Categories
ತೀರ್ಥಹಳ್ಳಿ ಶಿಕ್ಷಣ

ತುಂಗಾ ಪಿಯು ಕಾಲೇಜಿಗೆ ಶೇ.87.63% ಫಲಿತಾಂಶ

ತುಂಗಾ ಪಿಯು ಕಾಲೇಜಿಗೆ ಶೇ.87.63% ಫಲಿತಾಂಶ
– ವಾಣಿಜ್ಯ ವಿಭಾಗ – 97.5% – ನಯನ ವಿ ಕಾಮತ್ – 582 ಟಾಪರ್
– ಕಲಾ ವಿಭಾಗ – 85% – ಅವಿನಾಶ್ ಹೆಚ್ ಎಸ್ – 556 ಟಾಪರ್
– ವಿಜ್ಞಾನ ವಿಭಾಗ – 85% – ಯಶವಂತ್ ಎಸ್ – 525
– ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆಗಳು

NAMMUR EXPRESS NEWS
ತೀರ್ಥಹಳ್ಳಿ: 2023-24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ತುಂಗಾ ಪದವಿ ಪೂರ್ವ ಕಾಲೇಜು ಉತ್ತಮ ಫಲಿತಾಂಶ ಪಡೆದಿದೆ. ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಕಾಲೇಜಿನ ಪರವಾಗಿ ಆಡಳಿತ ಮಂಡಳಿಯವರು, ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು

ತುಂಗಾ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಉನ್ನತ ದರ್ಜೆ – 06, ಪ್ರಥಮ ದರ್ಜೆ – 07, ದ್ವಿತೀಯ ದರ್ಜೆ – 7

ಯಾವ ವಿಭಾಗ ಎಷ್ಟು ಫಲಿತಾಂಶ?

ವಾಣಿಜ್ಯ ವಿಭಾಗ – 97.5% – ನಯನ ವಿ ಕಾಮತ್ – 582
ಕಲಾ ವಿಭಾಗ – 85% – ಅವಿನಾಶ್ ಹೆಚ್ ಎಸ್ – 556
ವಿಜ್ಞಾನ ವಿಭಾಗ – 85% – ಯಶವಂತ್ ಎಸ್ – 525
ಒಟ್ಟಾರೆ ಫಲಿತಾಂಶ – 87.63%

Categories
ಅಡಿಕೆ-ದರ

ಅಡಿಕೆ ದರ 10-04-2024

ಅಡಿಕೆ ದರ
10-04-2024
ಸರಕು 46100 75510
ಬೆಟ್ಟೆ 48600 54959
ರಾಶಿ 35069 49499
ಗೊರಬಲು 28009 33069
Nammur Express
Categories
ತೀರ್ಥಹಳ್ಳಿ ಶಿಕ್ಷಣ

ದ್ವಿತೀಯ ಪಿಯುಸಿ ಫಲಿತಾಂಶ: ವಾಗ್ದೇವಿ ಪಿಯು ಕಾಲೇಜು ಸಾಧನೆ!

ದ್ವಿತೀಯ ಪಿಯುಸಿ ಫಲಿತಾಂಶ: ವಾಗ್ದೇವಿ ಪಿಯು ಕಾಲೇಜು ಸಾಧನೆ!
– ಶೇಕಡಾ 100ಕ್ಕೆ 100ರ ಫಲಿತಾಂಶ
– ವಿಜ್ಞಾನ ವಿಭಾಗದಲ್ಲಿ ಸುಚಿಂತ್ ಎಸ್ 98%(588)
– ಕಾಮರ್ಸ್ ನಲ್ಲಿ ಕೃತಿಕಾ ಎಸ್.ಎಸ್ 98.66%(592)

NAMMUR EXPRESS NEWS
ತೀರ್ಥಹಳ್ಳಿ : ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ತೀರ್ಥಹಳ್ಳಿಯ ವಾಗ್ದೇವಿ ಪಿಯು ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, ಕಾಲೇಜಿಗೆ ಶೇಕಡಾ 100ರ ಫಲಿತಾಂಶ ದಾಖಲಿಸಿದೆ. ಶೇಕಡಾ 100ಕ್ಕೆ 100ರ ಫಲಿತಾಂಶ ಪಡೆದಿದ್ದು, ವಿಜ್ಞಾನ ವಿಭಾಗದಲ್ಲಿ ಸುಚಿಂತ್ ಎಸ್ 98%(588), ಕಾಮರ್ಸ್ ನಲ್ಲಿ ಕೃತಿಕಾ ಎಸ್.ಎಸ್ 98.66%(592) ಸಾಧನೆ ಮಾಡಿದ್ದಾರೆ. ತೀರ್ಥಹಳ್ಳಿ ತಾಲೂಕಿನಲ್ಲಿ ಶೇಕಡಾ 100ರ ಫಲಿತಾಂಶ ದಾಖಲಿಸಿದ ಕಾಲೇಜು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಎಲ್ಲಾ ಸಾಧಕ ವಿದ್ಯಾರ್ಥಿಗಳಿಗೆ ಶುಭಾಶಯಗಳು

