Categories
ಕರಾವಳಿ

ಟಾಪ್ ನ್ಯೂಸ್ ಕರಾವಳಿ

ಟಾಪ್ ನ್ಯೂಸ್ ಕರಾವಳಿ

ದಿಢೀರ್ ಹಣದಾಸೆಗೆ ಲಕ್ಷ ಲಕ್ಷ ಹೋಯ್ತು!

– ಬ್ರಹ್ಮಾವರ: ಷೇರು ಮಾರುಕಟ್ಟೆ ಲಾಭದ ಆಸೆಗೆ ಹೋಗಿ 18.64 ಲಕ್ಷ ರೂ. ಕಳೆದುಕೊಂಡ ಮಹಿಳೆ
ಮಲ್ಪೆ: ನಾಲ್ವರ ಕೊಲೆ ಆರೋಪಿ ಪ್ರವೀಣ್‌ ಚೌಗುಲೆಗೆ ಜಾಮೀನಿಲ್ಲ!
– ಬೆಳ್ತಂಗಡಿ: ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವು
– ಮಣಿಪಾಲ: ರಸ್ತೆಯಲ್ಲಿ ನಿಲ್ಲಿಸಿದ್ದ ಕಾರು ಬೆಂಕಿಗೆ ಆಹುತಿ!

NAMMUR EXPRESS NEWS
ಬ್ರಹ್ಮಾವರ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಪಡೆಯಬಹುದು ಎನ್ನುವ ಮೋಸದ ಬಲೆಗೆ ಸಿಲುಕಿ ಮಹಿಳೆಯೊಬ್ಬರು 18.64 ಲಕ್ಷ ರೂ. ಕಳೆದುಕೊಂಡಿರುವ ಪ್ರಕರಣ ಕೋಟ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ಈ ಸಂಬಂಧ ವಂಚನೆಗೆ ಒಳಗಾಗಿರುವ ಸೌಮ್ಯ ಎಂಬವರು ಕೋಟ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಫೆ.12ರಂದು ಅಪರಿಚಿತ ಯುವತಿಯೊಬ್ಬರು ವಾಟ್ಸಾಪ್‌ ಮೂಲಕ ಪರಿಚಯವಾಗಿ ಶೇರು ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿರುವುದರಿಂದ ದೊಡ್ಡ ಮೊತ್ತದ ಲಾಭ ಪಡೆಯಬಹುದು ಎಂದು ನಂಬಿಸಿದ್ದರು.
ಇವರ ಮಾತನ್ನು ನಂಬಿದ ಸೌಮ್ಯ ತಮ್ಮೆಲ್ಲ ದಾಖಲೆಗಳನ್ನು ನೀಡಿ ಅದೇ ದಿನ 50ಸಾವಿರ ಹಾಗೂ ಮಾ.28ರಂದು 60 ಸಾವಿರ ಹೂಡಿಕೆ ಮಾಡಿದ್ದಾರೆ. ಆರೋಪಿಗಳು 3000ರೂ.ವನ್ನು ಸೌಮ್ಯ ಅವರ ಖಾತೆಗೆ ಹಾಕಿದ್ದು, ಆ ಬಳಿಕ ಇನ್ನೂ ಹೆಚ್ಚು ಹೂಡುವಂತೆ ಹೇಳಿ 18,64,500ರೂ. ಗಳನ್ನು ವಿವಿಧ ಲಿಂಕ್‌ ಮೂಲಕ ಕಳುಹಿಸಿದ್ದಾಗಿ ತಿಳಿಸಿದ್ದಾರೆ. ಮೇ 25ರ ನಂತರ ಈ ಗ್ರೂಪ್‌ ನಿಷ್ಕ್ರೀಯಗೊಂಡಿದ್ದು, ಆ ಬಳಿಕ ಯಾವುದೇ ಸಂಪರ್ಕ ಸಾಧ್ಯವಾಗಿಲ್ಲ ಎಂದು ಆರೋಪಿಸಿದ್ದಾರೆ. ಇದೀಗ ದೂರು ದಾಖಲಿಸಿಕೊಂಡಿರುವ ಕೋಟ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಾಲ್ವರ ಕೊಲೆ ಆರೋಪಿ ಪ್ರವೀಣ್‌ ಚೌಗುಲೆಗೆ ಜಾಮೀನಿಲ್ಲ!

ಉಡುಪಿ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ್ದ ಕೊಲೆ ಆರೋಪಿ ಪ್ರವೀಣ್‌ ಚೌಗುಲೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.
ಆರೋಪಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ನ್ಯಾಯಮೂರ್ತಿ ಎಂಜಿ ಉಮಾ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಉಡುಪಿ ಮಲ್ಪೆ ಪೊಲೀಸ್‌ ಠಾಣೆ ವ್ಯಾಪ್ತಿಯ ನೇಜಾರು ಎಂಬಲ್ಲಿ ಒಂದೇ ಕುಟುಂಬದ ಐನಾಝ್‌, ಹಸೀನಾ, ಅಫ್ನಾನ್‌, ಅಸೀಮ್‌ ಎಂಬವರನ್ನು ಹತ್ಯೆ ನಡೆಸಿದ್ದ ಅರುಣ್‌ ಚೌಗುಲೆ ಅಧೀನ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ. ಈ ಪ್ರಕರಣದ ವಿಚಾರಣೆ ನಡೆಸಿದ್ದ ಅಧೀನ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿತ್ತು. ಹೀಗಾಗಿ, ಆರೋಪಿಯು ಹೈಕೋರ್ಟ್‌ ಮೆಟ್ಟಲೇರಿದ್ದ. ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ಆರೋಪಿಯ ವಿರುದ್ಧ ಸಾಂದರ್ಭಿಕ ಸಾಕ್ಷಿಗಳ ಜತೆಗೆ ಸಿಸಿಟಿವಿ ದೃಶ್ಯಾವಳಿಗಳು ಕೂಡ ಇವೆ. ಅಲ್ಲದೆ, ಆರೋಪಿಯ ಕೂದಲಿನ ಡಿಎನ್‌ಎ ಆಧರಿಸಿ ಹೈಕೋರ್ಟ್‌ ಜಾಮೀನು ನೀಡಲು ನಿರಾಕರಿಸಿದೆ.

ಬೆಳ್ತಂಗಡಿ: ಬಸ್ ಡಿಕ್ಕಿ ಬೈಕ್ ಸವಾರ ಬಲಿ

ಬೆಳ್ತಂಗಡಿ: ದುರ್ಗಾ ಬಸ್ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್‌ ಸವಾರ ನಡ ಗ್ರಾಮ ಸಹಾಯಕ ಜಯರಾಜ್(48) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಲಾಯಿಲದ ಪುತ್ರಬೈಲಿನಲ್ಲಿ ನಡೆದಿದೆ.
ದುರ್ಗಾ ಬಸ್ ಲಾಯಿಲ ಗ್ರಾಮದ ಪುತ್ರಬೈಲು ಬಳಿ ಎದುರಿನಿಂದ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ.ಡಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲಿಯೇ ಗ್ರಾಮ ಸಹಾಯಕ ಜಯರಾಜ್‌ ಸಾವನ್ನಪ್ಪಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಮಂಜೊಟ್ಟಿಯಲ್ಲಿ ಸ್ಕೂಟ‌ರ್ ಸವಾರನಿಗೆ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ. ಬಸ್ ನ ಟೈಮಿಂಗ್ ಹಾಗೂ ಅತಿವೇಗವೇ ಅಪಘಾತಕ್ಕೆ ಕಾರಣವಾಗಿದ್ದು, ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸರುಮೇಲೆ ವಹಿಸಬೇಕು ಎಂಬ ಆಗ್ರಹವಾಗಿದೆ.

ರಸ್ತೆ ಬದಿ ನಿಲ್ಲಿಸಿದ್ದ ರಿಟ್ಸ್ ಕಾರು ಬೆಂಕಿಗಾಹುತಿ

ಉಡುಪಿ: ರಸ್ತೆ ಬದಿ ನಿಲ್ಲಿಸಿದ್ದ ರಿಟ್ಸ್ ಕಾರು ಬೆಂಕಿಗಾಹುತಿಯಾಗಿ ಸಂಭವನೀಯ ಅನಾಹುತವೊಂದು ತಪ್ಪಿದ ಘಟನೆ ಮಣಿಪಾಲದ ಬಬ್ಬುಸ್ವಾಮಿ ದೈವಸ್ಥಾನದ ಎದುರು ಗುರುವಾರ ತಡರಾತ್ರಿ ನಡೆದಿದೆ.
ಕಾರು ಚಾಲಕ ಸೇರಿ ಇನ್ನೋರ್ವ ವ್ಯಕ್ತಿ ಕಾರನ್ನು ರಸ್ತೆ ಬದಿ ನಿಲ್ಲಿಸಿ ಅದರೊಳಗೆ ಮಲಗಿದ್ದರು. ಈ ವೇಳೆ ಕಾರು ಚಾಲಕನಿಗೆ ಕಾರಿನ ಬಾನೆಟ್ ಬಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಕಾರಿನಿಂದ ಹೊರಬಂದಿದ್ದಾರೆ.
ಬೆಂಕಿಯ ಕೆನ್ನಾಲೆಗೆ ಕಾರು ಸಂಪೂರ್ಣ ಸುಟ್ಟುಹೋಗಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಇನ್ನು ಕಾರು ಮಾಲೀಕನ ಮಾಹಿತಿ ಮೇರೆಗೆ ಅಗ್ನಿ ಶಾಮಕ ದಳದವರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ.

