Categories
ಬೆಂಗಳೂರು

ಇನ್ನು ಮದ್ಯ ದರ ಇಳಿಕೆ!

ಇನ್ನು ಮದ್ಯ ದರ ಇಳಿಕೆ!
– ಸೆಪ್ಟೆಂಬರ್ 1 ರಿಂದ ರಾಜ್ಯದಲ್ಲಿ ಮದ್ಯದ ದರ ಇಳಿಕೆ
– ಶೀಘ್ರದಲ್ಲಿ ಹೊಸ ದರ ಬಿಡುಗಡೆ ಸಾಧ್ಯತೆ

ಬೆಂಗಳೂರು: ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ರಾಜ್ಯದಲ್ಲಿ ಸೆಪ್ಟೆಂಬರ್ 1 ರಿಂದ ದುಬಾರಿ ಮದ್ಯವನ್ನು ಅಗ್ಗದ ದರದಲ್ಲಿ ನೀಡಲು ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
ಅಬಕಾರಿ ಆದಾಯ ಹೆಚ್ಚಿಸಲು ಮದ್ಯದ ದರ ಇಳಿಕೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಸೆಪ್ಟೆಂಬರ್ 1 ರಿಂದ ರಾಜ್ಯದಲ್ಲಿ ಮದ್ಯದ ದರ ಇಳಿಕೆಯಾಗಲಿದೆ. ದರ ಇಳಿಕೆ ಮಾಡುವಂತೆ ಅಬಕಾರಿ ಇಲಾಖೆಗೆ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಜುಲೈ1 ರಿಂದ ಮದ್ಯ ದರ ಇಳಿಕೆಗೆ ಅಬಕಾರಿ ಇಲಾಖೆ ಮುಂದಾಗಿತ್ತು. ಆದ್ರೆ ಮದ್ಯ ಉತ್ಪಾದಕರು ಹಾಗೂ ಅಬಕಾರಿ ಇಲಾಖೆ ನಡುವಿನ ಸಂಘರ್ಷದಿಂದ ದರ ಇಳಿಕೆ ಮಾಡಿರಲಿಲ್ಲ. ಆದರೆ ಇದೀಗ ಮದ್ಯದ ದರ ಇಳಿಕೆಗೆ ಅನುಮತಿ ಸಿಕ್ಕಿದೆ.
ಸೆಪ್ಟೆಂಬರ್ 1 ರಿಂದ ರಾಜ್ಯದಲ್ಲಿ ದುಬಾರಿ ಮದ್ಯ ಕಡಿಮೆ ಬೆಲೆಗೆ ಸಿಗಲಿದೆ. ದುಬಾರಿ ಬೆಲೆಯ ಬ್ರಾಂದಿ, ವಿಸ್ಕಿ ಜಿನ್, ರಮ್ ಆಗಸ್ಟ್ ರಿಂದ ಅಗ್ಗವಾಗಲಿದೆ. ಪ್ರತಿ ಬ್ಯಾಂಡ್ ಮದ್ಯದ ಪರಿಷ್ಕೃತ ದರ ಶೀಘ್ರದಲ್ಲಿ ಬಿಡುಗಡೆಯಾಗುವ ಸಂಭವವಿದೆ.

Categories
ತೀರ್ಥಹಳ್ಳಿ

ಶಿವಮೊಗ್ಗ ಜಿಲ್ಲೆಯಲ್ಲಿ ಪತ್ರಕರ್ತರ ದೂರು!

ಶಿವಮೊಗ್ಗ ಜಿಲ್ಲೆಯಲ್ಲಿ ಪತ್ರಕರ್ತರ ದೂರು!
– ತೀರ್ಥಹಳ್ಳಿ ಪತ್ರಕರ್ತನ ಮೇಲೆ ದರ್ಪಕ್ಕೆ ಖಂಡನೆ
– ಪೊಲೀಸ್ ಅಧಿಕಾರಿ ವಿರುದ್ಧ ಎಸ್ಪಿ, ಡಿಸಿಗೆ ದೂರು

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಪತ್ರಕರ್ತನಿಗೆ ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿದ ಪೊಲೀಸ್‌ ಅಧಿಕಾರಿ ವಿರುದ್ಧ ಶಿವಮೊಗ್ಗದ ಜಿಲ್ಲಾ ಪತ್ರಿಕೋದ್ಯಮ ದೂರು ನೀಡಿದೆ.
ತೀರ್ಥಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ಅಶ್ವಥ್ ಗೌಡ ಅವರ ಉದ್ದಟತನ ಖಂಡಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಶಾಖೆ, ಶಿವಮೊಗ್ಗ ಪ್ರೆಸ್ ಟ್ರಸ್ಟ್ ಎಸ್ಪಿ ಹಾಗೂ ಡಿಸಿಗೆ ದೂರು ನೀಡಿದೆ.
ತೀರ್ಥಹಳ್ಳಿಯಲ್ಲಿ ಪ್ರಜಾವಾಣಿ ವರದಿಗಾರ ನಿರಂಜನ್ ಅವರು ವರದಿಗಾಗಿ ರಥಬೀದಿಯಲ್ಲಿ ಪೋಟೋ, ವಿಡಿಯೋ ತೆಗೆಯುವಾಗ ಇಲ್ಲಿನ ಪೊಲೀಸ್ ಇನ್ಸ್ ಪೆಕ್ಟರ್ ಅಶ್ವಥ್ ಗೌಡ ಬಲವಂತವಾಗಿ ಪತ್ರಕರ್ತ ನಿರಂಜನ್ ಅವರಿಂದ ಮೊಬೈಲ್ ಕಿತ್ತುಕೊಂಡು ಠಾಣೆಗೆ ಹೋಗಿರುತ್ತಾರೆ.
ಮೊಬೈಲ್ ಪಡೆಯಲು ಠಾಣೆಗೆ ಹೋದ ನಿರಂಜನ್ ಅವರನ್ನು ಇನ್ಸ್ಪೆಕ್ಟರ್ ಅಶ್ವಥ್ ಗೌಡ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಸುಳ್ಳು ಕೇಸು ಹಾಕಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದನ್ನು ಪ್ರಶ್ನಿಸಿದ ಇತರೆ ಪತ್ರಕರ್ತರ ಜೊತೆಗೂ ಉದ್ದಟತನದಿಂದ ವರ್ತಿಸಿದ್ದಾರೆ ಎಂದು ಆರೋಪಿಸಿದ್ದು, ಮಾಧ್ಯಮ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮಾಡಿದ್ದಾರೆ. ಪೊಲೀಸ್ ಅಧಿಕಾರಿಯ ಈ ವರ್ತನೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಜಿಲ್ಲಾ ಶಾಖೆ, ಶಿವಮೊಗ್ಗ ಪ್ರೆಸ್ ಟ್ರಸ್ಟ್ ತೀವ್ರವಾಗಿ ಖಂಡಿಸಿದೆ.
ಸಂಘದ ಜಿಲ್ಲಾಧ್ಯಕ್ಷರಾದ ಕೆ ವಿ ಶಿವಕುಮಾರ್, ರಾಜ್ಯ ಸಮಿತಿ ನಿರ್ದೇಶಕ ಎನ್. ರವಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ. ಟಿ.ಅರುಣ್, ಶಿವಮೊಗ್ಗ ಪ್ರೆಸ್ ಟ್ರಸ್ಟ್ ನ ಅಧ್ಯಕ್ಷರಾದ ಎನ್. ಮಂಜುನಾಥ್, ಕಾರ್ಯದರ್ಶಿ ನಾಗರಾಜ ನೆರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಟ್ರಸ್ಟ್‌ ಅಧ್ಯಕ್ಷ ಎನ್.ಮಂಜುನಾಥ್‌, ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಶಿವಕುಮಾರ್‌, ಹಿರಿಯ ಪತ್ರಕರ್ತರಾದ ನಾಗರಾಜ್‌ ನೇರಿಗೆ ,ವೈದ್ಯನಾಥ್‌, ಎನ್‌.ರವಿಕುಮಾರ್‌,ಪಿ. ಜೇಸುದಾಸ್‌, ಗಿರೀಶ್‌ ಉಮ್ರಾಯ್‌, ಹೊನ್ನಾಳಿ ಚಂದ್ರಶೇಖರ್‌, ಶೃಂಗೇರಿ ಚಂದ್ರಶೇಖರ್‌, ಆರಗ ರವಿ, ವಿ.ಸಿ.ಪ್ರಸನ್ನ, ವೆಂಕಟೇಶ್‌ ಜಿ.ಹೆಚ್‌, ಶಿವಮೊಗ್ಗನಂದನ್‌, ಶಿವಾನಂದ ಕರ್ಕಿ, ಟಿ.ಕೆ.ರಮೇಶ್‌ ಶೆಟ್ಟಿ, ಕೆ.ಎಸ್.‌ಹುಚ್ಚರಾಯಪ್ಪ, ವಿ.ಟಿ.ಅರುಣ್‌, ಆರ್.ಎಸ್‌. ಹಾಲಸ್ವಾಮಿ, ಮೋಹನ್‌ ಶೆಟ್ಟಿ, ಮುರುಗರಾಜ ಕೋಣಂದೂರು, ನವೀನ್‌ ಪುರದಾಳ್‌, ವಿನಯ್‌ ತೇಕಲೆ, ಎಸ್‌.ಕೆ.ಗಜೇಂದ್ರ ಸ್ವಾಮಿ ಸೇರಿದಂತೆ ಅನೇಕ ಪತ್ರಕರ್ತರು ಭಾಗವಹಿಸಿದ್ದರು.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಕೋಣಂದೂರು ಬಳಿ ಯೋಧನಿಗೆ ಅವಮಾನ!?

