Categories
ಮಾಹಿತಿ ಸುದ್ದಿ

ಇದು ದೇಶ ಕಾಯೋ ಕಬ್ಬಿಣದ ಕುದುರೆಗಳು!!

ಇದು ದೇಶ ಕಾಯೋ ಕಬ್ಬಿಣದ ಕುದುರೆಗಳು!!

* ಇಂಡಿಯನ್ ಆರ್ಮಿ ಕಾರ್ ಗಳು!
* ಬಾಂಬುಗೆ ಬಗ್ಗಲ್ಲ ಬುಲೆಟ್ ನುಗ್ಗಲ್ಲ!

NAMMUR EXPRESS NEWS
ಮಹಿಂದ್ರಾ ಅರ್ಮಾಡೋ, ಟಾಟಾ ಮರ್ಲಿನ್ ಎಲ್ಎಸ್‌ವಿ, ರೇನೋ ಶಾರ್ಪ, ಪೊಲಾರಿಸ್ ರೇಂಜರ್ ಈ ಕಾರುಗಳ ಹೆಸರುಗಳು ವಿಭಿನ್ನವಾಗಿದೆ ಹಾಗೂ ಹೆಚ್ಚಿನ ಜನರಿಗೆ ಅಪರಿಚಿತವಾಗಿದೆ. ಇದು ಹೆಚ್ಚಾಗಿ ಭಾರತದಲ್ಲಿ ಸೇನೆಗಾಗಿ ಗಡಿ ಕಾಯೋ ಸೈನಿಕರ ರಕ್ಷಣೆಗಾಗಿ ನಿರ್ಮಾಣವಾಗುತ್ತಿರುವ ಕಾರುಗಳು.ಎದುರಾಳಿಗಳ ಬುಲೆಟ್ ಈ ಕಾರುಗಳಿಗೆ ಯಾವುದೇ ರೀತಿಯಲ್ಲಿ ನುಗ್ಗುವುದಿಲ್ಲ!
ಯಾವುದೇ ದಾರಿಯಲ್ಲಿ ನಿಲ್ಲದೆ ಉಕ್ಕಿನ ಕುದುರೆಯಂತೆ ಓಡುತ್ತಿರುತ್ತದೆ. ಈ ಕಾರುಗಳ ತಯಾರಿಕೆಗೆ ಟಾಟಾ ಮಹೀಂದ್ರಗಳ ಪಾಲು ಹೆಚ್ಚಾಗಿ ಕಂಡುಬರುತ್ತದೆ.

* ಕಾರುಗಳ ಬಳಕೆ ಹೇಗೆ?
ಸೇನೆಯ ವಾಹನಗಳಲ್ಲಿ ಹಲವಾರು ವಿಭಾಗಗಳಿರುತ್ತವೆ. ಅದೇ ರೀತಿ ಸಾಮಾನ್ಯ ಮಾರ್ಗಗಳಲ್ಲಿ ಕಾಣಸಿಗುವ ಕಾರ್ ಗಳು ಕೂಡ ಸೇನೆಯ ವಿಭಾಗದಲ್ಲಿರುತ್ತದೆ.ಈ ದೈತ್ಯ ಕಾರುಗಳು ಸೈನಿಕರಿಗೆ ಓಡಾಟಕ್ಕೆ ಬಳಕೆಯಾಗ ಯುದಧ ಭೂಮಿಯಲ್ಲೂ ಬೆಳಕಿಗೆ ಬರುತ್ತದೆ.
ಮಹಿಂದ್ರಾ ಅರ್ಮಾಡೋ ಇದೊಂದು ವಿಶೇಷ ವಾಹನವಾಗಿದ್ದು, ಭಯೋತ್ಪಾದನಾ ವಿರೋಧಿ ಆಪರೇಷನ್ ಗಳ ಬಳಕೆಗೆ ವಿಶೇಷವಾಗಿ ತಯಾರಿಸಿದ ಕಾರ್ ಆಗಿದೆ. ಇದೊಂದು ಅತ್ಯಂತ ಆಕರ್ಷಣೀಯವಾಗಿರುವ ವಾಹನವಾಗಿದ್ದು, ಗಡಿ ರಕ್ಷಣೆಯ ಕಾವಲು ಪರಿಶೀಲನೆಗೆ, ರಾಜಸ್ಥಾನದಂತಹ ಮರುಭೂಮಿ ಪ್ರದೇಶಗಳಲ್ಲಿ ಆಪರೇಷನ್ ಗಳಿಗೆ ಬಳಸಲಾಗುತ್ತದೆ. ಸುಮಾರು ಒಂದು ಟನ್ ಆಯುಧಗಳನ್ನು ಸಾಗಿಸಬಹುದಾದ ವಾಹನವಾಗಿದ್ದು,ಬುಲೆಟ್ಗಳು ಈ ಕಾರಿನೊಳಗೆ ಸುಲಭವಾಗಿ ನುಗ್ಗಲು ಸಾಧ್ಯವಿಲ್ಲ.
ಮಹಿಂದ್ರಾ ಮೆವ ಸೀರಿಸ್, ಇದರಲ್ಲಿ ಹಲವಾರು ರೀತಿಯ ಕಾರ್ ಗಳಿದ್ದು, 11 ಸೈನಿಕರನ್ನು ಸುಲಭವಾಗಿ ಕರೆದುಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿದೆ. ವಿಶೇಷವಾಗಿ ಎಡ ಬದಿ ಸ್ಟೇರಿಂಗ್ ಅನ್ನು ಈ ವಾಹನ ಹೊಂದಿರುತ್ತದೆ. ಬರೋಬ್ಬರಿ 4.5 ಲೀಟರ್ ನ 8 ಡೀಸೆಲ್ ನ ಇಂಜಿನ್ ಇದಕ್ಕೆ ಶಕ್ತಿ ನೀಡುತ್ತದೆ. ಐದು ಗೇರ್ ಗಳನ್ನು ಒಳಗೊಂಡ ಈ ಕಾರ್ ಬಹಳಷ್ಟು ಸುರಕ್ಷಿತವಾಗಿದೆ.
ರೇನೋ ಶಾರ್ಪ ವಾಹನವನ್ನು ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ ಬಳಕೆ ಮಾಡುತ್ತಾರೆ. 4 ಸೈನಿಕರು ಈ ಕಾರಿನೊಳಗೆ ಕುಳಿತುಕೊಂಡು ಒಟ್ಟಿಗೆ ಗುಂಡನ್ನು ಹಾರಿಸಬಹುದು. ಬರೋಬ್ಬರಿ ಹತ್ತು ಜನರು ಚಲಿಸಬಹುದಾದ ಈ ವಾಹನವು ಪೂರ್ತಿಯಾಗಿ ಲೋಡ್ ಆಗಿದ್ದಾಗ 11 ಟನ್ ತೂಕವಿರುತ್ತದೆ, ಆದರೂ ಈ ಗಾಡಿ 110ಕಿ.ಮೀ. ವೇಗದಲ್ಲಿ ಚಲಿಸಲು ಸಾಧ್ಯ!!..ಈ ಕಾರುಗಳನ್ನು ವಿದೇಶದಲ್ಲೂ ಮಾರಾಟ ಮಾಡಲಾಗುತ್ತಿದೆ.
ಟಾಟಾ ಮರ್ಲಿನ್ ಎಲ್ಎಸ್‌ವಿ ಇದು ಸಾಮಾನ್ಯವಾಗಿ ಪರಿಚಿತವಾಗಿರುವ ಕಾರ್ ಗಳು ಒಂದು ಕಾಲದಲ್ಲಿ ಈ ಕಾರ್ ಗಳು ಇಂಡಿಯನ್ ಆರ್ಮಿಗಳ ಅಫೀಷಿಯಲ್ ವಾಹನವಾಗಿ ಕಾರ್ಯನಿರ್ವಹಿಸುತ್ತಿದ್ದವು. ಈ ಕಾರ್ ಗಳು ವಯಸ್ಸಾಗಿರುವ ಮಾರುತಿ ಕಾರುಗಳ ಸ್ಥಾನವನ್ನು ತುಂಬುತ್ತದೆ. ಭಾರತದ ಸೈನಿಕರಿಗೆ ಟಾಟಾ ದೈತ್ಯ ಕಾರುಗಳನ್ನು ತಯಾರಿ ಮಾಡುತ್ತಿದ್ದಾರೆ. ವಿಶ್ವ ಸಂಸ್ಥೆಯು ಸೇನಗೆ ಕಲ್ಯಾಣಿ m4 ಿಂದ ಸೇವೆಯನ್ನು ನೀಡುತ್ತಿದೆ. ಕಲ್ಯಾಣಿ m4 ಜನರನ್ನು ರಕ್ಷಣೆ ಮಾಡಲು ಇರುವ ವಾಹನವಾಗಿದೆ. 16 ಟನ್ ತೂಕ ಇದ್ದರೂ ಕೂಡ ಗಂಟೆಗೆ 140ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ವಾಹನಕ್ಕೆ 10 ಕೆಜಿ ಸ್ಪೋಟಕ ಇಟ್ಟು ಉಡಾವಣೆ ಮಾಡಿದರೂ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಹೀಗೆ ಹಲವಾರು ವಿಭಾಗಗಳು ಸೇನೆಗೆ ಉಪಯುಕ್ತ ದೈತ್ಯ ವಾಹನಗಳ ನಿರ್ಮಾಣದಲ್ಲಿ ತೊಡಗಿಕೊಂಡಿದೆ.

Categories
ಬೆಂಗಳೂರು

ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್ ಸಾಮಾನ್ಯ ಖೈದಿಯಂತೆ!

ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್ ಸಾಮಾನ್ಯ ಖೈದಿಯಂತೆ!

