Categories
ರಾಜಕೀಯ ರಾಜ್ಯ

ವಿಧಾನ ಪರಿಷತ್‌ನ ಆರು ಸ್ಥಾನಗಳಿಗೆ ಚುನಾವಣೆ ಕ್ಷಣಗಣನೆ!

ವಿಧಾನ ಪರಿಷತ್‌ನ ಆರು ಸ್ಥಾನಗಳಿಗೆ ಚುನಾವಣೆ ಕ್ಷಣಗಣನೆ!
– ಬಂಡಾಯದಿಂದಾಗಿ ಕುತೂಹಲ ಮೂಡಿಸಿರುವ ನೈರುತ್ಯ ಪದವೀಧರ, ಶಿಕ್ಷಕರ ಕ್ಷೇತ್ರ
– ಕಾಂಗ್ರೆಸ್‌, ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಗಳಿಗೆ ಬಂಡಾಯದ ಬಿಸಿ!

ವಿಶೇಷ ವರದಿ: ಸುರೇಶ್ ಮಂಗಳೂರು
NAMMUR EXPRESS NEWS
ಒಂದೆಡೆ ಲೋಕಸಭೆ ಚುನಾವಣೆಯ ಫಲಿತಾಂಶದ ಕಾತರ; ಇನ್ನೊಂದೆಡೆ ವಿಧಾನ ಪರಿಷತ್‌ನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯ ಕಾವು; ಇನ್ನೊಂದೆಡೆ, ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗುವ ಅಭ್ಯರ್ಥಿಗಳಿಂದ ಟಿಕೆಟ್‌ಗಾಗಿ ತೀವ್ರ ಲಾಬಿ-ಪೈಪೋಟಿ. ಒಟ್ಟಾರೆ ಕರ್ನಾಟಕ ಈಗ ಅಕ್ಷರಶಃ ಚುನಾವಣೆಯ ಪರ್ವದಲ್ಲಿದೆ.
ಆದರೆ, ಲೋಕಸಭೆ ಚುನಾವಣೆ ಫಲಿತಾಂಶಕ್ಕೂ ಮೊದಲು ಕರ್ನಾಟಕದ ಪಾಲಿಗೆ ಜೂ.3ರಂದು ನಡೆಯಲಿರುವ ಪರಿಷತ್‌ನ 6 ಸ್ಥಾನಗಳಿಗೆ ನಡೆಯಲಿರುವ ಮತದಾನ ಕೂಡ ನಿರ್ಣಾಯಕವಾದದ್ದು. ಈ ಆರು ಸ್ಥಾನಗಳ ಪೈಕಿ ಕರಾವಳಿಯನ್ನು ಪ್ರತಿನಿಧಿಸುವ ನೈರುತ್ಯ ಪದವೀಧರ ಹಾಗೂ ನೈರುತ್ಯ ಶಿಕ್ಷಕರ ಎರಡು ಸ್ಥಾನಗಳಿಗೂ ಮತದಾನಕ್ಕೆ ಇನ್ನು ಕೇವಲ ಒಂದು ದಿನವಷ್ಟೇ ಬಾಕಿಯಿದೆ. ವಿಶೇಷವೆಂದರೆ, ಈ ಬಾರಿಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಅತ್ಯಂತ ಹೆಚ್ಚು ಗಮನಸೆಳೆದಿರುವ ಕ್ಷೇತ್ರ ನೈರುತ್ಯ ಕ್ಷೇತ್ರ. ಅದಕ್ಕೆ ಮುಖ್ಯ ಕಾರಣ ಇಲ್ಲಿನ ಬಂಡಾಯದ ಸ್ಪರ್ಧೆ.

ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಕೊಡಗು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳನ್ನು ಒಳಗೊಂಡಂತೆ ಒಟ್ಟು ಐದು ಲೋಕಸಭಾ ಹಾಗೂ 30 ವಿಧಾನಸಭಾ ವ್ಯಾಪ್ತಿಯನ್ನು ಹೊಂದಿರುವ ಕ್ಷೇತ್ರ ನೈರುತ್ಯ ಕ್ಷೇತ್ರ. ಈ ಕ್ಷೇತ್ರದ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಹಾಗೂ ಕಾಂಗ್ರೆಸ್‌ ತಮ್ಮ ಅಧಿಕೃತ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಪದವೀಧರ ಕ್ಷೇತ್ರದಿಂದ ಬಿಜೆಪಿಯು ಶಿವಮೊಗ್ಗದ ಧನಂಜಯ ಸರ್ಜಿ ಅವರಿಗೆ ಟಿಕೆಟ್‌ ನೀಡಿದ್ದು, ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಹಾಗೂ ಹಾಲಿ ಸದಸ್ಯ ಭೋಜೇಗೌಡರನ್ನು ಕಣಕ್ಕಿಳಿಸಿದೆ. ಆದರೆ, ಪದವೀಧರ ಕ್ಷೇತ್ರವನ್ನು ತೆಗೆದುಕೊಂಡಾಗ ಬಿಜೆಪಿಯಲ್ಲಿದ್ದ ರಘುಪತಿ ಭಟ್‌ ಅವರು ಪ್ರಮುಖ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ, ಅವರಿಗೆ ಬಿಜೆಪಿ ಟಿಕೆಟ್‌ ಕೊಡದ ಕಾರಣಕ್ಕೆ ಇದೀಗ ಬಂಡಾಯವಾಗಿ ಸ್ಪರ್ಧಿಸಿದ್ದು, ಚುನಾವಣಾ ಕಣಕ್ಕೂ ಹೆಚ್ಚು ಕುತೂಹಲಕ್ಕೆ ಕಾರಣವಾಗಿದೆ.

ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಲೆಕ್ಕಾಚಾರ!

ಈ ಬಾರಿ ಈ ಪದವೀಧರ ಕ್ಷೇತ್ರದ ಫಲಿತಾಂಶದ ಲೆಕ್ಕಾಚಾರಗಳು ಉಲ್ಟಾ ಆದರೂ ಅಚ್ಚರಿಯಿಲ್ಲ. ಏಕೆಂದರೆ, ಪ್ರತಿ ಸಲವೂ ನೈರುತ್ಯ ಪದವೀಧರ ಕ್ಷೇತ್ರವನ್ನು ದಕ್ಷಿಣ ಕನ್ನಡ ಅಥವಾ ಉಡುಪಿ ಭಾಗದವರಿಗೆ ಬಿಜೆಪಿ ಟಿಕೆಟ್‌ ನೀಡುತ್ತಿತ್ತು. ಈ ಚುನಾವಣೆಯಲ್ಲಿ ಅದನ್ನು ಮಲೆನಾಡಿನ ಧನಂಜಯ ಅವರಿಗೆ ನೀಡಿರುವುದು ಸಹಜವಾಗಿಯೇ ಕರಾವಳಿ ಭಾಗದ ಪದವೀಧರ ಟಿಕೆಟ್‌ ಆಕಾಂಕ್ಷಿಗಳಲ್ಲಿ ಹಾಗೂ ಮತದಾರರಲ್ಲಿ ಅಸಮಾಧಾನಕ್ಕೆ ಎಡೆಮಾಡಿದೆ. ಇದೇ ಕಾರಣಕ್ಕೆ ರಘುಪತಿ ಭಟ್‌ ಕೂಡ ಬಂಡಾಯವೆದ್ದು ಕಣಕ್ಕಿಳಿದಿದ್ದು, ತಾವು ಕರಾವಳಿ ಭಾಗದವರು ಎನ್ನುವ ಮೂಲಕ ತಮ್ಮ ವೈಯಕ್ತಕ ವರ್ಚಸ್ಸಿನಿಂದ ಒಂದಷ್ಟು ವೋಟ್‌ ಪಡೆಯಬಹುದು ಎನ್ನುವ ಲೆಕ್ಕಾಚಾರ ಕೂಡ ಹಾಕಿಕೊಂಡಿದೆ. ಒಂದುವೇಳೆ, ಪಕ್ಷವನ್ನು ಬದಿಗಿಟ್ಟು ಕರಾವಳಿ ಭಾಗದ ಮತದಾರರು ರಘುಪತಿ ಅವರಿಗೆ ಮತ ನೀಡಿದರೆ ಅದು ಬಿಜೆಪಿಯ ಅಧಿಕೃತ ಅಭ್ಯರ್ಥಿ ಸರ್ಜಿ ಅವರಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ.

ಇನ್ನೊಂದೆಡೆ ಈ ಕಾಂಗ್ರೆಸ್‌ನಿಂದ ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿಯಿಂದ ಪಕ್ಷಾಂತರ ಮಾಡಿರುವ ಆಯನೂರು ಮಂಜುನಾಥ್‌ ಅವರು ಸ್ಪರ್ಧಾ ಕಣದಲ್ಲಿದ್ದಾರೆ. ಇಲ್ಲಿಯೂ ಬಂಡಾಯದ ಬಿಸಿಯಿದ್ದು, ಎಸ್‌ಪಿ ದಿನೇಶ್‌ ಅವರು ಬಂಡಾಯದ ಬಾವುಟ ಹಾರಿಸಿದ್ದಾರೆ. ಹೀಗಿರುವಾಗ, ಎರಡು ಪಕ್ಷದಲ್ಲಿ ಪದವೀಧರ ಕ್ಷೇತ್ರದ ಬಂಡಾಯ ಉಂಟಾಗಿರುವುದು ಮೂರನೇ ಅಭ್ಯರ್ಥಿಗೆ ವರದಾನ ಆಗು ಸಾಧ್ಯತೆಯಿದೆ. ಹೀಗಾಗಿ, ನೈರುತ್ಯ ಪದವೀಧರ ಕ್ಷೇತ್ರದ ಚುನಾವಣಾ ಫಲಿತಾಂಶವು ಯಾರಿಗೆ ವಿಜಯಲಕ್ಷ್ಮಿಯನ್ನು ಒಲಿಸಲಿದೆ ಎನ್ನುವುದು ಕೂಡ ಕುತೂಹಲ ಮೂಡಿಸಿದೆ.

ಶಿಕ್ಷಕರ ಕ್ಷೇತ್ರದಲ್ಲಿ ರಾಜಕೀಯ ಏನಿದೆ?

ಇನ್ನು ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯು ಮೈತ್ರಿ ಅಭ್ಯರ್ಥಿಯಾಗಿ ಭೋಜೇಗೌಡರನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್‌ನಿಂದ ಕೆಕೆ ಮಂಜುನಾಥ್‌ ಅವರು ಕಣದಲ್ಲಿದ್ದಾರೆ. ಪದವೀಧರ ಕ್ಷೇತ್ರಕ್ಕೆ ಹೋಲಿಸಿದರೆ ಶಿಕ್ಷಕರ ಕ್ಷೇತ್ರದಲ್ಲಿ ಎರಡೂ ಪಕ್ಷದಲ್ಲಿ ಬಂಡಾಯದ ಬಿಸಿ ಕಡಿಮೆಯಿದೆ.

2018ರ ಪರಿಷತ್‌ ಫಲಿತಾಂಶ ಏನಾಗಿತ್ತು?

