Categories
ಅಪರಾಧ ತೀರ್ಥಹಳ್ಳಿ

ಲಾಡ್ಜಲ್ಲಿ ಯುವತಿಯ ಬರ್ಬರ ಕೊಲೆ: ಇನ್ನು ನಿಗೂಢ!

ಲಾಡ್ಜಲ್ಲಿ ಯುವತಿಯ ಬರ್ಬರ ಕೊಲೆ: ಇನ್ನು ನಿಗೂಢ!
– ದಾಖಲೆ ಇಲ್ಲದೇ ಲಾಡ್ಜ್‌ ರೂಂ ಕೊಟ್ಟ ಸಿಬ್ಬಂದಿ
– ಹಣಗೆರೆ ಕಟ್ಟೆ ಕೊಲೆ ಹಿಂದೆ ನೂರೆಂಟು ಅನುಮಾನ!‌

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು ಹಣಗೆರೆ ಕಟ್ಟೆ ಹಜರತ್ ಸೈಯದ್ ಸಾದತ್ ದರ್ಗಾ ಭೂತರಾಯ ಚೌಡೇಶ್ವರಿ ದೇವಾಲಯದ ಸಮೀಪ ಯುವತಿಯೊಬ್ಬಳ ಹತ್ಯೆಯಾಗಿದೆ. ಆದ್ರೆ ಇನ್ನು ಕೊಲೆ ಏಕೆ ನಡೆದಿದೆ ಎಂಬ ಬಗ್ಗೆ ತಿಳಿದು ಬಂದಿಲ್ಲ. ಈ ಪ್ರಕರಣ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಇನ್ನೊಂದು ಕಡೆ ‍ಈ ಹಿಂದೆಯು ಹಲವು ಸಲ ಸ್ಥಳೀಯರು ಹೇಳಿಕೊಂಡ ದೂರಿನಂತೆ ಇಲ್ಲಿನ ಕೆಲವು ಲಾಡ್ಜ್‌ಗಳು ಅಕ್ರಮ ಚಟುವಟಿಕೆಗೆ ಆಸ್ಪದ ಮಾಡಿಕೊಡುತ್ತಿವೆ ಎಂಬ ದೂರಿತ್ತು. ಅಲ್ಲದೆ ಮಾದಕ ವಸ್ತುಗಳ ಮಾರಾಟ ಈ ಭಾಗದಲ್ಲಿ ನಡೆಯುತ್ತಿವೆ ಎಂಬ ಊರು ಮನೆಯವರ ಆರೋಪಗಳಿಗೆ ಪೊಲೀಸ್‌ ಇಲಾಖೆ ತಲೆ ಕೆಡಿಸಿಕೊಂಡಿರಲಿಲ್ಲ. ಇದೀಗ ಯುವತಿಯೊಬ್ಬಳ ಹತ್ಯೆಯಾಗಿದ್ದು ಘಟನೆ ನಡೆದು ಸುಮಾರು ಮೂರು ದಿನಗಳ ನಂತರ ಪ್ರಕರಣ ಬೆಳಕಿಗೆ ಬಂದಿದೆ.

ಕೊಲೆ ಮಾಡಿ ಓರ್ವ ಪರಾರಿ!

ಹಣಗೆರೆ ಕಟ್ಟೆಯ ಲಾಡ್ಜ್‌ವೊಂದರಲ್ಲಿ ಯುವತಿಯನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂಬ ಸುದ್ದಿ ಆತಂಕವನ್ನು ಜೊತೆಗಿಟ್ಟುಕೊಂಡೇ ಎಲ್ಲ ಕಡೆಗಳಲ್ಲಿ ಹರಿದಾಡಿತ್ತು. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರಿಗೆ ಲಾಡ್ಜ್‌ವೊಂದರ ಕೋಣೆಯಲ್ಲಿ ಹೆಪ್ಪುಗಟ್ಟಿದ ರಕ್ತದ ಕಲೆಗಳ ನಡುವೆ ಯುವತಿಯ ಶವ ಅಸ್ತವ್ಯಸ್ತವಾಗಿ ಬಿದ್ದಿರುವುದು ಕಂಡು ಬಂದಿದೆ. ಶವ ಕೊಳೆತ ‍ಸ್ಥಿತಿಯಲ್ಲಿತ್ತು. ಪೊಲೀಸ್‌ ಮಹಜರ್‌ಗೆ ಸಾಕಷ್ಟು ಸಮಯ ಹಿಡಿದಿತ್ತು, ಇದಕ್ಕೆ ಕಾರಣ ಲಾಡ್ಜ್‌ನಲ್ಲಿ ಯಾವೊಂದು ಸುಳಿವು ಸಿಗದಿರುವುದು. ಯುವತಿಯ ಜೊತೆಗೆ ಬಂದಿದ್ದ ವ್ಯಕ್ತಿಯೊಬ್ಬ ಆಕೆಯ ಕತ್ತು ಸೀಳಿ ಕೊಂದು, ಮಾರಕಾಸ್ತ್ರವನ್ನು ನೀರಿನಲ್ಲಿ ಹಾಕಿ, ಕೈ ಕಾಲು ತೊಳೆದುಕೊಂಡು ಅಲ್ಲಿಂದ ಹೋಗಿದ್ದ. ಇದ್ಯಾವುದು ಲಾಡ್ಜ್‌ನ ಮಾಲೀಕರಿಗೆ ತಿಳಿದಿಲ್ಲ.

ದಾಖಲೆ ಇಲ್ಲದೇ ಲಾಡ್ಜ್‌ ರೂಂ ಕೊಟ್ಟ ಸಿಬ್ಬಂದಿ!

