Categories
ಬೆಂಗಳೂರು

ಈ ವರ್ಷ ಪರಿಸರ ಸ್ನೇಹಿ ಗಣೇಶ ಹಬ್ಬ!

ಈ ವರ್ಷ ಪರಿಸರ ಸ್ನೇಹಿ ಗಣೇಶ ಹಬ್ಬ!
– ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಬಳಕೆಗೆ ಆದೇಶ
– ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮೂರ್ತಿಗಳ ನಿಷೇಧ
– ಗಣೇಶ ಹಬ್ಬಕ್ಕೆ ಏನೇನು ನಿಯಮ? ಇಲ್ಲಿದೆ ಮಾಹಿತಿ

NAMMUR EXPRESS NEWS
ಬೆಂಗಳೂರು: ಗಣೇಶ ಹಬ್ಬದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಬಳಕೆ ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮೂರ್ತಿಗಳ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರ ಆದೇಶ ಹೊರಡಿಸಿದೆ.
ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಈ ಬಗ್ಗೆ ಎಲ್ಲಾ ಜಿಲ್ಲಾಡಳಿತಗಳಿಗೆ ಸೂಚಿಸಿದ್ದಾರೆ. ಆದೇಶವನ್ನು ಉಲ್ಲಂಘಿಸುವ ಮತ್ತು ಜಲಮೂಲಗಳನ್ನು ಕಲುಷಿತಗೊಳಿಸುವವರ ವಿರುದ್ಧ ವಾಯು ಮತ್ತು ಜಲ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗುವುದು. ಇಲ್ಲಿಯವರೆಗೆ ಕೇವಲ ನಿರ್ದೇಶನಗಳನ್ನು ನೀಡಲಾಗುತ್ತಿದೆ. ಆದರೆ ಈಗ ಸಾಕಷ್ಟು ಮುಂಚಿತವಾಗಿಯೇ ಸರ್ಕಾರಿ ಆದೇಶ ಹೊರಡಿಸಲಾಗಿದೆ ಎಂದಿದ್ದಾರೆ.
ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರೊಂದಿಗೆ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ ಖಂಡ್ರೆ, ಪರಿಸರ ಸ್ನೇಹಿ ವಿಗ್ರಹಗಳನ್ನು ಉ್ತೇಜಿಸಲ ಮತ್ತು ಹಸಿರು ಪಟಾಕಿಗಳ ಬಳಕೆಯನ್ನು ಉತ್ತೇಜಿಸಲು ಜಿಲ್ಲಾಧಿಕಾರಿಗಳ ಅಡಿಯಲ್ಲಿ ಸಮಿತಿಗಳನ್ನು ರಚಿಸಿ ಆದೇಶ ಹೊರಡಿಸಿದ್ದಾರೆ.
ಇತ್ತೀಚೆಗೆ ಶಿರೂರು ಮತ್ತು ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದ ಬಗ್ಗೆ ಪ್ರಸ್ತಾಪಿಸಿದ ಖಂಡ್ರೆ, ಪರಿಸರವನ್ನು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು. ಸರ್ಕಾರವು ಪಿಒಪಿ ವಿಗ್ರಹಗಳ ತಯಾರಿಕೆ, ಮಾರಾಟ, ಸಂಗ್ರಹಣೆ ಮತ್ತು ಸಾಗಣೆಯನ್ನು ನಿಷೇಧಿಸಿದೆ, ಆದರೂ ಅವು ಬಳಕೆಯಲ್ಲಿವೆ ಎಂದು ಕಂಡುಬಂದ ಉದಾಹರಣೆಗಳಿವೆ. ಹೀಗಾಗಿ ಕಠಿಣ ಕ್ರಮ ಕೈಗೊಳ್ಳಲು, ಪೊಲೀಸ್, ಸಾರಿಗೆ ಮತ್ತು ವಾಣಿಜ್ಯ ತೆರಿಗೆ ಇಲಾಖೆಯೊಂದಿಗೆ ಸಮನ್ವಯತೆಯಿಂದ ಕೆಲಸ ಮಾಡಲು ಪರಿಸರ ಇಲಾಖೆ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಸಾರ್ವಜನಿಕ ಮೂರ್ತಿ ಪ್ರತಿಷ್ಠಾಪನೆಗೆ ಲಿಖಿತ ಅನುಮತಿ ನೀಡುವಾಗ ಕಡ್ಡಾಯವಾಗಿ ಪಿಒಪಿ ಮೂರ್ತಿಗಳನ್ನು ಬಳಸುವಂತಿಲ್ಲ, ಪಟಾಕಿ ಸಿಡಿಸುವಂತಿಲ್ಲ, ಪರಿಸರ ಸ್ನೇಹಿಯಾಗಿ ವಿಗ್ರಹಗಳನ್ನು ವಿಸರ್ಜಿಸಲಾಗುವುದು ಎಂದು ಮುಚ್ಚಳಿಕೆ ಬರೆಸಿಕೊಳ್ಳುವಂತೆ ಖಂಡ್ರೆ ಸೂಚಿಸಿದ್ದಾರೆ.

Categories
ಕರಾವಳಿ

12 ವರ್ಷಗಳ ಬಳಿಕ ರಬ್ಬರ್ ಬೆಳೆ ಬೆಲೆ ಏರಿಕೆ!

12 ವರ್ಷಗಳ ಬಳಿಕ ರಬ್ಬರ್ ಬೆಳೆ ಬೆಲೆ ಏರಿಕೆ!
– ರಬ್ಬರ್ ಬೆಲೆ ದಾಖಲೆಯ ಏರಿಕೆ: ಬೆಳೆಗಾರರಿಗೆ ಖುಷಿ
– ಕರ್ನಾಟಕದ ಕರಾವಳಿ, ಮಲೆನಾಡು ಭಾಗದಲ್ಲಿ ಅತೀ ಹೆಚ್ಚು ಬೆಳೆ

NAMMUR EXPRESS NEWS
ಮಂಗಳೂರು: ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಬೆಳೆಯುತ್ತಿದ್ದ ರಬ್ಬರ್ ಬೆಲೆ 12 ವರ್ಷಗಳ ನಂತರ ದಾಖಲೆಯ ಗರಿಷ್ಠ ಮಟ್ಟದಲ್ಲಿ ಏರಿಕೆ ಕಂಡಿದೆ.
ರಬ್ಬರ್ ಬೋರ್ಡ್ ಕೆಜಿಗೆ 235 ರೂ. ಬೆಲೆ ನಿಗದಿಪಡಿಸಿದೆ. ಈ ಮೂಲಕ ರೈತರಲ್ಲಿ ಹೊಸ ಭರವಸೆ ಮೂಡಿದೆ.
ಕಾಸರಗೋಡು ಸೇರಿದಂತೆ ಕೇರಳದ ಬಹುತೇಕ ಪ್ರದೇಶಗಳಲ್ಲಿ 237 ರಿಂದ 241 ರೂ.ಗಳಿಗೆ ಮಾರಾಟವಾಗುತ್ತಿದೆ. ಕೆಲವು ವ್ಯಾಪಾರಿಗಳು 241 ರೂ.ಗೆ ಮಾರಾಟ ಮಾಡಿದ್ದಾರೆ. 2011-12ರಲ್ಲಿ ರಬ್ಬರ್ ಶೀಟ್‌ ಗಳ ಬೆಲೆ ಕಿಲೋಗೆ 283 ರೂ. ತಲುಪಿತ್ತು. ಬಳಿಕ ಬೆಲೆ ಇಳಿದಿತ್ತು.

ರಬ್ಬರ್ ಇಲ್ಲ: ಪೂರೈಕೆ ಕೊರತೆ

ಅತಿವೃಷ್ಟಿ ಹಾಗೂ ಹವಾಮಾನ ವೈಪರೀತ್ಯದಿಂದ ಮಾರುಕಟ್ಟೆಯಲ್ಲಿ ರಬ್ಬರ್ ಕೊರತೆ ಉಂಟಾಗಿದೆ. ಕಳೆದ ಕೆಲವು ದಿನಗಳಿಂದ ಕೆಜಿಗೆ 2 ರಿಂದ 3 ರೂ. ಬೆಲೆ ಏರಿಕೆಯಾಗಿದೆ. ಇದಕ್ಕೆ ಮುಖ್ಯ ಕರಣ ಪೂರೈಕೆ ಕೊರತೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ಸದ್ಯದ ಪರಿಸ್ಥಿತಿ ಮುಂದುವರಿದರೆ ಒಂದು ವಾರದಲ್ಲಿ ಕಿಲೋಗೆ 250 ರೂ. ತಲುಪಬಹುದು ಎಂದು ಅಂದಾಜಿಸಲಗಿದೆ.