2018ರಲ್ಲಿ ನಡೆದ ನೈರುತ್ಯ ಪದವೀಧದ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಆಯನೂರು ಮಂಜುನಾಥ್‌ 25,250 ಮತ ಪಡೆದು ಜಯಗಳಿಸಿದ್ದರೆ, ಕಾಂಗ್ರೆಸ್‌ ಅಭ್ಯರ್ಥಿ ಎಸ್‌ಪಿ ದಿನೇಶ್‌ 12,838 ಮತಗಳನ್ನು ಗಳಿಸಿದ್ದರು. ಹಾಗೆಯೇ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿ ಎಸ್‌ಎಲ್‌ ಭೋಜೇಗೌಡರು 8,647 ಮತ ಪಡೆದು ಗೆಲುವು ಸಾಧಿಸಿದ್ದರೆ, ಬಿಜೆಪಿಯ ಕ್ಯಾ. ಗಣೇಶ್‌ ಕಾರ್ಣಿಕ್‌ ಅವರು 5,812 ಮತಗಳನ್ನು ಗಳಿಸಿದ್ದರು. ಈ ಬಾರಿ ನೈರುತ್ಯ ಶಿಕ್ಷಣ ಕ್ಷೇತ್ರದಿಂದ 8 ಅಭ್ಯರ್ಥಿಗಳು ಹಾಗೂ ನೈರುತ್ಯ ಪದವೀಧರ ಕ್ಷೇತ್ರದಿಂದ 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 79 ಮತಗಟ್ಟೆಗಳಿದ್ದು, 23,402 ಮತದಾರರು ಇದ್ದಾರೆ. ಅದರಲ್ಲಿ 10,487 ಪುರುಷ & 12915 ಮಹಿಳಾ ಮತದಾರರು ಇದ್ದಾರೆ. ಹಾಗೆಯೇ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಒಟ್ಟು 108 ಮತಗಟ್ಟೆ ಇದ್ದು, 85089 ಮತದಾರರು ಇದ್ದಾರೆ.

ನೈರುತ್ಯ ಶಿಕ್ಷಕರ ಕ್ಷೇತ್ರ ಕಣದಲ್ಲಿರುವ ಅಭ್ಯರ್ಥಿಗಳು ಇವರು

ಎಸ್.ಎಲ್.ಭೋಜೆಗೌಡ-ಬಿಜೆಪಿ-ಜೆಡಿಎಸ್‌ ಮೈತ್ರಿ, ಡಾ.ಕೆ.ಕೆ ಮಂಜುನಾಥ್ ಕುಮಾರ್-ಕಾಂಗ್ರೆಸ್, ಪಕ್ಷೇತರರು: ಡಾ.ಅರುಣ್ ಹೊಸಕೊಪ್ಪ, ಡಾ. ನರೇಶ್ಚಂದ್ ಹೆಗ್ಡೆ, ನಂಜೇಶ್ ಬೆಣ್ಣೂರು, ಭಾಸ್ಕರ ಶೆಟ್ಟಿ .ಟಿ, ಕೆ.ಕೆ. ಮಂಜುನಾಥ್ ಕುಮಾರ್, ಡಾ.ಎಸ್.ಆರ್. ಹರೀಶ್ ಆಚಾರ್ಯ.

ನೈರುತ್ಯ ಪದವೀಧರರ ಕ್ಷೇತ್ರದ ಕಣದಲ್ಲಿರುವ ಅಭ್ಯರ್ಥಿಗಳು ಇವರು

ಆಯನೂರು ಮಂಜುನಾಥ-ಕಾಂಗ್ರೆಸ್, ಡಾ.ಧನಂಜಯ ಸರ್ಜಿ-ಬಿಜೆಪಿ, ಜಿ.ಸಿ.ಪಾಟೀಲ್-ಸರ್ವ ಜನತಾ ಪಾರ್ಟಿ. ಪಕ್ಷೇತರರು: ದಿನಕರ ಉಳ್ಳಾಲ್, ಎಸ್.ಪಿ. ದಿನೇಶ್, ಬಿ. ಮಹಮ್ಮದ್ ತುಂಬೆ, ಕೆ. ರಘುಪತಿ ಭಟ್, ಡಾ.ಶೇಕ್ ಬಾವ ಮಂಗಳೂರು, ಷಡಾಕ್ಷರಪ್ಪ ಜಿ.ಆರ್, ಷಹಾರಾಜ್ ಮುಜಾಹಿದ್ ಸಿದ್ದಿಕ್ಕಿ.

Categories
ಮಲ್ನಾಡ್

ಟಾಪ್ ನ್ಯೂಸ್ ಮಲ್ನಾಡ್

ಟಾಪ್ ನ್ಯೂಸ್ ಮಲ್ನಾಡ್
ಮೃತ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಯ ಪತ್ನಿ ಆರೋಗ್ಯದಲ್ಲಿ ಏರುಪೇರು
– ಸಾಗರ: ಬಸ್ಸಿನಲ್ಲಿ ಸೀಟಿಗಾಗಿ ಮಹಿಳೆಯರ ಹೊಡೆದಾಟ
ಬಸ್ಸನ್ನೆ ಠಾಣೆಗೆ ತಂದು ನಿಲ್ಲಿಸಿದ ಚಾಲಕ!
– ಸಾಗರ : ಕಳ್ಳ ಖದೀಮರಿಗೆ ಸಿಂಹ ಸ್ವಪ್ನವಾಗಿದ್ದ ಲೇಡಿ ಸಿಂಗಂ ವಯೋನಿವೃತ್ತಿ
– ಮೂಡಿಗೆರೆ : ಮರಗಸಿ ವೇಳೆ ಕರೆಂಟ್ ಶಾಕ್‌ ಕಾರ್ಮಿಕ ಸ್ಥಳದಲ್ಲೇ ಸಾವು
– ಚಿಕ್ಕಮಗಳೂರು : ಬಾಯ್ಲರ್ ರಿಪೇರಿ ವೇಳೆ ಏಕಾಏಕಿ ಹೊರಬಂದ ಶಾಖದಿಂದ ಕಾರ್ಮಿಕ ದಾರುಣ ಸಾವು

NAMMUR EXPRESS NEWS
ಆತ್ಮಹತ್ಯೆ ಮಾಡಿಕೊಂಡ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್‌ ರವರ ಪತ್ನಿಯ ಆರೋಗ್ಯದಲ್ಲಿ ದಿಢೀರ್‌ ಏರುಪೇರಾಗಿ ಅಸ್ವಸ್ಥಗೊಂಡಿದ್ದು ಅವರನ್ನ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಅಧಿಕಾರಿ ಆತ್ಮಹತ್ಯೆಯ ಬೆನ್ನಲ್ಲೆ ಹಲವಾರು ಮುಖಂಡರು ಮೃತರ ಮನೆಗೆ ಭೇಟಿಕೊಡುತ್ತಿದ್ದಾರೆ. ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರ್ಕಾರ ಇದುವರೆಗೂ ಯಾವುದೇ ಪರಿಹಾರ ಘೋಷಿಸಿಲ್ಲ. ಇನ್ನೊಂದೆಡೆ ಮುಖಂಡರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳುತ್ತಿರುವುದಷ್ಟೆ ಅಲ್ಲದೆ ಸಹಾಯ ಹಸ್ತ ನೀಡುವ ಮಾತನಾಡುತ್ತಿದ್ದಾರೆ.ಈ ಪೈಕಿ ಕೆಎಸ್‌ ಈಶ್ವರಪ್ಪ ತಮ್ಮ ಕೈಲಾದಷ್ಟು ನೆರವು ಎಂದು ಮೂರು ಲಕ್ಷ ರೂಪಾಯಿ ಮೃತರ ಕುಟುಂಬಕ್ಕೆ ನೀಡಿದ್ದಾರೆ. ಹಾಗೆ ಸರ್ಕಾರದ ಪರಿಹಾರಕ್ಕೆ ಒತ್ತಾಯಿಸಲಾಗುವುದು ಎಂದಿದ್ದಾರೆ. ಈ ನಡುವೆ ಇವತ್ತು ಚಂದ್ರಶೇಖರನ್‌ರವರ ಪತ್ನಿ ಕವಿತಾರವರ ಆರೋಗ್ಯದಲ್ಲಿ ಏರುಪೇರಾಗಿದೆ. ವಾಂತಿಯಾದ ಹಿನ್ನೆಲೆಯಲ್ಲಿ ಅವರು ಅಸ್ವಸ್ಥಗೊಂಡಿದ್ದು, ಅವರನ್ನ ಅವರ ಪುತ್ರ ಅಲ್ಲಿಯೇ ಇದ್ದ ಆಟೋವೊಂದರಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಘಟನೆ ನಂತರ ಅವರು ಸರಿಯಾಗಿ ಊಟ ಮಾಡುತ್ತಿರಲಿಲ್ಲ. ಹೀಗಾಗಿ ಅಸ್ವಸ್ಥರಾಗಿದ್ದಾರೆ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.

ಸಾಗರ: ಬಸ್ಸಿನಲ್ಲಿ ಸೀಟಿಗಾಗಿ ಮಹಿಳೆಯರ ಹೊಡೆದಾಟ
– ಬಸ್ಸನ್ನೆ ಠಾಣೆಗೆ ತಂದು ನಿಲ್ಲಿಸಿದ ಚಾಲಕ!

ಸಾಗರ: ಸೀಟಿಗಾಗಿ ಮಹಿಳೆಯರಿಬ್ಬರು ಗಲಾಟೆ ಮಾಡಿಕೊಂಡಿರುವ ಘಟನೆ ಸಾಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ‌ ನಡೆದಿದೆ. ರಾಜ್ಯ ಸರಕಾರದ ಶಕ್ತಿ ಯೋಜನೆ ಆರಂಭವಾದಾಗಿನಿಂದ ಸರಕಾರಿ ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ವ್ಯವಸ್ಥೆ ಮಾಡಲಾಗಿದ್ದು ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸರಕಾರಿ ಬಸ್ಸನ್ನು ಅವಲಂಭಿಸುತ್ತಿದ್ದಾರೆ. ಈ ನಡುವೆ ಸೀಟಿಗಾಗಿ ಬಸ್ಸಿನಲ್ಲಿ ಮಹಿಳೆಯರ ಹೊಡೆದಾಟ ಪ್ರಕರಣಗಳು ಹೆಚ್ಚಾಗುತ್ತಿದೆ. ಅದೇ ರೀತಿ ಸಾಗರ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ಶಿವಮೊಗ್ಗಕ್ಕೆ ಹೊರಟಿದ್ದ ಬಸ್ಸಿನಲ್ಲಿ ಇಬ್ಬರು ಮಹಿಳೆಯರು ಸೀಟಿಗಾಗಿ ಜಗಳ ಮಾಡಿಕೊಂಡಿದ್ದಾರೆ, ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಳ್ಳುವ ಹಂತಕ್ಕೆ ತಲುಪಿದೆ ಈ ನಡುವೆ ಬಸ್ಸಿನ ಚಾಲಕ, ನಿರ್ವಾಹಕ ಸೇರಿದಂತೆ ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರು ಜಗಳ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಸಮಾಧಾನಪಡಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ ಕೊನೆಗೆ ಬಸ್ ಚಾಲಕ ಮಹಿಳೆಯರ ಗಲಾಟೆ ನಿಯಂತ್ರಿಸಲಾಗದೆ ಬಸ್ಸನ್ನು ಸಾಗರ ಪಟ್ಟಣ ಪೊಲೀಸ್ ಠಾಣೆಗೆ ತಂದು ನಿಲ್ಲಿಸಿದ್ದಾರೆ. ಗಲಾಟೆ ನಡೆಸಿದ ಮಹಿಳೆಯರನ್ನು ಬಸ್ಸಿನಿಂದ ಇಳಿಸಿ ಬಸ್ಸು ಶಿವಮೊಗ್ಗ ಕಡೆಗೆ ಪ್ರಯಾಣ ಬೆಳೆಸಿದೆ, ಇನ್ನು ಇಬ್ಬರು ಮಹಿಳೆಯರಿಗೆ ಪೊಲೀಸರು ಬುದ್ದಿವಾದ ಹೇಳಿ ಬಳಿಕ ಕಳುಹಿಸಿಕೊಟ್ಟಿದ್ದಾರೆ.