• ನಟ ದರ್ಶನ್‌ ಭೇಟಿಗೆ ಸೆಲೆಬ್ರೆಟಿಗಳಿಗೆ ಅವಕಾಶ ಇಲ್ಲ!
• ಸಾಮಾನ್ಯ ಖೈದಿಯಂತೆ ಸಿಸಿಟಿವಿ ಕಣ್ಗಾವಲು

NAMMUR EXPRESS NEWS
ಬೆಂಗಳೂರು: ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್‌ ಭೇಟಿಗೆ ಕುಟುಂಬಸ್ಥರು ಹೊರತು ಪಡಿಸಿ ಬೇರೆ ಯಾರಿಗೂ ಅವಕಾಶವಿಲ್ಲ. ಜತೆಗೆ ಯಾವುದೇ ವಿವಿಐಪಿ ಟ್ರೀಟ್ಮೆಂಟ್‌ ಇರುವುದಿಲ್ಲ. ಸಾಮಾನ್ಯ ಖೈದಿಯಂತೆ ಸಿಸಿಟಿವಿ ಕಣ್ಗಾವಲು ಇರಲಿದೆ.
ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟ ದರ್ಶನ್‌ನನ್ನು ಪೊಲೀಸ್‌ ಬಂದೋಬಸ್ತ್‌ನಲ್ಲಿ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಇನ್ಮುಂದೆ ನಟ ದರ್ಶನ್‌ ಭೇಟಿಗೆ ಸೆಲೆಬ್ರೆಟಿಗಳಿಗೆ ಅವಕಾಶ ಇಲ್ಲ ಎನ್ನಲಾಗಿದೆ.
ಕೇವಲ ಕೈದಿಯ ಧರ್ಮಪತ್ನಿ, ರಕ್ತಸಂಬಂಧಿಗಳು ಮತ್ತು ವಕಾಲತ್ತು ವಹಿಸಿದ ವಕೀಲರಿಗೆ ಮಾತ್ರ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ. ಚಿತ್ರರಂಗದ ಕಲಾವಿದರು, ಅಭಿಮಾನಿಗಳು, ರಾಜಕೀಯ ವ್ಯಕ್ತಿಗಳು ಯಾರಿಗೂ ದರ್ಶನ್‌ ಭೇಟಿಗೆ ಅವಕಾಶ ಇರುವುದಿಲ್ಲ. ಇನ್ನೂ ಸಾಮಾನ್ಯ ಖೈದಿಯಂತೆ ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿ ಇರಲಿದ್ದು, ಗೃಹ, ಮನರಂಜನೆ ಸೌಲಭ್ಯಗಳು, ಕಾಾಗೃಹದ ನಿಯಮಂತೆ ಒದಗಿಸಲಾಗುತ್ತದೆ. ನಿಯಮ ಉಲ್ಲಂಘನೆ ಮಾಡುವ ಹಾಗಿಲ್ಲ. ಬೇರೆ ಕೈದಿಗಳ ಜತೆ ಬೆರೆಯದಂತೆ ಸೂಕ್ತ ಭದ್ರತೆ ನೀಡಲಾಗಿದೆ.
ಸಾಮಾನ್ಯ ಖೈದಿಯಂತೆ ಸಿಸಿಟಿವಿ ಕಣ್ಗಾವಲು ಇರಲಿದೆ.
ದರ್ಶನ್ ಇರುವ ಕೊಠಡಿಗೆ ಮುಖ್ಯ ವೀಕ್ಷಕ ಮತ್ತು ಅದಕ್ಕಿಂತ ಮೇಲ್ಪಟ್ಟ ಹಿರಿಯ ಅನುಭವವುಳ್ಳ ಸಿಬ್ಬಂದಿ ವರ್ಗ ನಿಯೋಜನೆ ಮಾಡಲಾಗಿದೆ. ಭದ್ರತೆ ಹಾಗೂ ದರ್ಶನ್ ಚಲನವಲನಗಳ ಬಗ್ಗೆ ತೀವ್ರ ನಿಗಾ ಇಡಲಾಗುತ್ತದೆ. ಕಾರಾಗೃಹದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಪ್ರತಿನಿತ್ಯ ಬೀಗ ತೆರೆಯುವ ಹಾಗೂ ಬೀಗ ಮುದ್ರೆ ಮಾಡುವ ಸಮಯದಲ್ಲಿ ಕೂಲಂಕುಷವಾಗಿ ತಪಾಸಣೆ ಮಾಡುವಂತೆ ಸೂಚನೆ ನೀಡಲಾಗಿದೆ. ಯಾವುದೇ ನಿಷೇಧಿತ ವಸ್ತುಗಳು ದೊರಕದ ಹಾಗೆ ಪ್ರತ್ಯೇಕ ಕಾರ್ಯವನ್ನು ನಿರ್ವಹಿಸಬೇಕು. ಪಹರೆ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ವರ್ಗದವರಿಗೆ ಬಾಡಿ ವೋರ್ನ್ ಕ್ಯಾಮೆರಾ ಧರಿಸಬೇಕು ಎಂದು ಹೇಳಲಾಗಿದೆ.

Categories
ಚಿತ್ರದುರ್ಗ

ರಾಷ್ಟ್ರಮಟ್ಟದ ಮದಕರಿ ಕಪ್ ಕಬ್ಬಡಿ ಪಂದ್ಯಾವಳಿ!

ರಾಷ್ಟ್ರಮಟ್ಟದ ಮದಕರಿ ಕಪ್ ಕಬ್ಬಡಿ ಪಂದ್ಯಾವಳಿ!
– ಬೆಂಗಳೂರಲ್ಲಿ ಅ.5, 6 ರಂದು ಕ್ರೀಡಾಕೂಟ
– ಪೋಸ್ಟರ್ ಬಿಡುಗಡೆಗೊಳಿಸಿದ ಭಗೀರಥ ಶ್ರೀ

NAMMUR EXPRESS NEWS
ಹೊಸದುರ್ಗ: ಚಿತ್ರದುರ್ಗವನ್ನು ಜಗತ್ತಿಗೆ ಪರಿಚಯಿಸಿದ ನಾಡದೊರೆ ರಾಜವೀರ ಮದಕರಿ ನಾಯಕರ ಜಯಂತೋತ್ಸವದ ಪ್ರಯುಕ್ತ ಮದಕರಿ ನಾಯಕ ಯುವ ಬ್ರಿಗೇಡ್ ವತಿಯಿಂದ ಬೆಂಗಳೂರಿನ ಚಾಮರಾಜಪೇಟೆಯ ರಾಜೀವ್ ಗಾಂಧಿ ಸ್ಪೋರ್ಟ್ಸ್ ಸ್ಟೇಡಿಯಂನಲ್ಲಿ ಅಕ್ಟೋಬರ್ 5 ಮತ್ತು 6 ರಂದು ನಡೆಯಲಿರುವ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ “ಮದಕರಿ ಕಪ್” ಪೋಸ್ಟರನ್ನು ಬ್ರಹ್ಮವಿದ್ಯಾನಗರದ ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಬಿಡುಗಡೆಗೊಳಿಸಿದರು.
ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಶ್ರೀಗಳು, ತನ್ನ ಬದುಕಿನುದ್ದಕ್ಕೂ ಹುಲಿಯಂತೆ ಹೋರಾಡಿ ಶತ್ರುಗಳಿಂದಲೂ ಸೈ ಎನಿಸಿಕೊಂಡಿದ್ದ ಕನ್ನಡನಾಡಿನ ಹೆಮ್ಮೆಯ ಸುಪುತ್ರ, ನಾಡದೊರೆ ರಾಜವೀರ ಮದಕರಿ ನಾಯಕರ ಜಯಂತೋತ್ಸವದ ವಿಶೇಷವಾಗಿ ನಾಡಿನ ಮದಕರಿ ನಾಯಕರ ಎಲ್ಲಾ ಅಭಿಮಾನಿಗಳು ಒಂದುಗಡಿ, ಂದ್ಯಾವಳಿ ಆಯೋಜನೆ ಮಾಡಿರುವುದು ಸಂತಸದ ವಿಷಯ. ಕಬಡ್ಡಿ ಇದೊಂದು ದೇಶೀಯ ಕ್ರೀಡೆಯಾಗಿದೆ. ಇಂತಹ ಕ್ರೀಡಾ ಕಾರ್ಯಕ್ರಮಗಳ ಆಯೋಜನೆಯಿಂದ ಮದಕರಿ ನಾಯಕರಿಗೆ ಗೌರವ ಸಿಗುವುದರ ಜೊತೆಗೆ ಕ್ರೀಡಾಪಟುಗಳ ಪ್ರತಿಭೆ ಗುರುತಿಸಿ,ಪ್ರೋತ್ಸಾಹಿಸಿದಂತಾಗುತ್ತದೆ. ನಾಡಿನ ಉತ್ಸಾಹಿ ಯುವಕರು ಬೆಂಗಳೂರಿನಲ್ಲಿ ನಡೆಯಲಿರುವ ಕ್ರೀಡೆಯಲ್ಲಿ ಭಾಗವಹಿಸಿ. ಕ್ರೀಡೆಯಲ್ಲಿ ಸೋಲು-ಗೆಲುವು ಇದ್ದೆ ಇರುತ್ತದೆ. ಅದನ್ನು ಆರೋಗ್ಯಕರವಾಗಿ ತೆಗೆದುಕೊಳ್ಳಿ. ಮದಕರಿ ಕಪ್ ಪಂದ್ಯಾವಳಿ ಯಶಸ್ವಿಯಾಗಿ ನಡೆಯಲಿ ಎಂದು ಶುಭಕೋರಿದರು.
ಈ ವೇಳೆ ಹೊಸದುರ್ಗ ಪುರಸಭೆಯ ನಾಮನಿರ್ದೇಶಿತ ಸದಸ್ಯ, ಹೊಸದುರ್ಗ ತಾಲ್ಲೂಕು ನಾಯಕ ಸಮಾಜದ ಉಪಾಧ್ಯಕ್ಷ ಹಾಗೂ ಪುರಸಭಾ ಸದಸ್ಯ ಗೌಡ್ರು ತಿಪ್ಪೇಸ್ವಾಮಿ, ಮುಖಂಡ ಕಿಟ್ಟದಹಳ್ಳಿ ಕೆಂಚಪ್ಪ ನಾಯಕ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ, ಹೊಸದುರ್ಗ ಯುವ ಘಟಕದ ಅರುಣ್, ವಸಂತ್, ಲೋಕೇಶ್, ಪ್ರಸನ್ನ, ಲೋಹಿತ್, ಪ್ರದೀಪ್ ಮತ್ತು ಸಿದ್ಧೇಶ್ ಇದ್ದರು.

