Categories
ಸಿನಿಮಾ

‘ಗುರು ಶಿಷ್ಯರು’ ಸಿನಿಮಾ ಸೆ. 23ಕ್ಕೆ ಬಿಡುಗಡೆ

‘ಗುರು ಶಿಷ್ಯರು’ ಸಿನಿಮಾ ಸೆ. 23ಕ್ಕೆ ಬಿಡುಗಡೆ

NAMMUR EXPRESS NEWS
ಹುಬ್ಬಳ್ಳಿ: ನಟ ಶರಣ್ ಹಾಗೂ ನಟಿ ನಿಶ್ವಿಕಾ ನಾಯ್ಡು ಅಭಿನಯದ, ಜಡೇಶ್ ಕುಮಾರ್ ಕಂಪಿ ನಿರ್ದೇಶನದ ‘ಗುರು ಶಿಷ್ಯರು’ ಸಿನಿಮಾ ಸೆ. 23ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ಸಿನಿಮಾ ಪ್ರಚಾರಕ್ಕಾಗಿ ಶುಕ್ರವಾರ ನಗರಕ್ಕೆ ಭೇಟಿ ನೀಡಿದ ಚಿತ್ರತಂಡ, ಸಿನಿಮಾ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿತು.


‘ಪಾಶ್ಚಾತ್ಯ ಆಟಗಳಿಂದಾಗಿ ನಮ್ಮ ನೆಲದ ಆಟಗಳು ಮಹತ್ವ ಕಳೆದುಕೊಂಡಿವೆ. ನಮ್ಮ ನೆಲದ ಖೋ ಖೋ ಆಟವನ್ನು ಕೇಂದ್ರವಾಗಿಟ್ಟುಕೊಂಡು ಭಾವನಾತ್ಮಕ ಎಳೆಗಳೊಂದಿಗೆ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ಈ ಸಿನಿಮಾದಿಂದ ನಮ್ಮ ನೆಲದ ಆಟಗಳ ಬಗ್ಗೆ ಒಂದಿಷ್ಟು ಜಾಗೃತಿ ಮೂಡಿದರೆ ನಮ್ಮ ಚಿತ್ರತಂಡದ ಶ್ರಮ ಸಾರ್ಥಕವಾಗಲಿದೆ’ ಎಂದು ನಾಯಕ ನಟ ಶರಣ್ ಹೇಳಿದರು.


‘ಮನೋಹರ ಎಂಬ ದೈಹಿಕ ಶಿಕ್ಷಣ ಶಿಕ್ಷಕನ ಪಾತ್ರದಲ್ಲಿ ಚಿತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದೇನೆ. ನನಗೆ ಪಾಠ ಹೇಳಿಕೊಟ್ಟ ಗುರುಗಳಿಂದಿಡಿದು ನಾನು ಕೆಲಸ ಮಾಡಿದ ನೂರಕ್ಕೂ ಹೆಚ್ಚು ಸಿನಿಮಾಗಳ ನಿರ್ದೇಶಕರು ಕೂಡ ನನಗೆ ಗುರುಗಳೇ. ಅಲ್ಲದೆ, 95ರಲ್ಲಿ ತೆರೆ ಕಂಡಿದ್ದ ‘ಗುರು ಶಿಷ್ಯರು’ ಸಿನಿಮಾ ಇಂದಿಗೂ ನನಗೆ ಸ್ಪೆಷಲ್’ ಎಂದರು.


ನಟಿ ನಿಶ್ವಿಕಾ ನಾಯ್ಡು ಮಾತನಾಡಿ, ‘ಸೂಜಿ ಪಾತ್ರ ನನ್ನದು. ಹಳ್ಳಿ ಮೇಷ್ಟಿಗೆ ಲೈನ್ ಹೊಡೆಯುವ ಈ ಪಾತ್ರ ಸವಾಲಿನದ್ದೂ ಆಗಿತ್ತು. ಖೋ ಖೋ ಕ್ರೀಡೆ ಕುರಿತು ಕನ್ನಡದ ಮೊದಲ ಸಿನಿಮಾವಾದ ಗುರು ಶಿಷ್ಯರು ಇತಿಹಾಸ ಸೃಷ್ಟಿಸಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.
ಹಾಸ್ಯ ನಟ ಮಹಾಂತೇಶ ಹಿರೇಮಠ, ’95ರ ಕಾಲಘಟ್ಟದ ಸಿನಿಮಾ ಕಥೆಯು ನಮ್ಮ ಬಾಲ್ಯದ ದಿನಗಳನ್ನು ನೆನಪಿಸುತ್ತದೆ. ಸಿನಿಮಾ ನೋಡಿ ಹೊರಬಂದವರಿಗೆ ಹಮ್ಮೆ ಎನಿಸುತ್ತದೆ’ ಎಂದರು.
ನಟ ಶರಣ್ ಚಿತ್ರದ ಹಾಡನ್ನು ಹಾಡಿ, ಹೆಜ್ಜೆ ಹಾಕಿ ರಂಜಿಸಿದರು. ಕೊಕ್ಕೊ ಕ್ರೀಡಾಪಟುಗಳಾಗಿ ನಟಿಸಿರುವ ಏಕಾಂತ್, ರಕ್ಷಕ್, ಮಣಿಕಂಠ ನಾಐಕ್, ಸೂರ್ಯ, ಹರ್ಷಿತ್ ಹಾಗೂ ಹೃದಯ್ ಇದ್ದರು.

Guru shishyaru movie Trailer :

Categories
ಕೃಷಿ ಮಲ್ನಾಡ್

ಎಲೆ ಚುಕ್ಕಿ ರೋಗ: ರೈತರಿಗೆ ಪರಿಹಾರಕ್ಕೆ ಸರ್ಕಾರದ ಗ್ರೀನ್ ಸಿಗ್ನಲ್

ಎಲೆ ಚುಕ್ಕಿ ರೋಗ: ರೈತರಿಗೆ ಪರಿಹಾರಕ್ಕೆ ಸರ್ಕಾರದ ಗ್ರೀನ್ ಸಿಗ್ನಲ್
-ರೈತರಿಗೆ ಉಚಿತ ಔಷಧಿ ಪೂರೈಕೆ ಹಾಗೂ ಸಲಕರಣೆ ಪಡೆಯಲು ಸಹಾಯಧನ: ಸಚಿವರ ಸಭೆಯಲ್ಲಿ ಒಪ್ಪಿಗೆ

  • ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿ ಅನೇಕರ ಚರ್ಚೆ
  • ಶಾಂತವೇರಿ ಗೋಪಾಲಗೌಡ ಶತಮಾನೋತ್ಸವಕ್ಕೆ 1 ಕೋಟಿ

NAMMUR EXPRESS NEWS
ಬೆಂಗಳೂರು: ಮಲೆನಾಡಿನಲ್ಲಿ ಅಡಿಕೆ ಬೆಳೆಗೆ ಎಲೆ ಚುಕ್ಕೆ ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ತೋಟಗಾರಿಕಾ ಸಚಿವರಾದ ಮುನಿರತ್ನ ಅವರೊಂದಿಗೆ ಸಭೆ ನಡೆಸಿ ಚರ್ಚಿಸಲಾಯಿತು.
ಹಾನಿಗೊಳಗಾದ ರೈತರಿಗೆ ಆರ್ಥಿಕ ಪರಿಹಾರ, ರೋಗದ ಹತೋಟಿ, ಸುಧಾರಿತ ಧೋಟಿ ಪೂರೈಕೆ ಬಗ್ಗೆ ಚರ್ಚೆಯಾಯಿತು. ಬೆಳೆ ಹಾನಿ ಸಮೀಕ್ಷೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.ಈ ಸಮಸ್ಯೆ ಹತೋಟಿಗೆ ತರಲು ರೈತರಿಗೆ ಉಚಿತ ಔಷಧಿ ಹಾಗೂ ಇತರ ಸಹಾಯವನ್ನು ಸರ್ಕಾರದಿಂದ ನೀಡಲು ತೀರ್ಮಾನಿಸಲಾಗಿದೆ.
ಮೀನುಗಾರಿಕಾ ಸಚಿವರಾದ ಅಂಗಾರ, ತೋಟಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿರಾಜೇಂದ್ರ ಕುಮಾರ್ ಕಟಾರಿಯ, ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಮಲೆನಾಡಿನಲ್ಲಿ ಎಲೆ ಚುಕ್ಕಿ ರೋಗದ ಬಗ್ಗೆ ಹೋರಾಟದ ಎಚ್ಚರಿಕೆ ಕೇಳಿ ಬಂದಿತ್ತು. ಜತೆಗೆ ರೈತರಲ್ಲಿ ಆತಂಕ ಎದುರಾಗಿತ್ತು. ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರು ಆಗಿರುವ ಜ್ಞಾನೇಂದ್ರ ಅವರು ಈಗ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳುತ್ತಿದ್ದಾರೆ.