– ಸಾಗರ : ಕಳ್ಳ ಖದೀಮರಿಗೆ ಸಿಂಹ ಸ್ವಪ್ನವಾಗಿದ್ದ ಲೇಡಿ ಸಿಂಗಂ ವಯೋನಿವೃತ್ತಿ

ಸಾಗರ : ಕಳ್ಳ ಖದೀಮರಿಗೆ ಸಿಂಹ ಸ್ವಪ್ನವಾಗಿದ್ದ ಸಾಗರದ ಲೇಡಿ ಸಿಂಗಂ ಸುಜಾತಾ ರವರು ಇಂದು ವಯೋನಿವೃತ್ತಿ ಪಡೆದಿದ್ದಾರೆ. 1993 ರಲ್ಲಿ ಪೊಲೀಸ್ ಇಲಾಖೆಗೆ ಪೊಲೀಸ್‌ ಕಾನ್ಸೆಬಲ್ ಆಗಿ ಸೇರ್ಪಡೆಗೊಂಡಿದ್ದ ಸುಜಾತ ರವರು ಸುದೀರ್ಘ 30 ವರ್ಷಕ್ಕೂ ಅಧಿಕ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಸಾಗರ, ಸೊರಬ, ಆನವಟ್ಟಿ ಹಾಗೂ ಶಿವಮೊಗ್ಗದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ಪೊಲೀಸ್‌ ಸಬ್‌ ಇನ್ಸೆಕ್ಟ‌ರ್ ಆಗಿ ಅಪರಾಧ ವಿಭಾಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿ,ಸಮಾಜಘಾತಕರ ಎದೆಯಲ್ಲಿ ಭಯ ಹುಟ್ಟಿಸಿದ ಖ್ಯಾತಿ ಇವರದ್ದು, ಇಂದು ವಯೋನಿವೃತ್ತಿ ಹೊಂದಿದ ಇವರನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸನ್ಮಾನಿಸಿ ಮುಂದಿನ ಜೀವನ ಸುಖಕರವಾಗಿರಲಿ ಎಂದು ಹಾರೈಸಲಾಯಿತು. ಒಟ್ಟಾರೆ ಇದ್ದಷ್ಟು ವರ್ಷ ಪೊಲೀಸ್ ಇಲಾಖೆಯಲ್ಲಿ ಪ್ರಾಮಾಣಿಕರಾಗಿ ಕಳ್ಳ ಖದೀಮರ ಎದೆ ನಡುಗಿಸಿ, ಹಲವು ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರವಹಿಸಿ ಉತ್ತಮ ಸೇವೆ ಸಲ್ಲಿಸಿದ್ದಾರೆ.

– ಮೂಡಿಗೆರೆ : ಮರಗಸಿ ವೇಳೆ ಕರೆಂಟ್ ಶಾಕ್‌ ಕಾರ್ಮಿಕ ಸ್ಥಳದಲ್ಲೇ ಸಾವು

ಮೂಡಿಗೆರೆ: ಮರಗಸಿ ಮಾಡುವಾಗ ವಿದ್ಯುತ್ ಶಾಕ್ ನಿಂದ ಕಾರ್ಮಿಕ ಮರದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಕುನ್ನಹಳ್ಳಿ ಗ್ರಾಮದಲ್ಲಿ ನಡೆದಿದೆ. ಚಂದ್ರಪ್ಪ (45) ಮೃತ ದುರ್ದೈವಿ. ಇವರು ಸಿಲ್ವ‌ರ್ ಮರಕ್ಕೆ ಮರಗಸಿ ಮಾಡಲು ತೆರಳಿದ್ದರು. ಸಿಲ್ವ‌ರ್ ಮರದ ಅಡ್ಡ ಕೊಂಬೆಗಳನ್ನು ಕಡಿಯುವ ವೇಳೆ ತೋಟದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿಯಿಂದ ಅವಘಡ ಸಂಭವಿಸಿದೆ. ಮರದ ಮೇಲಿದ್ದಾಗಲೇ ವಿದ್ಯುತ್ ತಾಗಿದೆ. ಇದರಿಂದ ಚಂದ್ರಪ್ಪ ಮರದ ಮೇಲೆಯೇ ಪ್ರಾಣ ಬಿಟ್ಟಿದ್ದಾರೆ.

– ಚಿಕ್ಕಮಗಳೂರು: ಬಾಯ್ಲರ್ ರಿಪೇರಿ ವೇಳೆ ಏಕಾಏಕಿ ಹೊರಬಂದ ಶಾಖದಿಂದ ಕಾರ್ಮಿಕ ದಾರುಣ ಸಾವು

ಚಿಕ್ಕಮಗಳೂರು: ದುರಂತವೊಂದರಲ್ಲಿ ಕಾರ್ಮಿಕನೊಬ್ಬ ದಾರುಣವಾಗಿ ಮೃತಪಟ್ಟಿರುವ ಘಟನೆ ನಗರದ ಹೊರವಲಯದ ಕುರುಬರಹಳ್ಳಿ ಬಳಿ ಇರುವ ವಿದ್ಯಾ ಕಾಫಿ ಕ್ಯುರಿಂಗ್‌ನಲ್ಲಿ ಘಟನೆ ನಡೆದಿದೆ. ಬಾಯ್ಲರ್ ರಿಪೇರಿ ಮಾಡುವಾಗ ಏಕಾಏಕಿ ಶಾಖವು ಹೊರಹೊಮ್ಮಿದ ಪರಿಣಾಮ ರಿಪೇರಿ ಮಾಡುತ್ತಿದ್ದ ಕಾರ್ಮಿಕನ ದೇಹ ಸುಟ್ಟು ಕರಕಲಾಗಿದ್ದು, ಸ್ಥಳದಲ್ಲೇ ಉದಯ್ (27) ಮೃತಪಟ್ಟಿದ್ದಾನೆ. ಉದಯ್ ಮೂಲತಃ ಮಡಿಕೇರಿಯ ಕುಶಾಲನಗರ ಮೂಲದವನು.ಬಾಯ್ಲರ್ ಸರಿಪಡಿಸುವಾಗ ಏಕಾಏಕಿ 340 ಡಿ.ಸೆ ಶಾಖ ಹೊರ ಬಂದಿದೆ. ಶಾಖದ ತೀವ್ರತೆಗೆ ಉದಯ್‌ ದೇಹ ಸುಟ್ಟು ಕರಕಲಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಸದ್ಯ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಮೃತದೇಹವನ್ನು ರವಾನೆ ಮಾಡಲಾಗಿದೆ.

Categories
ರಾಜಕೀಯ ರಾಜ್ಯ ರಾಷ್ಟ್ರೀಯ ವಾರ್ತೆ

ಕರ್ನಾಟಕ ಮತ್ತೆ ಬಿಜೆಪಿ ಪಾಲು!?

ಕರ್ನಾಟಕ ಮತ್ತೆ ಬಿಜೆಪಿ ಪಾಲು!?
– ಬಿಜೆಪಿಗೆ 20ಕ್ಕೂ ಹೆಚ್ಚು ಸ್ಥಾನ: ಸಮೀಕ್ಷೆ
– ನರೇಂದ್ರ ಮೋದಿ ಮತ್ತೊಮ್ಮೆ ದೇಶದಲ್ಲಿ ಕಿಂಗ್
– ಕಾಂಗ್ರೆಸ್ ಗಳಿಕೆ ಕಳೆದ ಸಲಕ್ಕಿಂತ ಏರಿಕೆ, ಆದರೆ ಗರಿಷ್ಠ 8 ಸ್ಥಾನ

NAMMUR EXPRESS NEWS
ಭಾರತ ಪ್ರಜಾಪ್ರಭುತ್ವದ ದೇಗುಲ, ಭಾರತವೇ ಈ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಪ್ರಧಾನಿ ಮೋದಿ ನೇತೃತ್ವದಲ್ಲಿ ಭರ್ಜರಿ ಹ್ಯಾಟ್ರಿಕ್ ಬಾರಿಸಿ, ಕೇಂದ್ರದ ಅಧಿಕಾರ ಹಿಡಿಯೋದಕ್ಕೆ ಎನ್‌ಡಿಎ ಒಕ್ಕೂಟ ಸಜ್ಜಾಗಿದೆ. ಈ ಬಾರಿ ಕನಿಷ್ಠ 400 ಸ್ಥಾನ ಗೆಲ್ಲಲು ಬಿಜೆಪಿ ಮಾಸ್ಟರ್ ಪ್ಲ್ಯಾನ್‌ ಮಾಡಿತ್ತು. ಆದ್ರೆ ಎಲ್ಲಾ ಸಮೀಕ್ಷೆಗಳು 350-380 ಸ್ಥಾನ ಗೆಲ್ಲಲಿವೆ ಎಂದು ಹೇಳಿವೆ. ಕರ್ನಾಟಕದಲ್ಲಿ ಕಳೆದ ಅವಧಿಗಿಂತ ಕಡಿಮೆ ಸ್ಥಾನ ಬಿಜೆಪಿ ಗೆಲ್ಲಲಿದೆ. ಆದರೆ ಈ ಬಾರಿ ಬಿಜೆಪಿ ಕರ್ನಾಟಕದಲ್ಲಿ ಗೆಲ್ಲಲ್ಲಿರುವ ಸ್ಥಾನಗಳು ಎಷ್ಟು? ಎನ್ನುವುದಾದ್ರೆ 20-23 ಎಂದು ಸಮೀಕ್ಷೆಗಳು ಹೇಳಿವೆ. ಜೆಡಿಎಸ್ ಕೂಡ ಮೂರು ಸ್ಥಾನ ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ.

2024ರ ಲೋಕಸಭೆ ಚುನಾವಣೆ ಏಪ್ರಿಲ್ 19 ರಿಂದ ಜೂನ್ 1 ರವರೆಗೆ ನಡೆಯಿತು. ಹೀಗೆ ಒಟ್ಟು 543 ಲೋಕಸಭಾ ಕ್ಷೇತ್ರಗಳಿಗೆ 7 ಹಂತಗಳಲ್ಲಿ ಮತದಾನ ನಡೆಸಲಾಗಿತ್ತು. ಇಂದು ಅಂತಿಮ ಹಂತದ ಮತದಾನ ಮುಕ್ತಾಯವಾಗಿದ್ದು, ಚುನಾವಣೋತ್ತರ ಫಲಿತಾಂಶ ಹೊರಬಿದ್ದಿದೆ. ಈ ಪೈಕಿ ‘ನ್ಯೂಸ್18 ಪೋಲ್ ಹಬ್’ ಎಕ್ಸಿಟ್ ಪೋಲ್ ಪ್ರಕಾರ ಬಿಜೆಪಿಗೆ ಪ್ರಚಂಡ ಗೆಲುವು ಪಕ್ಕಾ ಆಗಿದೆ. ಅದರಲ್ಲೂ ಕರ್ನಾಟಕದಲ್ಲಿ ಬಿಜೆಪಿ 20ಕ್ಕೂ ಹೆಚ್ಚು ಸ್ಥಾನಗಳನ್ನ ಗೆದ್ದು ಬೀಗಲಿದೆ ಎಂದಿದೆ ‘ನ್ಯೂಸ್18 ಪೋಲ್ ಹಬ್’ ಎಕ್ಸಿಟ್ ಪೋಲ್ ಫಲಿತಾಂಶ.