Categories
ಕೊಪ್ಪ

ಕೊಪ್ಪದಲ್ಲಿ ಈಗ ಕಳ್ಳರ ಕಾಟ!

ಕೊಪ್ಪದಲ್ಲಿ ಈಗ ಕಳ್ಳರ ಕಾಟ!

– ಹರಿಹರಪುರ ಬಳಿ ವಾರದಲ್ಲಿ ಎರಡನೇ ಕಳ್ಳತನ
– ಬಟ್ಟೆ, ಪಾತ್ರೆ, ಫ್ಯಾನ್, ಮಂಚವನ್ನು ಕದ್ದ ಕಳ್ಳರು!

– ಶೃಂಗೇರಿ: ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

NAMMUR EXPRESS NEWS
ಕೊಪ್ಪ:- ಹರಿಹರಪುರ ಠಾಣಾ ವ್ಯಾಪ್ತಿಯ ನಿಲುವಾಗಿಲು ಗ್ರಾಮಪಂಚಾಯಿತಿಗೆ ಒಳಪಟ್ಟ ಕಾಳನಾಯಕನಕಟ್ಟೆ ಎಂಬಲ್ಲಿ ಒಂದೇ ವಾರದಲ್ಲಿ ಎರಡು ಬಾರಿ ಕಳ್ಳತನ ನಡೆದಿದ್ದು, ಒಂದು ವಾರದ ಹಿಂದೆಯೇ ನಾಲ್ಕು ಮನೆಗಳಿಗೆ ನುಗ್ಗಿ ಸರಣಿ ಕಳ್ಳತನ ನಡೆಸಿದ್ದಾರೆ.
ಓಮಿನಿ ಕಾರು, ಸೈಕಲ್, ರಿಕ್ಷಾ ಬ್ಯಾಟರಿಗಳನ್ನು ಕದ್ದಿದ್ದು, ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ,ಆರು ದಿನ ಕಳೆಯುವಷ್ಟರಲ್ಲಿ ಮತ್ತೊಮ್ಮೆ ಕಳ್ಳತನ, ತೀರಾ ಬಡತನ ಹಾಗೂ ಸಾಲದ ಸಂಕಷ್ಟ ದಲ್ಲಿದ್ದ ಗುಲಾಮಹುಸೇನ್ w/o ನಸೀಮಬಾನು ಇವರ ಮನೆಗೆ ಎರಡನೇ ಬಾರಿ ನುಗ್ಗಿದ ಕಳ್ಳರು ಅವರ ಮನೆಯಲ್ಲಿದ್ದ ದಿನನಿತ್ಯ ಉಪಯೋಗಿಸುವ ಬಟ್ಟೆ, ಪಾತ್ರೆ, ಫ್ಯಾನ್, ಮಂಚ ಇತ್ಯಾದಿ ಗಳನ್ನು ಸಂಪೂರ್ಣ ವಾಗಿ ದೋಚಿಪರಾರಿ ಯಾಗಿದ್ದಾರೆ, ಹರಿಹರಪುರ ಠಾಣಾ ಪೊಲೀಸರು ಯಾವುದೇ ರೀತಿಯ ಕ್ರಮ ಕೈಗೊಳ್ಳದಿರುವುದೆ, ಎರಡನೇ ಬಾರಿ ಕಳ್ಳತನ ಕ್ಕೆ ಪೋಲೀಸರ ನಿರ್ಲಕ್ಷವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಶೃಂಗೇರಿ : ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

ಶೃಂಗೇರಿ ತಾಲ್ಲೂಕಿನ ನೆಮ್ಮಾರ್ ಸಮೀಪ ಯಾದಾಳು ಗ್ರಾಮದ ದಿಲೀಪ ಅವರ ಪತ್ನಿ ಶಾಲಿನಿ(39) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಕೊಪ್ಪ ತಾಲ್ಲೂಕಿನ ಮೇಲ್ಪಾಲ್ ಗ್ರಾಮ ಇವರ ತವರುಮನೆಯಾಗಿದ್ದು ಮದುವೆಯಾಗಿ ಒಂದು ವರ್ಷ ಮಾತ್ರ ಕಳೆದಿದ್ದು, ಇವರಿಗೆ ಮಕ್ಕಳು ಇರಲಿಲ್ಲ ಇವರು ಹತ್ತು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದೂ ತೀರ್ಥಹಳ್ಳಿ ಮಾನಸ ಆಸ್ಪತ್ರೆಯಲ್ಲಿ ಔಷದಿ ಮಾಡುತ್ತಿದ್ದರು. ಇದರಿಂದ ನೊಂದು ಬೇಸರ ಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದಿದೆ.

Categories
ಉಡುಪಿ ಮಂಗಳೂರು

ಮಂಗಳೂರಿನ ಅಡ್ಯಾರ್‌ನಲ್ಲಿ ಮನೆ ಆವರಣ ಗೋಡೆ ಕುಸಿತ!

ಮಂಗಳೂರಿನ ಅಡ್ಯಾರ್‌ನಲ್ಲಿ ಮನೆ ಆವರಣ ಗೋಡೆ ಕುಸಿತ!

– ತಪ್ಪಿದ ಅಪಾಯ: ಒಂದು ವಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಅನಾಹುತ
– ಮನೆಯಲ್ಲಿ ಯಾರು ಇಲ್ಲದ ಕಾರಣ ಅನಾಹುತ ನಡೆಯಲಿಲ್ಲ

NAMMUR EXPRESS NEWS
ಮಂಗಳೂರು: ಮಳೆ ಅನಾಹುತಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾಸ್ತಿಯಾಗುತ್ತಿದ್ದು, ಹಲವು ಕಡೆಗಳಲ್ಲಿ ಮನೆಗಳ ಗೋಡೆ ಅಥವಾ ಧರೆ ಕುಸಿದು ನಿವಾಸಿಗಳಲ್ಲಿ ಆತಂಕ ಸೃಷ್ಟಿಸುತ್ತಿದೆ.
ಇದೀಗ ಮಂಗಳೂರು ನಗರದ ಕಣ್ಣೂರು ಗ್ರಾಮದ ಕುಂಡಾಲದಲ್ಲಿ ಮುದಾಸಿರ್‌ ಅವರ ಮನೆಯ ಆವರಣ ಗೋಡೆ ಬುಧವಾರ ಮಧ್ಯಾಹ್ನ ಕುಸಿದಿದ್ದು, ಪಕ್ಕದಲ್ಲಿದ್ದ ಮನೆಗೂ ಹಾನಿಯುಂಟಾಗಿದೆ. ಇನ್ನು ಮನೆಯಲ್ಲಿ ಯಾರು ಇಲ್ಲದ ಕಾರಣ ದೊಡ್ಡ ಮಟ್ಟದ ಅಪಾಯ ತಪ್ಪಿದೆ.

ಬೆಳಗ್ಗಿನಿಂದಲೇ ಜೋರು ಮಳೆಯಾಗುತ್ತಿದ್ದ ಕಾರಣ ಮಧ್ಯಾಹ್ನದ ವೇಳೆಗೆ ಮನೆಯ ಆವರಣ ಗೋಡೆ ಕುಸಿದಿದೆ. ಈ ಘಟನೆ ನಡೆಯುವುದಕ್ಕೂ ಐದು ನಿಮಿಷ ಮೊದಲು ಅಲ್ಲಿ ಮಳೆ ನೀರು ಹರಿದು ಹೋಗುವುದಕ್ಕೆ ವ್ಯವಸ್ಥೆ ಮಾಡುತ್ತಿದ್ದೆ. ಅದಾದ ನಂತರ ಸ್ಥಾನಕ್ಕೆ ಹೋಗಿ ಬರುವಷ್ಟರಲ್ಲಿ ದೊಡ್ಡ ಶಬ್ದ ಕೇಳಿಸಿದ್ದು, ಹೋಗಿ ನೋಡಿದರೆ ಮನೆಯ ಆವರಣ ಗೋಡೆ ಕುಸಿದಿದೆ. ಆ ವೇಳೆ ನಾವಿಬ್ಬರು ಕೂಡ ಮನೆಯ ಒಳಗೆ ಇದ್ದೆವು ಎಂದು ಮನೆಯ ಮಾಲೀಕ ಮುದಾಸಿರ್‌ ಹೇಳಿದ್ದಾರೆ.

