Categories
ರಾಜಕೀಯ

ಕಾಂಗ್ರೆಸ್, ಬಿಜೆಪಿಯಲ್ಲಿ ಟಿಕೆಟ್ ಕುತೂಹಲ!

  • ಬಿಜೆಪಿಯ ಹಲವರಿಗೆ ಟಿಕೆಟ್ ಇಲ್ಲ…?!
  • ಕಾಂಗ್ರೆಸ್ ಪಕ್ಷದಿಂದ 140 ಕ್ಷೇತ್ರ ಫೈನಲ್
  • ರಾಜ್ಯದಲ್ಲಿ ಚುನಾವಣೆಗೆ ಸಿದ್ಧತೆ ಜೋರು

NAMMUR EXPRESS NEWS
ಬೆಂಗಳೂರು: ಕಾಂಗ್ರೆಸ್, ಬಿಜೆಪಿಯಲ್ಲಿ ಟಿಕೆಟ್ ಕುತೂಹಲ ಹೆಚ್ಚಿದೆ. ಬಿಜೆಪಿಯ ಹಲವು ಮೂಲ ನಾಯಕರಿಗೆ ಟಿಕೆಟ್ ಇಲ್ಲ ಎನ್ನಲಾಗಿದೆ.
ಮೋದಿ ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ ಎಂದು ಘೋಷಿಸಿದ್ದರೂ ಬಿಜೆಪಿಯಲ್ಲಿ ಟಿಕೇಟ್ ಗಾಗಿ ಕಾಯುತ್ತಿರೋ ಅಪ್ಪ ಮಕ್ಕಳ ಪಟ್ಟಿ ದೊಡ್ಡದಿದೆ. ಈ ಮಧ್ಯೆ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿಸಿಎಂ ಬಿಎಸೈ ನೀಡಿರೋ ಹೇಳಿಕೆ ಈಗ ಬಿಜೆಪಿಯ ಟಿಕೇಟ್ ಆಕಾಂಕ್ಷಿಗಳ ಎದೆಯಲ್ಲಿ ನಡುಕ ಮೂಡಿಸಿದೆ. ಕಲ್ಬುರ್ಗಿಯಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಈ ಭಾರಿ ಒಂದು ನಾಲ್ಕು ಶಾಸಕರನ್ನು ಹೊರತು ಪಡಿಸಿ ಉಳಿದವರಿಗೆಲ್ಲ ಬಿಜೆಪಿಯಿಂದ ಟಿಕೇಟ್ ಸಿಗಲಿದೆ ಎಂದಿದ್ದಾರೆ.
ಬಿಜೆಪಿಯ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿರೋ ಈ ಮಾತಿನಿಂದ ಬಿಜೆಪಿ ಪಾಳಯದಲ್ಲಿ ನಡುಕ ಮೂಡಿಸಿದೆ. ಹಲವು ಶಾಸಕರು ಬಿ.ಎಸ್.ಯಡಿಯೂರಪ್ಪ ಹೇಳಿಕೆಯಿಂದ ಕಂಗಾಲಾಗಿದ್ದಾರೆ.
ಬಿಜೆಪಿ ಹೈಕಮಾಂಡ್‌ ತಳಮಟ್ಟದಿಂದ ಮಾಹಿತಿ ಸಂಗ್ರಹ ಮಾಡಿದ್ದು, ಜನಾಭಿಪ್ರಾಯ ಹಾಗೂ ಕಾರ್ಯಕರ್ತರ ಅಭಿಪ್ರಾಯ ಆಧರಿಸಿ ಹಲವು ಶಾಸಕರ ಮಾರ್ಕ್ಸ್ ಕಾರ್ಡ್ ಸಿದ್ಧಪಡಿಸಿದೆಯಂತೆ. ಇನ್ನೂ ಕೆಲವರಿಗೆ ನಿಮಗೆ ಟಿಕೇಟ್ ಸಿಗೋದು ಅನುಮಾನವಿದೆ. ಇನ್ನಾದರೂ ಕ್ಷೇತ್ರಕ್ಕೆ ಹೋಗಿ ಜನರ ಮನಸ್ಸು ಗೆದ್ದು ಟಿಕೇಟ್ ಪಡೆಯೋ ಪ್ರಯತ್ನ ಮಾಡಿ ಎಂದು ಸೂಚನೆ ನೀಡಿದೆಯಂತೆ. ಇದೇ ಆಧಾರದ ಮೇಲೆ ಬಿಎಸೈ ಹೇಳಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗೆ ಸ್ಕ್ರೀನಿಂಗ್ ಕಮಿಟಿ ಸಭೆ

  • 140 ಕ್ಷೇತ್ರ ಫೈನಲ್: ಟಿಕೆಟ್ ಕುತೂಹಲ

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಸಲುವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮೋಹನ್ ಪ್ರಕಾಶ್ ಅಧ್ಯಕ್ಷತೆಯ ಸ್ಕ್ರೀನಿಂಗ್ ಸಮಿತಿಯು ಮಂಗಳವಾರ ರಾಜ್ಯ ನಾಯಕರೊಂದಿಗೆ ಸುದೀರ್ಘ ಸಭೆ ನಡೆಸಿದ್ದು, ಬುಧವಾರವು ಸಂಭಾವ್ಯರ ಆಯ್ಕೆ ಪ್ರಕ್ರಿಯೆ ಕುರಿತ ಸಭೆ ಮುಂದುವರೆಯಲಿದೆ ಎಂದು ತಿಳಿದುಬಂದಿದೆ. ಮಂಗಳವಾರ 140 ಕ್ಷೇತ್ರಗಳಿಗೆ ತಲಾ ಒಬ್ಬರು ಸಂಭಾವ್ಯರ ಹೆಸರನ್ನು ಅಂತಿಮಗೊಳಿಸಲು ರಾಜ್ಯ ನಾಯಕರೊಂದಿಗೆ ತಡರಾತ್ರಿವರೆಗೆ ಸುದೀರ್ಘ ಚರ್ಚೆ ನಡೆಯಿತು. ಈ ಸಭೆಯು ಬುಧವಾರವು ಮುಂದುವರೆಯಲಿದ್ದು 50-60 ಇತರೆ ಕ್ಷೇತ್ರಗಳ ಸಂಭಾವ್ಯರ ಪಟ್ಟಿ ಅಂತಿಮಗೊಳಿಸುವ ಬಗ್ಗೆಯೂ ಚರ್ಚೆ ಮಾಡಲಿದ್ದಾರೆ. ಬಳಿಕ ಸ್ಕ್ರೀನಿಂಗ್ ಸಮಿತಿಯು ಅಂತಿಮಗೊಳಿಸುವ ಸಂಭಾವ್ಯರ ಪಟ್ಟಿಯನ್ನು ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಂಗಳವಾರದ ಸಭೆಯಲ್ಲಿ ಸ್ಕ್ರೀನಿಂಗ್ ಸಮಿತಿಯ ಪದ ನಿಮಿತ್ತ ಸದಸ್ಯರಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್, ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ. ಜಿ. ಪರಮೇಶ್ವರ, ರಾಜ್ಯ ಉಸ್ತುವಾರಿಯಲ್ಲಿರುವ ಎಐಸಿಸಿ ಕಾರ್ಯದರ್ಶಿಗಳು ಭಾಗವಹಿಸಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಗುರುವಾರ ರಾಜ್ಯಕ್ಕೆ ಚುನಾವಣಾ ಆಯೋಗ

