Categories
ತೀರ್ಥಹಳ್ಳಿ

ಮನೆಗೆ ಬಂದ ಹೆಬ್ಬಾವು!

ಮನೆಗೆ ಬಂದ ಹೆಬ್ಬಾವು!
– ತೀರ್ಥಹಳ್ಳಿಯ ಸೌಳಿಯಲ್ಲಿ ಘಟನೆ
– ಊರವರು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದರು.

NAMMUR EXPRESS NEWS
ತೀರ್ಥಹಳ್ಳಿ: ಮನೆಗೆ ಬಂದಿದ್ದ ಹೆಬ್ಬಾವು ಕೆಲ ಕಾಲ ಆತಂಕ ಮೂಡಿಸಿ ಬಳಿಕ ಸ್ಥಳೀಯರೇ ಹಿಡಿದು ಕಾಡಿಗೆ ಬಿಟ್ಟ ಘಟನೆ ತೀರ್ಥಹಳ್ಳಿ ತಾಲೂಕಿನ ಸೌಳಿ ಎಂಬಲ್ಲಿ ನಡೆದಿದೆ. ಬುಧವಾರ ರಾತ್ರಿ ಲಿಂಗಪ್ಪ ಗೌಡ ನಾಯಿ ಹಿಡಿಯಲು ಬಂದಿದ್ದ ಹಾವನ್ನು ಗುರುವಾರ ಕೆಲವು ಸ್ಥಳೀಯರೇ ಸೇರಿ ಹಿಡಿದು ಅರಣ್ಯ ಇಲಾಖೆ ಮೂಲಕ ಕಾಡಿಗೆ ಬಿಟ್ಟಿದ್ದಾರೆ. ಫಾರೆಸ್ಟರ್ ಕಿರಣ್ ಈ ವೇಳೆ ಇದ್ದರು. 7 ಅಡಿ ಉದ್ದದ ಹೆಬ್ಬಾವನ್ನು ರಕ್ಷಣೆ ಮಾಡಿದ್ದಾರೆ

Categories
ತೀರ್ಥಹಳ್ಳಿ ಶಿಕ್ಷಣ

ತೀರ್ಥಹಳ್ಳಿ ತಾಲೂಕಿನ ಯಾವ ಕಾಲೇಜು ಎಷ್ಟು ಫಲಿತಾಂಶ?

ತೀರ್ಥಹಳ್ಳಿ ತಾಲೂಕಿನ ಯಾವ ಕಾಲೇಜು ಎಷ್ಟು ಫಲಿತಾಂಶ?
– ಸಹ್ಯಾದ್ರಿ, ವಾಗ್ದೇವಿ, ಬಸವಾನಿ ಪದವಿ ಪೂರ್ವ ಕಾಲೇಜು ಶೇ.100ರ ಫಲಿತಾಂಶ
– ತೀರ್ಥಹಳ್ಳಿ ಸರ್ಕಾರಿ ಪಿಯು ಕಾಲೇಜು ಅಮೋಘ ಸಾಧನೆ
– ಪಿಯುಸಿ ಫಲಿತಾಂಶ ಉತ್ತಮ ಸಾಧನೆ: ಶಾಸಕ ಆರಗ ಅಭಿನಂದನೆ

NAMMUR EXPRESS NEWS
ತೀರ್ಥಹಳ್ಳಿ ತಾಲೂಕು ಈ ಬಾರಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದೆ. ತೀರ್ಥಹಳ್ಳಿ ತಾಲೂಕಿನ ಪದವಿ ಪೂರ್ವ ಕಾಲೇಜುಗಳ ದ್ವಿತೀಯ ಪಿಯುಸಿಯಲ್ಲಿ ಶೇ. 92.25% ಫಲಿತಾಂಶ ಪಡೆದು ಜಿಲ್ಲೆಗೆ ಮೊದಲ ಸ್ಟಾನ ಪಡೆದಿದೆ.

ತೀರ್ಥಹಳ್ಳಿ ತಾಲೂಕು ಕಾಲೇಜು ಹಾಗೂ ಶೇ. ಪಟ್ಟಿ ಇಲ್ಲಿದೆ.

ತೀರ್ಥಹಳ್ಳಿ ತಾಲ್ಲೂಕಿನ ಕಾಲೇಜಿನ ಹೆಸರು, ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ , ಪಾಸಾದ ವಿದ್ಯಾರ್ಥಿಗಳು , ಶೇಕಡವಾರು ಫಲಿತಾಂಶ

