Categories
ಉದ್ಯೋಗ ಸುದ್ದಿ

ಸಶಸ್ತ್ರ ಸೇನಾ ಬಲ (SSB) ವಿವಿಧ ಹುದ್ದೆಗಳಿಗೆ ಅರ್ಜಿ

ಸಶಸ್ತ್ರ ಸೇನಾ ಬಲ (SSB) ವಿವಿಧ ಹುದ್ದೆಗಳಿಗೆ ಅರ್ಜಿ

NAMMUR EXPRESS JOB NEWS : 
ಸಶಸ್ತ್ರ ಸೇನಾ ಬಲ (SSB) ಕರ್ನಾಟಕ ಅಧಿಕೃತ ಅಧಿಸೂಚನೆಯ ಅಕ್ಟೋಬರ್ 2023 ರ ಮೂಲಕ ಕಾನ್ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಉದ್ಯೋಗ ಹುಡುಕುತ್ತಿರುವವರಿಗೆ ಇದು ಸಹಾಯಕ ಆಗಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು 20 ನವೆಂಬರ್ 2023 ರ ವೊಳಗೆ ಅರ್ಜಿ ಸಲ್ಲಿಸಬಹುದು.

ಒಟ್ಟು ಹುದ್ದೆಗಳು : 272

ಉದ್ಯೋಗ ಸ್ಥಳ: ಭಾರತದಾದ್ಯಂತ

ಹುದ್ದೆಗಳ ವಿವರ..

ಕಾನ್ಸ್ಟೇಬಲ್ (ಜನರಲ್ ಡ್ಯೂಟಿ)

ವಯೋಮಿತಿ..

ಸಶಸ್ತ್ರ ಸೇನಾ ಬಲ (SSB) ನಿಯಮಾನುಸಾರ ಕನಿಷ್ಠ 18 ವರ್ಷಗಳು ಹಾಗೂ ಗರಿಷ್ಠ 23 ವರ್ಷಗಳು

ಅರ್ಜಿ ಶುಲ್ಕ …

ಎಸ್ಸಿ ಎಸ್ಟಿ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ

ಓಬಿಸಿ ಅಭ್ಯರ್ಥಿಗಳಿಗೆ : Rs.100/-
ಆನ್ಲೈನ್ ಗಳ ಮೂಲಕ ಹಣವನ್ನು ಪಾವತಿಸಬೇಕು.

ವಿದ್ಯಾರ್ಹತೆ.
ಸಶಸ್ತ್ರ ಸೇನಾ ಬಲ (SSB) ನಿಯಮಾನುಸಾರ 10th ಪಾಸಾಗಿರಬೇಕು.

ವೇತನ: 21700 ರಿಂದ 69100 ಪ್ರತಿ ತಿಂಗಳು..

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ.. 21-10-23
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ..20-11-23

ಅರ್ಜಿ ಸಲ್ಲಿಸಲು..

https://applyssb.com/SSBSports_2023/applicationAfterIndex

Categories
ಚಿಕ್ಕಮಗಳೂರು

ಚಿಕ್ಕಮಗಳೂರು ಟಾಪ್ ನ್ಯೂಸ್

– ಕೊಪ್ಪ ವೈದ್ಯಾಧಿಕಾರಿ ಹುದ್ದೆಯಿಂದ ಡಾ.ಗಾನವಿ ಗೇಟ್ ಪಾಸ್?
– ಚಿನ್ನಾಭರಣ ಕಳವು: ಆರೋಪಿ ಅರೆಸ್ಟ್!

NAMMUR EXPRESS NEWS
ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗಕ್ಕೆ ನೀಡಿರುವ ದೂರಿನ್ವಯ ಕೊಪ್ಪ ಸಾರ್ವಜನಿಕ ಆಸ್ಪತ್ರೆಯ ಆಡಳಿತ ಅಧಿಕಾರವನ್ನು ಹಿರಿಯ ತಜ್ಞರಿಗೆ ವಹಿಸುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಇಲ್ಲಿನ ಕೊಪ್ಪ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ ಗಾನವಿ ಅವರು ನಾಲ್ಕು ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸಿದ್ದಾರೆ, ಇದೀಗ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗಕ್ಕೆ ಕೊಪ್ಪ ಸಾರ್ವಜನಿಕ ಆಸ್ಪತ್ರೆಯ ಹಿರಿಯ ತಜ್ಞರಾದ ವೆಂಕಟೇಶ್ ದೂರಿನ್ವಯ 25/10/2023 ರಂದು ವಿಚಾರಣೆ ನಡೆಸಿ ಅರ್ಜಿದಾರರ ಮನವಿಯ ಮೇಲೆ 07 ದಿನಗಳ ಒಳಗೆ ಕ್ರಮವಹಿಸಿ ಅನುಪಾಲನಾ ವರದಿಯನ್ನು ಸಲ್ಲಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ.

ಚಿನ್ನಾಭರಣ ಕಳವು: ಆರೋಪಿ ಅರೆಸ್ಟ್!

ಆಲ್ದುರು: ಸಮೀಪದ ತೋರಣ ಮಾವು ನಿವಾಸಿ ಯೋಗಿನಿ ರಾಜಶೇಖರ್, ಅವರ ಮನೆಯಲ್ಲಿ ಅ.29ರಂದು ತೋಟಕ್ಕೆ ತೆರಳಿದ್ದ ವೇಳೆ ಮನೆಯ ಹಿಂಬಾಗಿಲು ಮುರಿದು ಬೀರುವಿನಲ್ಲಿ ಇಟ್ಟಿದ್ದ 15 ಗ್ರಾಂ ಚಿನ್ನದ ಸರ ಮತ್ತು ಆರ್ಟಿಫಿಷಿಯಲ್ ಸರಗಳನ್ನು ಕಳವು ಮಾಡಿದ್ದ ಪ್ರಕರಣದ ಆರೋಪಿ, ತೋರಣಮಾವು ನಿವಾಸಿ ಶಾಂತಪ್ಪ ಅಲಿಯಾಸ್ ಸಂಪತ್ತಕುಮಾರ ಅಲಿಯಾಸ್ ಪಾಪಿ (30) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅಡುಗೆ ವೃತ್ತಿ ಮಾಡುತ್ತಿದ್ದ ಆರೋಪಿ ಕಳವು ಮಾಡಿದ್ದ ಆಭರಣವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ. ಕಾರ್ಯಾಚರಣೆಯಲ್ಲಿ ಪಿಎಸ್‌ಐಗಳಾದ ಅಕ್ಷಿತಾ ಕೆ.ಪಿ, ಕೀರ್ತಿ ಕುಮಾರ್, ಸಿಬ್ಬಂದಿ ಭಾಗವಹಿಸಿದ್ದರು.