  • ಮುಖ್ಯ ಚುನಾವಣಾ ಆಯುಕ್ತರ ನಿಯೋಗದಿಂದ ಪ್ರವಾಸ ಮುಂಬರುವ ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ಪೂರ್ವ ತಯಾರಿ ಪರಿವೀಕ್ಷಣೆಗಾಗಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನೇತೃತ್ವದ ಹಿರಿಯ ಅಧಿಕಾರಿಗಳ ತಂಡ ಗುರುವಾರದಿಂದ ಮೂರು ದಿನಗಳ ಕಾಲ ಬೆಂಗಳೂರಿಗೆ ಭೇಟಿ ನೀಡಲಿದೆ. ಮೊದಲ ದಿನ ಗುರುವಾರ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸುವ ನಿಯೋಗವು ಮೊದಲು ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ರಾಜ್ಯಮಟ್ಟದಲ್ಲಿ ಚುನಾವಣಾ ಪೂರ್ವ ತಯಾರಿ ಕುರಿತು ಸಭೆ ನಡೆಸಲಿದೆ. ತದನಂತರ ಮುಂಬರುವ ಚುನಾವಣೆ ಬಗ್ಗೆ ಪ್ರತ್ಯೇಕವಾಗಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಿದ್ದು ಅವರ ಸಲಹೆ ಮತ್ತು ಅಭಿಪ್ರಾಯಗಳನ್ನು ಪಡೆಯಲಿದೆ. ಎರಡನೆಯ ದಿನ ಶುಕ್ರವಾರ ರಾಜ್ಯದ ಎಲ್ಲ ಜಿಲ್ಲೆ ಚುನಾವಣಾ ಅಧಿಕಾರಿಗಳೊಂದಿಗೆ ಚುನಾವಣೆಯ ಪೂರ್ವಭಾವಿ ತಯಾರಿ ಕುರಿತು ಸಭೆ ನಡೆಸಲಿದೆ. ಅಂದು ಸಂಜೆ ಮತದಾರರ ಜಾಗೃತಿ ಕುರಿತು ವಿಶೇಷ ವಸ್ತು ಪ್ರದರ್ಶನ, ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದೆ. ಮೂರನೇ ದಿನ ಬೆಳಗ್ಗೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ನಂತರ ಪತ್ರಿಕಾಗೋಷ್ಠಿ ನಡೆಸಿ ಕೊಡಲಿದೆ ಎಂದು ಪ್ರಕಟಣೆ ತಿಳಿಸಿದೆ.
Categories
ಬೆಂಗಳೂರು ಮೈಸೂರು ರಾಜ್ಯ

ಕೆಪಿಸಿಸಿ ಕಾರ್ಯಧ್ಯಕ್ಷ ಆರ್.ಧ್ರುವನಾರಾಯಣ್ ಇನ್ನಿಲ್ಲ

  • ಮುಂಜಾನೆ ಹೃದಯಾಘಾತ: ಕಾಂಗ್ರೆಸ್ ಪಕ್ಷದ ಸಂಘಟಕ ವಿಧಿವಶ

NAMMUR EXPRESS NEWS
ಬೆಂಗಳೂರು: ಮೈಸೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್​ಧ್ರುವನಾರಾಯಣ(61) ಹೃದಯಾಘಾತದಿಂದ ನಿಧನರಾಗಿದ್ದಾರೆ. ಆರ್.ಧ್ರುವನಾರಾಯಣ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ 2 ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಹಾಗೇ ಕೊಳ್ಳೇಗಾಲ ಕ್ಷೇತ್ರದಿಂದ 1 ಬಾರಿ, ಸಂತೇಮರಹಳ್ಳಿ ಕ್ಷೇತ್ರದಿಂದ 1 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 1983ರಲ್ಲಿ ಕಾಂಗ್ರೆಸ್ ಪಕ್ಷ ಸೇರುವ ಮೂಲಕ ರಾಜಕೀಯ ಪ್ರವೇಶ 1986ರಲ್ಲಿ ಎನ್​ಎಸ್​ಯುಐ ಬೆಂಗಳೂರು​ ಘಟಕದ ಅಧ್ಯಕ್ಷರಾಗಿದ್ದರು.ಈ ಬಾರಿ ನಂಜನಗೂಡು ಕ್ಷೇತ್ರದಿಂದ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದರು. ಇವರ ಸಾವು ಇದೀಗ ತುಂಬಲಾರದ ನಷ್ಟ ಉಂಟು ಮಾಡಿದೆ.
ಧ್ರುವನಾರಾಯಣ ಅವರಿಗೆ ಮುಂಜಾನೆ ಹೃದಯಘಾತವಾಗಿದ್ದು, ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಪಕ್ಷದ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಎಲ್ಲಾ ಪಕ್ಷದ ನಾಯಕರು, ಪ್ರಮುಖರು ಸಂತಾಪ ವ್ಯಕ್ತಪಡಿಸಿದ್ದಾರೆ.

Categories
ಆರೋಗ್ಯ

ಕರೋನ ಬಳಿಕ ಹೆಚ್ಚಿತು ಹಾರ್ಟ್ ಅಟ್ಯಾಕ್!

