Categories
ರಾಜ್ಯ

ಗೋ ಪ್ರೇಮ ಬರೀ ರಾಜಕೀಯ ನಾಟಕವೇ..?

  • ಗೋ ರಕ್ಷಣೆಯ ಹೆಸರಿನಲ್ಲಿ ಅಧಿಕಾರ ಹಿಡಿದ ಸರ್ಕಾರ
  • ವೈದ್ಯಾಧಿಕಾರಿಗಳ ಸಹಾಯಕ ಸಿಬ್ಬಂದಿಗಳಿಗೆ ಭದ್ರತೆ ಇಲ್ಲ
  • ಪಶು ಇಲಾಖೆಯಲ್ಲಿ ಭಾರೀ ಗೋಲ್ ಮಾಲ್..!?

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನಲ್ಲಿ ಸುಮಾರು 17 ಜನ ಹಾಗೂ ರಾಜ್ಯದ್ಯಂತ ಸಾವಿರಾರು ಜನ ಪಶು ಆಸ್ಪತ್ರೆಗಳಲ್ಲಿ ಡಿ ಗ್ರೂಪ್ ನೌಕರರಾಗಿ ಸೇವೆ ಸಲ್ಲಿಸುತ್ತಾ ಬರುತ್ತಿದದ್ದು ಅವರಿಗೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಇನ್ನು ಪಶು ಇಲಾಖೆಯಲ್ಲಿ ವರ್ಷಕ್ಕೆ ಎರಡು ಬಾರಿ ಕಾಲುಬಾಯಿ ರೋಗಕ್ಕೆ ವ್ಯಾಕ್ಸಿನೇಷನ್, ಮೂರು ತಿಂಗಳಿಗೆ ಒಮ್ಮೆ ಬ್ರುಸೊಲ್ಲಾ ವ್ಯಾಕ್ಸಿನೇಷನ್, ಚರ್ಮ ಗಂಟು ರೋಗಕ್ಕೆ ವ್ಯಾಕ್ಸಿನೇಷನ್ ತುರ್ತು ಚಿಕಿತ್ಸೆಗಳು ಈ ರೀತಿಯಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ.
ವ್ಯಾಕ್ಸಿನೇಷನ್ ಮಾಡುವಂತ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿ ಮನೆಗಳಿಗೆ ಓಡಾಡಲು ಕನಿಷ್ಠ ವರ್ಷಕ್ಕೆ ಒಂದು ಲಕ್ಷ ರೂ ಗಳು ಪೆಟ್ರೋಲ್ ಗೆ ಖರ್ಚಾಗುತ್ತದೆ ಎನ್ನುವುದು ಸಂಬಂಧಪಟ್ಟ ನೌಕರರಿಂದ ಮಾಹಿತಿ ಇದೆ. ಹಾಗೆಯೇ ವರ್ಷಕ್ಕೆ ಬೆಂಗಳೂರಿನಲ್ಲಿ ಇರುವಂತಹ ಕೇಂದ್ರ ಕಚೇರಿಗೆ ಸುಮಾರು 15 ಸಾವಿರ ರೂಗಳು ಲಂಚವನ್ನು ನೀಡದಿದ್ದರೆ ಈವೇತನವೂ ಕೂಡ ಕಾಲಕಾಲಕ್ಕೆ ಸರಿಯಾಗಿ ಸಿಗುವುದಿಲ್ಲ ಎನ್ನುವುದು ನೌಕರರ ಅಳಲಾಗಿದೆ. ಅಷ್ಟಕ್ಕೂ ಈ ಸಿಬ್ಬಂದಿಗಳಿಗೆ ಮಾಸಿಕವಾಗಿ ನೀಡುತ್ತಿರುವುದು ಬರಿ 12500 ರೂ ಗಳು ಭಾನುವಾರವೂ ಕೂಡ ಕೆಲಸ ಮಾಡಬೇಕಾಗುತ್ತದೆ ಇವರ ಕಷ್ಟಗಳನ್ನು ಮೇಲಾಧಿಕಾರಿಗಳೊಂದಿಗೆ ಹೇಳಿಕೊಂಡರೆ ಕೆಲಸದಿಂದ ವಜಾ ಮಾಡುವುದಾಗಿ ಬೆದರಿಕೆ ಹಾಕುತ್ತಾರೆ ಎನ್ನುವುದು ಸಿಬ್ಬಂದಿಗಳ ಅಳಲಾಗಿದೆ.
ಗೋವುಗಳ ಹೆಸರಿನಲ್ಲಿ ಅಧಿಕಾರ ಹಿಡಿದಂತಹ ಈ ಸರ್ಕಾರದಲ್ಲಿ ಗೋರಕ್ಷಕರಿಗೆ ರಕ್ಷಣೆ ಇಲ್ಲವಾಗಿದೆ, ಗೋವುಗಳ ಆಹಾರವು ಕೂಡ ಗಗನಕ್ಕೇರಿದೆ, ಎಷ್ಟೋ ಜನ ಸಿಬ್ಬಂದಿಗಳು ಇಂದು ನಾಳೆ ಸಂಬಳ ಜಾಸ್ತಿ ಆಗುತ್ತದೆ ಕುಟುಂಬಕ್ಕೆ ಆಸರೆಯಾಗುತ್ತದೆ ಎಂದು ಎಲ್ಲವನ್ನು ಸಹಿಸಿಕೊಂಡು ಕೆಲಸ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸುಮಾರು ಆರು ತಿಂಗಳ ವೇತನವನ್ನು ಸರ್ಕಾರ ಬಿಡುಗಡೆ ಮಾಡಿರುವುದಿಲ್ಲ ಆದ್ದರಿಂದ ಸರ್ಕಾರವು ಕೂಡಲೇ ನೀಡುತ್ತಿರುವಂತಹ ಗೌರವಧನವನ್ನು ಬಿಡುಗಡೆಗೊಳಿಸುವುದರ ಜೊತೆಗೆ ಕನಿಷ್ಠ ಮಾಸಿಕವಾಗಿ 20,000 ರೂಗಳ ವೇತನವನ್ನು ಮತ್ತು ಪಶುಗಳಿಗೆ ಚುಚ್ಚುಮದ್ದು ನೀಡುವಂತಹ ಸಂದರ್ಭದಲ್ಲಿ ತಗಲುವ ಓಡಾಟದ ಭತ್ಯೆಯನ್ನು ನೀಡಬೇಕು ಎಂಬ ಅಗ್ರಹ ವ್ಯಕ್ತವಾಗಿದೆ.

Categories
ರಾಜಕೀಯ

ಜಿ.ಪಂ, ತಾ.ಪಂ ಚುನಾವಣೆಗೆ ಅಖಾಡ ಸಜ್ಜು!