Categories
ಬೆಂಗಳೂರು

ಆದರ್ಶ ಹುಂಚದಕಟ್ಟೆ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಹುದ್ದೆ

ಆದರ್ಶ ಹುಂಚದಕಟ್ಟೆ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಹುದ್ದೆ
– ಯುವ ಕಾಂಗ್ರೆಸ್ ವಕ್ತಾರರಾಗಿ ಮರು ನೇಮಕ
– ರಾಜ್ಯದಿಂದ ಆಯ್ಕೆಯಾದ ಏಕೈಕ ವಕ್ತಾರ

NAMMUR EXPRESS NEWS
ಬೆಂಗಳೂರು: ಭಾರತೀಯ ಯುವ ಕಾಂಗ್ರೆಸ್ ವಕ್ತಾರರಾಗಿ ಯುವ ನಾಯಕ ಆದರ್ಶ ಹುಂಚದಕಟ್ಟೆ ಮರು ನೇಮಕಗೊಂಡಿದ್ದಾರೆ. ಈಗಾಗಲೇ ಎರಡು ವರ್ಷ ಪೂರೈಸಿರುವ ಆದರ್ಶ್ ಹುಂಚದಕಟ್ಟೆ ಅವರಿಗೆ ಇದೀಗ ಮತ್ತಷ್ಟು ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ. ಕರ್ನಾಟಕ ರಾಜ್ಯದಿಂದ ಈ ಬಾರಿ ರಾಷ್ಟ್ರೀಯ ವಕ್ತಾರರಾಗಿ ನೇಮಿಸಲ್ಪಟ್ಟಿರುವ ಏಕೈಕ ಹೆಸರು ಆದರ್ಶ ಅವರದ್ದು. ಭಾರತ ಐಕ್ಯತಾ ಯಾತ್ರೆಯ ಮೂಲಕ ಭಾರತದ ಅಭ್ಯುದಯಕ್ಕೆ ಹೊಸ ಭಾಷ್ಯೆ ಬರೆಯುತ್ತಿರುವ ಶ್ರೀಯುತ ರಾಹುಲ್ ಗಾಂಧಿ ಮತ್ತು ಭಾರತೀಯ ಕಾಂಗ್ರೆಸ್ ಪಕ್ಷದ ರಾಷ್ಟ್ರಿಯ ಅಧ್ಯಕ್ಷರಾದ ಶ್ರೀಯುತ ಮಲ್ಲಿಕಾರ್ಜುನ ಖರ್ಗೆಯವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಪಕ್ಷದ ಸಿದ್ದಾಂತಬದ್ದ ರಾಜಕಾರಣದಡಿಯಲ್ಲಿ ಕೆಲಸ ಮಾಡುತ್ತೇನೆ ಎಂದು ಆದರ್ಶ್ ಹೇಳಿದ್ದಾರೆ.

ತಮ್ಮ ಅಧ್ಯಯನ ಶೀಲತೆ ಮತ್ತು ಮಾತಿನ ಮೂಲಕ ಗಮನ ಸೆಳೆದಿರುವ ಆದರ್ಶ್ ತೀರ್ಥಹಳ್ಳಿ ಕ್ಷೇತ್ರದ ಭರವಸೆಯ ನಾಯಕನಾಗಿ ಬೆಳೆಯುತ್ತಿದ್ದು ಅವರಿಗೆ ಅವರ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

Categories
ಬೆಂಗಳೂರು

ವನ್ಯಜೀವಿ ಉತ್ಪನ್ನ ಇಟ್ಟುಕೊಂಡೋರಿಗೆ ವಿನಾಯ್ತಿ!?

ವನ್ಯಜೀವಿ ಉತ್ಪನ್ನ ಇಟ್ಟುಕೊಂಡೋರಿಗೆ ವಿನಾಯ್ತಿ!?
– ಶೀಘ್ರವೇ ವಾಪಸಾತಿಗೆ ರಾಜ್ಯ ಸರ್ಕಾರದಿಂದ 3 ತಿಂಗಳ ಗಡುವು
– ಅರಣ್ಯ ಸಚಿವರು ಹೇಳಿದ್ದೇನು…?

NAMMUR EXPRESS NEWS
ಬೆಂಗಳೂರು: ವನ್ಯಜೀವಿ ಉತ್ಪನ್ನ ಹೊಂದಿದ್ದಾರೋ ಅವುಗಳನ್ನು ತಾವಾಗಿಯೇ ಸರ್ಕಾರಕ್ಕೆ ಹಿಂದಿರುಗಿಸೋದಕ್ಕೆ ಮೂರು ತಿಂಗಳ ಗಡುವು ನೀಡಲಾಗುತ್ತಿದೆ. ಬೀದರ್ ಅಲ್ಲಿ ಈ ಕುರಿತಂತೆ ಮಾಹಿತಿ ನೀಡಿದಂತ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಅವರು, ವನ್ಯ ಜೀವಿ ಅಂಗಾಂಗಗಳು, ಹಲ್ಲು, ಚರ್ಮ, ಕೊಂಬು ಮತ್ತಿತರ ವನ್ಯಜೀವುಗಳಿಗೆ ಸಂಬಂಧಿಸಿದ ವಸ್ತುಗಳು ಅರಿವಿಲ್ಲದೇ ಉಪಯೋಗಿಸುತ್ತಿದ್ದಾರೆ. ಅವುಗಳನ್ನು ಅರಣ್ಯ ಇಲಾಖೆ ಸುಪರ್ದಿಗೆ ವಾಪಾಸ್ ನೀಡಲು ಮೂರು ತಿಂಗಳ ಗಡುವು ನೀಡಲು ಕಾನೂನು ರೂಪಿಸಿ ಜಾರಿಗೆ ತರಲಾಗುತ್ತಿದೆ ಎಂದಿದ್ದಾರೆ. ನವೆಂಬರ್.9ರಂದು ಸಚಿವ ಸಂಪುಟ ಸಭೆ ನಡೆಯಲಿದೆ. ಆ ಸಭೆಯಲ್ಲಿ ವನ್ಯಜೀವಿ ಉತ್ಪನ್ನ ಇಟ್ಟಿಕೊಂಡಿರೋರು ವಾಪಾಸಾತಿಗೆ ಗಡುವು ನೀಡುವ ಬಗ್ಗೆ ಚರ್ಚಿಸಲಾಗುತ್ತದೆ. ಅಂತಿಮವಾಗಿ ಕರಡು ಆದೇಶವನ್ನು ಪ್ರಕಟಿಸಲಾಗುತ್ತದೆ ಎಂದರು.

ಈ ಸಂಬಂಧ ಸಿಎಂ ಜೊತೆಗೆ ಚರ್ಚಿಸಲಾಗಿದೆ. ಹಿರಿಯ ಅರಣ್ಯಾಧಿಕಾರಿಗಳೊಂದಿಗೂ ಸಮಾಲೋಚನೆ ನಡೆಸಿ, ಕರಡು ನಿಯಮಗಳನ್ನು ತಯಾರಿಸಲಾಗುತ್ತಿದ್ದು, ಕಾನೂನು ಇಲಾಖೆಗೆ ಕಳುಹಿಸಿದ ನಂತ್ರ ಸಚಿವ ಸಂಪುಟ ಸಭೆಯಲ್ಲಿ ಮಂಡನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಬೇಟೆ ಅಪರಾಧವನ್ನು ತಮ್ಮ ಇಲಾಖೆಯವರು ತಡೆಯಲೇ ಬೇಕು. ತಡೆಯುತ್ತಾರೆ. ಅರಿವಿಲ್ಲದೇ ವನ್ಯಜೀವಿ ಉತ್ಪನ್ನಗಳನ್ನು ಬಳಸುವವರು ಅನುಕೂಲಕ್ಕಾಗಿ ಕಾನೂನು ಜಾರಿ ತರಲು ಮುಂದಾಗಲಿದ್ದೇವೆ ಎಂದರು.

Categories
ತೀರ್ಥಹಳ್ಳಿ

ರಾಷ್ಟ್ರ ಮಟ್ಟದಲ್ಲಿ ಮಿನುಗಿದ ತೀರ್ಥಹಳ್ಳಿ ಹುಡುಗ!

