Categories
ಬೆಂಗಳೂರು

ಇನ್ಮುಂದೆ ರಾಜ್ಯದೆಲ್ಲೆಡೆ ಕೆಮಿಕಲ್ ಬಳಸಿದ ಕೇಕ್ ನಿಷೇಧ?

ಇನ್ಮುಂದೆ ರಾಜ್ಯದೆಲ್ಲೆಡೆ ಕೆಮಿಕಲ್ ಬಳಸಿದ ಕೇಕ್ ನಿಷೇಧ?
* ಕೇಕ್ ನಲ್ಲಿ ಕೃತಕ ಬಣ್ಣ ಬಳಕೆ ನಿರ್ಬಂಧ
* ಕೇಕ್ ಬಣ್ಣದಲ್ಲಿ ಅಪಾಯಕಾರಿ ಅಂಶ ಪತ್ತೆ

NAMMUR EXPRESS NEWS
ಬೆಂಗಳೂರು : ಗೋಬಿ ಮಂಚೂರಿ, ಕಬಾಬ್ ಬಳಿಕ ಕೇಕ್ ನಲ್ಲಿ ಕೃತಕ ಬಣ್ಣ ಬಳಕೆಗೆ ನಿರ್ಬಂಧ ಹೇರಲು ಆರೋಗ್ಯ ಇಲಾಖೆ ನಿರ್ಧರಿಸಿದೆ.
ಕರ್ನಾಟಕದಲ್ಲಿ ಕಲರ್ ಕಾಟನ್ ಕ್ಯಾಂಡಿ ಬಳಕೆಯನ್ನು ರಾಜ್ಯ ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿದೆ. ಕೃತಕ ಬಣ್ಣ ಬಳಸುವುದರಿಂದ ಆರೋಗ್ಯದ ಮೇಲೆ ಭಾರೀ ದುಷ್ಪರಿಣಾಮ ಬೀರುವುದರಿಂದ ಕಲರ್ ಕಾಟನ್ ಕ್ಯಾಂಡಿಯನ್ನು ನಿಷೇಧಿಸಲಾಗಿದೆ. ಜೊತೆಗೆ ಗೋಬಿ ಮಂಚೂರಿ ತಯಾರಿಸುವಾಗ ಕೃತಕ ಬಣ್ಣ ಬಳಸುವುದನ್ನು ಕೂಡ ನಿಷೇಧಿಸಲು ಸರ್ಕಾರ ಆದೇಶಿಸಿದೆ. ಇದೀಗ ಕೇಕ್ ನ ಸರದಿ.
ಕೇಕ್ ನಲ್ಲಿ ಬಳಸುವ ಕೃತಕ ಬಣ್ಣವನ್ನು ನಿರ್ಬಂಧಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಈ ಬಗ್ಗೆ ಶೀಘ್ರವೇ ಸರ್ಕಾರ ಆದೇಶ ಹೊರಡಿಸುವ ಸಾಧ್ಯತೆಯಿದೆ. ಕೇಕ್ ನಲ್ಲಿ ಬಳಸುವ ಬಣ್ಣದಲ್ಲಿ ಅಪಾಯಕಾರಿ ಅಂಶಗಳು ಪತ್ತೆಯಾದ ಹಿನ್ನೆಲೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗಿದೆ.

Categories
ರಾಜ್ಯ

ಹೆಂಡತಿಯೇ ಗಂಡನಿಗೆ ಪ್ರೇಯಸಿ ಜತೆ ಅದ್ಧೂರಿ ಮದುವೆ ಮಾಡಿಸಿದಳು!

ಹೆಂಡತಿಯೇ ಗಂಡನಿಗೆ ಪ್ರೇಯಸಿ ಜತೆ ಅದ್ಧೂರಿ ಮದುವೆ ಮಾಡಿಸಿದಳು!
• ಬುದ್ಧಿಮಾಂದ್ಯ ಯುವತಿ ಜತೆ ಮದುವೆ
• ಎರಡನೇ ಮದುವೆ ಸುದ್ದಿ ಎಲ್ಲೆಡೆ ವೈರಲ್‌!

NAMMUR EXPRESS NEWS
ಯಾವುದೇ ಹೆಣ್ಣಾದ್ರೂ ತನ್ನ ಗಂಡನನ್ನು ಬೇರೋಬ್ಬರ ಜೊತೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಇನ್ನೂ ಪತಿ ಎರಡನೇ ಮದುವೆಯಾಗುತ್ತೇನೆ ಎಂದು ಬಯಸಿದ್ದರೆ ಆತನ ಕಥೆ ಮುಗಿಯಿತೆಂದೇ ಅರ್ಥ. ಇಲ್ಲೊಬ್ಬಳು ತ್ಯಾಗಮಯಿ ಪತ್ನಿ ತಾನೇ ಮುಂದೆ ನಿಂತು ತನ್ನ ಗಂಡನಿಗೆ ಅದ್ಧೂರಿಯಾಗಿ ಮದುವೆ ಮಾಡಿಸಿದ್ದಾಳೆ!.
ಹೌದು ತನ್ನ ಗಂಡನನ್ನು ಬುದ್ಧಿಮಾಂದ್ಯ ಯುವತಿಯೊಬ್ಬಳು ಮನಸಾರೆ ಇಷ್ಟಪಟ್ಟಂತಹ ವಿಷಯ ತಿಳಿದ ಈಕೆಯನ್ನು ಆ ಯುವತಿಗೆ ತನ್ನ ಪತಿಯೊಂದಿಗೆಯೇ ಮದುವೆ ಮಾಡಿಸಿದ್ದಾಳೆ. ಈ ಸುದ್ದಿ ಇದೀಗ ಭಾರೀ ವೈರಲ್‌ ಆಗುತ್ತಿದೆ.
ಪತಿಯ ವಿಚಾರದಲ್ಲಿ ಪ್ರತಿಯೊಬ್ಬ ಹೆಣ್ಣು ಕೂಡಾ ಪೊಸೆಸಿವ್‌ ಆಗಿರ್ತಾಳೆ. ತನ್ನ ಗಂಡನನ್ನು ಯಾರಾದ್ರೂ ಬುಟ್ಟಿಗೆ ಹಾಕಿಕೊಂಡರೆ ಅಥವಾ ಗಂಡನೇ ಬೇರೊಬ್ಬ ಮಹಿಳೆಯ ಜೊತೆ ಸಂಬಂಧ ಇಟ್ಟುಕೊಂಡರೆ ಹೆಂಡತಿಯಾದವಳು ಈ ವಿಚಾರವನ್ನು ಯಾವುದೇ ಕಾರಣಕ್ೂ ಹಿಸಿಕೊಳ್ಳುವುದಿಲ್ಲ. ಕೋಪ ಮಾಡಿಕೊಳ್ಳುತ್ತಾಳೆ. ಆದ್ರೆ ಇಲ್ಲಿ ಇದಕ್ಕೆ ತದ್ವಿರುದ್ಧವಾದ ವಿಚಿತ್ರ ಘಟನೆಯೊಂದು ನಡೆದಿದ್ದು, ಪತ್ನಿಯೇ ತನ್ನ ಮುದ್ದಿನ ಗಂಡನಿಗೆ ಅದ್ಧೂರಿಯಾಗಿ ಎರಡನೇ ಮದುವೆ ಮಾಡಿಸಿದ್ದಾಳೆ. ಹೌದು ತನ್ನ ಗಂಡನನ್ನು ಬುದ್ಧಿಮಾಂದ್ಯ ಯುವತಿಯೊಬ್ಬಳು ಮನಸಾರೆ ಇಷ್ಟಪಟ್ಟಂತಹ ವಿಷಯ ತಿಳಿದ ಈಕೆ ಆ ಯುವತಿಗೆ ತನ್ನ ಪತಿಯೊಂದಿಗೆಯೇ ಮದುವೆ ಮಾಡಿಸಿದ್ದಾಳೆ. ಈ ಸುದ್ದಿ ಇದೀಗ ಭಾರೀ ವೈರಲ್‌ ಆಗುತ್ತಿದೆ.
ಉಗ್ಗಂಪಲ್ಲಿ ಗ್ರಾಮದ ಸುರೇಶ್‌ ಮತ್ತು ಸರಿತಾ ಎಂಬವರು ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದು, ಇವರು ಮಗ ಮತ್ತು ಮಗಳೊಂದಿಗೆ ಸುಂದರವಾದ ಜೀವನ ನಡೆಸುತ್ತಿದ್ದರು. ಇತ್ತೀಚಿಗೆ ಮಹಬೂಬಾಬಾದ್‌ ಪಟ್ಟಣದಲ್ಲಿರುವ ಸುರೇಶ್‌ ಸಂಬಂಧಿ ಮಗಳಾದ ಸಂಧ್ಯಾ ಎಂಬವಳು ತನ್ನ ಸೋದರ ಮಾವನಾದ ಸುರೇಶ್‌ ಅವರನ್ನು ಪ್ರೀತಿಸಲು ಶುರು ಮಾಡಿದ್ದಾಳೆ. ಈ ವಿಷಯ ತಿಳಿದು ಆಕೆಯ ಪೋಷಕರು, “ನನ್ನ ಮಗಳಿಗೆ ನಿನ್ನ ಗಂಡನೊಂದಿಗೆ ಮದುವೆ ಮಾಡಿಸುವೆಯಾ”? ಎಂದು ಸರಿತಾ ಬಳಿ ಕೇಳಿಕೊಂಡಿದ್ದಾರೆ. ಸಂಧ್ಯಾ ಬುದ್ಧಿಮಾಂದ್ಯ ಯುವತಿಯಾಗಿರುವುದರಿಂದ ಆಕೆಯ ಇಷ್ಟವನ್ನು ನೆರವೇರಿಸಲು ಹಾಗೂ ಆಕೆಗೆ ಒಂದೊಳ್ಳೆ ಜೀವನವನ್ನು ಕಲ್ಪಿಸಬೇಕೆಂದು ಮಾನವೀಯ ದೃಷ್ಟಿಯಿಂದ ಸರಿತಾ ಈ ನಿರ್ಧಾರಕ್ಕೆ ಒಪ್ಪಿಗೆ ನೀಡಿ, ಆಗಸ್ಟ್‌ 28 ಹತ್ತಿರದ ದೇವಸ್ಥಾನದಲ್ಲಿ ಬಂಧು ಮಿತ್ರರ ಸಮ್ಮುಖದಲ್ಲಿ ಪತಿ ಸುರೇಶ್‌ ಹಾಗೂ ಸಂಧ್ಯಾಗೆ ಅದ್ಧೂರಿಯಾಗಿ ಮದುವೆ ಮಾಡಿಸಿದ್ದಾರೆ. ಈ ಎರಡನೇ ಮದುವೆ ಸುದ್ದಿ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ.