ತೀರ್ಥಹಳ್ಳಿ ಕೋಣಂದೂರು ಬಳಿ ಯೋಧನಿಗೆ ಅವಮಾನ!?
– ಭಾವಚಿತ್ರ, ಅವರ ಮನೆಗೆ ಹೋಗುವ ಬೋರ್ಡ್ ವಿರೂಪ
– ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು

NAMMUR EXPRESS NEWS
ತೀರ್ಥಹಳ್ಳಿ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರೊಬ್ಬರ ಭಾವಚಿತ್ರ ಹಾಗೂ ಅವರ ಮನೆಗೆ ಹೋಗುವ ಬೋರ್ಡ್ ವಿರೂಪಗೊಳಿಸುವುದರ ಜತೆಗೆ ಸೈನಿಕರ ಮನೆಗೆ ಹೋಗುವ ಬೋರ್ಡ್ ನಾಶ ಪಡಿಸಿದ ಘಟನೆ ತೀರ್ಥಹಳ್ಳಿ ತಾಲೂಕಿನ ಗುಡ್ಡೆಕೋಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಣಕನಗದ್ದೆಯಲ್ಲಿ ನಡೆದಿದೆ. ಈ ಘಟನೆ ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಗುಡ್ಡೆಕೋಪ್ಪ ಗ್ರಾಮದ ಪ್ರವೀಣ್ ಎಂಬ ಯೋಧ ಪ್ಯಾರಮಿಲಿಟರಿಯಲ್ಲಿ ಕಳೆದ 20 ವರ್ಷಗಳಿಂದ ಸೇವೆ ಮಾಡುತ್ತಿದ್ದರು. ಇವರ ಮನೆ ಆರಣ್ಯಭಾಗದಲ್ಲಿ ಒಂಟಿ ಮನೆ, ತನ್ ಸ್ನೇಹಿತರು ಬಂದು ಬಳಗದವರಿಗೆ ಮನೆಗೆ ಬರಲು ಸಹಾಯವಾಗಲೆಂದು ಪಂಚಾಯಿತಿ ಆಡಳಿತ ಹಿಂದಿನ ವರ್ಷ ಯೋಧನ ಮನೆಗೆ ಹೋಗುವ ದಾರಿಯೆಂದು ಒಂದು ನಾಮಪಲಕದ ಬೋರ್ಡ್ ಗುಡ್ಡೆಕೋಪ್ಪ ಹೊದಲ ಹೋಗುವ ಮಾರ್ಗದಲ್ಲಿ ಆಳಡಿಸಲಾಗಿತ್ತು. ಆದರೆ ಬುಧವಾರ ತಡರಾತ್ರಿ ಆ ಬೋರ್ಡ್ ನ್ನ ಕೆಲವು ವಿಕೃತ ಮನಸ್ಸಿನ ಕಿಡಿಗೇಡಿಗಳು ತುಂಡು ಮಾಡಿ ಸೈನಿಕನ ಘನತೆಗೆ ಧಕ್ಕೆ ಮಾಡಿ ಅವಮಾನ ಮಾಡಲಾಗಿದೆ.
ಕೋಣಂದೂರು ಗ್ರಾಮ ಪಂಚಾಯತ್ ಆಡಳಿತದ ವತಿಯಿಂದ ಪಿಡಿಓ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Categories
ಜ್ಯೋತಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಮಹಾಲಕ್ಷ್ಮಿ ಕೃಪೆಯಿಂದ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ನಿಮಗೆ ಕುಟುಂಬ ಮತ್ತು ಸ್ನೇಹಿತರ ಬೆಂಬಲ ಸಿಗಲಿದೆ. ವ್ಯಾಪಾರದಲ್ಲಿ ಬೆಳವಣಿಗೆಗೆ ಹೊಸ ಅವಕಾಶಗಳಿವೆ. ನಿಮ್ಮ ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಲಾಭ ಸಿಗಬಹುದು. ದೀರ್ಘಕಾಲದ ಸಮಸ್ಯೆಗಳು ದೂರವಾಗುತ್ತವೆ. ಆಡಳಿತ ಪಕ್ಷದಿಂದ ನಿಮಗೆ ಬೆಂಬಲ ಸಿಗಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಸಂಪತ್ತು ಮತ್ತು ಸಂತೋಷದಲ್ಲಿ ಹೆಚ್ಚಳವಾಗುತ್ತದೆ.

** ವೃಷಭ ರಾಶಿ :
ನಿಮ್ಮ ಮನಸ್ಸು ಗೊಂದಲದಲ್ಲಿ ಉಳಿಯುತ್ತದೆ. ತಾಳ್ಮೆಯನ್ನು ಕಾಪಾಡಿಕೊಳ್ಳಿ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಕುಟುಂಬದ ಸದಸ್ಯರ ಆರೋಗ್ಯದ ಕಡೆ ಗಮನ ಕೊಡಿ. ನಿಮ್ಮ ಜೀವನ ಅಸ್ತವ್ಯ್ತವಾಗಲ ಬಿಡಬೇಡಿ. ಕೆಲಸದ ಸ್ಥಳದಲ್ಲಿ ಆತ್ಮವಿಶ್ವಾಸದಿಂದ ಹೊಸ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತೀರಿ. ಅಧಿಕ ಖರ್ಚು ಇರುತ್ತದೆ. ಭೂಮಿ ಅಥವಾ ವಾಹನವನ್ನು ಖರೀದಿಸುವ ಅವಕಾಶವಿರುತ್ತದೆ. ಸ್ನೇಹಿತರು ನಿಮಗೆ ಸಹಾಯ ಮಾಡಲಿದ್ದಾರೆ.