ಆಡಳಿತ ಮಂಡಳಿ ಅಧ್ಯಕ್ಷರು, ಪ್ರಿನ್ಸಿಪಾಲರು, ಬೋಧಕ ವರ್ಗ, ಸಿಬ್ಬಂದಿಗಳು ತೀರ್ಥಹಳ್ಳಿ

Categories
ತೀರ್ಥಹಳ್ಳಿ ಶಿಕ್ಷಣ

ತೀರ್ಥಹಳ್ಳಿ ಹುಡುಗಿ ರಾಜ್ಯಕ್ಕೆ ನಾಲ್ಕನೇ ರ್‍ಯಾಂಕ್..!

ತೀರ್ಥಹಳ್ಳಿ ಹುಡುಗಿ ರಾಜ್ಯಕ್ಕೆ ನಾಲ್ಕನೇ ರ್‍ಯಾಂಕ್..!
– ಸಹ್ಯಾದ್ರಿ ಪಿಯು ಕಾಲೇಜಿನ ವಿದ್ಯಾರ್ಥಿನಿಯ ಸಾಧನೆ
– ರಾಜ್ಯಕ್ಕೆ 4ನೇ ರ್‍ಯಾಂಕ್ ಪಡೆದ ಪ್ರೀತು, 8ನೇ ರ‍್ಯಾಂಕ್ ಪಡೆದ ಸಾನ್ಯ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಸಹ್ಯಾದ್ರಿ ಪಿಯು ಕಾಲೇಜು ವಾಣಿಜ್ಯ ವಿದ್ಯಾರ್ಥಿನಿ ಪ್ರೀತು ಹೆಚ್.ಎಂ 593 (99%) ಪಡೆಯುವ ಮೂಲಕ ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್ ಪಡೆದಿದ್ದಾರೆ. ಇನ್ನು ಸಾನ್ಯ 589 (98.16%) ಪಡೆಯುವ ಮೂಲಕ ರಾಜ್ಯಕ್ಕೆ 8ನೇ ರ್‍ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಈ ಕಾಲೇಜಿನ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇಕಡ ನೂರರಷ್ಟು ಫಲಿತಾಂಶವನ್ನು ದಾಖಲೆ ಮಾಡಿದ್ದು, ಅತ್ಯುತ್ತಮ ಸಾಧನೆ ಮಾಡಿದೆ. ಕಳೆದ ವರ್ಷ ಕೂಡ ಉತ್ತಮ ಸಾಧನೆ ಮಾಡಿತ್ತು. ಪರೀಕ್ಷೆ ಪಡೆದಂತಹ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಉತ್ತಮ ಫಲಿತಾಂಶ ಪಡೆದಿದ್ದಾರೆ. ಇವರನ್ನು ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಹಾಗೂ ಬೋಧಕ ಸಿಬ್ಬಂದಿ ಹಾಗೂ ಪೋಷಕರು ಅಭಿನಂದಿಸಿದ್ದಾರೆ.

ಹಳ್ಳಿ ಹುಡುಗಿಯರ ಸಾಧನೆ

ತೀರ್ಥಹಳ್ಳಿಯ ಈ ಇಬ್ಬರ ಸಾಧನೆ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ.

Categories
ಕಾರ್ಕಳ ರಾಜ್ಯ ಶಿಕ್ಷಣ

ಕಾರ್ಕಳ ಕ್ರಿಯೇಟಿವ್‌ ಪಿಯು ಕಾಲೇಜು ರಾಜ್ಯಕ್ಕೆ ಟಾಪ್

ಕಾರ್ಕಳ ಕ್ರಿಯೇಟಿವ್‌ ಪಿಯು ಕಾಲೇಜು ರಾಜ್ಯಕ್ಕೆ ಟಾಪ್
– ಮೂರನೇ ವರ್ಷವೂ 100% ಫಲಿತಾಂಶ: ವಾಣಿಜ್ಯ ವಿಭಾಗದಲ್ಲಿ ಸಾನ್ವಿ ರಾವ್ 3ನೇ ರ‍್ಯಾಂಕ್‌
– 582 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸ್
141 ವಿದ್ಯಾರ್ಥಿಗಳು 95 ಶೇಕಡಾಕ್ಕಿಂತ ಅಧಿಕ,
291 ವಿದ್ಯಾರ್ಥಿಗಳು 90 ಶೇಕಡಾ ಕ್ಕಿಂತ ಅಧಿಕ ಅಂಕದ ಸಾಧನೆ