Categories
Uncategorized

ಕರಾವಳಿ, ಮಲೆನಾಡು ಭಾಗದಲ್ಲಿ 3 ದಿನ ಭಾರೀ ಮಳೆ?

ಕರಾವಳಿ, ಮಲೆನಾಡು ಭಾಗದಲ್ಲಿ 3 ದಿನ ಭಾರೀ ಮಳೆ?
• ಕರಾವಳಿ ಭಾಗದಲ್ಲಿ ಹೈ ಅಲರ್ಟ್ ಘೋಷಣೆ!
• ಬೆಂಗಳೂರು ನಗರದಲ್ಲೂ ಮಳೆ ಸಾಧ್ಯತೆ

NAMMUR EXPRESS NEWS
ದೆಹಲಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಮತ್ತು ಅರಬ್ಬಿ ಸಮುದ್ರದಲ್ಲಿ ಮೇಲುಬ್ಬರದ ಪರಿಣಾಮವಾಗಿ ಕರ್ನಾಟಕದಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಶೇಷವಾಗಿ ಇಂದಿನಿಂದ ಕರ್ನಾಟಕ ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಮಳೆಯ ಆರ್ಭಟ ಇನ್ನಷ್ಟು ಹೆಚ್ಚಲಿದೆ. ಹೀಗಾಗಿ ಕರಾವಳಿ ಭಾಗದಲ್ಲಿ ಹೈ ಅಲರ್ಟ್ ಘೋಷಣೆ ಮಾಡುವ ಸಾಧ್ಯತೆ ಇದೆ.
ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನದ ಮಲೆನಾಡು ಭಾಗಗಳಾದ ಸಕಲೇಶಪುರ ತಾಲ್ಲೂಕು ಸೇರಿದಂತೆ ಹಲವಾರು ಜಿಲ್ಲೆಗಳಿಗೆ ಭಾರಿ ಮಳೆ ಬೀಳುವ ಮುನ್ನೆಚ್ಚರಿಕೆ ನೀಡಲಾಗಿದೆ.
ಕರ್ನಾಟಕದ ಒಳನಾಡಿನಲ್ಲಿ ಮಳೆ ಹೆಚ್ಚುವ ಮುನ್ಸೂಚನೆ ಇದ್ದು, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಹೆಚ್ಚಿನ ಮಳೆ ಆಗಲಿದ್ದು, ದಕ್ಷಿಣ ತ್ತು ಉತ್ತರ ಒಳನಾಡು ಜಿಲ್ಲೆಗಳ್ಲೂ ಮಳೆ ತನ್ನ ಅಬ್ಬರ ತೋರಿಸಲಿದೆ. ಹೀಗಾಗಿ ರಾಜಧಾನಿ ಬೆಂಗಳೂರು ಸೇರಿದಂತೆ, ಮೈಸೂರು, ತುಮಕೂರು, ಹಾಸನ ಬೆಳಗಾವಿ, ಧಾರವಾಡ ಭಾಗದಲ್ಲೂ ಮಳೆ ಹೆಚ್ಚುವ ಬಗ್ಗೆ ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು ನಗರದ ಪ್ರಮುಖ ಪ್ರದೇಶಗಳಿಗೆ ಮಳೆಯಿಂದ ಕಂಟಕವೇ ಎದುರಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಮಳೆಯ ಆರ್ಭಟ ಬೆಂಗಳೂರಲ್ಲಿ ಜಾಸ್ತಿ ಆಗಲಿದ್ದು, ಆ. 30,31,01ರಂದು ಕೂಡ ಮಳೆ ಅಬ್ಬರಿಸುವ ಮುನ್ಸೂಚನೆಯ ಮಾಹಿತಿ ದೊರಕಿದೆ.

Categories
ಬೆಂಗಳೂರು

ರಾಜ್ಯದಲ್ಲಿ ಮದ್ಯ ಬೆಲೆ ಹೆಚ್ಚಳ?

ರಾಜ್ಯದಲ್ಲಿ ಮದ್ಯ ಬೆಲೆ ಹೆಚ್ಚಳ?
– ಬಿಯರ್ ಬೆಲೆ 10-30 ರೂ ಹೆಚ್ಚಳ
– ಮದ್ಯ ಪ್ರಿಯರಿಗೆ ನಿರಾಸೆ ಸುದ್ದಿ

NAMMUR EXPRESS NEWS
ಬೆಂಗಳೂರು : ಕರ್ನಾಟಕದಲ್ಲಿ ಬಿಯರ್ ಬೆಲೆ ಶೀಘ್ರದಲ್ಲೇ ಪ್ರತಿ ಬಾಟಲಿಗೆ ಸುಮಾರು 10 ರಿಂದ 30 ರೂ.ಗಳಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.ಹಾಗೆಯೇ ರಾಜ್ಯ ಸರ್ಕಾರವು ದರಗಳನ್ನು ಪರಿಷ್ಕರಿಸಿದ ನಂತರ ಪ್ರೀಮಿಯಂ ಮದ್ಯವು ಅಗ್ಗವಾಗಬಹುದು ಎಂದು ವರದಿ ಹೇಳಿದೆ.
ಕರ್ನಾಟಕದಲ್ಲಿ ಉದ್ದೇಶಿತ ಮದ್ಯದ ಬೆಲೆ ಪರಿಷ್ಕರಣೆಯು ಭಾರತೀಯ ನಿರ್ಮಿತ ಮದ್ಯ ಮಾರಾಟ ಮತ್ತು ಅಬಕಾರಿ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಸಿದ್ದರಾಮಯ್ಯ ಸರ್ಕಾರವು ಬಿಯರ್ ಬೆಲೆಯನ್ನು ಹೆಚ್ಚಿಸಲು ಮತ್ತು ಪ್ರೀಮಿಯಂ ಮದ್ಯದ ಬೆಲೆಯನ್ನು ಕಡಿಮೆ ಮಾಡಲು ಸಜ್ಜಾಗಿದೆ.
ವರದಿಯ ಪ್ರಕಾರ, ಬಿಯ‌ರ್ ಬೆಲೆಗಳು ಪ್ರತಿ ಬಾಟಲಿಗೆ 10 ರಿಂದ 30 ರಷ್ಟು ಹೆಚ್ಚಾಗುತ್ತವೆ, ಆದರೆ ರಾಜ್ಯ ಸರ್ಕಾರವು ಪ್ರೀಮಿಯಂ ಮದ್ಯದ ಬೆಲೆಯನ್ನು ಶೇಕಡಾ 20 ರಷ್ಟು ಕಡಿಮೆ ಮಾಡಬಹುದು. ಭಾರತೀಯ ನಿರ್ಮಿತ ಮದ್ಯ ಮಾರಾಟ ಮತ್ತು ಅಬಕಾರಿ ಆದಾಯವನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಪರಿಷ್ಕರಣೆಯನ್ನು ಪ್ರಸ್ತಾಪಿಸಿದೆ.

