Categories
ಉದ್ಯೋಗ ಸುದ್ದಿ ಶಿವಮೊಗ್ಗ

ಶಿವಮೊಗ್ಗದಲ್ಲಿ ವಿಮಾನಯಾನ ಕಂಪನಿಯಲ್ಲಿ ಉದ್ಯೋಗ

ಶಿವಮೊಗ್ಗದಲ್ಲಿ ವಿಮಾನಯಾನ ಕಂಪನಿಯಲ್ಲಿ ಉದ್ಯೋಗ
– ನ.6ರಂದು ಶಿವಮೊಗ್ಗದಲ್ಲಿ ಸಂದರ್ಶನ
– ಯಾವ ಯಾವ ಹುದ್ದೆ… ಇಲ್ಲಿದೆ ನೋಡಿ ಡೀಟೇಲ್ಸ್

NAMMUR EXPRESS JOBS :
We are hiring in Shivamogga
For commercial and security positions
Commercial positions :
Duty supervisor /officer
Sr. Customer service executive customer service executive
Tr. Customer service executive

Security position

Assistant manager security
Security supervisor
Sr. Security agent
Security agent
Tr. Security agent

Walk in interview:
Date : 6th November 2023
Adress: Royal orchid central shimogga
Opp. Vinayaka theatre. B. H road shimogga

Time : 11AM – 6PM

Walk in with Updated resume, govt id and experience letter, valid documents

Categories
ಹೊಸನಗರ

ಹೊಸನಗರಕ್ಕೆ ಹೊಸ ತಹಶೀಲ್ದಾರ್

ಹೊಸನಗರಕ್ಕೆ ಹೊಸ ತಹಶೀಲ್ದಾರ್
– ರಾಜಕುಮಾರ್ ನೂತನ ತಹಸೀಲ್ದಾರ್ ಆಗಿ ನೇಮಕ
– ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ ಪ್ರಭಾರ ಸೇವೆಗೆ ಮೆಚ್ಚುಗೆ

NAMMUR EXPRESS NEWS
ಹೊಸನಗರ : ಹೊಸನಗರ ನೂತನ ತಹಶೀಲ್ದಾರ್ ಆಗಿ ರಾಜಕುಮಾರ್ ಮರತೂರಕರ ಅವರನ್ನು ಸರ್ಕಾರ ನಿಯೋಜನೆ ಮಾಡಿ ಆದೇಶ ಹೊರಡಿಸಿದೆ. ಹೊಸನಗರದಲ್ಲಿ ಪ್ರಭಾರ ತಹಶೀಲ್ದಾರರಾಗಿ ಇದುವರೆಗೆ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ ಅವರು ಕೆಲಸ ಮಾಡುತ್ತಿದ್ದರು. ಈಗ ರಾಜಕುಮಾರ್ ಮರತೂರಕರ ನೇಮಕದಿಂದಾಗಿ ತಾಲೂಕು ಆಡಳಿತಕ್ಕೆ ಚುರುಕು ಸಿಗಬಹುದೆಂಬ ನಿರೀಕ್ಷೆ ಮೂಡಿದೆ. ಇನ್ನು ಜನರಿಗೆ ಸ್ಪಂದನೆ ಮಾಡುತ್ತಿದ್ದ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ ಪ್ರಭಾರ ಸೇವೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಶಿವಮೊಗ್ಗದ ಮೂವರು ಸೇರಿ ರಾಜ್ಯದಲ್ಲಿ ಒಟ್ಟು 22 ತಹಶೀಲ್ದಾರ್’ಗಳ ಸ್ಥಳ ನಿಯೋಜನೆ ಮಾಡಲಾಗಿದೆ. ತೀರ್ಥಹಳ್ಳಿಗೆ ಜೆ.ಬಿ.ಜಕ್ಕನಗೌಡ, ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಗೆ ಚುನಾವಣೆ ತಹಶೀಲ್ದಾರ್, ಆರ್.ವಿ. ಮಂಜುನಾಥ್ ಅವರನ್ನು ನೇಮಕ ಮಾಡಲಾಗಿದೆ.

ಹೊಸನಗರ ಜನರಿಗೆ ಹಲವು ನಿರೀಕ್ಷೆ

ಹೊಸನಗರ ತಾಲೂಕು ಜನ ಮೂಲ ಸೌಲಭ್ಯ ಕೊರತೆಯಿಂದ ನಲುಗುತ್ತಿದ್ದಾರೆ. ಅವರಿಗೆ ಇದೀಗ ಹೊಸ ತಹಸೀಲ್ದಾರ್ ಸೇವೆ ಅಗತ್ಯ ಇದೆ. ಜತೆಗೆ ಶರಾವತಿ ಮುಳುಗಡೆ, ಎಲೆ ಚುಕ್ಕಿ ರೋಗ ಸೇರಿ ರೈತರ ಬದುಕು ಬೀದಿಗೆ ಬಿದ್ದಿದೆ. ಈ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಿದೆ.

Categories
ರಾಜ್ಯ

ಧರ್ಮಸ್ಥಳ ಸಂಘದ 1.24 ಕೋಟಿ ಹಣ ದರೋಡೆ ಗ್ಯಾಂಗ್ ಅರೆಸ್ಟ್!

ಧರ್ಮಸ್ಥಳ ಸಂಘದ 1.24 ಕೋಟಿ ಹಣ ದರೋಡೆ ಗ್ಯಾಂಗ್ ಅರೆಸ್ಟ್!
– ಸಂಘದ ಮೂವರು ಸದಸ್ಯರು ಸೇರಿ 10 ಕಳ್ಳರ ಬಂಧನ
– ದರೋಡೆ ಪ್ಲಾನ್ ರೆಡಿ ಮಾಡಿದ್ದರು ಅಲ್ಲಿದ್ದ ಸಿಬ್ಬಂದಿ!

NAMMUR EXPRESS NEWS
ಧಾರವಾಡ ನಗರದ ಹೊರವಲಯದ ರಾಯಾಪುರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಪ್ರಾದೇಶಿಕ ಕಚೇರಿಯಲ್ಲಿ ಹಣ ಕಳ್ಳತನಕ್ಕೆ ಸಂಬಂಧಪಟ್ಟಂತೆ ಸಂಘದ ಮೂವರು ಸದಸ್ಯರು ಸೇರಿ 10 ಕಳ್ಳರನ್ನು ಪೊಲೀಸರು ಇದೀಗ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಯಾಪುರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಪ್ರಾದೇಶಿಕ ಕಚೇರಿಯಲ್ಲಿ ಕಳೆದ ಅಕ್ಟೋಬರ್ 24 ರಂದು ಕಳ್ಳತನವಾಗಿತ್ತು. ಕಚೇರಿಯ ಲಾಕರ್‌ನಲ್ಲಿದ್ದ 1 ಕೋಟಿ 24 ಲಕ್ಷ ರೂ. ಹಣ ಕಳುವಾಗಿತ್ತು. ಧಾರವಾಡ ಜಿಲ್ಲೆಗೆ ಸಂಬಂಧಿಸಿದ ಎಲ್ಲ ವ್ಯವಹಾರ, ಕಚೇರಿ ಕೆಲಸಗಳು ಇಲ್ಲಿಯೇ ನಡೆಯುತ್ತವೆ. ಆದರೆ ಇಲ್ಲಿ ಯಾವುದೇ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿರಲಿಲ್ಲ.