  • ತೀರಾ ಚಿಕ್ಕ ವಯಸ್ಸಿನವರು ಕೂಡ ಬಲಿ
  • ಏಕೆ… ಏನು.. ಇತ್ತ… ಇಲ್ಲಿದೆ ಅಧ್ಯಯನ ವರದಿ

NAMMUR EXPRESS NEWS
ಕಳೆದ ಕೆಲವು ತಿಂಗಳಿಂದ ಜನರು ಹೃದಯಾಘಾತದಿಂದ ಮೃತಪಟ್ಟ ಹಲವು ಪ್ರಕರಣಗಳು ವರದಿಯಾಗಿವೆ. ಆರೋಗ್ಯವಂತರಾಗಿರುವವರು, ಮೈದಾನದಲ್ಲಿ ಆಡುತ್ತಿರುವವರು, ತೀರಾ ಚಿಕ್ಕವಯಸ್ಸಿನವರು
ಹೃದಯಾಘಾತದಿಂದ ಸಾವಿಗೀಡಾಗುತ್ತಿರುವ ಸುದ್ದಿಗಳು ಜನರನ್ನು ಕಳವಳಕ್ಕೀಡು ಮಾಡಿವೆ. ಕೋವಿಡ್ ಸೋಂಕಿಗೆ ಒಳಗಾಗಿ, ಚೇತರಿಸಿಕೊಂಡು ಆರೋಗ್ಯವಂತರಾಗಿದ್ದ ವ್ಯಕ್ತಿಗಳಲ್ಲಿ ಹೃದಯಸ್ತಂಭನದಿಂದ ಮರಣ ಸಂಭವಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬುದು ಸಮೀಕ್ಷೆಯೊಂದರಿಂದ ತಿಳಿದುಬಂದಿದೆ. ಈ ರೀತಿ ಸಾವಿಗೀಡಾದವರಲ್ಲಿ ಶೇ.50ರಷ್ಟು ಮಂದಿ ಧೂಮಪಾನದ ಚಟ ಹೊಂದಿರಲಿಲ್ಲ. ಬಹುತೇಕ ಮಂದಿಗೆ ಹೃದಯ ಸಮಸ್ಯೆಯ ಕೌಟುಂಬಿಕ ಹಿನ್ನೆಲೆ ಇರಲಿಲ್ಲ ಎಂದು ವೈದ್ಯರು ಹೇಳಿದ್ದಾರೆ. ದಿಲ್ಲಿಯ ಕೆಲವು ಆಸ್ಪತ್ರೆಗಳಲ್ಲಿ ಹೃದಯಸ್ತಂಭನದಿಂದ ಸಾವು ಸಂಭವಿಸುವ ಪ್ರಕರಣಗಳ ಸಂಖ್ಯೆಯಲ್ಲಿ ಶೇ.10ರಿಂದ 15ರವರೆಗೂ ಹೆಚ್ಚಳ ಕಂಡುಬಂದಿದೆ. ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದ ವ್ಯಕ್ತಿಗಳಲ್ಲಿ ಸಾವು ಹಾಗೂ ಹೃದಯ ಸ್ತಂಭನ, ಪಾರ್ಶ್ವವಾಯು, ಶ್ವಾಸಕೋಶದ ಸಮಸ್ಯೆ ಸಾಧ್ಯತೆ ಹೆಚ್ಚಾಗಿದೆ ಎಂದು ಅಮೆರಿಕದಲ್ಲಿ ಸಂಶೋಧನಾ ವರದಿ ಪ್ರಕಟವಾಗಿತ್ತು. ಅದಕ್ಕೆ ಪೂರಕವಾಗಿರುವ ಬೆಳವಣಿಗೆಗಳು ನಮ್ಮಲ್ಲೂ ನಡೆಯುತ್ತಿವೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಹೃದಯ ಸ್ತಂಭನ ಪ್ರಕರಣಗಳು ಹೆಚ್ಚಾಗಿವೆ. ಕೋವಿಡ್ ಪೂರ್ವದಲ್ಲಿ 50 ವರ್ಷದೊಳಗಿನವರು ಹೃದಯ ಸ್ತಂಭನದಿಂದ ಸಾವಿಗೀಡಾಗುವ ಪ್ರಮಾಣ ಶೇ.15ರಷ್ಟಿತ್ತು. ಆದರೆ ಕೋವಿಡ್ ನಂತರ ಶೇ.24ಕ್ಕೆ ಏರಿಕೆಯಾಗಿದೆ. ಇಂತಹ ಸಾವುಗಳಲ್ಲಿ 20 ವರ್ಷ ವಯಸ್ಸಿನವರೂ ಇದ್ದಾರೆ. ಈ ಬಗ್ಗೆ ವಿಸ್ಕೃತ ಅಧ್ಯಯನ ನಡೆಯಬೇಕಾಗಿದೆ ಎಂದು ತಜ್ಞರು ಹೇಳಿದ್ದಾರೆ. ಅಂದಾಜಿನ ಪ್ರಕಾರ ಕೋವಿಡ್ ಬಳಿಕ ಹೃದಯಸ್ತಂಭನ ಪ್ರಕರಣಗಳಲ್ಲಿ ಶೇ.10ರಿಂದ 15ರಷ್ಟು ಹೆಚ್ಚಳ ಕಂಡುಬಂದಿದೆ. ಕೋವಿಡ್ ಸೋಂಕಿಗೆ ತುತ್ತಾಗಿದ್ದವರು ತಮ್ಮ ವಯಸ್ಸು ಎಷ್ಟೇ ಆಗಿರಲಿ ಅಥವಾ ದೈಹಿಕವಾಗಿ ಎಷ್ಟೇ ಫಿಟ್ ಆಗಿರಲಿ ಉಸಿರಾಟ ಸಮಸ್ಯೆಯಂತಹ ಲಕ್ಷಣಗಳು ಕಂಡುಬಂದಾಗ ನಿರ್ಲಕ್ಷ್ಯ
ಹಾಗೆಯೇ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಏಮ್ಸ್ ಪ್ರಾಧ್ಯಾಪಕ ರಾಕೇಶ್ ಯಾದವ್ ಸಲಹೆ ಮಾಡಿದ್ದಾರೆ.

ಅರೋಗ್ಯದ ಮೇಲಿರಲಿ ನಿಗಾ!
ಕೋವಿಡ್ ಇತಿಹಾಸ ಹೊಂದಿರುವ ಮಧ್ಯವಯಸ್ಕರು ಹಾಗೂ ವಯೋವೃದ್ಧರು ಅಧಿಕ ರಕ್ತದೊತ್ತಡ, ಬೊಜ್ಜು, ಕೊಲೆಸ್ಟ್ರಾಲ್ ಮೇಲೆ ನಿಗಾ ಇಡಬೇಕು. ಅಸಾಮಾನ್ಯ ರೀತಿಯಲ್ಲಿ ವಿಪರೀತ ವ್ಯಾಯಾಮ ಮಾಡಬಾರದು. ಏಕೆಂದರೆ, ಇಂತಹ ಕಸರತ್ತಿನ ವೇಳೆಯೇ ಹಲವು ಸಾವುಗಳು ಸಂಭವಿಸಿವೆ ಎಂದು ಪಿಎಸ್‌ಆರ್‌ಐ ಶ್ವಾಸಕೋಶ ಸಂಸ್ಥೆಯ ಡಾ. ಜಿ.ಸಿ.ಖಿಲ್ನಾನಿ ಎಚ್ಚರಿಸಿದ್ದಾರೆ.

Categories
ತೀರ್ಥಹಳ್ಳಿ ರಾಜ್ಯ ಶಿವಮೊಗ್ಗ

ಶಿವಮೊಗ್ಗದಲ್ಲಿ ಶಾರೀಖ್ ವಿಚಾರಣೆ: ತೀರ್ಥಹಳ್ಳಿಗೆ ಕರೆ ತರ್ತಾರಾ..?

  • ಟ್ರಯಲ್ ಬ್ಲಾಸ್ಟ್ ಮತ್ತು ಕುಕ್ಕರ್ ಬ್ಲಾಸ್ಟ್ ಬಗ್ಗೆ ಎನ್ ಐಎ ತನಿಖೆ
  • ರಾಜ್ಯದಲ್ಲಿ ಮತ್ತೆ ಉಗ್ರ ಕಾರ್ಯಾಚರಣೆ ಮುನ್ನೆಲೆಗೆ

NAMMUR EXPRESS NEWS
ಶಿವಮೊಗ್ಗಕ್ಕೆ ಮತ್ತೆ ಎನ್‌ಐಎ ಅಧಿಕಾರಿಗಳು ಬಂದಿದ್ದಾರೆ, ಬೆಂಗಳೂರಿನಲ್ಲಿಯೇ ಶಂಕಿತ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಆರೋಪಿಗಳ ವಿಚಾರಣೆ ನಡೆಸ್ತಿರುವ ಎನ್‌ಐಎ ಅಧಿಕಾರಿಗಳು, ಗುರುಪುರದ ಸಮೀಪದ ಕೆಮ್ಮಣ್ಣುಗುಂಡಿ ಪ್ರದೇಶದಲ್ಲಿ ನಡೆಸಿದ ಟ್ರಯಲ್ ಬ್ಲಾಸ್ಟ್ ಹಾಗೂ ರಾಷ್ಟ್ರಧ್ವಜ ಸುಟ್ಟಿರುವ ಪ್ರಕರಣ ಮತ್ತು ಮಂಗಳೂರಿನಲ್ಲಿ ನಡೆದ ಕುಕ್ಕರ್ ಬ್ಲಾಸ್ಟ್ ಕೇಸ್‌ನ ನಡುವೆ ಇರಬಹುದಾದ ಲಿಂಕ್‌ಗಳನ್ನು ಸಹ ಹುಡುಕುತ್ತಿದ್ದಾರೆ. ಕಾರಣ ಶಾರೀಖ್, ಹೌದು.