Categories
ತೀರ್ಥಹಳ್ಳಿ

ಕಾಲೇಜು ಕ್ರೀಡಾಕೂಟದಲ್ಲಿ ಮತ್ತೊಮ್ಮೆ ಸಹ್ಯಾದ್ರಿ ಪಿಯು ಕಾಲೇಜ್ ಚಾಂಪಿಯನ್

ಕಾಲೇಜು ಕ್ರೀಡಾಕೂಟದಲ್ಲಿ ಮತ್ತೊಮ್ಮೆ ಸಹ್ಯಾದ್ರಿ ಪಿಯು ಕಾಲೇಜ್ ಚಾಂಪಿಯನ್
– ಬಾಲಕರ ಸಮಗ್ರ, ಬಾಲಕಿಯರ ಸಮಗ್ರ, ಕ್ರೀಡಾಕೂಟದ ಸರ್ವಾಂಗೀಣ ಪ್ರಶಸ್ತಿ
– ಶಿಕ್ಷಣದ ಜತೆಗೆ ಕ್ರೀಡೆಯಲ್ಲೂ ಸಹ್ಯಾದ್ರಿ ಕಾಲೇಜು ಸಾಧನೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಮಟ್ಟದ ಪಿಯುಸಿ ಮಟ್ಟದ ಕಾಲೇಜು ಕ್ರೀಡಾಕೂಟದಲ್ಲಿ ಮತ್ತೊಮ್ಮೆ ಸಹ್ಯಾದ್ರಿ ಪಿಯು ಕಾಲೇಜ್ ಚಾಂಪಿಯನ್ ಆಗಿದೆ. ಬಾಲಕರ ಸಮಗ್ರ, ಬಾಲಕಿಯರ ಸಮಗ್ರ, ಕ್ರೀಡಾಕೂಟದ ಸರ್ವಾಂಗೀಣ ಪ್ರಶಸ್ತಿ, ಬಾಲಕರ, ಬಾಲಕಿಯರ ವಯುಕ್ತಿಕ ವಿಭಾಗದಲ್ಲಿ ಚಾಂಪಿಯನ್ ಆಗಿದೆ.
ಶಿಕ್ಷಣದ ಜತೆಗೆ ಕ್ರೀಡೆಯಲ್ಲೂ ಸಹ್ಯಾದ್ರಿ ಕಾಲೇಜು ಸಾಧನೆ
ಬಾಲಕರ ತಾಲ್ಲೂಕು ವೈಯಕ್ತಿಕ ಚಾಂಪಿಯನ್ ಆಗಿ ಸೃಜನ್ ಪ್ರಭು (100 ಮೀ,200ಮೀ ಮತ್ತು 400ಮೀ ಪ್ರಥಮ ), ಬಾಲಕಿಯರ ತಾಲ್ಲೂಕು ವೈಯಕ್ತಿಕ ಚಾಂಪಿಯನ್ ಪ್ರಣಮ್ಯ (100ಮೀ, 200ಮೀ ಹಾಗೂ 400ಮೀ ಪ್ರಥಮ) ಸ್ಥಾನ ಪಡೆದಿದ್ದಾರೆ.
ಆ.27 ಹಾಗೂ 28 ಆಗಸ್ಟ್ 2024 ರಂದು ಎನ್ ಆರ್ ಎಸ್ ಕಾಲೇಜು ಕೋಣಂದೂರಿನಲ್ಲಿ ನಡೆದ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಸಹ್ಯಾದ್ರಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಈ ಕೆಳಕಂಡ ಸ್ಪರ್ಧೆಗಳಲ್ಲಿ ವಿಜೇತರಾಗುವ ಮೂಲಕ ಸಮಗ್ರ ಪ್ರಶಸ್ತಿಯೊಂದಿಗೆ ಕ್ರೀಡೆಯಲ್ಲಿ ತಾಲ್ಲೂಕಿಗೆ ಸೈ ಎನಿಸಿಕೊಂಡಿರುತ್ತಾರೆ

ಬಾಲಕರ ವೈಯಕ್ತಿಕ ವಿಭಾಗ

*100 ಮೀಟರ್ ಪ್ರಥಮ ಮತ್ತು ದ್ವಿತೀಯ
*200 ಮೀಟರ್ ಪ್ರಥಮ ಮತ್ತು ದ್ವಿತೀಯ
*400 ಮೀಟರ್ ಪ್ರಥಮ ಮತ್ತು ದ್ವಿತೀಯ
*ಜಾವಲಿನ್ ಎಸೆತ ಪ್ರಥಮ
*ಗುಂಡು ಎಸೆತ ಪ್ರಥಮ
*800 ಮೀಟರ್ ದ್ವಿತೀಯ ಮತ್ತು ತೃತೀಯ
*ತ್ರಿವಿಧ ಜಿಗಿತ ದ್ವಿತೀಯ ಮತ್ತು ತೃತೀಯ
*ವಾಕಿಂಗ್ ರೇಸ್ ದ್ವಿತೀಯ
*ಹೈ ಜಂಪ್ ದ್ವಿತೀಯ
*1500 ಮೀಟರ್ ತೃತೀಯ
*ತಟ್ಟೆ ಎಸೆತ ತೃತೀಯ
* ಗುಡ್ಡಗಾಡು ಓಟ ನಾಲ್ಕನೇ ಸ್ಥಾನ

ಬಾಲಕರ ಗುಂಪು ಆಟಗಳು

*ವಾಲಿಬಾಲ್ ಚಾಂಪಿಯನ್
*ಥ್ರೋಬಾಲ್ ಚಾಂಪಿಯನ್
*ಖೋಖೋ ಚಾಂಪಿಯನ್
*4*100 ಮೀಟರ್ ರಿಲೇ ಚಾಂಪಿಯನ್
*4*400 ಮೀಟರ್ ರಿಲೇ ಚಾಂಪಿಯನ್

ಬಾಲಕಿಯರ ವೈಯಕ್ತಿಕ ವಿಭಾಗ
*100 ಮೀಟರ್ ಪ್ರಥಮ ಮತ್ತು ದ್ವಿತೀಯ
*200 ಮೀಟರ್ ಪ್ರಥಮ
*400 ಮೀಟರ್ ಪ್ರಥಮ ಮತ್ತು ತೃತೀಯ
*ವಾಕಿಂಗ್ ರೇಸ್ ಪ್ರಥಮ ಮತ್ತು ತೃತೀಯ
*ಜಾವಲಿನ್ ಎಸೆತ ಪ್ರಥಮ
*3000 ಮೀಟರ್ ದ್ವಿತೀಯ
*800 ಮೀಟರ್ ದ್ವಿತೀಯ
*1500 ಮೀಟರ್ ದ್ವಿತೀಯ ಮತ್ತು ತೃತೀಯ
*ಹ್ಯಾಮರ್ ಎಸೆತ ದ್ವಿತೀಯ ಮತ್ತು ತೃತೀಯ

ಬಾಲಕಿಯರ ಗುಂಪು ಆಟಗಳು

*ವಾಲಿಬಾಲ್ ಚಾಂಪಿಯನ್
*ಥ್ರೋಬಾಲ್ ಚಾಂಪಿಯನ್
*4*100 ರಿಲೇ ಚಾಂಪಿಯನ್
*ಬಾಲ್ ಬ್ಯಾಡ್ಮಿಟನ್ ದ್ವಿತೀಯ
*4*400ರಿಲೇ ದ್ವಿತೀಯ

ಸಹ್ಯಾದ್ರಿ ಆಡಳಿತ ಮಂಡಳಿ ಅಭಿನಂದನೆ

ಈ ಅಪೂರ್ವ ಕ್ರೀಡಾ ಸಾಧನೆ ಮಾಡಿದ ಸಹ್ಯಾದ್ರಿ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಣ ನಿರ್ದೇಶಕರಾದ ಜಗದೀಶ್ ಎಂ ಎಸ್ ಹಾಗೂ ಅಥ್ಲೆಟಿಕ್ ವಿಭಾಗದಲ್ಲಿ ಕೋಚ್ಆದ ಮೊಹಮ್ಮದ್ ಸಿರಾಜ್ ಇವರಿಗೆ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ,ಪದಾಧಿಕಾರಿಗಳು , ನಿರ್ದೇಶಕರುಗಳು, ಆಡಳಿತಾಧಿಕಾರಿಗಳು, ಪ್ರಾಂಶುಪಾಲರು, ಉಪನ್ಯಾಸ ವೃಂದದವರು ಹಾರ್ದಿಕವಾಗಿ ಅಭಿನಂದಿಸಿ ಶುಭ ಹಾರೈಸಿರುತ್ತಾರೆ.

Categories
ರಾಜ್ಯ

ಆನ್ಲೈನ್ ಗೇಮ್ : ವಿದ್ಯಾರ್ಥಿಗಳು, ಯುವ ಜನತೆ ಬದುಕು ಡಮಾರ್!

ಆನ್ಲೈನ್ ಗೇಮ್ : ವಿದ್ಯಾರ್ಥಿಗಳು, ಯುವ ಜನತೆ ಬದುಕು ಡಮಾರ್!
– ಕಾಲೇಜಿಗೂ ಹೋಗದೆ, ಕೆಲಸವೂ ಮಾಡದೆ ಆನ್ಲೈನ್ ಗೇಮ್ ಹುಚ್ಚಾಟ
– ಪೋಷಕರೇ ವಿದ್ಯಾರ್ಥಿಗಳ ಬಗ್ಗೆ ಎಚ್ಚರ
– ಭವಿಷ್ಯ ಹಾಳು ಮಾಡುವ ಆಪ್ ಬಂದ್ ಏಕಿಲ್ಲ?