ಅಡಕೆ ಬೆಳೆಯ ಎಲೆಚುಕ್ಕೆ ರೋಗ ಭಾದೆ ನಿಯಂತ್ರಿಸಲು ರೈತರಿಗೆ ಉಚಿತ ಔಷಧಿ ಪೂರೈಕೆ ಹಾಗೂ ಸಲಕರಣೆ ಪಡೆಯಲು ಸಹಾಯಧನ: ಮಲೆನಾಡಿನ ಕೆಲವು ಭಾಗ ಗಳಲ್ಲಿ, ರೈತರ ಬೆನ್ನೆಲುಬಾಗಿರುವ, ಅಡಿಕೆ ಬೆಳೆಗೆ, ಎಲೆ ಚುಕ್ಕೆ ರೋಗ ಭಾಧೆ ಕಾಣಿಸಿಕೊಂಡಿದ್ದು, ರೈತ ಸಮುದಾಯದಲ್ಲಿ ಆತಂಕದ ಛಾಯೆ ಮೂಡಿದೆ.
ಈ ಹಿನ್ನೆಲೆಯಲ್ಲಿ, ರಾಜ್ಯ ಅಡಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರೂ ಆದ, ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ತೋಟಗಾರಿಕಾ ಸಚಿವ ಶ್ರೀ ಮುನಿರತ್ನ ರವರು, ಇಂದು ತೋಟಗಾರಿಕಾ ಹಿರಿಯ ಅಧಿಕಾರಿಗಳೊಂದಿಗೆ, ಸಭೆ ನಡೆಸಿದರು, ರೋಗ ನಿಯಂತ್ರಣದ ಬಗ್ಗೆ ವಿಸ್ತಾರವಾಗಿ ಚರ್ಚಿಸಿದರು.
ರೋಗ ಬಾಧೆಯಿಂದ ಹಾನಿ ಅನುಭವಿಸಿದ ರೈತರಿಗೆ, ಆರ್ಥಿಕ ಪರಿಹಾರ ಒದಗಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.


ಎಲೆ ಚುಕ್ಕೆ ರೋಗವನ್ನು ಹತೋಟಿಗೆ ತರುವ ಬಗ್ಗೆ, ರೈತರಿಗೆ, ಉಚಿತವಾಗಿ ಔಷದಿ ಹಾಗೂ ಸುಧಾರಿತ ಧೋಟಿಯನ್ನು ಒದಗಿಸುವ ಬಗ್ಗೆ, ಅಧಿಕಾರಿಗಳಿಗೆ, ನಿರ್ದೇಶನ ನೀಡುವುದಾಗಿ, ಸಚಿವ ಶ್ರಿ ಮುನಿರತ್ನ ತಿಳಿಸಿದರು.
ಎಷ್ಟು ಪ್ರಮಾಣದಲ್ಲಿ ಅಡಕೆ ಬೆಳೆ, ಎಲೇಚುಕ್ಕೆ ರೋಗ ದಿಂದಾಗಿ ಹಾನಿಯಾಗಿದೆ ಎಂಬುದರ ಬಗ್ಗೆ ಸಮೀಕ್ಷಾ ಕಾರ್ಯ ನಡೆಸುವ ಬಗ್ಗೆಯೂ ನಿರ್ಧರಿಸಲಾಯಿತು.
ಎಲೆಚುಕ್ಕೆ ರೋಗ ಬಾಧೆಯ ತೀವ್ರತೆಯ ಬಗ್ಗೆ ಪ್ರಸ್ತಾಪಿಸಿದ, ಗೃಹ ಸಚಿವರು, ತಕ್ಷಣವೇ ರೋಗವನ್ನು ಹತೋಟಿಗೆ ತರಲು ಅನುಕೂಲವಾಗುವಂತೆ, ರೈತರಿಗೆ, ಉಚಿತವಾಗಿ ಔಷದಿ ಹಾಗೂ ಇತರ ಸಹಾಯವನ್ನು ಸರಕಾರದಿಂದ ನೀಡಲಾಗುವುದು, ಎಂದು ಸಚಿವರು ತಿಳಿಸಿದರು.
ಶಾಂತವೇರಿ ಗೋಪಾಲಗೌಡ ಶತಮಾನೋತ್ಸವಕ್ಕೆ 1 ಕೋಟಿ!: ಶ್ರೀ ಶಾಂತವೇರಿ ಗೌಪಾಲ ಗೌಡರ ಜನ್ಮ ಶತಮಾನೋತ್ಸವ ಆಚರಿಸುವ ಬಗ್ಗೆ, ರಾಜ್ಯ ಸರಕಾರ ಒಂದು ಕೋಟಿ ರೂಪಾಯಿ, ಅನುದಾನ ಬಿಡುಗಡೆ ಮಾಡಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಹಾಗೂ ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್, ಅವರನ್ನು, ಇದಕ್ಕಾಗಿ ಅಭಿನಂದಿಸಿದ್ದಾರೆ.
ಅನುದಾನವನ್ನು ಶ್ರೀ ಶಾಂತವೇರಿ ಗೋಪಾಲಗೌಡರ ಜನ್ಮ ಶತಮಾನೋತ್ಸವ ಆಚರಿಸುವ ಹಾಗೂ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲು, ಅನುಕೂಲ ವಾಗುವಂತೆ ಬಿಡುಗಡೆ ಮಾಡಲಾಗಿದೆ ಎಂದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಗಳು ತಿಳಿಸಿವೆ.

Categories
ಮಲ್ನಾಡ್

ಶೃಂಗೇರಿ, ಸಿಗಂದೂರಲ್ಲಿ ನವರಾತ್ರಿಗೆ ಸಜ್ಜು!

ಶೃಂಗೇರಿ, ಸಿಗಂದೂರಲ್ಲಿ ನವರಾತ್ರಿಗೆ ಸಜ್ಜು!

  • ಸೆ.25 ರಿಂದ ಶಾರದಾ ಶರನ್ನವರಾತ್ರಿ ಮಹೋತ್ಸವ

NAMMUR EXPRESS NEWS
ಶೃಂಗೇರಿ: ಶೃಂಗೇರಿ ಶಾರದಾ ಪೀಠದಲ್ಲಿ ಈ ಬಾರಿ ಶಾರದಾ ಶರನ್ನವರಾತ್ರಿಗೆ ಸಿದ್ಧತೆ ಜೋರಾಗಿದೆ.
ಸೆಪ್ಟೆಂಬರ್ 25ರಿಂದ ಅಕ್ಟೋಬರ್ 06ರವರೆಗೆ ಈ ಬಾರಿ ನವರಾತ್ರಿ ನಡೆಯಲಿದೆ.
ಶರನ್ನವರಾತ್ರಿಯ ದಿನಗಳಲ್ಲಿ ಜಗನ್ಮಾತೆ ಶಾರದೆಗೆ ವಿಶೇಷ ಪೂಜೆ ಪುನಸ್ಕಾರಗಳು, ಸೇವೆಗಳು ನಡೆಯಲಿದ್ದು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಶ್ರೀ ಮಠದ ರಾಜಗೋಪುರ, ಆವರಣ ಹಾಗೂ ಪಟ್ಟಣದ ಪ್ರಮುಖ ರಸ್ತೆಗಳು ವಿದ್ಯುತ್ ದೀಪಾಲಂಕಾರದಿಂದ ನವರಾತ್ರಿಯ ದಿನಗಳಲ್ಲಿ ಕಂಗೊಳಿಸಲಿದ್ದು, ಉತ್ಸವ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಲುವಾಗಿ ರಾಜ್ಯದ, ದೇಶದ ಅನೇಕ ಕಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಶೃಂಗೇರಿಗೆ ಆಗಮಿಸುತ್ತಾರೆ.ನವರಾತ್ರಿಯ ಈ ದಿನಗಳಂದು ಶಾಸ್ತ್ರೀಯ ಸಂಗೀತ, ಹಾಡುಗಾರಿಕೆ, ವಯೋಲಿನ್ ವಾದನ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಶ್ರೀ ಮಠದ ಆವರಣದಲ್ಲಿ ನಡೆಯಲಿದೆ.