ಟೈರ್ ತಯಾರಿಸಲು ಹೆಚ್ಚಾಗಿ ನೈಸರ್ಗಿಕ ರಬ್ಬರ್ ಬಳಕೆ!

ದೇಶೀಯ ಮಾರುಕಟ್ಟೆಯಲ್ಲಿ ರಬ್ಬರ್ ಬೆಲೆ ಹೆಚ್ಚಾದಾಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗುವುದು ಸಾಮಾನ್ಯ. ಆದರೆ, ಈಗಿನ ಪರಿಸ್ಥಿತಿ ಭಿನ್ನವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಬ್ಬರ್ ಬೆಲೆಗಳು ಭಾರತದ ರಬ್ಬರ್ ಬೆಲೆಗಿಂತ 50 ರೂ.ನಷ್ಟು ಕಡಿಮೆ ಇದೆ. ಬ್ಯಾಂಕಾಕ್‌ನಲ್ಲಿ ಆರ್‌ಎಎಸ್ 4 ಗ್ರೇಡ್‌ನ ನೈಸರ್ಗಿಕ ರಬ್ಬರ್ ದರ 200 ರೂ.ಗೆ ತಲುಪಿದೆ. ವಿದ್ಯುತ್ ವಾಹನಗಳಿಗೆ ಟೈರ್ ತಯಾರಿಸಲು ಹೆಚ್ಚಾಗಿ ನೈಸರ್ಗಿಕ ರಬ್ಬರ್ ಅನ್ನೇ ಬಳಸಲಾಗುತ್ತಿದೆ. ಇದು ಬೇಡಿಕೆ ಮತ್ತು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಲಾಗಿದೆ.

Categories
ಕರಾವಳಿ

ಕರಾವಳಿಯಲ್ಲಿ ಭಾರೀ ಮಳೆ!

ಕರಾವಳಿಯಲ್ಲಿ ಭಾರೀ ಮಳೆ!
– ಬೆಳಿಗ್ಗೆಯಿಂದಲೇ ಹಲವೆಡೆ ಭಾರೀ ಮಳೆ
– ಆ. 27ರವರೆಗೆ ಮಳೆ ಸಾಧ್ಯತೆ
– ಕರಾವಳಿ ಜಿಲ್ಲೆಗಳ ಜನರೇ ಎಚ್ಚರ ಎಚ್ಚರ

NAMMUR EXPRESS NEWS
ಮಂಗಳೂರು/ಉಡುಪಿ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಹಲವೆಡೆ ಶನಿವಾರ ಬೆಳಿಗ್ಗೆಯಿಂದಲೇ ಭಾರೀ ಮಳೆಯಾಗುತ್ತಿದೆ.
ಕಾರ್ಕಳ, ಹೆಬ್ರಿ, ಮೂಡಬಿದ್ರೆ, ಬೆಳ್ತಂಗಡಿ ಸೇರಿ ಅನೇಕ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಜುಲೈ ಮಧ್ಯದ ನಂತರ ಮಳೆ ಎಲ್ಲೆಡೆ ಕಾಣೆಯಾಗಿದ್ದು, ಇದೀಗ ಮತ್ತೆ ಮಳೆ ಶುರುವಾಗಿದೆ.
ಕರ್ನಾಟಕದ ಉಳಿದ ಜಿಲ್ಲೆಗಳು ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಆ.24ರಂದು ಕೂಡ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಹುತೇಕ ಕಡೆಗಳಲ್ಲಿ ಭಾರಿ ಮಳೆ ಸಾಧ್ಯತೆಯಿದೆ. ಒಳನಾಡಿನ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇದೇ ರೀತಿಯ ಹವಾಮಾನ ಆ.27ರವರೆಗೆ ಇರಲಿದೆ ಎಂದು ಮಾಹಿತಿ ನೀಡಿದೆ.

Categories
ಕಾರ್ಕಳ

ಹಿಂದೂ ಯುವತಿ ಅತ್ಯಾಚಾರ ಆರೋಪ: ಕಾರ್ಕಳ ಪ್ರಕ್ಷುಬ್ಧ!

ಹಿಂದೂ ಯುವತಿ ಅತ್ಯಾಚಾರ ಆರೋಪ: ಕಾರ್ಕಳ ಪ್ರಕ್ಷುಬ್ಧ!
– ಹಿಂದೂ ಯುವತಿಯ ಕರೆದೊಯ್ದ ಮುಸ್ಲಿಂ ಯುವಕ
– ಕಾರನ್ನು ಅಡ್ಡಗಟ್ಟಿ ಹಿಡಿದ ಹಿಂದೂ ಕಾರ್ಯಕರ್ತರು
– ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ:ಗಾಂಜಾ ನೀಡಿ ಅತ್ಯಾಚಾರ ಆರೋಪ

NAMMUR EXPRESS NEWS
ಕಾರ್ಕಳ: ಉಡುಪಿ ಜಿಲ್ಲೆ ಕಾರ್ಕಳದ ಕುಕ್ಕುಂದೂರು ಗ್ರಾಮದ 21ರ ವಯಸ್ಸಿನ ಯುವತಿಗೆ ಅನ್ಯಕೋಮಿನ ಮೂವರು ಯುವಕರು ಅಮಲು ಪದಾರ್ಥ ನೀಡಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ಕಾರ್ಕಳ ಪ್ರಕ್ಷುಬ್ಧಗೊಂಡಿದೆ.
ಸಂತ್ರಸ್ತೆ ಯುವತಿ ಕುಕ್ಕುಂದೂರಿನ ಮನೆ ಪಕ್ಕದ ಸ್ಥಳಕ್ಕೆ ಕರೆದೊಯ್ದು ಹಾಡಿಯಲ್ಲಿ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.
ಆರಂಭದಲ್ಲಿ ಯುವತಿಗೆ ಮದ್ಯ ಹಾಗೂ ಇತರ ಮಾದಕ ಪದಾರ್ಥ ನೀಡಿ ಓರ್ವ ಅತ್ಯಾಚಾರ ಎಸಗಿದ್ದು, ಬಳಿಕ ಮತ್ತಿಬ್ಬರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ. ಯುವತಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ತಿಳಿದು ಬಂದಿದೆ.
ಬಜರಂಗದಳ ರಾಜ್ಯ ಸಂಚಾಲಕ ಸುನಿಲ್ ಕೆ.ಆರ್. ಅವರು ಘಟನೆಯ್ು ಖಂಡಿಸಿದ್ದು ತಕ್ಷಣ ಎಲ್ಲ ಆರೋಪಿಗಳನ್ನು ಬಂಧಿಸಬೇಕು. ಇಲ್ಲವಾದಲ್ಲಿ ಠಾಣೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ. ಬೋವಿ ಸಮುದಾಯದವರು ಕೂಡ ಘಟನೆಯನ್ನು ಖಂಡಿಸಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಪರಿಚಯದವನಿಂದಲೇ ಕೃತ್ಯ?

ಆರೋಪಿಗಳ ಪೈಕಿ ಓರ್ವನು ಯುವತಿಗೆ ಪರಿಚಿತನಾಗಿದ್ದಾನೆ ಎಂದು ತಿಳಿದುಬಂದಿದೆ. ಈತನೇ ಈಕೆಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿ ಬಳಿಕ ಮತ್ತಿಬ್ಬರನ್ನು ಕರೆಸಿಕೊಂಡಿದ್ದ ಎಂದು ಹೇಳಲಾಗುತ್ತಿದೆ. ಯುವತಿಯು ಜೇನುಕೃಷಿ ಮಾಡಿಕೊಂಡಿರುತ್ತಿದ್ದಳು. ಈಕೆಯ ಕುಟುಂಬ ಕೆಲವು ವರ್ಷಗಳ ಹಿಂದೆಯೇ ಕಾರ್ಕಳಕ್ಕೆ ಬಂದು ನೆಲೆಸಿತ್ತು ಎಂದು ತಿಳಿದುಬಂದಿದೆ.
ಶುಕ್ರವಾರ ಸಂಜೆ 7 ಗಂಟೆಯ ವೇಳೆ ಘಟನೆ ನಡೆದಿದ್ದಾಗಿ ತಿಳಿದುಬಂದಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಯುವತಿಯನ್ನು ಕಾರ್ಕಳದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆ ಎದುರು ಹಿಂದೂ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿದ್ದು, ಪೊಲೀಸರು ತೀವ್ರ ನಿಗಾ ಇರಿಸಿದ್ದಾರೆ. ಪ್ರಕರಣ ಸಂಬಂಧ ಅಲ್ತಾಫ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ

ನಡೆದಿದ್ದು ಏನು?