NAMMUR EXPRESS NEWS
ಕಾರ್ಕಳ : 2023-24 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳ ಕ್ರಿಯೇಟಿವ್‌ ಪದವಿ
ಪೂರ್ವ ಕಾಲೇಜಿಗೆ ಸತತ ಮೂರನೇ ವರ್ಷವೂ ಶೇ. 100 ಫಲಿತಾಂಶ ದೊರಕಿದೆ. ಪರೀಕ್ಷೆಗೆ ಕುಳಿತ ಎಲ್ಲಾ 582 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲೇ ತೇರ್ಗಡೆ ಹೊಂದುವ ಮೂಲಕ ವಿಶೇಷ ಸಾಧನೆ ಗೈದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಹಲವು ರ‍್ಯಾಂಕ್‌

ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಸಿಂಚನ ಆರ್‌. ಹೆಚ್ 592 ಅಂಕಗಳೊಂದಿಗೆ ರಾಜ್ಯಕ್ಕೆ 7ನೇ ರ‍್ಯಾಂಕ್‌ , ಹಂಸಿನಿ ವಿ 591 ಅಂಕಗಳೊಂದಿಗೆ ರಾಜ್ಯಕ್ಕೆ 8ನೇ ರ‍್ಯಾಂಕ್‌, ಸುಜಿತ್‌ ಡಿ. ಕೆ 591 ಅಂಕಗಳೊಂದಿಗೆ ರಾಜ್ಯಕ್ಕೆ 8ನೇ ರ‍್ಯಾಂಕ್‌, ಸಮೀಕ್ಷಾ ಎಸ್‌ 591 ಅಂಕಗಳೊಂದಿಗೆ ರಾಜ್ಯಕ್ಕೆ 8ನೇ ರ‍್ಯಾಂಕ್‌, ಪ್ರೇಮ್‌ ಸಾಗರ್‌ ಪಟೀಲ್‌ 589 ಅಂಕಗಳೊಂದಿಗೆ ರಾಜ್ಯಕ್ಕೆ 10ನೇ ರ‍್ಯಾಂಕ್‌, ವರ್ಷ ಹೆಚ್. ವಿ 589 ಅಂಕಗಳೊಂದಿಗೆ ರಾಜ್ಯಕ್ಕೆ 10ನೇ ರ‍್ಯಾಂಕ್‌ ಗಳಿಸಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 3ನೇ ರ‍್ಯಾಂಕ್‌

ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಸಾನ್ವಿ ರಾವ್‌ 595 ಅಂಕಗಳೊಂದಿಗೆ ರಾಜ್ಯಕ್ಕೆ 3ನೇ ಸ್ಥಾನ, ಭಕ್ತಿ ಕಾಮತ್‌ 592 ಅಂಕಗಳೊಂದಿಗೆ ರಾಜ್ಯಕ್ಕೆ 6ನೇ ಸ್ಥಾನ, ಎ.‌ ಎಸ್.ಚಿನ್ಮಯ 592 ಅಂಕಗಳೊಂದಿಗೆ ರಾಜ್ಯಕ್ಕೆ 6ನೇ ಸ್ಥಾನ ಹಾಗೂ ಎ ಅನನ್ಯಾ ಜೈನ್‌ 589 ಅಂಕಗಳೊಂದಿಗೆ ರಾಜ್ಯಕ್ಕೆ 9 ನೇಸ್ಥಾನ ಗಳಿಸಿದ್ದಾರೆ.

ಎಲ್ಲರೂ ಪಾಸ್: ಅತ್ಯುತ್ತಮ ಸಾಧನೆ

ಪರೀಕ್ಷೆಗೆ ಹಾಜರಾದ 582 ವಿದ್ಯಾರ್ಥಿಗಳಲ್ಲಿ , 141 ವಿದ್ಯಾರ್ಥಿಗಳು 95 ಶೇಕಡಾ ಕ್ಕಿಂತ ಅಧಿಕ 291 ವಿದ್ಯಾರ್ಥಿಗಳು 90 ಶೇಕಡಾ ಕ್ಕಿಂತ ಅಧಿಕ, 469 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ ಉಳಿದ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ. ರಸಾಯನಶಾಸ್ತ್ರದಲ್ಲಿ 24, ಗಣಿತದಲ್ಲಿ 58, ಜೀವಶಾಸ್ತ್ರದಲ್ಲಿ 33, ಗಣಕ ವಿಜ್ಞಾನದಲ್ಲಿ 44, ಅರ್ಥಶಾಸ್ತ್ರದಲ್ಲಿ 03, ವ್ಯವಹಾರ ಅಧ್ಯಯನದಲ್ಲಿ 03, ಲೆಕ್ಕಶಾಸ್ತ್ರದಲ್ಲಿ 14, ಕನ್ನಡದಲ್ಲಿ 10, ಸಂಸ್ಕೃತದಲ್ಲಿ 40 ವಿದ್ಯಾರ್ಥಿಗಳು ವಿಷಯವಾರು ನೂರಕ್ಕೆ ನೂರು ಅಂಕ ಗಳಿಸಿ ವಿಶೇಷ ಸಾಧನೆಗೈದಿದ್ದಾರೆ.