ಪ್ರಾಥಮಿಕ ಹಂತದಲ್ಲಿ ಯುವಕ ಮತ್ತು ಯುವತಿ ಲಾಡ್ಜ್‌ಗೆ ಬಂದು ರೂಂ ಮಾಡಿದ್ದಾರೆ. ಅವರಿಂದ ಯಾವುದೇ ದಾಖಲೆಗಳನ್ನ ಪಡೆಯದ ಸಿಬ್ಬಂದಿ ಕೋಣೆ ನೀಡಿದ್ದಾರೆ. ಆನಂತರ ಅವರ ಇರುವಿಕೆಯ ಬಗ್ಗೆಯು ವಿಚಾರಿಸಿಲ್ಲ. ನಿನ್ನೆ ಕೆಟ್ಟ ವಾಸನೆ ಹೊರಬಂದ ಹಿನ್ನೆಲೆ ಪರಿಶೀಲಿಸಿದಾಗ ಕೊಲೆಯಾಗಿರುವುದು ಗೊತ್ತಾಗಿದೆ. ಇನ್ನೂ ಯುವತಿ ಯಾರು? ಎಲ್ಲಿಯುವಳು ಎಂಬುದು ಸಹ ಗೊತ್ತಾಗಿಲ್ಲ. ಇದರ ಬಗ್ಗೆ ಪೊಲೀಸ್‌ ಟೀಂ ಪರಿಶೀಲನೆ ನಡೆಸ್ತಿದೆ.

ವಿಧಿ ವಿಜ್ಞಾನ ಇಲಾಖೆ ಸಿಬ್ಬಂದಿ ದೌಡು!

ಇನ್ನೂ ವಿಧಿ ವಿಜ್ಞಾನ ಇಲಾಖೆಯ ಸಿಬ್ಬಂದಿ ತಂಡ ಸ್ಥಳಕ್ಕೆ ಬಂದಿದ್ದು ಸಾಕ್ಷ್ಯಗಳನ್ನು ಕಲೆಹಾಕಿದೆ. ಮೇಲ್ನೋಟಕ್ಕೆ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ತನಿಖಾ ಹಂತದಲ್ಲಿ ಹೆಚ್ಚಿನ ಮಾಹಿತಿ ನೀಡಲು ಪೊಲೀಸ್‌ ಇಲಾಖೆಯ ಅಧಿಕಾರಿಗಳಿಂದಲೂ ಸಾಧ್ಯವಾಗುತ್ತಿಲ್ಲ. ನಡೆದ ಘಟನೆಯ ಕ್ಲೂಗಳು ಇಲ್ಲದಿರುವುದರಿಂದ ಪೊಲೀಸ್‌ ಅಧಿಕಾರಿಗಳು ಲಾಡ್ಜ್‌ ಮಾಲೀಕರ ಬೇಜವಾಬ್ದಾರಿತನದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸೂಚನೆ ನೀಡಿದ್ದಾರೆ.

Categories
ತೀರ್ಥಹಳ್ಳಿ

ಕನ್ನಂಗಿ ಭಾಗದಲ್ಲಿ ಬ್ಯಾಂಕ್ ವಂಚನೆ ಗುಸು ಗುಸು!?

ಕನ್ನಂಗಿ ಭಾಗದಲ್ಲಿ ಬ್ಯಾಂಕ್ ವಂಚನೆ ಗುಸು ಗುಸು!?
– ಸಿಬ್ಬಂದಿಯಿಂದಲೇ ಅನೇಕ ಗ್ರಾಹಕರ ಹಣ ವಂಚನೆ ಆರೋಪ
– ಏನಿದು ಹಣ ಗುಳುಂ ಕಥೆ?

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಕನ್ನಂಗಿ ಸಮೀಪದ ಸ್ಥಳೀಯ ಬ್ಯಾಂಕಿನಲ್ಲಿ ಕೆಲ ಬ್ಯಾಂಕ್ ಖಾತೆದಾರರ ಹಣ ವಂಚನೆ ಆಗಿದೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಈ ಬಗ್ಗೆ ಸ್ಥಳೀಯರು ಗುಸು ಗುಸು ಮಾತನಾಡುತ್ತಿದ್ದಾರೆ. ಇತ್ತೀಚಿಗೆ ಕೋಣಂದೂರು, ಯಡೂರು ಬ್ಯಾಂಕ್ ಒಂದರಲ್ಲಿ ಹಗರಣ ನಡೆದ ಘಟನೆ ಮಾಸುವ ಮುನ್ನವೇ ಈ ಘಟನೆ ನಡೆದಿದ್ದು, ಲಕ್ಷ ಲಕ್ಷ ಹಣ ವಂಚನೆ ಆಗಿದೆ ಎನ್ನಲಾಗಿದೆ. ಬ್ಯಾಂಕ್ ಮುಖ್ಯ ಕಚೇರಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಮುಂದಿನ ತನಿಖೆ ನಡೆಯುತ್ತಿದೆ. ಇತ್ತೀಚಿಗೆ ಬ್ಯಾಂಕ್ ವ್ಯವಹಾರ ಕೂಡ ಇಂತಹ ಘಟನೆಗಳಿಗೆ ಸಾಕ್ಷಿಯಾಗಿದ್ದು ಹಲವು ಅನುಮಾನ ವ್ಯಕ್ತವಾಗುತ್ತಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಮತದಾನ ಜನ ಜಾಗೃತಿ!

ತೀರ್ಥಹಳ್ಳಿಯಲ್ಲಿ ಮತದಾನ ಜನ ಜಾಗೃತಿ!
– ತೀರ್ಥಹಳ್ಳಿ ಬಸ್ ನಿಲ್ದಾಣದಿಂದ ಬೈಕ್ ಜಾಥಾ, ಮೆರವಣಿಗೆ
– ರಂಗೋಲಿಯಲ್ಲಿ ಭಾರತದ ನಕ್ಷೆ ಬಿಡಿಸಿ ಮತದಾನ ಜಾಗೃತಿ!
– ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ ಹಾಕಲೇ ಬೇಕು…

NAMMUR EXPRESS NEWS
ತೀರ್ಥಹಳ್ಳಿ: ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕಡ್ಡಾಯ ಮತದಾನ ಮಾಡಲು ಸಾರ್ವಜನಿಕರಲ್ಲಿ ಕಾರ್ಯಕ್ರಮಗಳ ಮೂಲಕ ತೀರ್ಥಹಳ್ಳಿಯಲ್ಲಿ ಜಾಗೃತಿ ಮೂಡಿಸಲಾಗಿದೆ. ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಹಾಗೂ ಸ್ವೀಪ್ ಸಮಿತಿ, ತಾಲೂಕು ಆಡಳಿತ ವತಿಯಿಂದ ಮತದಾನ ಹಾಗೂ ಜನಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶೈಲಾ ಅವರು ಮಾತನಾಡಿ, ಚುನಾವಣೆಯ ಪರವಾಗಿ ದೇಶದ ಗರ್ವ ಈ ಒಂದು ಘೋಷವಾಕ್ಯದೊಂದಿಗೆ ಇಡೀ ದೇಶದಲ್ಲಿ ಲೋಕಸಭಾ ಚುನಾವಣೆ ಇನ್ನೇನು ಸಮೀಪದಲ್ಲಿ ಇದ್ದು, ಇಡೀ ದೇಶದಲ್ಲಿ ನಾವು ಈ ಕಾರ್ಯಕ್ರಮವನ್ನು ಹಮ್ಮಿಕೊಂದಿದ್ದೇವೆ ಎಂದರು.

