದಂಡ ವಿಧಿಸಬಹುದು.
ನೀವು ಇತರ ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಉದಾಹರಣೆಗೆ ಹೆಮ್ಮೆಟ್ ಧರಿಸಿಯೂ ರೆಡ್ ಸಿಗ್ನಲ್ ಜಂಪ್ ಮಾಡಿದರೆ 2,000 ರೂ. ದಂಡವನ್ನು ವಿಧಿಸಲಾಗುತ್ತದೆ.

ಚೆಕ್ ಮಾಡುವುದು ಹೇಗೆ?
ನೀವು ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ್ದೀರೋ ಇಲ್ಲವೋ ಎನ್ನುವುದನ್ನು ಆನ್‌ಲೈನಿನಲ್ಲೇ ಪರಿಶೀಲನೆ ಮಾಡಬಹುದು.
http://www.echallan.parivahan.gov.in ಗೆ ತೆರಳಿ ‘Get Challan Details ಕ್ಲಿಕ್ ಮಾಡಬೇಕು. ಇಲ್ಲಿ ಚಲನ್ ನಂಬರ್/ ವಾಹನ ಸಂಖ್ಯೆ/ ಡಿಎಲ್ ನಂಬರ್ ಪೈಕಿ ಒಂದನ್ನು ಆರಿಸಿ ಕಾಣುತ್ತಿರುವ ಕ್ಯಾಪ್ಟವನ್ನು ಎಂಟರ್ ಮಾಡಿ “Get Detail ಕ್ಲಿಕ್ ಮಾಡಬೇಕು. ಉಲ್ಲಂಘನೆ ಮಾಡದೇ ಇದ್ದರೆ ಚಲನ್ ನೀಡಿಲ್ಲ ಎಂಬ ಸ್ಟೇಟಸ್ ಕಾಣುತ್ತದೆ. ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದರೆ ದಂಡದ ಮಾಹಿತಿ ಅಲ್ಲಿ ಸಿಗುತ್ತದೆ.

Categories
ಮಲ್ನಾಡ್

ಕಾಂತೇಶ್ ಅವರಿಗೆ ಪರಿಷತ್ ಟಿಕೆಟಿಗಾಗಿ ಪಟ್ಟು!

  • ಜನ, ಸಾಮಾಜಿಕ ಸೇವೆಯಲ್ಲಿ ಮುಂಚೂಣಿ
  • ಕುರುಬ ಸಮಾಜದ ನಾಯಕರಿಂದ ಹೆಚ್ಚಿದ ಒತ್ತಡ
  • ಶಿವಮೊಗ್ಗದಿಂದ ಮುಂದಿನ ಚುನಾವಣೆಯಲ್ಲಿ ಕಣಕ್ಕೆ?

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಪ್ರಭಾವಿ ನಾಯಕ ಈಶ್ವರಪ್ಪ ಅವರ ಪುತ್ರ ಕಾಂತೇಶ್ ಈಶ್ವರಪ್ಪ ಅವರಿಗೆ ವಿಧಾನ ಪರಿಷತ್ ಟಿಕೆಟ್ ನೀಡಬೇಕೆಂಬ ಒತ್ತಡ ಇದೀಗ ಹೆಚ್ಚಾಗಿದೆ.
ಈಶ್ವರಪ್ಪ ಅವರ ಜತೆ ಜತೆಗೆ ಕಾಂತೇಶ್ ಅವರು ಕ್ಷೇತ್ರದಲ್ಲಿ ಮಾತ್ರವಲ್ಲದೆ ರಾಜ್ಯದಲ್ಲಿ ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಮಾಡಿದ್ದಾರೆ. ಸದಾ ಚಟುವಟಿಕೆಯಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಯಡಿಯೂರಪ್ಪ ಪುತ್ರ ವಿಜಯೇಂದ್ರರಷ್ಟೇ ಶಿವಮೊಗ್ಗದಾದ್ಯಂತ ಹೆಸರು ಮಾಡಿದ್ದಾರೆ. ಎಲ್ಲಾ ಅರ್ಹತೆ ಹೊಂದಿದ್ದಾರೆ. ಹೀಗಾಗಿ ಅವರಿಗೆ ಬಿಜೆಪಿ ಪಕ್ಷ ಬರುವ ಪರಿಷತ್ ಚುನಾವಣೆಯಲ್ಲಿ ಕಾಂತೇಶ್ ಅವರನ್ನು ಆಯ್ಕೆ ಮಾಡಿ ಕುರುಬ ಸಮಾಜಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹ ವ್ಯಕ್ತವಾಗಿದೆ.

