Categories
ರಾಜಕೀಯ

ವಿಧಾನ ಸಭಾ ಬಳಿಕವೇ ಚುನಾವಣೆ ಸಾಧ್ಯತೆ!

  • ಜಿ.ಪಂ, ತಾ.ಪಂ ಚುನಾವಣಾ ಅರ್ಜಿ ವಜಾ..!
  • ಚುನಾವಣಾ ಆಯೋಗ ಸಲ್ಲಿಕೆ ಮಾಡಿದ್ದ ಅರ್ಜಿ ವಜಾಗೊಳಿಸದ ಸುಪ್ರೀಂಕೋರ್ಟ್
  • ಅಂತಿಮ ಮೀಸಲು, ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆ

NAMMUR EXPRESS NEWS
ನವ ದೆಹಲಿ: ಜಿ.ಪಂ, ತಾ.ಪಂ ಚುನಾವಣಾ ಅರ್ಜಿ ವಜಾ ಮಾಡಿ ಸುಪ್ರೀಂ ಕೋರ್ಟ್ ಪುನರ್ ಪರಿಶೀಲನೆ ಮಾಡುವಂತೆ ಅದೇಶಿಸಿದೆ.
ಚುನಾವಣಾ ಆಯೋಗ ಸಲ್ಲಿಕೆ ಮಾಡಿದ್ದ ಅರ್ಜಿ ವಜಾಗೊಳಿಸದ ಸುಪ್ರೀಂಕೋರ್ಟ್ ನಡೆಯಿಂದ ವಿಧಾನ ಸಭಾ ಬಳಿಕವೇ ಚುನಾವಣೆ ಸಾಧ್ಯತೆ ದಟ್ಟವಾಗಿದೆ.
ರಾಜ್ಯದ ಜಿಲ್ಲಾಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ವಿಚಾರವಾಗಿ ರಾಜ್ಯ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ ಗೆ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ನ್ಯಾವಿಕ್ರಮನಾಥ್ ಹಾಗೂ ನ್ಯಾ. ಅನಿರುದ್ ಬೋಸ್ ನೇತೃತ್ವದ ಪೀಠವು ವಜಾಗೊಳಿಸಿದೆ. ರಾಜ್ಯ ಸರ್ಕಾರವು ಅಂತಿಮ ಮೀಸಲು ಮತ್ತು ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರವೇ ಚುನಾವಣಾ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಗಳಿದೆ ಎನ್ನಲಾಗಿದೆ. ರಾಜ್ಯದಲ್ಲಿ ಸುಮಾರು ಒಂದೂವರೆ ವರ್ಷದಿಂದ ಬಾಕಿ ಇರುವ ಜಿಲ್ಲಾಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆದಿಲ್ಲ. ಇದಕ್ಕೆ ಕಾರಣ ಎರಡೂ ಪಂಚಾಯಿತಿಗಳಲ್ಲಿ ಕ್ಷೇತ್ರಗಳ ಮರುವಿಗಂಡಣೆ ಹಾಗೂ ಮೀಸಲು ನಿಗದಿಗೊಳಿಸುವ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಹೀಗಾಗಿ ಕೆಲವೆಡೆ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತವೆ.
ಈ ಕಾರ್ಯವನ್ನು ಪೂರ್ಣಗೊಳಿಸಲು ಹೈಕೋರ್ಟ್‌ನಿಂದ ರಾಜ್ಯ ಸರ್ಕಾರಕ್ಕೆ ಮತ್ತೆ 12 ವಾರ ಕಾಲಾವಕಾಶ ನೀಡಿತ್ತು. ಈ ಕಾಲಾವಕಾಶ ಪೂರ್ಣಗೊಳ್ಳುವ ಮುನ್ನವೇ ಹೈಕೋರ್ಟ್ ನ ಆದೇಶ ಪ್ರಶ್ನಿಸಿಕೊಂಡು ರಾಜ್ಯ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ ಗೆ ಅರ್ಜಿ ಸಲ್ಲಿಸಿದ್ದು ಅದನ್ನು ಶುಕ್ರವಾರ ವಜಾಗೊಳಿಸಿದೆ.

ಏಪ್ರಿಲ್, ಮೇ ತಿಂಗಳಲ್ಲೇ ವಿಧಾನ ಸಭಾ ಚುನಾವಣೆ

ರಾಜ್ಯದಲ್ಲಿ 2023ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಎರಡು ಹಂತದಲ್ಲಿ ವಿಧಾನ ಸಭಾ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈಗಾಗಲೇ ಎಲ್ಲಾ ಕ್ಷೇತ್ರದಲ್ಲಿ ಸಿದ್ಧತೆ ನಡೆಯುತ್ತಿದೆ. 3 ಪಕ್ಷ ಸೇರಿ ಆಮ್ ಆದ್ಮಿ ಕೂಡ ಈ ಬಾರಿ ಕಣಕ್ಕೆ ಇಳಿಯಲಿದೆ.

Categories
ರಾಜಕೀಯ

ಓವರ್ ಸ್ಪೀಡಿನಿಂದ ಚಂದ್ರು ಕಾರು ಡಿಕ್ಕಿಯಾಗಿ ಸಾವು!

  • ಅಪಘಾತದಿಂದ ಕಾರು ತುಂಗಾ ಕಾಲುವೆಗೆ ಬಿದ್ದಿದೆ
  • 40 ಪುಟಗಳ ಎಫ್ ಎಸ್ ಎಲ್ ವರದಿಯಲ್ಲಿ ಬಹಿರಂಗ
  • ಚಂದ್ರಶೇಖರ್ ಸಾವಿನಲ್ಲಿ ಹಲವು ರಾಜಕೀಯ..!?
  • ಪ್ರಕರಣದಲ್ಲಿ ವಿನಯ್ ಗುರೂಜಿ ಹೆಸರು ದುರ್ಬಳಕೆ!?

