Categories
ಸಿನಿಮಾ

ಹೊಂದಿಸಿ ಬರೆಯಿರಿಗೆ ಕನ್ನಡ ಪ್ರೇಕ್ಷಕ ಫಿದಾ!

  • ಕರ್ನಾಟಕದ ಎಲ್ಲಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆ: 25 ದಿನ ಪೂರೈಸಿದೆ ಸಿನಿಮಾ
  • ಸಿನಿಮಾ ಹೇಳಿದ ಕಥೆ ಎಲ್ಲರಿಗೂ ಇಷ್ಟವಾಯ್ತು
  • ಮಲೆನಾಡ ಚಿತ್ರೀಕರಣ, ಮಲೆನಾಡ ಕಲಾವಿದರ ಸಿನಿಮಾ

NAMMUR EXPRESS NEWS
ಬದುಕನ್ನು ಬಂದಹಾಗೆ ಸ್ವೀಕರಿಸಿ. ಹೊಂದಾಣಿಕೆಯಿಂದ ಬಾಳಿ, ಬೆಳಕು ಇರುವಲ್ಲಿ ಕತ್ತಲಿಗೆ ಜಾಗವಿಲ್ಲ ಹೀಗೆ ಬದುಕು, ಸಂಬಂಧಗಳ ಮೌಲ್ಯಗಳನ್ನು ಹೇಳಲು ಹೊರಟ ಸಿನಿಮಾ ‘ಹೊಂದಿಸಿ ಬರೆಯಿರಿ’.
ಮಲೆನಾಡ ನಟ ಪ್ರವೀಣ್ ತೇಜ್, ಸಂಯುಕ್ತ ಹೊರನಾಡು, ಐಶಾನಿ ಶೆಟ್ಟಿ,ಭಾವನಾ, ಶ್ರೀ ಮಹದೇವ್, ಅರ್ಚನಾ, ನವೀನ್ ಸೇರಿದಂತೆ ಅನೇಕರ ನಟನೆಯ ಈ ಸಿನಿಮಾ ಈಗಾಗಲೇ 25 ದಿನ ಪೂರೈಸಿದೆ.
ರಾಮೇನಹಳ್ಳಿ ಜಗನ್ನಾಥ ಬರೆದು ನಿರ್ದೇಶನ ಮಾಡಿರುವ ಈ ಸಿನಿಮಾ ಈಗ ಜನರ ಮೆಚ್ಚುಗೆ ಪಡೆಯುತ್ತಿದೆ.
ಕಾಲೇಜು ಹುಡುಗರ ತುಂಟತನ, ಹೀರೊ ಬಿಲ್ಡಪ್‌ಗೆ ಹೊಡೆದಾಟ, ಸೀನಿಯರ್- ಜ್ಯೂನಿಯರ್ ತರಲೆ, ಒಂದೆರಡು ಕ್ಷಣ ನಗು ಮೂಡಿಸಿ ಮಾಯವಾಗುವ ಸನ್ನಿವೇಶ, ಎಂಜಿನಿಯರಿಂಗ್ ಕಾಲೇಜು ಹುಡುಗ-ಹುಡುಗಿಯರ ಎಂಟನೇ ತರಗತಿ ಮಟ್ಟದ ಪ್ರೇಮಕಥೆ, ಪ್ರೇಯಸಿಗೆ ಮುತ್ತಿಟ್ಟವನನ್ನು ಎಳೆದೊಯ್ಯುವ ಪೊಲೀಸ್‌ಗಿರಿ! ಇದನ್ನೆಲ್ಲ ಹೊಂದಿಸಿ ತೆಗೆದ ಸಿನಿಮಾ ಇದು.
ಮಲೆನಾಡಿನ ಕುಪ್ಪಳಿಯ ಕವಿಶೈಲ, ಸಮುದ್ರ ತೀರ, ಮಲೆನಾಡು ತಾಣಗಳನ್ನು ಸುಂದರವಾಗಿ ಸೆರೆಹಿಡಿಯಲಾಗಿದೆ. ಪ್ರಸ್ತುತ ಅಹಂನಿಂದ ಮನದೊಳಗೆ ಗೋಡೆ ಕಟ್ಟಿಕೊಂಡು ಬಾಳುವ ಯುವ ಜೋಡಿಗಳಿಗೆ ಈ ಚಿತ್ರ ಪ್ರಬಲವಾದ ಸಂದೇಶ ನೀಡಿದೆ. ಒಟ್ಟಿನಲ್ಲಿ ಆರ್ಭಟಗಳಿಲ್ಲದ, ಶಾಂತ ಹರಿವಿನ ಸಿನಿಮಾ ನೋಡಬೇಕೆನ್ನುವವರಿಗೆ, ಒಂದಿಷ್ಟು ಸಂದೇಶ ಬಯಸುವವರಿಗೆ ಇಷ್ಟವಾಗಬಹುದಾದ ಚಿತ್ರ.
ಒಂದೊಳ್ಳೆ ಸಿನಿಮಾವನ್ನು ತಾವೆಲ್ಲರೂ ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ವೀಕ್ಷಣೆ ಮಾಡಿ. ಹೊಸಬರ ಚಿತ್ರಗಳನ್ನು ಬೆಳೆಸಿ ಎಂಬುದಷ್ಟೇ ನಮ್ಮ ಕೊನೆ ಮಾತು.

Categories
ರಾಜ್ಯ

ರಾಜ್ಯದಲ್ಲಿ ಬಿಸಿಲ ಧಗೆ: ಅಪಾಯ ಎಚ್ಚರ!

  • ಬೆಂಕಿ ಅವಘಡ, ವಾಹನ ಸ್ಫೋಟ ಹೆಚ್ಚಳ
  • ಒಲೆ, ವಿದ್ಯುತ್, ಸಿಲಿಂಡರ್ ಬಗ್ಗೆ ಹುಷಾರ್
  • ನಿಮ್ಮ ಎಲ್ಲಾ ಸ್ನೇಹಿತರಿಗೆ ಶೇರ್ ಮಾಡಿರಿ..!

NAMMUR EXPRESS NEWS
ರಾಜ್ಯದಲ್ಲಿ ಬಿಸಿಲ ಧಗೆ ಹೆಚ್ಚಳವಾಗಿದ್ದು ಎಲ್ಲೆಡೆ ಸ್ಫೋಟಗಳು ಸಂಭವಿಸುತ್ತಿವೆ. ಇನ್ನು ಬಿಸಿಲು ಧಗೆ ಕಾರಣ ಬೆಂಕಿ ಅವಘಢಗಳೂ ಹೆಚ್ಚಾಗಿವೆ. ಈ ಹಿನ್ನೆಲೆ
ನಿಮ್ಮ ವಾಹನ, ನಿಮ್ಮ ಮನೆ, ಕಚೇರಿ, ಸುತ್ತಮುತ್ತ ಬೆಂಕಿ ಹಾಗೂ ಸ್ಪೋಟಕ ವಸ್ತುಗಳಿಂದ ಜಾಗೃತರಾಗಿರಿ.
ಅರಣ್ಯದ ಬಳಿ ಧೂಮಪಾನ, ಪಾರ್ಟಿ ಮಾಡಿ ಬೆಂಕಿ, ಬೆಂಕಿ ಕಡ್ಡಿ ಎಸೆಯಬೇಡಿ. ಅರಣ್ಯದಲ್ಲಿ ಕಿಚ್ಚು ಹಬ್ಬಬಹುದು. ಈಗಾಗಲೇ ತಿಂಗಳಲ್ಲಿ ಇಬ್ಬರು ಅರಣ್ಯ ಸಿಬ್ಬಂದಿ ಕಾಡಿನ ಕಿಚ್ಚು ಆರಿಸಲು ಬಲಿಯಾಗಿದ್ದಾರೆ.
ಇನ್ನು ಮನೆಯಲ್ಲಿ ಒಲೆ, ಗ್ಯಾಸ್ ಸಿಲಿಂಡರ್ ಬಗ್ಗೆ ಎಚ್ಚರ ಇರಲಿ. ವಿದ್ಯುತ್ ಸಂಪರ್ಕಗಳನ್ನು ಪರೀಕ್ಷಿಸಿಕೊಳ್ಳಿ. ಒಂದು ಸಣ್ಣ ನಿರ್ಲಕ್ಷ್ಯ ದುರಂತಕ್ಕೆ ಕಾರಣವಾದೀತು.. ಎಚ್ಚರ..!

ವಾಹನದಲ್ಲಿ ಸಂಚರಿಸುವವರೇ ಎಚ್ಚರಿಕೆ!