1. ಸ. ಪ. ಪೂರ್ವ ಕಾಲೇಜು ಬಸವಾನಿ – 15 – 15 – 100%

2.ತುಂಗಾ ಪ .ಪೂರ್ವ ಕಾಲೇಜು,ತೀರ್ಥಹಳ್ಳಿ – 26 – 20 -76.92%

3. NES ಕೋಣಂದೂರು – 102 – 92 – 90.19%

4. NRS ಕೋಣಂದೂರು – 77 – 74 – 96.10%

5. ಮಾಳೂರು ಸ. ಪ. ಪೂ ಕಾಲೇಜು – 65 – 56 -86.15%

6. ಸ. ಪ. ಪೂ ಕಾಲೇಜು ತೀರ್ಥಹಳ್ಳಿ ( girls college ) – 107 – 100 – 93.45%

7. ಮೇಗರವಳ್ಳಿ ಸ.ಪ . ಪೂರ್ವ ಕಾಲೇಜು – 22 -19- 86.36%

8. ಸಹ್ಯಾದ್ರಿ ಪದವಿ ಪೂರ್ವ ಕಾಲೇಜು ತೀರ್ಥಹಳ್ಳಿ 76- 76- 100%

9. ವಾಗ್ದೇವಿ ಪದವಿ ಪೂರ್ವ ಕಾಲೇಜು ತೀರ್ಥಹಳ್ಳಿ -156-156 -100%

10. KSP ಪದವಿ ಪೂರ್ವ ಕಾಲೇಜು ಕೋಣಂದೂರು -09-08- 88.88%

11. ಸ. ಪ. ಪೂ. ಕಾಲೇಜು ಆರಗ – 22 – 19 – 86.36%

12. ಸ. ಪ. ಪೂ. ಕಾಲೇಜು ತೀರ್ಥಹಳ್ಳಿ – 407 – 365 – 89.68%

ಪಿಯುಸಿ ಫಲಿತಾಂಶ ಉತ್ತಮ ಸಾಧನೆ: ಶಾಸಕ ಆರಗ ಅಭಿನಂದನೆ

ತೀರ್ಥಹಳ್ಳಿ ಕ್ಷೇತ್ರದ ಎಲ್ಲಾ ಪಿಯುಸಿ ಕಾಲೇಜುಗಳು ಉತ್ತಮ ಫಲಿತಾಂಶ ಪಡೆದುಕೊಂಡಿದ್ದು ತೀರ್ಥಹಳ್ಳಿ ಕ್ಷೇತ್ರ ಈ ಶೈಕ್ಷಣಿಕ ವರ್ಷದಲ್ಲಿ ಗಣನೀಯ ಸಾಧನೆ ಮಾಡಲು ಕಾರಣರಾದ ಎಲ್ಲಾ ವಿಧ್ಯಾರ್ಥಿಗಳು ಪೋಷಕರು ಶಾಲಾ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದಕ್ಕೆ ಶಾಸಕರಾದ ಆರಗ ಜ್ಞಾನೇಂದ್ರರವರು ಮನದಾಳದಿಂದ ಅಭಿನಂದನೆ ಸಲ್ಲಿಸಿದ್ದಾರೆ,ರಾಜ್ಯ ಮಟ್ಟದಲ್ಲಿ ರ‍್ಯಾಂಕ್‌ ಪಡೆದ ವಿದ್ಯಾರ್ಥಿಗಳ ಸಾಧನೆ ಉಳಿದೆಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ದಾರಿದೀಪವಾಗಲಿ ಎಂದಿರುವ ಶಾಸಕರು ಮುಂದಿನ ಶೈಕ್ಷಣಿಕ ವರ್ಷಗಳಲ್ಲೂ ಈ ಸಾದನೆ ಮುಂದುವರಿಯುವಂತಾಗಲಿ ಎಂದು ಹಾರೈಸಿದ್ದಾರೆ.

Categories
ಕರಾವಳಿ ಶಿಕ್ಷಣ

ಹೆಬ್ರಿ ಎಸ್.ಆರ್ ಪಿಯು ಕಾಲೇಜಿಗೆ ಶೇ.100ಫಲಿತಾಂಶ

ಹೆಬ್ರಿ ಎಸ್.ಆರ್ ಪಿಯು ಕಾಲೇಜಿಗೆ ಶೇ.100ಫಲಿತಾಂಶ
– ರಾಜ್ಯಕ್ಕೆ ಹಲವು ಸಾಧಕರನ್ನು ಕೊಟ್ಟ ಎಸ್.ಆರ್ ಕಾಲೇಜು
– ಪ್ರಜ್ವಲ್ ನಾಯಕ್, ಆದಿತ್ಯ ದೇವಾಡಿಗ, ಅಭಿಷೇಕ್.ಸಿ.ಶೆಟ್ಟಿ ಅನುರಾಧ ಕೆ.ಎಂ ಟಾಪರ್

NAMMUR EXPRESS NEWS
ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪ್ರಜ್ವಲ್ ನಾಯಕ್ 590 (98.33%)ಅಂಕ ಪಡೆದು ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ 9ನೇ ಸ್ಥಾನ, ಆದಿತ್ಯ ದೇವಾಡಿಗ 589 (98.16%)ಅಂಕ ಪಡೆದು ದ್ವಿತೀಯ ಸ್ಥಾನ ಹಾಗೂ ರಾಜ್ಯಕ್ಕೆ 10ನೇ ಸ್ಥಾನ, ಅಭಿಷೇಕ್.ಸಿ.ಶೆಟ್ಟಿ ಮತ್ತು ಅನುರಾಧ ಕೆ.ಎಂ 584 (97.33%) ಅಂಕ ಪಡೆದು ತೃತೀಯ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 151 ಪರೀಕ್ಷೆಗೆ ಹಾಜರಾಗಿದ್ದು, 103 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 47 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಹೊಂದಿ, ವಿಜ್ಞಾನ ವಿಭಾಗವು 100% ಫಲಿತಾಂಶವನ್ನು ದಾಖಲಿಸಿಕೊಂಡಿದೆ.
ದ್ದಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಪ್ರಣೀತ್ ಶೆಟ್ಟಿ 585 (97.5%)ಅಂಕ ಪಡೆದು ಪ್ರಥಮ ಸ್ಥಾನ, ಪ್ರಿಯಾ ಆಚಾರ್ 584 (97.33%)ಅಂಕ ಪಡೆದು ದ್ವಿತೀಯ ಸ್ಥಾನ, ರಾಹುಲ್ ಎಂ.ಎಸ್ 578 (96.33%)ಅಂಕ ಪಡೆದು ತೃತೀಯ ಸ್ಥಾನದಲ್ಲಿ ತೇರ್ಗಡೆಯಾಗಿರುತ್ತಾರೆ.