ಮೂರನೇ ವರ್ಷವೂ ಶೇ.100ರ ಫಲಿತಾಂಶ

ಸಂಸ್ಥೆ ಪ್ರಾರಂಭವಾದ ಮೊದಲ ವರ್ಷದಿಂದಲೂ ಶೇಕಡಾ 100 ಫಲಿತಾಂಶ ದಾಖಲಿಸುವುದರೊಂದಿಗೆ ರಾಜ್ಯದಲ್ಲೇ ಮುಂಚೂಣಿ ಸ್ಥಾನದಲ್ಲಿದೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು,ಉಪನ್ಯಾಸಕೇತರ ವೃಂದದವರು ಸಂತಸ ವ್ಯಕ್ತಪಡಿಸಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

Categories
ತೀರ್ಥಹಳ್ಳಿ ಶಿಕ್ಷಣ

ತೀರ್ಥಹಳ್ಳಿ ಹುಡುಗ ರಾಜ್ಯಕ್ಕೆ 2ನೇ ಟಾಪರ್

ತೀರ್ಥಹಳ್ಳಿ ಹುಡುಗ ರಾಜ್ಯಕ್ಕೆ 2ನೇ ಟಾಪರ್
– ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಹರ್ಷಿತ್
– ಆರಗದ ಮರಗಳಲೆಯ ಹರೀಶ್, ಲತಾ ದಂಪತಿ ಪುತ್ರ
– ತೀರ್ಥಹಳ್ಳಿ ಸರ್ಕಾರಿ ಶಾಲೆಯಲ್ಲಿ ಓದಿದ್ದ ಸಾಧಕ

NAMMUR EXPRESS NEWS
ತೀರ್ಥಹಳ್ಳಿ: ಆರಗದ ಮರಗಳಲೆಯ ಹರೀಶ್ ಮತ್ತು ಲತಾ ದಂಪತಿಗಳ ಪುತ್ರನಾದ ಹರ್ಷಿತ್ ಇವನು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಗಳಿಸಿದ್ದಾನೆ. ಪ್ರೌಢಶಾಲಾ ವಿದ್ಯಾಭ್ಯಾಸವನ್ನು ತೀರ್ಥಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ 8ರಿಂದ 10ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದ.

Categories
ರಾಜ್ಯ ಶಿಕ್ಷಣ

ದ್ವಿತೀಯ ಪಿಯುಸಿ ಫಲಿತಾಂಶ ಬಂತು!

ದ್ವಿತೀಯ ಪಿಯುಸಿ ಫಲಿತಾಂಶ ಬಂತು!
– ದಕ್ಷಿಣ ಕನ್ನಡ ಫಸ್ಟ್, ಉಡುಪಿ ದ್ವಿತೀಯ
– ಬಾಲಕಿಯರೇ ಮೇಲುಗೈ: ಎಲ್ಲರಿಗೂ ಶುಭಾಶಯಗಳು

NAMMUR EXPRESS NEWS
ಬೆಂಗಳೂರು:  2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಬುಧವಾರ ಬಿಡುಗಡೆಯಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪತ್ರಿಕಾಗೋಷ್ಠಿ ನಡೆಸಿ ಘೋಷಿಸಿದೆ. https://karesults.nic.in ವೆಬ್ ಸೈಟ್ ನಲ್ಲಿ 11 ಗಂಟೆ ನಂತರ ಫಲಿತಾಂಶ ವೀಕ್ಷಿಸಬಹುದು. ಮಂಡಳಿಯ ಅಧ್ಯಕ್ಷೆ ಎನ್. ಮಂಜುಶ್ರೀ, ಪರೀಕ್ಷಾ ವಿಭಾಗದ ನಿರ್ದೇಶಕ ಗೋಪಾಲಕೃಷ್ಣ ಸೇರಿ ಹಿರಿಯ ಅಧಿಕಾರಿಗಳು ಫಲಿತಾಂಶವನ್ನು ಘೋಷಣೆ ಮಾಡಿದ್ದಾರೆ. ಈ ಬಾರಿ ದ್ವಿತೀಯ ಪಿಯುಸಿ 81.15% ಫಲಿತಾಂಶ ಬಂದಿದೆ. ಪ್ರತೀ ವರ್ಷದಂತೆ ಈ ಬಾರಿ ಕೂಡ ಬಾಲಕಿಯರೇ (80.25%) ಮೇಲುಗೈ ಸಾಧಿಸಿದ್ದಾರೆ. ವಿಜ್ಞಾನ ವಿಭಾಗ 89.96% , ವಾಣಿಜ್ಯ ವಿಭಾಗ 80.94%, ಕಲಾ ವಿಭಾಗದಲ್ಲಿ 68.36 % ಫಲಿತಾಂಶ ಬಂದಿದೆ. ಕಳೆದ ಬಾರಿಯಂತೆ ಈ ಬಾರಿ ಕೂಡ ದಕ್ಷಿಣ ಕನ್ನಡ (97.37%) ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಉಡುಪಿ (96.80%) ಎರಡನೇ ಸ್ಥಾನ ಪಡೆದಿದೆ. ವಿಜಯಪುರ (94.89%) ತೃತೀಯ ಸ್ಥಾನ ಪಡೆದಿದೆ. ಗದಗ (72.86%) ಕೊನೆಯ ಸ್ಥಾನ ಪಡೆದಿದೆ.

ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿ ಗಳು – 6,98,378
ತೇರ್ಗಡೆಯಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 5,52690
ಶೇಕಾಡ 85% ಹಾಗೂ ಅದಕ್ಕಿಂತ ಹೆಚ್ಚಿನ ಅಂಕ – 1,53,370
ಶೇಕಡಾ 60% – 2,89733
ದ್ವಿತೀಯ ದರ್ಜೆ- 72,098
ತೃತೀಯ ದರ್ಜೆಯಲ್ಲಿ ಉತ್ತೀರ್ಣರಾದವರು – 37,489
ಮಾರ್ಚ್‌ 1ರಿಂದ 22ರವರೆಗೆ ರಾಜ್ಯದ 1120ಕ್ಕೂ ಹೆಚ್ಚು ಕೇಂದ್ರಗಳಲ್ಲಿ ದ್ವಿತೀಯ ಪಿಯು ಪರೀಕ್ಷೆಗಳನ್ನು ನಡೆಸಿದ್ದು, ಸುಮಾರು 7 ಲಕ್ಷ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದರು.

Categories
ಬೆಂಗಳೂರು ರಾಜ್ಯ ಶಿಕ್ಷಣ

ರಾಜ್ಯದ 1-10 ನೇ ತರಗತಿ ವಿದ್ಯಾರ್ಥಿಗಳಿಗೆ ನಾಳೆಯಿಂದ ಬೇಸಿಗೆ ರಜೆ.!

ರಾಜ್ಯದ 1-10 ನೇ ತರಗತಿ ವಿದ್ಯಾರ್ಥಿಗಳಿಗೆ ನಾಳೆಯಿಂದ ಬೇಸಿಗೆ ರಜೆ.!
– ಮಧ್ಯಾಹ್ನದ ಬಿಸಿಯೂಟ ವಿತರಣೆ

NAMMUR EXPRESS NEWS
ಬೆಂಗಳೂರು: ಪಿ.ಎಂ.ಪೋಷಣ್ ಶಕ್ತಿ ನಿರ್ಮಾಣ್ ಹಾಗೂ ಅಕ್ಷರ ದಾಸೋಹ ಕಾರ್ಯಕ್ರಮದಡಿ 31 ಕಂದಾಯ ಜಿಲ್ಲೆಗಳಲ್ಲಿ ಬರ ಘೋಷಣೆಯ ಹಿನ್ನಲೆಯಲ್ಲಿ ಬರಗಾಲದಲ್ಲಿ ಮಕ್ಕಳಲ್ಲಿನ ಪೌಷ್ಟಿಕಾಂಶ ಕೊರತೆಯಾಗಬಾರದೆಂದು ಏಪ್ರಿಲ್ 11 ರಿಂದ ಮೇ 28 ರ ವರೆಗೆ ಭಾನುವಾರಗಳಂದು ಹೊರತುಪಡಿಸಿ ನಿರಂತರವಾಗಿ 41 ದಿನಗಳ ಕಾಲ ಮಧ್ಯಾಹ್ನದ ಬಿಸಿಯೂಟ ನೀಡಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಬಿಸಿಯೂಟವನ್ನು ಎಲ್ಲಾ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ 1 ರಿಂದ 10 ನೇ ತರಗತಿ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಅಂದರೆ ಪ್ರಸ್ತುತ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆದ ವಿದ್ಯಾರ್ಥಿಗಳು ಒಳಗೊಂಡಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನ 12 ರಿಂದ 2 ಗಂಟೆಯ ಅವಧಿಯಲ್ಲಿ ಊಟ ನೀಡಲಾಗುತ್ತದೆ. ಶಾಲೆಗಳ ಬೇಸಿಗೆ ರಜೆ ಏಪ್ರಿಲ್ 11 ರಿಂದ ಆರಂಭವಾಗಲಿದೆ.

Categories
ಕರಾವಳಿ ಕುಂದಾಪುರ

ಬ್ರಹ್ಮಾವರ: ಬಿಜೆಪಿ ಮುಖಂಡನ ಮನೆಯಲ್ಲಿ ಅಕ್ರಮ ಮದ್ಯ ವಶ!

