Categories
ರಾಜ್ಯ ಶಿಕ್ಷಣ

ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ.!

ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ.!
– ಅಪರೂಪದ ಪ್ರಸಂಗಕ್ಕೆ ಯಾದಗಿರಿ ಸಾಕ್ಷಿ

NAMMUR EXPRESS NEWS
ಯಾದಗಿರಿ: ಎಸ್‌.ಎಸ್.ಎಲ್.ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಒಂದೇ ಪರೀಕ್ಷೆ ಕೇಂದ್ರದಲ್ಲಿ ತಾಯಿ-ಮಗ ಒಟ್ಟಿಗೆ ಪರೀಕ್ಷೆ ಬರೆಯುತ್ತಿರುವ ಅಪರೂಪದ ಪ್ರಸಂಗಕ್ಕೆ ಯಾದಗಿರಿ ಸಾಕ್ಷಿಯಾಗಿದೆ. ಹೌದು.. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಪರೀಕ್ಷೆ ಕೇಂದ್ರದಲ್ಲಿ ತಾಯಿ ಗಂಗಮ್ಮ (32) ಹಾಗೂ ಆಕೆಯ ಮಗನಾದ ಮಲ್ಲಿಕಾರ್ಜುನ ಒಂದೇ ಪರೀಕ್ಷೆ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿರುವುದು ಅಪರೂಪದ ಕ್ಷಣವಾಗಿದೆ.

2024 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ತನ್ನ ಮಗನೊಟ್ಟಿಗೆ ಬರೆಯುತ್ತಿರುವುದು ಸಂತಸ ತಂದಿದೆ ಎಂದು ಗಂಗಮ್ಮ ಸಂತಸ ಹಂಚಿಕೊಂಡರು. ಮಗ ಮಲ್ಲಿಕಾರ್ಜುನ ಇದೇ ಮೊದಲ ಬಾರಿಗೆ ಪರೀಕ್ಷೆ ಬರೆಯುತ್ತಿದ್ದು, ಶಹಾಪುರ ತಾಲೂಕಿನ ಸಗರ ಪರೀಕ್ಷಾ ಕೇಂದ್ರದಲ್ಲಿ ತಾಯಿಯೊಡನೆ ಪರೀಕ್ಷೆ ಬರೆಯುತ್ತಿದ್ದಾನೆ. ಪ್ರಥಮ ಭಾಷೆ ಪರೀಕ್ಷೆಯಾಗಿದ್ದು, ಸರತಿ ಸಾಲಿನಲ್ಲಿ ನಿಂತು ತಾಯಿ ಗಂಗಮ್ಮ ಪರೀಕ್ಷಾ ನೋಂದಣಿ ಸಂಖ್ಯೆಯನ್ನು ಹುಡುಕಿ, ಪರೀಕ್ಷಾ ಕೊಠಡಿಗೆ ತೆರಳಿದರು.

Categories
ಕರಾವಳಿ

ಕರಾವಳಿಗೆ ಓಡಾಡುವ ಉತ್ತರ ಕರ್ನಾಟಕದ ಏಕೈಕ ರೈಲು ಸಮಯ ಬದಲು

ಕರಾವಳಿಗೆ ಓಡಾಡುವ ಉತ್ತರ ಕರ್ನಾಟಕದ ಏಕೈಕ ರೈಲು ಸಮಯ ಬದಲು
– ಕರಾವಳಿ-ಉತ್ತರ ಕರ್ನಾಟಕ ಸಂಪರ್ಕ
– ವಿಜಯಪುರ-ಮಂಗಳೂರು ರೈಲಿನ ವೇಳಾಪಟ್ಟಿ ಪರಿಷ್ಕರಣೆ

NAMMUR EXPRESS NEWS
ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗವನ್ನು ಸಂಪರ್ಕಿಸುವಲ್ಲಿ ಪ್ರಮುಖ ಸಂಚಾರ ಸೇವೆಯಾಗಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ರೈಲು ವಿಜಯಪುರ-ಮಂಗಳೂರು ಜಂಕ್ಷನ್‌ ರೈಲು. 2019ರ ನವೆಂಬರ್‌ನಲ್ಲಿ ವಿಶೇಷ ರೈಲು ಆಗಿ ವಿಜಯಪುರ-ಮಂಗಳೂರು ಎಕ್ಸ್‌ಪ್ರೆಸ್‌ ರೈಲನ್ನು ಪ್ರಾರಂಭಿಸಲಾಗಿದ್ದು, ಬಳಿಕ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನಲೆಯಲ್ಲಿ ಈ ರೈಲನ್ನು ರೆಗ್ಯುಲರೈಸ್‌ ಮಾಡಲಾಗಿದೆ. ಸದ್ಯ ಉತ್ತರ ಕರ್ನಾಟಕ ಭಾಗದಿಂದ ಉಡುಪಿ-ಮಂಗಳೂರು ಸೇರಿದಂತೆ ಕರಾವಳಿ ಭಾಗವನ್ನು ಸಂಪರ್ಕಿಸುತ್ತಿರುವ ಏಕೈಕ ರೈಲು ಸೇವೆ ಇದಾಗಿದೆ.

ಆದರೆ, ಈ ರೈಲು ಮಂಗಳೂರು ಹಾಗೂ ಅತ್ತ ವಿಜಯಪುರಕ್ಕೆ ತಲುಪುವ ಸಮಯವು ಪ್ರಯಾಣಿಕರ ದೃಷ್ಟಿಯಿಂದ ಹೆಚ್ಚು ಅನುಕೂಲಕರವಾಲ್ಲ ಎನ್ನುವುದು ರೈಲು ಸಂಘಟನೆಗಳು ಸೇರಿದಂತೆ ಹಲವರ ಆರೋಪವಾಗಿತ್ತು. ಈ ಸಂಬಂಧ ಅನೇಕ ಬಾರಿ ರೈಲ್ವೆ ಯಾತ್ರಾರ್ಥಿಗಳ ಸಂಘಟನೆಗಳು ಕೂಡ ಸಮಯ ಬದಲಾವಣೆಗೆ ಪ್ರಯತ್ನಿಸಿದರೂ ಅದು ಸಾಧ್ಯವಾಗಿರಲಿಲ್ಲ.
ಆದರೆ, ಇದೀಗ ನೈಋತ್ಯ ರೈಲ್ವೆ ವಲಯವು ವಿಜಯಪುರ-ಮಂಗಳೂರು ಜಂಕ್ಷನ್‌ ರೈಲಿನ ಓಡಾಟದ ಸಮಯದಲ್ಲಿ ಪರಿಷ್ಕರಣೆಯನ್ನು ಮಾಡಿದೆ. ಆ ಮೂಲಕ ಈ ರೈಲಿನಲ್ಲಿ ದಿನನಿತ್ಯ ಓಡಾಡುವ ಪ್ರಯಾಣಿಕರ ಬಹುದಿನಗಳ ಬೇಡಿಕೆ ಈಗ ಈಡೇರಿದಂತಾಗಿದೆ.