ಕಾಂತೇಶ್ ಅವರಿಗೆ ಸ್ಥಾನ ಮಾನ ನೀಡಲು ಒತ್ತಡ?

ಈಶ್ವರಪ್ಪ ಬಳಿಕ ಶಿವಮೊಗ್ಗದಲ್ಲಿ ಕಾಂತೇಶ್ ಅವರೇ ಉತ್ತರಾಧಿಕಾರಿ ಎನ್ನಲಾಗಿತ್ತು. ಜೊತೆಗೆ ಪಕ್ಷ, ಕಾರ್ಯಕರ್ತರು,. ನಾಯಕರ ಜತೆ ಕಾಂತೇಶ್ ಗುರುತಿಸಿಕೊಂಡಿದ್ದರು. ಜಿಲ್ಲಾ ಪಂಚಾಯತ್ ಸದಸ್ಯರಾಗಿ ಪಕ್ಷದ ವಲಯದಲ್ಲಿ ಹಲವು ಜವಾಬ್ದಾರಿ ಹೊತ್ತಿದ್ದರು. ಇದೀಗ ಮಗನಿಗೆ ಸ್ಥಾನ ಮಾನ ನೀಡಬೇಕೆಂದು ಈಶ್ವರಪ್ಪ ಕೂಡ ಪಟ್ಟು ಹಿಡಿದಿದ್ದಾರೆ ಎಂದೂ ತಿಳಿದು ಬಂದಿದೆ.
ಜೊತೆಗೆ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಶಿವಮೊಗ್ಗ ವಿಧಾನ ಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯಬೇಕೆಂದು ಅಭಿಮಾನಿಗಳು ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

Categories
ಬೆಂಗಳೂರು

ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ

  • ರಾಜ್ಯದಲ್ಲಿ ಶೇ.85.63ರಷ್ಟು ಫಲಿತಾಂಶ
  • ಶೇ.81.03 ವಿದ್ಯಾರ್ಥಿಗಳು, ಶೇ.90.29 ವಿದ್ಯಾರ್ಥಿನಿಯರು ಪಾಸ್‌
  • 145 ಮಂದಿಗೆ ಶೇ.100 ಫಲಿತಾಂಶ

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ರಾಜ್ಯದಲ್ಲಿ ಶೇ.85.63ರಷ್ಟು ಫಲಿತಾಂಶ ಪ್ರಕಟವಾಗಿದೆ. 
ಶೇ.81.03 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರೆ ಶೇ.90.29 ವಿದ್ಯಾರ್ಥಿನಿಯರು ಪಾಸ್‌ ಆಗಿದ್ದಾರೆ. 145 ವಿದ್ಯಾರ್ಥಿಗಳು 625 ಅಂಕ ಪಡೆದಿದ್ದಾರೆ. 10 ವರ್ಷಗಳಲ್ಲೇ ಇದು ದಾಖಲೆ ಫಲಿತಾಂಶವಾಗಿದೆ.
ಶಿಕ್ಷಣ ಸಚಿವ ನಾಗೇಶ್‌ ಅವರು ಮಧ್ಯಾಹ್ನ 12:30ಕ್ಕೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಪ್ರಕಟಿಸಿದರು.

ಫಲಿತಾಂಶ ವೀಕ್ಷಣೆ ಹೇಗೆ?

ಮಧ್ಯಾಹ್ನ 1 ಗಂಟೆ ಬಳಿಕ ಇಲಾಖೆಯ ವೆಬ್‌ಸೈಟ್ karresults.nic.in ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಫೋನ್ ನಂಬರ್‌ಗಳಿಗೆ SMS ಮೂಲಕ ಫಲಿತಾಂಶ ಕಳುಹಿಸಲಾಗುತ್ತದೆ.