** ಮಿಥುನ ರಾಶಿ
ನಿಮ್ಮ ಮನಸ್ಸು ಶಾಂತವಾಗಿ ಉಳಿಯುತ್ತದೆ. ವ್ಯವಹಾರದಲ್ಲಿ ಪ್ರಗತಿಗೆ ಅವಕಾಶಗಳಿವೆ, ಆದರೆ ನಿಮ್ಮ ಕೆಲಸದಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳನ್ನು ಆಯೋಜಿಸಬಹುದು. ಹಣದ ಒಳಹರಿವು ಹೆಚ್ಚಾಗುತ್ತದೆ, ಅಷ್ಟೇ ಖರ್ಚುಗಳು ಸಹ ಇರುತ್ತದೆ. ಭರವಸೆ ಮತ್ತು ಹತಾಶೆಯ ಭಾವನೆ ಇರಬಹುದು. ತಾಯಿಯ ಆರೋಗ್ಯದ ಕಡೆ ಗಮನ ಕೊಡಿ. ಕೆಲಸದ ಮೂಲಕ ಆರ್ಥಿಕ ಲಾಭಕ್ಕಾಗಿ ಹೊಸ ಅವಕಾಶಗಳಿವೆ.

** ಕರ್ಕಾಟಕ ರಾಶಿ :
ನಿಮ್ಮಲ್ಲಿ ಹತಾಶೆಯ ಭಾವನೆ ಹೆಚ್ಚಾಗಬಹುದು. ಆತ್ಮವಿಶ್ವಾಸದ ಕೊರತೆಯನ್ನು ಅನುಭವಿಸುತ್ತೀರಿ. ಶೈಕ್ಷಣಿಕ ಕೆಲಸದಲ್ಲಿ ಅಡೆತಡೆಗಳು ಉಂಟಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆಗಳಿವೆ.ನಿಮಗೆ ಇಂದು ಸಹೋದರರಿಂದ ಬೆಂಬಲ ಸಿಗಲಿದೆ.ನಿಮಗೆ ಹೊಸ ಕೆಲಸವನ್ನು ಪ್ರಾರಂಭಿಸಲು ಇಂದು ಅತ್ಯಂತ ಶುಭ ದಿನವಾಗಿದೆ. ಪ್ರಯಾಣವು ಆಹ್ಲಾದಕರ ಫಲಿತಾಂಶಗಳನ್ನು ನೀಡುತ್ತದೆ.

** ಸಿಂಹ ರಾಶಿ :
ನಿಮಗೆ ವೃತ್ತಿ ಜೀವನದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿರುತ್ತವೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಸಂಬಂಧಗಳಲ್ಲಿ ಹೊಸ ರೋಚಕ ತಿರುವುಗಳಿರುತ್ತವೆ. ದಾಂಪತ್ಯ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ. ನೀವು ಕೆಲಸದ ಹೆಚ್ಚುವರಿ ಜವಾಬ್ದಾರಿಗಳನ್ನು ಪಡೆಯುತ್ತೀರಿ. ಎಚ್ಚರಿಕೆಯಿಂದ ವಾಹನ ಚಲಾಯಿಸಿ. ವೃತ್ತಿಪರ ಜೀವನದಲ್ಲಿ, ಹೊಸ ಉದ್ಯೋಗದ ಪ್ರಸ್ತಾಪವನ್ನು ಪಡೆಯುತ್ತೀರಿ

** ಕನ್ಯಾ ರಾಶಿ :
ಈ ದಿನ ನಿಮ್ಮನ್ನು ಸಂತೋಷ ಹುಡುಕಿ ಬರಲಿದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಕೆಲಸದ ನಿಮಿತ್ತ ಪ್ರಯಾಣ ಮಾಡುವ ಅವಕಾಶವಿರುತ್ತದೆ. ಸಾಂಸಾರಿಕ ಸೌಕರ್ಯ ಮತ್ತು ಸಂಪತ್ತು ವೃದ್ಧಿಯಾಗಲಿದೆ. ಉದ್ಯೋಗ ಬದಲಾವಣೆಯ ಸೂಚನೆಗಳಿೆ. ನಿಮ್ಮ ಂಗಾತಿಯೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರಬಹುದು, ಅತಿಯಾದ ಕೋಪವನ್ನು ತಪ್ಪಿಸಿ.

** ತುಲಾ ರಾಶಿ :
ನಿಮ್ಮ ಜೀವನದಲ್ಲಿ ಏರಿಳಿತಗಳಿರುತ್ತವೆ. ಕುಟುಂಬ ಸದಸ್ಯರಿಂದ ಬೆಂಬಲ ಸಿಗಲಿದೆ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಲಾಭವಿದೆ, ಆದರೆ ಕೆಲಸದ ಸವಾಲುಗಳು ಹೆಚ್ಚಾಗುತ್ತವೆ. ತಾಳ್ಮೆಯಿಂದಿರುವುದು ಮುಖ್ಯವಾಗುತ್ತದೆ. ನಿಮ್ಮ ಸ್ನೇಹಿತರ ಸಹಾಯದಿಂದ ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ನಿಮ್ಮ ಸಂಗಾತಿಯ ಆರೋಗ್ಯದ ಕಡೆ ಗಮನ ಕೊಡಿ. ನೀವು ಹಣಕಾಸಿನ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

** ವೃಶ್ಚಿಕ ರಾಶಿ :
ನೀವು ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಿ. ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ವೆಚ್ಚಗಳನ್ನು ನಿಯಂತ್ರಿಸಿ. ಪೋಷಕರ ಸಹಕಾರ ಸಿಗಲಿದೆ. ಮನೆಯಲ್ಲಿ ಶುಭ ಕಾರ್ಯಗಳನ್ನು ನಡೆಯಬಹುದು. ವ್ಯಾಪಾರದಲ್ಲಿ ವಿಸ್ತರಣೆಗೆ ಅವಕಾಶವಿರುತ್ತದೆ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಲಿವೆ.

** ಧನಸ್ಸು ರಾಶಿ :
ಇಂದು ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆಗಳಿವೆ, ಆದರೆ ನೀವು ಕೆಲಸದ ಸ್ಥಳದಲ್ಲಿ ಹೆಚ್ಚು ಶ್ರಮಿಸಬೇಕಾಗುತ್ತದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಮಾತಿನಲ್ಲಿ ಕಠೋರತೆಯ ಪರಿಣಾಮವಿರುತ್ತದೆ. ನೀವು ಆತ್ಮವಿಶ್ವಾಸದ ಕೊರತೆಯನ್ನು ಅನುಭವಿಸುವಿರಿ. ಸ್ವಭಾವದಲ್ಲಿ ಕಿರಿಕಿರಿ ಇರುತ್ತದೆ. ಸ್ವಯಂ ನಿಯಂತ್ರಣದಲ್ಲಿರಿ ಮತ್ತು ಅತಿಯಾದ ಕೋಪವನ್ನು ತಪ್ಪಿಸಿ. ಕಚೇರಿಯಲ್ಲಿ ಅನಗತ್ಯ ವಾದ ವಿವಾದಗಳಿಂದ ದೂರವಿರಿ.

