Categories
ರಾಜಕೀಯ ರಾಜ್ಯ

ಆಮ್ ಆದ್ಮಿ ಪಕ್ಷಕ್ಕೆ ಡಿಮ್ಯಾಂಡಪ್ಪೋ ಡಿಮ್ಯಾಂಡ್..!

ಆಮ್ ಆದ್ಮಿ ಪಕ್ಷಕ್ಕೆ ಡಿಮ್ಯಾಂಡಪ್ಪೋ ಡಿಮ್ಯಾಂಡ್..!

  • ಉತ್ತರ ಕರ್ನಾಟಕದ ಪ್ರಮುಖ ನಾಯಕರ ಸೇರ್ಪಡೆ
  • ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಅಖಾಡದಲ್ಲಿ ಆಮ್ ಆದ್ಮಿ ಪಾರ್ಟಿ
  • ವಿಧಾನ ಸಭಾ ಚುನಾವಣೆಯಲ್ಲಿ ಮಹತ್ವದ ಪಾತ್ರ!

NAMMUR EXPRESS NEWS
ಬೆಂಗಳೂರು: ದೆಹಲಿ, ಪಂಜಾಬ್ ಅಧಿಕಾರ ಹಿಡಿದ ಜನ ಸಾಮಾನ್ಯರ ಪಕ್ಷ ಆಮ್ ಆದ್ಮಿ ಈಗ ಕರ್ನಾಟಕದಲ್ಲಿ ತನ್ನ ತಂತ್ರಗಾರಿಕೆ ಶುರು ಮಾಡಿದೆ.
ಕರ್ನಾಟಕದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅತೃಪ್ತ ಶಾಸಕರು, ನಾಯಕರು, ವಕೀಲರು, ತಾರೆಯರು, ಪತ್ರಕರ್ತರು, ಪ್ರಸಿದ್ಧ ಹಾಗೂ ಶುದ್ಧ ಹಸ್ತರನ್ನು ತನ್ನ ಪಾರ್ಟಿಗೆ ಸೇರಿಸಿಕೊಳ್ಳುತ್ತಿದೆ.
ಪೊಲೀಸ್ ಅಧಿಕಾರಿ ಭಾಸ್ಕರ ರಾವ್, ಮುಖ್ಯಮಂತ್ರಿ ಚಂದ್ರು, ಟೆನ್ನಿಸ್ ಕೃಷ್ಣ, ಬ್ರಿಜೇಶ್ ಕಾಳಪ್ಪ, ಖ್ಯಾತ ವಕೀಲ ದಿವಾಕರ್, ಸುಪ್ರೀಂ ಕೋರ್ಟ್ ವಕೀಲ ಸಾಲೂರು ಶಿವಕುಮಾರ್ ಸೇರಿದಂತೆ ಅನೇಕ ಪ್ರಮುಖರು ಈಗಾಗಲೇ ಪಕ್ಷ ಸೇರಿ ಸಂಘಟನೆ ಶುರು ಮಾಡಿದ್ದಾರೆ. ಪ್ರತಿ ಜಿಲ್ಲೆಯಲ್ಲೂ ಪಕ್ಷಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

ಸ್ಥಳೀಯ ಸಂಸ್ಥೆ ಚುನಾವಣಾ ಅಖಾಡಕ್ಕೆ..?!

ಮುಂಬರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಅಖಾಡದಲ್ಲಿ ಆಮ್ ಆದ್ಮಿ ಪಾರ್ಟಿ ತಮ್ಮ ಅಭ್ಯರ್ಥಿ ಕಣಕ್ಕೆ ಇಳಿಸಲು ಚಿಂತನೆ ನಡೆಸಿದೆ. ಜೊತೆಗೆ ಬಿಬಿಎಂಪಿ ಚುನಾವಣೆಗೂ ತನ್ನ ಪ್ಲಾನ್ ಪಕ್ಕಾ ಮಾಡಿಕೊಂಡಿದೆ. ಬಳಿಕ 2023ರ ವಿಧಾನ ಸಭಾ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಹಲವು ಕಡೆ ಗೆಲುವು ಸಾಧಿಸಿದರೂ ಅಚ್ಚರಿ ಇಲ್ಲ ಎನ್ನುತ್ತಾರೆ ವಿಶ್ಲೇಷಕರು.

ಉತ್ತರ ಕರ್ನಾಟಕದಲ್ಲಿ ನಾಯಕರ ಆಗಮನ

ಉತ್ತರ ಕರ್ನಾಟಕದ ಹಲವು ರಾಜಕೀಯ ನಾಯಕರು, ಸಾಮಾಜಿಕ ಹೋರಾಟಗಾರರು ಆಮ್ ಆದ್ಮಿ ಪಕ್ಷ ಸೇರುತ್ತಿದ್ದಾರೆ. ದಿನೇ ದಿನೇ ಆಮ್ ಆದ್ಮಿ ಪಕ್ಷದ ಕಡೆ ಜನತೆ ವಾಲುತ್ತಿದ್ದಾರೆ.
ಬಾದಾಮಿಯ ಕಾಂಗ್ರೆಸ್‌ ಮುಖಂಡ ಶಿವರಾಯಪ್ಪ ದೊಡ್ಡರಿಯಪ್ಪ ಜೋಗಿನ್, ಬಾಗಲಕೋಟೆಯ ರೈತ ನಾಯಕ ಮುತ್ತಪ್ಪ ಕೋಮರ್, ಬಿಜೆಪಿ ಮುಖಂಡ ಆನೇಕಲ್‌ ದೊಡ್ಡಯ್ಯ, ಹಾಲುಮತ ಮಹಾಸಭಾ ಸಂಘದ ಯುವ ಘಟಕದ ಅಧ್ಯಕ್ಷ ಸೋಮಣ್ಣ ಮಲ್ಲೂರು, ಕಾರ್ಮಿಕರ ಒಕ್ಕೂಟದ ಅಧ್ಯಕ್ಷೆ ಗೀತಾ ಮಹಾಂತೇಶ್ ಯಾದಗಿ, ಅಧ್ಯಾಪಕರ ಸಂಘದ ಒಕ್ಕೂಟಗಳ ಅಧ್ಯಕ್ಷ ಶ್ರೀನಿವಾಸ್ ಗೌಡ ಸೇರಿದಂತೆ ನೂರಾರು ಮುಖಂಡರು ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆ, ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿರೆಡ್ಡಿ, ಉಪಾಧ್ಯಕ್ಷ ಭಾಸ್ಕರ್ ರಾವ್, ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆ ಯಾದರು.

ಪಾರದರ್ಶಕ ಆಡಳಿತ ಆಮ್ ಆದ್ಮಿಯಿಂದ ಸಾಧ್ಯ

ರಾಜ್ಯದ ಜನರು ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ಗಳಿಗೆ ಅಧಿಕಾರ ಕೊಟ್ಟರೂ ಕರ್ನಾಟಕದ ಅಭಿವೃದ್ಧಿ ಸಾಧ್ಯವಿಲ್ಲ. ಅಲ್ಲಿನ ನೀರಾವರಿ ಯೋಜನೆಗಳು ಹಲವು ದಶಕಗಳಿಂದ ನನೆಗುದಿಗೆ ಬಿದ್ದಿವೆ. ಬಿಡುಗಡೆಯಾದ ಸಾವಿರಾರು ಕೋಟಿ ರೂಪಾಯಿ ಭ್ರಷ್ಟ ರಾಜಕಾರಣಿಗಳ ಜೇಬು ಸೇರಿವೆ. ಪಾರದರ್ಶಕ ಆಡಳಿತ ಆಮ್ ಆದ್ಮಿ ಪಕ್ಷದಿಂದ ಮಾತ್ರ ಸಾಧ್ಯವೆಂಬ ಭರವಸೆಯಿಂದ ಪಕ್ಷ ಸೇರುತ್ತಿದ್ದಾರೆ.