ಮುಂಬರುವ ದಿನಗಳಲ್ಲಿ ತಾಪಮಾನವು ಹೆಚ್ಚಾಗಲಿದೆ, ಆದ್ದರಿಂದ ನಿಮ್ಮ ವಾಹನದಲ್ಲಿ ಗರಿಷ್ಠ ಮಿತಿಗೆ ಪೆಟ್ರೋಲ್ ತುಂಬ ಬೇಡಿ. ಗರಿಷ್ಠ ಮಿತಿ ಪೆಟ್ರೋಲ್/ ಡೀಸೆಲ್ ಟ್ಯಾಂಕಲ್ಲಿ ಸ್ಪೋಟಕ ಕಾರಣವಾಗಬಹುದು. ದಯವಿಟ್ಟು ನಿಮ್ಮ ವಾಹನದಲ್ಲಿ ಅರ್ಧ ಟ್ಯಾಂಕ್ ಇಂಧನವನ್ನು ತುಂಬಿಸಿ ಮತ್ತು ಗಾಳಿಗೆ ಜಾಗವನ್ನು ಇರಿಸಿ. ಈ ವಾರ ಗರಿಷ್ಟ ಪೆಟ್ರೋಲ್ ತುಂಬಿದ ಕಾರಣ 5 ಸ್ಪೋಟ ಅಪಘಾತಗಳು ಸಂಭವಿಸಿವೆ. ದಯವಿಟ್ಟು ಪೆಟ್ರೋಲ್ ಟ್ಯಾಂಕ್ ಅನ್ನು ದಿನಕ್ಕೆ ಒಮ್ಮೆ ತೆರೆಯಿರಿ ಮತ್ತು ಒಳಗೆ ನಿರ್ಮಿಸಲಾದ ಅನಿಲವು ಹೊರಬರಲು ಬಿಡಿ. ಹೀಗೆ ಒಂದು ಸಂದೇಶ ಎಲ್ಲೆಡೆ ಹರಿದಾಡುತ್ತಿದೆ.

ಈ ಸಂದೇಶವನ್ನು ನಿಮ್ಮೆಲ್ಲ ಸ್ನೇಹಿತರಿಗೆ ಶೇರ್ ಮಾಡಿ… ಜಾಗೃತಿ ಮೂಡಿಸಿ

Categories
ರಾಜ್ಯ

ಬದುಕು ಬಲು ಭಾರ: ಹೆಚ್ಚಿತು ಆತ್ಮಹತ್ಯೆ!

  • ಬದುಕು ಬಲು ಭಾರ: ಹೆಚ್ಚಿತು ಆತ್ಮಹತ್ಯೆ!
  • ಬೆಲೆ ಏರಿಕೆ, ರಾಜಕೀಯ ಸಂಘರ್ಷ, ಉದ್ಯಮ ಸೋಲು
  • ಅವಕಾಶ ಇಲ್ಲ… ಉದ್ಯೋಗ ಇಲ್ಲ.. ಹೇಳೋಕೆ ಆಗಲ್ಲ
  • ರಾಜ್ಯದಲ್ಲಿ ಹೆಚ್ಚಿದ ಆತ್ಮಹತ್ಯೆ: ಜನ ನಾಯಕರಿಗೆ ಬೇರೆಯವರ ಬದುಕಿನ ಕಾಳಜಿ ಇಲ್ಲ!

NAMMUR EXPRESS NEWS
ಬೆಂಗಳೂರು: ಚುನಾವಣೆ ಬಂದಿದೆ. ಎಲ್ಲಾ ಪಕ್ಷಗಳೂ ಜನರ ಮನ ಗೆಲ್ಲಲು ತಮ್ಮ ಬಗೆಹರಿಯದ ನೂರಾರು ಭರವಸೆಗಳ ಪಾಪ್ಲೇಂಟ್ ಹಿಡಿದು ಊರು ತುಂಬಾ ಫ್ಲೆಕ್ಸ್ ಹಾಕಿ ಮತದಾರನ ಮನ ಗೆಲ್ಲಲು ಮುಂದಾಗಿವೆ.
ಆದರೆ ದಿನೇ ದಿನೇ ಬಡ, ಮಧ್ಯಮ ವರ್ಗದವರ ಬದುಕು ಕುಸಿಯುತ್ತಿದೆ. ಕನಸುಗಳು ಕಮರುತ್ತಿವೆ.
ಅಗತ್ಯ ವಸ್ತು ಬೆಲೆ ಏರಿಕೆ, ಹಣದ ಮಹತ್ವ ಹೆಚ್ಚಳ, ರಾಜಕೀಯ ಸಂಘರ್ಷ, ಉದ್ಯಮ ಸೋಲು ಹೀಗೆ ಸಾಲು ಸಾಲು ಸಾಮಾಜಿಕ ಸಮಸ್ಯೆಗಳು ಮನಸ್ಸನ್ನು ಹತಾಶೆಗೊಳಿಸುತ್ತಿದೆ. ಹೀಗಾಗಿ ಪ್ರತಿ ದಿನ ರಾಜ್ಯ, ದೇಶದಲ್ಲಿ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ಒಂದು ಕಡೆ ಓದು, ಅರ್ಹತೆಗೆ ತಕ್ಕ ಅವಕಾಶ ಇಲ್ಲ…ಉದ್ಯೋಗ ಇಲ್ಲ.. ಪ್ರಸ್ತುತ ವ್ಯವಸ್ಥೆಯೊಳಗೆ ಹೇಳೋಕೆ ಆಗಲ್ಲ. ಎಲ್ಲವೂ ರಾಜಕೀಯ, ಪಕ್ಷದ ಮಾನದಂಡದಲ್ಲಿ ಅಳೆಯಲಾಗುತ್ತಿದೆ. ಹೀಗಾಗಿ ಯುವ ಸಮುದಾಯ ಸೇರಿ ದಂತೆ ದಿನ ನಿತ್ಯ ನೂರಾರು ಮಂದಿ ತಮ್ಮ ಸಮಸ್ಯೆಗೆ ಪರಿಹಾರ ಸಿಗದೇ ಜೀವ ಚೆಲ್ಲುತ್ತಿದ್ದಾರೆ.
ಕಳೆದೊಂದು ವಾರದಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚಾಗಿ ವರದಿಯಾಗಿದೆ.

ಉದ್ಯಮಿ ನದಿಗೆ ಹಾರಿ ಸಾವು!


ಮಂಗಳೂರು ಗುರುಪುರ ನದಿಗೆ ಹಾರಿ ಭಾರತೀಯ ಜೇಸಿಸ್‌ನ ಹಲವು ಹುದ್ದೆಗಳನ್ನು ನಿರ್ವಹಿಸಿದ್ದ ಉದ್ಯಮಿ ಆಶಿತ್ ಕುಮಾರ್ ಅವರುಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಲತಃ ಬೆಳ್ತಂಗಡಿ ತಾಲೂಕಿನ ಕಾಶಿಪಟ್ಟ ಗ್ರಾಮದ ಕೇಳದ ಪೇಟೆಯವರಾಗಿರುವ ಆಶಿತ್ ಕುಮಾರ್ (51) ಅವರು ಉದ್ಯಮಿಯಾಗಿದ್ದರು. ಇವರು ಆರ್ಥಿಕ ಮುಗ್ಗಟ್ಟಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎನ್ನಲಾಗಿದೆ. ಮೃತರು ಪತ್ನಿ, ಪುತ್ರನನ್ನು ಅಗಲಿದ್ದಾರೆ.
ಮೂಡುಬಿದಿರೆಯಲ್ಲಿ ಮಹಾವೀರ ಎಲೆಕ್ಟ್ರಾನಿಕ್ಸ್ ಸಂಸ್ಥೆಯನ್ನು ಸ್ಥಾಪಿಸಿ ಮುನ್ನಡೆಸಿದ್ದ ಅವರು ವ್ಯವಹಾರದಲ್ಲಿ ನಷ್ಟ ಅನುಭವಿಸಿದ ಬಳಿಕ ಉದ್ಯಮವನ್ನು ಮುಚ್ಚಿ ಮಂಗಳೂರಿನಲ್ಲಿ ಖಾಸಗಿ ಇನ್ಸೂರೆನ್ಸ್ ಕಂಪನಿಯಲ್ಲಿ ಉದ್ಯೋಗಿಯಾಗಿ ಸೇರ್ಪಡೆ ಗೊಂಡು ಮಂಗಳೂರಿನಲ್ಲಿ ನೆಲೆಸಿದ್ದರು. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಅವರು, ಮೂಡುಬಿದಿರೆ ತ್ರಿಭುವನ್ ಜೇಸಿಐ ಅಧ್ಯಕ್ಷರಾಗಿ, ವಲಯ 15ರ ವಲಯಾಧಿಕಾರಿ, ವಲಯಾಧ್ಯಕ್ಷರಾಗಿ ನಾನಾ ಹುದ್ದೆಗಳನ್ನು ನಿರ್ವಹಿಸಿದ್ದರು. ಕೇಳದಪೇಟೆ ಬಸದಿಯ ಜೀರ್ಣೋದ್ಧಾರದಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಅಧಿಕಾರಿಗಳ ಕಿರುಕುಳ: ಯುವಕ ಆತ್ಮಹತ್ಯೆ ಯತ್ನ