ಟಾಯ್ಲೆಟ್ ಕಿಟಕಿ ಮುರಿದು ಕಳ್ಳತನ!

ಕಚೇರಿ ಹಿಂಭಾಗದಲ್ಲಿನ ಶೌಚಾಲಯದ ಕಿಟಕಿ ಮುರಿದು ಒಳ ಬಂದಿದ್ದ ಕಳ್ಳರು ಒಟ್ಟು 4 ಲಾಕರ್‌ಗಳನ್ನು ಮುರಿದು ಅಲ್ಲಿದ್ದ ಅಷ್ಟೂ ಹಣ ದೋಚಿದ್ದರು. ಈ ಸಂಸ್ಥೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರಿಗೆ ಸೇರಿದ್ದು, ಮೇಲಾಗಿ ಅಲ್ಲಿ ಇದ್ದ ಹಣವೆಲ್ಲವೂ ವಿವಿಧ ಹಳ್ಳಿಗಳ ಸ್ವ-ಸಹಾಯ ಸಂಘಗಳಿಂದ ಸಂಗ್ರಹಿಸಿದ್ದಾಗಿತ್ತು. ಹೀಗಾಗಿ ಯಾರೋ ಸಂಘದಲ್ಲಿ ಇದ್ದವರೇ ಶಾಮೀಲಾಗಿದ್ದಾರೆ ಅನ್ನೋ ಶಂಕೆಯನ್ನಿಟ್ಟುಕೊಂಡು ತನಿಖೆ ಮಾಡಿದ ಪೊಲೀಸರು ಕೊನೆಗೂ 10 ಜನರನ್ನು ಬಂಧಿಸಿದ್ದಾರೆ. ಈ ಪ್ರಕರಣ ವಿದ್ಯಾಗಿರಿ ಠಾಣೆಯಲ್ಲಿ ದಾಖಲಾಗಿದ್ದು, ಇದಕ್ಕಾಗಿಯೇ ಪೊಲೀಸ್ ಆಯುಕ್ತರು ವಿಶೇಷ ತನಿಖಾ ತಂಡ ರಚಿಸಿದ್ದರು.

ಫಿಲ್ಡ್ಗಿಳಿದ ತಂಡ ಹುಬ್ಬಳ್ಳಿಯ ಕುಶಾಲಕುಮಾರ ಕೃಷ್ಣಾ ಸವಣೂರ, ನವಲಗುಂದದವರಾದ ಬಸವರಾಜ ಶೇಖಪ್ಪ ಬಾಬಜಿ, ಜಿಲಾನಿ ಬವರಸಾಬ ಜಮಾದಾರ, ಪರಶುರಾಮ ಹನಮಂತಪ್ಪ ನೀಲಪ್ಪಗೌಡರ, ಮಹಾಂತೇಶ ಲಕ್ಷ್ಮಣ ಹಿರಗಣ್ಣವರ, ರಂಗಪ್ಪ ನಾಗಪ್ಪ ಗುಡಾರದ, ಮಂಜುನಾಥ ಯಮನಪ್ಪ ಬೋವಿ, ಕಿರಣ ಶರಣಪ್ಪ ಕುಂಬಾರ, ರಜಾಕಅಹ್ಮದ ಅಲ್ಲಾವುದ್ದೀನ್ ಮುಲ್ಲಾನವರ ಮತ್ತು ವೀರೇಶ ಸಿದ್ದಪ್ಪ ಚವಡಿ ಎಂಬುವವರನ್ನು ಬಂಧಿಸಿದೆ. ಜೊತೆಗೆ 79 ಲಕ್ಷ 89 ಸಾವಿರ ರೂ. ನಗದು ಜಪ್ತಿ ಮಾಡಲಾಗಿದೆ. ಕಳ್ಳತನಕ್ಕೆ ಬಳಸಿದ್ದ 1 ಕಾರು, 2 ಬೈಕ್ ಮತ್ತು 4 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಂಘದ ಸಿಬ್ಬಂದಿಯಿಂದಲೇ ಸ್ಕೆಚ್!

ಬಂಧಿತರ ಪೈಕಿ ಕುಶಾಲಕುಮಾರ, ಬಸವರಾಜ್ ಮತ್ತು ಮಹಾಂತೇಶ ಇದೇ ಸಂಘದ ಸಿಬ್ಬಂದಿಯೇ ಆಗಿದ್ದಾರೆ. ಈ ಮೂವರು ಸೇರಿ ಕಳ್ಳತನಕ್ಕೆ ಎಲ್ಲಿಂದ ಬರಬೇಕು, ಹೇಗೆ ಬರಬೇಕು, ಎಲ್ಲಿ ಲಾಕರ್ ಇವೆ ಎಂಬುದನ್ನೆಲ್ಲ ಸ್ಕೆಚ್ ಹಾಕಿ, ಪ್ಲ್ಯಾನ್ ಮಾಡಿದ್ದರು. ಇದನ್ನು ಕಾರ್ಯಗತಗೊಳಿಸಲು ಈಗಾಗಲೇ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನವಲಗುಂದದ ಗ್ಯಾಂಗ್‌ಗೆ ನೀಡಿದ್ದರು. ಹೀಗಾಗಿ ಸಲೀಸಾಗಿ ಬಂದು ಕದ್ದುಕೊಂಡು ಹೋಗಿದ್ದರು. ಸದ್ಯ ಪ್ರಕರಣ ಬೇಧಿಸಿ ಕಳ್ಳರನ್ನು ಜೈಲಿಗೆ ಅಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Categories
ಉದ್ಯೋಗ ಸುದ್ದಿ

ಇಂಡಿಯನ್ ಆಯಿಲ್ ಅಲ್ಲಿ 1720 ಹುದ್ದೆಗಳಿಗೆ ಅರ್ಜಿ

ಇಂಡಿಯನ್ ಆಯಿಲ್ ಅಲ್ಲಿ 1720 ಹುದ್ದೆಗಳಿಗೆ ಅರ್ಜಿ
– ಏನಿದು ಹುದ್ದೆ… ಸಂಬಳ ಎಷ್ಟು..? ಇಲ್ಲಿದೆ ಮಾಹಿತಿ
– ಯಾವ ದಿನಾಂಕಗಳಲ್ಲಿ ಅರ್ಜಿ ಸಲ್ಲಿಸಬಹುದು?

NAMMUR EXPRESS NEWS
ಕೇಂದ್ರ ಸರ್ಕಾರದ ಅಧೀನದಲ್ಲಿರುವ ಇಂಡಿಯನ್ ಆಯಿಲ್ ಕಾರ್ಪರೇಷನ್ ನಲ್ಲಿ ಯುವಕರಿಗೆ ಉದ್ಯೋಗಾವಕಾಶಗಳು ಲಭ್ಯವಿದೆ. ಇಂಡಿಯನ್ ಆಯಿಲ್ ಕಾರ್ಪರೇಷನ್ ಸಂಸ್ಥೆಯಲ್ಲಿ ಟ್ರೇಡ್ ಮತ್ತು ಟೆಕ್ನಿಷಿಯನ್ ಅಪ್ರೆಂಟಿಸ್ ನೇಮಕಾತಿ 2023 ಸಾಲಿನಲ್ಲಿ 1720 ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. IOCL ಟ್ರೇಡ್ ಮತ್ತು ಟೆಕ್ನಿಷಿಯನ್ ಅಪ್ರೆಂಟಿಸ್ 2023 ಆನ್‌ಲೈನ್ ಫಾರ್ಮ್ ಬಿಡುಗಡೆ ಮಾಡಿದೆ. ಒಟ್ಟು 1720 ಖಾಲಿ ಹುದ್ದೆ ಇದ್ದು, ಐಒಸಿಎಲ್ ವತಿಯಿಂದ ಅರ್ಜಿ ಆಹ್ವಾನಿಸಿದೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್, ರಿಫೈನರೀಸ್ ವಿಭಾಗವು ಟ್ರೇಡ್ ಮತ್ತು ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಬಹುದು ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.