ಅಲ್ತಾಪ್ ಎಂಬಾತ ಕಾರಿನಲ್ಲಿ ಹಿಂದೂ ಯುವತಿಯನ್ನು ಕೂರಿಸಿಕೊಂಡು ಹೋಗಿದ್ದ. ಸಂಜೆಯಾಗುತ್ತಲೇ ಯುವತಿಯನ್ನ ವಾಪಸ್ ಕರೆ ತಂದಿದ್ದ, ವಿಷಯ ತಿಳಿಯುತ್ತಿದ್ದಂತೆ ಕಾರು ಅಡ್ಡಗಟ್ಟಿದ ಹಿಂದೂ ಕಾರ್ಯಕರ್ತರು ಗಲಾಟೆ ಮಾಡಿದ್ದಾರೆ. ಇನ್ನು ಕಾರಿನಲ್ಲಿದ್ದ ಯುವತಿ ನಶೆಯಲ್ಲಿದ್ದುದ್ದನ್ನು ಕಂಡ ಹಿಂದೂ ಕಾರ್ಯಕರ್ತರು ಗರಂ ಆಗಿದ್ದಾರೆ.
ಘಟನೆ ಬೆನ್ನಲ್ಲೇ ಇಡೀ ಕಾರ್ಕಳದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ.
ಸ್ಥಳಕ್ಕೆ ಬಂದ ಪೊಲೀಸರು ಯುವತಿಯನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಿಂದೂ ಸಂಘಟನೆ ಕಾರ್ಯಕರ್ತರು ಆಸ್ಪತ್ರೆ ಮುಂಭಾಗ ಜಮಾಯಿಸಿದ್ದಾರೆ. ಇನ್ನು ಯುವತಿ ಕಾರ್ಕಳದಲ್ಲಿ ಉದ್ಯೋಗವೊಂದರಲ್ಲಿ ಇದ್ದು, ಅಲ್ತಾಫ್ ಗೆ ಈಗಾಗಲೇ ಮದುವೆಯಾಗಿ ಮಕ್ಕಳಿರುವುದಾಗಿ ಆರೋಪ ಕಳಿಬಂದಿದೆ. ಕಾರ್ಕಳ ನಗ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪುಸಲಾಯಿಸಿ ಕರೆತಂದಿದ್ದ ಅನ್ಯಕೋಮಿನ ಯುವಕನಿಗೆ ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರು ಥಳಿಸಿ, ಪೊಲೀಸರಿಗೆ ಒಪ್ಪಿಸಿದ ಘಟನೆ ಕೆಲವು ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದಿತ್ತು. ಇದೀಗ ಇದೇ ಮಾದರಿ ಘಟನೆ ಕರಾವಳಿಯಲ್ಲಿ ನಡೆದಿದೆ.

Categories
ಜ್ಯೋತಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಯಾವ ರಾಶಿಯವರಿಗೆ ಅನುಕೂಲ ? ಯಾವ ರಾಶಿಯವರಿಗೆ ಅನಾನುಕೂಲ ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ಹೊಸ ವ್ಯವಹಾರ ಪ್ರಾರಂಭಿಸಲು ಇದು ಉತ್ತಮ ದಿನ. ಇಂದು ತುಂಬಾ ಬಿಡುವಿಲ್ಲದ ಕೆಲಸವಿರುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆ ಇರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಿರಿ. ಇಂದು ನೀವು ವಿಶೇಷ ವ್ಯಕ್ತಿಯ ಪ್ರೀತಿಯನ್ನು ಅನುಭವಿಸಬಹುದು. ಆದರೆ ಸಂಬಂಧಕ್ಕೆ ಆತುರಪಡಬೇಡಿ.

** ವೃಷಭ ರಾಶಿ :
ಮನಸ್ಸು ಗೊಂದಲಮಯವಾಗಿರುತ್ತದೆ. ಅಜ್ಞಾತ ಭಯವು ನಿಮ್ಮನ್ನು ಕಾಡುತ್ತದೆ. ಹೂಡಿಕೆಯಿಂದ ಆರ್ಥಿಕ ನಷ್ಟದ ಲಕ್ಷಣಗಳಿವೆ. ಕೆಲಸದ ಸವಾಲುಗಳು ಹೆಚ್ಚಾಗುತ್ತವೆ. ಎಲ್ಲಾ ಕೆಲಸಗಳು ಮಧ್ಯತರವಾಗಿ ನಡಯುತ್ತವೆ. ಕೆಲವು ಜನರು ಪೂರ್ವಜರ ಆಸ್ತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದಗಳಲ್ಲಿ ಗೆಲ್ಲುತ್ತಾರೆ. ಸಂಪತ್ತು ಮತ್ತು ಆಸ್ತಿಯಲ್ಲಿ ಹೆಚ್ಚಳದ ಸಾಧ್ಯತೆಗಳಿವೆ. ಪ್ರಯಾಣದ ಅವಕಾಶವಿರುತ್ತದೆ. ಇಂದು ನೀವು ಭೂಮಿ ಅಥವಾ ವಾಹನವನ್ನು ಖರೀದಿಸಲು ಯೋಜಿಸಬಹುದು.

** ಮಿಥುನ ರಾಶಿ
ಇಂದು ಉದ್ಯಮಿಗಳಿಗೆ ಹೊಸ ಸ್ಥಳದಲ್ಲಿ ವ್ಯಾಪಾರವನ್ನು ಪ್ರಾರಂಭಿಸಲು ಅವಕಾಶ ಸಿಗಬಹುದು. ಇಂದು ಗ್ರಾಹಕರು ನಿಮ್ಮ ಕೆಲಸದಿಂದ ಸಂತೋಷವಾಗಿರುತ್ತಾರೆ. ಕುಟುಂಬದ ಸದಸ್ಯರೊಂದಿಗೆ ಯಾವುದೇ ಕುಟುಂಬ ಸಮಾರಂಭದಲ್ಲಿ ಭಾಗವಹಿಸಬಹುದು. ಹೊಸ ಆಸ್ತಿ ಖರೀದಿಗೆ ಇಂದು ಶುಭ ದಿನ. ವಿದ್ಯಾರ್ಥಿಗಳು ತಮ್ಮ ಶ್ರಮದ ಫಲವನ್ನು ಪಡೆಯುತ್ತಾರೆ. ಉನ್ನತ ಶಿಕ್ಷಣ ಪಡೆಯಲು, ಪ್ರತಿಷ್ಠಿತ ಕಾಲೇಜಿನಲ್ಲಿ ಸುಲಭವಾಗಿ ಪ್ರವೇಶ ಪಡೆಯಬಹುದು.

** ಕರ್ಕಾಟಕ ರಾಶಿ :
ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಹೊಸ ಆದಾಯದ ಮೂಲಗಳಿಂದ ಆರ್ಥಿಕ ಲಾಭವಿದೆ. ಸಂಪತ್ತು ವೃದ್ಧಿಯಾಗಲಿದೆ. ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ. ಹೊಸ ಕಾರ್ಯಗಳಿಗೆ ಜವಾಬ್ದಾರಿ ಸಿಗಲಿದೆ. ಇಂದು ನೀವು ಕುಟುಂಬದೊಂದಿಗೆ ಎಲ್ಲೋ ಪ್ರಯಾಣಿಸಲು ಯೋಜಿಸಬಹುದು. ಇದು ಕೌಟುಂಬಿಕ ಜೀವನದಲ್ಲಿ ಸಂತೋಷವನ್ನು ತರುತ್ತದೆ. ಆದರೆ ದೀರ್ಘ ಪ್ರಯಾಣವನ್ನು ತಪ್ಪಿಸಿ.