ರೈಲು ವೇಳಾಪಟ್ಟಿ ಪರಿಷ್ಕರಣೆ

ಮಂಗಳೂರು ಜಂಕ್ಷನ್‌-ವಿಜಯಪುರ ಎಕ್ಸ್‌ಪ್ರೆಸ್‌ ರೈಲಿನ ವೇಳಾಪಟ್ಟಿಯನ್ನು ಏ.1ರಿಂದ ಅನ್ವಯವಾಗುವಂತೆ ಪರಿಷ್ಕರಿಸಿ ನೈಋತ್ಯ ರೈಲ್ವೆಯು ಅಧಿಸೂಚನೆ ಹೊರಡಿಸಿದೆ. ಆ ಪ್ರಕಾರ, ರೈಲು ವಿಜಯಪುರದಿಂದ ಮಧ್ಯಾಹ್ನ 3.30ಕ್ಕೆ ಹೊರಟು ಮರುದಿನ ಬೆಳಗ್ಗೆ 9.30ಕ್ಕೆ ಮಂಗಳೂರು ಜಂಕ್ಷನ್‌ ತಲುಪಲಿದೆ. ನಂತರ ವಾಪಾಸ್‌ ಮಂಗಳೂರು ಜಂಕ್ಷನ್‌ನಿಂದ ಮಧ್ಯಾಹ್ನ 2.50ಕ್ಕೆ ಹೊರಟು ಮರುದಿನ ಬೆಳಗ್ಗೆ 9.35ಕ್ಕೆ ವಿಜಯಪುರ ತಲುಪುತ್ತದೆ.

ಈಗಿರುವ ವೇಳಾಪಟ್ಟಿಯಲ್ಲಿ ರೈಲು ವಿಜಯಪುರದಿಂದ ಸಂಜೆ 6.35ಕ್ಕೆ ಹೊರಟು ಮರುದಿನ ಮಧ್ಯಾಹ್ನ 12.40ಕ್ಕೆ ತಲುಪುತ್ತಿದೆ. ಹಾಗೆಯೇ, ಮಂಗಳೂರು ಜಂಕ್ಷನ್‌ನಿಂದ ಮಧ್ಯಾಹ್ನ 2.50ಕ್ಕೆ ಹೊರಟು ಮರುದಿನ ಬೆಳಗ್ಗೆ 9.35ಕ್ಕೆ ವಿಜಯಪುರ ತಲುಪುತ್ತದೆ. ಆದರೆ ಈ ಸಮಯವು ಎರಡೂ ಭಾಗದ ಜನರಿಗೆ ಅನುಕೂಲಕರವಾಗಿಲ್ಲ. ಅಂದರೆ, ಈ ರೈಲು ಮಂಗಳೂರಿಗೆ ಮಧ್ಯಾಹ್ನ ಬಂದು ತಲುಪುವ ಕಾರಣ ಉತ್ತರ ಕರ್ನಾಟಕದಿಂದ ಈ ಭಾಗಕ್ಕೆ ಬರುವ ಜನರಿಗೆ ಅದೇದಿನ ತಮ್ಮ ಕೆಲಸಗಳನ್ನು ಮುಗಿಸಿಕೊಂಡು ವಾಪಾಸ್‌ ಹೋಗುವುದಕ್ಕೆ ಅಸಾಧ್ಯವಾಗುತ್ತಿದೆ.

Categories
ತೀರ್ಥಹಳ್ಳಿ

ಶ್ರೀ ಕ್ಷೇತ್ರ ನಾಗರಹಳ್ಳಿಯಲ್ಲಿ ಸಾಮೂಹಿಕ ಸರ್ಪ ಸಂಸ್ಕಾರ..!

ಶ್ರೀ ಕ್ಷೇತ್ರ ನಾಗರಹಳ್ಳಿಯಲ್ಲಿ ಸಾಮೂಹಿಕ ಸರ್ಪ ಸಂಸ್ಕಾರ..!
– ಮಾ.28 ಕ್ಕೆ ಸಾಮೂಹಿಕ ಸರ್ಪ ಸಂಸ್ಕಾರ
– ಮಾ.31ಕ್ಕೆ ಹರಕೆ, ನಾಗ ಪ್ರತಿಷ್ಠೆ, ಆಶ್ಲೇಷ ಬಲಿ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಶ್ರೀ ನಾಗೇಂದ್ರ ಸ್ವಾಮಿ ದೇವಸ್ಥಾನ ಶ್ರೀ ಕ್ಷೇತ್ರ ನಾಗರಹಳ್ಳಿಯಲ್ಲಿ ದಿನಾಂಕ: 28-03-2024 ರಂದು ಸಾಮೂಹಿಕ ಸರ್ಪ ಸಂಸ್ಕಾರ ಹಾಗೂ ದಿನಾಂಕ: 31-03-2024 ರಂದು ಹರಕೆ ನಾಗ ಪ್ರತಿಷ್ಠೆ, ಆಶ್ಲೇಷಾ ಬಲಿ ನಡೆಯಲಿದೆ. ಹರಕೆ, ಪೂಜೆ ಮಾಡಿಸುವವರು 8762289079 ಈ ನಂಬರ್ ಗೆ ಸಂಪರ್ಕಿಸಿ.

Categories
ಬೆಂಗಳೂರು ರಾಜ್ಯ

ಧಾರ್ಮಿಕ, ಮನೆ ಕಾರ್ಯಕ್ರಮಗಳಿಗೆ ನೀತಿ ಸಂಹಿತೆ ಅಡ್ಡಿ ಇಲ್ಲ!

ಧಾರ್ಮಿಕ, ಮನೆ ಕಾರ್ಯಕ್ರಮಗಳಿಗೆ ನೀತಿ ಸಂಹಿತೆ ಅಡ್ಡಿ ಇಲ್ಲ!
– ಶುಭ ಸಮಾರಂಭ, ಧಾರ್ಮಿಕ ಕಾರ್ಯಗಳಿಗೆ ನೀತಿ ಸಂಹಿತೆ ಅಡ್ಡಿಯಾಗಲ್ಲ
– ಚುನಾವಣಾ ಆಯೋಗ ಮಾಹಿತಿ: ಏನಿದು ಮಾಹಿತಿ?