ರಾಷ್ಟ್ರ ಮಟ್ಟದಲ್ಲಿ ಮಿನುಗಿದ ತೀರ್ಥಹಳ್ಳಿ ಹುಡುಗ!
– ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯದಲ್ಲಿ ಬೆಸ್ಟ್ ಪ್ಲೇಯರ್ ಗೌರವ
– ಆರ್ಯನ್ ಸಾಧನೆಗೆ ಎಲ್ಲೆಡೆ ಮೆಚ್ಚುಗೆ

NAMMUR EXPRESS NEWS
ತೀರ್ಥಹಳ್ಳಿ: ರಾಷ್ಟ್ರ ಮಟ್ಟದ ಬಾಲಕರ ವಾಲಿಬಾಲ್ ಪಂದ್ಯಾಟದಲ್ಲಿ ಕರ್ನಾಟಕ ಪ್ರತಿನಿಧಿಸಿ ತೀರ್ಥಹಳ್ಳಿಯ ಆಟಗಾರ ಆರ್ಯನ್ ರಾಷ್ಟ್ರ ಮಟ್ಟದ ಬೆಸ್ಟ್ ಆಟಗಾರ ಗೌರವಕ್ಕೆ ಪಾತ್ರರಾಗಿದ್ದಾರೆ. ಆಗುಂಬೆಯ ಎವಿಎಂ ಶಾಲೆಯ ವಿದ್ಯಾರ್ಥಿಯಾಗಿರುವ ತೀರ್ಥಹಳ್ಳಿಯ ಪ್ರಮುಖ ನಾಯಕರಾದ ರಮ್ಯಾ ಹಾಗೂ ಅನಿಲ್ ದಂಪತಿಗಳ ಪುತ್ರ ಆರ್ಯನ್ ಅವರ ಸಾಧನೆಗೆ ಇಡೀ ರಾಜ್ಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯದಲ್ಲಿ ಕರ್ನಾಟಕ ತಂಡವು ಆಡಿದ ಪ್ರತಿ ಪಂದ್ಯದಲ್ಲೂ ಉತ್ತಮ ಸಾಧನೆ ಮಾಡಿದೆ.

ಆರ್ಯನ್ ಬೆಸ್ಟ್ ಆಟಗಾರ

ರಾಷ್ಟ್ರ ಮಟ್ಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿರುವ ಆರ್ಯನ್ ಅವರು ರಾಷ್ಟ್ರ ಮಟ್ಟದ ಬೆಸ್ಟ್ ಆಟಗಾರ ಗೌರವಕ್ಕೆ ಪಾತ್ರರಾಗಿದ್ದಾರೆ.

ರಮ್ಯಾ ಅನಿಲ್ ದಂಪತಿ ಧನ್ಯವಾದ

ಆರ್ಯನ್ ಕ್ರೀಡೆಯ ಯಶಸ್ಸಿಗೆ ಸಹಕರಿಸಿದ ಎ ವಿಎಂ ಶಾಲೆಯ ಬೋಧಕ ಹಾಗೂ ಬೋಧಕೇತರ ಮಿತ್ರರಿಗೆ, ತರಬೇತಿ ನೀಡಿದ ಮಿತ್ರರಿಗೆ, ಜಿಲ್ಲಾ, ರಾಜ್ಯ ತಂಡಕ್ಕೆ ರಮ್ಯಾ ಮತ್ತು ಅನಿಲ್ ದಂಪತಿ ಧನ್ಯವಾದ ಅರ್ಪಿಸಿದ್ದಾರೆ.

Categories
ಬೆಂಗಳೂರು

ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಎಚ್ಚರಿಕೆ!

ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಎಚ್ಚರಿಕೆ!
– ಚುಮು ಚುಮು ಚಳಿ ನಡುವೆ ಈಗ ಮಳೆ
– ಕರಾವಳಿ, ಮಲೆನಾಡಲ್ಲಿ ಭತ್ತ, ಅಡಿಕೆಗೆ ಎಫೆಕ್ಟ್

NAMMUR EXPRESS NEWS
ಬೆಂಗಳೂರು: ಕಳೆದೊಂದು ವಾರದಿಂದ ರಾಜ್ಯದಲ್ಲಿ ಮಳೆ ಮತ್ತೆ ಸುರಿಯುತ್ತಿದೆ. ಈ ನಡುವೆ ನ.4 ರಿಂದ 7ರವರೆಗೆ ಕರ್ನಾಟಕದ ಅನೇಕ ಭಾಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
ಚಳಿಗಾಲದ ಪರಿಣಾಮ ಕರ್ನಾಟಕ ರಾಜ್ಯಾದ್ಯಂತ ಹಲವೆಡೆ ಚಳಿ ಶುರುವಾಗಿದೆ, ಉತ್ತರ ಒಳನಾಡಿನಲ್ಲಿ ಒಣಹವೆ ಇದ್ದು, ಗರಿಷ್ಠ ಉಷ್ಣಾಂಶವು ಕೊಂಚ ಏರಿಕೆಯಾಗಿದೆ. ಹಾಗೆಯೇ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗಗಳಲ್ಲಿ ಮಳೆಯಾಗುತ್ತಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಮಂಡ್ಯ, ಕೊಡಗು, ಹಾಸನ, ಚಿಕ್ಕಮಗಳೂರಿನಲ್ಲಿ ನವೆಂಬರ್ 4 ರಿಂದ 7ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಇನ್ನು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಹಾವೇರಿ, ಕೊಪ್ಪಳ, ರಾಯಚೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿತ್ರದುರ್ಗ, ಕೋಲಾರ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲಿ ಸಾಧಾರಣ ಮಳೆಯಾಗಲಿದೆ. ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಿಂಚು, ಗಡುಗು ಸಹಿತ ಮಳೆಯಾಗಲಿದೆ. ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಮಲೆನಾಡು, ಕರಾವಳಿಯಲ್ಲಿ ರೈತರಿಗೆ ಆತಂಕ!

ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲೀಗ ಭತ್ತದ ಕಟಾವು ಕಾರ್ಯ ಆರಂಭಗೊಂಡಿದೆ. ಆದರೆ ಹವಾಮಾನ ಇಲಾಖೆ ಕರ್ನಾಟಕ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಸುರಿಯುವ ಮುನ್ಸೂಚನೆ ನೀಡಿದೆ. ಇದರಿಂದಾಗಿ ಭತ್ತದ ಕಟಾವು ಕಾರ್ಯ ನಡೆಸುತ್ತಿರುವ ರೈತರಿಗೆ ಆತಂಕ ಶುರುವಾಗಿದೆ. ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕೃಷಿಕರ ಜೀವನಾಧಾರವಾಗಿರುವುದು ಭತ್ತ. ಈ ಬಾರಿ ಮಳೆಯ ಕಣ್ಣಾಮುಚ್ಚಾಲೆ ಆಟದಿಂದಾಗಿ ಭತ್ತದ ಕೃಷಿಗೆ ಮಳೆಯ ಕೊರತೆ ಉಂಟಾಗಿತ್ತು. ಜೂನ್‌, ಜುಲೈ ತಿಂಗಳಲ್ಲಿ ಕೈಕೊಟ್ಟಿದ್ದ ಮಳೆ ಸೆಪ್ಟೆಂಬರ್‌ನಲ್ಲಿ ಸುರಿದಿತ್ತು. ಭತ್ತ ತೆಲೆ ಮೂಡುವ ಹೊತ್ತಲ್ಲೆ ಮಳೆಯಾಗಿರುವುದು ಭತ್ತದ ಇಳುವರಿ ಕಡಿಮೆಯಾಗಿದೆ.