ವಾಣಿಜ್ಯ ವಿಭಾಗದಲ್ಲಿ ಸಾಧನೆ

ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 48 ವಿದ್ಯಾರ್ಥಿಗಳಲ್ಲಿ 23 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 23 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ, 100% ಫಲಿತಾಂಶವನ್ನು ದಾಖಲಿಸಿಕೊಂಡಿದೆ. ವಿದ್ಯಾರ್ಥಿಗಳನ್ನು ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಚ್. ನಾಗರಾಜ್ ಶೆಟ್ಟಿ , ಕಾರ್ಯದರ್ಶಿ ಸಪ್ನಾ .ಎನ್ .ಶೆಟ್ಟಿ ಇವರು ಅಭಿನಂದಿಸಿದ್ದಾರೆ.

 

Categories
ರಾಜ್ಯ

ಐತಿಹಾಸಿಕ ದಾಖಲೆ ಬರೆದ ಚಿನ್ನ

ಐತಿಹಾಸಿಕ ದಾಖಲೆ ಬರೆದ ಚಿನ್ನ
– ಇಂದೂ ಕೂಡ ಭರ್ಜರಿ ಏರಿಕೆ ಕಂಡ ಚಿನ್ನ

NAMMUR EXPRESS NEWS
ಬೆಂಗಳೂರು : ನಿರಂತರವಾಗಿ ಏರಿಕೆ ಕಂಡ ಚಿನ್ನ ಹಾಗೂ ಬೆಳ್ಳಿಯ ಬೆಲೆ ಗುರುವಾರವೂ ಕೂಡ ಭರ್ಜರಿ ಏರಿಕೆ ಕಂಡಿದ್ದು, ಗ್ರಾಹಕರಿಗೆ ಶಾಕ್‌ ಕೊಟ್ಟಂತಾಗಿದೆ. ಬುಧವಾರದಂದು 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 71,730 ರುಪಾಯಿ ಆಗಿದ್ದು, ಇದೀಗ 72,110 ರುಪಾಯಿ ಆಗಿದೆ. ಕಳೆದ 10 ದಿನದಲ್ಲಿ ಚಿನ್ನದ ಬೆಲೆ ಗ್ರಾಮ್​ಗೆ ಸುಮಾರು 7 ರೂನಷ್ಟು ಹೆಚ್ಚಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 66,100 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 72,110 ರುಪಾಯಿ ಆಗಿದ್ದು, 100 ಗ್ರಾಮ್ ಬೆಳ್ಳಿ ಬೆಲೆ 8,550 ರುಪಾಯಿ ಇದೆ. ಹಾಗಾದರೇ ಇಂದು (ಏಪ್ರಿಲ್ 11) ಬೆಂಗಳೂರು ನಗರ ಸೇರಿದಂತೆ ವಿವಿಧ ನಗರದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಚಿನ್ನ ಮತ್ತು ಬೆಳ್ಳಿ ಬೆಲೆ ದರ ಎಷ್ಟು ಗೊತ್ತಾ?

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,100 ರೂ
24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,110 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 855 ರೂ

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಗ್ಯಾಸ್ ಲೀಕ್ ಆಗಿ ಕಾರು ಸ್ಫೋಟ!

ತೀರ್ಥಹಳ್ಳಿಯಲ್ಲಿ ಗ್ಯಾಸ್ ಲೀಕ್ ಆಗಿ ಕಾರು ಸ್ಫೋಟ!
– ಕೊಪ್ಪ ಸರ್ಕಲ್ ಗ್ಯಾರೇಜ್ ಅಲ್ಲಿ ಘಟನೆ
– ಓರ್ವನಿಗೆ ಗಂಭೀರ ಗಾಯ: ಆಸ್ಪತ್ರೆಗೆ ದಾಖಲು
– ತಕ್ಷಣಕ್ಕೆ ಅಗ್ನಿ ಶಾಮಕ ದಳ, ಕೆಇಬಿ ಸೇವೆ

NAMMUR EXPRESS NEWS
ತೀರ್ಥಹಳ್ಳಿ: ಕೊಪ್ಪ ಸರ್ಕಲ್ ವಿಠಲ ಗ್ಯಾರೇಜ್ ಅಲ್ಲಿ ಗ್ಯಾಸ್ ಸ್ಫೋಟಗೊಂಡು ಓರ್ವ ಗಂಭೀರ ಗಾಯಗೊಂಡ ಘಟನೆ ತೀರ್ಥಹಳ್ಳಿಯಲ್ಲಿ ಗುರುವಾರ ನಡೆದಿದೆ. ವಿಠಲ್ ಎಂಬುವವರು ಗಂಭೀರ ಗಾಯಗೊಂಡಿದ್ದು ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ಆರಿಸಿದರು. ಕಾರಿನಲ್ಲಿ ಎಲೆಕ್ಟ್ರಿಕಲ್ ಶಾರ್ಟ್ ಸರ್ಕ್ಯುಟ್ ಆಗಿ ಕಾರು ಸಂಪೂರ್ಣ ಸುಟ್ಟು ಹೋಗಿದೆ. ಓರ್ವ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇಡೀ ಗ್ಯಾರೇಜ್ ಸುಟ್ಟು ಹೋಗಿದೆ.

ಅಗ್ನಿ ಶಾಮಕ ದಳ, ಕೆಇಬಿ ಸೇವೆ

ಘಟನೆ ನಡೆಯುತ್ತಿದ್ದಂತೆ ತೀರ್ಥಹಳ್ಳಿ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ಆರಿಸಿ ಆಗುವ ಅಪಾಯ ತಪ್ಪಿಸಿದ್ದಾರೆ. ಕೆಇಬಿ ಸಿಬ್ಬಂದಿ ಕೂಡ ಸ್ಥಳದಲ್ಲಿದ್ದು ಸಹಕಾರ ಮಾಡಿದ್ದಾರೆ.