NAMMUR EXPRESS NEWS
ಬೆಂಗಳೂರು: ಶುಭಸಮಾರಂಭ, ಧಾರ್ಮಿಕ ಕಾರ್ಯಗಳಿಗೆ ನೀತಿಸಂಹಿತೆ ಅಡ್ಡಿಯಾಗಲ್ಲ ಎಂಬುದಾಗಿ ಚುನಾವಣಾ ಆಯೋಗವು ಸ್ಪಷ್ಟ ಪಡಿಸಿದೆ. ಈ ಮೂಲಕ ಶುಭ ಸಮಾರಂಭ ನಡೆಸೋರಿಗೆ, ಧಾರ್ಮಿಕ ಕಾರ್ಯದಲ್ಲಿ ನಿರತರಾದವರಿಗೆ ನಿರಾಳತೆ ಸಿಕ್ಕಿದೆ. ಲೋಕಸಭಾ ಚುನಾವಣೆ ನೀತಿ ಸಂಹಿತೆ ಕುರಿತು ಜನರಿಗೆ ಅನೇಕ ಗೊಂದಲ ಇತ್ತು. ಆದ್ರೆ ಆಯೋಗದ ಮಾಹಿತಿ ಪ್ರಕಾರ ಮಾದರಿ ಚುನಾವಣೆ ನೀತಿ ಸಂಹಿತೆ ಎನ್ನುವುದು ರಾಜಯಕೀಯ ಪಕ್ಷಗಳು, ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳು ಹಾಗೂ ಸರ್ಕಾರಿ ನೌಕರರಿಗೆ ಅನ್ವಯಿಸುತ್ತದೆ. ಸಾರ್ವಜನಿಕರರಿಗೆ ಯಾವುದೇ ನಿರ್ಬಂಧವಿಲ್ಲ. ಮದುವೆ ಸೇರಿದಂತೆ ಯಾವುದೇ ಕೌಟುಂಬಿಕ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲು ಚುನಾವಣಾಧಿಕಾರಿಗಳ ಅನುಮತಿ ಬೇಕಿಲ್ಲ.

ಯಾವುದೇ ಧಾರ್ಮಿಕ ಆಚಾರ-ವಿಚಾರ, ಸಂಪ್ರದಾಯಗಳಿಗೆ ಮಾದರಿ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಇದಕ್ಕೆ ಅನುಮತಿ ಪಡೆಯುವ ಅಗತ್ಯವೂ ಇಲ್ಲ. ಆದರೆ ಧಾರ್ಮಿಕ ಆಚರಣೆಗಳು ರಾಜಕೀಯ ಕಾರ್ಯಕ್ರಮಗಳಾಗಿ ಪರಿವರ್ತನೆಯಾಗಬಾರದು. ರಾಜಕೀಯ ಕಾರ್ಯಕ್ರಮವಾಗಿ ಪರಿವರ್ತನೆಯಾದರೆ ಅದು ನೀತಿ ಸಂಹಿತೆ ಉಲ್ಲಂಘನೆಯಾಗಲಿದೆ. ಆ ಕಾರ್ಯಕ್ರಮಕ್ಕೆ ಯಾವುದೇ ರಾಜಕಾರಣಿ ಭಾಗಿಯಾಗಬಾರದು.

ಚುನಾವಣಾ ಕಾರ್ಯ ಜೊತೆಗೆ ಚುನಾವಣಾ ನೀತಿ ನಿಯಮಗಳಿಗೆ ಬದ್ಧವಾಗಿ ಸಾರ್ವಜನಿಕರಿಗೆ ಅನುಕೂಲವಾಗುವ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗದಂತೆ ಹಾಗೂ ಜಿಲ್ಲೆಯ ಬರ ಪರಿಹಾರ ಕಾರ್ಯವನ್ನೂ ನಿರ್ವಹಿಸಬಹುದು.
ಮಾದರಿ ನೀತಿ ಸಂಹಿತೆ ಜಾರಿಗೆ ಸಂಬಂಧಪಟ್ಟಂತೆ ಈಗಾಗಲೇ ಮಾರ್ಚ್ 16 ರಿಂದಲೇ ಪ್ರಚಾರಕ್ಕೆ ಬಳಸಿದಂತಹ ಪೋಸ್ಟರ್ಸ್, ಬ್ಯಾನರ್ಸ್ ಗಳನ್ನು ಇತ್ಯಾದಿಗಳನ್ನು ತೆರವುಗೊಳಿಸಲಾಗಿದೆ. ಇದಕ್ಕಾಗಿ ಎಫ್‌ಎಸ್‌ಟಿ, ಎಸ್‌ಎಸ್‌ಟಿ, ವಿವಿಟಿ ಸೇರಿದಂತೆ ಬೇರೆ ಬೇರೆ ತಂಡಗಳನ್ನು ರಚನೆ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ಪ್ರತಿ ತಾಲ್ಲೂಕಿಗೆ ತಾ.ಪಂ ಇಒ ಹಂತದಲ್ಲಿ ನೋಡಲ್‌ ಅಧಿಕಾರಿಗಳಾಗಿ, ನಗರ ವ್ಯಾಪ್ತಿಯಲ್ಲಿ ನಗರಸಭೆ, ಮುಖ್ಯಾಧಿಕಾರಿಗಳನ್ನು ನೋಡಲ್‌ ಅಧಿಕಾರಿಗಳನ್ನಾಗಿ ನೇಮಿಸಿ, ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಲಾಗುತ್ತಿದೆ. ಇದರ ಜೊತೆಗೆ ಎಲ್ಲಾ ಜಿಲ್ಲೆಯಾದ್ಯಂತ ಚೆಕ್‌ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ.

ಅಕ್ರಮಗಳ ಮೇಲೆ ಅಧಿಕಾರಿಗಳ ಕಣ್ಣು!

ಉಚಿತ ಕೊಡುಗೆ, ಮಾದರಿ ನೀತಿ ಸಂಹಿತೆ ಉಲಂಘನೆ, ಹಣ ಸಾಗಣೆ, ಆಮಿಷ, ಬಾಡೂಟ ಸೇರಿ ಚುನಾವಣೆ ಅಕ್ರಮಗಳ ಮೇಲೆ ಆಯೋಗ ಕಣ್ಣಿಟ್ಟಿದೆ. ಹಣ ತೆಗೆದುಕೊಂಡು ಹೋಗುವಾಗ ಹಣದ ಮೂಲದ ಬಗ್ಗೆ ಸೂಕ್ತ ದಾಖಲೆಯನ್ನು ಪ್ರಸ್ತುತ ಪಡಿಸಿದಿದ್ರೆ ಹಣ ವಶಪಡಿಸಿಕೊಳ್ಳಲಾಗುತ್ತದೆ.

