Categories
ಜಾತಕ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಯಾವ ರಾಶಿಯವರಿಗೆ ಲಾಭ ? ಯಾವ ರಾಶಿಯವರಿಗೆ ನಷ್ಟ ?

NAMMUR EXPRESS NEWS
2024 ಜೂನ್ 06ರ ಗುರುವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.?

** ಮೇಷ :
ಪ್ರಮುಖ ಕಾರ್ಯಕ್ರಮಗಳನ್ನು ಮುಂದೂಡುವುದು ಉತ್ತಮ, ದೂರ ಪ್ರಯಾಣದ ಸೂಚನೆಗಳಿವೆ. ಕುಟುಂಬ ಸದಸ್ಯರೊಂದಿಗೆ ದೈವಿಕ ದರ್ಶನವನ್ನು ಪಡೆಯುತ್ತೀರಿ. ಆರೋಗ್ಯ ವಿಷಯಗಳಲ್ಲಿ ವೈದ್ಯಕೀಯ ಸಮಾಲೋಚನೆ ಅಗತ್ಯ. ವೃತ್ತಿಪರ ವ್ಯವಹಾರಗಳಲ್ಲಿ ಸ್ವಂತ ನಿರ್ಧಾರಗಳು ಕೂಡಿ ಬರುವುದಿಲ್ಲ. ಉದ್ಯೋಗಿಗಳಿಗೆ ಸ್ಥಾನ ಚಲನೆ ಸೂಚನೆಗಳಿವೆ.

** ವೃಷಭ ರಾಶಿ :
ಆಪ್ತ ಸ್ನೇಹಿತರ ಸಹಕಾರಗಳು ದೊರೆಯುತ್ತವೆ. ಆದಾಯ ತೃಪ್ತಿಕರವಾಗಿರುತ್ತದೆ. ಕೈಗೆತ್ತಿಕೊಂಡ ವ್ಯವಹಾರಗಳಲ್ಲಿ ಕಾರ್ಯ ಸಿದ್ದತೆ ಇರುತ್ತದೆ. ಬಂಧುಗಳೊಂದಿಗೆ ಶುಭ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಹಳೆ ಸಾಲಗಳನ್ನು ವಸೂಲಿ ಮಾಡಲಾಗುತ್ತದೆ. ವೃತ್ತಿಪರ ಉದ್ಯೋಗಗಳು ಅನುಕೂಲಕರ ವಾತಾವರಣ ಇರುತ್ತದೆ.

** ಮಿಥುನ ರಾಶಿ :
ಮನೆಯ ಹೊರಗೆ ಜವಾಬ್ದಾರಿಗಳು ಹೆಚ್ಚು ಕಿರಿಕಿರಿಯನ್ನುಂಟುಮಾಡುತ್ತವೆ. ವ್ಯಾಪಾರ ವ್ಯವಹಾರಗಳಲ್ಲಿ ಆಲೋಚನೆಗಳಲ್ಲಿ ಸ್ಥಿರತೆ ಇರುವುದಿಲ್ಲ. ಕೈಗೊಂಡ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗುತ್ತವೆ. ವ್ಯರ್ಥ ಪ್ರಯಾಣಗಳನ್ನು ಮಾಡಬೇಕಾಗುತ್ತದೆ. ಸಹೋದರರೊಂದಿಗೆ ವಿವಾದ ಉಂಟಾಗುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಅಧಿಕಾರಿಗಳಿಂದ ಒತ್ತಡ ಹೆಚ್ಚಾಗುತ್ತದೆ.

** ಕಟಕ ರಾಶಿ :
ದೂರದ ಬಂಧುಗಳಿಂದ ಶುಭ ಸುದ್ದಿ ದೊರೆಯುತ್ತದೆ. ಆದಾಯ ಚೆನ್ನಾಗಿರುತ್ತದೆ. ಸ್ನೇಹಿತರ ಸಹಕಾರದಿಂದ ದೀರ್ಘಕಾಲದಿಂದ ಪೂರ್ಣಗೊಳ್ಳದ ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ. ಸ್ಥಿರಾಸ್ತಿ ವಿವಾದಗಳು ಒಂದು ಹಂತಕ್ಕೆ ಬರುತ್ತವೆ. ಪ್ರಮುಖ ವ್ಯವಹಾರ ನಿರ್ಧಾರಗಳನ್ನು ಕಾರ್ಯಗತಗೊಳಿಸಲಾಗುತ್ತದೆ. ಉದ್ಯೋಗಿಗಳು ತಮ್ಮ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಾರೆ.

** ಸಿಂಹ ರಾಶಿ :
ಸಹೋದರರೊಂದಿಗೆ ಸ್ಥಿರಾಸ್ತಿ ವಿವಾದಗಳು ಉಂಟಾಗುತ್ತವೆ. ದೂರದ ಪ್ರಯಾಣ ಮಾಡಬೇಕಾಗುತ್ತದೆ ಮತ್ತು ವ್ಯಾಪಾರದಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಂಡು ನಷ್ಟವನ್ನು ಎದುರಿಸಬೇಕಾಗುತ್ತದೆ. ಹೊಸ ಸಾಲದ ಪ್ರಯತ್ನಗಳು ನಡೆಯುತ್ತವೆ. ಕೈಗೊಂಡ ಕಾರ್ಯಕ್ರಮಗಳಲ್ಲಿ ಅಡೆತಡೆಗಳು ಎದುರಾಗುತ್ತವೆ. ಉದ್ಯೋಗಿಗಳಿಗೆ ತಮ್ಮ ಸಹೋದ್ಯೋಗಿಗಳೊಂದಿಗೆ ಸಮಸ್ಯೆಗಳು ಎದುರಾಗುತ್ತವೆ. ಆಧ್ಯಾತ್ಮಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.

** ಕನ್ಯಾ ರಾಶಿ :
ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ದೊರೆಯುತ್ತವೆ. ಮನೆಯ ಹೊರಗೆ ನಿರ್ಧಾರಗಳು ಎಲ್ಲರಿಗೂ ಸಂತೋಷವನ್ನು ನೀಡುತ್ತವೆ. ಕೆಲವು ಸಂದರ್ಭಗಳಲ್ಲಿ ಆಪ್ತ ಸ್ನೇಹಿತರ ಸಲಹೆ ಪಡೆದು ಮುನ್ನಡೆಯುವುದು ಉತ್ತಮ. ವೃತ್ತಿಪರ ವ್ಯವಹಾರಗಳಲ್ಲಿನ ಸಮಸ್ಯೆಗಳನ್ನು ನಿವಾರಿಸಿ ಲಾಭವನ್ನು ಪಡೆಯುತ್ತೀರಿ. ಉದ್ಯೋಗದ ವಾತಾವರಣವು ಅನುಕೂಲಕರವಾಗಿರುತ್ತದೆ.

** ತುಲಾ ರಾಶಿ :
ಬಾಲ್ಯದ ಸ್ನೇಹಿತರೊಂದಿಗೆ ಮನೋರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ಕೆಲವು ಸಂದರ್ಭಗಳಲ್ಲಿ, ಪ್ರಮುಖ ವ್ಯಕ್ತಿಗಳಿಂದ ಪ್ರಮುಖ ಮಾಹಿತಿಯನ್ನು ಸ್ವೀಕರಿಸಲಾಗುತ್ತದೆ. ಕೌಟುಂಬಿಕ ವಾತಾವರಣ ಶಾಂತಿಯುತವಾಗಿರುತ್ತದೆ. ವ್ಯಾಪಾರ ಅನುಕೂಲತೆ ಹೆಚ್ಚಾಗುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಹೊಸ ಪ್ರೋತ್ಸಾಹವನ್ನು ಪಡೆಯುತ್ತೀರಿ. ಹಠಾತ್ ಧನಲಾಭ ಉಂಟಾಗುತ್ತದೆ.

** ವೃಶ್ಚಿಕ ರಾಶಿ :
ಆದಾಯ ಮಾರ್ಗಗಳು ಕಡಿಮೆಯಾಗುತ್ತವೆ. ಹಳೆಯ ಸಾಲಗಳನ್ನು ತೀರಿಸಲು ಹೊಸ ಸಾಲಗಳನ್ನು ಮಾಡಲಾಗುತ್ತದೆ. ಪ್ರಮುಖ ಕಾರ್ಯಕ್ರಮಗಳನ್ನು ಮುಂದೂಡುವುದು ಉತ್ತಮ. ವ್ಯವಹಾರದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಮನೆಯ ವಾತಾವರಣವು ಕಿರಿಕಿರಿಯುಂಟು ಮಾಡುತ್ತದೆ. ಹೆಚ್ಚುವರಿ ಜವಾಬ್ದಾರಿಗಳಿಂದ ಉದ್ಯೋಗಿಗಳಿಗೆ ವಿಶ್ರಾಂತಿ ಸಿಗುವುದಿಲ್ಲ.

** ಧನುಸ್ಸು ರಾಶಿ :
ಮನೆಯ ಹೊರಗೆ ಜವಾಬ್ದಾರಿಗಳು ಹೆಚ್ಚಾಗುತ್ತವೆ. ವ್ಯಾಪಾರದಲ್ಲಿ ಪಾಲುದಾರರೊಂದಿಗೆ ಸಮಸ್ಯೆಗಳಿರುತ್ತವೆ. ಬಂಧುಗಳೊಂದಿಗೆ ಅನಿರೀಕ್ಷಿತ ವಿವಾದಗಳು ಉಂಟಾಗುತ್ತವೆ. ಉದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚಾಗುತ್ತವೆ. ಸಣ್ಣ ಆರೋಗ್ಯ ಸಮಸ್ಯೆಗಳು ನೋವುಂಟು ಮಾಡುತ್ತವೆ. ಅಗತ್ಯಕ್ಕೆ ಕೈಯಲ್ಲಿ ಹಣ ಇರುವುದಿಲ್ಲ. ಪ್ರಯಾಣವನ್ನು ಮುಂದೂಡುವುದು ಉತ್ತಮ.

** ಮಕರ ರಾಶಿ :
ಕುಟುಂಬ ಸದಸ್ಯರಿಂದ ಆರ್ಥಿಕ ನೆರವು ದೊರೆಯುತ್ತದೆ. ಮನೆಯಲ್ಲಿ ವಿಚಿತ್ರ ಘಟನೆಗಳು ನಡೆಯುತ್ತವೆ. ಹೊಸ ಕಾರ್ಯಕ್ರಮಗಳನ್ನು ಆರಂಭಿಸಲಾಗುತ್ತದೆ. ಆಪ್ತ ಸ್ನೇಹಿತರಿಂದ ಅಪರೂಪದ ಆಹ್ವಾನಗಳು ಬರುತ್ತವೆ. ವೃತ್ತಿಪರ ವ್ಯವಹಾರದಲ್ಲಿ ಆರ್ಥಿಕ ಅನುಕೂಲತೆ ಉಂಟಾಗುತ್ತದೆ. ಉದ್ಯೋಗಿಗಳಿಗೆ ಉನ್ನತ ಹುದ್ದೆಗಳು ದೊರೆಯುತ್ತವೆ.