NAMMUR EXPRESS NEWS
ದಾವಣಗೆರೆ: ಭಾರೀ ಕುತೂಹಲ ಕೆರಳಿಸಿದ್ದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ಸಹೋದರನ ಮಗ ಚಂದ್ರು ಅವರ ಸಾವು ಇದೀಗ ಅಪಘಾತ ಎಂಬುದು ದೃಢಪಟ್ಟಿದೆ.
ಸರ್ಕಾರ ನಡೆಸಿದ ಎಫ್.ಎಸ್.ಎಲ್ ವರದಿಯಲ್ಲಿ ಚಂದ್ರಶೇಖರ್ ಸಾವಿನ ರಹಸ್ಯ ಬಯಲಾಗಿದ್ದು,ಓವರ್ ಸ್ಪೀಡ್‌ನಿಂದ ಚಂದ್ರು ಕಾರು ಸೇತುವೆಗೆ ಡಿಕ್ಕಿಯಾಗಿ ಕಾರು ತುಂಗಾ ಕಾಲುವೆಗೆ ಬಿದ್ದಿದೆ. ಇದರ ಪರಿಣಾಮ ಚಂದ್ರು ಸಾವನ್ನಪ್ಪಿದ್ದಾನೆ ಎಂಬ 40 ಪುಟಗಳ ವರದಿಯನ್ನು ಸಲ್ಲಿಕೆ ಮಾಡಲಾಗಿದೆ.
ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ!: ಎಫ್ ಎಸ್ ಎಲ್ ರಿಪೋರ್ಟ್‌, ಮರಣೋತ್ತರ ಪರೀಕ್ಷೆ ವರದಿ ಪೊಲೀಸರ ಕೈ ಸೇರಿದ್ದು ಮರಣೋತ್ತರ ಪರೀಕ್ಷೆಯ ಪ್ರಕಾರ ಶ್ವಾಸಕೋಶದ ಒಳಗೆ ನೀರು ನುಗ್ಗಿ ಸಾವನ್ನಪ್ಪಿದ್ದಾರೆ ಎಂದು ವರದಿಯನ್ನು ಕೊಟ್ಟಿದ್ದಾರೆ.
40 ಪುಟಗಳ ಎಫ್ ಎಸ್ ಎಲ್ ವರದಿಯಲ್ಲಿ ಅಪಘಾತದಲ್ಲಿ ಚಂದ್ರಶೇಖರ್ ಸಾವು ಎಂದು ದೃಢಪಡಿಸಿ ದ್ದಾರೆ. ಓವರ್ ಸ್ಪೀಡ್‌ನಿಂದ ಚಂದ್ರು ಕಾರು ಡಿಕ್ಕಿಯಾಗಿ ತುಂಗಾ ಕಾಲುವೆಗೆ ಬಿದ್ದಿದೆ ಎಂದು ಎಫ್ ಎಸ್ ಎಲ್ ವರದಿಯಲ್ಲಿ ಅಪಘಾತ ಎಂದು ಉಲ್ಲೇಖ ಮಾಡಿದೆ. ಇನ್ನೂ ಒಂದು ಹಂತದ ಪರೀಕ್ಷೆ ಬಾಕಿ ಇದೆ ಎಂದುವಿಧಿ ವಿಜ್ಞಾನ ತಜ್ಞ ಫಣೀಂದ್ರ ಮಾಹಿತಿ ನೀಡಿದ್ದಾರೆ.

ಮೃತ ಮಗನ ಹೆಸರಲ್ಲಿ ರೇಣುಕಾಚಾರ್ಯ ರಾಜಕೀಯ..!?: ಜನರ ಜತೆ ನಾಟಕ..?

ಹೊನ್ನಾಳಿ ಶಾಸಕ ರೇಣುಕಾಚಾರ್ಯ ಚಂದ್ರು ಸಹಜ ಸಾವನ್ನು ತನ್ನ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕ್ಷೇತ್ರದ ಜನರ ಮುಂದೆ ಊಟ, ಕಣ್ಣೀರಿನ ನಾಟಕ ಆಡುವುದು ಅಸಹ್ಯ ಹುಟ್ಟಿಸಿದೆ ಎಂಬ ಚರ್ಚೆ ಕೇಳಿ ಬರುತ್ತಿದೆ. ಜೊತೆಗೆ ತಮ್ಮ ಸರ್ಕಾರದ ಮೇಲೆಯೇ ಆರೋಪ ಮಾಡುತ್ತಿರುವುದು ಅನುಮಾನಕ್ಕೂ ಎಡೆ ಮಾಡಿಕೊಟ್ಟಿದೆ.