  • ವಿಧಾನ ಸಭೆ ಚುನಾವಣೆ ಮುಗಿಯುತ್ತಿದ್ದಂತೆ ಚುನಾವಣೆ
  • ಕ್ಷೇತ್ರ ಪುನರ್‌ವಿಂಗಡಣೆ, ಅಧಿಸೂಚನೆ ಹೊರಡಿಸಿದ ಸರ್ಕಾರ

NAMMUR EXPRESS NEWS
ಬೆಂಗಳೂರು: ರಾಜ್ಯದ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳನ್ನು ಪುನರ್ ವಿಂಗಡಿಸಿ ಹಾಗೂ ಸದಸ್ಯರ ಸಂಖ್ಯೆ ನಿಗದಿ ಮಾಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ರಾಜ್ಯದಲ್ಲಿ ಸ್ಥಳೀಯ ಆಡಳಿತದ ಚುನಾವಣೆಗೂ ವೇದಿಕೆ ಸಿದ್ಧಗೊಳ್ಳುತ್ತಿದೆ.
ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ಕ್ಷೇತ್ರಗಳನ್ನು ಪುನರ್‌ವಿಂಗಡಿಸಿ ಹಾಗೂ ಸದಸ್ಯರ ಸಂಖ್ಯೆ ನಿಗದಿಪಡಿಸಿ ಮಾಡಿದ್ದ ಶಿಫಾರಸು ಗಳನ್ನು ಸರ್ಕಾರ ಅಂಗೀಕರಿಸಿದೆ. ರಾಜ್ಯದ ಹಲವು ಗ್ರಾಮಗಳು ನಗರ ಪಾಲಿಕೆ, ನಗರ ಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಗಳಿಗೆ ಸೇರಿವೆ. ಕೆಲ ಗ್ರಾಮಗಳನ್ನು ಸೇರಿಸಿ ಪಟ್ಟಣ ಪಂಚಾಯಿತಿಗಳಾಗಿ ರೂಪಿಸಲಾಗಿದೆ. ಇಂತಹ ಗ್ರಾಮಗಳನ್ನು ಕೈಬಿಟ್ಟು ಕ್ಷೇತ್ರಗಳನ್ನು ಪುನರ್ ವಿಂಗಡಿಸಲಾಗಿದೆ. ಕೆಲ ಜಿಲ್ಲೆಗಳ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ, ಸದಸ್ಯರ ಸಂಖ್ಯೆಯಲ್ಲಿ ಕಡಿಮೆಯಾಗಿವೆ. ಕೆಲ ಜಿಲ್ಲೆ ಗಳಲ್ಲಿ ಹೆಚ್ಚಾಗಿವೆ. ಹಲವು ಕ್ಷೇತ್ರಗಳ ಸೀಮಾಗಡಿಯಲ್ಲಿ ವ್ಯತ್ಯಾಸವಾದರೂ, ಕ್ಷೇತ್ರ, ಸದಸ್ಯರ ಸಂಖ್ಯೆ ಯಥಾ ಸ್ಥಿತಿಯಲ್ಲಿವೆ.

ಎಷ್ಟು ಜನಸಂಖ್ಯೆಗೆ ಇಷ್ಟು ಸ್ಥಾನ!?

ಮೊದಲು 40 ಸಾವಿರ ಜನ ಸಂಖ್ಯೆಗೆ ಒಂದು ಜಿಲ್ಲಾ ಪಂಚಾಯಿತಿ ಕ್ಷೇತ್ರ, 10 ಸಾವಿರ ಜನಸಂಖ್ಯೆಗೆ ಒಂದು ತಾಲ್ಲೂಕು ಪಂಚಾಯಿತಿ ಕ್ಷೇತ್ರ ನಗದಿ ಮಾಡಲಾಗಿತ್ತು. ಹೊಸ ಆದೇಶದ ನಂತರ 35 ಸಾವಿರ ಜನ ಸಂಖ್ಯೆಗೆ ಒಂದು ಜಿಲ್ಲಾ ಪಂಚಾಯಿತಿ, 12,500 ಜನ ಸಂಖ್ಯೆಗೆ ಒಂದು ತಾಲ್ಲೂಕು ಪಂಚಾಯಿತಿ ಕ್ಷೇತ್ರ ರಚಿಸಿಲಾಗಿದೆ.

Categories
ತೀರ್ಥಹಳ್ಳಿ

ಒಂದಾದ್ರು ಕಿಮ್ಮನೆ, ಆರ್.ಎಂ.ಮಂಜುನಾಥ ಗೌಡ!

  • ಇಬ್ಬರ ನಡುವೆ ಹೈಕಮಾಂಡ್ ಸಂಧಾನ ಯಶಸ್ವಿ
  • ಎಲ್ಲಾ ಕಾರ್ಯಕ್ರಮದಲ್ಲೂ ಇಬ್ಬರೂ ಒಟ್ಟಿಗೆ
  • ಇಬ್ಬರೂ ನೆಟ್ಟಾಗಾದ್ರೆ ಮಾತ್ರ ಉಳಿಗಾಲ: ಕಾರ್ಯಕರ್ತರು

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಧಾನಕ್ಕೆ ಬಲಗೊಳ್ಳುತ್ತಿದೆ. ಅಲ್ಲದೆ ಫಿನಿಕ್ಸ್ ಅಂತೆ ಪುಟಿದೇಳುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
ಇಬ್ಬರೂ ನಾಯಕರಾದ ಕಿಮ್ಮನೆ ಮತ್ತು ಮಂಜುನಾಥ ಗೌಡ ಒಟ್ಟಿಗೆ ಹಾಗೂ ಯಾವುದೇ ಭಿನ್ನಾಭಿಪ್ರಾಯ ಇಲ್ಲದೆ ಪ್ರಚಾರದಲ್ಲಿ ತೊಡಗಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ಪ್ರತಿಭಟನೆ, ಪ್ರಬಲ ಮುಖಂಡರು ,ಪ್ರಮುಖ ಸಂಘಟಕರು, ಮತ್ತಿಮನೆ ಮಾಜಿ ಗ್ರಾಮ ಪಂಚಾಯತ್ ಸದಸ್ಯರು,ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಅರಮನೆ ಕೊಪ್ಪ ಗೋಪಾಲ ರವರು , ಜೆಡಿಎಸ್ ನ‌ ಪ್ರಮುಖ ಮುಖಂಡರಾದ ಶಶಿಧರ್ ಬಿಜೆಪಿ, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಸಂದರ್ಭದಲ್ಲಿ ಮಾಜಿ ಸಚಿವರು, ಕೆಪಿಸಿಸಿ ವಕ್ತಾರರು ಆದ ಶ್ರೀಯುತ ಕಿಮ್ಮನೆ ರತ್ನಾಕರ್ ಮತ್ತು ಕೆಪಿಸಿಸಿ ಸಹಕಾರಿ ಘಟಕದ ಸಂಚಾಲಕರು ಆದ ಅರ್ ಎಮ್ ಮಂಜುನಾಥಗೌಡ ಒಟ್ಟಾಗಿ ಕಾಣಿಸಿಕೊಂಡಿ ದ್ದಾರೆ.
ಒಬ್ಬರು ಎಂಎಲ್ಎ ಒಬ್ಬರು ಎಂಎಲ್ಸಿ ಮಾಡ್ತೇವೆ ಎಂಬ ಡಿಕೆಶಿ ಭರವಸೆ ಬಳಿಕ ಇಬ್ಬರೂ ಒಟ್ಟಾಗುವ ಅನಿವಾರ್ಯತೆ ಎದುರಾಗಿದೆ. ಅಲ್ಲದೆ ಕಾರ್ಯಕರ್ತರ ಆಸೆ ಕೂಡ ಅದೇ ಆಗಿದೆ. ಯಾರಿಗೆ ಟಿಕೆಟ್ ಸಿಕ್ಕರೂ ಇಬ್ಬರೂ ಒಟ್ಟಿಗೆ ಸೇರಿ ಕೆಲಸ ಮಾಡಿದರೆ ಕಾಂಗ್ರೆಸ್ ಉದ್ದಾರ ಆಗಬಹುದು ಎಂಬ ಕಾರ್ಯಕರ್ತರ ಮಾತು ನಾಯಕರ ಕಿವಿಗೆ ತಾಗಿದೆ ಎಂದು ಹೇಳಲಾಗಿದೆ.