ಸಿಗಂದೂರು ದೇವಸ್ಥಾನದಲ್ಲಿ ಉತ್ಸವ

  • 9 ದಿನವೂ ವಿವಿಧ ಮಠದ ಸ್ವಾಮೀಜಿಗಳ ಆಗಮನ

ಸಾಗರ ತಾಲ್ಲೂಕಿನ ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 5 ರ ತನಕ ನವರಾತ್ರಿ ಉತ್ಸವ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಧರ್ಮದರ್ಶಿ ಎಸ್. ರಾಮಪ್ಪ ತಿಳಿಸಿದ್ದಾರೆ.
ನವರಾತ್ರಿ ಸಾಕಷ್ಟು ವಿಭಿನ್ನವಾಗಿ ಆಚರಿಸಲು ಸಿದ್ಧತೆ ನಡೆಸಿರುವ ಆಡಳಿತ ಮಂಡಳಿ ನವರಾತ್ರಿ ಉತ್ಸವದ 9 ದಿನಗಳಲ್ಲಿಯೂ ಸಹ ರಾಜ್ಯದ ವಿವಿಧ ಮಠಗಳ ಸ್ವಾಮೀಜಿಗಳನ್ನು ಆಹ್ವಾನಿಸಲಾಗಿದೆ. ಪ್ರತಿದಿನ ಸಂಜೆ 6:30 ರಿಂದ 7:30 ರವರೆಗೆ ಶ್ರೀಗಳಿಂದ ಆಶೀರ್ವಚನ, ದೀಪೋತ್ಸವ, ಯಕ್ಷಗಾನ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.


ಸೆಪ್ಟೆಂಬರ್ 26 ನವರಾತ್ರಿಯ ಮೊದಲ ದಿನ ಅಲಯ ಶುದ್ಧಿಯೊಂದಿಗೆ ಶ್ರೀ ದೇವಿಗೆ ವಿಶೇಷ ಪೂಜೆ ಪಂಚಾಮೃತ ಅಭಿಷೇಕ, ಮಹಾಭಿಷೇಕ. ಅಲಂಕಾರ ಪೂಜೆ, ಮಹಾ ಪೂಜೆ, ದುರ್ಗಾ ಪೂಜೆ, ಚಂಡಿಕಾ ಹವನ, ನವ ಚಂಡಿಕಾ ಹವನ ಹಾಗೂ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೇರವೇರಲಿವೆ.
ಸೆ.26 ರಂದು ಕೇರಳದ ವರ್ಕಳ ಶಿವಗಿರಿ ಮಠದ ಸತ್ಯಾನಂದತೀರ್ಥ ಶ್ರೀಗಳು ಆಗಮಿಸಿ ಆಶೀರ್ವಚನ ನೀಡಲಿದ್ದಾರೆ, ಅದೇ ದಿನ ಸಿಗಂದೂರು ಮೇಳದಿಂದ ಚಂದ್ರಹಾಸ ಚರಿತ್ರೆ ಯಕ್ಷಗಾನ ಪ್ರದರ್ಶನವಿದೆ. ಸೆ. 27 ಕ್ಕೆ ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಮೃತ್ಯುಂಜಯ ಸ್ವಾಮೀಜಿಗಳು ಆಶಿರ್ವಚನ ನೀಡಲಿದ್ದು ಅಂದು ರಾತ್ರಿ ಚಿತ್ರಾಕ್ಷಿ ಕಲ್ಯಾಣ ಯಕ್ಷಗಾನ ಪ್ರದರ್ಶನವಿದೆ. ಸೆಪ್ಟೆಂಬರ್ 28 ಕ್ಕೆ ತಾಳಗುಪ್ಪ ಪ್ರಣವ ಪೀಠ ಕೂಡ್ಲಿಮಠದ ಶ್ರೀ ಸಿದ್ದವೀರ ಶ್ರೀಗಳ ಹಾಗೂ 30 ಕ್ಕೆ ಸೊರಬ ಮುರುಘಾ ಮಠದ ಮಹಾಂತ ಸ್ವಾಮೀಜಿಗಳು ನವರಾತ್ರಿ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಅಕ್ಟೋಬರ್ 1 ರಂದು ಕಲಬುರ್ಗಿ ಜಿಲ್ಲೆಯ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಪ್ರಣವಾನಂದ ಶ್ರೀಗಳು ಆಗಮಿಸಲಿದ್ದು, ಅಕ್ಟೋಬರ್ 3 ರಂದು ಸೋಲೂರು ಈಡಿಗ ಮಹಾ ಸಂಸ್ಥಾನದ ಶ್ರೀ ವಿಖ್ಯಾತಾನಂದ ಶ್ರೀಗಳು, ಅಕ್ಟೋಬರ್ 4 ಕ್ಕೆ ಬೆಳಗಾವಿಯ ಮಹಾಕಾಳಿ ಮಹಾ ಸಂಸ್ಥಾನದ ಸಾದ್ಮಾರ್ಗ ಪೀಠದ ಅರುಣಾನಂದ ತೀರ್ಥ ಶ್ರೀಗಳು ಹಾಗೂ ಅಂತಿಮ ದಿನದ ಅಕ್ಟೋಬರ್ 5 ಕ್ಕೆ ಹೊಸನಗರ ತಾಲೂಕಿನ ಸಾರಗನಜೆಡ್ಡು ಕಾರ್ತಿಕೇಯ ಪೀಠದ ಯೋಗೇಂದ್ರ ಶ್ರೀಗಳು ಆಗಮಿಸಲಿದ್ದು ನವರಾತ್ರಿ ಅಂತಿಮ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ.


ನವರಾತ್ರಿ ಉತ್ಸವದ ಅಂಗವಾಗಿ ಪ್ರತಿದಿನ ಪೂಜೆ, ಪ್ರಸಾದ ವಿನಿಯೋಗ, ದರ್ಶನಕ್ಕೆ ಸರತಿ ಸಾಲಿನಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಭಕ್ತರಿಗೆ ಯಾವುದೇ ಕೊರತೆ ಆಗದಂತೆ ವ್ಯವಸ್ಥೆ ಮಾಡಲಾಗಿದೆ. ಭಕ್ತರ ಅನುಕೂಲಕ್ಕಾಗಿ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಹೆಚ್.ಆರ್. ರವಿಕುಮಾರ್ ತಿಳಿಸಿದ್ದಾರೆ.

Categories
ಅಂತಾರಾಷ್ಟ್ರೀಯ ಸುದ್ದಿ ಟೆಕ್ ವ್ಯವಹಾರ

ಒಂದಕ್ಕಿಂತ ಹೆಚ್ಚು ಸಂಸ್ಥೆಗಳಲ್ಲಿ ಕೆಲಸ ಮಾಡಿದ್ರೆ ಅಕ್ರಮ!

ಒಂದಕ್ಕಿಂತ ಹೆಚ್ಚು ಸಂಸ್ಥೆಗಳಲ್ಲಿ ಕೆಲಸ ಮಾಡಿದ್ರೆ ಅಕ್ರಮ!