** ಸಿಂಹ ರಾಶಿ :
ವೃತ್ತಿ ಜೀವನದಲ್ಲಿ ಸವಾಲುಗಳು ಹೆಚ್ಚಾಗಲಿವೆ. ಹೊಸ ಕಾರ್ಯಗಳಿಗೆ ಜವಾಬ್ದಾರಿ ಸಿಗಲಿದೆ. ನೀವು ಕಚೇರಿಯಲ್ಲಿ ಹೆಚ್ಚು ಸಮಯ ಕಳೆಯಬೇಕಾಗಬಹುದು. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಕುಟುಂಬದ ಸದಸ್ಯರ ವಿವಾಹವನ್ನು ನಿಶ್ಚಯಿಸಬಹುದು. ಇಂದು ದೂರದ ಪ್ರಯಾಣವನ್ನು ತಪ್ಪಿಸಿ. ನೀವು ಶೈಕ್ಷಣಿಕ ಕೆಲಸದಲ್ಲಿ ಗೊಂದಲವನ್ನು ಅನುಭವಿಸುವಿರಿ. ಮಕ್ಕಳು ಏಕಾಗ್ರತೆಯ ಕೊರತೆಯನ್ನು ಅನುಭವಿಸಬಹುದು. ರೋಮ್ಯಾಂಟಿಕ್ ಜೀವನ ಉತ್ತಮವಾಗಿರುತ್ತದೆ.

** ಕನ್ಯಾ ರಾಶಿ :
ಇಂದು ಹೊಸ ವಾಹನ ಅಥವಾ ಎಲೆಕ್ಟ್ರಾನಿಕ್ ಗ್ಯಾಜೆಟ್ ಖರೀದಿಸಲು ಯೋಚಿಸಬಹುದು. ತಮ್ಮ ಉದ್ಯೋಗಗಳನ್ನು ಬದಲಾಯಿಸಲು ಬಯಸುವ ಜನರಿಗೆ ಸಿಹಿ ಸುದ್ದಿ ಸಿಗಬಹುದು. ನೀವು ಸಂದರ್ಶನಕ್ಕೆ ಕರೆ ಪಡೆಯಬಹುದು. ಇಂದು, ಕುಟುಂಬ ಸ್ಯರ ಬೆಂಬಲದಿಂದ ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ಮಾನಸಿಕ ಒತ್ತಡದಿಂದ ಮುಕ್ತಿ ಪಡೆಯುತ್ತೀರಿ.

** ತುಲಾ ರಾಶಿ :
ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗುತ್ತವೆ. ನಿಮ್ಮ ಕೌಶಲ್ಯಗಳನ್ನು ಸುಧಾರಿಸಲು ಪ್ರಯತ್ನಿಸಿ. ಅತಿಥಿಗಳ ಆಗಮನದಿಂದ ಮನೆಯಲ್ಲಿ ಆಹ್ಲಾದಕರ ವಾತಾವರಣವಿರುತ್ತದೆ. ಇಂದು ನೀವು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸುವಿರಿ. ಶಕ್ತಿ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ. ಕೆಲವರಿಗೆ ಹೊಸ ಆಸ್ತಿ ಖರೀದಿಗೆ ಆಫರ್‌ಗಳು ಬರಲಿವೆ. ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಯಶಸ್ಸು ದೊರೆಯಲಿದೆ.

** ವೃಶ್ಚಿಕ ರಾಶಿ :
ಹಣಕಾಸಿನ ವಿಷಯಗಳಲ್ಲಿ ಅದೃಷ್ಟವಂತರು. ಆದರೆ ಇಂದು ಹೂಡಿಕೆ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ಕಚೇರಿಯಲ್ಲಿ ಕೆಲವು ಕೆಲಸಗಳನ್ನು ಮತ್ತೆ ಮಾಡಬೇಕಾಗಬಹುದು. ಹೊಸ ಹೂಡಿಕೆ ಅವಕಾಶಗಳಿಂದ ಆರ್ಥಿಕ ಲಾಭ ಇರುತ್ತದೆ. ಮನೆಯಲ್ಲಿರುವ ಹಿರಿಯರು ಮಕ್ಕಳಿಗೆ ಹಣವನ್ನು ಹಂಚಬಹುದು. ಕೆಲವರಿಗೆ ಮನೆ ರಿಪೇರಿ ಆಗಬಹುದು.

** ಧನಸ್ಸು ರಾಶಿ :
ಹಳೆಯ ಹೂಡಿಕೆಯಿಂದ ಉತ್ತಮ ಲಾಭವನ್ನು ಪಡೆಯುತ್ತೀರಿ. ನೀವು ಕಚೇರಿಯಲ್ಲಿ ಉನ್ನತ ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗುತ್ತವೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಆದಾಯದಲ್ಲಿ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಹಣ ಉಳಿತಾಯದತ್ತ ಗಮನ ಹರಿಸಿ. ಹೊಸ ಹಣಕಾಸು ಯೋಜನೆಯನ್ನು ಮಾಡಿ. ಇಂದು ನಿಮ್ಮ ಕುಟುಂಬದ ಜವಾಬ್ದಾರಿಗಳು ಹೆಚ್ಚಾಗುತ್ತವೆ.

** ಮಕರ ರಾಶಿ :
ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಸಂಪತ್ತು ವೃದ್ಧಿಯಾಗಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ನೀವು ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಕೆಲವರು ಹೊಸ ಆಸ್ತಿಯನ್ನು ಖರೀದಿಸಲು ಯೋಜಿಸಬಹುದು. ಇಂದು ನೀವು ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ವಿವಾದಗಳಿಂದ ಪರಿಹಾರವನ್ನು ಪಡೆಯುತ್ತೀರಿ. ಇದು ಪ್ರೀತಿಯ ಜೀವನದಲ್ಲಿ ಸಂತೋಷವನ್ನು ತರುತ್ತದೆ.

** ಕುಂಭ ರಾಶಿ :
ಇಂದು ನಿಮಗೆ ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ವೃತ್ತಿ ಜೀವನದಲ್ಲಿ ಸಾಕಷ್ಟು ಪ್ರಗತಿ ಹೊಂದುವಿರಿ. ಆದರೆ ಮನಸ್ಸು ಆರೋಗ್ಯದ ಬಗ್ಗೆ ಚಿಂತಿಸುತ್ತಲೇ ಇರುತ್ತದೆ. ಕುಟುಂಬದೊಂದಿಗೆ ಮೋಜಿನ ಕ್ಷಣಗಳನ್ನು ಆಂದಿಸುವಿರಿ. ಕೆಲವರು ಹೊಸ ಫ್ಾಟ್ ಅಥವಾ ಮನೆ ಖರೀದಿಸಲು ಯೋಜಿಸಬಹುದು. ವೈವಾಹಿಕ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ. ಪ್ರೇಮ ಸಂಬಂಧಗಳಲ್ಲಿ ಮಧುರತೆ ಇರುತ್ತದೆ.

** ಮೀನ ರಾಶಿ :
ವೃತ್ತಿಪರ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಿ. ತರಾತುರಿಯಲ್ಲಿ ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡಬೇಡಿ. ಇಂದು ಅದೃಷ್ಟವು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ನಿಮ್ಮ ಕಡೆ ಇರುತ್ತದೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಒಂಟಿ ವ್ಯಕ್ತಿಗಳು ಹೊಸ ಜನರನ್ನು ಭೇಟಿಯಾಗುತ್ತಾರೆ. ಕೆಲವರು ಕುಟುಂಬದೊಂದಿಗೆ ವಿಹಾರಕ್ಕೆ ಯೋಜಿಸಬಹುದು. ನಿಮ್ಮ ದಿನಚರಿಯಿಂದ ವಿರಾಮ ತೆಗೆದುಕೊಳ್ಳಿ

Categories
ಬೆಂಗಳೂರು

ಸಿದ್ದರಾಮಯ್ಯ ವಿರುದ್ಧ ಮತ್ತೊಂದು ದೂರು!

