Categories
ರಾಜ್ಯ

ಸಂಭ್ರಮದ ಯುಗಾದಿ ಆಚರಣೆ..!

ಸಂಭ್ರಮದ ಯುಗಾದಿ ಆಚರಣೆ..!
– ದೇವಸ್ಥಾನಗಲ್ಲಿ ವಿಶೇಷ ಪೂಜೆ: ಮನೆ ಮನೆಯಲ್ಲೂ ಸಂಭ್ರಮ
– ಮಾವಿನೆಲೆಯ ತೋರಣದಿಂದ ಸಿಂಗಾರಗೊಂಡ ಮನೆಗಳು

NAMMUR EXPRESS NEWS
ರಾಜ್ಯಾದ್ಯಂತ ಮಂಗಳವಾರ ಶ್ರದ್ಧೆಯಿಂದ ಯುಗಾದಿ ಆಚರಣೆ ನಡೆಯಿತು. ಜನರು ಹೊಸ ವರ್ಷವನ್ನು ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಿದರು, ಉಳಿದ ವರ್ಷವು ಉತ್ತಮವಾಗಲಿ ಎಂದು ಹಾರೈಸಿದರು. ಮುಂಜಾನೆಯಿಂದಲೇ ಜನರು ತಮ್ಮ ಮನೆಗಳನ್ನು ಮಾವಿನ ಎಲೆಗಳು ಮತ್ತು ಹೂವುಗಳಿಂದ ಅಲಂಕರಿಸಿ ವಿಶೇಷ ಪೂಜೆ ಮಾಡಿ ಹೊಸ ಬಟ್ಟೆ ಧರಿಸಿ ವಿವಿಧ ಬಗೆಯ ಅಡುಗೆ ಮಾಡಿ ಊಟ ಮಾಡುವ ಮೂಲಕ ಶುಭ ದಿನವನ್ನು ಆಚರಿಸಿದರು. ಜೀವನವು ಸಂತೋಷ ಹಾಗೂ ದುಃಖದ ಮಿಶ್ರಣವಾಗಿದೆ ಎಂದು ಸೂಚಿಸುವ ಬೇವು ಬೆಲ್ಲವನ್ನು ಸಮನಾಗಿ ಸ್ವೀಕರಿಸಿ ಸಂಭ್ರಮಿಸಿದರು. ತಮ್ಮ ಅಕ್ಕ ಪಕ್ಕದ ಮನೆಗಳಿಗೆ ಹಂಚಿದರು.

ಇನ್ನು ದೇವಾಲಯಗಳು ಬೆಳಗಿನಿಂದಲೇ ವಿಶೇಷ ಪೂಜೆ ಸಲ್ಲಿಸಿದ ಭಕ್ತರಿಂದ ತುಂಬಿ ತುಳುಕುತ್ತಿದ್ದವು. ದೇವಾಲಯಗಳಲ್ಲಿ ಬೆಳಗಿನಿಂದಲೆ ವಿಶೇಷ ಪೂಜೆಗಳನ್ನು ನಡೆಸಲಾಯಿತು.

ಬಸ್, ರೈಲು ರಶ್ ರಶ್!

ಯುಗಾದಿ ಹಬ್ಬಕ್ಕೆ ಊರಿಗೆ ಬಂದ ಜನ ಮರಳಿ ಬೆಂಗಳೂರು ಸೇರಿದಂತೆ ವಿವಿಧ ಕಡೆ ಪಯಣ ಬೆಳೆಸುವ ಕಾರಣ ಬಸ್, ರೈಲು, ಸರ್ಕಾರಿ ಬಸ್ ಫುಲ್ ರಶ್ ಆಗಿವೆ.

Categories
ಉಡುಪಿ ಮಂಗಳೂರು ರಾಜ್ಯ

ಕೇರಳದಲ್ಲಿ ಚಂದ್ರ ದರ್ಶನ: ಏ.10ರಂದು ರಂಜಾನ್ ಆಚರಣೆ

ಕೇರಳದಲ್ಲಿ ಚಂದ್ರ ದರ್ಶನ: ಏ.10ರಂದು ರಂಜಾನ್ ಆಚರಣೆ
– ಕರಾವಳಿಯಲ್ಲಿ ಏ.10ಕ್ಕೆ ಆಚರಣೆ
– ಏ.11ರಂದು ರಾಜ್ಯದ ಹಲವೆಡೆ ಆಚರಣೆ
– ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯಗಳು

NAMMUR EXPRESS NEWS
ಉಡುಪಿ/ಬೆಂಗಳೂರು: ಏ.9ರಂದು ಚಂದ್ರ ದರ್ಶನವಾಗಿದ್ದು, ಹೀಗಾಗಿ ಏ.10ರಂದು ಕರಾವಳಿಯಲ್ಲಿ ಹಾಗೂ ಏ.11ಕ್ಕೆ ಮಲೆನಾಡು, ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಈದ್-ಉಲ್-ಫಿತ್ರ್ (ರಂಜಾನ್) ಹಬ್ಬ ಆಚರಿಸಲಾಗುವುದು. ಕೇರಳದಲ್ಲಿ ಚಂದ್ರ ದರ್ಶನ ವಾಗಿದೆ ಹೀಗಾಗಿ ಏ.11ರಂದು ಆಚರಿಸಬೇಕಿದ್ದ ರಂಜಾನ್ ಹಬ್ಬ ಏ.10 ರಂದು ಆಚರಿಸಲಾಗುವುದು ಎಂದು ಉಡುಪಿ ಜಿಲ್ಲಾ ಸುನ್ನಿ ಸಂಯುಕ್ತ ಜಮಾಅತ್ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್‌ ಮಾಣಿ ಉಸ್ತಾದ್ ಘೋಷಿಸಿದ್ದಾರೆ.