ಕೋಲಾರ: ಗಣ್ಯ ವ್ಯಕ್ತಿಗಳು ಹಾಗೂ ಕೆಲವು ಅಧಿಕಾರಿಗಳ ಕಿರುಕುಳದ ಆರೋಪ ಹಿನ್ನೆಲೆ ಅಂಬೇಡ್ಕರ್ ಸೇವಾ ಸಮಿತಿ ಸಂಘಟನೆಯ ಸಂಸ್ಥಾಪಕ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂದೇಶ್ (28) ಆತ್ಮಹತ್ಯೆಗೆ ಯತ್ನಿಸಿದ ಮುಖಂಡ. ಇತ್ತೀಚೆಗೆ ಕಿಡ್ನಾಪ್ ಪ್ರಕರಣವೊಂದರಲ್ಲಿ ಸಂದೇಶ್ ಜೈಲು ಸೇರಿದ್ದ. ಇದನ್ನೆ ಗುರಿಯಾಗಿಸಿಕೊಂಡು ಅನಗತ್ಯವಾಗಿ ಪ್ರಕರಣ ದಾಖಲಿಸಿ ಕಿರುಕುಳ ನೀಡಿದ ಆರೋಪ ಮಾಡಲಾಗಿದೆ. ಸದ್ಯ ಸಂದೇಶ್ ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಹಾಸ್ಟೆಲ್ ಕೋಣೆಯಲ್ಲೇ ವಿದ್ಯಾರ್ಥಿನಿ ಆತ್ಮಹತ್ಯೆ

ಕಾರ್ಕಳದ ನಿಟ್ಟಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ಹಾಸ್ಟೆಲ್ ನ ಕೊಠಡಿಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕಾರ್ಕಳದ ನಿಟ್ಟೆ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಸಿ ಕುಂದಾಪುರದ ಕರಾವಳಿ ಶ್ರೀದೂರು ನಿವಾಸಿ ಸೀಮಾ ಅತ್ಮಹತ್ಯೆ ಮಾಡಿಕೊಂಡವರು, ವಿದ್ಯಾಭ್ಯಾಸದ ಸಲುವಾಗಿ ನಿಟ್ಟೆ ಕಾಲೇಜಿನ ಹಾಸ್ಟೆಲ್ ನಲ್ಲಿ ವಾಸ ಮಾಡಿಕೊಂಡಿದ್ದ ಸೀಮಾ ಅವರು ಆರೋಗ್ಯ ಹಾಗೂ ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಬಗ್ಗೆ ಹಲವಾರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರೂ ಗುಣಮುಖವಾಗದ ಕಾರಣ ಹಾಸ್ಟೆಲ್ ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಾಲೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ.!

ವಿಜಯನಗರ ಜಿಲ್ಲೆಯ ಹಡಗಲಿಯ ನ್ಯಾಷನಲ್ ಶಾಲೆಯಲ್ಲಿ ಕೌಟುಂಬಿಕ ಕಲಹದಿಂದ ಬೇಸತ್ತು ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಶಿಕ್ಷಕಿ ಬಸ್ಸಮ್ಮ ( 34) ಎಂಬುವವರು ಶಾಲಾ ಕೊಠಡಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹತ್ತು ವರ್ಷಗಳ ಹಿಂದೆ ಅರ್ಜುನ್ ಎಂಬಾತನೊಂದಿಗೆ ಬಸ್ಸಮ್ಮ ಪ್ರೀತಿಸಿ ಮದುವೆಯಾಗಿದ್ದಳು. ವರದಕ್ಷಿಣೆ ಕಿರುಕುಳದಿಂದ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ. ಇದೇ ವಿಚಾರವಾಗಿ ಗಂಡ ಅರ್ಜುನ್, ಅತ್ತೆ ಅಂಬಿಕಾ, ನಾದಿನಿ ಸಂಗೀತಾ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

Categories
ಕೃಷಿ

ರೈತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷದವರೆಗೆ ಸಾಲ!

  • ರೈತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷದವರೆಗೆ ಸಾಲ!
  • ಏಪ್ರಿಲ್ 1ಕ್ಕೆ ಯೋಜನೆ ಜಾರಿ: ಸಹಕಾರ ಸಚಿವ ಸೋಮಶೇಖರ್
  • ಏನೇನು ದಾಖಲೆ ಬೇಕು? ಎಲ್ಲಿ ಸಿಗುತ್ತೆ ಸಾಲ?
    ಇಲ್ಲಿದೆ ಸಂಪೂರ್ಣ ಮಾಹಿತಿ

NAMMUR EXPRESS NEWS
ಬೆಂಗಳೂರು: ಸಂಕಷ್ಟದಲ್ಲಿರುವ ರೈತರಿಗೆ ರಾಜ್ಯ ಸರ್ಕಾರ ನೂತನ ಯೋಜನೆ ಘೋಷಿಸಿದ್ದು ಏಪ್ರಿಲ್ 1ರಿಂದ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷದ ವರೆಗೆ ಸಾಲ ನೀಡುವ ಯೋಜನೆ ಆರಂಭವಾಗಲಿದೆ.
ಸಹಕಾರ ಸಚಿವ ಎಸ್ ಟಿ ಸೋಮಶೇಖರ್
ವಿಧಾನಸೌಧದಲ್ಲಿ ಮಾತನಾಡಿ, 5 ಲಕ್ಷದ ವರೆಗೆ ಶೂನ್ಯ ಬಡ್ಡಿದರದ ಬೆಳೆ ಸಾಲ ನೀಡುವ ಯೋಜನೆಯನ್ನು ಬಜೆಟ್ ನಲ್ಲಿ ಘೋಷಿಸಲಾಗಿದೆ. ಸದ್ಯ ರಾಜ್ಯಪಾಲರ ಅನುಮತಿ ದೊರೆಯಲಿದ್ದು,ಏಪ್ರಿಲ್ 1ರಿಂದ ಅನ್ವಯವಾಗುವಂತೆ ಯೋಜನೆ ಜಾರಿ ಆಗಲಿದೆ.ಈಗಾಗಲೇ ರೈತರಿಗೆ ಡಿಸಿಸಿ ಬ್ಯಾಂಕಿನಿಂದ ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ರೂಪಾಯಿವರೆಗೆ ಸಾಲ ನೀಡುತ್ತಿದ್ದು, ಈ ಮಿತಿಯನ್ನು 2023-2024 ನೇ ಸಾಲಿನ ಬಜೆಟ್ ನಲ್ಲಿ 5 ಲಕ್ಷ ರೂಪಾಯಿ ಹೆಚ್ಚಿಸಲಾಗಿದೆ ಎಂದರು.
ರಾಜ್ಯದ ರೈತರಿಗೆ ಸರ್ಕಾರವು ಶೇಕಡ 3ರಷ್ಟು ಬಡ್ಡಿದರದಲ್ಲಿ ಸಹಕಾರ ಸಂಸ್ಥೆಗಳ ಮೂಲಕ ಅಲ್ಪಾವಧಿ,ಮಧ್ಯಮಾವಧಿ ಮತ್ತು ದೀರ್ಘವಾದಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳನ್ನು ವಿತರಿಸುವ ಯೋಜನೆಗಳನ್ನು 2004ರಲ್ಲಿ ಅನುಷ್ಠಾನಗೊಳಿಸಿದೆ. ಈ ಯೋಜನೆಯಿಂದ ರಾಜ್ಯ 33ಲಕ್ಷ ರೈತರಿಗೆ ಅನುಕೂಲವಾಗಲಿದೆ. 2012-2013 ನೇ ಸಾಲಿನಲ್ಲಿ 1 ಲಕ್ಷ ರೂಪಾಯಿ ವರೆಗೆ ಅಲ್ಪಾವಧಿ ಕೃಷಿ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ನೀಡಲಾಗುತ್ತಿತ್ತು. ಈಗ ಈ ಮಿತಿಯನ್ನು 5 ಲಕ್ಷ ರೂಪಾಯಿಗೆ ಹೆಚ್ಚಿಸಿ ಇದೇ ಏಪ್ರಿಲ್ 1ರಿಂದ ಹೊಸ ಮಿತಿಯ ಶೂನ್ಯ ಬಡ್ಡಿ ಸಾಲ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಸಾಲ ಯಾವ ಬ್ಯಾಂಕುಗಳಿಂದ ಸಿಗಲಿದೆ ?
1) ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ
2)ಪಿಕಾರ್ಡ್ ಬ್ಯಾಂಕ್ ಮತ್ತು ಜಿಲ್ಲಾ ಸಹಕಾರ ಬ್ಯಾಂಕ್ ಗಳಿಂದ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗುವುದು.

ಸಾಲ ಸೌಲಭ್ಯಕ್ಕೆ ಯಾರೆಲ್ಲ ಅರ್ಹರು?