ಮತದಾನ ಎಲ್ಲರ ಹಕ್ಕು: ಮತ ಚಲಾಯಿಸಿ..!

ಮತದಾನ ಬಹಿಷ್ಕರಿಸದೇ, ಹಕ್ಕು ಚಲಾಯಿಸಬೇಕು. ಮತದಾನ ಬಹಿಷ್ಕಾರ ಮಾಡಿ, ತಮ್ಮ ಹಕ್ಕನ್ನು ಮೊಟಕುಗೊಳಿಸಬಾರದು. ಮತದಾನದಿಂದ ಯಾರೂ ವಂಚಿತರಾಗಬಾರದು. ಪ್ರತಿಯೊಬ್ಬ ಅರ್ಹ ಮತದಾರರು ತಮ್ಮ ತಮ್ಮ ಹಕ್ಕನ್ನು ಚಲಾವಣೆ ಮಾಡುವುದರ ಮೂಲಕ ಪ್ರಜಾಪ್ರಭುತ್ವವನ್ನು ಸದೃಢಗೊಳಿಸಬೇಕು.

Categories
ಬೆಂಗಳೂರು ರಾಜ್ಯ

ಬಿಸಿಲು ಹೆಚ್ಚಳ ಬೆನ್ನಲ್ಲೇ ರಾಜ್ಯದಲ್ಲಿ ಸಾಲುಸಾಲು ರೋಗ

ಬಿಸಿಲು ಹೆಚ್ಚಳ ಬೆನ್ನಲ್ಲೇ ರಾಜ್ಯದಲ್ಲಿ ಸಾಲುಸಾಲು ರೋಗ
– ವಾಂತಿ-ಭೇದಿ, ಚಿಕನ್‌ಫಾಕ್ಸ್, ಸನ್‌ಸ್ಟೋಕ್, ಮೂಗಿನಲ್ಲಿ ರಕ್ತಸ್ರಾವ, ಟೈಫಾಯ್ಡ್ ಏರಿಕೆ
– ಸ್ವಚ್ಛ ನೀರನ್ನು ಮಾತ್ರವೇ ಕುಡಿಯಲು ವೈದ್ಯರಿಂದ ಸಲಹೆ

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಗರಿಷ್ಠ ಉಷ್ಣಾಂಶ 40 ಡಿಗ್ರಿಯ ಆಸುಪಾಸಿನಲ್ಲೇ ಮುಂದುವರೆದಿದೆ. ಅತಿಯಾದ ಒಣಹವೆಯಿಂದ ಸನ್ ಸ್ಪೋಕ್, ಮೈಗ್ರೇನ್, ಮೂಗಿನಲ್ಲಿ ರಕ್ತಸ್ರಾವದಂತಹ ಸಮಸ್ಯೆಗಳಲ್ಲದೆ ವಾತಾವರಣ ಶುಷ್ಕತೆಯಿಂದ ಕೂಡಿರುವುದರಿಂದ ಬ್ಯಾಕ್ಲೀರಿಯಾ, ವೈರಸ್ ಗಳು ತೀವ್ರವಾಗಿ ಹರಡುವ ಮೂಲಕ ಹಲವರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ರಾಜ್ಯಾದ್ಯಂತ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸನ್ ಸ್ಟೋಕ್, ಮೈಗ್ರೇನ್, ಚರ್ಮದ ಸಮಸ್ಯೆಗಳ ಜತೆಗೆ ಟೈಫಾಯ್ಡ್ ಸೇರಿದಂತೆ ವಿವಿಧ ಜ್ವರದ ಸಮಸ್ಯೆಗಳಿಂದ ಆಸ್ಪತ್ರೆಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಮನುಷ್ಯನ ದೇಹದ ಸಾಮಾನ್ಯ ಉಷ್ಣತೆಯು 36.4 ಡಿಗ್ರಿಯಿಂದ 37.2 ಡಿಗ್ರಿ, ಸೆಲ್ಸಿಯಸ್ (97.5 20 98.9 2) . ಒಳಾಂಗಣ ಹಾಗೂ ಹೊರಾಂಗಣ ಪ್ರದೇಶದಲ್ಲಿ ಇದಕ್ಕಿಂತ ಹೆಚ್ಚಿನ ಉಷ್ಣತೆಯಿದ್ದರೆ ಅನಾರೋಗ್ಯ ಸಮಸ್ಯೆ ಉಂಟಾಗುತ್ತದೆ.

ಇದೀಗ, ರಾಜ್ಯಾದ್ಯಂತ ತೀವ್ರ ಬಿಸಿಲಿನಿಂದಾಗಿ ಸಾಂಕ್ರಾಮಿಕ ಕಾಯಿಲೆಗಳು ಹಾಗೂ ಬಿಸಿಲಿನಿಂದ ಉಂಟಾಗುವ ಕಾಯಿಲೆಗಳ ಪ್ರಮಾಣ ತೀವ್ರಗೊಳ್ಳುತ್ತಿದೆ. ಕರಳುಬೇನೆ, ನಿರ್ಜಲೀಕರಣ, ಮೂಗಿನಲ್ಲಿ ರಕ್ತಸ್ರಾವ, ವಾಂತಿ-ಭೇದಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಇವುಗಳ ಜತೆಗೆ ಕಣ್ಣಿನ ತೊಂದರೆ, ಮಕ್ಕಳನ್ನು ಬಾಧಿಸುವ ಚಿಕನ್ ಫಾಕ್ಸ್, ಟೈಫಾಯ್ಡ್ ಜ್ವರ, ಬಿಸಿಲಿನಿಂದ ತಲೆ ಸುತ್ತು, ಸನ್ ಸ್ಟೋಕ್, ಮೈಗ್ರೇನ್, ಅತಿಯಾದ ಸೂರ್ಯ ಕಿರಣಗಳಿಂದ ಚರ್ಮದ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿವೆ. ವೈರಾಣು ಜ್ವರ ಹಾಗೂ ಟೈಫಾಯ್ಡ್ ಜ್ವರ ದಿಂದಾಗಿ ಮೈಕೈ ನೋವು, ಮೂಗಿನಲ್ಲಿ ನೀರು ಸೋರುವಿಕೆಯಂತಹ ಸಮಸ್ಯೆಯಿಂದ ಆಸ್ಪತ್ರೆಗೆ ಬರುತ್ತಿರುವವರ ಸಂಖ್ಯೆ ಶೇ.20ರಿಂದ 30ರಷ್ಟು ಹೆಚ್ಚಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಹೆಚ್ಚುತ್ತಿರುವ ಜ್ವರದ ಪ್ರಕರಣ: ಬೇಸಿಗೆ ಕಾಲದಲ್ಲಿ ಸಕ್ರಿಯವಾಗುವ ಸಾಲೊನಲ್ಲಾ ಟೈಸಿ ಆ್ಯಂಡ್ ಪ್ಯಾರಾಟೈಸಿ ಬ್ಯಾಕ್ಟಿರಿಯಾದಿಂದ ಟೈಫಾಯ್ಡ್ ಬರುತ್ತದೆ. ಉಳಿದಂತೆ ವ್ಯಾರಿಸೆಲ್ಲಾ ಝಾಸ್ಟರ್ ವೈರಸ್ ನಿಂದ ಚಿಕನ್‌ಫಾಕ್ಸ್ (ಅಮ್ಮ), ಹೆಪಟೈಟಿಸ್ ಎ ಎಂಬ ವೈರಸ್‌ನಿಂದ ಜಾಂಡೀಸ್ ಕಾಯಿಲೆ ಬರುತ್ತದೆ.

