Categories
ಬೆಂಗಳೂರು

ಧರ್ಮಸ್ಥಳ ಸೌಜನ್ಯ ಪ್ರಕರಣ: ಮತ್ತೆ ಕೋರ್ಟಿನತ್ತ!

ಧರ್ಮಸ್ಥಳ ಸೌಜನ್ಯ ಪ್ರಕರಣ: ಮತ್ತೆ ಕೋರ್ಟಿನತ್ತ!
– ಮತ್ತೆ ಯಾವುದಾದರೂ ತನಿಖೆ ನಡೆಸಲು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ರಿಟ್
– ಮಹೇಶ ಶೆಟ್ಟಿ ತಿಮರೋಡಿ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ

NAMMUR EXPRESS NEWS
ಬೆಂಗಳೂರು: ಧರ್ಮಸ್ಥಳ ಸೌಜನ್ಯ ಹತ್ಯೆ ಪ್ರಕರಣದ ಕೇಸು ಈಗ ಮತ್ತೆ ಕೋರ್ಟ್ ಮೆಟ್ಟಿಲೇರಿದೆ.
ವಿದ್ಯಾರ್ಥಿನಿ ಸೌಜನ್ಯ ಹತ್ಯೆ ಮತ್ತು ಸಿಬಿಐ ನ್ಯಾಯಾಲಯದ ತೀರ್ಪಿನ ನಂತರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಕುಟುಂಬದವರನ್ನು ಸ್ಥಾಪಿತ ಹಿತಾಸಕ್ತಿಗಳು ಅವಹೇಳನ ಮಾಡುತ್ತಿರುವ ಬೆಳವಣಿಗೆಗಳು ನಡೆಯುತ್ತಿದೆ. ಇದೀಗ ಕೇಸ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಸೌಜನ್ಯ ಕೇಸ್‌ನಲ್ಲಿ ನ್ಯಾಯ ಒದಗಿಸಲು ಮತ್ತೆ ಯಾವುದಾದರೂ ತನಿಖೆ ನಡೆಸಲು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಡಾ.ಹೆಗ್ಗಡೆ ಕುಟುಂಬದವರು ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಕೋರ್ಟ್‌ ಆದೇಶಗಳನ್ನು ತಿದ್ದಿ ನಿಜವನ್ನು ಮರೆಮಾಚುತ್ತಿರುವ, ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸುತ್ತಿರುವ ಹಾಗೂ ನ್ಯಾಯಾಲಯ ಮತ್ತು ನ್ಯಾಯಮೂರ್ತಿಗಳನ್ನು ನಿಂದಿಸುತ್ತಿರುವ ಹೋರಾಟಗಾರ ಮಹೇಶ ಶೆಟ್ಟಿ ತಿಮರೋಡಿ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವಂತೆ ಡಾ.ಹೆಗ್ಗಡೆ ಕುಟುಂಬದವರ ಪರ ಕೋರ್ಟ್‌ಗೆ ಸಲ್ಲಿಕೆಯಾಗಿರುವ ರಿಟ್ ಅರ್ಜಿಯಲ್ಲಿ ಮನವಿ ಸಲ್ಲಿಸಲಾಗಿದೆ.

ಸೌಜನ್ಯ ಹತ್ಯೆ ಪ್ರಕರಣದ ಕುರಿತು ಈಗಾಗಲೇ ಸಿಬಿಐ ತನಿಖೆ ನಡೆಸಿ ನ್ಯಾಯಾಲಯಕ್ಕೆ ಜಾರ್ಜ್‌ಶೀಟ್ ಅನ್ನೂ ಸಲ್ಲಿಸಿದ್ದು ಪ್ರಕರಣದಲ್ಲಿ ಬಂಧಿತ ಸಂತೋಷ್ ರಾವ್‌ನನ್ನು ನ್ಯಾಯಾಲಯವೇ ನಿರಪರಾಧಿ ಎಂದು ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ತೀವ್ರ ಪ್ರತಿಭಟನೆಗಳು ಆರಂಭವಾಗಿವೆ. ಕರಾವಳಿಯಲ್ಲಿ ಸೌಜನ್ಯ ನ್ಯಾಯಕ್ಕಾಗಿ ಹೋರಾಟ ತೀವ್ರಗೊಂಡಿರುವ ನಡುವೆ ಈ ನಡೆ ಗಮನ ಸೆಳೆದಿದೆ.

ದೇವರೇ ಶಿಕ್ಷೆ ಕೊಡಬೇಕು!

ಸೌಜನ್ಯ ಹಂತಕರಿಗೆ ದೇವರೇ ಶಿಕ್ಷೆ ಕೊಡಬೇಕು ಎಂದು ಈಗಾಗಲೇ ಧರ್ಮಸ್ಥಳ ಸೇರಿ ಎಲ್ಲಾ ದೇಗುಲಗಳಲ್ಲಿ ಪ್ರಾರ್ಥನೆ ನಡೆಸಲಾಗುತ್ತಿದೆ. ಈಗ ಹೋರಾಟ ಕೂಡ ತೀವ್ರವಾಗುತ್ತಿದೆ.

ಇದನ್ನೂ ಓದಿ : ಜಿಯೋ ಕಂಪನಿ ಆಫರ್ ಹೆಸರಲ್ಲಿ ಮಹಾ ಮೋಸ!

Categories
ಕರಾವಳಿ

ಕರಾವಳಿಯಲ್ಲಿ ಹೆಚ್ಚಾದ ಆನ್ಲೈನ್ ಮೋಸ!

ಕರಾವಳಿಯಲ್ಲಿ ಹೆಚ್ಚಾದ ಆನ್ಲೈನ್ ಮೋಸ!
– ಆನ್ಲೈನ್ ಅಲ್ಲಿ ಸಾಲ ಪಡೆದು ಜೀವ ಕಳೆದುಕೊಂಡ ವ್ಯಕ್ತಿ
– ಮಂಗಳೂರು, ಉಡುಪಿಯಲ್ಲಿ ವಂಚಕರ ದೊಡ್ಡ ಜಾಲ
– ಒಮ್ಮೆ ನೀವೂ ಯಾಮಾರಿದ್ರೆ ಜೀವ, ಜೀವನ ತೆಗೀತಾರೆ!

NAMMUR EXPRESS NEWS
ಮಂಗಳೂರು/ಉಡುಪಿ: ಕರಾವಳಿಯಲ್ಲಿ ಆನ್ಲೈನ್ ಮೋಸ, ವಂಚನೆ ಪ್ರಕರಣಗಳು ದಿನ ಬೆಳಗಾದರೆ ಹೆಚ್ಚಾಗುತ್ತಿದೆ. ಇತ್ತೀಚಿಗೆ ಯುವತಿಯೊಬ್ಬಳಿಗೆ ಆಪ್ ಅಲ್ಲಿ ಸಾಲ ಕೊಟ್ಟು ಬಳಿಕ ಅಶ್ಲೀಲ ಫೋಟೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ ಜಾಲ ಇದೀಗ ಮತ್ತೊಂದು ಜೀವವನ್ನೇ ತೆಗೆದಿದೆ. ಆನ್ಲೈನ್ ಅಲ್ಲಿ ಮೋಸ ಮಾಡುವ ಜಾಲ ದಿನೇ ದಿನೇ ಹೆಚ್ಚಾಗಿದ್ದು, ಮಂಗಳೂರು, ಉಡುಪಿಯಲ್ಲಿ ವಂಚಕರ ದೊಡ್ಡ ಜಾಲ ಕೆಲಸ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಲೋನ್ ಆ್ಯಪ್ ಸಾಲ ಪಡೆದು ಜೀವ ಕಳೆದುಕೊಂಡ ವ್ಯಕ್ತಿ.!