** ಮಕರ ರಾಶಿ :
ಇಂದು ನಿಮಗೆ ಆತ್ಮವಿಶ್ವಾಸ ಹೆಚ್ಚಾಗಲಿದೆ. ವ್ಯವಹಾರದಲ್ಲಿ ಹೆಚ್ಚು ಕಠಿಣ ಪರಿಶ್ರಮ ಇರುತ್ತದೆ, ಆದರೆ ನೀವು ಖಂಡಿತವಾಗಿಯೂ ವೃತ್ತಿಪರ ಯಶಸ್ಸನ್ನು ಪಡೆಯುತ್ತೀರಿ. ಕೌಟುಂಬಿಕ ಸಮಸ್ಯೆಗಳಿಂದಾಗಿ ಮನಸ್ಸು ಸ್ವಲ್ಪ ಚಿಂತೆಯಲ್ಲಿ ಉಳಿಯಬಹುದು. ಇಂದು ಪಿತ್ರಾರ್ಜಿತ ಆಸ್ತಿಯಿಂದ ಆರ್ಥಿಕ ಲಾಭವಾಗಲಿದೆ. ನೀವು ಪೋಷಕರ ಬೆಂಬಲವನ್ನು ಪಡೆಯುತ್ತೀರಿ. ಭೂಮಿ ಅಥವಾ ವಾಹನವನ್ನು ಖರೀದಿಸುವ ಅವಕಾಶವಿರುತ್ತದೆ.

** ಕುಂಭ ರಾಶಿ :
ಇಂದು ಕುಟುಂಬ ಸದಸ್ಯರಿಂದ ಬೆಂಬಲ ಸಿಗಲಿದೆ. ಕೆಲಸದಲ್ಲಿ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ನೀವು ಉನ್ನತ ಅಧಿಕಾರಿಗಳಿಂದ ಬೆಂಬಲವನ್ನು ಪಡೆಯಬಹುದು. ಉದ್ಯೋಗದಲ್ಲಿ ಪ್ರಗತಿಗೆ ಸುವರ್ಾವಕಶಗಳು ದೊರೆಯಲಿವೆ. ಇಂದು ನಿಮ್ಮ ಭಾವನೆಗಳು ಏರುಪೇರಾಗಬಹುದು. ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.

** ಮೀನ ರಾಶಿ :
ಇಂದು ನೀವು ಬುದ್ಧಿವಂತಿಕೆಯಿಂದ ಹಣವನ್ನು ಖರ್ಚು ಮಾಡಿ. ಮಕ್ಕಳ ಆರೋಗ್ಯದ ಕಡೆ ಗಮನ ಕೊಡಿ. ಮಾನಸಿಕ ಅಡಚಣೆ ಉಂಟಾಗಬಹುದು. ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಅತಿಯಾದ ಕೋಪವನ್ನು ತಪ್ಪಿಸಿ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ.

Categories
ಹೊಸನಗರ

ಹೊಸನಗರದಲ್ಲಿ ನಾರಾಯಣ ಗುರುಗಳ ಜಯಂತಿ

ಹೊಸನಗರದಲ್ಲಿ ನಾರಾಯಣ ಗುರುಗಳ ಜಯಂತಿ
– ಈಡಿಗರ ಸಂಘ, ಎಸ್.ಎನ್.ಜಿ.ವಿ, ಬಿಲ್ಲವ ಸಮಾಜ, ಶ್ರೀ ನಾರಾಯಣ ಗುರು ಸಹಕಾರ ಸಂಘ, ಶ್ರೀ ಜೇನುಕಲ್ಲಮ್ಮ ಸಹಕಾರಿ ಸಂಘ, ಆರ್ಯ ಈಡಿಗ ಎಂಪ್ಲಾಇಸ್ ಕ್ರಿಯಾ ವೇದಿಕೆ ಸಹಯೋಗ

NAMMUR EXPRESS NEWS
ಹೊಸನಗರ: ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯನ್ನು ಹೊಸನಗರದಲ್ಲಿ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಯಿತು.
ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು, ಎಂಬ ವಿಶ್ವ ಸಂದೇಶ ಸಾರಿದ, ಮಹಾನ್ ಮಾನವಾತವಾದಿ, ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತರಾಗಿ ಎಂಬ ಘೋಷಣೆ ಯೊಂದಿಗೆ ಶೋಷಿತ ವರ್ಗದ ಮಹಾನ್ ಶಕ್ತಿ, ಅಕ್ಷರ ಬ್ರಹ್ಮ ಎಂದೇ ಖ್ಯಾತಿ ಪಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆಯನ್ನು ಹೊಸನಗರದ ಆರ್ಯ ಈಡಿಗ ಭವನದಲ್ಲಿ ನೇರವೇರಿಸಲಾಯಿತು.
ತಾಲೂಕು ಆಳಿತ, ಆರ್ಯ ಈಡಿಗರ ಸಂಘ, ಶ್ರೀ ನಾರಾಯಣ ಗುರು ವಿಚಾರ ವೇದಿಕೆ (SNGV), ಬಿಲ್ಲವ ಸಮಾಜ, ಶ್ರೀ ನಾರಾಯಣ ಗುರು ಸಹಕಾರ ಸಂಘ, ಶ್ರೀ ಜೇನುಕಲ್ಲಮ್ಮ ಸಹಕಾರಿ ಸಂಘ ಹಾಗೂ ಆರ್ಯ ಈಡಿಗ ಎಂಪ್ಲಾಇಸ್ ಕ್ರಿಯಾ ವೇದಿಕೆ ಪಾಲ್ಗೊಳ್ಳುವಿಕೆ ಯೊಂದಿಗೆ ನೆರವೇರಿತು. ಕಾರ್ಯಕ್ರಮ ದಲ್ಲಿ ವಿಶೇಷ ಅತಿಥಿ ಗಳಾಗಿ ಆಗಮಿಸಿದ ತೀರ್ಥಹಳ್ಳಿ ಕಾಲೇಜು ಉಪನ್ಯಾಸಕರಾದ ಸತೀಶ್ ಜಿ ಕೆ ರವರು , ಮಾತನಾಡಿ, ದೇವರ ನಾಡು ಎಂದೇ ಹೆಸರಾದ ಕೇರಳದ ಒಂದು ಅತ್ಯಂತ ಬಡ ಹಾಗೂ ಶೋಷಿತ ಸಮಾಜ ವಾದ ಈಳವ ಹುಟ್ಟಿದ ಬ್ರಹ್ಮಶ್ರೀ ನಾರಾಯಣ ಗುರುಗಳು ತಮ್ಮ 30 ನೇ ವಯಸ್ಸಿನಲ್ಲಿ ಯೇ ಶೋಷಿತ ಜನರ ಪರ ಸಂಘಟನಾತ್ಮಕ ವಾದ ರೀತಿಯಲ್ಲಿ ಹೋರಾಟ ನಡೆಸಿ, ಮಹಾನ್ ವ್ಯಕ್ತಿಯಾಗಿ ನಿಂತವರು ಎಂದರು.
ಇಂದಿನ ನಾವುಗಳು ಜಾಗ್ರತರಾಗಿ , ಸಮಾಜದ ಬಗ್ಗೆ ಅರಿವು ಪಡೆದು, ಯಾವುದೇ ರೀತಿಯ ಶೋಷಣೆ ವಿರುದ್ದ ದೈರ್ಯ ದಿಂದ ಹೋರಾಟ ಮಾಡುತ್ತಾ ಸಂಘಟನೆ ಮೂಲಕ ಶಕ್ತಿಯುತರಾಗಿ, ವಿದ್ಯೆ ಪಡೆದು ಸ್ವತಂತ್ರ ರಾಗಿ ಬದುಕುವ ಮೂಲಕ ನಮ್ಮ ಸಮಾಜದ ಅಭಿವೃದ್ಧಿಗೆ ಶ್ರಮಿಸುವುದರ ಮೂಲಕ ಶ್ರೀ ನಾರಾಯಣ ಗುರುಗಳ ತತ್ವ ಆದರ್ಶ ಗಳನ್ನು ಅನುಸರಿಸಿ ನಡೆಯ ಬೇಕಾದ ಅಗತ್ಯವಿದೆ ಎಂದರು.
ಆರ್ಯ ಈಡಿಗ ಸಂಘದ ಅಧ್ಯಕ್ಷರಾದ ಬಿ ಪಿ ರಾಮ ಚಂದ್ರ ಅದ್ಯಕ್ಷತೆ ವಹಿಸಿದ್ದರು. ಶ್ರೀ ನಾರಾಯಣ ಗುರು ವಿಚಾರ ವೇದಿಕೆ ತಾಲೂಕು ಅದ್ಯಕ್ಷ ಲಯನ್ ಹೆಚ್ ವಾಸಪ್ಪ, ಮಹಿಳಾ ಅದ್ಯಕ್ಷೇ ಪೂರ್ಣಿಮಾ ಮೂರ್ತಿ ರಾವ್, ಬಿಲ್ಲವ ಸಮಾಜದ ಸುಮತಿ ಆರ್ ಪೂಜರ್, ಶ್ರೀ ಎರಗಿ ಉಮೇಶ್, ಸಹಕಾರಿ ಸಂಘದ ಅಧ್ಯಕ್ಷರಾದ ಮುರಳೀಧರ ಜಿ ಈ, ಸತ್ಯ ನಾರಾಯಣ, ಕ್ರಿಯಾ ವೇದಿಕೆಯ ಪುಟ್ಟ ಸ್ವಾಮಿ, ಶ್ರೀ ರೇಣುಕೇಶ್ , ನೇರಳೆ ರಮೇಶ್ ಇದ್ದರು. ಲೇಖನ ಮೂರ್ತಿ ಎಲ್ಲರನ್ನು ಸ್ವಾಗತಿಸಿದರು. ಮುರಳೀಧರ ವಂದಿಸಿದರು.