Categories
ಮಲ್ನಾಡ್

ಉಪನ್ಯಾಸಕಿ ವಿಮಲ ಬಿ.ಎನ್ ಅವರಿಗೆ ಡಾಕ್ಟರೇಟ್

  • ತೀರ್ಥಹಳ್ಳಿ ತುಂಗಾ ಮಹಾವಿದ್ಯಾಲಯದಲ್ಲಿ ಸೇವೆ
  • ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಪಿ.ಹೆಚ್.ಡಿ ಪ್ರದಾನ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನ ಹರಳೀಮಠ ನಾಗರಾಜ್ ಹಾಗೂ ಜಯಮ್ಮ ದಂಪತಿಯ ಪುತ್ರಿ ವಿಮಲ ಸಂಕೇತ್ ಹೆಗ್ಡೆ ಅವರಿಗೆ ವಾಣಿಜ್ಯ ವಿಷಯದ ಮೇಲೆ ಅಧ್ಯಯನ ನಡೆಸಿ ಮಂಡಿಸಿದ ಪ್ರಬಂಧಕ್ಕೆ ರಾಣಿ ಚೆನ್ನಮ್ಮ ವಿವಿ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ. ರೋಲ್ ಆಫ್ ಮೈಕ್ರೋ ಫೈನಾನ್ಸ್ ಇನ್ ವುಮೆನ್ ಎಂಪವರ್ಮೆಂಟ್ ವಿಥ್ ಸ್ಪೆಷಿಯಲ್ ರೆಫರೆನ್ಸ್ ಟು ಶಿವಮೊಗ್ಗ ಜಿಲ್ಲೆ ಎಂಬ ಮಹಾ ಪ್ರಬಂಧಕ್ಕೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಪಿ.ಹೆಚ್.ಡಿ ಪ್ರದಾನ ಮಾಡಿದೆ.
ವಿಮಲ ಅವರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಆಕಾಶ್ ಅವರ ಮಾರ್ಗದರ್ಶನದಲ್ಲಿ ಈ ಮಹಾ ಪ್ರಬಂಧ ಮಂಡಿಸಿದ್ದಾರೆ. ಇವರು ಪ್ರಸ್ತುತ ತುಂಗಾ ಮಹಾವಿದ್ಯಾಲಯದ ಎಂ.ಕಾಂ ವಿಭಾಗದಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತಿದ್ದಾರೆ.

ಸಾಧನೆಗೆ ಶುಭಾಶಯಗಳು
ಡಾ. ವಿಮಲ ಅವರ ಸಾಧನೆಗೆ ತುಂಗಾ ಮಹಾವಿದ್ಯಾಲದ ಆಡಳಿತ ಮಂಡಳಿ, ಬೋಧಕ ವರ್ಗ, ಸಿಬ್ಬಂದಿ, ವಿದ್ಯಾರ್ಥಿಗಳು ಶುಭಾಶಯ ಸಲ್ಲಿಸಿದ್ದಾರೆ.

ನಮ್ಮೂರ್ ಎಕ್ಸ್ ಪ್ರೆಸ್ ಕೂಡ ಶುಭಾಶಯ ಸಲ್ಲಿಸುತ್ತದೆ

Categories
ಮಲ್ನಾಡ್

ಮಹಾ ಮಳೆಗೆ ಮಲೆನಾಡು ಅಲ್ಲೋಲ ಕಲ್ಲೋಲ!

  • ಶಿವಮೊಗ್ಗ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ಘೋಷಣೆ
  • ಇಂದು ಭಾರೀ ಮಳೆ: ಎಲ್ಲೆಡೆ ರೆಡ್ ಅಲರ್ಟ್
  • ತಾಲೂಕು ಆಡಳಿತಗಳಿಂದ ಮಳೆ ಸಭೆ

NAMMUR EXPRESS NEWS
ಶಿವಮೊಗ್ಗ: ಕಳೆದ 2 ದಿನಗಳಿಂದ ರಾಜ್ಯದ ಎಲ್ಲೆಡೆ ಭಾರೀ ಮಳೆಯಾಗುತ್ತಿದ್ದು ಮಲೆನಾಡಿನಲ್ಲಿ ಮಳೆ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಗುರುವಾರ ಇಡೀ ದಿನ ಭಾರಿ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಅಂಗನವಾಡಿಗಳಿಗೆ ಮೇ 19ರ ಗುರುವಾರ ಒಂದು ದಿನ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆದೇಶಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಭಾರಿ ಮಳೆಯಾಗುವ ಸಂಭವವಿದೆ. ಸುಮಾರು 10 ಸೆಂಟಿಮೀಟರ್ ನಿಂದ 15 ಸೆಂಟಿಮೀಟರ್ ಮಳೆ ಸುರಿಯುವ ಸಾಧ್ಯತೆಯಿದೆ.
ಹಲವೆಡೆ ಅಪಘಾತ!: ಮಳೆ ಹಿನ್ನೆಲೆ ಹಲವೆಡೆ ಸಣ್ಣ ಪುಟ್ಟ ಅಪಘಾತ ಸಂಭವಿಸಿದೆ. ಇನ್ನು ಮರಗಳು ಧರೆಗೆ ಉರುಳಿವೆ.

