Categories
ಬೆಂಗಳೂರು ರಾಜ್ಯ

ಕರ್ನಾಟಕ ಟಾಪ್ 5 ನ್ಯೂಸ್..!

ಕರ್ನಾಟಕ ಟಾಪ್ 5 ನ್ಯೂಸ್..!
ಟ್ರೋಲ್ಸ್ ರಾಣಿ ಸೋನುಗೆ ಜಾಮೀನು!
– ಸ್ನೇಹಿತರೊಂದಿಗೆ ಈಜಲು ತೆರಳಿದ್ದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವು
– ಬೆಳ್ತಂಗಡಿ: ಆನ್‌ಲೈನ್ ಮೂಲಕ ಸಾಲ ನೀಡುವುದಾಗಿ ನಂಬಿಸಿ ವಂಚನೆ
– ಹಿಟ್ ಅಂಡ್ ರನ್‌ಗೆ ಯುವಕನ ತಲೆ ಪೀಸ್: ಚಾಲಕ ಪರಾರಿ!
– ಕಾಲಭೈರವನಂತೆ ಎರಗಿದ ಕೋಲೆ ಬಸವ!: ಭಯಾನಕ ಆಕ್ಸಿಡೆಂಟ್

NAMMUR EXPRESS NEWS
ಬೆಂಗಳೂರು: ಕಾನೂನು ಬಾಹಿರವಾಗಿ ಹೆಣ್ಣು ಮಗುವನ್ನು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಇನ್ಸಾಗ್ರಾಂ ಸ್ಟಾರ್ ಸೋನು ಶ್ರೀನಿವಾಸ್‌ಗೌಡಗೆ ಜಾಮೀನು ಮಂಜೂರಾದ ಬಗ್ಗೆ ವರದಿಯಾಗಿದೆ.
ರಾಯಚೂರಿನ ಕೂಲಿ ಕಾರ್ಮಿಕ ದಂಪತಿಯ ಹೆಣ್ಣು ಮಗುವನ್ನು ಕಾನೂನು ಬಾಹಿರವಾಗಿ ದತ್ತು ಪಡೆದ ಪ್ರಕರಣದಲ್ಲಿ ಶ್ರೀನಿವಾಸ್‌ಗೌಡ ಅವರನ್ನು ಮಾ.25ರಂದು ನ್ಯಾಯಾಲಯದ ಹಾಜರುಪಡಿಸಿದ್ದಾಗ ವಿಚಾರಣೆ ಮಾಡಿದ ನ್ಯಾಯಾಧೀಶರು 5 ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಿದ್ದರು.

ಆದರೆ, ಐದು ದಿನಗಳಲ್ಲಿ ವಿಚಾರಣೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಮತ್ತಷ್ಟು ಕಾಲಾವಕಾಶವನ್ನು ಪೊಲೀಸರು ಕೇಳಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರ ಪರವಾಗಿ ವಾದ ಆಲಿಸಿದ ನ್ಯಾಯಾಲಯದಿಂದ ಸೋನು ಶ್ರೀನಿವಾಸ್‌ಗೌಡ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ನಂತರ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಲಾಗಿತ್ತು.
ನ್ಯಾಯಾಂಗ ಬಂಧನದಲ್ಲಿದ್ದ ಸೋನು ಶ್ರೀನಿವಾಸ್‌ಗೌಡ ಅವರು ಜಾಮೀನು ಮಂಜೂರು ಮಾಡುವಂತೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿಯನ್ನು ವಿಚಾರಣೆ ಮಾಡಿದ ಬೆಂಗಳೂರು ಗ್ರಾಮಾಂತರ ನ್ಯಾಯಾಲಯವು ಷರತ್ತುಗಳೊಂದಿಗೆ ಸೋನು ಶ್ರೀನಿವಾಸ್‌ಗೌಡ ಅವರಿಗೆ ಜಾಮೀನು ಮಂಜೂರು ಮಾಡಿದೆ. ಅವರ ಪರವಾಗಿ ವಕೀಲ ಪ್ರಕಾಶ್ ವಾದ ಮಂಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಈಜಲು ತೆರಳಿದ್ದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವು

ಶಿವಮೊಗ್ಗ : ಸ್ನೇಹಿತರೊಂದಿಗೆ ಈಜುಲು ತೆರಳಿದ್ದ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಶ್ರೀ ಕ್ಷೇತ್ರ ಕೂಡಲಿ ಗ್ರಾಮದ ತುಂಗಭದ್ರಾ ಸಂಗಮದಲ್ಲಿ ನಡೆದಿದೆ. ಶಿವಮೊಗ್ಗ ಅಣ್ಣಾನಗರದ ಸಮಿವುಲ್ಲಾ ಹಾಗೂ ತಸ್ಮಿಯಾ ಬಾನು ಇವರ ಪುತ್ರ ಮುಬಾರಕ್ (18) ಮೃತ ವಿದ್ಯಾರ್ಥಿ. ಈತ ಪಟ್ಟಣದ ಐಟಿಐ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಪ್ರತಿನಿತ್ಯ ಶಿವಮೊಗ್ಗದಿಂದ ಪಟ್ಟಣದ ಕಾಲೇಜಿಗೆ ವ್ಯಾಸಂಗಕ್ಕೆ ಬರುತ್ತಿದ್ದ ಈತ ಎಂದಿನಂತೆ ಕಾಲೇಜಿಗೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ಕೂಡಲಿ ಸಂಗಮದಲ್ಲಿ ಸ್ನಾನ ಮಾಡಲು ಸ್ನೇಹಿತರೊಂದಿಗೆ ತೆರಳಿದಾಗ ಈ ಘಟನೆ ನಡೆದಿದೆ. ಈ ಸಂಬಂಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆನ್‌ಲೈನ್ ಮೂಲಕ ಸಾಲ ನಂಬಿಸಿ ವಂಚನೆ

ಬೆಳ್ತಂಗಡಿ : ತೆಂಕಕಾರಂದೂರು ಗ್ರಾಮದ ಮಹಿಳೆಯೊಬ್ಬರಿಗೆ ಫೇಸ್‌ಬುಕ್‌ ಆಪ್ ಮೂಲಕ ಸಾಲ ನೀಡುವುದಾಗಿ ನಂಬಿಸಿ ವಂಚನೆ ನಡೆಸಲಾಗಿದೆ. ನೆಬಿಸಾ (38) ಅವರು ವೇಣೂರು ಪೋಲಿಸ್‌ ಠಾಣೆಗೆ ನೀಡಿದ ದೂರಿನಂತೆ, ಮಾ. 21ರಂದು ಫೇಸ್‌ಬುಕ್‌ನಲ್ಲಿ ಮನಿ ವ್ಯೂ ಪರ್ಸನಲ್ ಲೋನ್ ಆಯಪ್ ಮೂಲಕ ಅಪರಿಚಿತರು ಪರಿಚಯಿಸಿಕೊಂಡಿದ್ದರು. ನೆಬಿಸಾ ಅವರು ಸಾಲದ ಬಗ್ಗೆ ಅಪರಿಚಿತರಿಂದ ಮಾಹಿತಿ ಪಡೆದು 5 ಲಕ್ಷ ರೂ. ಸಾಲ ಪಡೆಯಲು ದಾಖಲೆಗಳನ್ನು ಕಳುಹಿಸಿದ್ದರು. ಬಳಿಕ ಫೋನ್ ಮೂಲಕ ನೆಬಿಸಾ ಅವರನ್ನು ಸಂಪರ್ಕಿಸಿ ಮಾ. 28ರ ತನಕ ವಿವಿಧ ಹಂತದಲ್ಲಿ ಒಟ್ಟು 96,743 ರೂ. ಹಣವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದಾರೆ. ಬಳಿಕ ಸಾಲವನ್ನು ನೀಡದೇ, ವರ್ಗಾಯಿಸಿಕೊಂಡ ಹಣವನ್ನು ಹಿಂತಿರುಗಿಸದೆ ವಂಚಿಸಿರುವುದಾಗಿ ತಿಳಿಸಲಾಗಿದೆ.

ಹಿಟ್ ಅಂಡ್ ರನ್‌ಗೆ ಯುವಕನ ತಲೆ ಪೀಸ್ ಪೀಸ್!