ಬಿಜೆಪಿ ಹೈಕಮಾಂಡ್ ಮತ್ತು ಬಿ.ವೈ. ವಿಜಯೇಂದ್ರ ಅವರ ತಂತ್ರಗಾರಿಕೆ ಈಗ ಫಲ ನೀಡಿ ಬಿಜೆಪಿ ಪಕ್ಷದ ಪ್ರಚಂಡ ಗೆಲುವು ಪಕ್ಕಾ ಆಗಿದೆ. ಕರ್ನಾಟಕದಲ್ಲಿ ಬಿಜೆಪಿ & ಜೆಡಿಎಸ್ 23 ರಿಂದ 26 ಸ್ಥಾನ ಗೆಲ್ಲಬಹುದು ಎನ್ನಲಾಗಿದ್ದು, ಅದೇ ರೀತಿ ಕಾಂಗ್ರೆಸ್ ಕರ್ನಾಟಕದಲ್ಲಿ 3 ರಿಂದ 7 ಸ್ಥಾನ ಗೆಲ್ಲಬಹುದು ಎನ್ನುತ್ತಿದೆ ‘ನ್ಯೂಸ್18 ಪೋಲ್ ಹಬ್’ ಸಮೀಕ್ಷೆ.

ಕಾಂಗ್ರೆಸ್ ಗಳಿಕೆ ಕಳೆದ ಸಲಕ್ಕಿಂತ ಏರಿಕೆ, ಆದರೆ ಗರಿಷ್ಠ 8 ಸ್ಥಾನ

ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಕರ್ನಾಟಕದಲ್ಲಿ ಬಿಜೆಪಿ ಜೆಡಿಎಸ್ ಪಕ್ಷಗಳ ಎನ್‌ಡಿಎ ಮೈತ್ರಿಕೂಟ ಭರ್ಜರಿ ಜಯ ಸಾಧಿಸಲಿದೆ ಎಂದು ಹೇಳಿವೆ. ರಾಜ್ಯದ ಆಡಳಿತಾರೂಡ ಕಾಂಗ್ರೆಸ್ ಭಾರಿ ಹಿನ್ನಡೆ ಕಾಣಲಿದೆ, ಆದರೆ ಕಳೆದ ಚುನಾವಣೆಗಿಂತ ಕಾಂಗ್ರೆಸ್ ಪಕ್ಷದ ಗಳಿಕೆ ಹೆಚ್ಚಲಿದೆ ಎಂದು ಅಭಿಪ್ರಾಯ ಪಟ್ಟಿವೆ. ರಾಜ್ಯದ ಒಟ್ಟು 28 ಕ್ಷೇತ್ರಗಳಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ 23-26 ಸ್ಥಾನ ಬರಲಿದೆ. ಕಾಂಗ್ರೆಸ್ ಕೇವಲ 3-7 ಸ್ಥಾನಗಳಲ್ಲಿ ಕಾಂಗ್ರೆಸ್ ತನ್ನ ಗೆಲುವು ದಾಖಲಿಸಬಹುದು ಎಂದು ಹೇಳಿದೆ. ರಿಪಬ್ಲಿಕ್ ಟಿವಿ ಸಮೀಕ್ಷೆ ಪ್ರಕಾರ ಬಿಜೆಪಿ ಜೆಡಿಎಸ್ 22, ಕಾಂಗ್ರೆಸ್ ಆರು ಸ್ಥಾನ ಗೆಲ್ಲಲಿವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 25, ಜೆಡಿಎಸ್ 1, ಕಾಂಗ್ರೆಸ್ ಒಂದು ಹಾಗೂ ಪಕ್ಷೇತರರು ಒಂದು ಸ್ಥಾನದಲ್ಲಿ ಗೆದ್ದಿದ್ದರು.

ಕಳೆದ ಸಲಕಿಂತಲೂ ಈ ಸಲ ಹೆಚ್ಚು ಸ್ಥಾನ :

ಎಲ್ಲಾ ಏಳು ಹಂತಗಳ ಸುದೀರ್ಘ ಲೋಕಸಭಾ ಚುನಾವಣೆ ಶನಿವಾರ ಮುಗಿದಿದೆ. ಇದರ ಬೆನ್ನಲ್ಲೇ ಸತತ ಮೂರನೇ ಬಾರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಹಾಗೂ ಎನ್‌ಡಿಎ ಕೂಟಗಳು ಗೆಲುವು ಕಾಣಲಿವೆ. ಈ ಮೂಲಕ ಕೇಂದ್ರದಲ್ಲಿ ಹ್ಯಾಟ್ರಿಕ್ ಅವದಿಗೆ ಎನ್.ಡಿ.ಎ ಸರ್ಕಾರ ಪ್ರತಿಷ್ಠಾಪಿತವಾಗಲಿದೆ ಎಂದು ಬಹುತೇಕ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಈ ಸಮೀಕ್ಷೆಗಳು ನಿಜವಾಗುತ್ತವೆಯೇ ಎಂಬುದು ಜೂ.4 ರ ಮತ ಎಣಿಕೆಯಲ್ಲಿ ಸ್ಪಷ್ಟವಾಗಲಿದೆ. ಕರ್ನಾಟಕ ಉತ್ತರ ಪ್ರದೇಶ, ಬಿಹಾರ, ಗುಜರಾತ್, ಮಧ್ಯ ಪ್ರದೇಶ, ಹಿಮಾಚಲ ಪ್ರದೇಶ, ರಾಜಸ್ಥಾನದಂತ ತನ್ನ ಸಾಂಪ್ರದಾಯಿಕ ರಾಜ್ಯಗಳಲ್ಲಿ ಬಿಜೆಪಿ ಬಹುತೇಕ ಎಲ್ಲಾ ಸೀಟುಗಳಲ್ಲಿ ಕಳೆದ ಸಲದಂತೆ ಜಯಿಸಲಿದೆ. ಇದಕ್ಕೆ ಹೆಚ್ಚುವರಿಯಾಗಿ ಪ. ಬಂಗಾಳ, ಒಡಿಶಾ, ಆಂಧ್ರಪ್ರದೇಶದಂತ ತನಗೆ ಅಷ್ಟಾಗಿ ನೆಲೆ ಇಲ್ಲದ ರಾಜ್ಯಗಳಲ್ಲೂ ಬಿಜೆಪಿ ಸ್ವಂತ ಬಲದಿಂದ ಹಾಗೂ ಟಿಡಿಪಿಯಂತ ಮಿತ್ರರ ಬಲದಿಂದ ಉತ್ತಮ ಸ್ಥಾನ ಸಂಪಾದಿಸಲಿದೆ.

Categories
ರಾಜಕೀಯ ರಾಜ್ಯ

ಚುನಾವಣೆ, ಫಲಿತಾಂಶ: ಎಣ್ಣೆ ಸಿಗಲ್ಲ ಗುರೂ..!

ಚುನಾವಣೆ, ಫಲಿತಾಂಶ: ಎಣ್ಣೆ ಸಿಗಲ್ಲ ಗುರೂ..!
– ಜೂನ್ 1ರಿಂದ ಮದ್ಯ ಸಿಗಲ್ಲ: ಜೂ 4ರಿಂದ 5ರಂದು ನಿಷೇಧಾಜ್ಞೆ ಜಾರಿ
– ಏನಿದು ನಿಯಮ? ಎಲ್ಲೆಲ್ಲಿ ಜಾರಿ?

NAMMUR EXPRESS NEWS
ರಾಜ್ಯ ವಿಧಾನ ಪರಿಷತ್‌ ಚುನಾವಣೆ ಮತದಾನದ ಹಿನ್ನಲೆ ಚುನಾವಣೆ ಇರುವ ಕ್ಷೇತ್ರಗಳಲ್ಲಿ ಜೂನ್ 1ರ ಸಂಜೆ 4 ಗಂಟೆಯಿಂದ ಜೂನ್ 3ರ ಸಂಜೆ 4 ಗಂಟೆವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಜೂನ್ 3ರ ಸಂಜೆ 4ರಿಂದ ರಾತ್ರಿವರೆಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಮತ್ತೆ 4ನೇ ತಾರೀಖು ಬಂದ್ : ಲೋಕಸಭಾ ಚುನಾವಣೆ ಮತ ಎಣಿಕೆ ಹಿನ್ನಲೆ ಜೂನ್ 4ರ ಬೆಳಿಗ್ಗೆಯಿಂದ ರಾತ್ರಿ 12ರವರೆಗೆ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ.

ಜೂ 4ರಿಂದ 5ರಂದು ನಿಷೇಧಾಜ್ಞೆ ಜಾರಿ

ಸಾರ್ವತ್ರಿಕ ಲೋಕಸಭೆ ಚುನಾವಣೆ-2024ರ ಹಿನ್ನೆಲೆಯಲ್ಲಿ ಮತ ಎಣಿಕೆಯು ನಡೆಯಲಿದ್ದು, ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಸುಗಮವಾಗಿರುವಂತೆ ನೋಡಿಕೊಳ್ಳಲು ಜೂ-04 ರ ಬೆಳಗ್ಗೆ 6 ರಿಂದ ಜೂ-05 ರ ಬೆಳಗ್ಗೆ 6.00 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಿಷೇಧಾಜ್ಞೆ ಜಾರಿ ಮಾಡಿದ ಅವಧಿಯಲ್ಲಿ 5 ಜನ ಮೇಲ್ಪಟ್ಟು ಗುಂಪುಗಾರಿಕೆ ಮಾಡುವುದಾಗಲಿ, ಇತರ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಲು ಅವಕಾಶವಿರುವುದಿಲ್ಲ ಎಂದವರು ತಿಳಿಸಿದ್ದಾರೆ. ಯಾವುದೇ ಮೆರವಣಿಗೆ, ಸಭೆ, ಸಮಾರಂಭಗಳು, ವಿಜಯೋತ್ಸವ ಹಾಗೂ ಇತರೆ ಸಾರ್ವಜನಿಕ ಸಮಾವೇಶ ನಡೆಸುವಂತಿಲ್ಲ.

ಶಸ್ತ್ರ, ಕುಡುಗೋಲು, ಖಡ್ಗ, ಚೂರಿ, ಬಂದೂಕು, ಕೋಲು ಅಥವಾ ದೇಹಕ್ಕೆ ಅಪಾಯ ಉಂಟು ಮಾಡಬಹುದಾದ ಮಾರಕಾಸ್ತ್ರಗಳನ್ನು ಒಯ್ಯುವಂತಿಲ್ಲ.ಯಾವುದೇ ವಿನಾಶ ಕಾರಿ ವಸ್ತು ಇಲ್ಲವೇ ಸ್ಪೋಟಕವಸ್ತು ಒಯ್ಯತಕ್ಕುದ್ದಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಕಲ್ಲು ಅಥವಾ ಎಸೆಯುವ ವಸ್ತುಗಳ ಅಥವಾ ವಸ್ತುಗಳನ್ನು ಅಥವಾ ಚಲಿಸುವ ಅಸ್ತ್ರಗಳನ್ನು ಸಂಗ್ರಹಿಸುವುದನ್ನು, ತಯಾರಿಸುವುದನ್ನು ನಿಷೇಧಿಸಲಾಗಿದೆ. ಯಾವುದೇ ವ್ಯಕ್ತಿ ನಿಷೇಧಿಸಿರುವ ಮಾರಕಾಸ್ತ್ರ, ಸ್ಪೋಟಕ ವಸ್ತು ಗಳನ್ನು ಬಳಸುವಂತಿಲ್ಲ.

Categories
ಕೊಪ್ಪ ಚಿಕ್ಕಮಗಳೂರು

ಮೂಡುಬಿದಿರೆ, ಶೃಂಗೇರಿಯಲ್ಲಿ” ನಮ್ಮೂರ್ ಎಕ್ಸ್ ಪ್ರೆಸ್”…!