Categories
ಬೆಂಗಳೂರು

ಕನ್ನಡದಲ್ಲಿ ಮಾತನಾಡಿದ್ರೆ ಆನ್ಲೈನ್ ವಂಚನೆ ಆಗಲ್ಲ!

ಕನ್ನಡದಲ್ಲಿ ಮಾತನಾಡಿದ್ರೆ ಆನ್ಲೈನ್ ವಂಚನೆ ಆಗಲ್ಲ!
– ಇಂಗ್ಲಿಷ್, ಹಿಂದಿಯಲ್ಲಿ ಮಾತಾಡಿ ವಂಚಿಸೋರು ಹೆಚ್ಚು
– ಸೈಬರ್‌ ಕ್ರೈಮ್‌ಗಳ ಬಗ್ಗೆ ಪೊಲೀಸ್‌ ಅಧಿಕಾರಿಯ ಟಿಪ್ಸ್

NAMMUR EXPRESS NEWS
ಬೆಂಗಳೂರು:ತಂತ್ರಜ್ಞಾನ ಬೆಳೆದಂತೆ ಸೈಬರ್‌ ಸ್ಕ್ಯಾಮ್‌ಗಳು ಕೂಡಾ ಹೆಚ್ಚುತ್ತಿವೆ. ಕೆಲಸ ಕೊಡಿಸುವುದಾಗಿ, ಬ್ಯಾಂಕ್‌ನಿಂದ ಕರೆ ಮಾಡಿರುವುದಾಗಿ, ಆಧಾರ್‌ ಕಾರ್ಡ್‌ ಅಪ್‌ಡೇಟ್‌ ಮಾಡಿಕೊಡುವುದಾಗಿ ಹಾಗೂ ಹಣ ಡಬಲ್‌ ಮಾಡುವ ನೆಪ ಹೇಳಿ ವಂಚಕರು ಯಾರ್ಯಾರಿಗೋ ಕರೆ ಮಾಡಿ, ಅಮಾಯಕರಿಂದ ಹಣ ದೋಚುತ್ತಿದ್ದಾರೆ.
ವಂಚಕರು ಎಂ.ಎನ್.ಸಿ ಕಂಪೆನಿಗಳ ಹೆಚ್.ಆರ್‌, ಬ್ಯಾಂಕ್‌ ಮ್ಯಾನೇಜರ್‌ ಸೋಗಿನಲ್ಲಿ ಕರೆ ಮಾಡಿ ಓಟಿಪಿ ಪಡೆದು ಅದೆಷ್ಟೋ ಜನರಿಗೆ ಪಂಗನಾಮ ಹಾಕಿದ್ದಾರೆ. ಹೀಗೆ ಕರೆ ಫೋನ್‌ ಕರೆ ಮಾಡುವ ಇವರುಗಳು ಹಿಂದಿ ಭಾಷೆಯಲ್ಲಿ ಅಥವಾ ಇಂಗ್ಲೀಷ್‌ ಭಾಷೆಯಲ್ಲಿ ಮಾತ್ರ ವ್ಯವಹರಿಸುತ್ತಾರೆ. ಒಂದು ವೇಳೆ ವಂಚಕರು ನಿಮಗೂ ಕರೆ ಮಾಡಿದ್ರೆ, ಅವರೊಂದಿಗೆ ಹಿಂದಿ, ಇಂಗ್ಲೀಷ್‌ ಮಾತನಾಡುವ ಬದಲು ನಮ್ಮ ಕ್ನಡದಲ್ಲಿಯೇ ಾತನಾಡಿ, ಇದರಿಂದ ಸುಲಭವಾಗಿ ವಂಚನೆಗಳಿಂದ ಪಾರಾಗಬಹುದು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಅದ್ಭುತವಾದ ಟಿಪ್ಸ್‌ ಕೊಟ್ಟಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದ ಸೈಬರ್‌ ಕ್ರೈಮ್‌ ಜಾಗೃತಿ ಕಾರ್ಯಕ್ರಮದ ವೇಳೆ ಇಲ್ಲಿನ ಪೊಲೀಸ್‌ ಅಧಿಕಾರಿಯೊಬ್ಬರು ಕನ್ನಡ ಭಾಷೆ ಬಾರದಿರುವ ವಂಚಕರೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸುವ ಮೂಲಕ ವಂಚನೆಗಳಿಂದ ಪಾರಾಗಬಹುದು ಎಂಬುದನ್ನು ಹೇಳಿದ್ದಾರೆ. ಈ ಕುರಿತ ಪೋಸ್ಟ್‌ ಒಂದನ್ನು ಕನ್ನಡಿಗ ದೇವರಾಜ್‌ ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Categories
ಜ್ಯೋತಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ತಾಯಿ ಲಕ್ಷ್ಮಿ ಕೃಪಾಕಟಾಕ್ಷದಿಂದ ಯಾವ ರಾಶಿಯವರಿಗೆ ಒಳಿತು ? ಯಾವ ರಾಶಿಯವರಿಗೆ ಕುಡುಕು.?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ನಿಮಗೆ ಶುಭ ದಿನ. ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು, ನಿಮ್ಮ ಸಾಮರ್ಥ್ಯವನ್ನು ತೋರಿಸಲು ಈ ದಿನ ಶುಭವಾಗಲಿದೆ. ನಿಮ್ಮ ಮೇಲೆ ವಿಶ್ವಾಸವಿರಲಿ. ಈ ಸಮಯವು ನಿಮ್ಮನ್ನು ಅನಿರೀಕ್ಷಿತ ಅವಕಾಶಗಳಿಗೆ ಕರೆದೊಯ್ಯುತ್ತದೆ. ಇಂದು ಆರ್ಥಿಕ ಪ್ರಗತಿಯ ಸಾಧ್ಯತೆ ಇದೆ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಿ. ಮಾನಸಿಕ ಆರೋಗ್ಯವನ್ನು ಉತ್ತೇಜಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ

** ವೃಷಭ ರಾಶಿ :
ಇಂದು ನೀವು ನೀವು ಕೆಲಸದಲ್ಲಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ, ಆದರೆ ನೀವು ಅದರಿಂದ ಹೊರಬರಲು ಪ್ರಯತ್ನಿಸಬೇಕು. ಹೂಡಿಕೆಗ ಇಂದು ಉತ್ತಮ ಿನ. ಆರೋಗ್ಯದ ಬಗ್ಗೆ ಗಮನ ಕೊಡಿ. ಆದರೆ, ಆರೋಗ್ಯದ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಅನೇಕ ಆದಾಯದ ಮೂಲಗಳಿಂದ ಹಣವನ್ನು ಪಡೆಯಬಹುದು. ಕೆಲವು ಜನರು ಪಾವತಿ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

** ಮಿಥುನ ರಾಶಿ
ಇಂದು ನೀವು ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಬೆಂಬಲ ಪಡೆಯುತ್ತೀರಿ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಕೆಲಸದ ನಿಮಿತ್ತ ಪ್ರಯಾಣ ಮಾಡುವ ಸಾಧ್ಯತೆಗಳಿವೆ. ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ಆದಾಯವನ್ನು ಹೆಚ್ಚಿಸಲು ಹೊಸ ಆಯ್ಕೆಗಳನ್ನು ನೋಡಿ

** ಕರ್ಕಾಟಕ ರಾಶಿ :
ಇಂದು ನೀಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಬಹುದು. ನಿಮ್ಮ ಅಂತಃಪ್ರಜ್ಞೆಯನ್ನು ನಂಬಿರಿ ಮತ್ತು ಜೀವನದಲ್ಲಿ ಕೆಲವು ಅಪಾಯಗಳನ್ನು ತೆಗೆದುಕೊಳ್ಳಲು ಹಿಂಜರಿಯಬೇಡಿ. ಇಂದು ನೀವು ಪ್ರಗತಿಗೆ ಸಾಕಷ್ಟು ಅವಕಾಶಗಳನ್ನು ಪಡೆಯುತ್ತೀರಿ. ಕೆಲಸದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ನಿಮ್ಮ ಅಂತಃಪ್ರಜ್ಞೆಯು ನಿಮಗೆ ಪ್ರಗತಿಯ ಹಾದಿಯಲ್ಲಿ ಮಾರ್ಗದರ್ಶನ ನೀಡುತ್ತದೆ, ಅದು ಖಂಡಿತವಾಗಿಯೂ ನಿಮಗೆ ಯಶಸ್ಸನ್ನು ತರುತ್ತದೆ. p

** ಸಿಂಹ ರಾಶಿ :
ಇಂದು ನಿಮಗೆ ವೃತ್ತಿಪರ ಜೀವನದಲ್ಲಿ ಶಕ್ತಿ ಮತ್ತು ಉತ್ಸಾಹವಿರುತ್ತದೆ. ನಿಮ್ಮನ್ನು ಸಾಬೀತುಪಡಿಸಲು ನೀವು ಕೆಲವು ಹೊಸ ಜವಾಬ್ದಾರಿಗಳನ್ನು ಪಡೆಯುತ್ತೀರಿ ಮತ್ತು ಗಡುವಿನ ಮೊದಲು ನೀವು ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ಅನೇಕ ಆದಾಯದ ಮೂಲಗಳಿಂದ ಆರ್ಥಿಕ ಲಾಭವಿದೆ ಮತ್ತು ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರುತ್ತದೆ.