ಉಷ್ಣದಿಂದ ಪಾರಾಗಲು ಹೀಗೆ ಮಾಡಿ

1 ಬೆವರಿನಿಂದ ದೇಹದಲ್ಲಿ ತೇವಾಂಶ ಕಡಿಮೆಯಾಗಿ ಅನಾರೋಗ್ಯ ಉಂಟಾಗುತ್ತದೆ. ಹೀಗಾಗಿ ನೀರಿನ ಜತೆಗೆ, ದೇಹಕ್ಕೆ ಶಕ್ತಿ, ಚೈತನ್ಯ ತುಂಬುವಂತಹ ಹಣ್ಣಿನ ರಸ, ಓಆರ್‌ಎಸ್ ಕುಡಿಯಬೇಕು.

2 ಬೇಸಿಗೆಗೆ ಕಾಟನ್ ಉಡುಪು ಧರಿಸುವುದು, ಬಿಸಿಲಿಗೆ ಹೋಗುವಾಗ ತಂಪು ಕನ್ನಡಕ (ಕೂಲಿಂಗ್ ಗ್ಲಾಸ್), ಛತ್ರಿ ಬಳಕೆ, ಅಗತ್ಯ ಪ್ರಮಾಣದ ನೀರು ಕೊಂಡೊಯ್ಯುವಂತಹ ಸಾಮಾನ್ಯ ಕ್ರಮ ಪಾಲಿಸಬೇಕು.

3 ಅಗತ್ಯವಿದ್ದರೆ ಮಾತ್ರ ಮನೆಗಳಿಂದ ಆಚೆ ತೆರಳಬೇಕು. ಬಿಸಿಲು ಏರುವುದರೊ ಳಗೆ ಕೆಲಸ ಮಾಡಿಕೊಂಡು ಮನೆ ಸೇರಿಕೊಳ್ಳಬೇಕು. ಮನೆಯಲ್ಲಿದ್ದರೂ, ನೆರಳು ಇರುವ ಕಡೆ, ಚೆನ್ನಾಗಿ ಗಾಳಿ ಬೀಸುವ ಜಾಗದಲ್ಲಿ ಇರಬೇಕು.

4 ಕಂದಮ್ಮಗಳನ್ನು, ಮಕ್ಕಳನ್ನು ಜೋಪಾನ ಮಾಡಬೇಕು. ಗರ್ಭಿಣಿ ಸ್ತ್ರೀಯರು, ಹೊರಗಡೆ ಹೆಚ್ಚು ಕೆಲಸ ಮಾಡುವಂಥವರು, ಮಾನಸಿಕವಾಗಿ ಸಮಸ್ಯೆಗಳು ಇರುವಂಥವರು, ಹೃದಯದ ಸಮಸ್ಯೆಗಳು ಇರುವಂಥವರು, ರಕ್ತದೊತ್ತಡ ಇರುವಂಥವರು ಆದಷ್ಟೂ ಜಾಗ್ರತೆಯಾಗಿ ಇರಬೇಕು.

Categories
ಬೆಂಗಳೂರು ಮಾಹಿತಿ ರಾಜ್ಯ

ಹೊಸ ರೇಷನ್ ಕಾರ್ಡ್ ಸಿಗುತ್ತೆ!

ಹೊಸ ರೇಷನ್ ಕಾರ್ಡ್ ಸಿಗುತ್ತೆ!
– ಅರ್ಜಿ ಸಲ್ಲಿಸಲು ಅವಕಾಶ: ಯಾರಿಗೆ ಅವಕಾಶ?
– ಏಪ್ರಿಲ್ 1ರಿಂದ ಹೊಸ ಪಡಿತರ ವಿತರಣೆ

NAMMUR EXPRESS NEWS
ಬೆಂಗಳೂರು: ಜನ ಸಾಮಾನ್ಯರು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿ, ಪಡಿತರ ಚೀಟಿಗಾಗಿ ಕಾಯುತ್ತಿದ್ದಾರೆ. ಮಾರ್ಚ್ 31ರೊಳಗಳೇ ಎಲ್ಲ ಅರ್ಜಿಯನ್ನು ಪರಿಶೀಲಿಸಿ ಏಪ್ರಿಲ್ 1 ರಿಂದ ಹೊಸ ಪಡಿತರ ವಿತರಣೆ ಮಾಡಲಾಗುತ್ತದೆ ಎಂದು ರಾಜ್ಯ ಆಹಾರ ಇಲಾಖೆ ಮಾಹಿತಿ ನೀಡಿದೆ. ಸದ್ಯ ಇದೀಗ ಹೊಸ ಆದ್ಯತಾ ಪಡಿತರ ಚೀಟಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಈ ದಿನಾಂಕದಿಂದ ಹೊಸ ಆದ್ಯತಾ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಬಹುದು. ಹೊಸ ಆದ್ಯತಾ ಪಡಿತರ ಚೀಟಿಗಾಗಿ ಬಂದಿರುವ 2,95,986 ಅರ್ಜಿಗಳನ್ನು ಮಾರ್ಚ್ 31ರೊಳಗೆ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.