ಆನ್‌ಲೈನ್ ಸಾಲ ಮಾಡಿ ಕರೆಗಳ ಕಾಟ ತಡೆಯಲಾರದೆ ವ್ಯಕ್ತಿ ಆತ್ಮಹತ್ಯೆ ಆನ್‌ಲೈನ್ ಸಾಲಕ್ಕೆ ಸಂಬಂಧಿಸಿ ಪೋನ್ ಕರೆಗಳಿಗೆ ಬೆದರಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ ಎನ್ನಲಾದ ಘಟನೆ ಆ.26ರಂದು ಸಂಜೆ ಮಣಿಪಾಲ ಹುಡ್ಕೊ ಕಾಲೋನಿ ಎಂಬಲ್ಲಿ ನಡೆದಿದೆ. ಮೃತರನ್ನು ಶಿವಳ್ಳಿಯ ರಾಘವೆಂದ್ರ ಎ.ಶಾನಭಾಗ್(49) ಎಂದು ಗುರುತಿಸಲಾಗಿದೆ.
ಇವರು ಆನ್‌ಲೈನ್‌ನಲ್ಲಿ ಸಾಲ ತೆಗೆದುಕೊಂಡಿದ್ದರು. ಇದರಿಂದ ಫೋನ್ ಕರೆಗಳು ಬರುತ್ತಿದ್ದು ಈ ಕಾರಣದಿಂದ ಜೀವನದಲ್ಲಿ ಜಿಗುಪ್ಪೆಗೊಂಡು ಮನೆಯ ಮಹಡಿಯ ಮೇಲೆ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಡುಗಿಯರ ಫೋಟೋ ಕಳುಹಿಸಿ ಬ್ಲಾಕ್ಮೇಲ್!

ಮತ್ತೊಂದು ಆನ್ಲೈನ್ ಜಾಲ ಹುಡುಗಿಯರ ಫೋಟೋ ಕಳುಹಿಸಿ ಬಳಿಕ ತಮ್ಮ ಫೋಟೋ ಜತೆ ಜೋಡಿಸಿ ಅವರ ವಾಟ್ಸಪ್, ಫೇಸ್ಬುಕ್ ಕಳುಹಿಸಿ ಅಲ್ಲಿಂದ ಮಾನ ಮರ್ಯಾದೆ ತೆಗೆಯುವುದಾಗಿ ಬೆದರಿಕೆ ಹಾಕುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಮಂಗಳೂರು, ಉಡುಪಿ, ಮಣಿಪಾಲ ಭಾಗದಲ್ಲಿ ಈ ದಂಧೆ ಹೆಚ್ಚಾಗಿದೆ. ಹೊರ ಊರಿನವರು ಇಲ್ಲಿಯ ಜನರ ಟಾರ್ಗೆಟ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಪೊಲೀಸ್ ಇಲಾಖೆ, ಸೈಬರ್ ಪೊಲೀಸ್ ಇಂತಹ ವಂಚಕರ ಮೇಲೆ ಕಣ್ಣು ಇಡಬೇಕಿದೆ.

ಇದನ್ನೂ ಓದಿ : ಜಿಯೋ ಕಂಪನಿ ಆಫರ್ ಹೆಸರಲ್ಲಿ ಮಹಾ ಮೋಸ!

Categories
ಬೆಂಗಳೂರು

ವಿಶ್ವದಲ್ಲೇ ಭಾರತ ಸೂಪರ್ ಪವರ್!

ವಿಶ್ವದಲ್ಲೇ ಭಾರತ ಸೂಪರ್ ಪವರ್!
– ಚಂದ್ರ ಆಯ್ತು, ಸೂರ್ಯನ ಅಂಗಳದಲ್ಲಿ ಭಾರತ ಇತಿಹಾಸ!
– ವಿಶ್ವದ ಕಣ್ಣು ಈಗ ಭಾರತದ ಮೇಲೆ
– ಸೆ.2ರಂದು ಸೂರ್ಯನತ್ತ ಭಾರತ: ಇಸ್ರೋ ಮತ್ತೊಂದು ಹೆಜ್ಜೆ

NAMMUR EXPRESS NEWS
ಬೆಂಗಳೂರು: ಭಾರತ ಈಗ ವಿಶ್ವ ಮಟ್ಟದಲ್ಲಿ ಹಲವು ಸಾಧನೆಗೆ ಮುನ್ನುಡಿ ಬರೆಯುತ್ತಿದೆ. ಚಂದ್ರಯಾನದ 3ರ ಯಶಸ್ಸಿನ ಬಳಿಕ ಸೂರ್ಯನ ಅಂಗಳಕ್ಕೆ ಹಾರುವ ಯೋಜನೆಗೆ ಭಾರತದ ಹೆಮ್ಮೆಯ ಇಸ್ರೋ ಮುಂದಾಗಿದೆ. ಸೂರ್ಯಯಾನದ ಮುಹೂರ್ತ ಫಿಕ್ಸ್ ಮಾಡಿದೆ. ಸೆಪ್ಟೆಂಬರ್ 2ರಂದು ಭಾರತದ ಮಹತ್ವಾಕಾಂಕ್ಷೆಯ ಆದಿತ್ಯ L-1 ಉಡಾವಣೆಯಾಗಲಿದೆ. ಈಗಾಗಲೇ ವಿಶ್ವದ ಬಲಿಷ್ಠ ರಾಷ್ಟ್ರಗಳು ಪ್ರಯತ್ನಕ್ಕೆ ಮುಂದಾಗಿದ್ದು ಭಾರತವೂ ಈಗ ಹೊಸ ಸಾಹಸಕ್ಕೆ ಇಳಿದಿದೆ.

ಏನಿದು ಯೋಜನೆ?:

ತಮಿಳುನಾಡಿನ ಶ್ರೀಹರಿಕೋಟಾದಲ್ಲಿರೋ ಸತೀಶ್ ಧವನ್ ಸ್ಪೇಸ್ ಸೆಂಟರ್‌ನಿಂದ ಬೆಳಗ್ಗೆ 11.50ಕ್ಕೆ ಆದಿತ್ಯಯಾನದ ನೌಕೆ ಉಡಾವಣೆಯಾಗಲಿದೆ. ಕೇವಲ 378 ಕೋಟಿ ರೂಪಾಯಿ ವೆಚ್ಚದಲ್ಲಿ ಇಸ್ರೋ ಮಿಷನ್ ಸನ್ ಕೈಗೊಂಡಿದೆ. ಸೋಮವಾರ ಅಧಿಕೃತವಾಗಿ ಇಸ್ರೋ ಉಡಾವಣೆ ಸಮಯ ಘೋಷಿಸಿದೆ.

ಇಸ್ರೋ ಆದಿತ್ಯ ಎಲ್-1 ಅನ್ನು ಭೂಮಿಯಿಂದ 1.5 ಮಿಲಿಯನ್ ಕಿಲೋಮೀಟರ್ ದೂರದ ಲಾಂಗ್ರೇಜ್ ಪಾಯಿಂಟ್‌ಗೆ ತಲುಪಿಸುತ್ತದೆ. ಚಂದ್ರನಿಂದ ನಾಲ್ಕು ಪಟ್ಟು ದೂರದ ಅಂತರ ಇದಾಗಿದೆ. ಬಾಹ್ಯಾಕಾಶ ಆಧಾರಿತ ವೀಕ್ಷಣಾಲಯ ಇದಾಗಿರಲಿದೆ. ಅಂದರೆ, ಆ ಪಾಯಿಂಟ್‌ನಲ್ಲಿ ಸ್ಥಿರವಾಗಿ ನಿಲ್ಲಲಿರೋ ಈ ನೌಕೆ, ಸೂರ್ಯನ ಅಧ್ಯಯನ ಕೈಗೊಳ್ಳಲಿದೆ.
ಸೂರ್ಯನ ಬಳಿ ಈ ವೀಕ್ಷಣಾಲಯ ಯಾವ ರೀತಿ ತೆರೆದುಕೊಳ್ಳಲಿದೆ ಎಂದೂ ಇಸ್ರೋ ಚಿತ್ರ ಸಹಿತ ಮಾಹಿತಿ ನೀಡಿದೆ. ಇಸ್ರೋದ ಬಾಹುಬಲಿ ರಾಕೆಟ್, ಈ ನೌಕೆಯನ್ನು ಭೂಮಿಯ ಕೆಳಕ್ಷಕೆಯಲ್ಲಿ ಸ್ಥಾಪನೆ ಮಾಡಲಿದೆ. ಬಳಿಕ ನೌಕೆಯಲ್ಲಿರುವ ಪ್ರಪಲ್ಕನ್ ಮಾಡ್ಯುಲ್‌ಅನ್ನು ಬಳಸಿಕೊಂಡು ದೀರ್ಘ ಕಕ್ಷೆಯ ಮೂಲಕ ಇದನ್ನು ಲಾಂಗ್ರೇಜ್ -1 ಪಾಯಿಂಟ್‌ಗೆ ತಲುಪಿಸುವುದು ಇಸ್ರೋದ ಗುರಿಯಾಗಿದೆ.