ಅಪಾಯದಲ್ಲಿರುವ ಮನೆಗಳ ನಿವಾಸಿಗಳ ಸ್ಥಳಾಂತರಕ್ಕೆ ಡಿಸಿ ಸೂಚನೆ

ಮಂಗಳೂರು ನಗರದ ಕಾವೂರು ಸೂಜಿಕಲ್ ಗುಡ್ಡೆ ಎಂಬಲ್ಲಿ ಭೂಕುಸಿತದಿಂದ ಕೆಲವು ಮನೆಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು, ತಕ್ಷಣವೇ ಅಲ್ಲಿನ ನಿವಾಸಿಗಳ ಸ್ಥಳಾಂತರಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಸೂಚಿಸಿದ್ದಾರೆ. ಗುರುವಾರ ಮಂಗಳೂರು ತಾಲೂಕಿನ ವಿವಿಧ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಕಾವೂರು ಸೂಜಿಕಲ್ ಗುಡ್ಡೆಯಲ್ಲಿ ಖಾಸಗಿ ಮನೆ ಕಟ್ಟಡ ನಿರ್ಮಿಸಲು ಅಗೆಯಲಾದ ಮಣ್ಣಿನಿಂದ ಎತ್ತರದ ಪ್ರದೇಶದಲ್ಲಿರುವ ಮನೆಗಳು ಕೆಳಗೆ ಬೀಳುವ ಸ್ಥಿತಿಯಲ್ಲಿವೆ. ಈ ನಿಟ್ಟಿನಲ್ಲಿ ಇಲ್ಲಿನ ನಿವಾಸಿಗಳನ್ನು ಬೇರೆಡೆ ಬಾಡಿಗೆ ಮನೆಗಳಿಗೆ ಸ್ಥಳಾಂತರಿಸಲು ಅವರು ಮಂಗಳೂರು ಮಹಾನಗರಪಾಲಿಕೆ ಆಯುಕ್ತ ರಿಗೆ ನಿರ್ದೇಶಿಸಿದರು. ಅಲ್ಲದೇ, ಘಟನೆಗೆ ಕಾರಣರಾದ ಖಾಸಗಿ ಮನೆಯ ನಿರ್ಮಾಣ ಕಾಮಗಾರಿಯನ್ನು ನಿಲ್ಲಿಸಲು ಸೂಚಿಸಿದರು. ಬಳಿಕ ಕೆಂಜಾರು ಶ್ರೀ ದೇವಿ ಕಾಲೇಜು ಆವರಣದಲ್ಲಿ ಉಂಟಾದ ಭೂಕುಸಿತ, ಮರವೂರು ಅಂತೋನಿಕಟ್ಟೆ ಎಂಬಲ್ಲಿ ಕಾಂಕ್ರೀಟ್ ತಡೆಗೋಡೆ ಕುಸಿದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಸುರತ್ಕಲ್ ಬಾಳ ಸಮೀಪ ಐ.ಎಸ್.ಪಿ.ಆರ್.ಎಲ್. ಗೆ ಸೇರಿದ ಪೈಪ್ ಲೈನ್ ಹಾದುಹೋದ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ತುರ್ತು ಕ್ರಮ ಕೈಗೊಳ್ಳಲು ಐ.ಎಸ್.ಪಿ.ಆರ್.ಎಲ್. ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ ಪಕ್ಕದಲ್ಲಿ ಹಾದು ಹೋಗಿರುವ ಸಾರ್ವಜನಿಕ ರಸ್ತೆಯ ಸಮೀಪ ತಡೆ ಬೇಲಿ ಹಾಕಲು ತಿಳಿಸಿದರು.ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್, ಉಪವಿಭಾಗಾಧಿಕಾರಿ ಹರ್ಷವರ್ಧನ್, ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ಮತ್ತಿತರರು ಇದ್ದರು.

ಉಡುಪಿಯಲ್ಲಿ ಬಾವಿಯೊಂದು ಕುಸಿತ

– ಭಾರಿ ಮಳೆಗೆ ಪಾತಾಳ ಸೇರಿದ ಬಾವಿ
– ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

NAMMUR EXPRESS NEWS
ಉಡುಪಿ: ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು ನೋಡ ನೋಡುತ್ತಿದ್ದಂತೆ ಮನೆ ಮುಂದಿದ್ದ ಬಾವಿಯೊಂದು ಪಾತಾಳ ಸೇರಿದೆ. ಉಡುಪಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಭೂಕುಸಿತಕ್ಕೆ ಮನೆಯ ಬಾವಿ ಧಾರಾಶಾಹಿಯಾಗಿದೆ. ಬಾವಿಯೊಂದು ಕುಸಿಯುತ್ತಿರುವ ವಿಡಿಯೋ ವೈರಲ್ ಆಗಿದೆ. ಉಡುಪಿಯ ಕಾರ್ಕಳ ತಾಲೂಕಿನ ನೆಲ್ಲಿಕಟ್ಟೆಯ ಸರ್ವಿಸ್ ಸ್ಟೇಶನ್ ಸಮೀಪ ಘಟನೆ ನಡೆದಿದೆ. ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಭೂಮಿ ಒಳಗೆ ಬಾವಿ ಜಾರಿದೆ. ಬಾವಿ ಪಕ್ಕದಲ್ಲೆ ಮನೆ ಇದ್ದು, ಭೂಕುಸಿತದಿಂದಾಗಿ ಆತಂಕ ಹೆಚ್ಚಾಗಿದೆ.

– ಮಂಗಳೂರಿನಲ್ಲಿ ಹೆಚ್ಚಾದ ಕಡಲ ಅಬ್ಬರ

ಮಂಗಳೂರಿನಲ್ಲಿ ಕಡಲ ಅಬ್ಬರ ಹೆಚ್ಚಾಗುತ್ತಿದ್ದು, ನೋಡ ನೋಡುತ್ತಿದ್ದಂತೆ ಮನೆಯೊಂದು ಸಮುದ್ರಕ್ಕುರುಳಿದೆ. ಉಳ್ಳಾಲದ ಬಟ್ಟಪಾಡಿ ಕಡಲ ತೀರದಲ್ಲಿದ್ದ ಮನೆಯು ಅಲೆಗಳ ಹೊಡೆತಕ್ಕೆ ಸಿಲುಕಿ ಬಿದ್ದು ಹೋಗಿದೆ. ಮನೆಯಲ್ಲಿ ಯಾರು ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ಕಡಲ ಅಬ್ಬರ ಹೆಚ್ಚಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮನೆಯವರನ್ನು ಸ್ಥಳಾಂತರ ಮಾಡಿತ್ತು.

Categories
ಕರಾವಳಿ ಹವಾಮಾನ ಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ: ರೆಡ್ ಅಲರ್ಟ್!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ: ರೆಡ್ ಅಲರ್ಟ್!

– ಎಲ್ಲೆಡೆ ಜಿಲ್ಲಾಡಳಿತ ಸಜ್ಜು: ಜನರಿಗೆ ಎಚ್ಚರಿಕೆ
– ವಿದ್ಯುತ್ ತಂತಿ, ಹಳ್ಳ, ನದಿ ಹತ್ತಿರ ಹೋಗಬೇಡಿ..!

NAMMUR EXPRESS NEWS
ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಕ ಮಳೆ ಮುಂದುವರಿದಿದ್ದು, ದಿನಾಂಕ: 28-06-2024 ರಂದು ರೆಡ್ ಅಲರ್ಟ್ ಘೋಷಣೆಯಾಗಿರುತ್ತದೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ತುರ್ತು ಕ್ರಮಗಳನ್ನು ಕೈಗೊಂಡಿರುತ್ತದೆ.

1) ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ & ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, (12ನೇ ತರಗತಿವರೆಗೆ) ದಿನಾಂಕ: 28-06-2024 ರಂದು ರಜೆಯನ್ನು ಘೋಷಿಸಲಾಗಿದೆ.
2) ಸಂಭಾವ್ಯ ಪ್ರವಾಹ/ಭೂಕುಸಿತ ಪ್ರದೇಶಗಳನ್ನು ಗುರುತಿಸಿ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
3) ನೀರು ಇರುವ ತಗ್ಗು ಪ್ರದೇಶ. ಕೆರೆ, ನದಿ ತೀರ ಸಮುದ್ರ ತೀರಕ್ಕೆ ಸಾರ್ವಜನಿಕರು/ಪ್ರವಾಸಿಗರು ತೆರಳದಂತೆ ಜಾಗ್ರತೆ ವಹಿಸುವುದು.
4) ಮೀನುಗಾರರು ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ.
5) ಜಿಲ್ಲೆಯಲ್ಲಿ ವಿಪರೀತ ಮಳೆ ಸುರಿಯುತ್ತಿರುವುದರಿಂದ ಸಾರ್ವಜನಿಕರು ನದಿಗಳ/ತೋಡುಗಳ ಮತ್ತು ವಿದ್ಯುತ್ ಕಂಬ/ತಂತಿ ಸಮೀಪ ಹೋಗದಂತೆ ಎಚ್ಚರಿಕೆ ವಹಿಸುವುದು.
6) ಸಂಭಾವ್ಯ ಹಾನಿಯನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಸಾರ್ವಜನಿಕರು ಅಪಾಯಕಾರಿ ಸನ್ನಿವೇಶಗಳಿಂದ ದೂರವಿದ್ದು, ಜಿಲ್ಲಾಡಳಿತದ ಸಲಹೆ/ಸೂಚನೆಗಳನ್ನು ಪಾಲಿಸುವುದು.
7) ಪ್ರಾಕೃತಿಕ ವಿಕೋಪದಿಂದ ಯಾವುದೇ ರೀತಿಯ ಘಟನೆಗಳು ಸಂಭವಿಸಿದಲ್ಲಿ ಅಥವಾ ಸಂಭವಿಸಬಹುದಾದ ಸೂಚನೆ ಇದ್ದಲ್ಲಿ ಸಾರ್ವಜನಿಕರು ಕೂಡಲೇ ಸಂಬಂಧಪಟ್ಟ ಪಂಚಾಯತ್/ನಗರ ಸ್ಥಳೀಯ ಸಂಸ್ಥೆಗಳಿಗೆ ಮಾಹಿತಿಯನ್ನು ನೀಡುವುದು.

ಪ್ರಾಕೃತಿಕ ವಿಕೋಪ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ಈ ಕೆಳಕಂಡ ದೂರವಾಣಿಯನ್ನು ಸಂಪರ್ಕಿಸುವುದು. ಜಿಲ್ಲಾ ತುರ್ತು ಸೇವೆಗೆ ಟೋಲ್ ಫ್ರೀ ಸಂ. 24*7 ಕಂಟ್ರೋಲ್ ರೂಂ – 1077 / 0824-2442590 ಇದಕ್ಕೆ ಸಂಪರ್ಕಿಸಬಹುದೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Categories
ಸಿನಿಮಾ

ನಾಲ್ಕನೇ ಕರ್ನಾಟಕ ಚಲನಚಿತ್ರೋತ್ಸವ ಧಾರವಾಡ

ನಾಲ್ಕನೇ ಕರ್ನಾಟಕ ಚಲನಚಿತ್ರೋತ್ಸವ ಧಾರವಾಡ

– ಜೂನ್ 29 ಮತ್ತು 30 ರಂದು ಸುವರ್ಣ ಸಮುಚ್ಛಯ ಭವನದಲ್ಲಿ ಈ ಕಾರ್ಯಕ್ರಮ
– ಕಡಲ ಪಕ್ಕಿಲು”ಆಲ್ಬಮ್ ಸಾಂಗ್ ಗೆ ಡಾ .ರಾಜ್ ಕುಮಾರ್ ಪ್ರಶಸ್ತಿ 2024ಕ್ಕೆ ಆಯ್ಕೆ

NAMMUR EXPRESS NEWS
ನಾಲ್ಕನೇ ಕರ್ನಾಟಕ ಚಲನಚಿತ್ರೋತ್ಸವ ಧಾರವಾಡ, ದಿನಾಂಕ: 29 ಮತ್ತು 30 ಜೂನ್ 2024 ಶನಿವಾರ ಮತ್ತು ರವಿವಾರದಂದು ಬೆಳಿಗ್ಗೆ: 09:00 ಗಂಟೆಗೆ ಆರಂಭ ಸ್ಥಳ: ಸುವರ್ಣ ಸಮುಚ್ಛಯ ಭವನ, ರಂಗಾಯಣ ಧಾರವಾಡ ಚಿತ್ರ ಹಾಗೂ ಕಿರುಚಿತ್ರಗಳ ಪ್ರದರ್ಶನ, ಹೊಸ ಚಿತ್ರ ಹಾಗೂ ಕಿರುಚಿತ್ರಗಳಿಗೆ ಕಲಾವಿದರ ನೇರ ಸಂದರ್ಶನ ಕನ್ನಡ ಚಿತ್ರಗೀತೆಗಳ ಮಧುರ ಸಮ್ಮಿಲನ, ಕಥೆ, ಚಿತ್ರಕತೆ, ಸಂಭಾಷಣೆ, ಗೀತರಚನೆ ಕುರಿತಂತೆ ಚರ್ಚೆ-ಸಂವಾದ ಆಯ್ಕೆಯಾದ ಚಿತ್ರ-ಕಿರುಚಿತ್ರಗಳಿಗೆ ಪ್ರಶಸ್ತಿ ಪ್ರದಾನ, ಚಿತ್ರ-ಕಿರುಚಿತ್ರಗಳ ತಂಡದಿಂದ ಮಾತು-ಕತೆ ನಡೆಯುತ್ತದೆ. ಇದರಲ್ಲಿ ಕಡಲ ಪಕ್ಕಿಲು ತುಳು ಆಲ್ಬಮ್ ಹಾಡು KEEM star JK ಖ್ಯಾತಿಯ ಜಯಶೀಲ ಕಲ್ಯಾಣಪುರ ನಿರ್ದೇಶನದ ಮತ್ತು ಉಡುಪಿ ಫ್ರೆಂಡ್ಸ್ circle ನಿರ್ಮಾಣದ “ಕಡಲ ಪಕ್ಕಿಲು”album song ಗೆ ನಾಲ್ಕನೇ ಕರ್ನಾಟಕ ಚಲನಚಿತ್ರೋತ್ಸವ ಧಾರವಾಡ ಇದರ Dr.Raaj kumar ಪ್ರಶಸ್ತಿ 2024ಕ್ಕೆ ಆಯ್ಕೆಯಾಗಿರುತ್ತದೆ. ಜೂನ್ 29 ಮತ್ತು 30 ರಂದು ಧಾರವಾಡಡಲ್ಲಿ ನಡೆಯಲಿರುವ ಕರ್ನಾಟಕ ಚಲನಚಿತ್ರೋತ್ಸವದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಈಗಾಗಲೆ “ಮುದ್ದು ಅಪ್ಪ”album song ಮತ್ತು “ನೀ ಕೊಟ್ಟ ತುತ್ತು”ಕಿರು ಚಿತ್ರಕ್ಕೆ ಚಲನಚಿತ್ರೋತ್ಸವ ಪ್ರಶಸ್ತಿ ಲಭಿಸಿದ್ದು,ಇದು ಹ್ಯಾಟ್ರಿಕ್ ಸಾಧನೆಯಾಗಿದ್ದು. ಜಯಶೀಲ್ ಹಾಗೂ ತಂಡ ಭಾರಿ ಸಂತಸ ವ್ಯಕ್ತಪಡಿಸಿದಲ್ಲದೆ ಚಲನಚಿತ್ರ ಮಂಡಳಿ ಮತ್ತು ಕೀಮ್ಸ್ಟರ್ ತಂಡದ ಸದಸ್ಯರಿಗೆ ಜಯಶೀಲ ಕಲ್ಯಾಣಪುರ ಅಭಿನಂದನೆ ಸಲ್ಲಿಸಿದರು.

Categories
ಹಾವೇರಿ

ಭದ್ರಾವತಿಯ 13 ಮಂದಿ ಅಪಘಾತಕ್ಕೆ ಬಲಿ!

ಭದ್ರಾವತಿಯ 13 ಮಂದಿ ಅಪಘಾತಕ್ಕೆ ಬಲಿ!

– ಹಾವೇರಿ: ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ: 13 ಮಂದಿ ದುರ್ಮರಣ
– ಬಳ್ಳಾರಿ : ನಿಂತಿದ್ದ ಲಾರಿಗೆ ಟೆಂಪೋ ಟ್ರಾಕ್ಸ್ ಡಿಕ್ಕಿ
– ಓರ್ವ ಸಾವು 10 ಕ್ಕೂ ಹೆಚ್ಚು ಮಂದಿಗೆ ಗಾಯ!