ಸಿದ್ದರಾಮಯ್ಯ ವಿರುದ್ಧ ಮತ್ತೊಂದು ದೂರು!
– 1494 ಕೋಟಿ ರೂ ಹಣ ದುರುಪಯೋಗ ಆರೋಪ
– ಸಿಎಂ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು

NAMMUR EXPRESS NEWS
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು ನೀಡಲಾಗಿದೆ. ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ನಲ್ಲಿ ಬಾಕಿ ಉಳಿದಿರುವ 1494 ಕೋಟಿ ರೂ. ಹಣ ದುರುಪಯೋಗದ ಬಗ್ಗೆ ಎಂಎಲ್ಸಿ ಅರುಣ್ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶಿಸಿ ರಾಜ್ಯಪಾಲರು ಹೊರಡಿಸಿರೋ ಪ್ರಾಸಿಕ್ಯೂಷನ್ ಸರ್ಕಾರ ಮತ್ತು ಗವರ್ನರ್ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಪ್ರಾಸಿಕ್ಯೂಷನ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಸಿಎಂಗೆ, ಕೊಂಚ ರಿಲೀಫ್ ಸಿಕ್ಕಿದೆ. ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು ನೀಡಲಾಗಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯತ್ನಲ್ಲಿ ಬಾಕಿ ಉಳಿದಿರುವ 1494 ಕೋಟಿ ರೂ. ಹಣ ದುರುಪಯೋಗದ ಬಗ್ಗೆ ವಿಧಾನಪರಿಷತ್ ಸದಸ್ಯ ಅರುಣ್ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
1494 ಕೋಟಿ ರೂ. ಹಣ ಎಲ್ಲಿದೆ, ರಾಜ್ಯ ಸರ್ಕಾರದ ಖಜಾನೆಯಲ್ಲೂ ಇಲ್ಲ. ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರೂ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ನೀಡಲಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಲಾಗಿದೆ.

Categories
ಮಲ್ನಾಡ್

ತಂದೆ ಮಾಡಿದ್ದ ಸಾಲಕ್ಕೆ ಮಗನಿಗೆ ಹಲ್ಲೆ ಮನನೊಂದ ಯುವಕ ಆತ್ಮಹತ್ಯೆ

ಟಾಪ್ 4 ನ್ಯೂಸ್ ಮಲ್ನಾಡ್

ಭದ್ರಾವತಿ :ತಂದೆ ಮಾಡಿದ್ದ ಸಾಲಕ್ಕೆ ಮಗನಿಗೆ ಹಲ್ಲೆ ಮನನೊಂದ ಯುವಕ ಆತ್ಮಹತ್ಯೆ
– ಶಿವಮೊಗ್ಗ : ವಿದ್ಯುತ್ ತಗುಲಿ ಗಾರೆ ಕೆಲಸದ ಯುವಕ ಸಾವು
– ಸಾಗರ: ಚಂಪಕ ಸರಸ್ ನಲ್ಲಿ ಈಜಲು ಇಳಿದ ಯುವಕ ಸಾವು
– ಮೂಡಿಗೆರೆ: ಬೈಕ್ ಮತ್ತು ಟಾಟಾ ಸುಮೋ ವಾಹನ ಮುಖಾಮುಖಿ ಡಿಕ್ಕಿ

NAMMUR EXPRESS NEWS
ಭದ್ರಾವತಿ : ತಂದೆ ಮಾಡಿದ್ದ ಸಾಲಕ್ಕೆ ಮಗನಿಗೆ ಹಲ್ಲೆ ಮಾಡಲಾಗಿದ್ದು, ಮನನೊಂದ ಪುತ್ರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭದ್ರಾವತಿಯ ಪೇಪರ್ ಟೌನ್ ನಲ್ಲಿ ಸಂಭವಿಸಿದೆ. ಸ್ಟೀವನ್ (25) ಯುವಕ ಮೃತನಾಗಿದ್ದು, ಭದ್ರಾವತಿಯ ಪೇಪರ್ ಟೌನ್ ಬಡಾವಣೆಯಲ್ಲಿ ಘಟನೆ ನಡೆದಿದೆ. ಪರಶುರಾಮ್ ಎಂಬುವರ ಬಳಿ 2 ಲಕ್ಷ ಸಾಲವನ್ನ ಪೇಪರ್ ಟೌನ್ ನ ನಿವಾಸಿ ಜೋಸೆಫ್ ಎಂಬುವರು ಪಡೆದಿದ್ದರು. ಜೋಸೆಫ್, ಮೃತ ಸ್ಟೀವನ್ ನ ತಂದೆಯಾಗಿದ್ದಾರೆ. ಸಾಲ ಪಡೆದುಕೊಂಡು ತೀರಿಸಲಾಗದೇ ಜೋಸೆಫ್ ಮನೆ ಬಿಟ್ಟು ಹೋಗಿದ್ದನು. ಸಾಲ ವಸೂಲಿಗಾಗಿ ಸ್ಟೀವನ್ ಕರೆದುಕೊಂಡು ಹೋಗಿ ಪರಶುರಾಮ ಹಲ್ಲೆ ನಡೆಸಿರುವುದಾಗಿ ಇಂದು ದಾಖಲಾಗಿದ್ದ ಎಫ್ಐಆರ್ ನಲ್ಲಿ ಆರೋಪಿಸಲಾಗದೆ. ಲ್ಲೆಯಿಂದ ಮನನೊಂದ ಸ್ಟೀವನ್ ಮನೆಗೆ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ದಾಖಲಾಗಿದೆ.
ಘಟನೆ ಕುರಿತು ಪೇಪರ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಧ್ಯ‌ ಭದ್ರಾವತಿ ಡಿವೈಎಸ್ಪಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆರೋಪಿಯ ಬಂಧನದ ಬಗ್ಗೆ ಇನ್ನೂ ತಿಳಿದು ಬರಬೇಕಿದೆ.

– ಶಿವಮೊಗ್ಗ : ವಿದ್ಯುತ್ ತಗುಲಿ ಗಾರೆ ಕೆಲಸದ ಯುವಕ ಸಾವು

ಶಿವಮೊಗ್ಗ : ಹಳೆ ಜಂಬರಘಟ್ಟದಲ್ಲಿ ಗಾರೆ ಕೆಲಸ ಮಾಡುವ ವೇಳೆ ಯುವಕನೋರ್ವನಿಗೆ ವಿದ್ಯುತ್ ತಗುಲಿ ಸಾವನ್ನಪ್ಪಿದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಹೊಳೆಹೊನ್ನೂರಿನ ಉಪ್ಪಾರರ ಕೇರಿಯ ವಾಸಿ ಶರತ್ ಮೃತ ಯುವಕ. ಹಳೇ ಜಂಬರಘಟ್ಟದ ದೇವಸ್ಥಾನದ ಕೆಲಸ ಮಾಡುವ ವೇಳೆ ವಿದ್ಯುತ್ ತಂತಿ ತಗುಲಿ ಕೆಳಕ್ಕೆ ಬಿದ್ದಾಗ ಕೂಡಲೇ ಮೆಗ್ಗಾನ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಅಷ್ಟರಲ್ಲೇ ಆತನ ಸಾವಾಗಿತ್ತು ಎಂದು ಗೊತ್ತಾಗಿದೆ.