** ಕುಂಭ ರಾಶಿ :
ಒಳ್ಳೆಯ ಮಾತಿನಿಂದ ಎಲ್ಲರನ್ನು ಮೆಚ್ಚಿಸುತ್ತೀರಿ. ಉದ್ಯೋಗದಲ್ಲಿ ಅಧಿಕಾರಿಗಳ ಜೊತೆಗಿನ ಚರ್ಚೆ ಫಲ ನೀಡುತ್ತದೆ. ಸಮಾಜದ ಪ್ರಮುಖ ವ್ಯಕ್ತಿಗಳೊಂದಿಗೆ ಸಂಪರ್ಕವು ವಿಸ್ತಾರವಾಗುತ್ತದೆ. ಸಹೋದರರಿಂದ ಆರ್ಥಿಕ ಸಹಾಯ ದೊರೆಯುತ್ತದೆ. ವೃತ್ತಿಪರ ವ್ಯವಹಾರದಲ್ಲಿ ಹೆಚ್ಚು ಉತ್ಸಾಹದಿಂದ ಕೆಲಸ ಮಾಡಿ ಲಾಭ ಗಳಿಸುತ್ತೀರಿ. ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.

** ಮೀನ ರಾಶಿ :
ಸೋದರ ಸಂಬಂಧಿಗಳೊಂದಿಗೆ ಹಠಾತ್ ವಿವಾದಗಳು ಉಂಟಾಗುತ್ತದೆ. ದೂರ ಪ್ರಯಾಣದಲ್ಲಿ ವಾಹನ ತೊಂದರೆಗಳಿರುತ್ತವೆ. ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ವ್ಯಾಪಾರ ಉದ್ಯೋಗಗಳು ಮತ್ತಷ್ಟು ನಿಧಾನವಾಗುತ್ತವೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಸ್ವಲ್ಪ ನಿರಾಸೆಯಾಗುವುದು ಖಂಡಿತ. ಬಾಲ್ಯದ ಗೆಳೆಯರೊಂದಿಗೆ ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತೀರಿ.

Categories
ಮಂಗಳೂರು ರಾಜಕೀಯ

ಸೋಲಿನ ನೈತಿಕ ಹೊಣೆ ನಾನೇ ಹೊರುವೆ!

ಸೋಲಿನ ನೈತಿಕ ಹೊಣೆ ನಾನೇ ಹೊರುವೆ!
– ಮುಂದಿನ ದಿನಗಳಲ್ಲಿ ಮತ್ತಷ್ಟು ಪಕ್ಷ ಸಂಘಟನೆಗೆ ಶ್ರಮಿಸುವೆ
– ದಕ್ಷಿಣ ಕನ್ನಡ ಪರಾಜಿತ ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್
– ಚೌಟ ಅವರಿಗೆ ಅಭಿನಂದನೆ ಸಲ್ಲಿಸಿದ ಯುವ ನಾಯಕ

NAMMUR EXPRESS NEWS

ಮಂಗಳೂರು: ಕರಾವಳಿಯಲ್ಲಿ ಪ್ರತಿಕೂಲ ವಾತಾವರಣದ ನಡುವೆ ಪಕ್ಷ ಉತ್ತಮ ರೀತಿಯ ಸಾಧನೆ ಮಾಡಿರುವ ತೃಪ್ತಿ ತಂದಿದೆ. ಜತೆಗೆ ಟಿಕೆಟ್‌ ಘೋಷಣೆಯಾದ ಬಳಿಕ ಕೆಲವೇ ಕೆಲವು ದಿನಗಳಲ್ಲಿ ತಲುಪುವ ಮೂಲಕ ಜಿಲ್ಲೆಯ 6.15 ಮತದಾರರ ಮನಸ್ಸು ಗೆಲ್ಲಲು ಸಾಧ್ಯವಾಗಿದೆ ಎಂದು ಪರಾಜಿತ ದಕ್ಷಿಣ ಕನ್ನಡ ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್‌ ಹೇಳಿದ್ದಾರೆ.
ಚುನಾವಣಾ ಫಲಿತಾಂಶದ ಬಳಿಕ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪಕ್ಷ ಸಂಘಟನೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಮುಂದಿನ ಒಂದೂವರೆ ವರ್ಷದ ಅವಧಿಯಲ್ಲಿ ಬೂತ್‌ ಮಟ್ಟದಲ್ಲಿ ಸಂಗಘಿಸುವ ಕಾರ್ಯವನ್ನು ಮಾಡಲಾಗುವುದು ಎಂದರು.
ಇದೇವೇಳೆ ನೂತನ ಸಂಸದರಾಗಿ ಆಯ್ಕೆಯಾಗಿರುವ ಬ್ರಿಜೇಶ್‌ ಚೌಟ ಅವರನ್ನು ಅಭಿನಂದಿಸುವುದಾಗಿ ಹೇಳಿದರು.
ಜಿಲ್ಲೆಯಲ್ಲಿನ ಎಲ್ಲ ಸಮಗ್ರ ಅಭಿವೃದ್ಧಿ ಕಾರ್ಯಗಳು ಹಾಗೂ ಕೋಮು ಸೌಹಾರ್ದತೆಗೆ ಒತ್ತು ನೀಡುವ ಸಂಸದರನ್ನು ಎಲ್ಲ ರೀತಿಯಿಂದಲೂ ಬೆಂಬಲಿಸುವುದಾಗಿ ಹೇಳಿದರು.
ಈ ಚುನಾವಣೆಯಲ್ಲಿ ನಾನು ಸೋತಿರಬಹುದು. ಆದರೆ, ಕಾರ್ಯಕರ್ತರು ನೀಡುರವ ಬೆಂಬಲವನ್ನು ಎಂದಿಗೂ ಮರೆಯುವಂತಿಲ್ಲ. ನಿನ್ನೆ ರಾಷ್ಟ್ರೀಯ ನಾಯಕರು ಕೂಡ ಕರೆ ಮಾಡಿ ನನ್ನ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದು, ಯು ಫೈಟ್‌ ಲೈಕ್‌ ಎ ಲಯನ್‌ ಎಂದು ಮೆಚ್ಚುಗೆಯ ಮಾತುಗಳನ್ನು ಹೇಳಿದ್ದಾರೆ. ನಾಯಕರು ಹಾಗೂ ಕಾರ್ಯಕರ್ತರ ವಿಶ್ವಾಸವನ್ನು ಉಳಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಲಿದ್ದೇನೆ ಎಂದು ಪದ್ಮರಾಜ್‌ ನುಡಿದರು.
ಈ ಸೋಲಿನ ನೈತಿಕ ಹೊಣೆಯನ್ನು ನಾನೇ ಹೊರುತ್ತಿದ್ದೇನೆ. ಆದರೆ, ಈ ಸೋಲಿನಿಂದ ನಾನು ಸುಮ್ಮನಾಗುವುದಿಲ್ಲ. ಪಕ್ಷ ಸಂಘಟನೆಯನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಬಲಪಡಿಸುವುದಕ್ಕೆ ಶ್ರಮಿಸುವುದಾಗಿ ಭರವಸೆ ನೀಡಿದರು.
ಯಾವ ರೀತಿಯಲ್ಲಿ ಮನೆಯ ಪ್ರತಿ ಸದಸ್ಯನನ್ನು ಸಂಘಟನಾತ್ಮಕವಾಗಿ ಹೇಗೆ ತಲುಪಲು ಸಾಧ್ಯ ಎಂಬುದನ್ನು ಬಿಜೆಪಿ ಪಕ್ಷ ಸಂಘಟನೆಯಿಂದ ಕಲಿಯುವುದು ಬಹಳ ಇದೆ. ಒಳ್ಳೆಯ ಅಂಶಗಳನ್ನು ಅನುಸರಿಸುವುದರಲ್ಲಿ ತಪ್ಪಿಲ್ಲ ಎಂದರು.
ಎಸ್‌ಡಿಪಿಐಯವರು ಅಸ್ಪೃಶ್ಯರಲ್ಲ. ಈ ಹಿಂದೆ ಪಂಚಾಯತ್‌ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಅಧ್ಯಕ್ಷರಾಗಿರುವ ಉದಾಹರಣೆಗಳು ನಮ್ಮ ಕಣ್ಣಮುಂದೆಯೇ ಇದೆ ಎಂದು ಬಿಜೆಪಿಯವರ ಆರೋಪಕ್ಕೆ ತಿರುಗೇಟು ನೀಡಿದರು.

Categories
ಜಿಲ್ಲಾ ವಾರ್ತೆ ರಾಜಕೀಯ ರಾಜ್ಯ ಶಿವಮೊಗ್ಗ

ಜಾತ್ರೇಲಿ ಕುಣಿಯಲಿ: ಕುಮಾರ್ ಬಂಗಾರಪ್ಪ ವಿವಾದಿತ ಹೇಳಿಕೆ!

ಜಾತ್ರೇಲಿ ಕುಣಿಯಲಿ: ಕುಮಾರ್ ಬಂಗಾರಪ್ಪ ವಿವಾದಿತ ಹೇಳಿಕೆ!
– ಶಿವರಾಜ್ ಕುಮಾರ್ ನಮ್ಮೂರಿನ ಜಾತ್ರೆಯಲ್ಲಿ ಕುಣಿಯಲು ಅರ್ಜಿ ಹಾಕಲಿ: ಗೀತಾ ಸೋತ ಹಿನ್ನೆಲೆಯಲ್ಲಿ ಕುಮಾರ್ ಬಂಗಾರಪ್ಪ ಗೇಲಿ
– ಬಂಗಾರಪ್ಪನವರನ್ನು ಪ್ರಚಾರ ಸಾಮಗ್ರಿಯಾಗಿ ಬಳಸಿಕೊಂಡವರಿಗೆ ತಕ್ಕ ಶಾಸ್ತಿ

NAMMUR EXPRESS NEWS
ಶಿವಮೊಗ್ಗ: ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿರುದ್ಧ ಸ್ಪರ್ಧಿಸಿ ಸೋತ ಸಹೋದರಿ ಗೀತಾ ಶಿವರಾಜ್‌ಕುಮಾರ್‌ಗೆ ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಟಕ್ಕರ್ ಕೊಟ್ಟಿದ್ದಾರೆ. ಬಂಗಾರಪ್ಪ ಹಾಗೂ ರಾಜ್ ಕುಮಾರ್ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದೆ ಸೋಲಿಗೆ ಕಾರಣ. ನಟ ಶಿವರಾಜ್ ಕುಮಾರ್ ನಿರುದ್ಯೋಗಿ ಆಗಬೇಕಿಲ್ಲ, ನಮ್ಮ ಊರಿನ ಜಾತ್ರೆಯಲ್ಲಿ ಕುಣಿಯೋಕೆ ಅರ್ಜಿ ಹಾಕಲಿ ಎಂದು ಕುಮಾರ್ ಬಂಗಾರಪ್ಪ ಗೇಲಿ ಮಾಡಿದ್ದಾರೆ. ಶಿವಮೊಗ್ಗ ಲೋಕಸಭಾ ಚುನಾವಣೆ ಫಲಿತಾಂಶದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ನನ್ನ ತಂಗಿ ಸಿನಿಮಾ ಡಾನ್ ಆಗಿರುವುದರಿಂದ ಬೇಸರ ಪಡುವುದು ಬೇಕಿಲ್ಲ. ದೊಡ್ಮನೆ ವ್ಯವಹಾರ ಸಾಕಷ್ಟಿದೆ, ಅದು ಬೇರೆಯವರಿಗೆ ಅವಕಾಶ ಸಿಗಲ್ಲ. ಹೆದರಿಸುವ, ಬೆದರಿಸುವ, ಹುಷಾರ್ ಎನ್ನುವ ಮಾತುಗಳು ಏನಿದ್ದರೂ ತಮ್ಮ ಪಟಾಲಂ ಮುಂದೆ ಮಾತ್ರ ಇರಲಿ. ದಿಕ್ಕು ಗೆಟ್ಟು ದಿಕ್ಕಾ ಪಾಲಾಗಿ ಬೆಂಗಳೂರು ಸೇರಿದವರಿಗೆ ಇದು ಕೊನೆಯ ಎಚ್ಚರಿಕೆ. ನೀವು ಹಿಂತುಗಿರುಗಿ ಬರುವುದು ನಿಮ್ಮ ಕನಸಿನ ಮಾತು. ಹೋಗಿ ಬನ್ನಿ ಟಾಟಾ ಬೈ ಬೈ ಎಂದು ತಿರುಗೇಟು ನೀಡಿದ್ದಾರೆ.