NAMMUR EXPRESS NEWS
ಹಾವೇರಿ: ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿಯ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು 13 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ನಿಂತಿದ್ದ ಲಾರಿಗೆ ಹಿಂದಿನಿಂದ ಟಿಟಿ ವಾಹನ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಟಿಟಿ ವಾಹನದಲ್ಲಿದ್ದ 7 ಮಂದಿ ಮಹಿಳೆಯರು ಸೇರಿದಂತೆ 13 ಜನ ಮೃತಪಟ್ಟಿದ್ದಾರೆ. ಮೃತರು ಪರಶುರಾಮ್​​(45), ಭಾಗ್ಯ(40), ನಾಗೇಶ(50), ವಿಶಾಲಾಕ್ಷಿ(40), ಅರ್ಪಿತಾ(18), ಸುಭದ್ರಾ ಬಾಯಿ(65), ಪುಣ್ಯ(50), ಮಂಜುಳಾಬಾಯಿ, ಚಾಲಕ ಆದರ್ಶ್(23), ಮಾನಸ(24), ರೂಪಾ(40), ಮಂಜುಳಾ(50) ಎಂದು ಗುರುತಿಸಲಾಗಿದೆ.
ಇವರು ಶಿವಮೂಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮಿಹಟ್ಟಿ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ.
ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಅಪಘಾತ ನಡೆದಿದೆ ಎನ್ನಲಾಗಿದೆ.

ಟಿಟಿ ವಾಹನದಲ್ಲಿದ್ದ ಒಟ್ಟು 15 ಜನರೂ ಸವದತ್ತಿ ರೇಣುಕಾ ಯಲ್ಲಮ್ಮ ದರ್ಶನ ಪಡೆದು ಮರಳಿ ಊರಿಗೆ ಹೋಗುತ್ತಿರುವಾಗ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಒಂಬತ್ತು ಮಹಿಳೆಯರು, ಎರಡು ಪುಟ್ಟ ಕಂದಮ್ಮಗಳು, ಇಬ್ಬರು ಗಂಡು ಮಕ್ಕಳು, ಡ್ರೈವರ್ ಮೃತ ದುರ್ದೈವಿಗಳು. ಮೃತ ದೇಹಗಳನ್ನು ಹಾವೇರಿ ಜಿಲ್ಲಾ ಆಸ್ಪತ್ರೆಯ ಶವಗಾರಕ್ಕೆ ರಾವಾನೆ ಮಾಡಲಾಗಿದೆ. ಸ್ಥಳಕ್ಕೆ ಪೋಲಿಸರು ಭೇಟಿ ನೀಡಿದ್ದಾರೆ.

ಬಳ್ಳಾರಿ : ನಿಂತಿದ್ದ ಲಾರಿಗೆ ಟೆಂಪೋ ಟ್ರಾಕ್ಸ್ ಡಿಕ್ಕಿ
– ಓರ್ವ ಸಾವು 10 ಕ್ಕೂ ಹೆಚ್ಚು ಮಂದಿಗೆ ಗಾಯ!

ಬಳ್ಳಾರಿ: ನಿಂತಿದ್ದ ಲಾರಿಗೆ ಟೆಂಪೋ ಟ್ರಾಕ್ಸ್ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿದ್ದು, 10 ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹುಲಿಕೆರೆ ಕ್ರಾಸ್ ನ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ನಡೆದಿದೆ. ಮೃತ ದುರ್ದೈವಿ ಕೃಷ್ಟಪ್ಪ(62) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ 10 ಜನಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದೆ. ನಿಂತಿದ್ದ ಲಾರಿಗೆ ಹಿಂಬದಿಯಿಂದ ಬಂದ ಟೆಂಪೋ ಟ್ರಾಕ್ಸಿ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಕಲುಬುರಗಿಯಲ್ಲಿ ನಿಶ್ಚಿತಾರ್ಥ ಮುಗಿಸಿಕೊಂಡು ಚಿಕ್ಕಬಳ್ಳಾಪುರದ ಆರೋಡಿ ಗ್ರಾಮಕ್ಕೆ ತೆರಳುತ್ತಿದ್ದರು. ಟಿಟಿಯೊಳಗೆ ಇಬ್ಬರು ಮಕ್ಕಳು ಸೇರಿದಂತೆ 16 ಜನ ಪ್ರಯಾಣಿಸುತ್ತಿದ್ದರು. ಈತ್ತ ಗಂಗಾವತಿಯಿಂದ ಮೈಸೂರಿಗೆ ತೆರಳುತ್ತಿದ್ದ ಲಾರಿ ಕೆಟ್ಟು ನಿಂತಿತ್ತು. ಹೀಗೆ ನಿಂತಿದ್ದ ಲಾರಿಗೆ ಟಿಟಿ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಟಿಟಿ ನಜ್ಜು- ಗುಜ್ಜಾಗಿದ್ದು, ಇಬ್ಬರು ಸಿಲುಕಿಕೊಂಡಿದ್ದರು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಟಿಟಿಯಲ್ಲಿ ಸಿಲುಕಿಕೊಂಡಿದ್ದವರನ್ನ ಹೊರ ತೆಗೆಯಲು ಹರಸಾಹಸ ಪಟ್ಟರು.
ಈ ಸಂಬಂಧ ಕಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ತೀರ್ಥಹಳ್ಳಿ

ಕಂಡ ಕಂಡಲ್ಲಿ ಎಣ್ಣೆ ಕುಡಿದ್ರೆ ಬೀಳುತ್ತೆ ಕೇಸ್!

ಕಂಡ ಕಂಡಲ್ಲಿ ಎಣ್ಣೆ ಕುಡಿದ್ರೆ ಬೀಳುತ್ತೆ ಕೇಸ್!

– ತೀರ್ಥಹಳ್ಳಿ ನೂತನ ತುಂಗಾ ಸೇತುವೆ ಮೇಲೆ ಮದ್ಯ ಸೇವನೆ: ಕೇಸ್
– ಎಣ್ಣೆ ಕುಡಿದು ವಾಹನ ಚಲಾಯಿಸಿ ಸಿಕ್ಕಿ ಬಿದ್ದ..!

NAMMUR EXPRESS NEWS
ತೀರ್ಥಹಳ್ಳಿ: ಕಂಡ ಕಂಡಲ್ಲಿ, ಸಾರ್ವಜನಿಕ ಜಾಗದಲ್ಲಿ ಮದ್ಯ ಕುಡಿದರೆ ಈಗ ಬೀಳುತ್ತೆ ಕೇಸ್. ಹೌದು. ತೀರ್ಥಹಳ್ಳಿ ಪಟ್ಟಣದ ನೂತನ ತುಂಗಾ ಸೇತುವೆ ಸಮೀಪ ಅಕ್ರಮವಾಗಿ ಸಾರ್ವಜನಿಕರನ್ನು ಸೇರಿಸಿಕೊಂಡು ಮಧ್ಯಪಾನ ಸೇವನೆ ಮಾಡಿದ್ದಲ್ಲದೆ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅನುವು ಮಾಡಿಕೊಡುತ್ತಿದ್ದ ಇಬ್ಬರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಘಟನೆ ಈಗ ಎಲ್ಲೆಡೆ ಭಾರೀ ಚರ್ಚೆ ಆಗುತ್ತಿದೆ.

ಖಾಸಗಿ ಬೇಕರಿಯೊಂದರಲ್ಲಿ ಕೆಲಸ ಮಾಡುವ ಮೇಲಿನಕುರುವಳ್ಳಿಯ ನಿವಾಸಿ ವಿಕಾಸ್ (21) ವರ್ಷ, ಹಾಗೂ ಚೇತನ್ (21) ವರ್ಷ ಇಬ್ಬರು ಬುಧವಾರ ಸಂಜೆ 7 ಗಂಟೆಯ ಸಮಯದಲ್ಲಿ ಹೊಸ ತುಂಗಾ ಸೇತುವೆ ಸಮೀಪ ಮದ್ಯಪಾನ ಸೇವನೆ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಡಿವೈಎಸ್ ಪಿ ಗಜಾನನ ವಾಮನ ಸುತಾರ ಇವರ ಮಾರ್ಗದರ್ಶನದಲ್ಲಿ ಸಬ್ ಇನ್ಸೆಕ್ಟರ್ ಶಿವನಗೌಡ ಇವರ ನೇತೃತ್ವದಲ್ಲಿ ವೀರೇಂದ್ರ ಹಾಗೂ ದೀಪಕ್ ಪೊಲೀಸ್‌ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಕ್ರಮವಾಗಿ ಮದ್ಯ ಸೇವನೆ ಮಾಡುತ್ತಿದ್ದ ಇಬ್ಬರ ಮೇಲೆ ಕ್ರಮ ಕೈಗೊಂಡು ಪ್ರಕರಣ ದಾಖಲು ಮಾಡಿದ್ದಾರೆ. ಇದು ಜಿಲ್ಲೆಯಲ್ಲೇ ಮಾದರಿ ಪ್ರಕರಣವಾಗಿದೆ.

ಮದ್ಯ ಕುಡಿದು ಚಾಲನೆ: 10 ಸಾವಿರ ದಂಡ!