ಈ ಎಲ್-1 ಪಾಯಿಂಟ್ ಎನ್ನುವ ಪ್ರದೇಶದಲ್ಲಿ ಭೂಮಿಯಗುರುತ್ವಾಕರ್ಷಣೆ ಬಲ ಇರೋದಿಲ್ಲ. ಭೂಕಕ್ಷೆಯನ್ನು ದಾಟಿದ ಬಳಿಕ ಇದನ್ನು ಎಲ್-1ನ ಹೊರಗಿರುವ ದೊಡ್ಡ ಹಾಲೋ ಆರ್ಬಿಟ್‌ಗೆ ನೌಕೆಯನ್ನು ಸೇರಿಸಲಾಗುತ್ತದೆ. ಉಡಾವಣೆಯಿಂದ ಎಲ್-1ವರೆಗಿನ ಆದಿತ್ಯ-ಎಲ್1 ಯೋಜನೆಯ ಅವಧಿ ಭರ್ತಿ ನಾಲ್ಕು ತಿಂಗಳು. ಇನ್ನು ಇಡೀ ಯೋಜನೆಯ ಮೂಲ ಉದ್ದೇಶ ಸೂರ್ಯನ ಬಗ್ಗೆ ಇನ್ನಷ್ಟು ಆಳವಾಗಿ ತಿಳಿದುಕೊಳ್ಳುವುದು. ಸೂರ್ಯನ ಕರೋನಾ ಬಿಸಿಯಾಗುವ ಬಗ್ಗೆ ಸೌರ ಮಾರುತ ಹೇಗೆ ಎದ್ದೇಳಲಿದೆ ಎನ್ನುವ ಬಗ್ಗೆ ನೌಕೆ ಅಧ್ಯಯನ ಮಾಡಲಿದೆ. ಸೂರ್ಯನ ವಾತಾವರಣದ ಅಮೂಲಾಗ್ರ ಅಧ್ಯಯನವನ್ನೂ ಮಾಡಲಿದೆ. ಸೌರ ಮಂಡಲದಲ್ಲಿ ಸೌರ ಗಾಳಿ ಹಂಚಿಕೆಯಾಗುವ ಬಗ್ಗೆ ತಾಪಮಾನ ಏರುವ ಬಗ್ಗೆ ನೌಕೆ ತಿಳಿದುಕೊಳ್ಳಲಿದೆ.

ಚಂದ್ರನ ಮೇಲೆ ಕುಳಿ ಪತ್ತೆ!

ಚಂದ್ರನ ಮೇಲೆ ಮೂನ್ ವಾಕ್ ಮಾಡುತ್ತಿರುವ ರೋವರ್ ಗೆ ಪ್ರಗ್ಯಾನ್ ಗೆ ಸುಮಾರು 4 ಮೀಟರ್ ವ್ಯಾಸ ಹೊಂದಿರುವ ಕುಳಿಯೊಂದು ಎದುರಾಗಿದೆ ಎಂದು ಇಸ್ರೋ ಟ್ವಿಟ್ ಮಾಡಿದೆ. ಆಗಸ್ಟ್ 27ರಂದು ರೋವರ್ ತಾನಿದ್ದ ಸ್ಥಳದಿಂದ ಮೂರು ಮೀಟರ್ ಮುಂದೆ ಸಾಗುವ ಮಾರ್ಗದಲ್ಲಿ 4 ಮೀಟರ್ ವ್ಯಾಸದ ಕುಳಿಯೊಂದು ಪತ್ತೆಯಾಗಿದೆ. ಹಾಗಾಗಿ ರೋವರ್‌ ಸಾಗುತ್ತಿರುವ ಮಾರ್ಗವನ್ನು ಬದಲಿಸಲಾಗಿದೆ ಎಂದು ಇಸ್ರೋ ತನ್ನ ಟ್ವಿಟ್ ನಲ್ಲಿ ತಿಳಿಸಿದೆ. ಇದೀಗ ಸುರಕ್ಷಿತವಾದ ಹಾದಿಯಲ್ಲಿ ರೋವರ್ ಸಾಗುತ್ತಿದೆ ಎಂದು ಇಸ್ರೋ ತಿಳಿಸಿದೆ. ಈ ಟ್ವಿಟ್ ನೊಂದಿಗೆ ಇಸ್ರೋ ರೋವರ್ ಸೆರೆ ಹಿಡಿದ ಕುಳಿಯ ಚಿತ್ರವನ್ನೂ ಹಂಚಿಕೊಂಡಿದೆ.

ಇದನ್ನೂ ಓದಿ : ಜಿಯೋ ಕಂಪನಿ ಆಫರ್ ಹೆಸರಲ್ಲಿ ಮಹಾ ಮೋಸ!

Categories
ಕರಾವಳಿ ಮಲ್ನಾಡ್

ಅಯ್ಯೋ ಜ್ವರ, ಶೀತ, ತಲೆನೋವು!

ಅಯ್ಯೋ ಜ್ವರ, ಶೀತ, ತಲೆನೋವು!
– ಮಲೆನಾಡು, ಕರಾವಳಿಯಲ್ಲಿ ಅರೋಗ್ಯ ಏರುಪೇರು
– ಹವಾಮಾನದ ತೊಂದರೆ: ಆಸ್ಪತ್ರೆಯಲ್ಲಿ ಜನವೋ ಜನ – ಡೆಂಘಿ ಇತರೆ ರೋಗಗಳಿಂದ ಜನ ಹೈರಾಣ!

NAMMUR EXPRESS NEWS : ಶಿವಮೊಗ್ಗ/ಮಂಗಳೂರು: ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಹವಾಮಾನ ಬದಲಾದಂತೆ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಸಂಖ್ಯೆ ಹೆಚ್ಚಳವಾಗುತ್ತಿದೆ. ಪ್ರತಿ ಊರಲ್ಲೂ ಜನ ಶೀತ, ನೆಗಡಿ, ಜ್ವರದಿಂದ ಬಳಲುತ್ತಿದ್ದಾರೆ. ಇದೊಂದು ವೈರಸ್ ಮಾದರಿ ಕಾಯಲೆ ಆಗಿದ್ದು ಒಬ್ಬರಿಂದ ಒಬ್ಬರಿಗೆ ಅತೀ ವೇಗವಾಗಿ ಹರಡುತ್ತಿದೆ.
ಶೀತ, ನೆಗಡಿ, ಕೆಮ್ಮು,ತಲೆನೋವು, ಕಣ್ಣು ಉರಿ, ವಿಪರೀತ ಸೊಂಟ ನೋವು ಕಾಣಿಸಿಕೊಳ್ಳುತ್ತಿದೆ. ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಸೇರಿ ರಾಜ್ಯದ ಎಲ್ಲಾ ಭಾಗದಲ್ಲೂ ಈ ಜ್ವರ ಹೆಚ್ಚಿದೆ. ಸ್ಥಳೀಯ, ತಾಲೂಕು ಆಸ್ಪತ್ರೆಗಳ ಮುಂದೆ ಜನ ಸಾಲು ಸಾಲಾಗಿ ನಿಂತಿರುವುದು ಕಂಡು ಬರುತ್ತಿದೆ.

ಸರ್ಕಾರ, ಅರೋಗ್ಯ ಇಲಾಖೆ, ಆಸ್ಪತ್ರೆ ಸಿಬ್ಬಂದಿ ಈ ಬಗ್ಗೆ ಗಮನ ಹರಿಸಬೇಕು. ಆಯಾ ಕ್ಷೇತ್ರದ ಶಾಸಕರು ತಕ್ಷಣ ಸಭೆ ಕರೆದು ಆರೋಗ್ಯ ಸೇವೆ ಸಮರ್ಪಕವಾಗಿ ಒದಗಿಸಲು ಸೂಚನೆ ನೀಡಬೇಕಿದೆ. ಜ್ವರದ ನಿರ್ಲಕ್ಷದಿಂದ ದೊಡ್ಡ ಅನಾಹುತ ಆಗಬಹುದು ಹಾಗೂ ವೈರಸ್ ಬದಲಾಗಿ ದೊಡ್ಡ ಕಾಯಿಲೆಗೆ ಒಳಗಾಗಬಹುದು. ನಮ್ಮ ಆರೋಗ್ಯ- ನಮ್ಮ ಹೊಣೆ
ಆಸ್ಪತ್ರೆಗಳಿಗೆ ತೆರಳಿ ಪರಿಶೀಲನೆ ಮಾಡಿಕೊಳ್ಳಿ.