ಯಾವ ದಿನಾಂಕಗಳಲ್ಲಿ ಅರ್ಜಿ ಸಲ್ಲಿಸಬಹುದು?

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-11-2023 ಸಂಜೆ ಐದು ಗಂಟೆ.
PWBD ಅಭ್ಯರ್ಥಿಗಳು ಇಮೇಲ್ ಮೂಲಕ ಲಿಪಿಕಾರರಿಗೆ ನಿಗದಿತ ಪ್ರೊಫಾರ್ಮ್‌ಗಳನ್ನು ಸಲ್ಲಿಸಲು ಕೊನೆಯ ದಿನಾಂಕ 22-11-2023
ಪ್ರವೇಶ ಕಾರ್ಡ್ ಡೌನ್‌ಲೋಡ್ ಮಾಡಲು ತಾತ್ಕಾಲಿಕ ದಿನಾಂಕ: 02-11-2023 ರಿಂದ 027-11-2023
ಲಿಖಿತ ಪರೀಕ್ಷೆಗೆ ತಾತ್ಕಾಲಿಕ ದಿನಾಂಕ: 03- 12-2023
ಲಿಖಿತ ಪರೀಕ್ಷೆಯ ಫಲಿತಾಂಶದ ಕುಸಿತಕ್ಕೆ ತಾತ್ಕಾಲಿಕ ದಿನಾಂಕ: 08-12-2023
ದಾಖಲೆ ಪರಿಶೀಲನೆಯ ದಿನಾಂಕ: 13-12- 2023 8o 21-12-2023
ವಯಸ್ಸಿನ ಮಿತಿ (31-10-2023 ರಂತೆ)
ಕನಿಷ್ಠ ವಯಸ್ಸಿನ ಮಿತಿ: 18 ವರ್ಷಗಳು.
ಗರಿಷ್ಠ ವಯಸ್ಸಿನ ಮಿತಿ: 24 ವರ್ಷಗಳುನಿಯಮಗಳ ಪ್ರಕಾರ SC/ ST/ OBC (NCL)/ PWD ಅಭ್ಯರ್ಥಿಗಳಿಗೆ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.

ಹುದ್ದೆಯ ವಿವರಗಳು:-

101 ಟ್ರೇಡ್ ಅಪ್ರೆಂಟಿಸ್
ಪರಿಚಾರಕ ಆಪರೇಟರ್ – 421 ಹುದ್ದೆಗಳು (B.Sc. (ಭೌತಶಾಸ್ತ್ರ ಗಣಿತ, ರಸಾಯನಶಾಸ್ತ್ರ/ ಕೈಗಾರಿಕಾ ರಸಾಯನಶಾಸ್ತ್ರ)
102 ಟ್ರೇಡ್ ಅಪ್ರೆಂಟಿಸ್
(ಫಿಟ್ಟರ್) 189 ಮೆಟ್ರಿಕ್ಯುಲೇಷನ್ ಜೊತೆಗೆ ITI (ಫಿಟ್ಟರ್ ಟ್ರೇಡ್)
103 ಟ್ರೇಡ್ ಅಪ್ರೆಂಟಿಸ್ ಬಾಕ್ಲರ್ (ಮೆಕ್ಯಾನಿಕಲ್) 59 ಬಿ.ಎಸ್ಸಿ. (ಭೌತಶಾಸ್ತ್ರ, ಗಣಿತ, ರಸಾಯನಶಾಸ್ತ್ರ/ ಕೈಗಾರಿಕಾ ರಸಾಯನಶಾಸ್ತ್ರ)
104 ತಂತ್ರಜ್ಞರು
ಅಪ್ರೆಂಟಿಸ್ (ರಾಸಾಯನಿಕ) 345 ಡಿಪ್ಲೊಮಾ (ರಾಸಾಯನಿಕ ಇಂಜಿನಿಯರ್. / ಸಂಸ್ಕರಣಾಗಾರ ಮತ್ತು ಪೆಟ್ರೋ-ಕೆಮಿಕಲ್ ಇಂಜಿನ್)
105 ತಂತ್ರಜ್ಞ ಅಪ್ರೆಂಟಿಸ್ (ಮೆಕ್ಯಾನಿಕಲ್)
169 ಡಿಪ್ಲೊಮಾ (ಮೆಕ್ಯಾನಿಕಲ್ ಇಂಜಿನ್)
106 ತಂತ್ರಜ್ಞ ಅಪ್ರೆಂಟಿಸ್ (ಎಲೆಕ್ನಿಕಲ್)
244 ಡಿಪ್ಲೊಮಾ (ಎಲೆಕ್ಟಿಕಲ್‌ಇಂಜಿನ್)
107 ತಂತ್ರಜ್ಞರು
ಅಪ್ರೆಂಟಿಸ್ (ಇನ್‌ಸ್ಟ್ರುಮೆಂಟೇಶನ್) 93
108 ಟ್ರೇಡ್ ಅಪ್ರೆಂಟಿಸ್
109 ಟ್ರೇಡ್ ಅಪ್ರೆಂಟಿಸ್ (ಅಕೌಂಟೆಂಟ್)
110 ಟ್ರೇಡ್ ಅಪ್ರೆಂಟಿಸ್ (ಡೇಟಾ ಎಂಟ್ರಿ ಆಪರೇಟರ್)
49 12ನೇ ತರಗತಿ
111 ಟ್ರೇಡ್ ಅಪ್ರೆಂಟಿಸ್ (ಡೇಟಾ ಎಂಟ್ರಿ ಆಪರೇಟರ್) (ಕೌಶಲ್ಯ ಪ್ರಮಾಣಪತ್ರ ಹೊಂದಿರುವವರು) 33 XII ಪಾಸ್
ಡೊಮೆಸ್ಟಿಕ್ ಡಾಟಾ ಎಂಟ್ರಿ ಆಪರೇಟರ್‌ನಲ್ಲಿ ಸ್ಕಿಲ್ ಸರ್ಟಿಫಿಕೇಟ್ ಹೊಂದಿರುವವರಿಗೆ ಹೆಚ್ಚು ಆದ್ಯತೆ ನೀಡಲಾಗುವುದು.

Categories
ಚಿಕ್ಕಮಗಳೂರು

ಜಾನಪದ ಕಲಾವಿದೆ ಚೌಡಮ್ಮಗೆ ರಾಜ್ಯೋತ್ಸವ ಪ್ರಶಸ್ತಿ!