Categories
ರಾಜ್ಯ

ಟಾಪ್ 3 ನ್ಯೂಸ್ ಕರ್ನಾಟಕ

ಟಾಪ್ 3 ನ್ಯೂಸ್ ಕರ್ನಾಟಕ
ಸಿದ್ದರಾಮಯ್ಯ ವಿರುದ್ಧ ನಕಲಿ ಪೋಸ್ಟ್..!
– 7 ಜನರ ವಿರುದ್ಧ ಎಫ್‌ಐಆರ್‌ ದಾಖಲು
– ಯುಗಾದಿ ಹಬ್ಬಕ್ಕೆ ಬೈಕ್ ತೊಳೆದ ವ್ಯಕ್ತಿ..!
– ರಾಜ್ಯದಲ್ಲಿ ಬೇಸಿಗೆ ಬವಣೆ: 3 ದಿನದಲ್ಲೇ 5 ಕಾಡಾನೆ ಸಾವು

NAMMUR EXPRESS NEWS
ಬೆಂಗಳೂರು: ಲೋಕಸಭಾ ಚುನಾವಣೆ ಶುರುವಾಗುತ್ತಿದ್ದಂತೆ ಒಂದಲ್ಲಾ ಒಂದು ರೀತಿಯ ಘಟನೆಗಳು ನಡೆಯುತ್ತಲೆ ಇವೆ. ಇದೀಗ ಸಿಎಂ ಸಿದ್ದರಾಮಯ್ಯ ಹೇಳಿರುವಂತೆ ನಕಲಿ ಪೋಸ್ಟ್ ವೈರಲ್ ಆಗಿದೆ. ಈ ಸಂಬಂಧ 7 ಜನರ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ. ಹಿಂದುಗಳ ವೋಟ್ ಅವಶ್ಯಕತೆ ಇಲ್ಲ ನಮಗೆ ಮುಸ್ಲಿಮರ ಓಟು ಸಾಕು ಎಂದು ನಕಲಿ ಪೋಸ್ಟ್ ವೈರಲ್ ಆಗಿದ್ದು ಅದನ್ನು ಪತ್ರಿಕೆಯಲ್ಲಿ ವರದಿ ಬಂದಂತೆ ಕ್ರಿಯೇಟ್ ಮಾಡಿ ಪೋಸ್ಟ್‌ ಮಾಡಿದ್ದಾರೆ.ಇದನ್ನು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಬಿಂಬಿಸುವ ರೀತಿಯಲ್ಲಿ ಕ್ರೀಯೇಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.ಇದೀಗ ಕಾಂಗ್ರೆಸ್ ಕಾನೂನು ಘಟಕದ ಹರೀಶ್ ನಾಗರಾಜು ಅವರಿಂದ ದೂರು ನೀಡಲಾಗಿದೆ.

– ಯುಗಾದಿ ಹಬ್ಬಕ್ಕೆ ಬೈಕ್ ತೊಳೆದ ವ್ಯಕ್ತಿ..!

ಬೆಂಗಳೂರಲ್ಲಿ ಹನಿ ನೀರಿಗೂ ಜನ ಪರದಾಡುತ್ತಿದ್ದಾರೆ. ಇದರ ಮಧ್ಯ ಬಿಸಿಲಿನ ತಾಪಕ್ಕೆ ಜನ ರೋಸಿ ಹೋಗಿದ್ದಾರೆ. ಅಲ್ಲದೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾವೇರಿ ನೀರನ್ನು ಕುಡಿಯಲು ಬಿಟ್ಟು ಅನ್ಯಬಳಕೆ ಮಾಡದಂತೆ ಆದೇಶ ಹೊರಡಿಸಿತ್ತು. ಆದರೆ ಇಲ್ಲೊಬ್ಬ ವ್ಯಕ್ತಿ ಯುಗಾದಿ ಹಬ್ಬಕ್ಕೆಂದು ಬೈಕ್ ತೊಳೆದಿದ್ದರಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಿಬ್ಬಂದಿ 5,000 ರೂ. ದಂಡ ವಿಧಿಸಿದ್ದಾರೆ. ಒಂದು ತಿಂಗಳಿಂದ ಕುಡಿಯುವ ನೀರನ್ನು ಅನ್ಯ ಬಳಕೆಗೆ ಉಪಯೋಗಿಸುತ್ತಿರುವ ಜನರಿಗೆ ಜಲಮಂಡಳಿ ಅಧಿಕಾರಿಗಳು ದಂಡ ಹಾಕುತ್ತಿದ್ದಾರೆ. ಇದುವರೆಗೂ ಬರೋಬ್ಬರಿ 365 ಜನರಿಗೆ ದಂಡ ಹಾಕಲಾಗಿದೆ. ಈ ಪೈಕಿ 362 ಜನರಿಂದ ಬರೋಬ್ಬರಿ 19 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.