– ಸಾಗರ: ಚಂಪಕ ಸರಸ್ ನಲ್ಲಿ ಈಜಲು ಇಳಿದ ಯುವಕ ಸಾವು

ಸಾಗರ: ಆನಂದಪುರ ಇಲ್ಲಿನ ಮಹಂತಿನ ಮಠ ಚಂಪಕ ಸರಸ್ ನಲ್ಲಿ ಈಜಲು ಇಳಿದ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಂಗಳೂರು ಮೂಲದ ಕುಶಾಲ್ (22) ಎಂಬ ಇಂಜಿನಿಯರ್ ಸಾವನ್ನಪ್ಪಿರುವ ದುರ್ದೈವಿ. ಕುಶಾಲ್, ಸಾಯಿ ರಾಮ್ ಹಾಗೂ ಯಶ್ವಂತ್ ಎಂಬ ಯುವಕರು ಬೆಂಗಳೂರಿನಿಂದ ಕುವೆಂಪುರವರ ಮನೆಗೆ ತೆರಳುವ ಉದ್ದೇಶದಿಂದ ಟ್ರಿಪ್ ಪ್ಲಾನ್ ಮಾಡಿ ಬಂದಿದ್ದರು, ಶಿವಮೊಗ್ಗ ಸಮೀಪಿಸುತ್ತಿದ್ದಂತೆ ಕುಶಾಲ್ ರವರ ಸ್ನೇಹಿತ ಆನಂದಪುರ ಸಮೀಪ ಚಂಪಕ ಸರಸು ಎಂಬ ಉತ್ತಮ ಸ್ಥಳವಿದೆ ನೋಡಿಕೊಂಡು ಬನ್ನಿ ಎಂದು ತಿಳಿಸಿದ್ದರು ಇದರ ಹಿನ್ನೆಲೆ ಚಂಪಕ ಸರಸುವಿಗೆ ಬಂದ ಕುಶಾಲ್ ಮತ್ತು ತಂಡದವರು ಫೋಟೋಶೂಟ್ ಕೂಡ ಮಾಡಿದ್ದಾರೆ.
ಚಂಪಕ ಸರಸುವಿನಲ್ಲಿ ಕೆಲ ಸ್ಥಳೀಯ ಯುವಕರು ಈಜಾಡುತ್ತಿದ್ದನ್ನು ಕಂಡು ಕುಶಾಲ್ ಕೂಡ ಬಟ್ಟೆ ತೆಗೆದು ಈಜಾಡಲು ಪ್ರಾರಂಭಿಸಿದ್ದಾನೆ, ಆದರೆ ಕೆಲ ಹೊತ್ತಿನಲ್ಲಿ ನೀರಿನಲ್ಲಿ ಮುಳುಗಿದ ವ್ಯಕ್ತಿ ನಾಪತ್ತೆಯಾಗಿದ್ದು ಆತನ ಸ್ನೇಹಿತರಿಗೆ ಭಯವನ್ನುಂುಮಾಡಿದೆ, ತಕ್ಷಣ ಅವರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ, ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ಮೃತ ದೇಹವನ್ನು ಹೊರತೆಗೆದಿದ್ದಾರೆ.
ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

– ಮೂಡಿಗೆರೆ: ಬೈಕ್ ಮತ್ತು ಟಾಟಾ ಸುಮೋ ವಾಹನ ಮುಖಾಮುಖಿ ಡಿಕ್ಕಿ

ಮೂಡಿಗೆರೆ: ಬೈಕ್ ಮತ್ತು ಟಾಟಾ ಸುಮೋ ವಾಹನ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಗ್ಗಸಗೊಡು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ನಿರಂಜನ್ (25) ಮೃತ ಪಟ್ಟ ವ್ಯಕ್ತಿ. ಮೂಡಿಗೆರೆಯಿಂದ ಹೆಗ್ಗುಡ್ಲು ಎಂಬ ತನ್ನ ಊರಿಗೆ ತೆರಳುತ್ತಿದ್ದ ಯುವಕ, ಧರ್ಮಸ್ಥಳದಿಂದ ಚಿಕ್ಕಮಗಳೂರು ಕಡೆಗೆ ಹೋಗುತ್ತಿದ್ದ ಟಾಟಾ ಸುಮೋ ಬೈಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ನಿರಂಜನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆ ಕುರಿತು ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಕರಾವಳಿ

ಉಡುಪಿಯಲ್ಲಿ ಪತ್ನಿ ಕಡಿದು ಕೊಂದು ಹಾಕಿದ ಪತಿ!

ಟಾಪ್ ನ್ಯೂಸ್ ಕರಾವಳಿ

ಉಡುಪಿಯಲ್ಲಿ ಪತ್ನಿ ಕಡಿದು ಕೊಂದು ಹಾಕಿದ ಪತಿ!
– ಆನ್ ಲೈನ್ ಟ್ರೇಡಿಂಗ್ ನಲ್ಲಿ ಮೋಸ; ನಾಲ್ವರು ಆರೋಪಿಗಳ ಬಂಧನ
– ಮೂಡುಬಿದಿರೆ: ತಂದೆಯಿಂದಲೇ ಅತ್ಯಾಚಾರ ಹೈಸ್ಕೂಲ್ ವಿದ್ಯಾರ್ಥಿನಿ ಗರ್ಭಿಣಿ!
– ಮಂಗಳೂರು: ಪರಸ್ಪರ ಹೊಡೆದಾಡಿಕೊಂಡ ಬೀದಿಬದಿ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು!

NAMMUR EXPRESS NEWS
ಉಡುಪಿ: ಪತಿಯೇ ಪತ್ನಿಯನ್ನು ಬರ್ಬರವಾಗಿ ಕೊಂದಿರುವ ಆರೋಪ ಕೇಳಿ ಬಂದಿದ್ದು, ಆರೋಪಿಯನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.
ಜಯಶ್ರೀ (28) ಕೊಲೆಯಾದವಳು. ಕಿರಣ್ ಉಪಾಧ್ಯ(30) ಕೊಲೆ ಆರೋಪಿಯಾಗಿದ್ದಾನೆ.ಉಡುಪಿಯಲ್ಲಿ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಕಾರ್ಕಡ ಕಡಿದ ಹೆದ್ದಾರಿ ಬಳಿ ಘಟನೆ ನಡೆದಿದೆ. ಈ ಜೋಡಿ ಕಾರ್ಕಡ ಅಂಗನವಾಡಿ ಕೇಂದ್ರದ ಸಮೀಪ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಶುಕ್ರವಾರ ಮುಂಜಾನೆ ಪತ್ನಿಯನ್ನು ಕಿರಣ್ ಉಪಾಧ್ಯ ಕೊಲೆ ಮಾಡಿದ್ದ ಎನ್ನುವ ಮಾಹಿತಿ ಇೆ.
ಶಂಕ ಮೇರೆಗೆ ಪತಿ ಕಿರಣ್ ಉಪಾಧ್ಯ ಗುಂಡ್ಮಿಯನ್ನು ಕೋಟ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ದೂರು ದಾಖಲಾಗಿದ್ದುಈ ಕುರಿತು ಪೊಲೀಸರು ವಿವರ ಸಂಗ್ರಹಿಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಉಡುಪಿ: ಆನ್ ಲೈನ್ ಟ್ರೇಡಿಂಗ್ ಮೋಸ; ಆರೋಪಿಗಳ ಬಂಧನ

ಉಡುಪಿ: ಆನ್ ಲೈನ್ ಟ್ರೇಡಿಂಗ್ ನಲ್ಲಿ ಹೆಚ್ಚಿನ ಲಾಭಾಂಶದ ಆಸೆ ತೋರಿಸಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಉಡುಪಿ ಸೆನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ತಾಲೂಕಿನ ಕುರಿಯ ಗ್ರಾಮದ ನಿವಾಸಿ ಮಹಮ್ಮದ್ ಮುಸ್ತಫಾ ಪಿ (36) ಕಾಸರಗೋಡು ಮಂಜೇಶ್ವರ ತಾಲೂಕಿನ ಕುಂಬ್ಳೆಯ ನಿವಾಸಿ ಖಾಲಿದ್ ಬಿ. (39), ಕಾಸರಗೋಡು ನೀರ್ಚಾಲ್ ಗ್ರಾಮದ ನಿವಾಸಿ ಮೊಹಮ್ಮದ್ ಸಫಾನ್ ಕೆ.ಎ, (22) ಹಾಗೂ ಮಂಗಳೂರು ಪ್ರಗತಿ ಬಿಜೈ ನಿವಾಸಿ ಸತೀಶ್ ಶೇಟ್ (52) ಬಂಧಿತ ಆರೋಪಿಗಳು.ಬಂಧಿತ ಆರೋಪಿಗಳು ಉಪೇಂದ್ರ ಭಟ್ ಎಂಬವರಿಗೆ ಆನ್ ಲೈನ್ ಟ್ರೇಡಿಂಗ್ ನಲ್ಲಿ ಹೆಚ್ಚಿನ ಲಾಭಾಂಶದ ಆಸೆ ತೋರಿಸಿ ಒಟ್ಟು 33,10,000 ರೂ. ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದರು.ಈ ಬಗ್ಗೆ ಉಪೇಂದ್ರ ಭಟ್ ಅವರು ಉಡುಪಿ ಸೆನ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಇಳಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, 5 ಮೊಬೈಲ್ ಪೋನ್ ಹಾಗೂ 13 ಲಕ್ಷ ರೂ. ನಗದನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಪ್ರಕರಣದ ಪ್ರಮುಖ ಸೂತ್ರಧಾರಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ತಂದೆಯಿಂದಲೇ ಅತ್ಯಾಚಾರ ಹೈಸ್ಕೂಲ್ ವಿದ್ಯಾರ್ಥಿನಿ ಗರ್ಭಿಣಿ!