ನಮ್ಮೆಲ್ಲರ ಪ್ರೋತ್ಸಾಹ ಹಾಗೂ ಭಾಗವಹಿಸುವಿಕೆಯಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತೀರ್ಥಹಳ್ಳಿ ತಾಲೂಕು ಮತದಾನದ ಪ್ರಮಾಣದಲ್ಲಿ ಇಡೀ ಜಿಲ್ಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿತ್ತು. ಜಿಲ್ಲೆಯಲ್ಲಿ ನಾವು ಪ್ರಶಂಸೆಯನ್ನು ಪಡೆದುಕೊಂಡಿದ್ದೇವೆ. ಇಂದು ವಿಭಿನ್ನವಾಗಿ ತಾಲೂಕಿನಲ್ಲಿ ಯಕ್ಷಗಾನ ಕಲಾವಿದರಿಂದ ಘೋಷವಾಕ್ಯಗಳನ್ನು ಹೇಳಿಸುವ ಮೂಲಕ ಇವತ್ತಿನ ಸ್ವೀಪ್ ಕಾರ್ಯಕ್ರಮ ನಡೆಯುತ್ತಿದೆ ಎಂದರು.

ಪ್ರತಿಯೊಬ್ಬರೂ ಕೂಡ ಮೇ ಏಳರಂದು ಮತದಾನದಿಂದ ಹಿಂದೆ ಸರಿಯದೆ, ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ಎಂದರು. ನಂತರ ಬೈಕ್ ಜಾತಕೆ ಚಾಲನೆ ನೀಡಿದರು. ತೀರ್ಥಹಳ್ಳಿ ಬಸ್ ಸ್ಟಾಂಡ್ ನಿಂದ ಬೈಕ್ ಜಾಥಾ ಮತ್ತು ಮೆರವಣಿಗೆ ಆಗುಂಬೆ ಸರ್ಕಲ್ ಬಂದು ಆಗುಂಬೆ ಸರ್ಕಲ್ ನಿಂದ ಮೆರವಣಿಗೆ ಮುಖಾಂತರ ತಾಲೂಕು ಪಂಚಾಯಿತಿ ತಲುಪಿ, ತಾಲೂಕು ಪಂಚಾಯಿತಿ ಆವರಣದಲ್ಲಿ ಭಾರತದ ನಕ್ಷೆ ರಂಗೋಲಿಯಲ್ಲಿ ಬಿಡಿಸಿ ಮೇಣದಬತ್ತಿ ದೀಪವನ್ನು ಹಚ್ಚಿ ಸಾರ್ವಜನಿಕರಿಗೆ ಮತದಾನದ ಅರಿವನ್ನು ಮೂಡಿಸಿ, ಮತದಾನ ಮಾಡುವಂತೆ ಪ್ರತಿಜ್ಞೆ ಮಾಡಿ ಕಾರ್ಯಕ್ರಮಕ್ಕೆ ವಿರಾಮ ನೀಡಿದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಶೈಲಾ, ಮ್ಯಾನೇಜರ್ ರಾಘವೇಂದ್ರ ಮತ್ತು ಸಿಬ್ಬಂದಿ ವರ್ಗ ಮತ್ತು ಪೋಲಿಸ್ ಇಲಾಖೆ, ಮೆಸ್ಕಾಂ ಇಲಾಖೆ, ಪಟ್ಟಣ ಪಂಚಾಯಿತಿಯ ಸಿಬ್ಬಂದಿ ವರ್ಗ, ಅಂಗನವಾಡಿಯ ಕಾರ್ಯಕರ್ತೆಯರು ಹಾಗೂ ಎಲ್ಲ ಇಲಾಖೆ ಸಿಬ್ಬಂದಿಗಳು ಇದ್ದರು.

 

Categories
ರಾಜ್ಯ

ಗುರುವಾರ ಏರಿತು ಬಂಗಾರದ ಬೆಲೆ..!

ಗುರುವಾರ ಏರಿತು ಬಂಗಾರದ ಬೆಲೆ..!
– 22 ಕ್ಯಾರೆಟ್ 8 ಗ್ರಾಂ ಚಿನ್ನಕ್ಕೆ 600 ರೂ ಹೆಚ್ಚಳ
– ಬೆಳ್ಳಿ ದರ ಕೂಡ ಏರಿಕೆ

NAMMUR EXPRESS NEWS
ಬೆಂಗಳೂರು: ಯುಗಾದಿ ಹಬ್ಬದ ಹತ್ತಿರದಲ್ಲೇ ಇದ್ದು, ಚಿನ್ನ ಬೆಳ್ಳಿ ಖರೀದಿ ಮಾಡೋಣ ಎಂದು ನೀವು ಅಂದುಕೊಂಡಿದ್ದರೆ ನಿಮಗೆ ನಿರಾಸೆ ಕಾಡುವುದು ಖಚಿತ. ಯಾಕೆಂದರೆ ಕಳೆದೊಂದು ವಾರದಿಂದ ದಿನಬಿಡದೇ ದಿನ ಚಿನ್ನದ ದರ ಹೆಚ್ಚು ಕಡಿಮೆ ಆಗುತ್ತಲೇ ಇದೆ. ಒಂದು ದಿನ ಏರಿಕೆಯಾದರೆ, ಮತ್ತೊಂದು ದಿನ ಇಳಿಕೆಯಾಗುತ್ತಿದೆ. ಇದರಿಂದ ಆಭರಣ ಪ್ರಿಯರು ಗೊಂದಲಕ್ಕೆ ಸಿಲುಕಿದ್ದಾರೆ. ಬಂಗಾರದ ಬೆಲೆ ಹೆಚ್ಚುವುದೋ, ಕಡಿಮೆಯಾಗುವುದೋ ಎಂಬ ಚಿಂತೆ ಕಾಡುತ್ತಿರುವುದು ಸುಳ್ಳಲ್ಲ. ಈ ನಡುವೆ ಬೆಳ್ಳಿ ದರದಲ್ಲೂ ಏರಿಳಿತ ಸಾಮಾನ್ಯವಾಗಿದೆ.

ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ).!

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 64,100 ರೂ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 69,870 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.
ಬೆಳ್ಳಿ ದರ: ಇಂದು ಬೆಳ್ಳಿ ದರ ಕೂಡ ಹೆಚ್ಚಾಗಿದೆ. ಒಂದು ಗ್ರಾಂ ಬೆಳ್ಳಿಗೆ 78.25 ರೂ. ಇದೆ. 8 ಗ್ರಾಂಗೆ 626 ರೂ ಇದೆ.

Categories
ಚಿಕ್ಕಮಗಳೂರು

ಟಾಪ್ 3 ನ್ಯೂಸ್ ಚಿಕ್ಕಮಗಳೂರು

ಟಾಪ್ 3 ನ್ಯೂಸ್ ಚಿಕ್ಕಮಗಳೂರು
– ಕಡೂರು: ಕೆರೆಯಲ್ಲಿ ಮುಳುಗಿ ವೃದ್ಧ ಸೇರಿದಂತೆ ಓರ್ವ ಬಾಲಕ ಸಾವು
– ಮೂಡಿಗೆರೆ : ಚಾರ್ಮಾಡಿ ಘಾಟಿಯಲ್ಲಿ ಎರಡನೇ ತಿರುವಿನಲ್ಲಿ 12 ಚಕ್ರದ ಲಾರಿ ಲಾಕ್
– ಕೊಟ್ಟಿಗೆಹಾರ: ದಾಖಲೆ ತೋರಿಸಿದರೂ ಹಣ ವಶಕ್ಕೆ ಪಡೆದ ಅಧಿಕಾರಿಗಳು

NAMMUR EXPRESS NEWS
ಕಡೂರು: ಕೆರೆಯಲ್ಲಿ ಮುಳುಗುತ್ತಿದ್ದ ಬಾಲಕರನ್ನು ರಕ್ಷಿಸಲು ಹೋಗಿ ವೃದ್ಧ ಸೇರಿದಂತೆ ಓರ್ವ ಬಾಲಕ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಚಿಕ್ಕಿಂಗಳ ಗ್ರಾಮದಲ್ಲಿ ನಡೆದಿದೆ. ಕೃಷ್ಣನಾಯ್ಕ (65) ಮತ್ತು ಆದರ್ಶ (14) ಮೃತ ದುರ್ದೈವಿಗಳು. ಚಿಕ್ಕಿಂಗಳ ಗ್ರಾಮದ ಕೆರೆಯಲ್ಲಿ ಕುರಿಗಳಿಗೆ ನೀರು ಕುಡಿಸಲು ವೃದ್ಧ ಕೃಷ್ಣನಾಯ್ಕ ತೆರಳಿದಾಗ, ಕೆರೆಯ ಗುಂಡಿಯಲ್ಲಿ ಈಜಲು ಹೋದ ಗ್ರಾಮದ ಇಬ್ಬರು ಬಾಲಕರು ಮುಳುಗುತ್ತಿರುವುದನ್ನು ಗಮನಿಸಿ ತಕ್ಷಣ ಓರ್ವ ಬಾಲಕನನ್ನು ರಕ್ಷಿಸಿದ್ದಾರೆ. ಬಳಿಕ ಮತ್ತೋರ್ವ ಬಾಲಕ ಆದರ್ಶನನ್ನು ರಕ್ಷಿಸುವ ವೇಳೆ ಗುಂಡಿಯಲ್ಲಿ ವೃದ್ಧ ಹಾಗೂ ಬಾಲಕ ಇಬ್ಬರೂ ಮುಳುಗಿ ಮೃತಪಟ್ಟಿದ್ದಾರೆ.

– ಮೂಡಿಗೆರೆ : ಚಾರ್ಮಾಡಿ ಘಾಟಿಯಲ್ಲಿ ಎರಡನೇ ತಿರುವಿನಲ್ಲಿ 12 ಚಕ್ರದ ಲಾರಿ ಲಾಕ್

ಮೂಡಿಗೆರೆ: ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸೋ ಚಾರ್ಮಾಡಿ ಚಾರ್ಮಾಡಿ ಘಾಟ್ ನ ಎರಡನೇ ತಿರುವಿನಲ್ಲಿ 12 ಚಕ್ರದ ಲಾರಿ ಟರ್ನ್ ಅಗದೇ ಲಾಕ್ ಆಗಿರುವ ಘಟನೆ ನಡೆದಿದೆ. ಬಳ್ಳಾರಿಯಿಂದ ಮಂಗಳೂರಿಗೆ ಕಬ್ಬಿಣ ತುಂಬಿಕೊಂಡು ತೆರಳುತ್ತಿದ್ದ 12 ಚಕ್ರದ ಲಾರಿ, ಚಾರ್ಮಾಡಿ ಘಾಟ್ ನ ಎರಡನೇ ತಿರುವಿನಲ್ಲಿ ಕಳೆದ 2 ಗಂಟೆಯಿಂದ ಮುಂದೆ ಸಾಗಲು ಆಗದೇ ನಿಂತಿದೆ. ಇದರಿಂದಾಗಿ ಇತರ ವಾಹನಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಚಾರ್ಮಾಡಿ ಘಾಟ್ ನಲ್ಲಿ ಭಾರೀ ವಾಹನಗಳ ಸಂಚಾರಕೆ ನಿಷೇದವಿದ್ದರೂ ಕೂಡ ಚೆಕ್ ಪೋಸ್ಟ್ ಸಿಬ್ಬಂದಿಗಳು ನಿರ್ಲಕ್ಷ್ಯ ವಹಿಸಿರುವ ಆರೋಪ ಕೇಳಿಬಂದಿದೆ.