ಕೃಷಿ ಪತ್ತಿನ ಸಹಕಾರ ಸಂಘದಿಂದ ಎಲ್ಲ ರೈತರಿಗೆ ಸಾಲ ಸಿಗುವುದಿಲ್ಲ. ಸಹಕಾರ ಕೇಂದ್ರ ಬ್ಯಾಂಕ್ ಗಳಲ್ಲಿ ಸದಸ್ಯತ್ವ ಹೊಂದಿದ್ದರೆ ಮಾತ್ರ ಅವರಿಗೆ ಬ್ಯಾಂಕುಗಳಿಂದ ಸಾಲ ಸೌಲಭ್ಯ ಸಿಗಲಿದೆ. ಡಿಸಿಸಿ ಬ್ಯಾಂಕ್ ನಿಂದ ಸಾಲ ಪಡೆಯಬೇಕಾದರೆ,ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ,ಪಿಕಾರ್ಡ್ ಅಥವಾ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಗಳಲ್ಲಿ ಸದಸ್ಯತ್ವ ಹೊಂದಿರಬೇಕು.

ದಾಖಲೆ ಏನೇನು ಬೇಕು?

ಸಾಲ ಪಡೆಯಲು ದಾಖಲೆಗಳು ಪಹಣಿ,ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು.

Categories
ಆರೋಗ್ಯ

ಆರೋಗ್ಯ ಸಿಬ್ಬಂದಿಗೆ ಮಾಸ್ಕ್ ಕಡ್ಡಾಯ

  • ದೇಶದಲ್ಲಿ H3N2 ವೈರಸ್ ಸೋಂಕು ಹೆಚ್ಚಳ ಹಿನ್ನೆಲೆ
  • ರಾಜ್ಯದಲ್ಲೂ ಹೈ ಅಲರ್ಟ್ : ಸರ್ಕಾರದ ಹೊಸ ನಿಯಮ ಏನು?

NAMMUR EXPRESS NEWS
ಬೆಂಗಳೂರು: ದೇಶದಲ್ಲಿ H3N2 ವೈರಸ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳು ಹಾಗೂ ತಜ್ಞರೊಂದಿಗಿನ ಸಭೆ ನಡೆಸಲಾಯಿತು.
ರಾಜ್ಯದಲ್ಲಿ H3N2 ವೈರಸ್ ಸೋಂಕು ಹರಡುವಿಕೆ ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಲಾಗಿದ್ದು ಶೀಘ್ರದಲ್ಲೇ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು.ಇಂದಿನಿಂದ ಆಸ್ಪತ್ರೆಗಳ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದ್ದು, H3N2 ಸೋಂಕು ಹರಡುವಿಕೆಯ ಬಗ್ಗೆ ನಿಗಾ ವಹಿಸಲಾಗಿದೆ.
ಮಕ್ಕಳು, ಹಿರಿಯ ನಾಗರಿಕರು ಹಾಗೂ ಗರ್ಭಿಣಿಯರು H3N2 ವೈರಸ್ ಸೋಂಕಿನಿಂದ ರಕ್ಷಿಸಿಕೊಳ್ಳಲು ಜನಸಂದಣಿಯಿಂದ ದೂರವಿರಬೇಕು ಹಾಗೂ ನೈರ್ಮಲ್ಯ ಕಾಪಾಡಿಕೊಳ್ಳಬೇಕಾಗಿ ಅರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ.

ಆರೋಗ್ಯ ಸಚಿವ ಕೆ. ಸುಧಾಕರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, H3N2 ನಿಂದ ದೇಶದಲ್ಲಿ ಸೋಂಕು ಹೆಚ್ಚಳವಾಗಿದೆ. ಅನೇಕರು ಗಾಬರಿಯಾಗಿದ್ದಾರೆ. ಹೀಗಾಗಿ ಉನ್ನತ ಮಟ್ಟದ ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ ಮಾಡಿದೆವು. ಗಾಬರಿಯಾಗುವ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಹಾಗಂತ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಬೇಕು ಎಂದರು.
ಮಾಸ್ಕ್ ಧರಿಸೋದು ಇತ್ತೀಚೆಗೆ ಕಡಿಮೆಯಾಗಿದೆ. ಆಸ್ಪತ್ರೆಯ ಸಿಬ್ಬಂದಿ ಕೂಡ ಧರಿಸುತ್ತಿಲ್ಲ. ಎಲ್ಲಾ ಆರೋಗ್ಯ ಸಿಬ್ಬಂದಿ ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಬೇಕು. ಅಲ್ಲದೆ ಇನ್ ಪ್ಯೂಯೆಂಜಾಗೆ ವ್ಯಾಕ್ಸಿನ್ ತೆಗೆದುಕೊಳ್ಳುವಂತೆ ಆರೋಗ್ಯ ಸಿಬ್ಬಂದಿಗೆ ಸಚಿವರು ಸೂಚಿಸಿದರು.
ಐಸಿಯುನಲ್ಲಿ ಕೆಲಸ ಮಾಡೋರಿಗೆ ಸರ್ಕಾರದಿಂದಲೇ ವ್ಯಾಕ್ಸಿನ್ ನೀಡಲಾಗುತ್ತದೆ. ಎಲ್ಲಾ ಜಿಲ್ಲೆಗಳಲ್ಲಿ ಐಸಿಯುನಲ್ಲಿ ಕೆಲಸ ಮಾಡುವ ಸಿಬ್ಬಂದಿ ಇನ್ ಪ್ಯೂಯೆಂಜಾ ಸರ್ಕಾರದ ವತಿಯಿಂದ ವ್ಯಾಕ್ಸಿನ್ ನೀಡಲಾಗುತ್ತದೆ. 25 ಟೆಸ್‌ಟ್‌ಗಳನ್ನು ವಾಣಿವಿಲಾಸ ಮತ್ತು ವಿಕ್ಟೋರಿಯಾದಲ್ಲಿ ಟೆಸ್ಟಿಂಗ್ ಮಾಡಲಾಗುತ್ತದೆ. 15 ವರ್ಷ ಕೆಳಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಸುಲಭವಾಗಿ ಸೋಂಕು ಬರುತ್ತೆ. ಗರ್ಭಿಣಿಯರಿಗೆ ಸೋಂಕು ಬರುವ ಸಾಧ್ಯತೆ ಇದೆ. ಹೀಗಾಗಿ ಇವರೆಲ್ಲ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಏನು ಮಾಡಬಾರದು…ಏನು ಮಾಡಬೇಕು?

ಶುಚಿತ್ವದ ಬಗ್ಗೆ ಗಮನ ಕೊಡಬೇಕು. ಕೆಮ್ಮುವಾಗ, ಸೀನುವಾಗ ಮುಖ ಕವರ್ ಮಾಡಿಕೊಳ್ಳಬೇಕು. ಕೈಯನ್ನು ಆಗಾಗ ಸೋಪಿನಿಂದ ತೊಳೆದುಕೊಳ್ಳಬೇಕು.
ಹೆಚ್1 ಎನ್ 1- 20 ಕೇಸ್, ಹೆಚ್ 3 ಎನ್ 2 – 26 ಕೇಸ್ ಇದೆ. ಆಂಟಿಬಯೋಟಿಕ್ ತೆಗೆದುಕೊಳ್ಳಬೇಡಿ.

ಹವಾಮಾನ ವೈಫರತ್ಯ ಕಾರಣ?

ಫೆಬ್ರವರಿಯಲ್ಲಿಯೇ ತಾಪಮಾನ ಹೆಚ್ಚಾಗಿದೆ. ಹವಾಮಾನ ವೈಪರೀತ್ಯವೂ ಕಾರಣವಾಗಿದೆ. ಹೀಟ್ ವೇವ್ ನಿಂದ ಜನ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. 11 ರಿಂದ 3 ಗಂಟೆ ಅನಗತ್ಯವಾಗಿ ಬಿಸಿಲಿಗೆ ನೇರವಾಗಿ ಹೋಗಬೇಡಿ. ಹೀಟ್ ವೇವ್ ನಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಹೆಚ್ಚು ನೀರು ಕುಡಿಯಿರಿ. ಮಜ್ಜಿಗೆ ಎಳನೀರು ಸೇವಿಸಿ ಎಂದು ಸಚಿವರು ಸಲಹೆ ನೀಡಿದರು.
ಹೆಚ್ 3 ಎನ್ 2 ನಿಂದ ಡೆತ್ ಕೇಸ್ ಇಲ್ಲ. ಕೋವಿಡ್ ಬಂದವರಿಗೆ ಈ ವೈರಸ್ ಬಂದಾಗ ದೀರ್ಘಕಾಲಿಕ ಕೆಮ್ಮು ಬರುತ್ತೆ. ಪ್ರತ್ಯೇಕ ಮಾರ್ಗಸೂಚಿ ಇರುತ್ತೆ. ಕೋವಿಡ್ ಟೆಸ್ಟ್ ಮಾದರಿಯಲ್ಲಿ ಟೆಸ್ಟಿಂಗ್ ಇರುತ್ತದೆ ಎಂದು ಅರೋಗ್ಯ ಸಚಿವರು ತಿಳಿಸಿದರು.

Categories
ಕಲಬುರಗಿ ರಾಜ್ಯ

ಹೆಲಿಕಾಪ್ಟರ್ ಅಪಾಯದಿಂದ ಪಾರಾದ ಯಡಿಯೂರಪ್ಪ!