ಜಾನಪದ ಕಲಾವಿದೆ ಚೌಡಮ್ಮಗೆ ರಾಜ್ಯೋತ್ಸವ ಪ್ರಶಸ್ತಿ!
– ಹಳ್ಳಿ ಕಲಾವಿದೆಗೆ ಒಲಿದ ರಾಜ್ಯ ಮಟ್ಟದ ಗೌರವ
– ಕಡೂರು ತಾಲೂಕಿನ ಚಿಕ್ಕಬಾಸೂರು ಗ್ರಾಮದ ಕಲಾವಿದೆ

NAMMUR EXPRESS NEWS
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಚಿಕ್ಕಬಾಸೂರು ಗ್ರಾಮದ ಜಾನಪದ ಕಲಾವಿದೆ ಚೌಡಮ್ಮ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಒಲಿದಿದ್ದು ಜಿಲ್ಲೆಯಲ್ಲಿ ಸಂಭ್ರಮ ವ್ಯಕ್ತವಾಗಿದೆ. ಬಾಲ್ಯದಿಂದಲೂ ತನ್ನ ತಾಯಿ ಅವರಿಂದ ಬಳುವಳಿಯಾಗಿ ಬಂದ ಸೋಬಾನೆ ಪದಗಳನ್ನು ಹಾಡುತ್ತಾ ರೈತಾಪಿ ಜೀವನದೊಂದಿಗೆ ಬದುಕು ಕಟ್ಟಿಕೊಂಡಿದ್ದು, ಸೋಬಾನೆ ಚೌಡಮ್ಮ ಎಂದೇ ಈ ಭಾಗದಲ್ಲಿ ಖ್ಯಾತಿ ಪಡೆದುಕೊಂಡಿದ್ದಾರೆ. ಚೌಡಮ್ಮ ಅವರ ಪತಿ ಬೇಲೂರಯ್ಯ ಭೈರಪ್ಪರ ಸಹಕಾರದಿಂದಾಗಿ ಜಾನಪದ ಕಲೆಯಲ್ಲಿ ತೊಡಗಿಸಿಕೊಂಡಿರುವ ಚೌಡಮ್ಮ ಅವರು ಸುತ್ತಮುತ್ತಲ ಭಾಗದ ಗ್ರಾಮಗಳಲ್ಲಿ ಮದುವೆ, ಶುಭ ಸಮಾರಂಭಗಳಲ್ಲಿ ಸೋಬಾನೆ ಪದ ಹಾಡುವ ಮೂಲಕ ಖ್ಯಾತಿಯನ್ನು ಪಡೆದಿದ್ದಾರೆ.

ಸೋಬಾನ ಪದಗಳ ಮೂಲಕ ಗ್ರಾಮೀಣ ಸಂಪ್ರದಾಯಗಳನ್ನು ನೆರವೇರಿಸುತ್ತಾ ಬಂದವರು. ಇವರ ಗಾಯನ ಪ್ರತಿಭೆಯನ್ನು ಗುರುತಿಸಿ ಭದ್ರಾವತಿ ಆಕಾಶವಾಣಿಯು ಬಿ ಗ್ರೇಡ್ ಕಲಾವಿದೆಯಾಗಿ ಮನ್ನಣೆ ನೀಡಿ ಅನೇಕ ಬಾರಿ ಇವರು ಹಾಡಿದ ಸೋಬಾನೆ ಪದಗಳನ್ನು ಪ್ರಸಾರ ಮಾಡಿದ್ದಾರೆ. ಇದೀಗ ಅವರಿಗೆ ರಾಜ್ಯೋತ್ಸವದ ಪ್ರಶಸ್ತಿ ಬಂದಿದ್ದು ಇಡೀ ಜಿಲ್ಲೆಗೆ ಸಂಭ್ರಮ ತಂದಿದೆ.

Categories
ಮಂಗಳೂರು

ತುಳು ಭಾಷೆ 2ನೇ ಅಧಿಕೃತ ಭಾಷೆ ಮಾಡಲು ಪಟ್ಟು!

ತುಳು ಭಾಷೆ 2ನೇ ಅಧಿಕೃತ ಭಾಷೆ ಮಾಡಲು ಪಟ್ಟು!
– ಟ್ವಿಟರ್ ಅಲ್ಲಿ ಬೆಳಗ್ಗಿನಿಂದ ರಾತ್ರಿಯವರೆಗೆ ಅಭಿಯಾನ
– ರಾಜಕಾರಣಿ ಗಳ ಇಚ್ಛಾಶಕ್ತಿ ಕೊರತೆಗೆ ಖಂಡನೆ

NAMMUR EXPRESS NEWS
ಮಂಗಳೂರು : ನ.1ರಂದು ಕರ್ನಾಟಕ ರಾಜ್ಯೋತ್ಸವದಂದು ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಸಿಗಬೇಕು ಎಂದು ಆಗ್ರಹಿಸಿದ ಕೆಲವು ಸಂಘಟನೆಗಳು ರಾಜ್ಯೋತ್ಸವವನ್ನು ಕರಾಳ ದಿನವನ್ನಾಗಿ ಆಚರಿಸಿದೆ. ಈ ನಿಟ್ಟಿನಲ್ಲಿ ಹಮ್ಮಿಕೊಂಡ ಟೀಟ್ ಅಭಿಯಾನದಲ್ಲಿ ನ.1ರ ಬೆಳಗ್ಗಿನಿಂದ ರಾತ್ರಿಯವರೆಗೆ ಸಾವಿರಾರು ಮಂದಿ ಟ್ವಿಟ್ ಮಾಡುವ ಮೂಲಕ ತುಳು ಭಾಷೆಗೆ ಸೂಕ್ತ ಸ್ಥಾನಮಾನ ನೀಡುವಂತೆ ಬೆಂಬಲ ಸೂಚಿಸಿದ್ದಾರೆ. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಹೀಗಾಗುತ್ತಿದೆ ಎಂದು ಅನೇಕರು ಟ್ವಿಟ್ ಮೂಲಕ ಪ್ರಧಾನಿ, ಮುಖ್ಯಮಂತ್ರಿಗಳು, ಸಂಸದರು, ಶಾಸಕರು ಸಹಿತ ವಿವಿಧ ಜನಪ್ರತಿನಿಧಿಗಳನ್ನು ಟ್ವಿಟ್ ಮೂಲಕ ಒತ್ತಾಯಿಸಿದ್ದಾರೆ.

Categories
ಮಾಹಿತಿ

ಗೋವುಗಳ ಮಾರಣಹೋಮ..ಎಲ್ಲಿ ಸ್ವಾಮಿ ಗೋ ಶಾಲೆ?

ಗೋವುಗಳ ಮಾರಣಹೋಮ..ಎಲ್ಲಿ ಸ್ವಾಮಿ ಗೋ ಶಾಲೆ?
– ಎಲ್ಲೆಡೆ ಅನಾಥ ಗಂಡು ಕರುಗಳು, ದನಗಳ ಸಾವು
– ತಾಲೂಕಿಗೊಂದು ಗೋಶಾಲೆ ಪ್ರಸ್ತಾಪ ಏನಾಯ್ತು?