ಇದನ್ನೂ ಓದಿ : ಜಿಯೋ ಕಂಪನಿ ಆಫರ್ ಹೆಸರಲ್ಲಿ ಮಹಾ ಮೋಸ!

Categories
ಬೆಂಗಳೂರು

ಮಹಿಳೆಯರ ಖಾತೆಗೆ 2000 ರೂ. ಹಣ!

ಮಹಿಳೆಯರ ಖಾತೆಗೆ 2000 ರೂ. ಹಣ!
– ಗೃಹಲಕ್ಷ್ಮಿ ಹಣಕ್ಕೆ ಕ್ಷಣಗಣನೆ ಶುರು: ಆ.30ಕ್ಕೆ ಕಾರ್ಯಕ್ರಮ
– ಮೈಸೂರಲ್ಲಿ ಅಧಿಕೃತ ಕಾರ್ಯಕ್ರಮದಲ್ಲಿ ಚಾಲನೆ
– ಆ.30ಕ್ಕೆ ಹಣ ಹಾಕಲಾಗುತ್ತಾ, ಆ.31ಕ್ಕೆ ಹಾಕ್ತಾರಾ?

NAMMUR EXPRESS NEWS
ಬೆಂಗಳೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ‘ಗೃಹಲಕ್ಷ್ಮಿ ಯೋಜನೆಗೆ ಆ.30ರಂದು ಚಾಲನೆ ಸಿಗಲಿದೆ. ಆಗಸ್ಟ್ 30ರ ಬುಧವಾರ ಮೈಸೂರಿನಲ್ಲಿ ನಡೆಯಲಿರುವ ಬೃಹತ್ ಕಾರ್ಯಕ್ರಮದಲ್ಲಿ ಯೋಜನೆಗೆ ಹಣ ಹಾಕುವ ಮೂಲಕ ಚಾಲನೆ ಸಿಗಲಿದ್ದು, ಸಿಎಂ ಸಿದ್ದರಾಮಯ್ಯ, ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಮೈಸೂರಲ್ಲೇ ವಾಸ್ತವ್ಯ ಹೂಡಿದ್ದಾರೆ. ರಾಜ್ಯದ ಪ್ರತಿ ಹಳ್ಳಿಯಲ್ಲೂ ಕಾರ್ಯಕ್ರಮ ನಡೆಯಲಿದೆ. ಮಹಿಳೆಯರ ಮೊಗದಲ್ಲಿ ಸಂಭ್ರಮ ಕಂಡು ಬರುತ್ತಿದೆ.

ಇನ್ನು ನೋಂದಣಿ ಆಗಿಲ್ಲ!:

ಜುಲೈ 19ರಂದು ಗೃಹಲಕ್ಷ್ಮಿ ಯೋಜನೆಗೆ ಅಧಿಕೃತ ಚಾಲನೆ ಸಿಕ್ಕಿದ್ದು; ಜುಲೈ 20ರಿಂದ ನೋಂದಣಿ ಪ್ರಾರಂಭವಾಗಿದೆ. ಈ ಒಂದೂವರೆ ತಿಂಗಳಲ್ಲಿ ಸಾಕಷ್ಟು ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ. ಶೇ.60 ಮಹಿಳೆಯರು ನೋಂದಣಿ ಮಾಡಿಕೊಂಡಿದ್ದು ಇನ್ನೂ ಶೇ.40 ರಷ್ಟು ಮಹಿಳೆಯರ ನೋಂದಣಿ ಆಗಬೇಕಿದೆ. ಈಗಾಗಲೇ ನೋಂದಣಿ ಮಾಡಿಕೊಂಡಿದ್ದರೆ ಅಂಥವರಿಗೆ ಆಗಸ್ಟ್ 30ರಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ ದಿನ ಅಥವಾ ಆಗಸ್ಟ್ 31ರ ಗುರುವಾರ ‘ರಕ್ಷಾ ಬಂಧನ’ ಹಬ್ಬದ ದಿನವೇ ಖಾತೆಗೆ ತಲಾ 2,000 ಹಣ ಜಮೆ ಮಾಡಲಾಗುತ್ತದೆ.

ನೋಂದಣಿ ಆದವರೆಷ್ಟು?

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಲಭ್ಯ ಇರುವ ಮಾಹಿತಿ ಪ್ರಕಾರ ಈವರೆಗೂ ಗೃಹಲಕ್ಷ್ಮಿ ಯೋಜನೆಯಡಿ 1,10,99,376 ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಬಹುತೇಕ ಒಂದೂವರೆ ತಿಂಗಳ ಅಂತರದಲ್ಲಿ 1.10 ಕೋಟಿ ಮಹಿಳೆಯರು ಸೌಲಭ್ಯ ಬಯಸಿ ನೋಂದಣಿಗೆ ಮಾಡಿಸಿಕೊಂಡಿರುವುದು ವಿಶೇಷ.

ನಿಮ್ಮ ಹೆಸರಿದೆಯಾ ಚೆಕ್ ಮಾಡಿಕೊಳ್ಳಿ!

ಫಲಾನುಭವಿಗಳ ಅಂತಿಮ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಎಂಬುದನ್ನು ಸರಕಾರ ನಿಯೋಜಿಸಿರುವ 8147500500 ಸಹಾಯವಾಣಿ ಸಂಖ್ಯೆಗೆ ಎಸ್ಎಂಎಸ್ ಮಾಡಿದರೆ ತಕ್ಷಣ ನಿಮ್ಮ ನೋಂದಣಿ ಕುರಿತ ಮಾಹಿತಿ ನಿಮ್ಮ ಮೊಬೈಗೆ ಬರಲಿದೆ. 8147500500 ಸಹಾಯವಾಣಿ ಸಂಖ್ಯೆಗೆ ಎಸ್ಎಂಎಸ್ ಮಾಡಿದ ತಕ್ಷಣ ನಿಮ್ಮ ನೋಂದಣಿ ಯಶಸ್ವಿಯಾಗಿದ್ದರೆ.
ನಿಮ್ಮ ಗೃಹಲಕ್ಷ್ಮಿ ಯೋಜನೆ ಅರ್ಜಿ ಸಂಖ್ಯೆ GL1702001XXXX ಅನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ -ಕರ್ನಾಟಕ ಸರಕಾರ’ ಎಂದು ಮೆಸೇಜ್ ಬರುತ್ತದೆ. ಹೀಗೆ ಮೆಸೇಜ್ ಬಂದರೆ ನೀವು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಫೈನಲ್ ಪಟ್ಟಿಯಲ್ಲಿ ಇದ್ದೀರಿ ಎಂದರ್ಥ. ನಿಮಗೆ ಗೃಹಲಕ್ಷ್ಮಿ ಯೋಜನೆಯ ಮೊದಲ ಕಂತಿನ 2,000 ಹಣ ಜಮಾ ಖಚಿತವಾಗಲಿದೆ.
ಬಹು ನಿರೀಕ್ಷೆಯ ಯೋಜನೆ ಇದಾಗಿದ್ದು, ಮಹಿಳೆಯರು ಕಾತುರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ : ಜಿಯೋ ಕಂಪನಿ ಆಫರ್ ಹೆಸರಲ್ಲಿ ಮಹಾ ಮೋಸ!

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ!