ತೀರ್ಥಹಳ್ಳಿ : ಕುರುವಳ್ಳಿ – ಬಾಳೆಬೈಲು ಸಂಪರ್ಕಿಸುವ ಬೈಪಾಸ್ ರಸ್ತೆಯ ತುಂಗಾ ಸೇತುವೆ ಸಮೀಪ ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದ ಯುವಕನ ಮೇಲೆ ಕೇಸ್ ದಾಖಲು ಮಾಡಿ ದಂಡ ವಿಧಿಸಲಾಗಿದೆ. ಬುಧವಾರ ಸಂಜೆ ತುಂಗಾ ಸೇತುವೆ ಸಮೀಪ ದರ್ಶನ್ (23) ವರ್ಷ ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದು ಪಿಎಸ್‌ಐ ರವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದು ಆತನಿಗೆ 10 ಸಾವಿರ ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಸಿನಿಮಾ

ಜಲಪಾತ ಸಿನಿಮಾಕ್ಕೆ ಮತ್ತೊಂದು ಪ್ರಶಸ್ತಿ ಗರಿ!

ಜಲಪಾತ ಸಿನಿಮಾಕ್ಕೆ ಮತ್ತೊಂದು ಪ್ರಶಸ್ತಿ ಗರಿ!

– ಬೇಗಾರು ರಮೇಶ್ ಅವರಿಗೆ ಉತ್ತಮ ಭರವಸೆಯ ನಿರ್ದೇಶಕ ವಿಶೇಷ ಪ್ರಶಸ್ತಿ
– ತೀರ್ಥಹಳ್ಳಿ ಮೂಲದ ಉದ್ಯಮಿ ರವೀಂದ್ರ ತುಂಬ್ರಮನೆ ನಿರ್ಮಾಪಕರಾಗಿರುವ ಸಿನಿಮಾ

NAMMUR EXPRESS NEWS
ಶೃಂಗೇರಿ: ಮಲೆನಾಡ ಖ್ಯಾತ ನಿರ್ದೇಶಕರಾದ ಬೇಗಾರು ರಮೇಶ್ ಉತ್ತಮ ಭರವಸೆಯ ನಿರ್ದೇಶಕ ಎಂಬ ವಿಶೇಷ ಪ್ರಶಸ್ತಿಗೆ ಭಾಜನರಾಗಿದ್ದಾರೆ.

1987ರಲ್ಲಿ ಗಿರೀಶ್ ಕಾಸರವಳ್ಳಿ ಇವರ ಜೊತೆಗೆ ಸಹಾಯಕರಾಗಿ, ಉದ್ಭವದಲ್ಲಿ ಕೋಡ್ಲು ರಾಮಕೃಷ್ಣ,ಸಂದಾನಂದ ಸುವರ್ಣ ಜೊತೆಗೆ ಕುಬಿ ಮತ್ತು ಇಯಾಲದಲ್ಲಿ ಕೆಲಸ ಮಾಡಿದ ಅನುಭವದೊಂದಿಗೆ ಧಾರಾವಾಹಿ, ಯಕ್ಷಗಾನ, ನಾಟಕ ಬಳಿಕ ಜಲಪಾತ ಸಿನಿಮಾ ನಿರ್ದೇಶಕರಾಗಿದ್ದು, ಚಿತ್ತಾರ ಅವಾರ್ಡ್ ಪಡೆದಿದೆ. ಇದೀಗ ಇದೇ ಸಿನಿಮಾಕ್ಕೆ ಚಿತ್ರ ಸಂತೆ ಫಿಲಂ ಅವಾರ್ಡ್ ಕಾರ್ಯಕ್ರಮದಲ್ಲಿ ಜಲಪಾತ ಸಿನಿಮಾದ ” ಉತ್ತಮ ಭರವಸೆಯ ನಿರ್ದೇಶಕ ” ಎಂಬ ವಿಶೇಷ ಪ್ರಶಸ್ತಿ ಸಿಕ್ಕಿದೆ. ಜಲಪಾತ ದಂಥ ಸಿನಿಮಾ ನನ್ನಲ್ಲಿ ಮಾಡಿಸಿದ ನಿರ್ಮಾಪಕ ಗೆಳೆಯ ರವೀಂದ್ರ ತುಂಬರಮನೆ ಇವರಿಗೆ ಅಪಾರ ಪ್ರೀತಿ ಗೌರವದಿಂದ ಪರಿಪೂರ್ಣ ಸಮರ್ಪಣೆ ಮಾಡುತ್ತೇನೆ ಎಂದು ಹೇಳಿದ್ದಾರೆ.

Categories
ರಾಷ್ಟ್ರೀಯ ವಾರ್ತೆ

ಜಿಯೋ ಗ್ರಾಹಕರಿಗೆ ಬೆಲೆ ಏರಿಕೆ ಶಾಕ್!

ಜಿಯೋ ಗ್ರಾಹಕರಿಗೆ ಬೆಲೆ ಏರಿಕೆ ಶಾಕ್!

– ಶೇ. 20ರಷ್ಟು ದರ ಏರಿಕೆ: ಯಾವುದಕ್ಕೆ ಎಷ್ಟು..?
– ಜಿಯೋ ಸಿಮ್ ದರ ಏರಿಕೆ.. ಜನರಿಗೆ ಸಿಮ್ ಸಂಕಟ!

NAMMUR EXPRESS NEWS
ನವ ದೆಹಲಿ: ರಿಲಯನ್ಸ್‌ ಜಿಯೋ ಗುರುವಾರ ತನ್ನ ಪ್ರಿಪೇಯ್ಡ್ ಯೋಜನೆಗಳಲ್ಲಿ 20% ಸುಂಕ ಹೆಚ್ಚಳವನ್ನು ಘೋಷಿಸಿದೆ. ಎರಡೂವರೆ ವರ್ಷಗಳಲ್ಲಿ ಮೊದಲ ಬಾರಿಗೆ ಬೆಲೆ ಹೆಚ್ಚಳವಾಗಿದೆ. ಈ ಮೂಲಕ ಜಿಯೋ ಸಿಮ್ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.

ಇತ್ತೀಚೆಗೆ ಮುಕ್ತಾಯಗೊಂಡ ಹರಾಜಿನಲ್ಲಿ ಜಿಯೋ 1800 ಮೆಗಾಹರ್ಟ್ಸ್ ಬ್ಯಾಂಡ್ನಲ್ಲಿ 14.4 ಮೆಗಾಹರ್ಟ್ಸ್ ಸ್ಪೆಕ್ಟಮ್ ಅನ್ನು 973 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಂಡ ಒಂದು ದಿನದ ನಂತರ ಈ ಪ್ರಕಟಣೆ ಬಂದಿದೆ. ಜಿಯೋ ಪ್ರೀಪೆಯ್ಡ್ ಗ್ರಾಹಕರಿಗೆ ಬಿಗ್ ಶಾಕ್ ಎನ್ನುವಂತೆ ಟ್ಯಾರಿಫ್‌ ದರ ಶೇ.20ರಷ್ಟು ಹೆಚ್ಚಳವಾಗಲಿದೆ.

ಪೋಸ್ಟ್ ಪೇಯ್ಡ್ ಯೋಜನೆಗಳು ಸಹ ಹೆಚ್ಚು ದುಬಾರಿಯಾಗಿವೆ. 30 ಜಿಬಿ ಡೇಟಾವನ್ನು ಒದಗಿಸುತ್ತಿದ್ದ 299 ರೂ.ಗಳ ಯೋಜನೆಯ ಬೆಲೆ ಈಗ ಬಿಲ್ಲಿಂಗ್ ಚಕ್ರಕ್ಕೆ 349 ರೂ. 75 ಜಿಬಿ ಡೇಟಾದೊಂದಿಗೆ 399 ರೂ.ಗಳ ಯೋಜನೆಯ ಬೆಲೆ ಈಗ 449 ರೂ.

ಜಿಯೋ ಎರಡು ಹೊಸ ಅಪ್ಲಿಕೇಶನ್ಗಳನ್ನು ಸಹ ಪ್ರಾರಂಭಿಸುತ್ತಿದೆ:

ಜಿಯೋಸೇಫ್‌: ಕರೆ, ಮೆಸೇಜಿಂಗ್ ಮತ್ತು ಫೈಲ್ ವರ್ಗಾವಣೆಗಾಗಿ ಕ್ವಾಂಟಮ್-ಸೆಕ್ಯೂರ್ ಸಂವಹನ ಅಪ್ಲಿಕೇಶನ್, ಇದರ ಬೆಲೆ ತಿಂಗಳಿಗೆ 199 . ಜಿಯೋ ಟ್ರಾನ್ಸೆಟ್: ಧ್ವನಿ ಕರೆಗಳು, ಸಂದೇಶಗಳು, ಪಠ್ಯ ಮತ್ತು ಚಿತ್ರಗಳನ್ನು ಭಾಷಾಂತರಿಸಲು ಎಐ ಚಾಲಿತ ಬಹುಭಾಷಾ ಸಂವಹನ ಅಪ್ಲಿಕೇಶನ್, ಇದರ ಬೆಲೆ ತಿಂಗಳಿಗೆ 99 ರೂ.