ಮೂಡುಬಿದಿರೆ, ಶೃಂಗೇರಿಯಲ್ಲಿ” ನಮ್ಮೂರ್ ಎಕ್ಸ್ ಪ್ರೆಸ್”…!
– ಕರಾವಳಿ, ಮಲೆನಾಡಿನ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸೇವೆ
– ಪೋಸ್ಟರ್ ಬಿಡುಗಡೆ ಮಾಡಿದ ಜೀವರಾಜ್, ಸರ್ಜಿ ಮತ್ತು ಗಣ್ಯರು
– ಮೂಡುಬಿದಿರೆಯಲ್ಲಿ ಹೆಮ್ಮೆಯಿಂದ ಓದುಗರ ಸ್ಪಂದನೆ

NAMMUR EXPRESS NEWS
ಶೃಂಗೇರಿ: ರಾಜ್ಯದ ಮುಂಚೂಣಿ ಹಾಗೂ ಕ್ರಿಯಾಶೀಲ ಮಾಧ್ಯಮಗಳಲ್ಲಿ ಒಂದಾದ ನಮ್ಮೂರ್ ಎಕ್ಸ್ ಪ್ರೆಸ್ 9ನೇ ವರ್ಷದ ಸಂಭ್ರಮ ಹಾಗೂ ತಾಲೂಕುವಾರು ಸೇವಾ ಪೋಸ್ಟರ್ ಅನ್ನು ಮಾಜಿ ಸಚಿವರು, ಬಿಜೆಪಿ ನಾಯಕರಾದ ಜೀವರಾಜ್, ನೈರುತ್ಯ ಪದವೀಧರ ಕ್ಷೇತ್ರದ ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಸೇರಿ ಗಣ್ಯರು ಬಿಡುಗಡೆ ಮಾಡಿದರು. ಬಿಜೆಪಿ ರಾಜ್ಯ ಪ್ರಕೋಷ್ಠಗಳ ಸಂಚಾಲಕ ದತ್ತಾತ್ರಿ, ಶಿವಮೊಗ್ಗ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಾಲ್ತೇಶ್, ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪುಣ್ಯಪಾಲ್, ಶೃಂಗೇರಿ ಮಂಡಲದ ಬಿಜೆಪಿ ಅಧ್ಯಕ್ಷರಾದ ಉಮೇಶ್ ತಲಗಾರ್, ಬಿಜೆಪಿ ರಾಜ್ಯ ಎಸ್.ಸಿ ಮೋರ್ಚಾದ ವಕ್ತಾರರು,ಸಾಹಿತಿಗಳಾದ ಡಾ.ಬಿ. ಶಿವಶಂಕರ್( ಶೃಂಗೇರಿ ಶಿವಣ್ಣ) ಶೃಂಗೇರಿ ತಾಲೂಕು ಬಿಜೆಪಿ ಪ್ರಧಾನಕಾರ್ಯದರ್ಶಿಗಳಾದ ವೇಣುಗೋಪಾಲ್,ಶೃಂಗೇರಿ ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಹರೀಶ್.ವಿ ಶೆಟ್ಟಿ, ಪದವೀಧರ ಕ್ಷೇತ್ರ ಚುನಾವಣಾ ತಾಲೂಕು ಸಂಚಾಲಕರಾದ ಶೃಂಗೇರಿ ಸುಬ್ಬಣ್ಣ ಉಪಸ್ಥಿತರಿದ್ದರು. ಎಲ್ಲಾ ಗಣ್ಯರು ಮಾಧ್ಯಮಕ್ಕೆ ಶುಭ ಕೋರಿದರು. ಈ ವೇಳೆ ಚಿಕ್ಕಮಗಳೂರು ಜಿಲ್ಲಾ ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮ ವಿಭಾಗ ಮುಖ್ಯಸ್ಥರಾದ ಸಚಿನ್ ಹಾಗೂ ಸಿಬ್ಬಂದಿ ಇದ್ದರು.

ಮೂಡುಬಿದಿರೆಯಲ್ಲಿ ನಮ್ಮೂರ್ ಎಕ್ಸ್ ಪ್ರೆಸ್ ಪೋಸ್ಟರ್ ಬಿಡುಗಡೆ

ಮೂಡುಬಿದಿರೆ: ಶಿಕ್ಷಣ ಕ್ಷೇತ್ರಕ್ಕೆ ದೇಶಕ್ಕೆ ಮಹತ್ವದ ಕೊಡುಗೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದ್ರೆಯಲ್ಲಿ ನಮ್ಮೂರ್ ಎಕ್ಸ್ ಪ್ರೆಸ್ ಪೋಸ್ಟರ್ ಬಿಡುಗಡೆ ಮಾಡಲಾಯಿತು. ನವ ಭಾರತ್ ಬೇಕರಿ ಮಾಲೀಕ ಅಶ್ವಿನ್, ರಾಜೇಶ್ ಇದ್ದರು.
ಭಾರತ್ ಆಟೋ ಕಾರ್ಸ್ ಅಲ್ಲಿ ಬಿಡುಗಡೆ ಮಾಡಿದ್ದು, ವರ್ಕ್ ಮ್ಯಾನೇಜರ್ ಚಂದ್ರಹಾಸ ಎ.ಎಸ್, ಸೇಲ್ಸ್ ಹೆಡ್ ರವಿ, ಟೀಮ್ ಲೀಡರ್ ಕಿರಣ್, ಭವ್ಯ ಡಿ.ಎಸ್, ಶ್ರೀರಕ್ಷಾ ಇದ್ದರು. ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮದ ಕರಾವಳಿ ಮಾರ್ಕೆಟಿಂಗ್ ಹೆಡ್ ಗಣೇಶ್ ಮಂಗಳೂರು ಮತ್ತು ಸಿಬ್ಬಂದಿ ಇದ್ದರು.

Categories
ತೀರ್ಥಹಳ್ಳಿ ಶಿಕ್ಷಣ

ಸೀಬಿನಕೆರೆ ಶಾಲೆಯಲ್ಲಿ ಪ್ರಾರಂಭೋತ್ಸವದ ರಂಗು!

ಸೀಬಿನಕೆರೆ ಶಾಲೆಯಲ್ಲಿ ಪ್ರಾರಂಭೋತ್ಸವದ ರಂಗು!
– ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದ ಶಿಕ್ಷಣಾಧಿಕಾರಿ ಗಣೇಶ್
– ತಾಲೂಕಿನಲ್ಲಿ ಅತಿ ಹೆಚ್ಚು ದಾಖಲಾತಿ ಹೊಂದುತ್ತಿರುವ ಸರ್ಕಾರಿ ಶಾಲೆ!
– ಆರಗ ದತ್ತು ಪಡೆದ ಶಾಲೆ: ಶಾಲಾ ಆಡಳಿತ ಮಂಡಳಿ ಉತ್ತಮ ಸೇವೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಸೀಬಿನಕೆರೆ ಸರ್ಕಾರಿ ಶಾಲೆಯಲ್ಲಿ ಪ್ರಾರಂಭೋತ್ಸವ ಕಾರ್ಯಕ್ರಮ ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಜರುಗಿತು. ತೀರ್ಥಹಳ್ಳಿ ತಾಲೂಕಿನಲ್ಲೇ ವಿಭಿನ್ನವಾಗಿ ಕಾರ್ಯಕ್ರಮ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಎಸ್ ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಸದಸ್ಯರು ಭಾಗವಹಿಸಿದ್ದರು. ಪೋಷಕರ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಣೇಶ ಅವರು ಆಗಮಿಸಿದ್ದು ಶಾಲೆಯ ಪ್ರಗತಿಯ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಹಾಗೆಯೇ ಶಾಲಾ ಅಭಿವೃದ್ಧಿಗೆ ಸದಾ ಕೈಜೋಡಿಸುವುದಾಗಿ ತಿಳಿಸಿದರು. ದೈಹಿಕ ಪರಿವೀಕ್ಷಕರಾದ ಚಂದ್ರಪ್ಪ ಕೂಡ ಉಪಸ್ಥಿತರಿದ್ದರು.

ಶಿಕ್ಷಣಾಧಿಕಾರಿ ಗಣೇಶ್ ಕೇಕ್ ಕತ್ತರಿಸುವ ಮೂಲಕ ಮಕ್ಕಳಿಗೆ ಪುಷ್ಪಾರ್ಚನೆ ಮಾಡಿ ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸಿದರು. ತಾಲೂಕಿನಲ್ಲಿ ಅತಿ ಹೆಚ್ಚು ದಾಖಲಾತಿ ಹೊಂದುತ್ತಿರುವ ಶಾಲೆಯನ್ನು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಸಾವಿತ್ರಿ, ಪಟ್ಟಣ ಪಂಚಾಯಿತಿ ಸದಸ್ಯರಾದ ದತ್ತಣ್ಣ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ರಾಮದಾಸ್ ಪ್ರಭು ಹಾಗೂ ಸದಸ್ಯರು, ಎಸ್ ಡಿ ಎಂ ಸಿ ಅಧ್ಯಕ್ಷರಾದ ರಾಜೇಶ್ ಮೊಗವೀರ್ ಹಾಗೂ ಸದಸ್ಯರು, ಚಾಮುಂಡೇಶ್ವರಿ ನಾಗರಾಜ್ ಸೇರಿ ಪೋಷಕರು, ಸ್ಥಳೀಯರು, ಸಿಬ್ಬಂದಿ ಉಪಸ್ಥಿತರಿದ್ದರು.

Categories
ತೀರ್ಥಹಳ್ಳಿ ರಾಜಕೀಯ ಶಿವಮೊಗ್ಗ

ತೀರ್ಥಹಳ್ಳಿಯಲ್ಲಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ

ತೀರ್ಥಹಳ್ಳಿಯಲ್ಲಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ
– ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಹೋರಾಟ
– ವಾಲ್ಮೀಕಿ ಅಭಿವೃದ್ಧಿ ನಿಗಮ ಹಣ ಗುಳುಂ: ಆರೋಪ

NAMMUR EXPRESS NEWS
ತೀರ್ಥಹಳ್ಳಿ: ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿಗೆ ಮೀಸಲಿಟ್ಟ 187 ಕೋಟಿ ರೂಪಾಯಿ ಹಣವನ್ನು ಪಕ್ಕದ ತೆಲಂಗಾಣ ರಾಜ್ಯಕ್ಕೆ ಚುನಾವಣೆಗೆಂದು ರಾಜ್ಯ ಸರ್ಕಾರದ ಹಣವನ್ನು ಟ್ರಾನ್ಸ್ಫರ್ ಮಾಡಲಾಗಿದೆ ಎಂದು ಆರೋಪಿಸಿತೀರ್ಥಹಳ್ಳಿಯಲ್ಲಿ ಬಿಜೆಪಿ ಯುವಮೋರ್ಚಾ ಪ್ರತಿಭಟನೆ ನಡೆಸಿತು. ಆರಗ ಜ್ಞಾನೇಂದ್ರ ಅವರು ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮ ಸೇರಿ ಯಾವ ನಿಗಮದಲ್ಲೂ ಕೂಡ ಹಣ ಇಲ್ಲದಂತ ಪರಿಸ್ಥಿತಿ ಬಂದಿದೆ. ಚಂದ್ರಶೇಖರ್ ಅವರು ಎಲ್ಲಾ ವಿಷಯ ಮತ್ತು ಸರ್ಕಾರದ ಬಗ್ಗೆ ಡೆತ್ ನೋಟ್ ಅನ್ನು ಬರೆದಿದ್ದಾರೆ. ಹಗಲಲ್ಲೇ ದರೋಡೆ ಮಾಡುತ್ತಿದೆ ಸರ್ಕಾರ,187 ಕೋಟಿ ಹಣವನ್ನು ಜಮಾ ಮಾಡಿ ನಂತರ ತೆಲಂಗಾಣ ಬ್ಯಾಂಕಿಗೆ ಇದೆ ಹಣ ಜಮಾ ಆಗಿದೆ. ಸಿದ್ದರಾಮಯ್ಯನವರು ಎಸ್ಐಟಿ ಅವರಿಗೆ ತನಿಖೆ ಮಾಡಲು ಮುಂದಾಗುತ್ತಾರೆ ಎಂದು ಆರೋಪ ಮಾಡಿದರು.