  • ಇನ್ಫೋಸಿಸ್ ಸೇರಿದಂತೆ ಹಲವು ಕಂಪನಿಗಳ ನಿಯಮ
  • ದಿನಕ್ಕೆ 8-10 ಗಂಟೆ ಕೆಲಸ ಮಾಡುವುದು ಕಡ್ಡಾಯ

NAMMUR EXPRESS NEWS
ನವದೆಹಲಿ : ಒಬ್ಬ ಉದ್ಯೋಗಿಗೆ ಒಂದಕ್ಕಿಂತ ಹೆಚ್ಚು ಕಂಪನಿಗಳಲ್ಲಿ ಕೆಲಸ ಮಾಡಲು ಅವಕಾಶವಿಲ್ಲ. ಇದು ಬೆಳಕಿಗೆ ಬಂದರೆ ಅಂತಹ ಉದ್ಯೋಗಿಯನ್ನು ವಜಾ ಮಾಡಬಹುದು ಎಂದು ದೇಶದ ಪ್ರಮುಖ ಐಟಿ ಕಂಪನಿ ಇನ್ಫೋಸಿಸ್ ಸ್ಪಷ್ಟಪಡಿಸಿದೆ. ಈ ಬೆಳವಣಿಗೆಯ ನಂತರ, ವಿಪ್ರೋ ಅಧ್ಯಕ್ಷ ರಿಷಾದ್ ಪ್ರೇಮ್‌ಜಿ ಅವರು ಆಗಸ್ಟ್ 20 ರಂದು ‘ಮೂನ್‌ ಲೈಟ್ ವಿವಾದ’ ಎಂದು ಮಾಡಿದ ಟ್ವಿಟ್ ಅನ್ನು ಅನೇಕರು ನೆನಪಿಸಿಕೊಂಡಿದ್ದಾರೆ. ಇನ್ಫೋಸಿಸ್ ವಿಪ್ರೋ ಹೇಳುವಂತೆ ಮೂನ್‌ಲೈಟ್ ಭಾರತೀಯ ಕಾನೂನುಗಳು ಮತ್ತು ಹೆಚ್ಚುವರಿ ಕೆಲಸದ ಬಗ್ಗೆ ಉದ್ಯೋಗಿಗಳ ಅಭಿಪ್ರಾಯವನ್ನು ಕಾನೂನುಬಾಹಿರವಾಗಿದೆ.


ಕಾರ್ಮಿಕ ಕಾನೂನಿನ ಪ್ರಕಾರ ಉದ್ಯೋಗಿ ದಿನಕ್ಕೆ 8 ಗಂಟೆಗಳ ಕಾಲ ಕೆಲಸ ಮಾಡಬೇಕು. ಆದರೆ ಪರೋಕ್ಷವಾಗಿ ಗುರಿ ಅಥವಾ ಇತರೆ ಕಾರಣಗಳಿಂದ 10 ಗಂಟೆಗೂ ಹೆಚ್ಚು ಕಾಲ ಕೆಲಸ ಮಾಡಲಾಗುತ್ತಿದೆ. ಇದು ಸರಿ ಎಂದು ಅನೇಕ ಉದ್ಯೋಗಿಗಳು ಈಗ ವಾದಿಸಲು ಪ್ರಾರಂಭಿಸಿದ್ದಾರೆ. ಹಲವಾರು ಪ್ರಮುಖ ಕಂಪನಿಗಳು ಮೂನ್‌ಲೈಟಿಂಗ್‌ ಕುರಿತು ತಮ್ಮನಿಲುವನ್ನು ಸ್ಪಷ್ಟಪಡಿಸಿದ ನಂತರ, 2 ನೇ ಉದ್ಯೋಗಗಳ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಸಾಮಾಜಿಕ ಮಾಧ್ಯಮದಲ್ಲಿ ನಡೆಯಿತು. ಇನ್ಫೋಸಿಸ್ ವಿಪ್ರೋ ಹೇಳುವಂತೆ ಮೂನ್‌ಲೈಟ್ ಭಾರತೀಯ ಕಾನೂನುಗಳು ಮತ್ತು ಹೆಚ್ಚುವರಿ ಕೆಲಸದ ಬಗ್ಗೆ ಉದ್ಯೋಗಿಗಳ ಅಭಿಪ್ರಾಯ ಕಾನೂನುಬಾಹಿರವಾಗಿದೆ.


ಭಾರತೀಯ ಡೆಲಿವರಿ ಕಂಪೆನಿ ಸ್ವಿಗ್ಗಿ ತನ್ನ ಮೂನ್‌ಲೈಟ್‌ ನೀತಿಯನ್ನು ಸ್ಪಷ್ಟಪಡಿಸಿದೆ, ‘ಯಾವುದೇ ಉದ್ಯೋಗಿ ತನ್ನ ವಾರಾಂತ್ಯದಲ್ಲಿ ದಿನದ ಕೆಲಸದ ಅವಧಿ ಮುಗಿದ ನಂತರ ಮತ್ತೊಂದು ಹುದ್ದೆಯನ್ನು ಸ್ವೀಕರಿಸಲು ಯಾವುದೇ ಆಕ್ಷೇಪಣೆ ಇಲ್ಲ. ಮತ್ತೊಂದು ಕಂಪನಿಯ ಮೂನ್ ಲೈಟ್ ಪ್ರಸ್ತಾಪವನ್ನು ಸ್ವೀಕರಿಸುವ ಮೊದಲು, ಆಂತರಿಕ ಅನುಮೋದನೆಯನ್ನು ಪಡೆಯಬೇಕು. ಸ್ವಿಗ್ಗಿ ಉದ್ಯೋಗಿಗಳಿಗೆ ಬೇರೆ ಕಂಪನಿಯ ಕಚೇರಿಯಲ್ಲಿ ಕೆಲಸ ಮಾಡಲು ಅವಕಾಶವಿಲ್ಲ. ಉದ್ಯೋಗಿಯ ಉತ್ಪಾದಕತೆಯನ್ನು ಕಡಿಮೆ ಮಾಡಲು ಮತ್ತೊಂದು ಕಂಪನಿಯಿಂದ ನಿಯೋಜನೆಯನ್ನು ಸ್ವೀಕರಿಸುವುದನ್ನು ಕ್ಷಮೆಯಾಗಿ ಬಳಸಬಾರದು ಎಂದು ಸ್ವಿಗ್ಗಿ ಸ್ಪಷ್ಟಪಡಿಸಿದ್ದಾರೆ.


ಭಾರತದ ಪ್ರಸ್ತುತ ಆರ್ಥಿಕ ಪರಿಸ್ಥಿತಿ ಮತ್ತು ಹಣದುಬ್ಬರದಲ್ಲಿ ಕಂಪನಿಗಳು ಉದ್ಯೋಗಿಗಳನ್ನು ಹೆಚ್ಚು ಮಾನವೀಯತೆಯ ನಲೆಯಲ್ಲಿ ಪರಿಗಣಿಸಲು ಬೇಡಿಕೆಯಿದೆ. ಐಟಿ ಉದ್ಯಮಿ ಮೋಹನ್ ದಾಸ್ ಪೈ ಅವರದೂ ಇದೇ ನಿಲುವು. ಬೇರೊಂದು ಕಂಪೆನಿಯಲ್ಲಿ ಕೆಲಸ ಮಾಡುವುದನ್ನು ಬೆಳದಿಂಗಳನ್ನು ಮೋಸ ಎಂದು ಕರೆಯುವುದು ಸರಿಯಲ್ಲ ಎಂದಿದ್ದಾರೆ.
ಇನ್ನು ಕಾರ್ಮಿಕ ಕಾನೂನಿನ ಪ್ರಕಾರ ಉದ್ಯೋಗಿ ದಿನಕ್ಕೆ 8 ಗಂಟೆಗಳ ಕಾಲ ಕೆಲಸ ಮಾಡಬೇಕು. ಆದರೆ ಕಂಪೆನಿಗಳಲ್ಲಿ ನಾನಾ ಕಾರಣಗಳಿಂದ 10 ಗಂಟೆಗೂ ಹೆಚ್ಚು ಕಾಲ ಕೆಲಸ ಮಾಡಲಾಗುತ್ತಿದೆ. ಇದು ಸರಿ ಎಂದು ಅನೇಕ ಉದ್ಯೋಗಿಗಳು ವಾದಿಸಲು ಆರಂಭಿಸಿದ್ದಾರೆ.
ಆದರೆ ಉದ್ಯಮಿಗಳು ಇದನ್ನು ಒಪ್ಪುವುದಿಲ್ಲ.