ಆನೇಕಲ್: ಹಿಟ್ ಆಯಂಡ್ ರನ್‌ಗೆ ಬೈಕ್‌ ಸವಾರನೊಬ್ಬ ಬಲಿಯಾಗಿದ್ದಾನೆ. ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ಮಿರ್ಜಾ ರಸ್ತೆಯ ಪೊಲೀಸ್‌ ಕ್ವಾಟ್ರಾಸ್ ಮುಂಭಾಗ ಸಂಭವಿಸಿದೆ. ವೆಂಕಟೇಶ್ವರ ಸರ್ಕಲ್‌ನಿಂದ ರಾಘವೇಂದ್ರ ಭವನ್ ಸರ್ಕಲ್ ಮಾರ್ಗವಾಗಿ ಹೋಗುವಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಶೇಕ್ ಶಹಬಾಶ್ ದೇಹವು ಛಿದ್ರ ಛಿದ್ರವಾಗಿದೆ. ಬೈಕ್‌ಗೆ ಅಪಘಾತ ನಡೆಸಿ ವಾಹನ ಸಮೇತವಾಗಿ ಚಾಲಕ ಎಸ್ಕೆಪ್ ಆಗಿದ್ದಾನೆ. ಬೈಕ್ ಸವಾರನ ತಲೆಯ ಮೇಲೆ ವಾಹನ ಹತ್ತಿದ್ದರಿಂದ, ತಲೆ ಭಾಗ ಸಂಪೂರ್ಣ ಛಿದ್ರ ಛಿದ್ರವಾಗಿ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ. ಮಿರ್ಜಾ ರಸ್ತೆಯಲ್ಲಿ ಒಂದೇ ವಾರದಲ್ಲಿ ಎರಡು ಅಪಘಾತ ಸಂಭವಿಸಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ಅರಣ್ಯ ಇಲಾಖೆ ಸಿಬ್ಬಂದಿ ಮೃತಪಟ್ಟಿದ್ದರು.

ಕಾಲಭೈರವನಂತೆ ಎರಗಿದ ಕೋಲೆ ಬಸವ!

ಬೆಂಗಳೂರು: ಬೆಂಗಳೂರಿನಲ್ಲಿ ಒಂದು ಭಯಾನಕ ಆಯಕ್ಸಿಡೆಂಟ್ ನಡೆದಿದೆ. ಇದಕ್ಕೆ ಕಾರಣವಾದದ್ದು ಬಸ್ಸು ಅಲ್ಲ, ಲಾರಿಯೂ ಅಲ್ಲ. ಅಪಘಾತದಲ್ಲಿ ಯಾರೂ ಸತ್ತಿಲ್ಲವಾದರೂ, ಪವಾಡಸದೃಶವಾಗಿ ಬೈಕ್ ಸವಾರನೊಬ್ಬ ಬದುಕುಳಿದಿದ್ದಾನೆ. ಅಪಘಾತಕ್ಕೆ ಕಾರಣವಾದದ್ದು ಒಂದು ಕೋಲೆಬಸವ. ರಸ್ತೆಯ ಬದಿಯಲ್ಲಿ ಮಾಲಕಿಯ ಜೊತೆಗೆ ನಡೆದುಕೊಂಡು ಹೋಗುತ್ತಿದ್ದ ಕೋಲೆಬಸವ, ಇದ್ದಕ್ಕಿದ್ದಂತೆ, ಯಾವುದೇ ಪ್ರಚೋದನೆಯಿಲ್ಲದೆ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಸವಾರನಿಗೆ ಎಗರಿ ಗುದ್ದಿದೆ. ಬೈಕ್ ಪಲ್ಟಿ ಹೊಡೆದಿದ್ದು, ಸವಾರ ರಸ್ತೆಗೆ ಬಿದ್ದಿದ್ದಾರೆ. ಪಕ್ಕದಲ್ಲಿ ಕ್ಯಾಂಟರ್ ಹಾದುಹೋಗುತ್ತಿದ್ದು, ಇನ್ನೇನು ಸವಾರನ ಮೇಲೆ ಹರಿದುಹೋಗಲಿದೆ ಎಂಬ ಕ್ಷಣದಲ್ಲಿ ಕ್ಯಾಂಟರ್ ಚಾಲಕ ಥಟ್ಟನೆ ಬ್ರೇಕ್ ಹಾಕಿದ್ದಾನೆ. ಬೈಕ್‌ ಸವಾರ ಪವಾಡಸದೃಶವಾಗಿ ಬದುಕುಳಿದಿದ್ದಾನೆ. ಮಹಾಲಕ್ಷ್ಮಿ ಲೇಔಟ್ ಸ್ವಿಮ್ಮಿಂಗ್ ಪೂಲ್ ಜಂಕ್ಷನ್ ಬಳಿ ಘಟನೆ ನಡೆದಿದೆ. ಕಳೆದ ವಾರ ನಡೆದಿರುವ ಈ ಘಟನೆಯ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ವಿಡಿಯೋ ನೋಡಿದ ಅನೇಕ ಮಂದಿ, ಇದು ಪವಾಡವೇ ಸರಿ ಎಂದು ಕಮೆಂಟ್ ಮಾಡಿದ್ದಾರೆ.

Categories
ತೀರ್ಥಹಳ್ಳಿ ರಾಜಕೀಯ

ದೇವರ ಮೊರೆ ಹೋದ ಈಶ್ವರಪ್ಪ!

ದೇವರ ಮೊರೆ ಹೋದ ಈಶ್ವರಪ್ಪ!
– ತೀರ್ಥಹಳ್ಳಿ ರಾಮೇಶ್ವರ, ಅಂಬುತೀರ್ಥದಲ್ಲಿ ವಿಶೇಷ ಪೂಜೆ
– ನೂರಾರು ಮಂದಿ ಅಭಿಮಾನಿಗಳು ಹಾಜರ್
– ಸರ್ವರ ಸಹಕಾರ ಕೋರಿದ ಮಾಜಿ ಡಿಸಿಎಂ

NAMMUR EXPRESS NEWS
ತೀರ್ಥಹಳ್ಳಿ: ಶಿವಮೊಗ್ಗ ಲೋಕಸಭಾ ಮಾತ್ರವಲ್ಲದೆ ರಾಜ್ಯದಲ್ಲಿ ಈಗ ಈಶ್ವರಪ್ಪರದ್ದೇ ಸುದ್ದಿ. ಪ್ರಧಾನಿ ನರೇಂದ್ರ ಮೋದಿ ಹಾಗೂ ಹಿಂದುತ್ವದ ಹೆಸರಿನಲ್ಲಿ ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ರಾಜ್ಯದ ಮಾಜಿ ಉಪ ಮುಖ್ಯಮಂತ್ರಿಗಳಾದ ಕೆ ಎಸ್ ಈಶ್ವರಪ್ಪ ಅವರು ಏಪ್ರಿಲ್ 5ರಂದು ಮಧ್ಯಾಹ್ನ ತೀರ್ಥಹಳ್ಳಿ ಶ್ರೀರಾಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹಿಂದೂ ಸಂಘಟನೆಯ ಕಾರ್ಯಕರ್ತರು ನರೇಂದ್ರ ಮೋದಿ ಅವರ ಅಭಿಮಾನಿಗಳ ಸಮ್ಮುಖದಲ್ಲಿ ಎಲ್ಲರ ಬೆಂಬಲ ಕೋರಿದರು. ಅಂಭು ತೀರ್ಥ ಶ್ರೀರಾಮೇಶ್ವರನ ಹಾಗೂ ರಿಪ್ಪನ್ ಪೇಟೆಯ ಶ್ರೀ ಸಿದ್ಧಿ ವಿನಾಯಕ ಸ್ವಾಮಿಯ ದರ್ಶನ ಪಡೆದರು ಈ ಸಂಧರ್ಭದಲ್ಲಿ ದೇವಸ್ಥಾನ ಸಮಿತಿಯ ಹಾಗೂ ಸ್ಥಳಿಯ ಮುಖಂಡರು ಉಪಸ್ಥಿತರಿದ್ದರು.

Categories
ತೀರ್ಥಹಳ್ಳಿ ಮಲ್ನಾಡ್ ರಾಜ್ಯ

ಕನ್ನಡದ ಮೇರು ಸಾಹಿತಿ ತೇಜಸ್ವಿ ನೆನಪು!