NAMMUR EXPRESS NEWS
ಭಾರತಕ್ಕೆ ಯುವ ಶಕ್ತಿಯೇ ಶಕ್ತಿ. ಆದರೆ ಇದೀಗ ಆನ್ಲೈನ್ ಆಟ, ಕೆಲವು ಸೋಷಿಯಲ್ ಮೀಡಿಯಾ ಚಟದಿಂದ ಯುವ ಜನತೆಯ ಭವಿಷ್ಯ ಸಂಕಷ್ಟಕ್ಕೆ ಸಿಲುಕಿದೆ.
ಸಾವಿರಾರು ಯುವಕ ಯುವತಿಯರು ಆನ್ಲೈನ್ ಚಟಕ್ಕೆ ಬಲಿಯಾಗುತ್ತಿದ್ದಾರೆ. ಪಬ್ಜಿಯಂತಹ ಗೇಮ್ ಬ್ಯಾನ್ ಆದರೂ ಕ್ರಿಕೆಟ್ ಬೆಟ್ಟಿಂಗ್ ಆಪ್, ಕೆಲವು ಆಪ್ ಯುವ ಜನರು, ವಿದ್ಯಾರ್ಥಿಗಳ ಭವಿಷ್ಯ ತೆಗೆಯುತ್ತಿವೆ. ಈಗಾಗಲೇ ಸಾವಿರಾರು ಯುವಕರು ಈ ಚಟಕ್ಕೆ ಬಿದ್ದು ಜೀವ ಕಳೆದುಕೊಂಡಿದ್ದಾರೆ.

ಕಾಲೇಜಿಗೆ ಜ ಹಾಕಿ ಆಟ!

ಶಾಲಾ ಕಾಲೇಜಿಗೆ ರಜೆ ಹಾಕಿ ವಿದ್ಯಾರ್ಥಿಗಳು ಖಾಸಗಿ ಹೋಟೆಲ್, ಬಸ್ ಸ್ಟ್ಯಾಂಡ್, ಪಾರ್ಕ್ ನಲ್ಲಿ ಕುಳಿತು ಫ್ರೀ ಫೈರ್, ಪಬ್ಜಿ, ಕ್ರಿಕೆಟ್ ಬೆಟ್ಟಿಂಗ್ ಗೇಮ್ ಆಟ ಆಡುತ್ತಿದ್ದಾರೆ. ಈಗ ಎಲ್ಲಾ ಕಡೆ ಈ ಬಗ್ಗೆ ಸುದ್ದಿಯಾಗುತ್ತಿದೆ.
ಹೋಟೆಲ್, ಪಾರ್ಕ್, ಬಸ್ ಸ್ಟ್ಯಾಂಡ್ ಈ ಭಾಗಗಳಲ್ಲಿ ಆಟ ಆಡುವ ವಿದ್ಯಾರ್ಥಿಗಳು ವಾರಗಟ್ಟಲೇ ಕಾಲೇಜಿಗೆ ಬರುತ್ತಿಲ್ಲ ಎಂಬ ದೂರು ಕೂಡ ಕೇಳಿ ಬಂದಿದೆ.

ಒಂದೇ ಕಡೆ 25 ಹುಡುಗರ ಗ್ಯಾಂಗ್!

ಇತ್ತೀಚಿಗೆ ಶಿವಮೊಗ್ಗ ಜಿಲ್ಲೆ ಸಾಗರ ಕಾಲೇಜಿನ ಪ್ರಿನ್ಸಿಪಾಲ್ ತಮ್ಮ ಮಗ ಕಾಲೇಜಿಗೆ ಬರುತ್ತಿಲ್ಲ ಎಂದು ಪೋಷಕರೊಬ್ಬರಿಗೆ ದೂರು ನೀಡಿದ್ದಾರೆ. ದೂರಿನ ಅಧಾರದ ಮೇಲೆ ಮಗನನ್ನ ಹುಡುಕಿ ಬಂದ ತಾಯಿಗೆ ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಂದೆಡೆ ಸೇರಿರುವುದು ಪತ್ತೆಯಾಗಿದೆ. ಕಾಲೇಜುಗಳಿಗೆ ರಜೆ ಹಾಕಿ ಆನ್ ಲೈನ್ ಗೇಮ್ ನಲ್ಲಿ ತೊಡಗಿಕೊಂಡಿದ್ದಾರೆ. ಸಾಗರ ಖಾಸಗಿ ಹೋಟೆಲ್ ನಲ್ಲಿ ತಾಯಿಯನ್ನ ಕಂಡ ವಿದ್ಯಾರ್ಥಿಗಳು ಎದ್ದುಬಿದ್ನೋ ಎಂದು ವಿದ್ಯಾರ್ಥಿಗಳು ಪರಾರಿಯಾಗಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.

ಕೇಂದ್ರ, ರಾಜ್ಯ ಸರ್ಕಾರ ಮೌನ!

ದೇಶ, ರಾಜ್ಯಕ್ಕೆ ಆಸ್ತಿಯಾಗಬೇಕಿದ್ದ ಯುವ ಸಮುದಾಯ ಈ ಗೇಮ್,. ಕೆಲ ಸೋಷಿಯಲ್ ಮೀಡಿಯಾ ಚಟಕ್ಕೆ ಬಿದ್ದು ದೇಶಕ್ಕೆ ನಷ್ಟವಾಗುವುದಲ್ಲದೆ ಕುಟುಂಬಕ್ಕೂ ಹೊರೆಯಾಗುತ್ತಿದ್ದಾರೆ. ಆದರೆ ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಯಾವುದೇ ನಿಯಮ ತಂದಿಲ್ಲ. ಕ್ರಿಕೆಟ್ ಬೆಟ್ಟಿಂಗ್ ಆಪ್ ಅನ್ನು ಕೇಂದ್ರ ಸರ್ಕಾರ ಅನುಮತಿ ನೀಡುತ್ತಿದೆ. ಇದರಿಂದ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಜತೆಗೆ ದೇಶದ ಮಾನವ ಸಂಪನ್ಮೂಲ ವ್ಯಯವಾಗುತ್ತಿದೆ.

Categories
ಕರಾವಳಿ

ಕರಾವಳಿಯಲ್ಲಿ ಮತ್ತೆ ಎಚ್ಚರಿಕೆ!

ಕರಾವಳಿ ಟಾಪ್ ನ್ಯೂಸ್

ಕರಾವಳಿಯಲ್ಲಿ ಮತ್ತೆ ಎಚ್ಚರಿಕೆ!
– ಮತ್ತೆ ಕರಾವಳಿಯಲ್ಲಿ ಗುಡುಗು ಸಹಿತ ಭಾರಿ ಮಳೆ!
– ಬೆಳ್ತಂಗಡಿ: ರಬ್ಬರ್ ಬೆಳೆ ಜಾಗತಿಕ ಮಟ್ಟದಲ್ಲಿ ಇಳುವರಿ ಹೊಡೆತ
– ಮಣಿಪಾಲ ರೈಲಲ್ಲಿ ಯುವತಿಗೆ ಲೈಂಗಿಕ ಕಿರುಕುಳ, ಆರೋಪಿ ಬಂಧನ

NAMMUR EXPRESS NEWS
ಮಂಗಳೂರು: ರಾಜ್ಯದ ಕರಾವಳಿ ಸುತ್ತಮುತ್ತ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡಿನಲ್ಲಿ ಸಾಧಾರಣ ಮಳೆಯಾದರೆ,ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಚದುರಿದಂತೆ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದ್ದು,ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಕೋಲಾರ-ಬೆಳಗಾವಿಯಲ್ಲಿ ಮಳೆ ಅಬ್ಬರ, ದಕ್ಷಿಣ ಒಳನಾಡಿನ‌ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ ಹಾಗೂ ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲಿ ಚದುರಿದಂತೆ ಹಗುರದಿಂದ ಕೂಡಿದ ಮಳೆಯಾಗಲಿದೆ. ಬೆಳಗಾವಿಯಲ್ಲಿ ಪ್ರತ್ಯೇಕವಾಗಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಾ ಧರವಾಡ, ಬಾಗಲಕೋಟೆ, ಬೀದರ್‌, ಗದಗ ಹಾಗೂ ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು,ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲೂ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಿದೆ. ಇನ್ನೂ ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ವ್ಯಾಪಕ ಸಾಧಾರಣದೊಂದಿಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.

– ಬೆಳ್ತಂಗಡಿ : ರಬ್ಬರ್ ಬೆಳೆ ಜಾಗತಿಕ ಮಟ್ಟದಲ್ಲಿ ಇಳುವರಿ ಹೊಡೆತ!!