ಕಾರ್ಮಿಕ ಕಾನೂನುಗಳು ಮತ್ತು ಸರ್ಕಾರಿ ಉದ್ಯೋಗ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕಾದ ಕಾರ್ಖಾನೆಯ ಕಾರ್ಮಿಕರು ಮತ್ತು ಸರ್ಕಾರಿ ನೌಕರರು ಕಾನೂನಿನ ಪ್ರಕಾರ ಮೂನ್ ಲೈಟ್ ಮಾಡಲು ಅನುಮತಿಸುವುದಿಲ್ಲ. ಆದರೆ ಅಂತಹ ನಿರ್ಬಂಧಿತ ಕಾನೂನುಗಳು (ಹೆಚ್ಚಾಗಿ) ಆಡಳಿತಾತ್ಮಕ ಮತ್ತು ಮೇಲ್ವಿಚಾರಣಾ ಕೆಲಸ ಮಾಡುವ ಇನ್ಫೋಸಿಸ್ ವಿಪ್ರೋನಂತಹ IT ಉದ್ಯೋಗಿಗಳಿಗೆ ಅನ್ವಯಿಸುವುದಿಲ್ಲ. ಆದರೆ ಉದ್ಯೋಗವನ್ನು ನೀಡುವಾಗ ನಿರ್ದಿಷ್ಟ ಕಂಪನಿಯು ಉದ್ಯೋಗಿಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದದ ನಿಯಮಗಳು ಮತ್ತು ಷರತ್ತುಗಳು ಉದ್ಯೋಗಿಗಳಿಗೆ ಅನ್ವಯಿಸುತ್ತವೆ. ಅದರಲ್ಲಿ ಬೇರೆ ಕಂಪನಿಯಲ್ಲಿ ಕೆಲಸ ಮಾಡಲು ಅವಕಾಶವಿಲ್ಲ ಎಂಬ ಷರತ್ತಿದ್ದು, ಅದಕ್ಕೆ ಒಪ್ಪಿದ ನಂತರ ಉದ್ಯೋಗಿ ಮೂನ್ ಲೈಟ್ ಹಾಕಿದರೆ ಅದನ್ನು ಅಕ್ರಮ ಎಂದು ಪರಿಗಣಿಸಲಾಗುತ್ತದೆ.
ಐಟಿ ಉದ್ಯಮದ ಉದ್ಯೋಗಿಯೊಬ್ಬರು ಬೇರೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಸದ್ಯ ಭಾರತದಲ್ಲಿ ಈ ವಿವಾದ ಆರಂಭವಾಗಿದೆ.

Categories
ಬೆಂಗಳೂರು ರಾಜ್ಯ

ಪುನೀತ್ ಜನ್ಮದಿನ ಇನ್ನು ಮುಂದೆ ಸ್ಪೂರ್ತಿ ದಿನ!

ಪುನೀತ್ ಜನ್ಮದಿನ ಇನ್ನು ಮುಂದೆ ಸ್ಪೂರ್ತಿ ದಿನ!

  • ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ
  • ಕರ್ನಾಟಕ ರತ್ನ ಪ್ರಶಸ್ತಿ ನೀಡಿಯೂ ಗೌರವ
  • ಯುವ ಜನತೆಗೆ ಮಾದರಿಯಾದ ಪುನೀತ್!

NAMMUR EXPRESS NEWS
ಬೆಂಗಳೂರು: ಕನ್ನಡ ಖ್ಯಾತ ನಟ, ಮಾನವೀಯತೆಯ ಇನ್ನೊಂದು ಮುಖ, ಪುನೀತ್ ರಾಜ್‌ಕುಮಾರ್ ನಮ್ಮನಗಲಿ ಒಂದು ವರ್ಷ ಕಳೆಯಲು ಇನ್ನೇನು ಒಂದು ತಿಂಗಳು ಮಾತ್ರ ಬಾಕಿ ಉಳಿದಿದೆ. ಅವರ ನೆನಪು ಇನ್ನು ಜನ ಮಾನಸದಲ್ಲಿ ಮಾಸಿಲ್ಲ.
ರಾಜ್ಯ ಸರ್ಕಾರ ಈಗಾಗಲೇ ಪುನೀತ್ ರಾಜ್‌ಕುಮಾರ್ ಮರಣೋತ್ತರ ಕರ್ನಾಟಕ ರತ್ನವನ್ನು ನೀಡಿ ಗೌರವಿಸಿದೆ. ಇದರ ಜೊತೆಯಲ್ಲಿ ಇದೀಗ ಪುನೀತ್ ಗೌರವಾರ್ಥ ಮತ್ತೊಂದು ಕಾರ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಈ ವಿಚಾರವಾಗಿ ಬೆಂಗಳೂರಿನ ಚೌಡಯ್ಯ ಸ್ಮಾರಕ ಸಭಾಭವನದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಮಾರ್ಚ್ 17ರಂದು ಪುನೀತ್ ರಾಜ್ ಕುಮಾರ್ ಜನ್ಮದಿನವನ್ನು ಸ್ಪೂರ್ತಿ ದಿನವನ್ನಾಗಿ ಸರ್ಕಾರದ ವತಿಯಿಂದ ಆಚರಿಸುವುದಾಗಿ ಹೇಳಿದ್ದಾರೆ.


ಬ್ರಹ್ಮರ್ಷಿ ನಾರಾಯಣ ಗುರು ಜಯಂತಿ ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನ ಚೌಡಯ್ಯ ಸ್ಮಾರಕ ಸಭಾಭವನಕ್ಕೆ ಆಗಮಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಈ ನಿರ್ಧಾರವನ್ನು ಘೋಷಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ಜನ್ಮದಿನವನ್ನು ಸ್ಪೂರ್ತಿ ದಿನವನ್ನಾಗಿ ಆಚರಿಸಲು ಸಾಕಷ್ಟು ಮನವಿ ಕೇಳಿ ಬಂದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಈ ನಿರ್ಧಾರ ಘೋಷಿಸಿದ್ದಾರೆ.


ಸಿಎಂ ಹೇಳಿದ್ದೇನು?: ಸಿಎಂ ಬಸವರಾಜ ಬೊಮ್ಮಾಯಿ, ಪುನೀತ್ ರಾಜ್ ಕುಮಾರ್ ನನಗೆ ವೈಯಕ್ತಿಕವಾಗಿ ಅತ್ಯಂತ ಪ್ರೀತಿಪಾತ್ರರಾಗಿದ್ದ ವ್ಯಕ್ತಿ. ನಾಡಿನ ಯುವಕರಿಗೆ ಅವರೊಂದು ಸ್ಪೂರ್ತಿ. ಅವರ ಅಕಾಲಿಕ ನಿಧನವು ಕರ್ನಾಟಕಕ್ಕೆ ತುಂಬಲಾರದ ಒಂದು ನಷ್ಟವಾಗಿದೆ. ತಮ್ಮ ಜೀವನದುದ್ದಕ್ಕೂ ಯುವಕರಿಗೆ ಸ್ಫೂರ್ತಿ ನೀಡಿರುವ ಪುನೀತ್ ರಾಜ್‌ಕುಮಾರ್ ಜನ್ಮದಿನವನ್ನು ಸ್ಪೂರ್ತಿ ದಿನ ಎಂದು ಸರ್ಕಾರ ಆಚರಿಸಲಿದೆ ಎಂದು ಹೇಳಿದ್ದಾರೆ.
ಪುನೀತ್ ರಾಜಕುಮಾರ್ ಈಡಿಗ ಸಮುದಾಯದ ಮೇರು ಪ್ರತಿಭೆ. ಈಡಿಗ- ಬಿಲ್ಲವ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಇನ್ನಿತರ ಅಭಿವೃದ್ಧಿಗೆ ಪ್ರತ್ಯೇಕ ನಿಧಿಯನ್ನು ಪ್ರಾರಂಭಿಸುತ್ತೇವೆ. ಬೆಂಗಳೂರಿನಲ್ಲಿ ನಾರಾಯಣ ಗುರು ಹೆಸರಿನಲ್ಲಿ ಸಭಾಭವನ ನಿರ್ಮಿಸಲು ಐದು ಕೋಟಿ ರೂಪಾಯಿಗಳನ್ನು ಶೀಘ್ರದಲ್ಲಿಯೇ ಮಂಜೂರು ಮಾಡುತ್ತೇವೆ ಎಂದು ಹೇಳಿದರು .

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಕಾರು ಆಕ್ಸಿಡೆಂಟ್, ಮೂವರ ಸ್ಥಿತಿ ಗಂಭೀರ

ತೀರ್ಥಹಳ್ಳಿಯಲ್ಲಿ ಕಾರು ಆಕ್ಸಿಡೆಂಟ್!