ತೀರ್ಥಹಳ್ಳಿ ಮೂಲದ ಶಾರೀಖ್ ಟ್ರಯಲ್ ಬ್ಲಾಸ್ಟ್ ಕೇಸ್‌ನಲ್ಲಿಯು ಆರೋಪಿಯಾಗಿದ್ದು . ಶಂಕಿತ ಮಾಜ್ ಹಾಗೂ ಯಾಸೀನ್‌ನಡುವೆ ಲಿಂಕ್ ಹೊಂದಿದ್ದವನು. ಅಲ್ಲದೆ ಪ್ರೇಮ್ ಸಿಂಗ್ ಗೆ ಇರಿತ ಪ್ರಕರಣದಲ್ಲಿಯು ಆರೋಪಿ ಜಬಿಗೆ ಶಾರೀಖ್ ಸಂಪರ್ಕ ಹೊಂದಿದ್ದ.ಈ ಆರೋಪಿಯೇ ಮಂಗಳೂರು ಕುಕ್ಕರ್ ಬ್ಲಾಸ್ಟ್‌ ಕೇಸ್‌ನ ಪ್ರಮುಖ ಆರೋಪಿ. ಇನ್ನೂ ಮಂಗಳೂರಿನಲ್ಲಿ ನಡೆದ ಗೋಡೆಬರಹ ಕೇಸ್‌ನಲ್ಲಿಯು ಈತ ಆರೋಪಿಯಾಗಿದ್ದ. ಈ ಎಲ್ಲಾ ಕಾರಣದಲ್ಲಿ ಎನ್‌ಐಎ ಕೈಗೆತ್ತಿಕೊಂಡಿರುವ ಕೇಸ್ ನಡಿಯಲ್ಲಿ ಶಾರೀಖ್‌ನನ್ನ ವಿಚಾರಣೆ ನಡೆಸ್ತಿದೆ. ಶಿವಮೊಗ್ಗ ತೀರ್ಥಹಳ್ಳಿ, ಮಂಗಳೂರಿನ ನಡುವೆ ಶಾರೀಖಿನ ಲಿಂಕ್ ನ ಬಗ್ಗೆ ಎನ್‌ಐಎ ತನಿಖೆ ನಡೆಸ್ತಿದೆ.
ತೀರ್ಥಹಳ್ಳಿಗೆ ಶಾರೀಕ್ ಕರೆ ತಂದು ವಿಚಾರಣೆ ನಡೆಸುವ ಸಾಧ್ಯತೆಗಳಿವೆ

Categories
ತೀರ್ಥಹಳ್ಳಿ

ಇಂದು ತೀರ್ಥಹಳ್ಳಿಯಲ್ಲಿ ಮಹಿಳಾ ದಿನಾಚರಣೆ!

  • ಮಲೆನಾಡ ಆಹಾರ ಮೇಳ ಮತ್ತು ಗೃಹಪಯೋಗಿ ವಸ್ತುಗಳ ಮಾರಾಟ ಮೇಳ
  • ಮಲೆನಾಡ ಮಹಿಳಾ ವೇದಿಕೆ ಆಶ್ರಯದಲ್ಲಿ ನಯನಾ ಶೆಟ್ಟಿ ಸಾರಥ್ಯದಲ್ಲಿ ಕಾರ್ಯಕ್ರಮ
  • ಸಾಧಕರಿಗೆ ಸನ್ಮಾನ ಸಮಾರಂಭ ಹಾಗೂ ರಾಜ್ಯಮಟ್ಟದ ನೃತ್ಯ ಸ್ಪರ್ಧೆ

NAMMUR EXPRESS NEWS
ತೀರ್ಥಹಳ್ಳಿ : ಮಲೆನಾಡ ಮಹಿಳಾ ವೇದಿಕೆ ಆಶ್ರಯದಲ್ಲಿ ನಯನಾ ಶೆಟ್ಟಿ ಸಾರಥ್ಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಾರ್ಚ್ 8ರಂದು ಬೆಳಗ್ಗೆ 11:00ಗೆ ಡಾ. ಯು. ಆರ್ ಅನಂತಮೂರ್ತಿ ಸರ್ಕಾರಿ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಮಲೆನಾಡ ಆಹಾರ ಮೇಳ ಮತ್ತು ಗೃಹ ಉಪಯೋಗಿ ವಸ್ತುಗಳ ಮಾರಾಟಮೇಳ, ಬೃಹತ್ ಮಹಿಳಾ ಜಾಥಾ, ಮಲೆನಾಡ ಮಹಿಳಾ ಸಾಧಕರಿಗೆ ಸನ್ಮಾನ ಸಮಾರಂಭ ಹಾಗೂ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪ. ಪಂ ಮಾಜಿ ಅಧ್ಯಕ್ಷೆ ಶಬನಂ, ಪ. ಪಂ ಸದಸ್ಯರಾದ ಗೀತಾ ರಮೇಶ್, ಜ್ಯೋತಿ ಮೋಹನ್, ಮಂಜುಳ ನಾಗೇಂದ್ರ, ಜ್ಯೋತಿ ಗಣೇಶ್ ಕಾರ್ಯಕ್ರಮ ಉದ್ಘಾಟಿಸುವರು.
ಸಂಜೆ 6:30ಕ್ಕೆ ಮಹಿಳಾ ಸಾಧಕರಿಗೆ ಸನ್ಮಾನ ಸಮಾರಂಭ ಹಾಗೂ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ನಡೆಯಲಿದೆ. ತಾಲೂಕು ಬಂಟರ ಮಹಿಳಾ ಸಂಘದ ಅಧ್ಯಕ್ಷರು, ಪ. ಪಂ ಮಾಜಿ ಸದಸ್ಯರು ಹಾಗೂ ಸಹನಾ ಫ್ಯಾಷನ್ ಸಿಲ್ಕ್ ಮಾಲೀಕರಾದ ನಯನ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಚಲನಚಿತ್ರರಂಗದ ಪ್ರತಿಭಾನ್ವಿತ ಅಭಿನೇತ್ರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಾಜಿ ಸಚಿವರು ಹಾಗೂ ಕೆಪಿಸಿಸಿ ಸದಸ್ಯರಾದ ಉಮಾಶ್ರೀ, ಮಂಗಳೂರು ನಗರಸಭೆ ಮಾಜಿ ಸದಸ್ಯ ಪ್ರತಿಭಾ ಕುಳಾಯಿ, ಕರ್ನಾಟಕ ಮಹಿಳಾ ಸಹಕಾರಿ ಬ್ಯಾಂಕ್ ಮತ್ತು ರೋಟರಿ ಗವರ್ನರ್ ಅಧ್ಯಕ್ಷರು ಹಾಗೂ ಮಲೆನಾಡು ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷೆ ಬಿ. ಸಿ. ಗೀತಾ ಕಾರ್ಯಕ್ರಮ ಉದ್ಘಾಟಿಸುವರು.
ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಅಪೇಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಡಾ. ಆರ್ ಎಂ ಮಂಜುನಾಥ ಗೌಡ, ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕ ಆರ್ ಮದನ್, ತಹಶೀಲ್ದಾರ್ ಅಮೃತ್ ಅತ್ರೇಶ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶೈಲಾ ಎಸ್, ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಶೀಲ ಶೆಟ್ಟಿ, ನ್ಯಾಷನಲ್ ಕನ್ಸ್ಟ್ರಕ್ಷನ್ ಅಬ್ದುಲ್ ರೆಹಮಾನ್, ತೀರ್ಥಹಳ್ಳಿ ಕ್ಷೇತ್ರ ಅಮ್ ಆದ್ಮಿ ಪಕ್ಷದ ವಿಧಾನಸಭಾ ಅಭ್ಯರ್ಥಿ ಸಾಲೂರು ಶಿವಕುಮಾರ್ ಗೌಡ ಗೌರವ ಉಪಸ್ಥಿತರಿರುವರು. ಸಮಾರಂಭಕ್ಕೆ ತಾಲೂಕಿನ ಎಲ್ಲ ಮಹಿಳೆಯರು ಪಾಲ್ಗೊಳ್ಳಬೇಕಾಗಿ ಮಲೆನಾಡು ಮಹಿಳಾ ವೇದಿಕೆ ಕೋರಿದೆ.

ತಾಲೂಕಿನ ಸಮಸ್ತ ಮಹಿಳೆಯರು ಸೇರಿದಂತೆ ಸರ್ವರನ್ನು ಸ್ವಾಗತಿಸಲಾಗಿದೆ.