ವಿಶೇಷ ವರದಿ: ನವ್ಯ
NAMMUR EXPRESS NEWS
ಹಿಂದೂ ಧರ್ಮದ ಪ್ರಕಾರ ಹಸುಗಳು ದೇವರಿಗೆ ಸಮಾನ. ಹಿಂದೂ ಧರ್ಮದಲ್ಲಿ ಕಾಮಧೇನು, ಗೋಮಾತೆ ಎಂದು ಹಸುಗಳನ್ನು ಪೂಜಿಸಲಿದ್ದಾರೆ. ಹಸುವನ್ನು ಪೂಜಿಸಿದರೆ ಕೋಟಿ ದೈವಗಳ ಆರಾಧಿಸಿದಂತೆ ಎಂದು ನಂಬುತ್ತಾರೆ. ಸನಾತನ ಧರ್ಮಿಯರಾದ ನಾವು ಗೋವುಗಳು ಕೇವಲ ಪ್ರಾಣಿಗಳಲ್ಲ, ಅವುಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಅವುಗಳಿಗೆ ತಾಯಿಯ ಸ್ಥಾನವನ್ನು ನೀಡಿರುತ್ತೇವೆ. ಗೋಮಾತೆಯನ್ನು ಹಿಂದೂ ಧರ್ಮದಲ್ಲಿ ಸ್ವ ಬಳಕೆಗೂ ಮೀರಿ ದೇವರ ಸ್ಥಾನದಲ್ಲಿಟ್ಟು ಪೂಜಿಸಲಾಗುತ್ತದೆ. ಅದಕ್ಕಾಗಿ ದೀಪಾವಳಿಯಲ್ಲಿ ಗೋಪೂಜೆಯ ದಿನ ಗೋವುಗಳಿಗೆ ವಿಶೇಷವಾಗಿ ಸಿಂಗರಿಸಿ ಪೂಜಿಸಲಾಗುತ್ತದೆ. ಏಕೆಂದರೆ ಅವುಗಳನ್ನು ಅನುಗ್ರಹ, ನಿಸ್ವಾರ್ಥತೆ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಸುಗಳು ಎಲ್ಲವನ್ನೂ ಶುದ್ಧಿಕರಿಸುವ ಶಕ್ತಿಯನ್ನು ಹೊಂದಿವೆ ಎಂದು ನಂಬಲಾಗಿದೆ.

ಮುಂಜಾನೆ ಹಸುಗಳನ್ನು ನೋಡುವುದು ಮಂಗಳಕರ ಮತ್ತು ಅದೃಷ್ಟವೆಂದು ಹಿಂದೂಗಳು ನಂಬುತ್ತಾರೆ. ಆದರೆ ಜನರು ಸಾಕಿದ ಹಸುಗಳು ಅವರ ಉಪಯೋಗಕ್ಕಾಗಿ ಬಳಸಿಕೊಂಡು ನಂತರ ಅವುಗಳು ವಯಸ್ಸಾದ ಮೇಲೆ ಹಾಲು ಕೊಡುವುದಿಲ್ಲ ಎಂದು ಅದನ್ನು ಸಾಗಿಸಲು ಯೋಚಿಸುತ್ತಾರೆ. ಪ್ರತಿ ವರ್ಷವೂ ಕೂಡ ಹಸುಗಳು ಕರುಗಳಿಗೆ ಜನ್ಮ ನೀಡುತಿದ್ದು, ಗಂಡು ಕರುಗಳು ಜನಿಸಿದರೇ ಯಾರೂ ಕೂಡ ಇಟ್ಟುಕೊಳ್ಳುವುದಿಲ್ಲ. ಅವುಗಳನ್ನು ಬೇರೆಯವರಿಗೆ ಮಾರುತ್ತಾರೆ. ಇತ್ತೀಚಿಗೆ ಪ್ರತಿ ಊರಲ್ಲೂ ಹೋರಿಗಳು, ಗಂಡು ಕರುಗಳು ಅನಾಥವಾಗಿರುವುದು ಕಾಣ ಸಿಗುತ್ತದೆ. ಅನೇಕರು ದಾರಿ ಮೇಲಿರುವ ಗಂಡು ಜಾನುವಾರುಗಳನ್ನು ಗೋ ಮಾಂಸಕ್ಕಾಗಿ ಹತ್ಯೆ ಮಾಡಲು ಬಳಸುತ್ತಾರೆ. ಅಥವಾ ಹಸು ಸಾಕಿದವರೇ ರಸ್ತೆಬದಿ ಬಿಟ್ಟು ಹೋಗುತ್ತಾರೆ. ರಸ್ತೆ ಅಪಘಾತದಲ್ಲಿ ಪ್ರತಿ ದಿನ ನೂರಾರು ಗೋವುಗಳು ಜೀವ ಬಿಡುತ್ತವೆ.

ಗಂಡು ಕರುಗಳ ಮಾರಣ ಹೋಮ ಏಕೆ?

ಗಂಡು ಕರುಗಳಿಂದ ರೈತರಿಗೆ ಆರ್ಥಿಕವಾಗಿ ಲಾಭ ಇಲ್ಲದೇ ಇರುವುದರಿಂದ ಈ ರೀತಿ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದರ ಪರಿಣಾಮ ಕರುಗಳು ಬೀದಿಪಾಲಾಗಿ ಎಲ್ಲೆಂದರಲ್ಲಿ ಬಿದ್ದು ಸಾಯಿತ್ತವೆ. ಹಾಗೂ ರಸ್ತೆಯಲ್ಲಿ ಓಡಾಡಲು ಆಗದೆ ಯಾವುದೋ ವಾಹನಗಳ ಅಡಿ ಸಿಲುಕಿ ಒದ್ದಾಡಿ ಪ್ರಾಣ ಬಿಡುತ್ತಿವೆ.

ಪ್ರತಿ ತಾಲೂಕಿಗೆ ಬೇಕಿದೆ ಗೋಶಾಲೆ!

ಎಲ್ಲೆಡೆ ಗಂಡು ಕರುಳು ಸೇರಿದಂತೆ ಜಾನುವಾರುಗಳ ಮಾರಣಹೋಮ ನಡೆಯುತ್ತಿದ್ದು ಇದಕ್ಕೆಲ್ಲ ಮುಖ್ಯ ಕಾರಣವೇ ತಾಲೂಕಿನಲ್ಲಿ ಯಾವುದೇ ಗೋಶಾಲೆ ಇಲ್ಲದಿರುವುದು. ಕೆಲವೊಮ್ಮೆ ಅಕ್ರಮವಾಗಿ ಗೋವುಗಳನ್ನು ಸಾಗಾಣಿಕೆ ಮಾಡುವುದನ್ನು ಪತ್ತೆಹಚ್ಚಿ ವಶಕ್ಕೆ ಪಡೆಯುತ್ತಿದ್ದಾರೆ. ಆದರೆ ತಾಲೂಕಿನಲ್ಲಿ ಗೋಶಾಲೆಗೆ ಇದ್ದರೆ ಈ ರೀತಿ ಹಸುಗಳ ಮಾರಣಹೋಮ ನಡೆಯುತ್ತಿರಲಿಲ್ಲ. ಇದರಿಂದ ರಸ್ತೆಯ ಮೇಲೆ ದನಗಳ ಸಂಖ್ಯೆ ಹೆಚ್ಚಾಗಿ ಪ್ಲಾಸ್ಟಿಕ್ ಹಾಗೂ ಸಿಕ್ಕ ಸಿಕ್ಕ ವಸ್ತುಗಳನ್ನು ತಿಂದು ಅನಾಹುತಕ್ಕೆ ಒಳಗಾಗುತ್ತಿವೆ.ತುರ್ತಾಗಿ ತಾಲೂಕಿಗೊಂದು ಗೋಶಾಲೆ ನಿರ್ಮಾಣ ಮಾಡುವ ಮೂಲಕ ಹಸುವನ್ನು ಸಂರಕ್ಷಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಬಿಜೆಪಿಗೂ ಮನಸಿಲ್ಲ.. ಕಾಂಗ್ರೆಸ್ ಮನಸಿಲ್ಲ… ಎಲ್ಲವೂ ರಾಜಕೀಯಕ್ಕಷ್ಟೇ!