ಅಧಿಕಾರಿಗಳೇ ಎಚ್ಚರ ಎಚ್ಚರ
ಮಳೆ ಅನಾಹುತ ಸೃಷ್ಟಿಸುವ ಸಾಧ್ಯತೆಗಳಿದ್ದು ತಾಲೂಕು ಆಡಳಿತಗಳು ಎಚ್ಚರಿಕೆ ವಹಿಸಬೇಕಿದೆ. ಮನೆ, ಮರಗಳು ಉರುಳುವ ಸಾಧ್ಯತೆಗಳಿವೆ. ತುಂಗಾ ನದಿಯಲ್ಲಿ ನೀರಿನ ಪ್ರಮಾಣ ಇರುತ್ತಿದೆ.

Categories
ಕೃಷಿ

ಕಾರ್ಯಕ್ರಮ ಬಂದವರಿಗೆ ಗಿಡವೇ ಗಿಫ್ಟ್!

  • ತಮ್ಮ ಮನೆಯ ಕಾರ್ಯಕ್ರಮದಲ್ಲಿ ಗಿಡ ಕೊಟ್ಟು ಮಾದರಿಯಾದ ಶಂಕರಮನೆ ಅರುಣ್!
  • ತೀರ್ಥಹಳ್ಳಿಯ ಈ ಕಾರ್ಯಕ್ರಮ ಎಲ್ಲರಿಗೂ ಪ್ರೇರಣೆ

NAMMUR EXPRESS NEWS
ತೀರ್ಥಹಳ್ಳಿ: ನಾವು ಅನೇಕ ಕಡೆ ಕಾರ್ಯಕ್ರಮಗಳನ್ನು ನೋಡಿದ್ದೇವೆ, ಕಾರ್ಯಕ್ರಮದಲ್ಲಿ ಮನೆಗೆ ಬಂದ ಅತಿಥಿಗಳಿಗೆ ಅನೇಕ ಗಿಫ್ಟ್, ಉಡುಗೊರೆಗಳನ್ನು ಕೊಡುತ್ತಾರೆ. ಆದರೆ ತೀರ್ಥಹಳ್ಳಿಯ ಯುವ ಸಂಘಟಕರು ಹಾಗೂ ಕ್ರಿಯಾಶೀಲ ಯುವಕರಾದ ಶಂಕರ ಮನೆ ಅರುಣ್ ಅವರು ಕೈಮರ ಬಳಿಯ ತಮ್ಮ ತೋಟದಲ್ಲಿ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ಅತಿಥಿಗೂ ಒಂದು ತೆಂಗಿನ ಗಿಡವನ್ನುನೀಡುವ ಮೂಲಕ ಮಾದರಿಯಾದರು. ಈ ಕಾರ್ಯಕ್ರಮದಲ್ಲಿ ಸುಮಾರು 400ಕ್ಕೂ ಹೆಚ್ಚು ತೆಂಗಿನಗಿಡಗಳನ್ನು ಕೊಟ್ಟು ಮನೆಯಲ್ಲಿ ನೆಡುವಂತೆ ಅವರು ಮನವಿ ಮಾಡಿದರು. ಸ್ಥಳೀಯ ಊರಿನ ಹಾಗೂ ಬಂದಂತಹ ಅತಿಥಿಗಳು ತೆಂಗಿನ ಗಿಡವನ್ನು ಖುಷಿಯಿಂದ ತೆಗೆದುಕೊಂಡು ಹೋದರು.
ಮಾದರಿ ಕೆಲಸ: ಕಾರ್ಯಕ್ರಮಗಳಲ್ಲಿ ಸೀರೆ ಲ್, ಬಟ್ಟೆ, ತಟ್ಟೆ, ಪ್ಲಾಸ್ಟಿಕ್ ವಸ್ತುಗಳನ್ನು ಗಿಫ್ಟ್ ಕೊಡುವ ಬದಲು ಇಂತಹ ಹೀಗೆ ಗಿಡಗಳನ್ನು ನೀಡುವಂತಹ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಯಿತು.
ಪ್ರತಿದಿನ ಒಂದಲ್ಲ ಒಂದು ಕಾರ್ಯಕ್ರಮಗಳು ನಡೆಯುತ್ತಿರುತ್ತದೆ, ಪ್ರತಿಯೊಬ್ಬರೂ ಒಂದು ಅಮೂಲ್ಯವಾದ ಗಿಡಗಳನ್ನು ಬರುವ ಅತಿಥಿಗಳಿಗೆ ಕೊಟ್ಟು ಅದನ್ನು ತಮ್ಮ ಮನೆಯಲ್ಲಿ ನೆಡುವುದಕ್ಕೆ ಪ್ರೇರಣೆ ನೀಡಿದಲ್ಲಿ ಹಸಿರು ನಾಡು ಆಗುತ್ತದೆ.
ಗಿಡಮರಗಳು ಬೆಳೆಯುತ್ತದೆ, ಇದೊಂದು ಮಾದರಿ ಕೆಲಸ ಎಂದು ಪತ್ರಕರ್ತ ಮೋಹನ್ ಶೆಟ್ಟಿ ಬಣ್ಣಿಸಿದ್ದಾರೆ.