ಜಿಯೋ ಬಳಕೆದಾರರು ಈ ಅಪ್ಲಿಕೇಶನ್ಗಳನ್ನು ಒಂದು ವರ್ಷದವರೆಗೆ ಉಚಿತವಾಗಿ ಪಡೆಯಬಹುದು.
ಪ್ರಸ್ತುತ ಬೆಲೆ (ರೂ.) 15 ರೂ.ಗೆ ನೀಡಲಾಗುತ್ತಿದ್ದಂತ 1 ಜಿಪಿ ಡೇಟಾ ದರವನ್ನು ರೂ.19ಕ್ಕೆ ಏರಿಕೆಯ ಮಾಡಲಾಗುತ್ತಿದೆ. 25 ರೂ.ಗೆ ನೀಡಲಾಗುತ್ತಿದ್ದಂತ 2 ಜಿಪಿ ಡೇಟಾ ದರವನ್ನೂ ರೂ.29ಕ್ಕೆ ಏರಿಕೆ ಮಾಡಲಾಗುತ್ತಿದೆ. ಇನ್ನೂ ರೂ. 61ಕ್ಕೆ ನೀಡಲಾಗುತ್ತಿದ್ದಂತ 6 ಜಿಬಿ ಡೇಟಾ ದರವನ್ನು ರೂ.69ಕ್ಕೆ ಹೆಚ್ಚಳ ಮಾಡಲಾಗುತ್ತಿದೆ.

ಹೊಸ ಹೆಚ್ಚಳದ ಪ್ಲಾನ್ ದರಗಳ ಪಟ್ಟಿ

ರೂ.155ಗಳಿಗೆ ನೀಡಲಾಗುತ್ತಿದ್ದಂತ 28 ದಿನಗಳ ವ್ಯಾಲಿಡಿಟಿ ಹಾಗೂ 2 ಜಿಬಿ ಪ್ಲಾನ್ ಅನ್ನು ರೂ. 189ಕ್ಕೆ ಹೆಚ್ಚಳ ಮಾಡಲಾಗುತ್ತಿದೆ. ರೂ.209ರಿಂದ 249ಕ್ಕೆ 28 ದಿನಗಳ ಪ್ಲಾನ್ ದರ ಏರಿಕೆ ಮಾಡಿದ್ರೆ, ರೂ.239ರಿಂದ 299ಕ್ಕೆ ಏರಿಕೆ ಮಾಡಲಾಗುತ್ತಿದೆ. ರೂ.395ರ ಪ್ಲಾನ್ ಅನ್ನು ರೂ.449ಕ್ಕೆ ಏರಿಕೆ ಮಾಡಿ, 3 ಜಿಬಿ ಪ್ರತಿ ದಿನ ಡೇಟಾ, 28 ದಿನಗಳ ವ್ಯಾಲಿಡಿಟಿ ನೀಡಲಾಗುತ್ತಿದೆ. ರೂ.533ರ ದರವನ್ನು 629ಕ್ಕೆ ಹೆಚ್ಚಳ ಮಾಡಿ, 56 ದಿನಗಳ ವ್ಯಾಲಿಡಿಟಿ ನೀಡಲಾಗಿದೆ. 666ರೂ ದರವನ್ನು 799ಕ್ಕೆ ಹೆಚ್ಚಿಸಿ, ಪ್ರತಿ ದಿನ 1.5 ಜಿಪಿ ಡೇಟಾದಂತೆ 84 ದಿನಗಳ ವ್ಯಾಲಿಟಿಡಿ ನೀಡಲಾಗಿದೆ.

Categories
ಜಾತಕ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?

– ಯಾವ ರಾಶಿಗೆ ಒಳಿತು? ಯಾವ ರಾಶಿಗೆ ಕೆಡುಕು?

NAMMUR EXPRESS NEWS
2024 ಜೂನ್ 28ರ ಶುಕ್ರವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.?

** ಮೇಷ ರಾಶಿ :
ನೀವು ಅಂತಿಮವಾಗಿ ಯೋಗಿಗಳಿಂದ ಪ್ರಭಾವಿತರಾಗಿದ್ದೀರಿ. ಆರ್ಟ್ ಆಫ್ ಲಿವಿಂಗ್ ನಲ್ಲಿ ಪದವಿ ಕೋರ್ಸ್ ಮಾಡಿದರೆ ಹೇಗೆ? ನೀವು ಸಂಗೀತ ಅಥವಾ ನೃತ್ಯದಲ್ಲಿ ಅಥವಾ ಬಹಳ ಕಾಲದಿಂದ ನೀವು ಆಸಕ್ತಿ ವಹಿಸಿದ್ದ ಪಾಠಗಳನ್ನು ಕಲಿತು ನಿಮ್ಮ ಆಸೆ ತೀರಿಸಿಕೊಳ್ಳಬಹುದು. ಒಳ್ಳೆಯ ದಿನ ಮತ್ತು ನಿಮಗೆ ಯಶಸ್ಸಿನ ಸಿಹಿ ತರುತ್ತದೆ.

** ವೃಷಭ :
ನೀವು ಅವರಿಂದ ನಿರೀಕ್ಷಿಸಿದ್ದ ಬೆಂಬಲ ದೊರೆಯದೇ ಇರುವ ಕಾರಣ ನೀವು ಕುಗ್ಗಿಹೋಗುತ್ತೀರಿ. ನೀವು ಪ್ರಾಯೋಗಿಕವಾಗಿರಬೇಕೇ ಹೊರತು ಭಾವನೆಗಳಿಂದ ಬಳಲಾಬಾರದು. ಕೌಟುಂಬಿಕ ಸಂಘರ್ಷಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ನೀವು ಸಂಘರ್ಷಗಳನ್ನು ತಪ್ಪಿಸಿ ನಗುತ್ತಾ ಇದ್ದು ಗೆಲ್ಲಿರಿ.

** ಮಿಥುನ :
ಇಂದು, ನೀವು ಕೆಲಸಗಳನ್ನು ಪೂರೈಸಲು ತಲೆ ಕೆಡಿಸಿಕೊಳ್ಳುತ್ತೀರಿ. ಆದರೆ ನಿಮ್ಮ ನಮ್ರತೆ ಒಳ್ಳೆಯದೇನೂ ಮಾಡುವುದಿಲ್ಲ. ನೀವು ಅಲ್ಲದೇ ಇದ್ದರೂ ಅದನ್ನು ನಿಮ್ಮ ಬಾಸ್ ಗೆ ತೋರಿಸಬೇಕು. ನಿಮ್ಮ ಅಸಾಧಾರಣ ಸಾಮರ್ಥ್ಯ ಅತ್ಯುತ್ತಮ ಕಾರ್ಯಕ್ಷಮತೆಯಾಗುತ್ತದೆ ಮತ್ತು ದಿನವನ್ನು ಉಳಿಸುತ್ತದೆ. ನಿಮ್ಮ ಯಶಸ್ಸಿಗೆ ನಿಮ್ಮ ಕುಟುಂಬ ಕಾರಣ ಎಂದು ಮರೆಯಬೇಡಿ.

** ಕಟಕ :
ನೀವು ಕೆಲಸ ಅಥವಾ ವ್ಯಾಪಾರದಲ್ಲಿ ಕಠಿಣ ಪರಿಶ್ರಮದಿಂದ ಸ್ಥಾನ ಪಡೆಯುತ್ತೀರಿ. ಪಾಲುದಾರರೊಂದಿಗೆ ಸಂಬಂಧ ಸುಧಾರಿಸುತ್ತದೆ. ಸಂಗಾತಿಯೊಂದಿಗೆ ಹತ್ತಿರವಾಗುತ್ತೀರಿ. ಮೆಲೊಡಿ ಮತ್ತು ಆನಂದ ಮನೆಯಲ್ಲಿನ ಸಂತೋಷ ತೋರುತ್ತದೆ. ನೀವು ಸಂಜೆಯನ್ನು ನಿಮ್ಮ ಪ್ರೀತಿಪಾತ್ರರೊಂದಿಗೆ ಕಳೆಯುತ್ತೀರಿ.