Categories
ಶಿಕ್ಷಣ

ಏ.10ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ

ಏ.10ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ
– ಬೆಳಿಗ್ಗೆ 11 ಗಂಟೆಗೆ ಫಲಿತಾಂಶ ಪ್ರಕಟ
– ಆಲ್ ದಿ ಬೆಸ್ಟ್ ವಿದ್ಯಾರ್ಥಿಗಳೇ…!

NAMMUR EXPRESS NEWS
ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಏ.10ರಂದು 11 ಗಂಟೆಗೆ ಪ್ರಕಟಿಸುವುದಾಗಿ ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ. ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರು ಮಾಹಿತಿ ನೀಡಿದ್ದು, ಮಾರ್ಚ್ 2024ರ ದ್ವಿತೀಯ ಪಿಯುಸಿ ಪರೀಕ್ಷೆ- ನ್ನು ದಿನಾಂಕ:01/03/2024 ರಿಂದ 22/03/2024 ರವರೆಗೆ ನಡೆಸಲಾಯಿತು.ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಕ್ತಾಯವಾಗಿರುತ್ತದೆ. ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಿಸುವ ಸಂಬಂಧ ದಿನಾಂಕ: 10/04/2024 ರಂದು ಬೆಳಿಗ್ಗೆ 10:00 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯಲ್ಲಿ ಸುದ್ದಿಗೋಷ್ಠಿಯನ್ನು ಕರೆಯಲಾಗಿದೆ ಎಂದು ಹೇಳಿದ್ದಾರೆ.

ಫಲಿತಾಂಶ ನೋಡೋದು ಹೇಗೆ?

ಏಪ್ರಿಲ್ 10ರ ಬೆಳಿಗ್ಗೆ 10 ಗಂಟೆಗೆ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ಆ ಬಳಿಕ ವಿದ್ಯಾರ್ಥಿಗಳು ಫಲಿತಾಂಶವನ್ನು https://karresults.nic.in ದಿನಾಂಕ:10/04/2024ರ ಬೆಳಿಗ್ಗೆ 11:00 ಗಂಟೆಯ ನಂತರ ವೀಕ್ಷಿಸಬಹುದಾಗಿದೆ.

ಬೆಸ್ಟ್ ಆಫ್ ಲಕ್ ವಿದ್ಯಾರ್ಥಿಗಳೇ!

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೇ ಬೆಸ್ಟ್ ಆಫ್ ಲಕ್. ಫಲಿತಾಂಶ ಸಿಹಿ ಕಹಿ ಏನೇ ಇರಲಿ ಸಮಾನವಾಗಿ ಸ್ವೀಕರಿಸಿ.

Categories
ಅಡಿಕೆ-ದರ

ಅಡಿಕೆ ದರ ಎಷ್ಟಿದೆ? 09-04-2024

ಅಡಿಕೆ ದರ
09-04-2024
ಸರಕು 60009 80270
ಬೆಟ್ಟೆ 49009 53009
ರಾಶಿ 45009 49019
ಗೊರಬಲು 30009 33009
Nammur Express
Categories
ರಾಜ್ಯ

ನಾಡಿನೆಲ್ಲೆಡೆ ಯುಗಾದಿ ಸಂಭ್ರಮಾಚರಣೆ..!

ನಾಡಿನೆಲ್ಲೆಡೆ ಯುಗಾದಿ ಸಂಭ್ರಮಾಚರಣೆ..!
– ದೇವಾಲಯಗಳಲ್ಲಿ ವಿಶೇಷ ಪೂಜೆ

NAMMUR EXPRESS NEWS
ಹಿಂದೂ ಪಂಚಾಂಗದ ಪ್ರಕಾರ ಹೊಸ ವರ್ಷ ಯುಗಾದಿ. ಹೊಸ ಯುಗದ ಆದಿ ಯುಗಾದಿಯಾಗಿದೆ. ದಕ್ಷಿಣ ಭಾರತೀಯರಿಗೆ ಇಂದು ವಿಶೇಷ ಹಬ್ಬ. ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ ಮತ್ತು ಗೋವಾ ರಾಜ್ಯಗಳಲ್ಲಿ ಈ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಈ ದಿನವನ್ನು ಮಹಾರಾಷ್ಟ್ರ, ಮಧ್ಯಪ್ರದೇಶ, ಹಾಗೆಯೇ ಇನ್ನಿತರ ರಾಜ್ಯಗಳಲ್ಲಿ ಹಿಂದೂಗಳು ಹೊಸ ವರ್ಷವನ್ನು ಗುಡಿ ಪಾಡ್ವಾ ಎಂದು ಆಚರಿಸುತ್ತಾರೆ. ರಾಜ್ಯಾದ್ಯಂತ ದೇವಾಲಯಗಳಲ್ಲಿ ಪೂಜೆ-ಪುನಸ್ಕಾರಗಳು ಮುಂಜಾನೆಯಿಂದಲೇ ನಡೆಯುತ್ತಿದೆ. ಬೆಳಗ್ಗೆಯೇ ಎದ್ದು ಮನೆಯನ್ನು ಗುಡಿಸಿ ಒರೆಸಿ, ಪೂಜೆ ಪುನಸ್ಕಾರಗಳನ್ನು ಮುಗಿಸಿ ಜನ ದೇವರ ದರುಶನಕ್ಕೆ ಆಗಮಿಸಿದ್ದಾರೆ.