Categories
ಮಲ್ನಾಡ್

ಕನ್ನಡದ ಖ್ಯಾತ ಸಾಹಿತಿ ನಾಗಭೂಷಣ್ ಇನ್ನಿಲ್ಲ

  • ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಮಲೆನಾಡು ಮೂಲದ ಸಾಹಿತಿ
  • ಕನ್ನಡದ ನಂ 1 ವಿಮರ್ಶಕ ಸ್ಥಾನ ಪಡೆದಿದ್ದರು
  • ಪತ್ರಕರ್ತರಾಗಿ, ಸಾಹಿತಿಯಾಗಿ ನಾಡಿಗೆ ಅಪಾರ ಸೇವೆ

NAMMUR EXPRESS NEWS
ಶಿವಮೊಗ್ಗ: ಖ್ಯಾತ ವಿಮರ್ಶಕ, ‘ಗಾಂಧಿ ಕಥನ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆದಿದ್ದ ಸಾಹಿತಿ ಡಿಎಸ್ ನಾಗಭೂಷಣ ಅವರು ನಿಧನರಾಗಿದ್ದಾರೆ. ನೇರ ನಡೆ ನುಡಿಯ ಲೇಖಕರಾಗಿದ್ದ 70 ವರ್ಷದ ಡಿಎಸ್ ನಾಗಭೂಷಣ ಅವರು ಆನಾರೋಗ್ಯ ಕಾರಣ ಬುಧವಾರ ತಡರಾತ್ರಿ ನಿಧನರಾಗಿದ್ದು, ಗುರುವಾರ ಸಂಜೆ 4 ಗಂಟೆಗೆ ಶಿವಮೊಗ್ಗದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ಕಲ್ಲಹಳ್ಳಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಹತ್ತು ವರ್ಷ ‘ಹೊಸ ಮನುಷ್ಯ’ ಪತ್ರಿಕೆ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದ ನಾಗಭೂಷಣ ಅವರು, ರೂಪರೂಪಗಳನ್ನು ದಾಟಿ, ವಿಧವಿಧ, ಇಂದಿಗೆ ಬೇಕಾದ ಗಾಂಧಿ ಕೃತಿಗಳನ್ನು ರಚನೆ ಮಾಡಿದ್ದಾರೆ. ಈ ಕೃತಿಗಳು ನಿಷ್ಠರ ವಿಮರ್ಶೆಯ ಧ್ವನಿಯಾಗಿದ್ದವು. ಇನ್ನು ಶ್ರೀಮತಿ ಸವಿತಾ ನಾಗಭೂಷಣ ಸಹ ಕನ್ನಡದ ಖ್ಯಾತ ಲೇಖಕಿ ಮತ್ತು ಕವಿಯಾಗಿದ್ದಾರೆ. ಸುಮಾರು 20 ವರ್ಷದ ಹಿಂದೆ ನಾಗಭೂಷಣರು ಆಕಾಶವಾಣಿಯ ಕೆಲಸದಿಂದ
ಸ್ವಯಂನಿವೃತ್ತಿ ಪಡೆದ ಮೇಲೆ ದಂಪತಿಗಳು ಶಿವಮೊಗ್ಗದಲ್ಲಿ ವಾಸವಿದ್ದರು.

Categories
ರಾಜಕೀಯ

ಕರ್ನಾಟಕ ಶಾಸಕರ ವೇತನ 2.5 ಲಕ್ಷ ರೂ..!

  • ದೂರವಾಣಿ ಭತ್ಯೆ 20 ಸಾವಿರ ರೂ.: ಎಷ್ಟೆಷ್ಟು ಹಣ
  • ಸಂಪೂರ್ಣ ಡೀಟೇಲ್ಸ್ ಇಲ್ಲಿದೆ ನೋಡಿ ಸಾರ್..!