ಕನ್ನಡದ ಮೇರು ಸಾಹಿತಿ ತೇಜಸ್ವಿ ನೆನಪು!
– ಏ.5, 2007ರಂದು ಮರೆಯಾದ ಸಾಹಿತ್ಯ ಲೋಕದ ನಕ್ಷತ್ರ
– ಲಕ್ಷ ಲಕ್ಷ ಅಭಿಮಾನಿಗಳ ನುಡಿ ನಮನ

NAMMUR EXPRESS NEWS
ಕನ್ನಡ ಸಾಹಿತ್ಯ ಲೋಕ ಕಂಡ ಅಪ್ರತಿಮ ಲೇಖಕ ಕೆ.ಪಿ.ಪೂರ್ಣಚಂದ್ರ ತೇಜಸ್ವಿ. ಕುವೆಂಪು ಅವರ ಪುತ್ರರಾದ ತೇಜಸ್ವಿ ಕನ್ನಡದ ಮೇರು ಲೇಖಕ. ಅವರು ಏ.5ರ 2007ರಂದು ನಿಧನರಾಗಿದ್ದು ಅವರ ಸಾಹಿತ್ಯ ಸೇವೆ ಎಂದಿಗೂ ಜೀವಂತವಾಗಿದೆ.
ಸೆ.8, 1938ರಲ್ಲಿ ತೀರ್ಥಹಳ್ಳಿ ತಾಲೂಕು ಕುಪ್ಪಳಿಯಲ್ಲಿ ಜನಿಸಿದ ತೇಜಸ್ವಿ ಏ.5, 2007ರಂದು ಮೂಡಿಗೆರೆಯಲ್ಲಿ ನಿಧನರಾದರು. ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು. ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು. ತೇಜಸ್ವಿ ಆರಂಭದಲ್ಲಿ ಬೇರೊಂದು ಹೆಸರಿನಲ್ಲಿ ಕಾವ್ಯ ರಚನೆ ಮಾಡಿದ್ದರೂ, ನಂತರ ಕಥಾ ಸಾಹಿತ್ಯ, ಕಾದಂಬರಿ, ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು.

ತಂದೆ ಪುಟ್ಟಪ್ಪ ಮತ್ತು ತಾಯಿ ಹೇಮಾವತಿ. ಕುಪ್ಪಳಿಯಲ್ಲಿ ತೇಜಸ್ವಿ ಸ್ಮಾರಕವನ್ನು ಅವರ ನೆನಪಿಗಾಗಿ ನಿರ್ಮಿಸಲಾಗಿದೆ.
ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದ ನಂತರ, ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಎಂ.ಎ. ಪದವಿಯನ್ನು ಪಡೆದರು.

ಬಹುಮುಖ ಪ್ರತಿಭೆ ತೇಜಸ್ವಿ

ತೇಜಸ್ವಿ ಅವರ ಮೊದಲ ಕಥೆ ಲಿಂಗ ಬಂದ. ಈ ಕಥೆಗಾಗಿ ಅವರು ರಾಜ್ಯೋತ್ಸವ ಪ್ರಶಸ್ತಿ ಪಡೆದರು. ಸ್ನಾತಕೋತ್ತರ ಪದವಿಯ ನಂತರ ಓರಗೆ ಇತರೆ ಬರಹಗಾರರಂತೆ ಅಧ್ಯಾಪಕ ವೃತ್ತಿಯನ್ನು ಬಯಸದೆ ಮಲೆನಾಡಿನ ಮೂಡಿಗೆರೆಯಲ್ಲಿ ಕೃಷಿಯನ್ನು ಮಾಡುವ ಮಹತ್ವದ ನಿರ್ಧಾರವನ್ನು ಮಾಡಿದರು. ಕೃಷಿಯ ಜತೆಜತೆಗೆ ಅಗಾದವಾದ ಸಾಹಿತ್ಯದ ಕೃಷಿ ಮಾಡಿದರು. ಸಾಹಿತ್ಯದ ಜೊತೆಗೆ ಇವರಿಗೆ ವ್ಯವಸಾಯ,ಛಾಯಾಚಿತ್ರಗ್ರಹಣ ಹಾಗು ಬೇಟೆಯಲ್ಲಿ ಆಸಕ್ತಿಯಿತ್ತು. ಇವರು ರೈತ ಚಳುವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಕೃಷಿ ಜತೆಗೆ ಸಾಹಿತ್ಯ, ಕುಟುಂಬ

ಪತ್ನಿ ರಾಜೇಶ್ವರಿ. ಇವರು ತೇಜಸ್ವಿಯವರ ಪ್ರೀತಿಯ ಮನೆ ಮೂಡಿಗೆರೆಯ ‘ನಿರುತ್ತರ’ದಲ್ಲಿ ವಾಸಿಸುತ್ತಿದ್ದರು, ಈಗ ಮರಣಿಸಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು, ಸುಸ್ಮಿತಾ ಹಾಗು ಈಶಾನ್ಯ. ಇವರಿಬ್ಬರೂ ಸಾಫ್ಟ್ ವೇರ್ ಪರಿಣತರು.
ಪೂರ್ಣಚಂದ್ರ ತೇಜಸ್ವಿಯವರು ತಮ್ಮ ಮನೆ ‘ನಿರುತ್ತರ’ದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ಅಸಂಖ್ಯಾತ ಸಾಹಿತ್ಯ ಅಭಿಮಾನಿಗಳನ್ನು ಅವರು ಹೊಂದಿದ್ದು ಕನ್ನಡದ ಸಾಹಿತ್ಯದ ಮರೆಯಲಾಗದ ನಕ್ಷತ್ರ ತೇಜಸ್ವಿ.

ಸಾಹಿತ್ಯದ ಎಲ್ಲಾ ಕ್ಷೇತ್ರದಲ್ಲೂ ಸೇವೆ

ಕವಿತೆ, ನಾಟಕ, ಕಾದಂಬರಿ, ಕತೆ ಮೊದಲಾದ ಸಾಹಿತ್ಯ ಪ್ರಕಾರಗಳಲ್ಲಿ ಬರೆದಿದ್ದಾರೆ. ಹಲವಾರು ಆಂಗ್ಲ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ನಾಲ್ಕು ದಶಕಗಳ ಕಾಲ ಕಥೆ, ಕಾದಂಬರಿಗಳ ಮೂಲಕ, ವಿಜ್ಞಾನದ ವಿಸ್ಮಯಗಳ ಮೂಲಕ ತೇಜಸ್ವಿಯವರು ಕನ್ನಡ ಸಾಹಿತ್ಯಕ್ಕೆ ಆನೇಕ ಮಹತ್ವಪೂರ್ಣ ಕೃತಿಗಳನ್ನು ನೀಡಿದ್ದಾರೆ. ಇದರಲ್ಲಿ ಕೀಟಗಳು, ಪ್ರಾಣಿಗಳು, ನದಿ-ಕೊಳ್ಳಗಳು, ಕಾಡುಗಳು, ಬೇಟೆಯ ವೈವಿಧ್ಯತೆಯ ಬಗ್ಗೆ ಹಲವಾರು ಕೃತಿಗಳನ್ನು ನೀಡಿದ್ದಾರೆ. “ಕರ್ವಾಲೋ” ಕೃತಿಯಲ್ಲಿ, ಜೀವವಿಕಾಸ ಪಥದಲ್ಲಿ ಎಲ್ಲವೂ ಬದಲಾಗುತ್ತ ರೂಪಾಂತರ ಹೊಂದುತ್ತಾ ಬಂದಿರುವಾಗ ಹಾರುವ ಓತಿಯ ಕುರಿತು ಕುತೂಹಲ ಹುಟ್ಟಿಸುವ ಸನ್ನಿವೇಶಗಳು ಮೂಡಿ ಬಂದಿವೆ. ಶುಧ್ಧ ಸಾಹಿತ್ಯಿಕ ಮೌಲ್ಯ ಉಳ್ಳ ಕಥೆ ಕಾದಂಬರಿಗಳ ಸಂಗಡ ತೇಜಸ್ವಿಯವರು ಹಲವಾರು ವೈಜ್ಞಾನಿಕ ಮತ್ತು ಐತಿಹಾಸಿಕ ಲೇಖನ ಸಂಕಲನಗಳನ್ನು ಕನ್ನಡಕ್ಕೆ ತಂದಿದ್ದಾರೆ.

ತೇಜಸ್ವಿ ಅವರ ನಮ್ಮನ್ನು ಅಗಲಿದರೂ ಅವರ ಸಾಹಿತ್ಯ ಸೇವೆ ಅಮರ

ತೇಜಸ್ವಿ ಅವರಿಗೆ ಗೌರವ ಪೂರ್ವಕ ನಮನಗಳು

Categories
ತೀರ್ಥಹಳ್ಳಿ

ಇಂದು ತೀರ್ಥಹಳ್ಳಿಗೆ ಈಶ್ವರಪ್ಪ: ವಿಶೇಷ ಪೂಜೆ!