ರಾಜ್ಯದಲ್ಲಿ ಬೇಸಿಗೆ ಬವಣೆ: 3 ದಿನದಲ್ಲೇ 5 ಕಾಡಾನೆ ಸಾವು

ಈ ಬಾರಿ ಬಿಸಿಲಿನ ಬೇಗೆ ಮನುಷ್ಯನಿಗೆ ಮಾತ್ರ ತಟ್ಟಿಲ್ಲ. ವನ್ಯಜೀವಿಗಳ ಮೇಲೂ ಪ್ರಭಾವ ಬೀರಿದೆ. ಅದರಲ್ಲೂ ಕಾಡಾನೆಗಳು ಅರಣ್ಯದಲ್ಲಿ ಬಿಸಿಲ ಕಾರಣಕ್ಕೆ ಸಾಯುತ್ತಿದೆ. ಮೂರು ದಿನದ ಅಂತರದಲ್ಲೇ ಐದು ಆನೆಗಳು ಜೀವ ಬಿಟ್ಟಿರುವುದು ಬಿಸಿಲ ಪರಿಣಾಮವನ್ನು ತೋರುತ್ತಿದೆ. ರಾಮನಗರ, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಕಾಡಾನೆಗಳು ಮೃತಪಟ್ಟಿದ್ದು. ಅರಣ್ಯ ಇಲಾಖೆ ಎಚ್ಚರಿಕೆ ವಹಿಸಿದೆ. ಕೆಲವು ಆನೆಗಳು ನೀರಿನ ಕೊರತೆಯಿಂದ ಮೃತಪಟ್ಟರೆ, ಆಹಾರದಲ್ಲಿ ವ್ಯತ್ಯಯವಾಗಿ ಅನಾರೋಗ್ಯದಿಂದ ಎರಡು ಆನೆಗಳು ಮೃತಪಟ್ಟಿರುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕರ್ನಾಟಕದ ತಮಿಳುನಾಡು ಗಡಿಯಲ್ಲಿರುವ ಕಾವೇರಿ ವನ್ಯಜೀವಿ ಧಾಮದ ಗೋಪಿನಾಥಂನ ಕಾವೇರಿ ನದಿ ತೀರದಲ್ಲಿ ಭಾರೀ ಗಾತ್ರದ ಆನೆ ಮೃತಪಟ್ಟಿದೆ. ಅಲ್ಲಿಯೇ ಬಿದ್ದು ಮೂರು ದಿನಗಳಾಗಿದ್ದು ದೇಹದ ಭಾಗವನ್ನು ಮೀನುಗಳು ತಿಂದಿವೆ. ನೀರು ಕುಡಿಯಲೆಂದು ಆನೆ ಕಾವೇರಿ ನದಿಗೆ ಬಂದಾಗ ಜಾರಿ ಬಿದ್ದಿದೆ. ಮತ್ತೆ ಮೇಲೆ ಏಳಲು ಆನೆಗೆ ಆಗಿಲ್ಲ.

ಮಾವು ತಿಂದು ಸಾವು: ಬೇಸಿಗೆ ಕಾರಣಕ್ಕೆ ದೂರದಿಂದ ಆನೆ ನೀರು ಕುಡಿಯಲು ಬಂದಾಗ ಬಿದ್ದು ಮೃತಪಟ್ಟಿರುವ ಅನುಮಾನಗಳಿವೆ. ಆನೆಯ ದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ದೇಹದ ಭಾಗವನ್ನು ವಿಧಿವಿಜ್ಞಾನ ಪ್ರಯೋಗಾಲಕ್ಕೆ ರವಾನಿಸಲಾಗಿದ್ದು. ವರದಿ ಬಂದ ನಂತರ ಆನೆಯ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಕಾವೇರಿ ವನ್ಯಧಾಮದ ಡಿಸಿಎಫ್‌ ಸುರೇಂದ್ರ ಹೇಳುತ್ತಾರೆ.

Categories
ಮಂಗಳೂರು ರಾಜಕೀಯ

ಮಂಗಳೂರಿಗೆ ಏ.14ರಂದು ಮೋದಿ ಆಗಮನ

ಮಂಗಳೂರಿಗೆ ಏ.14ರಂದು ಮೋದಿ ಆಗಮನ
– ನಗರದ ಹೃದಯಭಾಗದಲ್ಲಿ ಸಂಜೆ 5ರಿಂದ ರೋಡ್‌ಶೋ
– ಕೂಳೂರಿನ ಬೃಹತ್‌ ಸಮಾವೇಶ ಕೊನೆಯ ಕ್ಷಣದಲ್ಲಿ ರದ್ದು

NAMMUR EXPRESS NEWS
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಏ.14ರಂದು ಮಂಗಳೂರಿಗೆ ಆಗಮಿಸುವುದು ಖಚಿತಗೊಂಡಿದ್ದು, ಅವರು ಆ ದಿನ ನಗರದ ಪ್ರಮುಖ ರಸ್ತೆಗಳಲ್ಲಿ ರೋಡ್‌ಶೋ ಮಾಡಲಿದ್ದಾರೆ. ಆದರೆ, ಈ ಮೊದಲು ಕೂಳೂರಿನ ಗೋಲ್ಡ್‌ಪಿಂಚ್‌ ಮೈದಾನದಲ್ಲಿ ನಿಗದಿಯಾಗಿದ್ದ ಬೃಹತ್‌ ಸಮಾವೇಶ ತಾಂತ್ರಿಕ ಕಾರಣಗಳಿಂದಾಗಿ ರದ್ದುಗೊಂಡಿದೆ. ದಕ್ಷಿಣ ಕನ್ನಡದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಅವರು ಪ್ರಧಾನಿ ಮೋದಿ ಅವರ ರೋಡ್‌ ಶೋ ಬಗ್ಗೆ ಮಾಹಿತಿ ನೀಡಿದ್ದಾರೆ. ಅದರಂತೆ, ಮೋದಿ ಅವರು ಏ.14ರಂದು ಸಂಜೆ 5 ಗಂಟೆಗೆ ನಗರದ ನಾರಾಯಣ ಗುರು ಸರ್ಕಲ್‌ನಿಂದ ಲಾಲ್‌ಬಾಗ್‌, ಪಿವಿಎಸ್‌ ವೃತ್ತದ ಮೂಲಕ ನವಭಾರತ ಸರ್ಕಲ್‌ ಮಾರ್ಗವಾಗಿ ಹಂಪನಕಟ್ಟೆವರೆಗೆ ರೋಡ್‌ ಶೋ ನಡೆಸಲಿದ್ದಾರೆ. ಅಂದು ಸಂಜೆ 5ಕ್ಕೆ ಮೋದಿ ಅವರು ನಾರಾಯಣ ಗುರು ಸರ್ಕಲ್‌ನಲ್ಲಿ ನಾರಾಯಣ ಗುರು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ತೆರೆದ ವಾಹನದಲ್ಲಿ ರೋಡ್‌ ಶೋ ಆರಂಭಿಸಲಿದ್ದಾರೆ ಎಂದು ಕುಂಪಲ ತಿಳಿಸಿದ್ದಾರೆ.