NAMMUR EXPRESS NEWS
ಬೆಂಗಳೂರು: ಕಳೆದ ವಿಧಾನಸಭೆ ಅಧಿವೇಶನದಲ್ಲಿ ಶಾಸಕರ ವೇತನ ಪರಿಷ್ಕರಣೆಗೊಂಡಿದ್ದು, ಇದೇ ಏಪ್ರಿಲ್ ನಿಂದ ಮಾಸಿಕ ವೇತನ 2,05,000 ರೂ.ಗೆ ಎರಿಕೆ ಆಗಿದೆ. ಅದರಲ್ಲಿ ದೂರವಾಣಿ ಭತ್ಯೆ 20 ಸಾವಿರ ರೂ. ನೀಡುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಅಂತೆಯೇ, ಅಂಚೆ ವೆಚ್ಚ ತಿಂಗಳಿಗೆ 5 ಸಾವಿರ ರೂ. ನೀಡಲಾ ಗುತ್ತಿರುವುದೂ ಚರ್ಚೆಗೆ ಗ್ರಾಸವಾಗಿದೆ.
ಶಾಸಕರಿಗೆ ಮೂಲ ವೇತನ 40 ಸಾವಿರ ರೂ.. ಕ್ಷೇತ್ರ ಭತ್ಯೆಯಾಗಿ 60 ಸಾವಿರ ರೂ., ಚುನಾವಣಾ ಕ್ಷೇತ್ರದ ಪ್ರಯಾಣ ಭತ್ಯೆಯಾಗಿ 50 ಸಾವಿರ ರೂ. ಆಪ್ತ ಸಹಾಯಕ ಮತ್ತು ಕೊಠಡಿ ಸೇವಕನ ಭತ್ಯೆ ಯಾಗಿ 20 ಸಾವಿರ ರೂ., ಅಂಚೆ ವೆಚ್ಚ 5 ಸಾವಿರ ರೂ. ದೂರವಾಣಿ ವೆಚ್ಚ 20 ಸಾವಿರ ರೂ. ಇದೆ.

ಶಾಸಕರಿಗೆ ಯಾವ ಭತ್ಯೆ ಎಷ್ಟು?
ಏಪ್ರಿಲ್-2022 ರಿಂದ ಜಾರಿಗೆ ಬರುವಂತೆ ಮಾಹೆಯಾನ ಪಾವತಿಸಲಾಗುತ್ತಿರುವ ವೇತನ/ಭತ್ಯೆಗಳ ವಿವರವು ಈ ಕೆಳಕಂಡಂತಿವೆ. ಮಾನ್ಯ ಶಾಸಕರುಗಳಿಗೆ ಮಾಹೆಯಾನ ಪಾವತಿಸಲಾಗುವ ವೇತನ/ಭತ್ಯೆಗಳ ವಿವರ.

ವಿವರ – ಮೊತ್ತ

ವೇತನ – ರೂ 40,000/-
ಕ್ಷೇತ್ರ ಭತ್ಯೆ – ರೂ.60,000/-
ಚುನಾವಣಾ ಕ್ಷೇತ್ರದ ಪ್ರಯಾಣ ಭತ್ಯೆ – ರೂ.60,000
ಆಪ್ತ ಸಹಾಯಕ ಮತ್ತು ಕೊಠಡಿ ಸೇವಕನ ವೇತನ – ರೂ.20,000
ಅಂಚೆ ವೆಚ್ಚ – ರೂ.5,000/-
ದೂರವಾಣಿ ವೆಚ್ಚ – ರೂ.20,000/-
ಒಟ್ಟು ಮೊತ್ತ – ರೂ.2,05,000/-

ಮೇಲ್ಮನೆಗೆ ನಾಮಪತ್ರ ಸಲ್ಲಿಕೆ ಶುರು
ವಿಧಾನಸಭೆಯಿಂದ ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ನಡೆಯುವ ದೈವಾರ್ಷಿಕ ಚುನಾವಣೆಗೆ ಮಂಗಳವಾರ ನಾಮಪತ್ರ ಸಲ್ಲಿಕೆ ಆರಂಭವಾಗಿದೆ.
ಯಾವುದೇ ನಾಮಪತ್ರ ಮೊದಲದಿನ ಸಲ್ಲಿಕೆಯಾಗಿಲ್ಲ. ಮೇ 24ರವರೆಗೂ ಅವಕಾಶವಿದ್ದು, ಜೂನ್ 3ರಂದು ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಕೆ ಪಕ್ರಿಯೆ ಆರಂಭವಾಗಿದೆಯಾದರೂ ರಾಜಕೀಯ ಪಕ್ಷಗಳು ತಂತಮ್ಮ ಅಭ್ಯರ್ಥಿಗಳನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಆಯ್ಕೆ ಕಸರತ್ತು ಆರಂಭಿಸಿವೆ. ವಿಧಾನಸಭೆಯಲ್ಲಿ ಶಾಸಕರ ಸಂಖ್ಯಾಬಲದ ಆಧಾರದ ಮೇಲೆ ಬಿಜೆಪಿ ನಾಲ್ಕು, ಕಾಂಗ್ರೆಸ್ ಎರಡು ಹಾಗೂ ಜೆಡಿಎಸ್‌ ಒಂದು ಸ್ಥಾನ ಗೆಲ್ಲಬಹುದಾಗಿದೆ. ಮೇ 25ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ವಾಪಸ್ ಪಡೆಯಲು ಮೇ 27 ಕೊನೆಯ ದಿನವಾಗಿದೆ.