ಇಂದು ತೀರ್ಥಹಳ್ಳಿಗೆ ಈಶ್ವರಪ್ಪ: ವಿಶೇಷ ಪೂಜೆ!
– ಶಿವಮೊಗ್ಗ ಚುನಾವಣೆ ಪ್ರಚಾರ ಅಖಾಡಕ್ಕೆ ಧುಮುಕಿದ ಈಶ್ವರಪ್ಪ

NAMMUR EXPRESS NEWS
ತೀರ್ಥಹಳ್ಳಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಹಿಂದುತ್ವದ ಹೆಸರಿನಲ್ಲಿ ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ರಾಜ್ಯದ ಮಾಜಿ ಉಪ ಮುಖ್ಯಮಂತ್ರಿಗಳಾದ ಕೆ ಎಸ್ ಈಶ್ವರಪ್ಪ ಅವರು ಏಪ್ರಿಲ್ 5ರ ಇಂದು ಮಧ್ಯಾಹ್ನ 11.45ಕ್ಕೆ ತೀರ್ಥಹಳ್ಳಿ ಶ್ರೀರಾಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಹಿಂದೂ ಸಂಘಟನೆಯ ಕಾರ್ಯಕರ್ತರು ನರೇಂದ್ರ ಮೋದಿ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರಲು ಕೋರಲಾಗಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಬಂಟರ ಸಂಘದಲ್ಲಿ ಸೌರಮಾನ ಯುಗಾದಿ

ತೀರ್ಥಹಳ್ಳಿ ಬಂಟರ ಸಂಘದಲ್ಲಿ ಸೌರಮಾನ ಯುಗಾದಿ
– ಏ.14ಕ್ಕೆ ಕಾರ್ಯಕ್ರಮ
– ಶ್ರೀರಾಮೇಶ್ವರ ದೇವರ ರಾಜಬೀದಿ ಉತ್ಸವ

NAMMUR EXPRESS NEWS
ತೀರ್ಥಹಳ್ಳಿ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದಿನಾಂಕ : 14-04-2024 ನೇ ಭಾನುವಾರ ತೀರ್ಥಹಳ್ಳಿ ಬಂಟರ ಸಂಘದ ವತಿಯಿಂದ ಸೌರಮಾನ ಯುಗಾದಿಯನ್ನು ಆಚರಿಸಲಾಗುವುದು. ಬೆಳಗ್ಗೆ 9:00 ರಿಂದ ಗಣ ಹೋಮ ಮತ್ತು ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ನಂತರ ಸಭಾ ಕಾರ್ಯಕ್ರಮ ನೆರವೇರಿಸಲಾಗುವುದು. ಕಾರ್ಯಕ್ರಮದ ಉದ್ಘಾಟನೆಯನ್ನು ಬಂಟರ ಸಂಘದ ಗೌರವಾಧ್ಯಕ್ಷರಾದ ಪ್ರಭಾಕರ್ ಶೆಟ್ಟಿ ಅಡ್ಡಮನೆ ಇವರು ನೆರವೇರಿಸಲಿದ್ದು, ಬಂಟರ ಸಂಘದ ಅಧ್ಯಕ್ಷರಾದ ಬಿ ಎಲ್ ಪ್ರಭಾಕರ್ ಹೆಗಡೆ ಅಧ್ಯಕ್ಷತೆ ವಹಿಸಲಿದ್ದಾರೆ.

ಮಧ್ಯಾಹ್ನ ಒಂದರಿಂದ ಸಾಮೂಹಿಕ ಭೋಜನ ಹಾಗೂ ಸಂಜೆ ಐದು ಮೂವತ್ತಕ್ಕೆ ಶ್ರೀರಾಮೇಶ್ವರ ದೇವರ ರಾಜಬೀದಿ ಉತ್ಸವ ನಡೆಯಲಿದೆ. ಇದೇ ದಿನ ಸಂಜೆ 7 ಗಂಟೆಗೆ ಬಂಟರ ಭವನದಲ್ಲಿ ನಡೆಯುವ ಪಲ್ಲಕ್ಕಿ ಉತ್ಸವ ಹಾಗೂ ವಸಂತ ಪೂಜೆಗೆ ಸರ್ವರು ಆಗಮಿಸುವಂತೆ ಸಂಘ ವಿನಂತಿಸಿದೆ.

Categories
ಮಂಗಳೂರು ರಾಜಕೀಯ

ದ.ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿ ಚೌಟ ನಾಮಪತ್ರ: ಕೇಸರಿ ರಂಗು!

ದ.ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿ ಚೌಟ ನಾಮಪತ್ರ: ಕೇಸರಿ ರಂಗು!
– ಮಂಗಳೂರಿನಲ್ಲಿ ರಣಕಹಳೆ ಮೊಳಗಿಸಿದ ಕೇಸರಿ ಪಡೆ
– ಬಿಜೆಪಿ ಜತೆ ಜೆಡಿಎಸ್ ಕಾರ್ಯಕರ್ತರ ಸಮಾಗಮ

NAMMUR EXPRESS NEWS
ಮಂಗಳೂರು: ಬಿಜೆಪಿಯ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಗುರುವಾರ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್‌ ಚೌಟ ಅವರ ನಾಮಪತ್ರ ಸಲ್ಲಿಕೆಯು ಕೇಸರಿ ಪಡೆಯ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿದೆ. ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ ದಕ್ಷಿಣ ಕನ್ನಡದಲ್ಲಿಯೂ ನಾಮಪತ್ರ ಸಲ್ಲಿಕೆಗೆ ಗುರುವಾರ ಕೊನೆಯ ದಿನವಾಗಿತ್ತು. ಹೀಗಿರುವಾಗ, ಕೊನೆಯ ದಿನವೇ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್‌ ಚೌಟ ಅವರು ಕೂಡ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸುವುದಕ್ಕೆ ಮುಹೂರ್ತ ಫಿಕ್ಸ್‌ ಮಾಡಿಕೊಂಡಿದ್ದರು. ಈ ನಾಮಪತ್ರ ಸಲ್ಲಿಕೆ ಹಿನ್ನಲೆಯಲ್ಲಿ ಮಂಗಳೂರು ನಗರದಲ್ಲಿ ಬೃಹತ್‌ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಬಂಟ್ಸ್‌ ಹಾಸ್ಟೇಲ್‌ ಬಳಿಯಿರುವ ಬಿಜೆಪಿ ಚುನಾವಣಾ ಕಚೇರಿಯಿಂದ ಪಾದಯಾತ್ರೆಯಲ್ಲಿ ಟೌನ್‌ಹಾಲ್‌ವರೆಗೆ ತೆರಳಿ ಅಲ್ಲಿ ಬಹಿರಂಗ ಸಭೆಯನ್ನು ಮಾಡಿ ಆ ನಂತರದಲ್ಲಿ ನಾಮಪತ್ರವನ್ನು ಸಲ್ಲಿಕೆ ಮಾಡಲಾಯಿತು.

ಆದರೆ, ಇಂದಿನ ನಾಮಪತ್ರ ಸಲ್ಲಿಕೆಗೆ ಕ್ಷೇತ್ರದ ವಿವಿಧ ಮೂಲೆಯಿಂದ ದೊಡ್ಡ ಸಂಖ್ಯೆಯಲ್ಲೇ ಪಕ್ಷದ ಕಾರ್ಯಕರ್ತರು ನಗರಕ್ಕೆ ಹರಿದು ಬಂದಿದ್ದರು. ಆ ಮೂಲಕ ನಗರದೆಲ್ಲೆಡೆಯೂ ಇಂದು ಬಿಜೆಪಿ ಬಾವುಟ ಹಾಗೂ ಕೇಸರಿ ಶಾಲು ರಾರಾಜಿಸುತ್ತಿತ್ತು. ಬಂಟ್ಸ್‌ ಹಾಸ್ಟೇಲ್‌ನಲ್ಲಿ ಆರಂಭಗೊಂಡ ಪಾದೆಯಾತ್ರೆಯು ಟೌನ್‌ಹಾಲ್‌ ತಲುಪುವಷ್ಟರಲ್ಲಿ ಸಾವಿರಾರು ಮಂದಿ ಭಾಗಿಯಾಗುವ ಮೂಲಕ ಬಿಜೆಪಿಯ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡದಲ್ಲಿ ಚೌಟ ಅವರು ತಮ್ಮ ಉಮೇದುವಾರಿಕೆ ದಿನವೇ ಕೇಸರಿಯ ರಣ ಕಹಳೆಯನ್ನು ಮೊಳಗಿಸಿರುವುದು ಗಮನಾರ್ಹ.

ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಸಂಸದ ನಳಿನ್‌ ಕುಮಾರ್‌ ಕಟೀಲು, ಉಡುಪಿ-ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಪಕ್ಷದ ಪ್ರಮುಖ ನಾಯಕರಾದ ಸಿಟಿ ರವಿ, ಸುನಿಲ್‌ ಕುಮಾರ್‌, ದಕ್ಷಿಣ ಕನ್ನಡದ ಆರು ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಶಾಸಕರು, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಸೇರಿದಂತೆ ಹಲವು ಮುಖಂಡರು, ನಾಯಕರು ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮತಯಾಚನೆಯನ್ನೂ ಮಾಡಿದ್ದರು.