  • ಹೆಲಿಕಾಪ್ಟರ್ ಅಪಾಯದಿಂದ ಪಾರಾದ ಯಡಿಯೂರಪ್ಪ!
  • ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಲೋಪ: ಹೆಲಿಪ್ಯಾಡ್ ಕಡೆ ಹಾರಿಬಂದ ಪ್ಲಾಸ್ಟಿಕ್ ಚೀಲಗಳು
  • ಕಲಬುರಗಿ ಜಿಲ್ಲೆ ಜೇವರ್ಗಿಯಲ್ಲಿ ನಡೆದ ಘಟನೆ

NAMMUR EXPRESS NEWS
ಕಲಬುರಗಿ: ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಇದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಲೋಪವಾಗಿದೆ.
ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಪ್ಲಾಸ್ಟಿಕ್ ಚೀಲಗಳು ಹಾರಿಬಂದಿವೆ. ಇದರಿಂದ ಅಪಾಯ ಆಗುವ ಸಾಧ್ಯತೆಗಳಿದ್ದು ಫೈಲಟ್ ಗಮನಿಸಿದ್ದರಿಂದ ಅನಾಹುತ ತಪ್ಪಿದೆ.
ಜೇವರ್ಗಿ ಪಟ್ಟಣ ಹೊರವಲಯದಲ್ಲಿ ಹೆಲಿಪಾಡ್ ನಿರ್ಮಿಸಲಾಗಿದೆ. ಹೆಲಿಪ್ಯಾಡ್ ಸುತ್ತು ಜಮೀನಿನಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಹಾಕಲಾಗಿದೆ. ಲ್ಯಾಂಡಿಂಗ್ ವೇಳೆ ಹೆಲಿಕಾಪ್ಟರ್ ಮೇಲೆ ಪ್ಲಾಸ್ಟಿಕ್ ಚೀಲಗಳು ಹಾರಿ ಬಂದಿದೆ.

ಪೈಲೆಟ್ ತಕ್ಷಣ ಎಚ್ಚೆತ್ತುಕೊಂಡು ಹೋಗಿದ್ದಾರೆ. ಉತ್ಪನ್ನ ಪ್ಲಾಸ್ಟಿಕ್ ಚೀಲಗಳನ್ನು ತೆರವು ಮಾಡಿದ ನಂತರ ಲ್ಯಾಂಡಿಂಗ್ ಮಾಡಲಾಗಿದೆ. ಪೈಲೆಟ್ ಸುತ್ತು ಹಾರಾಟ ನಡೆಸಿ ಲ್ಯಾಂಡ್ ಮಾಡಿದ್ದಾರೆ. ಅಧಿಕಾರಿಗಳು ಪ್ಲಾಸ್ಟಿಕ್ ಚೀಲದಿಂದ ಕಕ್ಕಾಬಿಕ್ಕಿಯಾಗಿದ್ದರು.

Categories
ರಾಜಕೀಯ ರಾಜ್ಯ

ರಾಜ್ಯ ಚುನಾವಣೆ ಅಖಾಡಕ್ಕೆ ಕೆ. ಆರ್. ಎಸ್ ಪಕ್ಷ!

  • ರಾಜ್ಯ ಚುನಾವಣೆ ಅಖಾಡಕ್ಕೆ ಕೆ. ಆರ್. ಎಸ್ ಪಕ್ಷ!
  • ಪ್ರತಿ ವಿಧಾನ ಸಭೆಯಲ್ಲೂ ಸ್ಪರ್ಧೆ ಮಾಡಲು ಸಿದ್ಧತೆ
  • ರವಿಕೃಷ್ಣಾ ರೆಡ್ಡಿ ನೇತೃತ್ವದಲ್ಲಿ ರಾಜ್ಯದಲ್ಲಿ ಹೋರಾಟ

NAMMUR EXPRESS NEWS
ಬೆಂಗಳೂರು: ರಾಜ್ಯ ವಿಧಾನ ಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಎಲ್ಲಾ ಕ್ಷೇತ್ರದಲ್ಲೂ ಪಕ್ಷಗಳ ಬಲಾಬಲ ಶುರುವಾಗಿದೆ. ಈ ನಡುವೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಪಕ್ಷಗಳ ಎಲ್ಲಾ ಸರ್ಕಸ್ ಶುರುವಾಗಿದೆ. ಈ ನಡುವೆ ರಾಜ್ಯದಲ್ಲಿ ಗಮನ ಸೆಳೆಯುತ್ತಿರುವ ಪಕ್ಷ ಕೆ ಆರ್ ಎಸ್( ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ).
ಹೋರಾಟಗಾರ ರವಿಕೃಷ್ಣ ರೆಡ್ಡಿ ನೇತೃತ್ವದಲ್ಲಿ ರಾಜ್ಯದಲ್ಲಿ ಹೊಸ ಅಲೆ ಸೃಷ್ಟಿ ಮಾಡಿರುವ ಕೆ. ಆರ್. ಎಸ್ ಪಕ್ಷ ತಮ್ಮ ಹೋರಾಟದ ಮೂಲಕವೇ ಜನರ ಮನ ಗೆದ್ದಿದೆ.

ಅದರಲ್ಲೂ ಸರ್ಕಾರಿ ಕಚೇರಿ, ತಾಲೂಕು ಕಚೇರಿ, ಪೊಲೀಸ್ ಠಾಣೆಗಳಲ್ಲಿ ನಡೆಯುತ್ತಿರುವ ಬಡವರ ಶೋಷಣೆ, ಭ್ರಷ್ಟಾಚಾರ, ನಿರ್ಲಕ್ಷ್ಯದ ವಿರುದ್ಧ ದೊಡ್ಡ ಹೋರಾಟ ಮಾಡಿ ಈ ಪಕ್ಷದ ಅನೇಕರು ಜೈಲು ಸೇರಿದರೂ ಹೋರಾಟ ಕೈ ಬಿಡಲಿಲ್ಲ. ಈ ಕಾರಣ ರಾಜ್ಯದಲ್ಲಿ ಈ ಪಕ್ಷವನ್ನು ಜನ ನಿಧಾನಕ್ಕೆ ಒಪ್ಪುತ್ತಿದ್ದಾರೆ.
ಪ್ರತಿ ತಾಲೂಕಿಗೂ ನಾಡು ನುಡಿ ಜಾಗೃತಿ ಯಾತ್ರೆ ಮೂಲಕ ಒಮ್ಮೆ ರವಿಕೃಷ್ಣಾ ರೆಡ್ಡಿ ಇಡೀ ಕರ್ನಾಟಕ ಸುತ್ತಿದ್ದಾರೆ.

ತೀರ್ಥಹಳ್ಳಿ ಕ್ಷೇತ್ರದಿಂದ ಕೆ.ಆರ್.ಎಸ್ ಪಕ್ಷ ಕಣಕ್ಕೆ..!

  • ಅರುಣ್ ಕಾನಹಳ್ಳಿ ಎಂಬ ಯುವ ಹೋರಾಟಗಾರ ಸ್ಪರ್ಧೆ

ತೀರ್ಥಹಳ್ಳಿ ಕ್ಷೇತ್ರದಿಂದ ಅರುಣ್ ಕಾನಹಳ್ಳಿ ಎಂಬ ಯುವ ಹೋರಾಟಗಾರ ಕಣಕ್ಕೆ ಇಳಿಯಲಿದ್ದಾರೆ. ಈಗಾಗಲೇ ಗ್ರಾಮ ಮಟ್ಟದಲ್ಲಿ ಜನಪರ ಹೋರಾಟದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.
ಎಲ್ಲಾ ಸರ್ಕಾರಿ ಕಚೇರಿಗಳಿಗೂ ತೆರಳಿ ಅನ್ಯಾಯ ಖಂಡಿಸುತ್ತಿದ್ದಾರೆ. ತಮ್ಮ ವಿಶಿಷ್ಟ ಪ್ರಚಾರದ ಶೈಲಿ ಮೂಲಕ ಗಮನ ಸೆಳೆದಿದ್ದಾರೆ.
ಗ್ರಾಮ ಪಂಚಾಯತ್ ಆಡಳಿತದ ನಿರ್ಲಕ್ಷ್ಯದ ಬಗ್ಗೆ ಇವರ ಹೋರಾಟ ಶುರುವಾಗಿದ್ದು ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದ ಪ್ರತಿ ಗ್ರಾಮ ಪಂಚಾಯತ್ ಕಚೇರಿ ಅವ್ಯವಸ್ಥೆ ವಿರುದ್ಧ ದನಿ ಎತ್ತುತ್ತಿದ್ದಾರೆ. ಅರುಣ್ ಕಾನಹಳ್ಳಿ ತೀರ್ಥಹಳ್ಳಿ ತಾಲೂಕಿನವರಾಗಿದ್ದು ಪಕ್ಷದ ಶಿವಮೊಗ್ಗ ಜಿಲ್ಲಾ ಸಂಚಾಲಕರೂ ಆಗಿದ್ದಾರೆ.
ಹೆಚ್ಚಿನ ಮಾಹಿತಿಗೆ ಅರುಣ್ ಕಾನಹಳ್ಳಿ ಫೇಸ್ಬುಕ್ ಪೇಜ್ ವೀಕ್ಷಿಸಬಹುದು.