ಡೆತ್ ನೋಟ್ ನಲ್ಲಿ ಮಂತ್ರಿಗಳ ಒಪ್ಪಿಗೆಯ ಮೇಲೆ ಹಣವನ್ನು ಜಮಾ ಮಾಡಿದ್ದೇವೆ ಎಂದು ಬರೆದಿದ್ದಾರೆ. ಕಾಂಗ್ರೆಸ್ ಎಂದರೆ ಮೋಸ , ದರೋಡೆ ಮಾಡಿಕೊಂಡು ಹಣವನ್ನು ವಂಚನೆ ಮಾಡುತ್ತಿದ್ದಾರೆ ಈ ರೀತಿಯ ಸರ್ಕಾರಗಳು ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಅಗ್ರಹಿಸಿದರು.

ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ ಕುಕ್ಕೆ ಪ್ರಶಾಂತ್!

ಕುಕ್ಕೆ ಪ್ರಶಾಂತ್ ರಾಜ್ಯದಲ್ಲಿ ನಡೆಯುವ ಅವ್ಯವಹಾರಗಳ ಬಗ್ಗೆ ಸಂಪೂರ್ಣವಾಗಿ ತಿಳಿಸಿದರು. ಶಿವಮೊಗ್ಗ ಜಿಲ್ಲೆಯ 10 ಮಂಡಲಗಳಲ್ಲಿ ಇದೇ ಕಾರ್ಯಕ್ರಮವನ್ನು ಮಾಡಲಾಗುತ್ತದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಹೇಗೆ ಗ್ಯಾರೆಂಟಿಗಳನ್ನು ತಂದಿದ್ದು ಅದೇ ರೀತಿಯಲ್ಲಿ ಅಧಿಕಾರಿಗಳ ಹತ್ಯೆ ಕೂಡ ಜಾರಿಗೆ ತಂದಿದೆ. ಚಂದ್ರಶೇಖರ್ ಎನ್ನುವ ವ್ಯಕ್ತಿ ಆತ್ಮಹತ್ಯೆಯಾದ ನಂತರ, ಡೆತ್ ನೋಟ್ ನಲ್ಲಿ ಬರೆದ ಆಧಾರದ ಮೇಲೆ ಈ ಪ್ರಕರಣಗಳು ಬೆಳಕಿಗೆ ಬರುತ್ತಿವೆ . ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಧಿಕಾರಿಗಳ ತೂಗುಗತ್ತಿ ತೂಗುತ್ತಾ ಇದೆ. ಈ ರೀತಿಯ ಹೋರಾಟಗಳು ಯಾಕೆ ಮಾಡುತ್ತಿದ್ದೇವೆ ಎಂದರೆ ಒಂದು ಕಡೆ ಅನಾಚಾರ ಇನ್ನೊಂದು ಕಡೆ ಸಾವಿನ ನ್ಯಾಯ, ಲೂಟಿ ಮಾಡುತ್ತಿರುವ ಈ ರೀತಿಯ ಪಕ್ಷಗಳು ತೊಲಗಬೇಕು ಎಂಬುದು ನಮ್ಮೆಲ್ಲರ ಹೋರಾಟ. ಭ್ರಷ್ಟನಿಗೆ ನೀವೇ ಬೆಂಬಲ ಕೊಟ್ಟರೆ ಭ್ರಷ್ಟಾಚಾರ ಇನ್ನಷ್ಟು ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರದ ಸಚಿವ ಸಂಪುಟದಿಂದ ನಾಗೇಂದ್ರ ರವರನ್ನು ಕೈಬಿಡಬೇಕು, ಅವರು ರಾಜೀನಾಮೆ ಕೊಡಬೇಕು ಸರ್ಕಾರ ಈ ಪ್ರಕರಣದಲ್ಲಿ ಅಧಿಕಾರಿಗಳಿಗೆ ಕಿರುಕುಳ ಕೊಟ್ಟು ಮಾನಸಿಕ ಹಿಂಸೆ ಕೊಟ್ಟು ಶಿವಮೊಗ್ಗದಲ್ಲಿ ಒಬ್ಬ ಅಧಿಕಾರಿ ಸಾವಿಗೆ ಶರಣಾಗಿದ್ದಾರೆ ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲರಿಗೂ ಶಿಕ್ಷೆ ಆಗಬೇಕು. ಅದಷ್ಟು ಬೇಗ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತೀರ್ಥಹಳ್ಳಿಯ ಕೊಪ್ಪ ಸರ್ಕಲ್ಲಿನಲ್ಲಿ ಬಿಜೆಪಿ ಯುವ ಮೋರ್ಚಾ, ಪ್ರತಿಭಟನೆ ಮಾಡಿ ಮಾನವ ಸರಪಳಿಯ ರಚನೆ ಮಾಡಿ ರಸ್ತೆ ತಡೆದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಸಚಿವ ನಾಗೇಂದ್ರ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶವನ್ನು ಹೊರಹಾಕಿದರು.

ಕೆಲಕಾಲ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಪೊಲೀಸರು ಟ್ರಾಫಿಕ್ ಜಾಮ್ ಆಗದಂತೆ ನೋಡಿಕೊಂಡು ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಟ್ಟರು. ಪ್ರತಿಭಟನೆ ಮಾಡಿದ್ರು ಮಾನವ ಸರಪಳಿ ರಚನೆ ಮಾಡಿದರು. ಪ್ರತಿಭಟನೆಯಲ್ಲಿ ಬಿಜೆಪಿ ಪ್ರಮುಖರಾದ ಬಾಳೆಬೈಲು ರಾಘವೇಂದ್ರ, ಯುವ ಮೋರ್ಚಾ ತಾಲೂಕು ಅಧ್ಯಕ್ಷ ಸಂತೋಷ್ ದೇವಾಡಿಗ, ಸೊಪ್ಪುಗುಡ್ಡೆ ರಾಘವೇಂದ್ರ, ಜ್ಯೋತಿ ಮೋಹನ್, ಮಧುರಾಜ್ ಹೆಗ್ಡೆ, ಮಹಾಂತಗೌಡ, ಚೇತನ್ ಗಡಿಕಲ್, ಹಾಗೂ ಮಂಡಲದ ಅಧ್ಯಕ್ಷರು ಮತ್ತು ಪಕ್ಷದ ಪ್ರಮುಖರು ಉಪಸ್ಥಿತಿ ಇದ್ದರು.

Categories
ಕರಾವಳಿ ರಾಜಕೀಯ

ಕರಾವಳಿಯಲ್ಲಿ ಸರ್ಕಾರದ ವಿರುದ್ಧ ಹೋರಾಟ!

ಕರಾವಳಿಯಲ್ಲಿ ಸರ್ಕಾರದ ವಿರುದ್ಧ ಹೋರಾಟ!
– ಶರಣ್‌ ಪಂಪ್‌ವೆಲ್‌ ವಿರುದ್ಧ ಬಿ-ರಿಪೋರ್ಟ್‌ ಸಲ್ಲಿಸಲು ವಿಶ್ವ ಹಿಂದೂ ಪರಿಷತ್‌ ಅಗ್ರಹ: ಮಂಗಳೂರಿನಲ್ಲಿ ಪೊಲೀಸರ ನಡೆ ಖಂಡಿಸಿ ಪ್ರತಿಭಟನೆ
– ವಾಲ್ಮೀಕಿ ನಿಗಮದ ಅಕ್ರಮ: ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯ: ಮಂಗಳೂರಿನಲ್ಲಿ ಬಿಜೆಪಿ ಹೋರಾಟ

NAMMUR EXPRESS NEWS
ವಿಶ್ವ ಹಿಂದೂ ಪರಿಷತ್‌ ಮುಖಂಡ ಶರತ್‌ ಪಂಪ್‌ವೆಲ್‌ ಅವರ ವಿರುದ್ಧ ಸ್ವಯಂ ಪ್ರೇರಿತವಾಗಿ ದಾಖಲಿಸಿರುವ ಪ್ರಕರಣದಲ್ಲಿ ಬಿ-ರಿಪೋರ್ಟ್‌ ಸಲ್ಲಿಸಬೇಕೆಂದು ವಿಎಚ್‌ಪಿ ಮುಖಂಡ ಜಗದೀಶ ಶೇಣವ ಒತ್ತಾಯಿಸಿದ್ದಾರೆ. ರಸ್ತೆಯಲ್ಲಿ ನಮಾಜ್‌ ಮಾಡಿರುವುದನ್ನು ಪ್ರಶ್ನಿಸಿರುವುದಕ್ಕೆ ಶರಣ್‌ ಪಂಪ್‌ವೆಲ್‌ ಮೇಲೆ ಕೇಸ್‌ ದಾಖಲಿಸಿರುವುದು ಸರಿಯಲ್ಲ. ಅಷ್ಟೇಅಲ್ಲ, ನಮಾಜ್‌ ಮಾಡಿದವರ ಮೇಲೆ ಹಾಕಿದ ಕೇಸ್‌ಗೆ ಬಿ-ರಿಪೋರ್ಟ್‌ ಹಾಕಿದ ಸರ್ಕಾರದ ನಡೆ ಕೂಡ ಖಂಡನೀಯ ಎಂದು ಅವರು ಮಂಗಳೂರಿನ ಮಲ್ಲಿಕಟ್ಟೆ ವೃತ್ತದ ಬಳಿ ಆಯೋಜಿಸಲಾಗಿದ್ದ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದ್ದಾರೆ. ಪ್ರಕರಣ ದಾಖಲಾಗಿ ಒಂದೇ ದಿನದಲ್ಲಿ ಬಿರಿಪೋರ್ಟ್‌ ಹಾಕುವುದು ಹಾಗೂ ಬೆಳ್ತಂಗಡಿಯಲ್ಲಿ ಶಾಸಕರ ವಿರುದ್ಧ ಪ್ರಕರಣ ದಾಖಲಿಸಿದ ಎರಡೇ ದಿನದಲ್ಲಿ ಚಾರ್ಜ್‌ಶೀಟ್‌ ಹಾಕುವುದು ಬಹುಶಃ ಇಡೀ ದೇಶದಲ್ಲೇ ನಮ್ಮ ಜಿಲ್ಲೆಯಲ್ಲೇ ಮೊದಲು ಆಗಿರಬೇಕು. ಇಲ್ಲಿ ನ್ಯಾಯ ಕೇಳಿದವರಿಗೆ ಶಿಕ್ಷೆ. ತಪ್ಪು ಮಾಡಿದವರಿಗೆ ರಾಜ ಮರ್ಯಾದೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಹಿಂದೂ ಸಮಾಜ ಒಟ್ಟಾಗಿದೆ. ಪೊಲೀಸ್‌ ಆಯುಕ್ತರು ಹಿಂದೂ ಸಂಘಟನೆಯ ಇತಿಹಾಸವನ್ನು ಅರಿತುಕೊಳ್ಳಬೇಕು. ಹೀಗಾಗಿ, ಈ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಪ್ರೇಮಾನಂದ ಶೆಟ್ಟಿ, ಮಾನಪಾ ಸದಸ್ಯ ಕಿರಣ್‌ ಕುಮಾರ್‌ ಕೋಡಿಕಲ್‌, ಪೊಳಲಿ ಗಿರಿ ಪ್ರಕಾಶ್‌ ತಂತ್ರಿ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಾಲ್ಮೀಕಿ ನಿಗಮದ ಅಕ್ರಮ: ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯ: ಮಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಹಾಗೂ ಕೋಟ್ಯಂತರ ಹಣ ವರ್ಗಾವಣೆ ಪ್ರಕರಣ ಸಂಬಂಧ ಸಚಿವ ನಾಗೇಂದ್ರ ಅವರು ರಾಜೀನಾಮೆ ನೀಡುವಂತೆ ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಯುತ್ತಿದೆ. ಇದೀಗ ಮಂಗಳೂರಿನಲ್ಲಿಯೂ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಸಚಿವರ ತಲೆದಂಡಕ್ಕೆ ಆಗ್ರಹಿಸಿ ಪಿವಿಎಸ್‌ ವೃತ್ತದ ಬಳಿ ಪ್ರತಿಭಟನೆ ನಡೆಸಿದ್ದಾರೆ.