Categories
ರಾಜಕೀಯ

ದಾವಣಗೆರೆಯಲ್ಲಿ ಕೇಜ್ರಿವಾಲ್ ಹವಾ..!

  • ಆಮ್ ಆದ್ಮಿ ಪಕ್ಷದ ಬೃಹತ್ ಸಮಾವೇಶಕ್ಕೆ ಜನವೋ ಜನ
  • ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಅರವಿಂದ್ ಆಕ್ರೋಶ

NAMMUR EXPRESS NEWS
ದಾವಣಗೆರೆ: ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಮತ್ತು ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರು ದಾವಣಗೆರೆಯಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಪಾಲ್ಗೊಂಡು ರಾಜ್ಯದ ಆಮ್ ಆದ್ಮಿ ಅಭ್ಯರ್ಥಿಗಳು, ಮುಖಂಡರು, ಕಾರ್ಯಕರ್ತರಿಗೆ ಬಲ ತುಂಬಿದರು.
ದಾವಣಗೆರೆ ಸರ್ಕಾರಿ ಹೈಸ್ಕೂಲ್, ಮೈದಾನದಲ್ಲಿ ಆಮ್ ಆದ್ಮಿ ಪಾರ್ಟಿಯ ರಾಜ್ಯ ಮಟ್ಟದ ಬೃಹತ್ ಸಮಾವೇಶ ಉದ್ಘಾಟನೆ ಮಾಡಿ ಕನ್ನಡದಲ್ಲೇ ಮಾತನಾಡಿದ ಅರವಿಂದ್ ಕೇಜ್ರಿವಾಲ್, ಬಿಜೆಪಿ ಸರ್ಕಾರದ 40% ಕಮಿಷನ್ ದಂಧೆ ಬಗ್ಗೆ ಕಿಡಿಕಾರಿದರು.
ದೆಹಲಿಯಲ್ಲಿ ಉಚಿತ ಉತ್ತಮ ಶಿಕ್ಷಣ, ಉಚಿತ ಅತ್ಯುತ್ತಮ ಚಿಕಿತ್ಸೆ, ಜೀರೋ ಕರೆಂಟ್ ಬಿಲ್, ವಿಶ್ವ ದರ್ಜೆಯ ಆಸ್ಪತ್ರೆಗಳು, ಜೀರೋ ವಾಟರ್ ಬಿಲ್, ಉಚಿತ ಬಸ್ ಪ್ರಯಾಣ, ಹೀಗೆ ನವದೆಹಲಿಯಲ್ಲಿ ಸಮಸ್ತ ವಾದ ಆಡಳಿತವನ್ನು ನೀಡಿ ಜನತೆಯ ಆಶೋತ್ತರಗಳಿಗೆ ಸ್ಪಂದಿಸಿದ್ದೇವೆ. ಆದರೆ ಅತೀ ಹೆಚ್ಚು ಆದಾಯ ಇರುವ ಕರ್ನಾಟಕದಲ್ಲಿ ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದರು.
ಪಂಜಾಬ್ ಮುಖ್ಯಮಂತ್ರಿಗಳಾದ ಭಗವಾನ್ ಮಾನ್, ರಾಜ್ಯ ಅಧ್ಯಕ್ಷ ಪೃಥ್ವಿ ರೆಡ್ಡಿ, ಮುಖ್ಯಮಂತ್ರಿ ಚಂದ್ರು ಸೇರಿದಂತೆ ರಾಜ್ಯದ ಮೂಲೆ ಮೂಲೆಯಿಂದ ನಾಯಕರು ಭಾಗಿಯಾಗಿದ್ದರು. ಸುಮಾರು 60 ಸಾವಿರ ಮಂದಿ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.

ತೀರ್ಥಹಳ್ಳಿಯಿಂದ ಸಮಾವೇಶಕ್ಕೆ ಜನ!

ಸುಪ್ರೀಂ ಕೋರ್ಟ್ ನ್ಯಾಯವಾದಿಗಳು, ತೀರ್ಥಹಳ್ಳಿ ಅಭ್ಯರ್ಥಿಗಳೂ ಆದ ಸಾಲೂರು ಶಿವಕುಮಾರ್ ಗೌಡ ನೇತೃತ್ವದಲ್ಲಿ ತೀರ್ಥಹಳ್ಳಿ ಕ್ಷೇತ್ರದ 300ಕ್ಕೂ ಹೆಚ್ಚು ಮಂದಿ ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದಿಂದ ತೆರಳಿದ್ದರು.

Categories
ರಾಜ್ಯ

ವಾಹನ ಕಳವಾದರೆ ಎರಡೇ ನಿಮಿಷಗಳಲ್ಲಿ ಪತ್ತೆ!