  • ಪೃಥ್ವಿ ರೆಡ್ಡಿ, ಆಮ್ ಆದ್ಮಿ ಅಧ್ಯಕ್ಷರು, ಕರ್ನಾಟಕ

Categories
ಮಲ್ನಾಡ್

ತೀರ್ಥಹಳ್ಳಿ ದಸರಾ ಎಷ್ಟೊಂದು ಸುಂದರ…!

ತೀರ್ಥಹಳ್ಳಿ ದಸರಾ ಎಷ್ಟೊಂದು ಸುಂದರ…!

  • ಅ.3 ರಿಂದ 5ರವರೆಗೆ ಅದ್ದೂರಿ ದಸರಾ ಆಚರಣೆಗೆ ನಿರ್ಧಾರ
  • 15 ಲಕ್ಷ ವೆಚ್ಚದಲ್ಲಿ ಸಂಭ್ರಮದ ದಸರಾ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಅದ್ಧೂರಿಯಾಗಿ ದಸರಾ ಉತ್ಸವ ನಡೆಸಲು ಸಿದ್ಧತೆ ನಡೆದಿದ್ದು ಈ ಬಾರಿ ಮಹಿಳಾ ಮತ್ತು ಮಕ್ಕಳ ದಸರಾ ಕೂಡ ಗಮನ ಸೆಳೆಯಲಿದೆ.
ಮಲೆನಾಡಿನಲ್ಲಿ ಸಾಂಸ್ಕೃತಿಕ ವೈಭವ ಇರುವ ತೀರ್ಥಹಳ್ಳಿ ದಸರಾ ಭಾರೀ ಫೇಮಸ್. ಇಲ್ಲಿನ ರಾಮೇಶ್ವರ ದೇವರ ಮೆರವಣಿಗೆ ಜತೆಗೆ ದಸರಾ ಸಂಭ್ರಮ, ವಿವಿಧ ಕಲಾ ತಂಡಗಳ ರಂಗು, ಟ್ಯಾಬ್ಲೋಗಳು ಗಮನ ಸೆಳೆಯುತ್ತವೆ. ಹಬ್ಬದ ಮಾದರಿಯಲ್ಲಿ ದಸರಾ ನಡೆಯಲಿದೆ.ಈ ವರ್ಷ ಅದ್ದೂರಿ ದಸರಾ ನಡೆಸಲು ತೀರ್ಮಾನಿಸಲಾಗಿದೆ.


ಕಳೆದ ವರ್ಷ 7-8 ಲಕ್ಷ ಬಜೆಟ್ ಅಲ್ಲಿ ದಸರಾ ಮುಗಿದಿದ್ದು ಈ ವರ್ಷಸುಮಾರು 15 ಲಕ್ಷ ವೆಚ್ಚದಲ್ಲಿ ದಸರಾ ಆಚರಣೆ ಮಾಡಲು ಸೋಮವಾರ ನಡೆದ ಸಭೆಯಲ್ಲಿ ನಿರ್ಧಾರ ಮಾಡಲಾಯಿತು.
ಗೃಹ ಸಚಿವ ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 3 ದಿನ ಅದ್ದೂರಿ ದಸರಾ ಆಚರಣೆ ಮಾಡಲು ನಿರ್ಧಾರ ಮಾಡಲಾಯಿತು. ಟ್ಯಾಬ್ಲೋ, ಸಾಂಸ್ಕೃತಿಕ ಕಾರ್ಯಕ್ರಮ, ಪಟ್ಟಣ ಅಲಂಕಾರ ಚೆಂದ ಮಾಡಲು ನಿರ್ಧಾರ ಮಾಡಲಾಗಿದೆ.
ತೀರ್ಥಹಳ್ಳಿಯಲ್ಲಿ ಸಂಭ್ರಮದ ದಸರಾ ಉತ್ಸವವನ್ನು ಆಚರಿಸುವ ಸಲುವಾಗಿ ಪೂರ್ವಭಾವಿ ಸಭೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರರವರ ಅಧ್ಯಕ್ಷತೆಯಲ್ಲಿ ನಡೆಯಿತು. ವೇಳೆ ಅದ್ದೂರಿ ಆಚರಣೆಗೆ ನಿರ್ಧಾರ ಮಾಡಲಾಯಿತು.


ಆನೆ ಕರೆಸಲು ಪಟ್ಟು!: ತೀರ್ಥಹಳ್ಳಿಯಲ್ಲಿ ಪ್ರತಿಯೊಬ್ಬರು ದಸರಾಕ್ಕೆ ಆನೆ ಕರೆಸಬೇಕು ಎಂದು ಆಸೆ ಹೊತ್ತಿದ್ದಾರೆ ಈ ಬಾರಿ ಗೃಹಸಚಿವರು ಇರುವುದರಿಂದ ಆನೆ ಕರೆಸುವುದು ಕಷ್ಟವಾಗುವುದಿಲ್ಲ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದಾಗ ಉತ್ತರಿಸಿದ ಸಚಿವರು ಈ ಬಾರಿ ತೀರ್ಥಹಳ್ಳಿಯಲ್ಲಿ ಅದ್ಧೂರಿಯಾಗಿ ದಸರಾ ಉತ್ಸವ ಆಚರಿಸಬೇಕೆಂದು ಎಲ್ಲರ ಅಭಿಪ್ರಾಯವಾಗಿದ್ದು ಹೀಗಾಗಿ ಈ ಬಾರಿ ವಿಜೃಂಭಣೆಯ ದಸರಾ ನಡೆಸೋಣ. ಆನೆ ಕರೆಸುವುದು ದೊಡ್ಡ ವಿಷಯವಲ್ಲ ಆದರೆ ಅದು ಬಂದು ಹೆಚ್ಚು ಕಡಿಮೆ ಆದರೆ ತೀರ್ಥಹಳ್ಳಿಯಲ್ಲಿ ಓಡಲು ಕೂಡ ಜಾಗವಿಲ್ಲ. ಮೈಸೂರಿನಲ್ಲಿ ಒಂದು ತಿಂಗಳ ಮುಂಚೆಯೇ ಆನೆಯನ್ನು ತರಿಸಿ ಅದಕ್ಕೆ ತರಬೇತಿ ನೀಡುತ್ತಾರೆ. ವಾದ್ಯ, ಪಟಾಕಿ ಶಬ್ಧಕ್ಕೆ ಹೆದರದಂತೆ ಅಭ್ಯಾಸ ನಡೆಸುತ್ತಾರೆ. ನಾವು ತೀರ್ಥಹಳ್ಳಿ ಯಲ್ಲಿ ದಸರಾ ದಿನವೇ ಆನೆಯನ್ನು ಕರೆದುಕೊಂಡು ಬರುತ್ತೇವೆ, ಅಂಬಾರಿ ಹೊರೆಸುತ್ತೇವೆ. ತರಬೇತಿ ಇಲ್ಲದೇ ಏನಾದರೂ ಹೆಚ್ಚು ಕಡಿಮೆಯಾದಲ್ಲಿ ತೊಂದರೆಯಾಗುತ್ತದೆ. ಈ ಬಗ್ಗೆ ಯೋಚಿಸಿ ನಿರ್ಧಾರ ಮಾಡೋಣ ಎಂದರು.