ಕೇಸರಿ ಶಾಲುಗಳ ನಡುವೆ ಹಸಿರು ಶಾಲು !

ಈ ಬಾರಿ ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಂಡಿರುವ ದಕ್ಷಿಣ ಕನ್ನಡದಲ್ಲಿಯೂ ನಾಮಪತ್ರ ಸಲ್ಲಿಸುವ ವೇಳೆ ಜೆಡಿಎಸ್‌ನ ಕಾರ್ಯಕರ್ತರು, ಮುಖಂಡರು ಕೂಡ ತೆನೆಹೊತ್ತ ಮಹಿಳೆಯ ಹಸಿರು ಶಾಲು ಹಾಕಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಅದರಂತೆ, ಕೇಸರಿ ಶಾಲುಗಳ ನಡುವೆ ಅಲ್ಲಲ್ಲಿ ಹಸಿರು ಶಾಲು ಕೂಡ ರಾರಾಜಿಸುತ್ತಿರುವುದು ಕಂಡುಬಂತು.

Categories
ಜಾತಕ

ಎಪ್ರಿಲ್ 5ರ ರಾಶಿ ಫಲಾಫಲ ಹೇಗಿದೆ?

ಎಪ್ರಿಲ್ 5ರ ರಾಶಿ ಫಲಾಫಲ ಹೇಗಿದೆ?
– ಯಾವ ರಾಶಿಗೆ ಶುಭ? ಯಾವ ರಾಶಿಗೆ ಅಶುಭ?
– ಯಾರ ಭವಿಷ್ಯದಲ್ಲಿ ಏನೇನಿದೆ..?

NAMMUR EXPRESS NEWS
ಜೋತಿಷ್ಯ: 2024 ಎಪ್ರಿಲ್ 05ರ ಶುಕ್ರವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.?

ಮೇಷ ರಾಶಿ :
ಕೆಲವು ವ್ಯವಹಾರಗಳಲ್ಲಿ ಬಂಧುಗಳ ಸಲಹೆ ಪಡೆದು ಮುನ್ನಡೆಯುವುದು ಉತ್ತಮ. ಕೈಗೆತ್ತಿಕೊಂಡ ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿನ ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದ ನಿವಾರಿಸುತ್ತೀರಿ. ಅಗತ್ಯಕ್ಕೆ ಆರ್ಥಿಕ ಸಹಾಯ ದೊರೆಯುತ್ತದೆ. ವ್ಯಾಪಾರ ಅಭಿವೃದ್ಧಿಗಾಗಿ ಪಟ್ಟ ಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ.

ವೃಷಭ ರಾಶಿ :
ದೀರ್ಘಕಾಲದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಮಾನಸಿಕ ಪ್ರಶಾಂತತೆ ದೊರೆಯುತ್ತದೆ. ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗುತ್ತವೆ. ಉದ್ಯೋಗದಲ್ಲಿ ನಿಮ್ಮ ಮೌಲ್ಯ ಹೆಚ್ಚಾಗುತ್ತದೆ. ಮೌಲ್ಯದ ವಸ್ತ್ರ,ಆಭರಣ ಖರೀದಿಸಲಾಗುತ್ತದೆ. ಬಾಲ್ಯದ ಗೆಳೆಯರೊಂದಿಗೆ ಭೋಜನ ಮನರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೀರಿ. ವ್ಯಾಪಾರಗಳು ಲಾಭದಾಯಕವಾಗಿರುತ್ತವೆ.

ಮಿಥುನ ರಾಶಿ :
ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ವೃತ್ತಿಪರ ವ್ಯವಹಾರಗಳಲ್ಲಿ ಸ್ಥಿರತೆಯ ಕೊರತೆ ಉಂಟಾಗುತ್ತದೆ. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿಗಳಿರುತ್ತದೆ. ವ್ಯರ್ಥ ಪ್ರಯಾಣಗಳನ್ನು ಮಾಡಬೇಕಾಗುತ್ತದೆ. ಮನೆಯ ಹೊರಗೆ ಹೊಸ ಸಮಸ್ಯೆಗಳು ಉದ್ಭವಿಸುತ್ತವೆ. ಕೈಗೆತ್ತಿಕೊಂಡ ಕೆಲಸಗಳಲ್ಲಿ ವಿಳಂಬ ಉಂಟಾಗುತ್ತದೆ. ಸಾಲದ ಹೊರೆ ಹೆಚ್ಚಾಗುತ್ತದೆ.

ಕಟಕ ರಾಶಿ :
ದೈವಿಕ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಆಪ್ತರೊಂದಿಗೆ ಸಣ್ಣಪುಟ್ಟ ವಿವಾದಗಳು ಉಂಟಾಗುತ್ತದೆ. ಆರೋಗ್ಯದ ಬಗ್ಗೆ ಶ್ರದ್ಧೆ ವಹಿಸಬೇಕು . ಪ್ರಮುಖ ವ್ಯವಹಾರಗಳಲ್ಲಿ ಸ್ಥಿರತೆ ಇಲ್ಲದ ಆಲೋಚನೆಗಳಿಂದ ನಷ್ಟ ಉಂಟಾಗುತ್ತದೆ. ಕೌಟುಂಬಿಕ ವಾತಾವರಣ ಅಸ್ತವ್ಯಸ್ತವಾಗಿರುತ್ತದೆ. ವೃತ್ತಿಪರ ವ್ಯವಹಾರಗಳು ನಿರುತ್ಸಾಹಗೊಳಿಸುತ್ತವೆ.

ಸಿಂಹ ರಾಶಿ :
ಮಕ್ಕಳ ಶೈಕ್ಷಣಿಕ ವಿಷಯಗಳಲ್ಲಿ ಶುಭ ಸುದ್ದಿ ಕೇಳುತ್ತೀರಿ. ಸಮಾಜದಲ್ಲಿ ಗೌರವಕ್ಕೆ ಕೊರತೆ ಇರುವುದಿಲ್ಲ. ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿ ಕಂಡುಬರುತ್ತದೆ. ಹಣಕಾಸಿನ ವಿಷಯಗಳು ತೃಪ್ತಿಕರವಾಗಿ ಸಾಗುತ್ತವೆ. ಹೊಸ ವ್ಯವಹಾರಗಳ ಹೂಡಿಕೆಗೆ ಸ್ನೇಹಿತರಿಂದ ಹಣಕಾಸಿನ ಸಹಾಯವನ್ನು ಪಡೆಯುತ್ತೀರಿ.

ಕನ್ಯಾರಾಶಿ :
ಹೊಸ ವಾಹನ ಖರೀದಿಗೆ ಇದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ಉದ್ಯೋಗದಲ್ಲಿ ಅಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗುತ್ತೀರಿ. ವ್ಯಾಪಾರ ವಿಸ್ತರಣೆಯ ಪ್ರಯತ್ನಗಳು ಫಲ ನೀಡುತ್ತವೆ. ನಿರುದ್ಯೋಗಿಗಳ ಕನಸುಗಳು ನನಸಾಗುತ್ತವೆ ಮತ್ತು ಹಣಕಾಸಿನ ವ್ಯವಹಾರಗಳು ಕೂಡಿ ಬರುತ್ತವೆ. ಸ್ನೇಹಿತರಿಂದ ಶುಭ ಸುದ್ದಿ ದೊರೆಯುತ್ತದೆ.

ತುಲಾ ರಾಶಿ :
ದೂರ ಪ್ರಯಾಣದಲ್ಲಿ ವಾಹನ ತೊಂದರೆ ಎದುರಾಗುತ್ತವ. ವ್ಯರ್ಥ ಖರ್ಚುಗಳು ಹೆಚ್ಚಾಗುತ್ತವೆ. ವೃತ್ತಿಪರ ವ್ಯವಹಾರಗಳು ನಿಧಾನವಾಗಿ ಸಾಗುತ್ತವೆ. ಉದ್ಯೋಗದಲ್ಲಿ ಅಧಿಕಾರಿಗಳ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಕೈಗೆತ್ತಿಕೊಂಡ ಕೆಲಸಗಳಲ್ಲಿ ವಿಳಂಬ ಉಂಟಾಗುತ್ತದ. ಕುಟುಂಬ ಸದಸ್ಯರೊಂದಿಗೆ ಭಿನ್ನಭಿಪ್ರಾಯಗಳಿರುತ್ತವೆ.