  • ಮೂರೇ ಗಂಟೆಯಲ್ಲಿ ಪಾಸ್​ಪೋರ್ಟ್​ ದೃಢೀಕರಣ: ಅಮಿತ್ ಶಾ ಭರವಸೆ
  • ಬೆಂಗಳೂರಲ್ಲಿ ಸೇಫ್ ಸಿಟಿ ಪ್ರಾಜೆಕ್ಟ್ ಕಮಾಂಡ್ ಸೆಂಟರ್​ ಉದ್ಘಾಟನೆ

NAMMUR EXPRESS NEWS
ಬೆಂಗಳೂರು: ವಾಹನ ಕಳುವಾದರೆ ಎರಡು ನಿಮಿಷದಲ್ಲಿ ಪತ್ತೆ, ಕೇವಲ 3 ಗಂಟೆಯಲ್ಲಿ ಪಾಸ್‌ಪೋರ್ಟ್‌ ಪರಿಶೀಲನೆ ಮುಗಿಯುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಹಿತಿ ನೀಡಿದರು.
ಬೆಂಗಳೂರಲ್ಲಿ ಸೇಫ್ ಸಿಟಿ ಪ್ರಾಜೆಕ್ಟ್ ಕಮಾಂಡ್ ಸೆಂಟರ್​ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಅಪರಾಧ ಮಾಡಿರುವ ಎಲ್ಲಾ ಅಪರಾಧಿಗಳ ಫಿಂಗರ್ ಪ್ರಿಂಟ್ ಲಭ್ಯವಿದ್ದು, ಆ ಮೂಲಕ ಅಪರಾಧಿ ಪತ್ತೆ ಹಚ್ಚಿ ಬಂಧನ ಮಾಡಬಹುದು. ಕರ್ನಾಟಕ ಕೂಡ ಫಿಂಗರ್ ಪ್ರಿಂಟ್ ಮೂಲಕ 1800ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಅಪರಾಧಿಗಳನ್ನು ಪತ್ತೆ ಹಚ್ಚಿದೆ. ಒಟ್ಟಿಗೆ ಕೆಲಸ ಮಾಡುವುದರಿಂದ ವೇಗವಾಗಿ ಫಲಿತಾಂಶ ಲಭ್ಯವಾಗುತ್ತಿದೆ ಎಂದು ಹೇಳಿದರು.
ICJS ಮೂಲಕ ವಿದೇಶಿ ಪ್ರಕರಣ ಲಭ್ಯವಾಗಲಿದೆ. ಇದರ ಪ್ರಯೋಗ ಕೂಡ ಮಾಡಲಾಗಿದೆ. ಈಶನ್ಯ ರಾಜ್ಯದಲ್ಲಿ ಫಲಿತಾಂಶ ಕೂಡ ಕಂಡಿದ್ದೇವೆ. ICJS ಎರಡನೇ ಪ್ರಯೋಗ ಕೂಡ ನಡೆಯುತ್ತಿದೆ. ಡೇಟಾ ಎಂಟ್ರಿ, ಡೆಟಾ ಟ್ರಾನ್ಸ್‌ಫರ್ 3,500ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ನಿಮ್ಮೆಲ್ಲರ ಕನಸು ಇಂದು ನನಸಾಗುತ್ತಿದೆ
ಚೆನೈ, ಬೆಂಗಳೂರು ಹೈಸ್ಪೀಡ್ ರೈಲ್ ಕಾರಿಡಾರ್ ಮಾಡಲಾಗಿದೆ. 275 ರಾಷ್ಟ್ರೀಯ ಹೆದ್ದಾರಿ ಬೆಂಗಳೂರು-ಮೈಸೂರು ತಲುಪಲಿದೆ. ಸ್ಪೇಸ್ ಸೆಕ್ಟರ್‌ನಲ್ಲಿ 25ರಷ್ಟು ಕೆಲಸ ನಡೆಯುತ್ತಿದೆ. ಇದೆಲ್ಲದರ ಲಾಭ ಬೆಂಗಳೂರಿಗೆ ಆಗುತ್ತಿದೆ. ವಿದೇಶಿ ನೇರ ಬಂಡವಾಳ ಹರಿದು ಬರುತ್ತಿದೆ. ಬೆಂಗಳೂರಿನ ಬಳಿ ಹೆಚ್.ಎ.ಎಲ್ ಹೆಲಿಕಾಪ್ಟರ್ ಕಾರ್ಖಾನೆ ಮೋದಿ ಉದ್ಘಾಟನೆ ಮಾಡಿದ್ದಾರೆ. ಮೇಕ್ ಇನ್ ಇಂಡಿಯಾ ಮೂಲಕ ನಿರ್ಮಾಣ ಮಾಡಲಾಗುತ್ತಿದೆ. ಒಂದೇ ಒಂದು ಪರ್ಸೆಂಟ್ ಕೂಡ ವಿದೇಶಿ ವಸ್ತು ಬಳಸುತ್ತಿಲ್ಲ. ನಿಮ್ಮೆಲ್ಲರ ಕನಸು ಇಂದು ನನಸಾಗುತ್ತಿದೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಅಮಿತ್ ಶಾ ಹೇಳಿದರು.

Categories
ರಾಜಕೀಯ

ದಾವಣಗೆರೆಯಲ್ಲಿ ಆಮ್ ಆದ್ಮಿ ಪಕ್ಷದ ಬೃಹತ್ ಸಮಾವೇಶ!

  • ಮಾ.4ರಂದು ರಾಜ್ಯದಲ್ಲಿ ಆಮ್ ಆದ್ಮಿ ಅಲೆ
  • ಅರವಿಂದ್‌ ಕೇಜ್ರಿವಾಲ್‌, ಭಗವಂತ್‌ ಮಾನ್‌ ಸೇರಿ ಅನೇಕ ನಾಯಕರ ಆಗಮನ