Categories
ಕೊಪ್ಪ ಚಿಕ್ಕಮಗಳೂರು ಯಶಸ್ಸಿನ ಕಥೆಗಳು

ಸರ್ಕಾರಿ ಶಾಲೆಯನ್ನೇ ಉಳಿಸಿದ ಅಂಟಿಗೆ ಪಂಟಿಗೆ!

  • ಕೊಪ್ಪ ತಾಲೂಕು ಭಂಡಿಗಡಿ ಶಾಲೆಯಲ್ಲಿ ವಿನೂತನ ಕಾರ್ಯಕ್ರಮ
  • ಶಾಲಾ ಅಭಿವೃದ್ಧಿಗೆ ಊರವರೇ ಅಂಟಿಗೆ ಪಂಟಿಗೆ ಕಟ್ಟಿ ಹಣ ಕೊಟ್ಟರು!
  • 60ಕ್ಕೂ ಹೆಚ್ಚು ಅಂಟಿಗೆ ಪಂಟಿಗೆ ಹಾಡುಗಾರರಿಗೆ ಸನ್ಮಾನ
  • ಕ್ರಿಯೇಟಿವ್ ಮೀಡಿಯಾದಿಂದ ಪುಸ್ತಕ, ನಮ್ಮ ಭಂಡಿಗಡಿ ಡಾಕ್ಯುಮೆಂಟ್ರಿ ಬಿಡುಗಡೆ

NAMMUR EXPRESS NEWS
ಕೊಪ್ಪ: ಆ ಪುಟ್ಟ ಹಳ್ಳಿಯ ಸರ್ಕಾರಿ ಪ್ರೌಢ ಶಾಲೆ. ಸುಮಾರು 30 ವರ್ಷಗಳ ದೀರ್ಘ ಪಯಣದಲ್ಲಿ 15 ವರ್ಷದ ಬಳಿಕ ಸರ್ಕಾರದ ಅನುದಾನ, ಸೌಲಭ್ಯ ಪಡೆಯಿತು. 15 ವರ್ಷ ಗ್ರಾಮಸ್ಥರು ಅಂಟಿಗೆ ಪಂಟಿಗೆ ಕಟ್ಟಿ ಹಣ ಸಂಗ್ರಹಿಸಿ ಶಾಲೆ ನಡೆಸಿದ್ದರು, ಶಿಕ್ಷಕರು ಬಿಡಿಗಾಸು ಪಡೆಯದೇ ಸೇವೆ ಮಾಡಿದ್ದರು. ಗ್ರಾಮಸ್ಥರು ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸಿದ್ದರು.
ಸರ್ಕಾರಿ ಶಾಲೆ ಉಳಿಸಲು ಅಂಟಿಗೆ ಪಂಟಿಗೆ ಕಟ್ಟಿ ಊರೂರು ಹಾಡು ಹೇಳಿ ಹಣ ಸಂಗ್ರಹಿಸಿದ ಕೊಪ್ಪ ತಾಲೂಕು ಭಂಡಿಗಡಿ ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಇಂದು ಎಲ್ಲದರಲ್ಲೂ ಮುಂದಿದೆ.
ಶಾಲಾ ಮುಖ್ಯ ಉಪಾಧ್ಯಾಯ ಎನ್.ಎಸ್. ಸುರೇಂದ್ರ ಹಾಗೂ ಎಲ್ಲಾ ಶಿಕ್ಷಕರ ಶ್ರಮ, ಗ್ರಾಮಸ್ಥರು, ದಾನಿಗಳ ಸಹಕಾರದಿಂದ ಶಾಲೆ ಎಲ್ಲರ ಗಮನ ಸೆಳೆದಿದೆ.
ಸುರೇಂದ್ರ ಎನ್.ಎಸ್, ಸುಬ್ರಮಣ್ಯ ಸಿ. ಎಸ್, ಜೆ.ಪಿ ಹರೀಶ್, ರಮೇಶ್ ಉಪಾದ್ಯಾಯ ಜಿ ರುದ್ರಪ್ಪ ಸೀತಾದೇವಿ ಮತ್ತು ಸಹ ಶಿಕ್ಷಕರು ಶಾಲೆಯ ಅಭಿವೃದ್ಧಿಗೆ ಅವಿರತ ಶ್ರಮಿಸಿದ್ದಾರೆ.
ಮಾ.6ರಂದು ಶಾಲೆಯಲ್ಲಿ ವಾರ್ಷಿಕ ಸಂಭ್ರಮ 2023 ಕಾರ್ಯಕ್ರಮ ನಡೆದಿದ್ದು ಈ ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿಗೆ ಅಂಟಿಗೆ ಪಂಟಿಗೆ ಕಟ್ಟಿ ಸಹಾಯ ಮಾಡಿದ 60ಕ್ಕೂ ಹೆಚ್ಚು ಮಂದಿಯನ್ನು ಹಾಗೂ ಸಹಕಾರ ಮಾಡಿದ ಗ್ರಾಮಸ್ಥರನ್ನು ಗೌರವಿಸಲಾಯಿತು. ಜೊತೆಗೆ ಅಂಟಿಗೆ ಪಂಟಿಗೆ ಕುರಿತು ಕಾಲೇಜಿನ ಹಳೆಯ ವಿದ್ಯಾರ್ಥಿ, ಕಾರ್ಕಳ ಕ್ರಿಯೇಟಿವ್ ಕಾಲೇಜಿನ ಸಂಸ್ಥಾಪಕರಲ್ಲಿ ಒಬ್ಬರಾದ ಅಶ್ವಥ್ ಎಸ್.ಎಲ್ ಅವರ ನೇತೃತ್ವದಲ್ಲಿ ತಯಾರಾದ ಅಂಟಿಗೆ ಪಂಟಿಗೆ ಕೃತಿ ಹಾಗೂ ಅಂಟಿಗೆ ಪಂಟಿಗೆ ಕುರಿತ ಎಲ್ಲಾ ಪ್ರಕಾರಗಳ ಹಾಡು ಇರುವ ಕ್ರಿಯೇಟಿವ್ ಮೀಡಿಯಾ ಅರ್ಪಣೆಯ ವಿಶೇಷ ಡಾಕ್ಯುಮೆಂಟರಿ ಚಾನೆಲ್ ಬಿಡುಗಡೆಗೊಳಿಸಲಾಯಿತು.
ಇದೇ ವೇಳೆ ರಾಜ್ಯಮಟ್ಟದ ಕಲೋತ್ಸವದಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಿತು.

Antige pintige in Durgaparameshawari Highschool Bandigadi

ತನ್ನ ಶಾಲೆಗೆ ಮಿಡಿದ ಕ್ರಿಯೇಟಿವ್ ಮೀಡಿಯಾ!