  • ಪ್ರತಿಷ್ಠಿತ ಕಾಲೇಜಿನ ಮೂವರ ಸ್ಥಿತಿ ಗಂಭೀರ
  • ತೀರ್ಥಹಳ್ಳಿಯಲ್ಲಿ ಮಿತಿ ಮೀರಿದ ವಾಹನಗಳ ವೇಗ

NAMMUR EXPRESS NEWS
ತೀರ್ಥಹಳ್ಳಿ ಪಟ್ಟಣದಲ್ಲಿ ಮತ್ತೊಂದು ದುರಂತ ನಡೆದಿದೆ. ಅತೀ ವೇಗದ ಚಾಲನೆ ಮೂವರು ವಿದ್ಯಾರ್ಥಿಗಳ ಕುಟುಂಬವನ್ನು ಆತಂಕ ತಳ್ಳಿದೆ.
ತೀರ್ಥಹಳ್ಳಿ ಪಟ್ಟಣದ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳು ಬುಧವಾರ ರಾತ್ರಿ 10:30ರ ಸುಮಾರಿಗೆ ತೀರ್ಥಹಳ್ಳಿಯಿಂದ ಶಿವಮೊಗ್ಗ ಕಡೆಗೆ ಕಾರಿನಲ್ಲಿ ಹೋಗುತ್ತಿರುವಾಗ ತುಡ್ಕಿಯಲ್ಲಿ ತಮಿಳು ನಾಡಿನ ನೋಂದಣಿ ಸಂಖ್ಯೆಯ ಕ್ಯಾಂಟರ್ ಗೆ ಡಿಕ್ಕಿ ಹೊಡೆದಿದೆ.

ಈ ಪರಿಣಾಮ ಮೂವರು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ. ಮಣಿಪಾಲ ಮತ್ತು ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಗಂಭೀರಗೊಂಡಿದ್ದಾರೆ.
ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಾದ ಪ್ರಥಮ್, ಶ್ರೇಯಸ್, ಪ್ರತೀಕ್ ಮೂವರನ್ನು ಜೆಸಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಇಬ್ಬರನ್ನು ಮಣಿಪಾಲ ಆಸ್ಪತ್ರೆಗೆ ಓರ್ವನನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ಸೇರಿಸಲಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಬೆಂಗಳೂರು

ಶಿಕ್ಷಣ ಇಲಾಖೆಯಿಂದ ‘ದಸರಾ’ ರಜೆ ಘೋಷಣೆ

  • ದಸರಾಗೆ ಅ.3ರಿಂದ 14 ದಿನ ರಜೆ

NAMMUR EXPRESS NEWS
ಬೆಂಗಳೂರು: 2022-23ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಶೈಕ್ಷಣಿಕ ವರ್ಷದ ಕ್ರಿಯಾ ಯೋಜನೆ ಮತ್ತು ಪ್ರಮುಖ ದಿನಾಂಕಗಳ ಕ್ಯಾಲೆಂಡರ್ ಅನ್ನು ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.


ರಾಜ್ಯದಲ್ಲಿ 16-05 2022ರಿಂದಲೇ ಶೈಕ್ಷಣಿಕ ವರ್ಷವನ್ನು ಆರಂಭ ಮಾಡಲಾಗಿದೆ. ಶಿಕ್ಷಣ ಇಲಾಖೆಯ ಕ್ಯಾಲೆಂಡರ್‌ನ ಅನ್ವಯ 2022-23ನೇ ಸಾಲಿನ ಶಾಲಾ ಕರ್ತವ್ಯದ ಮೊದಲನೇ ಅವಧಿ 16-05-2022ರಿಂದಲೇ ಆರಂಭವಾಗಿದೆ. 02-10-2022ರಂದು ಮೊದಲನೇ ಅವಧಿಯ ಶಾಲಾ ಕರ್ತವ್ಯದ ದಿನಗಳು ಮುಗಿಯಲಿದ್ದು, 03-10-2022ರಿಂದ ದಸರಾ ರಜೆ ಆರಂಭವಾಗಲಿದೆ.


ಸಾರ್ವಜನಿಕ ಶಿಕ್ಷಣ ಇಲಾಖೆಯ 2022-23ನೇ ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ ಅಕ್ಟೋಬರ್ 03, 2022 ರಿಂದ 16, 2022ರವರೆಗೆ, ಒಟ್ಟು 14 ದಿನಗಳ ಕಾಲ ದಸರಾ ರಜೆ ಇರಲಿದೆ. ವಿದ್ಯಾರ್ಥಿಗಳು ಅರ್ಧವಾರ್ಷಿಕ ಪರೀಕ್ಷೆಗೆ ಅಧ್ಯಯನ ಮಾಡಿಕೊಳ್ಳುವ ದೃಷ್ಟಿಯಿಂದ ಈ ರಜೆಯನ್ನು ಪ್ರತಿವರ್ಷ ನೀಡಲಾಗುತ್ತದೆ.


ಅಕ್ಟೋಬರ್ 17ರಿಂದ ನವೆಂಬರ್ 25ರವರೆಗೆ 4ನೇ ತರಗತಿಯಿಂದ 9ನೇ ತರಗತಿಗಳಿಗೆ ಅರ್ಧವಾರ್ಷಿಕ ಪರೀಕ್ಷೆ ಹಾಗೂ ಮೌಲ್ಯಮಾಪನ ಕಾರ್ಯ ನಡೆಯಲಿದೆ. 2022-23 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಒಟ್ಟು 60 ಸರ್ಕಾರಿ ರಜಾ ದಿನಗಳು ಇರಲಿದ್ದು, 270 ಶಾಲಾ ಕರ್ತವ್ಯದ ದಿನಗಳಾಗಿವೆ.

Categories
ಅಂತಾರಾಷ್ಟ್ರೀಯ ಸುದ್ದಿ ಟೆಕ್ ವ್ಯವಹಾರ

ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ಮೂರನೇ ಸ್ಥಾನ

ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ಮೂರನೇ ಸ್ಥಾನ

  • 2023 ರಲ್ಲಿ ಕೋಟಿ ಕೋಟಿ ಉದ್ಯೋಗ ಸೃಷ್ಟಿ, ಮಹಿಳಾ ಪದವೀಧರರೇ ಹೆಚ್ಚು
  • 21 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು

NAMMUR EXPRESS NEWS
ಹುಬ್ಬಳ್ಳಿ : ಭಾರತೀಯ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಯುವ ಜನಾಂಗಕ್ಕೆ ಉದ್ಯೋಗ ನೀಡುವ ಭಾಗ್ಯದ ಬಾಗಿಲಾಗಿದೆ. ಅಮೆರಿಕ ದೇಶವನ್ನು ಹೊರತುಪಡಿಸಿದರೆ ಅತ್ಯಂತ ಹೆಚ್ಚು ಈಟಿ ಕ್ಷೇತ್ರದ ಬೆಳವಣಿಗೆ ಭಾರತದಲ್ಲೆ ನಡೆಯುತ್ತಿದ್ದು, ಸದ್ಯ ನಮ್ಮ ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಜಾಗತಿಕ ಮಟ್ಟದಲ್ಲಿ ಮೂರನೇ ಸ್ಥಾನದಲ್ಲಿದೆ.
ವಿಶ್ವದಲ್ಲಿಯೇ ಸೂಪರ್ ಐಟಿ ಎಕ್ಸಪರ್ಟಗಳನ್ನು ಹೊಂದಿರುವ ದೇಶ ನಮ್ಮದು, ಭಾರತದ ಬೃಹತ್ ಪ್ರತಿಭೆಗಳು ವಿದೇಶದಲ್ಲಿ ಐಟಿ ಕ್ಷೇತ್ರಗಳಿಗೆ ಕೊಡುಗೆ ನೀಡುತ್ತಿದ್ದಾರೆ. ಐಐಟಿ, ಐಐಐಟಿ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಗಳು ಹೆಚ್ಚಿನ ತಂತ್ರಜ್ಞರನ್ನು ತಯಾರಿಸುತ್ತಿದ್ದು, ಡಿಜಿಟಲ್ ಕ್ಷೇತ್ರದಲ್ಲಿ ಆಶಾದಾಯಕ ಬೆಳವಣಿಗೆ ಕಾಣುತ್ತಿದೆ. ಇದು ಭಾರತದ ಪ್ರಗತಿಗೆ ಪೂರಕವಾಗಿದೆ.