ಬೇಸಿಗೆಯ ಬಿರುಬಿಸಿಲು ಈ ಬಾರಿ ಜೋರಾಗಿಯೇ ಇದೆ. ಅದರ ಜೊತೆ ಮಾರುಕಟ್ಟೆಯಲ್ಲಿ ತರಕಾರಿ, ಹೂವು, ಹಣ್ಣು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಆದರೆ ಹಬ್ಬ ಆಚರಣೆಯಲ್ಲಿ ಜನರು ಹಿಂದೆ ಬಿದ್ದಿಲ್ಲ. ಸಾಮಾನ್ಯವಾಗಿ ಹಬ್ಬಗಳ ವೇಳೆ ಹೂವಿನ ಬೆಲೆ ಏರಿಕೆಯಾಗುತ್ತದೆ. ಈ ಬಾರಿಯೂ ಚೆಂಡು, ಗುಲಾಬಿ, ಬಟನ್ಸ್‌, ಸೇವಂತಿ ಬೆಲೆ ಸೇರಿದಂತೆ ಹಲವು ಬೆಲೆಗಳು ಏರಿಕೆಯಾಗಿವೆ. ಇದರ ಜೊತೆಗೆ ತರಕಾರಿ ಬೆಲೆಯೂ ಹೆಚ್ಚಾಗಿದ್ದು, ಮಧ್ಯಮ ವರ್ಗದ ಜನರಿಗೆ ಹೊಡೆತ ಬಿದ್ದಿದೆ.

Categories
ಕರಾವಳಿ

ಕರಾವಳಿ ನ್ಯೂಸ್

ಬೆಂಕಿ ಬಿದ್ದು ರಸ್ತೆ ಮಧ್ಯೆ ಉರಿದ ಡಸ್ಟರ್ ಕಾರು..!
– ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ
– ಪತ್ನಿಯನ್ನು ಕೊಲೆಗೈದ ಪತಿಗೆ ಜೀವಾವಧಿ ಶಿಕ್ಷೆ!

NAMMUR EXPRESS NEWS
ಡಸ್ಟರ್ ಕಾರೊಂದು ಆಕಸ್ಮಿಕವಾಗಿ ಉಂಟಾದ ಬೆಂಕಿಯಿಂದ ಹತ್ತಿ ಉರಿದ ಘಟನೆ ಬಂಟ್ವಾಳ – ಮೂಡುಬಿದಿರೆ ರಸ್ತೆಯ ಕುದ್ಕೋಳಿ ಸಮೀಪ ಸೋಮವಾರ ಬೆಳಗ್ಗೆ ಸಂಭವಿಸಿದೆ. ಏಳಿಂಜೆಯ ಕೊಲ್ಲೆಟ್ಟು ನಿವಾಸಿ ಶರತ್ ಶೆಟ್ಟಿ ಎಂಬವರಿಗೆ ಸೇರಿದ ಕಾರು ಇದಾಗಿದ್ದು, ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ. ಕಾರಿನಲ್ಲಿ ಮಗು ಸೇರಿದಂತೆ ನಾಲ್ಕು ಮಂದಿ ಇದ್ದರು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದವರು ತಕ್ಷಣ ಇಳಿದಿದ್ದು, ಯಾರಿಗೂ ಗಾಯಗಳಾಗಿಲ್ಲ .
ಸ್ಥಳೀಯರು ಹಾಗೂ ಬಂಟ್ವಾಳ ಅಗ್ನಿಶಾಮಕ ದಳದವರು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕಾರ್ಯ ನಿರ್ವಹಿಸಿದ್ದಾರೆ. ಆದರೆ ಕಾರು ಸಂಪೂರ್ಣ ಹೊತ್ತಿ ಉರಿದಿದೆ. ಘಟನೆಯಿಂದ ಸುಮಾರು ಒಂದು ತಾಸುಗಳ ಕಾಲ ಬಂಟ್ವಾಳ – ಮೂಡುಬಿದಿರೆ ರಸ್ತೆ ತಡೆ ಉಂಟಾಗಿತ್ತು ಎಂದು ತಿಳಿದುಬಂದಿದೆ. ಬೆಂಕಿ ಕಾಣಿಸಿಕೊಂಡ ವೇಳೆ ಕಾರು ಬ್ರೇಕ್ ಹಾಕಿದರೂ ನಿಲ್ಲದೇ ಇದ್ದು, ಬಳಿಕ ಚಾಲಕನ ಸಮಯ ಪ್ರಜ್ಞೆಯಿಂದ ಕಾರನ್ನು ನಿಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಪತ್ನಿಯನ್ನು ಕೊಲೆಗೈದ ಪತಿಗೆ ಜೀವಾವಧಿ ಶಿಕ್ಷೆ!