Categories
ಸಿನಿಮಾ

ಅಮಿತಾಭ್ ಬಚ್ಚನ್​ಗೆ ಶೂಟಿಂಗ್ ವೇಳೆ ಗಾಯ

  • ಹೈದರಾಬಾದ್ ಬಳಿ ‘ಪ್ರಾಜೆಕ್ಟ್ ಕೆ’ ಚಿತ್ರದ ಶೂಟಿಂಗ್ ವೇಳೆ ಘಟನೆ
  • ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದೇವೇಗೌಡ

NAMMUR EXPRESS NEWS
ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್​ ಅವರು ಶೂಟಿಂಗ್ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್​ ಅವರು ಶೂಟಿಂಗ್ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಶೂಟಿಂಗ್ ವೇಳೆ ಬಿದ್ದು ಅಮಿತಾಭ್ ಬಚ್ಚನ್​ ಪಕ್ಕೆಲುಬಿಗೆ ಗಂಭೀರ ಗಾಯವಾಗಿದೆ, ಶೂಟಿಂಗ್ ವೇಳೆ ಬಿದ್ದು ಅಮಿತಾಭ್ ಬಚ್ಚನ್​ ಪಕ್ಕೆಲುಬಿಗೆ ಗಾಯ ‘ಪ್ರಾಜೆಕ್ಟ್ ಕೆ’ ಚಿತ್ರದ ಶೂಟಿಂಗ್ ವೇಳೆ ಘಟನೆ ಸಂಭವಿಸಿದೆ.ಚಿತ್ರೀಕರಣವು ಹೈದರಾಬಾದ್ ಬಳಿ ನಡೆಯುತ್ತಿತ್ತು, ಸದ್ಯ ಮುಂಬೈನ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದೇವೇಗೌಡ

ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ದೇವೇಗೌಡರು ಮೋಣಕಾಲು ನೋವಿಗೆ ಚಿಕಿತ್ಸೆಗಾಗಿ ದಾಖಲಾಗಿ, ಕಳೆದ ಐದು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರ ಸಲಹೆ ಪಡೆಯಲು ದಾಖಲಾಗಿದ್ದರು. ಸೋಮವಾರ ಮುಂಜಾನೆಯೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ

Categories
Uncategorized

ನಾನು ಯಾವುದೇ ಅಕ್ರಮ ಮಾಡಿಲ್ಲ.. ಹೆದರುವ ಅವಶ್ಯಕತೆ ಇಲ್ಲ

  • ಶೃಂಗೇರಿ ಕ್ಷೇತ್ರಕ್ಕೆ ಚ್ಯುತಿ ಬಾರದ ಹಾಗೆ ಕೆಲಸ ಮಾಡಿದ್ದೇನೆ
  • ಬೆಂಗಳೂರಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜೇಗೌಡ
  • 1000ಕ್ಕೂ ಹೆಚ್ಚು ಶೃಂಗೇರಿ ಕ್ಷೇತ್ರದ ಜನರ ಸಮಾಗಮ

NAMMUR EXPRESS NEWS
ಬೆಂಗಳೂರು: ಶೃಂಗೇರಿ ರಾಜ್ಯದಲ್ಲಿ ಹೆಮ್ಮೆ. ಮಲೆನಾಡಿನ ಅನೇಕ ಸಮಸ್ಯೆಗಳಿಗೆ ನೀವು ದನಿಯಾಗಿದ್ದೀರಿ. ತಮ್ಮೆಲ್ಲರ ಆಶೀರ್ವಾದದಿಂದ ನಾನು ಶಾಸಕನಾಗಿ ಆಯ್ಕೆಯಾಗಿದ್ದೇನೆ. ಮುಂದೆಯೂ ಶೃಂಗೇರಿ ಕ್ಷೇತ್ರದ ಚ್ಯುತಿ ಬಾರದ ಹಾಗೆ ಜನರ ಬದುಕಿಗಾಗಿ ಕೆಲಸ ಮಾಡುತ್ತೇನೆ. ಶೃಂಗೇರಿ ಕ್ಷೇತ್ರವನ್ನು ರಾಜ್ಯಕ್ಕೆ ಮಾದರಿ ಕ್ಷೇತ್ರ ಮಾಡುವ ಕನಸು ಹೊಂದಿದ್ದೇನೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ಶೃಂಗೇರಿ ಶಾಸಕ ಟಿ. ಡಿ. ರಾಜೇಗೌಡ ಹೇಳಿದ್ದಾರೆ.
ಬೆಂಗಳೂರಲ್ಲಿ ನಡೆದ ಸ್ನೇಹ ಶೃಂಗ 2023ರಲ್ಲಿ ಮುಖ್ಯ ಅತಿಥಿಯಾಗಿ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಿ ಅವರು ಮಾತನಾಡಿ, ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಸದಸ್ಯನಾಗಿ, ಜಿಲ್ಲಾ ಪಂಚಾಯತ್ ಅಧ್ಯಕ್ಷನಾಗಿ ಎರಡೂ ಕ್ಷೇತ್ರದಲ್ಲಿ ಅಭಿವೃದ್ಧಿ ಜತೆಗೆ ಪ್ರೀತಿಯ ರಾಜಕಾರಣ ಮಾಡಿದ್ದೇನೆ. ಶೃಂಗೇರಿ ಕ್ಷೇತ್ರದಲ್ಲಿ ಎಲ್ಲರನ್ನು ಒಟ್ಟಾಗಿ, ನೆಮ್ಮದಿಯುತ ಪ್ರೀತಿಯ ರಾಜಕಾರಣ ಮಾಡಿದ್ದೇನೆ.ಶೃಂಗೇರಿ ಕ್ಷೇತ್ರದಲ್ಲಿ ಶಿಕ್ಷಣ, ಅರೋಗ್ಯ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗಿಯಾಗಿ ಎಲ್ಲರ ಮೆಚ್ಚುಗೆ ಗಳಿಸಿದ್ದೆ. ಪ್ರಥಮ ಚುನಾವಣೆಯಲ್ಲೇ ಅಪಪ್ರಚಾರ ಮಾಡಿ ಸೋಲಿಸಿದರು. ಎರಡನೇ ಬಾರಿಗೆ ಸ್ಪರ್ಧೆ ಮಾಡಿ ಗೆದ್ದೇ. ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ಕಾಣಿಕೆ ನೀಡಿದ್ದೇನೆ. ಹಳ್ಳಿ ಹಳ್ಳಿಗೂ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಇನ್ನಷ್ಟು ಮಾಡಲು ಅನೇಕರು ತಡೆ ಮಾಡಿದರು ಎಂದು ಅವರು ಹೇಳಿದರು.
ದೇಶಕ್ಕೆ ಮಾದರಿ ಸೇವೆ!: ಕೋವಿಡ್ ಸಂದರ್ಭದಲ್ಲಿ ದೇಶದಲ್ಲೇ ಅತೀ ಹೆಚ್ಚು ಸಭೆ ಎನ್.ಆರ್. ಪುರದಲ್ಲಿ ಮಾಡಿದ್ದೇವೆ. ಶೃಂಗೇರಿ ಕ್ಷೇತ್ರದ ಎಲ್ಲಾ ಸಮಸ್ಯೆಗಳ ಬಗ್ಗೆ ಸದನ ಸೇರಿ ಎಲ್ಲಾ ಕಡೆ ದನಿ ಎತ್ತಿದ್ದೇನೆ. ಅಧಿವೇಶನದಲ್ಲಿ ಹೋರಾಟ ಮಾಡಿದ್ದೇನೆ. ಅಡಿಕೆ ಸಮಸ್ಯೆ, ಅರಣ್ಯ ಕಾಯ್ದೆ ಬಗ್ಗೆ ಮಲೆನಾಡ ದನಿಯಾಗಿ ಕೆಲಸ ಮಾಡಿದ್ದೇನೆ
ಮುಂದೆಯೂ ಶೃಂಗೇರಿ ಕ್ಷೇತ್ರದ ಚ್ಯುತಿ ಬಾರದ ಹಾಗೆ ಜನರ ಬದುಕಿಗಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ನಮ್ಮ ಕ್ಷೇತ್ರಕ್ಕೆ ಬಂದ ಅನುದಾನ ತಡೆದು ಹಿಡಿದಿದ್ದಾರೆ.
ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳೂ ಇವೆ. ಅವುಗಳನ್ನು ಶಾಶ್ವತ ಪರಿಹಾರ ಕೊಡಿಸಲು ಪ್ರಯತ್ನ ಮಾಡಲಾಗುವುದು. ಸರಕಾರದ ಕೆಲವು ಕಾಯ್ದೆ ಜಾರಿಯಾಗುತ್ತಿದ್ದು ಅದು ದೊಡ್ಡ ಸವಾಲಾಗಿದೆ. ಸ್ಮಾರ್ಟ್ ಗ್ರಾಮಗಳನ್ನು ಮಾಡಲು ಮಾಡಲಾಗುವುದು. ಕರೋನಾ ಮತ್ತು ಅತಿವೃಷ್ಟಿ ಕಾರಣ ಅನೇಕ ಯೋಜನೆ ಮಾಡಲು ಆಗಲಿಲ್ಲ. ಮುಂದೆ ನಾನು ನಿಮ್ಮ ಜೊತೆ ಇದ್ದೇವೆ. ಬೆಲೆ ಏರಿಕೆ, ಹೊರೆ ನಡುವೆ ಈಗಲೂ ಅಪಪ್ರಚಾರ ಶುರುವಾಗಿದೆ. ನಾನು ಯಾವುದೇ ಅಕ್ರಮ ಮಾಡಿಲ್ಲ. ನಾನು ಪ್ರಾಮಾಣಿಕವಾಗಿದ್ದೇವೆ. ನಾವು ಹೆದರುವ ಅವಶ್ಯಕತೆ ಇಲ್ಲ ಎಂದು ಎದುರಾಳಿಗಳಿಗೆ ಉತ್ತರ ನೀಡಿದರು.