ವರದಿ: ಲಯನ್ ಹೆಚ್ ವಾಸಪ್ಪ, ಮಾಸ್ತಿಕಟ್ಟೆ

Categories
ಕರಾವಳಿ

ಅಮೇರಿಕದಲ್ಲಿ ಉಡುಪಿ ಅರ್ಚಕರ ಸಂಸ್ಕೃತ ಪ್ರಾರ್ಥನೆ!

ಅಮೇರಿಕದಲ್ಲಿ ಉಡುಪಿ ಅರ್ಚಕರ ಸಂಸ್ಕೃತ ಪ್ರಾರ್ಥನೆ!
– ಕಮಲಾ ಹ್ಯಾರಿಸ್‌ ಪಕ್ಷದ ಭಾರಿ ಕಾರ್ಯಕ್ರಮದಲ್ಲಿ ಅಮೆರಿಕನ್ನರ ಮನ ಗೆದ್ದ ಉಡುಪಿಯ ಪುರೋಹಿತರು
– ವಿದೇಶದಲ್ಲಿ ಮೊಳಗಿದ ಭಾರತದ ಶಾಂತಿ ಮಂತ್ರ

NAMMUR EXPRESS NEWS
ಉಡುಪಿ: ಅಮೇರಿಕದ ಡೆಮೊಕ್ರಾಟಿಕ್ ಪಕ್ಷದ ಭಾರಿ ಸಭೆಯಲ್ಲಿ ಸಂಸ್ಕೃತ ಪ್ರಾರ್ಥನೆ ಮಾಡಿದ ರಾಕೇಶ್ ಭಟ್ ಇದೀಗ ಗಮನ ಸೆಳೆದಿದ್ದು, ಅವರು ಮೂಲತಃ ಕರ್ನಾಟಕದ ಉಡುಪಿಯವರು ಎನ್ನುವುದು ವಿಶೇಷ. ಇವರು ತಮ್ಮ ಗುರುಗಳಾದ ಉಡುಪಿ ಅಷ್ಟಮಠದ ಪೇಜಾವರ ಸ್ವಾಮೀಜಿಯವರ ಬಳಿ ಋಗ್ವದ ಮತ್ತು ತಂತ್ರಸಾರ (ಮಾಧ್ವ) ಆಗಮದಲ್ಲಿ ತರಬೇತಿ ಪಡೆದಿದ್ದಾರೆ.
ಅಮೆರಿಕದ ಚಿಕಾಗೋದಲ್ಲಿ ಕಮಲಾ ಹ್ಯಾರಿಸ್ ಅವರ ಡೆಮಾಕ್ರಟಿಕ್ ಪಕ್ಷದ 3ನೇ ದಿನದಂದು ಕರ್ನಾಟಕದ ಉಡುಪಿ ಮೂಲದ ಅರ್ಚಕರೊಬ್ಬರು ಸಂಸ್ಕೃತ ಪ್ರಾರ್ಥನೆಯ ಮೂಲಕ ಕಲಾಪವನ್ನು ಪ್ರಾರಂಭಿಸಿದರು. ವೈದಿಕ ಪ್ರಾರ್ಥನೆ ಹಾಗೂ ಅದರ ಅರ್ಥವನ್ನು ಅವರು ವಿವರಿಸಿದ ಬಳಿಕ, ಸಭಾಂಗಣದಾದ್ಯಂತ “ಓಂ ಶಾಂತಿ ಶಾಂತಿ” ಘೋಷಣೆಗಳು ಪ್ರತಿಧ್ವನಸಿದವು.
ಮೇರಿ್ಯಾಂಡ್‌ನ ಶ್ರೀ ಶಿವ ವಿಷ್ಣು ದೇವಸ್ಥಾನದ ಅರ್ಚಕ ರಾಕೇಶ್‌ ಭಟ್ ಅವರು ಅಖಂಡ ದೇಶಕ್ಕಾಗಿ ದೇವರ ಆಶೀರ್ವಾದ ಕೋರಿ ವೈದಿಕ ಪ್ರಾರ್ಥನೆ ಮಾಡಿದರು. “ನಮ್ಮಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ರಾಷ್ಟ್ರದ ವಿಷಯಕ್ಕೆ ಬಂದಾಗ ನಾವು ಒಗ್ಗಟ್ಟಾಗಿರಬೇಕು” ಎಂದು ಭಟ್ ಹೇಳಿದರು

Categories
ಚಿಕ್ಕಮಗಳೂರು ಮಲ್ನಾಡ್

ಶೃಂಗೇರಿ ಪಟ್ಟಣ ಪಂಚಾಯ್ತಿಗೆ ‘ಕಮಲ’ವೇ ಅಧಿಪತಿ!

ಶೃಂಗೇರಿ ಪಟ್ಟಣ ಪಂಚಾಯ್ತಿಗೆ ‘ಕಮಲ’ವೇ ಅಧಿಪತಿ!
ಪಟ್ಟಣ ಪಂಚಾಯ್ತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಗೆದ್ದು ಬೀಗಿದ ‘ಬಿಜೆಪಿ’
– ನೂತನ ಅಧ್ಯಕ್ಷರಾಗಿ ವೇಣುಗೋಪಾಲ್, ಉಪಾಧ್ಯಕ್ಷರಾಗಿ ಪ್ರಕಾಶ್ ಆಯ್ಕೆ