Categories
ಬೆಂಗಳೂರು

20 ಕ್ಕೆ ಪ್ರಥಮ ಪಿಯುಸಿಗೆ ಅರ್ಜಿ ಸಲ್ಲಿಕೆ

  • ಹಿಜಾಬ್ ವಿವಾದ ಹಿನ್ನೆಲೆಯಲ್ಲಿ ವಸ್ತ್ರಸಂಹಿತೆ ಜಾರಿ
  • ಪಿಯು ಪ್ರವೇಶಕ್ಕೆ ಮಾರ್ಗಸೂಚಿ ಬಿಡುಗಡೆ

NAMMUR EXPRESS NEWS
ಬೆಂಗಳೂರು : ಪದವಿ ಪೂರ್ವ ಶಿಕ್ಷಣ ಇಲಾಖೆಯು 2022-23 ನೇ ಸಾಲಿನ ಪಿಯುಸಿ ದಾಖಲಾತಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಹಿಜಾಬ್ ವಿವಾದ ಹಿನ್ನೆಲೆಯಲ್ಲಿ ಕಾಲೇಜುಗಳಲ್ಲಿ ಹೈಕೋರ್ಟ್ ನೀಡಿರುವ ತೀರ್ಪಿನ ಅನ್ವಯ ಸಮವಸ್ತ್ರಗಳನ್ನು ಧರಿಸುವಂತೆ ಸೂಚಿಸಿದೆ.
ಎಸ್ ಎಸ್ ಎಲ್ ಸಿ 2022 ರ ವಾರ್ಷಿಕ ಪರೀಕ್ಷೆಯ ಪಲಿತಾಂಶ ಮೇ 19 ರಂದು ಪ್ರಕಟವಾಗಲಿದ್ದು,20 ಕ್ಕೆ ಪ್ರಥಮ ಪಿಯು ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಲಿದೆ.
ಕಾಲೇಜುಗಳಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ನಿಗದಿಪಡಿಸಿರುವ ಸಮವಸ್ತ್ರ ದರಿಸಬೇಕು ಒಂದುವೇಳೆ ನಿಗದಿಪಡಿಸಿಲ್ಲವಾದರೆ, ಸಮಾನತೆ ಮತ್ತು ಐಕ್ಯತೆಯನ್ನು ಕಾಪಾಡಿಕೊಂಡು ಹಾಗೂ ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಉಡುಪುಗಳನ್ನು ಧರಿಸಬೇಕು ಎಂದು ಶೈಕ್ಷಣಿಕ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ಪ್ರತಿವರ್ಷದ ಮಾರ್ಗಸೂಚಿಯಲ್ಲಿ ಈ ಅಂಶ ಇರುತ್ತಿರಲಿಲ್ಲ, ಈ ಬಾರಿ ಹಿಜಾ ವಿವಾದ ಹಿನ್ನೆಲೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಈ ಅಂಶವನ್ನು ಸೇರಿಸಿದೆ, ಮೊದಲ ಅವಧಿ ಜೂನ್ 9 ರಿಂದ ಸೆಪ್ಟೆಂಬರ್ 30ರವರೆಗೆ ಹಾಗೂ ಎರಡನೇ ಅವಧಿ ಆ.13 ರಿಂದ 2023 ಮಾ.31 ರ ವರೆಗೆ ನಿಗದಿಪಡಿಸಿದೆ.
ದ್ವಿತೀಯ ಪಿಯು ದಾಖಲಾತಿ ಪ್ರಕ್ರಿಯೆ ಜೂ.1 ರಿಂದಲೇ ಆರಂಭವಾಗಲಿದೆ ಪ್ರಥಮ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಸಿದ್ಧಪಡಿಸಿಕೊಂಡ ವೇಳಾಪಟ್ಟಿಯಂತೆ ತರಗತಿಗಳು ಜೂ 9 ಕ್ಕೆ ಆರಂಭವಾಗಲಿದೆ, ಆ 1 ರಿಂದ 12 ರ ವರೆಗೆ ಮಧ್ಯಂತರ ರಜೆ ಇರಲಿದೆ,2023 ಮಾ.31 ಕೆಲಸದ ಕೊನೆಯ ದಿನವಾಗಿದೆ. ಎ.1 ಕ್ಕೆ ಬೇಸಿಗೆ ರಜೆ ಆರಂಭವಾಗಲಿದೆ.
ಪ್ರಥಮ ಪಿಯುಗೆ ದಂಡ ಶುಲ್ಕವಿಲ್ಲದೆ ದಾಖಲಾತಿ ಕೊನೆಯ ದಿನಾಂಕ ಜೂ 15 ಆಗಿದೆ ದ್ವಿತೀಯ ಪಿಯು ಅರ್ಜಿ ಸಲ್ಲಿಕೆಗೆ ಜೂ 1 ರಿಂದ 15 ರವರೆಗೆ ಅವಕಾಶ ಕಲ್ಪಿಸಿದೆ, ವಿವಿಧ ಮಂಡಳಿಗಳ ವಿದ್ಯಾರ್ಥಿಗಳ ಪ್ರವೇಶಕ್ಕೆ ತಾತ್ಕಾಲಿಕ ಅರ್ಹತಾಪತ್ರ ಕಡ್ಡಾಯವಾಗಿದ್ದು, ಒಂದು ವೇಳೆ ಈ ದಾಖಲೆ ನೀಡದಿದ್ದರೆ ದಾಖಲೆಯನ್ನು ರದ್ದುಪಡಿಸಲಾಗುವುದು ಅಲ್ಲದೆ ಮುಂದೆ ಆಗುವ ಪರಿಣಾಮಗಳಿಗೆ ಪ್ರಾಂಶುಪಾಲರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದೆ.
ಪ್ರತಿ ಸಂಯೋಜನೆಗೆ ಗರಿಷ್ಠ ವಿದ್ಯಾರ್ಥಿಗಳ ಸಂಖ್ಯೆ 80 ಎಂದು ನಿಗದಿಪಡಿಸಲಾಗಿದೆ, ಹೆಚ್ಚಿನ ಪ್ರವೇಶ ಕಲ್ಪಿಸಿದರೆ ಅನುಮೋದನೆ ನೀಡಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.