ಪತ್ನಿಯನ್ನು ಹತ್ಯೆಗೈದ ಆರೋಪಿ ಪತಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮೂಲತಃ ಹಾಸನ ಅರಕಲಗೂಡಿನ, ಕಾವೂರಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಗಣೇಶ್ ಕುಮಾರ್ (46) ಶಿಕ್ಷೆಗೊಳಗಾದ ಆರೋಪಿ. ನಾಲ್ಕು ವರ್ಷದ ಹಿಂದೆ ಈತ ಪತ್ನಿಯನ್ನು ಉಪಾಯದಿಂದ ಹೊರಕೆ ಕರೆದೊಯ್ದು ಕೊಲೆ ಮಾಡಿದ್ದ.

ಘಟನೆಯ ವಿವರ: ಕಾವೂರಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಈತ ತನ್ನ ಪತ್ನಿಗೆ ದಿನನಿತ್ಯ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದ ಎಂಬ ಆರೋಪವಿತ್ತು. 2020ರ ಜು.1ರಂದು ಸಂಜೆ ವೇಳೆ ಮನೆಗೆ ಸಾಮಾಗ್ರಿ ತರಲೆಂದು ಹೇಳಿ ಪತ್ನಿಯನ್ನು ಆರೋಪಿ ಗಣೇಶ್ ತನ್ನ ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದ. ರಾತ್ರಿ 7ರಿಂದ 7:20ರ ಮಧ್ಯೆ ಅಂತೋನಿಕಟ್ಟೆ ಎಂಬಲ್ಲಿರುವ ಕಪ್ಪು ಕಲ್ಲಿನ ಕೋರೆಯ ಮೇಲಿನಿಂದ ಪತ್ನಿಯ ಕುತ್ತಿಗೆ ಹಿಸುಕಿ ದೂಡಿ ಹಾಕಿ ಹತ್ಯೆ ಮಾಡಿದ್ದ. ಮಾತ್ರವಲ್ಲದೇ ಪತ್ನಿಯ ತಾಯಿಗೆ ಜೀವಬೆದರಿಕೆ ಹಾಕಿದ್ದ ಎಂದು ದೂರು ದಾಖಲಾಗಿತ್ತು.

ಪ್ರಕರಣದ ಬಗ್ಗೆ ಕಾವೂರು ಠಾಣೆಯ ಇನ್‌ಸ್ಪೆಕ್ಟರ್ ರಾಘವ ಎಸ್. ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಎಸ್.ವಿ. ವಿಚಾರಣೆ ನಡೆಸಿ ಆರೋಪಿಯ ಮೇಲಿನ ಆರೋಪ ಸಾಬೀತಾಗಿದ್ದರಿಂದ ಸೋಮವಾರ ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು 1 ಲ.ರೂ. ದಂಡ, ಭಾರತೀಯ ದಂಡ ಸಂಹಿತೆ ಕಲಂ 498 (ಎ)ರ ಅಪರಾಧಕ್ಕೆ 3 ವರ್ಷ ಕಠಿಣ ಶಿಕ್ಷೆ ಮತ್ತು 25,000 ರೂ. ದಂಡ, ಭಾರತೀಯ ದಂಡ ಸಂಹಿತೆ ಕಲಂ 506ರ ಅಪರಾಧಕ್ಕೆ 2 ವರ್ಷ ಕಠಿಣ ಶಿಕ್ಷೆ ಮತ್ತು 25,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ ಸಂತ್ರಸ್ತರಿಗೆ ಪರಿಹಾರ ನೀಡಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ.

Categories
ಕರಾವಳಿ ರಾಜಕೀಯ

ಲೋಕಸಭೆ ಅಖಾಡ: ಕರಾವಳಿ ಅಂತಿಮ ಕಣದ ಚಿತ್ರಣ ಏನಿದೆ…?

ಲೋಕಸಭೆ ಅಖಾಡ: ಕರಾವಳಿ ಅಂತಿಮ ಕಣದ ಚಿತ್ರಣ ಏನಿದೆ…?
– ದಕ್ಷಿಣಕನ್ನಡ ಕ್ಷೇತ್ರ, ಉಡುಪಿ -ಚಿಕ್ಕಮಗಳೂರು ಕಣದಲ್ಲಿ ಯಾರು ಯಾರು?
– ದಕ್ಷಿಣ ಕನ್ನಡದಲ್ಲಿ 9 ಮಂದಿ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ 10 ಮಂದಿ ಕಣದಲ್ಲಿ