– ಬಂಗಾರಪ್ಪನವರನ್ನು ಪ್ರಚಾರ ಸಾಮಗ್ರಿಯಾಗಿ ಬಳಸಿಕೊಂಡವರಿಗೆ ತಕ್ಕ ಶಾಸ್ತಿ

ಬಂಗಾರಪ್ಪನವರನ್ನು ಕೇವಲ ಪ್ರಚಾರ ಸಾಮಗ್ರಿಯನ್ನಾಗಿ ಬಳಸಿಕೊಂಡವರಿಗೆ ತಕ್ಕ ಶಾಸ್ತಿಯಾಗಿದೆ ಎಂದು ಗೀತಾ ಶಿವರಾಜ್‌ಕುಮಾರ್‌, ಬಾವ ಶಿವರಾಜ್‌ ಕುಮಾರ್‌ ಹಾಗೂ ಸಹೋದರ ಮಧು ಬಂಗಾರಪ್ಪ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಶಾಸಕ ಕುಮಾರ್‌ ಬಂಗಾರಪ್ಪ, ಕರ್ನಾಟಕ ಕಂಡ ಧೀಮಂತ ರಾಜಕಾರಣಿ, ಬಡವರ ಬಂಧು ಎಂಬ ಸಾರ್ಥಕ ಬಿರುದಾವಳಿಯನ್ನು ತಮ್ಮ ಹೆಸರಿನೊಡನೆ ನಡೆಸಿಕೊಂಡು ಬದುಕಿದವರು ಸಾರೆಕೊಪ್ಪ ಬಂಗಾರಪ್ಪ. ಹಿಂದುಳಿದ ವರ್ಗಗಳಿಗೆ ಆಶಾಕಿರಣವಾಗಿದ್ದ, ರೈತಬಂದುವೂ, ಗೇಣಿದಾರರ ಜೀವಜಲವೆನಿಸಿದ್ದ ಹೋರಾಟಗಾರ, ನಾಡು ನುಡಿ ಸಂಸ್ಕೃತಿಗಳ ರಕ್ಷಾ ದೀಕ್ಷೆಯನ್ನು ತೊಟ್ಟಿದ್ದ ವೀರಯೋಧನೆನಿಸಿದ್ದ ಕರ್ನಾಟಕದ ಈ ಮಾಜಿ ಮುಖ್ಯಮಂತ್ರಿ, ಲಿಂಗಾಯತ, ಬ್ರಾಹ್ಮಣ, ಒಕ್ಕಲಿಗರೆಲ್ಲರಲ್ಲಿಯೂ ಸಮ ಭಾವ, ಸಮಚಿತ್ತದಿಂದ ಬೆರೆತಿದ್ದವರು. ಇವರ ಆಡಳಿತ ವೈಖರಿಯು ಅನುಕರಣೀಯ ಮಾತ್ರವಲ್ಲದೆ ಆದರ್ಶರೂಪದ್ದಾಗಿತ್ತು ಎಂದು ಹೇಳಿದ್ದಾರೆ. ಇವರು ಜಾರಿಗೆ ತಂದಿದ್ದ ಪಂಚಮುಖಿ ಕಾರ್ಯಕ್ರಮಗಳಾದ ವಿಶ್ವ, ಸುಶ್ರತ, ಆರಾಧನ, ಆಶ್ರಯ, ಅಕ್ಷಯ ಮುಂತಾದವನ್ನು ಇಡೀ ರಾಜ್ಯ ನೆನೆಯುತ್ತಾ ಆರಾಧಿಸುತ್ತಿದೆ, ಬೇರೆ ರಾಜ್ಯಗಳೂ ಅನುಕರಿಸುತ್ತಿವೆ. ಇಂತಹ ಒಬ್ಬ ಧಿರೋದ್ಧಾತ ನಾಯಕನನ್ನು ನನ್ನ ತಮ್ಮ ಹಾಗೂ ತಂಗಿ ತಮ್ಮ ಸ್ವಾರ್ಥಸಾಧನೆಗಾಗಿ, ಕೇವಲ ಒಂದು ಲೋಕಸಭಾ ಕ್ಷೇತ್ರಕ್ಕೆ ಅಂದರೆ ಶಿವಮೊಗ್ಗ ಕ್ಷೇತ್ರಕ್ಕೆ ಸೀಮಿತಗೊಳಿಸಿದ್ದು ಇವರ ಸಂಕುಚಿತ ಸ್ವಭಾವದಿಂದ ಬಂಗಾರಪ್ಪನವರನ್ನು ಕೇವಲ ಪ್ರಚಾರ ಸಾಮಗ್ರಿಯನ್ನಾಗಿ ಬಳಸಿಕೊಂಡ ಇವರಿಗೆ ತಕ್ಕ ಶಾಸ್ತಿಯಾಯಿತು. ಈ ಮಹಾಪರಾಧಕ್ಕಾಗಿ ಜಿಲ್ಲೆಯ, ಕ್ಷೇತ್ರದ ಜನರ ಕ್ಷಮಾಪಣೆ ಕೇಳಿ ಹೋಗಿಬರಲಿ, ಟಾಟಾ! ಎಂದು ತಿಳಿಸಿದ್ದಾರೆ. ಕನ್ನಡದ ಕಣ್ಮಣಿ Dr. ರಾಜಕುಮಾರ್ ರವರ ಹೆಸರನ್ನು ದುರುಪಯೋಗ ಪಡಿಸಿಕೊಂಡಿದ್ದಲ್ಲದೆ ಅವರಿಗಿಲ್ಲದಿದ್ದ ಇಂಗಿತವನ್ನು ಇತ್ತೆಂದು ಪ್ರಚುರಪಡಿಸಿ ಲಾಭ ಮಾಡಿಕೊಳ್ಳಬಯಸಿದ ಇವರಿಗೆ ಮಾಡಿದ್ದುಣೋ ಮಹಾರಾಯ ಎಂಬಂತ ಸ್ಥಿತಿಯಾಗಿದೆ. ಉತ್ತಮ ಉದ್ದೇಶ ಇವರದ್ದಾಗಿದ್ದರೆ ಖಂಡಿತ ವಿಜಯಲಕ್ಷ್ಮಿ ಒಲಿಯುತ್ತಿದ್ದಳು, ಸ್ವಂತ ಸಹೋದರನ ಭವಿಷ್ಯಕ್ಕೆ ತೊಡರುಗಾಲು ಹಾಕಲೆಂದೇ ಬೆಂಗಳೂರಿನಿಂದ ಧಾವಿಸಿಬಂದು ತಿಳಿಯಾಗಿಸಬೇಕಿದ್ದ ವಾತಾವರಣವನ್ನು ಕಲುಷಿತಗೊಳಿಸಿ, ದಿಕ್ಕು ದೆಸೆ ಇಲ್ಲದಂತಾಗಿ ಹೋಗಿ ಗೂಡು ಸೇರಿಕೊಂಡಿದ್ದಾರೆ ಬೆಂಗಳೂರಿಗೆ, ಹಿಂತಿರುಗಿ ಬರುವುದು ಕನಸಿನ ಮಾತು. ಅವರ ಕ್ಷೇತ್ರ, ಸಿನಿಮಾ ಅದನ್ನು ನಿಭಾಯಿಸಿಕೊಂಡಿರುವುದು ಆರೋಗ್ಯಕರ ಎಂದು ಸಲಹೆ ನೀಡಿದ್ದಾರೆ.

– ಅವರ ಕ್ಷೇತ್ರ, ಸಿನಿಮಾ ಅದನ್ನು ನಿಭಾಯಿಸಿಕೊಂಡಿರುವುದು ಆರೋಗ್ಯಕರ!

“ಉತ್ತಮ ಉದ್ದೇಶ ಇವರದ್ದಾಗಿದ್ದರೆ ಖಂಡಿತ ವಿಜಯಲಕ್ಷ್ಮಿ ಒಲಿಯುತ್ತಿದ್ದಳು, ಸ್ವಂತ ಸಹೋದರನ ಭವಿಷ್ಯಕ್ಕೆ ತೊಡರುಗಾಲು ಹಾಕಲೆಂದೇ ಬೆಂಗಳೂರಿನಿಂದ ಧಾವಿಸಿಬಂದು ತಿಳಿಯಾಗಿಸಬೇಕಿದ್ದ ವಾತಾವರಣವನ್ನು ಕಲುಷಿತಗೊಳಿಸಿ, ದಿಕ್ಕು ದೆಸೆ ಇಲ್ಲದಂತಾಗಿ ಹೋಗಿ ಗೂಡು ಸೇರಿಕೊಂಡಿದ್ದಾರೆ ಬೆಂಗಳೂರಿಗೆ, ಹಿಂತಿರುಗಿ ಬರುವುದು ಕನಸಿನ ಮಾತು” ಎಂದಿದ್ದಾರೆ. ಅವರ ಕ್ಷೇತ್ರ, ಸಿನಿಮಾ ಅದನ್ನು ನಿಭಾಯಿಸಿಕೊಂಡಿರುವುದು ಆರೋಗ್ಯಕರ. ಈ ವಿಜಯೋತ್ಸವದ ಕೊಡುಗೆ ಜಿಲ್ಲೆಯ ಹಾಗೂ ಲೋಕ ಸಭಾ ಕ್ಷೇತ್ರದ ಮತದಾರರಿಂದ ಲಭಿಸಿದ್ದು, ಅವರಿಗೆ ನಾವು ಚಿರಋಣಿಗಳಾಗಿರುತ್ತೇವೆ. ಅವರ ಆಶಯಗಳನ್ನು ಸಾಕಾರಗೊಳಿಸುತ್ತೇವೆ. ಅವರ ನಂಬಿಕೆಗೆ ಚ್ಯುತಿಬಾರದಂತೆ ನಡೆದುಕೊಳ್ಳುತ್ತೇವೆ. ನಮ್ಮ ಪಕ್ಷದ ಕಾರ್ಯಕರ್ತರು, ಹಿರಿಯ, ಕಿರಿಯ ಪದಾಧಿಕಾರಿಗಳು, ಸಂಘಟನೆಯಲ್ಲಿ ತೊಡಗಿಸಿಕೊಂಡ ಬ್ರಿಗೇಡ್/ಶಿಸ್ತಿನ ಸಿಪಾಯಿಗಳು ಹಗಲಿರುಲೆನ್ನದೆ ದುಡಿದು ಬಿವೈ ರಾಘವೇಂದ್ರರಿಗೆ ಅತ್ಯಧಿಕ ಬಹುಮತದಿಂದ ವಿಜಯಶಾಲಿಯನ್ನಾಗಿಸಿದ್ದಾರೆ. ಅವರೆಲ್ಲರಿಗೂ ನನ್ನ ನಮನಗಳು. ರಾಜ್ಯಮಟ್ಟದಲ್ಲಿ, ರಾಷ್ಟ್ರ ಮಟ್ಟದಲ್ಲಿ ಮಾರ್ಗದರ್ಶನ ನೀಡಿದ ನಾಯಕರೆಲ್ಲರಿಗೂ ಧನ್ಯವಾದಗಳು” ಎಂದು ನೂತನ ಸಂಸದರಿಗೆ ಶುಭ ಹಾರೈಸಿದ್ದಾರೆ.