ಮೂಡುಬಿದಿರೆ: ತನ್ನ ಅಪ್ರಾಪ್ತ ಪುತ್ರಿಯ ಮೇಲೆ ಅತ್ಯಾಚಾರ ಎಸಗಿ ಆಕೆ ಗರ್ಭವತಿಯಾದ ಅಮಾನುಷ ಘಟನೆ ಮೂಡುಬಿದಿರೆ ಹೊರವಲಯ ಗ್ರಾಮಾಂತರ ಪ್ರದೇಶದಲ್ಲಿ ನಡೆದಿದೆ. ಬಾಲಕಿಯ ಆರೋಪಿ ತಂದೆಯನ್ನು ಮೂಡುಬಿದಿರೆ ಪೊಲೀಸರು ಫೊಕ್ಸ್ ಪ್ರಕರಣದಲ್ಲಿ ಬಂಧಿಸಿದ್ದಾರೆ.
ಐವತ್ತೈದರ ಹರೆಯದ ಬಂಧಿತ ಆರೋಪಿ ವೃತ್ತಿಯಲ್ಲಿ ಕೂಲಿ ಕಾರ್ಮಿಕ. ಆರು ತಿಂಗಳ ಹಿಂದೆ ಮನೆಯಲ್ಲೆ ತನ್ ಮಳನ್ನು ಲೈಂಗಿಕವಾಗಿ ಬಳಸಿಕೊಂಡು ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ. ಪ್ರೌಢ ಶಾಲೆಯಲ್ಲಿ ಓದುತ್ತಿರುವ ಆಕೆಯ ಆರೋಗ್ಯದಲ್ಲಿ ಏರು ಪೇರು ಉಂಟಾದಾಗ ಮಂಗಳೂರಿನ ಸರಕಾರಿ ಆಸ್ಪತ್ರೆಗೆ ಆತನೇ ಕರೆದೊಯ್ದಿದ್ದ. ಅಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಮಗಳು ಆರು ತಿಂಗಳ ಗರ್ಭಿಣಿಯಾಗಿರುವುದು ಪತ್ತೆಯಾಗಿದೆ.
ಪೊಲೀಸ್‌ ತನಿಖೆಯ ದಾರಿ ತಪ್ಪಿಸಲು ಪ್ರಾರಂಭದಲ್ಲಿ ಈತ ಬೇರೆಯವರ ಹೆಸರು ಹೇಳಿದ್ದ ಎನ್ನಲಾಗಿದೆ. ನಂತರ ಹೆಚ್ಚಿನ ವಿಚಾರಣೆ ನಡೆಸಿದಾಗ ಕೃತ್ಯ ನಡೆಸಿದ್ದನ್ನು ಕೊನೆಗೂ ಒಪ್ಪಿಕೊಂಡನೆನ್ನಲಾಗಿದೆ. ಮಂಗಳೂರು ಮಹಿಳಾ ಪೊಲೀಸ್‌ಠಾಣೆಯಲ್ಲಿ ಆರೋಪಿ ವಿರುದ್ಧ ಫೊಕ್ಸ್ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಗುರುವಾರ ಮೂಡುಬಿದಿರೆ ಪೊಲೀಸ್ ಇನ್‌ಸ್ಪೆಕ್ಟರ್ ಸಂದೇಶ್ ಕುಮಾರ್ ಬಂಧಿಸಿದ್ದಾರೆ.

ಪರಸ್ಪರ ಹೊಡೆದಾಡಿಕೊಂಡ ಬೀದಿಬದಿ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು!

ಮಂಗಳೂರು: ಬೀದಿಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆಯ ವೇಳೆ ಮಹಾನಗರ ಪಾಲಿಕೆಯ ವಿರುದ್ಧ ಒಗ್ಗೂಡಿ ಪ್ರತಿಭಟನೆ ನಡೆಸಿದ್ದ ಬೀದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳ ಮಧ್ಯೆ ಗುರುವಾರ ಹೊಡೆದಾಟ ನಡೆದಿದ್ದು, ಬಂದರು ಠಾಣೆಗೆ ದೂರು ನೀಡಲಾಗಿದೆ.ದ.ಕ. ಜಿಲ್ಲಾ ಬೀದಿ ವ್ಯಾಪಾರಿಗಳ ಶ್ರೇಯೋಭಿವೃದ್ಧಿ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ಮಿಯಾಝ್ ಮತ್ತಿತರರು ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಸಂಘದ ಕೋಶಾಧಿಕಾರಿ ಆಸೀಫ್ ಬಾವ ಉರುಮಣೆ ಮತ್ತು ಉಪಾಧ್ಯಕ್ಷ ರಹ್ಮಾನ್ ಅಡ್ಯಾ‌ರ್ ಎಂಬವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಈ ಮಧ್ಯೆ ಸಂಘದ ಕೋಶಾಧಿಕಾರಿ ಆಸೀಫ್ ಬಾವ ಉರುಮಣೆ, ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ, ನವಾಝ್ ಕಣ್ಣೂರು, ಆನಂದ ಮತ್ತಿತರರ ವಿರುದ್ಧ ಬೀದಿಬದಿ ವ್ಯಾಪಾರಸ್ಥರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಆ‌ರ್.ಎಸ್. ಬಂದರು ಠಾಣೆಗೆ ದೂರು ನೀಡಿದ್ದಾರೆ.ಗುರುವಾರ ಸಂಜೆ ಸುಮಾರು 4ಕ್ಕೆ ಸಂಘದ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದಾಗ ಆರೋಪಿಗಳು ಕಚೇರಿಗೆ ಅಕ್ರಾಗಿ ಪ್ರವೇಶಿಸಿ ಜೀವ ಬೆದರಿಕೆ ಹಾಕಿ, ಹಲ್ಲೆ ನಡೆಸಲು ಮುಂದಾಗಿದ್ದಾರೆ. ಸಂಘದ ಬೋರ್ಡ್ ಮತ್ತು ಸಿಐಟಿಯು ಬಾವುಟವನ್ನು ಎಸೆದು ದಾಂಧಲೆ ನಡೆಸಿದ್ದಾರೆ ಎಂದು ಸಂತೋಷ್‌ ದೂರಿನಲ್ಲಿ ತಿಳಿಸಿದ್ದಾರೆ.

ಶಾಲಾ ವಿದ್ಯಾರ್ಥಿಗಳಿದ್ದ ರಿಕ್ಷಾ – ಕಾರು ಡಿಕ್ಕಿ: ವಿದ್ಯಾರ್ಥಿಗಳಿಗೆ ಗಾಯ!

ಪುತ್ತೂರು: ಬೊಳುವಾರು – ಹಾರಾಡಿ ನಡುವೆ ರಿಕ್ಷಾ ಹಾಗೂ ಬ್ರೇಜಾ ಕಾರಿನ ನಡುವೆ ಅಪಘಾತ ಸಂಭವಿಸಿದ ಘಟನೆ ಗುರುವಾರ ಸಂಜೆ ನಡೆದಿದೆ.ಘಟನೆಯಲ್ಲಿ ಶಾಲಾ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಉಪ್ಪಿನಂಗಡಿ ಕಡೆಯಿಂದ ಬರುತ್ತಿದ್ದ ಕಾರು ಕೆಎ 21 ಬಿ 8632 ಹಾಗೂ ಪುತ್ತೂರಿನಿಂದ ತೆರಳುತ್ತಿದ್ದ ರಿಕ್ಷಾ ಕೆಎ 21 ಝಡ್ 4852 ನಡುವೆ ಅಪಘಾತ ಸಂಭವಿಸಿದೆ.

Categories
ತೀರ್ಥಹಳ್ಳಿ

ಆರಗದಲ್ಲಿ ಕ್ರೀಡಾಕೂಟ ಯಶಸ್ಸಿಗೆ ಕೈಜೋಡಿಸಿ

ಆರಗದಲ್ಲಿ ಕ್ರೀಡಾಕೂಟ ಯಶಸ್ಸಿಗೆ ಕೈಜೋಡಿಸಿ
– ತಾಲೂಕು ಮಟ್ಟದ ಪ್ರೌಢಶಾಲೆಗಳ ವಿದ್ಯಾರ್ಥಿನಿಯರ ಕ್ರೀಡಾಕೂಟ
– ಸೆಪ್ಟೆಂಬರ್ 10 ಮತ್ತು 11 ರಂದು ಕ್ರೀಡಾಕೂಟ ನೆರವೇರಲಿದೆ

NAMMUR EXPRESS NEWS
2024-25ನೇ ಸಾಲಿನ ತೀರ್ಥಹಳ್ಳಿ ತಾಲೂಕು ಮಟ್ಟದ ಪ್ರೌಢಶಾಲೆಗಳ ವಿದ್ಯಾರ್ಥಿನಿಯರ ಕ್ರೀಡಾಕೂಟ ಆಯೋಜಿಸುವ ಸದವಕಾಶ ಐತಿಹಾಸಿಕ ಹಿನ್ನೆಲೆ ಹೊಂದಿರುವ ಆರಗದ ಸರ್ಕಾರಿ ಪ್ರೌಢಶಾಲೆಗೆ ಬಂದಿದೆ. 15 ವರ್ಷಗಳ ನಂತರ ಆರಗ ಸರ್ಕಾರಿ ಪ್ರೌಢಶಾಲೆ ಆತಿಥ್ಯ ವಹಿಸುತ್ತಿದ್ದು, 5-6 ಲಕ್ಷ ರೂ. ವೆಚ್ಚದ ಅಂದಾಜು ಮಾಡಲಾಗಿದೆ. ಕ್ರೀಡಾಪಟುಗಳು, ತೀರ್ಪುಗಾರರು, ಶಿಕ್ಷಕರು, ಕ್ರೀಡಾಭಿಮಾನಿಗಳಿಗೆ ಶುಚಿ-ರುಚಿಯಾದ ಊಟೋಪಚಾರದ ವ್ಯವಸ್ಥೆ ಮಾಡುವುದು ಮತ್ತು ಊರಿನ ಗೌರವ ಹೆಚ್ಚಿಸಲಿದೆ. ಕ್ರೀಡಾಕೂಟದ ದಿನಾಂಕ ಸೆಪ್ಟೆಂಬರ್ 10 ಸೋಮವಾರ, 11 ಮಂಗಳವಾರ ನಡೆಯಲಿದ್ದುಸ್ಥಳ: ಹಳೇಕೋಟೆ ಕ್ರೀಡಾಂಗಣ, ಆರಗದಲ್ಲಿ ನೆರವೇರಲಿದೆ.

ಬನ್ನಿ, ತಾಲೂಕು ಕ್ರೀಡಾಕೂಟ ಯಶಸ್ವಿಗೊಳಿಸೋಣ
ಆತಿಥ್ಯವೆಂದರೆ ಆರಗ ಹಾಗೂ ಎಲ್ಲರೂ ಕೈಜೋಡಿಸೋಣ. ಸರ್ಕಾರಿ ಪ್ರೌಢಶಾಲೆ, ಆರಗ, ಹಳೆ ವಿದ್ಯಾರ್ಥಿಗಳ ಸಂಘ, ಆರಗ ಹಾಗೂ ಆರಗದ ಸಮಸ್ತ ಗ್ರಾಮಸ್ಥರು ಸೂಚಿಸಿದ್ದಾರೆ.
ದೇಣಿಗೆ ನೀಡುವವರು ಸಂಪರ್ಕಿಸಿ: 9481091633, 8762298545, 9480078535, 9449623772 9449056201, 6360713292, 9980519237, 9480113232

Categories
ಚಿಕ್ಕಮಗಳೂರು

ಶೃಂಗೇರಿ – ಮಂಗಳೂರು ಹೈವೆ ಆಗಲೀಕರಣ ಭಾಗ್ಯ!

ಶೃಂಗೇರಿ – ಮಂಗಳೂರು ಹೈವೆ ಆಗಲೀಕರಣ ಭಾಗ್ಯ!
– ಈಡೇರಲಿದೆ ಮಲೆನಾಡಿಗರ ಬಹುದಿನದ ಬೇಡಿಕೆ
– ಮಲೆನಾಡಿಗರ ಬೇಡಿಕೆಗೆ ಸ್ಪಂದಿಸಿದ ಸಂಸದ ಕೋಟಾ

NAMMUR EXPRESS NEWS
ಶೃಂಗೇರಿ: ಶೃಂಗೇರಿ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ರಾಷ್ಟ್ರೀಯ ಹೆದ್ದಾರಿ 169 ಶೃಂಗೇರಿ- ಎಸ್ ಕೆ ಬಾರ್ಡ್‌ರ್ ರಸ್ತೆ ಅಗಲೀಕರಣಕ್ಕೆ ಕೇಂದ್ರ ಸರ್ಕಾರ ಸಮ್ಮತಿ ನೀಡಿದ್ದು ಈ ಮೂಲಕ ಮಲೆನಾಡು ಕರಾವಳಿಯ ಜೀವನಾಡಿಯಾಗಿರುವ ಈ ಹೆದ್ದಾರಿ ಅಗಲೀಕರಣ ಎಲ್ಲರಿಗೂ ಸಂತಸ ತಂದಿದೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗೆ ಹಾದು ಹೋಗುವ ಈ ಕಿರಿದಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅನೇಕ ಬಾರಿ ಸಂಚಾರಕ್ಕೆ ತೊಂದರೆಯಾಗಿ, ಅನೇಕ ಅಪಘಾತಗಳು ಹಾಗೂ ಸಾವು ನೋವುಗಳು ಸಂಭವಿಸಿದೆ.ಮಳೆಗಾಲದಲ್ಲಿ ಇಲ್ಲಿಯ ಸಂಚಾರ ತುಂಬಾ ಕಷ್ಟಕರವಾಗಿತ್ತು.
ರಸ್ತೆ ಅಗಲೀಕರಣಕ್ಕೆ ಅನುಮತಿ ಕೊಡಿಸುವಲ್ಲಿ ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿಯವರು ಸಂಬಂಧಪಟ್ಟ ಇಲಾಖೆಯ ಸಚಿವರು ಅಧಿಕಾರಿಗಳನ್ನು ಭೇಟಿಯಾಗಿ ತ್ವರಿತಗತಿಯಲ್ಲಿ ಕಾರ್ಯ ಸಾಧಿಸುವಲ್ಲಿ ಯಶಸ್ವಿಯಾಗಿ್ದು ಮಲೆನಾಡಿಗರ ಬಹುದಿನದ ಬೇಡಿಕೆಗೆ ತಕ್ಷಣ ಸ್ಪಂದಿಸಿದ್ದಾರೆ.
ರಸ್ತೆ ಅಗಲೀಕರಣಕ್ಕೆ ಹಸಿರು ನಿಶಾನೆ ತೋರಿರುವ ಕೇಂದ್ರ ಸರ್ಕಾರ ಸಂಬಂಧಿಸಿದ ಇಲಾಖೆಗೆ ಡಿಪಿಆರ್ ರೂಪಿಸುವಂತೆ ನಿರ್ದೇಶನ ನೀಡಿದೆ.
ಸಂಸದರ ಈ ಜನಪರ ಕಾರ್ಯಕ್ಕೆ ಕ್ಷೇತ್ರದ ಜನ ಮೆಚ್ಚುಗೆ ವ್ಯಕ್ತವಾಗಿದೆ.

ಮೊಬೈಲ್ ಟವರ್‌ ಕುರಿತು ಶೀಘ್ರದಲ್ಲಿ ಪರಿಶೀಲನೆ

ಗ್ರಾಮೀಣ ಪ್ರದೇಶದ ಮೊಬೈಲ್ ಟವರ್‌ಗಳ ಕುರಿತು ಸ್ಪಂದನೆ ನೀಡಬೇಕು ಎಂದು ಸಂಸದರ ಮುಂದೆ ಬೇಡಿಕೆ ಇಟ್ಟಿದ್ದು ಸಂಸದರು ಕೂಡಲೇ ಸಮಸ್ಯೆಗೆ ಪರಿಹಾರ ನೀಡುತ್ತಾರೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.