ತೀರ್ಥಹಳ್ಳಿಯಲ್ಲಿ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ!
– ರಾಜ್ಯದ ವಿವಿಧ ಭಾಗದಿಂದ ಮಕ್ಕಳ ಆಗಮನ
– ಸ್ಪರ್ಧೆ ಆಯೋಜನೆ ಮಾಡಿದ್ದ ಎಂ.ಜೆ. ಸ್ಕೂಲ್ ಅಫ್ ಮಾರ್ಷಲ್ ಆರ್ಟ್ಸ್
– ಆರಗ ಜ್ಞಾನೇಂದ್ರ ಉದ್ಘಾಟನೆ: ಮೆಚ್ಚುಗೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಅತ್ಯಂತ ಯಶಸ್ವಿಯಾಗಿ ನಡೆದಿದ್ದು ನೂರಾರು ಮಕ್ಕಳು ಸಂತಸದಿಂದ ಈ ಸ್ಪರ್ಧೆಯಲ್ಲಿ ಭಾಗಿಯಾದರು. ತೀರ್ಥಹಳ್ಳಿಯ ಸುವರ್ಣ ಸಹಕಾರ ಭವನದಲ್ಲಿ ತೀರ್ಥಹಳ್ಳಿಯ ಎಂ.ಜೆ. ಸ್ಕೂಲ್ ಅಫ್ ಮಾರ್ಷಲ್ ಆರ್ಟ್ಸ್, ತೀರ್ಥಹಳ್ಳಿ,ಮತ್ತು ಒಕಿನವನ್ ಶೋರಿನ್ ರೋ ಕರಾಟೆ ಡೊ ಅಸೋಸಿಯೇಷನ್, ಕರ್ನಾಟಕ ಇದರ ಸಹಯೋಗದಲ್ಲಿ ತೀರ್ಥಹಳ್ಳಿಯ ಪ್ರಸಿದ್ದ ಸೂಪರ್ ಮಾರ್ಟ್ ಟಿ. ಎಸ್. ಟಿ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಮಕ್ಕಳು ರಾಜ್ಯದ ವಿವಿಧ ಭಾಗದಿಂದ ಭಾಗಿಯಾದರು. ಶಿವಮೊಗ್ಗ ಜಿಲ್ಲಾ ಸ್ಫೋರ್ಟ್ಸ್, ಕರಾಟೆ ಡೋ ಅಸೋಸಿಯೇಷನ್ ಕಾಯಾಧ್ಯಕ್ಷರಾದ ವೈ.ಎಸ್. ಮಹಾಬಲ ಜೋಯಿಸ್‌ ನೇತೃತ್ವದಲ್ಲಿ ನಡೆದ ಈ ರಾಜ್ಯ ಮಟ್ಟದ ಸ್ಪರ್ಧೆಯನ್ನು ಮಾಜಿ ಗೃಹ ಸಚಿವ, ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ ಉದ್ಘಾಟನೆ ಮಾಡಿದರು.

ಮುಖ್ಯ ಅತಿಥಿಗಳಾಗಿ ಪಪಂ ಅಧ್ಯಕ್ಷರಾದ ಸುಶೀಲಾ ಶೆಟ್ಟಿ, ಡಿವೈಎಸ್ಪಿ ಗಜಾನನ ವಾಮನ ಸುತಾರ, ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ಧ ಸಹಕಾಲ ಸಂಘ ಅಧ್ಯಕ್ಷರಾದ ಮಹಾಬಲೇಶ್ವರ ಹೆಗ್ಗಡೆ, ಚಂದ್ರಕಾಂತ್‌ ಜಿ. ಭಟ್, ಅಧ್ಯಕ್ಷರು ಶಿವಮೊಗ್ಗ ಜಿಲ್ಲಾ ಸ್ಫೋರ್ಟ್ಸ್ ಕರಾಟೆ ಅಸೋಸಿಯೇಷನ್, ರಶ್ಮಿ ಸುರೇಂದ್ರ ಶಾಸ್ತ್ರಿ ಬಿ ಎಸ್ ಮುಖ್ಯಸ್ಥರು, ಶೋಟೋಕಾನ್ ಕರಾಟೆ ಅಸೋಸಿಯೇಷನ್ ಆಫ್ ಕರ್ನಾಟಕ ಶಿವಮೊಗ್ಗ ಜಿಲ್ಲೆ, ವಿವೇಕಾನಂದ ರೈ ಮುಖ್ಯಸ್ಥರು – ಒಕಿನವನ್ ಶೋಲನ್ -ರೋ ಕರಾಟೆ ಡೂ, ಬೆಂಗಳೂರು, ವಾಮನ್ ಪಾಲನ್, ಮುಖ್ಯಸ್ಥರು, ಬುಡೋಕಾನ್ ಕರಾಟೆ ಅಸೋಸಿಯೇಷನ್, ಉಡುಪಿ, ಅಶೋಕ್ ಕುಲಾಲ್ ನಾಡೂರು, ದಕ್ಷಿಣ ಕನ್ನಡ ಜಿಲ್ಲೆ.

ವಸಂತ್ ಕೆ. ಬಂಗೇರ, ಶೋಟೋಕಾನ್ ಕರಾಟೆ, ಮಂಗಳೂರು,ರಾಘವೇಂದ್ರ ಜೆ.ಕೆ. ಶೋಟೋಕಾಯ್ ಕರಾಟೆ, ಹೊಸನಗರ, ಮಿಥುನ್ ಡಿ.ಬಿ, ಶಿಕಾರಿಪುರ, ಅಲೋಕ್ ಸಾಗರ, ಸಾಗರ, ಹರೀಶ್, ನಗರ, ಬಿ ಸತೀಶ ನಾಯಕ್, ತೀರ್ಥಹಳ್ಳಿ, ಚಂದ್ರ ಎಚ್ ಬೆನಿಕೇರಿ,ಶಿವಮೊಗ್ಗ, ಲಕ್ಷ್ಮಣ್ ಆಚಾರ್, ಸಂಪೆಕಟ್ಟೆ, ನಗರ, ಮಹೇಶ್ ಜಿ.ಎಸ್‌. ತೀರ್ಥಹಳ್ಳಿ, ಮಂಜುನಾಥ್, ಹೊಸಂಗಡಿ, ಮೇಘನ, ಶಂಕರನಾರಾಯಣ ಇತರರು ಇದ್ದರು. ನಾಗರಾಜ್ ನಿರೂಪಿಸಿದರು. ಎಲ್ಲಾ ಗಣ್ಯರು ಕ್ರೀಡಾಕೂಟದ ಆಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೆ ವೇಳೆ ಸಾಧಕ ಹಾಗೂ ರಾಷ್ಟ್ರ ಮಟ್ಟದಲ್ಲಿ ಬ್ಲಾಕ್ ಬೆಲ್ಟ್ ಪಡೆದ ಕರಾಟೆ ಪಟುಗಳನ್ನು ಹಾಗೂ ಸಂಸ್ಥೆಯ ಬೆಳವಣಿಗೆಗೆ ಕಾರಣರಾದ ಹಿರಿಯರನ್ನು ಗೌರವಿಸಲಾಯಿತು.
( ತೀರ್ಥಹಳ್ಳಿ ಕರಾಟೆ ಸಾಧಕರು ಮತ್ತು ಚಾಂಪಿಯನ್ಶಿಪ್ ಗೆದ್ದವರ ಮತ್ತೊಂದು ವಿಶೇಷ ಸುದ್ದಿ ಬರಲಿದೆ.)

ಇದನ್ನೂ ಓದಿ : ಜಿಯೋ ಕಂಪನಿ ಆಫರ್ ಹೆಸರಲ್ಲಿ ಮಹಾ ಮೋಸ!

Categories
ರಾಜ್ಯ

ಟಾಪ್ ನ್ಯೂಸ್ ಕರ್ನಾಟಕ

ಸರ್ಕಾರಿ ಬಸ್-ಕಾರು ಅಪಘಾತಕ್ಕೆ 6 ಬಲಿ
– ರಾಮ ನಗರ ಜಿಲ್ಲೆ ಕನಕಪುರ ತಾಲೂಕಲ್ಲಿ ಘಟನೆ
– ಚಾಕು ಇರಿದು ತಾನೇ ಆಸ್ಪತ್ರೆಗೆ ಕರೆದುಕೊಂಡು ಹೋದ!
– 40 ಅಡಿ ಎತ್ತರದ ಗೋಡೆ ಹಾರಿ ಜೈಲಿನಿಂದ ಪರಾರಿಯಾದ ಆರೋಪಿ!
– ನಾಯಿ ಚೂ ಬಿಟ್ಟ ತಾತ…ತಾತನಿಗೆ ಚಾಕು ಇರಿತ!