– ಶಿವರಾಜಕುಮಾರ್ ನಿರುದ್ಯೋಗಿಯಾಗಬೇಕಿಲ್ಲ, ಜಾತ್ರೆಗಳಲ್ಲಿ ಕುಣಿಯಲಿ!

ಮುಂದುವರಿದು, “War is over but battle remains ಅನ್ನುವ ಹಾಗೆ ನಮ್ಮ ನಿಮ್ಮೆಲ್ಲರ ಗುರಿ ಜಿಲ್ಲಾ, ತಾಲೂಕು ಪಂಚಾಯತ್ ಚುನಾವಣೆಗಳು, ಇದೇ ಓಟ ನಿರಂತರವಾಗಿ ನಡೆಯಬೇಕು, ಗೆಲುವನ್ನು ನಮ್ಮದಾಗಿಸಿಕೊಳ್ಳಬೇಕು ಪಣತೋಡೋಣ, ಗುರಿ ಮುಟ್ಟೋಣ. ಜೊತೆ ಜೊತೆಗೆ ಅಭಿವೃದ್ಧಿ ಕಾರ್ಯಗಳು ಶರವೇಗದಲ್ಲಿ ಚಾಲನೆಯಗಬೇಕು. ಪಶ್ಚಿಮ ಘಟ್ಟದ ಈ ತಪ್ಪಲು ಸರ್ವ ಜನಾಂಗದ ಶಾಂತಿಯ ತೋಟವಾಗಿ ಕಂಗೊಳಿಸಬೇಕು” ಎಂದಿದ್ದಾರೆ. ಇನ್ನು ನನ್ನ ತಮ್ಮ ಮಧು ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು, ಇಲ್ಲ ಸಿಎಂ ಅವನನ್ನು ಸಂಪುಟ ದಿಂದ ವಜಾ ಮಾಡಬೇಕು. ಕನ್ನಡಕ್ಕೆ, ಕನ್ನಡನಾಡಿಗೆ ಅವಮಾನಪಡಿಸಿದಾತ, ಟ್ರೊಲ್ ಮಾಡಿದವರಿಗೆ, ಮಾಧ್ಯಮದವರಿಗೆ ಶಾಪ ಹಾಕಿ ತಾನೇ ಶಾಪಗ್ರಸ್ತನಾದ. ಅವನ ಭಾವ, ನನ್ನ ತಂಗಿಯ ಗಂಡ ಡಾ. ಶಿವರಾಜಕುಮಾರ್ ನಿರುದ್ಯೋಗಿಯಾಗಬೇಕಿಲ್ಲ, ನಮ್ಮೂರ ಜಾತ್ರೆಗಳಲ್ಲಿ ಕುಣಿಯುವ ಕೆಲಸಕ್ಕೆ ಈಗಲೇ ಅರ್ಜಿ ಹಾಕಿಕೊಳ್ಳಬಹುದು” ಎಂದಿದ್ದಾರೆ. “ನನ್ನ ತಂಗಿ ಸಿನಿಮಾ ಡಾನ್ ಆಗಿರುವುದರಿಂದ ಬೇಸರಕ್ಕೆ ಕಾರಣವಿಲ್ಲ ದೊಡ್ಡಮನೆಯ ವ್ಯವಹಾರ ಸಾಕಷ್ಟಿರುತ್ತದೆ, ಬೇರೆಯವರಿಗೆ ಅವಕಾಶ ಸಿಗಲಾರದು. ಹೆದರಿಸುವ, ಬೆದರಿಸುವ, ಹುಷಾರ್ ಅನ್ನುವ ಮಾತುಗಳೇನಿದ್ದರೂ ಗಂಟಲೋಳಗೇ, ನಾಲ್ಕು ಗೋಡೆಗಳೊಳಗೆ, ತಮ್ಮ ಪಟಾಲಂ ಮುಂದೆ ಮಾತ್ರ ಚಾಲ್ತಿಯಲ್ಲಿರಬೇಕು. ದಿಕ್ಕು ಗೆಟ್ಟು ದಿಕ್ಕಾಪಾಲಾಗಿ ಹೋಗಿ ಬೆಂಗಳೂರು ಸೇರಿಕೊಂಡವರಿಗೆ ಕೊನೆಯ ಎಚ್ಚರಿಕೆ, ನೀವು ಹಿಂತಿರುಗಿ ಬರುವುದು ಕನಸಿನ ಮಾತು. ಜೈಹಿಂದ್, ಜೈ ಕರ್ನಾಟಕ!” ಎಂದು ಉದ್ದದ ಪೋಸ್ಟ್ ಹಂಚಿಕೊಂಡಿದ್ದಾರೆ

Categories
inspiration ಜಿಲ್ಲಾ ವಾರ್ತೆ ಮಂಗಳೂರು ಯಶಸ್ಸಿನ ಕಥೆಗಳು ರಾಜ್ಯ

ಭಾರತದಲ್ಲೇ ಮಂಗಳೂರಿನ ಅರ್ಜುನ್ ಸಾಧನೆ!

ಭಾರತದಲ್ಲೇ ಮಂಗಳೂರಿನ ಅರ್ಜುನ್ ಸಾಧನೆ!
– ನೀಟ್‌ ಪರೀಕ್ಷೆಯಲ್ಲಿ ಮಂಗಳೂರಿನ ಅರ್ಜುನ್‌ ದೇಶಕ್ಕೆ ಮೊದಲ ರ‍್ಯಾಂಕ್
– ಮಂಗಳೂರಿನ ಎಕ್ಸ್‌ಪರ್ಟ್‌ ಕಾಲೇಜಿನ ಅರ್ಜುನ್‌ ಕಿಶೋರ್‌ 720ರಲ್ಲಿ 720 ಅಂಕ ಸಾಧನೆ

NAMMUR EXPRESS NEWS
ಮಂಗಳೂರು: ನೀಟ್‌ ಫಲಿತಾಂಶ ಹೊರಬಿದ್ದಿದ್ದು ಮಂಗಳೂರಿನ ಎಕ್ಸ್‌ಪರ್ಟ್‌ ಕಾಲೇಜಿನ ಅರ್ಜುನ್‌ ಕಿಶೋರ್‌ 720ರಲ್ಲಿ 720 ಅಂಕಗಳೊಂದಿಗೆ ದೇಶ ಹಾಗೂ ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆಯುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ.
ಮೈಸೂರು ಮೂಲದ ಅರ್ಜುನ್‌ ಮಂಗಳೂರಿನ ವಳಚ್ಚಿಲ್‌ನಲ್ಲಿರುವ ಎಕ್ಸ್‌ಪರ್ಟ್‌ ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ. ಇನ್ನು ಅರ್ಜುನ್‌ ಅವರ ಹೆತ್ತವರು ಕೂಡ ವೈದ್ಯರಾಗಿದ್ದಾರೆ.

ನಿರಂತರ ಸಾಧನೆಯ ಫಲ

ನಿರಂತರ ಪ್ರಯತ್ನ ಹಾಗೂ ಕಠಿಣ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ. ಎಕ್ಸ್‌ಪರ್ಟ್‌ ಕಾಲೇಜಿನ ಬೋಧಕ ವೃಂದ, ಪೋಷಕರಿಂದ ಪ್ರೋತ್ಸಾಹ ಸಿಕ್ಕಿದೆ. ಮುಂದೆ ಸರ್ಜನ್‌ ಆಗುವ ಆಸೆ ಹೊಂದಿರುವುದಾಗಿ ತಮ್ಮ ಫಲಿತಾಂಶದಲ್ಲಿನ ಸಾಧನೆ ಬಗ್ಗೆ ಅರ್ಜುನ್‌ ಹೇಳಿದ್ದಾರೆ.

ರಾಜ್ಯದ ಮೂವರು ವಿದ್ಯಾರ್ಥಿಗಳ ಸಾಧನೆ!

ಅರ್ಜುನ್‌ ಕಿಶೋರ್‌ ಸೇರಿದಂತೆ ರಾಜ್ಯದ ಮೂವರು ನೀಟ್‌ನಲ್ಲಿ ದೇಶಕ್ಕೆ ಅಗ್ರ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಬೆಂಗಳೂರಿನ ವಿ. ಕಲ್ಯಾಣ್‌, ಶ್ರೇಯಸ್‌ ಜೋಸೆಫ್‌ ಈ ಸಾಧನೆ ಮಾಡಿರುವ ಕರ್ನಾಟಕದ ಮತ್ತಿಬ್ಬರು ವಿದ್ಯಾರ್ಥಿಗಳು. ದೇಶದಲ್ಲಿ 14 ವಿದ್ಯಾರ್ಥಿನಿಯರ ಸಹಿತ ಒಟ್ಟು 67 ವಿದ್ಯಾರ್ಥಿಗಳು ಮೊದಲ ರ‍್ಯಾಂಕ್ ಹಂಚಿಕೊಂಡಿದ್ದಾರೆ.

ಕರಾವಳಿ ಕಾಲೇಜುಗಳ ಸಾಧನೆ

ಕರಾವಳಿಯ ಎಕ್ಸ್ಪರ್ಟ್, ಕಾರ್ಕಳದ ಕ್ರಿಯೇಟಿವ್, ಮೂಡುಬಿದಿರೆಯ ಆಳ್ವಾಸ್, ವೈಬ್ರ್ಯಾಂಟ್, ಗುರುವಾಯನಕೆರೆ ಎಕ್ಸಲ್, ಮೂಡುಬಿದಿರೆ ಎಕ್ಸಲೆಂಟ್ ಸೇರಿ ಕರಾವಳಿಯ ಹತ್ತಾರು ಕಾಲೇಜುಗಳ ವಿದ್ಯಾರ್ಥಿಗಳು ನೀಟ್ ಹಾಗೂ ಸಿಇಟಿಯಲ್ಲಿ ಸಾಧನೆ ಮಾಡಿದ್ದಾರೆ

Categories
inspiration ಜಿಲ್ಲಾ ವಾರ್ತೆ ಪ್ರತಿಭೆಗಳು ಮಂಗಳೂರು ಮಲ್ನಾಡ್ ಯಶಸ್ಸಿನ ಕಥೆಗಳು ರಾಜ್ಯ

ಎಕ್ಸೆಲ್ ನೀಟ್ ಟಾಪರ್ ಪ್ರಜ್ವಲ್..!