NAMMUR EXPRESS NEWS
ದಾವಣಗೆರೆ: ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಮತ್ತು ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರು ದಾವಣಗೆರೆಯಲ್ಲಿ ಮಾ.4ರಂದು ನಡೆಯಲಿರುವ ಬೃಹತ್‌ ಸಮಾವೇಶದಲ್ಲಿ ಪಾಲ್ಗೊಂಡು ರಾಜ್ಯದಲ್ಲಿ ಆಮ್ ಆದ್ಮಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ. ಜೊತೆಗೆ ಆಮ್ ಆದ್ಮಿ ಪಕ್ಷದ ಯೋಜನೆಗಳನ್ನು ರಾಜ್ಯದ ಜನರಿಗೆ ತಿಳಿಸಲಿದ್ದಾರೆ.
ಮಾ.4ರ ಶನಿವಾರ ಬೆಳಗ್ಗೆ 11 ಗಂಟೆಗೆ ದಾವಣಗೆರೆ ಸರ್ಕಾರಿ ಹೈಸ್ಕೂಲ್, ಮೈದಾನದಲ್ಲಿ ಆಮ್ ಆದ್ಮಿ ಪಾರ್ಟಿಯ ರಾಜ್ಯ ಮಟ್ಟದ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಈ ಸಮಾವೇಶದಲ್ಲಿ ದೆಹಲಿಯಲ್ಲಿ ಸಮಸ್ತವಾದ ಆಡಳಿತವನ್ನು ನೀಡುವುದರೊಂದಿಗೆ ಉಚಿತ ಉತ್ತಮ ಶಿಕ್ಷಣ, ಉಚಿತ ಅತ್ಯುತ್ತಮ ಚಿಕಿತ್ಸೆ, ಜೀರೋ ಕರೆಂಟ್ ಬಿಲ್, ವಿಶ್ವ ದರ್ಜೆಯ ಆಸ್ಪತ್ರೆಗಳು, ಜೀರೋ ವಾಟರ್ ಬಿಲ್, ಉಚಿತ ಬಸ್ ಪ್ರಯಾಣ, ಹೀಗೆ ನವದೆಹಲಿಯಲ್ಲಿ ಸಮಸ್ತ ವಾದ ಆಡಳಿತವನ್ನು ನೀಡಿ ಜನತೆಯ ಆಶೋತ್ತರಗಳಿಗೆ ಸ್ಪಂದಿಸುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆಗಮಿಸಿ ಮಾರ್ಚ್ 4ರ ಶನಿವಾರ ದಾವಣಗೆರೆಯ ಸರ್ಕಾರಿ ಹೈಸ್ಕೂಲ್, ಮೈದಾನದಲ್ಲಿ ನಡೆಯಲಿರುವ ಆಮ್ ಆದ್ಮಿ ಪಾರ್ಟಿಯ ಸಮಾವೇಶ ಉದ್ಘಾಟಿಸಿ ಪಾಲ್ಗೊಳ್ಳುತ್ತಿದ್ದಾರೆ. ಈ ಸಮಾವೇಶದಲ್ಲಿ ಪಂಜಾಬ್ ಮುಖ್ಯಮಂತ್ರಿಗಳಾದ ಭಗವಾನ್ ಮಾನ್ ಪಾಲ್ಗೊಳ್ಳಲಿದ್ದಾರೆ. ರಾಜ್ಯದ ಪ್ರಮುಖ ಎಲ್ಲ ಮುಖಂಡರು ಪಾಲ್ಗೊಳ್ಳುತ್ತಿದ್ದು, ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿಯ ನಿಯೋಜಿತ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ.

ಸಮಸ್ತ ಜನರನ್ನು ಸ್ವಾಗತಿಸಿದ ಸಾಲೂರು ಶಿವಕುಮಾರ್

ಮಾ.4ರ ಶನಿವಾರ ದಾವಣಗೆರೆಯಲ್ಲಿ ನಮ್ಮೆಲ್ಲರ ನೆಚ್ಚಿನ ನಾಯಕ ದೇಶ ಕಂಡ ಅಪ್ರತಿಮ ಸಮರ್ಥ ಆಡಳಿತಗಾರ ಅರವಿಂದ ಕೇಜ್ರಿವಾಲ್ ಹಾಗೂ ಪಂಜಾಬ್ ಗೌರವಾನ್ವಿತ ಮುಖ್ಯಮಂತ್ರಿಗಳಾದ ಭಗವಾನ್ ಮಾನ್ ಅವರು ಇವರಿಬ್ಬರೂ ಬಂದು ಕರ್ನಾಟಕದಲ್ಲಿ ಚುನಾವಣಾ ರಣ ಕಹಳೆ 2023ಕ್ಕೆ ಚಾಲನೆ ನೀಡುತ್ತಿದ್ದಾರೆ. ಅದೊಂದು ಅಪ್ರತಿಮ ಕ್ರಾಂತಿ. ಹಜಾರೆಯ ಆಂದೋಲನ,ಆ ಆಂದೋಲನದಿಂದ ಬೆಳೆದ ಈ ಪಕ್ಷ ಇಂದು ಹೆಮ್ಮೆರವಾಗಿ ಇಡೀ ದೇಶಾದ್ಯಂತ ರಾಷ್ಟ್ರೀಯ ಪಕ್ಷವಾಗಿದೆ. ಈ ರಾಷ್ಟ್ರೀಯ ಪಕ್ಷದ ಆರೋಗ್ಯ ಹಾಗೂ ಶಿಕ್ಷಣ ಕ್ರಾಂತಿಕನಸು ರಾಜ್ಯದಲ್ಲಿ ನನಸು ಮಾಡೋಣ., ಈ ಕ್ರಾಂತಿಯಲ್ಲಿ ನಾನು ನೀವು ಎಲ್ಲರೂ ಒಂದಾಗಿ ಭಾಗಿಯಾಗೋಣ. ಬಹು ಸಂಖ್ಯೆಯಲ್ಲಿ ಇಲ್ಲಿಂದ ಹೋಗಿ ಅವರಿಗೆ ನಾವು ಧೈರ್ಯ, ಚೈತನ್ಯಹಾಗೂ ಬೆಂಬಲವನ್ನು ಕೊಡೋಣ ಎಂದು ರಾಜ್ಯ ಆಮ್ ಆದ್ಮಿ ಮುಖಂಡರು, ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿಗಳು, ತೀರ್ಥಹಳ್ಳಿ ಅಭ್ಯರ್ಥಿಗಳೂ ಆದ ಸಾಲೂರು ಶಿವಕುಮಾರ್ ಗೌಡ ಕರೆ ನೀಡಿದ್ದಾರೆ. ಭ್ರಷ್ಟಾಚಾರದ ನಿರ್ಮೂಲನೆಗಾಗಿ ಪೊರಕೆ ಬಳಸಿ ಭ್ರಷ್ಟರನ್ನು ಓಡಿಸಿ ಕರ್ನಾಟಕ ಉಳಿಸಿ ಎಂಬ ಘೋಷಣೆಯೊಂದಿಗೆ ಹೊರಟಿರುವ ಆಮ್ ಆದ್ಮಿ ಪಾರ್ಟಿಯನ್ನು ಬೆಂಬಲಿಸಿ, ಆಶೀರ್ವದಿಸಿ ಎಂದು ಅವರು ಸಮಸ್ತ ಜನರಲ್ಲಿ ಮನವಿ ಮಾಡಿದ್ದಾರೆ.