ಪ್ರತಿ ವರ್ಷ 3.8 ಕೋಟಿ ಪದವೀಧರರು : ಪ್ರಸ್ತುತ ಭಾರತದಲ್ಲಿ 1,100 ವಿಶ್ವವಿದ್ಯಾಲಯ ಹಾಗೂ 54 ಸಾವಿರ ತಾಂತ್ರಿಕ ಕ್ಷೇತ್ರದ ಉನ್ನತ ಶಿಕ್ಷಣ ಸಂಸ್ಥೆಗಳಿವೆ, ಪ್ರತಿ ವರ್ಷ 3.8 ಕೋಟಿ ಪದವೀಧರರು ಹೊರ ಬರುತ್ತಿದ್ದು, ಮಾಹಿತಿ ತಂತ್ರಜ್ಞಾನ ಸಂಸ್ಥೆ ಗುಣಮಟ್ಟದ. ಮಾನವ ಸಂಪನ್ಮೂಲ ಅಭಿವೃದ್ಧಿಗೊಳಿಗೆ ಪಣತೊಟ್ಟಿದೆ. 2021ರಲ್ಲಿ 5 ಲಕ್ಷ ತಂತ್ರಜ್ಞರಿಗೆ ಉದ್ಯೋಗ ಲಭಿಸಿದ್ದು, ಪ್ರಸಕ್ತ ಸಾಲಿನಲ್ಲಿ 15 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದ್ದು, 2032 ರ ಹೊತ್ತಿಗೆ 1.5 ಕೋಟಿ ಸಾಫ್ಟ್ ವೇರ್ ತಂತ್ರಜ್ಞರಿಗೆ ಉದ್ಯೋಗ ನೀಡುವ ದೂರ ದೃಷ್ಟಿ ಹೊಂದಲಾಗಿದೆ.


ನಾರಿ ಶಕ್ತಿಗೆ ಮುನ್ನಡೆ : 140 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರ, ಉದ್ಯೋಗ ಸೃಜನೆಗೆ ಬುನಾದಿ, ಭಾರತದ ಅತಿ ದೊಡ್ಡ ಉದ್ಯೋಗದಾತರಾಗಿ ಐಟಿ ಕ್ಷೇತ್ರ ಹೊರಹೊಮ್ಮಿದೆ. ಇನ್ನು ದೇಶಾದ್ಯಂತ ಪುರುಷರಿಗಿಂತ ಮಹಿಳೆಯರ ಜನಸಂಖ್ಯೆ ಕಡಿಮೆ ಇದ್ದರೂ ಪದವೀಧರರಲ್ಲಿ ಮಾತ್ರ ನಾರಿಯರ ಸಂಖ್ಯೆ ಹೆಚ್ಚಿದ್ದು, ಹೆಚ್ಚು ಉದ್ಯೋಗಗಳು ಅವರ ಪಾಲಾಗುತ್ತಿವೆ ಎನ್ನುವುದು ಇಲ್ಲಿ ಗಮನಾರ್ಹ. ಬಹುತೇಕ ಐಟಿ ಕ್ಷೇತ್ರದ ಪ್ರಮುಖ ಹುದ್ದೆಗಳಲ್ಲಿ ನಾರಿ ಶಕ್ತಿ ಮನ್ನಣೆ ಪಡೆದುಕೊಳ್ಳುತ್ತಿದೆ.
21 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು : ಅಮೇರಿಕಾ, ಚೀನಾ, ಜರ್ಮನ್ ಸೇರಿದಂತೆ ಎಲ್ಲಾ ರಾಷ್ಟ್ರಗಳಲ್ಲೂ ಉದ್ಯೋಗದಲ್ಲಿ ಭಾರತೀಯರದ್ದೆ ಸಿಂಹ ಪಾಲು, ರಾಜ್ಯ ರಾಜಧಾನಿ ಬೆಂಗಳೂರು ವಿಶ್ವದಲ್ಲೇ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಣಿವೆ ಎಂದು ಗುರುತಿಸಿಕೊಂಡಿದ್ದು, ಇಲ್ಲಿ 21 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಸಾಫ್ಟ್ ವೇರ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.


ಒಟ್ಟಾರೆಯಾಗಿ ಭಾರತದ ಐಟಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗುತ್ತಿದ್ದು ತಂತ್ರಜ್ಞಾನ ಕ್ಷೇತ್ರದ ವಿದ್ಯಾರ್ಥಿಗಳು, ನ್ಯಾನೋ, ಸಣ್ಣ ಕೈಗಾರಿಕೆ, ಬೃಹತ್ ಉದ್ಯಮ, ಕೃತಕ ಬುದ್ದಿಮತ್ತೆ, ಆರ್ಥಿಕತೆಯ ಜ್ಞಾನಗಳನ್ನು ತಾಂತ್ರಿಕತೆಗೆ ಅಳವಡಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದಲ್ಲಿ ಇನ್ನು ಹೆಚ್ಚಿನ ಉದ್ಯೋಗ ಸೃಷ್ಟಿಗೊಂಡು ದೇಶ ಪ್ರಗತಿಯತ್ತ ಸಾಗುವುದರಲ್ಲಿ ಸಂದೇಹವೇ ಇಲ್ಲ.

Categories
ರಾಜ್ಯ

ಭಲೇ ಲೋಕಾಯುಕ್ತ..ರಾಜ್ಯವಾಗಲಿ ಭ್ರಷ್ಟಾಚಾರ ಮುಕ್ತ!

ಭಲೇ ಲೋಕಾಯುಕ್ತ..ರಾಜ್ಯವಾಗಲಿ ಭ್ರಷ್ಟಾಚಾರ ಮುಕ್ತ!

  • ಸಣ್ಣ ನೌಕರರ ಹಿಂದೆ ಬೀಳುವ ಜತೆಗೆ ದೊಡ್ಡ ಕುಳಗಳ ದಾಳಿ ನಡೆಯಲಿ: ಕೆ. ಆರ್. ಎಸ್ ಪಕ್ಷದ ಆಗ್ರಹ
  • ಉನ್ನತ ಅಧಿಕಾರಿಗಳು, ಶಾಸಕರು, ಸಚಿವರ ಮೇಲೂ ಇರಲಿ ಕಣ್ಣು!

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಅವಿರತ ಹೋರಾಟದ ಮೂಲಕ ಹೊಸ ಭರವಸೆ ಮೂಡಿಸಿರುವ ಸಾಮಾಜಿಕ ಹೋರಾಟಗಾರ ರವಿಕೃಷ್ಣಾ ರೆಡ್ಡಿ ನೇತೃತ್ವದ ಕೆಆರ್ ಎಸ್ ಪಕ್ಷ ರಾಜ್ಯದಲ್ಲಿ ಅಕ್ರಮ ಅಸ್ತಿ, ಹಣ ಗಳಿಕೆಯಲ್ಲಿ ನಿರತರಾಗಿರುವ ದೊಡ್ಡ ದೊಡ್ಡ ಅಧಿಕಾರಿಗಳು, ರಾಜಕೀಯ ನಾಯಕರ ವಿರುದ್ಧವೂ ಲೋಕಾಯುಕ್ತ ದಾಳಿ ನಡೆಸುವಂತೆ ಅಗ್ರಹಿಸಿದೆ.
ಕೇವಲ ಕೆಳಹಂತದ ಅಧಿಕಾರಿಗಳ ವಿರುದ್ಧದ ದಾಳಿಗೆ ಸೀಮಿತಗೊಳಿಸದೆ IAS/IPS/IFS/KAS/KSPS ಹಾಗೂ ಭ್ರಷ್ಟಶಾಸಕರು, ಮಂತ್ರಿಗಳ ವಿರುದ್ಧವು ದಾಳಿ ಮಾಡಿ ಲೋಕಾಯುಕ್ತದ ಪಾವಿತ್ರ್ಯತೆಯನ್ನು ಮತ್ತು ಘನತೆಯನ್ನು ಹೆಚ್ಚಿಸಬೇಕೆಂದು ನ್ಯಾಯಮೂರ್ತಿಗಳಾದ ಬಿ. ಎಸ್. ಪಾಟೀಲ್ ರವರನ್ನು ಪಕ್ಷದ ವತಿಯಿಂದ ಆಗ್ರಹಿಸಲಾಗುತ್ತಿದೆ ಎಂದು ಪಕ್ಷದ ನಾಯಕರು ಹೇಳಿದ್ದಾರೆ.
ನ್ಯಾಯಮೂರ್ತಿ ಎನ್.ವೆಂಕಟಾಚಲ ಹಾಗೂ ನ್ಯಾಯಮೂರ್ತಿ ಡಾ.ಸಂತೋಷ ಹೆಗಡೆ ಅವರು ಲೋಕಾಯುಕ್ತ ಸಂಸ್ಥೆಗೆ ಗಳಿಸಿಕೊಟ್ಟ ಗೌರವ ಮತ್ತು ಘನತೆಯನ್ನು ಹೆಚ್ಚಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಭ್ರಷ್ಟಾಚಾರ ಮುಕ್ತ ಕರ್ನಾಟಕ ನಿರ್ಮಾಣ ನಮ್ಮ ಗುರಿ ಎಂದು ಪಕ್ಷ ಹೇಳಿದೆ.