NAMMUR EXPRESS NEWS
ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಬ್ಬ ಅಭ್ಯರ್ಥಿ ನಾಮಪತ್ರ ಹಿಂಪಡೆದಿದ್ದು, ಒಟ್ಟು ಒಂಬತ್ತು ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದ ಸತೀಶ್ ಬೂಡಮಕ್ಕಿ ನಾಮಪತ್ರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಇಂದು ನಾಮಪತ್ರವನ್ನು ಹಿಂಪಡೆದಿದ್ದಾರೆ. ಕ್ಷೇತ್ರದಿಂದ ಸ್ಪರ್ಧಿಸಲು 11 ಅಭ್ಯರ್ಥಿಗಳು 21 ನಾಮಪತ್ರ ಸಲ್ಲಿಸಿದ್ದರು. . ಪಕ್ಷೇತರ ಅಭ್ಯರ್ಥಿಗಳ ಪೈಕಿ ಫ್ರಾನ್ಸಿಸ್ ಲ್ಯಾನ್ಸ್ ಮಾಡ್ತಾ ಅವರ ನಾಮಪತ್ರ ತಿರಸ್ಕೃತಗೊಂಡಿತ್ತು.ಇದರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ತಲಾ 4 ಸೆಟ್ ನಾಮಪತ್ರ ಸಲ್ಲಿಸಿದ್ದು, ಇವೆಲ್ಲವೂ ಕ್ರಮಬದ್ಧವಾಗಿದೆ. ರಂಜಿನಿ ಎಂ , ಉತ್ತಮ ಪ್ರಜಾಕೀಯ ಪಕ್ಷದ ಕೆ.ಇ.ಮನೋಹರ, ಕರುನಾಡ ಸೇವಕ ಪಕ್ಷದ ದುರ್ಗಾ ಪ್ರಸಾದ್, ಪಕ್ಷೇತರರಾಗಿ ದೀಪಕ್ ರಾಜೇಶ್, ಕುವೆಲ್ಲೊ, ಮೆಕ್ಸಿಂ ಪಿಂಟೊ ಹಾಗೂ ಸುಪ್ರೀತ್ ಕುಮಾರ್ ಪೂಜಾರಿ ಕಣದಲ್ಲಿ ಇದ್ದಾರೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ 10 ಮಂದಿ ಕಣದಲ್ಲಿ!

ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಇಂದು ಯಾವೊಬ್ಬ ಅಭ್ಯರ್ಥಿಯೂ ನಾಮಪತ್ರ ಹಿಂಪಡೆದಿಲ್ಲ. ಹೀಗಾಗಿ 2024ರ ಲೋಕಸಭೆ ಚುನಾವಣೆಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ 10 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಜಯಪ್ರಕಾಶ ಹೆಗಡೆ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಕೆ.ಟಿ.ರಾಧಾಕೃಷ್ಣ, ಜನಹಿತ ಪಕ್ಷದ ಅಭ್ಯರ್ಥಿ ಸುಪ್ರೀತ್ ಕುಮಾರ್ ಪೂಜಾರಿ, ಕರುನಾಡ ಸೇವಕ ಪಕ್ಷದ ಅಭ್ಯರ್ಥಿ ಶಬರೀಶ್ ಆರ್. ಸಮಾಜ ಪಕ್ಷದ ಅಭ್ಯರ್ಥಿ ಎಂ.ಕೆ. ದಯಾನಂದ್, ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಸಚಿನ್ ಬಿಕೆ ಹಾಗೂ ಸ್ವತಂತ್ರ ಅಭ್ಯರ್ಥಿಗಳಾದ ಸುಧೀರ್ ಕಾಂಚನ್ ಮತ್ತು ವಿಜಯಕುಮಾರ್ ಕಣದಲ್ಲಿದ್ದಾರೆ.

Categories
ತೀರ್ಥಹಳ್ಳಿ ರಾಜಕೀಯ ರಾಜ್ಯ

ತೀರ್ಥಹಳ್ಳಿಯಲ್ಲಿ ರಾಷ್ಟ್ರಭಕ್ತರ ಬಳಗ ಹೆಸರಿನಲ್ಲಿ ಕೆ.ಎಸ್ ಈಶ್ವರಪ್ಪನವರಿಗೆ ಬೆಂಬಲ.!

ತೀರ್ಥಹಳ್ಳಿಯಲ್ಲಿ ರಾಷ್ಟ್ರಭಕ್ತರ ಬಳಗ ಹೆಸರಿನಲ್ಲಿ ಕೆ.ಎಸ್ ಈಶ್ವರಪ್ಪನವರಿಗೆ ಬೆಂಬಲ.!
– ವಿಜಯೇಂದ್ರ ಅವರದ್ದು ಕಾಂಗ್ರೆಸ್ ಪಕ್ಷದ ಛಾಯಾಚಿತ್ರ: ಮೇಲಿನಕೊಪ್ಪ ರಮೇಶ್

NAMMUR EXPREESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಸೋಮವಾರ ಅನ್ನಪೂರ್ಣ ಗ್ರಾಂಡ್ ಸಭಾಂಗಣದಲ್ಲಿ ರಾಷ್ಟ್ರಭಕ್ತರ ಬಳಗ ಎಂಬ ಹೆಸರಿನಲ್ಲಿ ಕೆ.ಎಸ್ ಈಶ್ವರಪ್ಪನವರಿಗೆ ಬೆಂಬಲ ಸೂಚಿಸಿ ಪತ್ರಿಕಾಗೋಷ್ಠಿ ನಡೆಸಲಾಯಿತು. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮೇಲಿನಕೊಪ್ಪ ಮಹೇಶ್, ನಾವು ಮಾಡುತ್ತಿರುವುದು ಪಕ್ಷಾಂತರ ಅಲ್ಲ. ನಾವೇನು ಈಗ ಕುಳಿತಿದ್ದೇವೆ ಅದುವೇ ನಿಜವಾದ ಬಿಜೆಪಿ. ನಿಷ್ಠಾವಂತ ಕಾರ್ಯಕರ್ತರು, ಬಿಜೆಪಿ ಹಾಗೂ ಹಿಂದುತ್ವಕ್ಕೆ ಬದುಕು ನೀಡಿದವರಿಗೆ ಅಸಮಾಧಾನ ಇದೆ. ಅವರೆಲ್ಲರಿಗೂ ನ್ಯಾಯ ದೊರಕಿಸಬೇಕು ಎಂಬ ಕಾರಣಕ್ಕೆ ಈ ನಿರ್ಧಾರ ಮಾಡಿದ್ದೇವೆ ಎಂದು ಹೇಳಿದರು.