Categories
ಶಿಕ್ಷಣ

5 ಮತ್ತು 8ನೇ ತರಗತಿ ವಾರ್ಷಿಕ ಪರೀಕ್ಷಾ ವೇಳಾಪಟ್ಟಿ

  • ಮಾ.13ರಿಂದ ಪರೀಕ್ಷೆಗಳು ಆರಂಭ: ಮಕ್ಕಳ ಸಿದ್ಧತೆ
  • ಧರ್ಮಸ್ಥಳ, ಉಡುಪಿಯಲ್ಲಿ ಉಚಿತ ಸಾಮೂಹಿಕ ವಿವಾಹ

NAMMUR EXPRESS NEWS
ಬೆಂಗಳೂರು: ದಿನಾಂಕ 06-03-2023ಯ ಸೋಮವಾರದಿಂದ ದಿನಾಂಕ 10- 03-2023ರ ಶುಕ್ರವಾರದವರೆಗೆ ವಿದ್ಯಾರ್ಥಿಗಳಿಗೆ ಮೌಖಿಕ ಪರೀಕ್ಷೆಗಳನ್ನು ಆಯಾ ಶಾಲೆಗಳಲ್ಲಿ ನಿರ್ವಹಿಸಲಾಗುತ್ತದೆ. ವಿಶೇಷ ಶಾಳೆಗಳ ವಿದ್ಯಾರ್ಥಿಗಳಿಗೆ ಮಂಡಲಿಯಿಂದ ಸರಬರಾಜು ಮಾಡುವ ಪ್ರಶೋತ್ತರ ಪತ್ರಿಕೆಗಳನ್ನೇ ಬಳಸಿ, ಶಾಲಾ ಹಂತದಲ್ಲಿ ಹಿಂದಿನ ಸಾಲುಗಳಲ್ಲಿ ನಡೆಸಿದಂತೆ ಮೌಲ್ಯಾಂಕನ ನಡೆಸುವುದು ದು ತಿಳಿಸಿದೆ. ಉಳಿದಂತೆ ಮಾ.13ರಿಂದ 18ರವರೆಗೆ ವಿಷಯವಾರು ಪರೀಕ್ಷೆಗಳು ನಡೆಯಲಿವೆ ಎಂದು ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕಾಂಗ್ರೆಸ್ ಎಂಪಿ, ಎಂಎಲ್‌ಎಗಳ ತಿಂಗಳ ವೇತನ ಕಡ್ಡಾಯ ದೇಣಿಗೆ

ನವದೆಹಲಿ: ಪಕ್ಷದ ಸಂಸದರು, ಶಾಸಕರು ಪ್ರತಿ ವರ್ಷ ತಮ್ಮ ಒಂದು ತಿಂಗಳ ವೇತನವನ್ನು ಪಕ್ಷದ ನಿಧಿಗೆ ದೇಣಿಗೆ ನೀಡುವುದನ್ನು ಕಾಂಗ್ರೆಸ್ ಕಡ್ಡಾಯಗೊಳಿಸಿದೆ. ಇದಲ್ಲದೆ ಮನೆಮನೆಗೆ ತೆರಳಿ ಹಾಗೂ ಆನ್‌ಲೈನ್ ಅಭಿಯಾನದ ಮೂಲಕ ಹಣ ಸಂಗ್ರಹಿಸಿ ಪಕ್ಷದ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಅದು ನಿರ್ಧರಿಸಿದೆ. ಪಕ್ಷದ ಪ್ರತಿಯೊಬ್ಬ ಸಾಮಾನ್ಯ ಸದಸ್ಯರಿಗೆ ಕೂಡ ದೇಣಿಗೆ ಮೊತ್ತವನ್ನು ನಿಗದಿಪಡಿಸಲಾಗಿದೆ. ಪ್ರತಿ ತೆರಿಗೆದಾರ ಸದಸ್ಯ ವಾರ್ಷಿಕ 1,000 ರೂಪಾಯಿ ನೀಡಬೇಕು. ಸರಪಂಚ್, ಗ್ರಾಮ ಪಂಚಾಯತಿ ಮುಖ್ಯಸ್ಥರು, ಬ್ಲಾಕ್ ಮತ್ತು ಜಿಲ್ಲಾ ಪಂಚಾಯತ್‌ ಮುಖ್ಯಸ್ಥರು ಕೂಡ ತಮಗೆ ಬರುವ ಗೌರವ ಧನವನ್ನು ಪಕ್ಷದ ನಿಧಿಗೆ ನೀಡುವಂತೆ ಕಡ್ಡಾಯಗೊಳಿಸಲಾಗಿದೆ.

ಉಡುಪಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನಿಂದ
ಉಚಿತ ಸಾಮೂಹಿಕ ವಿವಾಹ

ಮೊಗವೀರ ಕುಲರತ್ನ, ಕೊಡುಗೈ ದಾನಿಗಳಾದ ಉಡುಪಿ ಅಂಬಲಪಾಡಿಯ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ನಾಡೋಜ ಡಾ.ಜಿ.ಶಂಕರ್ ಅವರು ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಸಹಕಾರದಲ್ಲಿ ಹಮ್ಮಿಕೊಂಡಿರುವ 14ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭವು ಮೇ 3ರ ಬುಧವಾರ ಸಂಜೆ 6-40ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ನೆರವೇರಲಿದೆ. ಕಳೆದ 13 ವರ್ಷಗಳಲ್ಲಿ 355 ಜೋಡಿಗಳ ವಿವಾಹ ನೆರವೇರಿಸಲಾಗಿದೆ. ಈ ಉಚಿತ ಸಾಮೂಹಿಕ ವಿವಾಹದಲ್ಲಿ ವಿವಾಹವಾಗಲಿಚ್ಚಿಸುವ ಮೊಗವೀರ ಸಮಾಜದ ಬಂಧುಗಳು ಉಡುಪಿ ಜಿಲ್ಲೆ ಮೊಗವೀರ ಯುವ ಸಂಘಟನಾ ಕಛೇರಿ (08202532099) ಮೊ:9844044848 ಹಾಗೂ ಆಯಾಯ ಊರಿನ ಮೊಗವೀರ ಮಹಾಜನ ಸಂಘದಕಛೇರಿಯನ್ನು ಸಂಪರ್ಕಿಸಲುಕೋರಿದೆ

ಮೇ.3: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಬಡ ಕುಟುಂಬಗಳ ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಕಳೆದ 51 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮ ಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹದ ಪುಣ್ಯ ಕಾರ್ಯವನ್ನು ನೆರವೇರಿಸುತ್ತಾ ಬರುತ್ತಿದ್ದಾರೆ. ಇದುವರೆಗೆ 12576 ಜೋಡಿಗಳ ವಿವಾಹವು ಶ್ರೀ ಕ್ಷೇತ್ರದಲ್ಲಿ ನಡೆದಿದ್ದು 2023ನೇ ಸಾಲಿನ ಉಚಿತ ಸಾಮೂಹಿಕ ವಿವಾಹ ಸಮಾರಂಭವು ಮೇ 3ರ ಬುಧವಾರ ಸಂಜೆ 6-40ರ ಗೋಧೂಳಿ ಲಗ್ನ
ಸುಮುಹೂರ್ತದಲ್ಲಿ ನೆರವೇರಲಿದೆ. ಇಲ್ಲಿ ವಿವಾಹವಾಗುವ ವರನಿಗೆ ಧೋತಿ, ಶಾಲು, ಅಂಗಿ ಹಾಗೂ ವಧುವಿಗೆ ಸೀರೆ, ರವಿಕೆಕಣ ಮತ್ತು ಮಂಗಲ ಸೂತ್ರವನ್ನು ನೀಡಲಾಗುತ್ತದೆ. ಸಾಮೂಹಿಕ ವಿವಾಹದಲ್ಲಿ ವಿವಾಹವಾಗಲು ಇಚ್ಚಿಸುವವರು ಏಪ್ರಿಲ್ 24ರೊಳಗೆ ಹೆಸರು ದಾಖಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ 08256-266644 ಮತ್ತು 9663 464648 ಸಂಪರ್ಕಿಸಬಹುದು. ಹಾಗೂ ಆಯಾಯ ಊರುಗಳಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಬಿ.ಸಿ ಟ್ರಸ್ಟ್‌ ಯೋಜನಾ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ.