ಇದುವರೆಗೆ 57,651 ಮತ್ತು ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ 744 ಕಾರ್ಡ್‌ಗಳನ್ನು ವಿತರಿಸಲಾಗಿದೆ. ಬಾಕಿ ಉಳಿದಿರುವ ಹೊಸ ಆದ್ಯತಾ ಪಡಿತರ ಚೀಟಿಗಳನ್ನು ಪರಿಶೀಲಿಸಿ ವಿಲೇವಾರಿ ಮಾಡುವಂತೆ ಜಂಟಿ/ಉಪ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು. ಹಿಂದಿನ ಸರ್ಕಾರದ ಅವಧಿಯಲ್ಲಿ ಈ ಅರ್ಜಿಗಳು ಸಲ್ಲಿಕೆಯಾಗಿದ್ದವು. ಚುನಾವಣೆ ಮತ್ತಿತರ ಕಾರಣಗಳಿಂದ ಈ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿತ್ತು. ಅವುಗಳ ವಿಲೇವಾರಿ ಪ್ರಗತಿಯಲ್ಲಿದೆ. ಅವುಗಳನ್ನು ಮಾರ್ಚ್ 31 ರೊಳಗೆ ವಿಲೇವಾರಿ ಮಾಡಲಿದ್ದು, ಏಪ್ರಿಲ್ 1 ರಿಂದ ಹೊಸ ಅರ್ಜಿಗಳನ್ನು ಆಹ್ವಾನಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಮಾಹಿತಿ ನೀಡಿದ್ದಾರೆ.

ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಸಲು ಏನೇನು ಬೇಕು?

•ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
•ಈಗಾಗಲೇ ಪಡಿತರ ಚೀಟಿಯನ್ನು ಹೊಂದಿರಬಾರದು.
•ಹೊಸದಾಗಿ ಮದುವೆಯಾದ ದಂಪತಿಗಳು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಬಹುದು
•ಕುಟುಂಬದ ಆದಾಯದ ಆಧಾರದ ಮೇಲೆ ಕುಟುಂಬಕ್ಕೆ ಯಾವ ಪಡಿತರ ಚೀಟಿಯನ್ನು ನೀಡಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆ.

•ನೀವು https://ahara.kar.nic.in ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆಗೆ ಈ ದಾಖಲೆಗಳು ಅಗತ್ಯ

*ಮತದಾರರ ಗುರುತಿನ ಚೀಟಿ
*ಆಧಾರ್ ಕಾರ್ಡ್
*ವಯಸ್ಸಿನ ಪ್ರಮಾಣಪತ್ರ
*ಚಾಲನಾ ಪರವಾನಿಗೆ
*ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
*ಮೊಬೈಲ್ ನಂ
*ಸ್ವಯಂ ಘೋಷಿತ ಪ್ರಮಾಣಪತ್ರ

Categories
ಚಿಕ್ಕಮಗಳೂರು ಮಲ್ನಾಡ್ ಸಾಗರ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಿದ್ದ ಇಬ್ಬರು ವಿದ್ಯಾರ್ಥಿಗಳ ಜೀವನದಲ್ಲಿ ವಿಧಿಯಾಟ.!

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಿದ್ದ ಇಬ್ಬರು ವಿದ್ಯಾರ್ಥಿಗಳ ಜೀವನದಲ್ಲಿ ವಿಧಿಯಾಟ.!
– ಸಾಗರ: ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಬೇಕಾಗಿದ್ದ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು
– ಹೊಳೆಹೊನ್ನೂರು: ಅಪಘಾತದಲ್ಲಿ ವಿದ್ಯಾರ್ಥಿನಿ ಸಾವು

NAMMUR EXPRESS NEWS
ಸಾಗರ: ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರ ಪೊಲೀಸ್‌ ಸ್ಟೇಷನ್‌ ವ್ಯಾಪ್ತಿಯಲ್ಲಿ ವಿದ್ಯಾರ್ಥಿಯೊಬ್ಬ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ. ಸ್ಥಳೀಯ ಶಾಲೆಯೊಂದರಲ್ಲಿ ಓದುತ್ತಿದ್ದ ವಿದ್ಯಾರ್ಥಿ ಪರೀಕ್ಷೆ ಬರೆಯಬೇಕಾಗಿತ್ತು. ಈ ನಡುವೆ ಭಾನುವಾರ ಮನೆಯ ಹಿತ್ತಲಲ್ಲಿರುವ ಕಂಬಕ್ಕೆ ನೇಣು ಬಿಗಿದುಕೊಂಡಿದ್ದಾನೆ. ಸ್ಥಳಕ್ಕೆ ಬಂದಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೂಲಂಕುಶವಾಗಿ ತನಿಖೆ ನಡೆಸ್ತಿದ್ದಾರೆ.

ಅಪಘಾತದಲ್ಲಿ ವಿದ್ಯಾರ್ಥಿನಿ ಸಾವು :

ಇನ್ನೂ ಅತ್ತ ಹೊಳೆಹೊನ್ನೂರು ಭಾಗದಲ್ಲಿ ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಬೇಕಿದ್ದ ವಿದ್ಯಾರ್ಥಿನಿಯೊಬ್ಬರು ಭಾನುವಾರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಶಿವಮೊಗ್ಗಕ್ಕೆ ತೆರಳುವ ಬಸ್ ಹತ್ತುವ ಸಲುವಾಗಿ ರಸ್ತೆ ದಾಟುತ್ತಿದ್ದಾಗೆ ಇನ್ನೋವಾ ಕಾರೊಂದು ಡಿಕ್ಕಿಯಾದ ಪರಿಣಾಮ ವಿದ್ಯಾರ್ಥಿನಿ ತೀವ್ರವಾಗಿ ಗಾಯಗೊಂಡಿದ್ದಾಳೆ. ಅಲ್ಲದೆ ಸ್ಥಳದಲ್ಲಿಯೇ ಪ್ರಾಣಬಿಟ್ಟಿದ್ದಾಳೆ. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್‌ ಸ್ಟೇಷನ್‌ನಲ್ಲಿ ಎಫ್‌ಐಆ‌ರ್ ದಾಖಲಾಗಿದೆ.

Categories
ರಾಜ್ಯ

ಹೋಳಿ… ಹೋಳಿ..ಹೋಳಿ ಆಚರಣೆ..!