ಬೆಳ್ತಂಗಡಿ: ಮೂರು ತಿಂಗಳುಗಳಿಂದ ರಬ್ಬರ್‌ ದರ ಚೇತರಿಕೆ ಹಾದಿಯಲ್ಲಿದ್ದು, ಇನ್ನೂ 10 ವರ್ಷ ಧಾರಣೆ ಸ್ಥಿರವಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಎಪ್ರಿಲ್‌ ಆರಂಭದಲ್ಲಿ ಕೆ.ಜಿ.ಗೆ 195 ರೂ. ಇದ್ದ ಧಾರಣೆ, ಆ.28ಕ್ಕೆ 231 ರೂ. ತಲುಪಿದೆ. ಜಾಗತಿಕ ಮಟ್ಟದಲ್ಲಿ ರಬ್ಬರ್‌ ಇಳುವರಿ ಕೈಕೊಟ್ಟ ಪರಿಣಾಮ 1ಎಕ್ಸ್‌ ಗ್ರೇಡ್‌ ರಬ್ಬರ್‌ ಕೆ.ಜಿ. ಧಾರಣೆ 245 ರೂ. ತಲುಪಿದೆ. ಎಪ್ರಿಲ್‌ ಅವಧಿಯಲ್ಲಿ ರಬ್ಬರ್‌ ದರ ಏರುಮುಖ ಕಂಡಿದ್ದು, ಎ.8ಕ್ಕೆ ಕೆ.ಜಿ. ಒಂದಕ್ಕೆ 1ಎಕ್ಸ್‌ ಗ್ರೇಡ್‌ಗೆ 195 ರೂ. ತಲುಪಿತ್ತು. ಬಳಿಕ 200 ರೂ. ಗಡಿ ದಾಟಿ ಪ್ರಸ್ತುತ 1ಎಕ್ಸ್‌-245 ಹಾಗೂ 3-230 ಆಸುಪಾಸಿನಲ್ಲಿದೆ. ಸ್ಥಳೀಯವಾಗಿ 1ಎಕ್ಸ್‌ ಬಹಳ ವಿರಳವಾಗಿದ್ದು, ದೊಡ್ಡ ದೊಡ್ಡ ಎಸ್ಟೇಟ್‌ನಲ್ಲಿ ಮಾತ್ರ ಬೆಳೆಯಲಾಗುತ್ತಿದೆ. ಉಳಿದಂತೆ ಸ್ಥಳೀಯವಾಗಿ 3-4 ಗ್ರೇಡ್‌ ರಬ್ಬರ್‌ ಬೆಳೆಯಲಾಗುತ್ತದೆ. ಒಟ್ಟು 70 ರೀತಿಯ ವಸ್ತುಗಳಿಗೆ ರಬ್ಬರ್‌ ಉಪಯೋಗಿಸಲಾಗುತ್ತಿದೆ.
ಆದರೂ 2021-22ರಲ್ಲಿ 120 ರೂ. ತಲುಪಿದ್ದ ರಬ್ಬರ್‌ ಧಾರಣೆ ಕ್ರಮೇಣ 150 ಗಡಿಯಲ್ಲೇ ಇದ್ದು, ಕೃಷಿಕರನ್ನು ರಬ್ಬರ್‌ ಬೆಳೆಯಿಂದಲೇ ವಿಮುಖಗೊಳಿಸುವಂತಿತ್ತು. ಪ್ರಸಕ್ತ ಉತ್ತಮ ಧಾರಣೆ ಕಂಡುಕೊಂಡ ಪರಿಣಾಮ ರಬ್ಬರ್‌ ಬೆಳೆಗಾರರು ಸಂತಸದಲ್ಲಿದ್ದಾರೆ. ಆದರೆ ಈ ಅವಧಿಯಲ್ಲಿ ರಬ್ಬರ್‌ ಇಳುವರಿ ಕಡಿಮೆ ಇರುವುದರಿಂದ, ಶೇಖರಿಸಿಟ್ಟ ಬೆಳೆಗಾರರು ಬಂಪರ್‌ ಲಾಭ ಗಳಿಸಿದ್ದಾರೆ. ಚೀನ, ಅಮೆರಿಕ ಮತ್ತು ಯುರೋಪ್‌ನಲ್ಲಿ ಉತ್ತಮ ಬೇಡಿಕೆ ವ್ಯಕ್ತವಾಗಿದ್ದು, ಅಷ್ಟು ರಬ್ಬರ್‌ ಪೂರೈಕೆಯಾಗುತ್ತಿ್ಲ.

ರೈಲಲ್ಲಿ ಯುವತಿಗೆ ಲೈಂಗಿಕ ಕಿರುಕುಳ, ಆರೋಪಿಯ ಬಂಧನ

ಮಣಿಪಾಲ : ರೈಲಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪಾಲ ಠಾಣೆಯ ಪೊಲೀಸರು ಆರೋಪಿ ಭಟ್ಕಳದ ನಿವಾಸಿ ಮೊಹಮ್ಮದ್‌ ಶುರೈಮ್‌(22)ನನ್ನು 20 ಗಂಟೆಯೊಳಗೆ ಕೇವಲ ಫೋಟೊದ ಆಧಾರದಲ್ಲಿ ಬಂಧಿಸಿದ್ದಾರೆ. ಉಡುಪಿಯ ಗುಡ್ಡೆಯಂಗಡಿಯ ನಿವಾಸಿ ಬೆಂಗಳೂರಿನಲ್ಲಿ ಐಟಿಯಲ್ಲಿ ಉದ್ಯೋಗ ಮಾಡಿಕೊಂಡಿರುವ ಯುವತಿ ಬೆಂಗಳೂರಿನಿಂದ ಮುರುಡೇಶ್ವರಕ್ಕೆ ಹೋಗುವ ರೈಲು ಹತ್ತಿದ್ದರು.ರೈಲು ಮೂಲ್ಕಿ ದಾಟಿದ ಬಳಿಕ ಆಕೆಗೆ ಆರೋಪಿ ಪದೇಪದೆ ಲೈಂಗಿಕ ಕಿರುಕುಳ ನೀಡುತ್ತಿದ್ದು,ಬಳಿಕ ಗಲಾಟೆ ನಡೆದು ಕ್ಷಮೆ ಯಾಚಿಸಿದ್ದ. ಕೂಡಲೇ ಯುವತಿ ಆತನ ಚಿತ್ರ ತೆಗೆದು ರೈಲ್ವೇ ಆ್ಯಪ್‌ ಮೂಲಕ ದೂರು ನೀಡಿದ್ದರು. ನಂತರ ಉಡುಪಿ ರೈಲು ನಿಲ್ದಾಣಕ್ಕೆ ಬಂದ ಬಳಿಕ ರೈಲ್ವೇ ಪೊಲೀಸರಿಗೂ ದೂರು ನೀಡಿದ್ದರು. ರೈಲ್ವೇ ಪೊಲೀಸರು ಇದನ್ನು ಮಣಿಪಾಲ ಠಾಣೆಗೆ ಹಸ್ತಾಂತರಿಸಿದರು. ಈ ನಡುವೆ ರೈಲ್ವೇ ಆ್ಯಪ್‌ ಮೂಲಕ ದೂರು ದಾಖಲಾಗುತ್ತಿದ್ದಂತೆ ಮೇಲಾಧಿಕಾರಿಗಳು ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದರು. ಕೂಡಲೇ ಕಾರ್ಯಪ್ರವೃತ್ತರಾದ ಮಣಿಪಾಲ ಪೊಲೀಸರು ಕಾರ್ಯಾಚರಣೆಗೆ ಇಳಿದು ಅರೋಪಿಯನ್ನು ಬಂಧಿಸಿದ್ದಾರೆ.

–

Categories
ಮಲ್ನಾಡ್

ಶಿವಮೊಗ್ಗ : ಹುಲಿಕಲ್ ಘಾಟ್ ಬಳಿ ಎರಡು ಲಾರಿಗಳ ನಡುವೆ ಅಪಘಾತ

ಟಾಪ್ 4 ನ್ಯೂಸ್ ಮಲ್ನಾಡ್

ಶಿವಮೊಗ್ಗ : ಹುಲಿಕಲ್ ಘಾಟ್ ಬಳಿ ಎರಡು ಲಾರಿಗಳ ನಡುವೆ ಅಪಘಾತ
– ಚಿಕ್ಕಮಗಳೂರು: ಕೆಲವು ಕಡೆ ಎತ್ತು, ಎಮ್ಮೆಗಳ ಕಳ್ಳತನ, ಐವರು ಆರೋಪಿಗಳ ಬಂಧನ
– ಭದ್ರಾವತಿ: ಬೆಲ್ಲದಲ್ಲೂ ಕೂಡ ಕಲಬೆರಕೆ
– ಉಂಬ್ಳೇಬೈಲು : ಸಾಗುವನಿ ಮರಗಳನ್ನು ಅಕ್ರಮವಾಗಿ ಕಡಿತ ನಾಲ್ವರ ಬಂಧನ

NAMMUR EXPRESS NEWS
ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಹೊಸನಗರ
ತಾಲೂಕಿನ ಹುಲಿಕಲ್ ಘಾಟ್ ಬಳಿ ಎರಡು ಲಾರಿಗಳ ನಡುವೆ ಅಪಘಾತ ಸಂಭವಿಸಿ ರಸ್ತೆ ಮಧ್ಯೆ ಲಾರಿಗಳು ನಿಂತ ಪರಿಣಾಮ ಹುಲಿಕಲ್‌ ಮಾರ್ಗದ ರಸ್ತೆ ಸಂಚಾರ ಬಂದ್ ಆದ ಘಟನೆ ಇಂದು ಬೆಳಿಗ್ಗಿನ ಜಾವ ಸಂಭವಿಸಿದೆ. ಎರಡು ಅಪಘಾತಕ್ಕೀಡಾದ ಜಾಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಎರಡು ಲಾರಿಗಳು ಅಪಘಾತಕ್ಕೀಡಾಗಿ ರಸ್ತೆ ಮಧ್ಯದಲ್ಲೇ ನಿಂತಿವೆ. ರಸ್ತೆಯ ಎರಡು ಬದಿಯಲ್ಲಿ ವಾಹನಗಳು ಸರತಿ ಸಾಲಿನಲ್ಲಿ ನಿಂತಿದ್ದು, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪೊಲೀಸರು ಹರ ಸಾಹಸ ಪಡುತ್ತಿದ್ದಾರೆ.