NAMMUR EXPRESS NEWS
ರಾಮನಗರ: ಕೆಎಸ್‌ಆರ್ಟಿಸಿ ಬಸ್ ಮತ್ತು ಕ್ವಾಲಿಸ್ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ರಾಮನಗರ ಜಿಲ್ಲೆಯ ಕನಕಪುರದಲ್ಲಿ ಘಟನೆ ನಡೆದಿದೆ. ನಾಗೇಶ್, ಜ್ಯೋರ್ತಿಲಿಂಗ, ಪುಟ್ಟರಾಜು, ಕುಮಾರ, ಗೋವಿಂದ ಮೃತ ವ್ಯಕ್ತಿಗಳು ಮತ್ತೊಬ್ಬರ ಹೆಸರು ತಿಳಿದು ಬಂದಿಲ್ಲ. ಕೆಎಸ್‌ಆರ್‌ಟಿಸಿ ಬಸ್‌ ಚಾಲಕನಿಗೂ ತೀವ್ರ ಗಾಯವಾಗಿದೆ. ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿದ್ದ 12ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ. ಭೀಕರ ಅಪಘಾತದ ಪರಿಣಾಮ ಬಸ್ ನ ಮುಂಭಾಗಕ್ಕೆ ಕಚ್ಚಿಕೊಂಡಿದ್ದ ಕ್ವಾಲಿಸ್ ಕಾರನ್ನು ಅಗ್ನಿಶಾಮಕ ಸಿಬ್ಬಂದಿಯು ಜೆಸಿಬಿ ಮತ್ತು ಕ್ರೇನ್ ಸಹಾಯದಿಂದ ಬೇರ್ಪಡಿಸಿದ್ದಾರೆ. ಮೃತ ಆರು ಮಂದಿ ಬೆಂಗಳೂರು ಮೂಲದ ನಿವಾಸಿಗಳು. ಕೆಲವರು ವಿಧಾನಸೌಧದಲ್ಲಿನೌಕರರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಚಾಕು ಇರಿದು ತಾನೇ ಆಸ್ಪತ್ರೆಗೆ ಕರೆದುಕೊಂಡು ಹೋದ!

ರಾಮನಗರ ನಗರದ ಮಹಿಳಾ ಪಿಯು ಕಾಲೇಜು ಎದುರು ಯುವಕನೊಬ್ಬ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಗೆ ಚಾಕುವಿನಿಂದ ಇರಿದು, ಕಾರಿನಲ್ಲಿ ಅಪಹರಿಸಿರುವ ಘಟನೆ ನಡೆದಿದೆ. ಕನಕಪುರದ ದಾಳಿಂಬ ಗ್ರಾಮದ ನಿವಾಸಿ ಸಂಜನಾ ಎಂದಿನಂತೆ ಬೆಳಿಗ್ಗೆ 9.15ರ ಸುಮಾರಿಗೆ ಸಹಪಾಠಿಗಳೊಂದಿಗೆ ಕಾಲೇಜಿಗೆ ತೆರಳುತ್ತಿದ್ದರು. ಯುವತಿ ಕಾಲೇಜು ಪ್ರವೇಶದ್ವಾರಕ್ಕೆ ಬರುತ್ತಿದ್ದಂತೆ, ಕಾರಲ್ಲಿ ಬಂದ ಯುವಕ ಯುವತಿಗೆ ಚಾಕುವಿನಿಂದ ಇರಿದಿದ್ದಾನೆ. ನೋವಿನಿಂದ ಕುಸಿದ ಯುವತಿಯನ್ನು ಕಾರಿನೊಳಕ್ಕೆ ಎಳೆದುಕೊಂಡು ಪರಾರಿಯಾಗಿದ್ದಾರೆ. ಇದನ್ನು ಗಮನಿಸಿದ ಸ್ಥಳದಲ್ಲಿದ್ದವರು ಕಾರಿಗೆ ಕಲ್ಲು ತೂರಿ ತಡೆಯಲು ಯತ್ನಿಸಿದ್ದಾನೆ. ಆದರೂ, ನಿಲ್ಲಿಸದೆ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಘಟನೆಯನ್ನು ಕಾಲೇಜಿನ ಉಪನ್ಯಾಸಕರಿಗೆ ತಿಳಿಸಿದಾಗ, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಪಡೆದು ಅಪಹರಣಕಾರರ ಪತ್ತೆಗೆ ಬಲೆ ಬೀಸಿದರು. ಇನ್ನು ಚಾಕು ಇರಿದು ಅಪಹರಣ ಮಾಡಿದ ಯುವಕನನ್ನು ದಾಳಿಂಬ ಗ್ರಾಮದ ಚೇತನ್ ಎಂದು ಗುರುತಿಸಲಾಗಿದೆ. ಚಾಕು ಇರಿದ ನಂತರ ತೀವ್ರವಾಗಿ ಗಾಯಗೊಂಡಿದ್ದ ಸಂಜನಾಳನ್ನು ತಾನೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಈ ಮಾಹಿತಿ ತಿಳಿದ ಪೊಲೀಸರು ಚಾಕು ಇರಿದ ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

40 ಅಡಿ ಎತ್ತರದ ಗೋಡೆ ಹಾರಿ ಜೈಲಿನಿಂದ ಪರಾರಿಯಾದ ಆರೋಪಿ!

ದಾವಣಗೆರೆಯಲ್ಲಿ ಕೈದಿಯೊಬ್ಬ 40 ಅಡಿ ಎತ್ತರದ ಗೋಡೆ ಹಾರಿ ಜೈಲಿನಿಂದ ಪರಾರಿಯಾಗಿರುವ ಘಟನೆ ವರದಿಯಾಗಿದೆ. ಕಾರಾಗೃಹದ ಆವರಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಇಡೀ ದೃಶ್ಯ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರೋಪಿಯನ್ನು ವಸಂತ್ (23) ಎಂದು ಗುರುತಿಸಲಾಗಿದ್ದು, ಅತ್ಯಾಚಾರದ ಆರೋಪದ ಮೇಲೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಬಂಧಿಸಲಾಗಿತ್ತು. ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ, ಆತನನ್ನು ಜೈಲಿನಲ್ಲಿ ಇರಿಸಲಾಗಿತ್ತು. ಆಗಸ್ಟ್ 25ರಂದು ಉಪ- ಜೈಲಿನ 40 ಅಡಿ ಎತ್ತರದ ಗೋಡೆಯಿಂದ ವಸಂತ್ ಜಿಗಿದಿದ್ದಾನೆ. ತಪ್ಪಿಸಿಕೊಳ್ಳುವ ಸಮಯದಲ್ಲಿ ಆತನ ಬಲಗಾಲಿಗೆ ಗಂಭೀರ ಗಾಯದ ಹೊರತಾಗಿಯೂ, ಆತ ಜೈಲಿನ ಆವರಣದಿಂದ ತಪ್ಪಿಸಿಕೊಂಡಿದ್ದಾನೆ. ಸುದ್ದಿ ತಿಳಿದ ಕೂಡಲೇ ಜೈಲು ಅಧಿಕಾರಿಗಳು ಮತ್ತು ಸ್ಥಳೀಯ ಪೋಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ ಮತ್ತು ಪರಾರಿ ವಸಂತನನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಸಂಘಟಿತ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ಸಮೀಪದ ಹಾವೇರಿ ಜಿಲ್ಲೆಯಲ್ಲಿ ಆರೋಪಿಯನ್ನು ಪತ್ತೆಹಚ್ಚಲಾಗಿದೆ ಮತ್ತು 24 ಗಂಟೆಗಳ ಒಳಗೆ ಮತ್ತೆ ಬಂಧಿಸಲಾಗಿದೆ.

ನಾಯಿ ಚೂ ಬಿಟ್ಟ ತಾತ…ತಾತನಿಗೆ ಚಾಕು ಇರಿತ!

ನಾಯಿಯೊಂದು ಬೊಗಳಿದ್ದಕ್ಕೆ ಅದನ್ನು ವೃದ್ಧನೊಬ್ಬ ಚು ಬಿಟ್ಟಿದ್ದಾನೆ ಎಂಬ ಶಂಕೆಯಿಂದ ವ್ಯಕ್ತಿಯೊಬ್ಬ ಚಾಕು ಇರಿದಿರುವ ಘಟನೆ ಮಲ್ಲೇಶ್ವರಂನಲ್ಲಿ ನಡೆದಿದೆ. ಆರೋಪಿ ರಾಜು ವೃದ್ಧ ಬಾಲಸುಬ್ರಹ್ಮಣ್ಯ ಎಂಬವರಿಗೆ ಚಾಕು ಇರಿಯಲಾಗಿದೆ. ರಾಜು ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ನಾಯಿಯೊಂದು ಬೊಗಳಿತ್ತು. ಈ ನಾಯಿಯನ್ನು ವೃದ್ಧನೇ ಬಿಟ್ಟಿದ್ದಾನೆಂದು ಕೋಪಗೊಂಡ ರಾಜು ಚಾಕು ಇರಿದಿದ್ದಾನೆ.ಘಟನೆ ಬಗ್ಗೆ ಮಲ್ಲೇಶ್ವರಂ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದು, ವೃದ್ಧನಿಗೆ ಚಾಕು ಇರಿದ ಆರೋಪಿ ರಾಜುನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ : ಜಿಯೋ ಕಂಪನಿ ಆಫರ್ ಹೆಸರಲ್ಲಿ ಮಹಾ ಮೋಸ!