** ಸಿಂಹ :
ನೀವು ನಿಮ್ಮ ಜೀವನದಲ್ಲಿ ಮಹತ್ತರ ಕ್ಷಣ ಎಂದು ಭಾವಿಸುವ ಸನ್ನಿವೇಶದಲ್ಲಿ ನೀವು ಇದ್ದರೆ ಅದಕ್ಕೆ ಆಶ್ಚರ್ಯಪಡಬೇಡಿ. ಅದು ವೈಯಕ್ತಿಕ ವಿಷಯವಾಗಲಿ, ಅಥವಾ ಕೆಲಸಕ್ಕೆ ಸಂಬಂಧಿಸಿದಾಗಲಿ, ನೀವು ಕಂಡುಕೊಳ್ಳಲು ಕಾಯಬೇಕು, ಸುಸೂತ್ರವಾಗಿ ಮುನ್ನಡೆಯಲು ದೃಢತೆ ಮತ್ತು ರಾಜತಂತ್ರ ಬೇಕು. ಸಮತೋಲನದಲ್ಲಿರಿ! ನಿಮ್ಮ ಸಾಮಾಜಿಕ ಪ್ರತಿಷ್ಠೆ ಅಪಾರ ಹೆಚ್ಚಳ ಕಾಣುತ್ತದೆ.

** ಕನ್ಯಾ :
ಇಂದು ನಿಮ್ಮಲ್ಲಿರುವ ಸೃಜನಶೀಲ ವ್ಯಕ್ತಿ ವೇದಿಕೆಯಲ್ಲಿ ವಿಜೃಂಭಿಸುತ್ತಾನೆ. ನಿಮಗೆ ಮನರಂಜನ ಮತ್ತು ಕಾಮಿಡಿಯನ್ ಆಗಿ ಮಹತ್ತರ ಸಾಮರ್ಥ್ಯಗಳಿವೆ ಮತ್ತು ಜನರು ಸಂಜೆಯಲ್ಲಿ ನಿಮ್ಮ ಜೋಕ್ ಸಂಪತ್ತಿಗೆ ಖುಷಿಯಾಗುತ್ತಾರೆ. ಆದರೆ ನೀವು ಇತರೆ ಸಮಸ್ಯೆಗಳು ಮತ್ತು ಕರ್ತವ್ಯಗಳಿಗೂ ಕೊಂಚ ಶಕ್ತಿ ಉಳಿಸಿಕೊಳ್ಳಿ.

** ತುಲಾ :
ನಿಮ್ಮ ಎಲ್ಲ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳುತ್ತೀರಿ. ನೀವು ಸಣ್ಣ ವಿಷಯಗಳು ಮತ್ತು ಸಮಸ್ಯೆಗಳ ಕುರಿತು ಕೊಂಚ ಒತ್ತಡ ಅನುಭವಿಸುತ್ತೀರಿ. ಇಂದು ನೀವು ವಿವಿಧ ಮೂಲಗಳಿಂದ ಗಳಿಸಲು ಶಕ್ತರಾಗಿದ್ದೀರಿ. ನಿಮ್ಮ ಮನಸ್ಸನ್ನು ಸಮತೋಲನದಲ್ಲಿ ಇರಿಸಿದರೆ ನಿಮ್ಮ ಕೆಲಸದಲ್ಲಿ ಅದ್ಭುತ ಫಲಿತಾಂಶಗಳನ್ನು ಪಡೆಯುತ್ತೀರಿ.

** ವೃಶ್ಚಿಕ :
ನೀವು ವಿವಿಧ ಅಭಿರುಚಿ ಮತ್ತು ಮನೋಧರ್ಮದ ಜನರನ್ನು ಎದುರಿಸಬಹುದು. ಕೆಲವರು ನಿಮಗೆ ಆಶ್ಚರ್ಯಪಡಿಸುತ್ತಾರೆ, ಕೆಲವರು ನಿಮಗೆ ಶಾಕ್ ನೀಡುತ್ತಾರೆ. ಕೆಲವೊಮ್ಮೆ, ಜನರು ನಿಮ್ಮ ಯಶಸ್ಸಿಗೆ ಒಂದೇ ರೀತಿ ಪ್ರತಿಕ್ರಿಯಿಸಿದ್ದಾರಾ ಎಂದು ಅರ್ಥ ಮಾಡಿಕೊಳ್ಳುವುದು ಕಷ್ಟ. ಅದನ್ನು ಜಾಣ್ಮೆ ಮತ್ತು ರಾಜತಂತ್ರೀಯವಾಗಿ ಎದುರಿಸಿ.

** ಧನುಸ್ಸು :
ನೀವು ನಿಮ್ಮ ಸುತ್ತಲಿನ ಭಾವಪರವಶತೆಯಲ್ಲಿದ್ದೀರಿ. ನೀವು ಪರ್ಫಾರ್ಮೆನ್ಸ್ ನಿಂದ ಮುನ್ನಡೆಯುವವರು ಮತ್ತು ನೀವು ತೆಗೆದುಕೊಳ್ಳುವ ಯಾವುದೇ ಕಾರ್ಯಕ್ಕೆ ನಿಮ್ಮ ಅತ್ಯುತ್ತಮವಾದುದನ್ನು ನೀಡುತ್ತೀರಿ. ನಿಮ್ಮ ಆಂತರಿಕ ಧ್ವನಿಯನ್ನು ಕೇಳಿರಿ. ಅದು ನಿಮ್ಮನ್ನು ಸರಿಯಾದ ದಾರಿಯಲ್ಲಿ ನಡೆಸುತ್ತದೆ. ಸರ್ವಶಕ್ತ ನಿಮ್ಮ ಮೇಲೆ ಕೃಪಾಶಿರ್ವಾದ ಬೀರಿದ್ದಾನೆ. ಅದನ್ನು ಇಂದು ಸರಿಯಾಗಿ ಬಳಸಿಕೊಳ್ಳಿ.

** ಮಕರ :
ಹೆಚ್ಚಾಗುತ್ತಿರುವ ಕೆಲಸದ ಒತ್ತಡ ಮತ್ತು ಜವಾಬ್ದಾರಿಗಳು ನಿಮ್ಮ ಶಕ್ತಿಯನ್ನು ಹೀರುತ್ತವೆ, ಆದರೆ ನಿಮ್ಮ ಉತ್ಸಾಹವನ್ನಲ್ಲ. ದಿನದ ದ್ವಿತೀಯಾರ್ಧ ನೀವು ನಿಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ಹೋರಾಟ ನಡೆಸುತ್ತಿರುವುದರಿಂದ ದಣಿವಿನಿಂದ ಕೂಡಿರುತ್ತದೆ. ಜಾಣ್ಮೆಯಿಂದ ಮತ್ತು ಸರಿಯಾದ ಕ್ರಮಗಳ ಮೂಲಕ ನೀವು ವಿಜೇತರಾಗುತ್ತೀರಿ.

** ಕುಂಭ :
ನೀವು ಸುತ್ತಮುತ್ತಲೂ ಶಾಂತಿ ಮತ್ತು ಆನಂದ ಹರಡಬೇಕಿದ್ದಲ್ಲಿ, ಈ ದಿನ ನೀವು ಸಾಧಿಸಬಹುದು. ಆದರೂ ನೀವು ನಿಮ್ಮ ಆದ್ಯತೆಗಳು ಮತ್ತು ಆಸಕ್ತಿಗಳನ್ನು ಸಮಸ್ಯೆ ಪರಿಹರಿಸಲು ತ್ಯಾಗ ಮಾಡಬೇಕಾಗಬಹುದು. ಶಾಂತಿದೂತನ ಕಾರ್ಯ ಮಾಡುವುದು ಒಳ್ಳೆಯದು, ಆದರೆ ಜನರು ಅದನ್ನು ಹಗುರವಾಗಿ ಕಾಣುತ್ತಾರೆ. ನೀವು ಉದಾಹರಣೆ ನಿರ್ಮಿಸುತ್ತಿದ್ದೀರಿ ಎಂದು ಭಾವಿಸುತ್ತೀರಿ. ಆದರೆ ಹಿಂದಿರುಗಿ ನೋಡಿ, ಯಾರೂ ನಿಮ್ಮನ್ನು ಅನುಸರಿಸುತ್ತಿಲ್ಲ.

** ಮೀನ :
ಪ್ರಮುಖ ವೆಚ್ಚಗಳು ನಿಮ್ಮ ದಾರಿಯಲ್ಲಿವೆ. ಆದರೆ ಒಳ್ಳೆಯ ಸುದ್ದಿ ಎಂದರೆ ಅಗತ್ಯಗಳು ಮತ್ತು ಬಯಕೆಗಳ ನಡುವೆ ಗೆರೆ ಎಳೆದು ಅವುಗಳನ್ನು ತಪ್ಪಿಸಬಹುದು. ಕೊಂಚ ನಿಯಂತ್ರಣ ಹೇರಿಕೊಂಡರೆ ನಂತರ ನಿಮಗೆ ಉಳಿತಾಯ ಹೆಚ್ಚಿಸುತ್ತದೆ.