ಅದರಂತೆ ಎರಡೂವರೆ ಕಿಮೀ. ದೂರಕ್ಕೆ ರೋಡ್‌ಶೋ ನಡೆಸುವಂತೆ ನಾವು ಬಿಜೆಪಿ ಸಮಿತಿಗೆ ಅಹವಾಲು ಕಳುಹಿಸಲಾಗಿದೆ. ಇನ್ನು ಎಸ್‌ಜಿಪಿ ಭದ್ರತಾ ವಿಭಾಗವು ಈ ರಸ್ತೆಗಳಲ್ಲಿನ ಸುರಕ್ಷತಾ ವ್ಯವಸ್ಥೆಗಳನ್ನು ಪರಿಶೀಲಿಸಿದ ನಂತರ ಎಷ್ಟು ದೂರದವರೆಗೆ ರೋಡ್‌ ಶೋ ನಡೆಸಬಹುದೆಂಬುದರ ಬಗ್ಗೆ ನಿರ್ಧರಿಸಲಿದ್ದಾರೆ. ಇನ್ನು ಲಾಲ್‌ಬಾಗ್‌, ಬಳ್ಳಾಲ್‌ಬಾಗ್‌ ರಸ್ತೆಯಲ್ಲಿ ರೋಡ್‌ಶೋ ಮಾಡಿದರೆ ಅತಿಹೆಚ್ಚು ಸಂಖ್ಯೆಯಲ್ಲಿ ಜನರನ್ನು ರಸ್ತೆಯ ಎರಡೂ ಬದಿಗಳಲ್ಲಿ ಸೇರಿಸುವುದಕ್ಕೆ ಅವಕಾಶ ದೊರೆಯಲಿದ್ದು, ಬಿಜೆಪಿ ಕೂಡ ದೊಡ್ಡ ಮಟ್ಟದಲ್ಲಿ ಜನಸ್ತೋಮವನ್ನು ಸೇರಿಸುವುದಕ್ಕೆ ಪ್ಲ್ಯಾನ್‌ ಮಾಡಿದೆ. ಆ ಮೂಲಕ ಮಂಗಳೂರು ನಗರದ ಹೃದಯ ಭಾಗದಲ್ಲಿ ಪ್ರಧಾನಿ ಮೋದಿ ಅವರು ಮೊದಲ ಬಾರಿಗೆ ಈ ರೀತಿಯ ರೋಡ್‌ಶೋ ಮಾಡಲಿದ್ದಾರೆ.

ಇದಕ್ಕೂ ಮೊದಲು ಮಂಗಳೂರು ನಗರದ ಹೊರ ವಲಯದಲ್ಲಿರುವ ಕೂಳೂರಿನ ಗೋಲ್ಡ್‌ ಪಿಂಚ್‌ ಮೈದಾನದಲ್ಲಿ ಬೃಹತ್‌ ಸಮಾವೇಶ ಆಯೋಜಿಸುವ ಮೂಲಕ ಬಹಿರಂಗ ಸಭೆಯಲ್ಲಿ ಮೋದಿ ಭಾಗವಹಿಸುತ್ತಾರೆ ಎಂದು ಹೇಳಲಾಗಿತ್ತು. ಇದಕ್ಕೆ ಬೇಕಾದಷ್ಟು ಪೂರ್ವ ತಯಾರಿ ಕೂಡ ನಡೆಸಲಾಗಿದ್ದು, ಬುಧವಾರ ಚಪ್ಪರ ಪೂಜೆಯನ್ನು ಕೂಡ ಮಾಡಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ತಾಂತ್ರಿಕ ಕಾರಣಗಳಿಂದ ಸಮಾವೇಶ ರದ್ದುಗೊಂಡಿದ್ದು, ಮೋದಿ ಅವರು ಕೇವಲ ರೋ ಶೋ ಮಾತ್ರ ಮಾಡಲಿದ್ದಾರೆ.

Categories
ಬೆಂಗಳೂರು ರಾಜ್ಯ ಶಿಕ್ಷಣ

ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆ

ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆ
– ಶೇ.18.85% ವಿದ್ಯಾರ್ಥಿಗಳು ಫೇಲ್: ಪರೀಕ್ಷೆ ಬರೆಯಲು ಅವಕಾಶ
– ಏನೇನು ಮಾಡಬೇಕು..ಇಲ್ಲಿದೆ ಡೀಟೇಲ್ಸ್