** ಕನ್ಯಾ ರಾಶಿ :
ಇಂದು ನಿಮಗೆ ವೃತ್ತಿಪರ ಜೀವನದಲ್ಲಿ ಶಕ್ತಿ ಮತ್ತು ಉತ್ಸಾಹವಿರುತ್ತದೆ. ನಿಮ್ಮನ್ನು ಸಾಬೀತುಪಡಿಸಲು ನೀವು ಕೆಲವು ಹೊಸ ಜವಾಬ್ದಾರಿಗಳನ್ನು ಪಡೆಯುತ್ತೀರಿ ಮತ್ತು ಗಡುವಿನ ಮೊದಲು ನೀವು ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ಅನೇಕ ಆದಾಯದ ಮೂಲಗಳಿಂದ ಆರ್ಥಿಕ ಲಾಭವಿದೆ ಮತ್ತು ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರುತ್ತದೆ.

** ತುಲಾ ರಾಶಿ :
ಇಂದು ನಿಮ್ಮ ಮಾತಿನಲ್ಲಿ ಸೌಮ್ಯತೆ ಇರುತ್ತದೆ. ವೃತ್ತಿಯಲ್ಲಿ ಹೊಸ ಸಾಧನೆಗಳನ್ನು ಸಾಧಿಸುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ತೋರುವಿರಿ. ಕೌಟುಂಬಿಕ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ. ಪೋಷಕರ ಆರೋಗ್ಯದ ಕಡೆ ಗಮ ಕಡಿ. ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ. ನೀವು ಇಂದು ಹಳೆಯ ಸ್ನೇಹಿತರನ್ನು ಭೇಟಿ ಮಾಡಬಹುದು. ಉದ್ಯೋಗದಲ್ಲಿ ಸ್ಥಳ ಬದಲಾವಣೆಯಾಗುವ ಸಾಧ್ಯತೆಗಳಿವೆ.

** ವೃಶ್ಚಿಕ ರಾಶಿ :
ಇಂದು ನಿಮ್ಮ ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ. ಜೀವನವು ಸೌಕರ್ಯಗಳು ಮತ್ತು ಐಷಾರಾಮಿಗಳಲ್ಲಿ ಕಳೆಯುತ್ತದೆ. ವೃತ್ತಿ ಜೀವನದಲ್ಲಿ ಪ್ರಗತಿಗೆ ಹೊಸ ಅವಕಾಶಗಳು ದೊರೆಯಲಿವೆ. ಕಚೇರಿಯಲ್ಲಿ ಅನಗತ್ಯ ವಾದ ವಿವಾದಗಳಿಂದ ದೂರವಿರಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ. ಹೊಸ ಆದಾಯದ ಮೂಲದಿಂದ ಆರ್ಥಿಕ ಲಾಭವಿದೆ.

** ಧನಸ್ಸು ರಾಶಿ :
ಇಂದು ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಕೆಲಸದ ಸವಾಲುಗಳನ್ನು ಸ್ವೀಕರಿಸುವ ಆತ್ಮವಿಶ್ವಾಸ ತುಂಬಿರುತ್ತದೆ. ಉದ್ಯೋಗ ಬದಲಾವಣೆಯ ಸೂಚನೆಗಳಿವೆ. ನಿಮ್ಮ ಭಾವನೆಗಳನ್ನು ನಿಯಂತ್ರಿಸಿ. ಆದಾಯದ ಹೆಚ್ಚಳದ ಹೊಸ ಮೂಲಗಳು ಸೃಷ್ಟಿಯಾಗುತ್ತವೆ, ಆದರೆ ವೃತ್ತಿಜೀವನದಲ್ಲಿ ಸಣ್ಣ ಸಮಸ್ಯೆಗಳು ಸಹ ಕಂಡುಬರುತ್ತವೆ. ನೀವು ಶೈಕ್ಷಣಿಕ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ.

** ಮಕರ ರಾಶಿ :
ಇಂದು ಕೆಲಸದ ಸ್ಥಳದಲ್ಲಿ ಅನೇಕ ಉತ್ತೇಜಕ ಬದಲಾವಣೆಗಳು ಕಂಡುಬರುತ್ತವೆ. ಸಹೋದ್ಯೋಗಿಗಳು ಮತ್ತು ಮೇಲಾಧಿಕಾರಿಗಳನ್ನು ಮೆಚ್ಚಿಸಲು ನಿಮ್ಮ ಹೊಸ ಆಲೋಚನೆಗಳನ್ನು ಬಳಸಿ. ಹೂಡಿಕೆ ಮಾಡಲು ನಿರ್ಧರಿಸುವಾಗ ನಿಮ್ಮ ಮೇಲೆ ವಿಶ್ವಾಸವಿಡಿ. ಇಂದು ಒಂಟಿ ವ್ಯಕ್ತಿಗಳು ಆಕರ್ಷಕ ವ್ಯಕ್ತಿಯೊಂದಿಗೆ ಪ್ರೀತಿಯಲ್ಲಿ ಬೀಳಬಹುದು. ಸಂಬಂಧದಲ್ಲಿರುವ ಜನರು ಸಂಬಂಧದಲ್ಲಿ ಹೊಸ ಆಳವನ್ನು ಅನುಭವಿಸುತ್ತಾರೆ.

** ಕುಂಭ ರಾಶಿ :
ಇಂದು ನೀವು ಆರೋಗ್ಯ ಮತ್ತು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬಹುದು, ಅದನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕಾಗುತ್ತದೆ. ನಿಮ್ಮ ವೃತ್ತಿಪರ ಜೀವನದಲ್ಲಿ ನೀವು ಸಾಕಷ್ಟು ಪ್ರಗತಿಯನ್ನು ಪಡೆಯುತ್ತೀರಿ. ತುರ್ತು ಕಾರ್ಯಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ. ಹಣವನ್ನು ಎಚ್ಚರಿಕೆಯಿಂದ ಖರ್ಚು ಮಾಡಿ. ಈ ವಾರ ಹಣದ ಕೊರತೆ ಎದುರಾಗಬಹುದು.

** ಮೀನ ರಾಶಿ :
ಇಂದು ನಿಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ನೀವು ಪ್ರಯತ್ಿಸಬೇಕು. ಮಾರಕೆಟಿಂಗ್, ಸೇಲ್ಸ್ ವ್ಯಕ್ತಿಗಳು ಕೆಲಸಕ್ಕಾಗಿ ಪ್ರಯಾಣಿಸಬಹುದು ಮತ್ತು ಕೆಲವು ಆರೋಗ್ಯ ವೃತ್ತಿಪರರು ವಿದೇಶಕ್ಕೆ ಹೋಗಬೇಕಾಗಬಹುದು. ಕೆಲಸದಲ್ಲಿನ ರಾಜಕೀಯವು ನಿಮ್ಮ ಮೇಲೂ ಪರಿಣಾಮ ಬೀರಬಹುದು

Categories
ಚಿಕ್ಕಮಗಳೂರು

ಬಿಜೆಪಿ ಕೈ ತಪ್ಪಿದ ಮೂಡಿಗೆರೆ!

ಬಿಜೆಪಿ ಕೈ ತಪ್ಪಿದ ಮೂಡಿಗೆರೆ!

– ಕಾಂಗ್ರೇಸ್‌ನ ಗೀತಾ ಅಜಿತ್ ಕುಮಾರ್ ಅಧ್ಯಕ್ಷ ಸ್ಥಾನ 

– ಎಚ್.ಪಿ ರಮೇಶ್ ಉಪಾಧ್ಯಕ್ಷರಾಗಿ ಆಯ್ಕೆ

NAMMUR EXPRESS NEWS 

ಮೂಡಿಗೆರೆ: ಮೂಡಿಗೆರೆ ಪಟ್ಟಣ ಪಂಚಾಯ್ತಿಯ 2ನೇ ಅವಧಿ ಅಧ್ಯಕ್ಷ,ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೇಸ್‌ನ ಗೀತಾ ಅಜಿತ್ ಕುಮಾರ್ ಹಾಗೂ ಎಚ್.ಪಿ ರಮೇಶ್ ಆಯ್ಕೆಯಾಗಿದ್ದಾರೆ. ಈ ಮೂಲಕ ಕಾಂಗ್ರೇಸ್ ಪಟ್ಟಣ ಪಂಚಾಯ್ತಿ ಗದ್ದುಗೆ ತನ್ನದಾಗಿಸಿಕೊಂಡಿದೆ.

ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಗೀತಾ ಅವರಿಗೆ 7 ಮತಗಳು ದೊರೆತರೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಆಶಾ ಮೋಹನ್‌ರವರಿಗೆ 5 ಮತಗಳು ದೊರೆತವು. ಕೇವಲ 2 ಮತಗಳ ಅಂತರದಿಂದ ಕಾಂಗ್ರೇಸ್‌ನ ಗೀತಾ ಅಜಿತ್ ಕುಮಾರ್ ಜಯಗಳಿಸಿದರು.

ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್‌ನ ಹೆಚ್.ಪಿ ರಮೇಶ್ ಅವಿರೋಧವಾಗಿ ಆಯ್ಕೆಯಾದರು. ಮೂಡಿಗೆರೆ ಪಟ್ಟಣ ಪಂಚಾಯ್ತಿ ಅಧಿಕಾರ ಹಿಡಿಯಲು 11 ಸದಸ್ಯರ ಪೈಕ ಬಿಜೆಪಿಯ 6 ಸದಸ್ಯರ ಮತ ಮತ್ತು ಸಂಸದ ಕೋಟಾ ಶ್ರಿನಿವಾಸ ಪೂಜಾರಿಯವರ 1 ಮತವು ಸೇರಿ 7 ಮತವಿತ್ತು. ಕಾಂಗ್ರೇಸ್‌ನ 4 ಸದಸ್ಯರಿದ್ದು,ಶಾಸಕಿ ನಯನ ಮೋಟಮ್ಮಾ ಹಾಗೂ ಇತ್ತೀಚೆಗೆ ಕಾಂಗ್ರೇಸ್ ಸೇರಿದ ಜೆಡಿಎಸ್ ಸದಸ್ಯೆ ಗೀತಾ ಅಜಿತ್ ಕುಮಾರ್‌ರವರ ಮತವು ಸೇರಿ 6 ಮತವಿತ್ತು.

ಬಿಜೆಪಿಗೆ ಸ್ಪಷ್ಟ ಬಹುಮತವಿದ್ದರು ಕೈ ತಪ್ಪಿದ್ದೆಲ್ಲಿ..?

ಬಿಜೆಪಿಗೆ ಸ್ಪಷ್ಟ ಬಹುಮತವಿದ್ದರೂ ಕಾಂಗ್ರೇಸ್ ಕೇವಲ 4 ಸದಸ್ಯರನ್ನಿಟ್ಟಕೊಂಡು ರಾಜಕೀಯ ತಂತ್ರಗಾರಿಕೆ ನಡೆಸಿ ಬಿಜೆಪಿಗೆ ದಕ್ಕುವ ಪಟ್ಟಣ ಪಂಚಾಯ್ತಿ ಅಧಿಕಾರವನ್ನು ಕಾಂಗ್ರೇಸ್ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಬಿಜೆಪಿ ಸದಸ್ಯ ಬಿ ಜಿ ಧರ್ಮಪಾಲ್ ಅವರು ನೇರವಾಗಿ ಕಾಂಗ್ರೇಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದರಿಂದ ಕಾಂಗ್ರೇಸ್ ಅನಾಸವಾಗಿ ಜಯಗಳಿಸಿತು. ಇನ್ನು ಸಂಸದ ಕೋಟಾ ಶ್ರೀನಿವಾಸ ಪೂಜಾರಿಯವರು ಕಾಪು ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಭಾಗವಹಿಸಿದ್ದರಿಂದ ಮೂಡಿಗೆರೆ ಚುನಾವಣೆಯಲ್ಲಿ ಗೈರಾಗಿದ್ದರು.

ಕಾಂಗ್ರೇಸ್ ಹಿರಿಯ ಪ್ರಮುಖರ ತಂತ್ರಗಾರಿಕೆ ಕಾಂಗ್ರೇಸ್‌ಗೆ ಅಧಿಕಾರ ಧಕ್ಕಿಸಿತು.

ಅಭಿನಂದನಾ ಸಮಾರಂಭದಲ್ಲಿ ಶಾಸಕಿ ನಯನ ಮೋಟಮ್ಮ,ಮಾಜಿ ಶಾಸಕಿ ಮೋಟಮ್ಮ,ಮಾಜಿ ಶಾಸಕ ಎಂ.ಪಿ ಕುಮಾರ ಸ್ವಾಮಿ,ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಸೇರಾದಂತೆ ಬ್ಲಾಕ್ ಕಾಂಗ್ರೇಸ್‌ನ ಪ್ರಮುಖರು,ಕಾರ್ಯಕರ್ತರು ಉಪಸ್ಥಿತರಿದ್ದರು.

Categories
ಕರಾವಳಿ

ಪವರ್ ಲಿಫ್ಟಿಂಗ್ ಅಲ್ಲಿ ಕರಾವಳಿ ಕುವರಿ ಪ್ರತೀಕ್ಷಾ ಶೆಟ್ಟಿ ಸಾಧನೆ

ಕ್ರೀಡಾ ದಿನದ ವಿಶೇಷ

ಪವರ್ ಲಿಫ್ಟಿಂಗ್ ಅಲ್ಲಿ ಕರಾವಳಿ ಕುವರಿ ಪ್ರತೀಕ್ಷಾ ಶೆಟ್ಟಿ ಸಾಧನೆ

– ದೇಶ ವಿದೇಶದಲ್ಲಿ ಕ್ರೀಡಾ ಸಾಧನೆ

ಯೂನಿವರ್ ಸಿಟಿ ಹೆಜ್ಜೆ ಮೂಲಕ ಅಂತ ರಾಷ್ಟ್ರೀಯ ಕ್ರೀಡೆಯಲ್ಲಿ ಏಶಿಯಾಮಟ್ಟದಲ್ಲಿ ಖ್ಯಾತಿ ಪಡೆದ ಬಂಗಾರದ ಪದಕ ಗೆದ್ದ ಹೆಮ್ಮೆಯ
ಪವರ್ ಲಿಫ್ಟರ್ ಉಡುಪಿಯ ಪ್ರತೀಕ್ಷಾ ಶೆಟ್ಟಿ.

ಓದಿದ್ದೆಲ್ಲ ಉಡುಪಿ, ಬಳಿಕ ಸಿಎ ಪಾಸ್

ತನ್ನ ವಿದ್ಯಾಭ್ಯಾಸ, ಬಡತನದ ನಡುವೆ ಕ್ರೀಡೆಯಲ್ಲಿ ಅಂತಾರಾಷ್ಟ್ರಿಯ ಸಾಧನೆಗೈದ ದಿಟ್ಟ ಯುವತಿ ಪ್ರತೀಕ್ಷಾ. ತನ್ನ ದಿವ್ಯ ಪರಿಶ್ರಮ ಹಾಗೂ ಉತ್ತಮ ಗುರಿಯೊಂದಿಗೆ ಪವರ್ ಲಿಫ್ಟಿಂಗ್ ನಲ್ಲಿ ಯೂನಿರ್ವಸಿಟಿ ಯಲ್ಲಿ ಏಶಿಯಾದಲ್ಲಿಯೇ ಬಂಗಾರದ ಪದಕ ಗೆದ್ದ ಧೀರ ಮಹಿಳೆ.
11-09-1998 ಹುಟ್ಟಿ ಉಡುಪಿಯ ಕೆಮ್ಮಣ್ಣು ವಿನಲ್ಲಿ ವಾಸವಿರುವ ಇವರು ಮಂಗಳೂರಿನ ಯೂನಿವರ್ಸಿಟಿ ಉಡುಪಿಯ ತ್ರಿಷಾ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದು, 2 ನಂತರ 2019ರಲ್ಲಿ ಮಂಗಳೂರಿನ ಕರ್ನಾಟಕ ಕಂಪ್ಯೂಟರ್ ಅಕಾಡೆಮಿ ಮೂಲಕ ಕಂಪ್ಯೂಟರ್ ಸಿ. ಎ ಪದವಿ ಪಡೆದಿದ್ದಾರೆ.