ವಿನಯ್ ಗುರೂಜಿ ಹೆಸರು ದುರ್ಬಳಕೆ!?
ಚಂದ್ರು ವಿನಯ್ ಗುರೂಜಿ ಮಠಕ್ಕೆ ಹೋಗಿ ಶಿವಮೊಗ್ಗ ಮೂಲಕ ಹೊನ್ನಾಳಿಯ ನ್ಯಾಮತಿ ಸಮೀಪದ ಸುರಹೊನ್ನೆ ಬಳಿ ತುಂಗಾ ಕಾಲುವೆಗೆ ಡಿಕ್ಕಿಯಾಗಿತ್ತು. ಆದರೆ ವಿನಯ್ ಗುರೂಜಿ ಮಠಕ್ಕೆ ಬಂದಿದ್ದ ಕಾರಣಕ್ಕೆ ವಿನಯ್ ಗುರೂಜಿ ವಿರುದ್ಧ ಪಿತೂರಿ ಮಾಡುತ್ತಿರುವ ಒಂದು ತಂಡ ಅವರ ಹೆಸರನ್ನು ತಳಕು ಹಾಕಿ ಅವರ ಹೆಸರನ್ನು ಹಾಳು ಮಾಡುವ ಯತ್ನ ಮಾಡಿದೆ.. ಈ ಬಗ್ಗೆ ತನಿಖೆ ಕೂಡ ನಡೆಯುತ್ತಿದೆ. ತನಿಖೆಗೆ ಮಠ ಎಲ್ಲಾ ರೀತಿಯಲ್ಲೂ ಸಹಕಾರ ಮಾಡಿದೆ ಎಂದು ಪ್ರತಿನಿಧಿಗಳು ಹೇಳಿದ್ದಾರೆ.

Categories
ರಾಜಕೀಯ

ರಾಜೀವ್ ಗಾಂಧಿ 6 ಹಂತಕರ ಬಿಡುಗಡೆ ಭಾಗ್ಯ!

  • ‘ಸುಪ್ರೀಂ’ ಆದೇಶ: ಸನ್ನಡತೆ ಆಧಾರದಲ್ಲಿ ಬಂಧಮುಕ್ತ
  • ಆತ್ಮಹತ್ಯೆ ಬಾಂಬ್ ಸ್ಫೋಟ ಮಾಡಿ ಹತ್ಯೆ

NAMMUR EXPRESS NEWS
ನವದೆಹಲಿ: 1991ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಆತ್ಮಹತ್ಯಾ ಬಾಂಬ್ ಸ್ಫೋಟಿಸಿ ಹತ್ಯೆಗೈದ ಪ್ರಕರಣದಲ್ಲಿ ಕಳೆದ 30 ವರ್ಷಗಳಿಂದ ಜೈಲಿನಲ್ಲಿದ್ದ 6 ಅಪರಾಧಿಗಳನ್ನು ಬಿಡುಗಡೆ ಮಾಡಲು ಸುಪ್ರೀಂಕೋರ್ಟ್ ಶುಕ್ರವಾರ ಮಹತ್ವದ ನಿರ್ದೇಶನ ಹೊರಡಿಸಿದೆ.
ರಾಜೀವ್ ಹತ್ಯೆ ಪ್ರಕರಣದ 7 ಅಪರಾಧಿಗಳ ಪೈಕಿ ಕಳೆದ ಮೇನಲ್ಲಿ ಒಬ್ಬನಿಗೆ ಸರ್ವೋಚ್ಚ ನ್ಯಾಯಾಲಯ ಬಿಡುಗಡೆ ಭಾಗ್ಯ ಕಲ್ಪಿಸಿತ್ತು. ಇದೀಗ ಉಳಿದ 6 ಮಂದಿಯನ್ನು ಬಂಧಮುಕ್ತಗೊಳಿಸುವುದರೊಂದಿಗೆ ರಾಜೀವ್ ಹತ್ಯೆ ಪ್ರಕರಣದ ಎಲ್ಲ ಅಪರಾಧಿಗಳೂ ಜೈಲಿನಿಂದ ಹೊರಬಂದಂತಾಗಿದೆ.
ಯಾರಿಗೆ ಮುಕ್ತಿ?!: ನಳಿನಿ ಶ್ರೀಹರನ್, ಆರ್.ಪಿ.ರವಿಚಂದ್ರನ್, ಶಾಂತನ್, ಮುರುಗನ್ (ನಳಿನಿ ಪತಿ), ರಾಬರ್ಟ್ ಪಯಸ್ ಹಾಗೂ ಜಯಕುಮಾರ್ ಬಿಡುಗಡೆ ಆಗಲಿರುವವರು. ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಹಾಗೂ ಬಿ.ವಿ.ನಾಗರತ್ನ ಅವರಿದ್ದ ಪೀಠ ಇವರ ಬಿಡುಗಡೆಗೆ ಸೂಚಿಸಿದೆ. ಅಪರಾಧಿಗಳ ಗಲ್ಲು ಶಿಕ್ಷೆಯನ್ನು ವಿಳಂಬದ ಕಾರಣ ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಗಿತ್ತು. ಈಗ ಎಲ್ಲರೂ ಶಿಕ್ಷೆ ಅನುಭವಿಸಿದ್ದಾರೆ. ತಮಿಳುನಾಡು ಸರ್ಕಾರ ಕೂಡ ಅವರ ಬಿಡುಗಡೆಗೆ ಶಿಫಾರಸು ಮಾಡಿದೆ. ಅವರು ಬೇರೆ ಪ್ರಕರಣದಲ್ಲಿ ಬೇಕಿಲ್ಲದಿದ್ದರೆ ಬಿಡುಗಡೆ ಮಾಡಬಹುದು’ ಎಂದು ನ್ಯಾಯಪೀಠ ತಿಳಿಸಿದೆ. ಸಂವಿಧಾನದ ಪರಿಚ್ಛೇದ 142ರಲ್ಲಿ ಇರುವ ವಿಶೇಷ ಅಧಿಕಾರವನ್ನು ಬಳಸಿಕೊಂಡು ಮೇ18ರಂದು ನ್ಯಾಯಾಲಯ ಪೆರಾರಿವಾಲನ್ ಎಂಬ ಮತ್ತೊಬ್ಬ ಅಪರಾಧಿಯನ್ನು ಬಿಡುಗಡೆ ಮಾಡಿತ್ತು. ಅದೇ ಆದೇಶ ಪ್ರಕರಣದ ಇತರೆ, ಅಪರಾಧಿಗಳಿಗೂ ಅನ್ವಯವಾಗುತ್ತದೆ’ ಎಂದು ತಿಳಿಸಿದೆ. ಸಂವಿಧಾನದ ಪರಿಚ್ಛೇದ 142ರಡಿ ಸಂಪೂರ್ಣ ನ್ಯಾಯ ಒದಗಿಸಲು ಯಾವುದೇ ತೀರ್ಪು ಅಥವಾ ಆದೇಶ ಹೊರಡಿಸಲು ಸುಪ್ರೀಂಕೋರ್ಟ್‌ಗೆ ಅಧಿಕಾರವಿದೆ. ‘ಶಿಕ್ಷೆ ಅನುಭವಿಸುವ ಹಂತದಲ್ಲಿ ಅವರ ನಡವಳಿಕೆ ತೃಪ್ತಿದಾಯಕವಾಗಿದೆ. ಅಲ್ಲದೆ ಅವರು ವಿವಿಧ ಅಧ್ಯಯನವನ್ನೂ ನಡೆಸಿದ್ದಾರೆ’ ಎಂದು ನ್ಯಾಯಪೀಠ ಹೇಳಿದೆ. ನ್ಯಾಯಾಲಯದ ಈ ಆದೇಶಕ್ಕೆ ಕಾಂಗ್ರೆಸ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಳಿನಿ ಹಾಗೂ ರವಿಚಂದ್ರನ್ ಅವರು ಪರೋಲ್ ಮೇಲಿದ್ದಾರೆ. ಉಳಿದ ನಾಲ್ವರು ಜೈಲಿನಲ್ಲಿದ್ದಾರೆ.
1991ರ ಸಾರ್ವತ್ರಿಕ ಲೋಕಸಭೆ ಚುನಾವಣೆಯ ಪ್ರಚಾರ ಉತ್ತುಂಗದಲ್ಲಿದ್ದಾಗ ಮೇ 21ರಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಶ್ರೀಪೆರಂಬದೂರಿನಲ್ಲಿ ಪ್ರಚಾರ ಸಭೆಯೊಂದರಲ್ಲಿ ಭಾಗವಹಿಸಿದ್ದರು. ಎಲ್‌ಟಿಟಿಇ ಲ್ಲಿ ಸಂಘಟನೆಯ ಧನು ಎಂಬ ಆತ್ಮಾಹುತಿ ಬಾಂಬರ್ ರ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದರಿಂದ ರಾಜೀವ್‌
ಗಾಂಧಿ ದೇಹ ಛಿದ್ರವಾಗಿತ್ತು. ಪ್ರಕರಣ ಸಂಬಂಧ 26 ಮಂದಿಯ ವಿರುದ್ಧ ಕಠಿಣ ಟಾಡಾ ಕಾಯ್ದೆಯಡಿ ವಿಚಾರಣೆ ಆರಂಭಿಸಲಾಗಿತ್ತು. ಟಾಡಾ ಕಾಯ್ದೆ ರದ್ದಾದ ಬಳಿಕ 1999ರಲ್ಲಿ 7 ಮಂದಿಯನ್ನು ಮಾತ್ರ ಅಪರಾಧಿ ಎಂದು ಪರಿಗಣಿಸಿದ ಸುಪ್ರೀಂಕೋರ್ಟ್, ಉಳಿದವರನ್ನು ಬಿಡುಗಡೆ ಮಾಡಲು ಆದೇಶಿಸಿತ್ತು. ಏಳು ಮಂದಿಯ ಪೈಕಿ ನಾಲ್ವರಿಗೆ ಗಲ್ಲು ಶಿಕ್ಷೆ, ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