NAMMUR EXPRESS NEWS
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮಾರ್ಚ್ ನಲ್ಲಿ ನಡೆಸಿದ್ದ 2023-24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದೆ. ಈ ಬಾರಿ ದ್ವಿತೀಯ ಪಿಯುಸಿ 81.15% ಫಲಿತಾಂಶ ಬಂದಿದೆ. ಅಂದರೆ ಈ ಬಾರಿ 18.85% ವಿದ್ಯಾರ್ಥಿಗಳು ಫೇಲ್‌ ಆಗಿದ್ದಾರೆ. ಪರೀಕ್ಷೆಗೆ ಹಾಜರಾದ 6,98,378 ವಿದ್ಯಾರ್ಥಿಗಳಲ್ಲಿ 5,52690 ವಿದ್ಯಾರ್ಥಿಗಳು ಪಾಸ್‌ ಆಗಿದ್ದು, 1,45,688 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.
ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅವಕಾಶ ನೀಡುತ್ತಿದೆ. ಅದಕ್ಕಾಗಿ 1 ವಾರಗಳ ಕಾಲಾವಕಾಶ ನೀಡಿದೆ. ಮರು ಪರೀಕ್ಷೆಗೆ ಹೆಸರು ನೋಂದಾವಣೆ ಮಾಡಲು ಇಂದಿನಿಂದಲೇ ಕಾಲಾವಕಾಶ ನೀಡಲಾಗಿದೆ.

ಏಪ್ರಿಲ್‌ 10 ರಿಂದ ಎಪ್ರಿಲ್‌ 16ರವೆಗೆ 1 ವಾರಗಳ ಕಾಲ ಹೆಸರು ನೋಂದಣಿಗೆ ಅವಕಾಶ ನೀಡಿದ್ದು, ಅನುತ್ತೀರ್ಣರಾದ ವಿದ್ಯಾರ್ಥಿಗಳು ಮರು ಪರೀಕ್ಷೆ ಬರೆಯಲು ಇಚ್ಚಿಸಿದಲ್ಲಿ ಕಾಲೇಜು ಅಥವಾ ಪರೀಕ್ಷಾ ಮಂಡಳಿಯ ಅಧಿಕೃತ ಪೋರ್ಟಲ್‌ https://karresults.nic.in/ ನಲ್ಲಿ ಹೆಸರು ನೋಂದಾವಣೆ ಮಾಡಬಹುದು. ಪೂರಕ ಪರೀಕ್ಷೆ 1 ವಿಷಯಕ್ಕೆ 140 ರೂ. ಎರಡು ವಿಷಯಗಳಿಗೆ 270 ರೂ ಮತ್ತು 3 ಮತ್ತು ಅದಕ್ಕಿಂತ ಹೆಚ್ಚಿನ ವಿಷಯಗಳಿಗೆ 400 ರೂ ಶುಲ್ಕ ಪಾವತಿಸಬೇಕು (ಪ.ಜಾತಿ ಮತ್ತು ಪ.ಪಂಗಡ ವಿದ್ಯಾರ್ಥಿಗಳನ್ನು ಹೊರತುಪಡಿಸಿ). ಇನ್ನು ಇಂದಿನ ಫಲಿತಾಂಶದ ಬಗ್ಗೆ ರೀ ವಾಲ್ಯೂವೇಷನ್ (ಮರು ಮೌಲ್ಯಮಾಪನ)ಗೆ ಅರ್ಜಿ ಸಲ್ಲಿಸಲು ಇಚ್ಚಿಸುವವರು ಪ್ರತೀ ವಿಷಯಕ್ಕೆ 175 ರೂ ನಂತೆ ಶುಲ್ಕ ಪಾವತಿ ಮಾಡಬೇಕು ಎಂದು ಮಂಡಳಿ ತಿಳಿಸಿದೆ.

2023ರಲ್ಲಿ ಅಥವಾ ಅದಕ್ಕೂ ಮತ್ತು ಅನುತೀರ್ಣರಾದ ವಿದ್ಯಾರ್ಥಿಗಳಿದ್ದರೆ 2024ರಲ್ಲಿ ಮರು ಪರೀಕ್ಷೆ ಬರೆಯಲು ಇಚ್ಚಿಸಿದಲ್ಲಿ ಎಂಸಿಎ ಆಧಾರದಲ್ಲಿ ಅಂದರೆ ಅಂಕಪಟ್ಟಿ ಸಹಿತ ಹೆಸರು ನೋಂದಾವಣೆ ಮಾಡಬೇಕು.

Categories
ಶಿಕ್ಷಣ

ಎಸ್‌ಎಸ್‌ಎಲ್ ಸಿ: ಮೇ ಮೊದಲ ವಾರ ಫಲಿತಾಂಶ!

ಎಸ್‌ಎಸ್‌ಎಲ್ ಸಿ: ಮೇ ಮೊದಲ ವಾರ ಫಲಿತಾಂಶ!
– ಏಪ್ರಿಲ್ ಕೊನೆ ವಾರ ಘೋಷಣೆ ಆಗಬಹುದು
– ಪರೀಕ್ಷೆ ಬರೆದ ಮಕ್ಕಳ ಮೊಗದಲ್ಲಿ ಕುತೂಹಲ

NAMMUR EXPRESS NEWS
ಬೆಂಗಳೂರು : ಏಪ್ರಿಲ್ ಕೊನೆ ವಾರ ಅಥವಾ ಮೇ ಮೊದಲ ವಾರ ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಪ್ರಕಟಿಸಲಾಗುವುದು. ಏಪ್ರಿಲ್ 15ರಿಂದ ಮೌಲ್ಯಮಾಪನ ಕಾರ್ಯ ಆರಂಭವಾಗಲಿದ್ದು, ಸುಮಾರು 20 ದಿನಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಆದಷ್ಟು ಬೇಗನೆ ಮೌಲ್ಯಮಾಪನ ಕಾರ್ಯ ಪೂರ್ಣಗೊಳಿಸಲಿದ್ದು, ಏಪ್ರಿಲ್ ಕೊನೆಯ ವಾರ ಅಥವಾ ಮೇ ಮೊದಲ ವಾರದಲ್ಲಿ ವಿದ್ಯಾರ್ಥಿಗಳು ಫಲಿತಾಂಶ ಪ್ರಕಟಿಸಲಾಗುವುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರಾದ ಮಂಜುಳಾ ತಿಳಿಸಿದ್ದಾರೆ.