ಬ್ರಹ್ಮಾವರ: ಬಿಜೆಪಿ ಮುಖಂಡನ ಮನೆಯಲ್ಲಿ ಅಕ್ರಮ ಮದ್ಯ ವಶ!
– ಆರೋಪಿ ರಮೇಶ್‌ ಪ್ರಭು ಬಂಧನ: ಏನಿದು ಪ್ರಕರಣ?
– ಕುಂದಾಪುರದ ಬಳಿ ಭೀಕರ ಅಪಘಾತ: ಮೂವರು ಗಂಭೀರ

NAMMUR EXPRESS NEWS
ಬ್ರಹ್ಮಾವರ/ಕುಂದಾಪುರ: ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ರಾಜ್ಯದ ಹಲವೆಡೆ ಮದ್ಯ, ಹಣ ಸೇರಿದಂತೆ ಅಕ್ರಮ ಚಟುವಟಿಕೆಗಳು ಒಂದೊಂದಾಗಿ ಬಯಲಾಗುತ್ತಿವೆ. ಇದೀಗ ಬ್ರಹ್ಮಾವರದಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡನ ಮನೆಯಲ್ಲಿ ಅಪಾರ ಪ್ರಮಾಣದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿರುವ ಮದ್ಯ ಪತ್ತೆಯಾಗಿದೆ. ಆರೋಪಿ ರಮೇಶ್‌ ಪ್ರಭು ಮನೆ ಮೇಲೆ ಸೋಮವಾರ ರಾತ್ರಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದು, ಲಕ್ಷಾಂತರ ಮೌಲ್ಯದ ಡಿಫೆನ್ಸ್ (ಮಿಲಿಟರಿ) ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ.

ಲೋಕಸಭಾ ಚುನಾವಣೆ ಪ್ರಯುಕ್ತ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಬಕಾರಿ ಜಂಟಿ ಆಯುಕ್ತರು, ಮಂಗಳೂರು ವಿಭಾಗ ಹಾಗೂ ಅಬಕಾರಿ ಉಪ ಆಯುಕ್ತರು ಉಡುಪಿ ಜಿಲ್ಲೆ ಇವರುಗಳು ಮಾರ್ಗದರ್ಶನದಡಿ ಖಚಿತ ಮಾಹಿತಿ ಮೇರೆಗೆ ಉಡುಪಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಬ್ರಹ್ಮಾವರ ಇಂದಿರಾ ನಗರದಲ್ಲಿರುವ ರಮೇಶ್‌ ಪ್ರಭು ಮನೆ ಮೇಲೆ ದಾಳಿ ನಡೆಸಲಾಗಿತ್ತು. ರಮೇಶ್ ಪ್ರಭು ಅವರ ಪುತ್ರ ಬಿಜೆಪಿ ಉಡುಪಿ ಜಿಲ್ಲಾ ಯುವ ಮೋರ್ಚಾದ ಮುಖಂಡ ಎಂದು ತಿಳಿದು ಬಂದಿದೆ.

ಆರೋಪಿಗಳ ಬಳಿಯಿಂದ ಒಟ್ಟು 33.500 ಲೀಟರ್ ಮಿಲಿಟರಿಯವರಿಗೆ ಸಂಬಂದಿಸಿದ ಮದ್ಯ ಪತ್ತೆಯಾಗಿದ್ದು, ಇದರ ಒಟ್ಟು ಮೌಲ್ಯ 1,55,000ರೂ. ಎಂದು ಅಂದಾಜಿಸಲಾಗಿದೆ. ಆರೋಪಿ ರಮೇಶ್ ಪ್ರಭುವನ್ನು ಬಂಧಿಸಲಾಗಿದೆ. ಈ ಬಗ್ಗೆ ಉಡುಪಿ ಉಪ ವಿಭಾಗದ ಅಬಕಾರಿ ಉಪ ನಿರೀಕ್ಷಕಿ ಮಧುರಾ. ಎನ್. ದಾಸ್ ಮೊಕದ್ದಮೆಯನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕುಂದಾಪುರದ ಬಳಿ ಭೀಕರ ಅಪಘಾತ: ಮೂವರು ಗಂಭೀರ!