ರಾಜೇಗೌಡ ಅವರು ಸ್ವಂತ ಖರ್ಚಲ್ಲಿ ಜನ ಸೇವೆ

  • ಎಲ್ಲರೂ ಸೇರಿ ಶೃಂಗೇರಿ ಕ್ಷೇತ್ರವನ್ನು ಕಟ್ಟೋಣ: ಮುರೋಳ್ಳಿ

ನ್ಯಾಯವಾದಿ, ಕಾಂಗ್ರೆಸ್ ನಾಯಕ ಸುಧೀರ್ ಕುಮಾರ್ ಮುರೋಳ್ಳಿ ಮಾತನಾಡಿ, ರಾಜೇಗೌಡ ಮತ್ತು ಸ್ನೇಹ ಶೃಂಗ ರಾಜಕೀಯ ಉದ್ದೇಶಕ್ಕಲ್ಲ, ಹೋರಾಟ, ಸಂಘಟನೆ, ಸಾಂಸ್ಕೃತಿಕವಾಗಿ ಕಟ್ಟುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.
ರಾಜೇಗೌಡ ಜನರ ಮೆಚ್ಚಿನ ನಾಯಕ. ಎಲ್ಲರನ್ನು ಪ್ರೀತಿ, ವಿಶ್ವಾಸ, ನಗುವಿನಿಂದ ಗೆಲ್ಲುವ ವ್ಯಕ್ತಿ. ಕರೋನಾ ಸಂದರ್ಭದಲ್ಲಿ ಎಲ್ಲಾ ಆಸ್ಪತ್ರೆಗಳಿಗೆ ತೆರಳಿ ಎಲ್ಲರಿಗೂ ಸಾಂತ್ವನ ನೀಡಿದರು. ತಮ್ಮ ಸ್ವಂತ ಖರ್ಚಲ್ಲಿ ರಾಜೇಗೌಡ ಎಲ್ಲರಿಗೂ ಸ್ಪಂದಿಸಿದ್ದರು. ಕೊಪ್ಪ ಆಸ್ಪತ್ರೆ ದೇಶದಲ್ಲೇ ಅತ್ಯುತ್ತಮ ಆಸ್ಪತ್ರೆ ಹೆಸರು ಪಡೆದಿದೆ. ಶೃಂಗೇರಿ ರಾಜೇಗೌಡ ಅವರು ಶಾಸಕರಾದ ಮೇಲೆ ಪ್ರೀತಿ, ವಿಶ್ವಾಸ, ನಂಬಿಕೆಯ ರಾಜಕೀಯ ಮಾಡಿದ್ದಾರೆ ಎಂದು ಹೇಳಿದರು.
ಕರೋನಾದಲ್ಲಿ ಮೃತರಾದ ಹರೀಶ್ ಕುಂಚೂರು ಕುಟುಂಬಕ್ಕೆ 1 ಲಕ್ಷ ಸಹಾಯ ಮಾಡುವ ಮನಸು ಮಾಡಿದರು. ಶೃಂಗೇರಿ ಕ್ಷೇತ್ರಕ್ಕೆ ತಮ್ಮದೇ ಪರಂಪರೆ ಇದೆ. ಅಲ್ಲಿಯವರು ದಡ್ಡರು, ಅಲ್ಲಿನವರು ಬುದ್ದಿವಂತರು ಅಲ್ಲ, ಮನುಷ್ಯನಾದವರು ಎಲ್ಲರೂ ಬುದ್ದಿವಂತರು. ಕಪ್ಪೆಗೂ ರಕ್ಷಣೆ ನೀಡುವ ಹಾವಿನ ಚಿತ್ರ ಎಲ್ಲರಿಗೂ ಮಾದರಿ ಎಂದರು.
ಕೂಡಿ ಬಾಳಿದರೆ ಸ್ವರ್ಗ ಸುಖ. ಶೃಂಗೇರಿಯಲ್ಲಿ ಗಲಭೆ ಎಬ್ಬಿಸಲು ಪ್ಲಾನ್ ಮಾಡಿದರು. ಆ ಗಲಭೆಗೆ ಕಾರಣನಾಗಿದ್ದ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನು ಕಂಡಿದ್ದಾನೆ. ಚುನಾವಣೆಗಾಗಿ ಗಲಭೆ ಎಬ್ಬಿಸುತ್ತಿದ್ದಾರೆ. ಆದರೆ ರಾಜೇಗೌಡ ಅವರ ಪ್ರೀತಿ ಇಡೀ ಕ್ಷೇತ್ರ ಅಭಿವೃದ್ಧಿ ಆಗುತ್ತದೆ ಎಂದರು.
ಸುಜನ ಟ್ರಸ್ಟ್ ಕ್ಷೇತ್ರದಲ್ಲಿ ಎಲ್ಲಾ ಕಡೆ ಸಮಾಜ ಸೇವೆ ಮಾಡುತ್ತಿದೆ. ರಾಜೇಗೌಡ ತಮ್ಮ ಹಣದ ಜತೆಗೆ ತಮ್ಮ ಸಂಬಳ, ವೇತನ, ಭತ್ಯೆ ಎಲ್ಲಾ ಹಣವನ್ನು ಎಲ್ಲಾ ಬಡವರ ಕಲ್ಯಾಣಕ್ಕೆ ವ್ಯಯ ಮಾಡಿದ್ದಾರೆ. ಕಷ್ಟ ಎಂದು ಮನೆಗೆ ಹೋದವರನ್ನು ನೋಯಿಸಿಲ್ಲ ಎಂದು ಹೇಳಿದರು.
ಮಲೆನಾಡಿನ ನೆಮ್ಮದಿ ಮುಖ್ಯ. ಬೆಂಗಳೂರಿನಲ್ಲಿದ್ದರೂ ನೀವು ಮನೆಯ ನೆಮ್ಮದಿ ಬಯಸುವವರು. ಎಲ್ಲರೂ ಸೇರಿ ಶೃಂಗೇರಿ ಕ್ಷೇತ್ರವನ್ನು ಕಟ್ಟೋಣ. ರಾಜೇಗೌಡ ಒಳ್ಳೆ ಮನುಷ್ಯ ಅವರನ್ನು ಬೆಂಬಲಿಸೋಣ ಎಂದರು.

ದೇಶದ ಶಕ್ತಿ ಸ್ಥಳದಲ್ಲಿ ರಾಜೇಗೌಡ ಗೆಲ್ಲಬೇಕು..