ಮಲೆನಾಡಲ್ಲಿ ಅಡಿಕೆ ಕೊಯ್ಲು ಶುರು

ಮಲೆನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಭಾಗದಲ್ಲಿ ಅಡಿಕೆ ಕೊಯ್ಲು ಶುರುವಾಗಿದೆ. ಇದರಿಂದ ಮಳೆ ಬಂದಲ್ಲಿ ರೈತರಿಗೆ ತೊಂದರೆ ಆಗಲಿದೆ.

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಹಣ ಡಬಲ್ ಮಾಡಿ ಕೊಡುವುದಾಗಿ ಮೋಸ!
– ಉಡುಪಿ ಸೇರಿ ಕರಾವಳಿಯಲ್ಲಿ ಹೆಚ್ಚಾದ ವಂಚನೆ
– ಕಾಸರಗೋಡು: ದೋಣಿಯಿಂದ ನದಿಗೆ ಬಿದ್ದು ಸಾವು
– ಕುಂದಾಪುರ: ಸಾಲಬಾಧೆಯಿಂದ ವ್ಯಕ್ತಿಆತ್ಮಹತ್ಯೆ
– ಉಪ್ಪಿನಂಗಡಿ: ಮಹಿಳೆ ಜೊತೆ ಅಸಭ್ಯ ವರ್ತನೆ: ಕೇಸ್ !
– ಕುಂದಾಪುರ: ಅಡ ಇಟ್ಟ ಜಾಗ ಮಾರಿದ ಕಿಲಾಡಿಗಳು!
– ಮಂಗಳೂರು: ಉದ್ಯೋಗದ ಭರವಸೆ ಲಕ್ಷ ವಂಚನೆ

NAMMUR EXPRESS NEWS
ಉಡುಪಿ: ಹಣ ದ್ವಿಗುಣ ಗೊಳಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ಸಾವಿರಾರು ರೂ. ವಂಚಿಸಿದ ಘಟನೆ ನಡೆದಿದೆ
ಮಹಾಬಲೇಶ್ವರ ಮಾರಣಕಟ್ಟೆ ಅವರ ಮೊಬೈಲ್‌ಗೆ ಜು.1ರಂದು ಯಾರೋ ಅಪರಿಚಿತ ವ್ಯಕ್ತಿ ವಾಟ್ಸಾಪ್ ಸಂದೇಶ ಕಳುಹಿಸಿದ್ದು, ಆ ಸಂದೇಶದಲ್ಲಿ ಆತನು ಕಳುಹಿಸಿರುವ ಲಿಂಕ್ ಮೂಲಕ ಟ್ರೆಡಿಂಗ್ ವ್ಯವಹಾರ ನಡೆಸಿದರೆ ಹೂಡಿದ ಹಣವನ್ನು ದ್ವಿಗುಣಗೊಳಿಸಿ ನೀಡುವುದಾಗಿ ನಂಬಿಸಿದ್ದನು. ಅದರಂತೆ ಆ ವ್ಯಕ್ತಿ ಮಹಾಬಲೇಶ್ವರ ಮಾರಣಕಟ್ಟೆಯನ್ನು ನಂಬಿಸಿ ಯಾವುದೋ ಒಂದು ಶಾಖೆಯ ಖಾತೆ ಸಂಖ್ಯೆಯನ್ನು ನೀಡಿದ್ದು ಆ ಖಾತೆಗೆ ಮಹಾಬಲೇಶ್ವರ ಮಾರಣಕಟ್ಟೆ ಅವರು ಜು. 21ರಂದು 90,000 ರೂ.ಗಳನ್ನು ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದರು. ಆದರೆ ಆರೋಪಿ ಹಣಕ್ಕೆ ಲಾಭಾಂಶ ನೀಡದೇ, ಹೂಡಿದ ಹಣವನ್ನು ಹಿಂದಿರುಗಿಸದೇ ನಷ್ಟ ಉಂಟು ಮಾಡಿರುವುದಾಗಿ ಸೆನ್ ಅಪರಾಧ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ

ದೋಣಿಯಿಂದ ನದಿಗೆ ಬಿದ್ದು ಸಾವು: ಕೊಲೆ ಶಂಕೆ!?

ಕಾಸರಗೋಡು: ದೋಣಿಯಿಂದ ನದಿಗೆ ಬಿದ್ದು ಉದ್ಯೋಗಿಯೋರ್ವರು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ದಿನಗಳ ಬಳಿಕ ವ್ಯಕ್ತಿಯ ಮೃತದೇಹ ಪತ್ತೆಯಾದ ಘಟನೆ ಕಾಸರಗೋಡಿನ ಚಂದ್ರಗಿರಿ ನದಿಯ ಚೇರೂರು ಎಂಬಲ್ಲಿ ನಡೆದಿದೆ. ವಿದ್ಯಾನಗರ ಪಾಣಲಂನ ಅಬ್ದುಲ್ ಮಜೀದ್ (54) ಮೃತ ದುರ್ದೈವಿ. ಮಜೀದ್ ಅವರು ಅ. 26 ರ ತಡರಾತ್ರಿ ಸ್ನೇಹಿತರ ಜೊತೆ ನದಿಯಲ್ಲಿ ದೋಣಿಯಲ್ಲಿ ತೆರಳುತ್ತಿದ್ದಾಗ ನದಿ ಪಾಲಾಗಿದ್ದು, ಬಳಿಕ ಸ್ನೇಹಿತರು ದಡಕ್ಕೆ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಸ್ಥಳೀಯರು ಮಜೀದ್ ಅವರಿಗಾಗಿ ಶೋಧ ನಡೆಸಿದ್ದರು. ಇದೀಗ ಮಜೀದ್ ಅವರ ಮೃತ ಅವರ ಮೃತ ದೇಹ ಮೇಲಕ್ಕೆತ್ತಲಾಗಿದ್ದು, ವಿದ್ಯಾನಗರ ಠಾಣಾ ಪೊಲೀಸರು ಮಹಜರು ನಡೆಸಿದ್ದಾರೆ.ಇನ್ನು ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಉಂಟಾದ ಸಂಶಯದ ಹಿನ್ನಲೆ ಮಜೀದ್ ಸ್ನೇಹಿತರಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣು

ಕುಂದಾಪುರ: ಇತ್ತೀಚಿಗೆ ರಸ್ತೆ ಅಪಘಾತದಲ್ಲಿ ಕಾಲಿಗೆ ಪೆಟ್ಟಾಗಿ, ದೈನಂದಿನ ಕೆಲಸಕಾರ್ಯಗಳನ್ನು ನಿರ್ವಹಿಸಲಾಗದೆ, ಈ ಕಾರಣದಿಂದ, ಗೃಹನಿರ್ಮಾಣಕ್ಕಾಗಿ ಮಾಡಿದ್ದ ಸಾಲವನ್ನೂ ತೀರಿಸಲಾಗದೆ ಹತಾಶೆಗೊಂಡ ವ್ಯಕ್ತಿಯೋವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ಸಮೀಪದ ವಂಚ್ಚೆಯಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ದುರ್ದೈವಿ ವಂಡ್ರೆಯ ಸತೀಷ (43) ಎಂದು ತಿಳಿದು ಬಂದಿದೆ.ಇವರು ಸಮೀಪದ ಬಾಳಿಕೇರಿ ಎಂಬಲ್ಲಿ ನೂತನ ಮನೆಕಟ್ಟಿಸಿದ್ದರು. ಇದಕ್ಕಾಗಿ ಖಾಸಗಿ ಸಂಸ್ಥೆಗಳಲ್ಲಿ ಸಾಲ ಮಾಡಿದ್ದರು. ಈ ನಡುವೆ ಅಪಘಾತಾಕ್ಕೊಳಗಾಗಿ ಕಾಲಿಗೆ ಪೆಟ್ಟಾದ್ದರಿಂದ ಕೆಲಸಕ್ಕೂ ಹೋಗದ ಪರಿಸ್ಥಿತಿ ಬಂದಿತು. ತನಗಾದ ಅಪಘಾತ, ಮನೆಯ ವಿಷಮ ಪರಿಸ್ಥಿತಿ, ಬೆಳೆಯುವ ಸಾಲದ ಕಂತು ಇವೆಲ್ಲವುಗಳಿಂದ ಕಂಗೆಟ್ಟು ಸತೀಷ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಅಡ ಇಟ್ಟ ಜಾಗವನ್ನು ಮಾರಿದ ಕಿಲಾಡಿಗಳು!

ಕುಂದಾಪುರ : 23 ಲಕ್ಷ ರೂಪಾಯಿ ಸಾಲಕ್ಕೆ ಅಡವಿಟ್ಟ ಭೂಮಿಯನ್ನು ಸಾಲ ತೀರಿಸದೇ ನಕಲಿ ಸಹಿ ಹಾಗೂ ಸೀಲುಗಳನ್ನು ಬಳಸಿ ಬೇರೆಯವರಿಗೆ ಮಾರಾಟ ಮಾಡಿದ ಖತರ್ನಾಕ್ ಪ್ರಕರಣವೊಂದು ಕುಂದಾಪುರದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 10 ಜನರ ವಿರುದ್ಧ ಸೊಸೈಟಿಯವರು ದೂರು ದಾಖಲಿಸಿದ್ದಾರೆ. 6 ಮಾರ್ಚ್ 2020ರಂದು ಕುಂದಾಪುರ ತಾಲೂಕು ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ.ಲಿ ಸಂಸ್ಥೆಯ ಪಡುಕೋಣೆ ಶಾಖೆಯಲ್ಲಿ ಶ್ರೀ ರಾಮ ಎಂಬುವರು ತಮ್ಮ ಹೆಸರಿನ ಜಾಗವನ್ನು ಅಡಮಾನವಾಗಿಸಿ 12 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಈ ಸಾಲಕ್ಕೆ ಸಂಜೀವ, ಗುರುಪ್ರಸಾದ್, ಕಿರಣ್ ಹಾಗೂ ರಾಘವೇಂದ್ರ ಎಂಬುವರು ಜಾಮೀನು ನೀಡಿದ್ದರು. ಬಳಿಕ ಅದೇ ಅಡಮಾನದ ಆಧಾರದ ಮೇಲೆ ಹಾಗೂ ಜಾಮೀನಿನ ಮೇಲೆ ಅದೇ ಸೊಸೈಟಿಯಿಂದ 11.60 ಲಕ್ಷ ರೂಪಾಯಿ ಸಾಲ ಪಡೆದಿದ್ದಾರೆನ್ನಲಾಗಿದೆ.

ಸಾಲ ಪಡೆದ ಶ್ರೀರಾಮ ಎಂಬಾತ ಉಳಿದ ಆರೋಪಿಗಳಾದ ರಾಮಕೃಷ್ಣ, ರತ್ನಾಕರ, ಜಗನ್ನಾಥ, ಹಾಗೂ ಗಿರೀಶ ಎಂಬುವರ ಜೊತೆ ಸೇರಿ ಸಾಲ ಪಡೆದುಕೊಂಡಿರುವ ಕುಂದಾಪುರ ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನಕಲಿ ಸೀಲ್ ತಯಾರಿಸಿ ಸಾಲ ಸಂಪೂರ್ಣ ಪಾವತಿಯಾಗಿದೆ. ಎಂದು ತೋರಿಸುವ, 6 ಫೆಬ್ರವರಿ 2020ರ ನಕಲಿ ಚುಕ್ತಾ ರಶೀದಿಯನ್ನು ತಯಾರಿಸಿ ಕುಂದಾಪುರ ಉಪನೋಂದಣಾಧಿಕಾರಿ ಕಛೇರಿಯಲ್ಲಿ ನೊಂದಾಯಿಸಿ ಜಾಗವನ್ನು ನಾಗರಾಜ ರವರಿಗೆ ಕ್ರಯಪತ್ರ ಮಾಡಿ, ಕ್ರಯಪತ್ರವನ್ನು ಕುಂದಾಪುರ ಉಪನೋಂದಣಾಧಿಕಾರಿ ಕಛೇರಿಯಲ್ಲಿ ನೋಂದಣಿ ಮಾಡಿದ್ದಲ್ಲದೇ ಕ್ರಯಪತ್ರದ ಆಧಾರದ ಮೇಲೆ ಕುಂದಾಪುರ ಸ್ಟೇಟ್ ಬ್ಯಾಂಕಿನಲ್ಲಿ ಸಾಲ ಮಾಡಿ ಕ್ರಯಪತ್ರವನ್ನು ಅಡವಿಟ್ಟು ಮೋಸ ಎಂದು ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕಿ ಮೇಬಲ್ ಡಿ ಅಡಾ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಸಿದ್ದಾರೆ

ಉದ್ಯೋಗದ ಭರವಸೆ ನೀಡಿ ಲಕ್ಷಾಂತರ ರೂ. ವಂಚನೆ

ಅರೆಕಾಲಿಕ ಉದ್ಯೋಗ ಒದಗಿಸುವ ‘ಟ್ಯೂನ್ ಕಂಪನಿಯ ಎಜೆಂಟ್ ಎಂದು ವ್ಯಕ್ತಿಯೊಬ್ಬರು ನನ್ನನ್ನು ಸಂಪರ್ಕಿಸಿದ್ದರು. ಅರೆಕಾಲಿಕ ಉದ್ಯೋಗ ನಿರ್ವಹಿಸುವ ವೆಬ್ ಸೈಟ್ ಕೊಂಡಿಯನ್ನು ಟೆಲಿಗ್ರಾಮ್ ಖಾತೆ ಮೂಲಕ ಕಳುಹಿಸಿದ್ದರು.
ಟ್ಯೂನ್ ಕಂಪನಿಯ ಉತ್ಪನ್ನಗಳಿಗೆ ರೇಟಿಂಗ್ಸ್ ನೀಡಿದರೆ ಕಮಿಷನ್ ಮತ್ತು ಬೊನಸ್ ನೀಡುತ್ತೇವೆ ಎಂದು ಭರವಸೆ ನೀಡಿದ್ದರು. ಕೆಲಸ ಆರಂಭಿಸಲು ಮೂಲ ದರ ತೆರಬೇಕೆಂದು ಸೂಚಿಸಿದ್ದರು. ಹಂತಹಂತವಾಗಿ ಅ.18ರಿಂದ 26ರ ನಡುವೆ ಒಟ್ಟು 6.5 ಲಕ್ಷ ಕಟ್ಟಿಸಿಕೊಂಡು ಹಣ ಮರಳಿಸದೇ ವಂಚಿಸಿದ್ದಾರೆ’ ಎಂದು ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಮಹಿಳೆ ಜೊತೆ ಅಸಭ್ಯ ವರ್ತನೆ, ದೂರು ದಾಖಲು!