ಎಕ್ಸೆಲ್ ನೀಟ್ ಟಾಪರ್ ಪ್ರಜ್ವಲ್..!
– 720 ಅಂಕಗಳ ಪೈಕಿ 710 ಪಡೆದ ಸಾಧಕ ವಿದ್ಯಾರ್ಥಿ
– 10 ಲಕ್ಷ ರೂಪಾಯಿ ಕ್ಯಾಶ್ ಪ್ರೈಜ್ ಜೊತೆಗೆ ಗೌರವಾರ್ಪಣೆ

NAMMUR EXPRESS NEWS
ಬೆಳ್ತಂಗಡಿ: ರಾಷ್ಟ್ರೀಯ ವೈದ್ಯಕೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಾದ ನೀಟ್ ನಲ್ಲಿ 720 ಅಂಕಗಳ ಪೈಕಿ 710ಅಂಕ ಪಡೆದ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾದ ಪ್ರಜ್ವಲ್ ಎಚ್.ಎಂ ಗೆ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು 10 ಲಕ್ಷ ರೂಪಾಯಿ ಕ್ಯಾಶ್ ಪ್ರೈಜ್ ನ ಜೊತೆಗೆ ಗೌರವಾರ್ಪಣೆ ಸಲ್ಲಿಸಿದರು. ಎಕ್ಸೆಲ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಜ್ವಲ್ ಎಚ್.ಎಂ, ಹೆತ್ತವರಾದ ಮರಿಸ್ವಾಮಿ ಎಚ್.ಎಂ., ಸೌಮ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್, ಕಾರ್ಯದರ್ಶಿ ಅಭಿರಾಮ್, ಪ್ರಾಂಶುಪಾಲ ಡಾ.ನವೀನ್ ಕುಮಾರ್ ಎಂ, ಆಡಳಿತ ಮಂಡಳಿಯ ಸಹನಾ ಜೈನ್, ಆಡಳಿತಾಧಿಕಾರಿ ಕೀರ್ತಿನಿಧಿ, ಶಾಂತಿರಾಜ್ ಜೈನ್, ಪ್ರಾಧ್ಯಾಪಕರಾದ ಶ್ರೀನಿಧಿ ರಾಜ್, ನಿಶಾ ಪೂಜಾರಿ, ವಿಲ್ಸನ್ ತಳ್ತೊಟ್ಟಿ, ಕೇಶವ್ ರಾವ್, ಡಾ.ಸತ್ಯನಾರಾಯಣ್ ಭಟ್, ಈಶ್ವರ್ ಶರ್ಮಾ, ಜೈಸ ಆಂಟನಿ, ಚಿಗುರು ಪ್ರಕಾಶ್, ಗ್ರಿಷಿನ್ ಡಿಸೋಜ, ಡಾ. ಆಸ್ಟಿನ್ ಡಿಸೋಜ, ಸಾರ್ವಜನಿಕ ಸಂಪರ್ಕಾಧಿಕಾರಿ ರಿಚರ್ಡ್ ಜೀವನ್ ಮೊರಾಸ್ ಮತ್ತಿತರ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮೊದಲಾದವರು ಉಪಸ್ಥಿತರಿದ್ದರು

 

 

 

Categories
ಮಲ್ನಾಡ್ ರಾಜಕೀಯ ರಾಜ್ಯ ರಾಷ್ಟ್ರೀಯ ವಾರ್ತೆ

ಹಿಂದೂ ಹುಲಿ ಈಶ್ವರಪ್ಪಗೆ ಠೇವಣಿ ಲಾಸ್!

ಹಿಂದೂ ಹುಲಿ ಈಶ್ವರಪ್ಪಗೆ ಠೇವಣಿ ಲಾಸ್!
– ಗಳಿಸಿದ್ದು ಕೇವಲ 30,050 ಮತಗಳು: ಎಲ್ಲೆಲ್ಲಿ ಎಷ್ಟು ಮತ?
– ಮುಂದಿನ ರಾಜಕೀಯ ನಿಲುವು ಏನು?

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಠೇವಣಿ ಕಳೆದುಕೊಂಡಿದ್ದಾರೆ. ಮೇ 7 ರಂದು ನಡೆದ ಚುನಾವಣೆಯಲ್ಲಿ ಚಲಾವಣೆಯಾದ 13.7 ಲಕ್ಷ ಮತಗಳಲ್ಲಿ ಅವರು 30,050 ಮತಗಳನ್ನು (2.18%) ಪಡೆದರು. ಅವರು ಪಡೆದ ಮತಗಳು ಒಟ್ಟು ಚಲಾವಣೆಯಾದ ಮತಗಳ ಆರನೇ ಒಂದು ಭಾಗಕ್ಕಿಂತ ಕಡಿಮೆಯಿರುವುದರಿಂದ, ಅವರು ಆ ಸಮಯದಲ್ಲಿ ಪಾವತಿಸಿದ ಠೇವಣಿ ಮೊತ್ತವನ್ನು ಕಳೆದುಕೊಳ್ಳುತ್ತಾರೆ.
75ರ ಹರೆಯದ ಶ್ರೀ ಈಶ್ವರಪ್ಪ ಅವರು ಕರ್ನಾಟಕದಲ್ಲಿ ಬಿಜೆಪಿ ಆರಂಭದ ದಿನಗಳಿಂದಲೂ ಜೊತೆಗಿರುವ ನಾಯಕರಲ್ಲಿ ಒಬ್ಬರು. ಪಕ್ಷದ ನಾಯಕತ್ವದ ಸೂಚನೆಗಳನ್ನು ಅನುಸರಿಸಿ ಅವರು ಮೇ 2023 ರಲ್ಲಿ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಚುನಾವಣಾ ರಾಜಕೀಯಕ್ಕೆ ರಾಜೀನಾಮೆ ನೀಡಿದರು.

ಬಂಡಾಯ ಸಾರಿದ್ದು ಏಕೆ..?

ಹಾವೇರಿ ಸಂಸದೀಯ ಸ್ಥಾನಕ್ಕೆ ತಮ್ಮ ಪುತ್ರ ಕೆ.ಇ.ಕಾಂತೇಶ್ ಅವರನ್ನು ಪಕ್ಷ ನಾಮನಿರ್ದೇಶನ ಮಾಡಲಿದೆ ಎಂಬ ನಿರೀಕ್ಷೆಯಲ್ಲಿದ್ದರು. ಟಿಕೆಟ್ ನಿರಾಕರಿಸಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರೇ ಆರೋಪ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಶ್ರೀ ಯಡಿಯೂರಪ್ಪ ಅವರ ಪುತ್ರ ಬಿವೈ ರಾಘವೇಂದ್ರ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅವರು ಪಕ್ಷದ ವಿರುದ್ಧ ಬಂಡಾಯವೆದ್ದಿದ್ದರಿಂದ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶ್ರೀ ಈಶ್ವರಪ್ಪ ಅವರನ್ನು ದೆಹಲಿಯಲ್ಲಿ ಭೇಟಿಯಾಗಲು ಕರೆದರು. ಆದರೆ, ದೆಹಲಿ ತಲುಪುತ್ತಿದ್ದಂತೆ ಕೇಂದ್ರ ಸಚಿವರು ಸಭೆಯನ್ನು ರದ್ದುಗೊಳಿಸಿದರು. ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಬಳಸಿಕೊಂಡರು. ಆದರೆ, ಚುನಾವಣೆಯಲ್ಲಿ ಯಾವುದೇ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ.

ಈಶ್ವರಪ್ಪ ಎಲ್ಲೆಲ್ಲಿ ಎಷ್ಟು ಮತ ಪಡೆದರು?

ಶಿವಮೊಗ್ಗ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಈಶ್ವರಪ್ಪ ಕ್ಷೇತ್ರದಲ್ಲಿ 12,154 ಮತಗಳನ್ನು ಪಡೆದಿದ್ದರು. ಇತರೆ ಕ್ಷೇತ್ರಗಳಲ್ಲಿ ಅವರು ಪಡೆದ ಮತಗಳೆಂದರೆ – ಶಿವಮೊಗ್ಗ ಗ್ರಾಮಾಂತರ – 5,555, ಭದ್ರಾವತಿ – 3,267, ತೀರ್ಥಹಳ್ಳಿ – 2,529, ಶಿಕಾರಿಪುರ – 1,969, ಸೊರಬ – 415, ಸಾಗರ 778, ಬೈಂದೂರು – 3,292, ಅಂಚೆ ಮತಗಳ ಜೊತೆಗೆ 91

Categories
ರಾಜಕೀಯ ರಾಷ್ಟ್ರೀಯ ವಾರ್ತೆ

ಕುತೂಹಲ ಘಟ್ಟಕ್ಕೆ ಭಾರತ ರಾಜಕೀಯ!

ಕುತೂಹಲ ಘಟ್ಟಕ್ಕೆ ಭಾರತ ರಾಜಕೀಯ!
– ಮೋದಿ ರಾಜೀನಾಮೆ ಅಂಗಿಕಾರ
– ಕಿಂಗ್ ಮೇಕರ್ ಚಂದ್ರಬಾಬು ಎನ್. ಡಿ. ಎಗೆ ಸಾಥ್!
– ಹೊಸ ಸರ್ಕಾರದಲ್ಲಿ ಸ್ಪೀಕರ್ ಸ್ಥಾನಕ್ಕೆ ಚಂದ್ರಬಾಬು ನಾಯ್ಡು ಬೇಡಿಕೆ
– ಬಿಜೆಪಿಗೆ ಬ್ರೇಕ್ ಹಾಕಿದ ಕಾಂಗ್ರೆಸ್ ಪ್ಲಾನ್ ಏನು..?
– ಪ್ರಾದೇಶಿಕ ಪಕ್ಷಗಳು ಈಗ ದೇಶದಲ್ಲಿ ಕಿಂಗ್!
– ಎಲ್ಲಾ ಪಕ್ಷಗಳಿಂದಲೂ ಸಚಿವಗಿರಿ ಡಿಮ್ಯಾಂಡ್!

NAMMUR EXPRESS NEWS
ದೇಶದಲ್ಲಿ ರಾಜಕಾರಣ ಕ್ಲೈಮಾಕ್ಸ್ ಹಂತಕ್ಕೆ ತಲುಪಿದೆ. ಇಂದು ಸಂಜೆ ಎನ್ ಡಿ ಎ ಸಭೆ ನಡೆಸಲಿದೆ. ಇಂಡಿಯಾ ಕೂಡ ಸಭೆ ಕರೆದಿದೆ. ಎಲ್ಲಾ ಪಕ್ಷದ ವರಿಷ್ಟರು ಈಗ ದೆಹಲಿ ಹಾರುತ್ತಿದ್ದಾರೆ.