ಈಶ್ವರಪ್ಪನವರಿಗೆ ಆಗಿರುವ ಅನ್ಯಾಯದ ವಿರುದ್ಧವಾಗಿ ಈ ತೀರ್ಮಾನ ತೆಗೆದುಕೊಂಡಿದ್ದೇವೆ. ಮೋದಿ ಹಾಗೂ ಅಮಿತ್ ಶಾ ಕೂಡ ಕುಟುಂಬ ರಾಜಕಾರಣವನ್ನು ವಿರೋಧ ಮಾಡುತ್ತ ಬರುತ್ತಿದ್ದಾರೆ. ಯಡಿಯೂರಪ್ಪ ಮತ್ತು ಕುಟುಂಬ ರಾಜ್ಯದಲ್ಲಿ ಎಲ್ಲವನ್ನು ಹಿಡಿತ ಸಾಧಿಸುತ್ತ ಬಂದಿದೆ. ಬೇರೆ ಪಕ್ಷದವರಿಗೆ ಕುಟುಂಬ ರಾಜಕಾರಣ ಮಾಡುತ್ತಾರೆ ಎಂದು ಹೇಳಿದ್ದೇವೆ ಆದರೆ ಇವರು ಮಾಡುತ್ತಿರುವುದು ಸರಿಯಲ್ಲ ಎಂದರು.

ಈಶ್ವರಪ್ಪನವರು ಮಗನಿಗೆ ಟಿಕೆಟ್ ಕೇಳಿದ್ದು ಕುಟುಂಬ ರಾಜಕಾರಣ ಅಲ್ಲ. ಅವರು ಶಿವಮೊಗ್ಗದಲ್ಲಿ ತಮ್ಮ ಮಗನಿಗೆ ತೊಂದರೆ ಆಗಬಾರದು ಎಂದು ಬಿ.ಎಸ್ ಯಡಿಯೂರಪ್ಪ ನವರು ಹಾವೇರಿಯಲ್ಲಿ ಟಿಕೆಟ್‌ ಕೊಡುವುದಾಗಿ ನಂಬಿಸಿ ಕುತ್ತಿಗೆ ಕುಯ್ಯುವ ಕೆಲಸ ಮಾಡಿದ್ದಾರೆ. ಹಿಂದುತ್ವದ ನಾಯಕರಾಗಿದ್ದ ಸಿ.ಟಿ ರವಿ, ಪ್ರತಾಪ್ ಸಿಂಹ, ಅನಂತಕುಮಾ‌ರ್ ಹೆಗಡೆ ಸೇರಿ ಹಲವರಿಗೆ ಟಿಕೆಟ್ ನೀಡದೆ ಇರುವುದು ಹಾಗೆ ಶೋಭಾ ಕರಂದ್ಲಾಜೆ ಅವರನ್ನು ಗೋ ಬ್ಯಾಕ್ ಎಂದರೂ ಬೆಂಗಳೂರು ಉತ್ತರಕ್ಕೆ ಟಿಕೆಟ್ ನೀಡಿದ್ದು, ಈ ಎಲ್ಲವನ್ನು ವಿರೋಧಿಸಿ ಶಿವಮೊಗ್ಗದಲ್ಲಿ ಈಶ್ವರಪ್ಪನವರು ಸ್ಪರ್ಧೆ ಮಾಡುತ್ತಿದ್ದಾರೆ. ಈಶ್ವರಪ್ಪನವರ ರಾಷ್ಟ್ರ ಭಕ್ತ ನಿಜವಾದ ಬಿಜೆಪಿ, ವಿಜಯೇಂದ್ರ ಅವರದ್ದು ಕಾಂಗ್ರೆಸ್ ಪಕ್ಷದ ಛಾಯಾಚಿತ್ರ ಹಾಗಾಗಿ ಈಶ್ವರಪ್ಪನವರ ಕೈ ಬಲಪಡಿಸಬೇಕು ಎಂದು ತೀರ್ಮಾನಿಸುತ್ತಿದ್ದೇವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮದನ್ ಗೊರ್ಕೋಡು, ಸಚಿನ್ ಗೌಡ ಗರ್ತಿಕೆರೆ, ರಾಘವೇಂದ್ರ, ಅವಿನಾಶ್, ಶಶಿ ಕುಂದರ್, ಹಾಗೂ ಪ್ರದೀಪ್ ಮತ್ತು ಪ್ರಮುಖರು ಇದ್ದರು.