Categories
ತೀರ್ಥಹಳ್ಳಿ ಶಿಕ್ಷಣ

ತೀರ್ಥಹಳ್ಳಿ ಸಹ್ಯಾದ್ರಿ ಕಾಲೇಜು ಸಾಧನೆ

ತೀರ್ಥಹಳ್ಳಿ ಸಹ್ಯಾದ್ರಿ ಕಾಲೇಜು ಸಾಧನೆ
– ದ್ವಿತೀಯ ಪಿ.ಯು.ಸಿ. ಫಲಿತಾಂಶದಲ್ಲಿ ರಾಜ್ಯಕ್ಕೆ 4ನೇ ಮತ್ತು 8ನೇ ರ್‍ಯಾಂಕ್ ಪಡೆದು ಶೇ.100 ಫಲಿತಾಂಶ
– ವಿಜ್ಞಾನ ವಿಭಾಗದಲ್ಲಿ ಗಣೇಶ್ 600ಕ್ಕೆ 580 ಅಂಕ ಸಾಧನೆ
– ತೀರ್ಥಹಳ್ಳಿ ತಾಲ್ಲೂಕಿನಲ್ಲಿಯೇ ಮತ್ತೊಮ್ಮೆ ಮೇಲುಗೈ

NAMMUR EXPRESS NEWS
ತೀರ್ಥಹಳ್ಳಿ: 2023-24ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಪಟ್ಟಣದ ಹೃದಯ ಭಾಗದಲ್ಲಿರುವ ಸಹ್ಯಾದ್ರಿ ಸಂಯುಕ್ತ ಪದವಿ ಪೂರ್ವ ಕಾಲೇಜು, ವಾಣಿಜ್ಯ ಹಾಗೂ ವಿಜ್ಞಾನ ಎರಡೂ ವಿಭಾಗದಲ್ಲಿ ಶೇಕಡಾ 100% ಫಲಿತಾಂಶ ಪಡೆದಿರುತ್ತದೆ.

32 ವಿದ್ಯಾರ್ಥಿಗಳು ಅತ್ಯುನ್ನತ-ದರ್ಜೆ!

ತೀರ್ಥಹಳ್ಳಿ ಸಹ್ಯಾದ್ರಿ ಸಂಯುಕ್ತ ಪದವಿ ಪೂರ್ವ ಕಾಲೇಜಲ್ಲಿ ಪರೀಕ್ಷೆ ಬರೆದ 76 ವಿದ್ಯಾರ್ಥಿಗಳಲ್ಲಿ 32 ವಿದ್ಯಾರ್ಥಿಗಳು ಅತ್ಯುನ್ನತ-ದರ್ಜೆ ಹಾಗೂ 44 ವಿದ್ಯಾರ್ಥಿಗಳು ಪ್ರಥಮ ದರ್ಜೆಯನ್ನು ಪಡೆಯುವುದರೊಂದಿಗೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿಯೇ ಗುಣಾತ್ಮಕ ಫಲಿತಾಂಶವನ್ನು ಪಡೆದಿದೆ.

ಪ್ರೀತು ಹೆಚ್.ಎಮ್, ಸಾನಿಯಾ ಎಸ್, ಗಣೇಶ್ ಸಾಧನೆ

ವಾಣಿಜ್ಯ ವಿಭಾಗದ ಪ್ರೀತು ಹೆಚ್.ಎಮ್ 600ಕ್ಕೆ 593 ಮತ್ತು ಸಾನಿಯಾ ಎಸ್. 600ಕ್ಕೆ 589 ಅಂಕಗಳನ್ನು ಪಡೆಯುವ ಮೂಲಕ ಕ್ರಮವಾಗಿ ರಾಜ್ಯಕ್ಕೆ 4ನೇ ಮತ್ತು 8ನೇ ರ್‍ಯಾಂಕ್ ಅನ್ನು ಗಳಿಸಿ ಶಿಕ್ಷಣ ಸಂಸ್ಥೆಗೆ ಹೆಮ್ಮೆಯನ್ನು ತಂದಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ ಗಣೇಶ್ 600ಕ್ಕೆ 580 ಅಂಕಗಳನ್ನು ಪಡೆಯುವ ಮೂಲಕ ಟಾಪರ್ ಆಗಿ ಹೊರಹೊಮ್ಮಿರುತ್ತಾರೆ. ಈ ಮೂಲಕ ಶಿವಮೊಗ್ಗ ಜಿಲ್ಲೆಗೆ, ತೀರ್ಥಹಳ್ಳಿ ತಾಲ್ಲೂಕಿಗೆ ಹಾಗೂ ಶಿಕ್ಷಣ ಸಂಸ್ಥೆಗೆ ಮತ್ತು ಪೋಷಕರಿಗೆ ಕೀರ್ತಿಯನ್ನು ತಂದಿರುವ ಈ ರಾಜ್ಯ ಮಟ್ಟದ ಸಾಧಕ ವಿದ್ಯಾರ್ಥಿಗಳನ್ನು ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರು, ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಬೋಧಕೇತರ ವರ್ಗದವರು ಹಾರ್ದಿಕವಾಗಿ ಅಭಿನಂದಿಸಿ ಶುಭಹಾರೈಸಿರುತ್ತಾರೆ.