ವೃಶ್ಚಿಕ ರಾಶಿ :
ವ್ಯಾಪಾರ ಪಾಲುದಾರರೊಂದಿಗಿನ ವಿವಾದಗಳು ದೂರವಾಗುತ್ತವೆ. ಪ್ರಮುಖ ವಿಷಯಗಳಲ್ಲಿ ಆತುರ ಪಡುವುದರಿಂದ ಕೆಲಸಗಳು ಸಮಯಕ್ಕೆ ಪೂರ್ಣಗೊಳ್ಳುವುದಿಲ್ಲ. ವೃತ್ತಿಪರ ಉದ್ಯೋಗಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳಿರುತ್ತವೆ. ಬಂಧುಗಳಿಂದ ಅನಿರೀಕ್ಷಿತ ಒತ್ತಡ ಉಂಟಾಗುತ್ತವೆ. ಕುಟುಂಬದ ಸದಸ್ಯರ ಆರೋಗ್ಯದ ವಿಚಾರದಲ್ಲಿ ಜಾಗ್ರತೆ ವಹಿಸಬೇಕು.

ಧನುಸ್ಸು ರಾಶಿ :
ಬಂಧು ಮಿತ್ರರಿಂದ ಸಿಗುವ ಮಾಹಿತಿ ಅಚ್ಚರಿ ಮೂಡಿಸುತ್ತದೆ. ದೀರ್ಘಕಾಲದಿಂದ ಪೂರ್ಣಗೊಳ್ಳದ ಕೆಲಸಗಳು ಕುಟುಂಬದ ಸದಸ್ಯರ ನೆರವಿನಿಂದ ಪೂರ್ಣಗೊಳ್ಳುತ್ತವೆ. ವೃತ್ತಿಪರ ವ್ಯವಹಾರದಲ್ಲಿನ ಸಮಸ್ಯೆಗಳನ್ನು ನಿವಾರಿಸುತ್ತೀರಿ. ಉದ್ಯೋಗದಲ್ಲಿನ ವಿವಾದಗಳು ಬಗೆಹರಿಯುತ್ತವೆ. ಹಠಾತ್ ಆರ್ಥಿಕ ಲಾಭದ ಸೂಚನೆಗಳಿವೆ. ಪ್ರಯಾಣದ ಸಮಯದಲ್ಲಿ ಹೊಸ ಪರಿಚಯಗಳು ಹೆಚ್ಚಾಗುತ್ತವೆ.

ಮಕರ ರಾಶಿ :
ಆದಾಯ ಸೀಮಿತವಾಗಿರುತ್ತದೆ. ಉದ್ಯೋಗದಲ್ಲಿ ಸ್ಥಾನಚನೆ ಸೂಚನೆಗಳಿವೆ. ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿರುತ್ತವೆ. ದೈವಿಕ ಚಿಂತನೆ ಹೆಚ್ಚುತ್ತದೆ. ವೃತ್ತಿಪರ ವ್ಯವಹಾರಗಳಲ್ಲಿ ಕಠಿಣ ಪರಿಶ್ರಮಕ್ಕೆ ಫಲ ದೊರೆಯುವುದಿಲ್ಲ. ಸಮಯಕ್ಕೆ ಸರಿಯಾಗಿ ವ್ಯವಹಾರಗಳು ಪೂರ್ಣಗೊಳ್ಳದೆ, ಕಿರಿಕಿರಿ ಹೆಚ್ಚಾಗುತ್ತದೆ.

ಕುಂಭ ರಾಶಿ :
ಆರ್ಥಿಕ ಪ್ರಗತಿ ಕಂಡುಬರುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಅನುಕೂಲಕರ ವಾತಾವರಣವ ಇರುತ್ತದೆ. ಹೊಸ ಉಪಕ್ರಮಗಳನ್ನು ಪ್ರಾರಂಭಿಸಲಾಗುತ್ತದೆ, ಬೆಲೆಬಾಳುವ ವಸ್ತ್ರ ಮತ್ತು ಆಭರಣಗಳನ್ನು ಖರೀದಿಸಲಾಗುತ್ತದೆ, ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ದೊರೆಯುತ್ತವೆ,ಬಂಧುಗಳೊಂದಿಗೆ ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತೀರಿ. ಔತಣಕೂಟಗಳಿಗೆ ಆಹ್ವಾನಗಳು ಬರುತ್ತವೆ.

ಮೀನ ರಾಶಿ :
ಬಂಧು ವರ್ಗದವರಿಂದ ಅನಿರೀಕ್ಷಿತ ಮಾತುಗಳನ್ನು ಕೇಳಬೇಕಾಗುತ್ತದೆ. ವ್ಯಾಪಾರಗಳು ಮಂದಗತಿಯಲ್ಲಿ ಸಾಗುತ್ತವೆ. ನಿರುದ್ಯೋಗ ಪ್ರಯತ್ನಗಳು ಕೂಡಿ ಬರುವುದಿಲ್ಲ. ಕೆಲವು ವ್ಯವಹಾರಗಳಲ್ಲಿ ಯೋಚಿಸಿ, ಮುಂದುವರಿಯುವುದು ಉತ್ತಮ. ಕೌಟುಂಬಿಕ ವಾತಾವರಣ ಗೊಂದಲಮಯವಾಗಿರುತ್ತದೆ.

Categories
ರಾಜ್ಯ

ಸ್ಮಾರ್ಟ್ ಕಾರ್ಡ್ ವಿತರಣೆಯಲ್ಲಿ ವಿಳಂಬ..!

ಸ್ಮಾರ್ಟ್ ಕಾರ್ಡ್ ವಿತರಣೆಯಲ್ಲಿ ವಿಳಂಬ..!
– ಚಾಲನಾ ಪರವಾನಿಗೆ, ಆರ್‌ಸಿ ಸಿಗದೆ ಸವಾರರು ಕಂಗಾಲು
– ಸಂದೇಶ ಬಂದರೂ ಕಾರ್ಡ್ ಸಿಗುತ್ತಿಲ್ಲ!

NAMMUR EXPRESS NEWS
ಮಂಗಳೂರು: ಹೊಸ ವಾಹನ ಖರೀದಿಸಿದವರಿಗೆ ಸ್ಮಾರ್ಟ್ ಕಾರ್ಡ್ ವಿತರಣೆಯಲ್ಲಿ ಆಗುತ್ತಿರುವ ವಿಳಂಬಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ಪ್ರಯಾಣದ ವೇಳೆ ತಡೆದು ನಿಲ್ಲಿಸುವ ಅಧಿಕಾರಿಗಳು ದಾಖಲೆ ನೀಡುವಂತೆ ಕೇಳಿದಾಗ ತೋರಿಸಲು ಸ್ಮಾರ್ಟ್ ಕಾರ್ಡ್ ಇಲ್ಲದ ವಾಹನ ಮಾಲಕರು ಸಮಸ್ಯೆಗೀಡಾಗುತ್ತಿದ್ದಾರೆ. ಸಾಮಾನ್ಯವಾಗಿ ಹೊಸ ವಾಹನ ಖರೀದಿಸಿ ಸರಿಸುಮಾರು 1 ತಿಂಗಳೊಳಗೆ ನೋಂದಣಿ ಪತ್ರ (ಆರ್‌ಸಿ) ಕೈಸೇರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮೂರು- ನಾಲ್ಕು ತಿಂಗಳಾದರೂ ವಾಹನದ ನೋಂದಣಿ ಪತ್ರ ಸಿಗುತ್ತಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಅಲ್ಲಲ್ಲಿ ಚೆಕ್‌ಪೋಸ್ಟ್ ಗಳನ್ನು ತೆರೆಯಲಾಗಿದ್ದು, ತೀವ್ರ ತಪಾಸಣೆ ನಡೆಯುತ್ತಿದೆ. ಹೊರ ಜಿಲ್ಲೆಯ ಅಧಿಕಾರಿಗಳು ತಪಾಸಣ ತಂಡದಲ್ಲಿರುವ ಹಿನ್ನೆಲೆಯಲ್ಲಿ ದಾಖಲೆ ಪರಿಶೀಲನೆ ವೇಳೆ ಮನವರಿಕೆ ಮಾಡುವುದೇ ಸವಾಲಿನ ಕೆಲಸ. ರಾತ್ರಿ ಸಂಚಾರದ ವೇಳೆ ತಪಾಸಣೆ ತೀವ್ರವಾಗಿರುವ ಕಾರಣ ಅನಗತ್ಯ ಸಂಕಷ್ಟ ಎದುರಾಗು ತ್ತಿದೆ ಎಂದು ವಾಹನ ಚಾಲಕರು ಅಸಮಾಧಾನ ಹೊರಹಾಕಿದ್ದಾರೆ.

ಸಂದೇಶ ಬಂದರೂ ಕಾರ್ಡ್ ಸಿಗುತ್ತಿಲ್ಲ!