Categories
ತೀರ್ಥಹಳ್ಳಿ

ಪ್ರಶಾಂತಿ ಚಿಕಿತ್ಸಾಲಯದಲ್ಲಿ ಮತ್ತಷ್ಟು ಸೇವೆ!

ಪ್ರಶಾಂತಿ ಚಿಕಿತ್ಸಾಲಯದಲ್ಲಿ ಮತ್ತಷ್ಟು ಸೇವೆ!
– ನೂತನ ಚಿಕಿತ್ಸಾ ವಿಭಾಗಗಳ ಉದ್ಘಾಟನೆ
– ಮೂಲವ್ಯಾದಿ ಚಿಕಿತ್ಸಾ ವಿಭಾಗ, ಗರ್ಭ ಸಂಸ್ಕಾರ ಚಿಕಿತ್ಸಾ ವಿಭಾಗ ಆರಂಭ.
– ಡಾ.ಸದಾಶಿವ ನಿಲುವಾಸೆ ಅವರಿಗೆ ಸನ್ಮಾನ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಪ್ರಶಾಂತಿ ಚಿಕಿತ್ಸಾಲಯದಲ್ಲಿ ಈಗಾಗಲೇ ಪಂಚಕರ್ಮ ಮತ್ತು ಆಯುರ್ವೇದ ಸೇವೆ ಮೂಲಕ ಜನರ ಮೆಚ್ಚುಗೆ ಗಳಿಸಿದ್ದು ಇದೀಗ ಮತ್ತಷ್ಟು ಸೇವೆ ಲಭ್ಯವಾಗಲಿದೆ. ಭಾನುವಾರ ನೂತನ ಚಿಕಿತ್ಸಾ ವಿಭಾಗಗಳ ಉದ್ಘಾಟನೆ, ಮೂಲವ್ಯಾದಿ ಚಿಕಿತ್ಸಾ ವಿಭಾಗ, ಗರ್ಭ ಸಂಸ್ಕಾರ ಚಿಕಿತ್ಸಾ ವಿಭಾಗ ಆರಂಭವಾಗಿದೆ. ಇದೆ ವೇಳೆ ಪ್ರಸಿದ್ಧ ವೈದ್ಯ ಡಾ.ಸದಾಶಿವ ನಿಲುವಾಸೆ ಅವರಿಗೆ ಸನ್ಮಾನ ಮಾಡಲಾಯಿತು. ತೀರ್ಥಹಳ್ಳಿಯಲ್ಲಿ ಮೊಟ್ಟ ಮೊದಲ ಬಾರಿಗೆ ಮೂಲವ್ಯಾಧಿ ಮತ್ತು ಇತರ ಗುದುಗತ ಆಯುರ್ವೇದ ಚಿಕಿತ್ಸೆ ಇಲ್ಲಿ ಲಭ್ಯವಾಗಲಿದೆ.

ವೈದ್ಯಕೀಯ ವಿಜ್ಞಾನದಲ್ಲಿ ಹೇಳಿರುವಂತೆ ರಕ್ಷಾ ಸೂತ್ರ ಶಸ್ತ್ರ ಚಿಕಿತ್ಸಾ ಕೇಂದ್ರ ಮತ್ತು ಗರ್ಭ ಸಂಸ್ಕಾರ ಚಿಕಿತ್ಸೆ ಮಹಿಳೆಯರ ಬಂಜೆತನ ನಿವಾರಣ ಚಿಕಿತ್ಸೆ ಆಯುರ್ವೇದ ವೈದ್ಯಕೀಯ ವಿಜ್ಞಾನದಲ್ಲಿ ಹೇಳಿರುವಂತೆ ಗರ್ಭಿಣಿಯರ ಆರೈಕೆ ಬಾಣಂತಿಯ ಚಿಕಿತ್ಸೆ ಮತ್ತು ಇತರ ಸ್ತ್ರೀ ಇರುವ ಚಿಕಿತ್ಸಾ ವಿಭಾಗವನ್ನು ತೀರ್ಥಹಳ್ಳಿ ಮತ್ತು ಸುತ್ತಮುತ್ತಲ ಜನತೆಗೆ ಉಪಯೋಗವಾಗ ಎಂದು ತೆರೆಯಲಾಗಿದೆ. ಈ ಎರಡು ವಿಭಾಗಗಳಿಗೆ ಪ್ರತ್ಯೇಕವಾಗಿ ತಜ್ಞ ವೈದ್ಯರು ತೀರ್ಥಹಳ್ಳಿಯ ಪ್ರಶಾಂತಿ ಚಿಕಿತ್ಸಾಲಯಕ್ಕೆ ಆಗಮಿಸುತ್ತಿದ್ದು ಜನತೆ ಈ ವಿಶೇಷ ಚಿಕಿತ್ಸ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದು ಪ್ರಶಾಂತಿ ಚಿಕಿತ್ಸಾಲಯದ ಡಾ. ಸುಮೇಧ ಕಟ್ಟೆ ತಿಳಿಸಿದ್ದಾರೆ.

ಇದನ್ನೂ ಓದಿ : ಜಿಯೋ ಕಂಪನಿ ಆಫರ್ ಹೆಸರಲ್ಲಿ ಮಹಾ ಮೋಸ!

 

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಬೆಳ್ತಂಗಡಿ ಕಳ್ಳತನ: ಅಂತರ್ ಜಿಲ್ಲಾ ಕಳ್ಳ ಅರೆಸ್ಟ್
– ಮಂಗಳೂರು:ಅಕ್ರಮ ಸರಾಯಿ: ಇಬ್ಬರ ಬಂಧನ
– ಉಡುಪಿ ಕೃಷ್ಣ ಮಠದಲ್ಲಿ ಕೃಷ್ಣ ಜನ್ಮಾಷ್ಟಮಿ ಸ್ಪರ್ಧೆ
– ಬೆಳ್ತಂಗಡಿಯ ಹೊಳೆಯಲ್ಲಿ ಮೃತದೇಹ ಪತ್ತೆ!

NAMMUR EXPRESS NEWS : ಬೆಳ್ತಂಗಡಿ ತಾಲೂಕು ಸೇರಿದಂತೆ ಹಲವೆಡೆ ಸರಣಿ ಕಳ್ಳತನಗೈದಿದ್ದ ಅಂತರ್ ಜಿಲ್ಲಾ ಕಳ್ಳನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಕಾರ್ಕಳ ತಾಲೂಕು ನಿಟ್ಟೆ ಅಷ್ಟೊಟ್ಟು ನಿವಾಸಿ ಸುರೇಶ ನಿವಾಸಿ ಸುರೇಶ ಕೆ ಪೂಜಾರಿ (50) ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಕೆಲ ದಿನಗಳಿಂದ ಮುಂಡಾಜೆ, ಕಕ್ಕಿಂಜೆ, ಉಜಿರೆ, ಸೋಮಂತಡ್ಕ, ಕಲ್ಮಂಜ, ಕನ್ಯಾಡಿ, ಗುರುವಾಯನಕೆರೆ ನೆರಿಯ, ವೇಣೂರು ಮೊದಲಾದೆಡೆ ಸರಣಿ ಕಳ್ಳತನಗೈದಿದ್ದ ಅಂತರ್ಜಿಲ್ಲಾ ಕಳ್ಳನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಈತ ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ಸ್ಕೂಟಿಯೊಂದನ್ನು ಕಳ್ಳತನಗೈದು ಅದರಲ್ಲಿ ಸುತ್ತಾಡುತ್ತಾ ಒಬ್ಬಂಟಿಯಾಗಿ ರಾತ್ರಿವೇಳೆ ಹಲವೆಡೆ ಕಳ್ಳತನ ಕೃತ್ಯವೆಸಗುತ್ತಿದ್ದನೆಂದು ತನಿಖೆಯಿಂದ ದೃಢಪಟ್ಟಿದೆ.