ಹುಲಿವೇಷ ಸ್ಪರ್ಧೆ ಗೋಪಾಲಗೌಡ ರಂಗಮಂದಿರದಲ್ಲಿ ನಡೆಯುತ್ತದೆ. ಇಲ್ಲಿ ನಡೆದರೆ ದಸರಾ ಕಾರ್ಯಕ್ರಮದಲ್ಲಿ ಜನ ಇರುವುದಿಲ್ಲ. ಜನರೆಲ್ಲರೂ ಹುಲಿವೇಷ ಸ್ಪರ್ಧೆ ನೋಡಲು ಗೋಪಾಲಗೌಡ ರಂಗಮಂದಿರಕ್ಕೆ ಬರುತ್ತಾರೆ. ಆದ್ದರಿಂದ ಈ ಸ್ಪರ್ಧೆಯನ್ನು ಕುಶಾವತಿಯ ಬನ್ನಿ ಮಂಟಪದ ಸಮೀಪವೇ ನಡೆಸಬೇಕು ಎಂದು ಸಲಹೆ ನೀಡಲಾಯಿತು.
ನಾಗರಾಜ್ ಶೆಟ್ಟಿ, ತಹಸೀಲ್ದಾರ್ ಅಮೃತ್ ಅತ್ರೇಶ್, ಪ. ಪಂ. ಮುಖ್ಯಾಧಿಕಾರಿ ಕುರಿಯಕೋಸ್, ಸೊಪ್ಪುಗುಡ್ಡೆ ರಾಘವೇಂದ್ರ, ಸಂದೇಶ್ ಜವಳಿ, ಪ.ಪಂ. ಪ್ರಭಾರ ಅಧ್ಯಕ್ಷರಾದ ಜಯಪ್ರಕಾಶ್ ಶೆಟ್ಟಿ, ಡಾ. ನಟರಾಜ್, ಆಶಾಲತಾ, ಸೇರಿ ಹಲವರು ಉಪಸ್ಥಿತರಿದ್ದರು.

ಅ.3-5ರವರೆಗೆ ದಸರಾ ಹಬ್ಬ!

  • ದಸರಾ ಸಮಿತಿಗೆ ಜವಳಿ ಸಂಚಾಲಕ

ತೀರ್ಥಹಳ್ಳಿಯಲ್ಲಿ ಅ.3ರಂದು ದಸರಾ ಶುರುವಾಗಿ ಅ.5ಕ್ಕೆ ಬನ್ನಿ ಮಂಟಪದಲ್ಲಿ ಬನ್ನಿ ಕಡಿಯುವ ಮೂಲಕ ಕಾರ್ಯಕ್ರಮ ಕೊನೆಗೊಳ್ಳುತ್ತದೆ. ಪ್ರತಿ ದಿನ ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತದೆ. ತಹಸೀಲ್ದಾರ್ ಸಮಿತಿ ಅಧ್ಯಕ್ಷರಾಗಿದ್ದು ಗೃಹ ಸಚಿವ ಆರಗ ಜ್ಞಾನೇಂದ್ರ ಗೌರವ ಅಧ್ಯಕ್ಷರಾಗಿದ್ದಾರೆ. ಆರ್ಥಿಕ ಸಂಚಾಲಕರಾಗಿ ಸೊಪ್ಪುಗುಡ್ಡೆ ರಾಘವೇಂದ್ರ ಅವರನ್ನು ಆಯ್ಕೆ ಮಾಡಲಾಗಿದೆ.

Categories
ಜಿಲ್ಲಾ ವಾರ್ತೆ

ತಾಲ್ಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದ ಎಸ್ ಆರ್ ಎಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು

  • ಜಿಲ್ಲಾ ಮಟ್ಟದ ಬಾಸ್ಕೆಟ್ ಬಾಲ್ ನಲ್ಲಿ ಕೂಡ ದ್ವಿತೀಯ ಸ್ಥಾನ

NAMMUR EXPRESS NEWS
ಹೆಬ್ರಿ : ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಿದ ಪದವಿ ಪೂರ್ವ ವಿಭಾಗದ ವಿದ್ಯಾರ್ಥಿಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಎಸ್ ಆರ್ ಎಸ್ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡವು, ಮುನಿಯಾಲ್ ನಲ್ಲಿ ನಡೆದ ಕಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳನ್ನು ಎಸ್ ಆರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಚ್ ನಾಗರಾಜ್ ಶೆಟ್ಟಿ ಹಾಗೂ ಕಾರ್ಯದರ್ಶಿ ಸಪ್ನಾ ಎನ್ ಶೆಟ್ಟಿ ಅಭಿನಂದಿಸಿದ್ದಾರೆ.
ಜಿಲ್ಲಾ ಮಟ್ಟದ ಬಾಸ್ಕೆಟ್ ಬಾಲ್ ನಲ್ಲಿ ಕೂಡ ದ್ವಿತೀಯ ಸ್ಥಾನ:
ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕರ ಕಛೇರಿ ಉಡುಪಿ, ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ ಬಾಸ್ಕೆಟ್ ಬಾಲ್ ಪಂದ್ಯಾಟದಲ್ಲಿ ಎಸ್ ಆರ್ ಆಂಗ್ಲ ಮಾಧ್ಯಮ ಶಾಲೆ ಹೆಬ್ರಿಯ ಬಾಲಕಿಯರ ತಂಡವು ಅಂಡರ್ -14 ಮತ್ತು ಅಂಡರ್ -17 ಎರಡು ವಿಭಾಗದಲ್ಲೂ ದ್ವಿತೀಯ ಸ್ಥಾನವನ ಪಡೆದಿದೆ. ಈ ಸಂದರ್ಭದಲ್ಲಿ ಪ್ರಾಂಶುಪಾಲೆ ಭಗವತಿ, ಮುಖ್ಯೋಪಾಧ್ಯಾಯರಾದ ಗೋಪಾಲಾಚಾರ್ಯ ಮತ್ತು ದೈಹಿಕ ಶಿಕ್ಷಕರಾದ ಮಧುಶೇಖರ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳನ್ನ ಎಸ್ ಆರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಚ್ ನಾಗರಾಜ್ ಶೆಟ್ಟಿ ಹಾಗೂ ಕಾರ್ಯದರ್ಶಿ ಸಪ್ನಾ ಎಂ ಶೆಟ್ಟಿ ಅಭಿನಂದಿಸಿದ್ದಾರೆ.

Categories
ಮಲ್ನಾಡ್

ಮಾನವೀಯತೆ ಮೆರೆದ ಆಟೋ ಚಾಲಕ

  • ಆಟೋದಲ್ಲಿ ಬಿಟ್ಟು ಹೋಗಿದ್ದ ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣ ಮಹಿಳೆಗೆ ವಾಪಾಸ್

NAMMUR EXPRESS NEWS
ಶಿವಮೊಗ್ಗ: ಮಾನವೀಯತೆ ಎಲ್ಲಡೆ ಪ್ರಶಂಸೆಗೆ ಒಳಗಾಗುತ್ತದೆ. ಯಾವುದೇ ವ್ಯಕ್ತಿ ಮಾನವೀಯತೆ ಕಾರ್ಯ ಮಾಡಿದರೂ ಆತ ಮೆಚ್ಚುಗೆಗೆ ಪಾತ್ರವಾಗುತ್ತಾರೆ. ಶಿವಮೊಗ್ಗನಗರದಲ್ಲಿ ಆಟೋ ಚಾಲಕ ಮಾನವೀಯತೆ ಮೆರೆದಿದ್ದು, ಇವರ ಕಾರ್ಯಕ್ಕೆ ಜನರು ಪ್ರಶಂಸಿಸುತ್ತಿದ್ದಾರೆ.
ಶಿವಮೊಗ್ಗ ನಗರದಲ್ಲಿ ಮಹ್ಮದ್ ಗೌಸ್ ಎಂಬುವರು ಆಟೋ ಚಾಲನೆ ಮಾಡುತ್ತಾ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಸೆ.10ರಂದು ಅವರ ಆಟೋದಲ್ಲಿ ಮಹಿಳೆ ಶಹತಾಜ್ ಭಾನು ಎಂಬುವರು ನಗರದ ಅಶೋಕ ಸರ್ಕಲ್‌ನಿಂದ ಟಿಪ್ಪುನಗರಕ್ಕೆ ಪ್ರಾಯಾಣಿಸಿದ್ದರು.
ಮಹಿಳೆ ಶಹತಾಜ್ ಭಾನು ಆಟೋದಿಂದ ಇಳಿಯುವಾಗ ಆಟೋದಲ್ಲಿ ಬ್ಯಾಗ್ ಬಿಟ್ಟು ಹೋಗಿದ್ದರು. ನಂತರ ಮಹ್ಮದ್ ಗೌಸ್ ಬ್ಯಾಗ್‌ನ್ನು ಮಹಿಳೆಗೆ ವಾಪಾಸ್ ಮಾಡಿ ಮಾನಿವಯತೆ ಮೆರದಿದ್ದಾರೆ. ಬ್ಯಾಗಿನಲ್ಲಿ ಲಕ್ಷಾಂತರ ಬೆಲೆ ಬಾಳುವ ಬ್ಯಾಗ್ ನಲ್ಲಿ 40 ಗ್ರಾಂ ಚಿನ್ನಾಭರಣವಿತ್ತು.
ಆಟೋ ಚಾಲಕ ಮಹಮ್ಮದ್ ಗೌಸ್ ಕಾರ್ಯಕ್ಕೆ ಎಸ್ಪಿ ಅಭಿನಂದನೆ ಸಲ್ಲಿಸಿದ್ದು, ಜಿಲ್ಲಾ ರಕ್ಷಣಾಧಿಕಾರಿ ಡಾ. ಲಕ್ಷ್ಮೀ ಪ್ರಸಾದ್ ಅಭಿನಂದನಾ ಪತ್ರ ನೀಡಿ ಸನ್ಮಾನ ಮಾಡಿದ್ದಾರೆ.