ಹತ್ತು ಹಲವು ಕಡೆ ಚಾಂಪಿಯನ್

2021ರಲ್ಲಿ ದಾವಣಗೆರೆಯಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಸ್ಟೇಟ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ನಲ್ಲಿ ಗೋಲ್ಡ್ ಮೆಡಲ್ ಮತ್ತು ಸ್ಟ್ರಾಂಗ್ ಉಮೆನ್ ಪ್ರಶಸ್ತಿ. ಉತ್ತರಪ್ರದೇಶದ ಗಾಜಿಪುರ್ ನಡೆದ ರಾಷ್ಟ್ರೀಯ ಜೂನಿಯರ್ ಪವರ್ ಲಿಫ್ಟಿಂಗ್ ನಲ್ಲಿ ಕಂಚು ಪದಕ ಪಡೆದಿದ್ದಾರೆ. 2022 ರಲ್ಲಿ ಆಂಧ್ರಪ್ರದೇಶ ದಲ್ಲಿ ನಡೆದ ಸೌತ್ ಇಂಡಿಯಾ ರಾಷ್ಟ್ರೀಯ ಸೀನಿಯರ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಗೋಲ್ಡ್ ಮೆಡಲ್ ಮತ್ತು ಸ್ಟ್ರಾಂಗ್ ಉಮೆನ್ ಪ್ರಶಸ್ತಿ,
ಸೀನಿಯರ್ ನ್ಯಾಷನಲ್ ಮಂಗಳೂರು ನಲ್ಲಿ ಉಮೆನ್ ಎಕ್ಯೂಪ್ಪಡ್ ಪವರ್ ಲಿಫ್ಟಿಂಗ್ ಚಾಂಪಿಯನ್ ಕಂಚು, ಮಂಗಳೂರು ಯೂನಿವರ್ಸಿಟಿ ಯ ಇಂಟೆರ್ ಕಾಲೇಜು ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಚಿನ್ನ, ನ್ಯೂ ಮೀಟ್ ರೆಕಾರ್ಡ್ ಮತ್ತು ಸ್ಟ್ರಾಂಗ್ ಉಮೆನ್ ಪ್ರಶಸ್ತಿ ಪಡೆದಿದ್ದಾರೆ
2023 ರಲ್ಲಿ ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಪವರ್ ಲಿಫ್ಟಿಂಗ್ ಗೋಲ್ಡ್ ಮೆಡಲ್ ಚಾಂಪಿಯನ್, ಮಂಗಳೂರು ಯೂನಿವರ್ಸಿಟಿ ಇಂಟರ್ ಕಾಲೇಜಿನ ಗೋಲ್ಡ್ ಮೆಡಲ್ ಚಾಂಪಿಯನ್ ಶಿಪ್ ಗಳಿಸಿದ್ದಾರೆ.

ಅಂತಾರಾಷ್ಟ್ರೀಯ ಸಾಧನೆ ಮಾಡಿದ ಹುಡುಗಿ

ಛಲ ಬಿಡದೆ ತನ್ನ ಕ್ರೀಡಾ ಸ್ಫೂರ್ತಿಯೊಂದಿಗೆ ಇನ್ನಷ್ಟುಉತ್ತಮ ಸಾಧನೆಯಡೆಗೆ ಮುನ್ನಡೆದ ಇವರು 2024ಮೇ ತಿಂಗಳಿನಲ್ಲಿ ಹಾಂಗ್ ಕಾಂಗ್ ನಡೆದ ಅಂತಾರಾಷ್ಟ್ರೀಯ ಮಟ್ಟದ ಎಶಿಯನ್ ಯೂನಿವರ್ಸಿಟಿ ಎಕ್ಯೂಪ್ಪಡ್ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಹಾಗೂ ಬೆಸ್ಟ್ ಲಿಫ್ಟರ್ ಪ್ರಶಸ್ತಿ.
ಎಶಿಯನ್ ಯೂನಿವರ್ಸಿಟಿ ಕ್ಲಾಸಿಕ್ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಹಾಗೂ ಬೆಸ್ಟ್ ಲಿಫ್ಟರ್ ಉಮೆನ್ ಪ್ರಶಸ್ತಿ.
ಎಶಿಯನ್ ಯೂನಿವರ್ಸಿಟಿ ಎಕ್ಯೂಪ್ಪಡ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಮತ್ತು ಬೆಸ್ಟ್ ಲಿಫ್ಟರ್ ಉಮೆನ್ ಪ್ರಶಸ್ತಿ ಪಡೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಕ್ರೀಡಾ ಪ್ರತಿಭೆಯಾಗಿ ಸಾಧನೆಗೈದ ಅಪ್ರತಿಮ ಮಹಿಳೆಯಾಗಿದ್ದಾಳೆ.ಇವರ ಈ ಎಲ್ಲಾ ಸಾಧನೆಗೆ ಸ್ಫೂರ್ತಿ ಹಾಗೂ ಪರಿಶ್ರಮ ಇವರ ತಾಯಿ ಪದ್ಮಾ ಜೆಪಿ ಶೆಟ್ಟಿ ಅವರಿಗೆ ಸಲ್ಲುತ್ತದೆ.

ಕುಟುಂಬದ ತ್ಯಾಗಕ್ಕೆ ಸಾಧನೆಯ ಉಡುಗೊರೆ

ಮಾಸ್ತಿಕಟ್ಟೆಯಲ್ಲಿ ಸುಮಾರು 30 ವರ್ಷಗಳ ಕಾಲ ಬ್ಯಾಂಕ್ ನೌಕರಾಿ ಸೇವೆ ಸಲ್ಲಿಸಿದ ಸಾಕಷ್ಟು ಜನರಿಗೆ ಚಿರಪರಿಚಿತರಾದ ಲೋಕುಶೆಟ್ಟಿ ಇವರ ಮೊಮ್ಮಗಳು, ಅಂದರೆ ಶಪದ್ಮಾ ಜಯಪ್ರಕಾಶ್ ಶೆಟ್ಟಿ ಇವರ ಪ್ರಥಮ ಪುತ್ರಿ. ತಂದೆ ಲೋಕು ಶೆಟ್ಟಿ ನಿವೃತ್ತಿ ನಂತರ ಸುಮಾರು 20 ವರ್ಷಗಳಿಂದ ಉಡುಪಿಯಲ್ಲಿ ವಾಸವಾಗಿದ್ದಾರೆ.
ತನ್ನ ವೈಯಕ್ತಿಕ ಬದುಕಿನಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸುತ್ತ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಸಲಹುತ್ತ ಉತ್ತಮ ವಿದ್ಯಾಭ್ಯಾಸ ನೀಡುತ್ತಾ, ಅದರ ನಡುವೆ ತನ್ನ ವೃದ್ಧ ತಂದೆ ತಾಯಿಯರನ್ನು ಸಹ ತನ್ನ ಜೊತೆಯಲ್ಲಿಯೇ ಸಲಹುತ್ತ, ಬದುಕಿಗಾಗಿ ಉಡುಪಿಯಲ್ಲಿ ಟೈಲರಿಂಗ್ ವೃತ್ತಿ ಮೂಲಕ ಅತ್ಯಂತ ಕಠಿಣವಾದ ರೀತಿಯಲ್ಲಿ ಬದುಕು ನಡೆಸುತ್ತ ಬಂದಿರುವ ಶ್ರೀಮತಿ ಪದ್ಮಾ ಜಯಪ್ರಕಾಶ್ ಅವರ ಪುತ್ರಿ ಇದೀಗ ಭಾರತದ ಹೆಮ್ಮೆಯ ಕ್ರೀಡಾಪಟುವಾಗಿದ್ದಾರೆ.

ಬೆಸ್ಟ್ ಆಫ್ ಲಕ್ ಪ್ರತೀಕ್ಷಾ

ಮುಂದಿನ ದಿನಗಳಲ್ಲಿ ಇನ್ನಷ್ಟು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸಾಧನೆ ಗೈಯಬೇಕೆಂಬ ಹಂಬಲ, ತವಕ ಹೊಂದಿರುವ ಈ ಯುವತಿ ಇನ್ನಷ್ಟು ಸಾಧನೆ ಮಾಡಲಿ ಎಂಬುದು ನಮ್ಮ ಆಶಯ.

ಎಲ್ಲಾ ಕ್ರೀಡಾಪಟುಗಳಿಗೂ ರಾಷ್ಟ್ರೀಯ ಕ್ರೀಡಾ ದಿನದ ಶುಭಾಶಯಗಳು

Categories
ಕರಾವಳಿ

ಮಂಗಳೂರು ವಿವಿ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ

ಟಾಪ್ 4 ನ್ಯೂಸ್

ಮಂಗಳೂರು ವಿವಿ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ
– ಕುಂದಾಪುರದಲ್ಲಿ ಎಬಿವಿಪಿ ಹೋರಾಟ
– ಕಾಂಗ್ರೆಸ್ ಸರ್ಕಾರದ ವಿರುದ್ಧ ಪುತ್ತೂರು ಬಿಜೆಪಿ ಪ್ರತಿಭಟನೆ
– ಕಾಪು ಪುರಸಭಾ ಸದಸ್ಯೆ ಸರಿತಾ ಬಿಜೆಪಿ ಸೇರ್ಪಡೆ
– ಐವನ್ ಡಿಸೋಜಾ ಹೇಳಿಕೆ: ಬಿಸಿ ರೋಡಿನಲ್ಲಿ ಬೃಹತ್ ಪ್ರತಿಭಟನೆ