ಹೊಸ ವಾಹನ ಖರೀದಿಸಿದ ಕೆಲವರಿಗೆ ಸ್ಮಾರ್ಟ್ ಕಾರ್ಡ್‌ ಅಂಚೆ ಮೂಲಕ ರವಾನಿಸಲಾಗಿದೆ ಎಂಬ ಸಂದೇಶ ಬರುತ್ತದೆ. ಆದರೆ ತಿಂಗಳು ಕಳೆದರೂ ಸ್ಮಾರ್ಟ್‌ಕಾರ್ಡ್ ಕೈ ಸೇರುತ್ತಿಲ್ಲ. ಸಂದೇಶದಲ್ಲಿರುವ ಟ್ರ್ಯಾಕಿಂಗ್ ಸಂಖ್ಯೆಯ ಮೂಲಕ ಪರಿಶೀಲನೆ ಅಸಾಧ್ಯ ವಾದ ಮಾತು ಎನ್ನುವುದು ಕೆಲವರ ಆರೋಪ. ಸ್ಮಾರ್ಟ್ ಕಾರ್ಡ್‌ ಸಿಗದೆ ಕಚೇರಿ ಅಲೆದಾಡುವ ಪ್ರಮೇಯ ಎದುರಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಚಾರದ ವೇಳೆಯಲ್ಲೂ ಸಮಸ್ಯೆಯಾಗುತ್ತಿದೆ. ಯಾರೂ ಕೂಡ ಸರಿಯಾದ ಮಾಹಿತಿ ಒದಗಿಸುತ್ತಿಲ್ಲ. ಸ್ಮಾರ್ಟ್ ಕಾರ್ಡ್‌ಗಳು ಕಚೇರಿಯಲ್ಲಿದ್ದರೂ ವಿತರಿಸುತ್ತಿಲ್ಲ.

ಹೊಸ ಸಂಸ್ಥೆಯೊಂದಿಗೆ ವಿಲೀನದಿಂದ ವಿಳಂಬ!

ರೋಸ್ಮಾಟ ಕಂಪೆನಿಗೆ ಸ್ಮಾರ್ಟ್‌ ಕಾರ್ಡ್‌ಗಳನ್ನು ತಯಾರಿಸುವ ಜವಾಬ್ದಾರಿ ನೀಡಲಾಗಿದೆ. ರಾಷ್ಟ್ರೀಯ ಮಾಹಿತಿ ಕೇಂದ್ರ ದಲ್ಲಿದ್ದ ವಾಹನಗಳ ಮಾಹಿತಿಯನ್ನು ರೋಸ್ಮಾಟ ಕಂಪೆನಿಗೆ ಹಸ್ತಾಂತರ ಮಾಡುವ ವೇಳೆ ವಿಳಂಬವಾಗಿದೆ. ಕಾರ್ಡ್‌ಗಳನ್ನು ಮುದ್ರಿಸಿ ಬಳಿಕ ಅವುಗಳಿಗೆ ಆಯಾ ವಾಹನದ ಮಾಹಿತಿಯನ್ನು ಶೇಖರಿಸುವ ಪ್ರಕ್ರಿಯೆ (ನಾಲೆಡ್ಜ್ ಮ್ಯಾನೇಜ್ ಮೆಂಟ್ ಸಿಸ್ಟಂ)ಗೆ ಕಾಲಾವಕಾಶ ಅಗತ್ಯವಾಗಿದ್ದು, ಕಳೆದ ಕೆಲವು ತಿಂಗಳಲ್ಲಿ ಈ ಪ್ರಕ್ರಿಯೆ ತಡವಾಗಲು ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿಜಿಲಾಕರ್‌ನಲ್ಲಿದೆ ಮಾಹಿತಿ!

ವಾಹನದ ಮಾಹಿತಿ ಡಿಜಿಲಾಕರ್‌ನಲ್ಲಿ ದಾಖಲಾಗಿರುತ್ತದೆ. ಯುವ ಜನತೆ ಬಹುತೇಕ ಡಿಜಿ ಲಾಕರ್ ಬಳಸುತ್ತಿರುವ ಕಾರಣ ದಾಖಲೆಗಳನ್ನು ಗಮನಿಸುತ್ತಾರೆ. ಆದರೆ ಹಿರಿಯ ನಾಗರಿಕರಿಗೆ ಹಾಗೂ ಅನೇಕ ವಾಹನ ಸವಾರರಿಗೆ ಡಿಜಿ ಲಾಕರ್ ಬಗ್ಗೆ ಮಾಹಿತಿಯ ಕೊರತೆ ಇದ್ದು, ಕಾರ್ಡ್ ಬೇಕೆಂದು ದುಂಬಾಲು ಬೀಳುತ್ತಿದ್ದಾರೆ. ಮಂಗಳೂರು ಆರ್‌ಟಿಒ ವ್ಯಾಪ್ತಿಯಲ್ಲಿ ನೊಂದಣಿಗೊಂಡಿರುವ ಎಲ್ಲ ವಾಹನಗಳ ಸ್ಮಾರ್ಟ್ ಕಾರ್ಡ್‌ಗಳನ್ನು ಅಂಚೆ ಮೂಲಕ ಮಾಲಕರಿಗೆ ರವಾನಿಸಲಾಗಿದೆ. ಎಚ್‌ಎಸ್‌ಆರ್‌ಪಿ ಸಂಖ್ಯೆ ಆಗದೇ ಇರುವ ಕೆಲವು ವಾಹನಗಳ ಆರ್‌ಸಿ ಮಾತ್ರವೇ ಬಾಕಿ ಇವೆ.

Categories
ಮಂಗಳೂರು ರಾಜ್ಯ ಹವಾಮಾನ ಸುದ್ದಿ

ಎಪ್ರಿಲ್ – ಜೂನ್ ತನಕ ರಾಜ್ಯದ ಹಲವಡೆ ತಾಪಮಾನ ಏರಿಕೆ ಸಂಭವ..!

ಎಪ್ರಿಲ್ – ಜೂನ್ ತನಕ ರಾಜ್ಯದ ಹಲವಡೆ ತಾಪಮಾನ ಏರಿಕೆ ಸಂಭವ..!
– ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ

NAMMUR EXPRESS NEWS
ಮಂಗಳೂರು: ಈ ವರ್ಷದ ಬೇಸಿಗೆಯಲ್ಲಿ ಎಪ್ರಿಲ್‌ನಿಂದ ಜೂನ್ ತನಕ ರಾಜ್ಯದ ಹಲವಡೆ ತಾಪಮಾನ ವಾಡಿಕೆಗಿಂತ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ. ರಾಜ್ಯದ ಹಲವೆಡೆ ಎ.2 ರಿಂದ 14 ದಿನಗಳ ಕಾಲ ಬಿಸಿಗಾಳಿ ಸಾಧ್ಯತೆಗಳಿದ್ದು, ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಾದ ಚಿತ್ರದುರ್ಗ ಗದಗ, ದಾವಣಗೆರೆ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಚಾಮರಾಜನಗರ ಜಿಲ್ಲೆ ಗಳಲ್ಲಿ ಬಿಸಿಗಾಳಿ ಕಾಣಿಸಿಕೊಳ್ಳಲಿದೆ. ಬಿಸಿಗಾಳಿ ಸಂದರ್ಭಗಳಲ್ಲಿ ಅತ್ಯಧಿಕ ತಾಪಮಾನವು ವೃದ್ಧರು, ಮಕ್ಕಳು ಹಾಗೂ ಆನಾರೋಗ್ಯಪೀಡಿತರ ಮೇಲೆ ಪರಿಣಾಮ ಬೀರಲಿದ್ದು, ಮುಖ್ಯವಾಗಿ ಶಾಖದೊತ್ತಡ, ನಿರ್ಜಲೀಕರಣ ಆಯಾಸ ಕಂಡು ಬರಲಿದೆ. ಮೂಲ ಸೌಕರ್ಯಗಳಾದ ವಿದ್ಯುತ್ ಸರಬರಾಜು ಮತ್ತು ಸಾರಿಗೆ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ.

ಈ ಸವಾಲುಗಳನ್ನು ಎದುರಿಸಲು ಅಧಿಕಾರಿಗಳು ಪೂರ್ವಭಾವಿ ಕ್ರಮ ಕೈಗೊಳ್ಳುವುದು ಅಗತ್ಯ. ಬಿಸಿಗಾಳಿ ಪರಿಣಾಮಗಳನ್ನು ನಿವಾರಿಸಲು ಕಾರ್ಯತಂತ್ರಗಳನ್ನು ರೂಪಿಸಬೇಕಾಗಿದೆ. ಸಾರ್ವಜನಿಕ ಆರೋಗ್ಯವನ್ನು ಕಾಪಾಡಲು ಮತ್ತು ಬಿಸಿಗಾಳಿಯ ಪ್ರತಿಕೂಲ ಪರಿಣಾಮಗಳನ್ನು ಕಡಿಮೆ ಮಾಡಲು ಇಂತಹ ಪ್ರಯತ್ನ ಅತ್ಯಗತ್ಯ ಎಂದು ಇಲಾಖೆ ಸಲಹೆ ನೀಡಿದೆ.