Categories
ಮಲ್ನಾಡ್ ರಾಜ್ಯ

ಅಂಬರೀಶ್ ಸಾವು ಪ್ರಕರಣ , ಕೇಸ್ ಮುಚ್ಚಿಹಾಕಲು ಗೃಹಸಚಿವ ಆರಗ ಜ್ಞಾನೇಂದ್ರ ಯತ್ನ

ಮತ್ತೆ ಪ್ರತಿಧ್ವನಿಸಿದ ಅಂಬರೀಶ್ ಸಾವು ಪ್ರಕರಣ!

  • ಕೇಸ್ ಮುಚ್ಚಿಹಾಕಲು ಗೃಹಸಚಿವ ಆರಗ ಜ್ಞಾನೇಂದ್ರ ಯತ್ನ: ಬೇಳೂರು ಗೋಪಾಲ ಕೃಷ್ಣ ಆರೋಪ
  • ಕುಟುಂಬದ ನ್ಯಾಯಕ್ಕಾಗಿ ಪ್ರತಿಭಟನೆ ಎಚ್ಚರಿಕೆ

NAMMUR EXPRESS NEWS
ತೀರ್ಥಹಳ್ಳಿ: ಹೊಸ ನಗರ ನಗರ ಹೋಬಳಿಯ ನೇಗಿಲೋಣಿ ಗ್ರಾಮದ ಅಂಬರೀಶ್ ಎನ್ನುವವರ ಗನ್ ಶಾಟ್ ಪ್ರಕರಣ ಇದೀಗ ರಾಜಕೀಯ ಟರ್ನ್ ಪಡೆದುಕೊಂಡಿದೆ.
ಅಂಬರೀಶ್ ಕೊಲೆ ಕೇಸನ್ನು ಮುಚ್ಚಿಹಾಕಲು ಗೃಹಸಚಿವ ಆರಗ ಜ್ಞಾನೇಂದ್ರ ಪ್ರಯತ್ನಿಸುತ್ತಿದ್ದಾರೆ ಎಂದು ಮಾಜಿ ಶಾಸಕ, ಈಡಿಗ ಸಮುದಾಯದ ಪ್ರಭಾವಿ ನಾಯಕ ಬೇಳೂರು ಗೋಪಾಲ ಕೃಷ್ಣ ಆರೋಪಿಸಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ ಇತ್ತ ಗೃಹ ಸಚಿವ ಆರಗ ಜ್ಞಾನೇಂದ್ರ ಘಟನೆ ನಡೆದ ಬಳಿಕ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದರು. ಈ ನಡುವೆ ಮಂಗಳವಾರ ಬೇಳೂರು ಗೋಪಾಲಕೃಷ್ಣ ಮೃತ ಅಂಬರೀಷ್ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.


ಬೇಳೂರು ಹೇಳಿದ್ದೇನು..?: ನೇಗಿಲೋಣಿ ಗನ್ ಶಾಟ್ ಪ್ರಕರಣದಲ್ಲಿ ಘಟನೆ 26 ದಿನವಾದರೂ ಕುಟುಂಬದವರಿಗೆ ನ್ಯಾಯ ಸಿಕ್ಕಿಲ್ಲ. ಈ ಕೂಡಲೇ ಸರಿಯಾದ ರೀತಿಯಲ್ಲಿ ತನಿಖೆ ನಡೆಸಿ ಕುಟುಂಬದವರಿಗೆ ನ್ಯಾಯ ಕೊಡಿಸದಿದ್ದರೆ ಉಗ್ರ ಹೋರಾಟದ ಮಾಡುತ್ತೇವೆ. ಬಡ ಕುಟುಂಬದ ಅಂಬರೀಶ್ ಎನ್ನುವವನನ್ನು ಕೀರ್ತಿ ಎನ್ನುವ ಯುವಕ ಆಗಸ್ಟ್ 26 ರಾತ್ರಿ ಸಂಜೆ 7 ಗಂಟೆಗೆ ಕರೆದುಕೊಂಡು ಹೋಗುತ್ತಾನೆ. ಮಾರನೇ ದಿನವಾದರೂ ಅಂಬರೀಶ್ ಮನೆಗೆ ಬರದಿದ್ದಾಗ ಎಲ್ಲರೂ ಹುಡುಕಲು ಹೋದಾಗ ಮದ್ಯಾಹ್ನ ದ ವೇಳೆ ಶವ ಸಿಗುತ್ತದೆ. ಕುಟುಂಬದವರು ಪೊಲೀಸರಿಗೆ ಕಂಪ್ಲೇಂಟ್ ಮಾಡದಿದ್ದರೂ ವಿಷಯ ತಿಳಿಸದಿದ್ದರೂ ಆ ಜಾಗಕ್ಕೆ ಪೊಲೀಸರು ಬಂದಿದ್ದಾರೆ. ಕಂಪ್ಲೇಂಟ್ ಆಗದೆ ಏಕಾಏಕಿ ಪೊಲೀಸರು ಆ ಜಾಗಕ್ಕೆ ಹೇಗೆ ಬಂದರು. ಪೊಲೀಸರಿಗೆ ಮಾಹಿತಿ ತಿಳಿಸಿದವರ್ಯಾರು?
ಈ ಘಟನೆ ಅನುಮಾನ ಹುಟ್ಟಿಸಿದೆ. ಹೀಗಾಗಿ ಕೂಡಲೇ ತನಿಖೆ ನಡೆಸಬೇಕು. ಹಿಂದೂ ಕಾರ್ಯಕರ್ತರಾದ ಹರ್ಷ, ಪ್ರವೀಣ್ ಹತ್ಯೆಯಾದಾಗ ಆ ವಿಷಯವನ್ನು ದೊಡ್ಡದಾಗಿ ಮಾಡ್ತೀರಿ, ನಿಮ್ಮ ಕ್ಷೇತ್ರದಲ್ಲಿ ಶೂಟೌಟ್ ಆದರೂ ಕಣ್ಣು ಮುಚ್ಚಿ ಕುಳಿತ್ತಿದ್ದೀರಾ ಎಂದು ಬೇಳೂರು ಪ್ರಶ್ನೆ ಮಾಡಿದ್ದಾರೆ.
ನಾಯಕರಾದ ಟಿ ಎಲ್ ಸುಂದರೇಶ್, ಮಟ್ಟಿನಮನೆ ರಾಮಚಂದ್ರ, ಮಾಸ್ತಿಕಟ್ಟೆ ವಾಸಪ್ಪ, ವಿಕ್ರಂ, ನಾಗರಾಜ್ ಪೂಜಾರಿ, ತಾರಾಮೂರ್ತಿ, ಸೋಮಣ್ಣ, ಪದ್ಮನಾಬ್ ಪೂಜಾರಿ ಸೇರಿ ಹಲವರು ಉಪಸ್ಥಿತರಿದ್ದರು.