Categories
ಅಡಿಕೆ-ದರ

ಅಡಿಕೆ ದರ 08-04-2024

ಅಡಿಕೆ ದರ
08-04-2024
ಸರಕು 53010 53010
ಬೆಟ್ಟೆ 41509 47899
ರಾಶಿ 32279 48858
ಗೊರಬಲು 17829 34009
Nammur Express
Categories
ರಾಜ್ಯ

ಹೊಸ ವರ್ಷ ಯುಗಾದಿಗೆ ಸ್ವಾಗತ!

ಹೊಸ ವರ್ಷ ಯುಗಾದಿಗೆ ಸ್ವಾಗತ!
– ಯುಗಾದಿ ಹಬ್ಬದ ಶುಭ ಮುಹೂರ್ತ
– ಹಬ್ಬದ ಆಚರಣೆ ವಿಶೇಷ ಏನು…?

NAMMUR EXPRESS NEWS
ಯುಗಾದಿಯನ್ನು ಹಿಂದೂ ಹೊಸ ವರ್ಷವೆಂದು ಆಚರಿಸಲಾಗುತ್ತದೆ. ಹಾಗಾಗಿ, ಈ ಹಬ್ಬ ಜನರಲ್ಲಿ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿರುತ್ತದೆ. ಇದು ಚಾಂದ್ರಮಾನ ಕ್ಯಾಲೆಂಡರ್‌ನ್ನು ಅನುಸರಿಸಿಕೊಂಡು ಆಚರಿಸಲಾಗುವ ಹಬ್ಬವಾಗಿದೆ.
ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ ಮತ್ತು ಗೋವಾ ರಾಜ್ಯಗಳಲ್ಲಿ ಈ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ತಿಂಗಳ ಫಾಲ್ಗುಣ ಮೊದಲ ದಿನವು ಸಾಮಾನ್ಯವಾಗಿ ಗ್ರೆಗೋರಿಯನ್ ಕ್ಯಾಲೆಂಡರ್‌ನ ಮಾರ್ಚ್ ಅಥವಾ ಏಪ್ರಿಲ್ ತಿಂಗಳುಗಳಲ್ಲಿ ಬರುತ್ತದೆ. 2024 ರಲ್ಲಿ, ಯುಗಾದಿ ಹಬ್ಬವು ಏಪ್ರಿಲ್ 9ರಂದು ಮಂಗಳವಾರ ಆಚರಿಸಲಾಗುವುದು. ಅದೇ ದಿನವನ್ನು ಮಹಾರಾಷ್ಟ್ರ, ಮಧ್ಯಪ್ರದೇಶ, ಹಾಗೆಯೇ ಇನ್ನಿತರ ರಾಜ್ಯಗಳಲ್ಲಿ ಹಿಂದೂಗಳು ಹೊಸ ವರ್ಷವನ್ನು ಗುಡಿ ಪಾಡ್ವಾ ಎಂದು ಆಚರಿಸುತ್ತಾರೆ. 2024 ರ ಯುಗಾದಿ ಹಬ್ಬದ ಸಂಪೂರ್ಣ ಮಾಹಿತಿಯೇ ಈ ಲೇಖನವಾಗಿದೆ.

– ಯುಗಾದಿ ಎಂದರೆ

ಯುಗಾದಿಯು ಹಿಂದೂ ಹೊಸ ವರ್ಷದ ಆರಂಭವನ್ನು ಸೂಚಿಸುವ ಹಬ್ಬವಾಗಿದೆ. ಯುಗಾದಿ ಎನ್ನುವ ಪದವು ‘ಯುಗ’ ಮತ್ತು ‘ಆದಿ’ (ಆರಂಭ) ಸಂಸ್ಕೃತ ಪದಗಳಿಂದ ಹುಟ್ಟಿಕೊಂಡಿವೆ, ಇದು ‘ಹೊಸ ಯುಗದ ಆರಂಭ’ವನ್ನು ಸೂಚಿಸುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ಸಾಮಾನ್ಯವಾಗಿ ಮಾರ್ಚ್ ಅಂತ್ಯದಲ್ಲಿ ಅಥವಾ ಏಪ್ರಿಲ್ ಆರಂಭದಲ್ಲಿ ಬರುವ ಈ ದಿನವು ಹಿಂದೂಗಳಿಗೆ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವಾ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಯುಗಾದಿ ಮತ್ತು ಕರ್ನಾಟಕದಲ್ಲಿ ಯುಗಾದಿ ಎಂದು ವಿಭಿನ್ನ ಹೆಸರುಗಳಲ್ಲಿ ಆಚರಿಸಲಾಗುತ್ತದೆ. ಇದು ಅನಾದಿ ಕಾಲದ ಸಂಪ್ರದಾಯವಾಗಿದೆ.

ಆಚರಣೆ ಏನೇನು ಮಾಡುತ್ತಾರೆ?