ಗರಿಷ್ಠ ತಾಪಮಾನ : 2024ರ ಎಪ್ರಿಲ್ ತಿಂಗಳಲ್ಲಿ ಗರಿಷ್ಠ ತಾಪಮಾನ ರಾಜ್ಯದ ಹಲವೆಡೆ ವಾಡಿಕೆಗಿಂತ ಅಧಿಕವಾಗಿರುವ ಮತ್ತು ಕನಿಷ್ಠ ತಾಪಮಾನವು ಅಧಿಕವಾಗುವ ಸಾಧ್ಯತೆ ಇದೆ.

ಮಳೆ ಮುನ್ಸೂಚನೆ : ರಾಜ್ಯದ ಉತ್ತರ ಒಳನಾಡಿನ ಜಿಲ್ಲೆ ಗಳಲ್ಲಿ ವಾಡಿಕೆಗಿಂತಾ ಅಧಿಕ ಮಳೆಯಾಗುವ ಸಾಧ್ಯತೆಗಳಿದ್ದು, ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿ ಜಿಲ್ಲೆ ಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Categories
ಉಡುಪಿ ಕರಾವಳಿ ಚಿಕ್ಕಮಗಳೂರು

ಸಿಂಪಲ್ ಮ್ಯಾನ್ ಕೋಟಾ ಕೂಡಾ ಕೋಟ್ಯಾಧಿಪತಿ!

ಸಿಂಪಲ್ ಮ್ಯಾನ್ ಕೋಟಾ ಕೂಡಾ ಕೋಟ್ಯಾಧಿಪತಿ!
– ತಮ್ಮ ಹಾಗೂ ಕುಟುಂಬದ ಬಳಿ ಆಸ್ತಿ ಘೋಷಣೆ
– ಉಡುಪಿ ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ
– 1 ಕೋಟಿ ಸಾಲ: ಮೂವರು ಮಕ್ಕಳ ಹೆಸರಲ್ಲೂ ಆಸ್ತಿ!

NAMMUR EXPRESS NEWS
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು ಬುಧವಾರ ನಮ್ಮ ನಾಮಪತ್ರವನ್ನು ಸಲ್ಲಿಸಿದ್ದು ತಮ್ಮ ಆಸ್ತಿ ವಿವರವನ್ನು ಘೋಷಿಸಿಕೊಂಡಿದ್ದಾರೆ. ಸಿಂಪಲ್ ಮ್ಯಾನ್ ಎಂದೇ ಹೆಸರಾಗಿರುವ ಕೋಟ ಶ್ರೀನಿವಾಸ ಪೂಜಾರಿ ನಾಮಪತ್ರದ ಜೊತೆ ತಮ್ಮ ಆಸ್ತಿ ವಿವರ ಅಫಿಡವಿಟ್ ನಲ್ಲಿ ಅವರ ಕುಟುಂಬ 3.5 ಕೋಟಿ ಒಡೆಯರಾಗಿದ್ದಾರೆ ಎಂದು ಘೋಷಿಸಿಕೊಂಡಿದ್ದಾರೆ. ಇನ್ನು ವಿಶೇಷ ಎಂದರೆ ಕೋಟ ಶ್ರೀನಿವಾಸ್ ಅವರಿಗಿಂತಲೂ ಅವರ ಪತ್ನಿ ಶಾಂತಾ ಅವರೇ ಸಿರಿವಂತರಾಗಿದ್ದಾರೆ ಏಳನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿರುವ ಕೋಟ ಶ್ರೀನಿವಾಸ ಪೂಜಾರಿ , ಒಂದು ಕೋಟಿ ರೂಪಾಯಿ ಸಾಲದಲ್ಲಿದ್ದಾರೆ. ಇವರ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ. ತಮ್ಮ ಅಫಿಡವಿಟ್ ನಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರು ಪತ್ನಿ ಶಾಂತಾ ಮಕ್ಕಳಾದ ಸ್ವಾತಿ, ಶಶಿಧರ್ ಹಾಗೂ ಶ್ರುತಿ ಅವರ ಹೆಸರಿನಲ್ಲಿ ಇರುವ ಆಸ್ತಿಗಳ ವಿವರವನ್ನು ಸಲ್ಲಿಸಿದ್ದಾರೆ.

ಕೋಟ ಶ್ರೀನಿವಾಸ ಪೂಜಾರಿ ಆಸ್ತಿ ವಿವರ

ಚರಾಸ್ಥಿ: ಕೋಟ ಶ್ರೀನಿವಾಸ ಪೂಜಾರಿ ಅವರ ಬಳಿ ನಗದು ,ಚಿನ್ನ ವಾಹನ ಸೇರಿದಂತೆ ಒಟ್ಟು ರೂ. 31,95,082 ಮೌಲ್ಯದ ಚರಾಸ್ತಿ ಇದ್ದು , ಇನ್ನು ಅವರ ಪತ್ನಿ ಶಾಂತಾ ಅವರ ಬಳಿ 10,29,027 ಮೌಲ್ಯದ ಚರಾಸ್ತಿ ಹಾಗೂ ಮೂವರು ಮಕ್ಕಳು 21,96,401 ಬಳಿ ಮೌಲ್ಯದ ಚರಾಸ್ತಿ ಸೇರಿದಂತೆ ಒಟ್ಟು- 64,20,510 ಲಕ್ಷ ಮೌಲ್ಯದ ಚರಾಸ್ತಿ ಇದೆ

ಕೋಟ ಶ್ರೀನಿವಾಸ್ ಬಳಿ 10 ಗ್ರಾಂ ನ 1 ಚಿನ್ನದ ಉಂಗುರ, ಪತ್ನಿ ಬಳಿ 150 ಗ್ರಾಂ ಚಿನ್ನ-9,57,000 ಮಕ್ಕಳ ಬಳಿ ರೂ. 4,46,700 ಮೌಲ್ಯದ ಚಿನ್ನ ಇದೆ.ಮಾರುತಿ ಆಲ್ಟೋ ಕಾರು 2006 ಮಾಡೆಲ್- ರೂ1,50,000, ಇನ್ನೋವಾ ಕಾರು 2016 ಮಾಡೆಲ್ 22,00,000, ಮಗನ ಹೆಸರಿನಲ್ಲಿ ರೂ. 16.5 ಲಕ್ಷ ಮೌಲ್ಯದ ಹೋಂಡಾ ಸಿಟಿ ಕಾರು ಇದೆ.

ಸ್ಥಿರಾಸ್ತಿ: (ಭೂಮಿ,ಕೃಷಿಭೂಮಿ ಮತ್ತು ಕಟ್ಟಡ ಸೇರಿ ಸದ್ಯದ ಮಾರುಕಟ್ಟೆ ದರ)ಕೋಟ ಶ್ರೀನಿವಾಸ ಪೂಜಾರಿ ಅವರ ಬಳಿ ರೂ. 79,95,082 ಮೌಲ್ಯದ ಸ್ತಿರಾಸ್ಥಿ, ಶಾಂತಾ ಅವರ ಬಳಿ 1,62,79,027 ಮೌಲ್ಯದ ಸ್ತಿರಾಸ್ಥಿ, ಮಕ್ಕಳ ಹೆಸರಿನಲ್ಲಿ ರೂ. 51,96,401 ಮೌಲ್ಯದ ಸ್ತಿರಾಸ್ಥಿ ಸೇರಿದಂತೆ ಒಟ್ಟು ರೂ. 2,94,70,510 ಮೌಲ್ಯದ ಸ್ತಿರಾಸ್ಥಿ ಹೊಂದಿದ್ದಾರೆ.

ಸಾಲದ ಬಗ್ಗೆ ನೋಡುವುದಾದರೆ ಕೋಟ ಶ್ರೀನಿವಾಸ್ ಪೂಜಾರಿ ಅವರು ರೂ. 40,64, 924 ಸಾಲ, ಶಾಂತ ಅವರು ರೂ. 35,43,757 ಹಾಗೂ ಮಗ ಹೆಸರಿನಲ್ಲಿ ರೂ. 28,35,964 ಸಾಲ ಸೇರಿದಂತೆ ಒಟ್ಟು ಒಟ್ಟು ಸಾಲ 1,04,44,645 ಸಾಲವಿದೆ.