ಹಿಂದೂ ಸಾವು ಅಲ್ವಾ ಇದು..?

ಮುಸ್ಲಿಂ ಸಮುದಾಯದವರು ಸಾಯಿಸಿದ್ರೆ ಮಾತ್ರ ಹಿಂದುತ್ವ ಅಂತ ಪ್ರಚಾರ ಕೊಡ್ತೀರಾ, ಇವರು ಹಿಂದೂಗಳಲ್ವಾ?, ಸಾಯಿಸಿರುವ ವ್ಯಕ್ತಿ ಬಿಜೆಪಿ ಕಾರ್ಯಕರ್ತನಾಗಿದ್ದು ತಮ್ಮ ಕಾರ್ಯಕರ್ತರನ್ನು ಉಳಿಸಲು ಈ ರೀತಿ ಪ್ರಯತ್ನವನ್ನು ಗೃಹಸಚಿವರು ಮಾಡುತ್ತಿದ್ದಾರೆ ಎಂದು ಬೇಳೂರು ಗೋಪಾಲಕೃಷ್ಣ ಆರೋಪಿಸಿದ್ದಾರೆ.
ಅಂಗಡಿ ನಾಗರಾಜ್ ಎನ್ನುವವರ ಗನ್ ಎಂದು ಕೀರ್ತಿ ಹೇಳಿದ್ದು ಕೀರ್ತಿನೂ ಹಾಗೂ ನಾಗರಾಜ್ ಇಬ್ಬರು ಕಾಣಿಸುತ್ತಿಲ್ಲ. ಈ ಒಂದು ಕೊಲೆ ಕೇಸನ್ನು ಮುಚ್ಚಿಹಾಕಲು ಗೃಹಸಚಿವ ಆರಗ ಜ್ಞಾನೇಂದ್ರ ಪ್ರಯತ್ನಿಸುತ್ತಿದ್ದಾರೆ.
ಇನ್ನು ಕೀರ್ತಿ ಕುಟುಂಬದವರು ಅಂಬರೀಶ್ ಕುಟುಂಬದವರ ಬಳಿ ಕೇಸ್ ಮುಚ್ಚಿ ಹಾಕಲು ಪೊಲೀಸರ ಸಮ್ಮುಖದಲ್ಲೆ ರಾಜೀಯಾಗಲು ಎರಡು ಲಕ್ಷ ಕೊಡಲು ಬಂದಿದ್ದರು. ಕೂಡಲೇ ತನಿಖೆ ನಡೆಸಿ ಕುಟುಂಬಕ್ಕೆ ನ್ಯಾಯ ಸಿಗಬೇಕು. ಇಲ್ಲವಾದಲ್ಲಿ ನಾವು ಹೋರಾಟ ಮಾಡುತ್ತೇವೆ ಎಂದಿದ್ದಾರೆ

Categories
ಸಿನಿಮಾ

ಪುನೀತ್ ರಾಜ್ ಕುಮಾರ್ ಅತ್ಯುತ್ತಮ ನಟ – ಸೈಮಾ ಅವಾರ್ಡ್ 2022

ಪುನೀತ್ ರಾಜ್ ಕುಮಾರ್ ಅತ್ಯುತ್ತಮ ನಟ!

  • ಸೈಮಾ ಅತ್ಯುತ್ತಮ ನಾಯಕ ನಟ ಪ್ರಶಸ್ತಿ
  • 10ನೇ ವರ್ಷದ ಸೈಮಾ ಅವಾರ್ಡ್ ಕಾರ್ಯಕ್ರಮ ರಂಗು

NAMMUR EXPRESS NEWS
ಬೆಂಗಳೂರು: ನಟ ಪುನೀತ್ ರಾಜಕುಮಾರ್ ನಮ್ಮನ್ನು ಆಗಲಿ ಈಗ ಒಂದು ವರ್ಷವಾಗುತ್ತಾ ಬಂದಿದೆ. ಆದರೂ ಅವರ ನೆನಪು ಮಾಸಿಲ್ಲ. ಅವರ ಹೆಸರಲ್ಲಿ ಪ್ರತಿ ದಿನ ಒಂದಲ್ಲ ಒಂದು ಮಾನವೀಯ ಕೆಲಸ ನಡೆಯುತ್ತಿದೆ.
ಪುನೀತ್ ರಾಜ್ ಕುಮಾರ್ ಅವರಿಗೆ ಸೈಮಾ ಅತ್ಯುತ್ತಮ ನಾಯಕನಟ ಪ್ರಶಸ್ತಿ ದೊರೆತಿದೆ. ಅಲ್ಲದೇ ಕಾರ್ಯಕ್ರಮದಲ್ಲಿ ಪುನೀತ್ ರಾಜ್‌ಕುಮಾರ್ ಅವರಿಗೆ ವಿಶೇಷ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಶಿವರಾಜ್ ಕುಮಾರ್ ಹಾಡು ಹೇಳಿ ತಮ್ಮನಿಗೆ ನಮನ ಅರ್ಪಿಸಿದ್ದಾರೆ.


ಸೈಮಾ 2022 ಪ್ರಶಸ್ತಿ ಪ್ರಧಾನ ಅದ್ಧೂರಿ ಕಾರ್ಯಕ್ರಮವು ಬೆಂಗಳೂರಿನ ಯಶ್ ಸೇರಿದಂತೆ ಹಲವು ಗಣ್ಯರು ಅತಿಥಿಗಳಾಗಿ ಆಗಮಿಸುತ್ತಿದ್ದಾರೆ.
ಸೌತ್ ಇಂಡಿಯನ್ ಇಂಟರ್‌ನ್ಯಾಶನಲ್ ಮೂವೀ ಅವಾರ್ಡ್ಸ್’ 2012ರಿಂದ ಆರಂಭವಾಗಿದೆ. ಹೀಗಾಗಿ, ಸೈಮಾ ಈ ಬಾರಿ 10ನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿದೆ. ಇದಕ್ಕಾಗಿಯೇ ಈ ವರ್ಷದ ಸೈಮಾ ಕಾರ್ಯಕ್ರಮವು ಬಹಳ ವಿಶೇಷವಾಗಿದೆ.


ಸೈಮಾ ಪ್ರಶಸ್ತಿ ಅಡಿಯಲ್ಲಿ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಚಲನಚಿತ್ರರಂಗದ ಸಾಧಕರಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಅತ್ಯುತ್ತಮ ಚಿತ್ರ ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಪ್ರತಿ ಭಾಷೆಯಲ್ಲಿ ಒಟ್ಟು 19 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಪ್ರತಿ ಬಾರಿಯೂ ಸೈಮಾ ಕಾರ್ಯಕ್ರಮವನ್ನು ಅದ್ದೂರಿಯಾಗಿ ಕಾರ್ಯಗತಗೊಳಿಸಲಾಗುತ್ತದೆ. ಈ ಬಾರಿಯೂ ಸೈಮಾ ಅದ್ದೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ. ಈ ಬಾರಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ನಡೆಯುತ್ತಿರುವುದು ಕನ್ನಡಿಗರ ಪಾಲಿಗೆ ವಿಶೇಷವಾಗಿದೆ.

ಕನ್ನಡದಲ್ಲಿ ಪ್ರಶಸ್ತಿ ಯಾರಿಗೆ..?