ಭಂಡಿಗಡಿ ಶ್ರೀ ದುರ್ಗಾಪರಮೇಶ್ವರಿ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪೂರೈಸಿ ಬಳಿಕ ಉನ್ನತ ವ್ಯಾಸಂಗ ಮಾಡಿ ರಾಜ್ಯಕ್ಕೆ ಮಾದರಿ ಎಂಬಂತೆ ಶಿಕ್ಷಣ ಸಂಸ್ಥೆ ಕಟ್ಟಿರುವ ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜಿನ ಸಂಸ್ಥಾಪಕ, ಶಾಲೆಯ ಹಳೆಯ ವಿದ್ಯಾರ್ಥಿ ಅಶ್ವಥ್ ಎಸ್ ಎಲ್ ತಮ್ಮ ಶಾಲೆಯ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡುತ್ತಾ ಜಾನಪದ ಬೆಳವಣಿಗೆಗೂ ಕೈ ಜೋಡಿಸಿದ್ದಾರೆ.
ತಮ್ಮ ಸಂಸ್ಥೆಯ ಕ್ರಿಯೇಟಿವ್ ಮೀಡಿಯಾ ಮೂಲಕ ಶಾಲೆಯ ಅಭಿವೃದ್ಧಿಗೆ ಸಹಕರಿಸಿದ ಅಂಟಿಗೆ ಪಂಟಿಗೆ ಕಲಾವಿದರು, ಕಲಾ ಪ್ರಕಾರ, ಮಲೆನಾಡಿನ ಅಂಟಿಗೆ ಪಂಟಿಗೆ ಕಲೆಯ ಬಗ್ಗೆ ಕೃತಿ ಜೊತೆಗೆ ನಮ್ಮ ಮಲೆನಾಡಿನ ಜಾನಪದ ಕಲೆಯನ್ನು ಒಂದು ಡಾಕ್ಯುಮೆಂಟರಿಯಾಗಿ ಕಟ್ಟಿ ಕೊಡುವ ಪ್ರಯತ್ನ ಮಾಡಿದ್ದಾರೆ. ಇದರಲ್ಲಿ ಅಂಟಿಗೆ ಪಂಟಿಗೆಯ ಎಲ್ಲಾ ಹಾಡುಗಳ ಪ್ರಕಾರ ದಾಖಲು ಮಾಡಲಾಗಿದೆ.

2000ಕ್ಕೂ ಹೆಚ್ಚು ವಿದ್ಯಾರ್ಥಿಗಳ ಜ್ಞಾನ ದೇಗುಲ!

ಮೊದಲ 15 ವರ್ಷ ಶಿಕ್ಷಕರಿಗೆ ಬಿಡಿಗಾಸು ಬಂದಿರಲಿಲ್ಲ, ಆಗ ಅಂಟಿಗೆ ಪಂಟಿಗೆ ಮಾಡಿ ಗ್ರಾಮಸ್ಥರು ಶಾಲೆಯ ಅಭಿವೃದ್ಧಿಗೆ ಸಹಕರಿಸಿದ್ದರು. ಅಂದಿನ ಶಿಕ್ಷಕರು ನಿಸ್ವಾರ್ಥ ಸೇವೆ ಮಾಡಿದ್ದರು. ಬಳಿಕ ಸರ್ಕಾರದ ಅನುದಾನಿತ ಶಾಲೆಯಾಗಿ ಈ ಶಾಲೆ ಪರಿವರ್ತನೆ ಆಯಿತು.
ಸರ್ಕಾರ ಶಿಕ್ಷಕರಿಗೆ ಸಂಬಳ ಹಾಗೂ ಶಾಲೆಗೆ ಸೌಲಭ್ಯ ನೀಡಿತು. ಹೆಚ್ಚೇನೂ ಸೌಲಭ್ಯವಿಲ್ಲದ ಭಂಡಿಗಡಿ ಶಾಲೆಗೆ ಶಕಟಪುರಂ ಮಠ ಕಟ್ಟಡ ನಿರ್ಮಾಣಕ್ಕೆ ಕೈ ಜೋಡಿಸಿತು. ಸರ್ಕಾರದಿಂದ ಹಾಸ್ಟೆಲ್ ಮಂಜೂರಾಯಿತು. ಈಗ ಶಾಲೆ ಅಭಿವೃದ್ಧಿ ಆಗುತ್ತಿದೆ.
30 ವರ್ಷದಲ್ಲಿ ಸುಮಾರು 2000 ಅಧಿಕ ವಿದ್ಯಾರ್ಥಿಗಳು ಇಲ್ಲಿ ಓದಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಅದರಲ್ಲಿ ಅನೇಕರು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ. ಅನೇಕರು ಹಳ್ಳಿಯಲ್ಲೇ ಅನೇಕ ಕ್ಷೇತ್ರದಲ್ಲಿದ್ದಾರೆ. ಹಳೆ ವಿದ್ಯಾರ್ಥಿ ಸಂಘವನ್ನು ಕಟ್ಟಿ ಅವರೂ ಶಾಲೆ ಅಭಿವೃದ್ಧಿಗೆ ಸಹಾಯ ಮಾಡುತ್ತಿದ್ದಾರೆ.

ವಾರ್ಷಿಕೋತ್ಸವದ ಸಂಭ್ರಮ: ಮಕ್ಕಳಿಗೆ ಗೌರವ

Antige pintige in Durgaparameshawari Highschool Bandigadi


ಪ್ರೌಢಶಾಲೆಯ ಶೈಕ್ಷಣಿಕ ಸಮಿತಿ ಅಧ್ಯಕ್ಷರಾದ ಕೆ.ಕೆ ಸಾಯಿನಾಥ್ ಉದ್ಘಾಟಿಸಿದ್ದು, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಾಗಶ್ರೀ ಟೈಲರಿಂಗ್ ತರಬೇತಿಯನ್ನು ಉದ್ಘಾಟಿಸಿದರು. ಎಸ್ ಡಿ ಎಂ ಸಿ ಅಧ್ಯಕ್ಷರಾದ ಎಚ್ ಪಿ ಮಹೇಂದ್ರ ಹೊಸೂರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಜಿನೇಶ್ ಇರ್ವತ್ತೂರು ಕ್ರಿಯೇಟಿವ್ ಮೀಡಿಯಾ ಕಾರ್ಕಳ ನಿರ್ಮಿತ ‘ನಮ್ಮ ಭಂಡಿಗಡಿ’ ಯೂಟ್ಯೂಬ್ ಚಾನೆಲ್ ಉದ್ಘಾಟಿಸಿದರು. ಆಂಟಿಗೆ ಪಂಟಿಗೆಪದಗಳ ಸಂಗ್ರಹ ಕೃತಿ ಸಾಂಕೇತಿಕ ಬಿಡುಗಡೆಯನ್ನು ಕ್ರಿಯೇಟಿವ್ ಪಿಯು ಕಾಲೇಜಿನ ಸಂಸ್ಥಾಪಕ ನಿರ್ದೇಶಕರಾದ ಅಶ್ವತ್ ಎಸ್ ಎಲ್ ನಡೆಸಲಿದ್ದಾರೆ. ಶ್ರೀ ಕ್ಷೇತ್ರ ಶಕಟಪುರಂ ವ್ಯವಸ್ಥಾಪಕರಾದ ರಾಘವನ್ ಅಂಟಿಗೆ ಪಂಟಿಗೆ ಕಲಾವಿದರಿಗೆ ಗೌರವಾರ್ಪಣೆ ಮಾಡಿದರು
ರಾಜ್ಯಮಟ್ಟದಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನವನ್ನು ಕೊಪ್ಪ ಪಿಸಿಎಆರ್ಡಿ ಬ್ಯಾಂಕ್ ಅಧ್ಯಕ್ಷರಾದ ಎಚ್.ಎಸ್ ಇನೇಶ್ ನೆರವೇರಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಪ್ರೌಢಶಾಲೆ ಕಟ್ಟಡ ಅಭಿವೃದ್ಧಿ ಸಮಿತಿಯ ಖಜಾಂಚಿ ಬಿ ಎನ್ ಭಿಷೇಜ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷರಾದ ಎಚ್.ಎಂ ರವಿಕಾಂತ್ ಅಭಿನಂದನಾ ಭಾಷಣ ಮಾಡಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಹಮ್ಮದ್ ಹುಸೇನ್ ಗಣಿತ ಮಾದರಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು. ಹರಿಹರಪುರ ಕಸಾಪ ಅಧ್ಯಕ್ಷರಾದ ವೈದ್ಯ ಬಿ ಆರ್ ಅಂಬರೀಶ್ ವಿಜ್ಞಾನ ಮಾದರಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ರಮೇಶ್ ಇ.ಜಿ ದತ್ತ ನಿಧಿ ವಿತರಣೆ ಮಾಡಿದರು.ಮುಖ್ಯ ಅತಿಥಿಗಳಾಗಿ ಎಸ್ಪಿಎಂಸಿ ಸದಸ್ಯರಾದ ಅನ್ನಪೂರ್ಣ ಮಹೇಶ್, ಗ್ರಾಮ ಪಂಚಾಯತ್ ಸದಸ್ಯರಾದ ಮಮತಾ, ಶ್ರೀಧರ್, ಚಂದಮ್ಮ, ರಮೇಶ್, ಜ್ಯೋತಿ, ಎಪಿಎಂ ಸಿ ನಿರ್ದೇಶಕರಾದ ವಿ ಸಿ ರಾಘವೇಂದ್ರ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಪ್ರೇಮ್ ಕುಮಾರ್, ರಾಜ್ಯಮಟ್ಟದ ಖೋ ಖೋ ಕ್ರೀಡಾಪಟು ಸತ್ಯನಾರಾಯಣ ಎಸ್ ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಎಸ್ಡಿ ಎಂ ಸಿ ಸದಸ್ಯರಾದ ಉಮೇಶ್, ಪ್ರಕಾಶ್, ವನಿತಾ, ಸರಸ್ವತಿ, ರವಿ, ರಾಜಶೇಖರ್, ಚಂದ್ರಹಾಂಡ , ಎಸ್ ಡಿ ಎಂ ಸಿ ನಾಮನಿರ್ದೇಶಿತರಾದ ದಿನೇಶ್ ಈ ಎನ್, ಗೀತಾ, ರಜನಿ, ಶಿಕ್ಷಕರು, ಗ್ರಾಮಸ್ಥರು, ಪೋಷಕರು ಇತರರು ಇದ್ದರು. ಶಾಲೆಯ ಸಾಧಕ ಹಳೆಯ ವಿದ್ಯಾರ್ಥಿಗಳಾದ ರೇಖಾ ಎಸ್ ಎಲ್, ಸುಬ್ರಮಣ್ಯ ಇವರು ಉಪಸ್ಥಿತರಿದ್ದರು.