– ಚಿಕ್ಕಮಗಳೂರು: ಕೆಲವು ಕಡೆ ಎತ್ತು, ಎಮ್ಮೆಗಳ ಕಳ್ಳತನ, ಐವರು ಆರೋಪಿಗಳ ಬಂಧನ

ಚಿಕ್ಕಮಗಳೂರು : ಜಿಲ್ಲೆಯ ಅಜ್ಜಂಪುರ ಪೊಲೀಸ್‌ ಾಣಾ ವ್ಯಾಪ್ತಿಯಲ್ಲಿ ವಿವಿಧೆಡೆ ಎತ್ತು ಹಾಗೂ ಎಮ್ಮೆಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಪೊಲೀಸರು 3,80,000/- ರೂ ನಗದು ವಶ ಪಡಿಸಿಕೊಂಡಿದ್ದಾರೆ . ಶಿವನಿ ಹೋಬಳಿ ದಂದೂರು ಗ್ರಾಮದ ಕಿರಣ್ ರವರ 160000/- ರೂ ಮೌಲ್ಯದ ಎತ್ತುಗಳು ಕಳ್ಳತನವಾಗಿದ್ದು ಪ್ರಕರಣ ದಾಖಲಿಸಲಾಗಿತ್ತು. ಅಜ್ಜಂಪುರ ಪಟ್ಟಣದ ನವೀನ್ ಕುಮಾರ್ ರವರ ಸುಮಾರು 1,45,000/- ರೂ ಬೆಲೆಯ9 ಎಮ್ಮೆಗಳು ಕಳ್ಳತನ ವಾಗಿತ್ತು. ವೀರಾಪುರ ಹೊಸೂರು ಗ್ರಾಮದ ಜಗದೀಶ ರವರ 1,00,000/- ರೂ ಬೆಲೆ ಬಾಳುವ ಒಂದು ಜೊತೆ ಬೇಸಾಯ ಮಾಡುವ ಎತ್ತುಗಳು ಕಳ್ಳತನವಾಗಿ ದೂರು ನೀಡಲಾಗಿತ್ತು . ನಾರಾಯಣಾಪುರ ಗ್ರಾಮದ ಅವಿನಾಶ್ ರವರು ಸುಮಾರು 1,20,000/- ರೂ ಬೆಲೆ ಬಾಳುವ ಒಂದು ಎತ್ತು ಕಳವಾಗಿತ್ತು. ಸತತವಾಗಿ ಗೋವುಗಳ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದರಿಂದ ಪೊಲೀಸರಿಗೂ ಸವಾಲಾಗಿತ್ತು. ಈ ಹಿನ್ನಲೆಯಲ್ಲಿ ಅಜ್ಜಂಪುರ ಪೊಲೀಸ್‌ ಠಾಣೆಯ ಪೊಲೀಸ್ ನಿರೀಕ್ಷಕ ವೀರೇಂದ್ರ ನೇತೃತ್ವದಲ್ಲಿ ಅಪರಾಧ ತನಿಖಾ ತಂಡ ರಚಿಸಿ ತನಿಖೆ ಕೈಗೊಳ್ಳಲಾಗಿತ್ತು.

– ಭದ್ರಾವತಿ : ಬೆಲ್ಲದಲ್ಲೂ ಕೂಡ ಕಲಬೆರಕೆ

ಭದ್ರಾವತಿ : ತಾಲ್ಲೂಕಿನಲ್ಲಿ ಬೆಲ್ಲ ತಯಾರಿಕಾ ಘಟಕಗಳಲ್ಲಿ ಬೆಲ್ಲ ತಯಾರಿಸಲು ರಾಸಾಯನಿಕ ವಸ್ತುಗಳನ್ನು ಬಳಕೆ ಮಾಡಲಾಗುತ್ತಿದೆ ಎನ್ನುವ ದೂರುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಡಿಸಿ ಗುರುದತ್ತ ಹೆಗೆಡೆಯವರು ಈ ಕುರಿತು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

– ಉಂಬ್ಳೇಬೈಲು : ಸಾಗುವನಿ ಮರಗಳನ್ನು ಅಕ್ರಮವಾಗಿ ಕಡಿತ ನಾಲ್ವರ ಬಂಧನ

ಉಂಬ್ಳೇಬೈಲು: ಅಕ್ರಮವಾಗಿ ಮರ ಕಡಿತಲೆ ಮಾಡಿ ಸಾಗುವನಿ ಮರಗಳನ್ನು ಸಾಗಾಣಿಕೆ ಮಾಡುವ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸಾಲಿಗೆರೆ ಗ್ರಾಮದ ಮಧುಸೂದನ್, ಉಂಬ್ಳೇಬೈಲು ಗ್ರಾಮದ ಕುಮಾರ್, ಕೃಷ್ಣ ಹಾಗೂ ಗಾಜನೂರು ಗ್ರಾಮದ ಮೈಲಾರಿ ಎಂದು ಗುರುತಿಸಲಾಗಿದೆ. ಬೆಲೆಾಳುವ ಮರಗಳನ್ನು ಅಕ್ರಮವಾಗಿ ಮರಕಡಿತಲೆ ಮಾಡಿ ಟಾಟಾ ಏಸ್‌ನಲ್ಲಿ 6 ಮರಗಳನ್ನು ಸಾಲಿಗೆರೆಯಿಂದ ಗಾಜನೂರಿಗೆ ಸಾಗಿಸುವ ವೇಳೆ ಅಧಿಕಾರಿಗಳು ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಟಾಟಾ ಏಸ್, ದ್ವಿಚಕ್ರವಾಹನವನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಆರ್‌ಎಫ್‌ಒ ಗಿಡ್ಡಸ್ವಾಮಿ, ಡೆಪ್ಯೂಟಿ ಆರ್‌ಎಫ್ ಪವನ್ ಮಹೇಂದ್ರಕರ್, ನಾಗರಾಜ್, ಬೀಟ್ ಆಫೀಸರ್ ಶ್ರೀಕಾಂತ್, ಶಂಕರವಲಯ ಮತ್ತು ಉಂಬ್ಳೆಬೈಲಿನ ವಲಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Categories
ಬೆಂಗಳೂರು

ನಾಯಿಯ ಅಳು ಕೆಟ್ಟ ಶಕುನವೇ?!

ನಾಯಿಯ ಅಳು ಕೆಟ್ಟ ಶಕುನವೇ?!
• ನೈಸರ್ಗಿಕ ವಿಕೋಪ ಘಟನೆಗಳ ಗ್ರಹಿಕೆ ನಾಯಿಗೆ ಸಾಧ್ಯ!
• ನಾಯಿಗಳು ರಾತ್ರಿ ಅತ್ತರೆ ಕಷ್ಟ ಬರುತ್ತಾ?

NAMMUR EXPRESS NEWS
ಬೆಂಗಳೂರು: ಸಾಮಾನ್ಯವಾಗಿ ನಾಯಿಗಳು ರಾತ್ರಿ ವೇಳೆ ಕೆಟ್ಟದ್ದಾಗಿ ಕೂಗುತ್ತವೆ. ಇದನ್ನು ಹಿರಿಯರು ಕೆಟ್ಟ ಶಕುನ ಎಂದು ಭಾವಿಸುತ್ತಾರೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾಯಿಗಳ ಅಳುವುದು, ಆರ್ಥಿಕ ನಷ್ಟವನ್ನು ಸೂಚಿಸುತ್ತದೆ. ಭವಿಷ್ಯದಲ್ಲಿ ಕೆಲವು ಕೆಲಸಗಳಿಂದ ನಷ್ಟವಾಗುವ ಸಾಧ್ಯತೆಯಿದೆ ಎಂಬುವುದನ್ನು ತಿಳಿಸುತ್ತದೆ.
ಮನೆಯ ಹೊರಗೆ ನಾಯಿ ಅಳುತ್ತಿದ್ದರೆ, ಅವರು ಕೆಲವು ಕೆಟ್ಟ ಸುದ್ದಿಗಳನ್ನು ಕೇಳಬೇಕಾಗುತ್ತದೆ. ಮನೆಯ ಸುತ್ತಲೂ ನಕಾರಾತ್ಮಕ ಶಕ್ತಿ ಇದ್ದರೂ ನಾಯಿಗಳು ಕೂಗುತ್ತವೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.
ನಾಯಿಗಳು ಮುಂಬರುವ ನೈಸರ್ಗಿಕ ಘಟನೆಗಳನ್ನು ಮುಂಚಿತವಾಗಿ ಗ್ರಹಿಸಬಲ್ಲವು ಎಂದು ಸಹ ಹೇಳಲಾಗುತ್ತದೆ.
ಭೂಕಂಪ, ನೈಸರ್ಗಿಕ ವಿಕೋಪ ಸೇರಿ ಕೆಟ್ಟ ಘಟನೆಗಳು ಘಟಿಸುವ ಬಗ್ಗೆ ನಾಯಿಗಳಿಗೆ ಗೊತ್ತಾಗುತ್ತದಂತೆ. ಹಾಗಾಗಿ ನಾಯಿಗಳು ಮುಂಚಿತವಾಗಿ ಅಳಲು ಪ್ರಾರಂಭಿಸುತ್ತವೆ ಎಂದು ಹೇಳಲಾಗುತ್ತದೆ. ಕೆಲವು ನಂಬಿೆಗಳ ಪ್ರಕಾರ, ನಾಯಿಗಳು ತಮಮ ಸುತ್ತಲೂ ಕೆಲವು ದುಷ್ಟ ಶಕ್ತಿಗಳು ಇದ್ದಾಗ ಹೆಚ್ಚು ಅಳುತ್ತವೆ ಎಂದು ಸಹ ಹೇಳಲಾಗುತ್ತದೆ. ಅದಕ್ಕಾಗಿಯೇ ಮನೆಯ ಸುತ್ತಲೂ ನಾಯಿಗಳು ಅಳುತ್ತಿದ್ದರೆ ಅವುಗಳನ್ನು ಅಲ್ಲಿಂದ ಓಡಿಸುತ್ತಾರೆ. ಆದರೆ ನಾಯಿ ಅಳುವುದು ಒಳ್ಳೆಯದಲ್ಲ ಎಂದು ಹಿರಿಯರು ಹೇಳುತ್ತಾರೆ. ರಾತ್ರಿಯಲ್ಲಿ ನಾಯಿಗಳು ಅಳುವುದನ್ನು ಕೆಟ್ಟ ಶಕುನವೆಂದು ಪರಿಗಣಿಸಲಾಗುತ್ತದೆ.