ಅಕ್ರಮ ಸರಾಯಿ ಮಾರಾಟ ದಂಧೆ ಇಬ್ಬರ ಬಂಧನ

ಮಂಗಳೂರಿನ ಬಿಜೈ ಬಳಿ ಅಕ್ರಮ ಸರಾಯಿ ಮಾರಾಟ ಮಾಡುತ್ತಿದ್ದ ಚಿದಾನಂದ(35), ಸ್ವಾಮಿ ಗೌಡ (56) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 5750 ರೂ ಮೌಲ್ಯದ 90 ಎಮ್ ಎಲ್ ನ 128 ಮಧ್ಯದ ಪ್ಯಾಕೇಟ್ ಮತ್ತು ರೂ 2500 ನಗದನ್ನು ಸ್ವಾಧೀನಪಡಿಸಿಕೊಂಡಿದ್ದು, ಉರ್ವಾ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆಯನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಉಡುಪಿ ಮಠದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ!

ಉಡುಪಿ: ಪರ್ಯಾಯ ಶ್ರೀಕೃಷ್ಣಾಪುರ ಮಠದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಭೀಮ ಜ್ಯುವೆಲ್ಲರ್ಸ್‌ ಪ್ರಾಯೋಜಕತ್ವದಲ್ಲಿ ಸ್ಪರ್ಧೆಗಳು ನಡೆಯುತ್ತಿದ್ದು ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದು ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಾಳುಗಳಿಗೆ ಪ್ರಸಾದವನ್ನಿತ್ತು ಅನುಗ್ರಹಿಸಿದರು.
ನಂತರ ಸಾಂಪ್ರದಾಯಿಕ ಚುಕ್ಕಿ ರಂಗವಲ್ಲಿ ಸ್ಪರ್ಧೆ ನಡೆಯಿತು. ಪರ್ಯಾಯ ಮಠದ ದಿವಾನರು, ಕಾರ್ಯಕರ್ತರು ಭಾಗವಹಿಸಿದ್ದರು.

ಹೊಳೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಬೆಳ್ತಂಗಡಿ ತಾಲೂಕು ಬೆಳಾಲು ಗ್ರಾಮದ ಕೂಡಿಗೆ ಎಂಬಲ್ಲಿ ಹೊಳೆ ಬದಿ ಕೊಳೆತ ಸ್ಥಿತಿಯಲ್ಲಿ ಗುರುತು ಪತ್ತೆ ಸಿಗದ ಮೃತದೇಹವೊಂದು ಆ. 27ರಂದು ಪತ್ತೆಯಾಗಿದೆ. ಯಾದವ ಎಂಬವರು ಹಳ್ಳಿಮದ್ದಿಗೆಂದು ಮದ್ದಿನ ಗಿಡಗಳನ್ನು ಸಂಗ್ರಹಿಸಲು ಕಾಡಿಗೆ ತೆರಳಿದ್ದಾಗ ಹೊಳೆಯ ಬದಿಯಲ್ಲಿರುವ ಕಲ್ಲುಗಳ ಮಧ್ಯೆ ಸುಮಾರು 40-45 ವರ್ಷ ಪ್ರಾಯದ ಅಪರಿಚಿತ ಗಂಡಸು ಮೃತಪಟ್ಟು ಕೊಳೆತು ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರು ನೀಡಿದ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಜಿಯೋ ಕಂಪನಿ ಆಫರ್ ಹೆಸರಲ್ಲಿ ಮಹಾ ಮೋಸ!

Categories
ತೀರ್ಥಹಳ್ಳಿ

ಚಂದ್ರಯಾನ 3ರ ಯಶಸ್ಸಿಗೆ ತೀರ್ಥಹಳ್ಳಿ ಪೊಲೀಸರ ರಕ್ತ ಅರ್ಪಣೆ!

ಚಂದ್ರಯಾನ 3ರ ಯಶಸ್ಸಿಗೆ ತೀರ್ಥಹಳ್ಳಿ ಪೊಲೀಸರ ರಕ್ತ ಅರ್ಪಣೆ!
– ರಾಜ್ಯದಲ್ಲೇ ಮಾದರಿ ಹೆಜ್ಜೆ ಇಟ್ಟ ತೀರ್ಥಹಳ್ಳಿ ಪೊಲೀಸರು
– ಉನ್ನತ ಅಧಿಕಾರಿಗಳು, ಸಿಬ್ಬಂದಿ ಎಲ್ಲರಿಂದಲೂ ರಕ್ತದಾನ
– 85ನೇ ಬಾರಿಗೆ ರಕ್ತದಾನ ಮಾಡಿದ ಸಿಪಿಐ ಅಶ್ವತ್ ಗೌಡ!

NAMMUR EXPRESS NEWS
ತೀರ್ಥಹಳ್ಳಿ: ಚಂದ್ರಯಾನ ಮೂರರ ಯಶಸ್ಸನ್ನು ಇಡೀ ದೇಶವೇ ಸಂಭ್ರಮಿಸುತ್ತಿದೆ.ರಾಜ್ಯದಲ್ಲಿ ಚಂದ್ರಯಾನದ ಬಗ್ಗೆ ಹರ್ಷ ವ್ಯಕ್ತವಾಗಿದೆ. ಗೌರವ ಸಲ್ಲಿಸುವ ಪ್ರಯುಕ್ತ ತೀರ್ಥಹಳ್ಳಿ ಪೊಲೀಸ್ ಇಲಾಖೆ ರಕ್ತದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಚಂದ್ರಯಾನ 3ರ ಯಶಸ್ಸಿನ ರೂವಾರಿಗಳ ಶ್ರಮಕ್ಕೆ ರಕ್ತದಾನ ಹಬ್ಬ ಎಂಬ ವಿನೂತನ ಕಾರ್ಯಕ್ರಮ ಆಚರಣೆ ಭಾನುವಾರ ಬೆಳಿಗ್ಗೆ ತೀರ್ಥಹಳ್ಳಿಯ ಯೂನಿಟ್ ನಡೆಯಿತು. ತೀರ್ಥಹಳ್ಳಿ ಪೊಲೀಸ್ ಠಾಣೆ, ಮಾಳೂರು ಪೊಲೀಸ್ ಠಾಣೆ ಮತ್ತು ಶಿವಮೊಗ್ಗದ ಆಶಾಜ್ಯೋತಿ ರಕ್ತಕೇಂದ್ರ ರವರ ಸಂಯುಕ್ತ ಆಶ್ರಯದಲ್ಲಿ, ಡಿವೈಎಸ್ಪಿ ಗಜಾನನ ವಾಮನ ಸುತಾರ, ಪೊಲೀಸ್ ನಿರೀಕ್ಷರಾದ ಅಶ್ವತ್ ಗೌಡ, ಪಿ ಎಸ್ ಐಗಳಾದ ನವೀನ್ ಮಠಪತಿ, ಶಿವಾನಂದ್, ಗಾದಿಲಿಂಗಪ್ಪ ಗೌಡರ್ ಮತ್ತು ಹಾಲೇಶಪ್ಪ. ಹೆಚ್.ಸಿ. ಹೊಸನಗರ ಪೊಲೀಸ್ ಠಾಣೆ ರವರು ತೀರ್ಥಹಳ್ಳಿಯ ನಗರದ ಟೌನ್ ಹಾಲ್ ನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಿದ್ದು, ಈ ರಕ್ತದಾನ ಶಿಬಿರದಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ರಕ್ತದಾನ ಮಾಡಿದರು.

85ನೇ ಬಾರಿಗೆ ರಕ್ತದಾನ ಮಾಡಿದ ಸಿಪಿಐ ಅಶ್ವತ್ ಗೌಡ!

ತೀರ್ಥಹಳ್ಳಿಯಲ್ಲಿ ನಡೆದ ರಕ್ತದಾನದಲ್ಲಿ 85 ಬಾರಿಗೆ ತೀರ್ಥಹಳ್ಳಿ ಸಿಪಿಐ ಅಶ್ವತ್ ಗೌಡ ರಕ್ತದಾನ ಮಾಡುವ ಮೂಲಕ ಎಲ್ಲರಿಗೂ ಪ್ರೇರಣೆ ಆದರು.

ಇದನ್ನೂ ಓದಿ : ಜಿಯೋ ಕಂಪನಿ ಆಫರ್ ಹೆಸರಲ್ಲಿ ಮಹಾ ಮೋಸ!