Categories
Uncategorized

ಸಮಸ್ತ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು

ವಿದ್ಯೆಗೆ ಸರಸ್ವತಿ
ಸಂಪತ್ತಿಗೆ ಲಕ್ಷ್ಮಿ
ಶಕ್ತಿಗೆ ಪಾರ್ವತಿ

ಎಲ್ಲಕ್ಕೂ ಮಿಗಿಲಾಗಿ ಜನ್ಮ ಕೊಟ್ಟವಳು ಹೆಣ್ಣು

ಭೂಮಿ ತಾಯಿಯೂ ಹೆಣ್ಣು..

ಇಂತಹ ಲೋಕ ಮಾತೆಗೆ ಕೋಟಿ ನಮನ..!

ತಾಯಿಯಾಗಿ, ಅಕ್ಕ ತಂಗಿಯಾಗಿ, ಸ್ನೇಹಿತೆಯಾಗಿ, ಸಂಗಾತಿಯಾಗಿ, ತ್ಯಾಗ ಮಯಿಯಾಗಿ ಅಕ್ಕರೆಯ ಪ್ರೀತಿ, ವಾತ್ಸಲ್ಯ ನೀಡುವ…

ಸಮಸ್ತ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು

Categories
ರಾಜ್ಯ

ಮಾ.24ರಿಂದ ಸಾರಿಗೆ ನೌಕರರ ಮುಷ್ಕರ!

  • ಸರಕಾರಕ್ಕೆ ಮತ್ತೊಂದು ತಲೆನೋವು
  • ಮಾ.24ರಿಂದ ಅನಿರ್ದಿಷ್ಟಾವಧಿ ಧರಣಿ

NAMMUR EXPRESS NEWS
ಬೆಂಗಳೂರು: ಸರ್ಕಾರಿ ನೌಕರರ ನಂತರ ಇದೀಗ ಸಾರಿಗೆ ನೌಕರರು ಮುಷ್ಕರ ಹೂಡಲು ಮುಂದಾಗಿದ್ದು, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾ.24ರಿಂದ ಅನಿರ್ದಿಷ್ಟಾವಧಿ ಧರಣಿ ಮಾಡಲು ಸಾರಿಗೆ ನೌಕರರು ನಿರ್ಧರಿಸಿದ್ದಾರೆ.
ಸಾರಿಗೆ ನಿಗಮ ನೌಕರರ ಸಮಾನ ಮನಸ್ಕರ ವೇದಿಕೆಯಿಂದ ಹೋರಾಟ ನಡೆಯಲಿದ್ದು, ಧರಣಿ ಸಂಬಂಧ ಇಂದು ಕಾರ್ಮಿಕ ಇಲಾಖೆಗೆ ಸಾರಿಗೆ ನೌಕರರು ನೋಟಿಸ್ ನೀಡಲಿದ್ದಾರೆ. ರಾಜ್ಯದ ನಾಲ್ಕು ನಿಗಮಗಳ ಬಸ್‌ಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಲಾಗಿದೆ.
ಸಾರಿಗೆ ನೌಕರರ ಕೂಟ ಈಗಾಗಲೇ ಎರಡು ಬಾರಿ ಮುಷ್ಕರ ಮಾಡಿದೆ. ನಾಲ್ಕು ದಿನ ಫ್ರೀಡಂ ಪಾರ್ಕ್‌ನಲ್ಲಿ ಸಾರಿಗೆ ನೌಕರರು ಪ್ರತಿಭಟನೆ ನಡೆಸಿದ್ದರು.
ನಾಳೆಯಿಂದ ಎಲ್ಲ ಘಟಕಗಳಲ್ಲಿ ಮುಷ್ಕರದ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಈ ಹಿಂದೆ ಸರ್ಕಾರ ಕೊಟ್ಟ ಭರವಸೆ ಈಡೇರಿಸಬೇಕು ಎಂದು ಒತ್ತಾಯಿಸಲಿದ್ದಾರೆ. ಈ ಹಿಂದೆ ಸಾರಿಗೆ ನೌಕರರಿಗೆ ಸರ್ಕಾರ ಭರವಸೆಯನ್ನ ನೀಡಿತ್ತು. ಆದರೆ ವೇತನ ವಿಚಾರವಾಗಿ ಕೊಟ್ಟ ಮಾತನ್ನ ಉಳಿಸಿಕೊಳ್ಳಲಿಲ್ಲ ಎಂದು ಸಾರಿಗೆ ನೌಕರರ ಯೂನಿಯನ್ ಹೇಳಿದೆ.
ಆರನೇ ವೇತನ ಆಯೋಗದ ಮಾದರಿಯಲ್ಲಿ ವೇತನ, ಮುಷ್ಕರದ ಸಮಯದಲ್ಲಿ ಮಾಡಿರುವ ವಜಾ, ಅಮಾನತು, ಪೋಲಿಸ್ ಕೇಸ್ ಹಿಂಪಡೆಯುವುದು, ಸಾರಿಗೆ ನೌಕರರ ಸಂಘಕ್ಕೆ ಚುನಾವಣೆ ನಡೆಸುವುದು ನೌಕರರ ಪ್ರಮುಖ ಬೇಡಿಕೆಗಳು, ಸಾರಿಗೆ ನಿಗಮಗಳ ಖಾಸಗೀಕರಣ, ಎಲೆಕ್ನಿಕ್ ಬಸ್‌ಗಳ ನಿರ್ವಹಣೆ ಖಾಸಗೀಕರಣ, ಹೊರಗುತ್ತಿಗೆ ಆಧಾರದ ಮೇಲೆ ನೌಕರರ ನೇಮಕವನ್ನು ಸಾರಿಗೆ ನೌಕರರು ವಿರೋಧಿಸುತ್ತಿದ್ದಾರೆ.

