ತೀರ್ಥಹಳ್ಳಿಯ ಹಳ್ಳಿ ಹಳ್ಳಿಗಳಲ್ಲಿ ಕನ್ನಡ ಕಲರವ!
– ಪಡುವಳ್ಳಿಯಲ್ಲಿ ರಾಜ್ಯೋತ್ಸವ: ಸೈನಿಕರಿಗೆ ಸನ್ಮಾನ
– ಮೇಲಿನ ಕುರುವಳ್ಳಿಯಲ್ಲಿ ಯುವಕರ ಕನ್ನಡ ಸೇವೆ
– ಟಿ.ಎಸ್. ಟಿ, ಪೂರ್ವಿಕಾ ಮೊಬೈಲ್ಸ್ ಅಲ್ಲಿ ಕನ್ನಡ ಅಲಂಕಾರ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಪಡುವಳ್ಳಿಯಲ್ಲಿ ಶಾಂತವೇರಿ ಗೋಪಾಲಗೌಡ ಕನ್ನಡ ಸೇವಾ ಸಮಿತಿ ವತಿಯಿಂದ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಈ ಕಾರ್ಯಕ್ರಮದ ಧ್ವಜಾರೋಹಣವನ್ನು ಎನ್. ಎಸ್. ಜಿ ಕಮಾಂಡೋ ಮಾಜಿ ಸೈನಿಕರಾದ ಎಸ್. ಪಿ. ಪ್ರದೀಪ್ ರವರು ನೆರವೇರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಕರವೇ ಸಂಚಾಲಕರಾದ ಪಡುವಳ್ಳಿ ಹರ್ಷೇಂದ್ರ ಕುಮಾರ್, ಹೊನ್ನೇ ತಾಳು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಿಳಿಗೆರೆ ಮಂಜುನಾಥ್, ಗ್ರಾಮ ಪಂಚಾಯತಿ ಸದಸ್ಯರಾದ ಭಾಗ್ಯಪಡುವಳ್ಳಿ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಜಾವಗಲ್ ರಾಮಸ್ವಾಮಿ, ಧರೆಮನೆ ನಾಗೇಶ್ ,
ನಿವೃತ್ತ ಶಿಕ್ಷಕರಾದ ಪಡುವಳ್ಳಿ ಕಿಟ್ಟಪ್ಪ , ಪಡುವಳ್ಳಿ ಭರತ್ ಕುಮಾರ್, ರತ್ನಮ್ಮ ,ಅಮೃತಮ್ಮ, ಶೀಲಾ, ನಾಗವೇಣಿ, ಪಿಕೆ ಲೋಕಪ್ಪ ,ಪಿ.ಡಿ. ಲಿಂಗಪ್ಪಗೌಡ, ಪಡುವಳ್ಳಿಗೌತಮ್ ಗೌಡ, ನಿತ್ಯಾನಂದ, ರಾಘವೇಂದ್ರ ,ಕಿರಣ ವಿಶ್ವನಾಥ, ಚಂದನ, ನಂದನ, ಕಾರ್ತಿಕ್ ,ಸಂದೀಪ್ ಗ್ರಾಮಸ್ಥರು ಉಪಸ್ಥಿತರಿದ್ದರು. ಕಮಾಂಡೋ ಎಸ್. ಪಿ. ಪ್ರದೀಪ್ ಮಾಜಿ ಸೈನಿಕರು ಹಾಗೂ ಹೊನ್ನೇ ತಾಳು ಗ್ರಾ.ಪo.ಅಧ್ಯಕ್ಷರಾದ ಬಿಳಿಗೆರೆ ಮಂಜುನಾಥ್ ಅವರಿಗೆ ಸನ್ಮಾನಿಸಲಾಯಿತು. 68ನೇ ಕನ್ನಡ ರಾಜ್ಯೋತ್ಸವವನ್ನು ಸಿಹಿ ಹಂಚಿ ಸಂಭ್ರಮಾಚರಣೆ ಇಂದ ಆಚರಿಸಲಾಯಿತು.
ಮೇಲಿನ ಕುರುವಳ್ಳಿಯಲ್ಲಿ ರಾಜ್ಯೋತ್ಸವ
ತೀರ್ಥಹಳ್ಳಿ ಪಟ್ಟಣ ಸಮೀಪದ ಮೇಲಿನ ಕುರುವಳ್ಳಿಯಲ್ಲಿ ಯುವಕರು ಕನ್ನಡ ಭಾವುಟ ಹಾರಿಸುವ ಮೂಲಕ ರಾಜ್ಯೋತ್ಸವ ಆಚರಣೆ ಮಾಡಿದರು. ಮನು ಮೇಲಿನಕುರುವಳ್ಳಿ, ಚಂದ್ರ, ರಾಘವೇಂದ್ರ ಅಭಿನವ, ಹರೀಶ್, ಶರತ್, ಶ್ರೇಯಸ್, ವಿಶ್ವ ರವಿ ರಹೀಮ್, ಶರತ್, ಮನೋಜ್ ಇದ್ದರು.
ಟಿ.ಎಸ್. ಟಿ, ಪೂರ್ವಿಕಾ ಮೊಬೈಲ್ಸ್ ಅಲ್ಲಿ ಕನ್ನಡ ಅಲಂಕಾರ
ತೀರ್ಥಹಳ್ಳಿಯ ಟಿ. ಎಸ್.ಟಿ ಹೈಪರ್ ಮಾರ್ಟ್, ಪೂರ್ವಿಕಾ ಮೊಬೈಲ್ಸ್ ಸೇರಿ ಎಲ್ಲೆಡೆ ಕನ್ನಡದ ಭಾವುಟ ಮತ್ತು ಅಲಂಕಾರ ಗಮನ ಸೆಳೆಯಿತು.