Categories
ರಾಜ್ಯ

ಬ್ಯಾಂಕಿನಲ್ಲಿ ಇನ್ನು ಐದೇ ದಿನ ಕೆಲಸ.!?

  • ಈಗ ತಿಂಗಳಿಗೆ ಎರಡು ವಾರ 5 ದಿನ ಕೆಲಸ
  • ಆರ್.ಬಿ. ಐ ಮುಂದೆ ಬ್ಯಾಂಕ್ ಯೂನಿಯನ್ ಪ್ರಸ್ತಾಪ

NAMMUR EXPRESS NEWS
ದೇಶದ ಬ್ಯಾಂಕಿಂಗ್ ವಲಯದ ಕೆಲಸದ ಅವಧಿಯಲ್ಲಿ ಬಹುದೊಡ್ಡ ಬದಲಾವಣೆ ಆಗಲಿದ್ದು, ವಾರಕ್ಕೆ ಐದೇ ದಿನ ಕೆಲಸದ ವ್ಯವಸ್ಥೆ ಜಾರಿಯಾಗಲಿದೆ. ಹಾಗೆ ಆದ್ರೆ ಜನ ಮತ್ತಷ್ಟು ಸಂಕಟಕ್ಕೆ ಒಳಗಾಗಲಿದ್ದಾರೆ.
ಈಗಾಗಲೇ ಭಾರತೀಯ ಬ್ಯಾಂಕ್ ಅಸೋಸಿಯೇಶನ್ ಮತ್ತು ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಎಂಪ್ಲಾಯೀಸ್ ನಡುವೆ ಮಾತುಕತೆ ಆರಂಭವಾಗಿದೆ. ಮೂಲಗಳು ಹೇಳಿರುವಂತೆ ಬ್ಯಾಂಕ್ ಅಸೋಸಿಯೇಶನ್, ವಾರದಲ್ಲಿ ಐದು ದಿನಗಳ ಕೆಲಸಕ್ಕೆ ತಾತ್ವಿಕ ಒಪ್ಪಿಗೆಯನ್ನೂ ನೀಡಿದೆ.
ಸದ್ಯ ತಿಂಗಳಲ್ಲಿ ಎರಡು ವಾರ ಮಾತ್ರ ಬ್ಯಾಂಕ್ ಉದ್ಯೋಗಿಗಳಿಗೆ ಐದು ದಿನದ ಕೆಲಸವಿದೆ. ಅಂದರೆ ಪರ್ಯಾಯ ವಾರದಲ್ಲಿ ಈ ರೀತಿ ಬರುತ್ತದೆ. ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಉದ್ಯೋಗಿಗಳಿಗೆ ರಜೆ ಇರಲಿದೆ. ಈಗ ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ತಿಂಗಳ ಎಲ್ಲ ಶನಿವಾರಗಳಲ್ಲಿಯೂ ರಜೆ ನೀಡಲು ಮುಂದಾಗಿದೆ. ಈ ನಿರ್ಧಾರ ಖಚಿತವಾದ ಬಳಿಕ ಮೊದಲಿಗೆ ಕೇಂದ್ರ ವಿತ್ತ ಸಚಿವಾಲಯಕ್ಕೆ ಪ್ರಸ್ತಾವನೆ ಕಳುಹಿಸಲಾಗುತ್ತದೆ. ಅದರ ಜತೆಗೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೂ ಕಳುಹಿಸಿ, ಒಪ್ಪಿಗೆ ಪಡೆಯಲಾಗುತ್ತದೆ.

ಸಮಯ ಬದಲಾವಣೆ ಸಾಧ್ಯತೆ!

ಶನಿವಾರದ ರಜೆ ಬದಲಿಗೆ ಇತರ ದಿನಗಳಲ್ಲಿ 40ರಿಂದ 50 ನಿಮಿಷ ಹೆಚ್ಚುವರಿ ಕೆಲಸ. ದಿನದ ಕೆಲಸದ ಅವಧಿಯೂ ಬದಲು (ಬೆಳಗ್ಗೆ 9.45 ರಿಂದ ಸಂಜೆ 5.30)
ಸದ್ಯ ತಿಂಗಳಲ್ಲಿ ಎರಡು ಶನಿವಾರ ಮಾತ್ರ ರಜೆ ಇದೆ.
ಈ ಸಂಗತಿಗಳ ಬಗ್ಗೆ ಮಾತನಾಡಿರುವ ಅಖೀಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ನಾಗರಾಜನ್, ಕೇಂದ್ರ ಸರಕಾರವು ಎಲ್ಲ ಶನಿವಾರಗಳ ರಜೆ ಬಗ್ಗೆ ಅಧಿಕೃತವಾಗಿ ಆದೇಶ ಹೊರಡಿಸಲಿದೆ. ಆರ್‌ಬಿಐ ಕೂಡ ನಮ್ಮ ಈ ಪ್ರಸ್ತಾವನೆಯನ್ನು ಒಪ್ಪಿಕೊಂಡು ಅಂತರ ಬ್ಯಾಂಕ್ ಕೆಲಸಕ್ಕೆ ತಕ್ಕನಾಗಿ ಬದಲಾವಣೆ ಮಾಡುವ ಸಾಧ್ಯತೆ ಇದೆ.

Categories
ರಾಜಕೀಯ

ಮುಂದಿನ ವಾರ ಕಾಂಗ್ರೆಸ್ ಮೊದಲ ಪಟ್ಟಿ!?

  • ಈಗಾಗಲೇ ಅಭ್ಯರ್ಥಿಗಳ ಪಟ್ಟಿ ಅಂತಿಮ
  • ಮಾ.7ರಂದು ಪಟ್ಟಿ ಬಿಡುಗಡೆಗೆ ಸಿದ್ಧತೆ

NAMMUR EXPRESS NEWS
ಹಾಸನ: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಎಲ್ಲಾ ಪಕ್ಷದಲ್ಲೂ ರಾಜಕೀಯ ಬಿರುಸಿನ ಹಂತ ತಲುಪಿದೆ. ಈ ನಡುವೆ ಮುಂದಿನ ವಾರ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆಗಳಿವೆ.
ಅದರಂತೆ ಕಾಂಗ್ರೆಸ್ ಪಕ್ಷದ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಅಭ್ಯರ್ಥಿಗಳ ಆಯ್ಕೆಗೆ ಈಗಾಗಲೇ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸಿರುವ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಮಾರ್ಚ್ 7 ರಂದು ಬಿಡುಗಡೆ ಮಾಡಲಿದೆ.
ಈಗಾಗಲೇ ಜೆಡಿಎಸ್ ಪಕ್ಷದಿಂದ ಮುಂಬರುವಂತ ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲ ಕ್ಷೇತ್ರಗಳಿಗೆ ಅಭ್ಯರ್ಧಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ಪಕ್ಷದಿಂದ ಮಾರ್ಚ್ 7ರಂದು ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಪಕ್ಷದ ಟಿಕೆಟ್ ಗಾಗಿ ಸಲ್ಲಿಸಲಾಗಿದ್ದ ಆಕಾಂಕ್ಷಿಗಳ ಅರ್ಜಿಗಳನ್ನು ಪರಿಶೀಲಿಸಿ, ಸಮಾಲೋಚನೆ ನಡೆಸಲಾಗಿದೆ. ಇದಲ್ಲದೇ ವೀಕ್ಷಕರು ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಿ, ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಿ, ಕೆಪಿಸಿಸಿಗೆ ವರದಿ ನೀಡಲಿದ್ದಾರೆ
ಕಾಂಗ್ರೆಸ್ ಪಕ್ಷವು ವೀಕ್ಷಕರು ನೀಡುವ ವರದಿಯ ಆಧಾರದ ಮೇಲೆ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳ ಪಟ್ಟಿಯನ್ನು ತಯಾರಿಸಿ, ಹೈಕಮಾಂಡ್ ಗೆ ಕಳುಹಿಸಲಾಗಿದ್ದು, ಶೀಘ್ರವೇ ಕಾಂಗ್ರೆಸ್ ಪಕ್ಷದ ಮೊದಲ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ ಎಂಬುದಾಗಿ ತಿಳಿಸಿದ್ದಾರೆ.

ಪ್ರಚಾರ ಸಮಿತಿ ಸರಣಿ ಸಭೆ
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ.ಬಿ.ಪಾಟೀಲ್ ಅವರ ನೇತೃತ್ವದಲ್ಲಿ ಪ್ರಚಾರ ಸಮಿತಿಯ ರಾಜ್ಯ ಪದಾಧಿಕಾರಿಗಳು ಮತ್ತು ಜಿಲ್ಲಾಧ್ಯಕ್ಷರುಗಳ ಸಭೆ ನಡೆಸಲಾಯಿತು. ಕೆಪಿಸಿಸಿ ಉಪಾಧ್ಯಕ್ಷರಾದ ಬಿ.ಎಲ್ ಶಂಕರ್, ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್, ರಾಣಿ ಸತೀಶ್, ಎ.ಬಿ ಪಾಟೀಲ್, ವಿಧಾನಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ನಜೀರ್ ಅಹ್ಮದ್, ಶಾಸಕರಾದ ರಿಜ್ವಾನ್ ಅರ್ಷದ್, ಮಾಜಿ ಸಂಸದರಾದ ಬಿ.ಎನ್ ಚಂದ್ರಪ್ಪ, ಮಾಜಿ ಎಂಎಲ್ ಸಿ ರಮೇಶ್ ಬಾಬು ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.

Categories
ಶಿಕ್ಷಣ

ರಾಜ್ಯ ಒಕ್ಕಲಿಗರ ಸಂಘಕ್ಕೆ ಖಾಸಗಿ ವಿಶ್ವವಿದ್ಯಾಲಯ ಮಂಜೂರು, ತೀರ್ಥಹಳ್ಳಿ ಒಕ್ಕಲಿಗರ ಸಂಘದ ವಿದ್ಯಾರ್ಥಿ ನಿಲಯಕ್ಕೆ ಧನ ಸಹಾಯ ನೀಡಿದ

ಡಾ.ಸಿ.ಎನ್. ಅಶ್ವಥನಾರಾಯಣ ಅವರಿಗೆ ಧನ್ಯವಾದಗಳು

ರಾಜ್ಯ ಒಕ್ಕಲಿಗರ ಸಂಘಕ್ಕೆ ಖಾಸಗಿ ವಿಶ್ವವಿದ್ಯಾಲಯ ಮಂಜೂರು ಮಾಡಲು ಅವಿರತ ಶ್ರಮವಹಿಸಿ ಸಹಕಾರ ನೀಡಿದ ಸಮುದಾಯದ ಸೇವೆಗೆ ಕಂಕಣಬದ್ದರಾದ ಉನ್ನತ ಶಿಕ್ಷಣ, ಐಟಿಬಿಟಿ, ವಿಜ್ಞಾನ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಸಚಿವರಾದ ಡಾ.ಸಿ.ಎನ್. ಅಶ್ವಥನಾರಾಯಣ ಅವರಿಗೆ ಸಮಸ್ತ ಒಕ್ಕಲಿಗರ ಪರವಾಗಿ ಅನಂತ ಅನಂತ ಅಭಿನಂದನೆಗಳು ಹಾಗೂ ವಿವಿ ಸ್ಥಾಪನೆಗೆ ಕಾರಣವಾಗಿರುವ ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳು.

ತೀರ್ಥಹಳ್ಳಿ ಒಕ್ಕಲಿಗ ವಿದ್ಯಾರ್ಥಿ ನಿಲಯಕ್ಕೆ 25 ಲಕ್ಷ ದೇಣಿಗೆ ಪ್ರಕಟಿಸಿದ ಸಚಿವ ಅಶ್ವಥನಾರಾಯಣ ಅವರಿಗೆ ಧನ್ಯವಾದಗಳು.

ಅಭಿನಂದನೆ ಸಲ್ಲಿಸುವವರು

ಸಿರಿಬೈಲ್ ಧರ್ಮೇಶ್
ಸಂಚಾಲಕರು, ರಾಜ್ಯ ಒಕ್ಕಲಿಗ ವಿಶ್ವವಿದ್ಯಾನಿಲಯ
ನಿರ್ದೇಶಕರು, ರಾಜ್ಯ ಒಕ್ಕಲಿಗರ ಸಂಘ
ಬೆಂಗಳೂರು