ಪ್ರತಿ ತಾಲೂಕಿನಲ್ಲೂ ಹೋರಾಟ ಮಾಡುತ್ತಿರುವ ಏಕೈಕ ಪಕ್ಷ

ಕರ್ನಾಟಕದ ಪ್ರತಿ ತಾಲೂಕಲ್ಲಿ ಕೆ ಆರ್ ಎಸ್ ಪಕ್ಷ ತಾಲೂಕು ಕಚೇರಿ, ರಿಜಿಸ್ಟರ್ ಕಚೇರಿ ಹೀಗೆ ಸರ್ಕಾರಿ ಕಚೇರಿಗಳಿಗೆ ನುಗ್ಗಿ ಅಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆ ಎಳೆಯುತ್ತಿದೆ. ಇನ್ನು ಮೊಬೈಲ್ ಮೂಲಕವೇ ಸ್ಟಿಂಗ್ ಆಪರೇಷನ್ ಮಾಡಿ ಲಂಚಕ್ಕೆ ಕೈ ಒಡ್ದುವ ಸರ್ಕಾರಿ ಅಧಿಕಾರಿಗಳು, ನೌಕರರ ಮೈ ಚಳಿಯನ್ನು ಕೆ.ಆರ್. ಎಸ್ ಪಕ್ಷದ ಸದಸ್ಯರು ಬಿಡಿಸಿದ್ದಾರೆ. ಇದೇ ಭಯದಿಂದ ಸರ್ಕಾರ ಒಮ್ಮೆ ಸರ್ಕಾರಿ ಕಚೇರಿ ಒಳಗೆ ಮೊಬೈಲ್ ಚಿತ್ರೀಕರಣ ನಿಷೇಧಿಸಿ ಆಮೇಲೆ ಜನರಿಂದ ಭಾರೀ ವಿರೋಧ ವ್ಯಕ್ತವಾದ ಮೇಲೆ ಹಿಂಪಡೆದಿತ್ತು.

ಪ್ರತಿ ತಾಲೂಕಲ್ಲಿ ಲೋಕಾಯುಕ್ತ ಭಯ ಇರಬೇಕು

ತಾಲೂಕು ಕೇಂದ್ರಗಳಲ್ಲಿನ ಅಧಿಕಾರಿಗಳು, ರಾಜಕಾರಣಿಗಳು, ಕೆಲವು ಗುತ್ತಿಗೆದಾರರು ಅಕ್ರಮದ ಮೂಲಕ ಹಣ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಇದರಿಂದ ಸಮಾಜ, ಜನ ತೊಂದರೆಗೆ ಸಿಲುಕಿದ್ದಾರೆ. ಹೀಗಾಗಿ ಪ್ರತಿ ತಾಲೂಕಲ್ಲಿ ತಿಂಗಳಿಗೆ ಲೋಕಾಯುಕ್ತ ಅದಾಲತ್ ನಡೆಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

Categories
ವೈರಲ್ ವೀಡಿಯೊಗಳು

ತೃತೀಯ ಲಿಂಗಿಗಳಿಗೂ ಉದ್ಯೋಗ ನೀತಿ!?

ತೃತೀಯ ಲಿಂಗಿಗಳಿಗೂ ಉದ್ಯೋಗ ನೀತಿ!?

  • ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಆದೇಶ
  • ಅಂಗವಿಕಲ ಮಹಿಳೆ ಫುಡ್ ಡೆಲಿವರಿ: ವಿಡಿಯೋ ವೈರಲ್

NAMMUR EXPRESS NEWS
ದೆಹಲಿ: ತೃತೀಯ ಲಿಂಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ನೀತಿ ರೂಪಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿದೆ. 2014ರಲ್ಲಿ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾದ ತೃತೀಯಲಿಂಗಿಯೊಬ್ಬರಿಗೆ ಅಂದಿನ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಉದ್ಯೋಗ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಮಧ್ಯಂತರ ಆದೇಶ ಹೊರಡಿಸಿದೆ. ಸೂಕ್ತ ನೀತಿ ರೂಪಿಸುವ ಮೂಲಕ ಕಾಯಿದೆಯ ನಿಬಂಧನೆಗಳನ್ನು ಅಕ್ಷರ ದಲ್ಲಿ ಜಾರಿಗೊಳಿಸಬೇಕು. ಈ ವಿಚಾರವಾಗಿ ಕೇಂದ್ರ ಸರ್ಕಾರ ನೇತೃತ್ವ ವಹಿಸಿ, ರಾಜ್ಯ ಸರ್ಕಾರಗಳು ಮತ್ತು ಕಾಯ್ದೆಯ ವ್ಯಾಪ್ತಿಗೆ ಒಳಪಡುವ ಸಂಸ್ಥೆಗಳು ಸೇರಿದಂತೆ ಇತರೆ ಎಲ್ಲ ಘಟಕಗಳಿಗೆ ಸ್ಪಷ್ಟವಾಗಿ ಮಾರ್ಗದರ್ಶನ ನೀಡಬೇಕು ಎಂದು ಪೀಠ ಹೇಳಿದೆ.

ನೆಟ್ಟಿಗರ ಮನಸ್ಸು ಗೆದ್ದ ಸ್ವಿಗ್ಗಿ ವೀಲ್‌ಚೇ‌ರ್ ಹುಡುಗಿ

ಕೈ-ಕಾಲು ಗಟ್ಟಿಯಿದ್ದರೂ ಭಿಕ್ಷೆ ಬೇಡಿ ತಿನ್ನುವವರು ಅನೇಕರಿದ್ದಾರೆ. ಹಾಗಿರುವಾಗ ಯುವತಿಯೊಬ್ಬರು ನಡೆದಾಡುವ ಕಾಲಿನಲ್ಲಿ ಶಕ್ತಿಯಿಲ್ಲದಿದ್ದರೂ, ಮನೆ ಮನೆಗೆ ತಲುಪಿಸುವ ಕೆಲಸ ಮಾಡುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಆನ್ ಲೈನ್ ಫುಡ್ ಡೆಲಿವರಿ ಆ್ಯಪ್ ಸ್ವಿಗ್ಗಿಯ ಟಿ-ಶರ್ಟ್ ಧರಿಸಿದ ಯುವತಿ ತಮ್ಮ ವೀಲ್‌ ಚೇ‌ರ್ ನಲ್ಲಿಯೇ ಸ್ವಿಗ್ಗಿ ಬ್ಯಾಗ್ ಇಟ್ಟುಕೊಂಡು ಸವಾರಿ ನಡೆಸುತ್ತಿದ್ದಾರೆ. ಅದನ್ನು ಅವರ ಹಿಂದೆ ಸಂಚರಿಸುತ್ತಿದ್ದ ಕಾರಿನಲ್ಲಿದ್ದ ವ್ಯಕ್ತಿ ವಿಡಿಯೋ ಮಾಡಿದ್ದಾರೆ. ವಿಡಿಯೋವನ್ನು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಹಂಚಿಕೊಂಡಿದ್ದು, ‘ಜೀವನ ಕಷ್ಟವೇ. ಆದರೆ ನಾವು ಅದನ್ನು ಒಪ್ಪಿಕೊಂಡು ಎದುರಿಸುವುದನ್ನು ಕಲಿಯಬೇಕು’ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಎಲ್ಲರ ಮನಸ್ಸು ಗೆದ್ದಿದೆ. ಈ ವಿಡಿಯೋ ವೀಕ್ಷಿಸಲು ಹೀಗೆ ಸರ್ಚ್ ಮಾಡಿ: swiggy wheelchair