Categories
ರಾಜ್ಯ

ಪಿಡಿಓಗಳಿಗೆ ಭರ್ಜರಿ ಗುಡ್ ನ್ಯೂಸ್..!

  • ಮುಂಬಡ್ತಿ, ವೇತನ ಹೆಚ್ಚಳ: ಇನ್ನಾದ್ರೂ ಕೆಲಸ ಪಕ್ಕಾ ಮಾಡ್ತಾರಾ..?

NAMMUR EXPRESS NEWS
ಬೆಂಗಳೂರು: ರಾಜ್ಯ ಸರ್ಕಾರದಿಂದ ಗ್ರಾಮ ಪಂಚಾಯ್ತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳನ್ನು ಹಿರಿಯ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎಂದು ಉನ್ನತೀಕರಣ ಮಾಡಿದೆ. ಅಲ್ಲದೆ ಉತ್ತಮ ವೇತನ ನೀಡಿದೆ.
ಈ ಉನ್ನತೀಕರಣದಂತೆ ವೇತವನ್ನು ಹೆಚ್ಚಳ ಮಾಡಿ ಭರ್ಜರಿ ಸಿಹಿಸುದ್ದಿಯನ್ನು ನೀಡಿದೆ. ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ನಡವಳಿಗಳನ್ನು ಹೊರಡಿಸಿದ್ದು, ಇಲಾಖೆಯ ಅಡಿಯಲ್ಲಿ ಮಂಜೂರಾಗಿರುವ 6021 ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿರಿಯ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎಂದು ಉನ್ನತೀಕರಣ ಮಾಡಲಾಗಿದೆ. ಅಲ್ಲದೇ ಅದೇ ಹುದ್ದೆಯಲ್ಲಿ ಮುಂದುವರಿಸಲಾಗಿದೆ ಎಂದಿದ್ದಾರೆ. ಇನ್ನೂ ಪಿಡಿಓಗಳ ಉನ್ನತೀಕರಣ, ಪುನ‌ ಪದನಾಮೀಕರಿಸಿದ ನಂತ್ರ ವೇತನ ಶ್ರೇಣಿಯನ್ನು ರೂ.37,900 ರಿಂದ 70,850 ಇದ್ದದ್ದನ್ನು ಗ್ರೂಪ್ ಸಿ ವೃಂದದ 1500 ಪಿಡಿಓಗಳಿಗೆ ತಕ್ಷಣದಿಂದ ಅನ್ವಯವಾಗುವಂತೆ ವೇತನ ಶ್ರೇಣಿ ರೂ.40,900 ರಿಂದ 78,2000ಕ್ಕೆ ಹೆಚ್ಚಿಸಲಾಗಿದೆ. ಇದಲ್ಲದೇ ಉಳಿದ 4521 ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ವೇತನ ಶ್ರೇಣಿ ರೂ 37,900 ರಿಂದ 70,850 ಮುಂದುವರೆಸಲಾಗಿದೆ. ಹಿರಿಯ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವೃಂದಗಳಿಗೆ ನೇಮಕಾತಿ ಕಾರ್ಯವಿಧಾನವನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.