ಉಪ್ಪಿನಂಗಡಿ : ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿ, ಹಲ್ಲೆ ನಡೆಸಿರುವ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿ ಬಳಿ ನಡೆದಿದೆ. ಮಹಿಳೆಯೋರ್ವರು ತಮ್ಮ ಪತಿಯೊಂದಿಗೆ ಪುತ್ತೂರು ಬಜತ್ತೂರು ಮಣಿಕ್ಕಲ ಎಂಬಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಹೋಗುತ್ತಿದ್ದಾಗ ಸುರೇಶ, ಉಮೇಶ ಗಿರೀಶ ಹಾಗೂ ಇನ್ನೋರ್ವ ಬಂದು ಮಹಿಳೆಗೆ ಅವ್ಯಾಚವಾಗಿ ಬೈದು ಮರದ ಕೋಲಿನಿಂದ ಹಲ್ಲೆ ನಡೆಸಿದ್ದು, ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿರುತ್ತಾರೆ. ಹಲ್ಲೆಯನ್ನು ತಡೆಯಲು ಬಂದ ಮಹಿಳೆಯ ಪತಿಗೂ ಹಲ್ಲೆ ನಡೆಸಿದ್ದು, ಹಲ್ಲೆಯಿಂದ ಗಾಯಗೊಂಡ ಮಹಿಳೆ ಹಾಗೂ ಅವರ ಪತಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

Categories
ಮಲ್ನಾಡ್

ಟಾಪ್ ನ್ಯೂಸ್ ಮಲ್ನಾಡ್

ಕಾಂಬೋಡಿಯಾದಲ್ಲಿ ಸಿಲುಕಿದ ಯುವಕ!
– ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಸಚಿವೆ ಕರಂದ್ಲಾಜೆ ಯತ್ನ
ಭದ್ರಾವತಿಯಲ್ಲಿ ಬಟ್ಟೆ ಅಂಗಡಿಗಯನ್ನೇ ಸುಟ್ಟರು?!
– ಡಿಸೇಲ್ ಹಾಕಿ ಸುಟ್ಟಿದ್ದಾರೆ ಎಂಬ ಆರೋಪ

NAMMUR EXPRESS NEWS
ಚಿಕ್ಕಮಗಳೂರು: ವಿದೇಶದಲ್ಲಿ ಕೆಲಸಕ್ಕೆ ಸೇರಿ ಕೈ ತುಂಬಾ ಸಂಪಾದನೆ ಮಾಡುವ ಉದ್ದೇಶದಿಂದ ಮಲೆನಾಡಿನಿಂದ ವಿದೇಶಕ್ಕೆ ತೆರಳಿದ್ದ ಯುವಕನೋರ್ವ ಇದೀಗ ಅತಂತ್ರನಾಗಿದ್ದಾನೆ. ಸ್ವದೇಶಕ್ಕೆ ತೆರಳಬೇಕಾದರೆ 13 ಲಕ್ಷ ಹಣ ನೀಡುವಂತೆ ಒತ್ತಾಯಿಸುತ್ತಿದ್ದು ಹಣವನ್ನು ನೀಡಲಾಗದೇ ಮಗನ ಸ್ಥಿತಿ ಕಂಡು ಹೆತ್ತವರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಇದೀಗ ಆತನನ್ನು ಭಾರತಕ್ಕೆ ಕರೆ ತರಲು ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಯತ್ನಿಸುತ್ತಿದ್ದಾರೆ.

ಏನಿದು ಘಟನೆ?:

ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಮಹಲ್ಲೋಡು ಗ್ರಾಮದ ಸುರೇಶ್, ಪ್ರೇಮಾ ದಂಪತಿಗಳ ಮಗ ಅಶೋಕ್ ಕೆಲಸಕ್ಕಾಗಿ ವಿದೇಶಕ್ಕೆ ತೆರಳಿ ಇದೀಗ ಅತಂತ್ರನಾಗಿದ್ದಾನೆ. ಹೆತ್ತವರ ಸಂಕಷ್ಟದ ಮಧ್ಯೆಯೂ ಬಿಕಾಂ ಪದವೀಧರನಾಗಿ ಹೆತ್ತವರಿಗೆ ಆಸರೆ ಆಗಲೇಬೇಕೆಂದು ಕೆಲಸಕ್ಕಾಗಿ ವಿದೇಶಕ್ಕೆ ತೆರಳಿ ಇದೀಗ ಅತಂತ್ರನಾಗಿದ್ದಾನೆ. ಬ್ರೋಕರ್ ಗಳಿಂದ ಮೋಸ ಹೋಗಿರುವ ಅಶೋಕ್ ವಿದೇಶದಿಂದ ಸ್ವದೇಶಕ್ಕೆ ವಾಪಾಸ್ ಬರಲಾಗದೆ ಬಂಧಿ ಆಗಿದ್ದಾರೆ.ಈತನಿಗೆ ಡಾಟಾ ಎಂಟ್ರಿ ಆಪರೇಟರ್ ಕೆಲಸ ಕೊಡಿಸುವುದಾಗಿ ಜಿಲ್ಲೆಯ ಎನ್.ಆರ್.ಪುರ ಮೂಲದ ಭರತ್ ಮತ್ತು ನಿಕ್ಷೇಪ್ ಎಂಬುವವರು ನಂಬಿಸಿ ಕಾಂಬೋಡಿಯಾಕ್ಕೆ ಕರೆದುಕೊಂಡು ಹೋಗಿದ್ದಾರೆ.

ಕಾಂಬೋಡಿಯಾಕ್ಕೆ ತೆರಳುವ ಮೊದಲೇ 2 ಲಕ್ಷವನ್ನು ಭರತ್ ಅಂಡ್ ನಿಕ್ಷೇಪ್ ಗೆ ಅಶೋಕ್ ನೀಡಿದ್ದಾರೆ. ಕಾಂಬೋಡಿದಲ್ಲಿ ಕೆಲಸಕ್ಕೆ ಸೇರ್ಪಡೆಗೊಂಡ ಬಳಿಕ ಯುವಕ ಅಶೋಕ್‌ಗೆ ಇದು ವಂಚನೆ ಮಾಡುವ ಜಾಲವಾಗಿದ್ದು, ಇಲ್ಲಿಂದ ವಿವಿಧ ಜನರ ಮೊಬೈಲ್ಲೆ ಕರೆ, ಮೆಸೇಜ್ ಮಾಡಿ ಹಣ ಲಪಟಾಯಿಸುವ ದಂಧೆ ಎಂದು ತಿಳಿದಿದೆ. ಆದರೆ ಯುವಕ ಅಶೋಕ್ ನಾನು ಈ ಕೆಲಸವನ್ನು ಮಾಡುವುದಿಲ್ಲ. ವಾಪಾಸ್ ಭಾರತಕ್ಕೆ ತೆರಳುತ್ತೇನೆ ಎಂದಾಗ ಕಂಪನಿಯ ಮಾಲೀಕ ಯುವಕನಿಗೆ ವಿಚಿತ್ರ ಶಿಕ್ಷೆ ನೀಡಿ ಬೆದರಿಸುತ್ತಾ ಆತನಿಂದ ಒತ್ತಾಯಪೂರ್ವಕವಾಗಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಡಿಸೇಲ್ ಹಾಕಿ ಬಟ್ಟೆ ಅಂಗಡಿಗೆ ಬೆಂಕಿ!