NAMMUR EXPRESS NEWS
ಶೃಂಗೇರಿ: ಶೃಂಗೇರಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ್ದು
ನೂತನ ಅಧ್ಯಕ್ಷರಾಗಿ ವೇಣುಗೋಪಾಲ್ ಹಾಗೂ ನೂತನ ಉಪಾಧ್ಯಕ್ಷರಾಗಿ ಪ್ರಕಾಶ್ ಎಂ.ಎಲ್ ರವರು ಆಯ್ಕೆಯಾಗಿದ್ದಾರೆ.
11 ಸದಸ್ಯಬಲ ಹೊಂದಿದ ಪಟ್ಟಣ ಪಂಚಾಯ್ತಿಯಲ್ಲಿ ಸಂಸದರ ಮತ ಸೇರಿದಂತೆ ಬಿಜೆಪಿ 07+01 ಕಾಂಗ್ರೇಸ್ 04 ಸದಸ್ಯರ ಮತ ಪಡೆಯುವುದರ ಮೂಲಕ ಪಟ್ಟಣ ಪಂಚಾಯ್ತಿಯ ಆಡಳಿತದಲ್ಲಿ ಬಿಜೆಪಿ ತನ್ನದೇ ಅಧಿಪತ್ಯ ಮುಂದುವರೆಸಿದೆ.
ಆಯ್ಕೆಯಾದ ನೂತನ ಅಧ್ಯಕ್ಷರು ಉಪಾಧ್ಯಕ್ಷರಿಗೆ ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಮಾಜಿ ಶಾಸಕರಾದ ಡಿ.ಎನ್ ಜೀವರಾಜ್,ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾದ ಸುಧಾಕರ ಎಸ್. ಶೆಟ್ಟಿ ಸೇರಿದಂತೆ ಜಿಲ್ಲೆಯ ಬಿಜೆಪಿ ಅಧ್ಯಕ್ಷರಾದ ದೇವರಾಜ ಶೆಟ್ಟಿ, ತಾಲೂಕು ಬಿಜೆಪಿ ಅಧ್ಯಕ್ಷರಾದ ಉಮೇಶ್ ತಲಗಾರ್,ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಹರೀಶ್ ವಿ.ಶೆಟ್ಟಿ,ಜೆಡಿಎಸ್ ತಾಲೂಕು ಅಧ್ಯಕ್ಷರು,ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಿಗಳಾದ ಪುಣ್ಯಪಾಲ್,ಎಸ್.ಸಿ ಮೋರ್ಚಾ ರಾಜ್ಯ ವಕ್ತಾರರು ಮಾಜಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾದ ಡಾ.ಬಿ ಶಿವಶಂಕರ್ ಮತ್ತು ಎಲ್ಲಾ ಸದಸ್ಯರು ತಾಲೂಕಿನ ನಾಯಕರು,ಪ್ರಮುಖರು, ಕಾರ್ಯಕರ್ತರು ಶುಭಕೋರಿದ್ದಾರೆ. ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು.

Categories
ಮಾಹಿತಿ ಸುದ್ದಿ

ಸೆಪ್ಟೆಂಬರ್ 1ಕ್ಕೆ ಸಿಇಟಿ/ನೀಟ್ ಸೀಟು ಹಂಚಿಕೆ ಫಲಿತಾಂಶ

ಸೆಪ್ಟೆಂಬರ್ 1ಕ್ಕೆ ಸಿಇಟಿ/ನೀಟ್ ಸೀಟು ಹಂಚಿಕೆ ಫಲಿತಾಂಶ
– ಆಪ್ಯನ್ ಎಂಟ್ರಿಗೆ ಅವಕಾಶ

NAMMUR EXPRESS NEWS
ಸೆಪ್ಟೆಂಬರ್ 1ಕ್ಕೆ ಸಿಇಟಿ ಹಾಗೂ ನೀಟ್ ಸೀಟು ಹಂಚಿಕೆ ಫಲಿತಾಂಶ ಪ್ರಕಟಗೊಳ್ಳಲಿದೆ. ವೈದ್ಯಕೀಯ ಪ್ರವೇಶಕ್ಕೆ ಆಪೈನ್ ಎಂಟ್ರಿ ಆರಂಭವಾಗಿದ್ದು, 2 ದಿನ ಅವಕಾಶ ಕಲ್ಪಿಸಲಾಗಿದೆ.
ಮೊದಲ ಸುತ್ತಿನ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಕೋರ್ಸುಗಳ ಪ್ರವೇಶಕ್ಕೆ (UGCET 2024) ಆಪೈನ್ (ಆಯ್ಕೆ/ಇಚ್ಛೆ) ಗಳನ್ನು ದಾಖಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಂಗಳವಾರ (ಆ.20) ರಾತ್ರಿ ತನ್ನ ವೆಬ್ ಸೈಟ್ ನಲ್ಲಿ ಪೋರ್ಟಲ್ ತೆರೆದಿದೆ.ಆ.25ಕ್ಕೆ 2ನೇ ಅಣಕು ಸೀಟು ಹಂಚಿಕೆ ರಿಸ್ಟಲ್
ಆಗಸ್ಟ್ 25ರ ರಾತ್ರಿ 8ಕ್ಕೆ ಎರಡನೇ ಅಣಕು ಸೀಟು ಹಂಚಿಕೆಯ ಫಲಿತಾಂಶ (ಯುಜಿ ಸಿಇಟಿ/ನೀಟ್) ಪ್ರಕಟಿಸಲಾಗುತ್ತದೆ. ನಂತರ ಆಗಸ್ಟ್ 27ರ ಬೆಳಗ್ಗೆ 11ರವರೆಗೆ ಇಚ್ಛೆಗಳನ್ನು ಬದಲಿಸಿಕೊಳ್ಳಬಹುದು. ಸೆಪ್ಟೆಂಬರ್ 1ರಂದು ಸಂಜೆ 6ಕ್ಕೆ ನೈಜ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಲಾಗುತ್ತದೆ.

ವೆಬ್ ಸೈಟ್‌ನಲ್ಲಿ ಪ್ರಕಟಿಸಲಾದ ಸೀಟ್ ಮ್ಯಾಟ್ರಿಕ್ಸ್ ಅನ್ನು ಪರಿಶೀಲಿಸಿ ಇಚ್ಚೆ / ಆಯ್ಕೆಗಳನ್ನು ದಾಖಲಿಸುವ ಸಮಯದಲ್ಲಿ ಆದ್ಯತಾ ಕ್ರಗಳನ್ನು ಅನುರಿಸಲು ಸೂಚಿಸಲಾಗಿದೆ. ಹಾಗೆಯೇ ಕಾಲೇಜು ಶುಲ್ಕದ ಮಾಹಿತಿ ಕೂಡ ಇದ್ದು, ಅದನ್ನೂ ಗಮನಿಸಿಯೇ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಿ ಎಂದೂ ಪ್ರಸನ್ನ ಸಲಹೆ ನೀಡಿದ್ದಾರೆ.ಆಪ್ತನ್‌ಗಳನ್ನು ದಾಖಲಿಸುವ ಬಗ್ಗೆ ಸೀಟು ಹಂಚಿಕೆಯ ವಿವಿಧ ಹಂತಗಳ ಕುರಿತು ವಿವರವಾದ ಮಾಹಿತಿಗಾಗಿ ಅಭ್ಯರ್ಥಿಗಳು ಯುಜಿಸಿಇಟಿ-24ರ ಸೀಟು ಹಂಚಿಕೆಯ ಮಾಹಿತಿ ಪುಸ್ತಕದಲ್ಲಿ ನೀಡಿರುವ ಸೂಚನೆಗಳನ್ನು ಓದಿಕೊಂಡೇ ಮುಂದುವರಿಯಬೇಕು.

ಅಭ್ಯರ್ಥಿಗಳೇ ಹುಷಾ‌ರ್..

ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್‌ ಕೋರ್ಸ್‌ಗಳ ಸೀಟು ಕೊಡಿಸುವುದಾಗಿ ಹೇಳಿ ವಂಚಿಸುವವರ ಬಗ್ಗೆ ಎಚ್ಚರ ಇರಲಿ. ಸರ್ಕಾರಿ, ಖಾಸಗಿ, ಮ್ಯಾನೇಜೆಂಟ್, ಎನ್.ಆ‌ರ್.ಐ ಹೀಗೆ ಎಲ್ಲ ಕೋಟಾಗಳ ಸೀಟು ಹಂಚಿಕೆ ಮೆರಿಟ್ ಆಧಾರದ ಮೇಲೆ ಕೆಇಎ ವತಿಯಿಂದಲೇ ಆಗುತ್ತದೆ. ಈ ಕುಡಿತು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಎಕ್ಸ್ ಮೂಲಕ ತಿಳಿಸಿದ್ದಾರೆ.