NAMMUR EXPRESS NEWS
ಪುತ್ತೂರು : ಭಾರತೀಯ ಜನತಾ ಪಾರ್ಟಿ ಪುತ್ತೂರು ವಿಧಾನಸಭಾ ಕ್ಷೇತ್ರ ಯುವಮೋರ್ಚ ಪುತ್ತೂರು ನಗರ ಮಂಡಲ ಮತ್ತು ಗ್ರಾಮಾಂತರ ಮಂಡಲ ನೇತೃತ್ವದಲ್ಲಿ ಭ್ರಷ್ಟಾ ರಾಜ್ಯ ಸರಕಾರ ಮತ್ತು ರಾಜ್ಯಪಾಲರ ವಿರುದ್ಧ ಅವಹೇಳನಕಾರಿಯಾಗಿ ಮಾತಾನಾಡಿದ ಕಾಂಗ್ರೆಸ್ ನಾಯಕರ ವಿರುದ್ದ ಪ್ರತಿಭಟನೆ ದರ್ಬೆ ವೃತ್ತ ಬಳಿ ನಡೆಯಿತು.
ಯುವ ಮೋರ್ಚ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕೃಷ್ಣ ಹೆಮ್ಮಾರ್ ಪ್ರಾಸ್ತಾವಿಕ ಮಾತಾನಾಡಿ ಹಗರಣದಲ್ಲಿ ತೊಡಗಿಸಿಕೊಂಡ ಸರಕಾರ ಸಿದ್ದರಾಮಯ್ಯ ಸರಕಾರ, ಜನರನ್ನು ಬೀದಿಗೆ ತಂದ ಕೀರ್ತಿ ಕಾಂಗ್ರೆಸ್ ಸರಕಾರಕ್ಕೆ, ಕಣ್ಣಿಗೆ ಮಣ್ಣೆರೆಚುವ ವ್ಯವ್ಥೆಯೇ ಈ ಸುಳ್ಳು ಗ್ಯಾರಂಟಿಗಳಾಗಿವೆ ಈ ಗ್ಯಾರಂಟಿಯಿಂದ ಸರಕಾರದ ಖಜಾನೆ ಖಾಲಿಯಾಗಿದೆ , ನಾಲ್ಕು ಸಾವಿರ ಕೋಟಿ ದೋಚಿದ್ದು ಕಾಂಗ್ರೆಸ್ ತಕ್ಷಣ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ತಿಳಿಸಿದರು.

ಕಾಪು ಪುರಸಭಾ ಸದಸ್ಯೆ ಸರಿತಾ ಬಿಜೆಪಿ ಸೇರ್ಪಡೆ

ಕಾಪು:ಭಾರತೀಯ ಜನತಾ ಪಾರ್ಟಿ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಕಾಳಜಿ, ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಕಾರ್ಯ ವೈಖರಿ, ಜನಪರ ಕಾಳಜಿಯನ್ನು ಮೆಚ್ಚಿ ಎಸ್.ಡಿ.ಪಿ.ಐ (ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ) ಬೆಂಬಲಿತ ಕಾಪು ಪುರಸಭಾ ಸದಸ್ಯೆ ಸರಿತಾ ಹಾಗೂ ಅವರ ಪತಿ ಶಿವಾನಂದ್ ಬಿಜೆಪಿಗೆ ಸೇರ್ಪಡೆಯಾದರು.
ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ ಅವರು ಭಾರತೀಯ ಜನತಾ ಪಾರ್ಟಿಯ ಬಾವುಟವನ್ನು ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಬಾಲಾಜಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿಗಳಾದ ಶ್ರೀಕಾಂತ್ ನಾಯಕ್, ಕೋಶಾಧಿಕಾರಿಗಳಾದ ಮನೋಹರ್ ಕಲ್ಮಾಡಿ, ಕಾಪು ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ರಾವ್, ಶರಣ್ ಕುಮಾರ್ ಮಟ್ಟು, ಜಿಲ್ಲಾ ಬಿಜೆಪಿ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಕಾಪು ಪುರಸಭೆಯ ಸದಸ್ಯರು, ಪಕ್ಷದ ಹಿರಿಯರು, ಪ್ರಮುಖರು, ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

ಮಂಗಳೂರು ವಿವಿ ಅವ್ಯವಸ್ಥೆ ಖಂಡಿಸಿ ಎಬಿವಿಪಿ ಪ್ರತಿಭಟನೆ

ಕಾಲೇಜು ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಾತಿ, ಪದವಿ ಕಾಲೇಜುಗಳಿಗೆ ಉಪನ್ಯಾಸಕರ ನೇಮಕಾತಿ ಮತ್ತು ವಿಶ್ವವಿದ್ಯಾನಿಲಯದ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿ ಕುಂದಾಪುರದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿತ್ ಪ್ರತಿಭಟನೆ ನಡೆಸಿತು.
ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ 188 ಕಾಲೇಜುಗಳಲ್ಲಿ 75 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ನಡೆಸುತ್ತಿದ್ದು, ವಿಶ್ವವಿದ್ಯಾನಿಲಯವು ಇಂದು ಸಮಸ್ಯೆಗಳ ಗೂಡಾಗಿದೆ. ಈಗಾಗಲೇ ರಾಜ್ಯದೆಲ್ಲೆಡೆ ಪದವಿ ಪೂರ್ವ ಕಾಲೇಜುಗಳ ತರಗತಿಗಳು ಶುರುವಾಗಿ ಎರಡು ತಿಂಗಳು ಕಳೆದಿವೆ. ಪದವಿ ವಿದ್ಯಾರ್ಥಿಗಳಿಗೂ ಸಹ ಈಗಾಗಲೇ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಪರೀಕ್ಷೆಗಳು ಮುಗಿದು ತರಗತಿಗಳು ಪ್ರಾರಂಭವಾಗಿವೆ. ಆದರೆ ಹಾಸ್ಟೆಲ್ ಪ್ರವೇಶಾತಿಗಳು ಪ್ರಾರಂಭವಾಗದೇ ಇರುವುದರಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಈ ಕೂಡಲೇ ಹಾಸ್ಟೆಲ್ ಪ್ರವೇಶಾತಿಯನ್ನು ಆರಂಭಿಸಬೇಕು ಮತ್ತು ಹಾಸ್ಟೇಲ್ ಸೀಟುಗಳನ್ನು ಹೆಚ್ಚಿಸಬೇಕು. ಪ್ರತಿ ವರ್ಷ ಪದವಿ ವಿದ್ಯಾರ್ಥಿಗಳಿಗೆ ಸೂಕ್ತವಾಗಿ ಉಪನ್ಯಾಸಕರಿಲ್ಲದೆ ವಿದ್ಯಾರ್ಥಿಗಳು ಅವರ ತರಗತಿಗಳು ಸಂಪೂರ್ಣವಾಗದೇ ಪರೀಕ್ಷೆಗಳಿಗೆ ಹಾಜರಾಗುವ ಪರಿಸ್ಥಿತಿ ಇದೆ. ಸರ್ಕಾರ ತಡ ಮಾಡದೆ ಕೂಡಲೇ ಉಪನ್ಯಾಸಕರ ಸಂಪೂರ್ಣ ನೇಮಕಾತಿಯನ್ನು ಮಾಡಬೇಕೆಂದು ಉಡುಪಿ ಜಿಲ್ಲಾ ಎಬಿವಿಪಿ ಸಹ ಸಂಚಾಲಕ ದರ್ಶನ್ ಆಗ್ರಹಿಸಿದರು.
ಉಡುಪಿ ಜಿಲ್ಲಾ ಎಬಿವಿಪಿ ಸಂಚಾಲಕ ಕಾರ್ತಿಕ್ , ಶೆಟ್ಟಿ, ತಾಲೂಕು ಸಂಚಾಲಕ್ ಆಕಾಶ್, ಪ್ರಮುಖ ಕಾರ್ಯಕರ್ತರಾದ ಪ್ರಥಮ್, ರಕ್ಷನ್, ಶಶಿ, ವಿಘ್ನೇಶ್ವರ, ಧ್ವನಿ, ಸಿಂಚನ, ವೈಷ್ಣವಿ ಉಪಸ್ಥಿತರಿದ್ದರು.

ಐವನ್ ಡಿಸೋಜಾ ಹೇಳಿಕೆ: ಬಿಸಿ ರೋಡಿನಲ್ಲಿ ಬೃಹತ್ ಪ್ರತಿಭಟನೆ!