ಸಚಿವರು ಈ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬರುತ್ತಿದೆ. ಅಲ್ಲದೆ, ಆತ್ಮಹತ್ಯೆ ಮಾಡಿಕೊಂಡಿರುವ ಅಧೀಕ್ಷಕ ಲಕ್ಷ್ಮಿನಾರಾಯಣ ಅವರು ಕೂಡ ಡೆತ್‌ನೋಟ್‌ನಲ್ಲಿ ಹಲವಾರು ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ಅಲ್ಲದೆ, ಸಚಿವರ ಮೌಖಿಕ ಆದೇಶದ ಮೇರೆಗೆ ಕೋಟ್ಯಂತರ ಹಣವನ್ನು ಅಧಿಕಾರಿಗಳು ಬೇರೆಯವರ ಖಾತೆಗೆ ವರ್ಗಾಯಿಸಿರುವುದಾಗಿ ಹೇಳಲಾಗುತ್ತಿದೆ. ಇಷ್ಟೊಂದು ಗುರುತರ ಆರೋಪಗಳು ಕೇಳಿಬಂದ ಬಳಿಕವೂ ಜವಾಬ್ದಾರಿಯುತ ಸ್ಥಾನದಿಂದ ಕೆಳಗಿಳಿದು ತನಿಖೆ ಸಹಕರಿಸಬೇಕು. ಒಂದುವೇಳೆ ಸಚಿವ ನಾಗೇಂದ್ರ ಅವರು ರಾಜೀನಾಮೆ ನೀಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. ಇನ್ನು ಬಿಜೆಪಿ ಕಾರ್ಯಕರ್ತರು ಕೆಲಹೊತ್ತು ರಸ್ತೆ ತಡೆ ಕೂಡ ಮಾಡಿದ್ದಾರೆ. ಇದರಿಂದ ನಗರದ ಎಂಜಿ ರಸ್ತೆ ಹಾಗೂ ಸುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕೂಡ ಉಂಟಾಗಿತ್ತು.

Categories
ರಾಜಕೀಯ ರಾಜ್ಯ

ಇಂದು ಲೋಕಸಭೆಗೆ ಕೊನೆ ಮತದಾನ: ಜೂ.4ಕ್ಕೆ ಫಲಿತಾಂಶ!

ಇಂದು ಲೋಕಸಭೆಗೆ ಕೊನೆ ಮತದಾನ: ಜೂ.4ಕ್ಕೆ ಫಲಿತಾಂಶ!
– ಮೋದಿ ಸೇರಿ ಘಟಾನುಘಟಿಗಳ ಸ್ಪರ್ಧೆ
– ಯಾರು ಗೆಲ್ತಾರೆ.. ಯಾರು ಸೋಲ್ತಾರೆ..?
– ಇಂದು ಸಂಜೆ ಚುನಾವಣೊತ್ತರ ಸಮೀಕ್ಷೆ
– ನಮ್ಮೂರ್ ಎಕ್ಸ್ ಪ್ರೆಸ್ ಅಲ್ಲಿ ವೀಕ್ಷಿಸಿ… ಫಲಿತಾಂಶ

NAMMUR EXPRESS NEWS
ನವದೆಹಲಿ : ಲೋಕಸಭೆ ಚುಣಾವಣೆಯ 7 ಮತ್ತು ಅಂತಿಮ ಹಂತದ ಮತದಾನ ಜೂ.1 ರ ಇಂದು ನಡೆಯಲಿದ್ದು, ಇದರೊಂದಿಗೆ 2 ತಿಂಗಳಿಂದ ನಡೆಯುತ್ತಿದ್ದ ಮತದಾನ ಪ್ರಕ್ರಿಯೆಗೆ ತೆರೆ ಬೀಳಲಿದೆ.
ಲೋಕಸಭೆ ಚುನಾವಣೆಯ ಅಂತಿಮ ಹಂತದ ಮತದಾನವು 8 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ 57 ಲೋಕಸಬಾ ಕ್ಷೇತ್ರಗಳಲ್ಲಿ 904 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ಏಳನೇ ಹಂತದಲ್ಲಿ ಪಂಜಾಬ್ ನ ಎಲ್ಲಾ 13, ಹಿಮಾಚಲ ಪ್ರದೇಶದ 4, ಪಶ್ಚಿಮ ಬಂಗಾಳದ 9, ಬಿಹಾರದ 8, ಒಡಿಶಾದ 6, ಜಾರ್ಖಂಡ್ನ 3 ಮತ್ತು ಚಂಡೀಗಢದ 1 ಸ್ಥಾನಗಳಿಗೆ ಮತದಾನ ನಡೆಯಲಿದೆ.

ವಾರಣಾಸಿ ಸೇರಿದಂತೆ ಉತ್ತರ ಪ್ರದೇಶದ 11 ಜಿಲ್ಲೆಗಳ 13 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ಗೋರಖ್ಪುರದಿಂದ ಭೋಜ್ಪುರಿ ನಟ ರವಿ ಕಿಶನ್ ಮತ್ತು ಮಿರ್ಜಾಪುರದಿಂದ ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಪುತ್ರ ನೀರಜ್ ಶೇಖರ್ ಕಣದಲ್ಲಿದ್ದಾರೆ.
ಹಿಮಾಚಲ ಪ್ರದೇಶದ 6 ಸ್ಥಾನಗಳಿಗೆ ಉಪಚುನಾವಣೆ
ಕೊನೆಯ ಹಂತದಲ್ಲಿ, ಒಡಿಶಾ ವಿಧಾನಸಭೆಯ ಉಳಿದ 42 ಸ್ಥಾನಗಳಲ್ಲದೆ, ಹಿಮಾಚಲ ವಿಧಾನಸಭೆಯ ಆರು ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅನುರಾಗ್ ಠಾಕೂರ್, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ, ನಟಿ ಕಂಗನಾ ರನೌತ್ ಮತ್ತು ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ಮಿಸಾ ಭಾರತಿ ಅವರ ಭವಿಷ್ಯ ಕೊನೆಯ ಹಂತದಲ್ಲಿ ನಿರ್ಧಾರವಾಗಲಿದೆ. ಈ ಹಂತದಲ್ಲಿ ಒಟ್ಟು 10.06 ಕೋಟಿ ಮತದಾರರು 904 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.

ಲೋಕಸಭಾ ಚುನಾವಣೆಯ ಏಳನೇ ಮತ್ತು ಅಂತಿಮ ಹಂತದಲ್ಲಿ, ಉತ್ತರ ಪ್ರದೇಶದ 13 ಕ್ಷೇತ್ರಗಳು ಸೇರಿದಂತೆ ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 57 ಸ್ಥಾನಗಳಿಗೆ ಶನಿವಾರ ಮತದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಇದರೊಂದಿಗೆ, ಏಪ್ರಿಲ್ 19 ರಂದು ಪ್ರಾರಂಭವಾದ 543 ಸ್ಥಾನಗಳಿಗೆ ಏಳು ಹಂತಗಳ ಮ್ಯಾರಥಾನ್ ಮತದಾನ ಪ್ರಕ್ರಿಯೆ ಕೊನೆಗೊಳ್ಳಲಿದೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಹೊರಬೀಳಲಿದೆ.

ಲೋಕಸಭಾ ಚುನಾವಣೆಯ ಫಲಿತಾಂಶ
ಕ್ಷಣ ಕ್ಷಣದ ಮಾಹಿತಿ
ಯಾರು ಗೆದ್ದರು? ಯಾರು ಸೋತರು?
ಸಂಪೂರ್ಣ ಫಲಿತಾಂಶ ವೀಕ್ಷಿಸಿ

nammurexpress.in

ಯೂಟ್ಯೂಬ್, ಫೇಸ್ ಬುಕ್, ವೆಬ್ ಸೈಟ್

Categories
ರಾಜಕೀಯ ರಾಜ್ಯ ಹಾಸನ

ರೇಪ್ ಮಾಡಿಲ್ಲ ಎಂದ ಪ್ರಜ್ವಲ್‌ ರೇವಣ್ಣ!

ರೇಪ್ ಮಾಡಿಲ್ಲ ಎಂದ ಪ್ರಜ್ವಲ್‌ ರೇವಣ್ಣ!
– ಪ್ರಜ್ವಲ್‌ ಮೊಬೈಲ್‌ ಮಂಗಮಾಯ: ಠಾಣೆಯಲ್ಲಿ ದೂರು ದಾಖಲು
– 6 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಪ್ರಜ್ವಲ್
– ಜಡ್ಜ್ ಎದುರು ಟಾಯ್ಲೆಟ್ ಬಗ್ಗೆ ಹೇಳಿಕೊಂಡ ಪ್ರಜ್ವಲ್!

NAMMUR EXPRESS NEWS
ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಇಡೀ ದಿನ ಕೋರ್ಟ್‌ ಹಾಗೂ ವೈದ್ಯಕೀಯ ಪರೀಕ್ಷೆಗಳ ನಡುವೆ ಸಮಯ ಕಳೆದರು. ಈ ನಡುವೆ ಎಸ್‌ಐಟಿ ಹಲವಾರು ಪ್ರಶ್ನೆಗಳ ಮೂಲಕ ಗ್ರಿಲ್‌ ಮಾಡಿದ್ದು, ಅದರಲ್ಲಿ ಮುಖ್ಯವಾದುದು ಅವರು ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿಕೊಂಡ ಮೊಬೈಲ್‌ ಎಲ್ಲಿದೆ ಎಂಬುದಾಗಿತ್ತು. ಈ ಸಂದರ್ಭದಲ್ಲಿ ಪ್ರಜ್ವಲ್‌ ರೇವಣ್ಣ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದು, ತಮ್ಮ ಮೊಬೈಲ್‌ ಕಳೆದುಹೋಗಿದೆ ಎಂದಿದ್ದಾರೆ. ತಮ್ಮ ಮೊಬೈಲ್‌ ಒಂದು ವರ್ಷದ ಹಿಂದೆಯೇ ಕಳೆದುಹೋಗಿದ್ದು, ಆ ಕುರಿತು ಹೊಳೆನರಸೀಪುರ ಠಾಣೆಯಲ್ಲಿ ಮೊಬೈಲ್ ಕಳ್ಳತನದ ಬಗ್ಗೆ ದೂರು ನೀಡಿರುವುದಾಗಿಯೂ ಹೇಳಿದ್ದಾರೆ.