Categories
Uncategorized

ಹಳೆ ವಾಹನ ಗುಜರಿಗೆ ಹಾಕಿದ್ರೆ ಹೊಸ ವಾಹನಕ್ಕೆ ಆಫರ್!

ಹಳೆ ವಾಹನ ಗುಜರಿಗೆ ಹಾಕಿದ್ರೆ ಹೊಸ ವಾಹನಕ್ಕೆ ಆಫರ್!
– ಶೇ.1.5ರಿಂದ ಶೇ.3ರವರೆಗೂ ರಿಯಾಯಿತಿ ಘೋಷಣೆ
– ಹಳೆ ವಾಹನ ಗುಜರಿ ನೀತಿ ಶುರುವಾಗುತ್ತಾ…?

NAMMUR EXPRESS NEWS
ದೆಹಲಿ: ಹಳೆ ವಾಹನವನ್ನು ಗುಜರಿಗೆ ಹಾಕಿದವರಿಗೆ ಹೊಸ ವಾಹನದ ಖರೀದಿ ವೇಳೆ ಶೇ.1.5ರಿಂದ ಶೇ.3ರವರೆಗೂ ರಿಯಾಯಿತಿ ನೀಡುವುದಾಗಿ ಘೋಷಿಸಲಾಗಿದೆ.
ಹೆಚ್ಚು ಮಾಲಿನ್ಯ ಹೊರಸೂಸುವ ವಾಹನಗಳನ್ನು ರಸ್ತೆಯಿಂದ ಹೊರಗಿಡುವ ಸಲುವಾಗಿ ಕೇಂದ್ರ ಸರ್ಕಾರ ಈಗಾಗಲೇ ಹಳೆಯ ವಾಹನಗಳನ್ನು ನಿಗದಿತ ಗುಜರಿ ಕೇಂದ್ರಗಳಿಗೆ ಹಾಕಿ ಅದಕ್ಕೆ ಪ್ರಮಾಣಪತ್ರ ನೀಡುವ ನೀತಿ ಜಾರಿಗೆ ತಂದಿದೆ. ಹೀಗೆ ಕಳೆದ 6 ತಿಂಗಳಲ್ಲಿ ತಮ್ಮ ವಾಹನವನ್ನು ಗುಜರಿಗೆ ಹಾಕಿದ ಯಾವುದೇ ವ್ಯಕ್ತಿಗಳು ಈ ಹೊಸ ರಿಯಾಯಿತಿ ಆಫ‌ರ್ ಪಡೆದುಕೊಳ್ಳಬಹುದು ಎಂದು ವಾಹನ ತಯಾರಿಕಾ ಕಂಪನಿಗಳ ಜೊತೆ ಸಭೆ ನಡೆಸಿದ ಬಳಿಕ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಪ್ರಕಟಿಸಿದ್ದಾರೆ.

ಕಾರು ಕಂಪನಿಗಳಿಂದ ವಿಶೇಷ ರಿಯಾಯಿತಿ

ಪ್ರಯಾಣಿಕ ವಾಹನ ತಯಾರಿಕಾ ಕಂಪನಿಗಳಾದ ಮಾರುತಿ, ಟಾಟಾ, ಮಹೀಂದ್ರಾ, ಹ್ಯುಂಡೈ, ಕಿಯಾ, ಟೊಯೋಟಾ, ಹೊಂಡಾ, ಎಂಜ ಹೆ್ಟರ್, ರೆನಾಲ್ಟ್, ನಿಸ್ಸಾನ್, ಸ್ಕೋಡಾ ಕಂಪನಿಗಳು ಶೇ.15ರಷ್ಟು ಅಥವಾ 20000 ರೂ. ಪೈಕಿ ಯಾವುದು ಕಡಿಮೆಯೋ ಅದನ್ನು ನೀಡುವುದಾಗಿ ಪ್ರಕಟಿಸಿವೆ. ಇನ್ನು ಮರ್ಸಿಡಿಸಿ ಬೆಂಜ್ 25000 ಡಿಸ್ಕೌಂಟ್ ಆಫ‌ರ್ ಮುಂದಿಟ್ಟಿದೆ.
ಸರಕು ಸಾಗಣೆ ವಾಹನ ತಯಾರಿಕಾ ಕಂಪನಿಗಳಾದ ಟಾಟಾ, ವೋಲ್ವೋ,ಅಶೋಕ್ ಲೈಲ್ಯಾಂಡ್, ಮಹೀಂದ್ರಾ, ಫೋರ್ಸ್ ಮೋಟಾರ್ಸ್, ಇಸುಜು ಕಂಪನಿಗಳು 3.5 ಟನ್‌ಗಿಂತ ಹೆಚ್ಚಿನ ತೂಕದ ವಾಹನಗಳಿಗೆ ಶೇ.3ರಷ್ಟು ರಿಯಾಯ್ತಿಯನ್ನು ಘೋಷಿಸಿದೆ.

Categories
ಜ್ಯೋತಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಮಹಾವಿಷ್ಣುವಿನ ವಿಶೇಷ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ಉದ್ಯೋಗ ಮತ್ತು ವ್ಯವಹಾರದಲ್ಲಿ ಮಿಶ್ರ ಪರಿಣಾಮಗಳು ಕಂಡುಬರುತ್ತವೆ. ಕೆಲಸದ ಸ್ಥಳದಲ್ಲಿ ಅಡೆತಡೆಗಳು ಉಂಟಾಗಬಹುದು. ಸಹೋದ್ಯೋಗಿಗಳ ಸಹಾಯದಿಂದ ಕಷ್ಟಕರವಾದ ಕೆಲಸಗಳನ್ನು ಸಹ ಸಾಧಿಸಬಹುದು. ವ್ಯಾಪಾರದಲ್ಲಿ ಲಾಭದ ಅವಕಾಶಗಳು ಉಂಟಾಗುತ್ತವೆ. ನೀವು ಸಹೋದ್ಯೋಗಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ಆರ್ಥಿಕ ಲಾಭದ ಅವಕಾಶಗಳು ಒದಗಲಿವೆ. ಹೆಚ್ಚುವರಿ ಖರ್ಚು ಕೂಡ ಇರುತ್ತದೆ.

** ವೃಷಭ ರಾಶಿ :
ಮನಸ್ಸು ತೊಂದರೆಗೊಳಗಾಗುತ್ತದೆ. ಸ್ವಯಂ ನಿಯಂತ್ರಣದಲ್ಲಿರಿ. ನಿಮ್ಮ ಕೆಲಸದಲ್ಲಿ ಅಧಿಕಾರಿಗಳೊಂದಿಗೆ ಸಾಮರಸ್ಯವನ್ನು ಕಾಪಾಡಿಕೊಳ್ಳಿ. ಉದ್ಯೋಗದಲ್ಲಿ ಕೆಲಸದ ಸ್ಥಳದಲ್ಲಿ ಬದಲಾವಣೆ ಉಂಟಾಗಬಹುದು. ದಾ ಹೆಚ್ಚಾಗಬಹುದು. ಉತ್ತಮ ಸ್ಥಿತಿಯಲ್ಲಿರಿ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವೈದ್ಯಕೀಯ ವೆಚ್ಚ ಹೆಚ್ಚಾಗಲಿದೆ. ನೀವು ಸ್ನೇಹಿತರಿಂದ ಬೆಂಬಲವನ್ನು ಪಡೆಯುತ್ತೀರಿ.

** ಮಿಥುನ ರಾಶಿ
ಆತ್ಮವಿಶ್ವಾಸದ ಕೊರತೆ ಇರುತ್ತದೆ. ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗಬಹುದು. ನಿಮಗೆ ಸರಕಾರದಿಂದ ಬೆಂಬಲ ಸಿಗಲಿದೆ. ಅಧಿಕ ಖರ್ಚು ಇರುತ್ತದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ವಾದಗಳನ್ನು ತಪ್ಪಿಸಿ. ವಾಹನ ಸುಖ ಪ್ರಾಪ್ತಿಯಾಗಬಹುದು. ಸ್ವಯಂ ನಿಯಂತ್ರಣದಲ್ಲಿರಿ. ವಾಹನ ನಿರ್ವಹಣೆಗೆ ಖರ್ಚು ಹೆಚ್ಚಾಗಲಿದೆ. ಸಿಹಿ ಆಹಾರದ ಕಡೆಗೆ ಒಲವು ಹೆಚ್ಚಾಗುತ್ತದೆ.

** ಕರ್ಕಾಟಕ ರಾಶಿ :
ಇಂದು ನಿಮ್ಮ ಕೆಲಸ ಮತ್ತು ವ್ಯಾಪಾರದಲ್ಲಿ ಮಿಶ್ರ ಪರಿಣಾಮಗಳು ಕಂಡುಬರುತ್ತವೆ. ಪ್ರಮುಖ ವಿಷಯಗಳಲ್ಲಿ ತಾಳ್ಮೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ವ್ಯಾಪಾರದಲ್ಲಿ ಹಠಾತ್ ಲಾಭದ ಅವಕಾಶಗಳಿವೆ, ಆದರೆ ವ್ಯಾಪಾರ ಸ್ಪರ್ಧೆಯಿಂದ ದೂರವಿರಿ. ನೀವು ಹೂಡಿಕೆ ಮಾಡಲು ಬಯಸಿದರೆ ಖಂಡಿತವಾಗಿಯೂ ಅನುಭವಿ ವ್ಯಕ್ತಿಯನ್ನು ಸಂಪರ್ಕಿಸಿ. ಪರಿಸ್ಥಿತಿಗಳು ನಿಮಗೆ ಅನುಕೂಲಕರವಾಗಿರಬಹುದು.