ಮಂಗಳೂರು : ಐವನ್ ಡಿಸೋಜಾ ರಾಜ್ಯಪಾಲರ ವಿರುದ್ಧ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರೂ ಎಫ್ಐಆರ್ ದಾಖಲಾಗಿಲ್ಲ.ಹೀಗಾಗಿ ಸದ್ಯ ಬಿಜೆಪಿ ಜನಪ್ರತಿನಿಧಿಗಳ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದೆ. ಈ ಮಧ್ಯೆ ಐವನ್ ಡಿಸೋಜಾ ಅವರ ಮನೆ ಮೇಲೆ ಕಲ್ಲುತೂರಾಟ ಪ್ರಕರಣ ನಡೆದಿದ್ದು, ಇಬ್ಬರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 28ರಂದು ರಾಜ್ಯಪಾಲರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಎಂಎಲ್ಸಿ ಐವನ್ ಡಿಸೋಜಾ ಮನೆ ಮೇಲೆ ಕಲ್ಲುತೂರಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಭರತ್ ಅಲಿಯಾಸ್ ಯಕ್ಷಿತ್, ಿೇಶ್ ಕುರ್ತಮೊಗೆರು ಬಂಧಿತರು. ಸಿಸಿಕ್ಯಾಮರಾ ದೃಶ್ಯ ಆಧರಿಸಿ ಇಬ್ಬರು ಆರೋಪಿಗಳ ಬಂಧನ ಮಾಡಲಾಗಿದೆ. ಐವನ್ ಡಿಸೋಜಾ ಹೇಳಿಕೆಯಿಂದ ಸಿಟ್ಟಾಗಿ ಕಲ್ಲೆಸೆದಿದ್ದಾಗಿ ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ.
ಐವನ್ ಡಿಸೋಜ ಅವರ ದೇಶದ್ರೋಹದ ಹೇಳಿಕೆ ನೀಡಿದ್ದು, ಯುವ ಮೋರ್ಚಾವು ಠಾಣೆಗೆ ದೂರೂ ನೀಡಿದ್ದರೂ ಪ್ರಯೋಜನವಾಗಿಲ್ಲ!! ಆದ್ದರಿಂದ ಬಿಸಿ ರೋಡಿನಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಬೃಹತ್ ಪ್ರತಿಭಟನೆ ನಡೆದಿದೆ.

Categories
ತೀರ್ಥಹಳ್ಳಿ

ಕ್ರೀಡೆ ಆಯೋಜನೆ ಮೂಲಕ ಗಮನ ಸೆಳೆದ ಕುವೆಂಪು ಶಾಲೆ!

ಕ್ರೀಡೆ ಆಯೋಜನೆ ಮೂಲಕ ಗಮನ ಸೆಳೆದ ಕುವೆಂಪು ಶಾಲೆ!
– ತೀರ್ಥಹಳ್ಳಿ ತಾಲೂಕು ಮಟ್ಟದ ಚೆಸ್, ಯೋಗಾಸನ ಸ್ಪರ್ಧೆ
– ಚೆಸ್ ಯೋಗಾಸನ ಸ್ಪರ್ಧೆ ವಿಜೇತರು ಯಾರು ಯಾರು..?

NAMMUR EXPRESS NEWS
ತೀರ್ಥಹಳ್ಳಿ: ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ತೀರ್ಥಹಳ್ಳಿಯಲ್ಲಿ ಆ. 28 ರಂದು ತಾಲ್ಲೂಕು ಮಟ್ಟದ ಹಿರಿಯ ಪ್ರಾಥಮಿಕ ಶಾಲೆಯ ಬಾಲಕ/ಬಾಲಕಿಯರ ಯೋಗಾಸನ ಸ್ಪರ್ಧೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸತೀಶ್ ಶೆಟ್ಟಿ ವಹಿಸಿದ್ದರು ಹಾಗೂ ಆರಗ ಜ್ಞಾನೇಂದ್ರ ಇವರು ಉದ್ಘಾಟನೆಮಾಡಿದರು.ಬಾಲಕ ಬಾಲಕಿಯರ ಯೋಗಾಸನ ಹಾಗೂ ಚೆಸ್ ಸ್ಪರ್ಧೆಯ ವಿಜೇತರಿಗೆ ಸಂಜೆ ಬಹುಮಾನ ವಿತರಣೆ ಮಾಡಲಾಯಿತು.

ಗೆದ್ದವರು ಯಾರು?

ಬಾಲಕಿಯರ ಯೋಗಾಸನ ಸ್ಪರ್ಧೆಯಲ್ಲಿ ಸಾನ್ವಿ ಜೋಯಿಸ್,ಅನುಕ್ತ. ಎಸ್ ಅವರು,ವಾಗ್ದೇವಿ ಆಂಗ್ಲ ಮಾಧ್ಯಮ ಶಾಲೆ ತೀರ್ಥಹಳ್ಳಿ, ಸಾನ್ವಿ. ಎಸ್. ಕಾಂಚನ್ ಸೇವಾ ಭಾರತಿ ಆಂಗ್ಲ ಮಾಧ್ಯಮ ಶಾಲೆ ತೀರ್ಥಹಳ್ಳಿ, ಸನ್ವಿತ ಎ. ಎಸ್. ಕುಲಕರ್ಣ. ಪ್ರಜ್ಞಾಭಾರತಿ ತೀರ್ಥಹಳ್ಳಿ, ಪೂಜ್ಯ ಮೇದೋಳಿಗೆ ಸೇವಾಭಾರತಿ ಶಾಲೆ ತೀರ್ಥಹಳ್ಳಿ ಹಾಗೂ ಯೋಗಾಸನ ನೃತ್ಯ ಸ್ಪರ್ಧೆಯಲ್ಲಿ ಸಂಹಿತಾ. ಎನ್. ಉಡುಪ. ವಾಗ್ದೇವಿ ಆಂಗ್ಲ ಮಾಧ್ಯಮ ಶಾಲೆ ಇವರು ಪ್ರಥಮ ಸ್ಥಾನ ಪಡೆದಿದ್ದಾರೆ.
ಬಾಲಕರ ಯೋಗಾಸನ ಸ್ಪರ್ಧೆಯಲ್ಲಿ ಶಿಶಿರ. ಡಿ. ಆರ್, ಎಚ್. ಪಿ. ಎಸ್ ಬಾವಿಕೈಸರು, ಶ್ರೇಯಸ್ ಜಿ. ಎಂ. ಸೇವಾಭಾರತಿ ತೀರ್ಥಹಳ್ಳಿ ಶಾಲೆ, ಪೃಥ್ವಿತ್ ಎಸ್. ಶೆಟ್ಟಿ. ಸೇವಾ ಭಾರತಿ ಆಂಗ್ಲ ಮಾಧ್ಯಮ ಶಾಲೆ, ಸುಧಿನ ಬಿ.ಎನ್ ಸರಕಾರಿ ಶಾಲೆ ಸಿದ್ದಾಪುರ, ಪ್ರಥಮ್ ಜಿ ಆರ್ ಪ್ರಜ್ಞಭಾರತಿ ತೀರ್ಥಹಳ್ಳಿ ಶಾಲೆ, ಸೃಜನ್ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ತೀರ್ಥಹಳ್ಳಿ ಪ್ರಥಮ ಸ್ಥಾನವನ್ನು ಗಳಿಸಿಕೊಂಡಿದ್ದಾರೆ.

(U- 14 ) ಬಾಲಕರ ಚೆಸ್ ವಿಭಾಗದಲ್ಲಿ ರಿತೇಶ್ ಕುಮಾರ್ ಎ.ಕೆ ವಾಗ್ದೇವಿ ಶಾಲೆ ತೀರ್ಥಹಳ್ಳಿ, ಆಶಿಕ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಗರವಳ್ಳಿ,ಸಂಪತ್ತು ಎಸ್. ಜೆ ಮಲೆನಾಡು ಹಿರಿಯ ಪ್ರಾಥಮಿಕ ಶಾಲೆ ಬೆಜ್ಜವಳ್ಳಿ, ಆಕಾಶ್ ಕುವೆಂಪು ಶಾಲೆ ತೀರ್ಥಹಳ್ಳಿ, ಪ್ರಥಮ್ ಎನ್ ರಾವ್ ವಾಗ್ದೇವಿ ಶಾಲೆ ತೀರ್ಥಹಳ್ಳಿ, ಪ್ರಥಮ ಸ್ಥಾನದ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ.
ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳಿಂದ ಸುಮಾರು ಇನ್ನೂರಕ್ಕೂ ಹೆಚ್ಚು ಪೋಷಕರು ಹಾಗೂ ಶಿಕ್ಷಕರು ಸೇರಿದ್ದು, ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯತ್ ರಹಮತುಲ್ಲ ಆಸಾದಿ, ಉಪಾಧ್ಯಕ್ಷರಾದ ಗೀತಾ ರಮೇಶ್, ಮಹಾಬಲೇಶ್ವರ ಹೆಗಡೆ, ಜ್ಯೋತಿ ಗಣೇಶ್, ಜಿಲ್ಲಾ ಶಿಕ್ಷಕರ ಸಂಘ ಖಜಾಂಚಿ ಮಂಜುನಾಥ್, ದೈಹಿಕ ಶಿಕ್ಷಕರ ಸಂಘದ ಚಂದ್ರಪ್ಪ,
ಶಾಲೆ ಮುಖ್ಯ ಉಪಧ್ಯಾಯರಾದ ನಾಗರಾಜ್, ಎಸ್. ಡಿ. ಎಂ. ಸಿ ಸದಸ್ಯರು ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.