ಸೈಮಾದಲ್ಲಿ 2021ರಲ್ಲಿ ತೆರೆಕಂಡ ಸಿನಿಮಾಗಳಿಗೆ ಈ ವರ್ಷ ಪ್ರಶಸ್ತಿ ಪ್ರಧಾನ ಮಾಡುತ್ತಾರೆ. ಈ ಸಲ ಕನ್ನಡ ಸಿನಿರಂಗದಲ್ಲಿ 2021ರಲ್ಲಿ ತೆರೆಕಂಡ ತರುಣ್ ನಿರ್ದೇಶನದ ರಾರ್ಬಟ್ ಚಿತ್ರದ ಸುಧಾಕರ್‌ರವರ ಸಿನಿಮಾಟೋಗ್ರಫಿಗೆ “ಬೆಸ್ಟ್ ಸಿನಿಮಾಟೋಗ್ರಫಿ” ಪ್ರಶಸ್ತಿ ಪಡೆದುಕೊಂಡಿದ್ದಾರೆ. ವಾಸುಕಿ ವೈಭವ್‌ರವರಿಗೆ “ನಿನ್ನ ಸನಿಹಕೆ” ಸಿನಿಮಾದ “ನೀ ಪರಿಚಯ.” ಹಾಡಿಗೆ “ಅತ್ಯುತ್ತಮ ಗೀತೆ ರಚನಕಾರ” ಎನ್ನುವ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.


ಸೈಮಾ 2022ರಲ್ಲಿ ಕನ್ನಡ ಸಿನಿಮಾರಂಗಕ್ಕೆ ಈ ಕೆಳಗಿನಂತೆ ಪ್ರಶಸ್ತಿಗಳು ಲಭಿಸಿವೆ:
ಅತ್ಯುತ್ತಮ ನಟ : ಪುನೀತ್ ರಾಜ್‌ಕುಮಾರ್ (ಯುವರತ್ನ
ಅತ್ಯುತ್ತಮ ನಟಿ : ಆಶಿಕಾ ರಂಗನಾಥ್ (ಮದಗಜ)

ಅತ್ಯುತ್ತಮ ನಟಿ ಕ್ರಿಟಿಕ್ಸ್: ಅಮೃತಾ ಅಯ್ಯಂಗ‌ (ಬಡವ ರಾಸ್ಕಲ್ )
ಅತ್ಯುತ್ತಮ ಹಾಸ್ಯನಟ : ಚಿಕ್ಕಣ್ಣ (ಪೊಗರು)
ಅತ್ಯುತ್ತಮ ನಿರ್ದೇಶನ : ತರುಣ್ ಸುಧೀರ್ (ರಾಬರ್ಟ್)
ಅತ್ಯುತ್ತಮ ಪೋಷಕನಟ : ಪ್ರಮೋದ್ (ರತ್ನನ್ ಪ್ರಪಂಚ)

ಅತ್ಯುತ್ತಮ ಪೋಷಕನಟಿ : ಆರೋಹಿ ನಾರಾಯಣ್‌
(ದೃಶ್ಯ 2)
ಅತ್ಯುತ್ತಮ ಹಿನ್ನಲೆ ಗಾಯಕಿ : ಚೈತ್ರಾ ಆಚಾರ್ (“ಗರುಡ)
ಗಮನ ವೃಷಭ ವಾಹನ” ಚಿತ್ರದ “ಸೋಜುಗಾದ
ಸೂಜುಮಲ್ಲಿಗೆ ಹಾಡು”)
ಅತ್ಯುತ್ತಮ ಸಂಗೀತ ನಿರ್ದೇಶಕ : ಅರ್ಜುನ್ ಜನ್ಯ

Categories
ರಾಜ್ಯ

ರಾಜ್ಯದ ಜನತೆಗೆ ಮತ್ತೊಂದು ಶಾಕ್

ರಾಜ್ಯದ ಜನತೆಗೆ ಮತ್ತೊಂದು ಶಾಕ್

  • ಇಂದಿನಿಂದ ಹಾಲಿನ ದರ 3 ರೂ ಹೆಚ್ಚಳ?

NAMMUR EXPRESS NEWS
ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಬರೆ ಬೀಳಲಿದೆ. ರಾಜ್ಯ ಸರ್ಕಾರದ ಮೀನಾಮೇಷದ ಮಧ್ಯೆಯೇ ಹಾಲಿನ ದರ ಹೆಚ್ಚಳಕ್ಕೆ ಕೆಎಂಎಫ್ ನಿರ್ಧಾರ ಮಾಡಿದೆ ಎಂದು ಹೇಳಲಾಗಿದೆ. ಸರ್ಕಾರದ ಒಪ್ಪಿಗೆ ಕೇಳದೆ ಕರ್ನಾಟಕ ಹಾಲು ಮಹಾಮಂಡಳಿ ದರ ಏರಿಸೇ ಬಿಡುತ್ತಾ ಎಂಬ ಮಾತುಗಳು ಕೇಳಿಬರುತ್ತಿದೆ. ಪ್ರತಿ ಲೀಟರ್‌ಗೆ ಹಾಲಿನ ದರವನ್ನು 3 ರೂ. ಏರಿಕೆ ಮಾಡಲು ಕೆಎಂಎಫ್ ನಿರ್ಧಾರ ಮಾಡಿದೆ ಎಂದು ಹೇಳಲಾಗುತ್ತಿದೆ. ಸಂಕಷ್ಟದಲ್ಲಿರುವ ರೈತರಿಗೆ ಸಹಕರಿಸುವ ನಿಟ್ಟಿನಲ್ಲಿ ಹಾಲಿನ ದರ ಏರಿಕೆಗೆ ಸರ್ಕಾರಕ್ಕೆ ಕೆಎಂಎಫ್ ಈ ಹಿಂದೆಯೇ ಪ್ರಸ್ತಾವನೆ ಸಲ್ಲಿಸಿತ್ತು.


ಕಳೆದ 8 ತಿಂಗಳ ಹಿಂದೆಯೇ ಹಾಲಿನ ದರವನ್ನು 5 ರೂ. ಏರಿಸುವಂತೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ಪ್ರಸ್ತಾವನೆ ಇಡಲಾಗಿತ್ತು. ಆದರೆ, ಈವರೆಗೂ ಸರ್ಕಾರದಿಂದ ಯಾವುದೇ ಉತ್ತರ ಸಿಗದ ಹಿನ್ನೆಲೆ ಹಾಲು ಮಹಾಮಂಡಳಿಯ 14 ಒಕ್ಕೂಟಗಳಿಂದ ಹಾಲಿನ ದರವನ್ನು 3 ರೂ. ಹೆಚ್ಚಳಕ್ಕೆ ನಿರ್ಧಾರ ಮಾಡಿದೆ ಎನ್ನಲಾಗಿದೆ. ಈ ಬಗ್ಗೆ ಸೋಮವಾರ ದೆಹಲಿಯಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಹಾಲು ಮಹಾಮಂಡಳಿಯಿಂದ ಮಹತ್ವದ ಸಭೆ ನಡೆಯುತ್ತಿದ್ದು, ಸಭೆಯ ಬಳಿಕ ದರ ಏರಿಕೆ ಘೋಷಣೆ ಮಾಡುವ ಸಾಧ್ಯತೆ ಇದೆ. ಕಳೆದ ಮೂರು ವರ್ಷದ ಹಿಂದೆ 2 ರೂಪಾಯಿ ಏರಿಕೆಯಾಗಿತ್ತು.