ಪ್ರಸ್ತುತ ರಾಜಕಾರಣದಲ್ಲಿ ಕಿಂಗ್ ಮೇಕರ್, ಟಿಡಿಪಿ ಮುಖ್ಯಸ್ಥ ಎನ್‌ ಚಂದ್ರಬಾಬು ನಾಯ್ಡು ಅವರು ಬಿಜೆಪಿ ನೇತೃತ್ವದ ಎನ್‌ಡಿಎಗೆ ತಮ್ಮ ಬೆಂಬಲವನ್ನು ಪುನರುಚ್ಛರಿಸಿದ್ದಾರೆ ಹಾಗೂ ಕೇಂದ್ರದಲ್ಲಿ ಹೊಸ ಸರ್ಕಾರ ರಚಿಸಲು ತಮ್ಮ ಪಕ್ಷ ಬಿಜೆಪಿಯನ್ನು ಬೆಂಬಲಿಸಲಿದೆ ಎಂದು ಹೇಳಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಸಭೆಯಲ್ಲಿ ಭಾಗಿಯಾಗಲಿದ್ದೇನೆ ಎಂದು ಚಂದ್ರಬಾಬು ನಾಯ್ಡು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಹೊಸ ಸರ್ಕಾರದಲ್ಲಿ ಸ್ಪೀಕರ್ ಸ್ಥಾನಕ್ಕೆ ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಬೇಡಿಕೆ ಇರಿಸಿದ್ದಾರೆ. ಲೋಕಸಭೆಯಲ್ಲಿ ಟಿಡಿಪಿ ಪಕ್ಷದ‌ ಸಂಸದರನ್ನ ಸ್ಪೀಕರ್ ಮಾಡಬೇಕು. ಸಂಪುಟದಲ್ಲಿ ಟಿಡಿಪಿಗೆ ಒಂದು ಅಥವಾ ಎರಡು ಸ್ಥಾನ ನೀಡಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ. ಕೇಂದ್ರದಲ್ಲಿ ಅಟಲ್ ಸರ್ಕಾರ ಇದ್ದಾಗ ಟಿಡಿಪಿ ಸಂಸದರಾಗಿದ್ದ ಜಿ ಎಂ ಬಾಲಯೋಗಿ ಸ್ಪೀಕರ್ ಆಗಿದ್ದರು ಎಂದು ಚಂದ್ರ ಬಾಬು ನಾಯ್ಡು ಹೇಳಿಕೆ ನೀಡಿದ್ದಾರೆ.

ಮೈತ್ರಿ ಪಕ್ಷಗಳಿಂದ ಬೆಂಬಲ: ಕೊನೆ ಗಳಿಗೆ ಮ್ಯಾಜಿಕ್!?

ಬಿಜೆಪಿ ನೇತೃತ್ವದ ಎನ್‌ಡಿಎ ಬಹುಮತ ಪಡೆದಿರುವುದರಿಂದ 3ನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಮಂತ್ರಿ ಆಗಲಿದ್ದಾರೆ ಎಂದು ವರದಿಯಾಗಿವೆ. ಇತ್ತ ಕಾಂಗ್ರೆಸ್ ಕೂಡ ಅಧಿಕಾರ ರಚನೆಗೆ ಪ್ರಯತ್ನ ಶುರು ಮಾಡಿದೆ. ಇಂದು ಎನ್‌ಡಿಎ ಮತ್ತು ಇಂಡಿ ಒಕ್ಕೂಟ ಮಹತ್ವದ ಸಭೆಯನ್ನು ನಡೆಸಲಿವೆ.

ಒಟ್ಟು 543 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 294 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಸರ್ಕಾರ ರಚನೆಗೆ ಬೇಕಿರುವ 272 ಬಹುಮತದ ಗುರಿಗಿಂತ 22 ಸ್ಥಾನಗಳಲ್ಲಿ ಮುಂದಿದೆ. ಇತ್ತ ಇಂಡಿ ಒಕ್ಕೂಟ 234 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದು, ಬಹುಮತದ ಗುರಿಗಿಂತ 38 ಸ್ಥಾನಗಳು ಕಡಿಮೆ ಇದೆ. ಇದೀಗ ಸರ್ಕಾರ ರಚನೆಯಲ್ಲಿ ಆಂಧ್ರ ಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ತೆಲಗು ದೇಶಂ ಪಾರ್ಟಿ (ಟಿಡಿಪಿ) ಮತ್ತು ಬಿಹಾರದ ಹಾಲಿ ಸಿಎಂ ನಿತೀಶ್ ಕುಮಾ‌ರ್ ಅವರ ಜೆಡಿಯು ಪಕ್ಷಗಳು ಪ್ರಮುಖ ಪಾತ್ರ ವಹಿಸುತ್ತವೆ. ಇನ್ನು ಈ ಎರಡು ಪಕ್ಷಗಳು ಬಿಜೆಪಿ ಜತೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿದ್ದವು. ಹೀಗಾಗಿ ಟಿಡಿಪಿ ಮತ್ತು ಜೆಡಿಯು ಎನ್‌ಡಿಎ ಮೈತ್ರಿಕೂಟದ ಭಾಗವಾಗಿವೆ. ಇಂಡಿ ಒಕ್ಕೂಟ ಸರ್ಕಾರ ರಚನೆ ಮಾಡಬೇಕಾದರೆ ಟಿಡಿಪಿ ಮತ್ತು ಜೆಡಿಯು ಬೆಂಬಲದ ಅವಶ್ಯಕತೆ ಇದೆ. ಈಗಾಗಲೇ ಉಭಯ ಪಕ್ಷದ ಪ್ರಮುಖ ನಾಯಕರನ್ನು ಸಂಪರ್ಕಿಸಲು ಕಾಂಗ್ರೆಸ್ ಯತ್ನಿಸಿದೆ. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹಾಗೂ ನಿತೇಶ್ ಕುಮಾರ್ ಇಬ್ಬರು ಒಂದೇ ವಿಮಾನದಲ್ಲಿ ದೆಹಲಿಗೆ ತೆರಳಿರುವುದು ತೀವ್ರ ಕುತೂಹಲ ಮೂಡಿಸಿದೆ.

ಬಿಜೆಪಿಗೆ ಬ್ರೇಕ್ ಹಾಕಿದ ಕಾಂಗ್ರೆಸ್

ಬಿಜೆಪಿ ನಾಗಾಲೋಟಕ್ಕೆ ಬ್ರೇಕ್ ಹಾಕುವಲ್ಲಿ ಕಾಂಗ್ರೆಸ್ ಜತೆಗೆ ಕೆಲವು ಪ್ರಾದೇಶಿಕ ಪಕ್ಷಗಳೂ ಯಶಸ್ವಿಯಾಗಿವೆ. ಕಾಂಗ್ರೆಸ್ 2014 ಹಾಗೂ 2019 ರಲ್ಲಿ ಹೀನಾಯ ಸೋಲು ಅನುಭವಿಸಿತ್ತು. ಈ ಸಲ ಫೀನಿಕ್ಸ್ ಹಕ್ಕಿಯಂತೆ ಮೇಲೆದ್ದಿದೆ. ಒಟ್ಟಾರ ಶೇ.2.33ರಷ್ಟು ಮತ ಹೆಚ್ಚಳ ಮಾಡಿಕೊಂಡಿರುವ ಕಾಂಗ್ರೆಸ್ ಸಂಖ್ಯಾಬಲವನ್ನು 52 ರಿಂದ 998 ಹೆಚ್ಚಿಸಿಕೊಂಡಿದೆ. ಉತ್ತರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣದಲ್ಲಿ ಸಂಖ್ಯಾಬಲ ಹೆಚ್ಚಿಸಿಕೊಂಡಿದೆ. ಕೇರಳ, ತಮಿಳುನಾಡಿನಲ್ಲಿ ಕಳೆದ ಬಾರಿ ಗೆದ್ದಷ್ಟೇ ಸ್ಥಾನ ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ಶೇ.1ರಷ್ಟು ಮತ ಪ್ರಮಾಣ ಕಳೆದುಕೊಂಡಿರುವ ಬಿಜೆಪಿ 64 ಸ್ಥಾನ ಕಳೆದುಕೊಂಡಿದೆ. ಕಾಂಗ್ರೆಸ್ ಮುಕ್ತ ಭಾರತದ ಬಿಜೆಪಿ ಮಾತನ್ನು ಮತದಾರರು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ.

ಕುಗ್ಗಿದ್ದ ಪ್ರಾದೇಶಿಕ ಪಕ್ಷಗಳೇ ಕಿಂಗ್ ಮೇಕರ್ಸ್!

2019ರ ಚುನಾವಣೆಯಲ್ಲಿ ಕುಗ್ಗಿದ್ದ ಪ್ರಾದೇಶಿಕ ಪಕ್ಷಗಳ ಬಲ ಸಹ ಈ ಸಲ ಹಿಗ್ಗಿದೆ. ಮುಖ್ಯವಾಗಿ ಉತ್ತರ, ಪೂರ್ವ, ಪಶ್ಚಿಮ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳು ಬಿಜೆಪಿಗೆ ಪೈಪೋಟಿ ನೀಡಿವೆ. ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ 5 ಸ್ಥಾನಗಳಿಂದ 38 ಸ್ಥಾನಕ್ಕೆ ಜಿಗಿದಿದೆ. ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿದ್ದ ಅಖಿಲೇಶ್ ಯಾದವ್ ಅವರು ಯಾದವ- ಮುಸ್ಲಿಂ ಮತಗಳನ್ನು ಕ್ರೋಡೀಕರಿಸಿ ಬಿಜೆಪಿಗೆ ಸೋಲುಣಿಸುವಲ್ಲಿ ಸಫಲರಾಗಿದ್ದಾರೆ. ಇನ್ನು ಮಹಾರಾಷ್ಟ್ರದಲ್ಲಿ ಇಬ್ಬಾಗಗೊಂಡಿದ್ದ ಶಿವಸೇನೆ 9 (ಉದ್ದವ್ ಬಣ), ಎನ್‌ಸಿಪಿ 7 (ಶರದ್ ಬಣ) ಬಣಗಳು ಚುನಾವಣೆಯಲ್ಲಿ ಗೆದ್ದು ಬೀಗಿವೆ. ಬಿಜೆಪಿ ನೇತೃತ್ತದ ‘ಮಹಾಯುತಿ’ ಮೈತ್ರಿಯನ್ನು ಮಣಿಸಿರುವ ಪ್ರಾದೇಶಿಕ ಪಕ್ಷಗಳು ಐಎನ್‌ಡಿಐಎಗೆ (29 ಸ್ಥಾನ) ಶಕ್ತಿ ತುಂಬಿವೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ತನ್ನ ಬಲವನ್ನು ವೃದ್ಧಿಸಿಕೊಂಡಿದೆ. ಚುನಾವಣೆಯಲ್ಲಿ ಏಕಾಂಗಿ ಯಾಗಿ ಹೋರಾಟ ನಡೆಸಿದ ಮಮತಾ ಬ್ಯಾನರ್ಜಿ ಅವರು ಬಿಜೆಪಿಯನ್ನು ಕಟ್ಟಿಹಾಕುವಲ್ಲಿ ಸಫಲರಾಗಿದ್ದಾರೆ. 2019ರಲ್ಲಿ 22 ಸ್ಥಾನ ಗಳಿಸಿದ್ದ ಟಿಎಂಸಿ ಈ ಬಾರಿ 29 ಸ್ಥಾನ ಪಡೆದಿದೆ. 18 ಸ್ಥಾನ ಗಳಿಸಿದ್ದ ಬಿಜೆಪಿ 12ಕ್ಕೆ ಕುಸಿದಿದೆ.