Categories
ಬೆಂಗಳೂರು

ಮತ್ತೆ ಮಳೆ: ರಾಜಧಾನಿಯಲ್ಲಿ ತುಂತುರು ಮಳೆ

  • 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
  • ಮಲೆನಾಡು, ಬೆಂಗಳೂರಲ್ಲೂ ಮಳೆ

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಹಿಂಗಾರು ಮಳೆ ಮತ್ತೆ ಚುರುಕುಗೊಳ್ಳುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಆಗಲಿದೆ. ಈಗಾಗಲೇ ಬೆಂಗಳೂರು, ಮಲೆನಾಡಿನ ಹಲವು ಕಡೆ ಮಳೆಯಾಗಿದೆ.
ಚೆನ್ನೈ ಅಲ್ಲಿ ಮಂಜು ಕವಿದ ವಾತಾವರಣ ಇದ್ದು ಬೆಂಗಳೂರಿನಲ್ಲೂ ಮಳೆ, ಮಂಜಿನ ವಾತಾವರಣ ಇದೆ.
ಕರಾವಳಿಯ ಜಿಲ್ಲೆಗಳು ಸೇರಿದಂತೆ ಒಟ್ಟು ರಾಜ್ಯದ 8 ಜಿಲ್ಲೆಗಳಿಗೆ ಹಳದಿ ಅಲರ್ಟ್ ನೀಡಲಾಗಿದೆ. ರಾಜ್ಯದಲ್ಲಿ ಕೆಲವು ದಿನಗಳಿಂದ ಕಡಿಮೆಯಾಗಿದ್ದ ಮಳೆ ಮತ್ತೆ ಆರಂಭವಾಗಿದೆ. ಗುರುವಾರ ಸಂಜೆಯಿಂದಲೇ ಬೆಂಗಳೂರಿನ ಹಲವೆಡೆ ಮಳೆ ಆರಂಭವಾಗಿದ್ದು, ಬೆಂಗಳೂರಿನ ಹಲವು ಜಿಲ್ಲೆಗಳಲ್ಲಿ ಇಂದು ಕೂಡ ಭಾರೀ ಮಳೆಯಾಗಲಿದೆ. ರಾಜ್ಯದಲ್ಲಿ ಹಿಂಗಾರು ಮಳೆ ಮತ್ತೆ ಚುರುಕುಗೊಳ್ಳುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು ಒಟ್ಟು 8 ಜಿಲ್ಲೆಗಳಿಗೆ ಹಳದಿ ಅಲರ್ಟ್ ನೀಡಲಾಗಿದೆ. ಹಲವು ಜಿಲ್ಲೆಗಳಲ್ಲಿ ನವೆಂಬರ್ 13 ಮತ್ತು 14ರಂದು ಮಳೆಯಾಗಲಿದ್ದು, ಬೆಂಗಳೂರು ಸೇರಿದಂತೆ ಚಾಮರಾಜನಗರ, ಕೊಡಗು, ಮಂಡ್ಯ ಮೈಸೂರು, ಹಾಸನ, ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ . ಹಾಗೇ, ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲೂ ನವೆಂಬರ್ 14ರಂದು ಭಾರೀ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

Categories
ರಾಜ್ಯ

ಹರಿಹರಪುರ ಮಠದಲ್ಲಿ ” ಸಂಸ್ಕಾರ ಸಮಾವೇಶ”!

  • ಡಾ.ವೀರೇಂದ್ರ ಹೆಗ್ಗಡೆ,ಅನೇಕ ಮಠಾಧೀಶರ ಆಗಮನ
  • ರಾಜೇಗೌಡ, ಜೀವರಾಜ್, ಸುಧಾಕರ್ ಶೆಟ್ಟಿ ಉಪಸ್ಥಿತಿ