ಗೋವುಗಳನ್ನೇ ರಾಜಕೀಯ ದಾಳ ಮಾಡಿಕೊಂಡು ರಾಜಕೀಯ ಮಾಡುವ ಪಕ್ಷಗಳು ಈ ವಿಚಾರದಲ್ಲಿ ಇದುವರೆಗೆ ಎಲ್ಲಿಯೂ ಗೋ ಶಾಲೆ ಮಾಡಿಲ್ಲ. ಕಾಟಾಚಾರಕ್ಕೆ ಮಾಡಿದ್ರು ಅವು ಈಗ ಕೆಲಸ ಮಾಡುತ್ತಿಲ್ಲ. ಪ್ರತಿ ತಾಲೂಕಿನಲ್ಲಿ ಗೋ ಶಾಲೆ ಮಾಡಿ ಅಲ್ಲಿ ಲಾಭದಾಯಕವಾಗಿ ಅವಗಳನ್ನು ಸಾಕುವ ಯೋಜನೆ ರೂಪಿಸಬೇಕು. ಈ ಬಗ್ಗೆ ಯಾವ ಪಕ್ಷ, ಯಾವ ಸರ್ಕಾರಕ್ಕೂ ಮನಸಿಲ್ಲ. ಎಲ್ಲರೂ ತಮ್ಮ ರಾಜಕೀಯಕ್ಕೆ ಗೋವುಗಳ ಹೆಸರು ಬಳಸಿಕೊಳ್ಳಲಾಗುತ್ತಿದೆ ಅಷ್ಟೇ. ಜಿಲ್ಲೆಗೆ ಒಂದಾದ್ರು ಗೋ ಶಾಲೆ ತಕ್ಷಣ ಶುರು ಮಾಡಲಿ ಎಂಬುದು ನಮ್ಮೂರ್ ಎಕ್ಸ್ ಪ್ರೆಸ್ ಕಳಕಳಿ.

Categories
ಮಾಹಿತಿ

ನವೆಂಬರ್‌ನಲ್ಲಿ 15 ದಿನ ಬ್ಯಾಂಕ್ ರಜೆ

ನವೆಂಬರ್‌ನಲ್ಲಿ 15 ದಿನ ಬ್ಯಾಂಕ್ ರಜೆ
– ಸತತವಾಗಿ ರಜೆ: ಬ್ಯಾಂಕ್ ಕೆಲಸ ಪ್ಲಾನ್ ಮಾಡಿಕೊಳ್ಳಿ
– ಯಾವತ್ತು ರಜೆ… ಇಲ್ಲಿದೆ ಮಾಹಿತಿ

NAMMUR EXPRESS NEWS
ದೇಶದ ವಿವಿಧ ರಾಜ್ಯಗಳಲ್ಲಿ ಹಲವು ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಗ್ರಾಹಕರ ಅನುಕೂಲಕ್ಕಾಗಿ, ರಿಸರ್ವ್ ಬ್ಯಾಂಕ್ ಬ್ಯಾಂಕ್ ರಜೆಗಳ ಪಟ್ಟಿಯನ್ನು ಮುಂಚಿತವಾಗಿ ಬಿಡುಗಡೆ ಮಾಡುತ್ತದೆ.
ಅರ್. ಬಿ. ಐ ಪಟ್ಟಿಯ ಪ್ರಕಾರ, ವಿವಿಧ ಹಬ್ಬಗಳು ಮತ್ತು ವಾರ್ಷಿಕೋತ್ಸವಗಳಿಂದಾಗಿ ನವೆಂಬರ್‌ನಲ್ಲಿ ಒಟ್ಟು 15 ದಿನಗಳ ಬ್ಯಾಂಕ್ ರಜೆ ಇರುತ್ತದೆ. ಇದರಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಹಾಗೂ ಭಾನುವಾರದ ರಜಾದಿನಗಳನ್ನು ಒಳಗೊಂಡಿದೆ.

ಯಾವೆಲ್ಲಾ ದಿನ ಬ್ಯಾಂಕ್ ರಜೆ ಇರಲಿದೆ?

ನವೆಂಬರ್ 1,2023- ಕನ್ನಡ ರಾಜ್ಯೋತ್ಸವ

ನವೆಂಬರ್ 5, 2023- ಭಾನುವಾರದ ರಜೆ

ನವೆಂಬರ್ 10, 2023- ಗೋವರ್ಧನ ಪೂಜೆ/ಲಕ್ಷ್ಮಿ ಪೂಜೆ/( ಕರ್ನಾಟಕ ಇಲ್ಲ)

ನವೆಂಬರ್ 11, 2023- ಎರಡನೇ ಶನಿವಾರದ

ನವೆಂಬರ್ 12, 2023- ಭಾನುವಾರ

ನವೆಂಬರ್ 13, 2023- ದೀಪಾವಳಿ

ನವೆಂಬರ್ 14, 2023- ದೀಪಾವಳಿ ಬಲಿ ಪ್ರತಿಪದ

ನವೆಂಬರ್ 15, 2023- ಲಕ್ಷ್ಮಿ ಪೂಜೆ

ನವೆಂಬರ್ 19, 2023- ಭಾನುವಾರದ ರಜೆ

ನವೆಂಬರ್ 25, 2023- ನಾಲ್ಕನೇ ಶನಿವಾರದ

ನವೆಂಬರ್ 26, 2023- ಭಾನುವಾರ ರಜೆ

ನವೆಂಬರ್ 27, 2023- ಗುರುನಾನಕ್ ಜಯಂತಿ

Categories
ಚಿಕ್ಕಮಗಳೂರು ಮಲ್ನಾಡ್

ಮತ್ತೆ ಕಸ್ತೂರಿ ರಂಗನ್ ವರದಿ ಸದ್ದು!

ಮತ್ತೆ ಕಸ್ತೂರಿ ರಂಗನ್ ವರದಿ ಸದ್ದು!
– ಮಲೆನಾಡು ತಪ್ಪಲಿನ ಗ್ರಾಮಗಳ ಜೊತೆಗೆ ಕಂಟಕ
– ನ.8ರಂದು ಸುಬ್ರಹ್ಮಣ್ಯದಿಂದ ಹೋರಾಟ ಶುರು

NAMMUR EXPRESS NEWS
ಚಿಕ್ಕಮಗಳೂರು/ಶಿವಮೊಗ್ಗ: ಕಳೆದ 17 ವರ್ಷಗಳಿಂದ ಮಲೆನಾಡು ತಪ್ಪಲಿನ ಗ್ರಾಮಗಳ ಜನತೆ ಮೇಲೆ ಕಸ್ತೂರಿ ರಂಗನ್ ವರದಿ ಅನುಷ್ಠಾನದ ತೂಗುಗತ್ತಿ ನೇತಾಡುತ್ತಲೇ ಇದೆ. ಸರಕಾರ ಈ ಬಗ್ಗೆ ಸ್ಪಷ್ಟ ನಿರ್ಧಾರ ಪ್ರಕಟಿಸದಿದ್ದರೂ, ಯಾವಾಗ ಅನುಮೋದನೆ ನೀಡಬಹುದು ಎಂಬ ಆತಂಕ ಸ್ಥಳೀಯ ಜನರದ್ದು, ಈ ಬಗ್ಗೆ ತಾರ್ಕಿಕ ಅಂತ್ಯ ಇನ್ನೂ ಕಂಡಿಲ್ಲ, ಮತ್ತೆ ಉಗ್ರ ಹೋರಾಟಕ್ಕೆ ಜನತೆ ಸಜ್ಜಾಗಿದ್ದಾರೆ.