ಹೋಳಿ… ಹೋಳಿ..ಹೋಳಿ ಆಚರಣೆ..!
– ಮನೆ ಮನೆಗೆ ಹೋಗಿ ನೃತ್ಯ ಮಾಡಿದ ಜಾನಪದ ಕಲಾವಿದರು
– ಬಣ್ಣ ಎರಚಿ ಹೋಳಿ ಆಚರಿಸಿದ ಯುವ ಜನತೆ

NAMMUR EXPRESS NEWS
ಎಲ್ಲೆಡೆ ಸಂಭ್ರಮದಿಂದ ಬಣ್ಣಗಳ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಎಲ್ಲರೂ ಕೂಡಿ ಆಡಿ ಸಂತಸದಿಂದ ಒಬ್ಬರ ಮೇಲೊಬ್ಬರು ಬಣ್ಣ ಎರಚಿ ನಲಿಯುವ ಹಬ್ಬ ಇದಾಗಿದೆ. ಇಲ್ಲಿ ಹಿರಿಯರು ಕಿರಿಯರು ಅನ್ನೋ ಬೇಧವಿಲ್ಲದೆ ಹಬ್ಬ ಮಾಡಲಾಗುತ್ತದೆ. ಎಲ್ಲೆಡೆ ಹೋಳಿ ಬಣ್ಣ ಹಾಕಿಕೊಂಡು ಪುಟಾಣಿ ಮಕ್ಕಳಿಂದ ಹಿಡಿದು ಸೆಲೆಬ್ರಿಟಿಗಳು ಕೂಡ ಹೋಳಿ ಆಡುತ್ತಾರೆ.

ಹೋಳಿ ಹುಣ್ಣಿಮೆ ಸಂಭ್ರಮ:

ಇನ್ನು ಸಂಪ್ರದಾಯದಂತೆ ಗ್ರಾಮೀಣ ಭಾಗದ ಜನರು ಜಾನಪದ ಕಲಾವಿದರು ಮನೆ ಮನೆಗೆ ತೆರಳಿ ರಂಗು ರಂಗಿನ ಬಟ್ಟೆ ತೊಟ್ಟು ಹೋಳಿ ಹಬ್ಬದ ಜಾನಪದ ಹಾಡನ್ನು ಹಾಡುತ್ತ ನೃತ್ಯ ಮಾಡುತ್ತಾರೆ. ಯುವ ಜನತೆಯು ಒಬ್ಬರ ಮೇಲೊಬ್ಬರು ಬಣ್ಣ ಎರಚಿ ಸಂಭ್ರಮದಿಂದ ಹೋಳಿ ಆಚರಿಸಿದ್ದಾರೆ.

[embedyt] https://www.youtube.com/watch?v=BG2Ki-P2X9g%5B/embedyt%5D

Categories
ತೀರ್ಥಹಳ್ಳಿ ಮಲ್ನಾಡ್

ಪರವಾನಗಿ ಬಂದೂಕು ಠಾಣೆಗೆ ಒಪ್ಪಿಸೋದು ಕಡ್ಡಾಯ

ಪರವಾನಗಿ ಬಂದೂಕು ಠಾಣೆಗೆ ಒಪ್ಪಿಸೋದು ಕಡ್ಡಾಯ
– ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಆದೇಶ
– ಕೂಡಲೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಇಡಲು ಸೂಚನೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪೊಲೀಸ್ ಉಪ ವಿಭಾಗದ ತೀರ್ಥಹಳ್ಳಿ, ಮಾಳೂರು, ಆಗುಂಬೆ, ನಗರ, ಹೊಸನಗರ, ರಿಪ್ಪಿನಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲಾ ನಾಗರೀಕರಿಗೆ ತಿಳಿಸುವುದೇನೆಂದರೆ ಮಾನ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು ಈ ಕೂಡಲೇ ಸಾರ್ವಜನಿಕರು ತಮ್ಮಲ್ಲಿನ ಆಯುಧಗಳನ್ನು ತಂದು ಇಂದೇ ಠಾಣೆಯಲ್ಲಿ ಜಮಾ‌ ಮಾಡಬೇಕು ತಪ್ಪಿದಲ್ಲಿ‌ ಸದರಿಯವರ ಆಯುಧ ಪರವಾನಗಿಯನ್ನು ರದ್ದುಪಡಿಸಲಾಗುವುದು ಮತ್ತು ಆಯುಧಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.
ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಆಯುಧವನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಅಪರಾಧ. ಹೀಗಾಗಿ ಪರವಾನಗಿ ಹೊಂದಿರುವ ಬಂದೂಕುಗಳನ್ನು ಆಯಾ ಠಾಣೆಯಲ್ಲಿ ಜಮಾ ಮಾಡಬೇಕೆಂದು ಡಿವೈಎಸ್ಪಿ ಗಜಾನನ ವಾಮನ ಸುತಾರ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Categories
ಬೆಂಗಳೂರು ರಾಜಕೀಯ ರಾಜ್ಯ

ಬಿಜೆಪಿ ಅಭ್ಯರ್ಥಿಗಳ 5ನೇ ಪಟ್ಟಿಯಲ್ಲಿ ಹಲವು ಟ್ವಿಸ್ಟ್!

ಬಿಜೆಪಿ ಅಭ್ಯರ್ಥಿಗಳ 5ನೇ ಪಟ್ಟಿಯಲ್ಲಿ ಹಲವು ಟ್ವಿಸ್ಟ್!
– ಹಾಸನ, ಕೋಲಾರ, ಮಂಡ್ಯ ಟಿಕೆಟ್ ಜೆಡಿಎಸ್ ಇಂದು ಘೋಷಣೆ?
– ಕರ್ನಾಟಕದ ನಾಲ್ವರಿಗೆ ಬಿಜೆಪಿ ಟಿಕೆಟ್.!
– ಜಗದೀಶ್ ಶೆಟ್ಟರ್ ಗೆ ಒಲಿದ ಅದೃಷ್ಟ
– ಅನಂತ ಕುಮಾರ್ ಹೆಗ್ಡೆಗೆ ಟಿಕೆಟ್ ಇಲ್ಲ

NAMMUR EXPRESS NEWS
ಬೆಂಗಳೂರು : ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ 5ನೇ ಪಟ್ಟಿ ರಿಲೀಸ್‌ ಮಾಡಿದೆ. ಲೋಕಸಭೆ ಚುನಾವಣೆ ದಿನಾಂಕ ಈಗಲೇ ಅನೌನ್ಸ್​ ಆಗಿದ್ದು, ಇನ್ನೂ ಬಿಜೆಪಿ ಪಕ್ಷದ ಟಿಕೆಟ್​ ಬಿಡುಗಡೆ ಮಾಡಲು ಹೈಕಮಾಂಡ್​ ಭಾರೀ ಕಸರತ್ತು ನಡೆಸಿದೆ. ಸದ್ಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.

ಯಾರಿಗೆ ಟಿಕೆಟ್?