NAMMUR EXPRESS NEWS
ಕೊಪ್ಪ: ಕೊಪ್ಪ ತಾಲೂಕಿನ ಹರಿಹರಪುರ ಶ್ರೀಮಠದಲ್ಲಿ ಸನಾತನ ಹಿಂದೂ ಸಮಾಜ ಪರಿಷತ್ತು ವತಿಯಿಂದ ಶುಕ್ರವಾರ ಸಮಾನ ಸಂಸ್ಕಾರ ಸಮಾವೇಶ ಕಾರ್ಯಕ್ರಮವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗಡೆ ಉದ್ಘಾಟಿಸಿದ್ದು ಹರಿಹರಪುರದಲ್ಲಿ ಧಾರ್ಮಿಕ ಸಂಭ್ರಮ ಮನೆ ಮಾಡಿತ್ತು.
ಬೆಂಗಳೂರು ಬೇಲಿಮಠ ಮಹಾಸಂಸ್ಥಾನದ ಜಗದ್ಗುರು ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚೆನ್ನಯ್ಯ ಸಂಸ್ಥಾನದ ಜಗದ್ಗುರು ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಹರಿಹರಪುರ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಸೇರಿದಂತೆ ಅನೇಕ ಶ್ರೀಗಳು, ಪ್ರಮುಖರು ಆಗಮಿಸಿ ಆಶೀರ್ವಚನ ನೀಡಿದರು. ಹೆಗ್ಗಡೆ ಅವರು ಮಠವನ್ನು ವೀಕ್ಷಿಸಿದರು.
ಧರ್ಮಸ್ಥಳ ಸಂಘದ ಸದಸ್ಯರು ಹಾಜರ್!
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕೊಪ್ಪ, ನ.ರಾ.ಪುರ, ಶೃಂಗೇರಿ ವ್ಯಾಪ್ತಿಯ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು, ಮೇಲ್ವಿಚಾರಕರು, ಸ್ವಸಹಾಯ ಸಂಘ ಒಕ್ಕೂಟದ ಪದಾಧಿಕಾರಿಗಳು, ಸ್ವಇಚ್ಛೆಯಿಂದ ಬರುವ ಸದಸ್ಯರು ಹರಿಹರಪುರ ಶ್ರೀ ಮಠದಲ್ಲಿ ನಡೆಯುವ ಸಂಸ್ಕಾರ ಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಕೊಪ್ಪ ನ.ರಾ.ಪುರ ಯೋಜನಾಧಿಕಾರಿ ನಿರಂಜನ್‌, ಶೃಂಗೇರಿ ಯೋಜನಾಧಿಕಾರಿ ಶ್ರೀಜಿತ್ ಶೆಟ್ಟಿ ಎಲ್ಲಾ ಸಂಘದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಶೃಂಗೇರಿ ಶಾಸಕ ರಾಜೇಗೌಡ, ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್, ಜೆಡಿಎಸ್ ನಾಯಕ ಸುಧಾಕರ್ ಶೆಟ್ಟಿ, ಬಿಜೆಪಿ ನಾಯಕ ಕಗ್ಗ ರಾಮಸ್ವಾಮಿ ಸೇರಿ ಅನೇಕರು ಹಾಜರಿದ್ದರು.

Categories
ಬೆಂಗಳೂರು

ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ ಮಾಡಿದ ಮೋದಿ!

  • ರಾಜಧಾನಿಯಲ್ಲಿ ಎಲ್ಲೆಡೆ ಮೋದಿ ಮೋದಿ ಜಯಘೋಷ
  • ನಾಡಪ್ರಭು ಕೆಂಪೇಗೌಡರ 108 ಅಡಿಯ ಕಂಚಿನ ಪ್ರತಿಮೆ ಲೋಕಾರ್ಪಣೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್: ರಿಪೋರ್ಟರ್: ಅಶ್ವಿನ್
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಮ್ಯಾಜಿಕ್ ಮಾಡಿದ್ದಾರೆ. ನಾಡಪ್ರಭು ಕೆಂಪೇಗೌಡರ 108 ಅಡಿಯ ಕಂಚಿನ ಪ್ರತಿಮೆ ಲೋಕಾರ್ಪಣೆ ಮಾಡಿದ್ದಾರೆ. ಇಡೀ ಬೆಂಗಳೂರು ಮೋದಿ ಆಗಮನಕ್ಕೆ ಹಬ್ಬದಂತೆ ಸಿದ್ದಗೊಂಡಿದ್ದು ಎಲ್ಲೆಡೆ ಭಾವುಟಗಳು ರಾರಾಜಿಸಿದವು.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಅನಾವರಣಗೊಂಡಿರುವ 108 ಅಡಿ ಎತ್ತರದ ಪ್ರತಿಮೆ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿದ್ದು ಇದಕ್ಕೆ ಪ್ರಗತಿಯ ಪ್ರತಿಮೆ ಎಂದು ಕರ್ನಾಟಕ ಸರ್ಕಾರ ನಾಮಕರಣ ಮಾಡಿದೆ. ಪ್ರಧಾನಿ ಮೋದಿ ಅವರು ಲೋಕಾರ್ಪಣೆ ಮಾಡಿದ್ದಾರೆ.
ಬೆಂಗಳೂರಲ್ಲಿ ಮೋದಿಯಿಂದ ಏಷ್ಯಾದ ಮೊದಲ ಗಾರ್ಡನ್‌ ಟರ್ಮಿನಲ್‌ ಕೂಡ ಉದ್ಘಾಟನೆಗೊಂಡಿತು. ಇನ್ನು ವಂದೇ ಮಾತರಂ ಎಕ್ಸ್ ಪ್ರೆಸ್ ಸೇರಿ ಕಾಶಿ ವಿಶೇಷ ರೈಲಿಗೆ ಮೋದಿ ಚಾಲನೆ ನೀಡಿದರು. ಸಿಎಂಬೊಮ್ಮಾಯಿ, ರಾಜ್ಯಪಾಲರು, ಸಚಿವರು ಸಾಥ್ ನೀಡಿದರು.

ವಿಶ್ವದ ಎತ್ತರದ ಪ್ರತಿಮೆಗಳಲ್ಲಿ ಒಂದು!

ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಗರ ನಿರ್ಮಾತೃ ಒಬ್ಬರ ವಿಶ್ವದ ಅತಿ ಎತ್ತರದ ಪ್ರತಿಮೆ ಎಂಬ ಖ್ಯಾತಿಗೆ ಪಾತ್ರವಾಗಲಿದೆ.
ಗುಜರಾತ್‌ನಲ್ಲಿ ಏಕತಾ ಪ್ರತಿಮೆ ನಿರ್ಮಾಣ ಮಾಡಿದ ರಾಮ್ ಸುತಾರ್ ಕ್ರಿಯೇಷನ್ಸ್ ಅವರೇ ಈ ಕೆಂಪೇಗೌಡ ಪ್ರತಿಮೆಯ ವಿನ್ಯಾಸ ಹಾಗೂ ನಿರ್ಮಾಣ ಮಾಡಿದ್ದಾರೆ.
ಪ್ರತಿಮೆ ನಿರ್ಮಾಣಕ್ಕೆ 84 ಕೋಟಿ ರೂ. ಖರ್ಚು ಮಾಡಲಾಗಿದ್ದು, ಪ್ರತಿಮೆಯ ಖಡ್ಗವೇ 4 ಸಾವಿರ ಕೆಜಿ ತೂಕ ಹೊಂದಿದೆ. 120 ಟನ್ ಉಕ್ಕನ್ನು ಪ್ರತಿಮೆ ನಿರ್ಮಾಣಕ್ಕೆ ಬಳಕೆ ಮಾಡಲಾಗಿದೆ. 98 ಟನ್‌ ಕಂಚನ್ನು ಬಳಕೆ ಮಾಡಲಾಗಿದೆ. ಬೆಂಗಳೂರು ನಗರದಲ್ಲಿಯೇ ಅತಿ ಎತ್ತರದ ಪ್ರತಿಮೆಯಾಗಿದ್ದು, ಪ್ರತಿಮೆ ಜಾಗದಲ್ಲಿಯೇ 23 ಎಕರೆ ಪ್ರದೇಶದಲ್ಲಿ ಕೆಂಪೇಗೌಡ ಥೀಮ್ ಪಾರ್ಕ್ ನಿರ್ಮಾಣವಾಗಲಿದೆ. ಒಟ್ಟಿನಲ್ಲಿ ಈ ಪ್ರತಿಮೆ ಕನ್ನಡದ ಮತ್ತು ಕೆಂಪೇಗೌಡರ ಸೇವೆಯನ್ನು ದೇಶಕ್ಕೆ ತಲುಪಿಸುವ ಪ್ರಯತ್ನ ಮಾಡಲಾಗಿದೆ.

Categories
ಮಲ್ನಾಡ್

ಪ್ರಾಣಿಗಳೇ ಗುಣದಲಿ ಮೇಲು…!

  • ಅನಾಥ ನಾಯಿ ಮರಿಗಳಿಗೆ ವರಾಹವೇ ತಾಯಿ
  • ತನ್ನದಲ್ಲದ ಮರಿಗಳಿಗೂ ಹಾಲುಣಿಸಿ ತಾಯಿ ಪ್ರೀತಿ ತೋರುವ ನಾಯಿ

ನಮ್ಮೂರ್ ಎಕ್ಸ್ ಪ್ರೆಸ್ ವಿಶೇಷ
ಮಾನವೀಯತೆ ಮನುಷ್ಯನಲ್ಲಿ ಕಡಿಮೆಯೇ.. ಪ್ರಾಣಿಗಳಲ್ಲಿ ಇಂತಹ ಕರುಣಾಮಯಿ ದೃಶ್ಯಗಳನ್ನು ಕಾಣಬಹುದು.
ಮನುಷ್ಯ ಇಡೀ ಪರಿಸರ ನನ್ನದೇ ಎಂದುಕೊಂಡು ಸಾಗುತ್ತಿದ್ದಾನೆ. ಆದರೆ ಎಲ್ಲಾ ಪ್ರಾಣಿ ಪಕ್ಷಿ ಕೀಟ, ಗಿಡ ಮರಗಳಿಗೂ ನಮ್ಮಷ್ಟೇ ಬದುಕುವ ಹಕ್ಕು ಇದೆ.

ನೀತಿ ಪಾಠ: ಪ್ರಾಣಿಗಳಿಗಿರುವ ಕನಿಷ್ಟ ದಯೆ ಎಲ್ಲಾ ಶಕ್ತಿ ಇರುವ ಮಾನವನಿಗೆ ಇಲ್ಲವಾಗುತ್ತಿದೆ..ಇನ್ನಾದರೂ ಬದಲಾಗೋಣ..!