Categories
ಚಿತ್ರದುರ್ಗ

ಹೊಸದುರ್ಗ ಪುರಸಭೆಯಲ್ಲಿ ಅರಳಿದ ಕಮಲ!

ಹೊಸದುರ್ಗ ಪುರಸಭೆಯಲ್ಲಿ ಅರಳಿದ ಕಮಲ!
– ಅಧ್ಯಕ್ಷರಾಗಿ ರಾಜೇಶ್ವರಿ ಆನಂದ್, ಉಪಾಧ್ಯಕ್ಷ ಸ್ಥಾನಕ್ಕೆ ಗೀತಾ ಗಜೇಂದ್ರ ಅವಿರೋಧ ಆಯ್ಕೆ
– ನೂತನ ಸಾರಥಿಗಳಿಗೆ ನಾಯಕರು, ಕಾರ್ಯಕರ್ತರ ಅಭಿನಂದನೆ

NAMMUR EXPRESS NEWS
ಹೊಸದುರ್ಗ: ಪರಿಶಿಷ್ಟ( ST) ಪಂಗಡಕ್ಕೆ ಮೀಸಲಿದ್ದ ಹೊಸದುರ್ಗ ಪುರಸಭೆಯ ಅಧ್ಯಕ್ಷ ಸ್ಥಾನ ಮತ್ತು ಬಿ ಸಿ ಎಂ ಎ ಮಹಿಳೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎಂ(ಎ) ಮಹಿಳೆಗೆ ಮೀಸಲಾಗಿತ್ತು. ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ 19ನೇ ವಾರ್ಡಿನ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿರುವ ಬಿಜೆಪಿ ಸದಸ್ಯೆ ರಾಜೇಶ್ವರಿ ಆನಂದ್, ಉಪಾಧ್ಯಕ್ಷ ಸ್ಥಾನಕ್ಕೆ 3ನೇ ವಾರ್ಡ್ ಸದಸ್ಯೆ ಗೀತಾ ಗಜೇಂದ್ರ ಅವಿರೋಧವಾಗಿ ಆಯ್ಕೆಯಾದರು.
ಗುರುವಾರ ಪುರಸಭೆ ಸಭಾಂಗಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ 19 ನೇ ವಾರ್ಡ್ ಸದಸ್ಯೆ ರಾಜೇಶ್ವರಿ ಆನಂದ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 3 ವಾರ್ಡ್ ಸದಸ್ಯೆ ಗೀತಾ ಗಜೇಂದ್ರ ನಾಮಪತ್ರ ಸಲ್ಲಿಸಿದ್ದರು. ಇವರಿಬ್ಬರನ್ನುಳಿದು ಬೇರೆ ಯಾವ ಸದಸ್ಯರು ನಾಮಪತ್ರ ಸಲ್ಲಿಸಿರಲಿಲ್ಲ. ಚುನಾವಣಾ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ 4 ಸದಸ್ಯರು ಕೂಡ ಗೈರಾಗಿದ್ದರು. ಬಿಜೆಪಿ ಮತ್ತು ಪಕ್ಷೇತರರು ಸೇರಿ 19 ಸದಸ್ಯರು ಹಾಜರಿದ್ದರು. ಇದ ಂದರ್ಭದಲ್ಲಿ ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ತಿರುಪತಿ ಪಾಟೀಲ್ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದೆ ಎಂದು ಅಧಿಕೃತವಾಗಿ ಘೋಷಿಸಿದರು.
ಪುರಸಭೆ ಮುಂಭಾಗದಲ್ಲಿ ಸಂಸದ ಗೋವಿಂದ ಕಾರಜೋಳ ನೇತೃತ್ವದಲ್ಲಿ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.

ಬಲಾಬಲ ಏನಿತ್ತು?

23 ಸದಸ್ಯರ ಬಲ ಹೊಂದಿರುವ ಹೊಸದುರ್ಗ ಪಟ್ಟಣದ ಪುರಸಭೆಯಲ್ಲಿ ಬಿಜೆಪಿ ಸದಸ್ಯರು 14, ಪಕ್ಷೇತರರು 5, ಕಾಂಗ್ರೆಸ್ 4 ಸದಸ್ಯರ ಬಲ ಹೊಂದಿದೆ. 14 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಮೊದಲ ಅವಧಿಯ ವೇಳೆ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಈ ಸಂದರ್ಭದಲ್ಲಿ ಅಧ್ಯಕ್ಷರಾಗಿ ಎಂ.ಶ್ರೀನಿವಾಸ್ ಹಾಗೂ ಉಪಾಧ್ಯಕ್ಷರಾಗಿ ಜ್ಯೋತಿ ಕೆಂಚಪ್ಪ ಜವಾಬ್ದಾರಿ ನಿರ್ವಹಿಸಿದ್ದರು. ಭಾರತೀಯ ಜನತಾ ಪಕ್ಷ 2ನೇ ಅವಧಿಗೂ ಅಧಿಕಾರದ ಗದ್ದುಗೆ ಏರುವ ಮೂಲಕ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಈ ವೇಳೆ ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಲಿಂಗಮೂರ್ತಿ, ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ, ಮಂಡಲ ಅಧ್ಯಕ್ಷ ಗೂಳಿಹಟ್ಟಿ ಜಗದೀಶ್, ಪ್ರಧಾನ ಕಾರ್ಯದರ್ಶಿ ಜಗದೀಶ್ ರಾಮಯ್ಯ, ಮುಖಂಡರಾದ ದೊಡ್ಡಘಟ್ಟ ಲಕ್ಷ್ಮಣ್, ಹೆಗ್ಗೆರೆ ಶಂಕ್ರಪ್ಪ ಮತ್ತು ದಿಲ್ಸೆ ದಿಲೀಪ್ ಗುರುಸ್ವಾಮಿ ಸೇರಿದಂತೆ ಹಲವು ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

5 ಮಂದಿ ಪಕ್ಷೇತರರ ಸಾಥ್

ಬಿೆಪಿ ಪಕ್ಷದ 14 ಜನ ಸದಸ್ಯರೊಂದಿಗೆ 5 ಪಕ್ಷೇತರ ಸದಸ್ಯರು ಬೆಂಬಲ ನೀಡಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದೆ. ಪುರಸಭೆಯ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಪ್ರಗತಿಗೆ ಶ್ರಮಿಸಿ. ಪಟ್ಟಣದ ಅಭಿವೃದ್ಧಿಗೆ ನನ್ನ ಕಡೆಯಿಂದ ಆಗಬೇಕಿರುವ ಪ್ರಗತಿ ಕಾರ್ಯಗಳನ್ನು ಮಾಡಿಕೊಡುವೆ. ಅಗತ್ಯವಿದ್ದಾಗ ಪುರಸಭೆಯಲ್ಲಿ ನಡೆಯುವ ಸಭೆಗೆ ನಾನು ಬರುವೆ. ಹೊಸದುರ್ಗ ಪಟ್ಟಣವನ್ನು ಎಲ್ಲರೂ ಸೇರಿ ಸುಂದರ ನಗರವನ್ನಾಗಿ ಅಭಿವೃದ್ಧಿಪಡಿಸೋಣ ಎಂದು ಸಂಸದ ಗೋವಿಂದ ಎಂ.ಕಾರಜೋಳ
ಹೇಳಿದ್ದಾರೆ.

Categories
ಮಲ್ನಾಡ್

ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ ಪುತ್ರನ ಹತ್ಯೆಗೆ ಪ್ಲಾನ್!

ಟಾಪ್ ನ್ಯೂಸ್ ಮಲ್ನಾಡ್

ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ ಪುತ್ರನ ಹತ್ಯೆಗೆ ಪ್ಲಾನ್!
– ಪೊಲೀಸರಿಂದ ತನಿಖೆ ಶುರು: ಏನಿದು ಕೇಸ್?

– ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಭೂ ಕುಸಿತ
– ಎನ್.ಆರ್.ಪುರ: ಬಸ್ ನಿಲ್ದಾಣದಲ್ಲೇ ರೈತ ಆತ್ಮಹತ್ಯೆ

NAMMUR
ಭದ್ರಾವತಿ: ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವ‌ರ್ ಪುತ್ರ ಬಸವರಾಜು ಹತ್ಯೆಗೆ ಸಂಚು ರೂಪಿಸಿರುವ ಕುರಿತು ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿಚ್ಚಿ ಮುಬಾರಕ್, ಟಿಪ್ಪು ಮತ್ತು ಇತರೆ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇವರು ಜೈಲಿನಿಂದಲೇ ಸ್ಕೆಚ್ ರೂಪಿಸಿದ್ದ ಕುರಿತು ಆರೋಪವಿದೆ. ಶಾಸಕನ ಪುತ್ರ ಬಸವರಾಜ್ ಸ್ವಲ್ಪದರಲ್ಲೇ ಹತ್ಯೆಯಿಂದ ಪಾರಾಗಿದ್ದು, ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಶಾಸಕ ಬಿ.ಕೆ.ಸಂಗಮೇಶ್ವರ್ ಪುತ್ರ ಬಸವರಾಜು ಹತ್ಯೆಗೆ ಸಂಚು ರೂಪಿಸಿರುವ ಕುರಿತು ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಚ್ಚಿ ಮುಬಾರಕ್, ಟಿಪ್ಪು ಮತ್ತು ಇತರೆ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇವರು ಜೈಲಿನಿಂದಲೇ ಸ್ಕೆಚ್ ರೂಪಿಸಿದ್ದ ಕುರಿತು ಆರೋಪವಿದೆ.
ಮುಬಾರಕ್ ಅಲಿಯಾಸ್ ಡಿಚ್ಚಿ ಮುಬಾರಕ್ ಎಂಬಾತ ಜೈಲಿನಿಂದ ಭದ್ರಾವತಿಯ ಟಿಪ್ಪು ಎಂಬಾತನಿಗೆ ಕರೆ ಮಾಡಿ ಸುಫಾರಿ ನೀಡಿದ್ದ. ಭದ್ರಾವತಿ ಗಾಂಧಿ ಸರಲ್‌ ಬಳಿ ಬಸವರಾಜ್‌ ಅವರನ್ನು ಹತ್ಯೆ ಮಾಡುವಂತೆ ಟಿಪ್ಪು ಮತ್ತು ಇತರೆ ನಾಲ್ವರನ್ನು ಮುಬಾರಕ್ ಕಳುಹಿಸಿದ್ದ. ಸುಫಾರಿ ಪಡೆದಿದ್ದ ಟಿಪ್ಪುನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಸಂಬಂಧ ಗುತ್ತಿಗೆದಾರ ಸುನಿಲ್ ಎಂಬವರು ದೂರು ನೀಡಿದ್ದಾರೆ. ಟಿಪ್ಪುವನ್ನು ಗುತ್ತಿಗೆದಾರ ಸುನಿಲ್‌ ಭೇಟಿಯಾದಾಗ ಆತನಿಗೆ ಕೂಡ ಡಿಚ್ಚಿ ಮುಬಾರಕ್ ಕರೆ ಮಾಡಿದ್ದಾನೆ. ಕಾರು ಮತ್ತು ನಾಲ್ವರನ್ನು ಕಳುಹಿಸುತ್ತಿರುವುದಾಗಿ ಮುಬಾರಕ್ ಹೇಳಿದ್ದಾನೆ. ಭದ್ರಾವತಿ ಹಳೆನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ.

ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಭೂ ಕುಸಿತ!

ಚಿಕ್ಕಮಗಳೂರು: ಚಾರ್ಮಾಡಿ ಘಾಟಿ ತಪ್ಪಲಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಘಾಟಿಯಲ್ಲಿ ಮತ್ತೆ ಭೂ ಕುಸಿತವಾಗಿದೆ. ಘಾಟಿಯ 8 ಮತ್ತು 9ನೇ ತಿರುವಿನಲ್ಲಿ ಗುಡ್ಡ ಮತ್ತು ಬಂಡೆಗಳು ಕುಸಿದಿವೆ. ಮಳೆ ನೀರಿನ ಜೊತೆಗೆ ರಸ್ತೆಗೆ ಕಲ್ಲುಗಳು ತೇಲಿಕೊಂಡು ಬಂದಿವೆ.
ಚಾರ್ಮಾಡಿ ಘಾಟಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಾಹನ ಸಂಚಾರ ಎಂದಿನಂತೆ ಇದ್ದು, ಯಾವುದೇ ತೊಂದರೆಗಳಾಗಿಲ್ಲ. ಕಳೆದ ಎರಡು ದಿನಗಳಿಂದ ಘಾಟಿಯಲ್ಲಿ ಭಾರೀ ಮಳೆಯಾಗಿದೆ. ರಸ್ತೆಯಲ್ಲೂ ನೀರು ಹರಿಯುತ್ತಿದೆ. ಶಿರಾಡಿ ಘಾಟಿಯಲ್ಲಿ ಅಲ್ಲಲ್ಲಿ ಗುಡ್ಡ ಕುಸಿತವಾಗುತ್ತಿರುವುದರಿಂದ, ಬೆಂಗಳೂರಿಗೆ ಹೋಗುವವರು ಈಗ ಹೆಚ್ಚಾಗಿ ಚಾರ್ಮಾಡಿ ಘಾಟಿಯನ್ನೇ ಅವಲ೦ಬಿಸಿದ್ದಾರೆ. ಅಲ್ಲದೆ, ಚಿಕ್ಕಮಗಳೂರು- ಮಂಗಳೂರು ಸಂಪರ್ಕಕ್ಕೆ ಇರುವ ಪ್ರಮುಖ ರಸ್ತೆ ಇದಾಗಿದೆ. ಹೀಗಾಗಿ ಇಲ್ಲಿ ವಾಹನ ದಟ್ಟಣೆ ಈಗ ಹೆಚ್ಚಾಗಿದೆ.

ಎನ್.ಆರ್.ಪುರ: ಬಸ್ ನಿಲ್ದಾಣದಲ್ಲೇ ರೈತ ಆತ್ಮಹತ್ಯೆ

ಎನ್.ಆರ್.ಪುರ: ಸಾಲಭಾದೆಯಿಂದ ಬಸ್ ನಿಲ್ದಾಣದಲ್ಲೇ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎನ್. ಆ‌ರ್. ಪುರ ತಾಲೂಕಿನ ಮೆಣಸೂರು ಬಳಿ ನಡೆದಿದೆ. ತಿಮ್ಮಪ್ಪ ಆತ್ಮಹತ್ಯೆ ಮಾಡಿಕೊಂಡಿರುವ ರೈತ. ಸ್ವ ಸಹಾಯ ಸಂಘದಲ್ಲಿ 5 ಲಕ್ಷ ಸಾಲ ಮಾಡಿದ್ದು, ಸರಿಯಾಗಿ ಬೆಳೆ ಬಾರದ ಹಿನ್ನೆಲೆ ಮನನೊಂದು ಮೆಣಸೂರು ಬಳಿಯ ಬಸ್ ನಿಲ್ದಾಣದಲ್ಲಿನ ಪಕಾಸಿಗೆ ನೇಣು ಬಿಗಿದುಕೊಂಡು ತ್ಮಹತ್ಯೆ ಮಾಡಿಕೊಂಡಿದ್ದಾರೆ.