ಭದ್ರಾವತಿ: ಅಂಗಡಿಗೆ ಬಾಗಿಲು ಹಾಕಿ ಮನೆಗೆ ಹೋದ ಸಂದರ್ಭದಲ್ಲಿ ಬಟ್ಟೆ ಅಂಗಡಿಯೊಂದಕ್ಕೆ ಬೆಂಕಿ ಬಿದ್ದಿದ್ದು ಇದೊಂದು ಉದ್ದೇಶ ಪೂರಕವಾಗಿ ನಡೆದಿರುವ ಕೃತ್ಯ ಎಂದು ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಭದ್ರಾವತಿಯ ಗುಂಡೂರಾವ್ ಸರ್ಕಲ್ ನಲ್ಲಿ ತಿರುಮಲ ಫ್ಯಾನ್ಸಿ ಸ್ಟೋರ್ ಎಂಬ ಅಂಗಡಿಯ ಮುಂಭಾಗದಲ್ಲಿ ಬಾಗಿಲು ಹಾಕಿಕೊಂಡು ಮನೆಗೆ ಹೋಗಿದ್ದಾಗ ಅಂಗಡಿಯ ಶೆಡ್ ಮುಂಭಾಗದಲ್ಲಿ ಡಿಸೇಲ್ ಚೆಲ್ಲಿ ಅಂಗಡಿಗೆ ಬೆಂಕಿ ಹಚ್ಚಲಾಗಿದೆ ಎಂದು ಮಾಲೀಕ ಚಿನ್ನಸ್ವಾಮಿ ದೂರು ದಾಖಲಿಸಿದ್ದಾರೆ. ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8-15 ರ ವರೆಗೆ ಬಟ್ಟೆ ಅಂಗಡಿಯಲ್ಲಿ ಕೆಲಸ ಮುಗಿಸಿ ಚಿನ್ನಸ್ವಾಮಿಯವರು ಮನೆಗೆ ವಾಪಾಸ್ ಆಗುತ್ತಿದ್ದರು. ಅ.29 ರಂದು ರಾತ್ರಿ ಎಂದಿನಂತೆ ಅಂಗಡಿ ಬಾಗಿಲು ಹಾಕಿಕೊಂಡು ಮನೆಗೆ ತೆರಳಿದಾಗ ಅಂಗಡಿಯ ಮುಂದಿನ ಮನೆಯ ಯುವಕ ರಾತ್ರಿ 10-45 ಕ್ಕೆ ಮನೆಯ ಗೇಟಿನ ಬೀಗ ಹಾಕಲು ಬಂದ ವೇಳೆ ಅಂಗಡಿಯ ಒಳಗೆ ಬೆಂಕಿ ಬಿದ್ದಿದ್ದು ಕಂಡು ಬಂದಿದೆ.

ತಕ್ಷಣವೇ ಚಿನ್ನಸ್ವಾಮಿಯವರಿಗೆ ವಿಷಯ ತಿಳಿಸಿದಾಗ ಅವರು ಸ್ಥಳಕ್ಕೆ ಧಾವಿಸಿ ಅಂಗಡಿ ಶೆಟ್ಟರ್ಸ್ ತೆಗೆದು ನೋಡಿದಾಗ ಸೀರೆ, ಪ್ರಾಕ್ಸ್, ಹಾಸಿಗೆ ಹಲವಾರು ಬಟ್ಟೆಗಳಿಗೆ ಬೆಂಕಿ ಹತ್ತಿಕೊಂಡು ಉರಿದಿರುವುದು ಕಂಡು ಬಂದಿದೆ. ತಕ್ಷಣವೇ ನೀರು ಹಾಕಿ ನಂದಿಸಲಾಗಿದೆ. ಸುಮಾರು 50 ಸಾವಿರ ಮಾಲುಗಳು ಬೆಂಕಿಯಿಂದ ಹಾನಿಗೊಳಗಾಗಿದೆ ಎಂದು ದೂರು ದಾಖಲಿಸಲಾಗಿದೆ. ಅಂಗಡಿ ಮುಂಭಾಗದಲ್ಲಿ ಡಿಸೇಲ್ ಸುರಿದು ಬೆಂಕಿ ಹಚ್ಚಿರುವ ಕಿಡಿಗೇಡಿಗಳನ್ನ ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸುವಂತೆ ಚಿನ್ಬಸ್ವಾಮಿ ದೂರಿನಲ್ಲಿ ಕೋರಿದ್ದಾರೆ.

Categories
ರಾಜಕೀಯ ರಾಜ್ಯ ಶಿವಮೊಗ್ಗ

ಕೆ.ಎಸ್ ಈಶ್ವರಪ್ಪರಿಗೆ ಸಿಗುತ್ತಾ ಮಹತ್ವದ ಸ್ಥಾನ?!

ಕೆ.ಎಸ್ ಈಶ್ವರಪ್ಪರಿಗೆ ಸಿಗುತ್ತಾ ಮಹತ್ವದ ಸ್ಥಾನ?!
– ದಿಢೀರ್ ದೆಹಲಿಗೆ ಹೈಕಮಾಂಡ್ ಬುಲಾವ್
– ಪಕ್ಷದ ಅಧ್ಯಕ್ಷ ಸ್ಥಾನ ಯಾರಿಗೆ ಸಿಗುತ್ತೆ…?

NAMMUR EXPRESS NEWS
ಶಿವಮೊಗ್ಗ: ರಾಜ್ಯ ರಾಜಕೀಯದಲ್ಲಿ ದಿನೇ ದಿನೇ ಮಹತ್ವದ ಘಟನೆಗಳು ನಡೆಯುತ್ತಿವೆ. ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಮತ್ತು ಪ್ರತಿಪಕ್ಷ ನಾಯಕನ ಆಯ್ಕೆ ಬಾಕಿ ಉಳಿದಿರುವ ಮಧ್ಯೆಯೇ ಬಿಜೆಪಿ ವರಿಷ್ಠರು ರಾಜ್ಯ ಘಟಕದ ಮೂವರು ಇತರ ಹಿಂದುಳಿದ ವರ್ಗದ (ಒಸಿ) ನಾಯಕರಿಗೆ ದೆಹಲಿಗೆ ಬರುವಂತೆ ಸೂಚನೆ ನೀಡಿರುವುದು ಕುತೂಹಲ ಮೂಡಿಸಿದೆ. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪರಿಗೆ ಬುಲಾವ್ ಬಂದಿರುವುದು ಇನ್ನಷ್ಟು ಅಚ್ಚರಿ ತರಿಸಿದೆ. ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಂಸದ ಪಿ.ಸಿ.ಮೋಹನ್ ಅವರಿಗೂ ಸಹ ಸೂಚನೆ ಬಂದಿದ್ದು, ಗುರುವಾರ ಬೆಳಗ್ಗೆ ದೆಹಲಿಗೆ ಪ್ರಯಾಣ ಬೆಳೆಸಿಲಿದ್ದಾರೆ.