  • ಕಾಂಗ್ರೆಸ್ ಬಗ್ಗೆ ಸಿಟ್ಟಿರಬಹುದು, ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರಬಹುದು, ಆದ್ರೆ ರಾಜೇಗೌಡರ ಪ್ರೀತಿ ಗೆಲ್ಲಿಸಿ: ಬಿ. ಎಲ್ ಶಂಕರ್

ಕಾಂಗ್ರೆಸ್ ನಾಯಕ ಬಿ.ಎಲ್. ಶಂಕರ್ ಮಾತನಾಡಿ, ರಾಜ್ಯದ 224 ಕ್ಷೇತ್ರಗಳಲ್ಲಿ ಶೃಂಗೇರಿ ದೇಶದಲ್ಲೇ ಮಾದರಿ ಸ್ಥಳ. 4 ಶಕ್ತಿ ಪೀಠಗಳಲ್ಲಿ ಶೃಂಗೇರಿ ಕೂಡ ಒಂದು. ಪಂಚಪೀಠದಲ್ಲಿ ಬಾಳೆಹೊನ್ನೂರು ಕೂಡ ಒಂದು. ಆಧ್ಯಾತ್ಮಿಕ ಬಲ ಹೊಂದಿರುವ ಕ್ಷೇತ್ರ ಎಂದು ಹೇಳಿದರು.
ಎಲ್ಲರಿಗೂ ಒಂದು ಮತ, ಭಾರತದಲ್ಲಿ ಮಾತ್ರ. ಶೃಂಗೇರಿ ಕ್ಷೇತ್ರ ರಾಜೇಗೌಡ ಅವರ ಆಡಳಿತದಲ್ಲಿ ಜನ ನೆಮ್ಮದಿಯಾಗಿದ್ದಾರೆ. ಅಟಲ್ ಬಿಹಾರಿ ವಾಜಿಪೇಯಿ ಓರ್ವ ಒಳ್ಳೆ ನಾಯಕ. ಆದರೆ ಇಂದಿನ ರಾಜಕಾರಣಿಗೆ ಅವರು ಮಾದರಿ. ಇಂದಿನ ರಾಜಕೀಯದಲ್ಲಿ ವಿಕೃತ ಸಂತೋಷ ಎದ್ದು ಕಾಣುತ್ತಿದೆ. ದುರಾದೃಷ್ಟವಶಾತ್ ಶೃಂಗೇರಿ ಕ್ಷೇತ್ರದಲ್ಲಿಯೂ ಓರ್ವರೂ ಇದ್ದಾರೆ. ರಾಜೇಗೌಡ ಕ್ಷೇತ್ರದ ಅಭಿವೃದ್ಧಿ ಜತೆಗೆ ನೆಮ್ಮದಿ, ಪ್ರೀತಿ, ಪ್ರಾಮಾಣಿಕ ರಾಜಕಾರಣ ಮಾಡಿದ್ದಾರೆ. ಅವರಿಗೆ ಅಡೆತಡೆಗಳು ಹೆಚ್ಚು ಬಂದಿವೆ. ನಿಮಗೆ ಮತ್ತು ಕ್ಷೇತ್ರದ ಜನರಿಗೆ ಕಾಂಗ್ರೆಸ್ ಸಿಟ್ಟಿರಬಹುದು, ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರಬಹುದು. ಆದರೆ ರಾಜೇಗೌಡ ಅವರ ಪ್ರೀತಿ, ನಗು, ಪ್ರಾಮಾಣಿಕತೆ ಬೇಕು. ದಬ್ಬಾಳಿಕೆ ರಾಜಕೀಯ ಬೇಡ. ನಮ್ಮ ನಮ್ಮ ನಡುವೆ ಘರ್ಷಣೆ ಎಬ್ಬಿಸಿ ರಾಜಕೀಯ ಮಾಡುವರು ಬೇಡ. ರಾಜೇಗೌಡ ಅವರೇ ಗೆಲ್ಲಬೇಕು ಎಂದರು.

ಅಚ್ಚುಕಟ್ಟು ಕಾರ್ಯಕ್ರಮ: ಸಾಂಸ್ಕೃತಿಕ ಸಮಾಗಮ
ಬೆಂಗಳೂರಿನ ಕೆಇಬಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಪ್ರಣತಿ ಗೌಡ ನಿರೂಪಣೆ ಮಾಡಿದರು. ಆಶಯ ಗೀತೆ ದುರ್ಗಾ ಚರಣ್ ಗೌಡ ಹೇಳಿದರು. ಸ್ವಾಗತವನ್ನು ಈ ಸಂಜೆ ಪತ್ರಿಕೆ ವ್ಯವಸ್ಥಾಪಕರಾದ ಅನಿಲ್ ಹೊಸಕೊಪ್ಪ ನಡೆಸಿಕೊಟ್ಟರು.
ಸುಜನ ಟ್ರಸ್ಟ್ ಪ್ರವರ್ತಕರು, ನಿವೃತ್ತ ಅರಣ್ಯ ಅಧಿಕಾರಿಗಳಾದ ಸುರೇಶ, ಸಾಹಿತಿ ಕಾಳೆಗೌಡ ನಾಗವಾರ
ಕವಿಶೈಲ ಸೊಸೈಟಿ ಅಧ್ಯಕ್ಷ ಮಂಜುನಾಥ್, ಮಲೆನಾಡು ಮಿತ್ರವೃಂದ ವಾಸಪ್ಪ, ಕರವೇ ನಾಗರಾಜ್ ಸೇರಿದಂತೆ ಶೃಂಗೇರಿ ಕ್ಷೇತ್ರ ಮೂಲದ ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ತೀರ್ಥಹಳ್ಳಿ ಜಾದೂ ಕಲಾವಿದ ನಿಶ್ಚಲ್ ಶೆಟ್ಟಿ ಎಲ್ಲರನ್ನು ತಮ್ಮ ಜಾದೂ ಮತ್ತು ಕಾಮಿಡಿ ಮೂಲಕ ರಂಜಿಸಿದರು. ಶೃಂಗೇರಿ ಕ್ಷೇತ್ರದ ಪ್ರತಿಭಾವಂತ ಮಕ್ಕಳಿಗೆ ಪಾರಿತೋಷಕ, ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಕರೋನಾದಲ್ಲಿ ಮಡಿದವರಿಗೆ ಶ್ರದ್ದಾಂಜಲಿ
ಕರೋನಾದಲ್ಲಿ ಮಾಡಿದ ನಾಯಕ ಪುನೀತ್ ರಾಜಕುಮಾರ್ ಹಾಗೂ ಶೃಂಗೇರಿ ಕ್ಷೇತ್ರದ ಹೆಮ್ಮೆಯ ಅಧಿಕಾರಿ ಕೆವಿಆರ್ ಟ್ಯಾಗೋರ್, ಕಲಾವಿದ ಹರೀಶ್ ಕುಂಚೂರು ಸೇರಿದಂತೆ ಕರೋನಾದಲ್ಲಿ ಮಡಿದ ಎಲ್ಲರಿಗೂ ನಮನ ಸಲ್ಲಿಸಲಾಯಿತು.

Categories
ರಾಜ್ಯ

ಮಾ.9ರಂದು ಕರ್ನಾಟಕ ಬಂದ್‌!

  • ಬಿಜೆಪಿ ಭ್ರಷ್ಟಾಚಾರ ವಿರುದ್ಧ ಕಾಂಗ್ರೆಸ್ ಹೋರಾಟ
  • ಎಲ್ಲಾ ವ್ಯಾಪಾರಿಗಳಲ್ಲಿ ಮನವಿ ಮಾಡಿದ ಡಿಕೆಶಿ

ಬೆಂಗಳೂರು: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ದ ಮಾರ್ಚ್ 9 ರಂದು ಕರ್ನಾಟಕ ಬಂದ್‌ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕರೆ ಕೊಟ್ಟಿದ್ದಾರೆ. ಈ ಮೂಲಕ ಮಾ.9ಕ್ಕೆ ಕರುನಾಡು ಸ್ತಬ್ದವಾಗಲಿದೆ.
ಬಿಜೆಪಿ ಭ್ರಷ್ಟಾಚಾರ ಖಂಡಿಸಿ ಮಾರ್ಚ್ 9ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 11 ಗಂಟೆವರೆಗೆ ಎಲ್ಲಾ ವ್ಯಾಪಾರಿಗಳು ಬಂದ್‌ಗೆ ಬೆಂಬಲ ನೀಡುವಂತೆ ಕೋರಿದ್ದಾರೆ.
ಇತ್ತೀಚಿಗೆ ಬಿಜೆಪಿ ಶಾಸಕನ ಮಗ ಕೋಟಿ ಕೋಟಿ ಹಣದ ಜತೆ ಸಿಕ್ಕಿಬಿದ್ದಿರುವ ನಡುವೆ ಎಲ್ಲೆಡೆ 40% ಕಮಿಷನ್ ಮೂಲಕ ಸರಕಾರ ಸಂಪೂರ್ಣ ಭ್ರಷ್ಟಾಚಾರ ಮಾಡುತ್ತಿದೆ ಎಂದು ಆರೋಪಿಸಿ ಬಂದ್ ಮಾಡಲಾಗುತ್ತಿದೆ.
ಯಾರಿಗೂ ತೊಂದರೆ ಆಗಬಾರದು!: ಬಂದ್ ವೇಳೆ ಯಾವುದೇ ಶಾಲೆ, ಕಾಲೇಜು ಆಸ್ಪತ್ರೆ ಸಾರ್ವಜನಿಕರಿಗೆ ತೊಂದರೆಯಾಗಬಾರದು, ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಯಾರೂ ಮಾಡಬಾರದು. ಕರ್ನಾಟಕದಲ್ಲಿ ಭ್ರಷ್ಟಾಚಾರ ಮುಕ್ತಮಾಡಲು ನಿಮ್ಮ ಸಹಕಾರ ಬೇಕು. ಅದಕ್ಕಾಗಿ ಎಲ್ಲ ಸಂಘ, ಸಂಸ್ಥೆಗಳು ಸಹಕಾರ ಕೊಡಬೇಕು ಎಂದು ಮನವಿ ಮಾಡಿದ್ದಾರೆ.