ಕಾಣದ ರಾಮಮಂದಿರ ಪ್ರಭಾವ, ಹಿಂದೂ ತಂತ್ರಗಾರಿಕೆ ಸೋಲು

ಲೋಕಸಭಾ ಚುನಾವಣೆಯಲ್ಲಿ ರಾಮ ಮಂದಿರದ ವಿಚಾರ ಎಳ್ಳಷ್ಟೂ ಪ್ರಭಾವ ಬೀರಿಲ್ಲ. ಜ.22 ರಂದು ಉದ್ಘಾಟನೆಗೊಂಡ ವೇಳೆ ದೇಶಾದ್ಯಂತ ಮೊಳಗಿದ್ದ ಭಕ್ತಿಯ ಕಹಳೆ ಚುನಾವಣೆಯಲ್ಲಿ ಮತವಾಗಿ ಪರಿವರ್ತನೆಯಾಗಿಲ್ಲ. ಮುಖ್ಯವಾಗಿ ಉತ್ತರ ಪ್ರದೇಶದಲ್ಲಿ ಯಾವುದೇ ಪ್ರಭಾವ ಬೀರುವಲ್ಲಿ ವಿಫಲವಾಗಿದೆ. ರಾಮ ಮಂದಿರ ಇದ್ದ ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ಸೋಲು ಅನುಭವಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

-ಉಚಿತ ಉಡುಗೊರೆಗೂ ಮತ

ಅಭಿವೃದ್ಧಿ ವರ್ಸಸ್ ಉಚಿತ ಉಡುಗೊರೆ ವಿಚಾರದಲ್ಲಿ ಮತದಾರರಲ್ಲಿ ಎರಡು ಅಭಿಪ್ರಾಯ ವ್ಯಕ್ತವಾದಂತಿದೆ. ಚುನಾವಣೆ ಗೆಲುವಿಗೆ ಅಭಿವೃದ್ಧಿ ಮಾತ್ರ ಮಾನದಂಡವಲ್ಲ, ಉಚಿತ ಉಡುಗೊರೆಗಳು ಬೇಕು ಎಂಬ ಸಂದೇಶ ಫಲಿತಾಂಶದಲ್ಲಿ ಕಂಡುಬಂದಿದೆ. ವಿಶೇಷವಾಗಿ ರಾಹುಲ್ ಗಾಂಧಿ ಅವರು ಘೋಷಿಸಿದ ಮಹಿಳೆಯರ ಖಾತೆಗಳಿಗೆ ಪ್ರತಿ ತಿಂಗಳು 8,500 ರೂ. ಜಮಾ ಭಾರಿ ಪರಿಣಾಮ ಬೀರಿದೆ. ತ್ರಿವಳಿ ತಲಾಕ್ ನಿಷೇಧದ ಕಾರಣ ಮುಸ್ಲಿಂ ಮಹಿಳೆಯರ ಮತಗಳು ಬಿಜೆಪಿಯತ್ತ ವಾಲುವುದನ್ನು ತಡೆಯುವಲ್ಲಿ ಈ ತಂತ್ರ ಯಶಸ್ವಿಯಾಗಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಆರಂಭವಾದ ಉಚಿತ ಭಾಗ್ಯ ಯೋಜನೆಗಳು ಸಹ ಮತದಾರರ ಮನಗೆಲ್ಲಬಲ್ಲವು ಎಂಬುದಕ್ಕೆ ಫಲಿತಾಂಶ ಸಾಕ್ಷಿಯಾಗಿದೆ.

ಯುವರಾಜ ಜೋಡಿಯ ಮೋಡಿ!

ಉತ್ತರ ಪ್ರದೇಶದಲ್ಲಿ ‘ಯುವರಾಜ’ರ ಜೋಡಿ ಸಖತ್ ಮೋಡಿ ಮಾಡಿದೆ. ಅಖಿಲೇಶ್ ಯಾದವ್ ಹಾಗೂ ರಾಹುಲ್ ಗಾಂಧಿ ಅವರು ‘ಆಪೈ ಲಡ್ಡೆ’ (ನಿಮ್ಮ ಹುಡುಗರು) ಹೆಸರಿನಲ್ಲಿ ಮತ ಕೇಳಿರುವುದು ಮತದಾರರ ಮನೆಗೆಲ್ಲುವಲ್ಲಿ ಸಫಲವಾಗಿದೆ. ನ್ಯಾಯಯಾತ್ರೆಯಲ್ಲಿ ಒಂದಾಗಿದ್ದ ಜೋಡಿ, ಚುನಾವಣಾ ಪ್ರಚಾರದಲ್ಲಿ ಜತೆಜತೆಯಾಗಿ ಹೆಜ್ಜೆ ಹಾಕಿತು. ಮೋದಿಯ ಕುಟುಂಬವಾದದ ಆರೋಪವನ್ನು ಓವ‌ರ್ ಟೇಕ್ ಮಾಡುವಲ್ಲಿ ಸಫಲವಾಗಿದೆ. ಮುಖ್ಯವಾಗಿ ಇಬ್ಬರೂ ಚುನಾವಣಾ ಕಣಕ್ಕೆ ಇಳಿಯುವ ಮೂಲಕ ಉಭಯ ಪಕ್ಷಗಳ ಕಾರ್ಯಕರ್ತರಲ್ಲಿ ಹೊಸ ಶಕ್ತಿ ತುಂಬಿದ್ದರು. ಇಬ್ಬರ ಸ್ಪರ್ಧೆಯಿಂದ ಇಡೀ ಉತ್ತರ ಪ್ರದೇಶದ ಚಿತ್ರಣವೇ ಬದಲಾಯಿತು ಐ ಏನ್ ಡಿ ಐ ಎ ಭರ್ಜರಿ ಫಸಲು ಪಡೆಯಿತು

 

Categories
ರಾಜಕೀಯ ರಾಜ್ಯ ರಾಷ್ಟ್ರೀಯ ವಾರ್ತೆ

ಮೋದಿ ಪಟ್ಟಾಭಿಷೇಕಕ್ಕೆ ಶುಭ ಮೂಹೂರ್ತ!

ಮೋದಿ ಪಟ್ಟಾಭಿಷೇಕಕ್ಕೆ ಶುಭ ಮೂಹೂರ್ತ!
– ಜೂ. 8ರಂದು ಪ್ರಧಾನಿಯಾಗಿ ಪ್ರಮಾಣ ವಚನ?
– ದೆಹಲಿಯಲ್ಲಿ ಇಂದು ಮಹತ್ವದ ಸಭೆ
– ನಿತೀಶ್, ಚಂದ್ರಬಾಬು ಬೆಂಬಲ ಘೋಷಣೆ

NAMMUR EXPRESS NEWS
ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ಎನ್‌ಡಿಎ ಸರಳ ಬಹುಮತ ಪಡೆದುಕೊಂಡಿದೆ. ಇದೀಗ ಎನ್‌ಡಿಎ ಸರ್ಕಾರ ರಚನೆಯ ಕಸರತ್ತು ಆರಂಭಿಸಿದೆ. ಅದರ ಭಾಗವಾಗಿ ಇಂದು (ಜೂನ್‌ 5) ದೆಹಲಿಯಲ್ಲಿ ಮಹತ್ವದ ಸಭೆ ನಡೆದಿದೆ. ಈ ಮಧ್ಯೆ ನರೇಂದ್ರ ಮೋದಿ ಪ್ರಧಾನಿಯಾಗಿ ಜೂನ್‌ 8ರಂದು ಸಂಜೆ 4 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಎನ್‌ಡಿಎ ಒಟ್ಟು 291 ಸ್ಥಾನ ಗೆದ್ದಿದ್ದು, ಸತತ ಮೂರನೇ ಬಾರಿಗೆ ದೆಹಲಿ ಗದ್ದುಗೆ ಏರಲಿದೆ. ಈಗಾಗಲೇ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ನಿತೀಶ್‌ ಕುಮಾರ್‌ ಮತ್ತಿತರ ಮಿತ್ರ ಪಕ್ಷಗಳ ನಾಯಕರು ಎನ್‌ಡಿಎ ಸರ್ಕಾರ ರಚನೆಗೆ ಬೆಂಬಲ ಸೂಚಿಸಿದ್ದಾರೆ. ಹೀಗಾಗಿ ಮೋದಿ ಜೂ. 8ರಂದು ಸತತ ಮೂರನೇ ಬಾರಿಗೆ ಪ್ರಧಾನಿ ಹುದ್ದೆಗೆ ಏರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

– ರಾಜ್ಯದಿಂದ 4 ಮಂದಿಗೆ ಸಚಿವ ಸ್ಥಾನ ಫಿಕ್ಸ್?‌

ಈ ಸಂದರ್ಭದಲ್ಲಿ ರಾಜ್ಯದಿಂದ ಆರಿಸಿ ಬಂದಿರುವ ಸಂಸದರಲ್ಲಿ ನಾಲ್ವರಿಗೆ ಸಚಿವ ಸ್ಥಾನ ಫಿಕ್ಸ್‌ ಎಂಬ ಮಾತುಗಳು ಕೇಳಿಬರುತ್ತಿವೆ. ರಾಜ್ಯದಲ್ಲಿ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ, ದಲಿತ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಲು ಎನ್‌ಡಿಎ ಬಯಸಿದೆ ಎನ್ನಲಾಗಿದೆ. ಪ್ರಹ್ಲಾದ ಜೋಶಿ ಅವರು ಎನ್‌ಡಿಎ ಮೂರನೆಯ ಅವಧಿಯಲ್ಲೂ ಸಚಿವರಾಗುವುದು ಬಹುತೇಕ ಖಚಿತವಾಗಿದೆ. ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ನಿರರ್ಗಳತೆ ಹೊಂದಿರುವ ಪ್ರಹ್ಲಾದ್‌ ಜೋಶಿ, ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಪ್ರಭಾವ ಹೊಂದಿದ್ದಾರೆ. ನಾಲ್ಕನೇ ಬಾರಿಗೆ ಹುಬ್ಬಳ್ಳಿ- ಧಾರವಾಡದ ಸಂಸದರಾಗಿ ಆಯ್ಕೆಯಾಗಿರುವ ಜೋಶಿ, ಬ್ರಾಹ್ಮಣ ಕೋಟಾವನ್ನು ತುಂಬಲಿದ್ದಾರೆ.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ಸಚಿವ ಸ್ಥಾನ ಬಹುತೇಕ ಖಚಿತವಾಗಿದೆ. ಮಾಜಿ ಸಿಎಂ ಆಗಿ ಅನುಭವ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಮಾತುಗಾರಿಕೆ, ಆರ್ಥಿಕತೆಯ ವಿಚಾರಗಳಲ್ಲಿ ವಿಶೇಷ ಜ್ಞಾನ ಹೊಂದಿರುವಿಕೆಯ ಜೊತೆಗೆ ಲಿಂಗಾಯತ ಕೋಟಾ ಕೂಡ ಬೊಮ್ಮಾಯಿ ಅವರಿಗೆ ನೆರವಾಗಲಿದೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆದ್ದ ʼಹೃದಯವಂತʼ ಡಾಕ್ಟರ್ ಸಿ.ಎನ್‌ ಮಂಜುನಾಥ್‌ ಅವರೂ ಸಚಿವ ಸ್ಥಾನ ಪಡೆಯಬಲ್ಲವರ ಯಾದಿಯಲ್ಲಿ ಇದ್ದಾರೆ ಎನ್ನಲಾಗಿದೆ.