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಂದಾಪುರದ ಕೆಎಸ್‌ಆರ್‌ಟಿಸಿ ಬಸ್‌ ಡಿಪೋ ಬಳಿ ಮಂಗಳವಾರ ಮಧ್ಯಾಹ್ನ ಭೀಕರ ರಸ್ತೆ ಅಪಘಾತ ನಡೆದಿದ್ದು, ಕಾರಿನಲ್ಲಿ ಸಂಚರಿಸುತ್ತಿದ್ದ ಮೂವರ ಸ್ಥಿತಿ ಗಂಭೀರವಾಗಿದೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದು ಕೇರಳ ರಾಜ್ಯದ ಮಾಹೆ ಎಂಬಲ್ಲಿಗೆ ಟೊಯೊಟೊ ಫಾರ್ಚ್ಯೂನರ್‌ ಕಾರಿನಲ್ಲಿ ತೆರಳುತ್ತಿರಬೇಕಾದರೆ, ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿಯಾಗಿದೆ. ಕಾರು ಗುದ್ದಿದ ರಭಸಕ್ಕೆ ಅದು ಮೇಲುರಸ್ತೆಯಿಂದ ಏಕಾಏಕಿ ಕೆಳಕ್ಕೆ ಪಲ್ಟಿಯಾಗಿದೆ. ಕಾರಿನಲ್ಲಿ ಮೂವರು ವ್ಯಕ್ತಿಗಳು ಸಂಚರಿಸುತ್ತಿದ್ದು, ಮೂವರ ಸ್ಥಿತಿಯೂ ಗಂಭೀರವಾಗಿದ್ದು, ಕುಂದಾಪುರದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರು ತಲೆಕೆಳಗಾಗಿ ಕೆಳಕ್ಕೆ ಬಿದ್ದಿದ್ದು, ಅದು ಕೂಡ ಸರ್ವೀಸ್‌ ರಸ್ತೆಯಾಗಿದ್ದು, ಆ ಸಮಯದಲ್ಲಿ ಯಾವುದೇ ವಾಹನಗಳು ಹಾದು ಹೋಗದಿದ್ದ ಕಾರಣ ಅಷ್ಟೊಂದು ದುರಂತವಾಗಿಲ್ಲ. ಇಲ್ಲದಿದ್ದರೆ ಬಿದ್ದ ವಾಹನದ ಮೇಲೆ ಬೇರೆ ದೊಡ್ಡ ವಾಹನಗಳು ಹಾದು ಹೋಗುವ ಅಪಾಯವಿತ್ತು. ಘಟನಾ ಸ್ಥಳಕ್ಕೆ ಕುಂದಾಪುರ ಸಂಚಾರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸರ್ವಿಸ್ ರಸ್ತೆಯಲ್ಲಿ ಕಾರು ಬಿದ್ದ ಪರಿಣಾಮ ಕೆಲಕಾಲ ಸಂಚಾರ ವ್ಯತ್ಯಯ ಕೂಡ ಉಂಟಾಗಿತ್ತು.

Categories
ತೀರ್ಥಹಳ್ಳಿ ಸಿನಿಮಾ

ತೀರ್ಥಹಳ್ಳಿಯಲ್ಲಿ ಕೆರೆಬೇಟೆ ತೆರೆಗೆ: ನೀವೂ ಒಮ್ಮೆ ನೋಡಿ!

ತೀರ್ಥಹಳ್ಳಿಯಲ್ಲಿ ಕೆರೆಬೇಟೆ ತೆರೆಗೆ: ನೀವೂ ಒಮ್ಮೆ ನೋಡಿ!
– ಅಪ್ಪಟ ಮಲೆನಾಡ ಸೆರಗಿನಲ್ಲಿ ಹುಟ್ಟಿಕೊಂಡ ಸಿನಿಮಾ
– ವೆಂಕಟೇಶ್ವರ ಚಿತ್ರ ಮಂದಿರದಲ್ಲಿ 4 ಪ್ರದರ್ಶನ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಕೆರೆಭೇಟೆ ಅಬ್ಬರ ಶುರುವಾಗಿದ್ದು, ಮಲೆನಾಡ ಸೊಗಡಿನ ಹಚ್ಚ ಹಸುರು ಪರಿಸರದ, ಭಾಷಾ ಗಮ್ಮತ್ತಿನ ಸಿನಿಮಾ ಈಗ ತೀರ್ಥಹಳ್ಳಿ ವೆಂಕಟೇಶ್ವರ ಚಿತ್ರ ಮಂದಿರದಲ್ಲಿ ತೆರೆ ಕಂಡಿದೆ. ತೀರ್ಥಹಳ್ಳಿ ಮೂಲದ ನಟ ಗೌರಿ ಶಂಕರ್ ನಾಯಕ ನಟರಾಗಿ ನಟನೆ ಮಾಡಿದ್ದು, ಈ ಚಿತ್ರಕ್ಕೆ ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಪ್ರಶಂಸೆ ವ್ಯಕ್ತವಾಗಿದೆ.

ಮಲೆನಾಡ ಜಾನಪದ ಕಲೆ ಕೆರೆ ಬೇಟೆ!