– ಕೊಟ್ಟಿಗೆಹಾರ: ದಾಖಲೆ ತೋರಿಸಿದರೂ ಹಣ ವಶಕ್ಕೆ ಪಡೆದ ಅಧಿಕಾರಿಗಳು

ಮೂಡಿಗೆರೆ: ಲೋಕಸಭಾ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಾಗಿದ್ದು, ಈ ಬೆನ್ನಲ್ಲೇ ದೇವತಾ ಕಾರ್ಯಕ್ಕೆ ಹಣ ಕೊಂಡೊಯ್ಯುತ್ತಿದ್ದ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಇಕ್ಕಟ್ಟಿಗೆ ಸಿಲುಕಿದ ಪ್ರಸಂಗವೊಂದು ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ದೇವತಾ ಕಾರ್ಯಕ್ಕೆಂದು ಕೊಂಡೊಯ್ಯುತ್ತಿದ್ದ 85 ಸಾವಿರ ಹಣವನ್ನು ವಶಪಡಿಕೊಂಡಿದ್ದಾರೆ. ಬೆಂಗಳೂರಿನಿಂದ ಉಡುಪಿಗೆ ತೆರಳುತ್ತಿದ್ದ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಆದ ಪಿ.ಎಸ್ ಆಚಾರ್ಯ ಬ್ಯಾಂಕ್ ನಿಂದ ಹಣ ಡ್ರಾ ಮಾಡಿರುವ ದಾಖಲೆ ತೋರಿಸಿದರು ಕೂಡ ಎಫ್.ಎಸ್.ಟಿ ಹಾಗೂ ಬಣಕಲ್ ಪೊಲೀಸರ ನೇತೃತ್ವದಲ್ಲಿ ಹಣ ಸೀಜ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ನೀತಿ ಸಂಹಿತೆ ಜಾರಿಯಲ್ಲಿದ್ದು, ತಾಲೂಕಿನ ಗಡಿ ಭಾಗಗಳಲ್ಲಿ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಆದರೆ ಈ ನಿಯಮವೇ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ಚುನಾವಣಾ ಅಧಿಕಾರಿಗಳ ಧೋರಣೆಯಿಂದ ಸಾರ್ವಜನಿಕರು ಪರದಾಟ ಅನುಭವಿಸುವಂತಾಗಿದೆ.

Categories
Uncategorized

Nammur Express E-Paper

04-04-2024 Thursday

[dflip id="22520" type="thumb"][/dflip]

05-04-2024 Friday

[dflip id="22528" type="thumb"][/dflip]

06-04-2024 Saturday

[dflip id="22535" type="thumb"][/dflip]

07-04-2024 Sunday

[dflip id="22528" type="thumb"][/dflip]
Categories
ರಾಜ್ಯ

ಕೊಳವೆ ಬಾವಿಗೆ ಬಿದ್ದ ಮಗು ಬದುಕಿ ಬಂತು!

ಕೊಳವೆ ಬಾವಿಗೆ ಬಿದ್ದ ಮಗು ಬದುಕಿ ಬಂತು!
– ದೇವರೇ ಕಾಪಾಡಿದ: 2 ವರ್ಷದ ಮಗು ಪಾರು
– ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣದಲ್ಲಿ ಘಟನೆ

NAMMUR EXPRESS NEWS
ವಿಜಯಪುರ: ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಸಾತ್ವಿಕ್ ರಕ್ಷಣೆ ಮಾಡಲಾಗಿದ್ದು ಸಾವಿರಾರು ಜನರ ಪ್ರಾರ್ಥನೆ ಕೊನೆಗೂ ಫಲಿಸಿದೆ. ಎನ್​ಡಿಆರ್​ಎಫ್​, ಎಸ್​ಡಿಆರ್​ಎಫ್ ಹಾಗೂ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ಫಲಕೊಟ್ಟಿದ್ದು, ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಮಗು ಸಾತ್ವಿಕ್​ನನ್ನು ರಕ್ಷಣೆ ಮಾಡಲಾಗಿದೆ. ಸತತ 18 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಕಾರ್ಯಾಚರಣೆಯ ಬಳಿಕ ಮಗುವನ್ನು ರಕ್ಷಣೆ ಮಾಡಲಾಗಿದೆ. ಮಗುವಿನ ಪೋಷಕರಾದ ಸತೀಶ್ ಮತ್ತು ಪೂಜಾ ದಂಪತಿ ಹಾಗೂ ಸ್ಥಳೀಯರು ಕೊನೆಗೂ ನಿಟ್ಟುಸಿರು ಬಿಡುವಂತಾಗಿದೆ. ಸಾತ್ವಿಕ್​ನನ್ನು ಜೀವಂತವಾಗಿ ಹೊರ ತೆಗೆಯುವಲ್ಲಿ ರಕ್ಷಣಾ ಸಿಬ್ಬಂದಿ ಕೊನೆಗೂ ಯಶಸ್ವಿಯಾಗಿದ್ದಾರೆ. ನಿರಂತರ ಕಾರ್ಯಾಚರಣೆ ನಡೆಸಿ ಮಗು ಸಾತ್ವಿಕ್​​​ನನ್ನು ರಕ್ಷಿಸಿದ ಸಿಬ್ಬಂದಿಯ ಬಗ್ಗೆ ಇದೀಗ ಎಲ್ಲೆಡೆ ಮೆಚ್ಚುಗೆಯ ಮಹಾಪೂರವೇ ವ್ಯಕ್ತವಾಗುತ್ತಿದೆ. ಸಾತ್ವಿಕ್​​ನನ್ನು ತಕ್ಷಣವೇ ಆಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಎನ್​ಡಿಆರ್​ಎಫ್​ ತಂಡ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಇವರಿಗೆ ಬೆಳಗಾವಿಯಿಂದ ಬಂದಿದ್ದ ಶ್ರೀಶೈಲ್ ಚೌಗಲಾ ನೇತೃತ್ವದ ರಾಜ್ಯ ವಿಪತ್ತು ನಿರ್ವಹಣಾ ತಂಡ (ಎಸ್​ಡಿಆರ್​ಎಫ್), ಸ್ಥಳೀಯ ಪೊಲೀಸರು, ಅಗ್ನಿ ಶಾಮಕ ದಳ ಸಿಬ್ಬಂದಿ ಸಾಥ್ ನೀಡಿದರು.

ನೂರಾರು ಅಡಿಯಿಂದ ಅಳುತಿತ್ತು ಮಗು!

ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತ ತಲುಪುತ್ತಿದ್ದಂತೆಯೇ ಆಂಬುಲೆನ್ಸ್​ ಸಿದ್ಧವಾಗಿ ಇರಿಸಲಾಗಿತ್ತು. ಮಗುವನ್ನು ಕೊಳವೆ ಬಾವಿಯಿಂದ ಹೊರ ತೆಗೆಯುತ್ತಿದ್ದಂತೆಯೇ ಪ್ರಾಥಮಿಕ ಚಿಕಿತ್ಸೆ ನೀಡಿ ಆಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಅಂತಿಮ ಹಂತದ ಕಾರ್ಯಾಚರಣೆ ವೇಳೆ ಮಗು ಅಳುತ್ತಿರುವ ಶಬ್ದ ರಕ್ಷಣಾ ಸಿಬ್ಬಂದಿಗೆ ಕೇಳಿಸುತ್ತಿತ್ತು. ಯಂತ್ರಗಳ ಸದ್ದು ಹೆಚ್ಚಾದಂತೆ ಮಗು ಅಳುತ್ತಿರುವುದೂ ಹೆಚ್ಚಾಗಿತ್ತು ಎಂದು. ಮಗು ಚೀರಾಡುತ್ತಿತ್ತು ಎಂದು ಸಿಬ್ಬಂದಿ ತಿಳಿಸಿದ್ದಾರೆ. ಇದಕ್ಕೂ ಮುನ್ನ ಸ್ಥಳಕ್ಕೆ ಬಂದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದರು. ರಕ್ಷಣೆಗೆ ಎಲ್ಲ ರೀತಿಯ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದರು.

ಲಚ್ಯಾಣದಲ್ಲಿ ಬುಧವಾರ ನಡೆದಿದ್ದೇನು?

ಲಚ್ಯಾಣ ಗ್ರಾಮದ ಜಮೀನಿನಲ್ಲಿ ಶಂಕರಪ್ಪ ಮುಜಗೊಂಡ ಎಂಬವರು ಮಂಗಳವಾರ ಕೊಳವೆ ಬಾವಿ ಕೊರೆಯಿಸಿದ್ದರು. ಸುಮಾರು 500 ಅಡಿ ಆಳ ಕೊರೆಸಲಾಗಿತ್ತು. ಆದರೆ, ನೀರು ಬಾರದ ಕಾರಣ ಮುಚ್ಚದೆ ಹಾಗೆಯೇ ಬಿಟ್ಟಿದ್ದರು. ಶಂಕರಪ್ಪ ಮುಜಗೊಂಡ ಮೊಮ್ಮಗ ಸಾತ್ವಿಕ್ ಬುಧವಾರ ಕೊಳವೆ ಬಾವಿಗೆ ಬಿದ್ದಿದ್ದಾನೆ. ಆತ ಸುಮಾರು 15ರಿಂದ 20 ಅಡಿ ಆಳದಲ್ಲಿ ಸಿಲುಕಿದ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಆ್ಯಕ್ಸಿಜನ್​​ ವ್ಯವಸ್ಥೆ ಮಾಡಲಾಗಿತ್ತು. ಇಂದಿನ ಪ್ರಕರಣಕ್ಕೂ ಮುಂಚೆ ಇಂತಹ ಎರಡು ಪ್ರಕರಣಗಳು ವಿಜಯಪುರ ಜಿಲ್ಲೆಯಲ್ಲಿ ನಡೆದಿದ್ದವು. 2008 ಮತ್ತು 2014ರಲ್ಲಿಕೊಳವೆ ಬಾವಿ ದುರಂತಗಳು ಸಂಭವಿಸಿದ್ದವು. 2008 ರಲ್ಲಿ ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮದಲ್ಲಿ ಕಾಂಚನಾ ಉರ್ಪ್ ಏಗವ್ವ ಎನ್ನುವ ಬಾಲಕಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಳು. ಜೆಸಿಬಿಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು. ಆದ್ರೆ, ಮಗು ಮೃತಪಟ್ಟಿತ್ತು.

Categories
ಉಡುಪಿ ಕರಾವಳಿ

ಉಡುಪಿ : ಮಾತ್ರೆ ಸೇವಿಸಿ ಯುವಕ ಮೃತ್ಯು

ಉಡುಪಿ : ಮಾತ್ರೆ ಸೇವಿಸಿ ಯುವಕ ಮೃತ್ಯು
– ಉಡುಪಿ :ಅಡಿಕೆ ಕಳ್ಳತನ – ಮೂವರ ಬಂಧನ

NAMMUR EXPRESS
ಉಡುಪಿ: ಮಾತ್ರೆ ಸೇವಿಸಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಕುತ್ಪಾಡಿ ಗ್ರಾಮದ ರಮೇಶ್ ಎಂಬವರ ಮಗ ಅಜಯ್(24) ಎಂದು ಗುರುತಿಸಲಾಗಿದೆ. ಉದ್ಯಾವರ ಎಸ್‌ಡಿಎಂ ಕಾಲೇಜಿನ ಫಾರ್ಮಸಿ ವಿಭಾಗದಲ್ಲಿ ಕೆಲಸ ಮಾಡಿಕೊಂಡಿದ್ದು, ಏ .1ರಂದು ಕೆಲಸಕ್ಕೆ ಹೋಗದೇ ಹುಷಾರಿಲ್ಲವೆಂದು ಮನೆಯಲ್ಲಿಯೇ ಇದ್ದರು. ಬೆಳಗ್ಗೆ ಇವರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಜಯ್, ತನ್ನ ಸ್ನೇಹಿತ ಉದಯ್ ಬಳಿ ನಾನು ಟ್ಯಾಬ್ಲೆಟ್ ತೆಗೆದುಕೊಂಡಿ ರುವುದಾಗಿ ಹೇಳಿದ್ದು, ಯಾವ ಕಾರಣಕ್ಕೆ ಹಾಗೂ ಯಾವ ಮಾತ್ರೆ ಎಂದು ಹೇಳಿಲ್ಲ ಎನ್ನಲಾಗಿದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಜಯ್ ಚಿಕಿತ್ಸೆ ಫಲಕಾರಿ ಯಾಗದೆ ಎ.3ರಂದು ನಸುಕಿನ ವೇಳೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಉಡುಪಿ :ಅಡಿಕೆ ಕಳ್ಳತನ – ಮೂವರ ಬಂಧನ