ಯುಗಾದಿ ವಿಶೇಷ ದಿನದಂದು ಜನರು ಮುಂಜಾನೆ ಬೇಗ ಎದ್ದು ಎಣ್ಣೆ ಸ್ನಾನ ಮಾಡಿ, ಹೊಸ ಬಟ್ಟೆಯನ್ನು ಧರಿಸಿ, ಬೇವು ಬೆಲ್ಲ ತಿಂದು ಮನೆಯನ್ನು ಶುದ್ಧಗೊಳಿಸಿ ರಂಗೋಲಿ ಹಾಕಿ, ತೋರಣ ಕಟ್ಟಿ ದೇವರಿಗೆ ಪೂಜೆಯನ್ನು ಮಾಡಿ, ನೈವೇದ್ಯವನ್ನು ಅರ್ಪಿಸಿ, ಮನೆಯ ಸದಸ್ಯರೆಲ್ಲಾ ಸಿಹಿ ತಿನ್ನುವ ಸಂಪ್ರದಾಯವಿದೆ. ಈ ದಿನ 6 ಸ್ವಾದಗಳುಳ್ಳ ಪಚಡಿ ಎಂಬ ವಿಶೇಷ ಭಕ್ಷ್ಯವನ್ನು ತಯಾರಿಸಿ ಪರಸ್ಪರ ಹಂಚಿಕೊಳ್ಳುವ ಮೂಲಕ ಹಬ್ಬವನ್ನು ಆಚರಿಸಲಾಗುತ್ತದೆ.

– ಯುಗಾದಿ ಹಬ್ಬದ ಮಹತ್ವ​

ಯುಗಾದಿ ಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ ಮತ್ತು ಇದು ವಸಂತಕಾಲದ ಆಗಮನವನ್ನು ಸೂಚಿಸುತ್ತದೆ. ಇದು ಹೊಸ ಜೀವನ ಮತ್ತು ಹೊಸ ಆರಂಭದ ಸಮಯವಾಗಿರುತ್ತದೆ. ಇದನ್ನು ಜ್ಞಾನ ಮತ್ತು ಬುದ್ಧಿವಂತಿಕೆಯ ಹಬ್ಬವೆಂದೂ ಪರಿಗಣಿಸಲಾಗಿದೆ. ಈ ದಿನ, ಜನರು ಹೊಸ ವರ್ಷಕ್ಕೆ ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಪಡೆದುಕೊಳ್ಳುವುದಕ್ಕಾಗಿ ದೇವರನ್ನು ಪ್ರಾರ್ಥಿಸುತ್ತಾರೆ. ಇದಲ್ಲದೆ ಇದು ಕುಟುಂಬ ಮತ್ತು ಸ್ನೇಹಿತರೊಂದಿಗೆ ಸೇರಿಕೊಂಡು ಆಚರಿಸುವ ಹಬ್ಬವಾಗಿದೆ. ಈ ದಿನ, ಜನರು ಪರಸ್ಪರ ಉಡುಗೊರೆಗಳು ಮತ್ತು ಸಿಹಿತಿಂಡಿಗಳನ್ನು ನೀಡುತ್ತಾರೆ ಮತ್ತು ಪರಸ್ಪರ ಸಮಯ ಕಳೆಯುತ್ತಾರೆ.

– ಯುಗಾದಿ 2024 ತಿಥಿ ಪ್ರಾರಂಭ ಮತ್ತು ಅಂತ್ಯ​

ಯುಗಾದಿಯ ಆಚರಣೆ ಮತ್ತು ಪೂಜೆಯನ್ನು ಮಂಗಳಕರ ಮುಹೂರ್ತದ ಪ್ರಕಾರ ಮಾಡಲಾಗುತ್ತದೆ. ಆದ್ದರಿಂದ ನಾವು ಯುಗಾದಿ 2024 ರ ತಿಥಿಯ ಪ್ರಾರಂಭ ಮತ್ತು ಅಂತ್ಯವನ್ನು ತಿಳಿದುಕೊಂಡು ಹಬ್ಬವನ್ನು ಆಚರಿಸಬೇಕು.
– ಪ್ರತಿಪಾದ ತಿಥಿ ಪ್ರಾರಂಭ: 2024 ರ ಏಪ್ರಿಲ್‌ 8 ರಂದು ರಾತ್ರಿ 11:50 ರಿಂದ
– ಪ್ರತಿಪಾದ ತಿಥಿ ಮುಕ್ತಾಯ: 2024 ರ ಏಪ್ರಿಲ್‌ 9 ರಂದು ರಾತ್ರಿ 8:30 ರವರೆಗೆ.

ಬೇವು ಬೆಲ್ಲ ವಿಶೇಷ!

ಯುಗಾದಿಯಂದು ಪ್ರಾಯೋಗಿಕವಾಗಿ ಪ್ರತಿಯೊಂದು ಮನೆಯಲ್ಲೂ ಬೇವು ಬೆಲ್ಲ, ಬೇವಿನ ಸೊಪ್ಪು, ಮಾವು, ಹುಣಸೆಹಣ್ಣು, ಉಪ್ಪು, ಬೆಲ್ಲ ಮತ್ತು ಮೆಣಸಿನಕಾಯಿಯ ಮಿಶ್ರಣವನ್ನು ತಯಾರಿಸಲಾಗುತ್ತದೆ. ಬೇವು ಬೆಲ್ಲದ ಪ್ರತಿಯೊಂದು ಸ್ವಾದವು ನಮ್ಮ ಜೀವನದ ಸಾರವನ್ನು ನಮಗೆ ಕಲಿಸಿಕೊಡುತ್ತದೆ.