Categories
ರಾಜಕೀಯ

ಮಲೆನಾಡಿನ ದನಿ ಹರತಾಳು ಹಾಲಪ್ಪ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು

NAMMUR EXPRESS NEWS
ಸಾಗರ, ಹೊಸನಗರ ಕ್ಷೇತ್ರದ ಶಾಸಕರು, ರಾಜ್ಯದ ಮಾಜಿ ಸಚಿವರೂ, ಎಂಎಸ್ಐಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು
ಹರತಾಳು ಹಾಲಪ್ಪ ಶಿವಮೊಗ್ಗ ಜಿಲ್ಲೆಯ ಸಾಗರ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕ. ಮಲೆನಾಡು ಶೈಲಿಯ ರಾಜಕಾರಣಿಯಾಗಿದ್ದು ಈಡಿಗ ಸಮುದಾಯದ ನಾಯಕರಾಗಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾಗಿದ್ದರು. 28 ಜುಲೈ 2020 ರಂದು ಅವರನ್ನು MSIL ನ ಅಧ್ಯಕ್ಷರನ್ನಾಗಿ ನೇಮಕವಾಗಿದ್ದಾರೆ.
ಸಾಗರ ಶಾಸಕರಾಗಿ ಮಲೆನಾಡು ಭಾಗದ ಸಮಸ್ಯೆಗಳನ್ನು ವಿಧಾನ ಸಭೆಯಲ್ಲಿ ಪ್ರಸ್ತಾಪ ಮಾಡುವ ಮೂಲಕ ಅನೇಕ ಸಮಸ್ಯೆಗಳಿಗೆ ನ್ಯಾಯ ಕೊಡಿಸಿದ್ದಾರೆ.
ಬಂಗಾರಪ್ಪ ಗರಡಿಯಲ್ಲಿ ಬೆಳೆದ ಹಾಲಪ್ಪ ಅವರು ಅಪ್ಪಟ ಗ್ರಾಮೀಣ ಶೈಲಿಯ ನಾಯಕರು. ಎಲ್ಲರ ಕಷ್ಟ ಸುಖದಲ್ಲಿ ಜೊತೆಯಾಗಿರುವ ಹಾಲಪ್ಪ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

Categories
ರಾಜಕೀಯ

ಕಾಫಿ ನಾಡಿನ ಕ್ಷೇತ್ರಗಳಿಗೆ ಪ್ರಚಾರ ಸಮಿತಿ: ಹೊಸ ಶಕ್ತಿ!

  • 5 ಕ್ಷೇತ್ರಗಳ ಚುನಾವಣೆಗೆ ಪ್ರಚಾರ ಸಮಿತಿ ಸಂಯೋಜಕರ ನೇಮಕ
  • ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಸಲ ಯಾರದು ಮೇಲುಗೈ?

NAMMUR EXPRESS NEWS
ಚಿಕ್ಕಮಗಳೂರು: ರಾಜ್ಯದ ವಿಧಾನ ಸಭಾ ಚುನಾವಣೆ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ 5 ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿಗೆ ವಿಧಾನ ಸಭಾ ಕ್ಷೇತ್ರವಾರು ಸಂಯೋಜಕರನ್ನಾಗಿ ನೇಮಿಸಲಾಗಿದೆ.
2023ರ ವಿಧಾನಸಭೆ ಚುನಾವಣೆಗೆ ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಸಂಯೋಜಕರಾಗಿ ಶೃಂಗೇರಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು ಹಾಗು ಬೆಟ್ಟಗೆರೆ ಕೃಷಿಪತ್ತಿನ ಸಹಕಾರ ಸಂಘ ನಿಯಮಿತ ತೆಕ್ಕೂರು ಕೆ ಎಂ ರಮೇಶ್ ಭಟ್ ಆಯ್ಕೆಯಾಗಿದ್ದಾರೆ. ಚಿಕ್ಕಮಗಳೂರು ಕ್ಷೇತ್ರದ ಪ್ರಚಾರ ಸಮಿತಿಯ ಸಂಯೋಜಕರಾಗಿ ಕೆ. ಆರ್ ಯೋಗಿಶ್, ಕಡೂರು ಕ್ಷೇತ್ರದ ಪ್ರಚಾರ ಸಮಿತಿಯ ಸಂಯೋಜಕರಾಗಿ ಎಂ.ಕೆ. ಮಹೇಶ್ವರಪ್ಪ, ಮೂಡಿಗೆರೆ ಕ್ಷೇತ್ರದ ಪ್ರಚಾರ ಸಮಿತಿಯ ಸಂಯೋಜಕರಾಗಿ ಡಿ.ಕೆ.ಕೇಶವ ಆಯ್ಕೆಯಾಗಿದ್ದಾರೆ.
ಶೃಂಗೇರಿ ಕ್ಷೇತ್ರ ಹೊರತುಪಡಿಸಿ ಮಿಕ್ಕ 4 ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. 2023ರ ಚುನಾವಣೆ ಮೇಲೆ ಎಲ್ಲರ ಗಮನ ಇದೆ.

ಓವೈಸಿ ಪಕ್ಷದ ಮೊದಲ ಅಭ್ಯರ್ಥಿಗಳ ಪಟ್ಟಿ ಬಂತು!

  • ಮೂರು ಪಕ್ಷಕ್ಕೂ ಸಡ್ಡು ಹೊಡೆದ ಓವೈಸಿ

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಗೆ ದಿನಗಣನೆ ಆರಂಭವಾಗಿದೆ. ಈ ನಡುವೆ ವಿಧಾನಸಭೆ ಚುನಾವಣೆಗೆ ಆಲ್ ಇಂಡಿಯಾ ಮಜ್ಜಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್‌ ಮೂರು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇನ್ನುಳಿದ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗುತ್ತಿದೆ.
ಆಲ್ ಇಂಡಿಯಾ ಮಜ್ಜಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ 3 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಾರ್ಚ್ 5 ರಂದು ಪ್ರಕಟಿಸಿದ್ದಾರೆ. ಬೆಳಗಾವಿ ಉತ್ತರದಿಂದ, ಲತೀಫ್ಘಾನ್ ಅಮೀರ್ಖಾನ್ ಪಠಾಣ್, ಹುಬ್ಬಳ್ಳಿ-ಧಾರವಾಡ ಪೂರ್ವದಿಂದ ದುರ್ಗಪ್ಪ ಕಾಶಪ್ಪ ಬಿಜವಾಡ ಮತ್ತು ಬಿಜಾಪುರ ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದಿಂದ ಅಲ್ಲಾಬಕ್ ಮೆಹಬೂಬ್ ಸಾಬ್ ಸ್ಪರ್ಧಿಸಲಿದ್ದಾರೆ. ಟಿಕೆಟ್ ಘೋಷಣೆ ಬೆನ್ನಲ್ಲೆ ದುರ್ಗಪ್ಪ ಕಾಶಪ್ಪ ಬಿಜವಾಡ ಬೃಹತ್ ಬೈಕ್ ರ್ಯಾಲಿ ನಡೆಸಿದ್ದಾರೆ. ಎಐಎಂಐಎಂ ಈ ಹಿಂದೆ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಕಾರ್ಪೂರೇಟ್ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು.
ಈ ಬಗ್ಗೆ ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಮಾತನಾಡಿ, ಕರ್ನಾಟಕ ಮತ್ತು ರಾಜಸ್ಥಾನದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಈ ಸ್ಪರ್ಧೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಸಣ್ಣ ಪೆಟ್ಟು ಕೊಡಲಿದೆ.