Categories
ಮಲ್ನಾಡ್

ಯುಗದ ಕವಿ ಜಗದ ಕವಿ ಕುವೆಂಪು ನೆನಪು

  • ಕುವೆಂಪು ಅವರ ಪುಣ್ಯ ಸ್ಮರಣೆ: ಕವಿಗೆ ನಮನ
  • ಕುಪ್ಪಳಿಯಲ್ಲಿ ಸಮಾಧಿಗೆ ಗೌರವ ಸಲ್ಲಿಕೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಯುಗದ ಕವಿ ಜಗದ ಕವಿ ರಾಷ್ಟ್ರಕವಿ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರ ಪುಣ್ಯ ಸ್ಮರಣೆಯನ್ನು ಎಲ್ಲೆಡೆ ಆಚರಣೆ ಮಾಡಲಾಗುತ್ತಿದೆ.
ವಿಶ್ವ ಮಾನವ ಸಂದೇಶ ಸಾರಿರುವ ಕುವೆಂಪು ಅವರ ಸಾಹಿತ್ಯ ಕನ್ನಡದ ಮೇರು ಸಾಹಿತ್ಯ. ಡಿಸೆಂಬರ್ 29, 1904ರಲ್ಲಿ ಹಿರೇಕೊಡಿಗೆಯಲ್ಲಿ ಜನಿಸಿದ್ದ ಕುವೆಂಪು ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿ ಹೆಸರು ಮಾಡಿದವರು. ಕುವೆಂಪು ಅಂದರೆ ಶಕ್ತಿ, ಕುವೆಂಪು ಅಂದರೆ ಯುಕ್ತಿ. ನವೆಂಬರ್ 11, 1994
ಮೈಸೂರಲ್ಲಿ ಅವರು ನಿಧನರಾದರು. ಅವರ ಸಾವಿನ ಬಳಿಕವೂ ಅವರು ಬಿತ್ತಿದ ಚಿಂತನೆ, ಸಾಹಿತ್ಯ ಇಡೀ ದೇಶದಲ್ಲಿ ಅವರ ಹೆಸರನ್ನು ಜೀವಂತವಾಗಿಟ್ಟಿದೆ.
ಸಣ್ಣಕತೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಆತ್ಮಕಥೆ, ಜೀವನ ಚರಿತ್ರೆ, ಮಹಾಕಾವ್ಯ ಸೇರಿದಂತೆ ಸಾಹಿತ್ಯದ ಎಲ್ಲಾ ಕ್ಷೇತ್ರದಲ್ಲೂ ಅವರ ಸೇವೆ ಅಪಾರ. ಪ್ರೇಮ, ದೇಶಪ್ರೇಮ, ಪ್ರಕೃತಿ, ಅಧ್ಯಾತ್ಮ, ವಿಚಾರ, ಸಾಹಿತ್ಯ ಚಳುವಳಿ, ನವೋದಯ ಸಾಹಿತ್ಯದ ಮುಂಚೂಣಿ ಕವಿ.
ಜ್ಞಾನಪೀಠ ಪ್ರಶಸ್ತಿ, ಪದ್ಮ ವಿಭೂಷಣ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ಪಂಪ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿ ಗೌರವಗಳು ಸಂದವು.
ಕುವೆಂಪು ಅವರ ಹುಟ್ಟೂರು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯಲ್ಲಿ ಅವರ ಮನೆ, ಅವರ ಜೀವನ ಕಥೆ ಹೇಳುವ ಸ್ಮಾರಕ ಭವನ, ಸಮಾಧಿ ಇಂದಿಗೂ ಅವರನ್ನು ನೋಡುವ ಭಾಗ್ಯ ಕಲ್ಪಿಸಿದೆ.

ಕುವೆಂಪು ಸಮಾಧಿಗೆ ನಮನ

ಕುಪ್ಪಳಿಯಲ್ಲಿ ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್, ಖಜಾಂಚಿ ಮನುದೇವ್, ಸಿಬ್ಬಂದಿ ವರ್ಗದವರು, ಸ್ಥಳೀಯರು ಕುವೆಂಪು ಪುಣ್ಯ ಸ್ಮರಣೆಯಂದು ಕುವೆಂಪು ಸಮಾಧಿಗೆ ನಮನ ಸಲ್ಲಿಸಿದರು.

Categories
ರಾಜ್ಯ

ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವದ ರಂಗು!

  • 19ರಿಂದ 23ರವರೆಗೆ ದೀಪೋತ್ಸವ: ಸರ್ವಧರ್ಮ ಸಭೆ

NAMMUR EXPRESS NEWS
ಬೆಳ್ತಂಗಡಿ: ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿವರ್ಷದಂತೆ ಕಾರ್ತಿಕ ಮಾಸದ ಮಂಗಳಪರ್ವದಲ್ಲಿ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ನ.19ರಿಂದ 23ರವರೆಗೆ ನಡೆಯಲಿವೆ
ನ.22ರಂದು ಸರ್ವಧರ್ಮ ಮತ್ತು 23ರಂದು ಸಾಹಿತ್ಯ ಸಮ್ಮೇಳನಗಳ 90ನೇ ಅಧಿವೇಶನ ನೆರವೇರಲಿದೆ. ಈ ಸಮ್ಮೇಳನಗಳಲ್ಲಿ ಪಾಲ್ಗೊಳ್ಳಬೇಕೆಂದು ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನಗಳ ಸ್ವಾಗತ. ಸಮಿತಿ ಅಧ್ಯಕ್ಷ, ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗಡೆ ಆಮಂತ್ರಿಸಿದ್ದಾರೆ. ನ.22ರಂದು ಅಮೃತ ವರ್ಷಿಣಿ ಸಭಾಭವನದಲ್ಲಿ ಸಂಜೆ 5ರಿಂದ ನಡೆಯುವ ಸರ್ವಧರ್ಮ ಸಮ್ಮೇಳನವನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಿವಮೊಗ್ಗದ ಬಹುಶ್ರುತ ವಿದ್ವಾಂಸ ಮತ್ತು ನ್ಯಾಯವಾದಿ ಎಂ.ಆರ್.ಸತ್ಯನಾರಾಯಣ ವಹಿಸಲಿದ್ದಾರೆ. ಇನ್ನು ನ.23ರಂದು ನಡೆಯುವ ಸಾಹಿತ್ಯ ಸಮ್ಮೇಳನವನ್ನು ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ, ನ.19ರಂದು ವಸ್ತುಪ್ರದರ್ಶನವನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಲಿದ್ದಾರೆ.