ಮಲೆನಾಡು ಜನಹಿತ ರಕ್ಷಣಾ ವೇದಿಕೆ ಕಸ್ತೂರಿ ರಂಗನ್ ವಿರುದ್ಧ ನಿರಂತರ ಹೋರಾಟ ಮಾಡುತ್ತಲೆ ಬಂದಿದೆ. ಇತ್ತೀಚೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿಕೆಯಿಂದ ವೇದಿಕೆ ರೊಚ್ಚಿಗೆದ್ದಿತ್ತು. ಸಚಿವರು ಹೇಳಿಕೆಗೆ ತೇಪೆ ಹಚ್ಚಿದರು ವರದಿ ಅನುಷ್ಠಾನದ ಗುಮ್ಮ ಬಿಟ್ಟಿಲ್ಲ. ಅದೇ ಕಾರಣಕ್ಕೆ ಮತ್ತೆ ಸೆಟೆದು ನಿಂತಿರುವ ಮಲೆನಾಡು ಜನ ಹಿತರಕ್ಷಣಾ ವೇದಿಕೆ ನ.8 ರಂದು ಸುಬ್ರಹ್ಮಣ್ಯದಿಂದ ಹೋರಾಟದ ರಣಕಹಳೆ ಮೊಳಗಿಸಲು ಸಜ್ಜಾಗಿದೆ.

ಹೋರಾಟಗಾರರ ಬೇಡಿಕೆ ಏನು?

ಕಸ್ತೂರಿ ರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಅನುಷ್ಠಾನ ಮಾಡಬಾರದು, ಪ್ರಾಸ್ತವಿಕ ತಳದ ರೈತರನ್ನು ಒಕ್ಕಲೆಬ್ಬಿಸದೆ ಅವರಿಗೆ ಹಕ್ಕು ಪತ್ರ ನೀಡುವುದು ಹಾಗೂ ಜಂಟಿ ಸರ್ವೆ ಮಾಡುವುದು, ಅಡಿಕೆಗೆ ಹಳದಿ ರೋಗ ಹಾಗೂ ಎಲೆ ಚುಕ್ಕಿ ರೋಗದಿಂದ ಸಂತ್ರಸ್ತರಾಗಿರುವ ರೈತರಿಗೆ ಅವರು ಬಯಸಿದ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ, ಸಹಕಾರಿ ಸಂಘ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ಸಾಲ ಮನ್ನಾ ಮಾಡುವುದು, ಕಾಡು ಪ್ರಾಣಿಗಳಿಂದ ರಕ್ಷಣೆಗಾಗಿ ಕೋವಿ ಪರವಾನಾಗಿ ನೀಡುವುದು ಮುಂತಾದ ಹಕ್ಕೋತಾಯದೊಂದಿಗೆ ಪ್ರತಿಭಟನೆಗೆ ಸಿದ್ಧತೆ ನಡೆಸಲಾಗುತ್ತಿದೆ.

ಸಾವಿರಾರು ಮಂದಿ ರೈತರ ಬದುಕು ಬೀದಿಗೆ…!

ಕಸ್ತೂರಿ ರಂಗನ್ ವರದಿಯಂತೆ ಕಾರವಾರದಿಂದ ಚಾಮರಾಜನಗರದ ತನಕ ರಾಜ್ಯದ ಏಳು ಜಿಲ್ಲೆಗಳ ಪಶ್ಚಿಮ ಘಟ್ಟ ಭಾಗದ ಸಾವಿರಾರು ಗ್ರಾಮಗಳ ಲಕ್ಷಾಂತರ ಕುಟುಂಬದವರಿಗೆ ಕಂಟಕ ಪ್ರಾಯವಾದ ಈ ವರದಿಯನ್ನು ತಿರಸ್ಕರಿಸುವಂತೆ ಕಳೆದ 17 ವರ್ಷಗಳಿಂದ ಪ್ರತಿಭಟನೆ, ಹೋರಾಟ ನಡೆಯುತ್ತಲೇ ಇದೆ. ಇಷ್ಟಾದರೂ ಹಸಿರು ಪೀಠದಿಂದ ಹಿಂದಿನ ಆದೇಶವನ್ನೇ ಜಾರಿಗೊಳಿಸುವ ಆದೇಶವಿರುವುದರಿಂದ ಸಂತ್ರಸ್ತ ಗ್ರಾಮಗಳ ರೈತರು ಆತಂಕದಲ್ಲೇ ಇದ್ದಾರೆ. ಒಂದು ವೇಳೆ ಸರ್ಕಾರದ ನಿರ್ಧಾರದಂತೆ ಅನುಷ್ಠಾನವಾದರೆ, ಕೃಷಿ ಭೂಮಿಯನ್ನು ಅರಣ್ಯ ಇಲಾಖೆ ವಶಪಡಿಸಿಕೊಳ್ಳುತ್ತದೆ. ವರದಿಯಲ್ಲಿ ಈ ಭೂಮಿಗೆ ಇವರಿಗೆ ಯಾವುದೇ ಪರಿಹಾರ ನಮೂದಿಸಿಲ್ಲ. ಬೆಲೆ ನಿಗದಿಪಡಿಸಿಲ್ಲ, ಭೂಮಿ ಕಳೆದುಕೊಳ್ಳುವ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಉಲ್ಲೇಖವಿಲ್ಲ. ವಸತಿ ಇನ್ನಿತರ ಕಟ್ಟಡಗಳಿಗೂ ಪರಿಹಾರ ಘೋಷಿಸಿಲ್ಲ.