ಮಾಜಿ ಸಿಎಂ, ಜೆಡಿಎಸ್‌ ಮುಖಂಡ ಎಚ್.ಡಿ ಕುಮಾರಸ್ವಾಮಿ ಅವರಿಗೆ ಮೈತ್ರಿ ಖೋಟಾದಲ್ಲಿ ಸಚಿವ ಸ್ಥಾನ ಫಿಕ್ಸ್ ಆಗಿದೆ ಎನ್ನಲಾಗಿದೆ.

Categories
ಅಡಿಕೆ-ದರ

ಅಡಿಕೆ ದರ 04-06-2024

ಅಡಿಕೆ ದರ
04-06-2024
ಸರಕು 45159 78596
ಬೆಟ್ಟೆ 40254 55509
ರಾಶಿ 33500 54099
ಗೊರಬಲು 17169 42399
Nammur Express
Categories
ರಾಜಕೀಯ ರಾಜ್ಯ

ರಾಜ್ಯ ರಾಜಕಾರಣದಲ್ಲಿ ವಿಶೇಷ ಫಲಿತಾಂಶ!

ರಾಜ್ಯ ರಾಜಕಾರಣದಲ್ಲಿ ವಿಶೇಷ ಫಲಿತಾಂಶ!
– 3 ಮಾಜಿ ಸಿಎಂಗಳಿಗೆ ಗೆಲುವು: ಹಾಲಿ ಸಂಸದರಿಗೂ ಸೋಲು
– ಮೂರು ವಿಧಾನ ಸಭಾ ಕ್ಷೇತ್ರಗಳಲ್ಲಿ ಬೈ ಎಲೆಕ್ಷನ್
– ಸೋತ ಹಾಗೂ ಗೆದ್ದ ರಾಜಕಾರಣಿಗಳ ಮಕ್ಕಳು ಯಾರು?
– ಕೇಂದ್ರ ಸಚಿವ, ಕರ್ನಾಟಕ ರಾಜ್ಯ ಸಭಾ ಸದಸ್ಯ ರಾಜೀವ್ ಚಂದ್ರ ಶೇಖರ್ ಸೋಲು

ಲೋಕ ಸಭಾ ಕ್ಷೇತ್ರದ ವಿಶೇಷ ಸುದ್ದಿಗಳು ನಮ್ಮೂರ್ ಎಕ್ಸ್ ಪ್ರೆಸ್ ವೀಕ್ಷಿಸಿ…!
NAMMUR EXPRESS NEWS
ಬೆಂಗಳೂರು : ದೇಶದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಇದೀಗ ಅನೇಕ ಅಚ್ಚರಿಗಳಿಗೆ ಕಾರಣವಾಗಿದೆ. ಈ ಲೋಕಸಭಾ ಚುನಾವಣೆಯಲ್ಲಿ ಮೂವರು ಮಾಜಿ ಸಿಎಂಗಳು ಗೆಲುವನ್ನು ಸಾಧಿಸಿದ್ದಾರೆ. ಮಂಡ್ಯದಿಂದ ಕುಮಾರಸ್ವಾಮಿ, ಹಾವೇರಿಯಿಂದ ಬಸವರಾಜ್ ಬೊಮ್ಮಾಯಿ, ಬೆಳಗಾವಿಯಿಂದ ಜಗದೀಶ್ ಶೆಟ್ಟರ್ ಗೆಲುವು ಸಾಧಿಸಿದ್ದು, ಅನೇಕ ಹಾಲಿ ಸಂಸದರಿಗೂ ಕೂಡ ಸೋಲಾಗಿದೆ. ಹಾಲಿ ಸಂಸದರು ಸಚಿವರಾಗಿರುವ ಭಗವಂತ್ ಖೂಬಾ ಬೀದರ್ ನಲ್ಲಿ ಈಶ್ವರ್ ಖಂಡ್ರೆ ಸಾಗರ್ ಕಂಡ್ರೆ ವಿರುದ್ಧ ಸೋಲನ್ನ ಕಂಡಿದ್ದಾರೆ. ಚಿಕ್ಕೋಡಿಯಲ್ಲಿ ಅಣ್ಣಾ ಸಾಹೇಬ್ ಜೊಲ್ಲೆ ಸೋಲು ಕಂಡಿದ್ದಾರೆ. ಇನ್ನೂ ಮೂರು ಎಂಎಲ್ಎಗಳು ಕೂಡ ಲೋಕಸಭೆಗೆ ಶಿಫ್ಟ್ ಆಗಿದ್ದು ಕುಮಾರಸ್ವಾಮಿ, ಬಸವರಾಜ್ ಬೊಮ್ಮಾಯಿ, ಬಳ್ಳಾರಿಯ ತುಕಾರಾಂ ಬಳ್ಳಾರಿಯಲಿ ಗೆಲುವನ್ನು ಸಾಧಿಸಿದ್ದಾರೆ. ಇಲ್ಲಿ ಬೈ ಎಲೆಕ್ಷನ್ ನಡೆಯುಲಿದೆ.

ಸೋತ ಪ್ರಮುಖರು ಯಾರು ಯಾರು?

ಸೋತ ಪ್ರಮುಖರಲ್ಲಿ ಡಿಕೆ ಸುರೇಶ್ ಬೆಂಗಳೂರು ಗ್ರಾಮಾಂತರದಲ್ಲಿ ಡಾಕ್ಟರ್ ಮಂಜುನಾಥ್ ವಿರುದ್ಧ ಸೋಲನ್ನ ಕಂಡಿದ್ದಾರೆ. ಮೃಣಾಲ್ ಹೆಬ್ಬಾಳ್, ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪುತ್ರ ಸೋಲು ಕಂಡಿದ್ದು. ಬಳ್ಳಾರಿಯಲಿ ಶ್ರೀರಾಮುಲು ಸೋಲು ಕಂಡಿದ್ದಾರೆ. ಶಿವಮೊಗ್ಗದಲ್ಲಿ ಗೀತಾ ಶಿವರಾಜ್ ಕುಮಾರ್ ಸೋಲು ಕಂಡಿದ್ದು, ದಾವಣಗೆರೆಯಲ್ಲಿ ಮಾಜಿ ಕೇಂದ್ರ ಸಚಿವ ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಸೋಲು ಕಂಡಿದ್ದಾರೆ. ಇನ್ನು ಕಲಬುರಗಿಯಲ್ಲಿ ಡಾ. ಉಮೇಶ್ ಜಾದವ್ ಸೋಲು ಕಂಡಿದ್ದಾರೆ. ಇನ್ನು ಮಾಜಿ ಸಚಿವರಾದ ಜಯಪ್ರಕಾಶ್ ಹೆಗಡೆ, ರಾಮಲಿಂಗಾ ಅವರ ರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ, ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಸೋಲು ಕಂಡಿದ್ದಾರೆ.

ಗೆದ್ದ ಪ್ರಮುಖ ರಾಜಕಾರಣಿಗಳ ಮಕ್ಕಳು!

ಪ್ರಿಯಾಂಕಾ ಜಾರಕಿಹೊಳಿ ಸಚಿವ ಸತೀಶ್ ಜಾರಕಿಹೊಳಿಯವರ ಪುತ್ರಿ ಚಿಕ್ಕೋಡಿಯಲ್ಲಿ ಗೆದ್ದಿದ್ದಾರೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್ ಕಂಡ್ರೆ ಬಿಜೆಪಿಯಿಂದ ಗೆಲುವು ಸಾಧಿಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ ಅವರ ಪುತ್ರ ಮಾಜಿ ಸಿಎಂ ಕುಮಾರಸ್ವಾಮಿಯವರು ಮಂಡ್ಯದಿಂದ ಗೆಲುವನ್ನ ಸಾಧಿಸಿದ್ದಾರೆ. ಇನ್ನೂ ಹಾಲಿ ಸಂಸದ ಮಾಜಿ ಸಚಿವ ಯಡಿಯೂರಪ್ಪ ಅವರ ಪುತ್ರ ರಾಘವೇಂದ್ರ ಅವರು ಶಿವಮೊಗ್ಗದಿಂದ ಗೆಲುವನ್ನು ಸಾಧಿಸಿದ್ದಾರೆ. ಮಾಜಿ ಸಚಿವ ಮಹದೇವಪ್ಪನವರ ಪುತ್ರ ಸುನಿಲ್ ಬೋಸ್ ಚಾಮರಾಜನಗರದಿಂದ ಗೆಲುವನ್ನ ಸಾಧಿಸಿದರೆ, ದಾವಣಗೆರೆಯಿಂದ ಹಾಲಿ ಸಚಿವ ಮಲ್ಲಿಕಾರ್ಜುನ್ ಅವರ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆಲುವನ್ನು ಸಾಧಿಸಿದ್ದಾರೆ. ಇನ್ನೂ ಬಿಜೆಪಿಯ ಯುವ ನಾಯಕ ತೇಜಸ್ವಿ ಸೂರ್ಯ ಬೆಂಗಳೂರಿನಿಂದ ಗೆಲುವನ್ನು ಸಾಧಿಸಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಡಿಸಿಎಂ ಆಗಿದ್ದ ಗೋವಿಂದ ಕಾರಜೋಳ ಚಿತ್ರದುರ್ಗದಿಂದ ಗೆಲುವನ್ನು ಸಾಧಿಸಿದ್ದಾರೆ.

ಸೋತ ಕರ್ನಾಟಕದ ಕೇಂದ್ರ ಸಚಿವರು!

ಕೇಂದ್ರ ಸಚಿವ, ಕರ್ನಾಟಕ ರಾಜ್ಯ ಸಭಾ ಸದಸ್ಯ ರಾಜೀವ್ ಚಂದ್ರ ಶೇಖರ್ ಕೇರಳದ ತಿರುವನಂತಪುರದಲ್ಲಿ ಸೋಲು ಕಂಡಿದ್ದಾರೆ. ಇವರು ಕರ್ನಾಟಕದಿಂದ ರಾಜ್ಯ ಸಭಾ ಸದಸ್ಯರಾಗಿದ್ದರು.