Categories
Uncategorized

ಹಾರ್ದಿಕ್ ಪಟೇಲ್ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ!

  • ಗುಜರಾತ್ ಯುವ ನಾಯಕನ ಹೊಸ ಹೆಜ್ಜೆ
  • ಆಪ್ ಪಕ್ಷಕ್ಕೆ ಬರ್ತಾರಾ ಯುವ ನಾಯಕ

NAMMUR EXPRESS NEWS
ಅಹಮದಾಬಾದ್: “ನಾನು ಬುಧುವಾರ ಕಾಂಗ್ರೆಸ್ ಪಕ್ಷದ ಹುದ್ದೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ಈ ನಿರ್ಧಾರವನ್ನು ನನ್ನೆಲ್ಲಾ ಬೆಂಬಲಿಗರು ಹಾಗೂ ಗುಜರಾತ್ ಜನತೆ ಸ್ವಾಗತ ಮಾಡುತ್ತದೆ ಎಂಬ ಖಾತ್ರಿ ಇದೆ. ನನ್ನ ಈ ಹೆಜ್ಜೆಯಿಂದ ಭವಿಷ್ಯದಲ್ಲಿ ಗುಜರಾತ್ ಗೋಸ್ಕರ ಸಕಾರಾತ್ಮಕ ರೂಪದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ನಂಬುತ್ತೇನೆ” ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಬರೆದಿರುವ ತಮ್ಮ ರಾಜೀನಾಮೆ ಪತ್ರವನ್ನು ಹಾರ್ದಿಕ್ ಪಟೇಲ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.


ಪಾಟಿದಾರ್ ಪರ ಹೋರಾಟಗಾರ ಪಟೇಲ್ 2019 ರಲ್ಲಿ ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಸೇರಿದ್ದರು.


ಪಟೇಲ್ ಅವರು ಕಳೆದ ಕೆಲವು ವಾರಗಳಿಂದ ಗುಜರಾತ್ ಕಾಂಗ್ರೆಸ್ ಘಟಕದಲ್ಲಿ ಆಂತರಿಕ ಕಲಹದ ಬಗ್ಗೆ ದೂರು ನೀಡುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು.