Categories
ರಾಷ್ಟ್ರೀಯ ವಾರ್ತೆ

ಸಿಲಿಂಡರ್ ಬೆಲೆ 200 ರೂ.ಇಳಿಕೆ!

ಸಿಲಿಂಡರ್ ಬೆಲೆ 200 ರೂ.ಇಳಿಕೆ!
– ಗೃಹಬಳಕೆಯ ಎಲ್‌ ಪಿಜಿ ಸಿಲಿಂಡರ್‌ ಬೆಲೆ 200 ರೂ. ಇಳಿಕೆ
– ಉಜ್ವಲ ಯೋಜನೆಯಡಿ 400 ರೂ ಇಳಿಕೆ
– ಯಾವುದಕ್ಕೆ ಎಷ್ಟು ಇಳಿಕೆ ಆಗಿದೆ ಇಲ್ಲಿದೆ ಮಾಹಿತಿ

NAMMUR EXPRESS NEWS
ನವ ದೆಹಲಿ: ಗೃಹಬಳಕೆಯ ಎಲ್‌ ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಸಾಮಾನ್ಯ ಗ್ರಾಹಕರಿಗೆ 200 ಇಳಿಕೆ ಮಾಡಿದ್ದು, ಇದರಿಂದಾಗಿ ಪ್ರಧಾನಮಂತ್ರಿ ಉಜ್ವಲಾ ಸ್ಕೀಮ್‌ ಫಲಾನುಭವಿಗಳಿಗೆ ಪ್ರತಿ ಎಲ್‌ ಪಿಜಿ ಸಿಲಿಂಡರ್‌ ಬೆಲೆಯಲ್ಲಿ 400 ರೂಪಾಯಿ ಇಳಿಕೆ ಮಾಡಿರುವುದಾಗಿ ಘೋಷಿಸಿದೆ. ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ಪ್ರತಿ ಎಲ್‌ ಪಿಜಿ ಸಿಲಿಂಡರ್‌ ಗೆ ಹೆಚ್ಚುವರಿಯಾಗಿ 200 ರೂಪಾಯಿ ಸಬ್ಸಿಡಿ ನೀಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿರುವುದಾಗಿ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ತಿಳಿಸಿದ್ದಾರೆ. ಪ್ರಧಾನಮಂತ್ರಿ ಉಜ್ವಲಾ ಯೋಜನೇತರ ಗ್ರಾಹಕರಿಗೆ 14ಕೆಜಿಯ ಎಲ್‌ ಪಿಜಿ ಸಿಲಿಂಡರ್‌ ಬೆಲೆಯಲ್ಲಿ 200 ರೂಪಾಯಿ ಇಳಿಕೆಯಾಗಲಿದ್ದು,ಪ್ರತಿ ಸಿಲಿಂಡರ್‌ ಬೆಲೆ 900 ರೂಪಾಯಿ ಆಗಲಿದೆ. ಉಜ್ವಲಾ ಸ್ಕೀಮ್‌ ನ ನೋಂದಾಯಿತ ಗ್ರಾಹಕರಿಗೆ ಒಟ್ಟು 400 ರೂಪಾಯಿ ಸಬ್ಸಿಡಿ ದೊರೆಯುವ ಮೂಲಕ ಪ್ರತಿ ಸಿಲಿಂಡರ್‌ ಬೆಲೆ 700 ರೂಪಾಯಿ ಆಗಲಿದೆ. ಗೃಹ ಬಳಕೆಯ ಎಲ್‌ ಪಿಜಿ ಸಿಲಿಂಡರ್‌ ಗೆ 200 ರೂಪಾಯಿ ಸಬ್ಸಿಡಿ ನೀಡುವ ನಿರ್ಧಾರದಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಒಟ್ಟು 7,500 ಕೋಟಿ ರೂಪಾಯಿ ಹೊರೆಯಾಗಲಿದೆ ಎಂದು ಠಾಕೂರ್‌ ತಿಳಿಸಿದ್ದಾರೆ.

ರಕ್ಷಾ ಬಂಧನ್‌, ಓಣಂ ಹಬ್ಬದ ಸಂದರ್ಭದಲ್ಲಿ ಗೃಹಬಳಕೆಯ ಎಲ್‌ ಪಿಜಿ ಸಿಲಿಂಡರ್‌ ಬೆಲೆಯನ್ನು ಇಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಸುಮಾರು 73 ಲಕ್ಷ ಮಹಿಳಾ ಫಲಾನುಭವಿಗಳಿಗೆ ಅನುಕೂಲವಾಗುವಂತೆ ಉಜ್ವಲಾ ಸ್ಕೀಮ್‌ ಸಬ್ಸಿಡಿಯನ್ನು ಮುಂದುವರಿಸಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಸಚಿವ ಠಾಕೂರ್‌ ತಿಳಿಸಿದ್ದಾರೆ

ಇದನ್ನೂ ಓದಿ : ಬ್ಯಾಂಕಿಗೆ ಬಂದ ಮಹಿಳೆ ಮೈಮೇಲೆ ಬಂತು ದೇವರು!

Categories
ಮಾಹಿತಿ

ಸಹೋದರ ಸಹೋದರಿಯರ ಅನುಬಂಧ… ಈ ರಕ್ಷಾ ಬಂಧನ!

ಸಹೋದರ ಸಹೋದರಿಯರ ಅನುಬಂಧ… ಈ ರಕ್ಷಾ ಬಂಧನ!
– ಏನಿದು ರಕ್ಷಾ ಬಂಧನದ ಮಹತ್ವ..?
– ರಾಖಿ ಯಾಕೆ ಕಟ್ಟುತ್ತಾರೆ… ಇಲ್ಲಿದೆ ವಿಶೇಷ ವರದಿ

NAMMUR EXPRESS NEWS
ಸಹೋದರ ಸಹೋದರಿಯರ ಬಾಂಧವ್ಯದ ಬೆಸುಗೆ ರಕ್ಷಾಬಂಧನ. ಸಹೋದರತೆಯ ಮಹತ್ವ ಸಾರುವ ಈ ರಕ್ಷಾ ಬಂಧನವನ್ನು ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ದೇಶದ ಎಲ್ಲೆಡೆ ಆಚರಿಸಲಾಗುತ್ತದೆ. ತಂಗಿ ತನ್ನ ಅಣ್ಣನಿಗಿಗೆ ಕಟ್ಟುವ ರಾಖಿ ಅದು ದಾರ ಅಷ್ಟೇ ಅಲ್ಲ. ತಂಗಿ ಅಣ್ಣನಿಗೆ ರಕ್ಷೆಯನ್ನು ಬೇಡಿ ಕಟ್ಟುವ ಪವಿತ್ರವಾದ ಬಂಧ. ರಕ್ಷಾ ಬಂಧನ ಹಬ್ಬಕ್ಕೆ ನಮ್ಮ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ. ಪ್ರತಿಯೊಬ್ಬ ತಂಗಿಯು ಸಮಾಜದ ದುಷ್ಟಶಕ್ತಿಗಳಿಂದ ರಕ್ಷಣೆ ನೀಡು ಎಂದು ತನ್ನ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟುತ್ತಾಳೆ. ಪ್ರತಿಯೊಬ್ಬ ಸಹೋದರನೂ ನಾನು ನಿನ್ನಗೆ ಸದಾ ಕಾಲ ರಕ್ಷಾ ಕವಚವಾಗಿರುವೆ ಎಂದು ತಂಗಿಗೆ ತನ್ನ ಕೈಯಲ್ಲಿ ಆಗುವಷ್ಟು ಉಡುಗೊರೆ ಕೊಟ್ಟು ಆಶೀರ್ವಾದ ಮಾಡುವುದು ಈ ರಕ್ಷಾ ಬಂಧನದ ವಿಶೇಷ.

ರಕ್ಷಾ ಬಂಧನದ ಬಗ್ಗೆ ದಂತ ಕಥೆಗಳು ಏನು?

ಹಿಂದೂ ಪುರಾಣದ ಪವಿತ್ರ ಗ್ರಂಥವಾದ ಮಹಾಭಾರತದ ಪ್ರಕಾರ ಕೃಷ್ಣನ ಕೈಯಲ್ಲಿ ರಕ್ತಸುರಿಯುತ್ತಿರುವ ಸಂದರ್ಭದಲ್ಲಿ ರಕ್ತವನ್ನು ತಡೆಯಲು ದ್ರೌಪದಿ ತನ್ನ ಸೀರೆಯನ್ನು ಹರಿದು ಕೃಷ್ಣನ ಕೈಗೆ ಕಟ್ಟಿದಳು. ಈ ಸಂದರ್ಭದಲ್ಲಿ ದ್ರೌಪದಿಯ ವಾತ್ಸಲ್ಯ, ಕಾಳಜಿ ಕಂಡ ಕೃಷ್ಣ, ಆಕೆಯನ್ನು ರಕ್ಷಣೆ ಮಾಡುವ ಭರವಸೆ ನೀಡಿದನು ಎಂದು ಹೇಳುವ ಕಥೆಯಿದೆ. ರಾಖಿಗೆ ಸಂಬಂಧ ಪಟ್ಟ ಇನ್ನೊಂದು ಕಥೆ ಚಿತ್ತೋರ್‌ನ ರಾಣಿ ಕರ್ಣಾವತಿ ಮತ್ತು ಮೊಘಲ್ ಚಕ್ರವರ್ತಿ ಹುಮಾಯೂನ್‌ಗೆ ಸಂಬಂಧಿಸಿದೆ. ರಾಣಿ ಕರ್ಣಾವತಿ ಚಿತ್ತೋ‌ ರಾಜನ ವಿಧವೆ ರಾಣಿ. ಈಕೆಯ ರಾಜ್ಯದ ಮೇಲೆ ಗುಜರಾತಿನ ಸುಲ್ತಾನ ಬಹದ್ದೂರ್ ಷಾ ಅತಿಕ್ರಮಣ ಮಾಡಿದ. ಈ ವೇಳೆ ಆಕೆಗೆ ರಾಜ್ಯ ರಕ್ಷಣೆ ಮಾಡಲು ಸಾಧ್ಯವಾಗುವುದಿಲ್ಲ. ಈ ವೇಳೆ ಆಕೆ ಮೊಘಲ್ ಚಕ್ರವರ್ತಿ ಹುಮಾಯೂನ್‌ಗೆ ರಾಜ್ಯ ರಕ್ಷಣೆಗೆ ಕರೆ ನೀಡಿ ರಾಖಿಯನ್ನು ಕಳುಹಿಸಿದಳು. ಈ ವೇಳೆ ಹುಮಾಯೂನ್ ಅಣ್ಣನಂತೆ ಆಕೆ ಸಹಾಯಕ್ಕೆ ಬಂದು ಚಿತ್ತೋರ್ ರಕ್ಷಿಸಿದ ಎಂಬ ಕಥೆ ಇದೆ. ಹೀಗೆ ಹಲವು ಕಥೆಗಳಿವೆ ಎಲ್ಲಾ ಕಥೆಗಳ ಸಾರ ಒಂದೇ ಅಣ್ಣ ತಂಗಿಯ ಭಾಂದವ್ಯ.

ರಾಖಿಕಟ್ಟಲು ಒಡಹುಟ್ಟಿದವರೆ ಆಗಬೇಕಿಲ್ಲ!

ರಕ್ಷಾಬಂಧನ ಆಚರಿಸಲು ಒಡ ಹುಟ್ಟಿದ ಅಣ್ಣತಂಗಿಯೆ ಆಗಬೇಕಿಲ್ಲ .ಮನಸ್ಪೂರ್ತಿಯಾಗಿ ಅಣ್ಣ ತಂಗಿ ಎಂಬ ಭಾವ ಇರುವ ಯಾರೂ ಬೇಕಾದರೂ ಪವಿತ್ರ ರಾಖಿ ಕಟ್ಟಿ ರಕ್ಷಣೆ ಕೇಳಬಹುದು. ಈಗಿನ ಕಾಲದಲ್ಲಿ ಈ ರಾಖಿ ಹಬ್ಬವನ್ನು ತಮ್ಮಗೆ ಬಂಧ ರೀತಿಯಲ್ಲಿ ಆಚರಿಸುತ್ತತ್ತಿರುವುದರಿಂದ ಈ ಹಬ್ಬದ ಮಹತ್ವ ಕಳೆದು ಹೋಗುತ್ತಿದೆ.

ಎಲ್ಲರೂ ರಾಖಿ ಹಬ್ಬವನ್ನ ಅರ್ಥಪೂರ್ಣವಾಗಿ ಆಚರಿಸಿ ಎಲ್ಲ ಸಹೋದರ ಸಹೋದರಿಯಾರಿಗೂ ಸಹೋದರತ್ವ ಮಹತ್ವ ಸಾರುವ ರಕ್ಷಾ ಬಂಧನದ ಶುಭಾಷಯಗಳು.

ಇದನ್ನೂ ಓದಿ : ಬ್ಯಾಂಕಿಗೆ ಬಂದ ಮಹಿಳೆ ಮೈಮೇಲೆ ಬಂತು ದೇವರು!

Categories
ಬೆಂಗಳೂರು

ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲು!

ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲು!
– ತೀವ್ರ ಜ್ವರದಿಂದ ಬೆಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು
– ಏನಾಯ್ತು ಕುಮಾರಸ್ವಾಮಿ ಅವರಿಗೆ?

NAMMUR EXPRESS NEWS
ಬೆಂಗಳೂರು: ಅನಾರೋಗ್ಯ ಹಿನ್ನೆಲೆಯಲ್ಲಿ ಮಾಜಿ ಮುಖಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ತೀವ್ರ ಜ್ವರದಿಂದ ಬಳಲುತ್ತಿದ್ದು, ಬುಧವಾರ ಬೆಳಗಿನ ಜಾವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಕುಮಾರಸ್ವಾಮಿಯವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಎರಡು ಬಾರಿ ವಿದೇಶ ಪ್ರವಾಸ ಮುಗಿಸಿ ವಾಪಸ್ ಆಗಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದರು. ಈ ಮಧ್ಯೆ ಜ್ವರದಿಂದ ಬಳಲುತ್ತಿರುವ ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ : ಬ್ಯಾಂಕಿಗೆ ಬಂದ ಮಹಿಳೆ ಮೈಮೇಲೆ ಬಂತು ದೇವರು!

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಮದ್ಯ ಸೇವಿಸಿ ಕೊಳಕ್ಕೆ ಸ್ನಾನಕ್ಕಿಳಿದವನ ಜೀವ ಹೋಯ್ತು!
– ಮಂಗಳೂರು: 27 ವರ್ಷಗಳ ಬಳಿಕ ಆರೋಪಿ ಅರೆಸ್ಟ್!
– ಬೆಳ್ತಂಗಡಿ: ವಿಷ ಸೇವಿಸಿದ್ದ ಬಾಣಂತಿ ಸಾವು
– ಸುಬ್ರಹ್ಮಣ್ಯ: ಜೂಜಾಟ ಅಡ್ಡೆಗೆ ಪೊಲೀಸ್ ದಾಳಿ!
– ಸಿದ್ದಾಪುರ: ದರೋಡೆ ಮಾಡುತ್ತಿದ್ದವರಿಗೆ ಥಳಿತ
– ಸ್ಕೂಟರ್ – ಟ್ಯಾಂಕರ್ ಅಪಘಾತ: ಓರ್ವ ಸಾವು

NAMMUR EXPRESS NEWS
ಉಳ್ಳಾಲ: ಸ್ನೇಹಿತರ ಜತೆ ಸ್ನಾನಕ್ಕೆಂದು ತೆರಳಿ ಕೊಳಕ್ಕೆ ಇಳಿದ ವ್ಯಕ್ತಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕೇರಳ ಗಡಿ ಭಾಗದ ಕೆಳಗಿನ ತಲಪಾಡಿ ಬಳಿ ಸಂಭವಿಸಿದೆ. ಕೇರಳದ ಹೊಸಂಗಡಿ ದುರ್ಗಿಪಳ್ಳ ನಿವಾಸಿ ಹರಿಪ್ರಸಾದ್ ಆಚಾರ್ಯ (36) ಮೃತ ಪಟ್ಟವರು. ತಲಪಾಡಿಯ ನಿಸರ್ಗ ಬಾರ್ ನಲ್ಲಿ ಬೆಳಗ್ಗೆ ಮದ್ಯ ಸೇವಿಸಿದ್ದ ಹರಿಪ್ರಸಾದ್ ಗೆಳೆಯರಾದ ಯುವರಾಜ್ ಯಾನೆ ಮುನ್ನ ಲೋಹಿತ್, ನವೀನ್ ದೇವಾಡಿಗ, ನಿತೇಶ್ ಉಚ್ಚಿಲ್ ಅವರೊಂದಿಗೆ ಸಮೀಪದ ಖಾಸಗಿ ಲೇ ಔಟಿನ ಕೊಳವೊಂದರಲ್ಲಿ ಸ್ನಾನಕ್ಕೆ ತೆರಳಿದ್ದರು. ಈ ವೇಳೆ, ಈಜು ತಿಳಿಯದ ಹರಿಪ್ರಸಾದ್ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಮಂಗಳೂರಿನಿಸಿದ ಅಗ್ನಿ ಶಾಮಕ ದಳದವರು ತೆರಳಿ ಕಾರ್ಯಾಚರಣೆ ನಡೆಸಿ ಮೃತದೇಹ ಮೇಲಕ್ಕೆತ್ತಿದ್ದಾರೆ. ಮೃತರು ವೆಲ್ಲಿಂಗ್ ವೃತ್ತಿ ನಡೆಸುತ್ತಿದ್ದರು. ಹರಿಪ್ರಸಾದ್ ಆಚಾರ್ಯ ಅವರು ಅವಿವಾಹಿತರಾಗಿದ್ದು, ತಾಯಿ, ಸಹೋದರರು ಹಾಗೂ ಸಹೋದರಿಯರನ್ನು ಅಗಲಿದ್ದಾರೆ.

ಟ್ಯಾಂಕರ್ ನಡುವೆ ಅಪಘಾತಕ್ಕೆ ಓರ್ವ ಬಲಿ

ಹೆಜಮಾಡಿ ಸಮೀಪದ ಕನ್ನಂಗಾರಿನಲ್ಲಿ ನಡೆದ ಟ್ಯಾಂಕರ್ ಹಾಗೂ ಸ್ಕೂಟರ್ ಮಧ್ಯೆ ನಡೆದ ಅಪಘಾತದಲ್ಲಿ ಸ್ಕೂಟರ್ ನ ಸಹ ಸವಾರ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತ ಯುವಕ ಹೆಜಮಾಡಿ ಬ್ರಹ್ಮಸ್ಥಾನ ಬಳಿ ಬಾಡಿಗೆ ಕೋಣೆಯ ನಿವಾಸಿ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಸದ್ದಾಂ ಅನ್ಸಾರಿ(20), ಸವಾರ ಪರ್ವೇಜ್ ಸಣ್ಣ ಪುಟ್ಟ ಗಾಯಗೊಂಡಿದ್ದಾರೆ.

27 ವರ್ಷದ ಬಳಿಕ ಸುಲಿಗೆ ಆರೋಪಿ ಅರೆಸ್ಟ್!

ಸುಲಿಗೆ ಪ್ರಕರಣ ಒಂದರಲ್ಲಿ ಬೇಕಾಗಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು ಪ್ರಕರಣ ನಡೆದ 27 ವರ್ಷಗಳ ಬಳಿಕ ಕೇರಳದ ಕ್ಯಾಲಿಕಟ್‌ನಲ್ಲಿ ಬಂಧಿಸಿ ಮಂಗಳೂರು ನ್ಯಾಯಾಲಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಂಗದ ಬಂಧನಕ್ಕೆ ಒಪ್ಪಿಸಲಾಗಿದೆ. ಪಿ ಮನೋಜ್(52) ಬಂಧಿತ ಆರೋಪಿಯಾಗಿದ್ದಾನೆ. ಅಶೋಕ್ ನಗರದ ವಿನ್ಸೆಂಟ್ ಎಂಬವರು ತನ್ನ ಒಮಿನಿ ಕಾರು ಕಳವಾದ ಬಗ್ಗೆ ದೂರು ನೀಡಿದ್ದರು. ದೂರು ದಾಖಲಾಗಿ 27 ವರ್ಷಗಳು ಕಳೆದರೂ ಆರೋಪಿಯ ಪತ್ತೆ ಕಾರ್ಯ ವಿಫಲವಾಗಿತ್ತು.ಆರೋಪಿ ಕೇರಳದಲ್ಲಿ ತಲೆ ಮೆರಸಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಉರ್ವ ಠಾಣಾಧಿಕಾರಿ ಭಾರತಿ ಮತ್ತು ಸಿಬಂದಿ ವರ್ಗ ದಾಳಿ ನಡೆಸಿ ಆರೋಪಿ ಮನೋಜ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ವಿಷ ಸೇವಿಸಿದ್ದ ಬಾಣಂತಿ ಸಾವು

ಹೆರಿಗೆ ವೇಳೆ ಉಂಟಾದ ಗಾಯದ ನೋವು ತಾಳಲಾಗದೆ ಬಾಣಂತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಸುರಿಮೊಗ್ರು ಗ್ರಾಮದ ಜಾರಿಗೆದಡಿ ನಿವಾಸಿ ಆನಂದ ಮಲೆಕುಡಿಯ ಅವರ ಪತ್ನಿ ಸುಪ್ರೀತಾ (25) ಆ. 1ರಂದು ಉಡುಪಿಯಲ್ಲಿ ಹೆರಿಗೆಯಾಗಿದ್ದು, ಈ ಸಮಯ ಉಂಟಾದ ಗಾಯಕ್ಕೆ ಬಳಿಕ ಜಾರಿಗೆದಡಿ ಎಂಬಲ್ಲಿ ಹೊಲಿಗೆ ಹಾಕಲಾಗಿತ್ತು. ಅನಂತರ ವಿಪರೀತ ನೋವು ಕಂಡುಬಂದಿದ್ದು ಆ. 26ರಂದು ನೋವು ತಾಳಲಾಗದೆ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತತ್‌ಕ್ಷಣ ಅವರಿಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರು ವೆನ್ ಲ್ಯಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಜೂಜಾಟ: ಓರ್ವನ ಬಂಧನ

ಸುಬ್ರಹ್ಮಣ್ಯ: ಹಣವನ್ನು ಪಣಕ್ಕಿಟ್ಟು ಲೂಡ ಇಸ್ಪೇಟ್ ದಾಳವನ್ನು ಉಪಯೋಗಿಸಿ ಆಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಓರ್ವನನ್ನು ವಶಕ್ಕೆ ಪಡೆದಿದ್ದು, ಮೂವರು ಪರಾರಿಯಾದ ಘಟನೆ ಕೊಲ್ಲಮೊಗ್ರುವಿನ ಬಸ್ಸು ನಿಲ್ದಾಣದ ಬಳಿ ಆ. 26ರಂದು ನಡೆದಿದೆ. ಜೂಜಾಟ ಆಟ ಆಡುತ್ತಿರುವ ಖಚಿತ ಮಾಹಿತಿ ಮೇರೆಗೆ ಸುಬ್ರಹ್ಮಣ್ಯ ಠಾಣಾ ಎಸ್ಸೆ ಸಿಬಂದಿಯೊಂದಿಗೆ ದಾಳಿ ನಡೆಸಿದ್ದಾರೆ. ಕಿರಣ್‌ನನ್ನು ವಶಕ್ಕೆ ಪಡೆದಿದ್ದು, ಆಡುತ್ತಿದ್ದ ಕುಮಾರ್ ಗಡಿಕಲ್ಲು, ಅವಿನ್ ಗಡಿಕಲ್ಲು, ಲಕ್ಷ್ಮಣ ಕಡೋಡಿ ಪರಾರಿಯಾಗಿದ್ದಾರೆ.

ದರೋಡೆ ಮಾಡುತ್ತಿದ್ದವರಿಗೆ ಜನರಿಂದ ಥಳಿತ!

ಸಿದ್ದಾಪುರ ತಾಲೂಕಿನ ಕಂಚಿಕೈನಲ್ಲಿ ರಸ್ತೆಯಲ್ಲಿ ವಾಹನ ಅಡ್ಡಗಟ್ಟಿ ದರೋಡೆ ಮಾಡುತಿದ್ದ ಖದೀಮರನ್ನು ಸ್ಥಳೀಯರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಶಿರಸಿ ಮೂಲದ ಶಫಿ,ಶಿವಮೊಗ್ಗ ಮೂಲದ ಟಿಪ್ಪುನಗರದ ಇರ್ಪಾನ್ ಜನರಿಂದ ಥಳಿತಕ್ಕೊಳಗಾದ ದರೋಡೆಕೋರರಾಗಿದ್ದು ಕುಮಟಾಕ್ಕೆ ಆಗಮಿಸಿದ್ದ ಇವರು ಬೈಕ್ ಕದ್ದು ದೇವಿಮನೆ ಘಟ್ಟದಲ್ಲಿ ಓರ್ವ ವಾಹನ ಸವಾರನನ್ನು ಅಡ್ಡಗಟ್ಟಿ ದರೋಡೆ ನಡೆಸಿ ನಂತರ ಸಿದ್ದಾಪುರ ಕಂಚಿಕೈ ಮಾರ್ಗದ ರಸ್ತೆಯಲ್ಲಿ ಬೈಕ್ ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುತಿದ್ದ ಸುಬ್ರಹ್ಮಣ್ಯ ಎಂಬ ಯುವಕನನ್ನು ಅಡ್ಡಗಟ್ಟಿ ಚಾಕು ತೋರಿಸಿ ಹಣ ದರೋಡೆ ಮಾಡುವಾಗ ಸ್ಥಳೀಯ ಗ್ರಾಮಸ್ಥರು ಗಮನಿಸಿ ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಥಳಿತದಿಂದ ಗಂಭೀರ ಗಾಯಗೊಂಡಿದ್ದ ಇಬ್ಬರು ದರೋಡೆಕೋರರನ್ನು ಸಿದ್ದಾಪುರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ : ಬ್ಯಾಂಕಿಗೆ ಬಂದ ಮಹಿಳೆ ಮೈಮೇಲೆ ಬಂತು ದೇವರು!

Categories
ಶಿವಮೊಗ್ಗ

ಶಿವಮೊಗ್ಗ ಟಾಪ್ ನ್ಯೂಸ್

ಪಾರ್ಕಲ್ಲೇ ಆತ್ಮಹತ್ಯೆ ಯತ್ನ: ರಕ್ಷಿಸಿದ ಪೊಲೀಸರು!
– ಸೆಲ್ಫಿ ತೆಗೆಯಲು ಹೋಗಿದ್ದ ಯುವಕ ಶವವಾಗಿ ಪತ್ತೆ
– ಶಿವಮೊಗ್ಗ: 655 ಮಂದಿಗೆ ಎಸ್. ಎಂ.ಎಸ್ ಮೂಲಕ ನೋಟಿಸ್!
– ಭದ್ರಾವತಿ: ವಿಐಎಸ್ಎಲ್ ಕಾರ್ಖಾನೆ ಮತ್ತೆ ಶುರು

NAMMUR EXPRESS NEWS
ಗಾಜಿನ ಚೂರಿನಿಂದ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಅಪ್ರಾಪ್ತ ವಯಸ್ಸಿನ ಯುವತಿಯನ್ನು ಗಸ್ತಿನಲ್ಲಿದ್ದ ಇ.ಆರ್.ಎಸ್.ಎಸ್ ವಾಹನದ ಸಿಬ್ಬಂದಿಗಳಿಬ್ಬರು ರಕ್ಷಿಸಿ, ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. 17 ವರ್ಷ ವಯೋಮಾನದ ಯುವತಿಯೇ ಆತ್ಮಹತ್ಯೆಗೆ ಯತ್ನಿಸಿದವರಾಗಿದ್ದಾರೆ. ವಿನೋಬನಗರ ಪೊಲೀಸ್ ಠಾಣೆ ಪೇದೆ ರಾಘವೇಂದ್ರ ಹಾಗೂ ವಾಹನ ಚಾಲಕ ಎ.ಹೆಚ್.ಸಿ. ಚನ್ನಕೇಶವ ಸಕಾಲದಲ್ಲಿ ನೆರವಾದ ಪೊಲೀಸ್ ಸಿಬ್ಬಂದಿಗಳಾಗಿದ್ದಾರೆ. ಸಿಬ್ಬಂದಿಗಳು ಇ.ಆರ್.ಎಸ್.ಎಸ್ ವಾಹನದಲ್ಲಿ ವಿನೋಬನಗರ ಠಾಣಾ ವ್ಯಾಪ್ತಿಯಲ್ಲಿ ಮಧ್ಯಾಹ್ನ ಗಸ್ತಿನಲ್ಲಿದ್ದಾಗ, ಫ್ರೀಡಂ ಪಾರ್ಕ್ ನಲ್ಲಿ ಯುವತಿಯೋರ್ವಳು ತನ್ನ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸುತ್ತಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಯುವತಿಯನ್ನು ವಾಹನದಲ್ಲಿಯೇ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಜೀವ ರಕ್ಷಣೆ ಮಾಡಿದ್ದಾರೆ. ಸಿಬ್ಬಂದಿಗಳ ಸಕಾಲಿಕ ನೆರವಿಹಸ್ತಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಅಭಿನಂದಿಸಿದ್ದಾರೆ.

ಸೆಲ್ಫಿ ತೆಗೆಯಲು ಹೋಗಿದ್ದ ಯುವಕ ಶವವಾಗಿ ಪತ್ತೆ

ಸೆಲ್ಫಿ ತೆಗೆಯಲು ಶಿವಮೊಗ್ಗ ಗಾಜನೂರಿನ ಪವರ್ ಹೌಸ್ ಬಳಿ ನೀರು ಪಾಲಾಗಿದ್ದ ಮಿಳಘಟ್ಟದ ಯುವಕ ಹರೀಶ 18 ದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದಾನೆ.‌ ಗಾಜನೂರು ಡ್ಯಾಂನ ಪವರ್ ಹೌಸ್ ಬಳಿ ದೊಡ್ಡ ಬಂಡೆಯ ಬಳಿ ನೀರುಪಾಲಾಗಿದ್ದ ಯುವಕ ಹರೀಶ್ ಮಧ್ಯಾಹ್ನ ಶವವಾಗಿ ಪತ್ತೆಯಾಗಿದ್ದಾನೆ. ಆ.10 ರಂದು ಗುರುವಾರ ಸಂಜೆ ಮಿಳಘಟ್ಟದ ಹರೀಶ್ ತನ್ನ ಸ್ನೇಹಿತರೊಂದಿಗೆ ಗಾಜನೂರಿನ ತುಂಗ ಜಲಾಶಯದ ಪವರ್ ಹೌಸ್ ಬಳಿ ತೆರಳಿದಾಗ ಸೆಲ್ಫಿ ತೆಗೆಯಲು ಮುಂದಾದಾಗ ನದಿಗೆ ಬಿದ್ದಿದ್ದನು. ಆದರೆ ಆತನ ಕುಟುಂಬ ನೀರುಪಾಲಾಗಿರುವ ಹರೀಶ್ ಸಾವನ್ನ ಕೊಲೆ ಎಂದು ಆರೋಪಿಸಿ ಆತನ ಜೊತೆ ಬಂದಿದ್ದ ಸ್ನೇಹಿತರ ವಿರುದ್ಧ ಶಂಕೆ ವ್ಯಕ್ತಪಡಿಸಿದ್ದರು. 26 ವರ್ಷದ ಯುವಕ ಹರೀಶ್ ಸ್ನೇಹಿತರೊಂದಿಗೆ ತೆರಳಿದಾಗ ಮದ್ಯ ಸೇವಿಸಿ ಸೆಲ್ಫಿಗೆ ಇಳಿದಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಘಟನೆ ನಡೆದ ವಿಷಯವ‌ನ್ನ ಆತನ ಸ್ನೇಹಿತರೇ ತುಂಗನಗರ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದರು. ಹೊಸಹೊನ್ನಾಪುರ ಮತ್ತು ಮತ್ತೂರು ಸೇತುವೆ ಬಳಿ ನಲ್ಲಿ ಹರೀಶನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಶಿವಮೊಗ್ಗ: 655 ಮಂದಿಗೆ ಎಸ್. ಎಂ.ಎಸ್ ಮೂಲಕ ನೋಟಿಸ್!

ಸಂಚಾರ ನಿಯಮ ಪಾಲಿಸಿದೆ ಅಡ್ಡಾದಿಡ್ಡಿ ವಾಹನ ಚಲಾಯಿಸಿದ 655 ವಾಹನ ಮಾಲೀಕರಿಗೆ ಮೊದಲ ದಿನ ಎಸ್‌ಎಂಎಸ್‌ ಮೂಲಕ ನೊಟೀಸ್‌ ತಲುಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಶಿವಮೊಗ್ಗ ನಗರದ ವಿವಿಧೆಡೆ ಅಳವಡಿಸಿರುವ ಸ್ಮಾರ್ಟ್‌ ಕ್ಯಾಮರಾಗಳನ್ನು ಬಳಸಿ ಅಡ್ಡಾದಿಡ್ಡಿ ವಾಹನ ಚಲಾಯಿಸುವವರಿಗೆ ನೊಟೀಸ್‌ ಜಾರಿ ಮಾಡುವ ವ್ಯವಸ್ಥೆ ಆ.28ರಿಂದ ಶಿವಮೊಗ್ಗ ನಗರದಲ್ಲಿ ಜಾರಿಗೆ ಬಂದಿದೆ. ಮೊದಲ ದಿನ ವಿವಿಧ ಸಂಚಾರ ನಿಯಮ ಉಲ್ಲಂಘಿಸಿದವರಿಗೆ ನೊಟೀಸ್‌ ಕಳುಹಿಸಲಾಗಿದೆ. ಸಿಗ್ನಲ್‌ ಜಂಪ್‌ ಮಾಡಿದ 613 ಪ್ರಕರಣ, ಅತಿ ವೇಗ 63 ಪ್ರಕರಣ, ಹೆಲ್ಮೆಟ್‌ ರಹಿತ ಚಾಲನೆ 4 ಪ್ರಕರಣ, ಸೀಟ್‌ ಬೆಲ್ಟ್‌ ಧರಿಸದೆ ಕಾರು ಚಾಲನೆ 1 ಪ್ರಕರಣ, ವಾಹನ ಚಾಲನೆ ವೇಳೆ ಮೊಬೈಲ್‌ ಬಳಕೆ 1 ಪ್ರಕರಣವನ್ನು ಕ್ಯಾಮರಾದಲ್ಲಿ ಪತ್ತೆ ಮಾಡಲಾಗಿದೆ.

ಭದ್ರಾವತಿ: ವಿಐಎಸ್ಎಲ್ ಕಾರ್ಖಾನೆ ಮತ್ತೆ ಶುರು

ಎನ್‌ಆರ್‌ಎಂ ಘಟಕಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು. ಸೋಮವಾರದಿಂದ ಘಟಕದಲ್ಲಿ ಕೆಲಸ ಆರಂಭವಾಗಿದೆ. ಅಧಿಕಾರಿಗಳು, ಕಾರ್ಮಿಕರು ಕಾರ್ಖಾನೆಯ ಎನ್‌ಆರ್‌ಎಂ ಘಟಕದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಕೆಲಸ ಆರಂಭ ಮಾಡಲಾಯಿತು. ಕಳೆದ ವಾರ ಬಿಲಾಯ್ ಘಟಕದಿಂದ ಕಾರ್ಖಾನೆಗೆ 19 ವ್ಯಾಗನ್ ಬ್ಲೂಮ್‌ಗಳನ್ನು ಸರಬರಾಜು ಮಾಡಲಾಗಿತ್ತು. ಪೂಜೆ ವೇಳೆ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಚಾಂದ್ವಾನಿ, ಕಾರ್ಮಿಕರು ಹಾಜರಿದ್ದರು. ಸುರಕ್ಷಿತವಾಗಿ ಕೆಲಸ ನಡೆಸುವಂತೆ ಕಾರ್ಮಿಕರಿಗೆ ಚಾಂದ್ವಾನಿ ಸೂಚಿಸಿದರು.

ಇದನ್ನೂ ಓದಿ : ಬ್ಯಾಂಕಿಗೆ ಬಂದ ಮಹಿಳೆ ಮೈಮೇಲೆ ಬಂತು ದೇವರು!

Categories
ತೀರ್ಥಹಳ್ಳಿ

ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಸಂಭ್ರಮ!

ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಸಂಭ್ರಮ!
– ಆ.31ಕ್ಕೆ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಆಚರಣೆ
– ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಈಡಿಗ ಸಂಘಟನೆಗಳ ಸಹಯೋಗ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಆಡಳಿ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಆರ್ಯ ಈಡಿಗರ, ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘ, ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 169 ನೇ ಜಯಂತಿ ಆಚರಣೆಯನ್ನು ಬೆಳಿಗ್ಗೆ 11.30 ಕ್ಕೆ ಶಾಂತವೇರಿ ಗೋಪಾಲಗೌಡರ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಯೋಗಾನಂದ ಅವಧೂತರು ವಹಿಸಲಿದ್ದು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಹಾಗೂ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾದ ಸುಧಾಕರ್ ಆಗಮಿಸಲಿದ್ದಾರೆ.

ಕ್ಷೇತ್ರದ ಶಾಸಕರೂ,ಮಾಜಿ ಗೃಹ ಸಚಿವರಾದ ಆರಗ ಜ್ಞಾನೇಂದ್ರರವರ ಅಧ್ಯಕ್ಷತೆಯಲ್ಲಿ ಜರುಗಲಿರುವ ಈ ಕಾರ್ಯ ಕ್ರಮದ ಮುಖ್ಯ ಅತಿಥಿಗಳಾಗಿ ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರುಗಳಾದ ಎಸ್‌.ಎಲ್.ಭೋಜೇಗೌಡ,ಎಸ್ ರುದ್ರೇಗೌಡ, ಭಾರತಿ ಶೆಟ್ಟಿ.ಡಿ.ಎಸ್ ಅರುಣ್, ಉಪಾಧ್ಯಕ್ಷ ರಹಮತ್-ಉಲ್ಲಾ-ಅಸಾದಿ, ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ಮತ್ತು ಪ.ಪಂ ಸದಸ್ಯರುಗಳು ಹಾಗೂ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಯ ಅಧ್ಯಕ್ಷ- ಉಪಾಧ್ಯಕ್ಷ-ಸದಸ್ಯರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸರ್ವರನ್ನೂ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಹ್ವಾನಿಸಲಾಗಿದೆ.

ತೀರ್ಥಹಳ್ಳಿಯಲ್ಲಿ ಸಾರ್ವಜನಿಕ ಮೆರವಣಿಗೆ

ದಿನಾಂಕ : 31.08.2023 ನೇ ಗುರುವಾರ ಬೆಳಿಗ್ಗೆ 9.00 ಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಬೊಮ್ಮರಸಯ್ಯನ ಅಗ್ರಹಾರದಲ್ಲಿರುವ ಶ್ರೀ ನಾರಾಯಣ ಗುರು ಮಂದಿರದಲ್ಲಿ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ, ಪ್ರಸಾದ ವಿನಿಯೋಗವಿರುತ್ತದೆ. ನಂತರ ಬೊಮ್ಮರಸಯ್ಯನ ಅಗ್ರಹಾರದಿಂದ- ಕುರುವಳ್ಳಿ- ಕೊಪ್ಪ ವೃತ್ತ- ಆಗುಂಬೆ ಸರ್ಕಲ್‌-ಮಸೀದಿ ರಸ್ತೆ ಮುಖಾಂತರ ಸೊಪ್ಪುಗುಡ್ಡೆ ಶ್ರೀ ಶಾಂತವೇರಿ ಗೋಪಾಲಗೌಡ ರಂಗಮಂದಿರದ ವರೆಗೆ ಸಾರ್ವಜನಿಕ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ.

ಈಡಿಗ ಸಂಘಟನೆಗಳ ಸಾಥ್

ತೀರ್ಥಹಳ್ಳಿ ತಾಲೂಕಿನ ಶ್ರೀ ನಾರಾಯಣ ಗುರು ವಿಚಾರ ವೇದಿಕೆ, ಈಡಿಗರ ಸಂಘ, ಬಿಲ್ಲವ ಸಂಘ, ಈಡಿಗ ಮಹಿಳಾ ಸಂಘಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ.

ಇದನ್ನೂ ಓದಿ : ಬ್ಯಾಂಕಿಗೆ ಬಂದ ಮಹಿಳೆ ಮೈಮೇಲೆ ಬಂತು ದೇವರು!

Categories
ತೀರ್ಥಹಳ್ಳಿ ಶಿವಮೊಗ್ಗ

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರಿಡಲು ಪಟ್ಟು!

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರಿಡಲು ಪಟ್ಟು!
– ವಿಮಾನ ಸೇವೆ ವೇಳೆ ಕೇಂದ್ರ ಸರ್ಕಾರ ಅಂತಿಮಗೊಳಿಸಲು ಅಗ್ರಹ
– ಕುವೆಂಪು ಅವರ ಪುತ್ಥಳಿ ಸ್ಥಾಪಿಸಲಿ: ಕರವೇ ಅಧ್ಯಕ್ಷ ಯಡೂರು ಸುರೇಂದ್ರ ಗೌಡ

NAMMUR EXPRESS NEWS
ತೀರ್ಥಹಳ್ಳಿ : ಶಿವಮೊಗ್ಗದ ವಿಮಾನ ನಿಲ್ದಾಣದಲ್ಲಿ ಆಗಸ್ಟ್ 31 ರಿಂದ ವಿಮಾನ ಹಾರಾಟ ಮಾಡಲಿದ್ದು, ಇಡೀ ಶಿವಮೊಗ್ಗ ಜನತೆಗೆ ಸಂತೋಷದ ಸಂಗತಿ. ಜತೆಗೆ ಕುವೆಂಪು ಹೆಸರನ್ನು ತಕ್ಷಣ ಅಂತಿಮಗೊಳಿಸಬೇಕು ಎಂದು ತೀರ್ಥಹಳ್ಳಿ ಕರವೇ ಅಧ್ಯಕ್ಷ ಯಡೂರು ಸುರೇಂದ್ರ ಗೌಡ ಅಗ್ರಹಿಸಿದ್ದಾರೆ. ಕನ್ನಡಿಗರ, ಶಿವಮೊಗ್ಗ ಜನತೆಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಆಶಯದಂತೆ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನ ಈಗಾಗಲೇ ರಾಜ್ಯ ಸರ್ಕಾರ ಸಚಿವ ಸಂಪುಟ ಅವರ ಹೆಸರನ್ನು ಅಂತಿಮಗೊಳಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ. ಕೇಂದ್ರ ಸರ್ಕಾರ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿ, ಕುವೆಂಪು ಅವರ ಪುತ್ಥಳಿಯನ್ನ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸುವಂತೆ ತೀರ್ಥಹಳ್ಳಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಯಡೂರು ಸುರೇಂದ್ರಗೌಡ ಅವರು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.

ವಿಮಾನ ಸೇವೆಗೆ ಕ್ಷಣಗಣನೆ

ಶಿವಮೊಗ್ಗ ವಿಮಾನ ನಿಲ್ದಾಣದಿಂದ ಆ.31ರಂದು ಅಧಿಕೃತ ಸೇವೆ ಸಿಗಲಿದೆ. ಈಗಾಗಲೇ ವಿಮಾನ ನಿಲ್ದಾಣ ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ. ಈ ಹಂತದಲ್ಲಿ ಕುವೆಂಪು ಹೆಸರು ಅಂತಿಮಗೊಳಿಸಬೇಕು ಎಂಬ ಅಗ್ರಹ ಹೆಚ್ಚಾಗಿದೆ.

ಇದನ್ನೂ ಓದಿ : ಜಿಯೋ ಕಂಪನಿ ಆಫರ್ ಹೆಸರಲ್ಲಿ ಮಹಾ ಮೋಸ!

Categories
ಇತರೆ ಸುದ್ದಿ

ಹಾವಿನ ದ್ವೇಷ 12 ವರ್ಷ: ಬಾಲಕನಿಗೆ ಕಚ್ಚಿದ್ದು 9 ಬಾರಿ..!

ಹಾವಿನ ದ್ವೇಷ 12 ವರ್ಷ: ಬಾಲಕನಿಗೆ ಕಚ್ಚಿದ್ದು 9 ಬಾರಿ..!
– ಬಾಲಕನಿಗೆ 9 ತಿಂಗಳಿನಲ್ಲಿ 9 ಬಾರಿ ಕಡಿದ ಹಾವು
– ಚಿತ್ತಾಪುರ ತಾಲೂಕಿನಲ್ಲಿ ನಡೆದ ವಿಚಿತ್ರ ಘಟನೆ
– ಆ ಹಾವು ಬೇರೆ ಯಾರ ಕಣ್ಣಿಗೂ ಕಾಣುತ್ತಿಲ್ಲ!

NAMMUR EXPRESS NEWS : ಇದೊಂದು ವಿಚಿತ್ರ ಘಟನೆ. ಹಾವು ಒಬ್ಬ ಬಾಲಕನ ಹುಡುಕಿ ಹುಡುಕಿ ಕಚ್ಚುತ್ತಿದೆಯಾ ಗೊತ್ತಿಲ್ಲ. ಅಥವಾ ಆ ಬಾಲಕನ ಮೇಲೆ ಯಾವ ದ್ವೇಷ ಇದೆಯೋ ಗೊತ್ತಿಲ್ಲ. ಆದರೆ ಹೋದಲ್ಲಿ ಬಂದಲ್ಲಿ ಆತನನ್ನೇ ಹುಡುಕಿ ಕಚ್ಚುತ್ತಿದೆ!  ಹೌದು. ಇಂತಹ ವಿಚಿತ್ರ ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ನಡೆದಿದೆ. ವಿಜಯಕುಮಾರ್ ಮತ್ತು ಉಷಾ ದಂಪತಿಯ ಪುತ್ರ ಪ್ರಜ್ವಲ್ (15) ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಾನೆ. ಈತನಿಗೆ ಎರಡು ತಿಂಗಳಲ್ಲಿ ಒಂದಲ್ಲ ಎರಡಲ್ಲ ಬರೊಬ್ಬರಿ ಒಂಬತ್ತು ಬಾರಿ ತನಗೆ ಹಾವು ಕಚ್ಚಿದೆ ಎಂದು ಪ್ರಜ್ವಲ್ ಹೇಳಿದ್ದಾನೆ. ಆತನ ಈ ಮಾತು ಈಗ ಚರ್ಚೆಗೆ ಕಾರಣ ಆಗಿದೆ. ಪ್ರಜ್ವಲ್‌ಗೆ ಹಲಕರ್ಟಿ ಗ್ರಾಮದ ಮನೆಯಲ್ಲಿ ಜುಲೈ 3 ರಂದು ಮೊದಲ ಬಾರಿ ಹಾವು ಕಡಿದಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬ ಹಲಕರ್ಟಿ ಗ್ರಾಮ ಬಿಟ್ಟು ಚಿತ್ತಾಪುರ ತಾಲೂಕಿನ ವಾಡಿಯಲ್ಲಿ ವಾಸವಾಗಿದ್ದಾರೆ.

ವಾಡಿಯಲ್ಲಿ ಮನೆ ಮಾಡಿಕೊಂಡು ವಾಸ ಮಾಡುತ್ತಿರುವ ಸಂದರ್ಭದಲ್ಲೂ ಪ್ರಜ್ವಲ್‌ಗೆ ಮತ್ತೆ ಹಾವು ಕಡಿದಿದೆ. ಆದರೆ ಈ ಹಾವು ಮಾತ್ರ ಪೋಷಕರಿಗೆ, ಕುಟುಂಬಸ್ಥರಿಗೆ ಯಾರಿಗೂ ಕಾಣಿಸಿಕೊಂಡಿಲ್ಲ. ಪ್ರಜ್ವಲ್ ಕಣ್ಣಿಗೆ ಮಾತ್ರ ಕಾಣಿಸಿಕೊಳ್ಳುತ್ತಿದೆ.
ಹಾವಿನಿಂದ ಒಂಬತ್ತು ಬಾರಿ ಕಡಿತಕ್ಕೆ ಒಳಗಾದಾಗ ಆರು ಬಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಮೂರು ಬಾರಿ ನಾಟಿ ಔಷಧದ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್‌ಚಾರ್ಜ್ ಆದ ಬಳಿಕ ಎರಡೂರು ದಿನದಲ್ಲೇ ಹಾವು ಮತ್ತೆ ಕಡೆಯುತ್ತಿದೆ. ಸದ್ಯ ಪ್ರಜ್ವಲ್ ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರಜ್ವಲ್‌ಗೆ ನಿಜವಾಗಿಯೂ ಹಾವು ಕಡಿಯುತ್ತಿದೆಯಾ ಎಂಬ ಕುತೂಹಲ ಹೆಚ್ಚಾಗಿದೆ. ಇನ್ನು ಪ್ರಜ್ವಲನ ಪೋಷಕರು ಈ ಹಾವಿನಿಂದ ಮುಕ್ತಿ ಕೊಡಿಸು ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.

ಇದನ್ನೂ ಓದಿ : ಜಿಯೋ ಕಂಪನಿ ಆಫರ್ ಹೆಸರಲ್ಲಿ ಮಹಾ ಮೋಸ!

Categories
ಶಿವಮೊಗ್ಗ

ಬ್ಯಾಂಕಿಗೆ ಬಂದ ಮಹಿಳೆ ಮೈಮೇಲೆ ಬಂತು ದೇವರು!

ಬ್ಯಾಂಕಿಗೆ ಬಂದ ಮಹಿಳೆ ಮೈಮೇಲೆ ಬಂತು ದೇವರು!
– ಶಿವಮೊಗ್ಗದ ಆಯನೂರು ಬ್ಯಾಂಕಿನಲ್ಲಿ ಘಟನೆ
– ಕೂದಲು ಬಿಚ್ಚಿ, ಕೂಗುತ್ತಾ ಕುಳಿತ ಮಹಿಳೆ
– 20 ಸಾವಿರ ರೂ. ಹಣಕ್ಕೆ ಪಟ್ಟು: ಏನಿದು ಘಟನೆ?

NAMMUR EXPRESS NEWS
ಆಯನೂರು( ಶಿವಮೊಗ್ಗ): ಶಿವಮೊಗ್ಗದ ಆಯನೂರು ಬ್ಯಾಂಕಿಗೆ ಬಂದ ಮಹಿಳೆಯೊಬ್ಬರು 20 ಸಾವಿರ ರೂ. ಹಣ ನೀಡುವಂತೆ ಪಟ್ಟು ಹಿಡಿದಿದ್ದಲ್ಲದೆ ತನ್ನ ಮೇಲೆ ದೇವರು ಬಂದಿದೆ ಎಂದು ಕೂಗಾಡಿ ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಮೈ ಮೇಲೆ ದೇವರು ಬಂದಿದೆ ಎಂದು ತಿಳಿಸಿ ಬ್ಯಾಂಕಿನಲ್ಲಿದ್ದವರಿಗೆ ಕೆಲಕಾಲ ಆತಂಕ ಮೂಡಿಸಿದ್ದ ಮಹಿಳೆ ಆಯನೂರಿನ ಬ್ಯಾಂಕ್ ಒಂದರ ಗ್ರಾಹಕಿ. ಬ್ಯಾಂಕಿಗೆ ಬಂದ ಆಕೆ 20 ಸಾವಿರ ರೂ. ಚೆಕ್‌ ಕೊಟ್ಟು, ಹಣ ನೀಡುವಂತೆ ತಿಳಿಸಿದ್ದಳು. ಪರಿಶೀಲಿಸಿದಾಗ ಆಕೆಯ ಖಾತೆಯಲ್ಲಿ 2 ಸಾವಿರ ರೂ. ಮಾತ್ರ ಇತ್ತು. ಹಾಗಾಗಿ ಬ್ಯಾಂಕ್‌ ಸಿಬ್ಬಂದಿ ಹಣ ನೀಡಲು ಬರುವುದಿಲ್ಲ ಎಂದು ತಿಳಿಸಿದ್ದರು. ಇದರಿಂದ ಆಕ್ರೋಶಗೊಂಡ ಮಹಿಳೆ ತನಗೆ 20 ಸಾವಿರ ರೂ. ಹಣ ಬೇಕೇಬೇಕು ಎಂದು ಪಟ್ಟು ಹಿಡಿದಿದ್ದಳು. ಕೆಲ ಸಮಯದ ಬಳಿಕ ಕೂದಲು ಕೆದರಿಕೊಂಡು ಮೈ ಮೇಲೆ ದೇವರು ಬಂದಂತೆ ಆಡಲು ಶುರು ಮಾಡಿದಳು. ಇದರಿಂದ ಬ್ಯಾಂಕ್‌ ಸಿಬ್ಬಂದಿ ಮತ್ತು ಇತರೆ ಗ್ರಾಹಕರು ಆತಂಕಕ್ಕೀಡಾದರು. ಬ್ಯಾಂಕಿನ ಮಧ್ಯದಲ್ಲಿ ಚೇರ್‌ ಹಾಕಿ ಕುಳಿತುಕೊಂಡ ಮಹಿಳೆ, ‘ನಾನು ದೇವರು, ನನಗೆ ದುಡ್ಡು ಕೊಡಿ. ಈಗ ಹೊಟ್ಟೆ ಹಸಿವಾಗುತ್ತಿದೆ’ ಎಂದು ಮಾತನಾಡಲು ಆರಂಭಿಸಿದರು.

ವಿಚಾರ ತಿಳಿಯುತ್ತಿದ್ದಂತೆ ಕುಂಸಿ ಠಾಣೆ ಪೊಲೀಸರು ಬ್ಯಾಂಕಿಗೆ ದೌಡಾಯಿಸಿದರು. ಮಹಿಳೆಯನ್ನು ಸಮಾಧಾನಿಸಿ ಕಳುಹಿಸಲು ಯತ್ನಿಸಿದರು. ಆದರೆ ತಾನು ದೇವರು ಎಂದು ಆಕೆ ತಿಳಿಸಿ ಬ್ಯಾಂಕಿನಲ್ಲಿ ಮತ್ತಷ್ಟು ಕೂಗಾಟ ಮಾಡಿದಳು. ಆಕೆಯ ಪರಿಸ್ಥಿತಿ ಗಮನಿಸಿದ ಪೊಲೀಸರು 500 ರೂ. ಹಣ ನೀಡಲು ಮುಂದಾದರು. ಆಗ ಆಕೆ, ‘ಇದು 500 ರೂ. ನನಗೆ 20 ಸಾವಿರ ರೂ. ಹಣ ಬೇಕು’ ಎಂದು ಹಠ ಹಿಡಿದಳು ಮಹಿಳೆಯ ತಾಯಿಯನ್ನು ಬ್ಯಾಂಕಿಗೆ ಕರೆಸಿದ ಪೊಲೀಸರು ಆಕೆಯನ್ನು ಸಮಾಧಾನಪಡಿಸಿದರು. ಮಹಿಳೆಯ ಅಸಹಾಯಕತೆ ಕಂಡು ಎಎಸ್‌ಐ ನಂಜುಂಡಪ್ಪ 500 ರೂ. ನೀಡಿ ಕಳುಹಿಸಿದರು. ಮಹಿಳೆ ಹೊರ ನಡೆಯುತ್ತಿದ್ದಂತೆ ಬ್ಯಾಂಕ್‌ ಸಿಬ್ಬಂದಿ ನಿಟ್ಟುಸಿರು ಬಿಟ್ಟರು. ಪಿಎಸ್‌ಐ ಶಾಂತರಾಜ್‌, ಎಎಸ್‌ಐ ನಂಜುಂಡಪ್ಪ, ಸಿಬ್ಬಂದಿ ಲಕ್ಷ್ಮಿ, ಹೆಡ್‌ ಕಾನ್ಸ್‌ಟೇಬಲ್‌ ಸತೀಶ್‌ ಸ್ಥಳಕ್ಕೆ ಆಗಮಿಸಿದ್ದರು.

ಇದನ್ನೂ ಓದಿ : ಜಿಯೋ ಕಂಪನಿ ಆಫರ್ ಹೆಸರಲ್ಲಿ ಮಹಾ ಮೋಸ!

Categories
ಚಿಕ್ಕಮಗಳೂರು

ಟಾಪ್ ನ್ಯೂಸ್ ಚಿಕ್ಕಮಗಳೂರು

ನೀರಿನ ಮೋಹಕ್ಕೆಬಾಲಕ ಬಲಿ..!
– ಕಡೂರಿನಲ್ಲಿ ನಡೆದ ಘಟನೆ: ಬಾಲಕನ ಶವ ಪತ್ತೆ
– ಮೂಡಿಗೆರೆ: 60 ಸೀಟಿನ ಸರ್ಕಾರಿ ಬಸ್ಸಲ್ಲಿ 150 ಜನ…!
– ಕಾಫಿನಾಡು ತಲುಪಿದ ಸೌಜನ್ಯ ಪಾದಯಾತ್ರೆ
– ಹೆಂಡ್ತಿ ಮನೆ ಮುಂದೆ ಗಂಡನ ವಾಮಾಚಾರ: ಅರೆಸ್ಟ್
– ಇಸ್ಪೀಟ್ ದಂಧೆಯಲ್ಲಿ ಸಿಕ್ಕಿಬಿದ್ದ ಪೊಲೀಸ್ ಅಧಿಕಾರಿ

NAMMUR EXPRESS NEWS
ಕಡೂರು: 15 ವರ್ಷದ ಬಾಲಕ ಈಜಲು ಹೋಗಿ ಪ್ರಾಣ ಕಳೆದುಕೊಂಡಿರುವ ಘಟನೆ ಕಡೂರು ತಾಲೂಕಿನ ಹಾರುವನಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ಮೃತ ಬಾಲಕನನ್ನು ಕಡೂರು ಪಟ್ಟಣದ ಕಲುಂಡಿ ಲೇಔಟ್ ನಿವಾಸಿ ಪಾರ್ಥಸಾರಥಿ (15) ಎಂದು ಗುರುತಿಸಲಾಗಿದೆ. ವರದಿಯ ಪ್ರಕಾರ, ಬಾಲಕ ಭಾನುವಾರ (ಆಗಸ್ಟ್ 27) ಮಧ್ಯಾಹ್ನ ಆಟವಾಡಲು ಹೊರಗೆ ಹೋಗುವುದಾಗಿ ತನ್ನ ಕುಟುಂಬಕ್ಕೆ ತಿಳಿಸಿದ್ದನು ಮತ್ತು ಸಂಜೆಯಾದರೂ ಮನೆಗೆ ಹಿಂತಿರುಗಿರಲಿಲ್ಲ. ಪೋಷಕರು ಆತಂಕದಿಂದ ಹುಡುಕಾಡಿದರೂ ಬಾಲಕನ ಸುಳಿವು ಸಿಕ್ಕಿಲ್ಲ. ಏತನ್ಮಧ್ಯೆ, ಹುಡುಗನ ಪೋಷಕರು ಹತಾಶ ಹುಡುಕಾಟವನ್ನು ಪ್ರಾರಂಭಿಸಿದರು, ಆದರೆ ಅವನ ಗುರುತು ಪತ್ತೆಯಾಗಲಿಲ್ಲ.ಕೊನೆಗೆ ಶವ ಪತ್ತೆಯಾಗಿದೆ.

ಕೊಟ್ಟಿಗೆಹಾರದಲ್ಲಿ ಸೌಜನ್ಯ ಪ್ರಕರಣದ ಪ್ರತಿಭಟನೆ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ (ಕೆ.ಆರ್.ಎಸ್) ವತಿಯಿಂದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ನೇತೃತ್ವದಲ್ಲಿ ಬೆಳ್ತಂಗಡಿಯಿಂದ ಬೆಂಗಳೂರಿಗೆ ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ನ್ಯಾಯ ದೊರಕಿಸಲು ಪ್ರತಿಭಟನಾ ನಡಿಗೆ ಮೂರು ದಿನದಿಂದ ಆರಂಭವಾಗಿದ್ದು ಸೋಮವಾರ ಸಂಜೆ ಕೊಟ್ಟಿಗೆಹಾರ, ಬಣಕಲ್‌ಗೆ ತಲುಪಿದೆ. ಪಕ್ಷದ ರಾಜ್ಯ ಕಾರ್ಯದರ್ಶಿ ರಘು ಜಾಣಗೆರೆ ಮಾತನಾಡಿ ‘ಗೃಹ ಸಚಿವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಯಾವ ಒತ್ತಡಕ್ಕೂ ಮಣಿಯದೇ ಮರು ತನಿಖೆಗೆ ಆದೇಶಿಸಬೇಕು. ಸೌಜನ್ಯ ಮಹಿಳಾ ಆಯೋಗ ಸ್ಥಾಪನೆಯಾಗಬೇಕು. ಸೌಜನ್ಯ ಪ್ರಕರಣದಲ್ಲಿ ಕರ್ತವ್ಯ ಲೋಪವೆಸಗಿದ ತನಿಖಾಧಿಕಾರಿ ವಿರುದ್ಧ ತನಿಖೆಯಾಗಬೇಕು. ಪ್ರಕರಣದ ದಾರಿ ತಪ್ಪಿಸಿದ ಪೊಲೀಸರ ಕ್ರಮಕ್ಕೂ ಶಿಕ್ಷೆಯಾಗಬೇಕು’ ಎಂದು ಆಗ್ರಹಿಸಿದರು. ಪಕ್ಷದ ಉಪಾಧ್ಯಕ್ಷ ಲಿಂಗೇಗೌಡ, ಸಿ.ಎನ್.ದೀಪಕ್, ರಘುಪತಿ, ಮಲ್ಲಿಕಾರ್ಜುನ್ ಭಟ್ನಳ್ಳಿ, ಆರೋಗ್ಯಸ್ವಾಮಿ, ಜೀವನ್, ಎನ್. ಮೂರ್ತಿ, ರವಿಕುಮಾರ್, ಮೋಹನ್‌ ಪಕ್ಷದ ಕಾರ್ಯಕರ್ತರು ಇದ್ದರು.

ಇಸ್ಪೀಟ್ ದಂಧೆಯಲ್ಲಿ ಸಿಕ್ಕಿಬಿದ್ದ ಪೊಲೀಸ್ ಅಧಿಕಾರಿ!

ಇಸ್ಪೀಟ್ ದಂಧೆಯಲ್ಲಿ ಸಿಕ್ಕಿ ಬಿದ್ದ ಪೊಲೀಸ್ ಕಾನ್ಸ್‌ಟೇಬಲ್ ಚಂದ್ರಶೇಖರ್ ಅವರನ್ನು ಅಮಾನತುಗೊಳಿಸಿದ ಘಟನೆ ನಡೆದಿದೆ. ಇಸ್ಪೀಟ್ ದಂಧೆ ಕುರಿತಂತೆ ಖಚಿತ ಮಾಹಿತಿ ಪಡೆದ ಜಿಲ್ಲಾ ಸೆನ್ ಠಾಣೆಯ ಪೊಲೀಸರು ಆ.27ರಂದು ಮೂಡಿಗೆರೆಯ ಕಾಡುಮಲ್ಲಿಗೆ ಎಸ್ಟೇಟ್ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಬಣಕಲ್ ಠಾಣೆಯ ಹೆಡ್ ಕಾನ್ಹೇಬಲ್ ಚಂದ್ರಶೇಖರ್ ಕೂಡ ಸಿಕ್ಕಿಬಿದ್ದಿದ್ದಾನೆ. ಕೂಡಲೇ ಆರೋಪಿಗಳನ್ನು ವಶಕ್ಕೆ ಪಡೆದ ಸೆನ್ ಪೊಲೀಸರು ಹೆಚ್ಚಿನ ಮಾಹಿತಿ ಪಡೆಯಲು ವಿಚಾರಣೆಗೊಳಪಡಿಸಿದ್ದಾರೆ.

60 ಸೀಟಿನ ಸರ್ಕಾರಿ ಬಸ್ಸಲ್ಲಿ 150 ಜನ…!

ಮೂಡಿಗೆರೆ: ಕೊಟ್ಟಿಗೆಹಾರದಿಂದ ಹೊರನಾಡಿಗೆ ಹೊರಟಿದ್ದ ಸರ್ಕಾರಿ ಬಸ್ಸಿನಲ್ಲಿ ನಿಲ್ಲೋಕೂ ಜಾಗವಿಲ್ಲದಷ್ಟು ಜನರು ತುಂಬಿದ್ದರು. ಕೋಪಗೊಂಡ ಮಹಿಳೆಯರು ಕಂಡಕ್ಟರ್ ಜೊತೆಗೆ ಗಲಾಟೆಗೆ ಇಳಿದು ಇನ್ನಷ್ಟು ಜನರನ್ನು ಬಸ್ ಗೆ ಹತ್ತಿಸಿಕೊಳ್ಳುವಂತೆ ದುಂಬಾಲು ಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಸ್ ನಿಲ್ದಾಣದಲ್ಲಿ ನಡೆದಿದೆ. ಅಚ್ಚರಿ ಎಂದರೆ ಈ ಬಸ್ ಸಾಮರ್ಥ್ಯ 60 ಸೀಟ್. ಆದ್ರೆ 150 ಕ್ಕೂ ಹೆಚ್ಚು ಜನ ಇದ್ದರು.

ತವರು ಮನೆಗೆ ಹೋದ ಪತ್ನಿ ಮೇಲೆ ಸಿಟ್ಟಿಗೆ ವಾಮಾಚಾರ!

ಪತ್ನಿ ಪತಿ ಜೊತೆ ಜಗಳವಾಡಿದ್ದು, ಇದರಿಂದಾಗಿ ಪತ್ನಿ ತವರು ಮನೆಗೆ ಹೋಗಿದ್ದಾಳೆ. ತವರು ಮನೆಗೆ ಹೋದ ಪತ್ನಿಗೆ ಬುದ್ಧಿ ಕಲಿಸಬೇಕು ಅಂತ ಪತಿ ಪತ್ನಿಯ ತವರು ಮನೆಗೆ ಮಾಟ ಮಾಡಿಸಿರುವ ಹಾಸ್ಯಾಸ್ಪದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಮತ್ತಿ ಕಟ್ಟೆ ಗ್ರಾಮದಲ್ಲಿ ನಡೆದಿದೆ. ಬಣಕಲ್ ಸಮೀಪದ ಮತ್ತಿಕಟ್ಟೆ ಗ್ರಾಮದ ಸತೀಶ್‌ ಎಂಬುವರು ತನ್ನ ತಂಗಿ ಸುಮಿತ್ರರನ್ನ 12 ವರ್ಷಗಳ ಹಿಂದೆ ಮರಸಣಿಗೆ ಗ್ರಾಮದ ಗುರುಮೂರ್ತಿ ಎಂಬುವರಿಗೆ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾದಗಿನಿಂದಲೂ ಗಂಡ ಹೆಂಡತಿ ಮಧ್ಯೆ ಆಗಾಗ ಜಗಳನಡೆಯುತ್ತಲೇ ಇತ್ತು. ದೊಡ್ಡವರು ರಾಜಿ- ಪಂಚಾಯತಿ ಮಾಡುತ್ತಲೇ ಇದ್ದರು. ಕಳೆದ ಒಂದು ತಿಂಗಳ ಹಿಂದೆ ಗಂಡ ಹೆಂಡತಿ ಮಧ್ಯೆ ಮತ್ತೆ ಜಗಳವಾದ ಕಾರಣ ಸುಮಿತ್ರ ಅಣ್ಣನ ಮನೆ ಸೇರಿದ್ದಳು. ಇದರಿಂದ ಕೋಪಗೊಂಡ ಪತಿ ಗುರುಮೂರ್ತಿ ಸೋಮವಾರ ಬೆಳಗಿನ ಜಾವ 4 ಗಂಟೆಗೆ ಸುಮಿತ್ರ ಅವರ ಅಣ್ಣ ಸತೀಶ್ ಮನೆ ಮುಂದೆ ಯಾವುದೋ ಪ್ರಾಣಿಯ ರಕ್ತಚೆಲ್ಲಿ ವಾಮಾಚಾರ ಮಾಡಿರುವುದು ಕಂಡು ಬಂದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ : ಜಿಯೋ ಕಂಪನಿ ಆಫರ್ ಹೆಸರಲ್ಲಿ ಮಹಾ ಮೋಸ!