ಈಗಾಗಲೇ ಅರಣ್ಯ ಹಾಗೂ ಸರಕಾರಿ ಜಮೀನಿನಲ್ಲಿ ಮನೆ ಕಟ್ಟಿ ವಾಸಿಸುವವರಿಗೆ ಚೆಕ್ಕನ್ನು ಕೊಡದೆ ಒಕ್ಕಲೆಬ್ಬಿಸಿದ ವಿದ್ಯಾಮಾನ ನಡೆಯಲಿದೆ. ಇದಕ್ಕೆ ಹಿಂಜರಿದಲ್ಲಿ ಮೂಲ ಸೌಕರ್ಯಗಳಾದ ವಿದ್ಯುತ್, ರಸ್ತೆ, ನೀರು, ದೂರವಾಣಿ ಇತ್ಯಾದಿ ಕಡಿತಗೊಳಿಸಿ ತಾವಾಗಿಯೇ ಒಕ್ಕಲೆಳುವಂತೆ ಮಾಡಲಾಗುತ್ತದೆ. ಭೂಮಿಯ ಹಕ್ಕು ಪತ್ರ ರದ್ದಾಗಲಿದೆ. ಯೋಜನೆಯು ಈ ಭಾಗದಿಂದ 10 ಕಿ.ಮೀ ತನಕ ಕಾಯಿದೆ ಉರ್ಜಿತದಲ್ಲಿರುತ್ತದೆ. ರೈತರಿಗೆ ಕೋವಿ ಪರವಾನಗಿ ನೀಡುವುದನ್ನು ರದ್ದುಗೊಳಿಸಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿ 75, ರಾಜ್ಯ ಹೆದ್ದಾರಿಗಳಾದ ಬಿಸಿಲೆ ಹಾಗೂ ಚಾರ್ಮುಡಿ ಘಾಟಿ ರಸ್ತೆಗಳು, ಮಂಗಳೂರು- ಬೆಂಗಳೂರು ರೈಲು ಮಾರ್ಗಗಳು ಯೋಜನೆಯ ನೀಲ ನಕ್ಷೆಯಲ್ಲಿ ಒಳಪಡುವುದರಿಂದ ಮುಂದೊಂದು ದಿನ ಈ ರೈಲು, ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು ಬಂದ್ ಆಗಿ ಜಿಲ್ಲೆಯ ಅಭಿವೃದ್ಧಿಗೆ ಮಾರಕವಾಗಲಿದೆ ಎಂಬ ಆತಂಕ ಇಲ್ಲಿನ ಜನರನ್ನು ಕಾಡುತ್ತಿದೆ.

Categories
ಕರಾವಳಿ

ಕರಾವಳಿಯಲ್ಲಿ ಕಳ್ಳರ ಕೈಚಳಕ!

– ಉಡುಪಿ : ಕುಖ್ಯಾತ ಅಂತರ್ ಜಿಲ್ಲಾ ಕಳ್ಳನ ಸೆರೆ
– 46.67 ಲಕ್ಷ ಮೌಲ್ಯದ ಸೊತ್ತು ವಶ
– ಮೂಡಬಿದ್ರೆ : ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರ ದಾಳಿ
– ಮಂಗಳೂರು: ವಿದ್ಯುತ್ ಶಾಕ್ ತಗುಲಿ ಕಾರ್ಮಿಕನ ಸಾವು

NAMMUR EXPRESS NEWS
ಉಡುಪಿ: ಕುಂಜಿಬೆಟ್ಟುವಿನಲ್ಲಿ ನಡೆದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿ, ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಲಿಂಗಪ್ಪ ಅವರು ಈತ ಅ.8ರಂದು ಕುಂಜಿಬೆಟ್ಟುವಿನ ಅಮ್ಮುಂಜೆ ವಿಠಲ್ದಾಸ್ ನಾಯಕ್ ಅವರ ಮನೆಯ ಬಾಗಿಲು ಮುರಿದು, ಬೆಡ್ ರೂಮ್ ನ ಅಲ್ಮೇರಾದಲ್ಲಿದ್ದ ಸುಮಾರು 66,36,300 ರೂ. ಮೌಲ್ಯದ ಅಂದಾಜು 1882 ಗ್ರಾಂ ತೂಕದ ಚಿನ್ನಾಭರಣ ಹಾಗೂ 6,70,500 ರೂ. ಮೌಲ್ಯದ 7,450 ಗ್ರಾಂ ತೂಕದ ಬೆಳ್ಳಿಯ ಸೊತ್ತುಗಳು ಸಹಿತ ಒಟ್ಟು 73,06,800 ಮೌಲ್ಯದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದನು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಪ್ರಕರಣದ ತನಿಖೆಗಾಗಿ ಪಿಎಸ್ ಐ ಪುನೀತ್ ಕುಮಾರ್ ಬಿ.ಇ. ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

ಕಾರ್ಯಾಚರಣೆಗೆ ಇಳಿದ ಪೊಲೀಸರು ಅ.31ರಂದು ಉಡುಪಿ ಬಲಾಯಿಪಾದೆಯ ಜಂಕ್ಷನ್ ಬಳಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯು ಬ್ರಹ್ಮಾವರ, ತರೀಕೆರೆ, ಅರಸೀಕೆರೆ ಮತ್ತು ಬಾಣಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಗಳಲ್ಲಿಯೂ ಕೂಡ ಭಾಗಿಯಾಗಿದ್ದಾನೆ. ಅಲ್ಲದೆ, ಈತನ ವಿರುದ್ಧ ಈಗಾಗಲೇ ಬೆಂಗಳೂರು, ಕೋಲಾರ, ತುಮಕೂರು, ದಾವಣಗೆರೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ 60ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ ಎಂದರು.

ಇಸ್ಪೀಟ್ ಅಡ್ಡೆಕ್ಕೆ ಪೊಲೀಸರ ದಾಳಿ

ಮೂಡಬಿದ್ರೆ : ಮೂಡಬಿದ್ರೆ ಪೊಲೀಸರು ಬೆಳುವಾಯಿಯ ಮುಡೇಕಾಡು ಎಂಬಲ್ಲಿ ಇಸ್ಪೀಟ್ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ದಾಳಿ ನಡೆಸಿ ಜೂಜಾಟ ಆಡುತ್ತಿದ್ದ ಆರು ಮಂದಿಯನ್ನ ವಶಕ್ಕೆ ಪಡೆದಿದ್ದಾರೆ ಆರು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದ ನಂತರ ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಠಾಣಾ ಅಕ್ರ 167/2023 ಕಲಂ 87 ಕೆ ಪಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಂದ ಸುಮಾರು 9000 ರೂ ಹಣ ಮತ್ತು ಒಂದು ಸ್ವಿಫ್ಟ್ ಕಾರು ಮತ್ತು ಒಂದು ಬೈಕ್ ನ್ನು ವಶಕ್ಕೆ ಪಡೆದಿದ್ದಾರೆ.

ವಿದ್ಯುತ್ ಶಾಕ್ ತಗುಲಿ ಕಾರ್ಮಿಕನ ಸಾವು

ಮಂಗಳೂರು: ವಿದ್ಯುತ್ ಶಾಕ್ ತಗುಲಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಹೊರವಲಯದ ಮೂಡುಶೆಡ್ಡೆ ಎಂಬಲ್ಲಿ ನಡೆದಿದೆ. ಸೋನ್ ಸಿಂಗ್ ಗೊಂಡ (22) ಮೃತಪಟ್ಟ ದುರ್ದೈವಿ. ನಿನ್ನೆ ರಾತ್ರಿಯ ವೇಳೆ ಯುವರಾಜ್ ಶಿವ ಕೃಪ ಏರೇಂಜರ್ಸ್ ಗೋದಾಮಿನಲ್ಲಿ ಈ ಅವಘಡ ಸಂಭವಿಸಿದೆ. ಸೋನ್ ಸಿಂಗ್ ಶಿವ ಕೃಪ ಏರೇಂಜರ್ಸ್ ಗೋಡನ್‌ನಲ್ಲಿ ಕೆಲಸ ಮಾಡುತ್ತಿರುವ ವೇಳೆ ಗೋಂಡನ್‌ನ ಶೂಟರ್ ನಲ್ಲಿ ವಿದ್ಯುತ್ ಹರಿದು ಸಾವನ್ನಪ್ಪಿದ್ದಾರೆ ಅನ್ನುವ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.