ಮಲೆನಾಡಿನ ಜನಪದ ಕಲೆ ಕೆರೆ ಬೇಟೆಯ ಹಿನ್ನೆಲೆಯಲ್ಲಿಯೇ ಸಿನಿಮಾ ಮಾಡಿದ್ದಾರೆ. ಅದೇ ಮಲೆನಾಡಿನ ಹುಡುಗ ಗೌರಿ ಶಂಕ‌ರ್. ಸಿನಿಮಾ ಕಲಿತು, ಒಂದಷ್ಟು ನಿರ್ದೇಶಕರ ಕಡೆಗೆ ಪಳಗಿದ ರಾಜ್‌ಗುರು ಕೆರೆಬೇಟೆ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಶಿವಮೊಗ್ಗ ಜಿಲ್ಲೆಯ ಮಲೆನಾಡ ಭಾಗದ ಕಥೆಯೇ ಕೆರೆಬೇಟೆ. ಯಾರ ಮಾತನ್ನೂ ಕೇಳದ, ಯಾರಿಗೂ ಕ್ಯಾರೇ ಎನ್ನದ ಮನಸ್ಥಿತಿ ಕಥಾನಾಯಕನದ್ದು. ಒಂದು ರೀತಿ ಆತ ಇಡೀ ಊರಿಗೆ ಗುಂಡ್ರಗೋವಿ. ಹೆಸರು ಹುಲಿಮನೆ ನಾಗ (ಗೌರಿಶಂಕ‌ರ್). ಮೋಟು ಬೀಡಿ ಸೇದುತ್ತಾ ಕುರುಚುಲು ಗಡ್ಡದ, ಕಪ್ಪು ತುಟಿಯುಳ್ಳ ಉಡಾಳ. ಇಂಥ ಹುಡುಗನ ಎದೆಗೆ ಕಾಲಿಟ್ಟವಳು, ಮೇಲ್ಪಾತಿಯ ಮೀನಾ(ಬಿಂದು). ಒಂದು ಸನ್ನಿವೇಶದಲ್ಲಿ ಇಬ್ಬರ ನಡುವೆ ಪ್ರೀತಿ ಮೊಳೆಕೆಯೊಡೆಯುತ್ತದೆ, ಊರ ತುಂಬ ಸುದ್ದಿಯಾಗಿ, ಮನೆ ಮಂದಿಗೂ ವಿಚಾರ ತಿಳಿದು ರಾದ್ಧಾಂತವಾಗುತ್ತದೆ. ಹಾಗಾದರೆ ಇದೊಂದು ಪ್ರೇಮಕಥೆಯೇ? ಇಲ್ಲ ಇಲ್ಲಿಂದಲೇ ಅಸಲಿ ಕಥೆ ಶುರುವಾಗುವುದು!

ಹೆಸರೇ ಹೇಳುವಂತೆ ಕೆರೆಬೇಟೆ ಸಿನಿಮಾ ಒಂದು ಅಪ್ಪಟ ಮಲೆನಾಡ ಸೆರಗಿನಲ್ಲಿ ಹುಟ್ಟಿಕೊಂಡ ಕಥೆ. ಇಲ್ಲಿ ಕಾಣಿಸುವುದೆಲ್ಲ ಹಸಿರು, ಹಚ್ಚ ಹಸಿರು. ಇದರಾಚೆಗೆ ಆ ಭಾಗದ ಆಚಾರ ವಿಚಾರ, ಸಂಪ್ರದಾಯ, ಭಾಷಾ ಸೊಗಡು, ಅಲ್ಲಿನ ಆಹಾರ ಪದ್ಧತಿ, ಕೆರೆಯಲ್ಲಿ ಮೀನು ಹಿಡಿಯುವ ಪದ್ಧತಿಯನ್ನೂ ತೆರೆಮೇಲೆ ತರುವ ಕಾಯಕವನ್ನು ನಿರ್ದೇಶಕರು ಅಚ್ಚುಕಟ್ಟಾಗಿಯೇ ನಿಭಾಯಿಸಿದ್ದಾರೆ. ಜತೆಗೆ ಜಾತಿ ಪದ್ಧತಿ ವಿಷವರ್ತುಲವೂ ಇಲ್ಲಿ ಬಿಡಿಸಿಕೊಳ್ಳಲು ಬಾರದ ಬಳ್ಳಿಯಂತೆ ಹಬ್ಬಿದೆ. ಇಂಥ ಜಾತಿಯ ಸುಳಿಗೆ ಸಿಲುಕುವ ಪ್ರೇಮಿಗಳು ಮುಂದೆ ಏನೆಲ್ಲ ಅನುಭವಿಸುತ್ತಾರೆ ಎಂಬ ಕೌತುಕವನ್ನೂ ಭರ್ತಿಯಾಗಿ ತುಂಬಿಸಿದ್ದಾರೆ ರಾಜ್‌ಗುರು. ಒಮ್ಮೆ ನೀವೂ ಸಿನಿಮಾ ನೋಡಲೇಬೇಕು.

ತೀರ್ಥಹಳ್ಳಿ ವೆಂಕಟೇಶ್ವರ ಚಿತ್ರಮಂದಿರದಲ್ಲಿ 4 ಶೋ ಪ್ರದರ್ಶನ ಇದ್ದು ಸಮಸ್ತ ಮಲೆನಾಡಿನ ಸಿನಿ ಪ್ರಿಯರು, ಸರ್ವರೂ ವೀಕ್ಷಣೆ ಮಾಡುವಂತೆ ಮನವಿ ಮಾಡಲಾಗಿದೆ.