ಪ್ರತಿ ಬಾರಿಯೂ ಕೆಎಂಎಫ್ ರಾಜ್ಯ ಸರ್ಕಾರದ ಅನುಮತಿ ಪಡೆದೇ ಹಾಲಿನ ದರ ಹೆಚ್ಚಳ ಮಾಡುತ್ತಿತ್ತು. ಆರ್ಥಿಕವಾಗಿ ಹಾಗೂ ಹಲವು ಯೋಜನೆಗಳೊಂದಿಗೆ ಸರ್ಕಾರದ ಜತೆ ಸಹಭಾಗಿತ್ವ ಇರುವುದರಿಂದ ರಾಜ್ಯ ಸರ್ಕಾರದ ಸಮ್ಮತಿ ಇಲ್ಲದೆ ಹಾಲಿನ ದರಗಳ ಬಗ್ಗೆ ಕೆಎಂಎಫ್ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ. ಆದರೆ, ಪ್ರಸ್ತುತ ಅಗತ್ಯ ವಸ್ತುಗಳ ಬೆಲೆ ಏರಿಕೆ, ಹಾಲಿನ ಉತ್ಪಾದನಾ ವೆಚ್ಚ ಹೆಚ್ಚಳ, ಅತಿವೃಷ್ಟಿಯಿಂದ ರೈತರಿಗೆ ಉಂಟಾಗಿರುವ ತೀವ್ರ ಸಂಕಷ್ಟದಿಂದಾಗಿ ಹಾಲಿನ ದರ ಹೆಚ್ಚಳ ಅನಿವಾರ್ಯವಾಗಿದೆ. ಸರ್ಕಾರವು ದರ ಹೆಚ್ಚಳಕ್ಕೆ ಮೀನಾಮೇಷ ಎಣಿಸುತ್ತಿರುವುದರಿಂದ ತನಗೆ ಇರುವ ಅಧಿಕಾರವನ್ನು ಬಳಸಿಕೊಂಡು ಕೆಎಂಎಫ್‌ನಿಂದಲೇ ದರ ಹೆಚ್ಚಳ ಮಾಡಲು ಆದೇಶ ಮಾಡಬೇಕು. ಒಕ್ಕೂಟಗಳಿಗೆ ಈ ಅಧಿಕಾರ ಇರುವುದರಿಂದ ವಿಳಂಬ ಮಾಡಬಾರದು ಎಂದು ಸಭೆಯಲ್ಲಿ ತೀರ್ಮಾನವಾಗಿದ್ದು, ಎಲ್ಲರ ಒತ್ತಾಯದ ಮೇರೆಗೆ ಈ ಬಗ್ಗೆ ನಿರ್ಣಯವನ್ನೂ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

Categories
ಶಿಕ್ಷಣ

ಯುಜಿಸಿಯಿಂದ ಮಹತ್ವದ ಘೋಷಣೆ

  • ಆನ್ ಲೈನ್ ಗೂ ಸಾಮಾನ್ಯ ಶಿಕ್ಷಣದಷ್ಟೇ ಮಾನ್ಯತೆ

NAMMUR EXPRESS NEWS
ನವದೆಹಲಿ: ಆನ್‌ಲೈನ್ ಮತ್ತು ದೂರ ಶಿಕ್ಷಣ ಮುಖಾಂತರ ಪಡೆದುಕೊಳ್ಳುವ ಎಲ್ಲಾ ಪದವಿ, ಸ್ನಾತಕೋತ್ತರ ಪದವಿಗಳನ್ನು ಸಾಮಾನ್ಯ ವಿಧಾನದ ಪದವಿಗಳಿಗೆ ಸಮಾನವಾಗಿ ಪರಿಗಣಿಸಬೇಕು ಎಂದು ಯುಜಿಸಿ ಹೇಳಿದೆ.
ಉನ್ನತ ಪದವಿ ನೀಡುವ ಶಿಕ್ಷಣ ಸಂಸ್ಥೆಗಳು ಆಯೋಗದ ನಿಯಮಗಳಿಗೆ ಒಳಪಟ್ಟಿದ್ದರೆ ಅವು ನೀಡುವ ಎಲ್ಲಾ ಪದವಿಗಳನ್ನು ಸಮಾನವಾಗಿ ಪರಿಗಣಿಸ ಬೇಕು ಎಂದು ಇತ್ತೀಚಿನ ಅಧಿಸೂಚನೆ ಯಲ್ಲಿ ಯುಜಿಸಿ ಸ್ಪಷ್ಟಪಡಿಸಿದೆ. ದೂರ ಶಿಕ್ಷಣ ಅಥವಾ ಆನ್ ಲೈನ್ ಮುಖಾಂತರ ಪಡೆದುಕೊಳ್ಳುವ ಪದವಿ, ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಡಿಪ್ಲೊಮಾ ಮುಂತಾದ ಎಲ್ಲಾ ಪದವಿಗಳು ಸಾಂಪ್ರದಾಯಿಕ ಶಿಕ್ಷಣದಷ್ಟೇ ಮಹತ್ವ ಹೊಂದಿವೆ ಎಂದು ಯುಜಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

Categories
ರಾಜ್ಯ

ಕರ್ನಾಟಕದಲ್ಲಿ ನಿಲ್ಲದ ಮಳೆ ಆರ್ಭಟ!

ಕರ್ನಾಟಕದಲ್ಲಿ ನಿಲ್ಲದ ಮಳೆ ಆರ್ಭಟ!
– 2 ದಿನ ಭಾರೀ ಮಳೆ ಸಾಧ್ಯತೆ: ಹವಾಮಾನ ಇಲಾಖೆ
– ಬೆಂಗಳೂರಲ್ಲಿ 3 ತಿಂಗಳು ಮಳೆ ನಿಲ್ಲಲ್ಲ
– ರಾಜ್ಯದಲ್ಲಿ ಮಳೆಗೆ ಮತ್ತೆ ಮೂವರ ಬಲಿ

NAMMUR EXPRESS NEWS
ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ಮಳೆ ಮುಂದುವರೆದಿದ್ದು ರಾಜ್ಯದಲ್ಲಿ ಒಂದೇ ಸಮನೆ ಮಳೆ ಸುರಿಯುತ್ತಿದೆ.
ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದ್ದು,
ಸಾಮಾನ್ಯವಾಗಿ ಚೌತಿ ಕಳೆದ ಬಳಿಕ ಕ್ರಮೇಣವಾಗಿ ಮಳೆಕಡಿಮೆಯಾಗುತ್ತಿತ್ತು, ಆದರೆ ಈ ಬಾರಿ ಮಳೆ ನಿಲ್ಲುವ ಲಕ್ಷಣವೇ ಕಾಣುತ್ತಿಲ್ಲ. ಮಳೆಗಾಲ ಆರಂಭದಲ್ಲಿ ಗುಡುಗು, ಸಿಡಿಲು ಮಳೆಯನ್ನು ನಾವು ನೋಡುತ್ತೇವೆ, ಆದರೆ ಈ ಬಾರಿ ಮಳೆಗಾದಲ್ಲೂ ಗುಡುಗು, ಸಿಡಿಲಿನ ಆರ್ಭಟದ ಜತೆಗೆ ಮಳೆಯಾಗಿದೆ.
ಕರ್ನಾಟಕದಲ್ಲಿ ಎಲ್ಲೆಲ್ಲಿ ಮಳೆ:

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಸೆ.13ರವರೆಗೆ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಮಲೆನಾಡು, ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದೆ.


ಬೆಂಗಳೂರಲ್ಲಿ ಮಳೆ ನಿಲ್ಲಲ್ಲ!: ಬೆಂಗಳೂರಿನಲ್ಲಿ ಮಳೆ ನಿಲ್ಲುವ ಸೂಚನೆ ಕಾಣುತ್ತಿಲ್ಲ. ನವೆಂಬರ್​ವರೆಗೂ ಮಳೆ ಸಾಧ್ಯತೆ ಎಂದು ಹವಾಮಾನ ಇಲಾಖೆಯ ವಿಜ್ಞಾನಿ ಪ್ರಸಾದ್ ಮುನ್ಸೂಚನೆ ನೀಡಿದ್ದಾರೆ. ಈ ಬಾರಿ ದಾಖಲೆಯ ಮಟ್ಟದ ಪ್ರಮಾಣದ ಮಳೆ ಸಾಧ್ಯತೆಯಿದ್ದು, ಈಗಾಗಲೇ ಮಳೆಯಿಂದ ಬೆಂಗಳೂರಿನ ಜನತೆ ತತ್ತರಿಸಿದ್ದಾರೆ. ಇನ್ನೂ 2 ತಿಂಗಳು ಮಳೆ ಮುಂದುವರಿದರೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ಈ ವರ್ಷ ಸೆಪ್ಟೆಂಬರ್​ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸಾಧ್ಯತೆಯಿದ್ದು, ಸೆಪ್ಟೆಂಬರ್ ‌ತಿಂಗಳು 211 MM ವಾಡಿಕೆ ಮಳೆಯಾಗಿದೆ. ಆದ್ರೆ ಈ ತಿಂಗಳು ಸೆ.1 ರಿಂದ ಸೆ. 7ರವರೆಗೆ 227 MM ಮಳೆ ದಾಖಲಾಗಿದೆ.