ಪ್ರಜ್ವಲ್‌ ಅವರ ವಿಚಾರಣೆ ಮಾಡಿ 161 ಹೇಳಿಕೆಯನ್ನು ಎಸ್‌ಐಟಿ ದಾಖಲಿಸಿದೆ. ಅದರಲ್ಲಿ ಮೊಬೈಲ್‌ ಕುರಿತು ದಾಖಲಿಸಿದೆ. ನೀವು ಹೇಳುತ್ತಿರುವ ಮೊಬೈಲ್ ನನ್ನ ಬಳಿ ಇಲ್ಲ. ಕಳೆದ ವರ್ಷವೇ ಫೋನ್ ಕಳೆದು ಹೋಗಿದ್ದು, ಆ ಬಗ್ಗೆ ಹೊಳೆನರಸೀಪುರ ಠಾಣೆಯಲ್ಲಿ ದೂರು ಕೂಡ ನೀಡಿದ್ದೇನೆ ಎಂದು ಪ್ರಜ್ವಲ್‌ ಹೇಳಿದ್ದಾರೆ. ಈ ಹೇಳಿಕೆ ಸತ್ಯಾಸತ್ಯತೆಯನ್ನು ಎಸ್‌ಐಟಿ ಪರಿಶೀಲಿಸಲಿದೆ. ನೀವು ತೋರಿಸಿರುವ ವಿಡಿಯೋಗಳಲ್ಲಿ ಇರುವುದು ನಾನಲ್ಲ. ಅವರೆಲ್ಲ ನನಗೆ ಪರಿಚಯ ಅಷ್ಟೇ. ನಾನು ಯಾರನ್ನೂ ಅತ್ಯಾಚಾರ ಮಾಡಿಲ್ಲ. ಅತ್ಯಾಚಾರ ಆರೋಪಗಳಿಗೂ ನನಗೂ ಯಾವ ಸಂಬಂಧವೂ ಇಲ್ಲ. ವಿಡಿಯೋಗಳ ಬಗ್ಗೆ ನಂಗಷ್ಟು ಗೊತ್ತಿಲ್ಲ ಎಂದು ಪ್ರಜ್ವಲ್‌ ಹೇಳಿದ್ದಾರೆ. ವೈರಲ್ ಆಗಿರುವ ವಿಡಿಯೋಗಳನ್ನು ತೋರಿಸಿ ಪ್ರಶ್ನಿಸಿದಾಗ ಈ ಉತ್ತರ ದೊರೆತಿದೆ. ತನ್ನ ಮೇಲಿರುವ ಎಲ್ಲ ಆರೋಪಗಳನ್ನು ಪ್ರಜ್ವಲ್‌ ತಳ್ಳಿ ಹಾಕಿದ್ದಾರೆ.

ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿಕೊಂಡಿರುವ ಮೊಬೈಲ್‌ ಪ್ರಜ್ವಲ್‌ ವಿರುದ್ಧದ ಪ್ರಕರಣದಲ್ಲಿ ಪ್ರಬಲವಾದ ಸಾಕ್ಷ್ಯವಾಗಿದೆ. ಈ ಮೊಬೈಲ್‌ ಸಿಕ್ಕಿದರೆ, ಒಂದು ವೇಳೆ ವಿಡಿಯೋಗಳನ್ನು ಅಳಿಸಿದ್ದರೂ ಅದರಿಂದ ರಿಟ್ರೀವ್‌ ಮಾಡಬಹುದು. ಆದರೆ ಮೊಬೈಲ್‌ ಸಂಪೂರ್ಣ ನಾಶವಾಗಿದ್ದರೆ, ಯಾವುದೇ ಮೂಲ ರೆಕಾರ್ಡ್‌ಗಳು ಸಿಗಲಾರದು. ಅದರಿಂದ ಫಾರ್‌ವರ್ಡ್‌ ಆಗಿರುವ ವಿಡಿಯೋಗಳು ಸೆಕೆಂಡರಿ ಸಾಕ್ಷ್ಯಗಳೆನಿಸಿಕೊಳ್ಳುತ್ತವೆ. ಹೀಗಾಗಿ ಮೊಬೈಲ್‌ ಪಡೆಯಲು ಎಸ್‌ಐಟಿ ಪ್ರಯತ್ನ ನಡೆಸಬೇಕಿದೆ.

– 6 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಪ್ರಜ್ವಲ್

ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಅವರನ್ನು 6 ದಿನಗಳ ಕಾಲ ಎಸ್​ಐಟಿ ಪೊಲೀಸರ ಕಸ್ಟಡಿಗೆ ನೀಡಲಾಗಿದೆ. ಎಸಿಎಮ್​ಎಮ್​​ ನ್ಯಾಯಾಲಯದ ನ್ಯಾಯಧೀಶ ಎನ್​. ಶಿವಕುಮಾರ್​​ ಈ ಆದೇಶ ಹೊರಡಿಸಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಜ್ವಲ್​ ರೇವಣ್ಣ ಅವರನ್ನು ಬಂಧಿಸಿದ್ದ ಎಸ್​ಐಟಿ ಪೊಲೀಸರು ಶುಕ್ರವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಗಂಭೀರ ಆರೋಪಗಳನ್ನು ಹೊತ್ತಿರುವ ಅವರ ತನಿಖೆಗಾಗಿ ಎಸ್​ಐಟಿ ತನ್ನ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಅದನ್ನು ನ್ಯಾಯಾಧೀಶರು ಪುರಸ್ಕರಿಸಿದ್ದಾರೆ. ಬೆಂಗಳೂರಿನ 42ನೇ ಎಸಿಎಮ್​ಸಿ ನ್ಯಾಯಾಲಯ ಈ ಆದೇಶ ಹೊರಡಿಸಿದ್ದು ಪ್ರಜ್ವಲ್ ಅವರಿಗೆ ಯಾವುದೇ ಕಿರಕುಗಳ ನೀಡಬಾರದು ಎಂದು ಎಸ್​ಐಟಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇದೇ ವೇಳೆ ವೈದ್ಯಕೀಯ ಪರೀಕ್ಷೆ ಸೇರಿದಂತೆ ತನಿಖೆಗೆ ಎಲ್ಲ ರೀತಿಯಲ್ಲೂ ಸಹಕಾರ ನೀಡುವಂತೆ ಪ್ರಜ್ವಲ್ ರೇವಣ್ಣ ಅವರಿಗೂ ಸೂಚನೆ ನೀಡಿದ್ದಾರೆ. ಎಸ್ಐಟಿ ಅಧಿಕಾರಿಗಳು ಶುಕ್ರವಾರ ಸೇರಿದಂತೆ ಒಟ್ಟು 15 ದಿನಗಳ ಕಾಲ ತಮ್ಮ ಕಸ್ಟಡಿಗೆ ನೀಡುವಂತೆ ಕೋರಿದ್ದರು. ಆದರೆ, ಪ್ರಜ್ವಲ್ ಪರ ವಕೀಲರು 1 ದಿನ ಸಾಕು ಎಂದು ವಾದಿಸಿದ್ದರು. ಆದರೆ, ನ್ಯಾಯಾಧೀಶರು 6 ದಿನಗಳನ್ನು ಮಾನ್ಯ ಮಾಡಿದ್ದಾರೆ. ಗುರುವಾರ ರಾತ್ರಿ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿದ್ದ ಪೊಲೀಸರು ಬೆಳಗ್ಗೆ ತನಕ ಎಸ್​ಐಟಿ ಕಚೇರಿಯಲ್ಲೇ ವಿಶ್ರಾಂತಿ ಪಡೆಯಲು ಅನುಕೂಲ ಮಾಡಿಕೊಟ್ಟಿದ್ದರು. ಬೆಳಗ್ಗೆ ಅವರ ವೈದ್ಯಕೀಯ ಪರೀಕ್ಷೆ ನಡೆಸಿ ಬಳಿಕ ಅವರಿಂದ ಅಗತ್ಯ ದಾಖಲೆಗಳಿಗೆ ಸಹಿ ಮಾಡಿಕೊಂಡರು. ಆ ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.‌

ಶೌಚಾಲಯ ಗಬ್ಬು ವಾಸನೆ ಬರುತ್ತೆ: ಜಡ್ಜ್ ಮುಂದೆ ಪ್ರಜ್ವಲ್ ಅಳಲು !

ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಎಸ್ ಐಟಿ ಅಧಿಕಾರಿಗಳು ಕೋರ್ಟ್ಗೆ ಹಾಜರು ಪಡಿಸಿದ್ದಾರೆ. 3 ಗಂಟೆಗೆ ಹಾಜರು ಪಡಿಸಲು ಸೂಚಿಸಿದ್ದ ನ್ಯಾಯಾಲಯದ ಆದೇಶದ ಮೇರೆಗೆ ಕೋರ್ಟ್ ಮುಂದೆ ಹಾಜರು ಪಡಿಸಲಾಗಿದೆ. ಈ ಸಂದರ್ಭದಲ್ಲಿ ನ್ಯಾಯಾದೀಶರು ಪ್ರಜ್ವಲ್ ರೇವಣ್ಣರನ್ನ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಮೊದಲಿಗೆ ನಿಮ್ಮ ಹೆಸರೇನು ಎಂದು ಪ್ರಜ್ವಲ್ ಗೆ ಜಡ್ಜ್ ಪ್ರಶ್ನೆ ಕೇಳಿದ್ದಾರೆ. ನಂತರ ಎಲ್ಲಿ ನಿಮ್ಮನ್ನ ವಶಕ್ಕೆ ಪಡೆಯಲಾಯಿತು ಎಂದು ಕೇಳಿದ್ದಾರೆ. ಕೆಂಪೇಗೌಡ ಏರ್ ಪೋರ್ಡ್ ನಲ್ಲಿ ನನ್ನ ವಶಕ್ಕೆ ಪಡೆದ್ರು ಎಂದು ಪ್ರಜ್ವಲ್ ಹೇಳಿದ್ದಾರೆ.

ನಂತರ ನಿಮ್ಮ ಮನೆಗೆ ತಿಳಿಸಿದ್ದರಾ ಎಂದಾಗ ನಮ್ಮ ತಂದೆಗೆ ಹೇಳಲು ಹೇಳಿದೆ ಎಂದಿರುವ ಪ್ರಜ್ವಲ್ , ಏನಾದ್ರೂ ಟಾರ್ಚರ್ ಆಯ್ತಾ ಎಂದು ಜಡ್ಜ್ ಕೇಳಿದಾಗ, ಇಲ್ಲ ಟಾರ್ಚರ್ ಏನು ಆಗಿಲ್ಲ, ಆದರೆ ಎಸ್‌ಐಟಿ ಕಛೇರಿಯ ಶೌಚಾಲಯದ ಬಗ್ಗೆ ಪ್ರಜ್ವಲ್ ಅಳಲು ತೋಡಿಕೊಂಡಿದ್ದಾರೆ. ಶೌಚಾಲಯ ತುಂಬಾ ವಾಸನೆ ಬರುತ್ತದೆ ಎಂದು ಹೇಳಿದ್ದಾರೆ. ಈ ವೇಳೆ ಅಲ್ಲೇ ಇದ್ದ ಕೆಲವರು ನಗಲು ಆರಂಭಿಸಿದ್ರು. ಇದನ್ನ ಗಮನಿಸಿದ ಜಡ್ಜ್ ಎಲ್ಲರೂ ಸುಮ್ಮನಿರುವಂತೆ ಸೂಚಿಸಿರುವ ಘಟನೆ ನಡೆದಿದೆ.