ಕೆ.ಎಸ್.ಈಶ್ವರಪ್ಪ ದೆಹಲಿಗೆ ಬರಲು ಸೂಚನೆ ಬಂದಿದೆ, ಯಾಕೆ ಅಂತ ಗೊತ್ತಿಲ್ಲ ಪಕ್ಷದ ಸೂಚನೆ ಮೇರೆಗೆ ನಾನು ಗುರುವಾರ ದೆಹಲಿಗೆ ಹೋಗುತ್ತಿದ್ದೇನೆ.ನನ್ನ ಜೊತೆಗೆ ಕೋಟ ಶ್ರೀನಿವಾಸ ಪೂಜಾರಿ ಮತ್ತು ಪಿ.ಸಿ. ಮೋಹನ್ ಅವರನ್ನೂ ಕರೆದಿದ್ದಾರೆ. ಯಾಕೆ ಎಂಬುದು ಮಾತ್ರ ಗೊತ್ತಿಲ್ಲ ಎಂದಿದ್ದಾರೆ. ದೆಹಲಿಯ ಪಕ್ಷದ ಕಚೇರಿಗೆ ಆಗಮಿಸುವಂತೆ ಎರಡು ದಿನಗಳ ಹಿಂದೆ ದೂರವಾಣಿ ಮೂಲಕ ಸಂದೇಶ ತಲುಪಿದೆ. ಪಕ್ಷದ ಕಚೇರಿಯಲ್ಲೇ ಸಭೆ ಇದೆ ಎಂದು ಮೂಲಗಳು ತಿಳಿಸಿವೆ.

Categories
ರಾಜ್ಯ

ಕರ್ನಾಟಕದಲ್ಲೂ ಜಿಕಾ ವೈರಸ್ ಭೀತಿ!

ಕರ್ನಾಟಕದಲ್ಲೂ ಜಿಕಾ ವೈರಸ್ ಭೀತಿ!
– ಚಿಕ್ಕಬಳ್ಳಾಪುರದಲ್ಲಿ ಪತ್ತೆ: ಹೈಅಲರ್ಟ್ ಘೋಷಣೆ
– ಜಿಕಾ ವೈರಸ್ ಆದ್ರೇನು..? ಹೇಗೆ ಹರಡುತ್ತೆ ರೋಗ?

NAMMUR EXPRESS NEWS
ಚಿಕ್ಕಬಳ್ಳಾಪುರ: ಕರ್ನಾಟಕಕ್ಕೆ ಮಾರಕ ಜಿಕಾ ವೈರಸ್ ಆಗಮನವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮದಲ್ಲಿ ವೈರಸ್ ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ಹೈಅಲರ್ಟ್‌ ಘೋಷಣೆ ಮಾಡಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ತಲಕಾಯಲಬೆಟ್ಟದ ಸಮೀಪದ ವೆಂಕಟಾಪುರ, ಬಚ್ಚನಹಳ್ಳಿ, ವಡ್ಡಹಳ್ಳಿ, ದಿಬೂರಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಈಗಾಗಲೇ ಭೇಟಿ ನೀಡಿದ್ದಾರೆ. ಗ್ರಾಮದಲ್ಲಿರುವ ಸುಮಾರು 30 ಕ್ಕೂ ಅಧಿಕ ಗರ್ಭಿಣಿಯರನ್ನು ಹಾಗೂ ಜ್ವರ ಪೀಡಿತರಾಗಿರುವ 7 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಇವರ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಈಗಾಗಲೇ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.

ಜಿಕಾ ವೈರಸ್ ಸೋಂಕು ಹೆಚ್ಚು ಅಪಾಯಕಾರಿ. ಇದೊಂದು ವೈರಸ್ ಆಗಿದ್ದು ಸೊಳ್ಳೆಗಳಿಂದ ಹರಡುತ್ತದೆ. ಡೆಂಗ್ಯೂ, ಚಿಕನ್ ಗುನ್ಯಾ ಮಾದರಿಯಲ್ಲಿಯೇ ಈಡಿಸ್ ಜಾತಿಯ ಸೊಳ್ಳೆಗಳು ಈ ಜಿಕಾ ವೈರಸ್ ಅನ್ನು ಹರಡುತ್ತವೆ. ಜಿಕಾ ವೈರಸ್ ಸೋಂಕಿತ ಸೊಳ್ಳೆಗಳು ಹೆಚ್ಚಾಗಿ ಹಗಲಿನ ಹೊತ್ತಲೇ ಕಚ್ಚುತ್ತದೆ. ಜಿಕಾ ವೈರಸ್ ಲಕ್ಷ್ಮಣಗಳು ಸಾಮಾನ್ಯವಾಗಿ ಸುಮಾರು ಏಳು ದಿನಗಳ ಕಾಲ ಕಂಡು ಬರುತ್ತದೆ. ಆದರೆ ಕೆಲವೊಮ್ಮೆ ಆಸ್ಪತ್ರೆಗೆ ದಾಖಲಾಗುವ ಸ್ಥಿತಿ ಬರುವುದಿಲ್ಲ. ಯಾವುದೇ ಕಾರಣಕ್ಕೂ ಜ್ವರ ಕಾಣಿಸಿಕೊಂಡ ನಂತರದಲ್ಲಿ ನಿರ್ಲಕ್ಷ್ಯ ಮಾಡದೇ ವೈದರ ಬಳಿಗೆ ತೆರಳಿ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಅತೀ ಅವಶ್ಯಕ.

ಜಿಕಾ ವೈರಸ್ ಸೋಂಕಿನ ಲಕ್ಷಣಗಳೇನು ?:

ಜಿಕಾ ವೈರಸ್ ಇತರ ವೈರಸ್ ಸೋಂಕಿನಂತೆಯೇ ದೇಹದ ಮೇಲೆ ಪರಿಣಾಮವನ್ನು ಬೀರುತ್ತದೆ. ಸಾಮಾನ್ಯವಾಗಿ ಜಿಕಾ ವೈರಸ್ ಸೋಂಕು ತಗುಲಿದ ನಂತರ ಜ್ವರ, ತಲೆನೋವು, ಕೀಲು ಮತ್ತು ಸ್ನಾಯು ನೋವು ಕಾಣಿಸಿಕೊಳ್ಳುತದೆ. ಅಲ್ಲದೇ ಕಣ್ಣು ಕೆಂಪಗಾಗುತ್ತದೆ. ಆದರೆ ಬಹುತೇಕ ಸೋಕಿತರಿಗೆ ಯಾವುದೇ ರೋಗ ಲಕ್ಷಣಗಳು ಕಂಡು ಬರುವುದಿಲ್ಲ.

ಜಿಕಾ ವೈರಸ್ ನಿಯಂತ್ರಣ ಹೇಗೆ?:

ಜಿಕಾ ವೈರಸ್ ಸೊಳ್ಳೆಯಿಂದ ಹರಡುವ ರೋಗ. ಹೀಗಾಗಿ ಸೊಳ್ಳೆಗಳ ಕಡಿತ ಉಂಟಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಮನೆ, ಶಾಲೆಗಳ ಸುತ್ತಮುತ್ತ ಈಡಿಸ್ ಸೊಳ್ಳೆ ಉತ್ಪಾದನೆ ಆಗದಂತೆ ಮುನ್ನೆಚ್ಚರಿಕೆಯನ್ನು ವಹಿಸಬೇಕಾಗಿದೆ. ಮುಖ್ಯವಾಗಿ ನೀರಿನ ಶೇಖರಣಾ ಪಾತ್ರೆಗಳನ್ನು ಮುಚ್ಚುವುದು, ಹೂವಿನ ಕುಂಡಗಳಲ್ಲಿ ನಿಂತಿರುವ ನೀರನ್ನು ತೆಗೆಯಬೇಕು. ಟಯರ್, ಎಳನೀರನ ಚಿಪ್ಪನ್ನು ರಾಶಿ ಹಾಕುವುದಕ್ಕೆ ನಿಯಂತ್ರಣ ಹೇರಬೇಕು.