ಬೆಂಗಳೂರಲ್ಲಿ ಯುವತಿ ಬಲಿ: ಬೆಂಗಳೂರಲ್ಲಿ ಚರಂಡಿ ನೀರಿಗೆ ಮತ್ತೊಂದು ಬಲಿಯಾಗಿದೆ. 23 ವರ್ಷದ ತಾರಾ ಬಡಾಯಿಕ್ ಸಾವನ್ನಪ್ಪಿದ ದುರ್ದೈವಿ. ಈ ಘಟನೆ ಎಚ್ ಬಿ ಆರ್ ಲೇಔಟ್ ನ ಅಶ್ವಥ್ ನಗರ ಮುಖ್ಯ ರಸ್ತೆಯಲ್ಲಿ ನಡೆದಿದೆ. ತಾರಾ ರಾತ್ರಿ 12.30 ರ ಸುಮಾರಿಗೆ ಡಿಯೊ ಸ್ಕೂಟರ್ ನಲ್ಲಿ ಹೋಗ್ತಿದ್ದಳು. ಈಕೆಯ ಹಿಂಬದಿಯಲ್ಲಿ 38 ವರ್ಷದ ದಿಲೀಪ್ ಕುಳಿತಿದ್ದರು. ಈ ವೇಳೆ ಸ್ಕೂಟರ್ ನಿಯಂತ್ರಣ ತಪ್ಪಿ ಪಕ್ಕದಲ್ಲಿದ್ದ ಡ್ರೈನೇಜ್ ಗೆ ಬಿದ್ದಿದ್ದಾಳೆ.
ಚರಂಡಿಗೆ ಬಿದ್ದರಿಂದ ಯುವತಿ ತೊಡೆಗೆ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾಳೆ.


ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹೂಲಿಕಟ್ಟಿಯಲ್ಲಿ ಮನೆ ಕುಸಿದು ಮಹಿಳೆಯೊಬ್ಬಳು ಮೃತಪಟ್ಟಿದ್ದಾಳೆ.
ವಿದ್ಯುತ್ ತಂತಿ ಸರಿಪಡಿಸಲು ಹೋಗಿ ಲೈನ್ ಮ್ಯಾನ್ ಒಬ್ಬರು ಮೃತಪಟ್ಟ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಮಹೇಶ್ ಗೌಡ (40) ಎಂದು ಗುರುತಿಸಲಾಗಿದೆ. ಗುಬ್ಬಿ ತಾಲೂಕಿನ ತಿಪಟೂರಿನಲ್ಲಿ ಅವಘಡ ಸಂಭವಿಸಿದೆ. ಮಹೇಶ್ ಅವರು ಕೆರೆ ಮಧ್ಯೆ ನೀರಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸರಿಪಡಿಸಲು ಹೋಗಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

Categories
ಮಲ್ನಾಡ್

ಶೃಂಗೇರಿ ಕ್ಷೇತ್ರದಲ್ಲಿ ಮಳೆ ಅವಾಂತರ: ಶಾಸಕರ ಸಹಕಾರ

  • ಕ್ಷೇತ್ರಕ್ಕೆ ಹೆಚ್ಚು ಪರಿಹಾರ ನೀಡುವಂತೆ ಕೇಂದ್ರ, ರಾಜ್ಯ ಸರಕಾರಕ್ಕೆ ಪತ್ರ
  • ಜನರ ನೋವಿಗೆ ದನಿಯಾದ ಸಿಂಪಲ್ ಶಾಸಕ ಟಿಡಿ ರಾಜೇಗೌಡ

NAMMUR EXPRESS NEWS
ಶೃಂಗೇರಿ: ಶೃಂಗೇರಿ ಕ್ಷೇತ್ರದಲ್ಲಿ ಅತಿವೃಷ್ಠಿಯಿಂದ ಹಾನಿಯಾದ ಪ್ರದೇಶಗಳನ್ನು ವೀಕ್ಷಣೆ ಮಾಡಿ ಸರ್ಕಾರಕ್ಕೆ ವರದಿನೀಡಲು ಆಗಮಿಸಿದ ಕೇಂದ್ರ ತಂಡದ ಸದಸ್ಯರನ್ನು
ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಭೇಟಿ ಮಾಡಿ ಹೆಚ್ಚಿನ ಅನುದಾನ ನೀಡಲು ಶಿಫಾರಸು ಮಾಡುವಂತೆ ಮನವಿ ಮಾಡಿದರು.
ಮುಖ್ಯಸ್ಥರಾದ ಆಶೀಶ್ ಕುಮಾರ್, ಐ.ಎ.ಎಸ್, ಸರ್ಕಾರದ ಜಂಟಿ ಕಾರ್ಯದರ್ಶಿಗಳು ಶೃಂಗೇರಿ ಕ್ಷೇತ್ರದ ಅತಿವೃಷ್ಠಿಯಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಮೀಣ ರಸ್ತೆಗಳು, ಜಿಲ್ಲಾ ಮುಖ್ಯ ರಸ್ತೆಗಳು, ರಾಜ್ಯ ಮುಖ್ಯ ರಸ್ತೆಗಳು, ಕೆರೆಗಳು, ಕಟ್ಟಡಗಳನ್ನು ದುರಸ್ತಿ, ಪುನರ್ ನಿರ್ಮಾಣ ಮಾಡಲು ಕ್ಷೇತ್ರಕ್ಕೆ ಹೆಚ್ಚಿನ ಅನುದಾನದ ಅಗತ್ಯ ಇದೆ.
ಕ್ಷೇತ್ರದಲ್ಲಿ ಈ ಭಾರೀ ಸುರಿದ ಮಳೆಯಿಂದ ಮನೆಹಾನಿ, ಪ್ರಾಣ ಹಾನಿ, ಹಾಗೂ ಬೆಳೆ ಹಾನಿ ತೋಟಗಾರಿಕಾ ಬೆಳೆಗಳಾದ ಅಡಿಕೆ, ಕಾಫಿ, ಕಾಳು ಮೆಣಸು ಹಾಗೂ ಭತ್ತದ ಬೆಳೆಗಳಿಗೆ ಭಾರೀ ಹಾನಿಯಾಗಿದೆ. ಸರ್ಕಾರದಿಂದ ಹೆಚ್ಚಿನ ಪರಿಹಾರ ನೀಡಲು ಶಿಫಾರಸು ಮಾಡಬೇಕಾಗಿ ಕೇಂದ್ರ ತಂಡದವರಿಗೆ ರಾಜೇಗೌಡ ಮನವಿ ಪತ್ರ ನೀಡಿದರು.

ಕ್ಷೇತ್ರದಲ್ಲಿ ಸಂಚಾರ.. ಜನರ ನೋವಿಗೆ ದನಿ!

ಶೃಂಗೇರಿ ಶಾಸಕ ರಾಜೇಗೌಡ ಅವರು ಮಳೆಯಿಂದ ಹಾನಿಗೆ ಒಳಗಾದ ಪ್ರದೇಶಗಳಿಗೆ ಕಳೆದ 3 ತಿಂಗಳಿಂದ ಭೇಟಿ ನೀಡಿ ನೊಂದ ಜನರಿಗೆ ಸಾಂತ್ವನ ಹೇಳುತ್ತಿದ್ದಾರೆ.
ಬಾಳೆಹೊನ್ನೂರು ಹೋಬಳಿಯ ವಾಟುಕೊಡಿಗೆ ಸಿಕೆ ಮಧುಗುಣಿ ವ್ಯಾಪ್ತಿಯಲ್ಲಿ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಾಂತ್ವನ ಹೇಳಿದ್ದಾರೆ.