ಬೆಳಗಾವಿ – ಜಗದೀಶ್‌ ಶೆಟ್ಟರ್‌
ಉತ್ತರ ಕನ್ನಡ – ವಿಶ್ವೇಶ್ವರ್‌ ಹೆಗಡೆ ಕಾಗೇರಿ
ಚಿಕ್ಕಬಳ್ಳಾಪುರ – ಡಾ. ಕೆ ಸುಧಾಕರ್‌
ರಾಯಚೂರು – ರಾಜಾ ಅಮರೇಶ್ವರ್‌ ನಾಯಕ್‌

ಇನ್ನೂ ಚಿತ್ರದುರ್ಗ ಕ್ಷೇತ್ರವನ್ನು ಉಳಿಸಿಕೊಂಡಿರುವ ಬಿಜೆಪಿ ಯಾರನ್ನು ಕಣಕ್ಕಿಳಿಸಲಿದೆ ಎಂಬುದು ಗೌಪ್ಯವಾಗಿದೆ. ಬಿಜೆಪಿ ಮೂರು ಕ್ಷೇತ್ರಗಳಾದ ಹಾಸನ, ಮಂಡ್ಯ, ಕೋಲಾರವನ್ನು ಮಿತ್ರ ಪಕ್ಷ ಜೆಡಿಎಸ್ ಗೆ ಬಿಟ್ಟು ಕೊಟ್ಟಿದೆ. ಮಂಡ್ಯದಿಂದ ಕುಮಾರಸ್ವಾಮಿ, ಹಾಸನದಿಂದ ಪ್ರಜ್ವಲ್ ರೇವಣ್ಣ, ಕೋಲಾರದಿಂದ ಮಲ್ಲೇಶ್ ಸ್ಪರ್ಧೆ ಬಹುತೇಕ ಅಂತಿಮ ಎನ್ನಲಾಗಿದೆ. ಸೋಮವಾರ ಘೋಷಣೆ ಸಾಧ್ಯತೆ ಇದೆ.

ಸುಮಲತಾಗೆ ಟಿಕೆಟ್ ನಿರಾಸೆ

ಮಂಡ್ಯ, ಹಾಸನ ಮತ್ತು ಕೋಲಾರ ಕ್ಷೇತ್ರಗಳ ವಿಚಾರವಾಗಿ ಬಿಜೆಪಿ-ಜೆಡಿಎಸ್ ಸೀಟು ಹಂಚಿಕೆ ಕಗ್ಗಂಟಿಗೆ ತೆರೆಬಿದ್ದಿದ್ದು, ಈ ಮೂರೂ ಕ್ಷೇತ್ರಗಳನ್ನು ಕಮಲ ಪಾಳಯವು ದಳಪತಿಗಳಿಗೆ ಬಿಟ್ಟುಕೊಟ್ಟಿದೆ. ಬಿಜೆಪಿ ಲೋಕಸಭಾ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅವರು ಶನಿವಾರ ಈ ವಿಷಯ ಪ್ರಕಟಿಸಿದ್ದು, ಇದರೊಂದಿಗೆ ಮಂಡ್ಯ ಸೀಟಿನ ಕುರಿತು ಭಾರಿ ನಿರೀಕ್ಷೆ ಹೊಂದಿದ್ದ ಸಂಸದೆ ಸುಮಲತಾ ಅಂಬರೀಶ್ ರಾಜಕೀಯ ಭವಿಷ್ಯ ಅತಂತ್ರಕ್ಕೆ ಸಿಲುಕಿದೆ. ಸುಮಲತಾ ಅವರ ನಡೆ ಈಗ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಕಳೆದ ಬಾರಿಯಂತೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆಯೇ ಅಥವಾ ರಾಜಕಾರಣ ದಿಂದ ದೂರ ಇರುತ್ತಾರೆಯೇ ಎಂಬ ಚರ್ಚೆಗೆ ದಾರಿಮಾಡಿದೆ.

ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಸಂಕಟ!

ಚಿತ್ರದುರ್ಗ: ಚಿಕ್ಕಮಗಳೂರಿನಲ್ಲಿ ಸಚಿವ ಶೋಭಾ ಕರಂದ್ಲಾಜೆ ವಿರುದ್ಧ ನಡೆಸಿದ ಗೋ ಬ್ಯಾಕ್ ಚಳವಳಿ ಮಾದರಿಯಲ್ಲಿ ಚಿತ್ರದುರ್ಗದಲ್ಲಿ ಪ್ರತಿಭಟನೆಗಳು ನಡೆದಿದ್ದು, ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿ ಮಾಜಿ ಸಚಿವ ಗೋವಿಂದ ಕಾರಜೋಳ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದರು. ಹೊರಗಿನವರಿಗೆ ಮಣೆ ಹಾಕಿದ್ದು ಸಾಕು, ಸ್ಥಳೀಯರಿಗೆ ಟಿಕೆಟ್ ಕೊಡಿ ಎಂದು ಪ್ರತಿಭಟನಾಕಾರರು ಹಕ್ಕೊತ್ತಾಯ ಮಂಡಿಸಿದರು. ಚಿತ್ರದುರ್ಗ ಕ್ಷೇತ್ರದಿಂದ ಕಾರಜೋಳ ಅವರಿಗೆ ಟಿಕೆಟ್ ನೀಡ ಲಾಗುತ್ತಿದೆ ಎಂಬ ಸುದ್ದಿ ಗ್ರಹಿಸಿದ ಮತ್ತೋರ್ವ ಟಿಕೆಟ್ ಆಕಾಂಕ್ಷಿ ರಘು ಚಂದನ್ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಗೋಬ್ಯಾಕ್ ನಾರಾಯಣಸ್ವಾಮಿ, ಗೋ ಬ್ಯಾಕ್ ಕಾರಜೋಳ ಘೋಷಣೆಯ ಪ್ಲೇ ಕಾರ್ಡ್ ಹಿಡಿದ ಪ್ರತಿಭಟನಾಕಾರರು ನಂತರ ಬಿಜೆಪಿ ಕಚೇರಿಗೆ ತೆರಳಿ ಮುತ್ತಿಗೆ ಹಾಕಿದರು. ಪಕ್ಷ ಕಟ್ಟೋಕೆ ನಾವು ಬೇಕು, ಟಿಕೆಟ್ ನೀಡಿ ಸಂಸತ್‌ಗೆ ಕಳಿಸಲು ಬೇರೆಯವರು ಬೇಕಾ ಎಂದು ಅಸಮಾಧಾನ ಹೊರ ಹಾಕಿದರು.