ಉಡುಪಿ: ಇತ್ತೀಚೆಗಷ್ಟೇ ನಡೆದ ಅಡಿಕೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಶಂಕರನಾರಾಯಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಗಳನ್ನು ಕುಂದಾಪುರದ ಗುಲ್ವಾಡಿ ಮೂಲದ ಅಮೀರ್‌ ಜೈನುದ್ದೀನ್‌ (23), ಭಟ್ಕಳದ ಉಸ್ಮಾನ್‌ ನಗರ ನಿವಾಸಿ ನಿಸಾರ್‌ ಆಸಿಫ್‌ ಅಣ್ಣಾರ್‌ (24) ಮತ್ತು ಭಟ್ಕಳದ ಬಿಳಾಲಖಂಡ ನಿವಾಸಿ ಮುನಾವರ್‌ (21) ಎಂದು ಗುರುತಿಸಲಾಗಿದೆ. ಆರೋಪಿಗಳು ಶಂಕರನಾರಾಯಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಅನೇಕ ಅಡಿಕೆ ವ್ಯಾಪಾರದ ಅಂಗಡಿಗಳಿಗೆ ಕನ್ನ ಹಾಕಿ ಅಡಿಕೆ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿಗಳು ಹಾಲಾಡಿ ಮತ್ತು ಕೊದ್ರ ಬೈಲೂರು ಪರಿಸರ, ಕೊಲ್ಲೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಜಡ್ಕಲ್‌ ಮತ್ತು ಗಂಗೊಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ನೋಜಾಡಿ ಮುಂತಾದ ಪ್ರದೇಶಗಳಲ್ಲಿ ಕಳ್ಳತನ ಮಾಡಿದ್ದಾರೆಂದು ಆರೋಪಿಸಲಾಗಿದೆ. ಪೊಲೀಸರು ಆರೋಪಿಗಳಿಂದ 11.65 ಕ್ವಿಂಟಾಲ್‌ ವೀಳ್ಯದೆಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಜತೆಗೆ ಕಳ್ಳತನಕ್ಕೆ ಬಳಸಿದ ಪಿಕಪ್‌ ಮತ್ತು ಸ್ಕೂಟರ್‌ಗಳನ್ನು ವಶಪಡಿಸಿ ಕೊಂಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ 4.05 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Categories
ತೀರ್ಥಹಳ್ಳಿ ಮಲ್ನಾಡ್

ಅತೀ ದೊಡ್ಡ ಕಾಳಿಂಗ ಸರ್ಪ ಆಗುಂಬೆ ಘಾಟಿ ಬಳಿ ಪತ್ತೆ!

ಅತೀ ದೊಡ್ಡ ಕಾಳಿಂಗ ಸರ್ಪ ಆಗುಂಬೆ ಘಾಟಿ ಬಳಿ ಪತ್ತೆ!
– 12.5 ಕೆಜಿ 15 ಅಡಿ ಉದ್ದದ ಹಾವು ಹಿಡಿದು ರಕ್ಷಣೆ
– ಕರಾವಳಿ ಮಲೆನಾಡಲ್ಲಿ ಜನರೇ ಹುಷಾರ್

NAMMUR EXPRESS NEWS
ಹೆಬ್ರಿ/ತೀರ್ಥಹಳ್ಳಿ: ಆಗುಂಬೆ ಬಳಿ ಅಪರೂಪದ ಕಾಳಿಂಗ ಸರ್ಪ ರಕ್ಷಣೆ ಮಾಡಲಾಗಿದೆ. ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ನಾಡಪಾಲ್ ಗ್ರಾಮದಲ್ಲಿ ಸುಮಾರು 12.5 ಕೆಜಿ ತೂಕದ ಮತ್ತು ಬರೋಬ್ಬರಿ 15 ಅಡಿ ಉದ್ದದ ಅಪರೂಪದ ಕಾಳಿಂಗ ಸರ್ಪವೊಂದನ್ನು ರಕ್ಷಣೆ ಮಾಡಲಾಗಿದೆ.  ಕಾಳಿಂಗ ಸರ್ಪವನ್ನು ಹರ್ಪಿಟಾಲಜಿಸ್ಟ್ ಡಾ.ಪಿ.ಗೌರಿ ಶಂಕರ್ ಅವರು ರಕ್ಷಣೆ ಮಾಡಿದ್ದಾರೆ. ಕಿಂಗ್ ಕೋಬ್ರಾ ವಿಶ್ವದ ಅತಿ ಉದ್ದದ ವಿಷಪೂರಿತ ಹಾವುಗಳಾಗಿದ್ದು, ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಈ ಹಾವುಗಳು ಹೆಚ್ಚಾಗಿ ಕಂಡು ಬರುತ್ತವೆ. ಥೈಲ್ಯಾಂಡ್‌ನಲ್ಲಿ 18 ಅಡಿಗಳಷ್ಟು ಉದ್ದವನ್ನು ಹಾವುಗಳಿವೆ. ಆದರೆ ಪ್ರಸ್ತುತ ಆಗುಂಬೆ ಬಳಿ ಪತ್ತೆಯಾಗಿರುವುದು ಭಾರತದಲ್ಲಿ ಅಪರೂಪದ ಹಾವುಗಳಾಗಿವೆ.

ಫೆಬ್ರುವರಿಯಿಂದ ಮೇ ತಿಂಗಳು ಸಂತಾನೋತ್ಪತ್ತಿ ಅವಧಿಯಾಗಿದ್ದು, ಈ ಹಾವುಗಳು ತನ್ನ ಸಂಗಾತಿಯನ್ನು ಅರಸಿ ಹೊರಬರುತ್ತವೆ. ಇದರಿಂದಾಗಿ ಈ ಸಂದರ್ಭದಲ್ಲಿ ಮಾನವ-ಹಾವುಗಳ ಸಂಘರ್ಷ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಕಳಿಂಗ ಫೌಂಡೇಶನ್‌ಗೆ ಹೆಚ್ಚಿನ ಕರೆಗಳು ಬರುತ್ತವೆ ಎಂದು ಡಾ. ಶಂಕರ್ ಹೇಳಿದ್ದಾರೆ.

ಹಿಡಿದಿದ್ದು ಹೇಗೆ…?

ಆಗುಂಬೆಯಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿರುವ ನಾಡ್ಪಾಲ್ ಗ್ರಾಮದ ಭಾಸ್ಕರ್ ಶೆಟ್ಟಿ ಎಂಬವರಿಂದ ಕರೆ ಬಂದಿತ್ತು. ಈ ವೇಳೆ ಪ್ರಶಾಂತ್ ಅವರೊಂದಿಗೆ ಸ್ಥಳಕ್ಕೆ ತೆರಳಿದಾಗ ಹಾವನ್ನು ಕಂಡು ಬೆರಗಾಗಿದೆ. ಈ ಹಾವುಗಳ ಸರಾಸರಿ ತೂಕವು ಸಾಮಾನ್ಯವಾಗಿ 3.5 ರಿಂದ 7 ಕಿಲೋಗ್ರಾಂಗಳವರೆಗೆ ಇರುತ್ತದೆ, ಹೆಣ್ಣು 2 ರಿಂದ 3.5 ಕಿಲೋಗ್ರಾಂಗಳಷ್ಟು ಮತ್ತು ಗಂಡು 3.5 ರಿಂದ 6 ಕಿಲೋಗ್ರಾಂಗಳಷ್ಟು ತೂಕವಿರುತ್ತದೆ. ಆದರೆ, ಪ್ರಸ್ತುತ ರಕ್ಷಣೆ ಮಾಡಿದ ಹಾವು 12.5 ಕಿಲೋಗ್ರಾಂಗಳಷ್ಟು ತೂಕವನ್ನು ಹೊಂದಿದ್ದು, ಸುಮಾರು 15 ಅಡಿ ಉದ್ದವಿದೆ. ಇಷ್ಟು ದೊಡ್ಡ ಗಾತ್ರದ ಕಾಳಿಂಗ ಸರ್ಪ ಇಡೀ ಭಾರತದಲ್ಲೇ ಸಿಗುವುದು ಅಪರೂಪ. ಈ ಹಾವುಗಳ ಪತ್ತೆ ಮಲೆನಾಡು ಪ್ರದೇಶದಲ್ಲಿ ಬೆಳೆಯುತ್ತಿರುವ ಆರೋಗ್ಯಕರ ಬೆಳವಣಿಗೆಯನ್ನು ತೋರಿಸುತ್ತದೆ ಎಂದು ಶಂಕರ್ ತಿಳಿಸಿದ್ದಾರೆ.

ಮಲೆನಾಡು, ಕರಾವಳಿಯಲ್ಲಿ ಈಗ ಓಡಾಟ

ಮಲೆನಾಡು ಮತ್ತು ಕರಾವಳಿಯಲ್ಲಿ ಈಗ ಕಾಳಿಂಗ ಸರ್ಪಗಳ ಮಿಲನ ಸಮಯ. ಹೀಗಾಗಿ ಓಡಾಟ ಹೆಚ್ಚಿರುತ್ತದೆ. ಈ ಬಗ್ಗೆ ಜನ, ರೈತರು ಎಚ್ಚರಿಕೆ ವಹಿಸಬೇಕು.

Categories
ಬೆಂಗಳೂರು ರಾಜ್ಯ

ಯುಗಾದಿ ಹಬ್ಬಕ್ಕೂ ಮುನ್ನ ಮಾಂಸಹಾರಿಗಳಿಗೆ ಬಿಗ್ ಶಾಕ್..!

ಯುಗಾದಿ ಹಬ್ಬಕ್ಕೂ ಮುನ್ನ ಮಾಂಸಹಾರಿಗಳಿಗೆ ಬಿಗ್ ಶಾಕ್..!
– ಚಿಕನ್, ಮಟನ್ ಬೆಲೆ ಏರಿಕೆ

NAMMUR EXPRESS NEWS
ಬೆಂಗಳೂರು : ಕೆಲವೇ ದಿನಗಳಲ್ಲಿ ಯುಗಾದಿ ಹಬ್ಬ ಬರಲಿದೆ. ಯುಗಾದಿ ಹಬ್ಬದ ಮರುದಿನ ಆಚರಿಸುವ ಹೊಸತೊಡಕು ಹಬ್ಬಕ್ಕೂ ಮುನ್ನವೇ ಮಾಂಸಹಾರಿಗಳಿಗೆ ಬಿಗ್ ಶಾಕ್ ಎದುರಾಗಿದೆ. ದಿನದಿಂದ ದಿನಕ್ಕೆ ಚಿಕನ್, ಮಟನ್ ಬೆಲೆ ಏರಿಕೆಯಾಗುತ್ತಿದೆ. ಹೌದು, ಸದ್ಯ ಮಾರುಕಟ್ಟೆಯಲ್ಲಿ ಸ್ಕಿನ್ ಔಟ್ ಬಾಟ್ಲರ್ ಕೋಳಿ ಕೆಜಿಗೆ 230-240 ರೂಪಾಯಿವರೆಗೆ ಏರಿಕೆಯಾಗಿದೆ. ಟೈಸನ್ ಕೋಳಿ 270 ರೂಪಾಯಿಗೆ ಏರಿಕೆಯಾಗಿದೆ. ಅಲ್ಲದೇ ಮೀನುಗಳ ಬೆಲೆ ಕೂಡ ಗಗನಕ್ಕೇರಿದೆ. ಬಿಸಿಲಿನ ತಾಪಮಾನದಿಂದ ಕೋಳಿ, ಮೀನು ದರ ಏರಿಕೆಯಾಗಿದೆ ಎಂದು ಹೇಳಲಾಗಿದೆ.

ಬೆಂಗಳೂರಿನಲ್ಲಿ ಹಂದಿ ಮಾಂಸದ ಬೆಲೆ 300 ರಿಂದ 450-500ರ ಗಡಿ ದಾಟಿದೆ. ಹಾಗೂ ಕುರಿ ಮಾಂಸ 700-800 ರೂವರೆಗೆ ಮಾರಾಟವಾಗುತ್ತಿದೆ. ಅಲ್ಲದೇ ಹೇಳಿ ಕೇಳಿ ಈಗ ಮದುವೆ ಸೀಸನ್ ಬೀಗರೂಟಕ್ಕೆ ಭಾರಿ ಪ್ರಮಾಣದ ಮಾಂಸಕ್ಕೆ ಬೇಡಿ ಬರುತ್ತದೆ. ಇದರಿಂದ ಬೆಲೆ ಏರಿಕೆಯಾಗುತ್ತಿದೆ ಎಂದು ಹೇಳಲಾಗಿದೆ.