** ಸಿಂಹ ರಾಶಿ :
ಇಂದು ನಿಮ್ಮ ಮನಸ್ಸು ಸಂತೋಷದಿಂದ ಕೂಡಿರುತ್ತದೆ. ಪೂರ್ಣ ವಿಶ್ವಾಸ ಇರುತ್ತದೆ. ಕಟ್ಟಡ ಸೌಕರ್ಯದಲ್ಲಿ ಹೆಚ್ಚಳವಾಗಬಹುದು. ನಿಮ್ಮ ಹೆತ್ತವರ ಸಹವಾಸವನ್ನು ನೀವು ಪಡೆಯುತ್ತೀರಿ. ರುಚಿಕರವಾದ ಆಹಾರದಲ್ಲಿ ಆಸಕ್ತಿ ಇರುತ್ತದೆ. ಕೆಲಸದಲ್ಲಿ ಉತ್ಸಾಹ ಇರುತ್ತದೆ. ಕೌಟುಂಬಿಕ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಜೀವನ ಜೀವನ ಅಸ್ತವ್ಯಸ್ತವಾಗುತ್ತದೆ. ಮಾತಿನಲ್ಲಿ ಕಠೋರತೆಯ ಪರಿಣಾಮವಿರುತ್ತದೆ.

** ಕನ್ಯಾ ರಾಶಿ :
ಇಂದು ಅಧ್ಯಯನದಲ್ಲಿ ಆಸಕ್ತಿ ಇರುತ್ತದೆ. ಶೈಕ್ಷಣಿಕ ಕೆಲಸವು ಆಹ್ಲಾದಕರ ಫಲಿತಾಂಶಗಳನ್ನು ನೀಡುತ್ತದೆ. ದಾಂಪತ್ಯ ಸುಖ ಹೆಚ್ಚಲಿದೆ. ಉದ್ಯೋಗದಲ್ಲಿ ಕೆಲಸದ ಹೊರೆ ಹೆಚ್ಚಾಗಬಹುದು. ಆದಾಯವೂ ಹೆಚ್ಚಲಿದೆ. ಕೋಪದ ಕ್ಷಣಗಳು ಮತ್ತು ಸಮಾಧಾನದ ಕ್ಷಣಗಳು ಇರುತ್ತವೆ. ಭೌತಿಕ ಸುಖಗಳು ಹೆಚ್ಚಾಗುತ್ತವೆ. ಕೆಲಸದ ಸ್ಥಳದಲ್ಲಿ ಸ್ಥಳ ಬದಲಾವಣೆಯ ಸಾಧ್ಯತೆಯೂ ಇದೆ. ಮಾನಸಿಕ ನೆಮ್ಮದಿ ಇರುತ್ತದೆ.

** ತಲಾ ರಾಶಿ :
ಇಂದು ಮನಸ್ಸು ತೊಂದರೆಗೊಳಗಾಗಬಹುದು. ಅನಗತ್ಯ ಕೋಪ ಮತ್ತು ಚರ್ಚೆಯನ್ನು ತಪ್ಪಿಸಿ. ಸ್ನೇಹಿತರ ಸಹಾಯದಿಂದ ಉದ್ಯೋಗಾವಕಾಶಗಳನ್ನು ಪಡೆಯಬಹುದು. ಆದಾಯ ಹೆಚ್ಚಲಿದೆ. ಸ್ವಯಂ ನಿಯಂತ್ರಣದಲ್ಲಿರಿ. ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನಿಮ್ಮ ಹೆತ್ತವರ ಸಹವಾಸವನ್ನು ನೀವು ಪಡೆಯುತ್ತೀರಿ.

** ವೃಶ್ಚಿಕ ರಾಶಿ :
ಇಂದು ಮಾತಿನಲ್ಲಿ ಮಾಧುರ್ಯವಿರುತ್ತದೆ. ನಿಮ್ಮಲ್ಲಿ ತುಂಬಾ ಆತ್ಮವಿಶ್ವಾಸವೂ ಇರುತ್ತದೆ. ಕಲೆ ಅಥವಾ ಸಂಗೀತದ ಕಡೆಗೆ ಆಸಕ್ತಿ ಹೆಚ್ಚಾಗಬಹುದು. ನಿಮ್ಮ ಕೆಲಸದಲ್ಲಿ ನೀವು ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ, ಆದರೆ ಕೆಲವು ಕೆಲಸಗಳು ಹೆಚ್ಚಾಗಬಹುದು. ತಾಳ್ಮೆಯಿಂದಿರಿ. ಉದ್ಯೋಗದಲ್ಲಿ ಪ್ರಗತಿಯ ಹಾದಿ ಸುಗಮವಾಗಲಿದೆ.

** ಧನಸ್ಸು ರಾಶಿ :
ಇಂದು ಮನಸ್ಸಿನಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ಸಾಕಷ್ಟು ಆತ್ಮವಿಶ್ವಾಸ ಇರುತ್ತದೆ. ವ್ಯಾಪಾರದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಲಾಭದ ಅವಕಾಶವಿರುತ್ತದೆ. ಪ್ರವಾಸಕ್ಕೆ ಹೋಗಬಹುದು. ಅತಿಯಾದ ಕೋಪ ಮತ್ತು ಉತ್ಸಾಹವನ್ನು ತಪ್ಪಿಸಿ. ಕಟ್ಟಡ ಸೌಕರ್ಯದಲ್ಲಿ ಹೆಚ್ಚಳವಾಗಬಹುದು. ಸ್ನೇಹಿತರ ಸಹಾಯದಿಂದ ನೀವು ಉದ್ಯೋಗಾವಕಾಶಗಳನ್ನು ಪಡೆಯಬಹುದು. ಉದ್ಯೋಗ ಬದಲಾವಣೆ ಸಾಧ್ಯತೆ ಇದೆ.

** ಮಕರ ರಾಶಿ :
ಇಂದು ಅನಗತ್ಯ ಕೋಪ ಮತ್ತು ವಾದಗಳನ್ನು ತಪ್ಪಿಸಿ. ಕುಟುಂಬದೊಂದಿಗೆ ಯಾವುದಾದರೂ ಧಾರ್ಮಿಕ ಸ್ಥಳಕ್ಕೆ ಪ್ರವಾಸವನ್ನು ಯೋಜಿಸಬಹುದು. ವ್ಯಾಪಾರದಲ್ಲಿ ಲಾಭ ಹೆಚ್ಚಾಗಲಿದೆ. ಮನಸ್ಸು ಸಂತೋಷವಾಗಿ ಉಳಿಯುತ್ತದೆ. ದಾಂಪತ್ಯ ಸುಖ ಹೆಚ್ಚಲಿದೆ. ಧಾರ್ಮಿಕ ಸಂಗೀತದಲ್ಲಿ ಆಸಕ್ತಿ ಹೆಚ್ಚಾಗಬಹುದು. ನೀವು ಸ್ನೇಹಿತರಿಂದ ಬೆಂಬಲವನ್ನು ಪಡೆಯುತ್ತೀರಿ. ಬರವಣಿಗೆ ಮತ್ತು ಬೌದ್ಧಿಕ ಕೆಲಸದಲ್ಲಿ ನಿರತತೆ ಹೆಚ್ಚಾಗಬಹುದು.

** ಕುಂಭ ರಾಶಿ :
ಇಂದು ನೀವು ಸ್ವಯಂ ನಿಯಂತ್ರಣದಲ್ಲಿರಿ. ಅತಿಯಾದ ಕೋಪವನ್ನು ತಪ್ಪಿಸಿ. ಸ್ನೇಹಿತರ ಸಹಾಯದಿಂದ, ಆದಾಯವನ್ನು ಹೆಚ್ಚಿಸುವ ವಿಧಾನಗಳನ್ನು ರಚಿಸಬಹುದು, ಆದರೆ ಹೆಚ್ಚುವರಿ ವೆಚ್ಚಗಳು ಇರುತ್ತದೆ. ತಂದೆಯಿಂದ ಬೆಂಬಲ ಸಿಗಲಿದೆ. ಅಧ್ಯಯನದಲ್ಲಿ ಆಸಕ್ತಿ ಹೆಚ್ಚಲಿದೆ. ನೀವು ಶೈಕ್ಷಣಿಕ ಅಥವಾ ಬೌದ್ಧಿಕ ಕೆಲಸಕ್ಕಾಗಿ ಪ್ರವಾಸಕ್ಕೆ ಹೋಗಬಹುದು. ಅತಿಯಾದ ಕೋಪ ಮತ್ತು ಉತ್ಸಾಹವನ್ನು ತಪ್ಪಿಸಿ.

** ಮೀನ ರಾಶಿ :
ಇಂದು ಆತ್ಮವಿಶ್ವಾಸದಿಂದ ಕೂಡಿರುತ್ತೀರಿ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಉದ್ಯೋಗದಲ್ಲಿ ಬಡ್ತಿಗೆ ಅವಕಾಶಗಳು ಬರಬಹುದು. ಆದಾಯ ಹೆಚ್ಚಲಿದೆ. ಕೆಲಸದ ಸ್ಥಳದಲ್ಲಿ ಹೆಚ್ಚು ಕಠಿಣ ಪರಿಶ್ರಮ ಇರುತ್ತದೆ. ಸ್ವಯಂ ನಿಯಂತ್ರಣದಲ್ಲಿರಿ. ಕುಟುಂಬದಲ್ಲಿ ಪರಸ್ಪರ ವಾದಗಳನ್ನು ತಪ್ಪಿಸಿ. ತಂದೆಯಿಂದ ಬೆಂಬಲ ಸಿಗಲಿದೆ. ನೀವು ಶೈಕ್ಷಣಿಕ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಕೌಟುಂಬಿಕ ಪರಿಸ್ಥಿತಿ ಸುಧಾರಿಸಲಿದೆ.